ಚಂದ್ರನ ನೆಲೆಯ ಕಾರ್ಯಕ್ರಮ (Moon Base Programme) | ಸಂಪೂರ್ಣ ಸೂರ್ಯಗ್ರಹಣ (Total Solar Eclipse) | ಕಪ್ಪು-ಕತ್ತಿನ ಕೊಕ್ಕರೆಗಳು (Black-necked Cranes – BNC)

ಚಂದ್ರನ ನೆಲೆಯ ಕಾರ್ಯಕ್ರಮ (Moon Base Programme)

ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿ:

  • ಆರ್ಟೆಮಿಸ್ ಒಪ್ಪಂದದ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಪಾಲುದಾರಿಕೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ, ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ತನ್ನ ‘ಚಂದ್ರನ ನೆಲೆಯ ಕಾರ್ಯಕ್ರಮ’ಕ್ಕೆ ಸೇರಲು ಇಸ್ರೋಗೆ (ISRO) ಅಧಿಕೃತ ಆಹ್ವಾನ ನೀಡಿದೆ.

ಚಂದ್ರನ ನೆಲೆ (Moon Base):

  • ಇದು ಮಾನವಕುಲದ ಮೊಟ್ಟಮೊದಲ ಚಂದ್ರನ ನೆಲೆಯಾಗಿದ್ದು, ಚಂದ್ರನ ದಕ್ಷಿಣ ಧ್ರುವದ ಬಳಿ ಗಗನಯಾತ್ರಿಗಳು ವಾಸಿಸಲು, ಕಾರ್ಯನಿರ್ವಹಿಸಲು ಮತ್ತು ಸಂಶೋಧನೆ ನಡೆಸಲು ನಿರ್ಮಿಸಲಾಗುತ್ತಿರುವ ಸ್ಥಳವಾಗಿದೆ.
  • ಜಾಗತಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಗೆ ಒತ್ತು ನೀಡುತ್ತಾ, ಚಂದ್ರನ ಮೇಲ್ಮೈಯಲ್ಲಿ ಮಾನವನ ನಿರಂತರ ಅಸ್ತಿತ್ವವನ್ನು ಬೆಂಬಲಿಸಲು ಅಗತ್ಯವಾದ ಮೂಲಸೌಕರ್ಯಗಳನ್ನು ನಾಸಾ ಮತ್ತು ಅದರ ಪಾಲುದಾರ ಸಂಸ್ಥೆಗಳು ನಿರ್ಮಿಸಲಿವೆ.

ಆರ್ಟೆಮಿಸ್ ಒಪ್ಪಂದದ ಬಗ್ಗೆ:

  • ಉದ್ದೇಶ: ಬಾಹ್ಯಾಕಾಶ ಪರಿಶೋಧನೆಯಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸಲು ರೂಪಿಸಲಾದ ತತ್ವಗಳು ಮತ್ತು ಮಾರ್ಗಸೂಚಿಗಳ ಗುಂಪನ್ನು ಇದು ಪ್ರತಿನಿಧಿಸುತ್ತದೆ.
  • ಸ್ಥಾನಮಾನ: ಈ ಒಪ್ಪಂದವು ಕಾನೂನುಬದ್ಧವಾಗಿ ಬದ್ದವಾಗಿಲ್ಲ (not legally binding).
  • ಪ್ರಾರಂಭ: 2020ರ ದಶಕದ ಮಧ್ಯಭಾಗದಲ್ಲಿ ಮಾನವರನ್ನು ಮರಳಿ ಚಂದ್ರನತ್ತ ಕಳುಹಿಸುವ ಉದ್ದೇಶ ಹೊಂದಿರುವ ನಾಸಾದ ಆರ್ಟೆಮಿಸ್ ಕಾರ್ಯಕ್ರಮದ ಹೆಸರಿನಲ್ಲಿ, 2020ರಲ್ಲಿ ನಾಸಾ ಈ ಒಪ್ಪಂದವನ್ನು ಘೋಷಿಸಿತು.
  • ಸದಸ್ಯ ರಾಷ್ಟ್ರಗಳು : ಆರ್ಟೆಮಿಸ್ ಒಪ್ಪಂದವು ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, ಜಪಾನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೆರಿಕ ಸೇರಿದಂತೆ 39 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.
  • ಭಾರತದ ಸದಸ್ಯತ್ವ: ಭಾರತವು 2023ರಲ್ಲಿ ಆರ್ಟೆಮಿಸ್ ಒಪ್ಪಂದಕ್ಕೆ ಸಹಿ ಹಾಕಿತು.
  • ಗಮನಿಸಿ: ರಷ್ಯಾ ಮತ್ತು ಚೀನಾ ರಾಷ್ಟ್ರಗಳು ಈ ಆರ್ಟೆಮಿಸ್ ಒಪ್ಪಂದದ ಭಾಗವಾಗಿಲ್ಲ.

ಸಂಪೂರ್ಣ ಸೂರ್ಯಗ್ರಹಣ (Total Solar Eclipse)

ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿ: 

  • ಇತ್ತೀಚೆಗೆ ಸಂಭವಿಸಿದ ಸಂಪೂರ್ಣ ಸೂರ್ಯಗ್ರಹಣವು ಖಗೋಳ ಗತಿಶಾಸ್ತ್ರ, ಭೂಮಿ-ಚಂದ್ರನ ವ್ಯವಸ್ಥೆ ಮತ್ತು ಸೌರ ವಿದ್ಯಮಾನಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಒಂದು ಪ್ರಮುಖ ಅವಕಾಶವನ್ನು ಒದಗಿಸಿತು.

ಸೂರ್ಯಗ್ರಹಣ ಎಂದರೇನು?

  • ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಬಂದಾಗ, ಚಂದ್ರನ ನೆರಳು ಭೂಮಿಯ ಮೇಲೆ ಬೀಳುವುದರಿಂದ ಭೂಮಿಯ ಕೆಲವು ಭಾಗಗಳಿಗೆ ಸೂರ್ಯನ ಬೆಳಕು ತಲುಪದಂತೆ ತಡೆಯಲ್ಪಡುವ ಪ್ರಕ್ರಿಯೆಯನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ.

ಸೂರ್ಯಗ್ರಹಣದ ಪ್ರಕಾರಗಳು: 

  • ಸೂರ್ಯಗ್ರಹಣಗಳನ್ನು ಮುಖ್ಯವಾಗಿ ಮೂರು ಪ್ರಕಾರಗಳಾಗಿ ವಿಂಗಡಿಸಲಾಗಿದೆ:
  • ಸಂಪೂರ್ಣ ಸೂರ್ಯಗ್ರಹಣ (Umbra – ಛಾಯೆ): ಚಂದ್ರನು ಸೂರ್ಯನ ಗೋಚರ ಭಾಗವನ್ನು ಸಂಪೂರ್ಣವಾಗಿ ನಿರ್ಬಂಧಿಸುತ್ತಾನೆ, ಇದರಿಂದಾಗಿ ಗ್ರಹಣದ ಪಥದಲ್ಲಿರುವ ಪ್ರದೇಶಗಳಲ್ಲಿ ಹಗಲಿನಲ್ಲಿಯೇ ಸ್ವಲ್ಪ ಸಮಯದವರೆಗೆ ಸಂಪೂರ್ಣ ಕತ್ತಲು ಆವರಿಸಿದ ಅನುಭವವಾಗುತ್ತದೆ.
  • ಪಾರ್ಶ್ವ ಸೂರ್ಯಗ್ರಹಣ (Penumbra – ಉಪಛಾಯೆ): ಚಂದ್ರನು ಸೂರ್ಯನ ಒಂದು ಭಾಗವನ್ನು ಮಾತ್ರ ಮರೆಮಾಡುತ್ತಾನೆ, ಇದು ಸೂರ್ಯನ ತಟ್ಟೆಯ ಒಂದು ಭಾಗವನ್ನು ಕಚ್ಚಿದಂತೆ ಕಾಣುವಂತೆ ಮಾಡುತ್ತದೆ.
  • ಕಂಕಣ ಸೂರ್ಯಗ್ರಹಣ (Antumbra – ಪ್ರಛಾಯೆ): ಚಂದ್ರನು ಭೂಮಿಯಿಂದ ಅತ್ಯಂತ ದೂರದ ಕಕ್ಷೆಯನ್ನು ಸಮೀಪಿಸುತ್ತಿರುವಾಗ, ಅದರ ಗೋಚರ ಗಾತ್ರವು ಸೂರ್ಯನಿಗಿಂತ ಚಿಕ್ಕದಾಗಿರುತ್ತದೆ. ಇದರಿಂದಾಗಿ ಸೂರ್ಯನ ಹೊರಭಾಗವು ಪ್ರಕಾಶಮಾನವಾದ ಉಂಗುರದಂತೆ ಗೋಚರಿಸುತ್ತದೆ, ಇದನ್ನು ಸಾಮಾನ್ಯವಾಗಿ ‘ರಿಂಗ್ ಆಫ್ ಫೈರ್’ ಎಂದು ಕರೆಯಲಾಗುತ್ತದೆ.

ಕಪ್ಪು-ಕತ್ತಿನ ಕೊಕ್ಕರೆಗಳು (Black-necked Cranes – BNC)

ಪರಿಸರ

ಇದೀಗ ಸುದ್ದಿಯಲ್ಲಿ

  • ಲಡಾಖ್‌ನಲ್ಲಿ ಕಪ್ಪು-ಕತ್ತಿನ ಕೊಕ್ಕರೆಗಳು (BNC) ಮತ್ತು ಇತರ ವನ್ಯಜೀವಿಗಳನ್ನು ರಕ್ಷಿಸುವ ಉದ್ದೇಶದಿಂದ, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯು (BNHS) 2,950ಕ್ಕೂ ಹೆಚ್ಚು ಮುಕ್ತವಾಗಿ ತಿರುಗಾಡುವ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದೆ.

ಕಪ್ಪು-ಕತ್ತಿನ ಕೊಕ್ಕರೆ (Grus nigricollis):

  • ಪ್ರಪಂಚದಾದ್ಯಂತ ಕಂಡುಬರುವ 15 ಕೊಕ್ಕರೆ ಪ್ರಭೇದಗಳಲ್ಲಿ ಇದು ಕೂಡ ಒಂದಾಗಿದೆ.
  • ಇದು ಎತ್ತರದ ಪ್ರದೇಶ ಅಥವಾ ಆಲ್ಪೈನ್ ಪ್ರದೇಶದಲ್ಲಿ ಮಾತ್ರ ಕಂಡುಬರುವ ಏಕೈಕ ಕೊಕ್ಕರೆ ಪ್ರಭೇದವೆಂದು ಪರಿಗಣಿಸಲಾಗಿದೆ.
  • ಆವಾಸಸ್ಥಾನ ಮತ್ತು ಹಂಚಿಕೆ: ಭಾರತದಲ್ಲಿ, ಈ ಕೊಕ್ಕರೆಗಳು ಪ್ರಮುಖವಾಗಿ ಲಡಾಖ್ ಮತ್ತು ಅರುಣಾಚಲ ಪ್ರದೇಶದ ಎತ್ತರದ ಜೌಗು ಪ್ರದೇಶಗಳು ಮತ್ತು ಕೆಸರು ಭೂಮಿಯಲ್ಲಿ ಕಂಡುಬರುತ್ತವೆ.
  • ಇವುಗಳ ಭೌಗೋಳಿಕ ವ್ಯಾಪ್ತಿಯು ಟಿಬೆಟ್ ಪ್ರಸ್ಥಭೂಮಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಹಿಮಾಲಯ ಪ್ರದೇಶಗಳಾದ ಚೀನಾ, ಭಾರತ, ಭೂತಾನ್ ಮತ್ತು ನೇಪಾಳದಾದ್ಯಂತ ವಿಸ್ತರಿಸಿದೆ.
  • ಜನಸಂಖ್ಯೆ: ವಿಶ್ವಾದ್ಯಂತ ಸುಮಾರು 15,000 ಕಪ್ಪು-ಕತ್ತಿನ ಕೊಕ್ಕರೆಗಳಿದ್ದು, ಈ ಪೈಕಿ ಭಾರತದಲ್ಲಿ ಕೇವಲ 100ಕ್ಕೂ ಕಡಿಮೆ ಕೊಕ್ಕರೆಗಳು ಉಳಿದಿವೆ ಎಂದು ಅಂದಾಜಿಸಲಾಗಿದೆ.
  • ಪ್ರಮುಖ ಬೆದರಿಕೆಗಳು: ಮುಕ್ತವಾಗಿ ತಿರುಗಾಡುವ ನಾಯಿಗಳ ದಾಳಿ, ಬದಲಾಗುತ್ತಿರುವ ಕೃಷಿ ಪದ್ಧತಿಗಳು ಮತ್ತು ಎತ್ತರದ ಜೌಗು ಪ್ರದೇಶಗಳ ಸುತ್ತಮುತ್ತ ನಡೆಯುತ್ತಿರುವ ಅನಿಯಂತ್ರಿತ ನಗರೀಕರಣವು ಇವುಗಳ ಅಸ್ತಿತ್ವಕ್ಕೆ ದೊಡ್ಡ ಬೆದರಿಕೆಯಾಗಿದೆ.

ಸಂರಕ್ಷಣಾ ಸ್ಥಾನಮಾನ:

  • ಈ ಪ್ರಭೇದವು ವನ್ಯಜೀವಿ (ರಕ್ಷಣೆ) ಕಾಯ್ದೆ 1972 ರ ಶೆಡ್ಯೂಲ್-1 ರ ಅಡಿಯಲ್ಲಿ ಅತ್ಯುನ್ನತ ಕಾನೂನು ರಕ್ಷಣೆಯನ್ನು ಪಡೆದಿದೆ.
  • IUCN ಕೆಂಪು ಪಟ್ಟಿ: ಅಪಾಯದ ಅಂಚಿನಲ್ಲಿರುವ (NT) ಪ್ರಭೇದ.
  • ಇದು ಸೈಟ್ಸ್ (CITES) ಮತ್ತು ವಲಸೆ ಪ್ರಭೇದಗಳ ಸಂರಕ್ಷಣಾ ಸಮಾವೇಶದ (CMS) ಅಡಿಯಲ್ಲಿಯೂ ರಕ್ಷಣೆಯನ್ನು ಹೊಂದಿದೆ.
  • ರಾಜ್ಯ ಪಕ್ಷಿ: ಇದು ಲಡಾಖ್‌ನ ರಾಜ್ಯ ಪಕ್ಷಿಯಾಗಿದ್ದು, ಲಡಾಖ್‌ನ ಬೌದ್ಧ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನಮಾನವನ್ನು ಹೊಂದಿದೆ.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ಬಗ್ಗೆ: 

  • BNHS ಪ್ರಕೃತಿ ಸಂರಕ್ಷಣೆ ಮತ್ತು ಜೀವವೈವಿಧ್ಯ ಸಂಶೋಧನೆಗೆ ಮೀಸಲಾಗಿರುವ ಭಾರತದ ಅತಿದೊಡ್ಡ ಹಾಗೂ ಹಳೆಯ ಸರ್ಕಾರೇತರ ಸಂಸ್ಥೆಗಳಲ್ಲಿ (NGO) ಒಂದಾಗಿದೆ.
  • ಸೆಪ್ಟೆಂಬರ್ 15, 1883ರಂದು ಮುಂಬೈನಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಸಂಶೋಧನೆ, ಶಿಕ್ಷಣ ಮತ್ತು ಸಾರ್ವಜನಿಕ ಜಾಗೃತಿಯ ಮೂಲಕ ಪ್ರಕೃತಿಯನ್ನು ಸಂರಕ್ಷಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts