ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)

1. ಅಭಿಜ್ಞಾನ್ ಅಪ್ಲಿಕೇಶನ್‌ಗೆ (Abhigyan App) ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಭಿವೃದ್ಧಿಪಡಿಸಿದೆ.
  2. ಇದನ್ನು ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿಸುವಿಕೆ ವ್ಯವಸ್ಥೆಯೊಂದಿಗೆ (NAFIS) ಸಂಯೋಜಿಸಲಾಗಿದೆ.
  3. ಇದು ವಿಕೇಂದ್ರೀಕೃತ ಪ್ಲ್ಯಾಟ್ ಫಾರ್ಮ್ ನಲ್ಲಿ  ಬೆರಳಚ್ಚು ಸ್ಕ್ಯಾನ್‌ಗಳನ್ನು ಸಂಗ್ರಹಿಸುತ್ತದೆ.
    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?
    A) 1 ಮತ್ತು 2 ಮಾತ್ರ
    B) 2 ಮತ್ತು 3 ಮಾತ್ರ
    C) 1 ಮತ್ತು 3 ಮಾತ್ರ
    D) 1, 2 ಮತ್ತು 3
    ಉತ್ತರ: A


2. ಸುರಕ್ಷಿತ ಮತ್ತು ಗುರುತಿಸಲಾದ ಪಾದಚಾರಿ ಮಾರ್ಗಗಳಲ್ಲಿ ನಡೆಯುವ ಹಕ್ಕು (Right to walk) ಪ್ರಾಥಮಿಕವಾಗಿ ಕೆಳಗಿನ ಯಾವ ಮೂಲಭೂತ ಹಕ್ಕುಗಳಿಂದ ಹೊರಹೊಮ್ಮುತ್ತದೆ  ಎಂದು ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ತೀರ್ಪು ನೀಡಿದೆ?

A) ವಿಧಿಗಳು 14 ಮತ್ತು 15

B) ವಿಧಿಗಳು 19(1)(d) ಮತ್ತು 21 

C) ವಿಧಿಗಳು 25 ಮತ್ತು 26 

D) ವಿಧಿಗಳು 32 ಮತ್ತು 226 

ಉತ್ತರ: B


3. ಕೆಳಗಿನ ಯಾವ ಸಂಸ್ಥೆಯು ಇಂಧನ ಪರಿವರ್ತನಾ ಸೂಚ್ಯಂಕವನ್ನು (Energy Transition Index – ETI) ಪ್ರಕಟಿಸುತ್ತದೆ?

A) ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA)

B) ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)

C) ವಿಶ್ವ ಆರ್ಥಿಕ ವೇದಿಕೆ (WEF)

D) ಅಂತರರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (IRENA)

ಉತ್ತರ: C


4. FATF ಉಪಾಧ್ಯಕ್ಷರಾಗಿ ವಿವೇಕ್ ಅಗರ್ವಾಲ್ ಅವರ ಇತ್ತೀಚಿನ ನೇಮಕವು ಗಮನಾರ್ಹವಾಗಿದೆ ಏಕೆಂದರೆ___________

A) ಭಾರತವು ಮೊದಲ ಬಾರಿಗೆ FATF ಸಚಿವಾಲಯವನ್ನು ಆಯೋಜಿಸುತ್ತಿದೆ.

B) ಭಾರತವು ಮೊದಲ ಬಾರಿಗೆ FATF ಉಪಾಧ್ಯಕ್ಷ ಸ್ಥಾನವನ್ನು ಹೊಂದಲಿದೆ.

C) ಭಾರತವು FATF ನ ಸ್ಥಾಪಕ ಸದಸ್ಯ ರಾಷ್ಟ್ರವಾಗಿದೆ.

D) ಭಾರತವು FATF ನಲ್ಲಿ ಖಾಯಂ ಸದಸ್ಯತ್ವವನ್ನು ಪಡೆದುಕೊಂಡಿದೆ.

ಉತ್ತರ: B

 

5. ಸ್ಮಾರ್ಟ್ ಬೀಜ ಲೇಪನ ತಂತ್ರಜ್ಞಾನವನ್ನು (Smart Seed Coating Technology) ಕೆಳಗಿನ ಯಾವ ಸಂಸ್ಥೆಯು ಅಭಿವೃದ್ಧಿಪಡಿಸಿದೆ?

A) ICAR -ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ನವದೆಹಲಿ (ICAR-IARI)

B) ICAR -ಭಾರತೀಯ ಎಣ್ಣೆಕಾಳು ಸಂಶೋಧನಾ ಸಂಸ್ಥೆ, ಹೈದರಾಬಾದ್ (ICAR-IIOR)

C) ICAR -ಕೇಂದ್ರೀಯ ಒಣಭೂಮಿ ಕೃಷಿ ಸಂಶೋಧನಾ ಸಂಸ್ಥೆ, ಹೈದರಾಬಾದ್ (ICAR-CRIDA)

D) ರಾಷ್ಟ್ರೀಯ ಬೀಜ ನಿಗಮ, ನವದೆಹಲಿ

ಉತ್ತರ: B

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts