ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

1. ಕೆಳಗಿನ ಯಾವ ಕಾಯ್ದೆಯ ನಿಬಂಧನೆಗಳನ್ನು ಜಾರಿಗೆ ತರಲು ಶಿ-ಬಾಕ್ಸ್ (SHe-Box) ಅನ್ನು ಅಭಿವೃದ್ಧಿಪಡಿಸಲಾಗಿದೆ?

(A) ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆ, 2005 (Protection of Women from Domestic Violence Act, 2005)

(B) ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013 (Sexual Harassment of Women at Workplace (Prevention, Prohibition and Redressal) Act, 2013)

(C) ಹೆರಿಗೆ ಸೌಲಭ್ಯ ಕಾಯ್ದೆ, 1961 (Maternity Benefit Act, 1961)

(D) ಸಮಾನ ಸಂಭಾವನೆ ಕಾಯ್ದೆ, 1976 (Equal Remuneration Act, 1976)

ಉತ್ತರ: B

2. ‘ಡಾರ್ಕ್ ವೆಬ್‌’ಗೆ (Dark Web) ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಸಾಮಾನ್ಯ ಸರ್ಚ್ ಇಂಜಿನ್‌ಗಳ ಮೂಲಕ ಇದನ್ನು ಪ್ರವೇಶಿಸಬಹುದು.
  2. ಡಾರ್ಕ್ ವೆಬ್‌ನಲ್ಲಿರುವ ವೆಬ್‌ಸೈಟ್‌ಗಳು ಹೆಚ್ಚಾಗಿ “.onion” ಡೊಮೇನ್‌ಗಳನ್ನು ಬಳಸುತ್ತವೆ.

ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
A) 1 ಮಾತ್ರ
B) 2 ಮಾತ್ರ
C) 1 ಮತ್ತು 2 ಎರಡೂ
D) 1 ಅಥವಾ  2 ಯಾವುದೂ ಅಲ್ಲ

ಉತ್ತರ: B

3. ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆಯನ್ನು (PM-VBRY) ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಯಾವ ಸಚಿವಾಲಯ ಹೊಂದಿದೆ?

A) ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ

B) ಹಣಕಾಸು ಸಚಿವಾಲಯ

C) ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

D) MSME ಸಚಿವಾಲಯ

ಉತ್ತರ: C

4. QS ವಿಶ್ವವಿದ್ಯಾಲಯಗಳ ಶ್ರೇಯಾಂಕ 2027 ರಲ್ಲಿ ಯಾವ ಭಾರತೀಯ ಸಂಸ್ಥೆಯು ಭಾರತೀಯ ಸಂಸ್ಥೆಗಳ ಪೈಕಿ ಅತ್ಯುನ್ನತ ಶ್ರೇಯಾಂಕವನ್ನು ಪಡೆದುಕೊಂಡಿದೆ?

A) IIT ಬಾಂಬೆ

B) IIT ದೆಹಲಿ (IIT Delhi)

C) IISc ಬೆಂಗಳೂರು (IISc Bengaluru)

D) IIT ಮದ್ರಾಸ್ (IIT Madras)

ಉತ್ತರ: B

5. PMAY-U 2.0 ಯೋಜನೆಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದನ್ನು PMAY-U ಯೋಜನೆಯ ನವೀಕರಿಸಿದ ಮತ್ತು ವಿಸ್ತರಿತ ಆವೃತ್ತಿಯಾಗಿ ಪ್ರಾರಂಭಿಸಲಾಗಿದೆ.
  2. PMAY-U ಯೋಜನೆಯನ್ನು ಮೂಲತಃ 2015 ರಲ್ಲಿ ಪ್ರಾರಂಭಿಸಲಾಯಿತು.
  3. PMAY-U 2.0 ಯೋಜನೆಯು ಪ್ರತ್ಯೇಕವಾಗಿ ಕೊಳೆಗೇರಿಗಳ ಮರು-ಅಭಿವೃದ್ಧಿಯ ಗುರಿಯನ್ನು ಹೊಂದಿದೆ.

ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?
A) 1 ಮತ್ತು 2 ಮಾತ್ರ
B) 2 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
ಉತ್ತರ: A

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts