ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

1. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಅಡಿಯಲ್ಲಿ ಬರುವ ಈ ಕೆಳಗಿನ ಯಾವ ಘಟಕವು ನಿರ್ದಿಷ್ಟವಾಗಿ ಹನಿ ನೀರಾವರಿ ಮತ್ತು ತುಂತುರು ನೀರಾವರಿಯಂತಹ ಸೂಕ್ಷ್ಮ ನೀರಾವರಿ ತಂತ್ರಜ್ಞಾನಗಳನ್ನು ಉತ್ತೇಜಿಸುತ್ತದೆ?

A) ವೇಗವರ್ಧಿತ ನೀರಾವರಿ ಪ್ರಯೋಜನಗಳ ಕಾರ್ಯಕ್ರಮ (AIBP).

B) ಪ್ರತಿ ಜಮೀನಿಗೂ (ಹೊಲಕ್ಕೂ) ನೀರು  (Har Khet Ko Pani – HKKP)

C) ಪ್ರತಿ ಹನಿಗೆ ಹೆಚ್ಚು ಬೆಳೆ (Per Drop More Crop – PDMC)

D) ಜಲಾನಯನ ಅಭಿವೃದ್ಧಿ ಘಟಕ.

ಉತ್ತರ: C

 

2. GST ಮಂಡಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ?

A) ಇದು ಸಂವಿಧಾನದ ವಿಧಿ 279A ನ ಅಡಿಯಲ್ಲಿ ಸ್ಥಾಪಿಸಲಾದ ಸಾಂವಿಧಾನಿಕ ಸಂಸ್ಥೆಯಾಗಿದೆ.

B) ಇದನ್ನು 2016ರ ಸಂವಿಧಾನದ (101ನೇ ತಿದ್ದುಪಡಿ) ಕಾಯ್ದೆಯ ಮೂಲಕ ಪರಿಚಯಿಸಲಾಯಿತು.

C) ಇದು GST -ಸಂಬಂಧಿತ ಸಮಸ್ಯೆಗಳ ಕುರಿತು ಶಿಫಾರಸುಗಳನ್ನು ಮಾಡುವ ಅಧಿಕಾರವನ್ನು ಹೊಂದಿದೆ.

D) ಭಾರತದ ಪ್ರಧಾನ ಮಂತ್ರಿಯು GST ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.

ಉತ್ತರ: D

 

3. ಸಂತಾಲರು ಪ್ರಾಥಮಿಕವಾಗಿ ಈ ಕೆಳಗಿನ ಯಾರ ವಿರುದ್ಧ ಹೋರಾಡಿದರು?

  1. ಈಸ್ಟ್ ಇಂಡಿಯಾ ಕಂಪನಿ.
  2. ಜಮೀನ್ದಾರರು.
  3. ಲೇವಾದೇವಿದಾರರು.
  4. ದರೋಗಗಳು.

ಕೆಳಗೆ ನೀಡಿರುವ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ:
A) 1 ಮತ್ತು 2 ಮಾತ್ರ.
B) 1, 2 ಮತ್ತು 3 ಮಾತ್ರ.
C) 2, 3 ಮತ್ತು 4 ಮಾತ್ರ.
D) 1, 2, 3 ಮತ್ತು 4.
ಉತ್ತರ: D

 

4. FCRA 2.0 ಪೋರ್ಟಲ್ ಈ ಕೆಳಗಿನ ಯಾವುದರ ನಿಯಂತ್ರಣಕ್ಕೆ ಸಂಬಂಧಿಸಿದೆ?

A) ವಿದೇಶಿ ವ್ಯಾಪಾರ

B) ವಿದೇಶಿ ದೇಣಿಗೆ

C) ವಿದೇಶಿ ಹೂಡಿಕೆ

D) ವಿದೇಶಿ ವಿನಿಮಯ

ಉತ್ತರ: B

 

5. ‘ಸಂವಿಧಾನ ಹತ್ಯಾ ದಿವಸ್’ ಅನ್ನು ಈ ಕೆಳಗಿನ ಯಾವ ದಿನದಂದು ಆಚರಿಸಲಾಗುತ್ತದೆ?

A) ಜೂನ್ 21

B) ಜೂನ್ 25

C) ಜೂನ್ 26

D) ಜೂನ್ 29

ಉತ್ತರ : B

 

6. ಭಾರತದಲ್ಲಿ ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನವನ್ನು ಯಾರ ಜನ್ಮದಿನದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ?

A) ಸಿ. ರಂಗರಾಜನ್

B) ಪಿ. ಸಿ. ಮಹಲನೋಬಿಸ್

C) ವಿ. ಕೆ. ಆರ್. ವಿ. ರಾವ್

D) ಎಂ. ಎಸ್. ಸ್ವಾಮಿನಾಥನ್

ಉತ್ತರ : B

 

7. ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಯಾರ ಗೌರವಾರ್ಥವಾಗಿ ಆಚರಿಸಲಾಗುತ್ತದೆ?

A) ಡಾ. ಎಂ. ವಿಶ್ವೇಶ್ವರಯ್ಯ

B) ಡಾ. ಹೋಮಿ ಜೆ. ಭಾಭಾ

C) ಡಾ. ಬಿಧನ್ ಚಂದ್ರ ರಾಯ್

D) ಡಾ. ಎ. ಪಿ. ಜೆ. ಅಬ್ದುಲ್ ಕಲಾಂ

ಉತ್ತರ : C

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts