ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA), ಬೆಂಗಳೂರು
ಇತ್ತೀಚೆಗೆ ಸುದ್ದಿಯಲ್ಲಿದೆ:
ಜಗತ್ ಪ್ರಸಿದ್ಧ ಸ್ಪೇನ್ ನ ಕಲಾವಿದ ಜೌಮ್ ಪ್ಲೆನ್ಸಾ (Jaume Plensa) ಅವರು ರಚಿಸಿರುವ 16 ಅಡಿ ಎತ್ತರದ ಬೃಹತ್ ಸಾರ್ವಜನಿಕ ಕಲಾಕೃತಿ “ಬೆಂಗಳೂರುಸ್ ಸೋಲ್” (Bengaluru’s Soul) ಅನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ.
‘ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ದ ಬಗ್ಗೆ:
ಇದು ಸಾರ್ವಜನಿಕ-ಖಾಸಗಿ ಒಕ್ಕೂಟವಾದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(BIAL)ದ ಜಂಟಿ ಒಡೆತನದಲ್ಲಿದೆ ಮತ್ತು ಅದರ ಮೂಲಕವೇ ಕಾರ್ಯನಿರ್ವಹಿಸುತ್ತದೆ.
ಈ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನ ಸಂಸ್ಥಾಪಕರಾದ ಒಂದನೇ ಕೆಂಪೇಗೌಡರ ಹೆಸರನ್ನು ಇಡಲಾಗಿದೆ.
ಕ್ಲೀನ್ಮ್ಯಾಕ್ಸ್ ಸೋಲಾರ್ (CleanMax Solar) ಸಂಸ್ಥೆಯು ಅಭಿವೃದ್ಧಿಪಡಿಸಿರುವ ಸೌರಶಕ್ತಿ ವ್ಯವಸ್ಥೆಯ ಮೂಲಕ, ಇದು ಕರ್ನಾಟಕದ ಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2023 ರಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾದ ವಿಮಾನ ನಿಲ್ದಾಣಗಳ ಪೈಕಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ವಿಶ್ವದ ಅತ್ಯುತ್ತಮ ಹೊಸ ವಿಮಾನ ನಿಲ್ದಾಣ ಟರ್ಮಿನಲ್ ವಿಭಾಗದಲ್ಲಿ 2 ನೇ ಸ್ಥಾನವನ್ನು ಗಳಿಸಿದೆ.
2023 ರಲ್ಲಿ ಉದ್ಘಾಟನೆಗೊಂಡಾಗಿನಿಂದ, ಟರ್ಮಿನಲ್ 2 ಯುನೆಸ್ಕೋದ ‘ಪ್ರಿಕ್ಸ್ ವರ್ಸೈಲ್ಸ್’ (Prix Versailles) ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣ ಪ್ರಶಸ್ತಿ, ಒಳಾಂಗಣ ವಿನ್ಯಾಸಕ್ಕಾಗಿ ವಿಶೇಷ ಬಹುಮಾನ ಮತ್ತು ಪ್ರತಿಷ್ಠಿತ ಲೀಡ್ (LEED) ಪ್ಲಾಟಿನಂ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ.
ನಿಮ್ಮದೊಂದು ಉತ್ತರ