ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)
1. ಜಂಟಿ ಸಮಗ್ರ ಕ್ರಿಯಾ ಯೋಜನೆ (Joint Comprehensive Plan of Action – JCPOA) ಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- JCPOA ಅಡಿಯಲ್ಲಿ, ಯುರೇನಿಯಂ ಸಮೃದ್ಧೀಕರಣ / ಪುಷ್ಟೀಕರಣವನ್ನು (Uranium enrichment) ಮಿತಿಗೊಳಿಸಲು ಮತ್ತು ವರ್ಧಿತ ತಪಾಸಣೆಗಳನ್ನು ಸ್ವೀಕರಿಸಲು ಇರಾನ್ ಒಪ್ಪಿಕೊಂಡಿತು.
- ಈ ಒಪ್ಪಂದಕ್ಕೆ ಇರಾನ್ ಮತ್ತು P5+1 ದೇಶಗಳ ನಡುವೆ ಸಹಿ ಹಾಕಲಾಯಿತು.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
(A) 1 ಮಾತ್ರ
(B) 2 ಮಾತ್ರ
(C) 1 ಮತ್ತು 2 ಎರಡೂ
(D) 1 ಅಥವಾ 2 ಯಾವುದೂ ಅಲ್ಲ
ಉತ್ತರ: C
2. ಪ್ಯಾರಿಸ್ ಒಪ್ಪಂದವನ್ನು ಈ ಕೆಳಗಿನ ಯಾವ ಅವಧಿಯಲ್ಲಿ ಅಳವಡಿಸಿಕೊಳ್ಳಲಾಯಿತು?
(A) ಕಾಪ್-15 (COP-15), ಕೋಪನ್ಹೇಗನ್
(B) ಕಾಪ್-21 (COP-21), ಪ್ಯಾರಿಸ್
(C) ಕಾಪ್-26 (COP-26), ಗ್ಲ್ಯಾಸ್ಗೋ
(D) ಕಾಪ್-28 (COP-28), ದುಬೈ
ಉತ್ತರ: B
3. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಭಾರತವು ತನ್ನ ಬಹುತೇಕ ಸಂಪೂರ್ಣ ‘ಬಿಟುಮೆನ್’ ಅಗತ್ಯಗಳನ್ನು ಕೆನಡಾದಿಂದ ಆಮದು ಮಾಡಿಕೊಳ್ಳುತ್ತದೆ.
- ಭಾರತದ 99% ಕ್ಕಿಂತ ಹೆಚ್ಚಿನ ಬಿಟುಮೆನ್ ಆಮದು ಇರಾಕ್, UAE, ಇರಾನ್, ಓಮಾನ್ ಮತ್ತು ಬಹ್ರೇನ್ನಿಂದ ಮಾಡಿಕೊಳ್ಳಲಾಗುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?
(A) 1 ಮಾತ್ರ
(B) 2 ಮಾತ್ರ
(C) 1 ಮತ್ತು 2 ಎರಡೂ
(D) 1 ಅಥವಾ 2 ಯಾವುದೂ ಅಲ್ಲ
ಉತ್ತರ: B
4. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಕ್ರಿಪ್ಟೋಕರೆನ್ಸಿ ಎನ್ನುವುದು ಆರ್ಥಿಕ ವಹಿವಾಟುಗಳಿಗೆ ಬಳಸುವ ವರ್ಚುವಲ್ ಕರೆನ್ಸಿಯಾಗಿದೆ.
- ಕ್ರಿಪ್ಟೋಕರೆನ್ಸಿಯು ವಿವಿಧ ವಹಿವಾಟುಗಳಿಗಾಗಿ ಬ್ಲಾಕ್ಚೈನ್ ತಂತ್ರಜ್ಞಾನವನ್ನು ಬಳಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿ?
(A) 1 ಮಾತ್ರ
(B) 2 ಮಾತ್ರ
(C) 1 ಮತ್ತು 2 ಎರಡೂ
(D) 1 ಅಥವಾ 2 ಯಾವುದೂ ಅಲ್ಲ
ಉತ್ತರ: C










ನಿಮ್ಮದೊಂದು ಉತ್ತರ