ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕಾಫಿ ರಫ್ತಿಗೆ ಅಡ್ಡಿ | ಆರ್ಟೆಮಿಸ್ 2 ಮಿಷನ್ (Artemis 2 Mission) – ನಾಸಾ | ಪಿಎಂ-ಕುಸುಮ್ 2.0 (PM-KUSUM 2.0) | ಪರಮಾಣು ಒಪ್ಪಂದದಿಂದ ಹೊರಬರಲು ಇರಾನ್ ಚಿಂತನೆ

ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕಾಫಿ ರಫ್ತಿಗೆ ಅಡ್ಡಿ

ಆರ್ಥಿಕತೆ

ಇತ್ತೀಚೆಗೆ ಸುದ್ದಿಯಲ್ಲಿದೆ: 

  • ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಭಾರತದ ಕಾಫಿ ರಫ್ತಿಗೆ ತೀವ್ರ ಅಡ್ಡಿಯುಂಟುಮಾಡಿದೆ. ಪರ್ಷಿಯಾ ಕೊಲ್ಲಿಯ ಬಳಿ ಸುಮಾರು 15-20% ರಷ್ಟು ಸರಕು ಸಾಗಣೆಗಳು ಸ್ಥಗಿತಗೊಂಡಿದ್ದು, ಇದು ಪಶ್ಚಿಮ ಏಷ್ಯಾ ಮತ್ತು ಯುರೋಪ್‌ನ ಪ್ರಮುಖ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ.

‘ಭಾರತದ ಕಾಫಿ ಮಂಡಳಿ’ಯ ಬಗ್ಗೆ:

    • ಶಾಸನಬದ್ಧ ಸಂಸ್ಥೆ:- ‘ಕಾಫಿ ಕಾಯ್ದೆ, 1942’ ರ ಮೂಲಕ ‘ಕಾಫಿ ಮಂಡಳಿ’ಯನ್ನು ಸ್ಥಾಪಿಸಲಾಯಿತು.
    • ಆಡಳಿತಾತ್ಮಕ ನಿಯಂತ್ರಣ:- ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ.
    • ರಚನೆ:- ಈ ಮಂಡಳಿಯು ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ 33 ಸದಸ್ಯರನ್ನು ಒಳಗೊಂಡಿದೆ.
    • ಉದ್ದೇಶಗಳು:-
  • ಉತ್ಪಾದನೆ, ಉತ್ಪಾದಕತೆ ಮತ್ತು ಗುಣಮಟ್ಟದ ಉನ್ನತೀಕರಣ.
    • ಭಾರತದ ಕಾಫಿಗೆ ಹೆಚ್ಚಿನ ಮೌಲ್ಯದ ಆದಾಯವನ್ನು ತಂದುಕೊಡುವ ನಿಟ್ಟಿನಲ್ಲಿ ರಫ್ತು ಉತ್ತೇಜನ ನೀಡುವುದು.
    • ದೇಶೀಯ ಮಾರುಕಟ್ಟೆಯ ಅಭಿವೃದ್ಧಿಗೆ ಬೆಂಬಲ ನೀಡುವುದು.

ಐತಿಹಾಸಿಕ ಹಿನ್ನೆಲೆ:

  • ಮೂಲ:- ‘ಕಾಫಿ’ ಎಂಬ ಪದವು ಇಥಿಯೋಪಿಯಾದಿಂದ ಬಂದಿದೆ, ಅಲ್ಲಿ ಅದನ್ನು ‘ಕಹ್ವೆ’ (Kahve) ಎಂದು ಕರೆಯುತ್ತಿದ್ದರು.
  • ಭಾರತಕ್ಕೆ ಪರಿಚಯ:- ಅರಬ್ಬರು ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಕಾಫಿ ತೋಟಗಳನ್ನು ಪರಿಚಯಿಸಿದರು.
  • ಸೂಫಿ ಸಂತ ಬಾಬಾ ಬುಡಾನ್ ಅವರು ಕರ್ನಾಟಕದ ಚಿಕ್ಕಮಗಳೂರಿನ ಸುತ್ತಮುತ್ತ ಕಾಫಿ ಗಿಡಗಳನ್ನು ಬೆಳೆಸಿದರು.

‘ಭಾರತದ ಕಾಫಿ ಉದ್ಯಮ’ದ ಬಗ್ಗೆ:

  • ಭಾರತದಲ್ಲಿ ಎರಡು ವಿಧದ ಕಾಫಿಯನ್ನು ಬೆಳೆಯಲಾಗುತ್ತದೆ:- ಅರೇಬಿಕಾ ಮತ್ತು ರೊಬಸ್ಟಾ.  ಅರೇಬಿಕಾವು ಅದರ ಸೌಮ್ಯವಾದ ಸುಗಂಧ ಪರಿಮಳದಿಂದಾಗಿ ರೊಬಸ್ಟಾ ಕಾಫಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
  • ಎತ್ತರದ ಪ್ರದೇಶಗಳಲ್ಲಿ ‘ಅರೇಬಿಕಾ’ ಕಾಫಿ’ ಮತ್ತು ತಗ್ಗು ಪ್ರದೇಶಗಳಲ್ಲಿ ‘ರೊಬಸ್ಟಾ’ ಕಾಫಿಯನ್ನು ಬೆಳೆಯಲಾಗುತ್ತದೆ. 
  • ಭಾರತದ ಕಾಫಿಯು ನೆರಳಿನಲ್ಲಿ ಬೆಳೆಯುವ ವಿಶಿಷ್ಟತೆಯನ್ನು ಹೊಂದಿದೆ.
  • ಉತ್ಪಾದನೆ:- ಭಾರತವು ಅಗ್ರ 10 ಕಾಫಿ-ಉತ್ಪಾದಿಸುವ ದೇಶಗಳಲ್ಲಿ ಒಂದಾಗಿದ್ದು, 2020 ರಲ್ಲಿ ಜಾಗತಿಕ ಉತ್ಪಾದನೆಯ ಶೇಕಡಾ 3 ರಷ್ಟನ್ನು ಹೊಂದಿದೆ.
  • ರೊಬಸ್ಟಾ ಭಾರತದಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುವ ಕಾಫಿಯಾಗಿದ್ದು, ಒಟ್ಟು ಕಾಫಿ ಉತ್ಪಾದನೆಯಲ್ಲಿ 72% ಪಾಲನ್ನು ಹೊಂದಿದೆ.
  • ದಕ್ಷಿಣ ಭಾರತದಲ್ಲಿ ಕಾಫಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಕರ್ನಾಟಕವು ಅತಿದೊಡ್ಡ ಉತ್ಪಾದಕ ರಾಜ್ಯವಾಗಿದ್ದು, ಭಾರತದ ಒಟ್ಟು ಕಾಫಿ ಉತ್ಪಾದನೆಯ ಶೇ. 70 ರಷ್ಟನ್ನು ಹೊಂದಿದೆ.
  • ಕೇರಳವು ಎರಡನೇ ಅತಿದೊಡ್ಡ ಉತ್ಪಾದಕ ರಾಜ್ಯವಾಗಿದ್ದು 23% ರಷ್ಟನ್ನು ಮತ್ತು ತಮಿಳುನಾಡು ಕೇವಲ 6% ರಷ್ಟನ್ನು ಹೊಂದಿದೆ.
  • ಉದ್ಯೋಗ: ಈ ಉದ್ಯಮವು ಭಾರತದಲ್ಲಿ 20 ಲಕ್ಷಕ್ಕೂ ಅಧಿಕ ಜನರಿಗೆ ನೇರ ಉದ್ಯೋಗವನ್ನು ಒದಗಿಸುತ್ತದೆ.
  • ಭಾರತವು ತನ್ನ ಒಟ್ಟು ಉತ್ಪಾದನೆಯ 70% ಕ್ಕಿಂತ ಹೆಚ್ಚಿನದನ್ನು ರಫ್ತು ಮಾಡುತ್ತದೆ. FAO ಅಂಕಿಅಂಶಗಳ ಪ್ರಕಾರ, ಒಟ್ಟು ಪ್ರಮಾಣದ ಆಧಾರದ ಮೇಲೆ ಭಾರತವು ಕಾಫಿ ರಫ್ತು ಮಾಡುವ ಜಗತ್ತಿನ ಎಂಟನೇ ಅತಿದೊಡ್ಡ ದೇಶವಾಗಿದೆ.

ಆರ್ಟೆಮಿಸ್ 2 ಮಿಷನ್ (Artemis 2 Mission) – ನಾಸಾ

ವಿಜ್ಞಾನ ಮತ್ತು ತಂತ್ರಜ್ಞಾನ

ಇತ್ತೀಚೆಗೆ ಸುದ್ದಿಯಲ್ಲಿದೆ: 

  • ಅಮೆರಿಕದ ನಾಸಾ (NASA) ಸಂಸ್ಥೆಯು ‘ಆರ್ಟೆಮಿಸ್ II’ ಮಿಷನ್ ಅನ್ನು ಉಡಾವಣೆ ಮಾಡಲು ಸನ್ನದ್ಧವಾಗಿದೆ.

ಆರ್ಟೆಮಿಸ್ II (Artemis II) ಮಿಷನ್ ನ ಬಗ್ಗೆ:

  • ಆರ್ಟೆಮಿಸ್ II ನಾಸಾದ ಆರ್ಟೆಮಿಸ್ ಕಾರ್ಯಕ್ರಮದ ಒಂದು ಭಾಗವಾಗಿದೆ, ಇದು ಹೆಚ್ಚು ಸುಸ್ಥಿರ ಮತ್ತು ಕಾರ್ಯತಂತ್ರದ ರೀತಿಯಲ್ಲಿ ಮಾನವರನ್ನು ಚಂದ್ರನತ್ತ ಮರಳಿಸುವ ಗುರಿಯನ್ನು ಹೊಂದಿದೆ.
  • ಈ ಮಿಷನ್ ಚಂದ್ರನ ಸುತ್ತಲಿನ ಪಯಣಕ್ಕಾಗಿ ನಾಲ್ವರು ಗಗನಯಾತ್ರಿಗಳನ್ನು ಕಳುಹಿಸುತ್ತದೆ.
  • ಆರ್ಟೆಮಿಸ್ II ಮಿಷನ್ ಚಂದ್ರನ ಮೇಲೆ ದೀರ್ಘಾವಧಿಯ ಮಾನವ ಉಪಸ್ಥಿತಿಯನ್ನು ಸ್ಥಾಪಿಸುವ ವಿಶಾಲ ಪ್ರಯತ್ನದ ಒಂದು ಭಾಗವಾಗಿದೆ.
  • ಪ್ರಾಮುಖ್ಯತೆ:- ಈ ಮಿಷನ್ ಚಂದ್ರನನ್ನು ಕೇವಲ ಒಂದು ಗಮ್ಯಸ್ಥಾನವಾಗಿ ನೋಡದೆ, ಆಳವಾದ ಬಾಹ್ಯಾಕಾಶ ಪರಿಶೋಧನೆಗೆ ಒಂದು ವೇದಿಕೆಯಾಗಿ ಪರಿಗಣಿಸುತ್ತದೆ.

ಪಿಎಂ-ಕುಸುಮ್ 2.0 (PM-KUSUM 2.0)

ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಪರಿಷ್ಕೃತ ಪಿಎಂ-ಕುಸುಮ್ 2.0 ಯೋಜನೆಯ ಅಡಿಯಲ್ಲಿ ‘ಬ್ಯಾಟರಿ ಇಂಧನ ಶೇಖರಣಾ ವ್ಯವಸ್ಥೆ’ಯನ್ನು ಅಳವಡಿಸಲು ಸರ್ಕಾರ ಪರಿಗಣಿಸುತ್ತಿದೆ.

ಪಿಎಂ-ಕುಸುಮ್ (PM-KUSUM) ಯೋಜನೆಯ ಬಗ್ಗೆ:

  • PM-KUSUM ವಿಸ್ತೃತ ರೂಪ:- ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್ (Pradhan Mantri Kisan Urja Suraksha evam Utthaan Mahabhiyan).
  • ಪ್ರಾರಂಭ:- 2019
  • ಅನುಷ್ಠಾನ:- ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ.
  • ಉದ್ದೇಶ:- ಸೌರ ಪಂಪ್‌ಗಳು ಮತ್ತು ಜಾಲ (ಗ್ರಿಡ್) ಸಂಪರ್ಕಿತ ಸೌರ ಸ್ಥಾವರಗಳಂತಹ ಸೌರ-ಚಾಲಿತ ನೀರಾವರಿ ವ್ಯವಸ್ಥೆಗಳನ್ನು ಅಳವಡಿಸಲು ರೈತರಿಗೆ ಆರ್ಥಿಕ ಬೆಂಬಲವನ್ನು ಒದಗಿಸುವುದು.
  • ಪ್ರಾಮುಖ್ಯತೆ:- ಕೃಷಿ ವಲಯಕ್ಕೆ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಸೌರಶಕ್ತಿಯನ್ನು ತಲುಪಿಸುವುದು, ನೀರಾವರಿ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಡೀಸೆಲ್ ಬಳಕೆಯಿಂದ ಉಂಟಾಗುವ ಮಾಲಿನ್ಯವನ್ನು ತಗ್ಗಿಸುವುದು.
  • ಗುರಿ: ಈ ಯೋಜನೆಯು ಮಾರ್ಚ್ 2026 ರ ವೇಳೆಗೆ ಸುಮಾರು 34,800 ಮೆಗಾವ್ಯಾಟ್ (MW) ಸೌರ ಸಾಮರ್ಥ್ಯವನ್ನು ಸೇರ್ಪಡೆಗೊಳಿಸುವ ಗುರಿಯನ್ನು ಹೊಂದಿದೆ.

ಪರಮಾಣು ಒಪ್ಪಂದದಿಂದ ಹೊರಬರಲು ಇರಾನ್ ಚಿಂತನೆ

ಅಂತರರಾಷ್ಟ್ರೀಯ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರರ ಪ್ರಕಾರ, ಇರಾನ್‌ನ ಸಂಸತ್ತು ‘ಪರಮಾಣು ಪ್ರಸರಣ-ನಿಷೇಧ ಒಪ್ಪಂದ’ದಿಂದ (Nuclear Non-Proliferation Treaty – NPT) ಹೊರಬರುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ.

ಪರಮಾಣು ನಿಶಸ್ತ್ರೀಕರಣ:

  • ನಿಶ್ಶಸ್ತ್ರೀಕರಣ (Disarmament) ಎಂದರೆ ಏಕಪಕ್ಷೀಯವಾಗಿ ಅಥವಾ ಪರಸ್ಪರ ಒಪ್ಪಂದದ ಮೇರೆಗೆ ಶಸ್ತ್ರಾಸ್ತ್ರಗಳನ್ನು (ವಿಶೇಷವಾಗಿ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು) ಸಂಪೂರ್ಣವಾಗಿ ತೊಡೆದುಹಾಕುವ ಅಥವಾ ರದ್ದುಗೊಳಿಸುವ ಪ್ರಕ್ರಿಯೆಯಾಗಿದೆ.

ಜಗತ್ತಿನ ಪರಮಾಣು ಶಕ್ತಿಗಳು:

  • ಜಗತ್ತಿನಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಒಂಬತ್ತು ದೇಶಗಳನ್ನು ಗುರುತಿಸಲಾಗಿದೆ.
  • ಅವುಗಳೆಂದರೆ: ಅಮೆರಿಕ (ಯುನೈಟೆಡ್ ಸ್ಟೇಟ್ಸ್), ರಷ್ಯಾ, ಚೀನಾ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಮತ್ತು ಇಸ್ರೇಲ್.

ಪರಮಾಣು ನಿಶಸ್ತ್ರೀಕರಣಕ್ಕೆ ಸಂಬಂಧಿಸಿದ ಒಪ್ಪಂದಗಳು:

  • ಪರಮಾಣು ಅಣ್ವಸ್ತ್ರಗಳ ವಿಸ್ತರಣೆ ನಿಷೇಧ ಒಪ್ಪಂದ (NPT): 
    • ಇದು 1968 ರಲ್ಲಿ ಸಹಿ ಮಾಡಲ್ಪಟ್ಟಿತು ಮತ್ತು 1970 ರಲ್ಲಿ ಜಾರಿಗೆ ಬಂದಿತು.
    • ಇದು ಪರಮಾಣು ಶಸ್ತ್ರಾಸ್ತ್ರಗಳ ವಿಸ್ತರಣೆಯನ್ನು ನಿಷೇಧಿಸುವ ಮತ್ತು ನಿಶಸ್ತ್ರೀಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
  • ಪರಮಾಣು ಅಣ್ವಸ್ತ್ರಗಳ ಸಂಪೂರ್ಣ ನಿಷೇಧದ ಒಪ್ಪಂದ (TPNW): 
    • ಇದು 2017 ರಲ್ಲಿ ವಿಶ್ವಸಂಸ್ಥೆಯಿಂದ ಅಂಗೀಕರಿಸಲ್ಪಟ್ಟಿತು ಮತ್ತು 2018 ರಲ್ಲಿ ಸಹಿ ಮಾಡಲು ಮುಕ್ತಗೊಳಿಸಲಾಯಿತು. 
    • ಇದು ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಪರೀಕ್ಷೆ, ಉತ್ಪಾದನೆ, ಸಂಗ್ರಹಣೆ, ನಿಯೋಜನೆ, ವರ್ಗಾವಣೆ, ಬಳಕೆ ಮತ್ತು ಬಳಕೆಯ ಅಪಾಯವನ್ನು ನಿಷೇಧಿಸುವ ಗುರಿಯನ್ನು ಹೊಂದಿದೆ.
  • ಸಮಗ್ರ ಪರಮಾಣು-ಪರೀಕ್ಷಾ-ನಿಷೇಧದ ಒಪ್ಪಂದ (CTBT):
    • ಇದನ್ನು 1996 ರಲ್ಲಿ ಸಹಿ ಮಾಡಲು ಮುಕ್ತಗೊಳಿಸಲಾಯಿತು.
    • ಇದು ನಾಗರಿಕ ಮತ್ತು ಸೇನಾ ಉದ್ದೇಶಗಳಿಗಾಗಿ ನಡೆಯುವ ಎಲ್ಲಾ ಪರಮಾಣು ಸ್ಫೋಟಗಳನ್ನು ನಿಷೇಧಿಸುವ ಗುರಿಯನ್ನು ಹೊಂದಿದೆ.
    • ಈ ಒಪ್ಪಂದಕ್ಕೆ 185 ದೇಶಗಳು ಸಹಿ ಹಾಕಿವೆ ಮತ್ತು 170 ದೇಶಗಳು ಅಂಗೀಕರಿಸಿವೆ, ಆದರೆ ಇದು ಕಾರ್ಯರೂಪಕ್ಕೆ ಬರಲು ಎಲ್ಲಾ ಪರಮಾಣು-ಸಜ್ಜಿತ ರಾಷ್ಟ್ರಗಳು ಇದನ್ನು ಕಡ್ಡಾಯವಾಗಿ ಅಂಗೀಕರಿಸಬೇಕಾಗಿರುವುದರಿಂದ ಇದು ಇನ್ನೂ ಜಾರಿಗೆ ಬಂದಿಲ್ಲ.
  • ಬಾಹ್ಯಾಕಾಶ ಒಪ್ಪಂದ (Outer Space Treaty):
    • ಈ ಬಹುಪಕ್ಷೀಯ ಒಪ್ಪಂದವು 1967 ರಲ್ಲಿ ಜಾರಿಗೆ ಬಂದಿತು ಮತ್ತು ಬಾಹ್ಯಾಕಾಶದಲ್ಲಿ ಸಾಮೂಹಿಕ ವಿನಾಶಕಾರಿ ಅಣ್ವಸ್ತ್ರಗಳ ನಿಯೋಜನೆಯನ್ನು ನಿಷೇಧಿಸುತ್ತದೆ.

ಭಾರತದ ಪರಮಾಣು ಅಣ್ವಸ್ತ್ರಗಳ ಕಾರ್ಯಕ್ರಮ:

  • ಸ್ಮೈಲಿಂಗ್ ಬುದ್ಧ:- 1974 ರಲ್ಲಿ, ಭಾರತವು ತನ್ನ ಮೊದಲ ಪರಮಾಣು ಪರೀಕ್ಷೆಯನ್ನು “ಸ್ಮೈಲಿಂಗ್ ಬುದ್ಧ” ಎಂಬ ಸಂಕೇತನಾಮದಲ್ಲಿ ನಡೆಸಿತು. ಅಂದಿನಿಂದ, ಇದು ಭೂ-ಆಧಾರಿತ, ಸಮುದ್ರ-ಆಧಾರಿತ ಮತ್ತು ವಾಯು-ಆಧಾರಿತ ವಿತರಣಾ ವ್ಯವಸ್ಥೆಗಳನ್ನು ಒಳಗೊಂಡಿರುವ ‘ಪರಮಾಣು ತ್ರಯ’ವನ್ನು (Nuclear triad) ಅಭಿವೃದ್ಧಿಪಡಿಸಿದೆ.
  • ಆಪರೇಷನ್ ಶಕ್ತಿ:- 1998 ರಲ್ಲಿ, ಭಾರತವು ಪೋಖ್ರಾನ್‌ನಲ್ಲಿ ಸರಣಿ ಪರಮಾಣು ಪರೀಕ್ಷೆಗಳನ್ನು ನಡೆಸಿತು, ಇದಕ್ಕೆ “ಆಪರೇಷನ್ ಶಕ್ತಿ” ಎಂದು ಹೆಸರಿಸಲಾಗಿತ್ತು.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts