ಮಹಿಳಾ ಸಂಬಂಧಿತ ಅಪರಾಧಗಳ ತಡೆಗೆ ಕರ್ನಾಟಕ ಸರ್ಕಾರದ ಯೋಜನೆಗಳು

ಮಹಿಳಾ ಸಂಬಂಧಿತ ಅಪರಾಧಗಳ ತಡೆಗೆ ಕರ್ನಾಟಕ ಸರ್ಕಾರದ ಯೋಜನೆಗಳು

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಭಾರತದ ಪ್ರಮುಖ ಮಹಾನಗರಗಳ ಪೈಕಿ ಬೆಂಗಳೂರು ನಗರವು ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಎರಡನೇ ಅತ್ಯಧಿಕ ಸ್ಥಾನವನ್ನು ದಾಖಲಿಸಿದೆ.

ಅತ್ಯಂತ ಪ್ರಮುಖ ಅಪರಾಧ ವಿಭಾಗಗಳು:

  • ಪತಿ ಅಥವಾ ಸಂಬಂಧಿಕರಿಂದ ಕ್ರೌರ್ಯ: ಇದು ಅತಿ ದೊಡ್ಡ ವಿಭಾಗವಾಗಿದ್ದು, ಸುಮಾರು 897 ಪ್ರಕರಣಗಳು ದಾಖಲಾಗಿವೆ.
  • ಮಹಿಳೆಯರ ಶೀಲಭಂಗದ ಉದ್ದೇಶದಿಂದ ಹಲ್ಲೆ: 180 ಪ್ರಕರಣಗಳು.
  • ಅತ್ಯಾಚಾರ: 168 ಪ್ರಕರಣಗಳು.
  • ಅಪಹರಣ ಮತ್ತು ಬಲವಂತದ ಸಾಗಾಟ: 109 ಪ್ರಕರಣಗಳು.

ಮಹಿಳಾ ಅಪರಾಧಗಳನ್ನು ತಡೆಗಟ್ಟಲು ಜಾರಿಯಲ್ಲಿರುವ ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು:

  • ಅಕ್ಕ ಪಡೆ: ಇದು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಕಿರುಕುಳ ಮತ್ತು ಚುಡಾಯಿಸುವಿಕೆಯನ್ನು (ಈವ್-ಟೀಸಿಂಗ್) ತಡೆಯಲು ಮಹಿಳಾ ಗೃಹರಕ್ಷಕರನ್ನು ನಿಯೋಜಿಸುವ ವಿಶೇಷ ಪಡೆಯಾಗಿದೆ.
  • ಅಕ್ಕ ಸಹಾಯವಾಣಿ: ಇದು ವಾಟ್ಸಾಪ್ ಸಂಖ್ಯೆ (8277951185) ಯ ಮೂಲಕ ಮಹಿಳೆಯರಿಗೆ ಎದುರಾಗುವ ಸೈಬರ್ ಅಪರಾಧಗಳ ತಡೆ ಹಾಗೂ ಉಚಿತ ಕಾನೂನು ಸಮಾಲೋಚನೆ ಒದಗಿಸುವ ವ್ಯವಸ್ಥೆಯಾಗಿದೆ.
  • ಸಾಂತ್ವನ ಯೋಜನೆ: ಇದು ಕೌಟುಂಬಿಕ ದೌರ್ಜನ್ಯ ಹಾಗೂ ವಿವಿಧ ದೌರ್ಜನ್ಯಗಳಿಗೆ ಒಳಗಾದ ಸಂತ್ರಸ್ತ ಮಹಿಳೆಯರಿಗಾಗಿ ತಾಲೂಕು ಮಟ್ಟದಲ್ಲಿ 24/7 ಕಾರ್ಯನಿರ್ವಹಿಸುವ ಸಹಾಯ ಕೇಂದ್ರಗಳನ್ನು ಒಳಗೊಂಡಿದೆ.
  • ಗೆಳತಿ ಕೇಂದ್ರಗಳು: ಇವು ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ತಕ್ಷಣದ ವೈದ್ಯಕೀಯ ಮತ್ತು ಕಾನೂನು ನೆರವು ನೀಡಲು ಪ್ರಮುಖ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾದ ವಿಶೇಷ ಕೇಂದ್ರಗಳಾಗಿವೆ.
  • ಸ್ಥೈರ್ಯ ನಿಧಿ ಯೋಜನೆ: ಇದು ಗಂಭೀರ ಅಪರಾಧಗಳಿಗೆ ಒಳಗಾದ ಸಂತ್ರಸ್ತ ಮಹಿಳೆಯರಿಗೆ ತುರ್ತು ಆರ್ಥಿಕ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ನಿಧಿಯಾಗಿದೆ.
  • ಸಹಾಯವಾಣಿ 181 : ಇದು ತುರ್ತು ಸಂದರ್ಭಗಳಲ್ಲಿ ತಕ್ಷಣದ ಪೊಲೀಸ್ ಸ್ಪಂದನೆ, ಆಪ್ತಸಮಾಲೋಚನೆ ಮತ್ತು ತುರ್ತು ನೆರವಿಗಾಗಿ ಸ್ಪಂದಿಸುವ 24/7 ಉಚಿತ ದೂರವಾಣಿ ಸಂಖ್ಯೆಯಾಗಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts