ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ
1. ಉಮಂಗ್ ಪೋರ್ಟಲ್ [UMANG Portal] ಯಾವ ಕಾರ್ಯಕ್ರಮದ ಅಡಿಯಲ್ಲಿನ ಒಂದು ಪ್ರಮುಖ ಉಪಕ್ರಮವಾಗಿದೆ?
A) ಮೇಕ್ ಇನ್ ಇಂಡಿಯಾ
B) ಸ್ಟಾರ್ಟ್-ಅಪ್ ಇಂಡಿಯಾ
C) ಭಾರತ್ ನೆಟ್
D) ಡಿಜಿಟಲ್ ಇಂಡಿಯಾ ಕಾರ್ಯಕ್ರಮ
ಉತ್ತರ: D) ಡಿಜಿಟಲ್ ಇಂಡಿಯಾ ಕಾರ್ಯಕ್ರಮ
2. ಸ್ಥಿರ ಠೇವಣಿ ಸೌಲಭ್ಯವನ್ನು [Standing Deposit Facility – SDF] ಪರಿಚಯಿಸಲು ಮೊದಲ ಬಾರಿಗೆ ಶಿಫಾರಸು ಮಾಡಿದ ಸಮಿತಿ ಯಾವುದು?
A) ನರಸಿಂಹಂ ಸಮಿತಿ
B) ರಂಗರಾಜನ್ ಸಮಿತಿ
C) ಕೇಳ್ಕರ್ ಸಮಿತಿ
D) ಉರ್ಜಿತ್ ಪಟೇಲ್ ಸಮಿತಿ
ಉತ್ತರ: D) ಉರ್ಜಿತ್ ಪಟೇಲ್ ಸಮಿತಿ
3. ಗಂಧಕದ ಡೈಆಕ್ಸೈಡ್ [SO₂] ಪ್ರಮುಖವಾಗಿ ಎಲ್ಲಿಂದ ಬಿಡುಗಡೆಯಾಗುತ್ತದೆ?
A) ಸೌರ ವಿದ್ಯುತ್ ಸ್ಥಾವರಗಳು
B) ಜಲವಿದ್ಯುತ್ ಯೋಜನೆಗಳು
C) ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳು
D) ಪವನ ವಿದ್ಯುತ್ ಸ್ಥಾವರಗಳು
ಉತ್ತರ: C) ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳು
4. ಜಾಗತಿಕ ವಾಸಯೋಗ್ಯ ಸೂಚ್ಯಂಕವನ್ನು [Global Liveability Index] ವಾರ್ಷಿಕವಾಗಿ ಯಾವ ಸಂಸ್ಥೆ ಪ್ರಕಟಿಸುತ್ತದೆ?
A) ವಿಶ್ವ ಆರ್ಥಿಕ ವೇದಿಕೆ [WEF]
B) ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ [UNDP]
C) ಮರ್ಸರ್ [Mercer]
D) ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ [EIU]
ಉತ್ತರ: D) ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ [EIU]















ನಿಮ್ಮದೊಂದು ಉತ್ತರ