ವರ್ಗ: State Current Affairs Kannada

  • ರಾಜ್ಯ ಸರ್ಕಾರವು ತಾವರೇಕೆರೆ ಪ್ರದೇಶದಲ್ಲಿ ದತ್ತಾoಶ ಕೇಂದ್ರ ಪಾರ್ಕ್ (ಡೇಟಾ ಸೆಂಟರ್ ಪಾರ್ಕ್) ನಿರ್ಮಾಣಕ್ಕೆ ಸಜ್ಜಾಗುತ್ತಿದೆ

    ರಾಜ್ಯ ಸರ್ಕಾರವು ತಾವರೇಕೆರೆ ಪ್ರದೇಶದಲ್ಲಿ ದತ್ತಾoಶ ಕೇಂದ್ರ ಪಾರ್ಕ್ (ಡೇಟಾ ಸೆಂಟರ್ ಪಾರ್ಕ್) ನಿರ್ಮಾಣಕ್ಕೆ ಸಜ್ಜಾಗುತ್ತಿದೆ

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕ ಸರ್ಕಾರವು ಹೊಸಕೋಟೆ ಮತ್ತು ಕೋಲಾರದ ಗಡಿಯಲ್ಲಿರುವ ಕೈಗಾರಿಕಾ ಪ್ರದೇಶವಾದ ತಾವರೆಕೆರೆಯಲ್ಲಿ ಮೀಸಲಾದ ಡೇಟಾ ಸೆಂಟರ್ ಪಾರ್ಕ್ ನಿರ್ಮಾಣಕ್ಕೆ ಸಜ್ಜಾಗುತ್ತಿದೆ.

    ತಾವರೆಕೆರೆಯಲ್ಲಿ ಮೀಸಲಾದ ದತ್ತಾoಶ ಕೇಂದ್ರ (ಡೇಟಾ ಸೆಂಟರ್) ಪಾರ್ಕ್ ನ ಬಗ್ಗೆ:

    • ಗುರಿ – ರಾಜ್ಯದಲ್ಲಿ ಬೃಹತ್ ದತ್ತಾoಶ ಕೇಂದ್ರ ಮೂಲಸೌಕರ್ಯದ ಅಗತ್ಯವನ್ನು ಪೂರೈಸುವುದು.

    ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಶೀಘ್ರದಲ್ಲೇ ತಾವರೆಕೆರೆಯಲ್ಲಿ (ಬೆಂಗಳೂರಿನ ಕೇಂದ್ರ ವ್ಯಾಪಾರ ಪ್ರದೇಶದಿಂದ ಸುಮಾರು 46 ಕಿ.ಮೀ ದೂರದಲ್ಲಿರುವ) 1,000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ.

  • ತುಮಕೂರು ಜಿಲ್ಲೆಯಲ್ಲಿ ಗಣಿಗಾರಿಕೆ ಯೋಜನೆ

    ತುಮಕೂರು ಜಿಲ್ಲೆಯಲ್ಲಿ ಗಣಿಗಾರಿಕೆ ಯೋಜನೆ

    ಇದೀಗ ಸುದ್ದಿಯಲ್ಲಿದೆ:

    • ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEF&CC) ಬೆಂಗಳೂರು ಪ್ರಾದೇಶಿಕ ಕಚೇರಿಯು, ತುಮಕೂರು ಜಿಲ್ಲೆಯ ಒಂದು ಗಣಿಗಾರಿಕಾ ಯೋಜನೆಗಾಗಿ 48.2 ಹೆಕ್ಟೇರ್ ಅರಣ್ಯ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸುವ ಪ್ರಸ್ತಾವನೆಯನ್ನು ನಿರಾಕರಿಸಿದೆ.
    • ಈ ಪರಿಶೀಲನೆ ಸಾರಂಗಪಾಣಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಗಣಿಯ ಯೋಜನೆಗೆ ಅನುಮೋದನೆ ಪಡೆಯುವ ಉದ್ದೇಶದ ಪ್ರಸ್ತಾವನೆಗೆ ಸಂಬಂಧಿಸಿದುದಾಗಿತ್ತು.
    • ಈ ಗಣಿಗಾರಿಕೆ ಯೋಜನೆ ತುಮಕೂರು ಜಿಲ್ಲೆಯ ಚಿಕ್ಕನಾಯಿಕನಹಳ್ಳಿ ತಾಲ್ಲೂಕಿನ ತೀರ್ಥರಾಮಪುರ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶದಲ್ಲಿದೆ. ಇದು ಗೊಳ್ಳರಹಳ್ಳಿ, ಹೊಸಹಳ್ಳಿ, ಕೊಡಿಹಳ್ಳಿ, ಟೋನಲಪುರ ಹಾಗೂ ಲಕ್ಷ್ಮೇಣಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ.
    • ಈ ನಿರಾಕರಣೆಯ ಕಾರಣವೆಂದರೆ, ಬುಕ್ಕಪಟ್ಟಣ ವನ್ಯಜೀವಿ ಅಭಯಾರಣ್ಯದ ಘೋಷಿತ ಪರಿಸರ – ಸೂಕ್ಷ್ಮವಲಯದಲ್ಲಿ ವಾಣಿಜ್ಯ ಗಣಿಗಾರಿಕೆ ನಿಷೇಧಿತ ಚಟುವಟಿಕೆಯಾಗಿದೆ.

    ಬುಕ್ಕಪಟ್ಟಣ ಭಾರತೀಯ ಕಿರುಕಾಡು ಜಿಂಕೆ (ಚಿಂಕಾರ) ವನ್ಯಜೀವಿ ಅಭಯಾರಣ್ಯದ ಬಗ್ಗೆ:

    • ಸ್ಥಳ – ಇದು ಕರ್ನಾಟಕದ ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನಲ್ಲಿದೆ.
    • ಇದು 2019 ರಲ್ಲಿ ಅಧಿಸೂಚನೆಯಾದ, ಸಂರಕ್ಷಿತ ಪ್ರದೇಶವಾಗಿದೆ.
    • ಉದ್ದೇಶ – ಭಾರತದ ಗಸೆಲ್ (ಚಿಂಕಾರ) ಮತ್ತು ಇತರ ಒಣ ಪ್ರದೇಶದ ಜೀವವೈವಿಧ್ಯತೆಯನ್ನು ಸಂರಕ್ಷಿಸುವುದು.

    ಸಸ್ಯ ಮತ್ತು ಪ್ರಾಣಿಸಂಕುಲ:

    • ಈ ಅಭಯಾರಣ್ಯವು ಅರಣ್ಯ ಆವರಿತ ಸಾವನ್ನಾ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಇಲ್ಲಿ ವ್ಯಾಪಕವಾದ ಹುಲ್ಲುಗಾವಲು ಪ್ರದೇಶಗಳು ಮತ್ತು ವಿರಳವಾಗಿ ಹರಡಿರುವ ಸ್ಥಳೀಯ ಮರಗಳ ಪ್ರಭೇದಗಳು ಕಂಡುಬರುತ್ತವೆ.
    • ಪ್ರಾಣಿವರ್ಗ: ಈ ಅಭಯಾರಣ್ಯವು ಪ್ರಾಥಮಿಕವಾಗಿ ಭಾರತೀಯ ಕಿರುಕಾಡು ಜಿಂಕೆಗಳಿಗೆ ಹೆಸರುವಾಸಿಯಾಗಿದೆ, ಮತ್ತು ಇಲ್ಲಿ ಕೃಷ್ಣಮೃಗಗಳು, ನಾಲ್ಕು ಕೊಂಬಿನ ಹುಲ್ಲೆಗಳು, ಚಿರತೆಗಳು, ಕರಡಿಗಳು, ಕತ್ತೆಕಿರುಬಗಳು ಮತ್ತು ಕಾಡುಹಂದಿಗಳು ಸಹ ಇವೆ . 160 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ಸಹ ದಾಖಲಿಸಲಾಗಿದೆ.

    ಸಸ್ಯ ವರ್ಗ: ಇಲ್ಲಿನ ಪ್ರಮುಖ ಮರಗಳ ಪ್ರಭೇದಗಳಲ್ಲಿ ಹಾರ್ಡ್ವಿಕಿಯಾ ಬಿನಾಟಾ (ಅಂಜನ್), ಫಿಲಾಂಥಸ್ ಎಂಬ್ಲಿಕಾ (ಆವಳೆ/ಆಮ್ಲಾ) ಮತ್ತು ಟಮರಿಂಡಸ್ ಇಂಡಿಕಾ (ಹುಣಸೆ) ಸೇರಿವೆ.

  • ಬೆಂಗಳೂರಿಗೆ ಆಧುನಿಕ ಗಣನ ಅಭಿವೃದ್ಧಿ ಕೇಂದ್ರದಿಂದ (C-DAC) 35-ಪೆಟಾಫ್ಲಾಪ್ ಸಾಮರ್ಥ್ಯದ ಸೂಪರ್‌ಕಂಪ್ಯೂಟರ್ ದೊರೆಯಲಿದೆ

    ಬೆಂಗಳೂರಿಗೆ ಆಧುನಿಕ ಗಣನ ಅಭಿವೃದ್ಧಿ ಕೇಂದ್ರದಿಂದ (C-DAC) 35-ಪೆಟಾಫ್ಲಾಪ್ ಸಾಮರ್ಥ್ಯದ ಸೂಪರ್‌ಕಂಪ್ಯೂಟರ್ ದೊರೆಯಲಿದೆ

    ಇದೀಗ ಸುದ್ದಿಯಲ್ಲಿದೆ:

    • ಬೆಂಗಳೂರಿಗೆ ಶೀಘ್ರದಲ್ಲೇ 35-ಪೆಟಾಫ್ಲಾಪ್ ಸಾಮರ್ಥ್ಯದ ಸೂಪರ್ ಕಂಪ್ಯೂಟರ್ ದೊರೆಯಲಿದೆ, ಇದು ಹೆಚ್ಚಿನ ಸಾಮರ್ಥ್ಯದ ಕಂಪ್ಯೂಟಿಂಗ್ ಯಂತ್ರವಾಗಿದ್ದು, ಇದನ್ನು ಪ್ರಸ್ತುತ ಆಧುನಿಕ ಗಣನ ಅಭಿವೃದ್ಧಿ ಕೇಂದ್ರ (C-DAC) ನಿರ್ಮಿಸುತ್ತಿದೆ.
    • ಪೆಟಾಫ್ಲಾಪ್ ಎನ್ನುವುದು ಕಂಪ್ಯೂಟರ್‌ನ ಪ್ರಕ್ರಿಯಾ ವೇಗವನ್ನು ಅಳೆಯುವ ಘಟಕವಾಗಿದ್ದು, ಅದು ಪ್ರತಿ ಸೆಕೆಂಡಿಗೆ ಒಂದು ಕ್ವಾಡ್ರಿಲಿಯನ್ (10¹⁵) ಫ್ಲೋಟಿಂಗ್-ಪಾಯಿಂಟ್ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ.

    ರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ ಗುರಿ (NSM) ಯ ಬಗ್ಗೆ:

    • ಇದನ್ನು 2015 ರಲ್ಲಿ ಪ್ರಾರಂಭಿಸಲಾಯಿತು.
    •  ಉದ್ದೇಶ – ಭಾರತದ ಸೂಪರ್ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಭಾರತ ಸರ್ಕಾರದ ಧ್ಯೇಯವಾಗಿದೆ.

    ಪ್ರಮುಖ ಲಕ್ಷಣಗಳು:

    • ಈ ಗುರಿಯು ಭಾರತದಲ್ಲಿ 73 ಸೂಪರ್‌ಕಂಪ್ಯೂಟರ್‌ಗಳನ್ನು ವಿನ್ಯಾಸಗೊಳಿಸುವುದು ಮತ್ತು ತಯಾರಿಸುವುದನ್ನು ಒಳಗೊಂಡಿದೆ.
    • ಈ ಸೂಪರ್‌ಕಂಪ್ಯೂಟರ್‌ಗಳ ಸಮೂಹಗಳು ಭಾರತದಾದ್ಯಂತ ವಿವಿಧ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿಗೆ ಸಂಪರ್ಕಗೊಳ್ಳುತ್ತವೆ.
    • ಈ  ಜಾಲoದ್ರವನ್ನು ರಾಷ್ಟ್ರೀಯ ಜ್ಞಾನ ಜಾಲಕ್ಕೆ (NKN) ಸಂಪರ್ಕಿಸಲಾಗುತ್ತದೆ.

    ಅನುಷ್ಠಾನಗೊಳಿಸುವ ಸಂಸ್ಥೆಗಳು:

    • ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
    • ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ (DeitY)
    • ಆಧುನಿಕ ಗಣನ ಅಭಿವೃದ್ಧಿ ಕೇಂದ್ರದಿಂದ (C-DAC) 
    • ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು.

    ಸೂಪರ್‌ಕಂಪ್ಯೂಟರ್‌ಗಳ ನವಯುಗದ ಅನ್ವಯಿಕೆಗಳು:

    • ಹವಾಮಾನ ಮುನ್ಸೂಚನೆ
    • ನೈಸರ್ಗಿಕ ವಿಕೋಪದ ಮುನ್ಸೂಚನೆಗಳು
    • ಔಷಧ ಸಂಶೋಧನೆ
    • ಬಾಹ್ಯಾಕಾಶ ಅನ್ವಯಿಕೆಗಳು
    • ವಾಯುಗತಿಶಾಸ್ತ್ರ ಸಂಶೋಧನೆ
    • 3D ಪರಮಾಣು ಪರೀಕ್ಷಾ ಅನುಕರಣೆಗಳು 

    ಸೂಪರ್‌ಕಂಪ್ಯೂಟರ್‌ಗಳ ಬಗ್ಗೆ ಸಂಗತಿಗಳು:

    • ಭಾರತದ ಮೊದಲ ಸೂಪರ್‌ಕಂಪ್ಯೂಟರ್ – PARAM 8000, ಪುಣೆಯ ಆಧುನಿಕ ಗಣನ ಅಭಿವೃದ್ಧಿ ಕೇಂದ್ರ (C-DAC) ದಲ್ಲಿ ಅಭಿವೃದ್ಧಿಪಡಿಸಿ 1991 ರಲ್ಲಿ ಪ್ರಾರಂಭಿಸಲಾಯಿತು.
    • “ರುದ್ರ” ಭಾರತದಲ್ಲಿ ಸಂಪೂರ್ಣ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಮೊದಲ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (HPC) ಸರ್ವರ್ ಆಗಿದ್ದು, ಇದು ಜಾಗತಿಕ ಮಟ್ಟದ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಶ್ರೇಣಿಯ ಸರ್ವರ್‌ಗಳ ಸಮಾನ ಮಟ್ಟದ ಸಾಮರ್ಥ್ಯವನ್ನು ಹೊಂದಿದೆ.
    • ಭಾರತದ ಅತ್ಯಂತ ವೇಗದ ಸೂಪರ್ ಕಂಪ್ಯೂಟರ್ – AIRAWAT, ಇದು ದೇಶದ ಅತಿದೊಡ್ಡ ಮತ್ತು ವೇಗದ AI ಸೂಪರ್ ಕಂಪ್ಯೂಟಿಂಗ್ ವ್ಯವಸ್ಥೆಯಾಗಿದೆ.ಇದು 13,170 ಟೆರಾಫ್ಲಾಪ್‌ಗಳ ವೇಗವನ್ನು ಹೊಂದಿದೆ ಮತ್ತು 2023 ರಲ್ಲಿ ಟಾಪ್ 500 ಪಟ್ಟಿಯಲ್ಲಿ ಜಾಗತಿಕವಾಗಿ 75 ನೇ ಸ್ಥಾನದಲ್ಲಿತ್ತು.
  • ರಫ್ತು: ‘ಸೇವೆಗಳಲ್ಲಿ ಕರ್ನಾಟಕವೇ ಪ್ರಥಮ’

    ರಫ್ತು: ‘ಸೇವೆಗಳಲ್ಲಿ ಕರ್ನಾಟಕವೇ ಪ್ರಥಮ’

    ಇದೀಗ ಸುದ್ದಿಯಲ್ಲಿದೆ:

      • ಕರ್ನಾಟಕವು ಸೇವೆಗಳ ರಫ್ತಿನಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಸರಕುಗಳ ರಫ್ತಿನಲ್ಲಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ.
    • 2024–25ರಲ್ಲಿ, ಭಾರತದ ಒಟ್ಟು ಸೇವಾ ರಫ್ತಿನ $387 ಬಿಲಿಯನ್‌ನಲ್ಲಿ $158 ಬಿಲಿಯನ್ ಸೇವೆಗಳನ್ನು ರಫ್ತು ಮಾಡುವ ಮೂಲಕ ಕರ್ನಾಟಕವು ದೇಶದ ಸೇವಾ ರಫ್ತಿನ 41% ರಷ್ಟ ಪಾಲನ್ನು ಹೊಂದಿದೆ.

    ಪ್ರಮುಖ ಸಂಶೋಧನೆಗಳು:

    • ಸೇವೆಗಳ ರಫ್ತುದಾರರಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಿವೆ.

    ಆದಾಗ್ಯೂ, ಸರಕುಗಳ ರಫ್ತಿನಲ್ಲಿ ಕರ್ನಾಟಕವು ಗುಜರಾತ್, ಮಹಾರಾಷ್ಟ್ರ ಮತ್ತು ತಮಿಳುನಾಡನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.

  • ನಿಮ್ಹಾನ್ಸ್ ನಿಂದ ಮಾನಸಿಕ ಆರೋಗ್ಯ ಸಂತೆ 4.0 ಆತಿಥ್ಯ

    ನಿಮ್ಹಾನ್ಸ್ ನಿಂದ ಮಾನಸಿಕ ಆರೋಗ್ಯ ಸಂತೆ 4.0 ಆತಿಥ್ಯ

    ಇದೀಗ ಸುದ್ದಿಯಲ್ಲಿದೆ:

    • ನಿಮ್ಹಾನ್ಸ್ ತನ್ನ ಪ್ರಮುಖ ಸಾರ್ವಜನಿಕ ಜಾಗೃತಿ ಉಪಕ್ರಮವಾದ ಮಾನಸಿಕ ಆರೋಗ್ಯ ಸಂತೆಯ ನಾಲ್ಕನೇ ಆವೃತ್ತಿಯನ್ನು ಆಯೋಜಿಸಲಿದೆ. 

    ಮಾನಸಿಕ ಆರೋಗ್ಯ ಸಂತೆ 4.0 ಬಗ್ಗೆ:

    • ಉದ್ದೇಶ:- ಇದು ಮಾನಸಿಕ ಆರೋಗ್ಯ ಸಂಸ್ಥೆಗಳು, ತಜ್ಞರು, ಆರೈಕೆದಾರರು ಹಾಗೂ ಸಾರ್ವಜನಿಕರನ್ನು ಒಟ್ಟುಗೂಡಿಸಿ, ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದು ಮತ್ತು ಆತ್ಮಹತ್ಯೆ ತಡೆಗಟ್ಟುವಿಕೆಗಾಗಿ ಸಂಯುಕ್ತ ಪ್ರಯತ್ನವನ್ನು ಕೈಗೊಳ್ಳುವ ಉದ್ದೇಶ ಹೊಂದಿದೆ.
    • ಆಯೋಜಿಸಿದವರು: – ಮಾನಸಿಕ ಆರೋಗ್ಯ ಶಿಕ್ಷಣ ಇಲಾಖೆ ಮತ್ತು ನಿಮ್ಹಾನ್ಸ್‌ನ ಹಲವಾರು ವಿಭಾಗಗಳ ಸಹಯೋಗದೊಂದಿಗೆ.
    • ಈ ಕಾರ್ಯಕ್ರಮವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಾಯಕಲ್ಪ್ ಯೋಜನೆಯ ಸ್ವಚ್ಛತಾ ಕ್ರಿಯಾ ಯೋಜನೆ 2025–26 ರ ಅಡಿಯಲ್ಲಿ ಬೆಂಬಲಿಸುತ್ತದೆ.
    • ಧೇಯವಾಕ್ಯ:- ‘ಸಮುದಾಯ ಒಟ್ಟಾಗಿ ಮಾನಸಿಕ ಆರೋಗ್ಯವನ್ನು ಬೆಂಬಲಿಸುವುದು’ ಎಂಬ ಈ ವಿಷಯವಸ್ತು, 2025ರ ಅಕ್ಟೋಬರ್ 10ರಂದು ಆಚರಿಸಲ್ಪಡುವ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಜಾಗತಿಕ ಆಚರಣೆಯೊಂದಿಗೆ ಹೊಂದಾಣಿಕೆಯಲ್ಲಿದೆ.
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು, 2024

    ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು, 2024

    ಇದೀಗ ಸುದ್ದಿಯಲ್ಲಿದೆ:

    • 2024ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಳು.

    ಪ್ರಶಸ್ತಿ ಪುರಸ್ಕೃತರು –

    1. ಶೂದ್ರ ಶ್ರೀನಿವಾಸ್
    2. ಪ್ರತಿಭಾ ನಂದಕುಮಾರ್
    3. ಎಂ. ಬಸವಣ್ಣ
    4. ಡಿ.ಬಿ. ನಾಯಕ್
    5. ವಿಶ್ವನಾಥ ಕಾರ್ನಾಡ್

    ‘ಸಾಹಿತ್ಯ ಶ್ರೀ’ ಪ್ರಶಸ್ತಿ – 10 ಬರಹಗಾರರಿಗೆ ‘ಸಾಹಿತ್ಯ ಶ್ರೀ’ ಪ್ರಶಸ್ತಿ ನೀಡಲಾಗುತ್ತಿದೆ.

    1. ಕೆ.ವೈ. ನಾರಣಸ್ವಾಮಿ
    2. ಬಿ.ಎಂ. ಪುಟ್ಟಯ್ಯ
    3. ಪದ್ಮಾಲಯ ನಾಗರಾಜ್
    4. ಬಿ ಯು ಸುಮಾ
    5. ಮಮತಾ ಸಾಗರ
    6. ಸಬಿತಾ ಬನ್ನಾಡಿ
    7. ಅಬ್ದುಲ್ ಹೈ ತೋರಣಗಲ್
    8. ಗುರುಲಿಂಗಪ್ಪ ದಾಬಳೆ
    9. ಎಚ್.ಎಸ್. ಅನುಪಮಾ
    10. ಅಮರೇಶ ಯಾತಗಲ್

    ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ಬಗ್ಗೆ:

    • ಸ್ಥಾಪನೆಯಾದದ್ದು – 1983
    • ಇದು ಕನ್ನಡದ ಅತ್ಯಂತ ಪ್ರತಿಷ್ಠಿತ ಸಾಹಿತ್ಯ ಗೌರವಗಳಲ್ಲಿ ಒಂದಾಗಿದೆ.
    • ಕ್ಷೇತ್ರ – ಕಾವ್ಯ, ಕಾದಂಬರಿ, ವಿಮರ್ಶೆ, ಪ್ರವಾಸ ಕಥನ, ಅನುವಾದ, ಮಕ್ಕಳ ಸಾಹಿತ್ಯ ಮತ್ತು ಇನ್ನೂ ಹಲವಾರು ಕ್ಷೇತ್ರಕ್ಕೇ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
    • ಉದ್ದೇಶ – ಇದು ಕನ್ನಡ ಸಾಹಿತ್ಯಕ್ಕೆ ನೀಡಿದ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ ಉತ್ತೇಜಿಸಲು ಕರ್ನಾಟಕ ಸರ್ಕಾರದಿಂದ ಪ್ರತಿವರ್ಷ ಪ್ರದಾನ ಮಾಡಲಾಗುವ ಗೌರವಾನ್ವಿತ ಸಾಹಿತ್ಯ ಪ್ರಶಸ್ತಿಯಾಗಿದೆ.

    ಪ್ರಶಸ್ತಿಗಳನ್ನು ಹಲವಾರು ವಿಭಾಗಗಳಲ್ಲಿ ನೀಡಲಾಗುತ್ತದೆ:

    • ವಾರ್ಷಿಕ ಗೌರವ ಪ್ರಶಸ್ತಿಗಳು: ಕನ್ನಡ ಸಾಹಿತ್ಯಕ್ಕೆ ನೀಡಿದ ಅಪಾರ ಸೇವೆಗಾಗಿ ಪ್ರತಿ ವರ್ಷ ಐದು ಶ್ರೇಷ್ಠ ಸಾಹಿತಿಗಳನ್ನು ಗೌರವಿಸಲಾಗುತ್ತದೆ.
    • ಪುಸ್ತಕ ಬಹುಮಾನಗಳು : ಕಾವ್ಯ, ಕಾದಂಬರಿ, ಸಣ್ಣ ಕಾದಂಬರಿ, ನಾಟಕ, ವಿಮರ್ಶೆ, ಪ್ರವಾಸ ಕಥನ, ಅನುವಾದ, ಮಕ್ಕಳ ಸಾಹಿತ್ಯ ಮತ್ತು ವಿಜ್ಞಾನ ಬರವಣಿಗೆ ಸೇರಿದಂತೆ ಸುಮಾರು 18 ವಿಭಿನ್ನ ಸಾಹಿತ್ಯ ಪ್ರಕಾರಗಳ ಅತ್ಯುತ್ತಮ ಪುಸ್ತಕಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
    • “ಸಾಹಿತ್ಯಶ್ರೀ” ಪ್ರಶಸ್ತಿಗಳು: ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ ಹಲವಾರು ಬರಹಗಾರರಿಗೆ ನೀಡಲಾಗುತ್ತದೆ .
  • ‘ಇಂದಿರಾ ಆಹಾರ ಕಿಟ್’

    ‘ಇಂದಿರಾ ಆಹಾರ ಕಿಟ್’

    ಇದೀಗ ಸುದ್ದಿಯಲ್ಲಿದೆ:

    • ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯ ಬದಲಿಗೆ ‘ಇಂದಿರಾ ಆಹಾರ ಕಿಟ್’
    • ಬಡತನ ರೇಖೆಗಿಂತ ಕೆಳಗಿರುವ (BPL) ಸುಮಾರು 4.48 ಕೋಟಿ ಜನರಿಗೆ ಇದು ಪ್ರಯೋಜನವನ್ನು ನೀಡುತ್ತದೆ ಮತ್ತು ಇದರಲ್ಲಿ ತೊಗರಿ ಬೇಳೆ, ಎಣ್ಣೆ, ಸಕ್ಕರೆ ಮತ್ತು ಉಪ್ಪು ಸೇರಿವೆ.

    ‘ಇಂದಿರಾ ಆಹಾರ ಕಿಟ್’ ನ ಬಗ್ಗೆ:

    • ಉದ್ದೇಶ:- ಈ ಯೋಜನೆಯು ಉತ್ತಮ ಪೋಷಣೆ, ಪಾರದರ್ಶಕತೆ ಮತ್ತು ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
    • ತೊಗರಿ ಬೇಳೆ, ಹೆಸರು ಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆ,ಸೇರಿದಂತೆ ಇಂದಿರಾ ಆಹಾರ ಕಿಟ್ ಪೌಷ್ಟಿಕಾಂಶದ ವಸ್ತುಗಳನ್ನು ಒಳಗೊಂಡಿದೆ. 
    • ವಿತರಣೆ:- ಇದು ಕುಟುಂಬದ ಗಾತ್ರವನ್ನು ಆಧರಿಸಿ 
    1. ಒಬ್ಬರಿಂದ- ಇಬ್ಬರು ಸದಸ್ಯರು ಇರುವ ಕುಟುಂಬಗಳಿಗೆ ಅರ್ಧ ಕೆಜಿ, 
    2. ಮೂರರಿಂದ- ನಾಲ್ಕು ಜನ ಸದಸ್ಯರು ಇರುವ ಕುಟುಂಬಗಳಿಗೆ 1 ಕೆಜಿ, 
    3. ಐದು ಅಥವಾ ಅದಕ್ಕಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬಗಳಿಗೆ 1.5 ಕೆಜಿ.
    • ಫಲಾನುಭವಿಗಳು: ಈ ಯೋಜನೆಯು ಸುಮಾರು 1.26 ಕೋಟಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳನ್ನು ಒಳಗೊಳ್ಳುತ್ತದೆ, ಇದು ಸುಮಾರು 4.48 ಕೋಟಿ ಫಲಾನುಭವಿಗಳ ಮೇಲೆ ಪರಿಣಾಮ ಬೀರುತ್ತದೆ.
    • ಪ್ರಯೋಜನಗಳು: ಹಿಂದಿನ ಯೋಜನೆಯಡಿಯಲ್ಲಿ ಅಕ್ಕಿಯ ದುರುಪಯೋಗ, ಕಳ್ಳಸಾಗಣೆ ಮತ್ತು ಅಕ್ರಮ ಮಾರ್ಗ ಬದಲಾವಣೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
    • ಅಕ್ಕಿಯ ಬದಲು ಈ ಕಿಟ್ ಅನ್ನು ಜಾರಿಗೆ ತರುವ ಮೂಲಕ ಸರ್ಕಾರವು ವಾರ್ಷಿಕವಾಗಿ ಸುಮಾರು 300 ಕೋಟಿ ರೂಪಾಯಿಗಳನ್ನು ಉಳಿಸುವ ನಿರೀಕ್ಷೆಯಿದೆ.

    ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಬಿಪಿಎಲ್ ಪಡಿತರ ಚೀಟಿಗಳನ್ನು ಬಳಸಿಕೊಂಡು ನ್ಯಾಯ ಬೆಲೆ ಅಂಗಡಿಗಳ ಮೂಲಕ ಕಿಟ್ ವಿತರಿಸಲಾಗುತ್ತದೆ.

  • ಡಾ. ಕಾಳಯ್ಯ ಕೃಷ್ಣಮೂರ್ತಿ ರಾಷ್ಟ್ರೀಯ ಪ್ರಶಸ್ತಿ, 2024

    ಡಾ. ಕಾಳಯ್ಯ ಕೃಷ್ಣಮೂರ್ತಿ ರಾಷ್ಟ್ರೀಯ ಪ್ರಶಸ್ತಿ, 2024

    ಇದೀಗ ಸುದ್ದಿಯಲ್ಲಿದೆ:

    • ಡ್ರ್ಯಾಗನ್ ಹಣ್ಣಿನ ಕೃಷಿಯನ್ನು ಜನಪ್ರಿಯಗೊಳಿಸಿದ ಮತ್ತು ಸಿದ್ದು ಹಲಸಿನ ಹಣ್ಣಿನ ತಳಿಯನ್ನು ಗುರುತಿಸಿದ ಕೀರ್ತಿಗೆ ಪಾತ್ರರಾದ ತೋಟಗಾರಿಕಾ ವಿಜ್ಞಾನಿ ಜಿ. ಕರುಣಾಕರನ್ ಅವರಿಗೆ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಯುಎಎಸ್-ಬಿ) 2024 ರ ಡಾ. ಕಾಳಯ್ಯ ಕೃಷ್ಣಮೂರ್ತಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
  • ರಾಜ್ಯ ಸರ್ಕಾರವು ಶೀಘ್ರದಲ್ಲೇ ಮೂವರು ಮಾಹಿತಿ ಆಯುಕ್ತರನ್ನು ನೇಮಿಸಲಿದೆ

    ರಾಜ್ಯ ಸರ್ಕಾರವು ಶೀಘ್ರದಲ್ಲೇ ಮೂವರು ಮಾಹಿತಿ ಆಯುಕ್ತರನ್ನು ನೇಮಿಸಲಿದೆ

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕ ಮಾಹಿತಿ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಮೂರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿದೆ.
    1. ಮಾಜಿ ಐಎಎಸ್ ಅಧಿಕಾರಿ ರಿಚರ್ಡ್ ವಿನ್ಸೆಂಟ್ ಡಿ’ಸೋಜಾ
    • ಪತ್ರಕರ್ತ ವೆಂಕಟ್ ಸಿಂಗ್
    • ಮಾಜಿ ಪತ್ರಕರ್ತ ಮಹೇಶ ವಾಳ್ವೇಕರ

    ಕರ್ನಾಟಕ ಮಾಹಿತಿ ಆಯೋಗದ ಬಗ್ಗೆ:

    • ಅಡಿಯಲ್ಲಿ ಸ್ಥಾಪಿಸಲಾಗಿದೆ – ಇದು ಮಾಹಿತಿ ಹಕ್ಕು (RTI) ಕಾಯ್ದೆ, 2005 ರ ಅಡಿಯಲ್ಲಿ ಸ್ಥಾಪಿಸಲಾದ ಸ್ವಾಯತ್ತ ಶಾಸನಬದ್ಧ ಸಂಸ್ಥೆಯಾಗಿದೆ.
    • ಈ ಆಯೋಗದಲ್ಲಿ ಒಬ್ಬ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಹಾಗೂ ಗರಿಷ್ಠ ಹತ್ತು ರಾಜ್ಯ ಮಾಹಿತಿ ಆಯುಕ್ತರು ಇರುತ್ತಾರೆ. ಇವರನ್ನು ರಾಜ್ಯದ ರಾಜ್ಯಪಾಲರು ನೇಮಿಸುತ್ತಾರೆ.
    • ಉದ್ದೇಶ:- ಕರ್ನಾಟಕದ ವಿವಿಧ ಸರ್ಕಾರಿ ಸಂಸ್ಥೆಗಳಿಂದ ಕೇಳಲಾದ ಮಾಹಿತಿಗೆ ಸಂಬಂಧಿಸಿದ ಮೇಲ್ಮನವಿಗಳು ಮತ್ತು ದೂರುಗಳನ್ನು ವಿಚಾರಿಸಲು ಈ ಆಯೋಗವನ್ನು ಸ್ಥಾಪಿಸಲಾಗಿದೆ.

    ಅಧಿಕಾರ ಮತ್ತು ಕಾರ್ಯಗಳು:

    • ಕರ್ನಾಟಕ ಮಾಹಿತಿ ಆಯೋಗದ (KIC) ಅಧಿಕಾರಗಳಲ್ಲಿ ಒಳಗೊಂಡಿರುವುದು, ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ನಿರಾಕರಿಸಲಾದ ಮಾಹಿತಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ತನಿಖೆ ನಡೆಸುವುದು, ಸಾರ್ವಜನಿಕ ಪ್ರಾಧಿಕಾರಗಳಿಗೆ ಅಗತ್ಯ ಮಾಹಿತಿಯನ್ನು ಒದಗಿಸಲು ಆದೇಶಿಸುವುದು, ಹಾಗೂ ಪೌರ ನ್ಯಾಯಾಲಯಕ್ಕೆ ಸಮಾನವಾದ ಅಧಿಕಾರಗಳನ್ನು ಪ್ರಯೋಗಿಸುವುದು.
    • ಮಾಹಿತಿ ಪ್ರವೇಶವನ್ನು ತಡೆಹಿಡಿಯುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳ (PIO’s) ವಿರುದ್ಧ, ಶಿಸ್ತಿನ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡುವ ಅಧಿಕಾರವೂ ಆಯೋಗಕ್ಕಿದೆ.
  • ಆಲಮಟ್ಟಿ ಅಣೆಕಟ್ಟು

    ಆಲಮಟ್ಟಿ ಅಣೆಕಟ್ಟು

    ಇದೀಗ ಸುದ್ದಿಯಲ್ಲಿದೆ:

    • ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಭೂಸ್ವಾಧೀನಕ್ಕೆ ಸರ್ಕಾರವು ಅಧಿಸೂಚಿಸಿದೆ.
    • ಅಣೆಕಟ್ಟಿನ ಎತ್ತರವನ್ನು 519.60 ಮೀಟರ್‌ನಿಂದ 524.25 ಮೀಟರ್‌ಗೆ ಹೆಚ್ಚಿಸಲು ಒಟ್ಟು 1,33,867 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು.

    ಆಲಮಟ್ಟಿ ಅಣೆಕಟ್ಟಿನ ಬಗ್ಗೆ:

    • ಇದನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟು ಎಂತಲು ಕರೆಯುತ್ತಾರೆ.
    • ಸ್ಥಳ:- ಇದು ಕರ್ನಾಟಕದ ವಿಜಯಪುರ ಜಿಲ್ಲೆಯ ಕೃಷ್ಣಾ ನದಿಯ ದಂಡೆಯ ಮೇಲಿರುವ ಪ್ರಮುಖ ಜಲವಿದ್ಯುತ್ ಮತ್ತು ನೀರಾವರಿ ಯೋಜನೆಯಾಗಿದೆ.
    • ಇದು ಜುಲೈ 2005 ರಲ್ಲಿ ಪೂರ್ಣಗೊಂಡಿತು ಮತ್ತು ನೀರಾವರಿ, ಜಲವಿದ್ಯುತ್ ಉತ್ಪಾದನೆ ಮತ್ತು ಪ್ರವಾಹ ನಿಯಂತ್ರಣ ಸೇರಿದಂತೆ ಬಹು ಉದ್ದೇಶಗಳನ್ನು ಪೂರೈಸುತ್ತದೆ.
    • ಈ ಅಣೆಕಟ್ಟು 52.5 ಮೀಟರ್ ಎತ್ತರವಿದ್ದು, ಸುಮಾರು 3.5 ಕಿಲೋಮೀಟರ್ ಉದ್ದವಿದೆ.
    • ಈ ಜಲಾಶಯವು ಸರಾಸರಿ ಸಮುದ್ರ ಮಟ್ಟದಿಂದ 519 ಮೀಟರ್ ಎತ್ತರದಲ್ಲಿ 123.08 ಟಿಎಂಸಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ.
    • ಆಲಮಟ್ಟಿ ಅಣೆಕಟ್ಟು ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಯ ಪ್ರಮುಖ ಜಲಾಶಯವಾಗಿದೆ.
    • ಇದು ಲಂಬವಾದ ಕಪ್ಲಾನ್ ಟರ್ಬೈನ್‌ಗಳನ್ನು ಹೊಂದಿರುವ 290 MW ಜಲವಿದ್ಯುತ್ ಕೇಂದ್ರವನ್ನು ಹೊಂದಿದೆ ; ಐದು 55 MW ಜನರೇಟರ್‌ಗಳು ಮತ್ತು ಒಂದು 15 MW ಜನರೇಟರ್ ಒಳಗೊಂಡಿದೆ.

