ಕೋಸ್ಟ್ ಗಾರ್ಡ್ ಜಾಗತಿಕ ಶೃಂಗಸಭೆ (CGGS) | ಒಂದು ದಿನ, ಒಂದು ವಿಶ್ವವಿದ್ಯಾಲಯ | ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ (ICC) ಮೇಲೆ ಅಮೇರಿಕಾ ನಿರ್ಬಂಧ | ಮದನ್ ಲಾಲ್ ಧಿಂಗ್ರಾ | ವಾಯೇಜರ್ ಮಿಷನ್ ಗಳು (Voyager Missions) | ಸಾಸ್ಕಿ (SASCI) ಯೋಜನೆ

ಕೋಸ್ಟ್ ಗಾರ್ಡ್ ಜಾಗತಿಕ ಶೃಂಗಸಭೆ (CGGS)

ರಾಜಕೀಯ

ಇದೀಗ ಸುದ್ದಿಯಲ್ಲಿ:

  • ಭಾರತವು 2027 ರ ಫೆಬ್ರವರಿಯಲ್ಲಿ ನವದೆಹಲಿಯಲ್ಲಿ 5 ನೇ ಕೋಸ್ಟ್ ಗಾರ್ಡ್ ಜಾಗತಿಕ ಶೃಂಗಸಭೆಯನ್ನು (CGGS) ಆಯೋಜಿಸಲಿದೆ.
  • ಈ ಶೃಂಗಸಭೆಯು ಭಾರತೀಯ ಕೋಸ್ಟ್ ಗಾರ್ಡ್ / ಕರಾವಳಿ ರಕ್ಷಣಾ ಪಡೆ (ICG)ಯ 50 ವರ್ಷಗಳನ್ನು ಗುರುತಿಸುವ ಸುವರ್ಣ ಮಹೋತ್ಸವದೊಂದಿಗೆ ಕಾಕತಾಳೀಯವಾಗಿ ನಡೆಯಲಿದೆ.

ಕೋಸ್ಟ್ ಗಾರ್ಡ್ ಜಾಗತಿಕ ಶೃಂಗಸಭೆ (CGGS)

  • ಸ್ಥಾಪನೆ: ಇದನ್ನು 2017 ರಲ್ಲಿ ಜಪಾನ್ ಕೋಸ್ಟ್ ಗಾರ್ಡ್ ಮತ್ತು ನಿಪ್ಪಾನ್ ಫೌಂಡೇಶನ್ ಸ್ಥಾಪಿಸಿದವು.
  • ಆವರ್ತನ: ದ್ವೈವಾರ್ಷಿಕ (ಎರಡು ವರ್ಷಗಳಿಗೊಮ್ಮೆ).
  • ಗಮನ: ಕಡಲ ಸುರಕ್ಷತೆ, ಶೋಧ ಮತ್ತು ರಕ್ಷಣೆ, ಸಮುದ್ರ ಮಾಲಿನ್ಯ ಮತ್ತು ಇತ್ಯಾದಿ ಅಪರಾಧಗಳನ್ನು ಎದುರಿಸುವುದು.

ಭಾರತೀಯ ಕೋಸ್ಟ್ ಗಾರ್ಡ್ / ಕರಾವಳಿ ರಕ್ಷಣಾ ಪಡೆ (ICG) ಬಗ್ಗೆ: 

  • ಸಚಿವಾಲಯ: ರಕ್ಷಣಾ ಸಚಿವಾಲಯ.
  • ಸ್ಥಾಪನೆ: ಕೋಸ್ಟ್ ಗಾರ್ಡ್ ಕಾಯ್ದೆ 1978 ರ ಅಡಿಯಲ್ಲಿ 1978 ರಲ್ಲಿ ಸ್ಥಾಪನೆಯಾಯಿತು.
  • ಹಿನ್ನೆಲೆ: ನಾಗ್ ಸಮಿತಿ (1970) ಮತ್ತು ರುಸ್ತಮ್‌ಜಿ ಸಮಿತಿ (1974) ಯ ಶಿಫಾರಸಿನ ಮೇರೆಗೆ ರಚನೆಯಾಯಿತು.
  • ಮುಖ್ಯಸ್ಥರು: ನವದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಡೈರೆಕ್ಟರ್ ಜನರಲ್ (Director General).
  • ವ್ಯಾಪ್ತಿ: ಪ್ರಾದೇಶಿಕ ಜಲಪ್ರದೇಶ, ಸಮೀಪದ ವಲಯ ಮತ್ತು ವಿಶೇಷ ಆರ್ಥಿಕ ವಲಯ (EEZ – ಅಂದಾಜು 2.01 ಮಿಲಿಯನ್ ಚದರ ಕಿ.ಮೀ).
  • ಕಾರ್ಯಾದೇಶ – ಇದು ಕಡಲ ಕಾನೂನು ಜಾರಿ, ಶೋಧ ಮತ್ತು ರಕ್ಷಣೆ, ಮಾಲಿನ್ಯ ನಿಯಂತ್ರಣ ಮತ್ತು ಕರಾವಳಿ ಭದ್ರತೆಗೆ ಜವಾಬ್ದಾರಿಯಾಗಿದೆ.

ಒಂದು ದಿನ, ಒಂದು ವಿಶ್ವವಿದ್ಯಾಲಯ

ರಾಜಕೀಯ

ಇದೀಗ ಸುದ್ದಿಯಲ್ಲಿ:

  • ದೆಹಲಿಯಲ್ಲಿ ನಡೆದ ಪ್ರತಿಭಟನೆಗಳು ಸೇರಿದಂತೆ ನೀಟ್ (NEET) ಪತ್ರಿಕೆ ಸೋರಿಕೆ ವಿಚಾರದಲ್ಲಿ ವಿದ್ಯಾರ್ಥಿಗಳ ತೀವ್ರ ಜಮಾವಣೆ ಬಳಿಕ, ಕೇಂದ್ರ ಸಚಿವ ಸಂಪುಟವು “ಒಂದು ದಿನ, ಒಂದು ವಿಶ್ವವಿದ್ಯಾಲಯ” (One Day, One University) ಎಂಬ ರಾಷ್ಟ್ರವ್ಯಾಪಿ ಉಪಕ್ರಮವನ್ನು ಪ್ರಸ್ತಾಪಿಸಿದೆ.

‘ಒಂದು ದಿನ, ಒಂದು ವಿಶ್ವವಿದ್ಯಾಲಯ’ ಉಪಕ್ರಮದ ಬಗ್ಗೆ

  • ಉಪಕ್ರಮ: ಇದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ದ ಉಪಕ್ರಮವಾಗಿದೆ.
  • ಗುರಿ: ವಿಶ್ವವಿದ್ಯಾಲಯಗಳ ನಡುವೆ ಶೈಕ್ಷಣಿಕ ಸಹಯೋಗ ಮತ್ತು ಜ್ಞಾನ ಹಂಚಿಕೆಯನ್ನು ಉತ್ತೇಜಿಸುವುದು.
  • ಪರಿಕಲ್ಪನೆ: ಭಾಗವಹಿಸುವ ಪ್ರತಿಯೊಂದು ವಿಶ್ವವಿದ್ಯಾಲಯವು ತನ್ನ ಸಾಧನೆಗಳು, ಸಂಶೋಧನೆ, ನಾವೀನ್ಯತೆಗಳು, ಉತ್ತಮ ಅಭ್ಯಾಸಗಳು ಮತ್ತು ಕಾರ್ಯಕ್ರಮಗಳನ್ನು ಪ್ರದರ್ಶಿಸಲು ಮೀಸಲಾದ ದಿನವನ್ನು ಪಡೆಯುತ್ತದೆ.
  • ಗಮನ: ಉದ್ಯಮ-ಶೈಕ್ಷಣಿಕ ಸಂಪರ್ಕಗಳು, ಸಂಶೋಧನಾ ಸಹಯೋಗ ಮತ್ತು ಸಾಂಸ್ಥಿಕ ನೆಟ್‌ವರ್ಕಿಂಗ್‌ ಅನ್ನು ಬಲಪಡಿಸುವುದು.
  • ಮಹತ್ವ: ಉನ್ನತ ಶಿಕ್ಷಣದಲ್ಲಿ ಸಹಯೋಗ, ನಾವೀನ್ಯತೆ ಮತ್ತು ಅಂತರರಾಷ್ಟ್ರೀಕರಣವನ್ನು ಉತ್ತೇಜಿಸುವ ಮೂಲಕ ಇದು ರಾಷ್ಟ್ರೀಯ ಶಿಕ್ಷಣ ನೀತಿ 2020 (NEP 2020) ರ ಗುರಿಗಳನ್ನು ಬೆಂಬಲಿಸುತ್ತದೆ.

ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ (ICC) ಮೇಲೆ ಅಮೇರಿಕಾ ನಿರ್ಬಂಧ

ಅಂತರರಾಷ್ಟ್ರೀಯ

ಇದೀಗ ಸುದ್ದಿಯಲ್ಲಿ:

  • ಸದಸ್ಯೇತರ ರಾಷ್ಟ್ರಗಳ ಅಧಿಕಾರಿಗಳನ್ನು ಗುರಿಯಾಗಿಸಿ ನಡೆಸಿದ ತನಿಖೆಗಳಿಗೆ ಸಂಬಂಧಿಸಿದಂತೆ ಅಮೇರಿಕಾ ಸಂಯುಕ್ತ ಸಂಸ್ಥಾನವು ICC ಅಧ್ಯಕ್ಷೆ ಟೊಮೊಕೊ ಅಕಾನೆ ಮತ್ತು ಹಿರಿಯ ಪ್ರಾಸಿಕ್ಯೂಟರ್ ಅಬ್ದುಲಾಯೆ ಸೆಯೆ ಅವರ ಮೇಲೆ ನಿರ್ಬಂಧ ವಿಧಿಸಿದೆ.

ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC)ದ ಬಗ್ಗೆ: 

  • ಸ್ಥಾಪನೆ – ICC ಯನ್ನು ರೋಮ್ ಶಾಸನದ ಮೂಲಕ ಸ್ಥಾಪಿಸಲಾಗಿದೆ.
  • ಸ್ಥಾಪನೆಯಾದ ವರ್ಷಇದನ್ನು 1998 ರಲ್ಲಿ ಸ್ಥಾಪಿಸಲಾಯಿತು ಮತ್ತು 60 ದೇಶಗಳು ರೋಮ್ ಶಾಸನವನ್ನು ಅಂಗೀಕರಿಸಿದ ನಂತರ ಜುಲೈ 1, 2002 ರಂದು ಇದು ತನ್ನ ಕಲಾಪಗಳನ್ನು ಪ್ರಾರಂಭಿಸಿತು.
  • ಪ್ರಧಾನ ಕಚೇರಿನೆದರ್ಲ್ಯಾಂಡ್ಸ್‌ನ ಹೇಗ್ ನಗರದಲ್ಲಿದೆ.
  • ಕಾರ್ಯಗಳುನರಮೇಧ, ಮಾನವೀಯತೆಯ ಮೇಲಿನ ಅಪರಾಧಗಳು, ಯುದ್ಧ ಅಪರಾಧಗಳು ಮತ್ತು ಆಕ್ರಮಣಕಾರಿ ಅಪರಾಧಗಳಂತಹ ಅಂತರರಾಷ್ಟ್ರೀಯ ಅಪರಾಧಗಳಿಗಾಗಿ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸುವ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಮೊದಲ ಮತ್ತು ಏಕೈಕ ಶಾಶ್ವತ ಅಂತರರಾಷ್ಟ್ರೀಯ ನ್ಯಾಯಾಲಯ ICC ಆಗಿದೆ.
  • ಪೂರಕತೆಯ ತತ್ವ (Principle of complementarity) – ಇದು ಅಸ್ತಿತ್ವದಲ್ಲಿರುವ ರಾಷ್ಟ್ರೀಯ ನ್ಯಾಯಾಂಗ ವ್ಯವಸ್ಥೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಉದ್ದೇಶ ಹೊಂದಿದೆ. ಆದ್ದರಿಂದ ರಾಷ್ಟ್ರೀಯ ನ್ಯಾಯಾಲಯಗಳು ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸಲು ಇಷ್ಟವಿಲ್ಲದಿದ್ದಾಗ ಅಥವಾ ಅಸಮರ್ಥರಾದಾಗ ಮಾತ್ರ ಇದು ತನ್ನ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸಬಹುದು.

ಜಾರಿ ಸವಾಲುಗಳು:

  • ಸಾರ್ವತ್ರಿಕ ಪ್ರಾದೇಶಿಕ ಅಧಿಕಾರ ವ್ಯಾಪ್ತಿಯ ಕೊರತೆ – ICC ಕೇವಲ ಸದಸ್ಯ ರಾಷ್ಟ್ರಗಳೊಳಗೆ ಎಸಗಲಾದ ಅಪರಾಧಗಳನ್ನು ಮಾತ್ರ ತನಿಖೆ ಮಾಡಬಹುದು ಮತ್ತು ವಿಚಾರಣೆಗೆ ಒಳಪಡಿಸಬಹುದು.
  • ICC ತನ್ನದೇ ಆದ ಪೊಲೀಸ್ ಪಡೆಯನ್ನು ಹೊಂದಿಲ್ಲ ಮತ್ತು ಬಂಧನಗಳು ಹಾಗೂ ಹಸ್ತಾಂತರಗಳಿಗಾಗಿ ರಾಷ್ಟ್ರಗಳ ಸಹಕಾರವನ್ನು ಅವಲಂಬಿಸಿದೆ.
  • ಸದಸ್ಯೇತರ ರಾಷ್ಟ್ರಗಳಿಗೆ ಸಹಕರಿಸುವ ಯಾವುದೇ ಬಾಧ್ಯತೆ ಇರುವುದಿಲ್ಲ (ಉದಾ: ಇಸ್ರೇಲ್, ಅಮೇರಿಕಾ, ರಷ್ಯಾ, ಚೀನಾ ಮತ್ತು ಭಾರತ).

ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC) ಮತ್ತು ಅಂತರರಾಷ್ಟ್ರೀಯ ನ್ಯಾಯಾಲಯದ (ICJ) ನಡುವಿನ ವ್ಯತ್ಯಾಸ –

ಲಕ್ಷಣಗಳು

ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC)

ಅಂತರರಾಷ್ಟ್ರೀಯ ನ್ಯಾಯಾಲಯ (ICJ)

ಸ್ಥಾಪನೆ

2002 (ರೋಮ್ ಶಾಸನ, 1998)

1945 (ಯುಎನ್ ಚಾರ್ಟರ್)

ಸ್ಥಳ

ಹೇಗ್, ನೆದರ್ಲ್ಯಾಂಡ್ಸ್

ಹೇಗ್, ನೆದರ್ಲ್ಯಾಂಡ್ಸ್

ಅಧಿಕಾರ ವ್ಯಾಪ್ತಿ

ಗಂಭೀರ ಅಪರಾಧಗಳ ಆರೋಪ ಹೊತ್ತಿರುವ ವ್ಯಕ್ತಿಗಳು

ರಾಷ್ಟ್ರಗಳ ನಡುವಿನ ವಿವಾದಗಳು

ಒಳಗೊಂಡಿರುವ ಅಪರಾಧಗಳು

ನರಮೇಧ, ಯುದ್ಧ ಅಪರಾಧಗಳು, ಮಾನವೀಯತೆಯ ಮೇಲಿನ ಅಪರಾಧಗಳು, ಆಕ್ರಮಣಕಾರಿ ಅಪರಾಧ

ಕಾನೂನು ವಿವಾದಗಳು (ಸಾರ್ವಭೌಮತ್ವ, ಗಡಿಗಳು, ಒಪ್ಪಂದ ಉಲ್ಲಂಘನೆಗಳು) ಮತ್ತು ಸಲಹಾ ಅಭಿಪ್ರಾಯಗಳು

ತೀರ್ಪಿನ ಸ್ವರೂಪ

ICC ತೀರ್ಪುಗಳು ಕಾನೂನುಬದ್ಧವಾಗಿರುತ್ತವೆ ಆದರೆ ಜಾರಿಗೆ ರಾಷ್ಟ್ರದ ಸಹಕಾರವನ್ನು ಅವಲಂಬಿಸಿವೆ

ICJ ತೀರ್ಪುಗಳು ಬದ್ಧವಾಗಿರುತ್ತವೆ ಆದರೆ ನಿರ್ಲಕ್ಷಿಸಬಹುದು (ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೂಲಕ ಜಾರಿ)

ಸದಸ್ಯತ್ವ

125 ಸದಸ್ಯ ರಾಷ್ಟ್ರಗಳು (ರೋಮ್ ಶಾಸನ)

ಎಲ್ಲಾ 193 ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು

ಆಲಿಸಿದ ಪ್ರಕರಣಗಳು

ವ್ಯಕ್ತಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳು

ರಾಷ್ಟ್ರಗಳ ನಡುವಿನ ಸಿವಿಲ್ ಪ್ರಕರಣಗಳು

ಮೇಲ್ಮನವಿ

ಮೇಲ್ಮನವಿ ಕಾರ್ಯವಿಧಾನವನ್ನು ಹೊಂದಿದೆ

ಯಾವುದೇ ಔಪಚಾರಿಕ ಮೇಲ್ಮನವಿ ಪ್ರಕ್ರಿಯೆ ಇಲ್ಲ

ಮದನ್ ಲಾಲ್ ಧಿಂಗ್ರಾ

ಇತಿಹಾಸ ಮತ್ತು ಸಂಸ್ಕೃತಿ

ಇದೀಗ ಸುದ್ದಿಯಲ್ಲಿ:

  • ಆಗಸ್ಟ್ 17 ರಂದು ಭಾರತವು ಮದನ್ ಲಾಲ್ ಧಿಂಗ್ರಾ ಅವರ ಹುತಾತ್ಮ ದಿನಾಚರಣೆಯನ್ನು ಆಚರಿಸಿತು.

ಮದನ್ ಲಾಲ್ ಧಿಂಗ್ರಾ ಅವರ ಬಗ್ಗೆ: 

  • ಜನನ: 1883 ರಲ್ಲಿ ಅಮೃತಸರದಲ್ಲಿ ಜನಿಸಿದರು; ಇವರು ಲಂಡನ್‌ನ ಇಂಡಿಯಾ ಹೌಸ್‌ನೊಂದಿಗೆ ಸಂಬಂಧ ಹೊಂದಿದ್ದ ಭಾರತೀಯ ಕ್ರಾಂತಿಕಾರಿಯಾಗಿದ್ದರು.
  • ಪ್ರಭಾವ: ಇವರು ವಿ.ಡಿ. ಸಾವರ್ಕರ್ ಮತ್ತು ಕ್ರಾಂತಿಕಾರಿ ರಾಷ್ಟ್ರೀಯತಾವಾದಿ ಚಳುವಳಿಯಿಂದ ಪ್ರಭಾವಿತರಾಗಿದ್ದರು.
  • ಪ್ರಮುಖ ಘಟನೆ: 1909 ರಲ್ಲಿ ಲಂಡನ್‌ನಲ್ಲಿ ಸರ್ ವಿಲಿಯಂ ಹಟ್ ಕರ್ಜನ್ ವಿಲ್ಲಿ ಅವರನ್ನು ಹತ್ಯೆ ಮಾಡಿದರು.
  • ಮರಣ: ಲಂಡನ್‌ನ ಪೆಂಟನ್‌ವಿಲ್ಲೆ ಜೈಲಿನಲ್ಲಿ 17 ಆಗಸ್ಟ್ 1909 ರಂದು ಗಲ್ಲಿಗೇರಿಸಲಾಯಿತು.
  • ಮಹತ್ವ: ಇವರು ಕ್ರಾಂತಿಕಾರಿ ರಾಷ್ಟ್ರೀಯತೆ ಮತ್ತು ಬ್ರಿಟಿಷ್ ಆಳ್ವಿಕೆಯ ವಿರುದ್ಧದ ಪ್ರತಿರೋಧದ ಸಂಕೇತವಾದರು.

ವಾಯೇಜರ್ ಮಿಷನ್ ಗಳು (Voyager Missions)

ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿ:

  • ನಾಸಾ (NASA) ಎಂಜಿನಿಯರ್‌ಗಳು ವಾಯೇಜರ್ 2 (Voyager 2) ನಲ್ಲಿ ಹೊಸ ವಿದ್ಯುತ್ ಉಳಿಸುವ ನವೀಕರಣವನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ. ಇದು ಬಾಹ್ಯಾಕಾಶ ನೌಕೆಯ ವಿಜ್ಞಾನ ಕಾರ್ಯಾಚರಣೆಯನ್ನು ಕನಿಷ್ಠ ಒಂದು ವರ್ಷದವರೆಗೆ ವಿಸ್ತರಿಸಿದೆ.

ವಾಯೇಜರ್ ಮಿಷನ್ ಗಳ ಬಗ್ಗೆ: 

  • ಉಡಾವಣೆ: ನಾಸಾ ಸಂಸ್ಥೆಯು 1977 ರಲ್ಲಿ ವಾಯೇಜರ್ 1 ಮತ್ತು ವಾಯೇಜರ್ 2 ಅನ್ನು ಉಡಾವಣೆ ಮಾಡಿತು.
  • ಉದ್ದೇಶ: ಹೊರಗಿನ ಗ್ರಹಗಳನ್ನು ಅನ್ವೇಷಿಸುವುದು ಮತ್ತು ನಂತರ ಅಂತರತಾರಾ ಬಾಹ್ಯಾಕಾಶವನ್ನು (interstellar space) ತಲುಪುವುದು.
  • ಪ್ರಮುಖ ಸಾಧನೆಗಳು:
  • ವಾಯೇಜರ್ 1: ಗುರು, ಶನಿ ಗ್ರಹಗಳ ಅನ್ವೇಷಣೆ; ಅಂತರತಾರಾ ಬಾಹ್ಯಾಕಾಶವನ್ನು (2012) ಪ್ರವೇಶಿಸಿದ ಮಾನವ ನಿರ್ಮಿತ ಮೊದಲ ವಸ್ತು ಇದಾಗಿದೆ.
  • ವಾಯೇಜರ್ 2: ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳ ಅನ್ವೇಷಣೆ – ಯುರೇನಸ್ ಮತ್ತು ನೆಪ್ಚೂನ್ ಎರಡನ್ನೂ ಹಾದುಹೋದ ಏಕೈಕ ಬಾಹ್ಯಾಕಾಶ ನೌಕೆ ಇದಾಗಿದೆ.
  • ಗೋಲ್ಡನ್ ರೆಕಾರ್ಡ್: ಎರಡೂ ನೌಕೆಗಳು ಭೂಮಿ ಮತ್ತು ಮಾನವೀಯತೆಯನ್ನು ಪ್ರತಿನಿಧಿಸುವ ಶಬ್ದಗಳು/ಚಿತ್ರಗಳನ್ನು ಒಳಗೊಂಡಿರುವ ಗೋಲ್ಡನ್ ರೆಕಾರ್ಡ್ ಅನ್ನು ಒಯ್ಯುತ್ತಿವೆ.
  • ಶಕ್ತಿ: ರೇಡಿಯೊಐಸೋಟೋಪ್ ಥರ್ಮೋಎಲೆಕ್ಟ್ರಿಕ್ ಜನರೇಟರ್‌ಗಳು (RTGs).
  • ಮಹತ್ವ: ಇದುವರೆಗೆ ನಿರ್ಮಿಸಲಾದ ಅತ್ಯಂತ ದೂರದ ಮತ್ತು ದೀರ್ಘಕಾಲ ಕಾರ್ಯನಿರ್ವಹಿಸುತ್ತಿರುವ ಬಾಹ್ಯಾಕಾಶ ನೌಕೆಗಳಲ್ಲಿ ಇವುಗಳು ಸೇರಿವೆ.

ಸಾಸ್ಕಿ (SASCI) ಯೋಜನೆ

ಸರ್ಕಾರಿ ಯೋಜನೆಗಳು

ಇದೀಗ ಸುದ್ದಿಯಲ್ಲಿ: 

  • ಪ್ರವಾಸೋದ್ಯಮ ಸಚಿವಾಲಯವು SASCI-ಜಾಗತಿಕ ಮಟ್ಟಕ್ಕೆ ಸಾಂಪ್ರದಾಯಿಕ ಪ್ರವಾಸಿ ಕೇಂದ್ರಗಳ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಮತ್ತು ವಿವರವಾದ ಯೋಜನಾ ವರದಿ (DPR) ಮಾದರಿಯನ್ನು ಹೊರಡಿಸಿದೆ.

ಸಾಸ್ಕಿ (SASCI) ಯೋಜನೆ

  • SASCI = ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು (Special Assistance to States for Capital Investment)
  • ಪ್ರಾರಂಭ: ಹಣಕಾಸು ಸಚಿವಾಲಯವು ಇದನ್ನು 2022-23 ರಲ್ಲಿ ಪ್ರಾರಂಭಿಸಿತು.
  • ಗುರಿ: ರಾಜ್ಯಗಳಿಗೆ ದೀರ್ಘಾವಧಿಯ ಆರ್ಥಿಕ ನೆರವು ನೀಡುವ ಮೂಲಕ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವುದು.
  • ಸ್ವರೂಪ: ರಾಜ್ಯಗಳಿಗೆ 100% ಬಡ್ಡಿ-ಮುಕ್ತ ಸಾಲಗಳನ್ನು ನೀಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ 50 ವರ್ಷಗಳ ಅವಧಿಯಲ್ಲಿ ಮರುಪಾವತಿಸಬಹುದಾಗಿದೆ.
  • ಉದ್ದೇಶ: ಗುಣಮಟ್ಟದ ಮೂಲಸೌಕರ್ಯಗಳನ್ನು ಸೃಷ್ಟಿಸುವುದು, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವುದು ಮತ್ತು ಉದ್ಯೋಗವನ್ನು ಸೃಷ್ಟಿಸುವುದು.
  • ಗಮನ: ಸಾರಿಗೆ, ನೀರು ಸರಬರಾಜು, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ನಗರ ಮೂಲಸೌಕರ್ಯ ಮತ್ತು ಇತರ ಬಂಡವಾಳ ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತದೆ.
  • ಮಹತ್ವ: ಇದು ರಾಜ್ಯ ಮಟ್ಟದ ಬಂಡವಾಳ ವೆಚ್ಚವನ್ನು ಉತ್ತೇಜಿಸುತ್ತದೆ ಮತ್ತು ಭಾರತದ ಮೂಲಸೌಕರ್ಯ ಆಧಾರಿತ ಬೆಳವಣಿಗೆಯನ್ನು ಬೆಂಬಲಿಸುತ್ತದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts