ರಾಜ್ಯ ಶಿಕ್ಷಣ ನೀತಿ (SEP) ಪರಿಶೀಲನೆಗೆ ಸಚಿವ ಸಂಪುಟ ಉಪಸಮಿತಿ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಕರ್ನಾಟಕ ಸರ್ಕಾರವು ‘ರಾಜ್ಯ ಶಿಕ್ಷಣ ನೀತಿ’ (SEP) ವರದಿಯನ್ನು ಪರಿಶೀಲಿಸಲು ಮತ್ತು ಅದರ ಅನುಷ್ಠಾನಕ್ಕೆ ಯೋಜನೆ ರೂಪಿಸಲು ಆರು ಸದಸ್ಯರ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದೆ.
ಪ್ರಮುಖ ವಿವರಗಳು:
- ಅಧ್ಯಕ್ಷರು: ಗೃಹ ಸಚಿವರಾದ ಜಿ. ಪರಮೇಶ್ವರ.
- ಕಾರ್ಯಯೋಜನೆ: ಪ್ರೊ. ಸುಖದೇವ್ ಥೋರಟ್ ಅವರು ಸಲ್ಲಿಸಿರುವ 8-ಸಂಪುಟಗಳ ವಿಸ್ತೃತ ರಾಜ್ಯ ಶಿಕ್ಷಣ ನೀತಿ’ (SEP) ವರದಿಯನ್ನು ವಿಮರ್ಶಿಸುವುದು.
- ಪ್ರಮುಖ ಆದ್ಯತೆ: ವಿಶ್ವವಿದ್ಯಾಲಯದ ಸುಧಾರಣೆಗಳು ಹಾಗೂ ಯೋಜನೆಗೆ ಅಗತ್ಯವಿರುವ ವಾರ್ಷಿಕ ₹10,000+ ಕೋಟಿ ಬಜೆಟ್ ಅವಶ್ಯಕತೆಯನ್ನು ಮೌಲ್ಯಮಾಪನ ಮಾಡುವುದು.
ಕರ್ನಾಟಕ ರಾಜ್ಯ ಶಿಕ್ಷಣ ನೀತಿ (SEP) ಆಯೋಗ:
- ಇದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ಮಾಜಿ ಅಧ್ಯಕ್ಷರಾದ ಪ್ರೊ. ಸುಖದೇವ್ ಥೋರಟ್ ಅವರ ನೇತೃತ್ವದಲ್ಲಿದೆ.
- ಇದು ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಶಿಕ್ಷಣ ನೀತಿ (NEP) 2020’ ಕ್ಕೆ ಪರ್ಯಾಯವಾಗಿ ರಾಜ್ಯ ಸರ್ಕಾರ ರೂಪಿಸಿರುವ ನೀತಿಯಾಗಿದೆ.
SEP ವರದಿಯ ಪ್ರಮುಖ ಶಿಫಾರಸುಗಳು:
ಹೊಸ ಶಾಲಾ ರಚನೆ (New School Structure – 2+8+4 ಮಾದರಿ):
- ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (NEP) ಸೂಚಿಸಿದ್ದ 5+3+3+4 ವಿನ್ಯಾಸವನ್ನು ಈ ಆಯೋಗವು ತಿರಸ್ಕರಿಸಿದೆ. ಬದಲಾಗಿ, ಶಾಲಾ ಹಂತವನ್ನು ಸುಲಭಗೊಳಿಸಲು 2+8+4 ಮಾದರಿಯ ರಚನೆಯನ್ನು ಶಿಫಾರಸು ಮಾಡಿದೆ:
- 2 ವರ್ಷಗಳು: ಪೂರ್ವ-ಪ್ರಾಥಮಿಕ ಶಿಕ್ಷಣ.
- 8 ವರ್ಷಗಳು: ಪ್ರಾಥಮಿಕ ಶಿಕ್ಷಣ. ಇದರಲ್ಲಿ 1ನೇ ತರಗತಿಯ ಪ್ರವೇಶಾತಿ ವಯಸ್ಸನ್ನು 6 ವರ್ಷಗಳಿಗೆ ಕಡ್ಡಾಯಗೊಳಿಸಲಾಗಿದೆ.
- 4 ವರ್ಷಗಳು: ಪ್ರೌಢ ಶಿಕ್ಷಣ.
ಶಿಕ್ಷಣ ಹಕ್ಕು ಕಾಯ್ದೆ(RTE)ಯ ವಿಸ್ತರಣೆ:
- ಪ್ರಸ್ತುತ ಇರುವ ಶಿಕ್ಷಣ ಹಕ್ಕು ಕಾಯ್ದೆಯ (RTE Act) ವ್ಯಾಪ್ತಿಯನ್ನು 4 ರಿಂದ 18 ವರ್ಷದವರೆಗಿನ (ಪೂರ್ವ-ಪ್ರಾಥಮಿಕದಿಂದ ಪ್ರೌಢ ಶಿಕ್ಷಣದವರೆಗೆ) ಮಕ್ಕಳಿಗೆ ವಿಸ್ತರಿಸಲು ಶಿಫಾರಸು ಮಾಡಲಾಗಿದೆ.
ದ್ವಿಭಾಷಾ ನೀತಿ:
- ಈ ವರದಿಯು ಸಾಂಪ್ರದಾಯಿಕ ‘ತ್ರಿಭಾಷಾ ಸೂತ್ರ’ವನ್ನು ಕೈಬಿಟ್ಟು, ಕಟ್ಟುನಿಟ್ಟಾದ ‘ದ್ವಿಭಾಷಾ ಚೌಕಟ್ಟನ್ನು’ ಅಳವಡಿಸಿಕೊಳ್ಳಲು ಒಲವು ತೋರಿದೆ.
- ಬೋಧನಾ ಮಾಧ್ಯಮ: 5ನೇ ತರಗತಿಯವರೆಗೆ ಕನ್ನಡ ಅಥವಾ ವಿದ್ಯಾರ್ಥಿಯ ಮಾತೃಭಾಷೆಯನ್ನು ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸಿದೆ. ಅಲ್ಲದೆ, 12ನೇ ತರಗತಿಯವರೆಗೆ (ದ್ವಿತೀಯ ಪಿಯುಸಿ) ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹಿಸಲು ಸೂಚಿಸಿದೆ.
- ದ್ವಿಭಾಷಾ ಚೌಕಟ್ಟು: ಶಾಲಾ ಪಠ್ಯಕ್ರಮವು ವಿದ್ಯಾರ್ಥಿಯ ಸ್ಥಳೀಯ ಭಾಷೆ ಅಥವಾ ಮಾತೃಭಾಷೆಯ ಜೊತೆಗೆ ಇಂಗ್ಲಿಷ್ ಭಾಷೆಯನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಲಿದೆ.








ನಿಮ್ಮದೊಂದು ಉತ್ತರ