ಕರ್ನಾಟಕದ ಮೊದಲ ನೀರಿನ ಚಿಲುಮೆ (ಬುಗ್ಗೆ) ಗಣತಿ


ಇತ್ತೀಚೆಗೆ ಸುದ್ದಿಯಲ್ಲಿದೆ:
- ಜಲಸಂರಕ್ಷಣೆಯನ್ನು ಹೆಚ್ಚಿಸುವ ಉದ್ದೇಶದಿಂದ, ‘ಕರ್ನಾಟಕ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ’ಯು, ‘ಅಂತರ್ಜಲ ನಿರ್ದೇಶನಾಲಯ’ದ ಬೆಂಬಲದೊಂದಿಗೆ, 31 ಜಿಲ್ಲೆಗಳಾದ್ಯಂತ 274 ನೈಸರ್ಗಿಕ ನೀರಿನ ಚಿಲುಮೆಗಳನ್ನು ಗುರುತಿಸುವ ಮೂಲಕ ರಾಜ್ಯದ ಮೊಟ್ಟಮೊದಲ ಡಿಜಿಟಲ್ ಗಣತಿಯನ್ನು ಪೂರ್ಣಗೊಳಿಸಿದೆ.
ನೀರಿನ ಚಿಲುಮೆ (ಬುಗ್ಗೆ) ಗಣತಿಯ ಪ್ರಮುಖ ಅಂಶಗಳು:
- ಒಟ್ಟು ಎಣಿಕೆ:- 274 ನೀರಿನ ಚಿಲುಮೆಗಳನ್ನು ದಾಖಲಿಸಲಾಗಿದ್ದು, ಇವುಗಳಲ್ಲಿ ಬಹುಪಾಲು ಬೆಳಗಾವಿ, ಉತ್ತರ ಕನ್ನಡ, ಚಾಮರಾಜನಗರ ಮತ್ತು ಕೊಡಗಿನಂತಹ ಗುಡ್ಡಗಾಡು ಜಿಲ್ಲೆಗಳಲ್ಲಿವೆ.
- ವಿಶಿಷ್ಟ ಲಕ್ಷಣ:- ದಕ್ಷಿಣ ಕನ್ನಡ ಜಿಲ್ಲೆಯ “ಬೆಂದ್ರು ತೀರ್ಥ” ಎಂಬಲ್ಲಿ ಒಂದು ಬಿಸಿನೀರಿನ ಚಿಲುಮೆಯನ್ನು (Hot spring) ಈ ಗಣತಿಯು ಗುರುತಿಸಿದೆ.
- ದತ್ತಾಂಶ ಬಳಕೆ:- ಗ್ರಾಮೀಣ ಪ್ರದೇಶಗಳಲ್ಲಿ ಜಲ ಭದ್ರತೆಗೆ ನಿರ್ಣಾಯಕವಾಗಿರುವ ಚಿಲುಮೆ ಆಧಾರಿತ ಜಲಮೂಲಗಳನ್ನು ರಕ್ಷಿಸಲು ಮತ್ತು ನಿರ್ವಹಿಸಲು ಈ ದತ್ತಾಂಶವನ್ನು ಬಳಸಲಾಗುತ್ತದೆ.
- ಅಗ್ರ ಜಿಲ್ಲೆಗಳು:- ಬೆಳಗಾವಿಯಲ್ಲಿ ಅತಿ ಹೆಚ್ಚು ಅಂದರೆ 59 ನೀರಿನ ಚಿಲುಮೆಗಳನ್ನು ವರದಿಯಾಗಿದ್ದಾರೆ, ನಂತರದ ಸ್ಥಾನಗಳಲ್ಲಿ ಉತ್ತರ ಕನ್ನಡ (31), ಚಾಮರಾಜನಗರ (23) ಮತ್ತು ಕೊಡಗು (23) ಇವೆ.
- ಪರಿಸರ ಆರೋಗ್ಯ:- 274 ಚಿಲುಮೆಗಳಲ್ಲಿ, 144 ಸಾರ್ವಕಾಲಿಕ (ವರ್ಷಪೂರ್ತಿ ಹರಿಯುವ), 114 ಋತುಮಾನ ಆಧಾರಿತವಾಗಿದ್ದು, ಮತ್ತು 16 ಚಿಲುಮೆಗಳು ಬತ್ತಿಹೋಗಿವೆ.
