ಮಂಗಳ ಗ್ರಹದಲ್ಲಿ ಪ್ರಾಚೀನ ಜೀವಜಾಲದ ಕುರುಹುಗಳ ಪತ್ತೆ : NASA ರೋವರ್

ಮಂಗಳ ಗ್ರಹದಲ್ಲಿ ಪ್ರಾಚೀನ ಜೀವಜಾಲದ ಕುರುಹುಗಳ ಪತ್ತೆ : NASA ರೋವರ್

ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿ:

  • ಸೈನ್ಸ್ ಅಡ್ವಾನ್ಸಸ್ (Science Advances) ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದರಲ್ಲಿ, ಅಂತರರಾಷ್ಟ್ರೀಯ ಸಂಶೋಧಕರ ತಂಡವು ಮಂಗಳ ಗ್ರಹದಲ್ಲಿ ಸಾವಯವ ವಸ್ತುಗಳನ್ನು ಪತ್ತೆಹಚ್ಚಿರುವುದಾಗಿ ವರದಿ ಮಾಡಿದೆ.

ಮಂಗಳ ಗ್ರಹದ ಬಗ್ಗೆ: 

  • ಇದು ಸೌರವ್ಯೂಹದಲ್ಲಿ ಸೂರ್ಯನಿಂದ ಇರುವ ನಾಲ್ಕನೇ ಗ್ರಹವಾಗಿದೆ.
  • ಇದು ಸೌರವ್ಯೂಹದ ಎರಡನೇ ಅತಿ ಸಣ್ಣ ಗ್ರಹವಾಗಿದೆ.
  • ಮಂಗಳ ಗ್ರಹವು ಗಾತ್ರದಲ್ಲಿ ಭೂಮಿಯ ಅರ್ಧದಷ್ಟಿದೆ.
  • ಭ್ರಮಣಾವಧಿ (Rotation period) – ಇದರ ಭ್ರಮಣಾವಧಿಯು 24.6 ಗಂಟೆಗಳಾಗಿದ್ದು, ಇದು ಭೂಮಿಯ ಭ್ರಮಣಾವಧಿಗೆ (23.9 ಗಂಟೆಗಳು) ಬಹುತೇಕ ಸಮಾನವಾಗಿದೆ.
  • ಕೆಂಪು ಗ್ರಹ – ಮಂಗಳ ಗ್ರಹವು ಕೆಂಪಾಗಿ ಕಾಣಲು ಮುಖ್ಯ ಕಾರಣವೆಂದರೆ ಅಲ್ಲಿನ ಶಿಲೆಗಳಲ್ಲಿರುವ ಕಬ್ಬಿಣದ ಉತ್ಕರ್ಷಣ (Oxidation) ಅಥವಾ ತುಕ್ಕು ಹಿಡಿಯುವಿಕೆ ಮತ್ತು ಮಂಗಳ ಗ್ರಹದ ಧೂಳು ಆಗಿದ್ದು, ಈ ಕಾರಣದಿಂದಾಗಿ ಇದನ್ನು ‘ಕೆಂಪು ಗ್ರಹ’ ಎಂದು ಕರೆಯಲಾಗುತ್ತದೆ.
  • ಮಂಗಳ ಗ್ರಹದ ನೈಸರ್ಗಿಕ ಉಪಗ್ರಹಗಳು (Moons of Mars)ಫೋಬೋಸ್ ಮತ್ತು ಡೀಮೋಸ್ ಮಂಗಳ ಗ್ರಹದ ಎರಡು ನೈಸರ್ಗಿಕ ಉಪಗ್ರಹಗಳಾಗಿವೆ.

ಮಾರ್ಸ್ ಆರ್ಬಿಟರ್ ಮಿಷನ್ (MOM) ಅಥವಾ ಮಂಗಳಯಾನ

  • ಉಡಾವಣಾ ಸ್ಥಳ – ಆಂಧ್ರಪ್ರದೇಶದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ.
  • ಉಡಾವಣೆ ಮಾಡಿದ ಸಂಸ್ಥೆ – ಇದನ್ನು ನವೆಂಬರ್ 2013 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಉಡಾವಣೆ ಮಾಡಿದೆ.
  • ಉಡಾವಣಾ ವಾಹನ – ಉಡಾವಣೆಗಾಗಿ PSLV C-25 ರಾಕೆಟ್ ಅನ್ನು ಬಳಸಲಾಗಿದೆ.
  • ಉದ್ದೇಶ – ಮಂಗಳ ಗ್ರಹದ ಮೇಲ್ಮೈ ಲಕ್ಷಣಗಳು ಮತ್ತು ಖನಿಜಗಳ ಸಂಯೋಜನೆಯನ್ನು ಅಧ್ಯಯನ ಮಾಡುವುದು ಹಾಗೂ ಮಂಗಳ ಗ್ರಹದಲ್ಲಿ ಜೀವಜಾಲದ ಅಸ್ತಿತ್ವವನ್ನು ಸೂಚಿಸುವ ಮೀಥೇನ್ ಅನಿಲಕ್ಕಾಗಿ ಅದರ ವಾತಾವರಣವನ್ನು ವಿಶ್ಲೇಷಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಪ್ರಮುಖ ಮಂಗಳ ಮಿಷನ್ ಗಳು:

  • ನಾಸಾದ (NASA) ಮ್ಯಾರಿನರ್ 4 ಮತ್ತು ವೈಕಿಂಗ್ 1 ಕಾರ್ಯಾಚರಣೆಗಳು ಪ್ರಮುಖ ಮಂಗಳ ಯಾನಗಳಾಗಿವೆ.
  • ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಮಾರ್ಸ್ ಎಕ್ಸ್‌ಪ್ರೆಸ್ ಕಾರ್ಯಾಚರಣೆಯು ಸಹ ಮಂಗಳ ಗ್ರಹದ ಪ್ರಮುಖ ಯಾನವಾಗಿದೆ.
  • ಎಮಿರೇಟ್ಸ್ ಮಾರ್ಸ್ ಮಿಷನ್‌ನ ಹೋಪ್ ಪ್ರೋಬ್ ಮತ್ತು ಭವಿಷ್ಯದ ಮಾರ್ಸ್ ಸ್ಯಾಂಪಲ್ ರಿಟರ್ನ್ ಮಿಷನ್‌ಗಾಗಿ ಮಾದರಿಗಳನ್ನು ಸಂಗ್ರಹಿಸುತ್ತಿರುವ ಪ್ರಸ್ತುತ ಪ್ರಮುಖ ರೋವರ್ ಆಗಿರುವ ಪರ್ಸಿವೆರೆನ್ಸ್ ಅತ್ಯಂತ ಪ್ರಮುಖ ಕಾರ್ಯಾಚರಣೆಗಳಾಗಿವೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts