ನೇಮಕಾತಿಗಳು
ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ (NCM) ಅಧ್ಯಕ್ಷರಾಗಿ ಹರ್ಜಿತ್ ಸಿಂಗ್ ಗ್ರೆವಾಲ್ ನೇಮಕ
- ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಹರ್ಜಿತ್ ಸಿಂಗ್ ಗ್ರೆವಾಲ್ ಅವರನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ (NCM) ಅಧ್ಯಕ್ಷರನ್ನಾಗಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿದೆ.
- ಭಾರತದ ಆರು ಅಧಿಸೂಚಿತ ಅಲ್ಪಸಂಖ್ಯಾತ ಸಮುದಾಯಗಳ (ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು, ಪಾರ್ಸಿಗಳು ಮತ್ತು 2014 ರಲ್ಲಿ ಸೇರ್ಪಡೆಗೊಂಡ ಜೈನರು) ಸಾಂವಿಧಾನಿಕ ಹಕ್ಕುಗಳು ಮತ್ತು ಕಲ್ಯಾಣವನ್ನು ಕಾಪಾಡುವ ಜವಾಬ್ದಾರಿಯನ್ನು ಈ ಆಯೋಗ ಹೊಂದಿದೆ.
- 7 ಸದಸ್ಯರ ಈ ಶಾಸನಬದ್ಧ ಸಂಸ್ಥೆಯು (Statutory Body) ಒಬ್ಬ ಅಧ್ಯಕ್ಷ, ಉಪಾಧ್ಯಕ್ಷ ಮತ್ತು 5 ಜನ ಸದಸ್ಯರನ್ನು ಒಳಗೊಂಡಿರುತ್ತದೆ; ಇವರೆಲ್ಲರೂ ಕಡ್ಡಾಯವಾಗಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರಾಗಿರಬೇಕು ಎಂದು ನಿಯಮವಿದೆ.
- ಮೊದಲು 1978 ರಲ್ಲಿ ಶಾಸನಬದ್ಧವಲ್ಲದ ಸಂಸ್ಥೆಯಾಗಿ ಸ್ಥಾಪನೆಯಾದ NCM, ನಂತರ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಅಲ್ಪಸಂಖ್ಯಾತರ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಹಾಗೂ ಶಾಸನಬದ್ಧ ರಕ್ಷಣೆಗಳನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ, 1992 ರ ಅಡಿಯಲ್ಲಿ ಶಾಸನಬದ್ಧ ಸ್ಥಾನಮಾನವನ್ನು ಪಡೆದುಕೊಂಡಿತು.
ಪ್ರಶಸ್ತಿಗಳು
ಅಂತರರಾಷ್ಟ್ರೀಯ ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಒಲಿಂಪಿಯಾಡ್ 2026 ರಲ್ಲಿ ಭಾರತಕ್ಕೆ ಭಾರಿ ಜಯ
ಉಜ್ಬೇಕಿಸ್ತಾನದ ತಾಷ್ಕೆಂಟ್ನಲ್ಲಿ ನಡೆದ 58 ನೇ ಅಂತರರಾಷ್ಟ್ರೀಯ ರಸಾಯನಶಾಸ್ತ್ರ ಒಲಿಂಪಿಯಾಡ್ (IChO) 2026 ಮತ್ತು ಲಿಥುವೇನಿಯಾದ ವಿಲ್ನಿಯಸ್ನಲ್ಲಿ ನಡೆದ 37 ನೇ ಅಂತರರಾಷ್ಟ್ರೀಯ ಜೀವಶಾಸ್ತ್ರ ಒಲಿಂಪಿಯಾಡ್ (IBO) 2026 ರಲ್ಲಿ ಭಾರತೀಯ ವಿದ್ಯಾರ್ಥಿಗಳ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿವೆ. ಒಟ್ಟಾರೆಯಾಗಿ ಲಭ್ಯವಿದ್ದ ಎಂಟೂ ವೈಯಕ್ತಿಕ ಸ್ಥಾನಗಳಲ್ಲಿ (ಒಟ್ಟು 5 ಚಿನ್ನ ಮತ್ತು 3 ಬೆಳ್ಳಿ) ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಭಾರತವು ಈ ಐತಿಹಾಸಿಕ ಸಾಧನೆ ಮಾಡಿದೆ.












ನಿಮ್ಮದೊಂದು ಉತ್ತರ