ಅಬ್ರಹಾಂ ಒಪ್ಪಂದಗಳು
ಅಂತರರಾಷ್ಟ್ರೀಯ
ಇದೀಗ ಸುದ್ದಿಯಲ್ಲಿ:
- ಇಸ್ರೇಲ್ನೊಂದಿಗೆ ಸಂಬಂಧವನ್ನು ಸಹಜಗೊಳಿಸುವ ಉದ್ದೇಶದಿಂದ ಅಬ್ರಹಾಂ ಒಪ್ಪಂದಗಳಿಗೆ ಪಾಕಿಸ್ತಾನ ಸೇರ್ಪಡೆಯಾಗುವುದನ್ನು ತಾವು ಬೆಂಬಲಿಸುವುದಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವರು ಹೇಳಿದ್ದಾರೆ.
ಅಬ್ರಹಾಂ ಒಪ್ಪಂದಗಳ ಬಗ್ಗೆ:
-
- ಅಬ್ರಹಾಂ ಒಪ್ಪಂದಗಳು 2020ರಲ್ಲಿ ಇಸ್ರೇಲ್ ಮತ್ತು ಹಲವಾರು ಅರಬ್ ರಾಷ್ಟ್ರಗಳ ನಡುವೆ ಟ್ರಂಪ್ ಆಡಳಿತದ ಅಡಿಯಲ್ಲಿ ಅಮೆರಿಕ (USA) ಮಧ್ಯಸ್ಥಿಕೆಯಲ್ಲಿ ಸಹಿ ಮಾಡಲಾದ ಸಂಬಂಧ ಸಹಜಗೊಳಿಸುವಿಕೆ ಒಪ್ಪಂದಗಳ ಸರಣಿಯನ್ನು ಉಲ್ಲೇಖಿಸುತ್ತವೆ.
- ಪ್ಯಾಲೇಸ್ಟಿನಿಯನ್ ಸಮಸ್ಯೆಯು ಇತ್ಯರ್ಥವಾಗುವವರೆಗೂ ಇಸ್ರೇಲ್ ಅನ್ನು ಗುರುತಿಸಲು ದಶಕಗಳ ಕಾಲ ಹೆಚ್ಚಿನ ಅರಬ್ ರಾಷ್ಟ್ರಗಳು ನಿರಾಕರಿಸಿದ್ದವು.
- ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಪೂರ್ವ ಪರಿಹಾರವಿಲ್ಲದೆ ಇಸ್ರೇಲ್ ಮತ್ತು ಕೆಲವು ಅರಬ್ ರಾಷ್ಟ್ರಗಳ ನಡುವೆ ಮುಕ್ತ ಸಂಬಂಧಗಳನ್ನು ಸ್ಥಾಪಿಸುವ ಮೂಲಕ ಅಬ್ರಹಾಂ ಒಪ್ಪಂದಗಳು ಮಧ್ಯಪ್ರಾಚ್ಯ ರಾಜತಾಂತ್ರಿಕತೆಯಲ್ಲಿ ಪ್ರಮುಖ ಬದಲಾವಣೆಯನ್ನು ತಂದಿವೆ.
- ಅಬ್ರಹಾಂ ಒಪ್ಪಂದಗಳ ಭಾಗವಾಗಿ 2020ರಲ್ಲಿ ಇಸ್ರೇಲ್ನೊಂದಿಗೆ ಸಂಬಂಧವನ್ನು ಸಹಜಗೊಳಿಸಿದ ಮೊದಲ ಕೊಲ್ಲಿ ರಾಷ್ಟ್ರವಾಗಿ UAE ಹೊರಹೊಮ್ಮಿತು.
- ಈ ಒಪ್ಪಂದದಲ್ಲಿರುವ ರಾಷ್ಟ್ರಗಳು: USA, ಇಸ್ರೇಲ್, UAE, ಬಹ್ರೇನ್, ಸುಡಾನ್, ಮೊರಾಕೊ ಮತ್ತು ಕಝಾಕಿಸ್ತಾನ್.
ಮುಖ್ಯ ಉದ್ದೇಶಗಳು:
- ರಾಯಭಾರ ಕಚೇರಿಗಳು, ನೇರ ವಿಮಾನಯಾನಗಳು, ವ್ಯಾಪಾರ, ಪ್ರವಾಸೋದ್ಯಮ ಮತ್ತು ತಂತ್ರಜ್ಞಾನ ಸಹಕಾರದಂತಹ ರಾಜತಾಂತ್ರಿಕ ಸಂಬಂಧಗಳ ಸಹಜಗೊಳಿಸುವಿಕೆ.
- ಭದ್ರತೆ ಮತ್ತು ಗುಪ್ತಚರ ಸಹಕಾರ, ವಿಶೇಷವಾಗಿ ಇರಾನ್ನ ಪ್ರಾದೇಶಿಕ ಪ್ರಭಾವದ ವಿರುದ್ಧ ಕೈಜೋಡಿಸುವುದು.
- ನಾವೀನ್ಯತೆ, ಕೃಷಿ, ರಕ್ಷಣೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಆರ್ಥಿಕ ಸಹಯೋಗ ಏರ್ಪಡಿಸುವುದು.
- ಯಹೂದಿ, ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳಲ್ಲಿ ಪೂಜಿಸಲ್ಪಡುವ ಮೂಲಪುರುಷರಾದ ಅಬ್ರಹಾಂ ಅವರ ಹೆಸರಿನಲ್ಲಿ ಅಂತರ್ಧರ್ಮೀಯ ತಿಳುವಳಿಕೆಯನ್ನು ಉತ್ತೇಜಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.
ಸಾರ್ಥಕ್-PDS ಯೋಜನೆ (SARTHAK-PDS)
ಆರ್ಥಿಕತೆ
ಇದೀಗ ಸುದ್ದಿಯಲ್ಲಿ:
- ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು (CCEA), “ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸ್ವಯಂಚಾಲನೆಯೊಂದಿಗೆ ಪಡಿತರ ಸಾಗಣೆ ಮತ್ತು ನಿರ್ವಹಣೆ-ಆದಾಯದ ಸಹಾಯ ಯೋಜನೆ” (Scheme for Assistance in Ration Transport and Handling-Income with Automation in PDS – SARTHAK-PDS) ಎಂಬ ಹೊಸ ಸಮಗ್ರ ಕಾರ್ಯಕ್ರಮದ ಅಡಿಯಲ್ಲಿ ಎರಡು ಪ್ರಮುಖ ಆಹಾರ ವಿತರಣಾ ಯೋಜನೆಗಳ ಮುಂದುವರಿಕೆ ಮತ್ತು ಸಂಯೋಜನೆಯನ್ನು ಅನುಮೋದಿಸಿದೆ.
ಸಾರ್ಥಕ್-PDS ಯೋಜನೆಯ ಬಗ್ಗೆ:
- ಈ ಯೋಜನೆಯು ಪ್ರಸ್ತುತ ಇರುವ ಎರಡು ಉಪಕ್ರಮಗಳನ್ನು ಸಂಯೋಜಿಸುತ್ತದೆ:
-
- ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (NFSA) ಅಡಿಯಲ್ಲಿ ಆಹಾರ ಧಾನ್ಯಗಳ ಅಂತರ್-ರಾಜ್ಯ ಸಾಗಾಣಿಕೆ ಮತ್ತು ನ್ಯಾಯಬೆಲೆ ಅಂಗಡಿ ವಿತರಕರ ಲಾಭಾಂಶಕ್ಕಾಗಿ ರಾಜ್ಯ ಏಜೆನ್ಸಿಗಳಿಗೆ ನೆರವು ನೀಡುವ ಯೋಜನೆ.
- ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನುಷ್ಠಾನವನ್ನು ಬಲಪಡಿಸುವ ಉದ್ದೇಶದಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಮೂಲಕ ಆಧುನೀಕರಣ ಮತ್ತು ಸುಧಾರಣೆಗಳ ಯೋಜನೆ (SMART PDS).
- ಮಹತ್ವ: PDS ಕಾರ್ಯಾಚರಣೆಗಳನ್ನು ಆಧುನೀಕರಿಸಲು ಮತ್ತು ಅತ್ಯುತ್ತಮವಾಗಿಸಲು ಕೃತಕ ಬುದ್ಧಿಮತ್ತೆ (AI), ಯಂತ್ರ ಕಲಿಕೆ (ML), ನೈಸರ್ಗಿಕ ಭಾಷಾ ಸಂಸ್ಕರಣೆ (Natural Language Processing – NLP) ಮತ್ತು ಬ್ಲಾಕ್ಚೈನ್ನಂತಹ ಸುಧಾರಿತ ತಂತ್ರಜ್ಞಾನಗಳ ಬಳಕೆಯನ್ನು ಈ ಯೋಜನೆಯು ಪ್ರಸ್ತಾಪಿಸುತ್ತದೆ.
‘PDS ವ್ಯವಸ್ಥೆ’ಯ ಬಗ್ಗೆ:
- ಸಾರ್ವಜನಿಕ ವಿತರಣಾ ವ್ಯವಸ್ಥೆಯು (PDS) ಭಾರತದಲ್ಲಿನ ಆಹಾರ ಭದ್ರತಾ ಕಾರ್ಯವಿಧಾನವಾಗಿದ್ದು, ಇದರ ಮೂಲಕ ಅರ್ಹ ಫಲಾನುಭವಿಗಳಿಗೆ ಅಗತ್ಯ ಆಹಾರ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿಗಳ (FPSs) ಮೂಲಕ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ.
- ಈ ವ್ಯವಸ್ಥೆಯು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಪ್ರಮುಖವಾಗಿ ಅಕ್ಕಿ, ಗೋಧಿ ಮತ್ತು ಸಿರಿಧಾನ್ಯಗಳನ್ನು ವಿತರಿಸುತ್ತದೆ.
- PDS ವ್ಯವಸ್ಥೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಜವಾಬ್ದಾರಿಯಾಗಿದೆ.
- ಕೇಂದ್ರ ಸರ್ಕಾರವು ಭಾರತೀಯ ಆಹಾರ ನಿಗಮದ (FCI) ಮೂಲಕ ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತದೆ, ಶೇಖರಿಸುತ್ತದೆ, ಸಾಗಿಸುತ್ತದೆ ಮತ್ತು ಹಂಚಿಕೆ ಮಾಡುತ್ತದೆ.
ಭಾರತ- US ನಿರ್ಣಾಯಕ ಖನಿಜಗಳ ಚೌಕಟ್ಟು
ಭೂಗೋಳ
ಇದೀಗ ಸುದ್ದಿಯಲ್ಲಿ:
- ನಿರ್ಣಾಯಕ ಖನಿಜಗಳು ಮತ್ತು ವಿರಳ ಭೂ ಧಾತುಗಳ (REEs) ಪೂರೈಕೆ, ಗಣಿಗಾರಿಕೆ, ಸಂಸ್ಕರಣೆ, ಮರುಬಳಕೆ ಮತ್ತು ನಿರ್ವಹಣೆಯಲ್ಲಿ ಸಹಕಾರವನ್ನು ಬಲಪಡಿಸಲು ಭಾರತ ಮತ್ತು ಅಮೆರಿಕ (USA) ಪ್ರಮುಖ ಚೌಕಟ್ಟಿನ ಒಪ್ಪಂದಕ್ಕೆ ಸಹಿ ಹಾಕಿವೆ.
- ಜಾಗತಿಕ ತಂತ್ರಜ್ಞಾನ ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸಿದ ವಿರಳ ಭೂ ಧಾತುಗಳ (REEs) ಮೇಲಿನ ಚೀನಾದ 2025 ರ ರಫ್ತು ನಿಯಂತ್ರಣಗಳ ಬಗ್ಗೆ ಕಳವಳಗಳನ್ನು ಅನುಸರಿಸಿ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ.
ನಿರ್ಣಾಯಕ ಖನಿಜಗಳ ಪಟ್ಟಿ:
- ಭಾರತಕ್ಕೆ ಒಟ್ಟು 30 ಖನಿಜಗಳು ಅತ್ಯಂತ ನಿರ್ಣಾಯಕವೆಂದು ಕಂಡುಬಂದಿದೆ: ಆಂಟಿಮನಿ, ಬೆರಿಲಿಯಮ್, ಬಿಸ್ಮತ್, ಕೋಬಾಲ್ಟ್, ತಾಮ್ರ, ಗ್ಯಾಲಿಯಂ, ಜರ್ಮೇನಿಯಮ್, ಗ್ರ್ಯಾಫೈಟ್, ಹಾಫ್ನಿಯಮ್, ಇಂಡಿಯಮ್, ಲಿಥಿಯಂ, ಮಾಲಿಬ್ಡಿನಮ್, ನಿಯೋಬಿಯಂ, ನಿಕ್ಕಲ್, ಪಿಜಿಇ (PGE), ರಂಜಕ, ಪೊಟ್ಯಾಶ್, ವಿರಳ ಭೂ ಧಾತುಗಳು (REEs), ರೇನಿಯಮ್, ಸಿಲಿಕಾನ್, ಸ್ಟ್ರಾಂಟಿಯಂ, ಟ್ಯಾಂಟಲಮ್, ಟೆಲ್ಯುರಿಯಮ್, ತವರ, ಟೈಟಾನಿಯಂ, ಟಂಗ್ಸ್ಟನ್, ವೆನಾಡಿಯಮ್, ಜಿರ್ಕೋನಿಯಮ್, ಸೆಲೆನಿಯಮ್ ಮತ್ತು ಕ್ಯಾಡ್ಮಿಯಮ್.
ಖನಿಜ ಶೋಧನೆಗಾಗಿ ಭಾರತದ ನೀತಿಯ ಉತ್ತೇಜನ:
- ದೇಶೀಯ ನಿಕ್ಷೇಪಗಳು: ಜಮ್ಮು ಮತ್ತು ಕಾಶ್ಮೀರ (J&K) ಹಾಗೂ ರಾಜಸ್ಥಾನದಲ್ಲಿ ಲಿಥಿಯಂ ಮತ್ತು ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ವಿರಳ ಭೂ ಧಾತುಗಳೊಂದಿಗೆ (REEs) ಭಾರತವು ಅಪಾರವಾದ ಬಳಕೆಯಾಗದ ಖನಿಜ ಸಾಮರ್ಥ್ಯವನ್ನು ಹೊಂದಿದೆ.
- ನೀತಿ ಉಪಕ್ರಮಗಳು: ರಾಷ್ಟ್ರೀಯ ಖನಿಜ ಶೋಧನಾ ನೀತಿ (NMEP), 2016 ಮತ್ತು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 2021 ಖಾಸಗಿ ಭಾಗವಹಿಸುವಿಕೆ ಮತ್ತು ಸುಧಾರಿತ ಸಮೀಕ್ಷೆಗಳ ಮೂಲಕ ಅನ್ವೇಷಣೆಯನ್ನು ವೇಗಗೊಳಿಸಿವೆ.
- ಪೂರೈಕೆ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕಾಬಿಲ್ (ಖನಿಜ್ ಬಿದೇಶ್ ಇಂಡಿಯಾ ಲಿಮಿಟೆಡ್- KABIL) ಸಾಗರೋತ್ತರ ಖನಿಜ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ.
- ಈ ಮಿಷನ್ ಖನಿಜಗಳ ಅನ್ವೇಷಣೆಯಿಂದ ಹಿಡಿದು ಅವುಗಳ ಮರುಪಡೆಯುವಿಕೆಯವರೆಗಿನ ಸಂಪೂರ್ಣ ಮೌಲ್ಯ ಸರಪಳಿಯನ್ನು ಬಲಪಡಿಸುವ ಪ್ರಮುಖ ಗುರಿಯನ್ನು ಹೊಂದಿದೆ
ವಿರಳ ಭೂ ಧಾತುಗಳು (REEs)
- REE ಗಳು ಸ್ಕ್ಯಾಂಡಿಯಂ ಮತ್ತು ಯಟ್ರಿಯಂ ಜೊತೆಗೆ 15 ಲ್ಯಾಂಥನೈಡ್ಗಳನ್ನು ಒಳಗೊಂಡಿರುವ 17 ಲೋಹೀಯ ಅಂಶಗಳ ಗುಂಪಾಗಿದೆ.
- ಗ್ರಾಹಕ ಎಲೆಕ್ಟ್ರಾನಿಕ್ಸ್, ರಕ್ಷಣಾ ವ್ಯವಸ್ಥೆಗಳು, ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳು, ಎಲೆಕ್ಟ್ರಿಕ್ ವಾಹನಗಳು (EVs), ಸಂವಹನ ವ್ಯವಸ್ಥೆಗಳು ಮತ್ತು ಪರಮಾಣು ಶಕ್ತಿಯಲ್ಲಿ ಇವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ.
- ಭಾರತವು ವಿಶ್ವದ ಮೂರನೇ ಅತಿದೊಡ್ಡ ವಿರಳ ಭೂ ಧಾತುಗಳ ನಿಕ್ಷೇಪಗಳನ್ನು ಹೊಂದಿದ್ದು, ಇದು ಮುಖ್ಯವಾಗಿ ಮೊನಾಜೈಟ್ ಖನಿಜಗಳಲ್ಲಿ ಕಂಡುಬರುತ್ತದೆ.
‘ಪ್ಯಾಕ್ಸ್ ಸಿಲಿಕಾ’
- ಪ್ರಾರಂಭ: ಡಿಸೆಂಬರ್ 2025.
- ಇದು ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ಗ್ರೀಸ್, ಇಸ್ರೇಲ್, ಜಪಾನ್, ಕತಾರ್, ರಿಪಬ್ಲಿಕ್ ಆಫ್ ಕೊರಿಯಾ, ಸಿಂಗಾಪುರ್, UAE, UK ಮತ್ತು ಇದೀಗ ಭಾರತವನ್ನು ಒಳಗೊಂಡಿರುವ ಒಕ್ಕೂಟವಾಗಿದೆ.
- ಉದ್ದೇಶ: ಇದು ನಿರ್ಣಾಯಕ ಖನಿಜಗಳಿಂದ ಸುರಕ್ಷಿತ, ಸಮೃದ್ಧ ಮತ್ತು ನಾವೀನ್ಯತೆ-ಚಾಲಿತ ಸಿಲಿಕಾನ್ ಪೂರೈಕೆ ಸರಪಳಿಯನ್ನು ನಿರ್ಮಿಸಲು US ನೇತೃತ್ವದ ಕಾರ್ಯತಂತ್ರದ ಉಪಕ್ರಮವಾಗಿದೆ.
- ಲ್ಯಾಟಿನ್ ಪದ ‘ಪ್ಯಾಕ್ಸ್‘ (ಶಾಂತಿ) ಮತ್ತು ‘ಸಿಲಿಕಾ’ (ಅರೆವಾಹಕಗಳಲ್ಲಿನ ಪ್ರಮುಖ ಸಂಯುಕ್ತ) ದಿಂದ ‘ಪ್ಯಾಕ್ಸ್ ಸಿಲಿಕಾ’ ಎಂಬ ಪದವನ್ನು ಪಡೆಯಲಾಗಿದೆ.
- ಮಹತ್ವ: ಸ್ಥಿತಿಸ್ಥಾಪಕ, ಪಾರದರ್ಶಕ ಮತ್ತು ಸಹಕಾರಿ ಪೂರೈಕೆ ಸರಪಳಿಗಳ ಮೂಲಕ ತಾಂತ್ರಿಕ ಶಾಂತಿ ಮತ್ತು ಸಮೃದ್ಧಿಯ ಅನ್ವೇಷಣೆಯನ್ನು ಇದು ಸಂಕೇತಿಸುತ್ತದೆ.










ನಿಮ್ಮದೊಂದು ಉತ್ತರ