ಪ್ರಾಜೆಕ್ಟ್ ಚೇತಕ್ – BRO
ರಕ್ಷಣೆ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆಯ (BRO) ಪ್ರಮುಖ ಯೋಜನೆಯಾದ ‘ಪ್ರಾಜೆಕ್ಟ್ ಚೇತಕ್’ ತನ್ನ 47ನೇ ಸಂಸ್ಥಾಪನಾ ದಿನವನ್ನು ಇತ್ತೀಚಿಗೆ ಆಚರಿಸಿಕೊಂಡಿತು.
‘ಪ್ರಾಜೆಕ್ಟ್ ಚೇತಕ್’ನ ಬಗ್ಗೆ:
- ಇದು ಭೌಗೋಳಿಕ ವಿಸ್ತೀರ್ಣದ ಆಧಾರದ ಮೇಲೆ, ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆಯ (BRO) ಅತಿದೊಡ್ಡ ಯೋಜನೆಗಳಲ್ಲಿ ಒಂದಾಗಿದೆ.
- 1980 ರಲ್ಲಿ ಸ್ಥಾಪನೆಯಾದ ಯೋಜನೆ:- ರಾಜಸ್ಥಾನ, ಪಂಜಾಬ್ ಮತ್ತು ಗುಜರಾತಿನ ಉತ್ತರ ಭಾಗಗಳಲ್ಲಿ ರಸ್ತೆ ಜಾಲಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
- ಇದು ಅಂತರರಾಷ್ಟ್ರೀಯ ಗಡಿಯ ಕಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನು ನಿರ್ವಹಿಸುವ ಮೂಲಕ ಭಾರತೀಯ ರಕ್ಷಣಾ ಪಡೆಗಳಿಗೆ ಬೆಂಬಲ ನೀಡುತ್ತದೆ.
‘ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ’ (BRO)ಯ ಬಗ್ಗೆ:
- ಸ್ಥಾಪನೆ:- ಪಂಡಿತ್ ಜವಾಹರಲಾಲ್ ನೆಹರೂ ಅವರು 1960 ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು.
- ಉದ್ದೇಶ:- ದೇಶದ ಉತ್ತರ ಮತ್ತು ಈಶಾನ್ಯ ಗಡಿ ಪ್ರದೇಶಗಳಲ್ಲಿ ಸಮರ್ಪಕವಾದ ರಸ್ತೆ ಸಂಪರ್ಕ ಜಾಲದ ತ್ವರಿತ ಅಭಿವೃದ್ಧಿಯನ್ನು ಸಂಯೋಜಿಸುವುದು.
- ಆಡಳಿತಾತ್ಮಕ ನಿಯಂತ್ರಣ:- ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯ
- ಪ್ರಾಮುಖ್ಯತೆ:- ಬದ್ಧತೆ, ಸಮರ್ಪಣಾ ಭಾವ ಮತ್ತು ವೆಚ್ಚ-ಪರಿಣಾಮಕಾರಿಯಾದ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ನಿರ್ವಹಣೆಯ ಮೂಲಕ ಸಶಸ್ತ್ರ ಪಡೆಗಳ ಕಾರ್ಯತಂತ್ರದ ಅಗತ್ಯಗಳನ್ನು ಪೂರೈಸಲು ಇದು ನೆರವಾಗುತ್ತದೆ.
- ಇತ್ತೀಚಿನ ಮತ್ತು ಮುಂದಿನ ಯೋಜನೆಗಳು:- ಅರುಣಾಚಲ ಪ್ರದೇಶದ ಬಾಲಿಪಾರಾ-ಚಾರಿದುವಾರ್-ತವಾಂಗ್ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ‘ಸೆಲಾ ಸುರಂಗ’ ಯೋಜನೆ.
ಬಯೋನೆಸ್ಟ್ (BioNEST)
ವಿಜ್ಞಾನ ಮತ್ತು ತಂತ್ರಜ್ಞಾನ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಇತ್ತೀಚೆಗೆ, ಮೈಸೂರಿನ CSIR-CFTRI ನಲ್ಲಿ ‘ಬಿರಾಕ್-ಬಯೋನೆಸ್ಟ್ ಸಂವರ್ಧನಾ ಕೇಂದ್ರ’ (BIRAC-BioNEST Incubation Centre) ವನ್ನು ಉದ್ಘಾಟಿಸಲಾಗಿದೆ.
- ಪ್ರೋಬಯಾಟಿಕ್ಸ್ (Probiotics) ಹಾಗೂ ಪೋಸ್ಟ್ಬಯಾಟಿಕ್ಸ್ (Postbiotics) ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದು ಈ ಕೇಂದ್ರದ ಪ್ರಮುಖ ಉದ್ದೇಶವಾಗಿದೆ.
ಬಿರಾಕ್-ಬಯೋನೆಸ್ಟ್ ಸಂವರ್ಧನಾ ಕೇಂದ್ರ’ದ ಬಗ್ಗೆ:
- ಉದ್ದೇಶ:- ಆಹಾರ ಜೈವಿಕ ಸಂಸ್ಕರಣೆ, ಜೈವಿಕ ತಂತ್ರಜ್ಞಾನ ಸಂಶೋಧನೆ, ಯೋಜನೆಗಳ ವಿಸ್ತರಣೆ ಮತ್ತು ನಿಯಂತ್ರಕ ಬೆಂಬಲವನ್ನು ಒದಗಿಸುವುದು.
- ವೈಜ್ಞಾನಿಕ ಸಂಶೋಧನೆಗಳನ್ನು ಮಾರುಕಟ್ಟೆಗೆ ಸಿದ್ಧವಾಗಿರುವ ಉತ್ಪನ್ನಗಳಾಗಿ ಪರಿವರ್ತಿಸುವುದು ಇದರ ಪ್ರಮುಖ ಗುರಿಯಾಗಿದೆ.
- ಗುರಿಪಡಿಸಿದ ಕ್ಷೇತ್ರಗಳು:- ನ್ಯೂಟ್ರಾಸ್ಯುಟಿಕಲ್ಸ್, ನಿಖರ ಕಿಣ್ವನ/ಹುದುಗುವಿಕೆ, ಕ್ರಿಸ್ಪರ್ (CRISPR) ಆಧಾರಿತ ತಂತ್ರಜ್ಞಾನಗಳು ಮತ್ತು ಸಸ್ಯಶಾಸ್ತ್ರದ ಉತ್ಪನ್ನಗಳಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ನವೋದ್ಯಮಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.
|
ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (CFTRI), ಮೈಸೂರು |
ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವು ಮಂಡಳಿ (BIRAC) |
|
CFTRI ಸಂಪೂರ್ಣ ರೂಪ:- ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್. |
BIRAC ಸಂಪೂರ್ಣ ರೂಪ:- ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್. |
|
ಇದು ನವದೆಹಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR)ಯ ಅಡಿಯಲ್ಲಿ ಬರುವ ಪ್ರಮುಖ ಅಂಗ ಸಂಸ್ಥೆ ಮತ್ತು ಪ್ರಯೋಗಾಲಯವಾಗಿದೆ. |
ಇದು ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ (DBT) ಅಡಿಯಲ್ಲಿ ಸ್ಥಾಪಿಸಲಾದ ಲಾಭರಹಿತ ಸಾರ್ವಜನಿಕ ವಲಯದ ಉದ್ಯಮವಾಗಿದೆ. |
|
ಈ ಸಂಸ್ಥೆಯು 1950 ರಲ್ಲಿ ಅಸ್ತಿತ್ವಕ್ಕೆ ಬಂದಿತು. |
|
|
ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಆಳವಾದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳುವುದು ಇದರ ಪ್ರಮುಖ ಧ್ಯೇಯವಾಗಿದೆ. |
ರಾಷ್ಟ್ರೀಯವಾಗಿ ಅಗತ್ಯವಿರುವ ಉತ್ಪನ್ನಗಳ ಅಭಿವೃದ್ಧಿಯನ್ನು ಪೂರೈಸಲು ಮತ್ತು ಕಾರ್ಯತಂತ್ರದ ಸಂಶೋಧನೆ ಹಾಗೂ ನಾವೀನ್ಯತೆಯನ್ನು ಕೈಗೊಳ್ಳಲು ಇದು ಉದಯೋನ್ಮುಖ ಜೈವಿಕ ತಂತ್ರಜ್ಞಾನ ಉದ್ಯಮಗಳನ್ನು ಬಲಪಡಿಸುತ್ತದೆ ಮತ್ತು ಸಬಲೀಕರಣಗೊಳಿಸುತ್ತದೆ. |
|
ಸಂಶೋಧನೆಯ ಪ್ರಮುಖ ಕ್ಷೇತ್ರಗಳು: 1. ಎಂಜಿನಿಯರಿಂಗ್ ವಿಜ್ಞಾನಗಳು 2. ತಂತ್ರಜ್ಞಾನ ಅಭಿವೃದ್ಧಿ 3. ಭಾಷಾಂತರ ಸಂಶೋಧನೆ 4. ಆಹಾರ ಸಂರಕ್ಷಣೆ ಮತ್ತು ಸುರಕ್ಷತೆ |
|
|
ಸಂಪನ್ಮೂಲ ಕೇಂದ್ರಗಳು:- ಹೈದರಾಬಾದ್, ಲಕ್ನೋ ಮತ್ತು ಮುಂಬೈ. |
ಭಾರತ ಜನಜಾತಿ ಉತ್ಸವ-2026
ರಾಜ್ಯಶಾಸ್ತ್ರ ಮತ್ತು ಆಡಳಿತ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಇತ್ತೀಚಿಗೆ ‘ಭಾರತ ಜನಜಾತಿ ಉತ್ಸವ-2026’ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. .
ಭಾರತ ಜನಜಾತಿ ಉತ್ಸವದ ಬಗ್ಗೆ:
- ಇದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಪ್ರಮುಖ ಉಪಕ್ರಮವಾಗಿದ್ದು, ಇದನ್ನು ಭಾರತೀಯ ಜನಜಾತಿ ಸಹಕಾರ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ (TRIFED) ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಗುತ್ತದೆ.
- ಉದ್ದೇಶ:- 19 ದಿನಗಳ ಕಾಲ ನಡೆದ ಈ ಉತ್ಸವವು ದೇಶಾದ್ಯಂತ ಇರುವ ಬುಡಕಟ್ಟು ಕುಶಲಕರ್ಮಿಗಳು, ಉದ್ಯಮಿಗಳು ಮತ್ತು ಸ್ವಸಹಾಯ ಸಂಘಗಳನ್ನು (SHGs) ಒಟ್ಟುಗೂಡಿಸಿ, ಭಾರತದ ವೈವಿಧ್ಯಮಯ ಬುಡಕಟ್ಟು ಪರಂಪರೆ ಮತ್ತು ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ.
ಕರ್ನಾಟಕದ ಬುಡಕಟ್ಟು ಸಮುದಾಯಗಳ ಬಗ್ಗೆ:
- ಕರ್ನಾಟಕವು ಸುಮಾರು 50 ಅಧಿಸೂಚಿತ ಪರಿಶಿಷ್ಟ ಪಂಗಡಗಳಿಗೆ (ST) ನೆಲೆಯಾಗಿದ್ದು, ಇವರು 2011 ರ ಜನಗಣತಿಯ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 6.95% ರಷ್ಟಿದ್ದಾರೆ.
- ಈ ಸಮುದಾಯಗಳು ಪ್ರಾಥಮಿಕವಾಗಿ ಬಳ್ಳಾರಿ, ರಾಯಚೂರು, ಮೈಸೂರು, ಚಿತ್ರದುರ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿವೆ.
ಕರ್ನಾಟಕದ ಪ್ರಮುಖ ಬುಡಕಟ್ಟು ಸಮುದಾಯಗಳು:
- ನಾಯ್ಕಡ/ ನಾಯಕ /ಬೇಡರ /ಬೇಡ /ವಾಲ್ಮೀಕಿ:- ಇವರು ಕರ್ನಾಟಕದ ಅತಿದೊಡ್ಡ ಬುಡಕಟ್ಟು ಸಮುದಾಯದವರಾಗಿದ್ದು, ಐತಿಹಾಸಿಕವಾಗಿ ಇವರು ಯೋಧ ಮತ್ತು ಬೇಟೆಗಾರರಾಗಿದ್ದಾರೆ.
- ಗೋಂಡ:- ಇವರು ರಾಜ್ಯದ ಎರಡನೇ ಅತಿದೊಡ್ಡ ಬುಡಕಟ್ಟು ಸಮುದಾಯದವರಾಗಿದ್ದು, ಇವರು ಪ್ರಮುಖವಾಗಿ ಬೀದರ ಮತ್ತು ಉತ್ತರ ಕನ್ನಡದಂತಹ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ.
- ಜೇನು ಕುರುಬ:- ಇವರ ಹೆಸರೇ ಸೂಚಿಸುವಂತೆ ಇವರು “ಜೇನು ಸಂಗ್ರಹಿಸುವ ಜನ”ರಾಗಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿ ಜೇನುತುಪ್ಪವನ್ನು ಸಂಗ್ರಹಿಸುವಲ್ಲಿ ಇವರಿಗಿರುವ ಸಾಂಪ್ರದಾಯಿಕ ಪರಿಣತಿಯನ್ನು ಇದು ಪ್ರತಿಬಿಂಬಿಸುತ್ತದೆ.
- ಸೋಲಿಗ /ಶೋಲಗ:- ಪ್ರಾಥಮಿಕವಾಗಿ ಬಿಳಿಗಿರಿರಂಗನ ಬೆಟ್ಟಗಳಲ್ಲಿ ನೆಲೆಸಿರುವ ಇವರು ಅರಣ್ಯದೊಂದಿಗೆ ಆಳವಾದ ಆಧ್ಯಾತ್ಮಿಕ ಸಂಪರ್ಕವನ್ನು ಹೊಂದಿದ್ದಾರೆ. ಇವರು ‘ಸ್ಥಳಾಂತರ ಬೇಸಾಯ’ ಪದ್ಧತಿಯನ್ನು ಆಚರಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ.
- ಹಕ್ಕಿಪಿಕ್ಕಿ:- ಐತಿಹಾಸಿಕವಾಗಿ ಇವರು ಅರೆ-ಅಲೆಮಾರಿ “ಪಕ್ಷಿ ಬೇಟೆಗಾರರು” ಆಗಿದ್ದಾರೆ (ಹಕ್ಕಿ ಎಂದರೆ ಪಕ್ಷಿ, ಪಿಕ್ಕಿ ಎಂದರೆ ಹಿಡಿಯುವುದು). ಇವರು ರಾಜಸ್ಥಾನದ ಯೋಧ ಕುಲಗಳೊಂದಿಗೆ ತಮ್ಮ ಪೂರ್ವಜರ ಸಂಪರ್ಕವನ್ನು ಹೊಂದಿದ್ದಾರೆ ಎಂದು ಪರಿಗಣಿಸಲಾಗಿದೆ.
- ಸಿದ್ಧಿ:- ಶತಮಾನಗಳ ಹಿಂದೆ ಭಾರತಕ್ಕೆ ಕರೆತರಲಾದ ಆಫ್ರಿಕಾ ಮೂಲದ ವಿಶಿಷ್ಟ ಜನಾಂಗೀಯ ಸಮುದಾಯದವರಾಗಿದ್ದಾರೆ. ಇವರು ಹೆಚ್ಚಾಗಿ ಉತ್ತರ ಕನ್ನಡದ ಕಾಡುಗಳಲ್ಲಿ ಕಂಡುಬರುತ್ತಾರೆ ಮತ್ತು ಇವರ ವಿಶಿಷ್ಟ ಸಂಸ್ಕೃತಿ ಹಾಗೂ “ಕವಂದಿ” ಎಂಬ ಕೌದಿ ಕಲೆಗೆ ಹೆಸರುವಾಸಿಯಾಗಿದ್ದಾರೆ.
- ಕೊರಗ: ಇವರನ್ನು ‘ವಿಶೇಷವಾಗಿ ದುರ್ಬಲವಾಗಿರುವ ಬುಡಕಟ್ಟು ಗುಂಪು’ (PVTG) ಎಂದು ಗುರುತಿಸಲಾಗಿದೆ. ಇವರು ಉಡುಪಿ ಮತ್ತು ದಕ್ಷಿಣ ಕನ್ನಡದಂತಹ ಕರಾವಳಿ ಜಿಲ್ಲೆಗಳಿಗೆ ಸೇರಿದವರಾಗಿದ್ದು, ಸಾಂಪ್ರದಾಯಿಕವಾಗಿ ಬುಟ್ಟಿ ಹೆಣೆಯುವವರು ಮತ್ತು ಡೋಲು ಬಾರಿಸುವವರಾಗಿದ್ದಾರೆ.
- ಯೆರವಾ: ಇವರು ಹೆಚ್ಚಾಗಿ ಕೊಡಗು ಮತ್ತು ಮೈಸೂರು ಭಾಗಗಳಲ್ಲಿ ಕಂಡುಬರುತ್ತಾರೆ. ಸಾಂಪ್ರದಾಯಿಕವಾಗಿ ಅರಣ್ಯವಾಸಿಗಳಾಗಿರುವ ಇವರು ಈಗ ಹೆಚ್ಚಾಗಿ ಕಾಫಿ ಮತ್ತು ಚಹಾ ತೋಟಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.







ನಿಮ್ಮದೊಂದು ಉತ್ತರ