ನೇಮಕಾತಿಗಳು
BPR&D, NCRB, ಮತ್ತು SVPNPA ಸಂಸ್ಥೆಗಳಿಗೆ ನೂತನ ಮುಖ್ಯಸ್ಥರ ನೇಮಕ
ಇದೀಗ ಸುದ್ದಿಯಲ್ಲಿ:
- ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ದೇಶದ ಪ್ರಮುಖ ಪೊಲೀಸ್ ಸಂಬಂಧಿತ ಸಂಶೋಧನೆ, ಅಪರಾಧ ಗುಪ್ತಚರ ಮತ್ತು ತರಬೇತಿ ಸಂಸ್ಥೆಗಳ ನೇತೃತ್ವ ವಹಿಸಲು ಮೂವರು ಹಿರಿಯ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಗಳ ನೇಮಕಾತಿಯನ್ನು ಕೇಂದ್ರ ಕ್ಯಾಬಿನೆಟ್ ನೇಮಕಾತಿ ಸಮಿತಿಯು (ACC) ಅನುಮೋದಿಸಿದೆ.
ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (BPR&D):
- ಹರಿಯಾಣ ಕೆಡರ್ನ 1993ರ ಬ್ಯಾಚ್ನ IPS ಅಧಿಕಾರಿ ಅಲೋಕ್ ಕುಮಾರ್ ಮಿತ್ತಲ್ ಅವರನ್ನು ಈ ಸಂಸ್ಥೆಯ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
- ಕೇಂದ್ರ ಗೃಹ ಸಚಿವಾಲಯದ ನೇರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ BPR&D ಸಂಸ್ಥೆಯು ಪೊಲೀಸ್ ಆಧುನೀಕರಣ ಮತ್ತು ನೀತಿ ಸಂಶೋಧನೆಗಳನ್ನು ಮುನ್ನಡೆಸುತ್ತದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB):
- ಆಂಧ್ರಪ್ರದೇಶ ಕೇಡರ್ ನ 1993ರ ಬ್ಯಾಚ್ನ IPS ಅಧಿಕಾರಿ ಅಮಿತ್ ಗರ್ಗ್ ಅವರನ್ನು ನೂತನ ನಿರ್ದೇಶಕರನ್ನಾಗಿ ನೇಮಿಸಲಾಗಿದ್ದು, ಇವರು ಅಲೋಕ್ ರಂಜನ್ ಅವರ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.
- ಇವರ ಸೇವಾ ಅವಧಿಯಲ್ಲಿ NCRB ನಿರ್ದೇಶಕ ಹುದ್ದೆಯನ್ನು ತಾತ್ಕಾಲಿಕವಾಗಿ ವೈಯಕ್ತಿಕ ನೆಲೆಯ ಮೇಲೆ ಮಹಾನಿರ್ದೇಶಕರ ಶ್ರೇಣಿಗೆ ಮೇಲ್ದರ್ಜೆಗೇರಿಸಲಾಗಿದೆ.
- 1986 ರಲ್ಲಿ ಸ್ಥಾಪನೆಯಾದ NCRB ಸಂಸ್ಥೆಯು ಅಪರಾಧ ಮತ್ತು ಅಪರಾಧ ಗುಪ್ತಚರ ದತ್ತಾಂಶಗಳ ರಾಷ್ಟ್ರೀಯ ಭಂಡಾರವಾಗಿ ಕಾರ್ಯನಿರ್ವಹಿಸುತ್ತದೆ.
ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ (SVPNPA):
- ಉತ್ತರ ಪ್ರದೇಶ ಕೇಡರ್ ನ 1994ರ ಬ್ಯಾಚ್ನ IPS ಅಧಿಕಾರಿ ಸುಜೀತ್ ಪಾಂಡೆ ಅವರನ್ನು ಹೈದರಾಬಾದ್ನಲ್ಲಿರುವ ದೇಶದ ಅತ್ಯುನ್ನತ ಪೊಲೀಸ್ ತರಬೇತಿ ಅಕಾಡೆಮಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದ್ದು, ಇವರು ಅಮಿತ್ ಗರ್ಗ್ ಅವರ ಸ್ಥಾನವನ್ನು ತುಂಬಲಿದ್ದಾರೆ.
- SVPNPA ಸಂಸ್ಥೆಯು ಭಾರತೀಯ ಪೊಲೀಸ್ ಸೇವೆ (IPS) ಪ್ರೊಬೇಷನರಿ ಅಧಿಕಾರಿಗಳಿಗೆ ಹಾಗೂ ಹಿರಿಯ ಕಾನೂನು ಜಾರಿ ನೇತೃತ್ವಕ್ಕೆ ಅತ್ಯುನ್ನತ ತರಬೇತಿಯನ್ನು ನೀಡುತ್ತದೆ.
ಪ್ರಶಸ್ತಿಗಳು
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ
ಇದೀಗ ಸುದ್ದಿಯಲ್ಲಿ:
- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಕಾರ್ತಾಗೆ ಕೈಗೊಂಡ ಅಧಿಕೃತ ಸರ್ಕಾರಿ ಪ್ರವಾಸದ ಸಂದರ್ಭದಲ್ಲಿ ಅವರಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದ್ದು, ಇದು ಉಭಯ ದೇಶಗಳ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧಗಳಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ.
ಪ್ರಮುಖ ಮುಖ್ಯಾಂಶಗಳು:
- ಪ್ರಶಸ್ತಿ: ಬಂಟಾಂಗ್ ಆಡಿಪೂರ್ಣ (ಸ್ಟಾರ್ ಆಫ್ ದಿ ರಿಪಬ್ಲಿಕ್ ಆಫ್ ಇಂಡೋನೇಷ್ಯಾ).
- ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಜಕಾರ್ತಾದಲ್ಲಿರುವ ಅಧ್ಯಕ್ಷೀಯ ಅರಮನೆಯಾದ ಇಸ್ತಾನಾ ಮೆರ್ಡೆಕಾದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
- ಪ್ರಮುಖ ಸಾಧನೆ: ಭಾರತ-ಇಂಡೋನೇಷ್ಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ವೃದ್ಧಿಸುವಲ್ಲಿ ಮತ್ತು ರಕ್ಷಣೆ, ಕಡಲ ಭದ್ರತೆ, ನಿರ್ಣಾಯಕ ಖನಿಜಗಳು ಹಾಗೂ ಆರೋಗ್ಯ ರಕ್ಷಣಾ ವಲಯಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸುವಲ್ಲಿ ತೋರಿದ ಅತ್ಯುತ್ತಮ ನಾಯಕತ್ವಕ್ಕಾಗಿ ಮೋದಿ ಅವರನ್ನು ಗೌರವಿಸಲಾಗಿದೆ.
- ಈ ಹಿಂದೆ ಇಂಡೋನೇಷ್ಯಾದ ಅತ್ಯುನ್ನತ ಪ್ರಶಸ್ತಿಯನ್ನು ಜವಾಹರಲಾಲ್ ನೆಹರು ಅವರು ಪಡೆದಿದ್ದರು.












ನಿಮ್ಮದೊಂದು ಉತ್ತರ