RISE ಉಪಕ್ರಮ | ಆಪರೇಷನ್ ಪವನ್

RISE ಉಪಕ್ರಮ

ಸಾಮಾನ್ಯ ಅಧ್ಯಯನ-3/ ಪರಿಸರ

ಇದೀಗ ಸುದ್ದಿಯಲ್ಲಿದೆ: 

  • ಇತ್ತೀಚೆಗೆ, ಐಐಟಿ ಖರಗ್‌ಪುರ “ಇಂಪ್ಯಾಕ್ಟ್ RISE” (R-ಸಂಶೋಧನೆ, I-ನಾವೀನ್ಯತೆ, S-ಕೌಶಲ್ಯ ಮತ್ತು E-ಉದ್ಯಮಶೀಲತೆ) ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ.

RISE ಉಪಕ್ರಮದ ಬಗ್ಗೆ:

  • ಧ್ಯೇಯೋದ್ದೇಶ:- ಈ ಉಪಕ್ರಮವು ಸಾಮಾಜಿಕ ಪರಿವರ್ತನೆಗಾಗಿ ಸುಸ್ಥಿರ ತಂತ್ರಜ್ಞಾನ ಮತ್ತು ಸುಧಾರಿತ ನಿರ್ವಹಣಾ ಪದ್ಧತಿಗಳ ಮೇಲೆ ಕೇಂದ್ರೀಕರಿಸುತ್ತದೆ.
  • ನಾಲ್ಕು ಪ್ರಮುಖ ಆಧಾರಸ್ಥಂಭಗಳು: ಈ ಯೋಜನೆಯು ಸಂಶೋಧನೆ, ನಾವೀನ್ಯತೆ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಎಂಬ ನಾಲ್ಕು ಪ್ರಮುಖ ಆಯಾಮಗಳನ್ನು ಆಧರಿಸಿದೆ.
  • ಮಹತ್ವ:- ಇದು ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಭಾರತದ ಹವಾಮಾನ ಮತ್ತು ಅಭಿವೃದ್ಧಿ ಆದ್ಯತೆಗಳಿಗೆ ಅನುಗುಣವಾಗಿ ಸಂಶೋಧನೆಯನ್ನು ಒಳಗೊಂಡಿರುತ್ತದೆ.

ಆಪರೇಷನ್ ಪವನ್

ರಕ್ಷಣೆ

ಇದೀಗ ಸುದ್ದಿಯಲ್ಲಿದೆ: 

  • ಶ್ರೀಲಂಕಾದಲ್ಲಿ ನಡೆದ ‘ಆಪರೇಷನ್ ಪವನ್’ (1987–1990) ಕಾರ್ಯಾಚರಣೆಯ ಅವಧಿಯಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗೆ ಭಾರತೀಯ ಭೂಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರು ಗೌರವ ನಮನ ಸಲ್ಲಿಸಿದರು.

‘ಆಪರೇಷನ್ ಪವನ್’ (1987–1990) ಕಾರ್ಯಾಚರಣೆಯ ಬಗ್ಗೆ:

  • ಭಾರತ-ಶ್ರೀಲಂಕಾ ಒಪ್ಪಂದಕ್ಕೆ ಸಹಿ ಹಾಕಿದ ನಂತರ, 1987 ರಲ್ಲಿ ಅಂದಿನ ರಾಜೀವ್ ಗಾಂಧಿ ನೇತೃತ್ವದ ಸರ್ಕಾರವು ಈ ಕಾರ್ಯಾಚರಣೆಯನ್ನು ಹಮ್ಮಿಕೊಂಡಿತ್ತು.
  • ಶ್ರೀಲಂಕಾದ ಅಲ್ಪಸಂಖ್ಯಾತ ತಮಿಳು ಸಮುದಾಯ ಮತ್ತು ಸಿಂಹಳೀಯ ಬಹುಸಂಖ್ಯಾತ ಸರ್ಕಾರದ ನಡುವೆ ನಡೆಯುತ್ತಿದ್ದ ಅಂತರ್ಯುದ್ಧದ ವೇಳೆ, ಶಾಂತಿ ಸ್ಥಾಪನೆಗಾಗಿ ಭಾರತವು ತನ್ನ ‘ಭಾರತೀಯ ಶಾಂತಿ ಪಾಲನಾ ಪಡೆ’ (IPKF)ಯನ್ನು ನಿಯೋಜಿಸಿತ್ತು.

ಭಾರತದ ತೀವ್ರ ಕಳವಳಕ್ಕೆ ಕಾರಣಗಳು:

  • ತಮಿಳುನಾಡಿನೊಂದಿಗೆ ತಮಿಳು ಸಮುದಾಯಕ್ಕಿದ್ದ ಜನಾಂಗೀಯ ಮತ್ತು ಸಾಂಸ್ಕೃತಿಕ ಬಾಂಧವ್ಯ.
  • ದ್ವೀಪರಾಷ್ಟ್ರದಲ್ಲಿ ಮಿತಿಮೀರುತ್ತಿದ್ದ ಹಿಂಸಾಚಾರ.
  • ಭಾರತಕ್ಕೆ ನಿರಾಶ್ರಿತರ ಒಳಹರಿವು ನಿರಂತರವಾಗಿ ಹೆಚ್ಚಾಗುತ್ತಿರುವುದು.

ನಿಮಗಿದು ತಿಳಿದಿದೆಯೇ?

  • ಮೇ 18, 2009 ರಂದು ‘ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಲಂ’ (LTTE) ಸಂಘಟನೆಯ ಸೋಲಿನೊಂದಿಗೆ ಶ್ರೀಲಂಕಾದ ದಶಕಗಳ ಕಾಲದ ಅಂತರ್ಯುದ್ಧವು ಕೊನೆಗೊಂಡಿತು.
  • ಭಾರತವು ಕಳೆದ ಹಲವು ದಶಕಗಳಿಂದ ಆಪರೇಷನ್ ಪವನ್ ಅನ್ನು ಅಧಿಕೃತವಾಗಿ ಸ್ಮರಿಸಿರಲಿಲ್ಲ. ಆದರೆ, ಶ್ರೀಲಂಕಾ ಸರ್ಕಾರವು ಕೊಲಂಬೊದಲ್ಲಿ ‘ಭಾರತೀಯ ಶಾಂತಿ ಪಾಲನಾ ಪಡೆ’ (IPKF) ಯ ಸ್ಮಾರಕವನ್ನು ನಿರ್ವಹಿಸುತ್ತಾ ಬಂದಿದೆ.
  • ಪ್ರಸ್ತುತ, ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಬಲಿದಾನಗೈದ ಯೋಧರ ತ್ಯಾಗವನ್ನು ಭಾರತೀಯ ಸೇನೆಯು ಅಧಿಕೃತವಾಗಿ ಗುರುತಿಸುವ ಮೂಲಕ ತನ್ನ ನಿಲುವಿನಲ್ಲಿ ಮಹತ್ವದ ಬದಲಾವಣೆ ತಂದಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts