ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)
1. ಕೆಳಗಿನವುಗಳಲ್ಲಿ ಯಾವ ದೇಶವು ಜಿ7 (G7) ಸದಸ್ಯ ರಾಷ್ಟ್ರವಲ್ಲ?
(A) ಕೆನಡಾ
(B) ಇಟಲಿ
(C) ರಷ್ಯಾ
(D) ಜಪಾನ್
ಉತ್ತರ: C
2. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಕಾಲಾಪಾನಿ, ಲಿಂಪಿಯಾಧುರ ಮತ್ತು ಲಿಪುಲೇಖ್ ಪ್ರದೇಶಗಳು ಭಾರತ ಮತ್ತು ನೇಪಾಳದ ನಡುವಿನ ಪ್ರಮುಖ ಗಡಿ ವಿವಾದದ ಪ್ರದೇಶಗಳಾಗಿವೆ.
- ಸುಸ್ತಾ ಪ್ರದೇಶವು ಭಾರತ ಮತ್ತು ಭೂತಾನ್ ನಡುವಿನ ವಿವಾದಿತ ಪ್ರದೇಶವಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
(A) 1 ಮಾತ್ರ
(B) 2 ಮಾತ್ರ
(C) 1 ಮತ್ತು 2 ಎರಡೂ
(D) 1 ಅಥವಾ 2 ಯಾವುದೂ ಅಲ್ಲ
ಉತ್ತರ: A
3. ಕೆಳಗಿನವುಗಳಲ್ಲಿ ಯಾವುದು ಗ್ರೇಟ್ ನಿಕೋಬಾರ್ ದ್ವೀಪ ಯೋಜನೆಯ (GNI Project) ಪ್ರಾಥಮಿಕ ಉದ್ದೇಶವನ್ನು ಉತ್ತಮವಾಗಿ ವಿವರಿಸುತ್ತದೆ?
(A) ನಿರ್ಬಂಧಿತ ಮಾನವ ವಸತಿಯೊಂದಿಗೆ (Restricted human habitation) ವಿಶೇಷ ಜೀವವೈವಿಧ್ಯ ಸಂರಕ್ಷಣಾ ಮೀಸಲು ಪ್ರದೇಶವನ್ನು ಸ್ಥಾಪಿಸುವುದು.
(B) ಗ್ರೇಟ್ ನಿಕೋಬಾರ್ ದ್ವೀಪವನ್ನು ಪ್ರಮುಖ ಕಾರ್ಯತಂತ್ರ ಮತ್ತು ಆರ್ಥಿಕ ಕೇಂದ್ರವಾಗಿ ಪರಿವರ್ತಿಸುವುದು.
(C) ಭಾರತದ ಮೊದಲ ಕಡಲಾಚೆಯ ನವೀಕರಿಸಬಹುದಾದ ಇಂಧನ ಪಾರ್ಕ್ ಅನ್ನು ಅಭಿವೃದ್ಧಿಪಡಿಸುವುದು.
(D) ವಾಣಿಜ್ಯ ಚಟುವಟಿಕೆಗಳಿಂದ ಮುಕ್ತವಾದ ಮೀಸಲಾದ ಸಮುದ್ರ ಸಂರಕ್ಷಣಾ ವಲಯವನ್ನು ರಚಿಸುವುದು.
ಉತ್ತರ: B
4. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ (Consider the following statements):
- ಜಂಟಿ ಸಮರಾಭ್ಯಾಸ ವರುಣ (Joint Exercise Varuna) ಭಾರತ ಮತ್ತು ಫ್ರಾನ್ಸ್ನ ಸಶಸ್ತ್ರ ಪಡೆಗಳ ನಡುವೆ ನಡೆಯುತ್ತದೆ.
- ಫ್ರಿಂಜೆಕ್ಸ್-23 (FRINJEX-23) ಭಾರತ ಮತ್ತು ಫ್ರಾನ್ಸ್ ನಡೆಸುವ ದ್ವಿಪಕ್ಷೀಯ ಸಮರಾಭ್ಯಾಸಗಳಲ್ಲಿ ಒಂದಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?
(A) 1 ಮಾತ್ರ
(B) 2 ಮಾತ್ರ
(C) 1 ಮತ್ತು 2 ಎರಡೂ
(D) 1 ಅಥವಾ 2 ಯಾವುದೂ ಅಲ್ಲ
ಉತ್ತರ: C

ನಿಮ್ಮದೊಂದು ಉತ್ತರ