ಇಂದಿರಾ ಪಾಯಿಂಟ್
ಭೂಗೋಳ

ಇದೀಗ ಸುದ್ದಿಯಲ್ಲಿ:
- ಪರಿಸರ ಸಚಿವಾಲಯವು ಇಂದಿರಾ ಪಾಯಿಂಟ್ನಲ್ಲಿ ರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ಕೋರುತ್ತಿದೆ.
ಇಂದಿರಾ ಪಾಯಿಂಟ್ ಬಗ್ಗೆ:
- ಇಂದಿರಾ ಪಾಯಿಂಟ್ ಭಾರತದ ಅತ್ಯಂತ ದಕ್ಷಿಣದ ತುದಿಯಾಗಿದೆ. ಇದು ಗ್ರೇಟ್ ನಿಕೋಬಾರ್ ದ್ವೀಪದಲ್ಲಿ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು) ನೆಲೆಗೊಂಡಿದೆ.
- ಇದನ್ನು ಈ ಹಿಂದೆ ಪಿಗ್ಮಲಿಯನ್ ಪಾಯಿಂಟ್ (Pygmalion Point) ಎಂದು ಕರೆಯಲಾಗುತ್ತಿತ್ತು ಮತ್ತು 1985 ರಲ್ಲಿ ಮರುನಾಮಕರಣ ಮಾಡಲಾಯಿತು.
- ಇದು ಆರು ಡಿಗ್ರಿ ಚಾನೆಲ್ ಮತ್ತು ಇಂಡೋನೇಷ್ಯಾಕ್ಕೆ ಹತ್ತಿರದಲ್ಲಿ ಆಯಕಟ್ಟಿನ ಸ್ಥಳದಲ್ಲಿದೆ.
- ಇದು ಕಡಲ ಭದ್ರತೆಗೆ ಅತ್ಯಂತ ನಿರ್ಣಾಯಕವಾಗಿದೆ. ಆದರೆ 2004 ರ ಸುನಾಮಿ ಸಮಯದಲ್ಲಿ ಇದು ತೀವ್ರವಾದ ಭೂಕುಸಿತವನ್ನು ಅನುಭವಿಸಿತ್ತು.
ಭೌಗೋಳಿಕ ಮತ್ತು ಆಯಕಟ್ಟಿನ ಮಹತ್ವ:
- ಸ್ಥಳ: ಇದು ನಿಕೋಬಾರ್ ಜಿಲ್ಲೆಯಲ್ಲಿ 6°45′ ಉತ್ತರ ಅಕ್ಷಾಂಶ ಮತ್ತು 93°49′ ಪೂರ್ವ ರೇಖಾಂಶದಲ್ಲಿದೆ.
- ಸಾಮೀಪ್ಯ: ಇದು ಇಂಡೋನೇಷ್ಯಾದ ರೊಂಡೋ ದ್ವೀಪದಿಂದ (ಸುಮಾತ್ರಾ) ಕೇವಲ 145-163 ಕಿ.ಮೀ. ದೂರದಲ್ಲಿದೆ.
- ಮುಖ್ಯಭೂಮಿ ಮತ್ತು ಒಕ್ಕೂಟ ಪ್ರಾಂತ್ಯ: ಇದು ಭಾರತೀಯ ಒಕ್ಕೂಟದ ಅತ್ಯಂತ ದಕ್ಷಿಣದ ತುದಿಯಾದರೆ, ಕನ್ಯಾಕುಮರಿಯು ಭಾರತದ ಮುಖ್ಯ ಭೂಭಾಗದ ಅತ್ಯಂತ ದಕ್ಷಿಣದ ತುದಿಯಾಗಿದೆ.
- ಪರಿಸರ ಪ್ರಾಮುಖ್ಯತೆ: ಗಲಾಥಿಯಾ ಕೊಲ್ಲಿಯ ದಕ್ಷಿಣದಲ್ಲಿ ನೆಲೆಗೊಂಡಿರುವ ಈ ಪ್ರದೇಶವು ಚರ್ಮದ ಬೆನ್ನಿನ ಸಮುದ್ರ ಆಮೆಗಳಿಗೆ (Leatherback Sea Turtles) ಜಾಗತಿಕವಾಗಿ ಗುರುತಿಸಲ್ಪಟ್ಟ ಗೂಡುಕಟ್ಟುವ ತಾಣವಾಗಿದೆ ಮತ್ತು ಇದು ಸ್ಥಳೀಯ ‘ನಿಕೋಬಾರ್ ಮೆಗಾಪೋಡ್’ ಪಕ್ಷಿಗಳಿಗೆ ನೆಲೆಯಾಗಿದೆ.
ಗ್ರೇಟ್ ನಿಕೋಬಾರ್ ದ್ವೀಪ (GNI) ಯೋಜನೆಯ ಬಗ್ಗೆ:
- ಈ ಯೋಜನೆಯನ್ನು ನೀತಿ ಆಯೋಗ (NITI Aayog) 2021 ರಲ್ಲಿ ಪ್ರಾರಂಭಿಸಿದೆ.
- ಇದು ₹72,000 ದಿಂದ ₹81,000 ಕೋಟಿ ವೆಚ್ಚದ ಬೃಹತ್ ಮೂಲಸೌಕರ್ಯ ಉಪಕ್ರಮವಾಗಿದೆ.
- ಇದು ಭಾರತದ ಅತ್ಯಂತ ದಕ್ಷಿಣದ ದ್ವೀಪವನ್ನು ಪ್ರಮುಖ ಆಯಕಟ್ಟಿನ ಮತ್ತು ಆರ್ಥಿಕ ಕೇಂದ್ರವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.
- ಪ್ರಾಮುಖ್ಯತೆ: ಈ ಯೋಜನೆಯು ಭಾರತದ ಮ್ಯಾರಿಟೈಮ್ ವಿಷನ್ 2030 ಮತ್ತು ಅಮೃತ್ ಕಾಲ್ ವಿಷನ್ 2047 ರ ಪ್ರಮುಖ ಕೇಂದ್ರಬಿಂದುವಾಗಿದೆ.
ಇಂಡಿಯಾಹ್ಯಾಂಡ್ಮೇಡ್ (Indiahandmade)
ಆರ್ಥಿಕತೆ

ಇದೀಗ ಸುದ್ದಿಯಲ್ಲಿ:
- ಇಂಡಿಯಾಹ್ಯಾಂಡ್ಮೇಡ್ (Indiahandmade) ಎಂಬುದು ಭಾರತದ ಕೈಮಗ್ಗ ಮತ್ತು ಕರಕುಶಲ ಸಂಪ್ರದಾಯಗಳನ್ನು ಆನ್ಲೈನ್ ಆರ್ಥಿಕತೆಯ ವ್ಯಾಪ್ತಿಗೆ ತರುವ ಮೀಸಲಾದ ಡಿಜಿಟಲ್ ಮಾರುಕಟ್ಟೆಯಾಗಿದೆ.
ಇಂಡಿಯಾಹ್ಯಾಂಡ್ಮೇಡ್ ಬಗ್ಗೆ:
- ಇದನ್ನು 2023 ರಲ್ಲಿ ಪ್ರಾರಂಭಿಸಲಾಯಿತು.
- ಉದ್ದೇಶ: ಕೈಯಿಂದ ತಯಾರಿಸಿದ ಉತ್ಪನ್ನಗಳ ಗೋಚರತೆಯನ್ನು ಬಲಪಡಿಸುವುದು ಮತ್ತು ಮಾರಾಟಗಾರರಿಗೆ ವ್ಯಾಪಕವಾದ ಮಾರುಕಟ್ಟೆ ಅವಕಾಶಗಳನ್ನು ತೆರೆಯುವುದು.
- ಅಭಿವೃದ್ಧಿಪಡಿಸಿದವರು: ಜವಳಿ ಸಚಿವಾಲಯದ ಅಡಿಯಲ್ಲಿ ಬರುವ ಡಿಜಿಟಲ್ ಇಂಡಿಯಾ ಕಾರ್ಪೊರೇಷನ್.
ಪ್ರಮುಖ ಲಕ್ಷಣಗಳು:
- ಮೀಸಲಾದ ಆನ್ಲೈನ್ ಮಾರುಕಟ್ಟೆ: ಇದು ನೇಕಾರರು ಮತ್ತು ಕುಶಲಕರ್ಮಿಗಳಿಗೆ ತಮ್ಮ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ.
- ನೇರ ಖರೀದಿದಾರರ ಪ್ರವೇಶ: ಕುಶಲಕರ್ಮಿಗಳು ಮತ್ತು ನೇಕಾರರನ್ನು ನೇರವಾಗಿ ಖರೀದಿದಾರರೊಂದಿಗೆ ಸಂಪರ್ಕಿಸಲಾಗುತ್ತದೆ. ಇದರಿಂದ ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗುತ್ತದೆ ಮತ್ತು ನ್ಯಾಯಯುತ ಬೆಲೆ ಸಿಗುವಂತೆ ಬೆಂಬಲಿಸುತ್ತದೆ.
- ಡಿಜಿಟಲ್ ಸಬಲೀಕರಣ: ಆನ್ಲೈನ್ ವಾಣಿಜ್ಯದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಭಾಗವಹಿಸಲು ಕುಶಲಕರ್ಮಿಗಳು ಮತ್ತು ನೇಕಾರರಿಗೆ ಡಿಜಿಟಲ್ ಉಪಕರಣಗಳು ಮತ್ತು ಗೋಚರತೆಯನ್ನು ಒದಗಿಸಲಾಗುತ್ತದೆ.
- ಇದು ಉಡುಪುಗಳು, ಗೃಹಾಲಂಕಾರಗಳು, ಪೀಠೋಪಕರಣಗಳು, ವರ್ಣಚಿತ್ರಗಳು, ಪೂಜಾ ಸಾಮಗ್ರಿಗಳು, ಲೇಖನ ಸಾಮಗ್ರಿಗಳು, ಸಂಗೀತ ಉಪಕರಣಗಳು, ಆಭರಣಗಳು, ಬ್ಯಾಗ್ಗಳು ಮತ್ತು ಪಾದರಕ್ಷೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ನೀಡುತ್ತದೆ.
- ಇದು ಭೌಗೋಳಿಕ ಸೂಚ್ಯಂಕ (GI) ಮಾನ್ಯತೆ ಪಡೆದ ಮತ್ತು ಒಂದು ಜಿಲ್ಲೆ, ಒಂದು ಉತ್ಪನ್ನ (ODOP) ಗಳಂತಹ ವಿಶೇಷ ಉತ್ಪನ್ನ ವರ್ಗಗಳನ್ನು ಸಹ ಎತ್ತಿ ತೋರಿಸುತ್ತದೆ.
ವಿಕ್ರಮ್-1 (Vikram-1)
ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿ:
- ಮಿಷನ್ ಆಗಮನ್ (Mission Aagaman) ಸಮಯದಲ್ಲಿ ವಿಕ್ರಮ್-1 ರಾಕೆಟ್ ಆರು ಪೇಲೋಡ್ಗಳನ್ನು ಹೊತ್ತೊಯ್ಯಲಿದೆ ಎಂದು ‘ಸ್ಕೈರೂಟ್ ಏರೋಸ್ಪೇಸ್’ ಸಂಸ್ಥೆಯು ಪ್ರಕಟಿಸಿದೆ.
ವಿಕ್ರಮ್-1 ಬಗ್ಗೆ:
- ವಿಕ್ರಮ್-1 ಎಂಬುದು ಭಾರತೀಯ ಬಾಹ್ಯಾಕಾಶ-ತಂತ್ರಜ್ಞಾನ ನವೋದ್ಯಮವಾದ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ನಾಲ್ಕು-ಹಂತದ ಕಕ್ಷೀಯ ಉಡಾವಣಾ ವಾಹನವಾಗಿದೆ .
- ಇದು ಭಾರತದ ಮೊಟ್ಟಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಲಾದ ಕಕ್ಷೀಯ-ದರ್ಜೆಯ ರಾಕೆಟ್ ಆಗಿದೆ.
- ವಿಕ್ರಮ್-1 ರಾಕೆಟ್ 350 ಕೆ.ಜಿ. ತೂಕದ ಉಪಗ್ರಹಗಳನ್ನು ಕೆಳ ಭೂಕಕ್ಷೆಗೆ (Low Earth Orbit – LEO) ಮತ್ತು 260 ಕೆ.ಜಿ. ತೂಕದ ಉಪಗ್ರಹಗಳನ್ನು ಸೂರ್ಯ-ಸಮಕಾಲಿಕ ಕಕ್ಷೆಗೆ (Sun-Synchronous Orbit – SSO) ಸೇರಿಸಬಲ್ಲದು.
- ಮಿಷನ್ ಆಗಮನ್: ಇದು ವಿಕ್ರಮ್-1 ರಾಕೆಟ್ನ ಮೊದಲ ಕಕ್ಷೀಯ ಪರೀಕ್ಷಾ ಹಾರಾಟವಾಗಿದ್ದು, ಭಾರತದ ಮೊದಲ ಖಾಸಗಿ ಕಕ್ಷೀಯ ಉಡಾವಣೆಯಾಗಿದೆ.
- ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿರುವ ಈ ರಾಕೆಟ್, ಜುಲೈ 12 ಮತ್ತು ಆಗಸ್ಟ್ 4, 2026 ರ ನಡುವೆ ಶ್ರೀಹರಿಕೋಟಾದಿಂದ ಉಡಾವಣೆಯಾಗಲು ನಿರ್ಧರಿಸಲಾಗಿದೆ.
ಅತ್ಯಂತ ಹಳೆಯ ಕ್ವಾಸಾರ್ಗಳ ಪತ್ತೆ
ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿ:
- ಯೂಕ್ಲಿಡ್ ಬಾಹ್ಯಾಕಾಶ ದೂರದರ್ಶಕವು (Euclid space telescope) ಇದುವರೆಗಿನ ಅತ್ಯಂತ ಹಳೆಯ ಕ್ವಾಸಾರ್ಗಳನ್ನು (quasars) ಗುರುತಿಸಿದೆ. ಇದು ವಿಜ್ಞಾನಿಗಳನ್ನು ಗೊಂದಲಕ್ಕೀಡುಮಾಡಿದ್ದ ಬ್ರಹ್ಮಾಂಡದ ರಹಸ್ಯವನ್ನು ಮತ್ತಷ್ಟು ಆಳವಾಗಿಸಿದೆ.
ಕ್ವಾಸಾರ್ಗಳ ಬಗ್ಗೆ:
- ಕ್ವಾಸಾರ್ (Quasi-Stellar Radio Source ನ ಸಂಕ್ಷಿಪ್ತ ರೂಪ) ಎನ್ನುವುದು ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯಸ್ನ (Active Galactic Nucleus – AGN) ಅತ್ಯಂತ ಸಕ್ರಿಯ ಮತ್ತು ಪ್ರಕಾಶಮಾನವಾದ ವಿಧವಾಗಿದೆ.
- ಇದು ನಕ್ಷತ್ರವಲ್ಲ, ಆದರೆ ಬೃಹತ್ ಕಪ್ಪು ಕುಳಿಯಿಂದ ಶಕ್ತಿಯನ್ನು ಪಡೆಯುವ ದೂರದ ಗ್ಯಾಲಕ್ಸಿಯ ಪ್ರಕಾಶಮಾನವಾದ ಮತ್ತು ಶಕ್ತಿಯುತವಾದ ಕೇಂದ್ರವಾಗಿದೆ.
ಕ್ವಾಸಾರ್ಗಳು ಮತ್ತು ಬ್ಲೇಜಾರ್ಗಳ ನಡುವಿನ ವ್ಯತ್ಯಾಸ:
ಇವೆರಡೂ ಬೃಹತ್ ಕಪ್ಪು ಕುಳಿಗಳಿಂದ ಶಕ್ತಿ ಪಡೆಯುವ ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯಸ್ಗಳ (AGNs) ಉಪ-ವರ್ಗಗಳಾಗಿವೆ, ಆದರೆ ಭೂಮಿಯಿಂದ ನಾವು ಅವುಗಳನ್ನು ಗಮನಿಸುವ ರೀತಿಯಲ್ಲಿ ಅವು ಭಿನ್ನವಾಗಿವೆ.
|
ವೈಶಿಷ್ಟ್ಯ |
ಕ್ವಾಸಾರ್ (Quasar) |
ಬ್ಲೇಜಾರ್ (Blazar) |
|
ವೀಕ್ಷಣಾ ಕೋನ |
ಅಕ್ರಿಶನ್ ಡಿಸ್ಕ್ಗೆ (accretion disk) ಸಂಬಂಧಿಸಿದಂತೆ ವಾಲಿದ ಕೋನಗಳಲ್ಲಿ ಗಮನಿಸಲಾಗುತ್ತದೆ. |
ರಿಲೇಟಿವಿಸ್ಟಿಕ್ ಜೆಟ್ (relativistic jet) ನೇರವಾಗಿ ಅಥವಾ ಬಹುತೇಕ ಭೂಮಿಯ ಕಡೆಗೆ ಮುಖ ಮಾಡಿರುತ್ತದೆ. |
|
ಪ್ರಕಾಶದ ವ್ಯತ್ಯಯ |
ದೀರ್ಘಾವಧಿಯಲ್ಲಿ ಸ್ಥಿರವಾಗಿ ಬದಲಾಗುತ್ತದೆ. |
ಹೆಚ್ಚು ವ್ಯತ್ಯಯವನ್ನು ಹೊಂದಿರುತ್ತದೆ, ಅತಿ ಕಡಿಮೆ ಅವಧಿಯಲ್ಲಿ ಗಣನೀಯವಾಗಿ ಬದಲಾಗುತ್ತದೆ. |
|
ಗೋಚರ ಲಕ್ಷಣ |
ಗೋಚರ ಉಷ್ಣ ರೋಹಿತದೊಂದಿಗೆ (thermal spectra) ಬೆಳಕಿನ ಬಿಂದುವಿನಂತಹ ನಕ್ಷತ್ರದಂತೆ ಕಾಣಿಸಿಕೊಳ್ಳುತ್ತದೆ. |
ಬೆಳಕಿಗಿಂತ ವೇಗವಾಗಿ ಚಲಿಸುವ, ಹೆಚ್ಚಿನ ಶಕ್ತಿಯ ಕಣಗಳ ಜೆಟ್ಗಳಿಂದ (particle jets) ಪ್ರಾಬಲ್ಯ ಹೊಂದಿದೆ. |
INS ಮಹೇಂದ್ರಗಿರಿ
ರಕ್ಷಣೆ

ಇದೀಗ ಸುದ್ದಿಯಲ್ಲಿ:
- ಪ್ರಾಜೆಕ್ಟ್ 17A ಅಡಿಯಲ್ಲಿ ಆರನೇ ಸ್ಥಳೀಯ ಸ್ಟೆಲ್ತ್ ಫ್ರಿಗೇಟ್ (stealth frigate) ಆದ INS ಮಹೇಂದ್ರಗಿರಿಯನ್ನು (F38) ಭಾರತೀಯ ನೌಕಾಪಡೆಯು ವಿಶಾಖಪಟ್ಟಣಂನಲ್ಲಿ ನಿಯೋಜಿಸಲು ಸಜ್ಜಾಗಿದೆ.
INS ಮಹೇಂದ್ರಗಿರಿಯ ಬಗ್ಗೆ:
- ಪೂರ್ವ ಘಟ್ಟಗಳ ಭವ್ಯವಾದ ಮಹೇಂದ್ರಗಿರಿ ಪರ್ವತ ಶ್ರೇಣಿಯ ಹೆಸರನ್ನು ಇದಕ್ಕೆ ಇಡಲಾಗಿದೆ.
- ಈ ಸ್ಟೆಲ್ತ್ ಫ್ರಿಗೇಟ್ ಅನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ ವಿನ್ಯಾಸಗೊಳಿಸಿದೆ ಮತ್ತು ಮುಂಬೈನ ಮಜಗಾಂವ್ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ (MDL) ನಿರ್ಮಿಸಿದೆ.
- ಈ ಫ್ರಿಗೇಟ್ ಸುಧಾರಿತ ಸ್ಥಳೀಯ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹಾಗೂ ಸಂವೇದಕ (ಸೆನ್ಸಾರ್)ಗಳನ್ನು ಹೊಂದಿದೆ. ಭೂಮೇಲ್ಮೈಯಿಂದ ಭೂಮೇಲ್ಮೈಗೆ ಮತ್ತು ಭೂಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿ ವ್ಯವಸ್ಥೆಗಳು, ಅತ್ಯಾಧುನಿಕ ಎಲೆಕ್ಟ್ರಾನಿಕ್ ಯುದ್ಧ ಸಾಮರ್ಥ್ಯಗಳು, ಸಮಗ್ರ ಜಲಾಂತರ್ಗಾಮಿ-ವಿರೋಧಿ ಯುದ್ಧ ವ್ಯವಸ್ಥೆಗಳು ಮತ್ತು ಸಂಯೋಜಿತ ಯುದ್ಧ ನಿರ್ವಹಣಾ ವ್ಯವಸ್ಥೆಯನ್ನು ಇದು ಒಳಗೊಂಡಿದೆ.
ಪ್ರಾಜೆಕ್ಟ್ 17A ಬಗ್ಗೆ:
- ಉದ್ದೇಶ: ಭಾರತೀಯ ನೌಕಾಪಡೆಗಾಗಿ ಏಳು ಸುಧಾರಿತ ಸ್ಟೆಲ್ತ್ ಗೈಡೆಡ್-ಮಿಸೈಲ್ ಫ್ರಿಗೇಟ್ಗಳನ್ನು ನಿರ್ಮಿಸುವುದು.
- ಪ್ರಮುಖ ನಿರ್ಮಾತೃಗಳು: ಈ ಯೋಜನೆಯನ್ನು ಮುಂಬೈನ ಮಜಗಾಂವ್ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ (MDL – 4 ಹಡಗುಗಳು) ಮತ್ತು ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ (GRSE – 3 ಹಡಗುಗಳು) ನಡುವೆ ವಿಭಜಿಸಲಾಗಿದೆ.
- ವಿನ್ಯಾಸ: ವಾರ್ಶಿಪ್ ಡಿಸೈನ್ ಬ್ಯೂರೋ (WDB) ಇದನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಿದೆ.
- ಆತ್ಮನಿರ್ಭರ : ಇದರ ನಿರ್ಮಾಣದಲ್ಲಿ ಸುಮಾರು 75% ರಷ್ಟು ಉಪಕರಣಗಳು ಸ್ಥಳೀಯವಾಗಿವೆ. ಆತ್ಮನಿರ್ಭರ್ ಭಾರತ್ (ಸ್ವಾವಲಂಬಿ ಭಾರತ) ಉಪಕ್ರಮಕ್ಕೆ ಅನುಗುಣವಾಗಿ 200 ಕ್ಕೂ ಹೆಚ್ಚು MSME ಗಳು ಇದರಲ್ಲಿ ಪಾಲ್ಗೊಂಡಿವೆ.
ಏಳು ಫ್ರಿಗೇಟ್ಗಳ ಪಟ್ಟಿ:
- INS ನೀಲಗಿರಿ – ಜನವರಿ 2025 ರಲ್ಲಿ ಸೇರ್ಪಡೆ
- INS ಹಿಮಗಿರಿ – ಆಗಸ್ಟ್ 2025 ರಲ್ಲಿ ಸೇರ್ಪಡೆ
- INS ಉದಯಗಿರಿ – ಆಗಸ್ಟ್ 2025 ರಲ್ಲಿ ಸೇರ್ಪಡೆ
- INS ತಾರಾಗಿರಿ – ಏಪ್ರಿಲ್ 2026 ರಲ್ಲಿ ಸೇರ್ಪಡೆ
- INS ದೂನಗಿರಿ – ಮಾರ್ಚ್/ಏಪ್ರಿಲ್ 2026 ಕ್ಕೆ ಹಸ್ತಾಂತರ
- INS ವಿಂಧ್ಯಗಿರಿ – ಸಮುದ್ರ ಪರೀಕ್ಷೆಗಳು/ಹೊರಹೊದಿಕೆ ಹಂತದಲ್ಲಿದೆ
- INS ಮಹೇಂದ್ರಗಿರಿ – ನಿರ್ಮಾಣ/ಹೊರಹೊದಿಕೆ ಹಂತದಲ್ಲಿದೆ
ಭಾರತ-ಇಂಡೋನೇಷ್ಯಾ ಸಂಬಂಧಗಳು
ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿ:
- ಭಾರತದ ಪ್ರಧಾನ ಮಂತ್ರಿಗಳು ಜುಲೈ 6-8, 2026 ರವರೆಗೆ ಇಂಡೋನೇಷ್ಯಾಕ್ಕೆ ಅಧಿಕೃತ ಭೇಟಿ ನೀಡಿದರು.
ಭೇಟಿಯ ಪ್ರಮುಖ ಫಲಿತಾಂಶಗಳು:
- ರಕ್ಷಣೆ: ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆ ಮತ್ತು ಅಸ್ತ್ರ ಗಾಳಿಯಿಂದ ಗಾಳಿಗೆ ಹಾರುವ ಕ್ಷಿಪಣಿಗಳ (Astra Air-to-Air Missile) ಮೇಲಿನ ಸಹಕಾರದ ಮೂಲಕ ರಕ್ಷಣಾ ಸಹಕಾರವನ್ನು ಉನ್ನತೀಕರಿಸುವುದು.
- ಸಂಸ್ಕೃತಿ: ಇಂಡೋನೇಷ್ಯಾದ ಜಾವಾ ದ್ವೀಪದ ಯೋಗ್ಯಕಾರ್ತಾದಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪ್ರಂಬನನ್ ದೇವಾಲಯದ ಆವರಣವನ್ನು ಭಾರತೀಯ ಪುರಾತತ್ವ ಸಮೀಕ್ಷೆ (ASI) ಯಿಂದ ಪುನಃಸ್ಥಾಪನೆ ಮತ್ತು ಸಂರಕ್ಷಣೆ ಮಾಡುವ ಭಾರತ-ಬೆಂಬಲಿತ ಯೋಜನೆಯ ಉದ್ಘಾಟನೆ.
- ಪ್ರಂಬನನ್ ದೇವಾಲಯದ ಆವರಣವು ಇಂಡೋನೇಷ್ಯಾದ ಅತಿದೊಡ್ಡ ಹಿಂದೂ ದೇವಾಲಯ ಸಂಕೀರ್ಣವಾಗಿದೆ. ಸಾ.ಶ 9 ನೇ ಶತಮಾನಕ್ಕೆ ಸೇರಿದ ಇದು ಹಿಂದೂ ತ್ರಿಮೂರ್ತಿಗಳಾದ ಶಿವ, ವಿಷ್ಣು ಮತ್ತು ಬ್ರಹ್ಮರಿಗೆ ಸಮರ್ಪಿತವಾಗಿದೆ.
- 1927 ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಇಂಡೋನೇಷ್ಯಾಕ್ಕೆ ನೀಡಿದ ಭೇಟಿಯ ಶತಮಾನೋತ್ಸವವನ್ನು ಗುರುತಿಸುವ ಸಲುವಾಗಿ, 2026-2027 ನೇ ವರ್ಷವನ್ನು “ಟ್ಯಾಗೋರ್-ದೇವಾಂತರ ಭಾರತ-ಇಂಡೋನೇಷ್ಯಾ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ರಾಜತಾಂತ್ರಿಕ ವರ್ಷ” ಎಂದು ಸ್ಮರಿಸಲಾಗುವುದು.
- ಇಂಡೋನೇಷ್ಯಾದ ಸಿಂಗಸಾರಿ SEZ ನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಬೆಂಗಳೂರು(IIM Bangalore) ಶಾಖೆಯ ಕ್ಯಾಂಪಸ್ ಅನ್ನು ಸ್ಥಾಪಿಸುವುದು.
ಭಾರತ-ಇಂಡೋನೇಷ್ಯಾ ಸಂಬಂಧಗಳ ಹಿನ್ನೆಲೆ:
- ರಾಜತಾಂತ್ರಿಕ ಇತಿಹಾಸ: ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯಾಗಿ 2024 ಕ್ಕೆ 75 ವರ್ಷಗಳು ಪೂರೈಸಿದವು. 2018 ರಲ್ಲಿ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಸಹಿ ಹಾಕಲಾಯಿತು.
- ದ್ವಿಪಕ್ಷೀಯ ವ್ಯಾಪಾರ: ASEAN ವಲಯದಲ್ಲಿ ಇಂಡೋನೇಷ್ಯಾವು ಭಾರತದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.
- ರಕ್ಷಣಾ ಸಮರಾಭ್ಯಾಸಗಳು: IND-INDO CORPAT, ಬಹುಪಕ್ಷೀಯ ನೌಕಾ ಸಮರಾಭ್ಯಾಸಗಳಾದ ಕೊಮೊಡೊ ಮತ್ತು ಮಿಲಾನ್, ದ್ವಿಪಕ್ಷೀಯ ಸೇನಾ ಸಮರಾಭ್ಯಾಸ ಗರುಡ ಶಕ್ತಿ, ದ್ವಿಪಕ್ಷೀಯ ನೌಕಾ ಸಮರಾಭ್ಯಾಸ ಸಮುದ್ರ ಶಕ್ತಿ, Ex ಎಲಾಂಗ್ ಶಕ್ತಿ, Ex ಸೂಪರ್ ಗರುಡ ಶೀಲ್ಡ್ 2025 ಮುಂತಾದ ಹಲವಾರು ಸಮರಾಭ್ಯಾಸಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ.
ಮಿಜೋರಾಂನಲ್ಲಿ ನೈಸರ್ಗಿಕ ಇತಿಹಾಸ ಮ್ಯೂಸಿಯಂ (NHM)
ಪರಿಸರ
ಇದೀಗ ಸುದ್ದಿಯಲ್ಲಿ:
- ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC) ಐಜ್ವಾಲ್ನ ಮಿಜೋರಾಂ ವಿಶ್ವವಿದ್ಯಾಲಯದಲ್ಲಿರುವ ನೈಸರ್ಗಿಕ ಇತಿಹಾಸ ಮ್ಯೂಸಿಯಂ (NHM) ಅನ್ನು ಭಾರತದ 21ನೇ ಗೊತ್ತುಪಡಿಸಿದ ರೆಪೊಸಿಟರಿ (Designated Repository) ಎಂದು ಘೋಷಿಸಿ ಅಧಿಸೂಚನೆ ಹೊರಡಿಸಿದೆ.
ನೈಸರ್ಗಿಕ ಇತಿಹಾಸ ಮ್ಯೂಸಿಯಂ (NHM) ಬಗ್ಗೆ:
- ಈ ಮ್ಯೂಸಿಯಂ ಜಾಗತಿಕವಾಗಿ ಗುರುತಿಸಲ್ಪಟ್ಟ ಇಂಡೋ-ಬರ್ಮಾ ಜೀವವೈವಿಧ್ಯತೆಯ ತಾಣದಲ್ಲಿ ನೆಲೆಗೊಂಡಿದೆ.
- ಇದು ಹೆಚ್ಚಿನ ಸಂಶೋಧನೆಗೆ ಒಳಗಾಗದ ಜೀವಿಗಳ ಗುಂಪುಗಳಾದ ಟೆರಿಡೋಫೈಟ್ಗಳು (pteridophytes) ಮತ್ತು ಮ್ಯಾಕ್ರೋಫಂಗಿಗಳ (macrofungi) ಅಧ್ಯಯನದಲ್ಲಿ ವಿಶೇಷ ಪರಿಣತಿಯನ್ನು ಹೊಂದಿದೆ.
- ಈಶಾನ್ಯ ಭಾರತದ ಅತ್ಯಂತ ಅಪರೂಪದ ಮತ್ತು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಸೀಮಿತವಾದ ಸ್ಥಳೀಯ ಪ್ರಭೇದಗಳನ್ನು ದಾಖಲಿಸುವಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ.
ಗೊತ್ತುಪಡಿಸಿದ ರೆಪೊಸಿಟರಿ (Designated Repository) ಎಂದರೇನು?
- ಜೀವ ವೈವಿಧ್ಯತಾ ಕಾಯ್ದೆ, 2002 ರ ಸೆಕ್ಷನ್ 39 ರ ಅಡಿಯಲ್ಲಿ ಈ ರೆಪೊಸಿಟರಿಗಳನ್ನು ಸರ್ಕಾರವು ಅಧಿಸೂಚಿಸುತ್ತದೆ.
- ಇವು ಜೈವಿಕ ಮಾದರಿಗಳನ್ನು ಸಂಗ್ರಹಿಸಲು, ಅವುಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಲು ಮತ್ತು ಸುರಕ್ಷಿತ ಕಸ್ಟಡಿಯಲ್ಲಿ ನಿರ್ವಹಿಸಲು ಅಧಿಕಾರ ಹೊಂದಿರುವ ಮಾನ್ಯತೆ ಪಡೆದ ವೈಜ್ಞಾನಿಕ ಸಂಸ್ಥೆಗಳಾಗಿವೆ.
- ರಾಷ್ಟ್ರೀಯ ಜೀವ ವೈವಿಧ್ಯತಾ ಪ್ರಾಧಿಕಾರದ (NBA) ಜೊತೆಗೆ ಸಮಾಲೋಚನೆ ನಡೆಸಿದ ನಂತರ, ಪರಿಸರ ಸಚಿವಾಲಯವು ಇಂತಹ ಸಂಸ್ಥೆಗಳನ್ನು ಅಧಿಕೃತ ರೆಪೊಸಿಟರಿಗಳಾಗಿ ನೇಮಿಸುತ್ತದೆ.
ಕಾಮರಾಜರ್ ಬಂದರು
ಆರ್ಥಿಕತೆ
ಇದೀಗ ಸುದ್ದಿಯಲ್ಲಿ:
- ವಿಶಾಖಪಟ್ಟಣಂ ಬಂದರಿನ ನಂತರ, ಕಾಮರಾಜರ್ ಬಂದರು 18 ಮೀಟರ್ಗಳಷ್ಟು ಹಡಗು ನಿಲುಗಡೆಯ ನೀರಿನ ಆಳದ (Draft capability) ಸಾಮರ್ಥ್ಯವನ್ನು ಒದಗಿಸುವ ಭಾರತದ ಎರಡನೇ ಪ್ರಮುಖ ಬಂದರು (Major Port) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಾಮರಾಜರ್ ಬಂದರಿನ ಬಗ್ಗೆ:
- ಇದು ಆಳ-ನೀರಿನ ಬಂದರಾಗಿದ್ದು, 1,70,000 ಡೆಡ್ವೈಟ್ ಟನ್ನೇಜ್ (Deadweight Tonnage – DWT) ವರೆಗಿನ ಸರಕು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
- ಇದನ್ನು ಮೊದಲು ಎನ್ನೋರ್ ಬಂದರು (Ennore Port) ಎಂದು ಕರೆಯಲಾಗುತ್ತಿತ್ತು.
- ಪ್ರಮುಖ ಬಂದರುಗಳು: ಬಂದರು, ಹಡಗು ಮತ್ತು ಜಲಸಾರಿಗೆ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ 14 ಪ್ರಮುಖ ಬಂದರುಗಳಿವೆ (12 ಕಾರ್ಯಾಚರಣೆಯಲ್ಲಿವೆ).
ಹೆಚ್ಚಿನ ಮಾಹಿತಿ:
ಭಾರತವು 14 ಪ್ರಮುಖ ಬಂದರುಗಳನ್ನು ಹೊಂದಿದ್ದು, ಅವುಗಳಲ್ಲಿ 12 ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ.
- ಪಶ್ಚಿಮ ಕರಾವಳಿ (6 ಕಾರ್ಯಾಚರಣೆಯಲ್ಲಿರುವ ಬಂದರುಗಳು):
- ದೀನದಯಾಳ್ ಬಂದರು (ಕಾಂಡ್ಲಾ), ಗುಜರಾತ್
- ಮುಂಬೈ ಬಂದರು, ಮಹಾರಾಷ್ಟ್ರ
- ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ (JNPA/ನವ ಶೇವಾ), ಮಹಾರಾಷ್ಟ್ರ
- ಮರ್ಮುಗೋವಾ ಬಂದರು, ಗೋವಾ
- ನವಮಂಗಳೂರು ಬಂದರು, ಕರ್ನಾಟಕ
- ಕೊಚ್ಚಿನ್ ಬಂದರು, ಕೇರಳ
- ಪೂರ್ವ ಕರಾವಳಿ (6 ಕಾರ್ಯಾಚರಣೆಯಲ್ಲಿರುವ ಬಂದರುಗಳು):
- ಶ್ಯಾಮ ಪ್ರಸಾದ್ ಮುಖರ್ಜಿ ಬಂದರು (ಕೋಲ್ಕತ್ತಾ/ಹಲ್ದಿಯಾ), ಪಶ್ಚಿಮ ಬಂಗಾಳ
- ಪಾರಾದೀಪ್ ಬಂದರು, ಒಡಿಶಾ
- ವಿಶಾಖಪಟ್ಟಣಂ ಬಂದರು, ಆಂಧ್ರಪ್ರದೇಶ
- ಕಾಮರಾಜರ್ ಬಂದರು (ಎನ್ನೋರ್), ತಮಿಳುನಾಡು
- ಚೆನ್ನೈ ಬಂದರು, ತಮಿಳುನಾಡು
- V.೦. ಚಿದಂಬರನಾರ್ ಬಂದರು (ಟ್ಯುಟಿಕೋರಿನ್), ತಮಿಳುನಾಡು
- ಕಾರ್ಯಾಚರಣೆಯಲ್ಲಿಲ್ಲದ / ಅಭಿವೃದ್ಧಿ ಹಂತದಲ್ಲಿರುವ (2 ಬಂದರುಗಳು):
- ವಧ್ವಾನ್ ಬಂದರು: ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಮುಂಬರುವ ಮೆಗಾ ಸ್ಯಾಟಲೈಟ್ ಬಂದರು.
- ಗಲಾಥಿಯಾ ಕೊಲ್ಲಿ ಬಂದರು (Galathea Bay Port): ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಅಂತರರಾಷ್ಟ್ರೀಯ ಟ್ರಾನ್ಸ್ಶಿಪ್ಮೆಂಟ್ ಬಂದರು.
ಆಕಾಶ್ ತರಂಗ್ ವ್ಯವಸ್ಥೆ (Akash Tarang)
ರಕ್ಷಣೆ

ಇದೀಗ ಸುದ್ದಿಯಲ್ಲಿ:
- ರಕ್ಷಣಾ ಸ್ವಾಧೀನ ಮಂಡಳಿಯು (Defence Acquisition Council – DAC) ಆಕಾಶ್ ತರಂಗ್ ವ್ಯವಸ್ಥೆಯ ಖರೀದಿಗೆ ಅಧಿಕೃತ ಅನುಮೋದನೆ ನೀಡಿದೆ.
ಆಕಾಶ್ ತರಂಗ್ ವ್ಯವಸ್ಥೆಯ ಬಗ್ಗೆ:
- ಇದು ಸಂಪೂರ್ಣವಾಗಿ ದೇಶೀಯವಾಗಿ ವಿನ್ಯಾಸಗೊಳಿಸಿದ ಮಾನವರಹಿತ ವಿಮಾನ-ನಿರೋಧಕ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆ (Anti-UAV Electronic Warfare System) ಆಗಿದ್ದು, ಶತ್ರುಪಾಳಯದ ಡ್ರೋನ್ಗಳ ವಿರುದ್ಧ ಪರಿಣಾಮಕಾರಿ ರಕ್ಷಣೆ ಒದಗಿಸಲು ಇದನ್ನು ಅಭಿವೃದ್ಧಿಪಡಿಸಲಾಗಿದೆ.
- ಆಕಾಶ್ ತರಂಗ್ ವ್ಯವಸ್ಥೆಯು ಡ್ರೋನ್ಗಳ ರೇಡಿಯೊ ತರಂಗಾಂತರಗಳನ್ನು ನಿಖರವಾಗಿ ಗುರಿಯಾಗಿಸಿಕೊಂಡು, ಅವುಗಳನ್ನು ಸಂಪೂರ್ಣವಾಗಿ ತಟಸ್ಥಗೊಳಿಸುತ್ತದೆ.
- ಆಕ್ರಮಣಕಾರಿ ಡ್ರೋನ್ಗಳ ನಿಯಂತ್ರಣ ಸಂಕೇತಗಳನ್ನು ಪತ್ತೆಹಚ್ಚುವ, ಅವುಗಳನ್ನು ಬೆನ್ನಟ್ಟುವ (tracking) ಮತ್ತು ಸಂಪರ್ಕವನ್ನು ನಿರ್ಬಂಧಿಸುವ (jamming) ಮೂಲಕ ಈ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತದೆ.
- ಭಾರತೀಯ ಸೇನೆಯ ವಿಶಾಲವಾದ “ಸುದರ್ಶನ್ ಚಕ್ರ” ವ್ಯವಸ್ಥೆಯಲ್ಲಿ ಆಕಾಶ್ ತರಂಗ್ ಒಂದು ಪ್ರಮುಖ ಡಿಜಿಟಲ್ ಆಧಾರಸ್ತಂಭವಾಗಿ ತನ್ನ ಪಾತ್ರವನ್ನು ನಿರ್ವಹಿಸುತ್ತದೆ.












ನಿಮ್ಮದೊಂದು ಉತ್ತರ