ಕರ್ನಾಟಕ ಮತ್ತು ಗ್ರೂಪ್ ಸಿ ಪ್ರಚಲಿತ ವಿದ್ಯಮಾನಗಳು – 2, ಜುಲೈ 2026

ಪ್ರಶಸ್ತಿಗಳು (Awards)

ಯುಎಸ್‌ಐಎಸ್‌ಪಿಎಫ್‌ನಿಂದ ಸುನಿಲ್ ಭಾರ್ತಿ ಮಿತ್ತಲ್ ಅವರಿಗೆ ಗೌರವ (USISPF Honors Sunil Bharti Mittal)

ಸಂದರ್ಭ (Context): ಭಾರ್ತಿ ಎಂಟರ್‌ಪ್ರೈಸಸ್ (Bharti Enterprises) ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಸುನಿಲ್ ಭಾರ್ತಿ ಮಿತ್ತಲ್ ಅವರಿಗೆ ವಾಷಿಂಗ್ಟನ್ ಡಿಸಿಯಲ್ಲಿ ನಡೆದ 9ನೇ ವಾರ್ಷಿಕ ನಾಯಕತ್ವ ಶೃಂಗಸಭೆಯಲ್ಲಿ (IX Annual Leadership Summit) ಯುಎಸ್-ಇಂಡಿಯಾ ಸ್ಟ್ರಾಟಜಿಕ್ ಪಾರ್ಟ್‌ನರ್‌ಶಿಪ್ ಫೋರಂ (US-India Strategic Partnership Forum – USISPF) 2026ರ ನಾಯಕತ್ವ ಪ್ರಶಸ್ತಿ (Leadership Award) ನೀಡಿ ಗೌರವಿಸಿದೆ.

ಮುಖ್ಯಾಂಶಗಳು (Key Highlights):

  • ಗೌರವಕ್ಕೆ ಪ್ರಮುಖ ಕಾರಣ: ಭಾರತದ ದೂರಸಂಪರ್ಕ ವಲಯವನ್ನು (Telecommunications Landscape) ಪರಿವರ್ತಿಸುವಲ್ಲಿ ಅವರು ವಹಿಸಿದ ಪ್ರಮುಖ ಪಾತ್ರ ಮತ್ತು ಭಾರತ ಹಾಗೂ ಅಮೆರಿಕ ನಡುವಿನ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಉತ್ತೇಜಿಸಲು ನೀಡಿದ ನಿರಂತರ ಕೊಡುಗೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
  • ಸಹ ಪ್ರಶಸ್ತಿ ಪುರಸ್ಕೃತರು: ಅವರು ಈ ಪ್ರಶಸ್ತಿಯನ್ನು ಜಾಗತಿಕ ಉದ್ಯಮ ಮುಖಂಡರಾದ ಕ್ರಿಸ್ಟೋಫರ್ ಟಿ. ಕ್ಯಾಲಿಯೊ (RTX ನ ಅಧ್ಯಕ್ಷ ಮತ್ತು ಸಿಇಒ) ಮತ್ತು ವಿ. ಪ್ರೇಮ್ ವತ್ಸಾ (Fairfax Financial Holdings ನ ಅಧ್ಯಕ್ಷ ಮತ್ತು ಸಿಇಒ) ಅವರೊಂದಿಗೆ ಹಂಚಿಕೊಂಡಿದ್ದಾರೆ.
  • ಪ್ರಮುಖ ಹೇಳಿಕೆಗಳು: “ಅಮೆರಿಕ ಅಟ್ 250 ” (America At 250) ಎಂಬ ವಿಷಯದ ಅಡಿಯಲ್ಲಿ ನಡೆದ ಶೃಂಗಸಭೆಯಲ್ಲಿ ಮಾತನಾಡಿದ ಮಿತ್ತಲ್ ಅವರು, 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತೀಯ ವಲಸಿಗರನ್ನು (Indian Diaspora) ಒಂದು ಪ್ರಮುಖ ಕಾರ್ಯತಂತ್ರದ ಕೊಂಡಿ (Strategic Bridge) ಎಂದು ಬಣ್ಣಿಸಿದರು ಮತ್ತು ಭಾರತ-ಯುಎಸ್ ನಡುವೆ ಶೀಘ್ರದಲ್ಲೇ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದ (Bilateral Trade Agreement) ಏರ್ಪಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಶಸ್ತಿಯ ಕುರಿತು (About the Award):

  • ಸ್ಥಾಪಕ ಸಂಸ್ಥೆ: ಈ ಪ್ರಶಸ್ತಿಯನ್ನು ದ್ವಿಪಕ್ಷೀಯ ಸಹಯೋಗವನ್ನು ಬಲಪಡಿಸುವ ಉದ್ದೇಶ ಹೊಂದಿರುವ ಲಾಭರಹಿತ ಸಂಸ್ಥೆಯಾದ (Non-profit Organization) ಯುಎಸ್-ಇಂಡಿಯಾ ಸ್ಟ್ರಾಟಜಿಕ್ ಪಾರ್ಟ್‌ನರ್‌ಶಿಪ್ ಫೋರಂ (USISPF) ಪ್ರದಾನ ಮಾಡುತ್ತದೆ.
  • ಮುಖ್ಯ ಉದ್ದೇಶ: ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ, ತಂತ್ರಜ್ಞಾನ, ನಾವೀನ್ಯತೆ (Innovation) ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಉತ್ತೇಜಿಸುವಲ್ಲಿ ಮಾದರಿ ಪಾತ್ರ ವಹಿಸುವ ಪ್ರಮುಖ ಉದ್ಯಮಿಗಳು ಮತ್ತು ನೀತಿ ನಿರೂಪಕರನ್ನು (Policymakers) ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಮುಖ್ಯ ಉದ್ದೇಶವಾಗಿದೆ.

ಪ್ರಮುಖ ದಿನಗಳು

1. ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ಅಂತರರಾಷ್ಟ್ರೀಯ ದಿನ 

  • ಆಚರಿಸುವ ದಿನಾಂಕ: ಜೂನ್ 26
  • ಆಚರಿಸುವ ಸಂಸ್ಥೆ: ವಿಶ್ವಸಂಸ್ಥೆ ಮತ್ತು ಮಾದಕ ದ್ರವ್ಯಗಳು ಹಾಗೂ ಅಪರಾಧಗಳ ಮೇಲಿನ ವಿಶ್ವಸಂಸ್ಥೆಯ ಕಚೇರಿ (UNODC).
  • ಉದ್ದೇಶ: ಮಾದಕ ದ್ರವ್ಯಗಳ ದುರುಪಯೋಗ ಮತ್ತು ಅಕ್ರಮ ಸಾಗಣೆಯು ಜನರ ಜೀವನ, ಸಮುದಾಯಗಳು ಹಾಗೂ ರಾಷ್ಟ್ರದ ಪ್ರಗತಿಯನ್ನು ಹೇಗೆ ನಾಶಪಡಿಸುತ್ತದೆ ಎಂಬುದರ ಕುರಿತು ಜಾಗತಿಕ ಅರಿವು ಮೂಡಿಸುವುದು ಮತ್ತು ಮಾದಕ ದ್ರವ್ಯ ಮುಕ್ತ ಜಗತ್ತನ್ನು ಸಾಧಿಸಲು ಅಂತರರಾಷ್ಟ್ರೀಯ ಸಹಕಾರ ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
  • ಧ್ಯೇಯವಾಕ್ಯ:ವಿಶ್ವ ಮಾದಕ ದ್ರವ್ಯ ಸಮಸ್ಯೆ: ಮುಂದುವರಿದಿರುವ ಸವಾಲುಗಳು, ಹೊಸ ಬಿಕ್ಕಟ್ಟುಗಳು ಮತ್ತು ನವೀನ ಪ್ರತಿಕ್ರಿಯೆಗಳು“.

2. ಸಂವಿಧಾನ ಹತ್ಯಾ ದಿವಸ್ (Sa)

  • ಆಚರಿಸುವ ದಿನಾಂಕ: ಜೂನ್ 25
  • ಆಚರಿಸುವ ಸಂಸ್ಥೆ: ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ.
  • ಉದ್ದೇಶ: ಸ್ವಾತಂತ್ರ್ಯದ ಅನಾಮಧೇಯ ವೀರರನ್ನು ಗೌರವಿಸುವುದು, 1975ರಾಷ್ಟ್ರೀಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದವರಿಗೆ ಗೌರವ ನಮನ ಸಲ್ಲಿಸುವುದು ಮತ್ತು ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಹಕ್ಕುಗಳ ನಿರಂತರ ಮೌಲ್ಯವನ್ನು ನಾಗರಿಕರಿಗೆ ನೆನಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
  • ಧ್ಯೇಯವಾಕ್ಯ:ಪ್ರಜಾಪ್ರಭುತ್ವವು ಚಿರಾಯುವಾಗಲಿ” (“Long Live Democracy”).

3. ವಿಶ್ವ MSME ದಿನ (World MSME Day)

  • ಆಚರಿಸುವ ದಿನಾಂಕ: ಜೂನ್ 27
  • ಆಚರಿಸುವ ಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA).
  • ಉದ್ದೇಶ: ಉದ್ಯೋಗ ಸೃಷ್ಟಿ, ಉದ್ಯಮಶೀಲತೆಯ ಪ್ರಚಾರ, ನಾವೀನ್ಯತೆ ಹಾಗೂ ಜಾಗತಿಕವಾಗಿ ಸುಸ್ಥಿರ ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುವಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSMEs) ಪ್ರಮುಖ ಕೊಡುಗೆಯನ್ನು ಗುರುತಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
  • ಧ್ಯೇಯವಾಕ್ಯ:ನಾವೀನ್ಯತೆ ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿಯ ಮೂಲಕ MSME ಗಳ ಸಬಲೀಕರಣ“.

4. ರಾಷ್ಟ್ರೀಯ ಸಾಂಖ್ಯಿಕ ದಿನ (National Statistics Day)

  • ಆಚರಿಸುವ ದಿನಾಂಕ : ಜೂನ್ 29
  • ಆಚರಿಸುವ ಸಂಸ್ಥೆ: ಭಾರತ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI).
  • ಉದ್ದೇಶ: ದೈನಂದಿನ ಜೀವನದಲ್ಲಿ ಅಂಕಿ-ಅಂಶಗಳ ಬಳಕೆಯನ್ನು ಜನಪ್ರಿಯಗೊಳಿಸುವುದು, ನೀತಿ ನಿರೂಪಣೆಯಲ್ಲಿ ಅಂಕಿ-ಅಂಶಗಳ ಪಾತ್ರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಖ್ಯಾತ ಸಂಖ್ಯಾಶಾಸ್ತ್ರಜ್ಞ ಪ್ರೊಫೆಸರ್ ಪ್ರಶಾಂತ ಚಂದ್ರ ಮಹಲನೋಬಿಸ್ ಅವರ ಜನ್ಮದಿನದ ಅಂಗವಾಗಿ ಅವರಿಗೆ ಗೌರವ ಸಲ್ಲಿಸುವುದು ಇದರ ಉದ್ದೇಶವಾಗಿದೆ.
  • ಧ್ಯೇಯವಾಕ್ಯ:ಸಾಮಾಜಿಕ-ಆರ್ಥಿಕ ಸೂಚಕಗಳ ಮೇಲ್ವಿಚಾರಣೆಗಾಗಿ ಆಡಳಿತಾತ್ಮಕ ದತ್ತಾಂಶದ ಬಳಕೆ” (“Use of Administrative Data for Socio-Economic Indicator Monitoring”).

5. ಅಂತರರಾಷ್ಟ್ರೀಯ ಕ್ಷುದ್ರಗ್ರಹ ದಿನ (International Asteroid Day)

  • ಆಚರಿಸುವ ದಿನಾಂಕ: ಜೂನ್ 30
  • ಆಚರಿಸುವ ಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) / ಗಗನಯಾತ್ರಿಗಳ ಸಂಘ (Association of Space Explorers – ASE).
  • ಉದ್ದೇಶ: ಕ್ಷುದ್ರಗ್ರಹಗಳ ಡಿಕ್ಕಿಯಿಂದ ಉಂಟಾಗುವ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಭೂಮಿಗೆ ಹತ್ತಿರವಿರುವ ಕಾಯಗಳ ಸಂಭವನೀಯ ಭೀತಿಯ ಸಂದರ್ಭದಲ್ಲಿ ಜಾಗತಿಕ ಮಟ್ಟದ ಬಿಕ್ಕಟ್ಟು ನಿರ್ವಹಣಾ ಸಂವಹನದ ಕುರಿತು ಮಾಹಿತಿ ನೀಡುವುದು ಮತ್ತು 1908ತುಂಗುಸ್ಕಾ ವಿದ್ಯಮಾನದ ನೆನಪನ್ನು ಸ್ಮರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
  • ಧ್ಯೇಯವಾಕ್ಯ:ಭೂಮಿಯ ರಕ್ಷಣೆ: ಭೂಮಿಗೆ ಹತ್ತಿರವಿರುವ ಕಾಯಗಳಿಗೆ ಸುಧಾರಿತ ತಂತ್ರಜ್ಞಾನಗಳು ಮತ್ತು ಸಂಯೋಜಿತ ಜಾಗತಿಕ ಪ್ರತಿಕ್ರಿಯೆಗಳು” (“Protecting Earth: Advanced Technologies and Coordinated Global Responses to Near-Earth Objects”).

ಕ್ರೀಡೆಗಳು

1. ಅಂಜು ಬಾಬಿ ಜಾರ್ಜ್ ಅವರ ರಾಷ್ಟ್ರೀಯ ದಾಖಲೆಯನ್ನು ಮುರಿದ ಆನ್ಸಿ ಸೋಜನ್

ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ 2026ರ ಜೂನ್ 27 ರಂದು ನಡೆದ ರಾಷ್ಟ್ರೀಯ ಅಂತರ-ರಾಜ್ಯ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕೇರಳದ ಪ್ರಖ್ಯಾತ ಉದ್ದ ಜಿಗಿತ (ಲಾಂಗ್ ಜಂಪ್) ಆಟಗಾರ್ತಿ ಆನ್ಸಿ ಸೋಜನ್ ಅವರು 6.88 ಮೀಟರ್ ದೂರ ಜಿಗಿಯುವ ಮೂಲಕ ಅಂಜು ಬಾಬಿ ಜಾರ್ಜ್ ಅವರ 22 ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿದು ಇತಿಹಾಸ ನಿರ್ಮಿಸಿದ್ದಾರೆ.

ಗಮನಿಸಿ : ಭುವನೇಶ್ವರದ ಇದೇ ಕ್ರೀಡಾಕೂಟದಲ್ಲಿ ಮತ್ತೊಂದು ಹಳೆಯ ರಾಷ್ಟ್ರೀಯ ದಾಖಲೆ ಪತನಗೊಂಡಿದ್ದು,  ಮಹಾರಾಷ್ಟ್ರದ ಸರ್ವೇಶ್ ಕುಶಾರೆ ಅವರು ಪುರುಷರ ಎತ್ತರ ಜಿಗಿತ (ಹೈಜಂಪ್)
ವಿಭಾಗದಲ್ಲಿ 2.31 ಮೀಟರ್ ಎತ್ತರ ಜಿಗಿಯುವ ಮೂಲಕ ತೇಜಸ್ವಿನ್ ಶಂಕರ್ ಅವರ 2.29 ಮೀಟರ್ಗಳ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts