ಲೇಖಕ: instakas

  • ಭಾರತ-ಸ್ವೀಡನ್ ಕಾರ್ಯತಂತ್ರದ ಪಾಲುದಾರಿಕೆ | ಸಿಂಧೂ ನದಿ ಜಲ ಒಪ್ಪಂದ (Indus Water Treaty) | ಭಾರತ-ನೆದರ್ಲ್ಯಾಂಡ್ಸ್ ಕಾರ್ಯತಂತ್ರದ ಪಾಲುದಾರಿಕೆ | ಭೋಜಶಾಲಾ | ಭಾರತದಲ್ಲಿ ಬೆಲ್ಲದ ಉದ್ಯಮ ವಲಯ | ಸಾರಂಡಾ ಅರಣ್ಯ (Saranda Forest)

    ಭಾರತ-ಸ್ವೀಡನ್ ಕಾರ್ಯತಂತ್ರದ ಪಾಲುದಾರಿಕೆ

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಪ್ರಧಾನಿ ಮೋದಿಯವರು ಸ್ವೀಡನ್ ಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ, ಭಾರತ ಮತ್ತು ಸ್ವೀಡನ್ ತಮ್ಮ ದ್ವಿಪಕ್ಷೀಯ ಸಂಬಂಧವನ್ನು ‘ಕಾರ್ಯತಂತ್ರದ ಪಾಲುದಾರಿಕೆ’ ಮಟ್ಟಕ್ಕೆ ಉನ್ನತೀಕರಿಸಿವೆ.

    ಭೇಟಿಯ ಪ್ರಮುಖ ಅಂಶಗಳು:

    • ಪ್ರಧಾನಿ ಮೋದಿಯವರಿಗೆ ಸ್ವೀಡನ್‌ನ ‘ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್’ ಮತ್ತು ‘ಕಮಾಂಡರ್ ಗ್ರಾಂಡ್ ಕ್ರಾಸ್’ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಇದು ಅಲ್ಲಿನ ಸರ್ಕಾರದ ಮುಖ್ಯಸ್ಥರಿಗೆ ನೀಡಲಾಗುವ ಅತ್ಯುನ್ನತ ಮನ್ನಣೆ ಮತ್ತು ಗೌರವವಾಗಿದೆ.

    ಭಾರತ-ಸ್ವೀಡನ್ ಸಂಬಂಧಗಳು:

    • ರಾಜತಾಂತ್ರಿಕ ಸಂಬಂಧಗಳು: ಭಾರತ ಮತ್ತು ಸ್ವೀಡನ್ 1948 ರಲ್ಲಿ ಅಧಿಕೃತವಾಗಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದವು.
    • 2018 ರಲ್ಲಿ ಸ್ವೀಡನ್ ಮೊದಲ ‘ಇಂಡಿಯಾ-ನಾರ್ಡಿಕ್ ಶೃಂಗಸಭೆ’ಯನ್ನು ಆಯೋಜಿಸಿತು. ಇದು ನಾರ್ಡಿಕ್ ಪ್ರದೇಶದೊಂದಿಗೆ ಭಾರತದ ಸಕ್ರಿಯ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಿತು.
    • 2019 ರ ವಿಶ್ವಸಂಸ್ಥೆಯ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ (UN Climate Action Summit) ಭಾರತ ಮತ್ತು ಸ್ವೀಡನ್ ಜಂಟಿಯಾಗಿ ‘ಲೀಡರ್‌ಶಿಪ್ ಗ್ರೂಪ್ ಫಾರ್ ಇಂಡಸ್ಟ್ರಿ ಟ್ರಾನ್ಸಿಶನ್’ (LeadIT) ಉಪಕ್ರಮವನ್ನು ಪ್ರಾರಂಭಿಸಿದವು. 
    • ಈ LeadIT ಉಪಕ್ರಮವು ಪ್ರಮುಖವಾಗಿ ಕಡಿಮೆ-ಇಂಗಾಲದ ಕೈಗಾರಿಕಾ ಪರಿವರ್ತನೆ (Low-carbon industrial transition) ಮತ್ತು ಸುಸ್ಥಿರ ಉತ್ಪಾದನಾ ವಿಧಾನಗಳನ್ನು ಉತ್ತೇಜಿಸುತ್ತದೆ.

    ಸಿಂಧೂ ನದಿ ಜಲ ಒಪ್ಪಂದ (Indus Water Treaty)

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಜಮ್ಮು ಮತ್ತು ಕಾಶ್ಮೀರದಲ್ಲಿನ ಭಾರತದ ‘ಕಿಶನ್‌ಗಂಗಾ’ ಮತ್ತು ‘ರಾಟ್ಲೆ’ ಜಲವಿದ್ಯುತ್ ಯೋಜನೆಗಳ ತಾಂತ್ರಿಕ ವಿನ್ಯಾಸದ ವಿವಾದವನ್ನು ಇತ್ಯರ್ಥಪಡಿಸಲು ಪಾಕಿಸ್ತಾನದ ಕೋರಿಕೆಯ ಮೇರೆಗೆ 2023 ರಲ್ಲಿ ಸ್ಥಾಪಿಸಲಾದ ಐದು ಸದಸ್ಯರ ಮಧ್ಯಸ್ಥಿಕೆ ನ್ಯಾಯಾಲಯದ (Court of Arbitration – CoA) ಇತ್ತೀಚಿನ ತೀರ್ಪನ್ನು ಭಾರತ ದೃಢವಾಗಿ ತಿರಸ್ಕರಿಸಿದೆ.

    ಸಿಂಧೂ ನದಿ ಜಲ ಒಪ್ಪಂದದ ಬಗ್ಗೆ:

    • ಹಿನ್ನೆಲೆ: 1947 ರ ದೇಶ ವಿಭಜನೆಯು ಸಿಂಧೂ ನದಿ ವ್ಯವಸ್ಥೆಯನ್ನು ಭಾರತ ಮತ್ತು ಪಾಕಿಸ್ತಾನದ ನಡುವೆ ಎರಡಾಗಿ ವಿಭಜಿಸಿತು.
    • ಮಧ್ಯಸ್ಥಿಕೆ ವಹಿಸಿದವರು: ವಿಶ್ವಬ್ಯಾಂಕ್.
    • ಸಹಿ ಹಾಕಿದ್ದು: 1960 ರಲ್ಲಿ ಅಂದಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಂದಿನ ಅಧ್ಯಕ್ಷ ಅಯೂಬ್ ಖಾನ್ ಈ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದರು.
    • ಗಡಿಯಾಚೆಗಿನ ನದಿ (Transboundary river): ಸಿಂಧೂ ನದಿಯು ಪಾಕಿಸ್ತಾನ (47%), ಭಾರತ (39%), ಟಿಬೆಟ್ (8%) ಮತ್ತು ಅಫ್ಘಾನಿಸ್ತಾನ (6%) ಮೂಲಕ ಹರಿಯುವ ಒಂದು ಪ್ರಮುಖ ಗಡಿಯಾಚೆಗಿನ ನದಿಯಾಗಿದೆ. 
    • ಇದು ಪಾಕಿಸ್ತಾನದ ಅತಿ ಉದ್ದವಾದ ನದಿಯಾಗಿದೆ.
    • ಸಿಂಧೂ ಜಲಾನಯನ ಪ್ರದೇಶದ ಗಡಿಗಳು:
      • ಪೂರ್ವದಲ್ಲಿ: ಹಿಮಾಲಯ ಪರ್ವತಗಳು.
      • ಉತ್ತರದಲ್ಲಿ: ಕಾರಕೋರಂ ಮತ್ತು ಹರಾಮೋಶ್ ಶ್ರೇಣಿಗಳು.
      • ಪಶ್ಚಿಮದಲ್ಲಿ: ಸುಲೈಮಾನ್ ಮತ್ತು ಕಿರ್ಥಾರ್ ಪರ್ವತ ಶ್ರೇಣಿಗಳು.
      • ದಕ್ಷಿಣದಲ್ಲಿ: ಅರಬ್ಬಿ ಸಮುದ್ರ.
    • ಗಮನಿಸಿ: ಭಾರತದಲ್ಲಿ, ಸಿಂಧೂ ಜಲಾನಯನ ಪ್ರದೇಶವು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ, ಹರಿಯಾಣ ಮತ್ತು ಚಂಡೀಗಢ ರಾಜ್ಯಗಳಲ್ಲಿ ಹರಡಿಕೊಂಡಿದೆ.

     

    ಸಿಂಧೂ ನದಿಯ ಪ್ರಮುಖ ಉಪನದಿಗಳು:

    ನದಿ 

    ಉಗಮ ಸ್ಥಳ

    ಸೇರುವ ಸ್ಥಳ

    ಝೀಲಂ

    ಕಾಶ್ಮೀರ ಕಣಿವೆಯ ವೆರಿನಾಗ್ ಬಳಿಯ ಚಿಲುಮೆ.

