ಮರುಭೂಮೀಕರಣದ ಮೇಲಿನ ಜಿ-7 ಘೋಷಣೆ
ಪರಿಸರ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಇತ್ತೀಚೆಗೆ, ‘ಜಿ-7 ಪರಿಸರ ಮಂತ್ರಿಗಳು’ ಮರುಭೂಮೀಕರಣ, ಭೂ ಸವಕಳಿ ಮತ್ತು ಬರಗಾಲವನ್ನು ತಮ್ಮ ಕಾರ್ಯಸೂಚಿಯ ಪ್ರಮುಖ ವಿಷಯಗಳನ್ನಾಗಿರಿಸಿದ್ದಾರೆ ಮತ್ತು ಈ ಪರಿಸ್ಥಿತಿಗಳನ್ನು ‘ವ್ಯವಸ್ಥಿತ ಜಾಗತಿಕ ಸವಾಲುಗಳು’ ಹಾಗೂ ‘ಭದ್ರತಾ ಅಪಾಯವನ್ನು ಹೆಚ್ಚಿಸುವ ಅಂಶಗಳು’ ಎಂದು ಕರೆದಿದ್ದಾರೆ.
ಜಿ-7 ಘೋಷಣೆಯ ಪ್ರಮುಖ ಅಂಶಗಳು:
- ಬಿಕ್ಕಟ್ಟಿನ ಪ್ರಮಾಣ: ಮರುಭೂಮೀಕರಣ, ಭೂ ಸವಕಳಿ ಮತ್ತು ಬರಗಾಲವು ಮಣ್ಣಿನ ಫಲವತ್ತತೆಯ ಕುಸಿತ, ನೀರಿನ ಕೊರತೆ ಮತ್ತು ಪರಿಸರ ವ್ಯವಸ್ಥೆಯ ಸೇವೆಗಳ ನಷ್ಟಕ್ಕೆ ಕಾರಣವಾಗುತ್ತದೆ.
- ಇದು ವಿಶೇಷವಾಗಿ ಕೃಷಿ ಆಧಾರಿತ ಆರ್ಥಿಕತೆಗಳಲ್ಲಿ ಆಹಾರ ಭದ್ರತೆ ಮತ್ತು ಜೀವನೋಪಾಯಗಳಿಗೆ ನೇರ ಅಪಾಯವನ್ನು ಒಡ್ಡುತ್ತದೆ.
- ಜಾಗತಿಕವಾಗಿ ಶೇಕಡಾ 40% ರಷ್ಟು ಭೂಮಿಯು ಅವನತಿಗೊಳಗಾಗಿದ್ದು, ಇದು ಸುಮಾರು 3.2 ಬಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತಿದೆ.
ಮರುಭೂಮೀಕರಣವನ್ನು ತಡೆಗಟ್ಟುಲು ವಿಶ್ವಸಂಸ್ಥೆಯ ಒಪ್ಪಂದ (UNCCD):
- UNCCD ವಿಸ್ತೃತ ರೂಪ: ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಟು ಕಂಬ್ಯಾಟ್ ಡಿಸೇರ್ಟಿಫಿಕೇಶನ್ (United Nations Convention to combat Desertification).
- ಸ್ಥಾಪನೆ: 1994 ರಲ್ಲಿ.
- ಉದ್ದೇಶ: ಮರುಭೂಮೀಕರಣವನ್ನು ತಡೆಗಟ್ಟುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದು ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಭೂ ನಿರ್ವಹಣೆಯನ್ನು ಬೆಸೆಯುವ ಏಕೈಕ ಕಾನೂನುಬದ್ಧ ಅಂತರರಾಷ್ಟ್ರೀಯ ಒಪ್ಪಂದವಾಗಿದೆ.
- ಮಹತ್ವ: ಭೂಮಿ ಮತ್ತು ಮಣ್ಣಿನ ಉತ್ಪಾದಕ ಸಾಮರ್ಥ್ಯವನ್ನು ಕಾಯ್ದುಕೊಳ್ಳುವುದು ಹಾಗೂ ಅದನ್ನು ವ್ಯವಸ್ಥಿತವಾಗಿ ಮರುಸ್ಥಾಪಿಸುವುದು.
- ವಿಶ್ವ ದಿನಾಚರಣೆ: ಪ್ರತಿ ವರ್ಷ ಜೂನ್ 17 ರಂದು ‘ಮರುಭೂಮೀಕರಣ ಮತ್ತು ಬರಗಾಲ ತಡೆಗಟ್ಟುಲು ವಿಶ್ವ ದಿನ’ವನ್ನಾಗಿ (WDCDD) ಜಾಗತಿಕವಾಗಿ ಆಚರಿಸಲಾಗುತ್ತದೆ.
- UNCCD COP16, 2024: ಈ ಪಕ್ಷಗಳ ಸಮ್ಮೇಳನವು ಸೌದಿ ಅರೇಬಿಯಾದ ರಿಯಾದ್ ನಲ್ಲಿ ಜರುಗಿತು. ಈ ಸಮ್ಮೇಳನದಲ್ಲಿ ಜಾಗತಿಕ ಭೂ ಮರುಸ್ಥಾಪನೆಗಾಗಿ $12 ಬಿಲಿಯನ್ ಮೊತ್ತವನ್ನು ವಾಗ್ದಾನ ಮಾಡಲಾಗಿದೆ.
- ಭಾರತದ ಹೆಜ್ಜೆ: ಇದೇ ಜಾಗತಿಕ ಸಮಾವೇಶದಲ್ಲಿ ಭಾರತವು ತನ್ನ ಮಹತ್ವಾಕಾಂಕ್ಷೆಯ ‘ಅರಾವಳಿ ಹಸಿರು ಗೋಡೆ ಯೋಜನೆ’ (Aravalli Green Wall Project)ಯನ್ನು ಪರಿಚಯಿಸಿತು.
- UNCCD COP17: ಮುಂದಿನ ಸಮ್ಮೇಳನವು ಆಗಸ್ಟ್ 2026 ರಲ್ಲಿ ಮಂಗೋಲಿಯಾದ ‘ಉಲಾನ್‌ಬಾತರ್’ ನಗರದಲ್ಲಿ ನಡೆಯಲಿದೆ.
- UNCCD COP17, 2026 ರ ಧ್ಯೇಯವಾಕ್ಯ: ‘ಭೂಮಿಯ ಮರುಸ್ಥಾಪನೆ, ಭರವಸೆಯ ಮರುಸ್ಥಾಪನೆ’ (Restoring Land, Restoring Hope).
ಭೂ ಮರುಸ್ಥಾಪನೆಗೆ ಇರುವ ಇತರೆ ಸಾಂಸ್ಥಿಕ ಕಾರ್ಯವಿಧಾನಗಳು:
- ಬಾನ್ ಚಾಲೆಂಜ್ (Bonn Challenge), 2011: ಇದು 2030 ರ ವೇಳೆಗೆ ಜಗತ್ತಿನಾದ್ಯಂತ 350 ದಶಲಕ್ಷ ಹೆಕ್ಟೇರ್ ಭೂಮಿಯನ್ನು ಮರುಸ್ಥಾಪಿಸುವ ಮಹತ್ವದ ಜಾಗತಿಕ ವಾಗ್ದಾನವಾಗಿದೆ.
- ಕುನ್ಮಿಂಗ್-ಮಾಂಟ್ರಿಯಲ್ ಜಾಗತಿಕ ಜೀವವೈವಿಧ್ಯ ಚೌಕಟ್ಟು: ಇದರ ಅಡಿಯಲ್ಲಿ ಬರುವ ಗುರಿ 2 ಮತ್ತು ಗುರಿ 11 ನೇರವಾಗಿಯೇ ಭೂ ಮರುಸ್ಥಾಪನೆಯ ನಿಬಂಧನೆಗಳನ್ನು ಒಳಗೊಂಡಿವೆ.
- ಪರಿಸರ ವ್ಯವಸ್ಥೆಯ ಮರುಸ್ಥಾಪನೆಯ ವಿಶ್ವಸಂಸ್ಥೆಯ ದಶಕ (2021–30): ಇದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಮತ್ತು ಆಹಾರ ಮತ್ತು ಕೃಷಿ ಸಂಸ್ಥೆಯ (FAO) ಜಂಟಿ ಉಪಕ್ರಮವಾಗಿದೆ.
- G20 ಜಾಗತಿಕ ಭೂ ಉಪಕ್ರಮ: 2040 ರ ವೇಳೆಗೆ ಅವನತಿಗೊಳಗಾದ ಭೂಮಿಯನ್ನು 50% ರಷ್ಟು ತಗ್ಗಿಸುವ ಭಾರತದ G20 ಅಧ್ಯಕ್ಷತೆಯ (2022) ಗುರಿಗೆ ಇದು ಪೂರಕವಾಗಿ ಹೊಂದಿಕೆಯಾಗುತ್ತದೆ.
ವಿಶ್ವ ಟ್ಯಾಪಿರ್ ದಿನ (World Tapir Day)
ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಇತ್ತೀಚೆಗೆ, ಟ್ಯಾಪಿರ್ (Tapir) ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸಲು ಜಾಗತಿಕವಾಗಿ ವಿಶ್ವ ಟ್ಯಾಪಿರ್ ದಿನವನ್ನು ಆಚರಿಸಲಾಯಿತು.
ಟ್ಯಾಪಿರ್ ಪ್ರಾಣಿಗಳ ಕುರಿತು:
- ಟ್ಯಾಪಿರ್‌ಗಳು ದೊಡ್ಡ ಗಾತ್ರದ ಸಸ್ಯಹಾರಿ ಸಸ್ತನಿಗಳಾಗಿವೆ.
- ಹಂಚಿಕೆ: ಇವು ದಕ್ಷಿಣ ಅಮೆರಿಕಾ, ಮಧ್ಯ ಅಮೆರಿಕಾ ಮತ್ತು ಆಗ್ನೇಯ ಏಷ್ಯಾದ ಕಾಡುಗಳು ಮತ್ತು ದಟ್ಟ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತವೆ.
- ಬೀಜಗಳನ್ನು ಪ್ರಸರಣ ಮಾಡುವ ಮೂಲಕ (seed dispersers) ಇವು ಪರಿಸರ ವ್ಯವಸ್ಥೆಯ ಪ್ರಮುಖ ಭಾಗವಾಗಿವೆ ಮತ್ತು ಪ್ರಾಣಿ ಸಾಮ್ರಾಜ್ಯದಲ್ಲಿ ಉಳಿದುಕೊಂಡಿರುವ ಅತ್ಯಂತ ಹಳೆಯ ಪ್ರಭೇದಗಳಲ್ಲಿ ಒಂದಾಗಿವೆ.
- ಅಪಾಯಗಳು: ಆವಾಸಸ್ಥಾನದ ನಷ್ಟ, ಬೇಟೆ ಮತ್ತು ಮಾನವನ ಅತಿಕ್ರಮಣವು ಇವುಗಳು ಎದುರಿಸುತ್ತಿರುವ ಪ್ರಮುಖ ಅಪಾಯಗಳಾಗಿವೆ.
ಇದರ ಇತರೆ ಪ್ರಭೇದಗಳು ಮತ್ತು IUCN ಕೆಂಪು ಪಟ್ಟಿಯಲ್ಲಿ ಇವುಗಳ ಸ್ಥಾನಮಾನ:
- ತಗ್ಗು ಪ್ರದೇಶದ (ಲೋಲ್ಯಾಂಡ್) ಟ್ಯಾಪಿರ್ (Tapirus terrestris): ದುರ್ಬಲ (Vu).
- ಪರ್ವತ ಪ್ರದೇಶದ (ಮೌಂಟೇನ್) ಟ್ಯಾಪಿರ್ (Tapirus pinchaque): ಅಳಿವಿನಂಚಿನಲ್ಲಿರುವ ಪ್ರಭೇದ (En).
- ಮಲಯ ಪ್ರದೇಶದ ಟ್ಯಾಪಿರ್ (Tapirus indicus): ಅಳಿವಿನಂಚಿನಲ್ಲಿರುವ ಪ್ರಭೇದ (En).
- ಬೇರ್ಡ್ಸ್ ಟ್ಯಾಪಿರ್ (Tapirus bairdii): ಅಳಿವಿನಂಚಿನಲ್ಲಿರುವ ಪ್ರಭೇದ (En).








ನಿಮ್ಮದೊಂದು ಉತ್ತರ