ಮಂಗಳ ಗ್ರಹದಲ್ಲಿ ಪ್ರಾಚೀನ ಜೀವಜಾಲದ ಕುರುಹುಗಳ ಪತ್ತೆ : NASA ರೋವರ್
ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿ:
- ಸೈನ್ಸ್ ಅಡ್ವಾನ್ಸಸ್ (Science Advances) ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದರಲ್ಲಿ, ಅಂತರರಾಷ್ಟ್ರೀಯ ಸಂಶೋಧಕರ ತಂಡವು ಮಂಗಳ ಗ್ರಹದಲ್ಲಿ ಸಾವಯವ ವಸ್ತುಗಳನ್ನು ಪತ್ತೆಹಚ್ಚಿರುವುದಾಗಿ ವರದಿ ಮಾಡಿದೆ.
ಮಂಗಳ ಗ್ರಹದ ಬಗ್ಗೆ:
- ಇದು ಸೌರವ್ಯೂಹದಲ್ಲಿ ಸೂರ್ಯನಿಂದ ಇರುವ ನಾಲ್ಕನೇ ಗ್ರಹವಾಗಿದೆ.
- ಇದು ಸೌರವ್ಯೂಹದ ಎರಡನೇ ಅತಿ ಸಣ್ಣ ಗ್ರಹವಾಗಿದೆ.
- ಮಂಗಳ ಗ್ರಹವು ಗಾತ್ರದಲ್ಲಿ ಭೂಮಿಯ ಅರ್ಧದಷ್ಟಿದೆ.
- ಭ್ರಮಣಾವಧಿ (Rotation period) – ಇದರ ಭ್ರಮಣಾವಧಿಯು 24.6 ಗಂಟೆಗಳಾಗಿದ್ದು, ಇದು ಭೂಮಿಯ ಭ್ರಮಣಾವಧಿಗೆ (23.9 ಗಂಟೆಗಳು) ಬಹುತೇಕ ಸಮಾನವಾಗಿದೆ.
- ಕೆಂಪು ಗ್ರಹ – ಮಂಗಳ ಗ್ರಹವು ಕೆಂಪಾಗಿ ಕಾಣಲು ಮುಖ್ಯ ಕಾರಣವೆಂದರೆ ಅಲ್ಲಿನ ಶಿಲೆಗಳಲ್ಲಿರುವ ಕಬ್ಬಿಣದ ಉತ್ಕರ್ಷಣ (Oxidation) ಅಥವಾ ತುಕ್ಕು ಹಿಡಿಯುವಿಕೆ ಮತ್ತು ಮಂಗಳ ಗ್ರಹದ ಧೂಳು ಆಗಿದ್ದು, ಈ ಕಾರಣದಿಂದಾಗಿ ಇದನ್ನು ‘ಕೆಂಪು ಗ್ರಹ’ ಎಂದು ಕರೆಯಲಾಗುತ್ತದೆ.
- ಮಂಗಳ ಗ್ರಹದ ನೈಸರ್ಗಿಕ ಉಪಗ್ರಹಗಳು (Moons of Mars) – ಫೋಬೋಸ್ ಮತ್ತು ಡೀಮೋಸ್ ಮಂಗಳ ಗ್ರಹದ ಎರಡು ನೈಸರ್ಗಿಕ ಉಪಗ್ರಹಗಳಾಗಿವೆ.
ಮಾರ್ಸ್ ಆರ್ಬಿಟರ್ ಮಿಷನ್ (MOM) ಅಥವಾ ಮಂಗಳಯಾನ
- ಉಡಾವಣಾ ಸ್ಥಳ – ಆಂಧ್ರಪ್ರದೇಶದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ.
- ಉಡಾವಣೆ ಮಾಡಿದ ಸಂಸ್ಥೆ – ಇದನ್ನು ನವೆಂಬರ್ 2013 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಉಡಾವಣೆ ಮಾಡಿದೆ.
- ಉಡಾವಣಾ ವಾಹನ – ಉಡಾವಣೆಗಾಗಿ PSLV C-25 ರಾಕೆಟ್ ಅನ್ನು ಬಳಸಲಾಗಿದೆ.
- ಉದ್ದೇಶ – ಮಂಗಳ ಗ್ರಹದ ಮೇಲ್ಮೈ ಲಕ್ಷಣಗಳು ಮತ್ತು ಖನಿಜಗಳ ಸಂಯೋಜನೆಯನ್ನು ಅಧ್ಯಯನ ಮಾಡುವುದು ಹಾಗೂ ಮಂಗಳ ಗ್ರಹದಲ್ಲಿ ಜೀವಜಾಲದ ಅಸ್ತಿತ್ವವನ್ನು ಸೂಚಿಸುವ ಮೀಥೇನ್ ಅನಿಲಕ್ಕಾಗಿ ಅದರ ವಾತಾವರಣವನ್ನು ವಿಶ್ಲೇಷಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಪ್ರಮುಖ ಮಂಗಳ ಮಿಷನ್ ಗಳು:
- ನಾಸಾದ (NASA) ಮ್ಯಾರಿನರ್ 4 ಮತ್ತು ವೈಕಿಂಗ್ 1 ಕಾರ್ಯಾಚರಣೆಗಳು ಪ್ರಮುಖ ಮಂಗಳ ಯಾನಗಳಾಗಿವೆ.
- ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಮಾರ್ಸ್ ಎಕ್ಸ್‌ಪ್ರೆಸ್ ಕಾರ್ಯಾಚರಣೆಯು ಸಹ ಮಂಗಳ ಗ್ರಹದ ಪ್ರಮುಖ ಯಾನವಾಗಿದೆ.
- ಎಮಿರೇಟ್ಸ್ ಮಾರ್ಸ್ ಮಿಷನ್‌ನ ಹೋಪ್ ಪ್ರೋಬ್ ಮತ್ತು ಭವಿಷ್ಯದ ಮಾರ್ಸ್ ಸ್ಯಾಂಪಲ್ ರಿಟರ್ನ್ ಮಿಷನ್‌ಗಾಗಿ ಮಾದರಿಗಳನ್ನು ಸಂಗ್ರಹಿಸುತ್ತಿರುವ ಪ್ರಸ್ತುತ ಪ್ರಮುಖ ರೋವರ್ ಆಗಿರುವ ಪರ್ಸಿವೆರೆನ್ಸ್ ಅತ್ಯಂತ ಪ್ರಮುಖ ಕಾರ್ಯಾಚರಣೆಗಳಾಗಿವೆ.















ನಿಮ್ಮದೊಂದು ಉತ್ತರ