ಜನ ಸುರಕ್ಷಾ ಯೋಜನೆಗಳಿಗೆ 11 ವರ್ಷಗಳು
ಆಡಳಿತ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಇತ್ತೀಚೆಗೆ, ಪ್ರಧಾನಿ ಮೋದಿಯವರು ಕೇಂದ್ರ ಸರ್ಕಾರ 11 ವರ್ಷಗಳ ಹಿಂದೆ ಪ್ರಾರಂಭಿಸಿದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಅಟಲ್ ಪಿಂಚಣಿ ಯೋಜನೆ (APY) ಗಳ ಪ್ರಭಾವ ಮತ್ತು ಪರಿಣಾಮಗಳ ಕುರಿತು ಮಾತನಾಡಿದರು.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY – Pradhan Mantri Suraksha Bima Yojana):
- ಪ್ರಾರಂಭಿಸಿದ್ದು: ಮೇ 9, 2015.
- ಅನುಷ್ಠಾನ: ಹಣಕಾಸು ಸಚಿವಾಲಯ.
- ಉದ್ದೇಶ: ಸಮಾಜದ ಹಿಂದುಳಿದ ವರ್ಗಗಳ ಜನರಿಗೆ ವಿಮಾ ಯೋಜನೆಯನ್ನು ಒದಗಿಸುವುದು.
- ಪ್ರಮುಖ ಲಕ್ಷಣಗಳು:
- ಇದು ತನ್ನ ಎಲ್ಲಾ ಖಾತೆದಾರರಿಗೆ ಒಂದು ವರ್ಷದ ಅವಧಿಗೆ ರೂ. 2 ಲಕ್ಷದ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ. ಆಕಸ್ಮಿಕ ಸಾವು ಅಥವಾ ಶಾಶ್ವತ ಅಂಗವೈಕಲ್ಯದ ಸಂದರ್ಭದಲ್ಲಿ ಈ ಜೀವ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ.
- ಭಾಗಶಃ ಅಂಗವೈಕಲ್ಯದ ಸಂದರ್ಭದಲ್ಲಿ ಫಲಾನುಭವಿಗೆ ರೂ. 1 ಲಕ್ಷದ ಜೀವ ವಿಮಾ ರಕ್ಷಣೆ ನೀಡಲಾಗುತ್ತದೆ.
- 18 ರಿಂದ 70 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯ ಪ್ರಯೋಜನ ಪಡೆಯಬಹುದು.
- ಖಾತೆದಾರರ ಮರಣದ ಸಂದರ್ಭದಲ್ಲಿ, ಆತನ/ಆಕೆಯ ನಾಮನಿರ್ದೇಶಿತ ವ್ಯಕ್ತಿ (ವಾರಸುದಾರರು) ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
- ವಿಮಾ ಕಂತು (ಪ್ರೀಮಿಯಂ): ಈ ಯೋಜನೆಯು ಪ್ರತಿ ಸದಸ್ಯರಿಗೆ ವಾರ್ಷಿಕ ರೂ. 12 ಪ್ರೀಮಿಯಂ ಅನ್ನು ಒದಗಿಸುತ್ತದೆ. ಪ್ರತಿ ವರ್ಷ ಜೂನ್ 1 ರಂದು ಅಥವಾ ಅದಕ್ಕೂ ಮೊದಲು ಈ ಪ್ರೀಮಿಯಂ ಅನ್ನು ಒಂದೇ ಕಂತಿನಲ್ಲಿ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ.
ಅಟಲ್ ಪಿಂಚಣಿ ಯೋಜನೆ (APY – Atal Pension Yojana):
- ಪ್ರಾರಂಭಿಸಿದ್ದು: ಮೇ, 2015.
- ಉದ್ದೇಶ: ಎಲ್ಲಾ ಭಾರತೀಯರಿಗೆ, ವಿಶೇಷವಾಗಿ ಬಡವರು, ಹಿಂದುಳಿದವರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ರಚಿಸುವುದು.
- ನಿರ್ವಹಣೆ: ರಾಷ್ಟೀಯ ಪಿಂಚಣಿ ಯೋಜನೆ (NPS)ಯ ಮೂಲಕ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಿಸುತ್ತದೆ.
- ಅರ್ಹತೆ: ಭಾರತದ ಯಾವುದೇ ನಾಗರಿಕರು ಅಟಲ್ ಪಿಂಚಣಿ ಯೋಜನೆಗೆ ಸೇರಬಹುದು. ಚಂದಾದಾರರ ವಯಸ್ಸು 18-40 ವರ್ಷಗಳ ನಡುವೆ ಇರಬೇಕು.
- ಪ್ರಯೋಜನಗಳು:
- ಇದು 60 ವರ್ಷ ವಯಸ್ಸನ್ನು ತಲುಪಿದ ನಂತರ ರೂ. 1000 ದಿಂದ ರೂ. 5000 ವರೆಗಿನ ಕನಿಷ್ಠ ಖಾತರಿಯ ಪಿಂಚಣಿಯನ್ನು ಒದಗಿಸುತ್ತದೆ.
- ಚಂದಾದಾರರ ಮರಣದ ನಂತರ ಅವರ ಪತ್ನಿಗೆ/ಪತಿಗೆ ಜೀವಮಾನವಿಡೀ ಪಿಂಚಣಿಯ ಮೊತ್ತವನ್ನು ಖಾತರಿಪಡಿಸಲಾಗುತ್ತದೆ.
- ಚಂದಾದಾರರು ಮತ್ತು ಅವರ ಪತ್ನಿ/ಪತಿ ಇಬ್ಬರ ಮರಣದ ಸಂದರ್ಭದಲ್ಲಿ, ಸಂಪೂರ್ಣ ಪಿಂಚಣಿ ನಿಧಿಯನ್ನು (ಕಾರ್ಪಸ್) ನಾಮನಿರ್ದೇಶಿತ ವ್ಯಕ್ತಿಗೆ (ವಾರಸುದಾರರಿಗೆ) ಪಾವತಿಸಲಾಗುತ್ತದೆ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY – Pradhan Mantri Jeevan Jyoti Bima Yojana):
- ಪ್ರಾರಂಭಿಸಿದ್ದು: ಮೇ 9, 2015.
- ಅನುಷ್ಠಾನ: ಹಣಕಾಸು ಸಚಿವಾಲಯ.
- ಉದ್ದೇಶ: ಸಮಾಜದ ಬಡ ಮತ್ತು ಕಡಿಮೆ ಆದಾಯದ ವರ್ಗದವರಿಗೆ ಜೀವ ವಿಮಾ ಭದ್ರತೆಯನ್ನು ಒದಗಿಸುವುದು.
- ಅರ್ಹತೆ: 18 ರಿಂದ 50 ವರ್ಷ ವಯಸ್ಸಿನ ಜನರು ಈ ಯೋಜನೆಯ ಪ್ರಯೋಜನ ಪಡೆಯಬಹುದು.
- ಯೋಜನೆಯ ಪ್ರಮುಖ ಲಕ್ಷಣಗಳು:
- ಯೋಜನೆಯು ಗರಿಷ್ಠ ರೂ. 2 ಲಕ್ಷದ ಖಚಿತ ವಿಮಾ ಮೊತ್ತವನ್ನು ನೀಡುತ್ತದೆ.
- ವಿಮೆ ಮಾಡಿದ ವ್ಯಕ್ತಿಯ ಮರಣದ ಸಂದರ್ಭದಲ್ಲಿ, ಮುಂದಿನ ಅರ್ಹ ಫಲಾನುಭವಿಗೆ ರೂ. 2,00,000 ಮರಣ ರಕ್ಷಣೆಯನ್ನು ಒಳಗೊಂಡ ಮರಣದ ಪ್ರಯೋಜನವನ್ನು ನೀಡಲಾಗುತ್ತದೆ.
- ವಿಮಾ ಕಂತು (ಪ್ರೀಮಿಯಂ): ಈ ಯೋಜನೆಗೆ ವಾರ್ಷಿಕ ಪ್ರೀಮಿಯಂ ರೂ. 330 ಆಗಿದೆ.
ಬಹು ಸ್ವತಂತ್ರ ಗುರಿ-ನಿರ್ದೇಶಿತ ಮರು-ಪ್ರವೇಶ ವಾಹನ ವ್ಯವಸ್ಥೆ (MIRV system)
ರಕ್ಷಣೆ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಒಡಿಶಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ದ್ವೀಪದಿಂದ ಬಹು ಸ್ವತಂತ್ರ ಗುರಿ-ನಿರ್ದೇಶಿತ ಮರು-ಪ್ರವೇಶ ವಾಹನ (MIRV) ವ್ಯವಸ್ಥೆಯನ್ನು ಹೊಂದಿರುವ ಸುಧಾರಿತ ಅಗ್ನಿ ಕ್ಷಿಪಣಿಯ ಯಶಸ್ವಿ ಹಾರಾಟ-ಪರೀಕ್ಷೆಯನ್ನು ಇತ್ತೀಚೆಗೆ ಭಾರತ ನಡೆಸಿತು.
MIRV ತಂತ್ರಜ್ಞಾನದ ಬಗ್ಗೆ:
- MIRV ಸಂಕ್ಷಿಪ್ತ ರೂಪ: ಬಹುವಿಧದ ಸ್ವತಂತ್ರ ಗುರಿ-ನಿರ್ದೇಶಿತ ಮರು-ಪ್ರವೇಶ ವಾಹನ (Multiple Independently Targetable Reentry Vehicle)
- ವಿಶಿಷ್ಟತೆ: ಈ ತಂತ್ರಜ್ಞಾನವು ಒಂದೇ ಕ್ಷಿಪಣಿಯ ಮೂಲಕ ಅನೇಕ ಸಿಡಿತಲೆಗಳನ್ನು ಹೊತ್ತೋಯ್ಯುವ ಮತ್ತು ಪ್ರತಿಯೊಂದು ಸಿಡಿತಲೆಯನ್ನೂ ಪ್ರತ್ಯೇಕವಾದ ಗುರಿಗಳಿಗೆ ನಿರ್ದೇಶಿಸುವ ಸಾಮರ್ಥ್ಯವನ್ನು ಹೊಂದಿದೆ, ಇದರಿಂದ ಕ್ಷಿಪಣಿಯ ವಿನಾಶಕಾರಿ ಶಕ್ತಿಯು ಗಣನೀಯವಾಗಿ ಹೆಚ್ಚಾಗುತ್ತದೆ.
ಅಗ್ನಿ ಕ್ಷಿಪಣಿಗಳ (Agni Missiles) ಬಗ್ಗೆ:
- ಅಗ್ನಿ ಕ್ಷಿಪಣಿ ವರ್ಗವು ಭಾರತದ ಪರಮಾಣು ಉಡಾವಣಾ ಸಾಮರ್ಥ್ಯದ ಬೆನ್ನೆಲುಬಾಗಿದೆ.
- ಅಭಿವೃದ್ಧಿಪಡಿಸಿದವರು: ಅಗ್ನಿ-1 ರಿಂದ 5 ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ.
- ಅಗ್ನಿ ಕ್ಷಿಪಣಿಗಳ ಇತರ ಶ್ರೇಣಿಗಳು:
- ಅಗ್ನಿ I: 700-800 ಕಿ.ಮೀ ವ್ಯಾಪ್ತಿ.
- ಅಗ್ನಿ II: 2000 ಕಿ.ಮೀ ಗಿಂತ ಹೆಚ್ಚಿನ ವ್ಯಾಪ್ತಿ.
- ಅಗ್ನಿ III: 2,500 ಕಿ.ಮೀ ಗಿಂತ ಹೆಚ್ಚಿನ ವ್ಯಾಪ್ತಿ.
- ಅಗ್ನಿ IV: 3,500 ಕಿ.ಮೀ ಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದೆ ಮತ್ತು ಇದನ್ನು ರಸ್ತೆ-ಸಂಚಾರಿ ಉಡಾವಣಾ ವಾಹನದಿಂದ (Road-mobile launcher) ಉಡಾವಣೆ ಮಾಡಬಹುದು.
- ಅಗ್ನಿ-V: ಅಗ್ನಿ ಸರಣಿಯಲ್ಲಿಯೇ ಅತ್ಯಂತ ಉದ್ದವಾದ, 5,000 ಕಿ.ಮೀ ಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರುವ ಖಂಡಾಂತರ ಕ್ಷಿಪಣಿಯಾಗಿದೆ (ICBM).
ಸಮಗ್ರ ಮಾರ್ಗದರ್ಶಿತ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ (Integrated Guided Missile Development Programme – IGMDP):
- ಪ್ರಾರಂಭಿಸಿದ್ದು: 1983.
- ಪರಿಕಲ್ಪನೆ : 1980ರ ದಶಕದಲ್ಲಿ IGMDP ಯ ಪರಿಕಲ್ಪನೆಯನ್ನು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕೊಟ್ಟರು.
- ಉದ್ದೇಶ: ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಅನುಕೂಲ ಮಾಡಿಕೊಡುವುದು.
- IGMDP ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಕ್ಷಿಪಣಿಗಳು:
- ಪೃಥ್ವಿ: ಅಲ್ಪ-ಶ್ರೇಣಿಯ, ಭೂಮಿಯಿಂದ-ಭೂಮಿಗೆ ಚಿಮ್ಮುವ ಬ್ಯಾಲಿಸ್ಟಿಕ್ ಕ್ಷಿಪಣಿ
- ಅಗ್ನಿ: ಮಧ್ಯಮ-ಶ್ರೇಣಿಯ, ಭೂಮಿಯಿಂದ-ಭೂಮಿಗೆ ಚಿಮ್ಮುವ ಬ್ಯಾಲಿಸ್ಟಿಕ್ ಕ್ಷಿಪಣಿ
- ತ್ರಿಶೂಲ್: ಅಲ್ಪ-ಶ್ರೇಣಿಯ, ಕಡಿಮೆ-ಮಟ್ಟದ, ಭೂಮಿಯಿಂದ-ಆಕಾಶಕ್ಕೆ ಚಿಮ್ಮುವ ಕ್ಷಿಪಣಿ.
- ಆಕಾಶ್: ಮಧ್ಯಮ-ಶ್ರೇಣಿಯ, ಭೂಮಿಯಿಂದ-ಆಕಾಶಕ್ಕೆ ಚಿಮ್ಮುವ ಕ್ಷಿಪಣಿ.
- ನಾಗ್: ಮೂರನೇ ತಲೆಮಾರಿನ ಟ್ಯಾಂಕ್ ನಿರೋಧಕ ಕ್ಷಿಪಣಿ.








ನಿಮ್ಮದೊಂದು ಉತ್ತರ