    ಕರ್ನಾಟಕದ ಪ್ರಮುಖ ಅಣೆಕಟ್ಟುಗಳ ಬಗ್ಗೆ:

    ಅಣೆಕಟ್ಟು/ಜಲಾಶಯ

    ನದಿ

    ಸ್ಥಳ

    ಸಂಗ್ರಹಣಾ ಸಾಮರ್ಥ್ಯ (ಟಿಎಂಸಿ ಅಡಿ)

    ಆಲಮಟ್ಟಿ ಅಣೆಕಟ್ಟು

    ಕೃಷ್ಣ

    ನಿಡಗುಂದಿ ತಾಲ್ಲೂಕು, ಬಿಜಾಪುರ ಜಿಲ್ಲೆ

    123.25

    ಬಸವ ಸಾಗರ ಅಣೆಕಟ್ಟು

    ಕೃಷ್ಣ

    ನಾರಾಯಣಪುರ, ಯಾದಗಿರಿ ಜಿಲ್ಲೆ

    37.965

    ರಾಜಾ ಲಖಮಗೌಡ ಅಣೆಕಟ್ಟು

    ಘಟಪ್ರಭಾ

    ಹಿಡಕಲ್, ಬೆಳಗಾವಿ ಜಿಲ್ಲೆ

    51.16

    ರೇಣುಕಾ ಸಾಗರ ಅಣೆಕಟ್ಟು

    ಮಲಪ್ರಭಾ

    ನವಿಲುತೀರ್ಥ, ಬೆಳಗಾವಿ ಜಿಲ್ಲೆ

    37.73

    ವಾಣಿ ವಿಲಾಸ ಸಾಗರ

    ವೇದಾವತಿ

    ಮಾರಕಣಿವೆ, ಚಿತ್ರದುರ್ಗ ಜಿಲ್ಲೆ

    30.442

    ತುಂಗಾ ಮೇಲಿನ ಅಣೆಕಟ್ಟು

    ತುಂಗಾ

    ಗಾಜನೂರು, ಶಿವಮೊಗ್ಗ

    3.24

    ಭದ್ರಾ ಅಣೆಕಟ್ಟು

    ಭದ್ರ

    ಲಕ್ಕವಳ್ಳಿ, ಚಿಕ್ಕಮಗಳೂರು ಜಿಲ್ಲೆ

    71.50

    ತುಂಗಭದ್ರಾ ಅಣೆಕಟ್ಟು

    ತುಂಗಭದ್ರಾ

    ಹೊಸಪೇಟೆ, ವಿಜಯನಗರ ಜಿಲ್ಲೆ

    132.47

    ಹೇಮಾವತಿ ಜಲಾಶಯ

    ಹೇಮಾವತಿ

    ಗೊರೂರು, ಹಾಸನ ಜಿಲ್ಲೆ

    35.76

    ಕಬಿನಿ ಜಲಾಶಯ

    ಕಬಿನಿ

    ಹೆಗ್ಗಡದೇವನಕೋಟೆ, ಮೈಸೂರು

    19.52

    ಹಾರಂಗಿ ಜಲಾಶಯ

    ಹಾರಂಗಿ

    ಹುಡ್ಗೂರು, ಕೊಡಗು ಜಿಲ್ಲೆ

    8.07

    ಕೃಷ್ಣ ರಾಜ ಸಾಗರ

    ಕಾವೇರಿ

    ಮಂಡ್ಯ

    45.05

    ಲಿಂಗನಮಕ್ಕಿ ಅಣೆಕಟ್ಟು

    ಶರಾವತಿ

    ಸಾಗರ, ಶಿವಮೊಗ್ಗ ಜಿಲ್ಲೆ

    156.62

    ಚಕ್ರ ಜಲಾಶಯ

    ಚಕ್ರ

    ಚಕ್ರ ನಗರ, ಶಿವಮೊಗ್ಗ

    7.3

    ಸವೆಹಕ್ಲು ಜಲಾಶಯ

    ಚಕ್ರ

    ಚಕ್ರ ನಗರ, ಶಿವಮೊಗ್ಗ

    4.1

    ಮಣಿ ಜಲಾಶಯ

    ವಾರಾಹಿ

    ಹುಮ್ಮಡಗಲ್ಲು, ಶಿವಮೊಗ್ಗ

    35.2

    ಸುಪಾ ಅಣೆಕಟ್ಟು

    ಕಾಳಿ

    ಗಣೇಶ ಗುಡಿ, ಉತ್ತರ ಕನ್ನಡ

    147.54

    ಕೊಡಸಳ್ಳಿ ಅಣೆಕಟ್ಟು

    ಕಾಳಿ

    ಕೊಡಸಳ್ಳಿ, ಉತ್ತರ ಕನ್ನಡ

    10.14

    ಕದ್ರಾ ಅಣೆಕಟ್ಟು

    ಕಾಳಿ

    ವಿರ್ಜೆ, ಉತ್ತರ ಕನ್ನಡ

    13.74

     

    ಶಾಂತಿ ಸಾಗರ

    ಹರಿದ್ರಾ

    ಕೆರೆಬಿಳಚಿ, ದಾವಣಗೆರೆ ಜಿಲ್ಲೆ

    3.5

    ಕಾರಂಜಾ ಅಣೆಕಟ್ಟು

    ಕಾರಂಜಾ

    ಬ್ಯಾಲಹಳ್ಳಿ, ಬೀದರ್ ಜಿಲ್ಲೆ

    13.1