ಕೇಂದ್ರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವರು (MoPSW), ಭಾರತದ ಮೂರನೇ ಅತಿ ದೊಡ್ಡ ಅನಿಲ ವಾಹಕ (VLGC) ಶಿವಾಲಿಕ್ ಅವರನ್ನು ಸ್ವೀಕರಿಸಿದರು.
ಅತಿ ದೊಡ್ಡ ಅನಿಲ ವಾಹಕ (VLGC), ಶಿವಾಲಿಕ್ ನ ಕುರಿತು:
ಇದನ್ನು ದಕ್ಷಿಣ ಕೊರಿಯಾದಲ್ಲಿ ನಿರ್ಮಿಸಲಾಗಿದ್ದು, ಹಿಮಾಲಯದ ಶ್ರೇಣಿಯ ಹೆಸರನ್ನು ಇಡಲಾಗಿದೆ.
ಇದು 82,000 ಘನ ಮೀಟರ್ LPG ವಾಹಕವಾಗಿದ್ದು, ಸುಧಾರಿತ ಸುರಕ್ಷತೆ, ತಾಪಮಾನ ನಿಯಂತ್ರಣ ಮತ್ತು ಕಾರ್ಯಾಚರಣಾ ವ್ಯವಸ್ಥೆಗಳನ್ನು ಹೊಂದಿದೆ.
ಈ ವಾಹಕ ಭಾರತದ ಶಿಪ್ಪಿಂಗ್ ನಿಗಮ ನಿಯಮಿತ (SCI) ದ ಈಗಿರುವ ಎರಡು ಅತಿ ದೊಡ್ಡ ಅನಿಲ ವಾಹಕಗಳಾದ ಸಾಹ್ಯಾದ್ರಿ ಮತ್ತು ಆನಂದಮಯಿ ವಾಹಕಗಳ ಜೊತೆ ಸೇರುತ್ತದೆ.
ಮಹತ್ವ:- ಶಿವಾಲಿಕ್ ಆಗಮನವು ಭಾರತದ ಸಮುದ್ರ ಸ್ವಾವಲಂಬನೆಯತ್ತ ಸಾಗುವಿಕೆಯನ್ನು ಸಂಕೇತಿಸುತ್ತದೆ.
ಪರಂಪರಾಗತ ಕೃಷಿ ವಿಕಾಸ ಯೋಜನೆ (PKVY)
ಸಾಮಾನ್ಯ ಅಧ್ಯಯನ 3/ ಕೃಷಿ, (ಸಾಮಾನ್ಯ ಅಧ್ಯಯನ-3/ ಪರಿಸರ
ಸಂದರ್ಭ:
ಭಾರತದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸಲು 2015 ರಲ್ಲಿರಾಷ್ಟ್ರೀಯ ಸುಸ್ಥಿರ ಕೃಷಿಯ ಗುರಿ ಅಡಿಯಲ್ಲಿ ಪ್ರಾರಂಭಿಸಲಾದ ಪರಂಪರಾಗತ ಕೃಷಿ ವಿಕಾಸ ಯೋಜನೆ (PKVY) ಒಂದು ಪ್ರಮುಖ ಉಪಕ್ರಮವಾಗಿ ಹೊರಹೊಮ್ಮಿದೆ.
ಸಾವಯವ ಕೃಷಿಯ ಕುರಿತಾದ ಮೂಲಭೂತ ಅಂಶಗಳು:
ಸಾವಯವ ಕೃಷಿಯು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳಂತಹ ಸಂಶ್ಲೇಷಿತ ಒಳಹರಿವುಗಳನ್ನು ಹೊರತುಪಡಿಸಿದ ಸುಸ್ಥಿರ ಕೃಷಿ ವ್ಯವಸ್ಥೆಯಾಗಿದೆ.
ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು, ಕೀಟ ಮತ್ತು ರೋಗಗಳನ್ನು ನಿರ್ವಹಿಸಲು ಇದು ಬೆಳೆ ಉಳಿಕೆಗಳು, ತೋಟದ ಗೊಬ್ಬರ ಮತ್ತು ಮಿಶ್ರಗೊಬ್ಬರದಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಅವಲಂಬಿಸಿದೆ.
ಭಾರತದಲ್ಲಿ ಸಾವಯವ ಕೃಷಿ:
ವಿಸ್ತೀರ್ಣದ ದೃಷ್ಟಿಯಿಂದ ಭಾರತವು ಜಾಗತಿಕವಾಗಿ ಸಾವಯವ ಕೃಷಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಮಧ್ಯಪ್ರದೇಶವು ಸಾವಯವ ಪ್ರಮಾಣೀಕರಣದ ಅಡಿಯಲ್ಲಿ ಅತಿ ಹೆಚ್ಚು ಪ್ರದೇಶವನ್ನು ಹೊಂದಿದೆ,ನಂತರ ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್ ಮತ್ತು ಕರ್ನಾಟಕ ಇವೆ.
ಸಿಕ್ಕಿಂ ಭಾರತದ ಮೊದಲ ಸಂಪೂರ್ಣ ಸಾವಯವ ರಾಜ್ಯ.
ಸಾವಯವ ಕೃಷಿಯನ್ನು ಅನುಸರಿಸುವ ರೈತರ ಸಂಖ್ಯೆಯಲ್ಲಿ ಭಾರತ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ.
ಪರಂಪರಾಗತ ಕೃಷಿ ವಿಕಾಸ ಯೋಜನೆ (PKVY)ಯ ಬಗ್ಗೆ:
ಇದನ್ನು 2015 ರಲ್ಲಿ ರಾಷ್ಟ್ರೀಯ ಸುಸ್ಥಿರ ಕೃಷಿಯ ಗುರಿ ಅಡಿಯಲ್ಲಿ ಪ್ರಾರಂಭಿಸಲಾಯಿತು.
ಗುರಿ:- ಸಾವಯವ ಕೃಷಿಯಲ್ಲಿ ತೊಡಗಿರುವ ರೈತರಿಗೆ ಉತ್ಪಾದನೆಯಿಂದ ಸಂಸ್ಕರಣೆ, ಪ್ರಮಾಣೀಕರಣ ಮತ್ತು ಮಾರುಕಟ್ಟೆ ಮತ್ತು ಕೊಯ್ಲಿನ ನಂತರದ ನಿರ್ವಹಣೆಯವರೆಗೆ ಸಂಪೂರ್ಣ ಬೆಂಬಲವನ್ನು ನೀಡುವುದು.
ಉದ್ದೇಶ:- ಕಡಿಮೆ-ವೆಚ್ಚದ, ರಾಸಾಯನಿಕ-ಮುಕ್ತ ತಂತ್ರಗಳನ್ನು ಸಂಯೋಜಿಸುವ ಪರಿಸರ-ಕೃಷಿಯ ಮಾಪನ ಮಾದರಿಯನ್ನು ಮುನ್ನಡೆಸುವುದು.
ಮಹತ್ವ:- ಆಹಾರ ಸುರಕ್ಷತೆ, ಆದಾಯ ಗಳಿಕೆ ಮತ್ತು ಪರಿಸರ ಸುಸ್ಥಿರತೆಯನ್ನು ಹೆಚ್ಚಿಸುವುದು.
ರಾಷ್ಟ್ರೀಯ ಹಾಡು “ವಂದೇ ಮಾತರಂ” ಗೆ 150ನೇ ವಾರ್ಷಿಕೋತ್ಸವ
ಸಾಮಾನ್ಯ ಅಧ್ಯಯನ 1/ ಸಂಸ್ಕೃತಿ
ಸಂದರ್ಭ:
ರಾಷ್ಟ್ರೀಯ ಹಾಡು ‘ವಂದೇ ಮಾತರಂ’ ನ 150 ನೇ ವಾರ್ಷಿಕೋತ್ಸವವನ್ನು ದೇಶದಾದ್ಯಂತ ಆಚರಿಸುವುದಾಗಿ ಕೇಂದ್ರ ಸಚಿವ ಸಂಪುಟ ಘೋಷಿಸಿದೆ.
ವಂದೇ ಮಾತರಂ ನ ಕುರಿತು:
ವಂದೇ ಮಾತರಂ ಅನ್ನು ಬಂಕಿಮ ಚಂದ್ರ ಚಟರ್ಜಿ ಸಂಸ್ಕೃತದಲ್ಲಿ ರಚಿಸಿದರುಮತ್ತು ಮೊದಲ ಬಾರಿಗೆ ಆನಂದಮಠ (1882) ಕಾದಂಬರಿಯಲ್ಲಿ ಕಾಣಿಸಿಕೊಂಡಿತು.
ಕಲ್ಕತ್ತಾ ದಲ್ಲಿ ನಡೆದ 1896 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಮೊದಲ ಸಾರ್ವಜನಿಕ ವಾಚನವು ಇದಕ್ಕೆ ರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟಿತು.
1950 ರ ರಾಷ್ಟ್ರಪತಿ ಆದೇಶದ ಪ್ರಕಾರ ರಾಷ್ಟ್ರ ಗೀತೆ ಜನ ಗಣ ಮನಕ್ಕೆ ಸಮಾನವಾದ ಸ್ಥಾನಮಾನವನ್ನು ರಾಷ್ಟ್ರೀಯ ಹಾಡು ‘ವಂದೇ ಮಾತರಂ’ ಹೊಂದಿದೆ.
51A(a) ವಿಧಿಯು ರಾಷ್ಟ್ರಗೀತೆಗೆ ಗೌರವವನ್ನು ಕಡ್ಡಾಯಗೊಳಿಸುತ್ತದೆ ಆದರೆ ರಾಷ್ಟ್ರೀಯ ಹಾಡಿಗೆ ಅಲ್ಲ, ಇದು ಸೂಕ್ಷ್ಮ ಸಮತೋಲನವನ್ನು ಸೂಚಿಸುತ್ತದೆ.
ಈ ಹಾಡು ವಸಾಹತುಶಾಹಿ ವಿರೋಧಿ ಕ್ರಾಂತಿಕಾರಿಗಳ ಒಗ್ಗಟ್ಟಿನ ಕೂಗಾಗಿತ್ತು ಮತ್ತು ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಸಾಮೂಹಿಕ ಸಂಕಲ್ಪದ ಸಂಕೇತವಾಗಿತ್ತು.
ಭಾರತದಲ್ಲಿ ಕುಷ್ಠರೋಗ
ಸಾಮಾನ್ಯ ಅಧ್ಯಯನ- 2/ ಆರೋಗ್ಯ
ಸಂದರ್ಭ:
ಭಾರತದಲ್ಲಿ ಕುಷ್ಠರೋಗ ಹರಡುವಿಕೆಯ ಪ್ರಮಾಣವು 1981 ರಲ್ಲಿ 10,000 ಜನಸಂಖ್ಯೆಗೆ 57.2 ರಿಂದ 2025 ರಲ್ಲಿ ಕೇವಲ 0.57 ಕ್ಕೆ ಇಳಿದಿದೆ.
ಕುಷ್ಠರೋಗದ ಬಗ್ಗೆ:
ಇದನ್ನು ಹ್ಯಾನ್ಸೆನ್ ಕಾಯಿಲೆ ಎಂತಲು ಕರೆಯುತ್ತಾರೆ.
ಇದು ದೀರ್ಘಕಾಲದ ನರಸ್ನಾಯುಕ ಅಸ್ವಸ್ಥತೆಯಾಗಿದೆ. ಇದು ಮೈಕೋಬ್ಯಾಕ್ಟೀರಿಯಂ ಲೆಪ್ರೇಯ ಹಲವಾರು ತಳಿಗಳಿಂದ ಉಂಟಾಗುತ್ತದೆ.
ಕುಷ್ಠರೋಗವನ್ನು ಬಹೌಷಧ ಚಿಕಿತ್ಸೆ (ಮಲ್ಟಿ-ಡ್ರಗ್ ಥೆರಪಿ) ಯ ಮೂಲಕ ಗುಣಪಡಿಸಬಹುದು.
ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ಕಾರ್ಯಕ್ರಮ (NLEP):
ಇದು ರಾಷ್ಟ್ರೀಯ ಆರೋಗ್ಯ ಗುರಿ (NHM) ಅಡಿಯಲ್ಲಿನ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
ಉದ್ದೇಶ:- 2030 ರ ವೇಳೆಗೆ ಪ್ರತಿಯೊಂದು ಜಿಲ್ಲೆಯಲ್ಲಿ ಕುಷ್ಠರೋಗವನ್ನು ನಿರ್ಮೂಲನೆ ಮಾಡುವುದು.
ನಿಕುಸ್ತ್ (NIKUSTH) – ಭಾರತದಾದ್ಯಂತ ಅಳವಡಿಸಲಾದನೈಜ-ಸಮಯದ ಕುಷ್ಠರೋಗ ವರದಿ ಮಾಡುವ ಸಾಫ್ಟ್‌ವೇರ್.
ನಾಮ್ಚಿಕ್ – ನಾಮ್ ಫುಕ್ ಕಲ್ಲಿದ್ದಲು ಘಟಕ
ಸಾಮಾನ್ಯ ಅಧ್ಯಾಯನ 3 / ಪರಿಸರ ಅಧ್ಯಾಯನ
ಇದೀಗ ಸುದ್ದಿಯಲ್ಲಿದೆ:
ಅರುಣಾಚಲ ಪ್ರದೇಶವು ತನ್ನ ಮೊದಲ ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯನ್ನು ಚಾಂಗ್ಲಾಂಗ್ ಜಿಲ್ಲೆಯ ನಾಮ್ಚಿಕ್ – ನಾಮ್ ಫುಕ್ ಕಲ್ಲಿದ್ದಲು ಘಟಕದಲ್ಲಿ ಪ್ರಾರಂಭಿಸಿದೆ.
ನಾಮ್ಚಿಕ್ – ನಾಮ್ ಫುಕ್ ಕಲ್ಲಿದ್ದಲು ಘಟಕದ ಬಗ್ಗೆ:
ಸ್ಥಳ:ಮೇಲಿನ ಅಸ್ಸಾಂ ಕಲ್ಲಿದ್ದಲು ಪಟ್ಟಿ ಪ್ರದೇಶದ ಭಾಗವಾದ ಅರುಣಾಚಲ ಪ್ರದೇಶ ರಾಜ್ಯದ ಚಾಂಗ್ಲಾಂಗ್ ಜಿಲ್ಲೆಯಲ್ಲಿದೆ.
ಮೀಸಲು: ಅಂದಾಜು 1.5 ಕೋಟಿ ಟನ್ ನಷ್ಟು ಕಲ್ಲಿದ್ದಲು, ದೀರ್ಘಾವಧಿಯ ಉತ್ಪಾದನಾ ಕಾರ್ಯಸಾಧ್ಯತೆಯನ್ನು ಸಕ್ರಿಯಗೊಳಿಸುತ್ತದೆ.
ಆರ್ಥಿಕ ಪರಿಣಾಮ: ರಾಜ್ಯಕ್ಕೆ ವಾರ್ಷಿಕ ₹100 ಕೋಟಿ ಆದಾಯ ಬರುವ ನಿರೀಕ್ಷೆ.
ಪರಿಸರ ವೈಶಿಷ್ಟ್ಯಗಳು: ಭೂ ಸುಧಾರಣೆ, ಅರಣ್ಯೀಕರಣ ಮತ್ತು ಪರಿಸರ-ಜವಾಬ್ದಾರಿಯುತ ಗಣಿಗಾರಿಕೆಯ ಮೇಲೆ ಕೇಂದ್ರೀಕರಿಸುವ “ಗುರಿ ಹಸಿರು ಕಲ್ಲಿದ್ದಲು ಪ್ರದೇಶಗಳ” ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಸಾಮಾಜಿಕ ಪರಿಣಾಮ: ಸ್ಥಳೀಯ ಉದ್ಯೋಗ ಸೃಷ್ಟಿ; ಅಕ್ರಮ ಗಣಿಗಾರಿಕೆ ಚಟುವಟಿಕೆಗಳ ಕಡಿತ.
ಕಾರ್ಯತಂತ್ರದ ಜೋಡಣೆ : ಸಮತೋಲಿತ ಈಶಾನ್ಯ ಅಭಿವೃದ್ಧಿ ಕಾರ್ಯತಂತ್ರವಾದ PM EAST (ಅಧಿಕಾರ ನೀಡಿ, ಕಾರ್ಯನಿರ್ವಹಿಸಿ, ಬಲಪಡಿಸಿ, ಪರಿವರ್ತಿಸಿ) ದೃಷ್ಟಿಕೋನವನ್ನು ಬೆಂಬಲಿಸುತ್ತದೆ.
ಭಾರತದ ಒಂಟೆಗಳ ಸಂಖ್ಯೆಯಲ್ಲಿ ನಿರಂತರ ಕುಸಿತ
ಸಾಮಾನ್ಯ ಅಧ್ಯಯನ 3/ಸುದ್ದಿಯಲ್ಲಿರುವ ಪ್ರಭೇದ ಗಳು
ಸಂದರ್ಭ:
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು, ಭಾರತದ ಒಂಟೆಗಳ ಸಂಖ್ಯೆಯಲ್ಲಿನ ಸ್ಥಿರ ಕುಸಿತವನ್ನು ಹಿಮ್ಮೆಟ್ಟಿಸುವ ಗುರಿಯನ್ನು ಹೊಂದಿರುವ ರಾಷ್ಟ್ರೀಯ ಧ್ಯೇಯವಾದ ರಾಷ್ಟ್ರೀಯ ಒಂಟೆ ಸುಸ್ಥಿರತಾ ಉಪಕ್ರಮ (NCSI) ವನ್ನು ಪ್ರಾರಂಭಿಸಲು ಯೋಜಿಸುತ್ತಿದೆ.
ಪ್ರಮುಖ ಸಂಶೋಧನೆಗಳು:-
ಭಾರತವು ತನ್ನ ಒಂಟೆಗಳ ಸಂಖ್ಯೆಯಲ್ಲಿ, ವಿಶೇಷವಾಗಿ ಸಾಂಪ್ರದಾಯಿಕವಾಗಿ ಒಂಟೆಗಳನ್ನು ಸಾಕುತ್ತಿರುವ ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ತ್ವರಿತ ಮತ್ತು ಆತಂಕಕಾರಿ ಕುಸಿತವನ್ನು ಕಾಣುತ್ತಿದೆ.
20 ನೇ ಜಾನುವಾರು ಗಣತಿಯ ಪ್ರಕಾರ, 2019 ರಲ್ಲಿ ಭಾರತದಲ್ಲಿರುವ ಒಂಟೆಗಳ ಸಂಖ್ಯೆ 2.52 ಲಕ್ಷಕ್ಕೆ ಇಳಿದಿದೆ, ಇದು 1977 ರಲ್ಲಿ ಸುಮಾರು 11 ಲಕ್ಷ ವಿತ್ತು ಮತ್ತು 2013 ರಲ್ಲಿ 4 ಲಕ್ಷಕ್ಕೆ ಇಳಿದಿದೆ.
ಸುಮಾರು 90%ರಷ್ಟು ಒಂಟೆಗಳು ರಾಜಸ್ಥಾನ ಮತ್ತು ಗುಜರಾತಗಳಲ್ಲಿವೆ.
ಭಾರತದಲ್ಲಿರುವ ಒಂಟಿ ಗೂನುಳ್ಳ ಒಂಟೆಗಳು/ ಡ್ರೊಮೆಡರಿ ಕ್ಯಾಮೆಲ್ (ಕ್ಯಾಮೆಲಸ್ ಡ್ರೊಮೆಡೇರಿಯಸ್):
ಭಾರತದಲ್ಲಿ ಮುಖ್ಯವಾಗಿ ಒಂದು ಪ್ರಭೇದದ ಒಂಟೆ ಇದೆ. ಇದು ಒಂಟಿ ಗೂನುಳ್ಳ ಒಂಟೆಯಾಗಿದ್ದು, ಮರುಭೂಮಿಯ ಪರಿಸ್ಥಿತಿಗಳಿಗೆ ಹೊಂದಿಕೊಂಡಿದೆ.
ಚಿಂಕಾರ ಮತ್ತು ಒಂಟೆ ರಾಜಸ್ಥಾನದ ಎರಡು ರಾಜ್ಯ ಪ್ರಾಣಿಗಳು.
ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆ:
ಸಾರಿಗೆ ಮತ್ತು ಕಾರ್ಮಿಕ: ಸಾಂಪ್ರದಾಯಿಕವಾಗಿ ಮರುಭೂಮಿ ಪ್ರದೇಶಗಳಲ್ಲಿ ಸರಕುಗಳನ್ನು ಸಾಗಿಸಲು, ಉಳುಮೆ ಮಾಡಲು ಮತ್ತು ಸಾಗಣೆಗೆ ಒಂಟೆಗಳನ್ನು ಬಳಸಲಾಗುತ್ತದೆ.
ಹಾಲು ಉತ್ಪಾದನೆ: ಒಂಟೆ ಹಾಲು ಪೌಷ್ಟಿಕವಾಗಿದ್ದು ಬೇಡಿಕೆಯಲ್ಲಿದೆ.
ಸಾಂಸ್ಕೃತಿಕ ಉತ್ಸವಗಳು: ಒಂಟೆ ಮೇಳಗಳು,ವಿಶೇಷವಾಗಿ ಬಿಕಾನೆರ್ ಒಂಟೆ ಉತ್ಸವ ಆಚರಿಸುತ್ತಾರೆ.
ರಕ್ಷಣಾ ಬಳಕೆ: ಗಡಿ ಭದ್ರತಾ ಪಡೆ (BSF) ಮರುಭೂಮಿ ಗಸ್ತುಗಳಲ್ಲಿ ಒಂಟೆಗಳನ್ನು ಬಳಸುತ್ತದೆ.
ಕೊಂಕಣ -25 ಸಮಾರಾಭ್ಯಾಸ
ಸಾಮಾನ್ಯ ಅಧ್ಯಯನ- 3/ರಕ್ಷಣಾ
ಸಂದರ್ಭ:
ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ 2025ರ ಕೊಂಕಣ ಸಮರಾಭ್ಯಾಸ ಎಂಬ ವಾರ್ಷಿಕ ದ್ವಿಪಕ್ಷೀಯ ಸಮುದ್ರಯಾನ ಅಭ್ಯಾಸವನ್ನು ನಡೆಸಿವೆ. ಈ ಅಭ್ಯಾಸವು ಮೊಟ್ಟಮೊದಲ ಬಾರಿ 2004ರಲ್ಲಿ ಆರಂಭವಾಯಿತು.
ಕೊಂಕಣ-25 ಸಮರಾಭ್ಯಾಸದ ಬಗ್ಗೆ:
ಭಾಗವಹಿಸುವ ದೇಶಗಳು:- ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್
ಪ್ರಕಾರ:- ಇದು ವಾರ್ಷಿಕ ದ್ವಿಪಕ್ಷೀಯ ಸಮುದ್ರ ಸಂಭಂದಿತ ಸಮರಾಭ್ಯಾಸವಾಗಿದೆ.
ಭಾರತ – ಯುನೈಟೆಡ್ ಕಿಂಗ್‌ಡಮ್ ನಡುವಿನ ಇತರ ದ್ವಿಪಕ್ಷೀಯ ಸಮರಾಭ್ಯಾಸಗಳು:
ಅಜೇಯ ವಾರಿಯರ್ ಸಮರಾಭ್ಯಾಸ (ಸೇನೆ)
ಇಂದ್ರಧನುಷ್ ಸಮರಾಭ್ಯಾಸ (ವಾಯುಪಡೆ)
ಕೋಬ್ರಾ ವಾರಿಯರ್ ಸಮರಾಭ್ಯಾಸ (ಯುನೈಟೆಡ್ ಕಿಂಗ್‌ಡಮ್ ಆಯೋಜಿಸಿದ ಬಹುರಾಷ್ಟ್ರೀಯ ವಾಯು ಸಮರಾಭ್ಯಾಸ).
ಹೆಲ್ಪ್‌ಏಜ್ ಇಂಡಿಯಾ ‘ಅಡ್ವಾಂಟ್‌ಏಜ್60’ ಅಭಿಯಾನವನ್ನು ಪ್ರಾರಂಭಿಸಿದೆ
ಇದೀಗ ಸುದ್ದಿಯಲ್ಲಿದೆ:
ಹಿರಿಯ ನಾಗರಿಕರ ಹಿತಕ್ಕಾಗಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆ ‘ಹೆಲ್ಪ್‌ಏಜ್ ಇಂಡಿಯಾ’ ತನ್ನ ಹೊಸ ಅಭಿಯಾನ ‘ಅಡ್ವಾಂಟೇಜ್ 60’ ಅನ್ನು ಪ್ರಾರಂಭಿಸಿದೆ.
“ಅಡ್ವಾಂಟ್ ಏಜ್60: ಆಕಾಂಕ್ಷೆಗಳಿಗೆ ಶಕ್ತಿ ನೀಡುವುದು” :
ಇದು ಭಾರತದ ಹಿರಿಯ ನಾಗರಿಕರಲ್ಲಿ ವಯೋವೃದ್ಧತೆಯ ಕುರಿತು ಸಕಾರಾತ್ಮಕ ದೃಷ್ಟಿಕೋನವನ್ನು ಉತ್ತೇಜಿಸುವ ಒಂದು ಅಭಿಯಾನವಾಗಿದೆ.
ಉದ್ದೇಶ:- ಈ ಅಭಿಯಾನವು 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಚುರುಕಾದ, ಸ್ವಾವಲಂಬಿ ಮತ್ತು ಶಕ್ತಿಯುತ ಜೀವನ ನಡೆಸಬಹುದು ಎಂಬುದನ್ನು ತೋರಿಸುತ್ತದೆ. ಇದು ಹಿರಿಯರ ಶಕ್ತಿ ಮತ್ತು ಸಾಮರ್ಥ್ಯವನ್ನು ಎತ್ತಿ ತೋರಿಸುವುದರ ಮೂಲಕ ವಯೋಭೇದದ ಪೂರ್ವಾಗ್ರಹಗಳನ್ನು ಎದುರಿಸಲು ಪ್ರಯತ್ನಿಸುತ್ತದೆ.
ಧೇಯವಾಕ್ಯ:- “ಆಕಾಂಕ್ಷೆಗಳಿಗೆ ಶಕ್ತಿ ನೀಡುವುದು – ಸಕ್ರಿಯ, ಸಕ್ರಿಯಗೊಳಿಸಿದ ಮತ್ತು ಸಬಲೀಕೃತ”.
2025 ರ ಅಂತರರಾಷ್ಟ್ರೀಯ ವೃದ್ಧರ ದಿನದಂದು ಬಿಡುಗಡೆ ಮಾಡಲಾಗಿದೆ.
ತಂಬಾಕು ಬಳಕೆಯ ವ್ಯಾಪಕತೆಯ ಪ್ರವೃತ್ತಿಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ವರದಿ
ಸಾಮಾನ್ಯ ಅಧ್ಯಯನ 2/ ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
2000–2024 ರ ತಂಬಾಕು ಬಳಕೆಯ ವ್ಯಾಪಕತೆಯ ಪ್ರವೃತ್ತಿಗಳು ಮತ್ತು 2025–2030 ರ ಮುನ್ಸೂಚನೆಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ವರದಿಯನ್ನು ಬಿಡುಗಡೆ ಮಾಡಿದೆ.
ಪ್ರಮುಖ ಮುಖ್ಯಾಂಶಗಳು
ಜಾಗತಿಕ ಪ್ರವೃತ್ತಿಗಳು:
ಬಳಕೆಯಲ್ಲಿ ಕುಸಿತ : ಜಾಗತಿಕವಾಗಿ ವಯಸ್ಕ ತಂಬಾಕು ಬಳಕೆ 26.2% (2010) ರಿಂದ 19.5% (2024) ಕ್ಕೆ ಇಳಿದಿದೆ.
ಇನ್ನೂ ಚಾಲ್ತಿಯಲ್ಲಿದೆ : ಪ್ರಗತಿಯ ಹೊರತಾಗಿಯೂ, ಜಾಗತಿಕವಾಗಿ 5 ಜನ ವಯಸ್ಕರಲ್ಲಿ ಒಬ್ಬರು ಇನ್ನೂ ತಂಬಾಕು ಸೇವಿಸುತ್ತಾರೆ.
ಇ-ಸಿಗರೇಟ್‌ಗಳ ಏರಿಕೆ : ವಿಶ್ವದಾದ್ಯಂತ 100 ಮಿಲಿಯನ್‌ಗಿಂತಲೂ ಹೆಚ್ಚು ಜನರು ಈಗ ಇ-ಸಿಗರೇಟ್‌ಗಳನ್ನು ಬಳಸುತ್ತಿದ್ದಾರೆ, ಇದು ಹೊಸ ನಿಯಂತ್ರಕ ಮತ್ತು ಆರೋಗ್ಯ ಸವಾಲುಗಳನ್ನು ಒಡ್ಡುತ್ತಿದೆ.
ಭಾರತದ ಪ್ರಗತಿ ಮತ್ತು ಸ್ಥಿತಿ:
ತಂಬಾಕು ಬಳಕೆದಾರರು (2024): 15 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 243.48 ಮಿಲಿಯನ್ ಭಾರತೀಯರು ತಂಬಾಕು ಬಳಸುತ್ತಾರೆ.
ಜಾಗತಿಕ ಸ್ಥಿತಿ: ಚೀನಾದ ನಂತರ, ಭಾರತವು 2 ನೇ ಅತಿದೊಡ್ಡ ಉತ್ಪಾದಕ ಮತ್ತು ಬ್ರೆಜಿಲ್ ನಂತರ, 2 ನೇ ಅತಿದೊಡ್ಡ ರಫ್ತುದಾರ ದೇಶ.
ತಂಬಾಕು ಸೇವನೆಯನ್ನು ನಿಯಂತ್ರಿಸಲು ಭಾರತ ಕೈಗೊಂಡ ಉಪಕ್ರಮಗಳು:
ಸಿಗರೇಟ್ ಕಾಯ್ದೆ, 1975:- ಜಾಹೀರಾತು ಮತ್ತು ಸಿಗರೇಟ್ ಪೊಟ್ಟನಗಳಲ್ಲಿ ಶಾಸನಬದ್ಧ ಆರೋಗ್ಯ ಎಚ್ಚರಿಕೆಗಳನ್ನು ಪ್ರದರ್ಶಿಸುವುದನ್ನು ಈ ಕಾಯ್ದೆ ಕಡ್ಡಾಯಗೊಳಿಸಿದೆ.
ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (COTPA), 2003: – ಈ ಕಾಯ್ದೆಯು 1975 ರ ಸಿಗರೇಟ್ ಕಾಯ್ದೆಯನ್ನು ಬದಲಾಯಿಸಿತು. ಇದು ಸಾರ್ವಜನಿಕ ಸ್ಥಳಗಳನ್ನು ಹೊಗೆ ಮುಕ್ತವಾಗಿಡುವ ಗುರಿಯನ್ನು ಹೊಂದಿದೆ ಮತ್ತು ತಂಬಾಕು ಜಾಹೀರಾತು ಮತ್ತು ಪ್ರಚಾರದ ಮೇಲೆ ನಿರ್ಬಂಧಗಳನ್ನು ವಿಧಿಸುತ್ತದೆ.
ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಮಸೂದೆ, 2019:- ಇ-ಸಿಗರೇಟ್‌ಗಳ ಉತ್ಪಾದನೆ, ತಯಾರಿಕೆ, ಆಮದು, ರಫ್ತು, ಸಾಗಣೆ, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತನ್ನು ನಿಷೇಧಿಸಿತು.
ರಾಷ್ಟ್ರೀಯ ಆರೋಗ್ಯ ನೀತಿ 2017: – ಇದು 2025 ರ ವೇಳೆಗೆ ತಂಬಾಕು ಬಳಕೆಯನ್ನು 30% ರಷ್ಟು ಕಡಿಮೆ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ.
ತಂಬಾಕು ತ್ಯಜಿಸುವ ದೂರವಾಣಿ ಸೇವೆ:- 1800-112-356 – ಹೆಚ್ಚಿನ ಸಂಖ್ಯೆಯ ತಂಬಾಕು ಬಳಕೆದಾರರನ್ನು ತಲುಪಲು ಇದನ್ನು 2016 ರಲ್ಲಿ ಪ್ರಾರಂಭಿಸಲಾಯಿತು.ಇದು ತಂಬಾಕು ನಿಲುಗಡೆಗೆ ದೂರವಾಣಿ ಆಧಾರಿತ ಮಾಹಿತಿ, ಸಲಹೆ ಮತ್ತು ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ:- ಇದನ್ನು 2007-08 ರಲ್ಲಿ ಪ್ರಾರಂಭಿಸಲಾಯಿತು. ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ, ಇದು ವಿಶ್ವ ಆರೋಗ್ಯ ಸಂಸ್ಥೆಯ ತಂಬಾಕು ನಿಯಂತ್ರಣದ ಕುರಿತಾದ ಚೌಕಟ್ಟು ಸಮಾವೇಶ (FCTC) ದ ಜೊತೆ ಹೊಂದಿಸಲಾಗಿದೆ.
ತಂಬಾಕು ಮುಕ್ತ ಚಲನಚಿತ್ರ ನಿಯಮಗಳು, 2024:- ಚಲನಚಿತ್ರಗಳು ಮತ್ತು ದೂರದರ್ಶನದಲ್ಲಿ ತಂಬಾಕು ಚಿತ್ರಣಕ್ಕಾಗಿ ಹೊಸ ಮಾನದಂಡಗಳನ್ನು ಜಾರಿಗೊಳಿಸಲಾಗಿದೆ.
ಹಳದಿ ರೇಖೆ ಅಭಿಯಾನ: 100 ಗಜದ ಒಳಗೆ ತಂಬಾಕು ಮಾರಾಟದ ಮೇಲಿನ ನಿಷೇಧವನ್ನು ಬಲಪಡಿಸಲು ಶಾಲೆಗಳ ಸುತ್ತಲೂ ಗೋಚರಿಸುವ ಸೂಚಕಗಳನ್ನು ಪರಿಚಯಿಸಲಾಯಿತು .
ತೆರಿಗೆ ಮತ್ತು ಬೆಲೆ ಮಧ್ಯಸ್ಥಿಕೆಗಳು: ಅಬಕಾರಿ ಮತ್ತು ಜಿಎಸ್‌ಟಿ ಸುಂಕಗಳಲ್ಲಿ ಗಣನಿಯ ಹೆಚ್ಚಳ, ಆದರೆ ಪರಿಣಾಮವನ್ನು ಹೆಚ್ಚಿಸಲು ತಜ್ಞರು ಮತ್ತಷ್ಟು ಹೆಚ್ಚಳವನ್ನು ಶಿಫಾರಸು ಮಾಡಿದ್ದಾರೆ..
ತಂಬಾಕಿನ (ನಿಕೋಟಿಯಾನಾ ಟಬಾಕಮ್) ಬಗ್ಗೆ:
ಸಾಗುವಳಿ:- ಇದು ದಕ್ಷಿಣ ಅಮೆರಿಕಾದ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಿಗೆ ಸ್ಥಳೀಯವಾಗಿರುವ ವಾರ್ಷಿಕ ಮೂಲಿಕೆಯ ಸಸ್ಯವಾಗಿದ್ದು , ಪ್ರಪಂಚದಾದ್ಯಂತ ವ್ಯಾಪಕವಾಗಿ ಬೆಳೆಯಲಾಗುತ್ತದೆ.
ಹವಾಮಾನ ಪರಿಸ್ಥಿತಿಗಳು:- ಇದಕ್ಕೆ 90–120 ದಿನಗಳ ಹಿಮ-ಮುಕ್ತ ಅವಧಿ,ಸೂಕ್ತ ತಾಪಮಾನ 20°C–30°C ಮತ್ತು ಕನಿಷ್ಠ 500 ಮಿಮೀ ವರೆಗೆ ಮಳೆ ಬೇಕಾಗುತ್ತದೆ.
ಮಣ್ಣು:- ಇದು ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಅಥವಾ ಮೆಕ್ಕಲು ಮಣ್ಣನ್ನು ಇಷ್ಟಪಡುತ್ತದೆ.
ನಿಕೋಟಿನ್ ಅಂಶ:- ಬೀಜವನ್ನು ಹೊರತುಪಡಿಸಿ, ಸಸ್ಯದ ಪ್ರತಿಯೊಂದು ಭಾಗವು 2–8% ನಿಕೋಟಿನ್ ಅಂಶವನ್ನು ಹೊಂದಿರುತ್ತದೆ. ಇದು ಹೆಚ್ಚಾಗಿ ಒಟ್ಟು ಸಸ್ಯ ನಿಕೋಟಿನ್ ಅಂಶದ ಸುಮಾರು 64% ಎಲೆಗಳಲ್ಲಿ ಕೇಂದ್ರೀಕೃತವಾಗಿರುತ್ತದೆ.
ಭಾರತದಲ್ಲಿ ನಿಷ್ಕ್ರಿಯ ದಯಾಮರಣವನ್ನು ಸುಧಾರಿಸುವುದು
ಸಾಮಾನ್ಯ ಅಧ್ಯಯನ 2/ರಾಜಕೀಯ ಮತ್ತು ಆಡಳಿತ; ಸಾಮಾನ್ಯ ಅಧ್ಯಯನ-4/ನೀತಿಶಾಸ್ತ್ರ
ಸಂದರ್ಭ:
ನಿಷ್ಕ್ರಿಯ ದಯಾಮರಣದ ಕಾನೂನು ಸಿಂಧುತ್ವದ ಹೊರತಾಗಿಯೂ, ಅದರ ಅನುಷ್ಠಾನವು ಕಾರ್ಯವಿಧಾನದ ಸಂಕೀರ್ಣತೆ, ಸಾಂಸ್ಥಿಕ ಅಂತರಗಳು ಮತ್ತು ನೈತಿಕ ಅಸ್ಪಷ್ಟತೆಯಲ್ಲಿ ಸಿಲುಕಿಕೊಂಡಿದೆ.
ಗಮನಿಸಿ:- ಕೇರಳದ ನಂತರ ನಿರ್ದೇಶನವನ್ನು ಜಾರಿಗೆ ತಂದ ಎರಡನೇ ರಾಜ್ಯ ಕರ್ನಾಟಕವಾಗಿದೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪು:
ಕಾಮನ್ ಕಾಸ್ vs. ಭಾರತದ ಒಕ್ಕೂಟ & ಇತರರು (2018) ಪ್ರಕರಣದಲ್ಲಿ:- ಇದು ವಿಧಿ 21 ರ ಅಡಿಯಲ್ಲಿ ಘನತೆಯಿಂದ ಸಾಯುವ ಹಕ್ಕನ್ನು ಮೂಲಭೂತ ಹಕ್ಕು ಎಂದು ಗುರುತಿಸಿತು ಮತ್ತು ನಿಷ್ಕ್ರಿಯ ದಯಾಮರಣದ ಕಾನೂನಿನ ಸಿಂಧುತ್ವವನ್ನು ಎತ್ತಿಹಿಡಿಯಿತು.
ದಯಾಮರಣ ಎಂದರೆ- ಇದು ನೋವಿನಿಂದ ಕೂಡಿದ ಮತ್ತು ಗುಣಪಡಿಸಲಾಗದ ಕಾಯಿಲೆ ಅಥವಾ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಮುಕ್ತಗೊಳಿಸಲು ಉದ್ದೇಶಪೂರ್ವಕವಾಗಿ ಅವನ ಜೀವನವನ್ನು ಕೊನೆಗೊಳಿಸುವ ಕ್ರಿಯೆ.
ನಿಷ್ಕ್ರಿಯ ದಯಾಮರಣ v/s ಸಕ್ರಿಯ ದಯಾಮರಣ:
ನಿಷ್ಕ್ರಿಯ ದಯಾಮರಣ:- ಇದುಚೇತರಿಕೆಯ ಭರವಸೆಯಿಲ್ಲದೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರದ ದೀರ್ಘಕಾಲದ ವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಿರುವ ಮಾರಕ ಕಾಯಿಲೆ ಪೀಡಿತ ರೋಗಿಗಳಿಗೆ ಜೀವ ಉಳಿಸುವ ಚಿಕಿತ್ಸೆಯನ್ನು ತಡೆಹಿಡಿಯುವುದು ಅಥವಾ ಹಿಂತೆಗೆದುಕೊಳ್ಳುವುದು.
ಸಕ್ರಿಯ ದಯಾಮರಣ:- ಇದು ಸ್ವಯಂಪ್ರೇರಿತ ಕೋರಿಕೆಯ ಮೇರೆಗೆ ಮಾರಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಯನ್ನು ಕೊಲ್ಲುವ ಉದ್ದೇಶಪೂರ್ವಕ ಕೃತ್ಯವಾಗಿದೆ. ಇದು ಭಾರತದಲ್ಲಿ ಕಾನೂನುಬಾಹಿರವಾಗಿದೆ.
ಮೇರಾ ಯುವ (MY) ಭಾರತ್-ರಾಷ್ಟ್ರೀಯ ಸೇವಾ ಯೋಜನೆ (NSS) ಪ್ರಶಸ್ತಿಗಳು
ಪಠ್ಯಕ್ರಮ: ಇತರೆ
ಸಂದರ್ಭ:
ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2022–23ನೇ ಸಾಲಿನ ಮೇರಾ ಯುವ ಭಾರತ್-ರಾಷ್ಟ್ರೀಯ ಸೇವಾ ಯೋಜನೆ (NSS) ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಮೇರಾ ಯುವ (MY) ಭಾರತ್-ರಾಷ್ಟ್ರೀಯ ಸೇವಾ ಯೋಜನೆ (NSS) ಪ್ರಶಸ್ತಿಗಳ ಬಗ್ಗೆ:
ಸ್ಥಾಪಿಸಿದವರು:- ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ.
ಗುರಿ:- ಅತ್ಯುತ್ತಮ ಸ್ವಯಂಪ್ರೇರಿತ ಸಮುದಾಯ ಸೇವೆಯನ್ನು ಗುರುತಿಸಲು ಈ ಪ್ರಶಸ್ತಿಗಳನ್ನು ವಾರ್ಷಿಕವಾಗಿ ನೀಡಲಾಗುತ್ತದೆ.
ರಾಷ್ಟ್ರೀಯ ಸೇವಾ ಯೋಜನೆ (NSS) ಯ ಬಗ್ಗೆ:
ಮಹಾತ್ಮ ಗಾಂಧಿಯವರ ಜನ್ಮ ಶತಮಾನೋತ್ಸವದ ಸಂಧರ್ಭದಲ್ಲಿ 1969 ರಲ್ಲಿ ಪ್ರಾರಂಭಿಸಲಾಯಿತು.
ಭಾರತ ಸರ್ಕಾರದ ಪ್ರಮುಖ ಯುವ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ಗಾಂಧಿಯವರ ನಿಸ್ವಾರ್ಥ ಸೇವೆಯ ಆದರ್ಶಗಳಿಂದ ಪ್ರೇರಿತರಾಗಿ , ಸ್ವಯಂಪ್ರೇರಿತ ಸಮುದಾಯ ಸೇವೆಯ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ಮತ್ತು ವ್ಯಕ್ತಿತ್ವ ವಿಕಸನವನ್ನು ಬೆಳೆಸುವುದು ಇದರ ಗುರಿಯಾಗಿದೆ.
ಧ್ಯೇಯವಾಕ್ಯ:- “ನಾನಲ್ಲ, ನೀನು” (स्वयं से पहले आप) – ವೈಯಕ್ತಿಕ ಹಿತಾಸಕ್ತಿಗಿಂತ ಸಮುದಾಯ ಕಲ್ಯಾಣಕ್ಕೆ ಆದ್ಯತೆ ನೀಡುವ ಅದರ ಮೂಲ ತತ್ವವನ್ನು ಪ್ರತಿಬಿಂಬಿಸುತ್ತದೆ.
ಉನ್ನತೀಕರಿಸಿದ ಐಟಿಐಗಳ ಮೂಲಕ ಪ್ರಧಾನ ಮಂತ್ರಿ ಕೌಶಲ್ಯ ಮತ್ತು ಉದ್ಯೋಗಾರ್ಹತೆಯ ಪರಿವರ್ತನೆ (PM-SETU) ಯೋಜನೆ
ಸಾಮಾನ್ಯ ಅಧ್ಯಯನ 2/ಆಡಳಿತ
ಸಂದರ್ಭ:
ಪ್ರಧಾನ ಮಂತ್ರಿಗಳು, ಉನ್ನತೀಕರಿಸಿದ ಐಟಿಐಗಳ ಮೂಲಕ ಪ್ರಧಾನ ಮಂತ್ರಿ ಕೌಶಲ್ಯ ಮತ್ತು ಉದ್ಯೋಗಾರ್ಹತೆಯ ಪರಿವರ್ತನೆ (PM-SETU) ಯೋಜನೆಯನ್ನು ಪ್ರಾರಂಭಿಸಿದರು.
PM-SETU ಯೋಜನೆಯ ಬಗ್ಗೆ:
ಸಂಕ್ಷಿಪ್ತ ರೂಪ:- ಉನ್ನತೀಕರಿಸಿದ ಐಟಿಐಗಳ ಮೂಲಕ ಪ್ರಧಾನ ಮಂತ್ರಿ ಕೌಶಲ್ಯ ಮತ್ತು ಉದ್ಯೋಗಾರ್ಹತೆಯ ಪರಿವರ್ತನೆ.
ಇದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ (60:40).
ಉದ್ದೇಶ:- ಭಾರತದಾದ್ಯಂತ 1,000 ಸರ್ಕಾರಿ ಐಟಿಐಗಳನ್ನು ಆಧುನಿಕ, ಕೈಗಾರಿಕಾ-ಸಂಯೋಜಿತ ತರಬೇತಿ ಸಂಸ್ಥೆಗಳಾಗಿ ಪರಿವರ್ತಿಸುವುದು.
ಜಲ ಜೀವನ್ ಮಿಷನಿನ ಎಲ್ಲಾ ನಳಿಕೆಮಾರ್ಗಗಳನ್ನು ನಕ್ಷೆ ಮಾಡಲಾಗುವುದು
ಸಾಮಾನ್ಯ ಅಧ್ಯಯನ 2/ಆಡಳಿತ
In News
The Union government is planning to map all drinking water assets, including pipelines under the Jal Jeevan Mission (JJM), on the GIS-based PM Gati Shakti platform.
Jal Jeevan Mission (JJM)
Launched in – 2019
Objective – to provide Functional Household Tap Connections
Significance – to ensure 55 litres per capita per day of safe drinking water to all rural households by 2024.
However, due to implementation challenges, the deadline has now been extended to 2028.
Nodal Ministry –Ministry of Jal Shakti.
Financing – Central sponsored scheme
Securities Transaction Tax
Syllabus: GS3/Economy
In News
The Supreme Court of India decided to examine a plea challenging the constitutional validity of the Securities Transaction Tax (STT).
Securities Transaction Tax (STT)
It is a direct tax levied on the transaction value of securities traded on the Indian stock exchange under the Finance Act, 2004.
It aims to combat tax evasion in the stock market.
It includes – derivatives, shares, and equity-oriented mutual funds.
It is applied on the buying and selling of securities irrespective of the profit or loss made in the transaction.
ಹೈಕೋರ್ಟ್‌ನ ಮೂವರು ಹೊಸ ನ್ಯಾಯಾಧೀಶರು ಅಧಿಕಾರ ಸ್ವೀಕರಿಸಿದ್ದಾರೆ
ಇದೀಗ ಸುದ್ದಿಯಲ್ಲಿದೆ:
ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಖ್ರು, ನ್ಯಾಯಮೂರ್ತಿಗಳಾದ ಗೀತಾ ಕಡಬ ಭರತರಾಜ ಶೆಟ್ಟಿ, ಬೋರ್ಕಟ್ಟೆ ಮುರಳೀಧರ ಪೈ ಮತ್ತು ತ್ಯಾಗರಾಜ ನಾರಾಯಣ ಇನವಳ್ಳಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಉಚ್ಚ ನ್ಯಾಯಾಲಯಕ್ಕೇ ಸಂಬಂಧಿಸಿದ ಸಂವಿಧಾನಾತ್ಮಕ ನಿಬಂಧನೆಗಳು:
ಭಾರತದ ಸಂವಿಧಾನದ ಭಾಗ VI ರಲ್ಲಿರುವ ವಿಧಿ 214 ರಿಂದ 231 ರವರೆಗು ಉಚ್ಚ ನ್ಯಾಯಾಲಯಕ್ಕೇ ಸಂಬಂಧಿಸಿದ ನಿಬಂಧನೆಗಳ ಬಗ್ಗೆ ವ್ಯವಹರಿಸುತ್ತವೆ.
ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿಯ ಬಗ್ಗೆ:
ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮತ್ತು ಇತರ ನ್ಯಾಯಾಧೀಶರನ್ನು ಭಾರತದ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.
ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ನೇಮಕಾತಿಯ ಬಗ್ಗೆ:
ಸಂಬಂಧಪಟ್ಟ ರಾಜ್ಯದ “ರಾಜ್ಯಪಾಲರು” ಮತ್ತು “ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೊಂದಿಗೆ” ಸಮಾಲೋಚಿಸಿದ ನಂತರ ಭಾರತದ ರಾಷ್ಟ್ರಪತಿಗಳು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ.
ಉಚ್ಚ ನ್ಯಾಯಾಲಯದ ಇತರ ನ್ಯಾಯಾಧೀಶರ ನೇಮಕಾತಿಯ ಬಗ್ಗೆ:
ಸಂಬಂಧಪಟ್ಟ ರಾಜ್ಯದ “ರಾಜ್ಯಪಾಲರು ಮತ್ತು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ” ರೊಂದಿಗೆ ಸಮಾಲೋಚಿಸಿದ ನಂತರ ಭಾರತದ ರಾಷ್ಟ್ರಪತಿಗಳು ಉಚ್ಚ ನ್ಯಾಯಾಲಯದ ಇತರ ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ.
ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟ (IBC), ಗೌತಮ ಬುದ್ಧ ವಿಶ್ವವಿದ್ಯಾಲಯ (GBU), ಅಂತರರಾಷ್ಟ್ರೀಯ ಬೌಧ್ ಶೋಧ ಸಂಸ್ಥಾನ ಮತ್ತು ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಅಭಿಧಮ್ಮ ದಿನವನ್ನು ಆಚರಿಸಲಾಯಿತು.
ಅಭಿಧಮ್ಮ ದಿನದ ಕುರಿತು:
ಇದು ಗೌತಮ ಬುದ್ಧನು ಅಭಿಧಮ್ಮ ಬೋಧನೆಗಳನ್ನು ನೀಡಿದ ನಂತರ ತಾವತಿಂಸ ಸ್ವರ್ಗದಿಂದ ಇಳಿದದ್ದನ್ನು ಸ್ಮರಿಸುತ್ತದೆ.
ಬೌದ್ಧ ಸಂಪ್ರದಾಯದ ಪ್ರಕಾರ, ಬುದ್ಧನು ಜ್ಞಾನೋದಯವಾದ ನಂತರ, ತಾವತಿಂಸ ಸ್ವರ್ಗದಲ್ಲಿ ಮೂರು ತಿಂಗಳು ಕಳೆದನು. ಅವನು ತನ್ನ ತಾಯಿ ಮಾಯಾಳಿಗೆ ಅಭಿಧಮ್ಮವನ್ನು ಬೋಧಿಸಿದನು, ಅವಳು ತೀರಿಕೊಂಡು ಅಲ್ಲಿಯೇ ಪುನರ್ಜನ್ಮ ಪಡೆದಳು.
ಆಧುನಿಕ ಕಾಲದಲ್ಲಿ ಅಭಿಧಮ್ಮ ದಿನದ ಮಹತ್ವ:
ಅಭಿಧಮ್ಮ ದಿನವು ಗಮನವಿಟ್ಟಿರುವಿಕೆ, ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ.
ಕರುಣೆ ಮತ್ತು ಬುದ್ಧಿವಂತಿಕೆಯ ಅನ್ವೇಷಣೆ ಸೇರಿದಂತೆ ಬೌದ್ಧಧರ್ಮದ ಮೂಲ ಮೌಲ್ಯಗಳನ್ನು ಬಲಪಡಿಸುತ್ತದೆ .
ಶಾಂತಿ ಮತ್ತು ಉದ್ದೇಶದ ಜೀವನವನ್ನು ನಡೆಸಲು ಬುದ್ಧನ ಬೋಧನೆಗಳೊಂದಿಗೆ ಸಂಪರ್ಕ ಸಾಧಿಸುವ ಮಹತ್ವವನ್ನು ಈ ಆಚರಣೆಯು ತೋರಿಸುತ್ತದೆ.
ಅತಿಚಂದ್ರ ಅಥವಾ ಅತಿ ಪೂರ್ಣ ಚಂದ್ರ (ಸೂಪರ್‌ಮೂನ್)
ಸಾಮಾನ್ಯ ಅಧ್ಯಯನ -1/ಭೂಗೋಳ ಶಾಸ್ತ್ರ
ಸಂದರ್ಭ:
ಕೊಯ್ಲು ಚಂದ್ರ ಅಥವಾ ಪಕ್ಕುವ ಚಂದ್ರ (ಹಾರ್ವೆಸ್ಟ್ ಮೂನ್) ಎಂದೂ ಕರೆಯಲ್ಪಡುವ ಅತಿ ಪೂರ್ಣ ಚಂದ್ರನನ್ನು ಇತ್ತೀಚೆಗೆ ಗಮನಿಸಲಾಯಿತು.
ಅತಿ ಪೂರ್ಣ ಚಂದ್ರ (ಸೂಪರ್‌ಮೂನ್) ನ ಬಗ್ಗೆ:
ಹುಣ್ಣಿಮೆ ಅಥವಾ ಅಮಾವಾಸ್ಯೆ ಚಂದ್ರನು ತನ್ನ ದೀರ್ಘವೃತ್ತದ ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ಹತ್ತಿರ ಬರುವ ಸಮಯಕ್ಕೆ ಹೊಂದಿಕೆಯಾದಾಗ (ಪೆರಿಜಿ ಎಂದು ಕರೆಯಲ್ಪಡುವ ಬಿಂದುವಿನಲ್ಲಿ) ಅತಿಚಂದ್ರ ಸಂಭವಿಸುತ್ತದೆ.
ಚಂದ್ರನ ಕಕ್ಷೆಯು ಪರಿಪೂರ್ಣ ವೃತ್ತಕಾರವಲ್ಲದ ಕಾರಣ, ಭೂಮಿಯಿಂದ ಚಂದ್ರನ ದೂರವು ತಿಂಗಳು ಪೂರ್ತಿ ಸುಮಾರು 50,000 ಕಿ.ಮೀ.ಗಳಷ್ಟು ಬದಲಾಗುತ್ತದೆ.
ಚಂದ್ರನು ತನ್ನ ಪೆರಿಜಿಯ ಬಳಿ ಮತ್ತು ಸೂರ್ಯನಿಗೆ ನೇರವಾಗಿ ಎದುರಾಗಿರುವಾಗ, ಹುಣ್ಣಿಮೆಯು ಅತ್ಯಂತ ದೂರದ ಬಿಂದುವಿನಲ್ಲಿರುವಾಗ ಕಾಣುವುದಕ್ಕಿಂತಸುಮಾರು 14% ದೊಡ್ಡದಾಗಿ ಮತ್ತು 30% ಪ್ರಕಾಶಮಾನವಾಗಿ ಗೋಚರಿಸುತ್ತದೆ, ಇದನ್ನೇ ಅತಿ ಚಂದ್ರ ಎನ್ನುತ್ತಾರೆ.
ಸಾಂಸ್ಕೃತಿಕವಾಗಿ, ಅತಿ ಚಂದ್ರ ಬಹಳ ಹಿಂದಿನಿಂದಲೂ ಮಾನವ ಕಲ್ಪನೆಯನ್ನು ಸೆರೆಹಿಡಿದಿವೆ, ನಾಗರಿಕತೆಗಳಾದ್ಯಂತ ಜಾನಪದ ಮತ್ತು ಆಧ್ಯಾತ್ಮಿಕ ಆಚರಣೆಗಳನ್ನು ಪ್ರೇರೇಪಿಸುತ್ತವೆ.
“ಸೂಪರ್ ಮೂನ್” ಎಂಬ ಪದವನ್ನು ಮೊದಲ ಬಾರಿಗೆ 1970ರ ದಶಕದಲ್ಲಿ ಜ್ಯೋತಿಷಿ ರಿಚರ್ಡ್ ನೊಲ್ಲೆ ಅವರು ಬಳಸಿದರು ಮತ್ತು ಈಗ ಅದು ಖಗೋಳಶಾಸ್ತ್ರ ಹಾಗೂ ಮಾಧ್ಯಮಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತಿದೆ.
ಮಾಸ್ಕೋ ಸ್ವರೂಪದ ಮಾತುಕತೆಗಳು
ಸಾಮಾನ್ಯ ಅಧ್ಯಯನ -2/ ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ಭಾರತ, ಚೀನಾ, ಪಾಕಿಸ್ತಾನ ದೇಶಗಳು, 10 ರಾಷ್ಟ್ರಗಳ ಮಾಸ್ಕೋ ಸ್ವರೂಪ ಮಾತುಕತೆಯಲ್ಲಿ ಭಾಗವಹಿಸಿವೆ.
ಮಾಸ್ಕೋ ಸ್ವರೂಪದ ಮಾತುಕತೆಗಳ ಕುರಿತು:
ಇದನ್ನು 2017 ರಲ್ಲಿ ಸ್ಥಾಪಿಸಲಾಗಿದೆ.
ಉದ್ದೇಶ: – ಇದು ಅಫ್ಘಾನಿಸ್ತಾನ ಸಂಘರ್ಷವನ್ನು ಪರಿಹರಿಸಲು, ಸ್ಥಿರತೆಯನ್ನು ಉತ್ತೇಜಿಸಲು ಮತ್ತು ರಾಷ್ಟ್ರೀಯ ಸಾಮರಸ್ಯವನ್ನು ಬೆಳೆಸಲು ಪ್ರಾದೇಶಿಕ ರಾಜತಾಂತ್ರಿಕ ಉಪಕ್ರಮವಾಗಿದೆ.
ಮಹತ್ವ: – ಇದು ಪ್ರಾದೇಶಿಕ ದೇಶಗಳು ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯ ಬಗ್ಗೆ ಸಮನ್ವಯ ಸಾಧಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಸದಸ್ಯರು: – ಭಾರತ, ಅಫ್ಘಾನಿಸ್ತಾನ, ಚೀನಾ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್.
ಧ್ರುವೀಯ ರೇಷ್ಮೆ ರಸ್ತೆ (ಪೋಲಾರ್ ಸಿಲ್ಕ್ ರೋಡ)
ಸಾಮಾನ್ಯ ಅಧ್ಯಯನ -2/ ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ಚೀನಾದ ಹಡಗು “ಇಸ್ತಾಂಬುಲ್ ಸೇತುವೆ” 18 ದಿನಗಳಲ್ಲಿ ಚೀನಾದ ನಿಂಗ್ಬೋ-ಝೌಶನ್ ನಿಂದ ಯುನೈಟೆಡ್ ಕಿಂಗ್ಡಮ್ ನ ಫೆಲಿಕ್ಸ್‌ಟೋವ್ ಗೆ ಆರ್ಕ್ಟಿಕ್ ಸಾಗರದ ಮೂಲಕ ಪ್ರಯಾಣಿಸಿದ ಮೊದಲ ವಾಣಿಜ್ಯ ಹಡಗು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು, ಇದು ಪೋಲಾರ್ ಸಿಲ್ಕ್ ರೋಡನ ಕಾರ್ಯಾಚರಣೆಯ ಪ್ರಾರಂಭವನ್ನು ಸೂಚಿಸುತ್ತದೆ.
ಪೋಲಾರ್ ಸಿಲ್ಕ್ ರೋಡನ ಬಗ್ಗೆ:
ಇದು ಚೀನಾದ ಬೆಲ್ಟ್ ಮತ್ತು ರಸ್ತೆ ಉಪಕ್ರಮ (BRI) ದ ಒಂದು ಭಾಗವಾಗಿದ್ದು, ಇದನ್ನು ಆರ್ಕ್ಟಿಕ್ ಮಹಾಸಾಗರದ ಮೂಲಕ “ನೀಲಿ ಆರ್ಥಿಕ ಮಾರ್ಗಪಥ (ಕಾರಿಡಾರ್)” ಎಂದು ಕಲ್ಪಿಸಲಾಗಿದೆ.
ಇದು ರಷ್ಯಾದ ಕರಾವಳಿಯುದ್ದಕ್ಕೂ ಉತ್ತರ ಸಮುದ್ರ ಮಾರ್ಗ (NSR) ಗಳ ಮೂಲಕ ಪೂರ್ವ ಏಷ್ಯಾ, ಉತ್ತರ ಅಮೆರಿಕಾ ಮತ್ತು ಪಶ್ಚಿಮ ಯುರೋಪ್ ಅನ್ನು ಸಂಪರ್ಕಿಸುವ ಸಂಚಾರಯೋಗ್ಯ ಆರ್ಕ್ಟಿಕ್ ಸಮುದ್ರ ಮಾರ್ಗಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತದೆ.
ಮಹತ್ವ: – ಇದು ಏಷ್ಯಾ ಮತ್ತು ಯುರೋಪ್ ನಡುವೆ ಹಡಗುಗಳಿಗೆ ಹೊಸ ಕಾರಿಡಾರ್ ಅನ್ನು ಸ್ಥಾಪಿಸುತ್ತದೆ – ಇದು ಸೂಯೆಜ್ ಕಾಲುವೆ ಮಾರ್ಗಕ್ಕಿಂತ ಕಡಿಮೆ ಮತ್ತು ಹೆಚ್ಚು ವೆಚ್ಚ-ಪರಿಣಾಮಕಾರಿಯಾಗಿದೆ.
ಚೀನಾದ ಬೆಲ್ಟ್ ಮತ್ತು ರಸ್ತೆ ಉಪಕ್ರಮ (BRI)
ಒನ್ ಬೆಲ್ಟ್ ಒನ್ ರೋಡ್ (OBOR)
ಇದು ಚೀನಾದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಏಷ್ಯಾ, ಆಫ್ರಿಕಾ ಮತ್ತು ಯುರೋಪ್ ಖಂಡಗಳಲ್ಲಿ ಹರಡಿರುವ ಬಹು ದೇಶಗಳ ನಡುವಿನ ಸಂಪರ್ಕ ಮತ್ತು ಸಹಕಾರದ ಮೇಲೆ ಕೇಂದ್ರೀಕರಿಸುತ್ತದೆ. OBOR ಸುಮಾರು 78 ದೇಶಗಳನ್ನು ವ್ಯಾಪಿಸಿದೆ.
2013 ರಲ್ಲಿ ಘೋಷಿಸಲಾದ ಈ ಯೋಜನೆಯು ರಸ್ತೆಮಾರ್ಗಗಳು, ರೈಲ್ವೆಗಳು, ಸಮುದ್ರ ಬಂದರುಗಳು, ವಿದ್ಯುತ್ ಗ್ರಿಡ್‌ಗಳು, ತೈಲ ಮತ್ತು ಅನಿಲ ಪೈಪ್‌ಲೈನ್‌ಗಳು ಮತ್ತು ಸಂಬಂಧಿತ ಮೂಲಸೌಕರ್ಯ ಯೋಜನೆಗಳ ಜಾಲಗಳನ್ನು ನಿರ್ಮಿಸುವುದನ್ನು ಒಳಗೊಂಡಿರುತ್ತದೆ.
OBOR ಯೋಜನೆಯು ಎರಡು ಭಾಗಗಳನ್ನು ಒಳಗೊಂಡಿದೆ:
ಸಿಲ್ಕ್ ರೋಡ್ ಎಕನಾಮಿಕ್ ಬೆಲ್ಟ್ (ರೇಷ್ಮೆ ರಸ್ತೆ ಆರ್ಥಿಕ ಪಟ್ಟಿ): – ಇದು ಭೂ-ಆಧಾರಿತವಾಗಿದ್ದು, ಚೀನಾವನ್ನು ಮಧ್ಯ ಏಷ್ಯಾ, ಪೂರ್ವ ಯುರೋಪ್ ಮತ್ತು ಪಶ್ಚಿಮ ಯುರೋಪ್‌ನೊಂದಿಗೆ ಸಂಪರ್ಕಿಸುವ ನಿರೀಕ್ಷೆಯಿದೆ.
21 ನೇ ಶತಮಾನದ ಮಾರಿಟೈಮ್ ಸಿಲ್ಕ್ ರೋಡ್ (ಕಡಲ ರೇಷ್ಮೆ ರಸ್ತೆ ): – ಇದುಸಮುದ್ರಆಧಾರಿತವಾಗಿದ್ದು, ಚೀನಾದ ದಕ್ಷಿಣ ಕರಾವಳಿಯನ್ನು ಮೆಡಿಟರೇನಿಯನ್, ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಮಧ್ಯ ಏಷ್ಯಾಕ್ಕೆ ಸಂಪರ್ಕಿಸುವ ನಿರೀಕ್ಷೆಯಿದೆ.
ಹೇಚಿ-VI ಕಾರ್ಯಾಚರಣೆ
ಸಾಮಾನ್ಯ ಅಧ್ಯಯನ -2/ಅಂತರರಾಷ್ಟ್ರೀಯ ಸಂಸ್ಥೆಗಳು; (ಸಾಮಾನ್ಯ ಅಧ್ಯಯನ-3/ಸೈಬರ್ ಭದ್ರತೆ)
ಸಂದರ್ಭ:
ಇಂಟರ್‌ಪೋಲ್‌ನ ಹೇಚಿ (HAECHI)-VI ಕಾರ್ಯಾಚರಣೆಯ ಭಾಗವಾಗಿ ಕೇಂದ್ರೀಯ ತನಿಖಾ ದಳ (CBI) ಎಂಟು ಆರೋಪಿಗಳನ್ನು ಬಂಧಿಸಿದ್ದು, 45 ಶಂಕಿತರನ್ನು ಗುರುತಿಸಿದೆ.
ಹೇಚಿ-VI ಕಾರ್ಯಾಚರಣೆಯ ಬಗ್ಗೆ:
ಈ ಕಾರ್ಯಾಚರಣೆಯು ಏಳು ವರ್ಗಗಳ ಅಪರಾಧಗಳ ಮೇಲೆ ಕೇಂದ್ರೀಕರಿಸಿದೆ:
ಸೈಬರ್-ಸಕ್ರಿಯಗೊಳಿಸಿದ ಆರ್ಥಿಕ ಅಪರಾಧ,
ನಕಲಿ ಧ್ವನಿ ಸಂದೇಶ (ವಾಯ್ಸ್ ಫಿಶಿಂಗ್),
ಪ್ರೀತಿ ಮತ್ತು ಪ್ರಣಯ ವಂಚನೆಗಳು,
ಆನ್‌ಲೈನ್ ಲೈಂಗಿಕ ಕಿರುಕುಳ,
ಹೂಡಿಕೆ ವಂಚನೆ,
ಅಕ್ರಮ ಆನ್‌ಲೈನ್ ಜೂಜಾಟಕ್ಕೆ ಸಂಬಂಧಿಸಿದ ಹಣ ವರ್ಗಾವಣೆ,
ವ್ಯವಹಾರಿಕಾ ಇ-ಮೇಲ್ ರಾಜಿ,
ಇ-ಕಾಮರ್ಸ್ ವಂಚನೆ.
ಆನ್‌ಲೈನ್ ವಂಚನೆ ಹಾಗೂ ಹಣ ವರ್ಗಾವಣೆ ಚಟುವಟಿಕೆಗಳನ್ನು ಪತ್ತೆಹಚ್ಚಲು ಮತ್ತು ಅಡ್ಡಿಪಡಿಸಲು ತನಿಖಾಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿದರು, 68,000 ಕ್ಕೂ ಹೆಚ್ಚು ಸಂಬಂಧಿತ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಿದರು ಮತ್ತು ಸುಮಾರು 400 ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳನ್ನು ಸ್ಥಗಿತಗೊಳಿಸಿದರು.
ಅಂತರರಾಷ್ಟ್ರೀಯ ಅಪರಾಧ ಪೊಲೀಸ್ ಸಂಸ್ಥೆ (INTERPOL) ಯ ಬಗ್ಗೆ:
ಇದು 1923 ರಲ್ಲಿ ಸ್ಥಾಪನೆಯಾದ ಅಂತರ ಸರ್ಕಾರಿ ಸಂಸ್ಥೆಯಾಗಿದೆ.
ಉದ್ದೇಶ: – ಸುಮಾರು 195 ದೇಶಗಳಲ್ಲಿ ವಿಶ್ವದಾದ್ಯಂತ ಪೊಲೀಸ್ ಸಹಕಾರ ಮತ್ತು ಅಪರಾಧ ನಿಯಂತ್ರಣವನ್ನು ಸುಗಮಗೊಳಿಸುವುದು.
ಪ್ರಧಾನ ಕಚೇರಿ: – ಲಿಯಾನ್, ಫ್ರಾನ್ಸ್
ಇಂಟರ್‌ಪೋಲ್ ಹೊರಡಿಸಿದ ವಿವಿಧ ರೀತಿಯ ಸೂಚನೆಗಳು (ನೋಟೀಸ್):
ವಿಶ್ವದಾದ್ಯಂತ ಪೊಲೀಸ್ ಸಹಕಾರ ಮತ್ತು ಅಪರಾಧ ನಿಯಂತ್ರಣವನ್ನು ಸುಗಮಗೊಳಿಸಲು ಇಂಟರ್‌ಪೋಲ್ ವಿವಿಧ ಸೂಚನೆಗಳನ್ನು ನೀಡುತ್ತದೆ.
ರೆಡ್ ನೋಟಿಸ್( ಕೆಂಪು ಸೂಚನೆ)
ಒಬ್ಬ ವ್ಯಕ್ತಿಯ ಬಂಧನಕ್ಕೆ ಇದನ್ನು ನೀಡಲಾಗುತ್ತದೆ.
ಆ ವ್ಯಕ್ತಿಯು ಅಂತರರಾಷ್ಟ್ರೀಯ ನ್ಯಾಯಮಂಡಳಿಯ ಬೇಕಾಗಿದ್ದಾರೆ ಪಟ್ಟಿಯಲ್ಲಿ ಅಥವಾ ನ್ಯಾಯಾಂಗ ವ್ಯಾಪ್ತಿಯಲ್ಲಿದ್ದಾರೆ.
ಗ್ರೀನ್ ನೋಟೀಸ್ (ಹಸಿರು ಸೂಚನೆ)
ವ್ಯಕ್ತಿಯ ಅಪರಾಧ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ನೀಡಲು ಇದನ್ನು ನೀಡಲಾಗುತ್ತದೆ .
ವ್ಯಕ್ತಿಯು ಸಾರ್ವಜನಿಕ ಸುರಕ್ಷತೆಗೆ ಸಂಭಾವ್ಯ ಬೆದರಿಕೆ ಎಂದು ಪರಿಗಣಿಸಿದರೆ ಇದನ್ನು ನೀಡಲಾಗುತ್ತದೆ.
ಬ್ಲೂ ನೋಟೀಸ್ (ನೀಲಿ ಸೂಚನೆ)
ಒಬ್ಬ ವ್ಯಕ್ತಿಯ ಬಗ್ಗೆ ಮಾಹಿತಿ ಪಡೆಯಲು ಇದನ್ನು ನೀಡಲಾಗುತ್ತದೆ .
ಎಲ್ಲೋ ನೋಟೀಸ್ (ಹಳದಿ ಸೂಚನೆ)
ಕಾಣೆಯಾದ ವ್ಯಕ್ತಿಯನ್ನು ಪತ್ತೆಹಚ್ಚಲು. ಒಬ್ಬ ವ್ಯಕ್ತಿಯು ತನ್ನನ್ನು ತಾನು ಗುರುತಿಸಿಕೊಳ್ಳಲು ಸಾಧ್ಯವಾಗದಿದ್ದಾಗಲೂ ಇದನ್ನು ನೀಡಲಾಗುತ್ತದೆ.
ಬ್ಲಾಕ್ ನೋಟೀಸ್ (ಕಪ್ಪು ಸೂಚನೆ)
ಗುರುತಿಸಲಾಗದ ದೇಹಗಳ ಬಗ್ಗೆ ಮಾಹಿತಿ ಪಡೆಯಲು.
ಆರೆಂಜ್ ನೋಟೀಸ್ (ಕಿತ್ತಳೆ ಸೂಚನೆ)
ಆಸ್ತಿ ಅಥವಾ ವ್ಯಕ್ತಿಗೆ ಸನ್ನಿಹಿತ ಬೆದರಿಕೆ ಅಥವಾ ಅಪಾಯವನ್ನು ಪ್ರಕ್ರಿಯೆಗೊಳಿಸಲು ಇದನ್ನು ನೀಡಲಾಗುತ್ತದೆ .
ಪರ್ಪಲ್ ನೋಟೀಸ್ (ನೇರಳೆ ಸೂಚನೆ)
ಕಾರ್ಯವಿಧಾನಗಳು, ಸಾಧನಗಳು ಅಥವಾ ಅಡಗುತಾಣಗಳ ಬಗ್ಗೆ ಮಾಹಿತಿಯನ್ನು ಒದಗಿಸಲು.
ಕೇಂದ್ರೀಯ ತನಿಖಾ ದಳ (CBI) ದ ಬಗ್ಗೆ:
ಇದನ್ನು 1963 ರಲ್ಲಿ ಗೃಹ ಸಚಿವಾಲಯದ ನಿರ್ಣಯದ ಮೂಲಕ ಸ್ಥಾಪಿಸಲಾಯಿತು.
ಇದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (DoPT) ಆಡಳಿತಾತ್ಮಕ ನಿಯಂತ್ರಣದಲ್ಲಿ ಬರುತ್ತದೆ.
ಇದನ್ನು ಸಂತಾನಂ ಸಮಿತಿಯ ಶಿಫಾರಸಿನ ಮೇರೆಗೆ ಸ್ಥಾಪಿಸಲಾಯಿತು.
ಸಿಬಿಐ ಒಂದು ಶಾಸನಬದ್ಧ ಸಂಸ್ಥೆಯಲ್ಲ. ಇದು ತನ್ನ ಅಧಿಕಾರವನ್ನು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (DSPE) ಕಾಯ್ದೆ, 1946 ರಿಂದ ಪಡೆದುಕೊಂಡಿದೆ.
ಕೇಂದ್ರೀಯ ತನಿಖಾ ದಳ (CBI) ದ ಕಾರ್ಯಗಳು:
ಇದು ಕೇಂದ್ರ ಸರ್ಕಾರದ ಪ್ರಮುಖ ತನಿಖಾ ಸಂಸ್ಥೆಯಾಗಿದೆ.
ಇದು ಕೇಂದ್ರ ಜಾಗೃತ ಆಯೋಗ ಮತ್ತು ಲೋಕಪಾಲ್‌ಗೆ ಸಹಾಯವನ್ನು ಒದಗಿಸುತ್ತದೆ.
ಇದು ಭಾರತದಲ್ಲಿನ ನೋಡಲ್ ಪೊಲೀಸ್ ಸಂಸ್ಥೆಯಾಗಿದ್ದು, ಇಂಟರ್‌ಪೋಲ್ ಸದಸ್ಯ ರಾಷ್ಟ್ರಗಳ ಪರವಾಗಿ ತನಿಖೆಗಳನ್ನು ಸಂಘಟಿಸುತ್ತದೆ.
ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮೇರು ಯೋಜನೆ
ಸಾಮಾನ್ಯ ಅಧ್ಯಯನ 3/ಮೂಲಸೌಕರ್ಯ
ಸಂದರ್ಭ:
ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮೇರು ಯೋಜನೆಯ ಅಡಿಯಲ್ಲಿ ನಾಲ್ಕು ಬಹು-ಜಾಡೀಕರಣ ಯೋಜನೆಗಳಿಗೆ ಆರ್ಥಿಕ ವ್ಯವಹಾರಗಳ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಯೋಜನೆಗಳು ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಮತ್ತು ಛತ್ತೀಸ್‌ಗಢದಾದ್ಯಂತ ವ್ಯಾಪಿಸಿವೆ, ಭಾರತೀಯ ರೈಲ್ವೆ ಜಾಲಕ್ಕೆ ಸುಮಾರು 894 ಕಿ.ಮೀ.ಗಳನ್ನು ಸೇರಿಸುತ್ತವೆ.
ಪ್ರಧಾನಮಂತ್ರಿ ಗತಿಶಕ್ತಿಯ ಬಗ್ಗೆ:
2021 ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
ಉದ್ದೇಶ: – ದೇಶದ ಮೂಲಸೌಕರ್ಯವನ್ನು ಹೆಚ್ಚಿಸುವುದು ಮತ್ತು ವಿವಿಧ ವಲಯಗಳಲ್ಲಿ ತಡೆರಹಿತ ಸಂಪರ್ಕವನ್ನು ಉತ್ತೇಜಿಸುವುದು.
ಮಹತ್ವ: – ಇದು ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಒಂದು ಪರಿವರ್ತಕ ವಿಧಾನವಾಗಿದ್ದು, ಇದು ಏಳು ಎಂಜಿನ್‌ಗಳಿಂದ ನಡೆಸಲ್ಪಡುತ್ತದೆ – ರೈಲ್ವೆ, ರಸ್ತೆಗಳು, ಬಂದರುಗಳು, ಜಲಮಾರ್ಗಗಳು, ವಿಮಾನ ನಿಲ್ದಾಣಗಳು, ಸಾಮೂಹಿಕ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯ.
ಅನುಷ್ಠಾನ: – ಪ್ರಧಾನಮಂತ್ರಿ ಗತಿ ಶಕ್ತಿಯು ಭಾರತ ಮಾಲಾ, ಸಾಗರಮಾಲಾ, ಒಳನಾಡಿನ ಜಲಮಾರ್ಗಗಳು, ಒಣ/ಭೂ ಬಂದರುಗಳು, ಉಡಾನ್ ಮುಂತಾದ ವಿವಿಧ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ಮೂಲಸೌಕರ್ಯ ಯೋಜನೆಗಳನ್ನು ಸಂಯೋಜಿಸುತ್ತದೆ.
ಕರ್ನಾಟಕದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ
ಇದೀಗ ಸುದ್ದಿಯಲ್ಲಿದೆ:
ಭಾರತದ 53 ನಗರಗಳ ಪೈಕಿ, ಬೆಂಗಳೂರು 30.3% ಅಪಘಾತಗಳ ಹೆಚ್ಚಳದೊಂದಿಗೆ, ರಾಂಚಿ (50.3%), ವಾರಾಣಸಿ (46.3%) ಮತ್ತು ಪುಣೆ (35%) ನಗರಗಳ ನಂತರ ಅಗ್ರ ಐದು ನಗರಗಳಲ್ಲಿ ಸ್ಥಾನ ಪಡೆದಿದೆ.
ರಸ್ತೆ ಸುರಕ್ಷತೆಯನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರದ ಉಪಕ್ರಮಗಳು:
ಕರ್ನಾಟಕ ರಾಜ್ಯ ರಸ್ತೆ ಸುರಕ್ಷತೆ ಪ್ರಾಧಿಕಾರ ಕಾಯ್ದೆ, 2017:- ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಮತ್ತು ಮೀಸಲಾದ ರಸ್ತೆ ಸುರಕ್ಷತಾ ನಿಧಿಯನ್ನು ನಿರ್ವಹಿಸಲು ಸರ್ಕಾರವು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತೆ ಪ್ರಾಧಿಕಾರವನ್ನು ಸ್ಥಾಪಿಸಿತು.
ಸೇವ್‌ಲೈಫ್ ಫೌಂಡೇಶನ್‌ನೊಂದಿಗೆ ಪಾಲುದಾರಿಕೆ ಹೊಂದಲು ತಿಳಿವಳಿಕೆ ಒಪ್ಪಂದಕ್ಕೇ ಸಹಿ ಹಾಕಲಾಗಿದೆ:-
ಹೆಚ್ಚಿನ ಸಾವಿನ ಪ್ರಮಾಣವಿರುವ ಜಿಲ್ಲೆಗಳಲ್ಲಿ “ಶೂನ್ಯ ಮರಣ ಜಿಲ್ಲೆ” (ZFD) ಕಾರ್ಯಕ್ರಮ ಸೇರಿದಂತೆ ದತ್ತಾಂಶ ಆಧಾರಿತ ಮಧ್ಯಸ್ಥಿಕೆಗಳನ್ನು ಕಾರ್ಯಗತಗೊಳಿಸಲು. ಈ ಸಹಯೋಗವು ಈಗಾಗಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನಿರ್ದಿಷ್ಟ ಎಂಜಿನಿಯರಿಂಗ್ ಮತ್ತು ಜಾರಿ ಕ್ರಮಗಳ ಮೂಲಕ ಸಾವುನೋವುಗಳಲ್ಲಿ ಗಮನಾರ್ಹ ಕಡಿತಕ್ಕೆ ಕೊಡುಗೆ ನೀಡಿದೆ.
“ನಮ್ಮ ರಸ್ತೆ ನಮ್ಮ ಸುರಕ್ಷಿತೆ” ಸೇಫ್-ಎ-ಥಾನ್:-
ಜೀವ ಉಳಿಸುವ ಅಭ್ಯಾಸಗಳು ಮತ್ತು ಸಾಮಾನ್ಯ ರಸ್ತೆ ಸುರಕ್ಷತಾ ಜಾಗೃತಿಯನ್ನು ಉತ್ತೇಜಿಸಲು ಸಾರಿಗೆ ಇಲಾಖೆಯು ವಾಕಥಾನ್‌ಗಳು, ಮ್ಯಾರಥಾನ್‌ಗಳು ಮತ್ತು ಸೈಕ್ಲೋಥಾನ್‌ಗಳಂತಹ ಸಮುದಾಯ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.
“ಕ್ಯಾಚ್ ದಿ ಯೂತ್” ಕಾರ್ಯಕ್ರಮ:-ಟ್ರಾಫಿಕ್ ವಾರ್ಡನ್ ಸಂಸ್ಥೆಯು ರಸ್ತೆ ಸುರಕ್ಷತೆ ಕುರಿತು ಯುವಕರಿಗೆ ಶಿಕ್ಷಣ ನೀಡಲು ಮತ್ತು ಅತಿವೇಗ, ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವಂತಹ ಉದ್ದೇಶಪೂರ್ವಕ ನಿಯಮ ಉಲ್ಲಂಘನೆಗಳನ್ನು ತಡೆಯಲು ಕಾಲೇಜುಗಳೊಂದಿಗೆ ಸಂಪರ್ಕ ಸಾಧಿಸುತ್ತದೆ.
ಕೋಬ್ರಾ ಗಸ್ತು ವಾಹನಗಳು:-ಬೆಂಗಳೂರು ಸಂಚಾರಿ ಪೊಲೀಸರು 24/7 ಗಸ್ತು ತಿರುಗಲು ಮತ್ತು ಅಪಘಾತಗಳು, ಸಂಚಾರ ಸ್ಥಗಿತಗಳು ಮತ್ತು ಇತರ ಸಂಚಾರ ಸಮಸ್ಯೆಗಳಿಗೆ ಮೊದಲ ಪ್ರತಿಕ್ರಿಯೆ ನೀಡಲು ಮೋಟಾರ್‌ಬೈಕ್‌ಗಳನ್ನು ನಿಯೋಜಿಸಿದೆ, ಇದನ್ನು ನಿಯಂತ್ರಣ ಕೊಠಡಿಯ ಮೂಲಕ ಸಂಯೋಜಿಸಲಾಗುತ್ತದೆ.
ಪದ್ಮವಿಭೂಷಣ ಪಂಡಿತ ಚನ್ನುಲಾಲ್ ಮಿಶ್ರಾ ಜಿ ಅವರ ನಿಧನದಿಂದ ಪ್ರಧಾನಮಂತ್ರಿ ಅವರು ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ .
ಪಂಡಿತ ಚನ್ನುಲಾಲ್ ಮಿಶ್ರಾ (1936–2025) ಅವರ ಕುರಿತು:
ಜನನ: ಆಗಸ್ಟ್ 3, 1936 ರಂದು ಉತ್ತರ ಪ್ರದೇಶದ ಅಜಮ್‌ಗಢದಲ್ಲಿ ಜನಿಸಿದರು.
ಅವರು ಪ್ರಸಿದ್ಧ ಭಾರತೀಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರಾಗಿದ್ದರು.
ಖಯಾಲ್, ಕಿರಾಣಾ ಘರಾನಾ, ಥುಮ್ರಿ, ದಾದ್ರಾ ಮತ್ತು ಭಜನೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದರು.
ಪ್ರಮುಖ ಗೌರವಗಳು: ಪದ್ಮಭೂಷಣ (2010), ಪದ್ಮವಿಭೂಷಣ (2020), ಸಂಗೀತ ನಾಟಕ ಅಕಾಡೆಮಿ ಶಿಷ್ಯವೇತನ (ಫೆಲೋಶಿಪ್).
ಪರಂಪರೆ: ಅವರು ರಿಯಾಜ್‌ನಲ್ಲಿ ಕಠಿಣ ಶಿಸ್ತು ಮತ್ತು ನಿಖರತೆಗೆ ಆಳವಾದ ಭಕ್ತಿಗೆ ಹೆಸರುವಾಸಿಯಾಗಿದ್ದಾರೆ.
ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO) ಯ ನಳಿಕೆ ಮಾರ್ಗ (ಪೈಪ್‌ಲೈನ್) ವ್ಯವಸ್ಥೆ (NPS)
ಸಾಮಾನ್ಯ ಅಧ್ಯಯನ-2/ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ಇತ್ತೀಚೆಗೆ, ಪೋಲೆಂಡ್ €4.7 ಬಿಲಿಯನ್ ಯುರೋ ಹೂಡಿಕೆಯೊಂದಿಗೆ ನ್ಯಾಟೋದ ನಳಿಕೆ ಮಾರ್ಗ (ಪೈಪ್‌ಲೈನ್) ವ್ಯವಸ್ಥೆ (NPS) ಗೆ ಸೇರುವ ಯೋಜನೆಯನ್ನು ಘೋಷಿಸಿತು.
ನ್ಯಾಟೋದ ನಳಿಕೆ ಮಾರ್ಗ ವ್ಯವಸ್ಥೆ/ NATO Pipeline System (NPS):
ಉದ್ದೇಶ:- ಇದನ್ನು ಶೀತಲ ಸಮರದ ಸಮಯದಲ್ಲಿ ಸ್ಥಾಪಿಸಲಾಯಿತು. ಇದು ಆಧುನಿಕ ನಮ್ಯತೆಯೊಂದಿಗೆ ನ್ಯಾಟೋ ಪಡೆಗಳಿಗೆ ಇಂಧನ ಮತ್ತು ಜಿಗಿಯ ಎಣ್ಣೆ (ಲೂಬ್ರಿಕಂಟ್) ಗಳನ್ನುಪೂರೈಸುತ್ತದೆ.
12 ದೇಶಗಳಲ್ಲಿ ಸುಮಾರು 10,000 ಕಿ.ಮೀ.ಗಳಷ್ಟು ವ್ಯಾಪಿಸಿದೆ, 4.1 ಮಿಲಿಯನ್ ಘನ ಮೀಟರ್ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ ಮತ್ತು ಡಿಪೋಗಳು, ವಾಯುನೆಲೆಗಳು, ವಿಮಾನ ನಿಲ್ದಾಣಗಳು, ಸಂಸ್ಕರಣಾಗಾರಗಳು ಮತ್ತು ಸಾರಿಗೆ ಕೇಂದ್ರಗಳನ್ನು ಸಂಪರ್ಕಿಸುತ್ತದೆ.
ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO) ಯ ಬಗ್ಗೆ:
ಉತ್ತರ ಅಟ್ಲಾಂಟಿಕ್ ಮೈತ್ರಿ, ಎಂತಲು ಕರೆಯಲ್ಪಡುವ ನ್ಯಾಟೋ, ಒಂದು ಅಂತರಸರ್ಕಾರಿ ಸೇನಾ ಮೈತ್ರಿಕೂಟವಾಗಿದೆ.
ಪ್ರಧಾನ ಕಚೇರಿ:- ಬ್ರಸೆಲ್ಸ್, ಬೆಲ್ಜಿಯಂ
ಹಿನ್ನೆಲೆ:- ಎರಡನೇ ಮಹಾಯುದ್ಧದ ನಂತರ ಸೋವಿಯತ್ ಒಕ್ಕೂಟದ ದಾಳಿಯ ವಿರುದ್ಧ ಸಾಮೂಹಿಕ ಭದ್ರತೆಯನ್ನು ಒದಗಿಸಲು 1949 ರಲ್ಲಿ ವಾಷಿಂಗ್ಟನ್, ಡಿಸಿಯಲ್ಲಿ ಉತ್ತರ ಅಟ್ಲಾಂಟಿಕ್ ಒಪ್ಪಂದಕ್ಕೆ (ವಾಷಿಂಗ್ಟನ್ ಒಪ್ಪಂದ) ಸಹಿ ಹಾಕುವ ಮೂಲಕ ಯುರೋಪ್ ಮತ್ತು ಉತ್ತರ ಅಮೆರಿಕದ 12 ದೇಶಗಳು ಇದನ್ನು ಸ್ಥಾಪಿಸಿದವು.
ಸಾಮೂಹಿಕ ರಕ್ಷಣೆ:- ವಿಧಿ 5 ರ ಪ್ರಕಾರ, ನ್ಯಾಟೋ ಸಂಸ್ಥೆ ಸಾಮೂಹಿಕ ರಕ್ಷಣೆಯ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ, ಇಲ್ಲಿ ಯಾವುದೇ ನ್ಯಾಟೋ ಸದಸ್ಯರ ಮೇಲಿನ ದಾಳಿಯನ್ನು ಎಲ್ಲಾ ನ್ಯಾಟೋ ಸದಸ್ಯರ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಇಲ್ಲಿಯವರೆಗೆ, 2001 ರಲ್ಲಿ ಅಮೇರಿಕಾದಲ್ಲಿ ನಡೆದ 9/11 ಭಯೋತ್ಪಾದಕರ ದಾಳಿಗೆ ಪ್ರತಿಕ್ರಿಯೆಯಾಗಿ ವಿಧಿ 5 ಅನ್ನು ಒಮ್ಮೆ ಮಾತ್ರ ಬಳಸಲಾಗಿದೆ.
ಸದಸ್ಯ ರಾಷ್ಟ್ರಗಳು:- ಇದು 32 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಸ್ವೀಡನ್ 32 ನೇ ಸದಸ್ಯ ರಾಷ್ಟ್ರವಾಯಿತು.
ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ (PMDDKY) ಯ ಅಡಿಯಲ್ಲಿ ಮಹತ್ವಾಕಾಂಕ್ಷೆಯ ಕೃಷಿ ಜಿಲ್ಲೆಗಳು
ಸಾಮಾನ್ಯ ಅಧ್ಯಯನ-3/ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ (PMDDKY) ಯ ಅಡಿಯಲ್ಲಿ 100 ಮಹತ್ವಾಕಾಂಕ್ಷೆಯ ಕೃಷಿ ಜಿಲ್ಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಸರ್ಕಾರವು ಘೋಷಿಸಿತು.
ಉತ್ತರ ಪ್ರದೇಶ 12 ಜಿಲ್ಲೆಗಳೊಂದಿಗೆ ಮೂoಚೂಣೆಯಲ್ಲಿದ್ದರೆ, ಮಹಾರಾಷ್ಟ್ರ (9), ಮಧ್ಯಪ್ರದೇಶ ಮತ್ತು ರಾಜಸ್ಥಾನ (ತಲಾ 8) ಮತ್ತು ಬಿಹಾರ (7) ನಂತರದ ಸ್ಥಾನಗಳಲ್ಲಿವೆ.
ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯ ಬಗ್ಗೆ:
ಈ ಯೋಜನೆಯನ್ನು 2025 ರಲ್ಲಿ ರಾಜ್ಯಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಯಿತು.
ಪ್ರಮುಖ ಗಮನಾರ್ಹ ಕ್ಷೇತ್ರಗಳು:
ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು.
ಬೆಳೆ ವೈವಿಧ್ಯೀಕರಣ ಮತ್ತು ಸುಸ್ಥಿರ ಪದ್ಧತಿಗಳನ್ನು ಉತ್ತೇಜಿಸುವುದು.
ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಮಟ್ಟದಲ್ಲಿ ಕೊಯ್ಲಿನ ನಂತರದ ಸಂಗ್ರಹಣೆಯನ್ನು ವಿಸ್ತರಿಸುವುದು.
ನೀರಾವರಿ ಸೌಲಭ್ಯಗಳನ್ನು ಸುಧಾರಿಸುವುದು.
ದೀರ್ಘಾವಧಿ ಮತ್ತು ಅಲ್ಪಾವಧಿಯ ಕೃಷಿ ಸಾಲವನ್ನು ಸುಗಮಗೊಳಿಸುವುದು.
ಗ್ರಾಮೀಣ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮವನ್ನು ನಿರ್ಮಿಸುವುದು:
ಉದ್ದೇಶ:- ಕೃಷಿಯಲ್ಲಿನ ಕಡಿಮೆ ಉದ್ಯೋಗವನ್ನು ಪರಿಹರಿಸಲು ರಾಜ್ಯಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗಿದೆ.
ಪ್ರಮುಖ ಗಮನಾರ್ಹ ಕ್ಷೇತ್ರಗಳು:- ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಲು ಕೌಶಲ್ಯ, ಹೂಡಿಕೆ ಮತ್ತು ತಂತ್ರಜ್ಞಾನ. ಸುಧಾರಿತ ಉತ್ಪಾದಕತೆ ಮತ್ತು ಗೋದಾಮಿನೊಂದಿಗೆ ಕೃಷಿಯನ್ನು ಆಧುನೀಕರಿಸುವುದು.
ಗುರುತು ಪಡಿಸಿದ ಫಲಾನುಭವಿಗಳು : ಗ್ರಾಮೀಣ ಮಹಿಳೆಯರು, ಯುವ ರೈತರು, ಸಣ್ಣ ಮತ್ತು ಅತಿಸಣ್ಣ ರೈತರು ಮತ್ತು ಭೂಹೀನ ಕುಟುಂಬಗಳು.
ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮ (ADP) ದ ಬಗ್ಗೆ:
ಇದನ್ನು, 2018 ರಲ್ಲಿ ಪ್ರಾರಂಭಿಸಲಾಯಿತು.
ಉದ್ದೇಶ:- ಇದು ದೇಶದ 112 ಸಾಮಾಜಿಕ-ಆರ್ಥಿಕವಾಗಿ ಅಭಿವೃದ್ಧಿಯಾಗದ ಜಿಲ್ಲೆಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.
ಅನುಷ್ಠಾನ ಸಂಸ್ಥೆ:- ನೀತಿ ಆಯೋಗ
H125 ಹೆಲಿಕಾಪ್ಟರ್‌ಗಳು
ಸಾಮಾನ್ಯ ಅಧ್ಯಯನ -3 / ರಕ್ಷಣಾ ವ್ಯವಸ್ಥೆ
ಸಂದರ್ಭ:
ಭಾರತದಲ್ಲಿ ನಿರ್ಮಿಸಲಾದ H125 ಯುಟಿಲಿಟಿ (ಉಪಯುಕ್ತತೆ) ಹೆಲಿಕಾಪ್ಟರ್‌ಗಾಗಿ ಅಂತಿಮ ಜೋಡಣೆ ಮಾರ್ಗವನ್ನು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಜೊತೆ ಪಾಲುದಾರಿಕೆಯಲ್ಲಿ ಏರ್‌ಬಸ್ ಹೆಲಿಕಾಪ್ಟರ್ಗಳುಕರ್ನಾಟಕದ ವೇಮಗಲ್‌ನಲ್ಲಿ ಸ್ಥಾಪಿಸಲಾಗುತ್ತಿದೆ.
H125 ಹೆಲಿಕಾಪ್ಟರ್‌ಗಳ ಬಗ್ಗೆ:
ಏರ್‌ಬಸ್ H125 ಒಂದು ಹಗುರವಾದ, ಏಕ-ಎಂಜಿನ್ ಹೊಂದಿರುವ ಉಪಯುಕ್ತತಾ ಹೆಲಿಕಾಪ್ಟರ್ ಆಗಿದೆ.
ಹೆಚ್ಚಿನ ಎತ್ತರ ಮತ್ತು ಹೆಚ್ಚಿನ ತಾಪಮಾನದ ಪರಿಸ್ಥಿತಿಗಳಲ್ಲಿ ಬಹುಮುಖತೆ ಮತ್ತು ಪರಿಣಾಮಕಾರಿ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ .
H125 ಅನ್ನು ಹಿಂದೆ ಯೂರೋಕಾಪ್ಟರ್ AS350 ಎಂದು ಕರೆಯಲಾಗುತ್ತಿತ್ತು.
ತುರ್ತು ವೈದ್ಯಕೀಯ ಸೇವೆಗಳು, ಪ್ರವಾಸೋದ್ಯಮ, ವಿಪತ್ತು ನಿರ್ವಹಣೆ ಮತ್ತು ಕಾನೂನು ಜಾರಿ ಮುಂತಾದ ನಾಗರಿಕ ಅಗತ್ಯಗಳನ್ನು ಪೂರೈಸುತ್ತದೆ ,
ಇದರ ಸೇನಾ ಆವೃತ್ತಿ (H125M) ಭಾರತದ ಸಶಸ್ತ್ರ ಪಡೆಗಳಿಗೆ ವಿಶೇಷವಾಗಿ ಹಿಮಾಲಯದಂತಹ ಎತ್ತರದ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲಿದೆ.
