ದಕ್ಷಿಣ ಆಫ್ರಿಕಾದ ನಾಲ್ಕು ಚಿರತೆಗಳ ಆಗಮನ

ಇತ್ತೀಚೆಗೆ ಸುದ್ದಿಯಲ್ಲಿದೆ:
- ದಕ್ಷಿಣ ಆಫ್ರಿಕಾದ ನಾಲ್ಕು ಚಿರತೆಗಳು – ಎರಡು ಗಂಡು ಮತ್ತು ಎರಡು ಹೆಣ್ಣು – ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿವೆ. ಈ ಆಗಮನದೊಂದಿಗೆ, ಸುಮಾರು 70 ವರ್ಷಗಳ ಸುದೀರ್ಘ ಅಂತರದ ನಂತರ ಕರ್ನಾಟಕಕ್ಕೆ ಚಿರತೆಗಳ ಐತಿಹಾಸಿಕ ಪುನರಾಗಮನವಾಗಿದೆ.
ಈ ಆಗಮನದ ಪ್ರಮುಖ ವಿವರಗಳು:
- ಮೂಲ ಮತ್ತು ವಿನಿಮಯ:- ಔಪಚಾರಿಕ ವಿನಿಮಯ ಕಾರ್ಯಕ್ರಮದ ಭಾಗವಾಗಿ ದಕ್ಷಿಣ ಆಫ್ರಿಕಾದ ‘ಇಂದುನಾ ಪ್ರೈಮೇಟ್ ಮತ್ತು ಪ್ಯಾರಟ್ ಪಾರ್ಕ್’ನಿಂದ ಈ ಪ್ರಾಣಿಗಳನ್ನು ತರಲಾಗಿದೆ.
- ವೈದ್ಯಕೀಯ ನಿಗಾ (ಕ್ವಾರಂಟೈನ್ ):- ಈ ಚಿರತೆಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (BBP) 30-ದಿನಗಳ ಕಾಲ ಪ್ರತ್ಯೇಕವಾಸದಲ್ಲಿರಿಸಿ ವೈದ್ಯಕೀಯ ನಿಗಾ ಒಳಪಡಿಸಲಾಗಿದೆ.
ಈ ವಿದ್ಯಮಾನದ ಬಗ್ಗೆ:
- ದಶಕಗಳ ಅತಿಯಾದ ಬೇಟೆ, ಆವಾಸಸ್ಥಾನಗಳ ವಿಘಟನೆ ಮತ್ತು ಬೇಟೆಯಾಡುವ ಪ್ರಭೇದಗಳ ಕ್ಷೀಣತೆಯ ನಂತರ, ಭಾರತವು 1952 ರಲ್ಲಿ ಚಿರತೆ ಅಳಿದುಹೋಗಿದೆ ಎಂದು ಘೋಷಿಸಿತು.
- ‘ಪ್ರಾಜೆಕ್ಟ್ ಚೀತಾ’, 2022 ರಲ್ಲಿ ಪ್ರಾರಂಭ ಮತ್ತು ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ಚಿರತೆಗಳ ಆಗಮನವು ದೊಡ್ಡ ಮಾಂಸಾಹಾರಿ ಪ್ರಾಣಿಯ ವಿಶ್ವದ ಮೊದಲ ಖಂಡಾಂತರ ಸ್ಥಳಾಂತರ ಕಾರ್ಯಕ್ರಮವನ್ನು ಸೃಷ್ಟಿಸಿತು.
- ಬೋಟ್ಸ್ವಾನಾ (Botswana):- ಇದು ಭೂ-ಆವೃತ ದೇಶವಾಗಿದ್ದು, ಇದರ ಶೇ. 70 ರಷ್ಟು ಭೂಪ್ರದೇಶವು ಕಲಹರಿ ಮರುಭೂಮಿಯಿಂದ ಆವೃತವಾಗಿದೆ ಮತ್ತು ಇದು ವಿಶ್ವದ ಅತಿದೊಡ್ಡ ಕಾಡು ಚಿರತೆಗಳ ಸಂಖ್ಯೆಯನ್ನು ಹೊಂದಿದೆ.
‘ಪ್ರಾಜೆಕ್ಟ್ ಚೀತಾ’ ಬಗ್ಗೆ:
- ‘ಪ್ರಾಜೆಕ್ಟ್ ಚೀತಾ’ ಎಂಬುದು ಸೂಕ್ತವಾದ ತೆರೆದ ಅರಣ್ಯ ಮತ್ತು ಹುಲ್ಲುಗಾವಲು ಪರಿಸರ ವ್ಯವಸ್ಥೆಗಳಲ್ಲಿ ಚಿರತೆಯನ್ನು ಮರುಪರಿಚಯಿಸುವ ಭಾರತದ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ.
- ಪ್ರಾರಂಭಿಸಿದವರು:- ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 (2006 ರಲ್ಲಿ ತಿದ್ದುಪಡಿ) ಅಡಿಯಲ್ಲಿನ ಶಾಸನಬದ್ಧ ಸಂಸ್ಥೆಯಾದ ‘ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ‘ (NTCA).
- ವಿಶಿಷ್ಟತೆ:- ಇದು ದೊಡ್ಡ ಕಾಡು ಮಾಂಸಾಹಾರಿ ಪ್ರಾಣಿಯ ವಿಶ್ವದ ಮೊದಲ ಖಂಡಾಂತರ ಸ್ಥಳಾಂತರವಾಗಿದೆ.
ಇಲ್ಲಿಯವರೆಗಿನ ಸ್ಥಳಾಂತರಗಳು:
- 2022 ರಲ್ಲಿ ನಮೀಬಿಯಾದಿಂದ 8 ಚಿರತೆಗಳು.
- 2023 ರಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳು.
- ಬೋಟ್ಸ್ವಾನಾದಿಂದ 8 ಚಿರತೆಗಳು (2025 ರ ಘೋಷಣೆ).
ಚಿರತೆ (Acinonyx jubatus)ಯ ಬಗ್ಗೆ:
- ಇದು ವಿಶ್ವದ ಅತಿ ವೇಗದ ಸಸ್ತನಿಯಾಗಿದ್ದು, ಭಾರತದಲ್ಲಿ (1952 ರಲ್ಲಿ) ಅಳಿದುಹೋದ ಏಕೈಕ ದೊಡ್ಡ ಮಾಂಸಾಹಾರಿ ಪ್ರಾಣಿಯಾಗಿದೆ.
- ಇತರ ಬೃಹತ್ ದೊಡ್ಡ ಬೆಕ್ಕು ಪ್ರಭೇದಗಳಿಗಿಂತ ಭಿನ್ನವಾಗಿ, ಚಿರತೆಗಳು ಘರ್ಜಿಸುವುದಿಲ್ಲ.
- ಇದರಲ್ಲಿ ಎರಡು ಪ್ರಮುಖ ಪ್ರಭೇದಗಳಿವೆ:-
- ಆಫ್ರಿಕಾದ ಚಿರತೆ (ದುರ್ಬಲ – Vulnerable),
- ಏಷ್ಯಾಟಿಕ್ ಚಿರತೆ (ತೀವ್ರ ಅಳಿವಿನಂಚಿನಲ್ಲಿರುವ – Critically Endangered), ಇದು ಪೂರ್ವ ಇರಾನ್ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬರುತ್ತದೆ.







ನಿಮ್ಮದೊಂದು ಉತ್ತರ