ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

1. ‘ರಾಖಿಗರಿ’ಗೆ (Rakhigarhi) ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ಹರಿಯಾಣದಲ್ಲಿ ಘಗ್ಗರ್-ಹಾಕ್ರಾ ನದಿ ಬಯಲಿನಲ್ಲಿ ನೆಲೆಗೊಂಡಿದೆ.
  2. ಇದನ್ನು ಪ್ರಸ್ತುತ ಭಾರತೀಯ ಉಪಖಂಡದ ಅತಿದೊಡ್ಡ ಹರಪ್ಪನ್ ನಿವೇಶನ ಎಂದು ಪರಿಗಣಿಸಲಾಗಿದೆ.
  3. ಈ ನಿವೇಶನವನ್ನು ಮೊದಲ ಬಾರಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ಅಮರೇಂದ್ರ ನಾಥ್ ಅವರು ಉತ್ಖನನ ಮಾಡಿದರು.

ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
ಉತ್ತರ: D

2. ಭಾರತೀಯ ಸಂವಿಧಾನದ ಈ  ಕೆಳಗಿನ ಯಾವ ಅನುಸೂಚಿಯನ್ನು ಮೊದಲನೇ ಸಂವಿಧಾನ ತಿದ್ದುಪಡಿ ಕಾಯ್ದೆ, 1951 ರ ಮೂಲಕ ರಚಿಸಲಾಗಿದೆ?

A) ಹತ್ತನೇ ಅನುಸೂಚಿ

B) ಏಳನೇ ಅನುಸೂಚಿ 

C) ಒಂಬತ್ತನೇ ಅನುಸೂಚಿ

D) ಹನ್ನೊಂದನೇ ಅನುಸೂಚಿ

ಉತ್ತರ: C

 

3. ಕೆಳಗಿನವುಗಳಲ್ಲಿ ಯಾವುದು ಅಮೋನಿಯಾವನ್ನು (NH₃) ಅತ್ಯುತ್ತಮವಾಗಿ ವಿವರಿಸುತ್ತದೆ?

A) ಮುಖ್ಯವಾಗಿ ಬೆಳಕಿನ ವ್ಯವಸ್ಥೆಗಳಲ್ಲಿ ಬಳಸುವ ನೈಸರ್ಗಿಕವಾಗಿ ಕಂಡುಬರುವ ಉದಾತ್ತ ಅನಿಲ (Noble gas).

B) ಸಾರಜನಕ ಮತ್ತು ಜಲಜನಕದಿಂದ ಸಂಯೋಜಿಸಲ್ಪಟ್ಟ ಸರಳ ಅಜೈವಿಕ ಸಂಯುಕ್ತ.

C) ಪೆಟ್ರೋಲಿಯಂ ಸಂಸ್ಕರಣೆಯಿಂದ ಪ್ರತ್ಯೇಕವಾಗಿ ಪಡೆಯಲಾದ ಹೈಡ್ರೋಕಾರ್ಬನ್.

D) ಕೈಗಾರಿಕಾ ಚಟುವಟಿಕೆಗಳ ಮೂಲಕ ಮಾತ್ರ ರೂಪುಗೊಳ್ಳುವ ಹಸಿರುಮನೆ ಅನಿಲ.

ಉತ್ತರ: B

 

4. ‘ಬಯೋಚಾರ್’ ಅನ್ನು ಪ್ರಾಥಮಿಕವಾಗಿ ಯಾವುದರಿಂದ ಉತ್ಪಾದಿಸಲಾಗುತ್ತದೆ?

A) ಪೆಟ್ರೋಲಿಯಂ ಉಳಿಕೆ (ತ್ಯಾಜ್ಯ)

B) ಕೃಷಿ ಮತ್ತು ಅರಣ್ಯ ತ್ಯಾಜ್ಯಗಳು

C) ಪುರಸಭೆಯ ಕೊಳಚೆನೀರು ಮಾತ್ರ

D) ಸುಣ್ಣದಕಲ್ಲು ನಿಕ್ಷೇಪಗಳು

ಉತ್ತರ: B

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts