ಮನಾಸ್ಬಲ್ ಸರೋವರ
ಪರಿಸರ

ಇದೀಗ ಸುದ್ದಿಯಲ್ಲಿ:
- ವಲಸೆ ಹಕ್ಕಿಗಳ ಆಗಮನದಿಂದ ಮನಾಸ್ಬಲ್ ಸರೋವರವು ಪರಿಸರ ಚೇತರಿಕೆಯ ಹಾದಿಯಲ್ಲಿದೆ ಎಂದು ಗುರುತಿಸಲಾಗಿದೆ.
ಮನಾಸ್ಬಲ್ ಸರೋವರದ ಬಗ್ಗೆ:
- ಸ್ಥಳ: ಇದು ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯಲ್ಲಿದೆ.
- ಇದು ಭಾರತದ ಅತ್ಯಂತ ಆಳವಾದ ನೈಸರ್ಗಿಕ ಸಿಹಿನೀರಿನ ಸರೋವರವಾಗಿದ್ದು, 13 ಮೀಟರ್ (43 ಅಡಿ) ಆಳವನ್ನು ಹೊಂದಿದೆ.
- ವಿಶೇಷತೆ: ಇದನ್ನು “ಎಲ್ಲಾ ಕಾಶ್ಮೀರ ಸರೋವರಗಳ ಅತ್ಯುನ್ನತ ರತ್ನ (Supreme Gem of all Kashmir Lakes)” ಎಂದು ಕರೆಯಲಾಗುತ್ತದೆ.
- ಅನನ್ಯತೆ: ಇದು ತನ್ನ ಶುದ್ಧ ನೀರು, ಬೇಸಿಗೆಯ ವ್ಯಾಪಕವಾಗಿ ಅರಳುವ ಕಮಲದ ಹೂವುಗಳು ಮತ್ತು ಪಕ್ಷಿ ವೀಕ್ಷಣೆಯ ಅವಕಾಶಗಳಿಗೆ ಪ್ರಸಿದ್ಧವಾಗಿದೆ.
ಲಕ್ಷಣಗಳು:
- ಸ್ಥಳ ಮತ್ತು ಎತ್ತರ: ಇದು 1,585 ರಿಂದ 1,600 ಮೀಟರ್ ಎತ್ತರದಲ್ಲಿರುವ ಝೇಲಂ ಕಣಿವೆಯಲ್ಲಿ ನೆಲೆಗೊಂಡಿದೆ.
- ಇದೊಂದು ಬೆಚ್ಚಗಿನ ಮೋನೊಮಿಕ್ಟಿಕ್ ಸರೋವರ (ವರ್ಷಕ್ಕೊಮ್ಮೆ ಮಾತ್ರ ಸಂಪೂರ್ಣವಾಗಿ ಪರಿಚಲನೆಯಾಗುತ್ತದೆ) ಆಗಿದೆ.
- ಸ್ಥಳ ಸ್ವರೂಪ: ಈ ಸರೋವರವು ಪೂರ್ವದಲ್ಲಿ ಬಾಲದರ್ ಪರ್ವತಗಳು, ಉತ್ತರದಲ್ಲಿ ಕರೇವಾ ಪ್ರಸ್ಥಭೂಮಿ ಮತ್ತು ದಕ್ಷಿಣದಲ್ಲಿ ಅಹತುಂಗ್ ಬೆಟ್ಟಗಳಿಂದ ಆವೃತವಾಗಿದೆ.
- ಜೀವವೈವಿಧ್ಯತೆ: ಇದು ಕಾಶ್ಮೀರದಲ್ಲಿ ವಲಸೆ ಬರುವ ಜಲಚರ ಪಕ್ಷಿಗಳಿಗೆ ಒಂದು ಪ್ರಮುಖ ನೈಸರ್ಗಿಕ ಆಶ್ರಯತಾಣವಾಗಿದ್ದು, ಮಲ್ಲಾರ್ಡ್ಗಳು, ಬಿಳಿ ತಲೆಯ ಬಾತುಕೋಳಿಗಳು ಮತ್ತು ಗೋಲ್ಡನ್ ಈಗಲ್ಗಳನ್ನು (Golden Eagles) ಒಳಗೊಂಡಂತೆ ಹಲವಾರುವ ಪ್ರಭೇದಗಳನ್ನು ಬೆಂಬಲಿಸುತ್ತದೆ.
- ಆರ್ಥಿಕ ಮೌಲ್ಯ: ಇದು ಮೀನುಗಾರಿಕೆ ಮತ್ತು ಸ್ಥಳೀಯವಾಗಿ ‘ನಾದ್ರು’ ಎಂದು ಕರೆಯಲ್ಪಡುವ ಕಮಲದ ಬೇರುಗಳ ಕೊಯ್ಲಿನ ಮೂಲಕ ಸ್ಥಳೀಯರ ಜೀವನೋಪಾಯವನ್ನು ಬೆಂಬಲಿಸುತ್ತದೆ.
ವಿಶ್ವ ಕೃತಕ ಬುದ್ಧಿಮತ್ತೆ ಸಹಕಾರ ಸಂಸ್ಥೆ (WAICO)
ಅಂತರಾಷ್ಟ್ರೀಯ

ಇದೀಗ ಸುದ್ದಿಯಲ್ಲಿ:
- ಚೀನಾ 2026 ರ ವಿಶ್ವ ಕೃತಕ ಬುದ್ಧಿಮತ್ತೆ ಸಮ್ಮೇಳನದಲ್ಲಿ, ಶಾಂಘೈನಲ್ಲಿ ವಿಶ್ವ ಕೃತಕ ಬುದ್ಧಿಮತ್ತೆ ಸಹಕಾರ ಸಂಸ್ಥೆಯನ್ನು (WAICO) ಅಧಿಕೃತವಾಗಿ ಪ್ರಾರಂಭಿಸಿದೆ.
ವೈಕೊ (WAICO) ಸಂಸ್ಥೆಯ ಬಗ್ಗೆ:
- ಇದು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ಕೃತಕ ಬುದ್ಧಿಮತ್ತೆ (AI) ಸಹಕಾರ, ಸಾಮರ್ಥ್ಯ ವೃದ್ಧಿ ಮತ್ತು ಹಂಚಿಕೆಯ ಆಡಳಿತ ಮಾನದಂಡಗಳಿಗಾಗಿ ಸ್ಥಾಪಿಸಲಾದ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ.
- ಪ್ರಧಾನ ಕಚೇರಿ: ಇದರ ಪ್ರಧಾನ ಕಚೇರಿ ಶಾಂಘೈನಲ್ಲಿದೆ.
- ಅನನ್ಯತೆ: ಜಾಗತಿಕ ದಕ್ಷಿಣದ (Global South) ರಾಷ್ಟ್ರಗಳಿಗಾಗಿಯೇ ನೇರವಾಗಿ ಗುರಿಯಿಟ್ಟುಕೊಂಡು ಸ್ಥಾಪಿಸಲಾದ ಈ ರೀತಿಯ ಮೊದಲ ಸ್ಥಾಯಿ ಸಂಸ್ಥೆ ಇದಾಗಿದೆ.
- ಸದಸ್ಯರು: ಇದು 29 ರಾಷ್ಟ್ರಗಳನ್ನು ಸದಸ್ಯರನ್ನಾಗಿ ಹೊಂದಿದೆ.
ಪ್ರಾಮುಖ್ಯತೆ:
- ಚೀನಾ 5,000 ಕೃತಕ ಬುದ್ಧಿಮತ್ತೆ (AI) ತರಬೇತಿ ಅವಕಾಶಗಳನ್ನು ಒದಗಿಸಲಿದೆ ಮತ್ತು ASEAN, ಆಫ್ರಿಕನ್ ಒಕ್ಕೂಟ, BRICS, ಶಾಂಘೈ ಸಹಕಾರ ಸಂಸ್ಥೆ (SCO) ಹಾಗೂ ಅರಬ್ ರಾಷ್ಟ್ರಗಳ ಒಕ್ಕೂಟದೊಂದಿಗೆ ಜಂಟಿ AI ಸಹಕಾರ ಕೇಂದ್ರಗಳನ್ನು ಸ್ಥಾಪಿಸಲಿದೆ.
- ಇದು ಮುಕ್ತ ಮೂಲದ(Open-source) ಕೃತಕ ಬುದ್ಧಿಮತ್ತೆ ಮಾದರಿಗಳು, ತಂತ್ರಜ್ಞಾನ ಹಂಚಿಕೆ ಮತ್ತು ಸಹಯೋಗದ AI ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.
- ಈ ವೇದಿಕೆಯು ಜಾಗತಿಕ ದಕ್ಷಿಣದೊಂದಿಗೆ ಜಾಗತಿಕ AI ಆಡಳಿತದಲ್ಲಿ ಚೀನಾದ ಪ್ರಭಾವವನ್ನು ಬಲಪಡಿಸುತ್ತದೆ.
ಹೂಡಿಕೆ ಸ್ನೇಹಿ ಸೂಚ್ಯಂಕ (IFI)
ವರದಿ ಮತ್ತು ಸೂಚ್ಯಂಕ
ಇದೀಗ ಸುದ್ದಿಯಲ್ಲಿ:
- ನೀತಿ (NITI) ಆಯೋಗವು “ಹೂಡಿಕೆ ಸ್ನೇಹಿ ಸೂಚ್ಯಂಕ (IFI- Investment Friendliness Index)” ಎಂಬ ವರದಿಯನ್ನು ಬಿಡುಗಡೆ ಮಾಡಿದೆ.
ಹೂಡಿಕೆ ಸ್ನೇಹಿ ಸೂಚ್ಯಂಕ (IFI)ದ ಬಗ್ಗೆ:
- ಉದ್ದೇಶ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೂಡಿಕೆಗಳಿಗೆ ಅನುಕೂಲಕರವಾದ ವಾತಾವರಣವನ್ನು ಎಷ್ಟು ಪರಿಣಾಮಕಾರಿಯಾಗಿ ಸೃಷ್ಟಿಸುತ್ತವೆ, ಸಕ್ರಿಯಗೊಳಿಸುತ್ತವೆ ಮತ್ತು ಉಳಿಸಿಕೊಳ್ಳುತ್ತವೆ ಎಂಬುದನ್ನು ಇದು ಮೌಲ್ಯಮಾಪನ ಮಾಡುತ್ತದೆ.
- ಮಾನದಂಡಗಳು: ಇದು ಪ್ರಮುಖವಾಗಿ ಮೂಲಸೌಕರ್ಯ, ಉದ್ಯಮಸ್ನೇಹಿ ವಾತಾವರಣ, ಸಂಪನ್ಮೂಲಗಳು, ಸರ್ಕಾರಿ ನೀತಿ, ಸರಳ ನಿಯಂತ್ರಣ ವ್ಯವಸ್ಥೆ, ಸಾಂಸ್ಥಿಕ ಪರಿಸರ, ಆರ್ಥಿಕ ಆರೋಗ್ಯ ಮತ್ತು ಪರಿಸರದ ಚೇತರಿಕೆಯನ್ನು ಒಳಗೊಂಡಿದೆ.
- ರಾಜ್ಯಗಳ ವರ್ಗೀಕರಣ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ನಾಲ್ಕು ಕಾರ್ಯಕ್ಷಮತೆಯ ವರ್ಗಗಳಾಗಿ ವಿಂಗಡಿಸಲಾಗಿದೆ:
- ಉನ್ನತ ಸಾಧಕ ರಾಜ್ಯಗಳು (Top Performers – 50 ಕ್ಕಿಂತ ಹೆಚ್ಚಿನ ಅಂಕಗಳು).
- ಮುಂಚೂಣಿಯಲ್ಲಿರುವ ರಾಜ್ಯಗಳು (Frontrunners – 45 ರಿಂದ 50 ಅಂಕಗಳು).
- ಉದಯೋನ್ಮುಖ ಸಾಧಕ ರಾಜ್ಯಗಳು (Emerging Performers – 40 ರಿಂದ 45 ಕ್ಕಿಂತ ಕಡಿಮೆ ಅಂಕಗಳು).
- ಆಕಾಂಕ್ಷಿ ರಾಜ್ಯಗಳು (Aspiring States – 40 ಕ್ಕಿಂತ ಕಡಿಮೆ ಅಂಕಗಳು).
- ದೊಡ್ಡ ರಾಜ್ಯಗಳ ಪೈಕಿ, ಗುಜರಾತ್ ಮೊದಲ ಸ್ಥಾನವನ್ನು ಪಡೆದಿದ್ದರೆ, ಮಹಾರಾಷ್ಟ್ರ ಮತ್ತು ತಮಿಳುನಾಡು ನಂತರದ ಸ್ಥಾನಗಳಲ್ಲಿವೆ. ಇವು ಸಮಗ್ರ ಸೂಚ್ಯಂಕದಲ್ಲೂ ಮೊದಲ ಮೂರು ಸ್ಥಾನ ಪಡೆದ ರಾಜ್ಯಗಳಾಗಿವೆ.
- ಗುಡ್ಡಗಾಡು ಮತ್ತು ಈಶಾನ್ಯ ರಾಜ್ಯಗಳ ವಿಭಾಗದಲ್ಲಿ, ಉತ್ತರಾಖಂಡ ಅತ್ಯುನ್ನತ ಶ್ರೇಣಿಯ ರಾಜ್ಯವಾಗಿ ಹೊರಹೊಮ್ಮಿದೆ, ಅಸ್ಸಾಂ ಮತ್ತು ಹಿಮಾಚಲ ಪ್ರದೇಶ ನಂತರದ ಸ್ಥಾನಗಳನ್ನು ಪಡೆದಿವೆ.
- ನಗರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ, ಗೋವಾ ಅಗ್ರಸ್ಥಾನದಲ್ಲಿದೆ, ದೆಹಲಿ ಮತ್ತು ಚಂಡೀಗಢ ನಂತರದ ಸ್ಥಾನಗಳಲ್ಲಿವೆ.
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ (NCM)
ರಾಜಕೀಯ
ಇದೀಗ ಸುದ್ದಿಯಲ್ಲಿ:
- ಕೇಂದ್ರ ಸರ್ಕಾರವು ಹರ್ಜಿತ್ ಸಿಂಗ್ ಗ್ರೆವಾಲ್ ಅವರನ್ನು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ (NCM) ಅಧ್ಯಕ್ಷರನ್ನಾಗಿ ನೇಮಿಸಿದೆ.
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ (NCM)ದ ಬಗ್ಗೆ:
- ಕೇಂದ್ರ ಸರ್ಕಾರವು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ 1992 ರ ಅಡಿಯಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವನ್ನು (NCM) ಸ್ಥಾಪಿಸಿದೆ.
- ಮೊದಲ ಶಾಸನಬದ್ಧ ರಾಷ್ಟ್ರೀಯ ಆಯೋಗವನ್ನು 1993 ರಲ್ಲಿ ರಚಿಸಲಾಯಿತು.
- ಆರಂಭದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು ಮತ್ತು ಝೋರಾಸ್ಟ್ರಿಯನ್ನರು (ಪಾರ್ಸಿಗಳು) ಸೇರಿದಂತೆ ಐದು ಧಾರ್ಮಿಕ ಸಮುದಾಯಗಳನ್ನು ಕೇಂದ್ರ ಸರ್ಕಾರವು ಅಲ್ಪಸಂಖ್ಯಾತ ಸಮುದಾಯಗಳೆಂದು ಅಧಿಸೂಚಿಸಿತ್ತು.
- 2014 ರಲ್ಲಿ, ಜೈನರನ್ನು ಕೂಡ ಮತ್ತೊಂದು ಅಲ್ಪಸಂಖ್ಯಾತ ಸಮುದಾಯವೆಂದು ಅಧಿಸೂಚಿಸಲಾಯಿತು.
- ಸಂಯೋಜನೆ: ಈ ಆಯೋಗವು ಒಬ್ಬ ಅಧ್ಯಕ್ಷರು, ಒಬ್ಬ ಉಪಾಧ್ಯಕ್ಷರು ಮತ್ತು ಐದು ಜನ ಸದಸ್ಯರನ್ನು ಒಳಗೊಂಡಿದೆ.
- ಉದ್ದೇಶ: ಭಾರತದ ಸಂವಿಧಾನ ಹಾಗೂ ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳು ರೂಪಿಸಿದ ಕಾನೂನುಗಳಲ್ಲಿ ಒದಗಿಸಲಾದ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ರಕ್ಷಿಸಲು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.
ICMR i-DRONE ಉಪಕ್ರಮ
ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿ:
- ಇತ್ತೀಚೆಗೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ICMR) ತನ್ನ ಐ-ಡ್ರೋನ್ ಉಪಕ್ರಮದ ಅಡಿಯಲ್ಲಿ, ದೂರದ ಪ್ರದೇಶಗಳಲ್ಲಿ ಕ್ಷಯರೋಗ (TB) ರೋಗನಿರ್ಣಯದ ಪ್ರವೇಶವನ್ನು ಸುಧಾರಿಸಲು ಡ್ರೋನ್ ಆಧಾರಿತ ಸಾರಿಗೆಯ ಮೂಲಕ ಕಫದ ಮಾದರಿಗಳನ್ನು ಯಶಸ್ವಿಯಾಗಿ ಸಾಗಿಸಿ ಪ್ರದರ್ಶಿಸಿದೆ.
ಐ-ಡ್ರೋನ್ (i-DRONE) ಉಪಕ್ರಮದ ಬಗ್ಗೆ:
- ಪೂರ್ಣ ರೂಪ: ICMR’s Drone Response and Outreach for North East (i-DRONE).
- ಇದನ್ನು 2021 ರಲ್ಲಿ ಪ್ರಾರಂಭಿಸಲಾಯಿತು.
- ಉದ್ದೇಶ: ಇದು ಮಣಿಪುರ ಮತ್ತು ನಾಗಾಲ್ಯಾಂಡ್ನ ದೂರದ ಪ್ರದೇಶಗಳಿಗೆ ಲಸಿಕೆಗಳು ಮತ್ತು ವೈದ್ಯಕೀಯ ಸರಬರಾಜುಗಳನ್ನು ತಲುಪಿಸಲು ಡ್ರೋನ್ಗಳ ಬಳಕೆಯನ್ನು ಮೌಲ್ಯಮಾಪನ ಮಾಡುವ ಉದ್ದೇಶವನ್ನು ಹೊಂದಿದೆ.
- ಐ-ಡ್ರೋನ್ ಯೋಜನೆಯು ಕ್ಷಯರೋಗದ ರೋಗನಿರ್ಣಯಕ್ಕಾಗಿ ಕಫದ ಮಾದರಿಗಳನ್ನು ಸಾಗಿಸಲು, ತೆಲಂಗಾಣದಲ್ಲಿ 60 ಉಪ-ಕೇಂದ್ರಗಳು, 11 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಾಲ್ಕು TB ಘಟಕಗಳನ್ನು ಸಂಪರ್ಕಿಸುವ ಹಬ್ ಮತ್ತು ಸ್ಪೋಕ್ (hub and spoke) ಡ್ರೋನ್ ನೆಟ್ವರ್ಕ್ ಅನ್ನು ಅಭಿವೃದ್ಧಿಪಡಿಸಿದೆ.
- ಫಲಿತಾಂಶಗಳು: ರೋಗನಿರ್ಣಯಕ್ಕೆ ಬೇಕಾಗುವ ಸರಾಸರಿ ಸಮಯವನ್ನು 15 ದಿನಗಳಿಂದ 5 ದಿನಗಳಿಗೆ ಇಳಿಸಲಾಗಿದೆ.
- ರೋಗಿಗಳ ಜೇಬಿನಿಂದ ಭರಿಸಬೇಕಾದ ಸರಾಸರಿ ವೆಚ್ಚವು (OOPE) ₹9,451 ರಿಂದ ಸುಮಾರು ₹91 ಕ್ಕೆ ಇಳಿದಿದೆ ಹಾಗೂ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಪ್ರಯಾಣದ ವೆಚ್ಚ ಶೂನ್ಯವಾಗಿದೆ.
ASW ಶಾಲೋ ವಾಟರ್ ಕ್ರಾಫ್ಟ್ ‘ಮಾಲ್ವಾನ್’ (ASW Shallow Water Craft Malvan)
ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿ:
- ಭಾರತೀಯ ನೌಕಾದಳವು ತನ್ನ ಎರಡನೇ ‘ಮಾಹೆ-ವರ್ಗದ’ ಜಲಾಂತರ್ಗಾಮಿ ವಿರೋಧಿ ಕದನ ನೌಕೆಯಾದ (ASW-SWC) ‘ಮಾಲ್ವಾನ್’ (Malvan) ಅನ್ನು ಸೇವೆಗೆ ನಿಯೋಜಿಸಲು ಸಜ್ಜಾಗಿದೆ.
ASW ಶಾಲೋ ವಾಟರ್ ಕ್ರಾಫ್ಟ್ ‘ಮಾಲ್ವಾನ್ ಬಗ್ಗೆ:
- ಈ ಸಮರನೌಕೆಯನ್ನು ಕೊಚ್ಚಿಯ ‘ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್’ (CSL) ನಿರ್ಮಿಸಿದೆ.
- ಮಾಲ್ವಾನ್ ಯುದ್ಧನೌಕೆಯು ಶೇಕಡಾ 80 ಕ್ಕಿಂತ ಹೆಚ್ಚು ದೇಶಿಯ ಸಾಮಗ್ರಿಗಳನ್ನು ಬಳಸಿ ನಿರ್ಮಿಸಲಾಗಿದೆ.
- ಇದು ‘ಆತ್ಮನಿರ್ಭರ್ ಭಾರತ್’ ಉಪಕ್ರಮದ ಅಡಿಯಲ್ಲಿ ಯುದ್ಧನೌಕೆಯ ವಿನ್ಯಾಸ, ನಿರ್ಮಾಣ ಮತ್ತು ತಂತ್ರಜ್ಞಾನ ಏಕೀಕರಣದಲ್ಲಿ ಭಾರತದ ಬೆಳೆಯುತ್ತಿರುವ ಸ್ವಾವಲಂಬನೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
- ಕಾರ್ಯ: ಕರಾವಳಿ ಮತ್ತು ಆಳವಿಲ್ಲದ ನೀರಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸುವುದು ಹಾಗೂ ನೌಕಾದಳದ ಜಲಾಂತರ್ಗಾಮಿ ವಿರೋಧಿ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವುದು ಇದರ ಪ್ರಮುಖ ಕಾರ್ಯವಾಗಿದೆ.
- ಪ್ರಸ್ತುತ ಹಳೆಯದಾಗುತ್ತಿರುವ ‘ಅಭಯ್-ವರ್ಗದ’ ಯುದ್ಧನೌಕೆ ಬದಲಿಗೆ ಈ ಹೊಸ ‘ಮಾಹೆ- ವರ್ಗದ’ ASW-SWC ನೌಕೆಗಳನ್ನು ನೌಕಾಪಡೆಗೆ ಸೇರ್ಪಡೆಗೊಳಿಸಲಾಗುತ್ತಿದೆ.












ನಿಮ್ಮದೊಂದು ಉತ್ತರ