ಯಾಣದ ಗುಹೆಗಳು – ಭೂ-ಪರಂಪರೆಯ ತಾಣ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಯಾಣದ ಗುಹೆಗಳನ್ನು, 2026 ರ ಏಪ್ರಿಲ್ನಲ್ಲಿ ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆಯು (Geological Survey of India – GSI) ಅಧಿಕೃತವಾಗಿ ‘ರಾಷ್ಟ್ರೀಯ ಪ್ರಾಮುಖ್ಯತೆಯ ಭೂ-ಪರಂಪರೆಯ ತಾಣ’ (Geo-Heritage Site of National Importance) ಎಂದು ಘೋಷಿಸಿದೆ.
ಯಾಣದ ಗುಹೆಗಳ (Yana Caves) ಕುರಿತು:
- ಸ್ಥಳ:- ಸಹ್ಯಾದ್ರಿ ಪರ್ವತ ಶ್ರೇಣಿಯ ಕುಮಟಾ ಅರಣ್ಯ ವಲಯದೊಳಗೆ, ಗೋಕರ್ಣದ ಸಮೀಪ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿದೆ.
- ಸಂಯೋಜನೆ:- ಕಾರ್ಸ್ಟ್ ಪ್ರಕ್ರಿಯೆಯಿಂದ (ನೀರಿನಿಂದ ಬಂಡೆಯ ಕರಗುವಿಕೆ) ರೂಪುಗೊಂಡ ಘನ, ಕಪ್ಪು ಡಾಲೊಮೈಟ್-ಯುಕ್ತ ಸುಣ್ಣಕಲ್ಲಿನಿಂದ ಕೂಡಿದೆ.
- ಭೂ-ಪರಂಪರೆ ತಾಣದ ಸ್ಥಾನಮಾನ:- ಸುತ್ತಮುತ್ತಲಿನ 3 ಕಿ.ಮೀ ವ್ಯಾಪ್ತಿಯಲ್ಲಿ 61 ವಿಭಿನ್ನ ಕಾರ್ಸ್ಟ್ ರಚನೆಗಳನ್ನು ಹೊಂದಿದ್ದು, ಅವುಗಳ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಮೌಲ್ಯಕ್ಕಾಗಿ ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆಯಿಂದ (GSI) ಮನ್ನಣೆ ಪಡೆದಿದೆ.
- ಭೂವೈಜ್ಞಾನಿಕ ಕಾಲ:- ಈ ಶಿಲಾ ರಚನೆಗಳು ಸುಮಾರು 2,700 ದಶಲಕ್ಷ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ.
ಯಾಣದ ಪೌರಾಣಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆ:
- ಭಸ್ಮಾಸುರನ ದಂತಕಥೆ:- ವಿಷ್ಣುವು (ಮೋಹಿನಿ ರೂಪದಲ್ಲಿ) ಭಸ್ಮಾಸುರನನ್ನು ತನ್ನನ್ನು ತಾನೇ ಸುಟ್ಟುಕೊಳ್ಳುವಂತೆ ಮಾಡಿದ ಪ್ರಸಂಗದ ಬೆಂಕಿಯಿಂದ ಬಂಡೆಗಳು ಕಪ್ಪಾಗಿವೆ ಎಂದು ಸ್ಥಳೀಯ ಐತಿಹ್ಯಗಳು ಉಲ್ಲೇಖಿಸುತ್ತವೆ.
- ದೇವಾಲಯದ ತಾಣ:- ಬೃಹತ್ ಶಿಖರದ ತಳಭಾಗದಲ್ಲಿ ಶಿವನಿಗೆ (ಭೈರವೇಶ್ವರ) ಅರ್ಪಿತವಾದ ಗುಹಾಂತರ ದೇವಾಲಯವಿದ್ದು, ಇದು ಅನೇಕ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ.
- ಗಂಗೋದ್ಭವ:- ಪವಿತ್ರವೆಂದು ನಂಬಲಾದ ‘ಚಂಡಿಹೊಳೆ’ ಎಂಬ ಸಣ್ಣ ಜಲಮೂಲವು ಗುಹೆಗಳ ಮೇಲ್ಛಾವಣಿಯಿಂದ ಉಗಮಿಸಿ ಅಘನಾಶಿನಿ ನದಿಯನ್ನು ಸೇರುತ್ತದೆ.
ಪ್ರಾಮುಖ್ಯತೆ:
- ಪರಿಸರ ಮತ್ತು ಜೀವವೈವಿಧ್ಯ:- ಈ ತಾಣವು ಜೀವವೈವಿಧ್ಯ-ಸಮೃದ್ಧವಾದ ಪಶ್ಚಿಮ ಘಟ್ಟಗಳಲ್ಲಿ (ಯುನೆಸ್ಕೋ ವಿಶ್ವ ಪರಂಪರೆಯ ತಾಣ) ನೆಲೆಗೊಂಡಿದೆ.
- ಭೌಗೋಳಿಕತೆ:- ಉಷ್ಣವಲಯದ ಪ್ರದೇಶದಲ್ಲಿ ‘ಕಾರ್ಸ್ಟ್ ಭೂಸ್ವರೂಪದ‘ (ಬಿರುಕುಗಳು, ಗುಹೆಗಳು, ಕುಸಿತದ ಕುಳಿಗಳು) ಅತ್ಯುತ್ತಮ ಉದಾಹರಣೆಯಾಗಿದೆ.
- ಸಂಸ್ಕೃತಿ:- ಭೂವಿಜ್ಞಾನ ಮತ್ತು ಪೌರಾಣಿಕತೆಯ ಸಮ್ಮಿಲನವನ್ನು ಇದು ಪ್ರತಿನಿಧಿಸುತ್ತದೆ.







ನಿಮ್ಮದೊಂದು ಉತ್ತರ