ಬೆಂಗಳೂರು ಜಗತ್ತಿನ 2ನೇ ಅತಿ ಹೆಚ್ಚು ಸಂಚಾರ ದಟ್ಟಣೆಯ ನಗರ : ಟಾಮ್-ಟಾಮ್ ಟ್ರಾಫಿಕ್ ಸೂಚ್ಯಂಕ

ಬೆಂಗಳೂರು ಜಗತ್ತಿನ 2ನೇ ಅತಿ ಹೆಚ್ಚು ಸಂಚಾರ ದಟ್ಟಣೆಯ ನಗರ : ಟಾಮ್-ಟಾಮ್ ಟ್ರಾಫಿಕ್ ಸೂಚ್ಯಂಕ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾಪರಿಶೋಧಕ ( (CAG) ಹಾಗೂ ‘ಟಾಮ್-ಟಾಮ್ ಟ್ರಾಫಿಕ್ ಸೂಚ್ಯಂಕ’ ದ ಅಂಕಿ ಅಂಶಗಳ ಪ್ರಕಾರ, ಜಾಗತಿಕ ಸರಾಸರಿ ಸಂಚಾರ ದಟ್ಟಣೆ (ಟ್ರಾಫಿಕ್) ಸೂಚ್ಯಂಕವು ಶೇಕಡಾ 20% ರಿಂದ 25% ಕ್ಕೆ ಏರಿಕೆಯಾಗಿದ್ದು, ಪ್ರಪಂಚದಾದ್ಯಂತ 5 ಶೇಕಡಾವಾರು ಅಂಕಗಳ ಹೆಚ್ಚಳವನ್ನು ದಾಖಲಿಸಿದೆ.
  • ಜಾಗತಿಕ ಶ್ರೇಯಾಂಕ: ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೆಕ್ಸಿಕೋ ನಗರದ ನಂತರ ಬೆಂಗಳೂರು 2ನೇ ಸ್ಥಾನದಲ್ಲಿದೆ.
  • ಬೆಂಗಳೂರು ನಗರವು ನಿಶ್ಚಿತ ಮೂಲಸೌಕರ್ಯ ಯೋಜನೆಗಳು, ವಿಸ್ತರಿತ ಸಾರಿಗೆ ವ್ಯವಸ್ಥೆ ಮತ್ತು ನೀತಿ ಬದಲಾವಣೆಗಳ ಮೂಲಕ ಈ ಸಂಚಾರ ದಟ್ಟಣೆಯ ಸಮಸ್ಯೆಯನ್ನು ನಿಭಾಯಿಸಲು ಮುಂದಾಗಿದೆ.

ಮೂಲಸೌಕರ್ಯಗಳ ಸಮಗ್ರ ನವೀಕರಣ:

  • ಉನ್ನತೀಕರಿಸಿದ ಕಾರಿಡಾರ್‌ಗಳು: ಪ್ರಮುಖ ಮುನ್ಸಿಪಲ್ ವಲಯಗಳಾದ್ಯಂತ 11 ಹೊಸ ಮೇಲ್ಸೇತುವೆಗಳ ನಿರ್ಮಾಣ.
  • ಭೂಗತ ಸುರಂಗ ಮಾರ್ಗಗಳು: ನಗರದ ಪ್ರಮುಖ ಕೇಂದ್ರಗಳನ್ನು ಬೆಸೆಯಲು 170-ಕಿ.ಮೀ ಉದ್ದದ ಸುರಂಗ ಜಾಲದ ಯೋಜನೆ.
  • ಹೊರವರ್ತುಲ ರಸ್ತೆ : ನಗರದೊಳಗಿನ ಭಾರಿ ವಾಹನಗಳ ಸಂಚಾರವನ್ನು ಹೊರಗೆ ತಿರುಗಿಸಲು 117-ಕಿ.ಮೀ ಉದ್ದದ ಬೈಪಾಸ್ ಕಾರಿಡಾರ್ (ಹೊರವಲಯದ ಮಾರ್ಗ)

ಸಾರ್ವಜನಿಕ ಸಾರಿಗೆ ವಿಸ್ತರಣೆ:

  • ಮೆಟ್ರೋ ವಿಸ್ತರಣೆ: ಪ್ರಮುಖ ಐಟಿ/ಟೆಕ್ ಹಬ್‌ಗಳಿಗೆ ‘ನಮ್ಮ ಮೆಟ್ರೋ’ ಮಾರ್ಗಗಳ ವಿಸ್ತರಣೆ.
  • ಉಪನಗರ ರೈಲು: ನಗರದೊಳಗೆ ವಾಹನಗಳ ದೈನಂದಿನ ಪ್ರವೇಶವನ್ನು ತಗ್ಗಿಸಲು ದೂರದ ಪಟ್ಟಣಗಳಿಗೆ ರೈಲು ಸಂಪರ್ಕ ಕಲ್ಪಿಸುವುದು.
  • ಬಸ್ ನಿಲ್ದಾಣಗಳ ವಿಕೇಂದ್ರೀಕರಣ: ಹೊರಗಿನಿಂದ ಬರುವ ಬಸ್ ಟರ್ಮಿನಲ್‌ಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸುವುದು.

ನೀತಿ ಮತ್ತು ಸ್ಥಳೀಯ ಪರಿಹಾರಗಳು:

  • ಕಾರ್ಪೊರೇಟ್ ವಲಯದ ಸ್ಥಳಾಂತರ: ಟೆಕ್ ಕಂಪನಿಗಳನ್ನು ಟೈರ್ -2 ನಗರಗಳಿಗೆ ಸ್ಥಳಾಂತರಿಸಲು ಉತ್ತೇಜನ ನೀಡುವುದು.
  • ಜಂಕ್ಷನ್‌ಗಳ ದುರಸ್ತಿ: ವಾಹನ ದಟ್ಟಣೆ ಉಂಟಾಗುವ ರಸ್ತೆ ತಡೆಗಳನ್ನು ಮರುವಿನ್ಯಾಸಗೊಳಿಸುವುದು ಮತ್ತು ಟ್ರಾಫಿಕ್ ಸಿಗ್ನಲ್‌ಗಳನ್ನು ಸಮನ್ವಯಗೊಳಿಸುವುದು.
  • ಪಾರ್ಕಿಂಗ್ ನಿಯಮಗಳ ಜಾರಿ: ರಸ್ತೆ ಸಂಚಾರಕ್ಕೆ ಅಡ್ಡಿಯಾಗುವ ವಾಹನಗಳ ವಿರುದ್ಧ ಕಟ್ಟುನಿಟ್ಟಾದ ಟೋಯಿಂಗ್ ಮತ್ತು ದಂಡ ವಿಧಿಸುವ ವ್ಯವಸ್ಥೆಗಳನ್ನು ಮರುಸ್ಥಾಪಿಸುವುದು.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts