ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ
1. ಅಂತರರಾಷ್ಟ್ರೀಯ ಬೃಹತ್ ಮಾರ್ಜಾಲ ಒಕ್ಕೂಟ (IBCA) ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಭಾರತದ ನೇತೃತ್ವದ, ಒಪ್ಪಂದ-ಆಧಾರಿತ ಅಂತರರಾಷ್ಟ್ರೀಯ ಒಕ್ಕೂಟವಾಗಿದೆ.
- ಇದರ ಪ್ರಧಾನ ಕಛೇರಿಯು ಭಾರತದಲ್ಲಿ ನೆಲೆಗೊಂಡಿದೆ.
- ಬಾಂಗ್ಲಾದೇಶವು ಇದರ 27ನೇ ಸದಸ್ಯ ರಾಷ್ಟ್ರವಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮತ್ತು 2 ಮಾತ್ರ.
B) 2 ಮತ್ತು 3 ಮಾತ್ರ.
C) 1 ಮತ್ತು 3 ಮಾತ್ರ.
D) 1, 2 ಮತ್ತು 3.
ಉತ್ತರ: D
2. ಹಸಿರು ಜಲಜನಕವನ್ನು ಯಾವುದರ ವಿದ್ಯುದ್ವಿಭಜನೆಯಿಂದ (Electrolysis) ಉತ್ಪಾದಿಸಲಾಗುತ್ತದೆ?
A) ಇಂಗಾಲದ ಡೈಆಕ್ಸೈಡ್.
B) ಮೀಥೇನ್
C) ನೀರು
D) ಅಮೋನಿಯಾ
ಉತ್ತರ: C
3. ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು 1 ಜುಲೈ 2015 ರಂದು ಪ್ರಾರಂಭವಾಯಿತು.
- ಇದನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಜಾರಿಗೊಳಿಸುತ್ತದೆ.
- ಭಾರತವನ್ನು ಡಿಜಿಟಲ್ ಸಬಲೀಕರಣಗೊಂಡ ಸಮಾಜ ಮತ್ತು ಜ್ಞಾನ ಆರ್ಥಿಕತೆಯನ್ನಾಗಿ ಪರಿವರ್ತಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
ಉತ್ತರ : D
4. ವಾಣಿಜ್ಯಿಕವಾಗಿ ಮಾಚಾ ಚಹಾವನ್ನು (Matcha tea) ಉತ್ಪಾದಿಸಿದ ಭಾರತದ ಮೊದಲ ರಾಜ್ಯ ಯಾವುದು?
A) ಪಶ್ಚಿಮ ಬಂಗಾಳ
B) ಅಸ್ಸಾಂ
C) ಕೇರಳ
D) ತಮಿಳುನಾಡು
ಉತ್ತರ: B
5. ಭಾರತದಲ್ಲಿನ ಜನಸಂಖ್ಯಾ ಪರಿವರ್ತನೆಯನ್ನು ನಿರ್ಣಯಿಸಲು ರಚಿಸಲಾದ ಉನ್ನತ ಮಟ್ಟದ ಸಮಿತಿಯ ನೇತೃತ್ವವನ್ನು ಯಾರು ವಹಿಸಿದ್ದಾರೆ?
A) ನ್ಯಾಯಮೂರ್ತಿ ಪಿ.ಪಿ. ನವ್ಲೇಕರ್
B) ನ್ಯಾಯಮೂರ್ತಿ ರಂಜನ್ ಗೊಗೊಯ್
C) ನ್ಯಾಯಮೂರ್ತಿ ಎನ್.ವಿ. ರಮಣ
D) ನ್ಯಾಯಮೂರ್ತಿ ಯು.ಯು. ಲಲಿತ್
ಉತ್ತರ : A)
6. 2026 ರ 29 ನೇ ಇ-ಆಡಳಿತದ ಮೇಲಿನ ರಾಷ್ಟ್ರೀಯ ಸಮ್ಮೇಳನವು (NCeG) ಎಲ್ಲಿ ನಡೆಯಿತು?
A) ಭೋಪಾಲ್, ಮಧ್ಯಪ್ರದೇಶ
B) ಗಾಂಧಿನಗರ, ಗುಜರಾತ್
C) ಜೈಪುರ, ರಾಜಸ್ಥಾನ
D) ಹೈದರಾಬಾದ್, ತೆಲಂಗಾಣ
ಉತ್ತರ : C)















ನಿಮ್ಮದೊಂದು ಉತ್ತರ