‘ಪ್ರಹಾರ’ (PRAHAAR): ಭಾರತದ ಮೊದಲ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ
ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಕೇಂದ್ರ ಗೃಹ ಸಚಿವಾಲಯವು (MHA) ಭಾರತದ ಚೊಚ್ಚಲ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಮತ್ತು ಕಾರ್ಯತಂತ್ರವಾದ ‘ಪ್ರಹಾರ’ (PRAHAAR) ಎಂಬ ಹೆಸರಿನಲ್ಲಿ ಅನಾವರಣಗೊಳಿಸಿದೆ.
‘ಪ್ರಹಾರ’ (PRAHAAR) ನೀತಿಯ ಬಗ್ಗೆ:
- PRAHAAR ಸಂಪೂರ್ಣ ರೂಪ:- P- ಪ್ರೀವೆಂಶನ್, R- ರೆಸ್ಪಾನ್ಸ್, A- ಅಗ್ರಿಗೇಟಿಂಗ್ ಇಂಟರ್ನಲ್ ಕೆಪ್ಯಾಸಿಟಿಸ್, H- ಹ್ಯೂಮನ್ ರೈಟ್ಸ್ ಅಂಡ್ ರೂಲ್ ಆಫ್ ಲಾ, A- ಅಟ್ಟೇನುಏಟಿಂಗ್ ದಿ ಕಂಡೀಷನ್ಸ್, A- ಅಲೈನಿಂಗ್ ಅಂಡ್ ಶೇಪಿಂಗ್, R- ರಿಕವರಿ ಅಂಡ್ ರೆಸಿಲಿಯೆನ್ಸ್.
- ಈ ನೀತಿಯು ಭಯೋತ್ಪಾದನೆಯ ವಿರುದ್ಧದ ಭಾರತದ ‘ಶೂನ್ಯ ಸಹಿಷ್ಣುತೆ’ಯ ತಾತ್ವಿಕ ನಿಲುವನ್ನು ಸ್ಪಷ್ಟಪಡಿಸುತ್ತದೆ.
ಈ ನೀತಿಯು ಈ ಕೆಳಗಿನ ಪ್ರಮುಖ ಆದರ್ಶಗಳ ಆಧಾರದ ಮೇಲೆ ರೂಪುಗೊಂಡಿದೆ:
-
- ಮುಂಚಿತವಾಗಿಯೇ ತಡೆಗಟ್ಟುವುದು (ಪ್ರೀವೆಂಶನ್):- ಭಾರತೀಯ ನಾಗರಿಕರನ್ನು ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಉಗ್ರರ ದಾಳಿಗಳನ್ನು ಮುಂಚಿತವಾಗಿಯೇ ತಡೆಗಟ್ಟುವುದು.
- ಸಮರ್ಪಕವಾದ ಪ್ರತಿಕ್ರಿಯೆ (ರೆಸ್ಪಾನ್ಸ್):- ಎದುರಾಗುವ ಬೆದರಿಕೆಗಳಿಗೆ ತಕ್ಕಂತೆ ತ್ವರಿತವಾದ ಮತ್ತು ಸಮರ್ಪಕವಾದ ಪ್ರತಿಕ್ರಿಯೆಗಳನ್ನು ನೀಡುವುದು.
- ಆಂತರಿಕ ಸಾಮರ್ಥ್ಯಗಳನ್ನು ಒಗ್ಗೂಡಿಸುವುದು (ಅಗ್ರಿಗೇಟಿಂಗ್ ಇಂಟರ್ನಲ್ ಕೆಪ್ಯಾಸಿಟಿಸ್):- ‘ಸಮಗ್ರ-ಸರ್ಕಾರ’ ವಿಧಾನದ ಮೂಲಕ ಸಮನ್ವಯತೆಯನ್ನು ಸಾಧಿಸಿ, ದೇಶದ ಆಂತರಿಕ ಸಾಮರ್ಥ್ಯಗಳನ್ನು ಒಗ್ಗೂಡಿಸುವುದು.
- ಮಾನವ ಹಕ್ಕುಗಳ ರಕ್ಷಣೆ ಮತ್ತು ‘ಕಾನೂನಿನ ಆಡಳಿತ’ (ಹ್ಯೂಮನ್ ರೈಟ್ಸ್ ಅಂಡ್ ರೂಲ್ ಆಫ್ ಲಾ):- ಅಪಾಯಗಳನ್ನು ಶಮನಗೊಳಿಸುವ ಪ್ರಕ್ರಿಯೆಯಲ್ಲಿ ಮಾನವ ಹಕ್ಕುಗಳ ರಕ್ಷಣೆ ಮತ್ತು ‘ಕಾನೂನಿನ ಆಡಳಿತ’ ಆಧಾರಿತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಇದು ಕಡ್ಡಾಯಗೊಳಿಸುತ್ತದೆ.
-
- ಯುವಜನರನ್ನು ಉಗ್ರವಾದದತ್ತ ಸೆಳೆಯುವ ಪ್ರಕ್ರಿಯೆ ಸೇರಿದಂತೆ, ಭಯೋತ್ಪಾದನೆಗೆ ಪೂರಕವಾದ ಪರಿಸ್ಥಿತಿಗಳನ್ನು ದುರ್ಬಲಗೊಳಿಸಲು ಇದು ಸೂಕ್ತ ಕ್ರಮ ಕೈಗೊಳ್ಳುತ್ತದೆ.
- ಪ್ರಯತ್ನಗಳನ್ನು ರೂಪಿಸುವುದು (ಅಟ್ಟೇನುಏಟಿಂಗ್ ದಿ ಕಂಡೀಷನ್ಸ್):- ಭಯೋತ್ಪಾದನೆಯನ್ನು ಹತ್ತಿಕ್ಕುವ ಅಂತರರಾಷ್ಟ್ರೀಯ ಪ್ರಯತ್ನಗಳನ್ನು ರೂಪಿಸುವುದು ಹಾಗೂ ಆ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಸಮನ್ವಯ ಸಾಧಿಸುವುದು.
- ಚೇತರಿಕೆ ಮತ್ತು ಸ್ಥಿತಿಸ್ಥಾಪಕತ್ವ (ರಿಕವರಿ ಅಂಡ್ ರೆಸಿಲಿಯೆನ್ಸ್):- ‘ಸಮಗ್ರ-ಸಮಾಜ’ ವಿಧಾನದ ಮೂಲಕ ವಿಪತ್ತಿನಿಂದ ಚೇತರಿಸಿಕೊಳ್ಳುವ ಮತ್ತು ಸಾಮಾಜಿಕ ಸ್ಥಿತಿಸ್ಥಾಪಕತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ.
ರಾಷ್ಟ್ರೀಯ ನಗದೀಕರಣ ಪೈಪ್ಲೈನ್ 2.0 (NMP 2.0)
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಕೇಂದ್ರ ಹಣಕಾಸು ಸಚಿವರು ‘ರಾಷ್ಟ್ರೀಯ ನಗದೀಕರಣ ಪೈಪ್ಲೈನ್ 2.0’ (NMP 2.0) ಯೋಜನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ರಾಷ್ಟ್ರೀಯ ನಗದೀಕರಣ ಪೈಪ್ಲೈನ್ 2.0 (NMP 2.0) ಬಗ್ಗೆ:
- ಇದು ಭಾರತದ ಸಾರ್ವಜನಿಕ ಆಸ್ತಿ ನಗದೀಕರಣ ಕಾರ್ಯಕ್ರಮದ ಎರಡನೇ ಹಂತವಾಗಿದ್ದು, 2025-26ನೇ ಆರ್ಥಿಕ ವರ್ಷದಿಂದ 2029-30ನೇ ಆರ್ಥಿಕ ವರ್ಷದವರೆಗಿನ 5 ವರ್ಷಗಳ ಅವಧಿಯನ್ನು ಒಳಗೊಂಡಿದೆ.
- ಉದ್ದೇಶ:- ಸರ್ಕಾರವು ಆಸ್ತಿಯ ಮಾಲೀಕತ್ವವನ್ನು ತನ್ನಲ್ಲೇ ಉಳಿಸಿಕೊಂಡು, ಅಸ್ತಿತ್ವದಲ್ಲಿರುವ ಸಾರ್ವಜನಿಕ ಮೂಲಸೌಕರ್ಯಗಳನ್ನು (ಬ್ರೌನ್ಫೀಲ್ಡ್ ಯೋಜನೆಗಳು) ನಿಗದಿತ ಅವಧಿಗೆ ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಮೂಲಕ ಆರ್ಥಿಕ ಮೌಲ್ಯವನ್ನು ಸೃಷ್ಟಿಸುವುದು.
ರಾಷ್ಟ್ರೀಯ ನಗದೀಕರಣ ಪೈಪ್ಲೈನ್ (NMP) ಬಗ್ಗೆ:
- ಹೆದ್ದಾರಿಗಳು, ರೈಲ್ವೆ ಜಾಲಗಳು ಮತ್ತು ವಿದ್ಯುತ್ ಮಾರ್ಗಗಳಂತಹ ಅಸ್ತಿತ್ವದಲ್ಲಿರುವ ಸಾರ್ವಜನಿಕ ಮೂಲಸೌಕರ್ಯಗಳನ್ನು ಖಾಸಗಿ ಕಂಪನಿಗಳಿಗೆ ನಿರ್ದಿಷ್ಟ ಅವಧಿಗೆ ಗುತ್ತಿಗೆ ನೀಡುವ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯೇ ಈ ರಾಷ್ಟ್ರೀಯ ನಗದೀಕರಣ ಪೈಪ್ಲೈನ್ ಆಗಿದೆ.
- ಈ ಯೋಜನೆಯಡಿ ಸರ್ಕಾರವು ಮೂಲ ಆಸ್ತಿಯ ಮಾಲೀಕತ್ವವನ್ನು ತನ್ನಲ್ಲೇ ಉಳಿಸಿಕೊಳ್ಳುತ್ತದೆ; ಆದರೆ ಖಾಸಗಿ ಸಂಸ್ಥೆಗಳು ಆಸ್ತಿಗಳನ್ನು ನಿರ್ವಹಿಸುತ್ತವೆ ಮತ್ತು ಅವುಗಳಿಂದ ಆದಾಯವನ್ನು ಗಳಿಸುವ ಹಕ್ಕಿಗಾಗಿ ಸರ್ಕಾರಕ್ಕೆ ಹಣವನ್ನು ಪಾವತಿಸುತ್ತವೆ.
NMP ಯ ಪ್ರಮುಖ ಅಂಶಗಳು:
- ಗುರಿ:- ಹೊಸ ಮೂಲಸೌಕರ್ಯಗಳ ಅಭಿವೃದ್ಧಿಗೆ ಅಗತ್ಯವಿರುವ ಬಂಡವಾಳವನ್ನು ಹೂಡಿಕೆ ಮಾಡಲು, ಪ್ರಸ್ತುತ ಕಡಿಮೆ ಬಳಕೆಯಾಗುತ್ತಿರುವ ಮತ್ತು ಈಗಾಗಲೇ ನಿರ್ಮಿಸಲಾದ ಸಾರ್ವಜನಿಕ ಆಸ್ತಿಗಳಿಂದ (“ಬ್ರೌನ್ಫೀಲ್ಡ್” ಯೋಜನೆಗಳು) ಆರ್ಥಿಕ ಸಂಪನ್ಮೂಲವನ್ನು ಕ್ರೂಢೀಕರಿಸುವುದು.
- ಕಾರ್ಯವಿಧಾನ:- ಸಾರ್ವಜನಿಕ ಆಸ್ತಿಗಳನ್ನು ಸಂಪೂರ್ಣವಾಗಿ ಮಾರಾಟ ಮಾಡುವ ಬದಲು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPPs) ಮಾದರಿಯನ್ನು ಬಳಸಿಕೊಂಡು ಅವುಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ಹಕ್ಕುಗಳನ್ನು ಮಾತ್ರ ಖಾಸಗಿ ವಲಯಕ್ಕೆ ವರ್ಗಾಯಿಸಲಾಗುತ್ತದೆ.
- ವಲಯಗಳು:- ರಸ್ತೆಗಳು, ರೈಲ್ವೆ, ವಿದ್ಯುತ್ ಪ್ರಸರಣ ಮಾರ್ಗಗಳು, ದೂರಸಂಪರ್ಕ ಮತ್ತು ವಿಮಾನ ನಿಲ್ದಾಣಗಳಂತಹ ಪ್ರಮುಖ ಮೂಲಸೌಕರ್ಯ ವಲಯಗಳನ್ನು ಈ ಯೋಜನೆಯು ಒಳಗೊಂಡಿದೆ.
ಹಸಿರು ಅಮೋನಿಯಾ (Green Ammonia)
ಪರಿಸರ
ಇದೀಗ ಸುದ್ದಿಯಲ್ಲಿದೆ:
- ಭಾರತದ ಇಂಧನ ಪರಿವರ್ತನಾ ಪ್ರಕ್ರಿಯೆಯು ಹಸಿರು ಜಲಜನಕ ಮತ್ತು ಅದರ ಉಪಉತ್ಪನ್ನಗಳ ಮೇಲೆ ಹೆಚ್ಚು ಕೇಂದ್ರೀಕರಿಸುತ್ತಿದ್ದು, ಇದರಲ್ಲಿ ‘ಹಸಿರು ಅಮೋನಿಯಾ’ವು ನಿರ್ಣಾಯಕ ಮಾರ್ಗವಾಗಿ ಹೊರಹೊಮ್ಮುತ್ತಿದೆ.
ಹಸಿರು ಅಮೋನಿಯಾದ ಬಗ್ಗೆ:
- ಹಸಿರು ಜಲಜನಕವನ್ನು ಬಳಸಿಕೊಂಡು ಈ ಹಸಿರು ಅಮೋನಿಯಾವನ್ನು ಉತ್ಪಾದಿಸಲಾಗುತ್ತದೆ.
- ಇದನ್ನು ರಸಗೊಬ್ಬರ ಉತ್ಪಾದನೆ, ಇಂಧನ ಪೂರೈಕೆ ಮತ್ತು ಕಡಲ ವಲಯದ ಅನ್ವಯಿಕೆಗಳಿಗೆ ಪ್ರಮುಖ ಶುದ್ಧ ಇಂಧನವಾಗಿ ಬಳಕೆಯಾಗುತ್ತಿದೆ.
- ಪ್ರಯೋಜನಗಳು:-
- ರಸಗೊಬ್ಬರ ವಲಯದ ಇಂಗಾಲದ ಹೊರಸೂಸುವಿಕೆ ತಗ್ಗಿಸುವುದು (ಡಿಕಾರ್ಬೊನೈಸೇಶನ್):- ಆಮದು ಮಾಡಿಕೊಳ್ಳುವ ಅಮೋನಿಯಾವನ್ನು ಅತಿಯಾಗಿ ಅವಲಂಬಿಸಿರುವ ಭಾರತದ ರಸಗೊಬ್ಬರ ವಲಯವು, ಹಸಿರು ಅಮೋನಿಯಾವನ್ನು ಅಳವಡಿಸಿಕೊಳ್ಳುವ ಮೂಲಕ ಇಂಗಾಲದ ಹೊರಸೂಸುವಿಕೆಯನ್ನು ಗಣನೀಯವಾಗಿ ತಗ್ಗಿಸಬಹುದಾಗಿದೆ.
‘ಹಸಿರು ಜಲಜನಕ’ದ ಬಗ್ಗೆ:
- ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸಲಾದ ವಿದ್ಯುತ್ನಿಂದ ನೀರಿನ ವಿದ್ಯುದ್ವಿಭಜನೆ ಮಾಡುವ ಮೂಲಕ ಹಸಿರು ಜಲಜನಕವನ್ನು ಉತ್ಪಾದಿಸಲಾಗುತ್ತದೆ.
- ಇಂಗಾಲ-ಮುಕ್ತಗೊಳಿಸಲು ಸಹಾಯ:- ಇದು ಸಂಪೂರ್ಣ ಶುದ್ಧವಾಗಿ ಉರಿಯುವ ಇಂಧನವಾಗಿದ್ದು, ಕಬ್ಬಿಣ ಮತ್ತು ಉಕ್ಕು, ರಾಸಾಯನಿಕ ಹಾಗೂ ಸಾರಿಗೆ ಸೇರಿದಂತೆ ವಿವಿಧ ವಲಯಗಳನ್ನು ಇಂಗಾಲ-ಮುಕ್ತಗೊಳಿಸಲು ಸಹಾಯ ಮಾಡುತ್ತದೆ.
- ಜಲಜನಕವನ್ನು ದೀರ್ಘಕಾಲದವರೆಗೆ ಸುರಕ್ಷಿತವಾಗಿ ಸಂಗ್ರಹಿಸಿಡಬಹುದು ಮತ್ತು ಇಂಧನ ಕೋಶಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಲು ಸಹ ಇದನ್ನು ಬಳಸಬಹುದಾಗಿದೆ.
ರಾಷ್ಟ್ರೀಯ ಹಸಿರು ಜಲಜನಕ ಮಿಷನ್:
- ಉದ್ದೇಶ:- ಹಸಿರು ಜಲಜನಕ ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ರೂಪಿಸುವುದು.
- ಅನುಷ್ಠಾನ ಸಚಿವಾಲಯ:- ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE).
ಜಲಜನಕ (Hydrogen)ದ ಬಗ್ಗೆ:
- ಸಂಕೇತ ಮತ್ತು ಪರಮಾಣು ಸಂಖ್ಯೆ:- ಜಲಜನಕವು ‘H’ ಸಂಕೇತವನ್ನು ಹೊಂದಿರುವ ರಾಸಾಯನಿಕ ಮೂಲವಸ್ತುವಾಗಿದ್ದು, ಇದರ ಪರಮಾಣು ಸಂಖ್ಯೆ 1 ಆಗಿದೆ.
- ಇದು ವಿಶ್ವದಲ್ಲಿಯೇ ಅತ್ಯಂತ ಹಗುರವಾದ ಹಾಗೂ ಅತ್ಯಂತ ಹೇರಳವಾಗಿರುವ ರಾಸಾಯನಿಕ ವಸ್ತುವಾಗಿದ್ದು, ಬ್ರಹ್ಮಾಂಡದಲ್ಲಿರುವ ಸಾಮಾನ್ಯ ವಸ್ತುವಿನ ಶೇಕಡ 75 ರಷ್ಟನ್ನು ಇದು ಒಳಗೊಂಡಿದೆ.
- ಇದು ಬಣ್ಣರಹಿತ, ವಾಸನೆರಹಿತ, ರುಚಿರಹಿತ, ವಿಷಕಾರಿಯಲ್ಲದ ಮತ್ತು ಅತಿ ಹೆಚ್ಚು ದಹನಕಾರಿ ಗುಣವನ್ನು ಹೊಂದಿರುವ ಅನಿಲವಾಗಿದೆ.
ಚಕ್ರವರ್ತಿ ರಾಜಗೋಪಾಲಾಚಾರಿ
ಇತಿಹಾಸ
ಇದೀಗ ಸುದ್ದಿಯಲ್ಲಿ:
- ಸ್ವತಂತ್ರ ಭಾರತದ ಪ್ರಥಮ ಹಾಗೂ ಏಕೈಕ ಭಾರತೀಯ ಗವರ್ನರ್ ಜನರಲ್ ಆಗಿದ್ದ ಶ್ರೀ ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಪುತ್ಥಳಿಯನ್ನು ಭಾರತದ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದಲ್ಲಿ ಅನಾವರಣಗೊಳಿಸಿದರು.
‘ಸಿ. ರಾಜಗೋಪಾಲಾಚಾರಿ’ ಅವರ ಬಗ್ಗೆ:
-
- ಆರಂಭಿಕ ಜೀವನ:- ಜನಪ್ರಿಯವಾಗಿ ‘ರಾಜಾಜೀ ಎಂದೇ ಕರೆಸಿಕೊಳ್ಳುವ ಚಕ್ರವರ್ತಿ ರಾಜಗೋಪಾಲಾಚಾರಿ ಅವರು 1878 ರಲ್ಲಿ ತಮಿಳುನಾಡಿನ ಥೋರಪಲ್ಲಿಯಲ್ಲಿ ಜನಿಸಿದರು.
- ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು:-
- ರೌಲತ್ ಕಾಯ್ದೆ ವಿರುದ್ಧದ ಹೋರಾಟ
- ಅಸಹಕಾರ ಚಳುವಳಿ
- ವೈಕಂ ಸತ್ಯಾಗ್ರಹ
- ಕಾನೂನು ಭಂಗ ಚಳುವಳಿ
- ಈ ಸ್ವಾತಂತ್ರ್ಯ ಹೋರಾಟಗಳಿಗಾಗಿ ಅವರು 1912 ರಿಂದ 1941 ರ ನಡುವೆ ಐದು ಬಾರಿ ಜೈಲುವಾಸ ಅನುಭವಿಸಿದ್ದರು.
- ಸ್ವಾತಂತ್ರ್ಯದ ನಂತರ, ರಾಜಾಜಿ ಅವರು 1950 ರವರೆಗೆ ಭಾರತದ ಕೊನೆಯ ಗವರ್ನರ್ ಜನರಲ್ ಆಗಿ ಸೇವೆ ಸಲ್ಲಿಸಿದರು.
- ಅವರು 1952 ರಿಂದ 1954 ರ ನಡುವೆ ಅಲ್ಪಕಾಲ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
- ಸಾಂಪ್ರದಾಯಿಕ ಉದಾರವಾದಿ ಆರ್ಥಿಕ ವಿಚಾರಗಳನ್ನು ಬೆಂಬಲಿಸುವ ಉದ್ದೇಶದಿಂದ ಅವರು 1959 ರಲ್ಲಿ ‘ಸ್ವತಂತ್ರ ಪಕ್ಷ’ವನ್ನು ಸ್ಥಾಪಿಸಿದರು.
- ಸಾಹಿತ್ಯಿಕ ಕೊಡುಗೆ:-
- ಇಂಗ್ಲಿಷ್ನಲ್ಲಿ ರಚಿತವಾದ ಮಹಾಭಾರತ ಮತ್ತು ರಾಮಾಯಣ.
- ತಮಿಳಿನಲ್ಲಿ ರಚಿತವಾದ ‘ರಾಮಾಯಣ – ಚಕ್ರವರ್ತಿ ತಿರುಮಗನ್’.
- 1954 ರಲ್ಲಿ ‘ಭಾರತ ರತ್ನ’:- ಭಾರತದ ರಾಜಕೀಯ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಅಪಾರ ಕೊಡುಗೆಗಾಗಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ಪ್ರದಾನ ಮಾಡಿ ಗೌರವಿಸಲಾಯಿತು.
‘ರಾಹ್-ವೀರ್’ ಯೋಜನೆ
ಆಡಳಿತ
ಇದೀಗ ಸುದ್ದಿಯಲ್ಲಿದೆ:
- ರಸ್ತೆ ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ತ್ವರಿತವಾಗಿ ಸಹಾಯ ಮಾಡಲು ನಾಗರಿಕರನ್ನು ಪ್ರೇರೇಪಿಸುವ ಉದ್ದೇಶದಿಂದ ದೆಹಲಿ ಸರ್ಕಾರವು ಕೇಂದ್ರ ಸರ್ಕಾರದ ‘ರಾಹ್-ವೀರ್’ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.
‘ರಾಹ್-ವೀರ್’ ಯೋಜನೆಯ ಬಗ್ಗೆ:
- ಈ ಯೋಜನೆಯು ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆ, 2019 ರ ಅಡಿಯಲ್ಲಿರುವ ‘ಗುಡ್ ಸಮರಿಟನ್’ (ಜೀವರಕ್ಷಕ) ನಿಯಮಗಳಿಗೆ ಅನುಗುಣವಾಗಿ ರೂಪುಗೊಂಡಿದೆ.
- ಅಪಘಾತದ ಸಮಯದಲ್ಲಿ ತ್ವರಿತವಾಗಿ ಮಾನವೀಯ ನೆರವು ನೀಡುವುದನ್ನು ಪ್ರೋತ್ಸಾಹಿಸಲು ಇದು ನಾಗರಿಕರಿಗೆ ಕಾನೂನು ರಕ್ಷಣೆ ಹಾಗೂ ಆರ್ಥಿಕ ಪ್ರೋತ್ಸಾಹವನ್ನು ಒದಗಿಸುತ್ತದೆ.
- ಪ್ರಮುಖ ಲಕ್ಷಣಗಳು:–
- ₹25,000 ನಗದು ಬಹುಮಾನ:- ಅಪಘಾತ ಸಂಭವಿಸಿದ ಅತ್ಯಮೂಲ್ಯವಾದ “ಸುವರ್ಣ ಘಳಿಗೆ”ಯಲ್ಲಿ (golden hour) ಗಂಭೀರವಾಗಿ ಗಾಯಗೊಂಡ ಸಂತ್ರಸ್ತರಿಗೆ ಸಹಾಯ ಮಾಡುವ ನಾಗರಿಕರಿಗೆ 25,000 ರೂಪಾಯಿಗಳ ನಗದು ಬಹುಮಾನವನ್ನು ನೀಡಲಾಗುತ್ತದೆ.
- ಜಿಲ್ಲಾ ಮಟ್ಟದ ಸಮಿತಿಯು ಇಂತಹ ಪ್ರಕರಣಗಳನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಬಹುಮಾನದ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
- ಇದರ ಜೊತೆಗೆ, ಪ್ರತಿ ವರ್ಷ 10 ಅತ್ಯುತ್ತಮ ‘ರಾಹ್-ವೀರ್’ಗಳನ್ನು ಗುರುತಿಸಿ, ಅವರಿಗೆ ತಲಾ 1 ಲಕ್ಷ ರೂಪಾಯಿ ನಗದು ಮತ್ತು ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಗುತ್ತದೆ.
- ಪ್ರಾಮುಖ್ಯತೆ:- ರಸ್ತೆ ಅಪಘಾತದ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾದಾಗ ಎದುರಾಗಬಹುದಾದ ಪೊಲೀಸ್ ವಿಚಾರಣೆ ಅಥವಾ ಕಾನೂನು ಕಾರ್ಯವಿಧಾನದ ಭಯದಿಂದ ನಾಗರಿಕರು ಹಿಂಜರಿಯುವುದನ್ನು ತಪ್ಪಿಸುವುದು.







ನಿಮ್ಮದೊಂದು ಉತ್ತರ