ಜಲ ಜೀವನ್ ಮಿಷನ್ (JJM)
ಇತ್ತೀಚೆಗೆ ಸುದ್ದಿಯಲ್ಲಿದೆ:
- ಜಲ ಜೀವನ್ ಮಿಷನ್ (JJM) ಯೋಜನೆಯಡಿ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ಬಾಕಿ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜಲ ಜೀವನ್ ಮಿಷನ್ (JJM) ಬಗ್ಗೆ :
- ಪ್ರಾರಂಭವಾದ ವರ್ಷ: 2019.
- ಉದ್ದೇಶ: ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ‘ಕಾರ್ಯನಿರ್ವಹಿಸುವ ನಲ್ಲಿಯ ಸಂಪರ್ಕ’ವನ್ನು (Functional Household Tap Connections – FHTC) ಒದಗಿಸುವುದು.
- ಮಹತ್ವ: 2024ರ ವೇಳೆಗೆ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಪ್ರತಿದಿನ ಪ್ರತಿ ವ್ಯಕ್ತಿಗೆ ತಲಾ 55 ಲೀಟರ್ನಷ್ಟು ಶುದ್ಧ ಕುಡಿಯುವ ನೀರನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಪ್ರಮುಖ ಗುರಿಯಾಗಿತ್ತು. ಆದರೆ, ಯೋಜನೆಯ ಅನುಷ್ಠಾನದಲ್ಲಿ ಎದುರಾದ ಕೆಲವು ಸವಾಲುಗಳಿಂದಾಗಿ, ಈ ಗುರಿಯನ್ನು ತಲುಪುವ ಗಡುವನ್ನು ಇದೀಗ 2028ಕ್ಕೆ ವಿಸ್ತರಿಸಲಾಗಿದೆ.
- ಅನುಷ್ಠಾನ ಸಚಿವಾಲಯ : ಕೇಂದ್ರ ಜಲಶಕ್ತಿ ಸಚಿವಾಲಯ.
- ಹಣಕಾಸು ಸ್ವರೂಪ: ಇದೊಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.








ನಿಮ್ಮದೊಂದು ಉತ್ತರ