ಯುಪಿಐ (UPI)ಗೆ 10 ವರ್ಷ
ಅರ್ಥವ್ಯವಸ್ಥೆ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಏಪ್ರಿಲ್ 2016ರಲ್ಲಿ ಪ್ರಾರಂಭವಾದ ‘ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್’ (UPI), ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಮೈಲಿಗಲ್ಲು ಸ್ಥಾಪಿಸಿದೆ.
ಏಕೀಕೃತ ಪಾವತಿ ವ್ಯವಸ್ಥೆ (UPI – Unified Payments Interface):
- ಪ್ರಾರಂಭಿಸಿದವರು: 2016 ರಲ್ಲಿ ‘ಭಾರತೀಯ ರಾಷ್ಟ್ರೀಯ ಪಾವತಿ ನಿಗಮ’ವು (NPCI) ಯುಪಿಐ ಅನ್ನು ವಿನ್ಯಾಸಗೊಳಿಸಿ, ಬಿಡುಗಡೆ ಮಾಡಿತು.
- ಉದ್ದೇಶ: ಇದು ಯಾವುದೇ ಪಾಲ್ಗೊಳ್ಳುವ ಬ್ಯಾಂಕಿನ ಒಂದೇ ಮೊಬೈಲ್ ಅಪ್ಲಿಕೇಶನ್ನಲ್ಲಿ ಅನೇಕ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವ ವ್ಯವಸ್ಥೆಯಾಗಿದೆ. ಇದು ಹಲವಾರು ಬ್ಯಾಂಕಿಂಗ್ ಸೌಲಭ್ಯಗಳು, ತಡೆರಹಿತ ಹಣ ರವಾನೆ ಮತ್ತು ವ್ಯಾಪಾರಿ ಪಾವತಿಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುತ್ತದೆ.
- ಅಂತರರಾಷ್ಟ್ರೀಯ ವಿಸ್ತರಣೆ: ಕಾರ್ಯನಿರ್ವಹಣೆಯಲ್ಲಿರುವ ಅಥವಾ ಯೋಜಿತ ಪರಸ್ಪರ ಕಾರ್ಯಸಾಧ್ಯತೆ ಹೊಂದಿರುವ ದೇಶಗಳು ಯಾವವೆಂದರೆ, ಸಿಂಗಾಪುರ (PayNow), ಯು ಎ ಇ, ಫ್ರಾನ್ಸ್, ನೇಪಾಳ, ಭೂತಾನ್, ಮಾರಿಷಸ್, ಶ್ರೀಲಂಕಾ, ಇಂಡೋನೇಷ್ಯಾ ರಾಷ್ಟ್ರಗಳು UPI ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI):
- ಇದು ಭಾರತದಲ್ಲಿ ಚಿಲ್ಲರೆ ಪಾವತಿಗಳ ಕಾರ್ಯಾನಿರ್ವಹಣೆಗಾಗಿ ಇರುವ ಒಂದು ‘ಪ್ರಮುಖ ಸಂಸ್ಥೆ’ (Umbrella body)ಯಾಗಿದೆ.
- ಸ್ಥಾಪಿಸಿದವರು: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಭಾರತೀಯ ಬ್ಯಾಂಕುಗಳ ಸಂಘ (Indian Bank’s Association – IBA) ಜಂಟಿಯಾಗಿ ಇದನ್ನು ಸ್ಥಾಪಿಸಿವೆ.
- ಯಾವುದರ ಅಡಿಯಲ್ಲಿ ಸ್ಥಾಪಿಸಲಾಗಿದೆ?: ಇದನ್ನು ‘ಪಾವತಿ ಮತ್ತು ನಿವಾರಣಾ ವ್ಯವಸ್ಥೆಗಳ ಕಾಯ್ದೆ’, 2007 ರ (Payment and Settlement Systems Act) ಅಡಿಯಲ್ಲಿ ಸ್ಥಾಪಿಸಲಾಗಿದೆ.
- NPCI ನ ಪ್ರಮುಖ ಉತ್ಪನ್ನಗಳು:
- ರುಪೇ (RuPay)
- ರಾಷ್ಟ್ರೀಯ ಸಾಮಾನ್ಯ/ಏಕರೂಪ ಸಂಚಾರ ಕಾರ್ಡ್ (National Common Mobility Card)
- ಭಾರತ್ ಇಂಟರ್ಫೇಸ್ ಫಾರ್ ಮನಿ (BHIM)
- ಏಕೀಕೃತ ಪಾವತಿ ವ್ಯವಸ್ಥೆ (UPI)
- ಭಾರತ್ ಬಿಲ್ ಪಾವತಿ ವ್ಯವಸ್ಥೆ (Bharat Bill Payment System
‘ಮಿಷನ್ ದೃಷ್ಟಿ’ (ವಿಶ್ವದ ಮೊದಲ OptoSAR ಉಪಗ್ರಹ) : ಗ್ಯಾಲಕ್ಸ್ ಐ
ವಿಜ್ಞಾನ ಮತ್ತು ತಂತ್ರಜ್ಞಾನ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಭಾರತೀಯ ಬಾಹ್ಯಾಕಾಶ ನವೋದ್ಯಮ ‘ಗ್ಯಾಲಕ್ಸ್ಐ’ (GalaxEye) ವಿಶ್ವದ ಮೊಟ್ಟಮೊದಲ ಒಪ್ಟೋಸಾರ್ (OptoSAR) ಉಪಗ್ರಹವಾದ ‘ಮಿಷನ್ ದೃಷ್ಟಿ’ಯನ್ನು ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಸ್ಪೇಸ್ಎಕ್ಸ್ನ ‘ಫಾಲ್ಕನ್ 9’ (Falcon 9) ಉಡಾವಣಾ ವಾಹನದ ಮೂಲಕ ಉಡಾವಣೆ ಮಾಡಿದೆ.
ಮಿಷನ್ ದೃಷ್ಟಿ (Mission Drishti)ಯ ಕುರಿತು:
- ಇದು ವಿಶ್ವದ ಮೊಟ್ಟಮೊದಲ ಒಪ್ಟೋಸಾರ್ (OptoSAR) ಉಪಗ್ರಹವಾಗಿದೆ.
- ಇದನ್ನು ಮೇ 3 2026 ರಂದು ಭಾರತೀಯ ಬಾಹ್ಯಾಕಾಶ-ತಂತ್ರಜ್ಞಾನ ನವೋದ್ಯಮವಾದ ಗ್ಯಾಲಕ್ಸ್ಐ (ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿಗಳಿಂದ ಸ್ಥಾಪಿತವಾದ ಸಂಸ್ಥೆ) ಸ್ಪೇಸ್ಎಕ್ಸ್ನ ಫಾಲ್ಕನ್ 9 ಉಡಾವಣಾ ವಾಹನದ ಮೂಲಕ ಉಡಾವಣೆ ಮಾಡಿದೆ.
- 190 ಕೆ.ಜಿ. ತೂಕದ ಈ ‘ಭೂ ವೀಕ್ಷಣಾ ಉಪಗ್ರಹ’ವು (Earth Observation), ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಅತ್ಯುನ್ನತ ಸ್ಪಷ್ಟತೆಯ ಚಿತ್ರಗಳನ್ನು (High-resolution imagery) ಸೆರೆಹಿಡಿಯಲು ‘ಸಿಂಥೆಟಿಕ್ ಅಪರ್ಚರ್ ರೇಡಾರ್’ (SAR) ಹಾಗೂ ದೃಗ್ ಸಂವೇದಕಗಳನ್ನು (Optical sensors) ಒಗ್ಗೂಡಿಸಿದೆ.
ಪ್ರಮುಖ ವೈಶಿಷ್ಟ್ಯಗಳು:
- ತಂತ್ರಜ್ಞಾನ: ಇದು ‘ಸಿಂಥೆಟಿಕ್ ಅಪರ್ಚರ್ ರೇಡಾರ್’ (SAR) ಮತ್ತು ಮಲ್ಟಿ-ಸ್ಪೆಕ್ಟ್ರಲ್ ಆಪ್ಟಿಕಲ್ ಸಂವೇದಕಗಳನ್ನು (OptoSAR) ಒಂದೇ ವೇದಿಕೆಯಲ್ಲಿ ಸಂಯೋಜಿಸುತ್ತದೆ.
- ಅನುಕೂಲ: ಸಾಂಪ್ರದಾಯಿಕ ಉಪಗ್ರಹಗಳಿಗಿಂತ ಭಿನ್ನವಾಗಿ, ಇದು ಮೋಡ ಕವಿದ ವಾತಾವರಣದಲ್ಲಿಯೂ ಮತ್ತು ರಾತ್ರಿಯ ವೇಳೆಯಲ್ಲಿಯೂ ಹೈ-ರೆಸಲ್ಯೂಶನ್ ಚಿತ್ರಣವನ್ನು ಒದಗಿಸುತ್ತದೆ.
- ಅನ್ವಯಗಳು: ಗಡಿ ಕಣ್ಗಾವಲು, ವಿಪತ್ತು ನಿರ್ವಹಣೆ, ಕೃಷಿ, ಮೂಲಸೌಕರ್ಯಗಳ ಮೇಲ್ವಿಚಾರಣೆ ಮತ್ತು ರಕ್ಷಣಾ ವಲಯದಲ್ಲಿ ಇದನ್ನು ಬಳಸಲಾಗುತ್ತದೆ.
- ಮಹತ್ವ: ಇದು ಭಾರತದ ಅತಿ ದೊಡ್ಡ ಖಾಸಗಿ-ನಿರ್ಮಿತ ಉಪಗ್ರಹವಾಗಿದ್ದು, ದೇಶೀಯ ಖಾಸಗಿ ಬಾಹ್ಯಾಕಾಶ ಸಾಮರ್ಥ್ಯವನ್ನು ಉತ್ತೇಜಿಸಲಿದೆ.
- ಯೋಜನೆಯ ಗುರಿ: 2029 ರ ವೇಳೆಗೆ 8-12 ಉಪಗ್ರಹಗಳ ಸಮೂಹವನ್ನು ನಿರ್ಮಿಸುವ ಯೋಜನೆಯ ಭಾಗವಾಗಿ ಇದನ್ನು ಉಡಾವಣೆ ಮಾಡಲಾಗಿದೆ.
ನೌಕಾ ಹಡಗು-ನಿರೋಧಕ ಕ್ಷಿಪಣಿ – ಅಲ್ಪ ಶ್ರೇಣಿ (NASM-SR)
ರಕ್ಷಣೆ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಭಾರತವು ಒಡಿಶಾ ಕರಾವಳಿಯ ಬಂಗಾಳಕೊಲ್ಲಿಯಲ್ಲಿ, ‘ಸೀ ಕಿಂಗ್’ (Sea King) ಹೆಲಿಕಾಪ್ಟರ್ ಮೂಲಕ ‘ಅಲ್ಪ-ಶ್ರೇಣಿಯ ನೌಕಾ ಹಡಗು-ನಿರೋಧಕ ಕ್ಷಿಪಣಿ’ಯ (NASM-SR) ಚೊಚ್ಚಲ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದೆ.
ನೌಕಾ ಹಡಗು-ನಿರೋಧಕ ಕ್ಷಿಪಣಿ – ಅಲ್ಪ ಶ್ರೇಣಿ (Naval Anti-Ship Missile – Short Range):
- ಇದು ಹೆಲಿಕಾಪ್ಟರ್-ಆಧಾರಿತ ಕಡಲ ದಾಳಿ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ, ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ವಾಯು-ಉಡಾವಣಾ ಹಡಗು-ನಿರೋಧಕ ಕ್ಷಿಪಣಿಯಾಗಿದೆ.
- ಇದು ಭಾರತದ ಮೊಟ್ಟಮೊದಲ ದೇಶೀಯ ಹೆಲಿಕಾಪ್ಟರ್-ಉಡಾವಣಾ ಹಡಗು-ನಿರೋಧಕ ಕ್ಷಿಪಣಿಯಾಗಿದೆ.
- ಬ್ರಿಟಿಷ್ ಮೂಲದ ‘ಸೀ ಈಗಲ್’ (Sea Eagle) ಕ್ಷಿಪಣಿಗಳ ಬದಲಿಗೆ ಇದನ್ನು ಬಳಸಲು ಅಭಿವೃದ್ಧಿಪಡಿಸಲಾಗಿದೆ.
- ಉದ್ದೇಶ:- ಕಡಲ ಗುರಿಗಳ ವಿರುದ್ಧ ಭಾರತೀಯ ನೌಕಾಪಡೆಗೆ ಅತ್ಯಂತ ನಿಖರವಾದ ಹಾಗೂ ಸಂಪೂರ್ಣ ದೇಶೀಯ ದಾಳಿ ಸಾಮರ್ಥ್ಯವನ್ನು ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಮೂಲಕ ಇದು ರಕ್ಷಣಾ ವಲಯದಲ್ಲಿ ಭಾರತದ ಸ್ವಾವಲಂಬನೆಯನ್ನು ಮತ್ತಷ್ಟು ಬಲಪಡಿಸಲಿದೆ.
- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಅಡಿಯಲ್ಲಿ ಬರುವ ‘ರಿಸರ್ಚ್ ಸೆಂಟರ್ ಇಮಾರತ್’ (RCI), ಇತರೆ ಪ್ರಯೋಗಾಲಯಗಳ ಸಹಯೋಗದೊಂದಿಗೆ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.








ನಿಮ್ಮದೊಂದು ಉತ್ತರ