ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು (MCQs)
1. ಜನ್ಜಾತಿಯ ಗೌರವ್ ದಿವಸ್ (Janjatiya Gaurav Divas) ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ಪ್ರತಿ ವರ್ಷ ನವೆಂಬರ್ 15 ರಂದು ಆಚರಿಸಲಾಗುತ್ತದೆ.
- ಈ ದಿನವು ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯನ್ನು ಸೂಚಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ವೆ?
A. 1 ಮಾತ್ರ
B. 2 ಮಾತ್ರ
C. 1 ಮತ್ತು 2 ಎರಡೂ
D. 1 ಅಥವಾ 2 ಎರಡೂ ಅಲ್ಲ
ಉತ್ತರ: C
2. ಹಿಂದೂ ಕುಶ್ ಹಿಮಾಲಯ (HKH) ಪ್ರದೇಶದ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಏಷ್ಯಾದ 8 ದೇಶಗಳಾದ್ಯಂತ ವಿಸ್ತರಿಸಿದೆ.
- ಇದು ಸಿಂಧೂ ಮತ್ತು ಮೆಕಾಂಗ್ ನದಿ ವ್ಯವಸ್ಥೆಗಳ ಮೂಲ ಪ್ರದೇಶವಾಗಿದೆ.
- ಇದು ವಿಶ್ವದ ಜನಸಂಖ್ಯೆಯ ಸುಮಾರು ನಾಲ್ಕನೇ ಒಂದು ಭಾಗದಷ್ಟು ಜನರಿಗೆ ಸಿಹಿನೀರಿನ ಸಂಪನ್ಮೂಲಗಳನ್ನು ಒದಗಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
ಉತ್ತರ: D
3. ಭಾರತವು ಕಲ್ಲಿದ್ದಲಿಗೆ ಸಂಬಂಧಿಸಿದಂತೆ ಜಗತ್ತಿನಲ್ಲಿ ಈ ಕೆಳಗಿನ ಯಾವ ಸ್ಥಾನವನ್ನು ಹೊಂದಿದೆ?
A. ಜಗತ್ತಿನ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಕ ಮತ್ತು ಗ್ರಾಹಕ ದೇಶವಾಗಿದೆ.
B. ಜಗತ್ತಿನಲ್ಲಿ ಎರಡನೇ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಕ ಮತ್ತು ಗ್ರಾಹಕ ದೇಶವಾಗಿದೆ.
C. ಜಗತ್ತಿನಲ್ಲಿ ಮೂರನೇ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಕ ಮತ್ತು ಗ್ರಾಹಕ ದೇಶವಾಗಿದೆ.
D. ಜಗತ್ತಿನಲ್ಲಿ ಐದನೇ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಕ ಮತ್ತು ಗ್ರಾಹಕ ದೇಶವಾಗಿದೆ.
ಉತ್ತರ: B
4. ಡಾರ್ಕ್ ಪ್ಯಾಟರ್ನ್ಸ್ (Dark Patterns)ಗಳಿಗೆ ಸಂಬಂಧಿಸಿದ ಭಾರತದ ಕಾನೂನು ಚೌಕಟ್ಟಿನ ಉಲ್ಲೇಖದೊಂದಿಗೆ, ಈ ಕೆಳಗಿನವುಗಳನ್ನು ಪರಿಗಣಿಸಿ:
- ಗ್ರಾಹಕ ಸಂರಕ್ಷಣಾ ಕಾಯ್ದೆ, 2019
- ಗ್ರಾಹಕ ಸಂರಕ್ಷಣಾ (ಇ-ಕಾಮರ್ಸ್) ನಿಯಮಗಳು, 2020
- ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ, 2023
ಮೇಲಿನವುಗಳಲ್ಲಿ ಯಾವುದು/ವು ಡಾರ್ಕ್ ಪ್ಯಾಟರ್ನ್ಸ್ ನಿಂದ ಉದ್ಭವಿಸುವ ಕಾಳಜಿಗಳನ್ನು ಪರಿಹರಿಸಲು ಸಹಾಯ ಮಾಡುವ ನಿಬಂಧನೆಗಳನ್ನು ಒಳಗೊಂಡಿದೆ/ವೆ?
A. 1 ಮಾತ್ರ
B. 1 ಮತ್ತು 2 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
ಉತ್ತರ: D
5. ಈ ಕೆಳಗಿನ ಯಾವ ವಿದ್ಯಮಾನವು ಭಾರತದಲ್ಲಿ ಮಾನ್ಸೂನ್ ಋತುವಿನ (Monsoon season) ಅಧಿಕೃತ ಆರಂಭವನ್ನು ಸೂಚಿಸುತ್ತದೆ?
A. ಪಶ್ಚಿಮ ಅಡೆತಡೆಗಳ (ಪ್ರಕ್ಷುಬ್ಧತೆಗಳ) (Western disturbances) ಹಿಂದಿರುಗುವಿಕೆ.
B. ಕೇರಳಕ್ಕೆ ನೈಋತ್ಯ ಮಾನ್ಸೂನ್ ಮಾರುತಗಳ ಆಗಮನ.
C. ಬಂಗಾಳಕೊಲ್ಲಿಯಲ್ಲಿ ಉಷ್ಣವಲಯದ ಚಂಡಮಾರುತಗಳ ರಚನೆ.
D. ತಮಿಳುನಾಡಿನ ಮೇಲೆ ಈಶಾನ್ಯ ಮಾನ್ಸೂನ್ ಆರಂಭ.
ಉತ್ತರ: B

ನಿಮ್ಮದೊಂದು ಉತ್ತರ