ಭಾರತದ ಮೊದಲ ರಾಜ್ಯ-ನೇತೃತ್ವದ ಬಾಹ್ಯಾಕಾಶ ತಂತ್ರಜ್ಞಾನ ಇನ್ಕ್ಯುಬೇಟರ್ : ಬೆಂಗಳೂರು

ಇತ್ತೀಚೆಗೆ ಸುದ್ದಿಯಲ್ಲಿದೆ:
- ಬಾಹ್ಯಾಕಾಶ ತಂತ್ರಜ್ಞಾನಕ್ಕಾಗಿ ಭಾರತದ ಮೊದಲ ರಾಜ್ಯ-ನೇತೃತ್ವದ ‘ಉತ್ಕೃಷ್ಟತಾ ಕೇಂದ್ರ’ವಾಗಿ (Centre of Excellence) ಕಾರ್ಯನಿರ್ವಹಿಸಲು ಕರ್ನಾಟಕವು ಬೆಂಗಳೂರಿನಲ್ಲಿ ‘CoE ಸ್ಪೇಸ್ ಟೆಕ್ ಫೌಂಡೇಶನ್’ ಅನ್ನು ಪ್ರಾರಂಭಿಸಿದೆ.
ಈ ಉತ್ಕೃಷ್ಟತಾ ಕೇಂದ್ರದ (CoE) ಬಗ್ಗೆ:
- ಸ್ಥಳ: ಏರೋಸ್ಪೇಸ್ ಪಾರ್ಕ್, ಬೆಂಗಳೂರು.
- ಪ್ರಾರಂಭಿಸಿದವರು: ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸಂಸ್ಥೆ(KITS) ಹಾಗೂ ಸ್ಯಾಟ್ಕಾಮ್ ಕೈಗಾರಿಕಾ ಸಂಘಟನೆ (SIA-India).
- ಗುರಿ: ಡೀಪ್-ಟೆಕ್ ಬಾಹ್ಯಾಕಾಶ ಆವಿಷ್ಕಾರಗಳನ್ನು ವಾಣಿಜ್ಯಕರಣಗೊಳಿಸುವುದು ಮತ್ತು ಅವುಗಳನ್ನು ಬೃಹತ್ ಮಟ್ಟದ ವ್ಯವಹಾರಗಳಾಗಿ ಬೆಳೆಸುವುದು.
- ಗಮನಹರಿಸುವ ಕ್ಷೇತ್ರಗಳು: ಇದು ನವೋದ್ಯಮಗಳಿಗೆ (ಸ್ಟಾರ್ಟ್ ಅಪ್) ಇನ್ಕ್ಯುಬೇಶನ್ ಸೌಲಭ್ಯ ಒದಗಿಸುತ್ತದೆ, ಪ್ರತಿಭೆಗಳಿಗೆ ತರಬೇತಿ ನೀಡುತ್ತದೆ ಮತ್ತು ಕೃಷಿ, ಹವಾಮಾನ ಹಾಗೂ ರಕ್ಷಣಾ ಕ್ಷೇತ್ರಗಳ ಸಮಸ್ಯೆಗಳಿಗೆ ವಿವಿಧ ವಲಯಗಳನ್ನು ಒಳಗೊಂಡ ಪರಿಹಾರಗಳನ್ನು ರೂಪಿಸುತ್ತದೆ.








ನಿಮ್ಮದೊಂದು ಉತ್ತರ