ಕೇಂದ್ರ ಜಾಗೃತ ಆಯೋಗ
ಸಾಮಾನ್ಯ ಅಧ್ಯಯನ-2/ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಭಾರತದ ರಾಷ್ಟ್ರಪತಿಗಳು, ‘ಪ್ರವೀಣ್ ವಶಿಷ್ಟ’ ಅವರನ್ನು ಕೇಂದ್ರ ಜಾಗೃತ ಆಯೋಗದಲ್ಲಿ ‘ಜಾಗೃತ ಆಯುಕ್ತರನ್ನಾಗಿ’ ನೇಮಕ ಮಾಡಿದ್ದಾರೆ.
ಕೇಂದ್ರ ಜಾಗೃತ ಆಯೋಗ (CVC)ದ ಬಗ್ಗೆ:
- ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆ, 1946 ರ ಅಡಿಯಲ್ಲಿ 1964 ರಲ್ಲಿ ಸ್ಥಾಪಿಸಲಾಯಿತು.
- ಸಂತಾನಂ ಸಮಿತಿಯ ಶಿಫಾರಸು:- ಭ್ರಷ್ಟಾಚಾರ ತಡೆಗಟ್ಟುವಿಕೆ ಕುರಿತ ಈ ಸಮಿತಿಯ ಶಿಫಾರಸುಗಳ ಮೇರೆಗೆ ಸ್ಥಾಪಿಸಲಾಯಿತು.
- ಕೇಂದ್ರ ಜಾಗೃತ ಆಯೋಗ ಕಾಯ್ದೆ (CVC), 2003 ರ ಅಡಿಯಲ್ಲಿ ಶಾಸನಬದ್ಧ ಸಂಸ್ಥೆಯಾಯಿತು:- ಇದು ಸಾರ್ವಜನಿಕ ಆಡಳಿತದಲ್ಲಿ ಸಮಗ್ರತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ಹೊತ್ತಿರುವ ಭಾರತದ ಅತ್ಯುನ್ನತ ಶಾಸನಬದ್ಧ ಸಂಸ್ಥೆಯಾಗಿದೆ.
ಕೇಂದ್ರ ಜಾಗೃತ ಆಯೋಗ ಕಾಯ್ದೆ, 2003 ರ ಅನ್ವಯ,
ಕೇಂದ್ರ ಜಾಗೃತ ಆಯೋಗದ ಸಂರಚನೆ:-
- ಒಬ್ಬರು ಕೇಂದ್ರ ಜಾಗೃತ ಆಯುಕ್ತರು ಮತ್ತು
- ಇಬ್ಬರು ಜಾಗೃತ ಆಯುಕ್ತರ ನೇಮಕಕ್ಕೆ ಅವಕಾಶವಿದೆ.
ನೇಮಕಾತಿ:- ಭಾರತದ ರಾಷ್ಟ್ರಪತಿಗಳು ಕೇಂದ್ರ ಜಾಗೃತ ಆಯುಕ್ತರು ಮತ್ತು ಜಾಗೃತ ಆಯುಕ್ತರನ್ನು ನೇಮಕ ಮಾಡುತ್ತಾರೆ.
ಉನ್ನತಾಧಿಕಾರ ಸಮಿತಿಯ ಶಿಫಾರಸುಗಳ ಮೇರೆಗೆ ನೇಮಕಾತಿ:-
- ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿದೆ
ಅಧಿಕಾರಾವಧಿ:- ಜಾಗೃತ ಆಯುಕ್ತರ 4 ವರ್ಷಗಳು ಅಥವಾ ಅಧಿಕಾರದಲ್ಲಿರುವವರು 65 ವರ್ಷ ವಯಸ್ಸನ್ನು ತಲುಪುವವರೆಗೆ (ಯಾವುದು ಮೊದಲೋ ಅದು) ಅಧಿಕಾರದಲ್ಲಿ ಇರುತ್ತಾರೆ.
ಕೇಂದ್ರ ಜಾಗೃತ ಆಯೋಗದ ಅಧಿಕಾರ ಮತ್ತು ಕಾರ್ಯಗಳು:
-
- ಭ್ರಷ್ಟಾಚಾರವನ್ನು ನಿಯಂತ್ರಿಸುತ್ತದೆ:- CVC ಕಾಯ್ದೆ, 2003 ರ ಅನ್ವಯ, ಭ್ರಷ್ಟಾಚಾರವನ್ನು ಎದುರಿಸಲು ಮತ್ತು ಸಾರ್ವಜನಿಕ ಆಡಳಿತದಲ್ಲಿ ಸಮಗ್ರತೆ, ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಅಧಿಕಾರ ಮತ್ತು ಜವಾಬ್ದಾರಿಯನ್ನು ಕೇಂದ್ರ ಜಾಗೃತ ಆಯೋಗವು (CVC) ಹೊಂದಿದೆ.
- ಜಾಗೃತ ಆಡಳಿತ ವ್ಯವಸ್ಥೆಯ ಮೇಲೆ ಮೇಲ್ವಿಚಾರಣೆ:- ಈ ಆಯೋಗವು ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳ ಜಾಗೃತ ಆಡಳಿತ ವ್ಯವಸ್ಥೆಯ ಮೇಲೆ ಮೇಲ್ವಿಚಾರಣೆಯನ್ನು ನಡೆಸುತ್ತದೆ.
- ಅತ್ಯುನ್ನತ ಜಾಗೃತ ಸಂಸ್ಥೆ:- ಇದು ಲೋಕಪಾಲ್ ಶಿಫಾರಸು ಮಾಡಿದ ಪ್ರಕರಣಗಳು ಮತ್ತು PIDPI ಚೌಕಟ್ಟಿನ ಅಡಿಯಲ್ಲಿ ಬರುವ ಮಾಹಿತಿದಾರರ ದೂರುಗಳನ್ನು ಒಳಗೊಂಡಂತೆ, ಭ್ರಷ್ಟಾಚಾರ-ವಿರೋಧಿ ವಿಚಾರಣೆಗಳ ಮೇಲೆ ಮೇಲ್ವಿಚಾರಣೆ ಮಾಡುವುದು ಹಾಗೂ ಮಾರ್ಗದರ್ಶನ ನೀಡುತ್ತದೆ.
- ಕೇಂದ್ರೀಯ ತನಿಖಾ ದಳದ (CBI) ಕಾರ್ಯನಿರ್ವಹಣೆಯ ಮೇಲ್ವಿಚಾರಣೆ:- ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ, ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ಇದು ಮೇಲ್ವಿಚಾರಣೆ ಮಾಡುತ್ತದೆ.
- ಉನ್ನತ ಅಧಿಕಾರಿಗಳ ನೇಮಕಾತಿಯನ್ನು ಶಿಫಾರಸು ಮಾಡುವ ಸಮಿತಿಗಳ ಅಧ್ಯಕ್ಷತೆ:- ಜಾರಿ ನಿರ್ದೇಶನಾಲಯ (ED) ಮತ್ತು ಸಿಬಿಐನಲ್ಲಿ (ಸಿಬಿಐ ನಿರ್ದೇಶಕರನ್ನು ಹೊರತುಪಡಿಸಿ, ಎಸ್‌ಪಿ ಮಟ್ಟ ಮತ್ತು ಅದಕ್ಕಿಂತ ಮೇಲಿನ ಹಂತದ) ಉನ್ನತ ಅಧಿಕಾರಿಗಳ ನೇಮಕಾತಿಯಲ್ಲಿ ಇದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.
ಕಾಜೀರಂಗದಲ್ಲಿ ಎತ್ತರದ ವನ್ಯಜೀವಿ ಸಂಚಾರ ಮಾರ್ಗ
ಸಾಮಾನ್ಯ ಅಧ್ಯಯನ-3/ಪರಿಸರ
ಇದೀಗ ಸುದ್ದಿಯಲ್ಲಿದೆ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಸ್ಸಾಂನ ಕಾಜೀರಂಗದಲ್ಲಿ 34.5 ಕಿಲೋಮೀಟರ್ ಉದ್ದದ ಎತ್ತರದ ವನ್ಯಜೀವಿ ಸಂಚಾರ ಮಾರ್ಗವನ್ನು ಉದ್ಘಾಟಿಸಲು ಸಜ್ಜಾಗಿದ್ದಾರೆ.
ಕಾಜೀರಂಗದ ಎತ್ತರದ ವನ್ಯಜೀವಿ ಸಂಚಾರ ಮಾರ್ಗದ ಬಗ್ಗೆ:
- ಉದ್ದೇಶ:- ವಿಶೇಷವಾಗಿ ವಾರ್ಷಿಕ ಪ್ರವಾಹದ ಸಮಯದಲ್ಲಿ, ಪ್ರಾಣಿಗಳ ಸುರಕ್ಷಿತ ಚಲನವಲನಕ್ಕೆ ಅನುವು ಮಾಡಿಕೊಡುವುದು.
- ಸಂಪರ್ಕ ಸುಧಾರಣೆ:- ಇದು ಗುವಾಹಟಿ, ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ನುಮಾಲಿಘರ್‌ಗಳ ನಡುವಿನ ಸಂಪರ್ಕವನ್ನು ಸಹ ಸುಧಾರಿಸುತ್ತದೆ.
‘ಕಾಜಿರಂಗ ರಾಷ್ಟ್ರೀಯ ಉದ್ಯಾನವನ’ದ ಬಗ್ಗೆ:
- ಇದು ಬ್ರಹ್ಮಪುತ್ರ ಕಣಿವೆಯ ಪ್ರವಾಹದ ಬಯಲು ಸೀಮೆಯ ಹುಲ್ಲುಗಾವಲುಗಳನ್ನು ಪ್ರತಿನಿಧಿಸುವ, ಅತ್ಯಂತ ದೊಡ್ಡ ಹಾಗೂ ಅಖಂಡವಾದ ಪ್ರದೇಶವಾಗಿದೆ.
- ‘ಜೈವಿಕ ಅನುಕ್ರಮಣಿಕೆ’ಯ ವಿವಿಧ ಹಂತ:- ಇಲ್ಲಿನ ಹುಲ್ಲುಗಾವಲುಗಳ ಪರಿಸರ ವ್ಯವಸ್ಥೆಯಲ್ಲಿ, ಸ್ಪಷ್ಟವಾಗಿ ಕಾಣಬಹುದು.
- ಒಂದು ಕೊಂಬಿನ ಖಡ್ಗಮೃಗಗಳಿಗೆ ಹೆಸರುವಾಸಿ:- ವಿಶ್ವದ 70% ಕ್ಕಿಂತ ಹೆಚ್ಚು ‘ಒಂದು ಕೊಂಬಿನ ಖಡ್ಗಮೃಗ’ಗಳಿಗೆ ಈ ಉದ್ಯಾನವನವು ಆವಾಸಸ್ಥಾನವಾಗಿದೆ.
- ಇದನ್ನು 1950 ರಲ್ಲಿ ‘ವನ್ಯಜೀವಿ ಅಭಯಾರಣ್ಯ’ವನ್ನಾಗಿ ಘೋಷಿಸಲಾಯಿತು.
- 1974 ರಲ್ಲಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನ:- ‘ವನ್ಯಜೀವಿ (ರಕ್ಷಣೆ) ಕಾಯ್ದೆ, 1972’ ರ ಅಡಿಯಲ್ಲಿ ಅಧಿಸೂಚಿಸಲಾಯಿತು.
- ವಿಶ್ವ ಪರಂಪರೆಯ ತಾಣ:- ಇದನ್ನು 1985 ರಲ್ಲಿ ಘೋಷಿಸಲಾಯಿತು.
- ಪ್ರಮುಖ ಪಕ್ಷಿ ಪ್ರದೇಶ:- ಬರ್ಡ್‌ಲೈಫ್ ಇಂಟರ್‌ನ್ಯಾಶನಲ್ ಸಂಸ್ಥೆಯು ಇದನ್ನು ‘ಪ್ರಮುಖ ಪಕ್ಷಿ ಪ್ರದೇಶ’ ಎಂದು ಗುರುತಿಸಿದೆ.