ಲಡಾಖ್ ನ ಪ್ರತಿನಿಧಿಗಳು 371 ನೇ ವಿಧಿಯ ನಿಯಮಗಳನ್ನು ನೀಡಿದರು
ಸಾಮಾನ್ಯ ಅಧ್ಯಯನ-2/ರಾಜಕೀಯ ಮತ್ತು ಆಡಳಿತ
ಸಂದರ್ಭ:
ಲಡಾಖ್‌ನ ಎರಡು ಪ್ರಮುಖ ಸಾಮಾಜಿಕ-ರಾಜಕೀಯ ಸಂಘ/ಸಂಸ್ಥೆಗಳಾದ ಲೆಹ್ ಸರ್ವೋಚ್ಚ ಸಂಸ್ಥೆ (LAB) ಮತ್ತು ಕಾರ್ಗಿಲ್ ಪ್ರಜಾತಾಂತ್ರಿಕ ಮೈತ್ರಿ (KDA) ಗಳು ಪೂರ್ಣ ರಾಜ್ಯದ ಸ್ಥಾನಮಾನ ಮತ್ತು ಆರನೇ ಅನುಸೂಚಿಯ ಕುರಿತು ಗೃಹ ವ್ಯವಹಾರಗಳ ಸಚಿವಾಲಯ (MHA) ದ ಜೊತೆ ಮಾತುಕತೆಗಳನ್ನು ಪುನರಾರಂಭಿಸಲು ನಿರ್ಧರಿಸಿದವು.
ಆರನೇ ಅನುಸೂಚಿಯ ಸ್ಥಾನಮಾನಕ್ಕೆ ಸಂಭಾವ್ಯ ಪರ್ಯಾಯವಾಗಿ ಸಂವಿಧಾನದ 371 ನೇ ವಿಧಿಯ ಅಡಿಯಲ್ಲಿ ವಿಶೇಷ ನಿಬಂಧನೆಗಳನ್ನು ಕೇಂದ್ರವು ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ.
ಹಿನ್ನೆಲೆ:
ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು 2019 ರಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು. ಲಡಾಖ್ ವಿಧಾನ ಸಭೆಯಿಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ಉಳಿದಿದೆ.
ಲಡಾಖ್‌ನ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ ನಂತರ, ಲಡಾಖ್‌ನ ಹಲವಾರು ರಾಜಕೀಯ ಗುಂಪುಗಳು ಲಡಾಖ್‌ನ ಭೂಮಿ, ಉದ್ಯೋಗ ಮತ್ತು ಸಾಂಸ್ಕೃತಿಕ ಗುರುತನ್ನು ಆರನೇ ಅನುಸೂಚಿಯ ಅಡಿಯಲ್ಲಿ ರಕ್ಷಿಸಬೇಕೆಂದು ಒತ್ತಾಯಿಸುತ್ತಿವೆ.
2019 ರಲ್ಲಿ, ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವುಲಡಾಖ್ ಅನ್ನು ಆರನೇ ಅನುಸೂಚಿಯ ಅಡಿಯಲ್ಲಿ ಸೇರಿಸಲು ಶಿಫಾರಸು ಮಾಡಿತು.
ಸಂವಿಧಾನದ ಆರನೇ ಅನುಸೂಚಿಯ ಬಗ್ಗೆ:
ಸಂವಿಧಾನದ ವಿಧಿ 244 ರ ಅಡಿಯಲ್ಲಿ ಆರನೇ ಅನುಸೂಚಿಯು ಸ್ವಾಯತ್ತ ಆಡಳಿತ ವಿಭಾಗಗಳ ರಚನೆಗೆ ಅವಕಾಶ ನೀಡುತ್ತದೆ – ಸ್ವಾಯತ್ತ ಜಿಲ್ಲಾ ಮಂಡಳಿಗಳು (ADCs), ಇವುಗಳಿಗೆ ರಾಜ್ಯದೊಳಗೆ ಕೆಲವು ಶಾಸಕಾಂಗ, ನ್ಯಾಯಾಂಗ ಮತ್ತು ಆಡಳಿತಾತ್ಮಕಸ್ವಾಯತ್ತತೆಯನ್ನು ನೀಡುತ್ತವೆ.
ಈ ಅನುಸೂಚಿಯು ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳಲ್ಲಿನ ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಒಳಗೊಂಡಿದೆ.
ಈ ಅನುಸೂಚಿಯು ಸ್ವಾಯತ್ತ ಪ್ರಾದೇಶಿಕ ಮಂಡಳಿ (ARC) ಮತ್ತು ಸ್ವಾಯತ್ತ ಜಿಲ್ಲಾ ಮಂಡಳಿ (ADC) ಗಳಿಗೆ ಭೂ ಕಂದಾಯವನ್ನು ಸಂಗ್ರಹಿಸುವ, ತೆರಿಗೆಗಳನ್ನು ವಿಧಿಸುವ, ಹಣ ಸಾಲ ಮತ್ತು ವ್ಯಾಪಾರವನ್ನು ನಿಯಂತ್ರಿಸುವ, ತಮ್ಮ ಪ್ರದೇಶಗಳಲ್ಲಿ ಖನಿಜಗಳನ್ನು ಹೊರತೆಗೆಯಲು ಪರವಾನಗಿಗಳು ಅಥವಾ ಗುತ್ತಿಗೆಗಳಿಂದ ರಾಯಧನವನ್ನು ಸಂಗ್ರಹಿಸುವ ಮತ್ತು ಶಾಲೆಗಳು, ಮಾರುಕಟ್ಟೆಗಳು ಮತ್ತು ರಸ್ತೆಗಳಂತಹ ಸಾರ್ವಜನಿಕ ಸೌಲಭ್ಯಗಳನ್ನು ಸ್ಥಾಪಿಸುವ ಅಧಿಕಾರವನ್ನು ನೀಡುತ್ತದೆ.
ಸಂವಿಧಾನದ ವಿಧಿ 371 ನೇ ಅಡಿಯಲ್ಲಿ ನೀಡಲಾಗುವ ಸಂರಕ್ಷಣೆಗಳು:
ಸಂವಿಧಾನದ ವಿಧಿ 371 ಮತ್ತು 371-A ಯಿಂದ 371-J ವರೆಗಿನ ವಿಧಿಗಳು ನಿರ್ದಿಷ್ಟ ರಾಜ್ಯಗಳಿಗೆ “ವಿಶೇಷ ನಿಬಂಧನೆಗಳನ್ನು” ಒದಗಿಸುತ್ತವೆ, ಆಗಾಗ್ಗೆ ಕೆಲವು ಧಾರ್ಮಿಕ ಮತ್ತು ಸಾಮಾಜಿಕ ಗುಂಪುಗಳಿಗೆ ಪ್ರಾತಿನಿಧ್ಯವನ್ನು ನೀಡುತ್ತವೆ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಹಸ್ತಕ್ಷೇಪವಿಲ್ಲದೆ ಈ ಗುಂಪುಗಳು ತಮ್ಮ ವ್ಯವಹಾರಗಳ ಮೇಲೆ ಸ್ವಾಯತ್ತತೆಯನ್ನು ಚಲಾಯಿಸಲು ಅನುವು ಮಾಡಿಕೊಡುತ್ತವೆ.
371 ನೇ ವಿಧಿಯ ಅಡಿಯಲ್ಲಿನ ವಿಶೇಷ ನಿಬಂಧನೆಗಳು ಲಡಾಖ್‌ನ ಸ್ಥಳೀಯ ಜನರಿಗೆ ಸಂರಕ್ಷಣೆಯನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ.
ಕೇಂದ್ರ ಲೋಕಸೇವಾ ಆಯೋಗ (UPSC) ಕ್ಕೇ 100 ವರ್ಷಗಳು: ಅರ್ಹತಾಪ್ರಧಾನತೆಯ ರಕ್ಷಕ (ಕಾವಲುಗಾರ)
ಸಾಮಾನ್ಯ ಅಧ್ಯಯನ-2/ರಾಜಕೀಯ ಮತ್ತು ಆಡಳಿತ
ಸಂದರ್ಭ:
ಕೇಂದ್ರ ಲೋಕಸೇವಾ ಆಯೋಗ (UPSC) ವು ಅಕ್ಟೋಬರ್ 1 ರಂದು ಸ್ಥಾಪನೆಯಾಗಿ ಶತಮಾನ ಪೂರೈಸುತ್ತಿದೆ.
ಕೇಂದ್ರ ಲೋಕಸೇವಾ ಆಯೋಗ (UPSC) ದ ಬಗ್ಗೆ:
ಸ್ಥಾಪನೆ:- 1919 ರ ಭಾರತ ಸರ್ಕಾರ ಕಾಯ್ದೆಯು ಮೊದಲು ಅಂತಹ ಸಂಸ್ಥೆಗೆ ಅವಕಾಶ ಮಾಡಿಕೊಟ್ಟಿತು ಮತ್ತು 1924 ರ ಲೀ ಆಯೋಗದ ಶಿಫಾರಸುಗಳನ್ನು ಅನುಸರಿಸಿ ಅಕ್ಟೋಬರ್ 1926 ರಲ್ಲಿ ಲೋಕಸೇವಾ ಆಯೋಗವನ್ನು ಸ್ಥಾಪಿಸಲಾಯಿತು.
ನಂತರ 1937 ರಲ್ಲಿ “ಸಂಘೀಯ (ಫೆಡರಲ್) ಲೋಕಸೇವಾ ಆಯೋಗ” ಎಂದು ಹೆಸರಿಸಲಾಯಿತು, ಇದನ್ನು ಜನವರಿ 26, 1950 ರಂದು ಭಾರತದ ಸಂವಿಧಾನವನ್ನು ಅಂಗೀಕರಿಸುವುದರೊಂದಿಗೆ ಕೇಂದ್ರ ಲೋಕ ಸೇವಾ ಆಯೋಗ ಎಂದು ಮರುನಾಮಕರಣ ಮಾಡಲಾಯಿತು.
ಕಾರ್ಯಗಳು:- ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆ ಸೇರಿದಂತೆ ಇತರ ಹುದ್ದೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲು ನಾಗರಿಕ ಸೇವಾ ಪರೀಕ್ಷೆಗಳನ್ನು ನಡೆಸುತ್ತದೆ.
ಸದಸ್ಯರ ಸಂಖ್ಯೆ:- ಅಧ್ಯಕ್ಷರ ಹೊರತಾಗಿ, ಇದು ಗರಿಷ್ಠ 10 ಸದಸ್ಯರನ್ನು ಹೊಂದಿರಬಹುದು.
ನೇಮಕಾತಿ:- ಯುಪಿಎಸ್‌ಸಿ ಅಧ್ಯಕ್ಷರನ್ನು ಆರು ವರ್ಷಗಳ ಅವಧಿಗೆ ಅಥವಾ 65 ವರ್ಷ ವಯಸ್ಸಾಗುವವರೆಗೆ ನೇಮಿಸಲಾಗುತ್ತದೆ, ಎಲ್ಲಾ ಸದಸ್ಯರಿಗೂ ಒಂದೇ ಅವಧಿ ಇರುತ್ತದೆ.
ಮರು ನೇಮಕಾತಿ:- ಯುಪಿಎಸ್‌ಸಿ ಅಧ್ಯಕ್ಷರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ನೇಮಕಾತಿಗೆ ಅರ್ಹರಾಗಿರುವುದಿಲ್ಲ, ಆದರೆ ಎಲ್ಲಾ ಸದಸ್ಯರು ಯುಪಿಎಸ್‌ಸಿ ಅಥವಾ ಯಾವುದೇ ರಾಜ್ಯದ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಮರು ನೇಮಕಾತಿಗೆ ಅರ್ಹರಾಗಿರುತ್ತಾರೆ.
ತೆಗೆದುಹಾಕುವಿಕೆ (ವಿಧಿ 317): ರಾಷ್ಟ್ರಪತಿಗಳಿಂದ ಈ ಕೆಳಕಂಡ ಕಾರಣಗಳಿಗೆ ತೆಗೆದುಹಾಕಬಹುದು:
ದುರ್ವರ್ತನೆಯ ಆಧಾರದ ಮೇಲೆ.
ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ಗೆ ಉಲ್ಲೇಖ ಮಾಡುತ್ತಾರೆ.
ದುರ್ವರ್ತನೆ ದೃಢೀಕರಿಸುವ ವರದಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕು.
ಯಾವಾಗ ಸುಪ್ರೀಂ ಕೋರ್ಟ್ ವಿಚಾರಣೆಯಿಲ್ಲದೆ ಸದಸ್ಯರನ್ನು ತೆಗೆದುಹಾಕಬಹುದು:– ದಿವಾಳಿ ಎಂದು ತೀರ್ಪು ನೀಡಿದ್ದರೆ, ಕಚೇರಿ ಕರ್ತವ್ಯಗಳ ಹೊರಗೆ ಸಂಬಳ ಪಡೆಯುವ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರೆ, ಮಾನಸಿಕ ಅಥವಾ ದೈಹಿಕ ದೌರ್ಬಲ್ಯದಿಂದಾಗಿ ಅನರ್ಹನಾಗಿದ್ದರೆ.
ನಾಗರಿಕ ಸೇವಾ ದಿನದ ಬಗ್ಗೆ:
ಪ್ರತಿ ವರ್ಷ ಏಪ್ರಿಲ್ 21 ರಂದು ನಾಗರಿಕ ಸೇವಾ ದಿನವನ್ನು ಆಚರಿಸಲಾಗುತ್ತದೆ.
ಕಾರಣ:- 1947 ರಲ್ಲಿ ನವದೆಹಲಿಯ ಮೆಟ್‌ಕಾಲ್ಫ್ ಹೌಸ್‌ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮೊದಲ ಬ್ಯಾಚ್ ನಾಗರಿಕ ಸೇವಕರನ್ನುದ್ದೇಶಿಸಿ ಮಾತನಾಡಿದ ದಿನದ ಸ್ಮರಣಾರ್ಥ.
ನಾಗರಿಕ ಸೇವಕರನ್ನು “ಭಾರತದ ಉಕ್ಕಿನ ಚೌಕಟ್ಟು” ಎಂದು ಕರೆದ ಅವರು, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಅವರ ಪಾತ್ರವನ್ನು ಒತ್ತಿ ಹೇಳಿದರು.
ರಾಜ್ಯ ಸರ್ಕಾರದ ಪ್ರಮುಖ ಮಹಿಳಾ ಸಬಲೀಕರಣ ಉಪಕ್ರಮವಾದ ಶಕ್ತಿ ಯೋಜನೆಯು ಅಂತರರಾಷ್ಟ್ರೀಯ ದಾಖಲೆಗಳ ಪುಸ್ತಕ – ವಿಶ್ವ ಶ್ರೇಷ್ಠತೆಯ ದಾಖಲೆಯನ್ನು ಪ್ರವೇಶಿಸುವ ಮೂಲಕ ಮತ್ತೊಂದು ಜಾಗತಿಕ ಮೈಲಿಗಲ್ಲು ಸಾಧಿಸಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ಈ ಯೋಜನೆ ಆರಂಭವಾದಾಗಿನಿಂದ 500 ಕೋಟಿಗೂ ಹೆಚ್ಚು ಉಚಿತ ಟಿಕೆಟ್‌ಗಳನ್ನು ನೀಡಲಾಗಿದೆ.
ಶಕ್ತಿ ಯೋಜನೆಯ ಬಗ್ಗೆ:
ಈ ಯೋಜನೆಯನ್ನು ಜೂನ್ 11, 2023 ರಂದು ಮೊದಲು ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು.
ಇದು ಕರ್ನಾಟಕದ ಎಲ್ಲಾ ಮಹಿಳಾ ಮತ್ತು ತೃತೀಯ ಲಿಂಗಿ ಮಹಿಳಾ ನಿವಾಸಿಗಳಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ಒಂದು ಯೋಜನೆಯಾಗಿದೆ.
ಉದ್ದೇಶ: ಸಾರ್ವಜನಿಕ ಸಾರಿಗೆಯ ಪ್ರವೇಶವನ್ನು ಸುಧಾರಿಸುವ ಮೂಲಕ, ಕೆಲಸದಲ್ಲಿ ಅವರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು, ಆರ್ಥಿಕ ಸ್ವಾತಂತ್ರ್ಯ ಮತ್ತು ಚಲನಶೀಲತೆಯನ್ನು ಹೆಚ್ಚಿಸುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು.
ಉದ್ದೇಶಿತ ಫಲಾನುಭವಿಗಳು:- ಮಹಿಳಾ ವಿದ್ಯಾರ್ಥಿಗಳು ಮತ್ತು ತೃತೀಯ ಲಿಂಗಿ ಮಹಿಳೆಯರು ಸೇರಿದಂತೆ ಕರ್ನಾಟಕದಲ್ಲಿ ನೆಲೆಸಿರುವ ಎಲ್ಲಾ ಮಹಿಳೆಯರು ಅರ್ಹರು.
ಗಮನಿಸಿ:- ಉಚಿತ ಪ್ರಯಾಣವು KSRTC, BMTC, NWKRTC, ಮತ್ತು KKRTC ನಿರ್ವಹಿಸುವ ಪ್ರೀಮಿಯಂ ಅಲ್ಲದ ಬಸ್‌ಗಳಲ್ಲಿ ಮತ್ತು ರಾಜ್ಯದೊಳಗೆ ಮಾತ್ರ ಮಾನ್ಯವಾಗಿರುತ್ತದೆ.
ಭಾರತದ ಜೈವಿಕ ವೈದ್ಯಕೀಯ ಸಂಶೋಧನಾ ಪರಿಸರ ವ್ಯವಸ್ಥೆ ಮತ್ತು ಜಾಗತಿಕ ಪ್ರಭಾವವನ್ನು ಗಮನಾರ್ಹವಾಗಿ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು ಜೈವಿಕ ವೈದ್ಯಕೀಯ ಸಂಶೋಧನಾ ವೃತ್ತಿ ಕಾರ್ಯಕ್ರಮದ (BRCP) ಹಂತ-III (2025-26 ರಿಂದ 2030-31) ಅನ್ನು ಅನುಮೋದಿಸಿತು.
ಜೈವಿಕ ವೈದ್ಯಕೀಯ ಸಂಶೋಧನಾ ವೃತ್ತಿ ಕಾರ್ಯಕ್ರಮ (BRCP) ದ ಬಗ್ಗೆ:
ಉದ್ದೇಶ:- ಈ ಕಾರ್ಯಕ್ರಮವು ಸಂಶೋಧನಾ ವ್ಯವಸ್ಥೆಗಳನ್ನು ಬಲಪಡಿಸುವುದು, ವೈಜ್ಞಾನಿಕ ಸಾಮರ್ಥ್ಯಗಳಲ್ಲಿನ ಪ್ರಾದೇಶಿಕ ಅಸಮಾನತೆಗಳನ್ನು ಕಡಿಮೆ ಮಾಡುವುದು ಮತ್ತು ವಿಶ್ವ ದರ್ಜೆಯ ಜೈವಿಕ ವೈದ್ಯಕೀಯ ಸಂಶೋಧನಾ ಸಾಮರ್ಥ್ಯವನ್ನು ಸ್ಥಾಪಿಸುವುದು.
BRCP ಅನ್ನು ಅನುಷ್ಠಾನಗೊಳಿಸಲಾಗುತ್ತದೆ:
ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ (DBT).
ಯುನೈಟೆಡ್ ಕಿಂಗ್‌ಡಮ್‌ನ ವೆಲ್‌ಕಮ್ ಟ್ರಸ್ಟ್ (WT).
ಇಂಡಿಯಾ ಅಲೈಯನ್ಸ್, ಈ ಉಪಕ್ರಮಕ್ಕಾಗಿ ರಚಿಸಲಾದ ವಿಶೇಷ ಉದ್ದೇಶದ ವಾಹನ.
ಅಮೇರಿಕಾದ ಟೊಮಾಹಾಕ್ ಕ್ಷಿಪಣಿಗಳು
ಸಾಮಾನ್ಯ ಅಧ್ಯಯನ – 3 / ರಕ್ಷಣಾ ವ್ಯವಸ್ಥೆ
ಸಂದರ್ಭ:
ಉಕ್ರೇನ್ ದೇಶವು ಅಮೆರಿಕದಿಂದ ದೀರ್ಘ-ವ್ಯಾಪ್ತಿಯ ಟೊಮಾಹಾಕ್ ಕ್ರೂಸ್ (ನಿರಂತರ ನಿಯಂತ್ರಿತ ದಾರಿ ಮೂಲಕ ಹಾರುವ) ಕ್ಷಿಪಣಿಗಳನ್ನು ಕೇಳಿಕೊಂಡಿದೆ.
ಟೊಮಾಹಾಕ್ ಕ್ಷಿಪಣಿಗಳ ಬಗ್ಗೆ:
ಟೊಮಾಹಾಕ್‌ಗಳು ದೀರ್ಘ-ವ್ಯಾಪ್ತಿಯ ಸಬ್‌ಸಾನಿಕ್ (ಶಬ್ದವೇಗಕ್ಕಿಂತ ಕಡಿಮೆ ವೇಗದ) ಕ್ರೂಸ್ ಕ್ಷಿಪಣಿಗಳಾಗಿದ್ದು, ಇವುಗಳನ್ನು ಹಡಗು, ಜಲಾಂತರ್ಗಾಮಿ ಅಥವಾ ನೆಲದ ಪ್ರಕ್ಷೇಪಕಗಳ ಮೂಲಕ ಉಡಾಯಿಸಬಹುದಾಗಿದೆ.
ಅವು ದೀರ್ಘ-ವ್ಯಾಪ್ತಿಯ, ಆಳವಾದ ದಾಳಿಯ ಸಾಮರ್ಥ್ಯಗಳನ್ನು ಹೊಂದಿವೆ ಮತ್ತು 1,250 ಕಿಮೀ – 2,500 ಕಿಮೀ ದೂರದ ಗುರಿಗಳನ್ನು ಹೊಡೆಯಬಲ್ಲವು.
ಸೇನಾ ಬಂಕರ್‌ಗಳಂತಹ ಗಟ್ಟಿಯಾದ ಗುರಿಗಳನ್ನು ಭೇದಿಸುವಂತೆ ವಿನ್ಯಾಸಗೊಳಿಸಲಾದ ಹೆಚ್ಚಿನ ಸ್ಫೋಟಕ ಸಿಡಿತಲೆಗಳನ್ನು ಅವು ಹೊತ್ತೊಯ್ಯುಬಲ್ಲವು.
ಇವು ಕಡಿಮೆ ಎತ್ತರವನ್ನು ಕಾಯ್ದುಕೊಳ್ಳುವಾಗ ಹೆಚ್ಚಿನ ಸಬ್‌ಸಾನಿಕ್ ವೇಗದಲ್ಲಿ ಹಾರುವ ಮೂಲಕ ರಾಡಾರ್ ಪತ್ತೆಯನ್ನು ತಪ್ಪಿಸುತ್ತವೆ.
ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹೈನುಗಾರಿಕೆ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ
ಸಾಮಾನ್ಯ ಅಧ್ಯಯನ-3/ ಕೃಷಿ
ಸಂದರ್ಭ:
ಕಳೆದ 11 ವರ್ಷಗಳಲ್ಲಿ ಭಾರತದ ಹೈನುಗಾರಿಕಾ ವಲಯವು ಶೇ. 70 ರಷ್ಟು ವಿಸ್ತರಿಸಿದೆ, ಹಾಲಿನ ಉತ್ಪಾದನೆಯು 2014-15 ರಲ್ಲಿ 146 ಮಿಲಿಯನ್ ಟನ್‌ಗಳಿಂದ 2023-24 ರಲ್ಲಿ 239 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗಿದೆ.
ಭಾರತದ ಹೈನುಗಾರಿಕೆ ವಲಯದ ಬಗ್ಗೆ:
ಜಾಗತಿಕ ನಾಯಕತ್ವ:– ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ಹಾಲು ಉತ್ಪಾದನೆಯಲ್ಲಿ ಶೇ. 24.76 ರಷ್ಟು ಕೊಡುಗೆ ನೀಡುತ್ತದೆ.
ಆರ್ಥಿಕ ಕೊಡುಗೆ: ಹೈನುಗಾರಿಕೆಯು ಭಾರತದ ಏಕೈಕ ಅತಿದೊಡ್ಡ ಕೃಷಿ ಸರಕು, ಇದು ಜಿಡಿಪಿ ಗೆ 5% ಕೊಡುಗೆ ನೀಡುತ್ತದೆ ಮತ್ತು 8 ಕೋಟಿಗೂ ಹೆಚ್ಚು ರೈತರಿಗೆ ಉದ್ಯೋಗ ನೀಡುತ್ತದೆ.
ತಲಾ ಲಭ್ಯತೆ: 2023–24ರಲ್ಲಿ ಪ್ರತಿ ದಿನಕ್ಕೆ 471 ಗ್ರಾಂಗೆ ಏರಿಕೆಯಾಗಿದ್ದು, ಇದು ವಿಶ್ವದ ಸರಾಸರಿ 322 ಗ್ರಾಂ ಪ್ರತಿ ದಿನಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ.
ಹೆಚ್ಚು ಉತ್ಪಾದಿಸುವ ರಾಜ್ಯಗಳು: ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶ.
ಭಾರತದ ಹೈನುಗಾರಿಕೆ ಯಶಸ್ಸಿಗೆ ಪ್ರಮುಖ ಕಾರಣಗಳು:
ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ (NDDB):- ಭಾರತದಾದ್ಯಂತ ಅಮುಲ್ ಸಹಕಾರಿ ಮಾದರಿಯನ್ನು ಪುನರಾವರ್ತಿಸಲು ಇದನ್ನು 1965 ರಲ್ಲಿಗುಜರಾತಿನಆನಂದ್ನಲ್ಲಿ ಸ್ಥಾಪಿಸಲಾಯಿತು.
ಆಪರೇಷನ್ ಫ್ಲಡ್ (1970):- ಇದು ಭಾರತವನ್ನು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಪರಿವರ್ತಿಸಿತು ಮತ್ತು ಸಂಗ್ರಹಣೆ ಮತ್ತು ವಿತರಣೆಗಾಗಿ ರಾಷ್ಟ್ರವ್ಯಾಪಿ ಸಹಕಾರಿ ರಚನೆಯನ್ನು ರಚಿಸಿತು.
ಭಾರತ ಮತ್ತು ರಷ್ಯಾ ಕಾರ್ಯತಂತ್ರದ ಪಾಲುದಾರಿಕೆಯ 25 ವರ್ಷಗಳನ್ನು ಆಚರಿಸುತ್ತವೆ
ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ಬದಲಾಗುತ್ತಿರುವ ಜಾಗತಿಕ ಸ್ವರೂಪದ ನಡುವೆಯೂ ರಷ್ಯಾ ಮತ್ತು ಭಾರತ ತಮ್ಮ 25 ವರ್ಷಗಳ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಮನಾರ್ಹವಾಗಿ ಮುನ್ನಡೆಸಿವೆ.
ಹಿನ್ನೆಲೆ:
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಯತಂತ್ರದ ಪಾಲುದಾರಿಕೆಯ ಘೋಷಣೆಗೆ 2000ನೇ ಇಸವಿಯಲ್ಲಿ ಸಹಿ ಹಾಕಿದರು, ಇದು ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ತೆರೆಯಿತು.
ಇದು ಡಿಸೆಂಬರ್ 2010 ರಲ್ಲಿ, ಕಾರ್ಯತಂತ್ರದ ಪಾಲುದಾರಿಕೆಯನ್ನು “ವಿಶೇಷ ಮತ್ತು ಸವಲತ್ತು ಪಡೆದ ಕಾರ್ಯತಂತ್ರದ ಪಾಲುದಾರಿಕೆ” ಎಂದು ಮೇಲ್ದರ್ಜೆಗೇರಿಸಲಾಯಿತು.
ಅಂತರಸರ್ಕಾರಿ ಆಯೋಗ ಮತ್ತು 2+2 ಸಂವಾದ ಸೇರಿದಂತೆ ಬಹು ಸಾಂಸ್ಥಿಕ ಸಂವಾದಗಳು ರಾಜಕೀಯ, ರಕ್ಷಣೆ, ವ್ಯಾಪಾರ, ವಿಜ್ಞಾನ ಮತ್ತು ಸಂಸ್ಕೃತಿಯಾದ್ಯಂತ ಬಲವಾದ ಸಹಕಾರವನ್ನು ಖಚಿತಪಡಿಸುತ್ತವೆ .
ನಾಯಕತ್ವ ಮಟ್ಟದಲ್ಲಿ ತೊಡಗಿಸಿಕೊಳ್ಳುವಿಕೆಗಳು:
ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯು ಅತ್ಯುನ್ನತ ಸಂವಾದ ಕಾರ್ಯವಿಧಾನವಾಗಿದ್ದು, ಎರಡೂ ದೇಶಗಳಲ್ಲಿ ಪರ್ಯಾಯವಾಗಿ 22 ಸಭೆಗಳನ್ನು ನಡೆಸಲಾಗುತ್ತದೆ.
ಭಾರತದ ಪ್ರಧಾನಿಗೆ ರಷ್ಯಾದ ಅತ್ಯುನ್ನತ ಗೌರವವಾದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಪ್ರಶಸ್ತಿ ಲಭಿಸಿದೆ.
ಬಹುಪಕ್ಷೀಯ ಒಪ್ಪಂದಗಳ ಬಗ್ಗೆ:
ವಿಶ್ವಸಂಸ್ಥೆ, ಜಿ20, ಬ್ರಿಕ್ಸ್ ಮತ್ತು ಶಾಂಘೈ ಸಹಕಾರ ಸಂಸ್ಥೆ ಯಂತಹ ಬಹುಪಕ್ಷೀಯ ವೇದಿಕೆಗಳಲ್ಲಿ ಭಾರತ ಮತ್ತು ರಷ್ಯಾ ನಿಕಟವಾಗಿ ಸಹಕರಿಸುತ್ತವೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತದ ಪ್ರಯತ್ನವನ್ನು ರಷ್ಯಾ ಬೆಂಬಲಿಸುತ್ತದೆ.
ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳ ಬಗ್ಗೆ:
ಭಾರತ ಮತ್ತು ರಷ್ಯಾ 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 100 ಬಿಲಿಯನ್ ಡಾಲರ್‌ಗೆ ಮತ್ತು 2025 ರ ವೇಳೆಗೆ ಹೂಡಿಕೆಯನ್ನು 50 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಿವೆ.
2023-24ನೇ ಹಣಕಾಸು ವರ್ಷದಲ್ಲಿ, ವ್ಯಾಪಾರವು ದಾಖಲೆಯ $65.7 ಶತಕೋಟಿಯನ್ನು ತಲುಪಿತು, ಭಾರತವುಔಷಧಗಳು ಮತ್ತು ಯಂತ್ರೋಪಕರಣಗಳನ್ನು ರಫ್ತು ಮಾಡಿತು ಮತ್ತು ರಷ್ಯಾದಿಂದ ತೈಲ, ರಸಗೊಬ್ಬರಗಳು ಮತ್ತು ಖನಿಜಗಳನ್ನು ಆಮದು ಮಾಡಿಕೊಂಡಿತು.
ರಕ್ಷಣೆ ಮತ್ತು ಭದ್ರತೆಯ ಸಹಕಾರ:
ಜಂಟಿ ಸೇನಾ ಸಮರಾಭ್ಯಾಸಗಳು:- ಇಂದ್ರ, ವೋಸ್ಟಾಕ್ ಮತ್ತು ಜಪಾಡ್.
ರಕ್ಷಣಾ ಯೋಜನೆಗಳು:- S-400 ವ್ಯವಸ್ಥೆಗಳು, T-90 ಟ್ಯಾಂಕ್‌ಗಳು, Su-30 MKI ಜೆಟ್‌ಗಳು, MiG-29 ಮತ್ತು ಕಾಮೋವ್ ಹೆಲಿಕಾಪ್ಟರ್‌ಗಳು, INS ವಿಕ್ರಮಾದಿತ್ಯ, AK-203 ರೈಫಲ್‌ಗಳು ಮತ್ತು ಬ್ರಹ್ಮೋಸ್ ಕ್ಷಿಪಣಿಗಳು.
ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ:- ನ್ಯಾನೊತಂತ್ರಜ್ಞಾನ, ಕ್ವಾಂಟಂ ಗಣನೆ (ಕಂಪ್ಯೂಟಿಂಗ್) ಮತ್ತು ಪರಮಾಣು ಶಕ್ತಿ ಸ್ಥಾವರ (ಕುಡಂಕುಲಂ).