- ಪ್ರಮುಖ ನದಿಗಳ ಉಗಮಸ್ಥಾನ:-
- ತಲಕಾವೇರಿಯಲ್ಲಿ ಕಾವೇರಿ,
- ಜಾವಳಿಯಲ್ಲಿ ಹೇಮಾವತಿ, ಮತ್ತು
- ಅಂಬುತೀರ್ಥದಲ್ಲಿ ಶರಾವತಿ ಸೇರಿದಂತೆ ನದಿಗಳ ಉಗಮಸ್ಥಾನಗಳಾಗಿ ಕಾರ್ಯನಿರ್ವಹಿಸುವ ಚಿಲುಮೆಗಳನ್ನು ವರದಿಯು ನಿರ್ದಿಷ್ಟವಾಗಿ ಭೌಗೋಳಿಕವಾಗಿ ಗುರುತಿಸಿದೆ.
ನೀರಿನ ಚಿಲುಮೆಗಳ (Springs) ಬಗ್ಗೆ:
- ಇವು ಭೂಮಿಯ ಮೇಲ್ಮೈಗೆ ಅಂತರ್ಜಲದ ನೈಸರ್ಗಿಕ ಹೊರಹರಿವುಗಳಾಗಿದ್ದು, ಬಿರುಕುಬಿಟ್ಟ, ನೀರಿನಿಂದ ಕರಗುವ ಕಲ್ಲುಗಳಿಂದ ರೂಪಗೊಂಡ ಭೂದೃಶ್ಯ (Karst) ಅಥವಾ ದೋಷಯುಕ್ತ ಭೂಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.
- ಹಿಮಾಲಯದಲ್ಲಿನ ಜಲ ಭದ್ರತೆಗೆ ಇವು ನಿರ್ಣಾಯಕವಾಗಿವೆ, ಆದಾಗ್ಯೂ ಹವಾಮಾನ ಬದಲಾವಣೆಯಿಂದಾಗಿ ಇವು ಬತ್ತಿಹೋಗುತ್ತಿವೆ.
- ಪ್ರಕಾರಗಳು ಮತ್ತು ರಚನೆ:- ಅಂತರ್ಜಲ ಮಟ್ಟವು ಭೂಮಿಯ ಮೇಲ್ಮೈಯನ್ನು ತಲುಪಿದಾಗ ಅಥವಾ ಬಿರುಕುಗಳ ಮೂಲಕ ಇವು ರೂಪುಗೊಳ್ಳುತ್ತವೆ. ನೀರು ಇಂಗದ ಬಂಡೆಗಳಿಂದ ನಿರ್ಬಂಧಿಸಲ್ಪಟ್ಟ, ನೀರು ಇಂಗುವ ಪದರಗಳಲ್ಲಿ ಇವು ಕಂಡುಬರುತ್ತವೆ (ಇದನ್ನು ‘ಸಂಪರ್ಕ ಚಿಲುಮೆಗಳು’ಎನ್ನಲಾಗುತ್ತದೆ).
- ಭಾರತದಲ್ಲಿ ಬಿಸಿನೀರಿನ ಚಿಲುಮೆಗಳು:- ಹಿಮಾಲಯ ಪ್ರದೇಶದಂತಹ (ಮಣಿಕರಣ್, ಪುಗಾ ಕಣಿವೆ, ಯುಮ್ಥಾಂಗ್) ಆಳವಾದ ಭೂ-ಬಿರುಕುಗಳ ಉದ್ದಕ್ಕೂ ಇವು ಕಂಡುಬರುತ್ತವೆ.
- ಪ್ರಾಮುಖ್ಯತೆ:- ನೀರಾವರಿ ಮತ್ತು ಕುಡಿಯಲು ನೀರನ್ನು ಒದಗಿಸುತ್ತವೆ ಹಾಗೂ ಜೀವವೈವಿಧ್ಯತೆಗೆ ಇವು ಅತ್ಯಗತ್ಯವಾಗಿವೆ.
- 1000 ಚಿಲುಮೆಗಳ ಉಪಕ್ರಮ (1000 Springs Initiative):- ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ನೀರು ಮತ್ತು ಜೀವನೋಪಾಯವನ್ನು ಒದಗಿಸಲು GIS ಆಧಾರಿತ ಚಿಲುಮೆಗಳ ಸ್ಥಳ-ದತ್ತಾಂಶ ನಕ್ಷೀಕರಣವನ್ನು ಬಳಸುವ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಯೋಜನೆಯಾಗಿದೆ.
- ಅಪಾಯಗಳು:- ಹವಾಮಾನ ಬದಲಾವಣೆ ಮತ್ತು ಅತಿಯಾಗಿ ಅಂತರ್ಜಲ ಹೊರತೆಗೆಯುವಿಕೆಯು, ವಿಶೇಷವಾಗಿ ಹಿಮಾಲಯದ ವಲಯದಲ್ಲಿ ಸಾರ್ವಕಾಲಿಕ ಚಿಲುಮೆಗಳ ಕಡಿತಕ್ಕೆ ಕಾರಣವಾಗುತ್ತಿದೆ.







ನಿಮ್ಮದೊಂದು ಉತ್ತರ