    ಪಾಕಿಸ್ತಾನದ ಟ್ರಿಮ್ಮು ಬಳಿ ಚೀನಾಬ್ ನದಿಯನ್ನು ಸೇರುತ್ತದೆ.

    ಚೀನಾಬ್

    ಬಾರಾಲಾಚಾ ಕಣಿವೆ ಮಾರ್ಗದ ಬಳಿಯ ಚಂದ್ರ ಮತ್ತು ಭಾಗಾ ತೊರೆಗಳು

    ಝೀಲಂ ಮತ್ತು ರಾವಿ ನದಿಗಳು ಬಂದು ಸೇರಿದ ನಂತರ ಇದು ಸಟ್ಲೆಜ್ ನದಿಯನ್ನು ಸೇರುತ್ತದೆ.

    ರಾವಿ

    ರೋಹ್ತಾಂಗ್ ಕಣಿವೆ ಮಾರ್ಗದ ಬಳಿಯ ಕುಲು ಬೆಟ್ಟಗಳು

    ಪಾಕಿಸ್ತಾನದ ರಂಗಪುರ ಬಳಿ ಚೀನಾಬ್ ನದಿಯನ್ನು ಸೇರುತ್ತದೆ.

    ಬಿಯಾಸ್

    ರೋಹ್ತಾಂಗ್ ಕಣಿವೆ ಮಾರ್ಗದ ಬಳಿಯ ಬಿಯಾಸ್ ಕುಂಡ 

    ಭಾರತದ ಹರಿಕೆ ಅಣೆಕಟ್ಟಿನ ಬಳಿ ಸಟ್ಲೆಜ್ ನದಿಯನ್ನು ಸೇರುತ್ತದೆ.

    ಸಟ್ಲೆಜ್

    ಟಿಬೆಟ್‌ನ ಮಾನಸ ಸರೋವರ-ರಾಕ್ಷಸತಲ್ ಸರೋವರಗಳು

    ಪಾಕಿಸ್ತಾನದ ಮಿಥಾನಕೋಟ್‌ನಿಂದ ಸ್ವಲ್ಪ ದೂರದ ಮೇಲ್ಭಾಗದಲ್ಲಿ ಸಿಂಧೂ ನದಿಯನ್ನು ಸೇರುತ್ತದೆ.

     

    ಸಿಂಧೂ ನದಿ ಜಲ ಒಪ್ಪಂದದ ನಿಬಂಧನೆಗಳು:

    • ಇದು ಮೂರು ಪಶ್ಚಿಮದ ನದಿಗಳನ್ನು, ಅಂದರೆ ಸಿಂಧೂ, ಚೀನಾಬ್ ಮತ್ತು ಝೀಲಂ ನದಿಗಳ ನಿರ್ಬಂಧ ರಹಿತ ಬಳಕೆಗೆ ಪಾಕಿಸ್ತಾನಕ್ಕೆ ಹಂಚಿಕೆ ಮಾಡಿದೆ, ಆದರೆ ಭಾರತಕ್ಕೆ ಕೃಷಿ ಮತ್ತು ಗೃಹಬಳಕೆಯನ್ನು ಹೊರತುಪಡಿಸಿ, ಇತರೆ ಬಳಕೆಗೆ ಈ ನದಿಗಳ ಬಳಕೆಯನ್ನು ನಿರ್ಬಂಧಿಸುತ್ತದೆ.
    • ಇದು ಮೂರು ಪೂರ್ವದ ನದಿಗಳನ್ನು, ಅಂದರೆ ರಾವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳ ನಿರ್ಬಂಧ ರಹಿತ ಬಳಕೆಗಾಗಿ ಭಾರತಕ್ಕೆ ಹಂಚಿಕೆ ಮಾಡಿದೆ.
    • ಇದರ ಅರ್ಥವೇನೆಂದರೆ, ಶೇಕಡಾ 80% ರಷ್ಟು ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರಿನ ಪಾಲು ಪಾಕಿಸ್ತಾನಕ್ಕೆ ಹಂಚಿಕೆಯಾದರೆ, ಶೇಕಡಾ 20% ರಷ್ಟು ನೀರಿನ ಪಾಲು ಮಾತ್ರ ಭಾರತದ ಬಳಕೆಗೆ ಲಭ್ಯವಿದೆ.

    ಅನುಬಂಧ ಸಿ ಮತ್ತು ಡಿ (Annexure C and D):

    ಪಾಕಿಸ್ತಾನವು ಝೀಲಂ, ಚೀನಾಬ್ ಮತ್ತು ಸಿಂಧೂ ನದಿಗಳ ನೀರಿನ ಮೇಲೆ ಹಕ್ಕನ್ನು ಹೊಂದಿದ್ದರೂ ಕೂಡ: 

    • ಸಿಂಧೂ ಜಲ ಒಪ್ಪಂದದ ‘ಅನುಬಂಧ ಸಿ’ ನಲ್ಲಿ ಭಾರತಕ್ಕೆ ಕೆಲವು ಕೃಷಿ ಬಳಕೆಗಾಗಿ ಅನುಮತಿಸುತ್ತದೆ.
    • ‘ಅನುಬಂಧ ಡಿ’ ನಲ್ಲಿ ಭಾರತಕ್ಕೆ ನದಿಯ ಸ್ವಾಭಾವಿಕ ಹರಿವಿನ ಆಧಾರಿತ (run of the river) ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸಲು ಅನುಮತಿಸುತ್ತದೆ, ಅಂದರೆ, ನೀರನ್ನು ಪ್ರತ್ಯೇಕವಾಗಿ ಸಂಗ್ರಹಿಸಿಡದೆ ನೇರವಾಗಿ ಹರಿಯುವ ನೀರಿನಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗಳು.

    ಶಾಶ್ವತ ಸಿಂಧೂ ನದಿ ಜಲ ಆಯೋಗ (Permanent Indus Commission):

    • ಎರಡೂ ದೇಶಗಳು ತಮ್ಮ ರಾಷ್ಟ್ರಗಳನ್ನು ಪ್ರತಿನಿಧಿಸುವ ಖಾಯಂ ಆಯುಕ್ತರನ್ನು ಒಳಗೊಂಡ ‘ಶಾಶ್ವತ ಸಿಂಧೂ ನದಿ ಜಲ ಆಯೋಗ’ವನ್ನು ಸ್ಥಾಪಿಸಬೇಕು ಎಂದು ಈ ಒಪ್ಪಂದವು ಕಡ್ಡಾಯಗೊಳಿಸಿದೆ. 
    • ಇದು ಸಂಘರ್ಷಗಳ ಪರಿಹಾರಕ್ಕಾಗಿ ಪ್ರಥಮ ಹಂತದ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
    • ಈ ಆಯೋಗವು ವರ್ಷಕ್ಕೆ ಕನಿಷ್ಠ ಒಮ್ಮೆಯಾದರೂ ಸಭೆ ಸೇರಬೇಕು.

    ಭಾರತ-ನೆದರ್ಲ್ಯಾಂಡ್ಸ್ ಕಾರ್ಯತಂತ್ರದ ಪಾಲುದಾರಿಕೆ

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಇತ್ತೀಚೆಗೆ ಪ್ರಧಾನಿ ಮೋದಿಯವರು ನೆದರ್ಲ್ಯಾಂಡ್ಸ್ ದೇಶಕ್ಕೆ ಅಧಿಕೃತವಾಗಿ ಭೇಟಿ ನೀಡಿದರು.
    • ಕಾರ್ಯತಂತ್ರದ ಪಾಲುದಾರಿಕೆಗೆ ಉನ್ನತೀಕರಣ: ಭಾರತ ಮತ್ತು ನೆದರ್ಲ್ಯಾಂಡ್ಸ್ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು “ಕಾರ್ಯತಂತ್ರದ ಪಾಲುದಾರಿಕೆ” (Strategic Partnership) ಮಟ್ಟಕ್ಕೆ ಉನ್ನತೀಕರಿಸಿವೆ.

    ಭಾರತ-ನೆದರ್ಲ್ಯಾಂಡ್ಸ್ ಸಂಬಂಧಗಳು:

    • ರಾಜತಾಂತ್ರಿಕ ಸಂಬಂಧಗಳು: ಭಾರತ ಮತ್ತು ನೆದರ್ಲ್ಯಾಂಡ್ಸ್ 1947 ರಲ್ಲಿ ಅಧಿಕೃತ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದವು, 2026 ಕ್ಕೆ ಈ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧಗಳು 79 ವರ್ಷಗಳನ್ನು ಪೂರೈಸಲಿವೆ.
    • ಆರ್ಥಿಕ ಸಹಕಾರ: ಭಾರತ ಮತ್ತು ನೆದರ್ಲ್ಯಾಂಡ್ಸ್ 2025 ರಲ್ಲಿ ‘ಜಂಟಿ ವ್ಯಾಪಾರ ಮತ್ತು ಹೂಡಿಕೆ ಸಮಿತಿ’ಯನ್ನು (JTIC) ಅಧಿಕೃತಗೊಳಿಸಿದವು. ಇದು ದ್ವಿಪಕ್ಷೀಯ ವ್ಯಾಪಾರ, ದ್ವಿಪಕ್ಷೀಯ ಹೂಡಿಕೆ ಸಹಕಾರ ಹಾಗೂ ತಂತ್ರಜ್ಞಾನ, ಎಂಎಸ್‌ಎಂಇಗಳು (MSMEs) ಮತ್ತು ಉದಯೋನ್ಮುಖ ವಲಯಗಳಲ್ಲಿನ ಸಹಕಾರವನ್ನು ಬಲಪಡಿಸುತ್ತದೆ.
    • ಸಾಂಸ್ಕೃತಿಕ ಸಹಕಾರ: ಗುಜರಾತಿನ ಲೋಥಾಲ್‌ನಲ್ಲಿ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣ’ದ (NMHC) ಅಭಿವೃದ್ಧಿಯಲ್ಲಿ ಸಹಕರಿಸಲು ಭಾರತ ಮತ್ತು ನೆದರ್ಲ್ಯಾಂಡ್ಸ್ 2025 ರಲ್ಲಿ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಿವೆ.

    ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣ (NMHC)ದ ಬಗ್ಗೆ:

      • ಭಾರತದ 4,500-ವರ್ಷಗಳ ಹಳೆಯ ಭವ್ಯ ಕಡಲ ಇತಿಹಾಸವನ್ನು ಪ್ರದರ್ಶಿಸಲು ಗುಜರಾತಿನ ಲೋಥಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದರ್ಜೆಯ ಪ್ರವಾಸೋದ್ಯಮ ಸೌಲಭ್ಯ ಇದಾಗಿದೆ.
      • ಸ್ಥಳ: ಗುಜರಾತಿನ ಲೋಥಾಲ್ (ಪ್ರಾಚೀನ ಸಿಂಧೂ ನಾಗರಿಕತೆಯ ಪ್ರಮುಖ ಬಂದರು ನಗರ).
      • ನೋಡಲ್ ಸಚಿವಾಲಯ: ಸಾಗರಮಾಲಾ ಕಾರ್ಯಕ್ರಮದ ಅಡಿಯಲ್ಲಿ ಬರುವ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ (MoPSW).
      • ವ್ಯಾಪ್ತಿ: 400 ಎಕರೆಗಳಿಗೂ ಹೆಚ್ಚು ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಇದು, ವಿಶ್ವದ ಅತಿದೊಡ್ಡ ಕಡಲ ವಸ್ತುಸಂಗ್ರಹಾಲಯ ಸಂಕೀರ್ಣವಾಗಲಿದೆ.
      • ಪ್ರಮುಖ ವೈಶಿಷ್ಟ್ಯ: ಇದು ವಿಶ್ವದ ಅತಿ ಎತ್ತರದ ದೀಪಸ್ತಂಭ (Lighthouse) ವಸ್ತುಸಂಗ್ರಹಾಲಯವನ್ನು ಹೊಂದಿರಲಿದೆ. 
      ಅನುಷ್ಠಾನಗೊಳಿಸುವ ಸಂಸ್ಥೆ: ಭಾರತೀಯ ಬಂದರು ರೈಲು ನಿಗಮ ನಿಯಮಿತ (IPRCL).

    ಭೋಜಶಾಲಾ

    ಇತಿಹಾಸ /ಕಲೆ ಮತ್ತು ಸಂಸ್ಕೃತಿ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಮಧ್ಯಪ್ರದೇಶದ ಉಚ್ಚ ನ್ಯಾಯಾಲಯವು ಇತ್ತೀಚೆಗೆ ಧಾರ್ ಜಿಲ್ಲೆಯಲ್ಲಿರುವ ‘ಭೋಜಶಾಲಾ’ ಸಂಕೀರ್ಣವನ್ನು ಹಿಂದೂ ದೇವಾಲಯವೆಂದು ಘೋಷಿಸಿದೆ.

    ಭೋಜಶಾಲಾ ಸಂಕೀರ್ಣ’ದ ಬಗ್ಗೆ:

    • ಪರಮಾರ ರಾಜವಂಶದ ಅತ್ಯಂತ ಶ್ರೇಷ್ಠ ರಾಜನಾದ ‘ರಾಜ ಭೋಜ’ನು ಕ್ರಿ.ಶ. 1000-1055 ರ ಸುಮಾರಿಗೆ ಧಾರ್‌ನಲ್ಲಿ ಸರಸ್ವತಿ ದೇವಿಗೆ ಸಮರ್ಪಿತವಾದ ಈ ಪ್ರಸಿದ್ಧ ಭೋಜಶಾಲೆಯನ್ನು ಪ್ರಮುಖ ಶಿಕ್ಷಣ ಕೇಂದ್ರವನ್ನಾಗಿ ಸ್ಥಾಪಿಸಿದನು.
    • ನಂತರ, ಮುಸ್ಲಿಂ ಆಳ್ವಿಕೆಯ ಕಾಲದಲ್ಲಿ ಈ ರಚನೆಯನ್ನು ‘ಕಮಲ್ ಮೌಲಾ ಮಸೀದಿ’ಯಾಗಿ ಪರಿವರ್ತಿಸಲಾಯಿತು.
    • ಇದು ಸಂಸ್ಕೃತ ಕಲಿಕೆಯ ಅತ್ಯುನ್ನತ ಮಹಾವಿದ್ಯಾಲಯ ಮತ್ತು ಪ್ರಮುಖ ಕಲಿಕಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು. ಈ ಮಸೀದಿಯು ಇಂದಿಗೂ ಮೂಲ ಭೋಜಶಾಲೆಯ ಕೆತ್ತನೆಯ ಕಂಬಗಳು, ಛಾವಣಿಗಳು ಮತ್ತು ಶಿಲಾಶಾಸನಗಳನ್ನು ಒಳಗೊಂಡಿದೆ.
    • ಇಲ್ಲಿನ ಪ್ರಮುಖ ಶಾಸನಗಳು ಸಂಸ್ಕೃತ ವ್ಯಾಕರಣ ಕೋಷ್ಟಕಗಳು, ವಿಷ್ಣುವಿನ ಸ್ತುತಿಗೀತೆಗಳು, ಪರಮಾರ ರಾಜರ ಪ್ರಶಂಸೆಗಳು ಮತ್ತು ಅರ್ಜುನವರ್ಮ ದೇವನ ಆಳ್ವಿಕೆಯಲ್ಲಿ ಮದನ ಕವಿಯು ಬರೆದ ‘ಕರ್ಪೂರಮಂಜರಿ’ ಎಂಬ ಸಂಸ್ಕೃತ ನಾಟಕವನ್ನು ಒಳಗೊಂಡಿವೆ.

    ಭಾರತದಲ್ಲಿ ಬೆಲ್ಲದ ಉದ್ಯಮ ವಲಯ

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತದಲ್ಲಿ ಬೆಲ್ಲದ ಉತ್ಪಾದನೆಯು ಗ್ರಾಮೀಣ ಜೀವನೋಪಾಯ, ರೈತರ ಆದಾಯ ಮತ್ತು ಗುಡಿ ಕೈಗಾರಿಕೆಗಳ ಮೂಲಕ ಮೌಲ್ಯವರ್ಧನೆಗೆ ಬೆಂಬಲ ನೀಡುತ್ತಿರುವ ಪ್ರಮುಖ ಕೃಷಿ-ಸಂಸ್ಕರಣಾ ವಲಯವಾಗಿದೆ.

    ‘ಬೆಲ್ಲ’ದ ಬಗ್ಗೆ ಮಾಹಿತಿ:

    • ಇದನ್ನು ಸಾಮಾನ್ಯವಾಗಿ ‘ಗುಢ’ ಎಂದು ಕರೆಯಲಾಗುತ್ತದೆ. ಇದು ಸಂಸ್ಕರಿಸದ, ನೈಸರ್ಗಿಕ ಮತ್ತು ಸಾಂಪ್ರದಾಯಿಕ ಸಿಹಿಕಾರಕವಾಗಿದೆ.
    • ರಾಸಾಯನಿಕಗಳನ್ನು ಬಳಸದೆ ಕಬ್ಬಿನ ರಸವನ್ನು ಸಾಂದ್ರೀಕರಿಸುವ ಮೂಲಕ ಇದನ್ನು ಉತ್ಪಾದಿಸಲಾಗುತ್ತದೆ.
    • ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ಪ್ರದೇಶಗಳಾದ್ಯಂತ ಇದನ್ನು ವಿಭಿನ್ನ ಸ್ಥಳೀಯ ಹೆಸರುಗಳಿಂದ ಕರೆಯಲಾಗುತ್ತಿದ್ದು, ಅಲ್ಲಿನ ಜನರು ಇದನ್ನು ವ್ಯಾಪಕವಾಗಿ ಆಹಾರದಲ್ಲಿ ಬಳಸುತ್ತಾರೆ.

    ಭಾರತದಲ್ಲಿ ಬೆಲ್ಲದ ಉತ್ಪಾದನೆ: 

    • ಭಾರತವು ಜಾಗತಿಕವಾಗಿ ಬೆಲ್ಲದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದ್ದು, ವಿಶ್ವದ ಒಟ್ಟು ಬೆಲ್ಲದ 70% ಕ್ಕಿಂತ ಹೆಚ್ಚಿನ ಉತ್ಪಾದನೆಯನ್ನು ಹೊಂದಿದೆ.
    • ಉತ್ತರ ಪ್ರದೇಶವು ಒಟ್ಟು ಉತ್ಪಾದನೆಯಲ್ಲಿ ಶೇಕಡಾ 48.5% ರಷ್ಟು ಕೊಡುಗೆ ನೀಡುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (24.1%) ಮತ್ತು ಕರ್ನಾಟಕ (10.5%) ರಾಜ್ಯಗಳಿವೆ.

    ಸಾರಂಡಾ ಅರಣ್ಯ (Saranda Forest)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಸಾರಂಡಾ ಆನೆಗಳ ಅರಣ್ಯ ಪ್ರದೇಶವನ್ನು ಮೂರು ತಿಂಗಳೊಳಗೆ ‘ವನ್ಯಜೀವಿ ಅಭಯಾರಣ್ಯ’ವಾಗಿ ಅಧಿಸೂಚಿಸುವಂತೆ ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ನೀಡಿದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಜಾರ್ಖಂಡ್ ಸರ್ಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ‘ಮರುಪರಿಶೀಲನಾ ಅರ್ಜಿ’ಯನ್ನು (Review petition) ಸಲ್ಲಿಸಿದೆ.
    • ಕಾರಣ: ಈ ಪ್ರದೇಶವನ್ನು ಅಭಯಾರಣ್ಯವೆಂದು ಘೋಷಿಸುವುದರಿಂದ, ಅಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರ ಆವಾಸಸ್ಥಾನಗಳು, ರಸ್ತೆಗಳು ಮತ್ತು ಮೂಲಸೌಕರ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಹೀಗಾಗಿ, ಈ ಕುರಿತು ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ ಎಂದು ಜಾರ್ಖಂಡ್ ಸರ್ಕಾರ ವಾದಿಸಿದೆ.

    ಸಾರಂಡಾ ಅರಣ್ಯದ ಬಗ್ಗೆ:

    • ಇದು ಜಾರ್ಖಂಡ್ ರಾಜ್ಯದ ಜಮ್ಶೆಡ್‌ಪುರದಿಂದ ಸುಮಾರು 122 ಕಿ.ಮೀ. ದೂರದಲ್ಲಿದೆ.
    • ಇದು ಏಷ್ಯಾ ಖಂಡದಲ್ಲೇ ಅತಿದೊಡ್ಡ ‘ಸಾಲ್’ ವೃಕ್ಷಗಳ ಅರಣ್ಯವಾಗಿದ್ದು, ಇದನ್ನು “ಏಳು ನೂರು ಬೆಟ್ಟಗಳ ನಾಡು” ಎಂದು ಕರೆಯಲಾಗುತ್ತದೆ.
    • ಇದು ಛೋಟಾನಾಗ್‌ಪುರ ‘ಜೈವಿಕ-ಭೌಗೋಳಿಕ ವಲಯ’ದ ಪ್ರಮುಖ ಭಾಗವಾಗಿದೆ. ಇದು ನೆರೆಯ ಒಡಿಶಾ ಮತ್ತು ಛತ್ತೀಸ್‌ಗಢ ರಾಜ್ಯಗಳ ಅರಣ್ಯಗಳೊಂದಿಗೆ ಸಂಪರ್ಕ ಹೊಂದಿದ್ದು, ವನ್ಯಜೀವಿಗಳಿಗೆ ನಿರಂತರವಾದ ಆವಾಸಸ್ಥಾನವನ್ನು ಒದಗಿಸುತ್ತದೆ.
    • ಪ್ರಾಣಿಸಂಕುಲ: ಈ ಅರಣ್ಯದಲ್ಲಿ ಅಳಿವಿನಂಚಿನಲ್ಲಿರುವ ‘ಹಾರುವ ಹಲ್ಲಿಗಳು’ ಮತ್ತು ದೊಡ್ಡ ಪ್ರಮಾಣದ ಆನೆಗಳ ಸಂತತಿ ಕಂಡುಬರುತ್ತದೆ. ಇದು ಆನೆಗಳ ಪ್ರಮುಖ ವಲಸೆ ಮಾರ್ಗವಾಗಿದೆ.
    • ಪ್ರಮುಖ ವೃಕ್ಷ ಪ್ರಭೇದಗಳು: ಸಾಲ್, ಮಹುವಾ ಮತ್ತು ಕುಸುಮ್.
    • ಬುಡಕಟ್ಟುಗಳು: ಹೋ (Ho), ಮುಂಡಾ, ಉರಾವ್ (Uraon) ಮತ್ತು ಸಂತಾಲ್ ಜನಾಂಗದವರು ಇಲ್ಲಿ ವಾಸಿಸುತ್ತಾರೆ.
    • ಮಹತ್ವ: ಇದು ಸ್ಥಳೀಯ ಬುಡಕಟ್ಟು ಜನಾಂಗದವರ ಪಾಲಿಗೆ ಆಳವಾದ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಅವರ ಸಂಪ್ರದಾಯಗಳು, ಆಚರಣೆಗಳು ಮತ್ತು “ಸರ್ನಾ”  ಎಂದು ಕರೆಯಲ್ಪಡುವ ಪವಿತ್ರ ತೋಪುಗಳು ಈ ಅರಣ್ಯ ಪರಿಸರ ವ್ಯವಸ್ಥೆಯೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ.
  • ‘ನಮ್ಮ ಸ್ಮಾರಕ’ ಉಪಕ್ರಮ

    ‘ನಮ್ಮ ಸ್ಮಾರಕ’ ಉಪಕ್ರಮ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಹೆಚ್ಚಿನ ವಾರ್ಷಿಕ ನಿರ್ವಹಣಾ ವೆಚ್ಚ (ಸರಿಸುಮಾರು ವರ್ಷಕ್ಕೆ ₹5 ಲಕ್ಷ) ಮತ್ತು ಹಲವು ಪಾರಂಪರಿಕ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹಾಗೂ ಪ್ರಚಾರ ತೀರಾ ಕಡಿಮೆ ಇರುವುದರಿಂದ, ಕರ್ನಾಟಕ ಸರ್ಕಾರದ ‘ನಮ್ಮ ಸ್ಮಾರಕ’ ಉಪಕ್ರಮವು ಖಾಸಗಿ ವಲಯದ ಆಸಕ್ತಿಯನ್ನು ಸೆಳೆಯಲು ಹಿನ್ನಡೆ ಅನುಭವಿಸುತ್ತಿದೆ.

    ‘ನಮ್ಮ ಸ್ಮಾರಕ’ ಉಪಕ್ರಮದ ಕುರಿತು:

    • ಧ್ಯೇಯ: ಇದು ರಾಜ್ಯ-ರಕ್ಷಿತ ಪಾರಂಪರಿಕ ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲು 2023 ರಲ್ಲಿ ಪ್ರಾರಂಭಿಸಲಾದ ಕರ್ನಾಟಕ ಸರ್ಕಾರದ ಒಂದು ಪ್ರಮುಖ ಡಿಜಿಟಲ್ ವೇದಿಕೆಯಾಗಿದೆ.
    • ಪ್ರಮುಖ ಅಂಶಗಳು:
      • ಗುರಿ: ಸ್ಥಳೀಯ ಐತಿಹಾಸಿಕ ತಾಣಗಳನ್ನು ಸಂರಕ್ಷಿಸುವುದು ಮತ್ತು ಅಭಿವೃದ್ಧಿಪಡಿಸುವುದು.
      • ಪಾಲುದಾರರು: ಕಾರ್ಪೊರೇಟ್ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು (NGOಗಳು) ಮತ್ತು ಸಾರ್ವಜನಿಕರು (ವ್ಯಕ್ತಿಗಳು) ಈ ಸ್ಮಾರಕಗಳನ್ನು ದತ್ತು ಪಡೆಯಬಹುದು.
      • ಹಣಕಾಸು ನೆರವು: ಸ್ಮಾರಕಗಳ ಮೂಲಸೌಕರ್ಯ ಮೇಲ್ದರ್ಜೀಕರಣಕ್ಕೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯನ್ನು ಬಳಸಲಾಗುತ್ತದೆ.
      • ಅಭಿವೃದ್ಧಿ ಕ್ರಮಗಳು: ದತ್ತು ಪಡೆದ ತಾಣಗಳಲ್ಲಿ ಪ್ರವಾಸಿ ಕೇಂದ್ರಗಳು, ಶೌಚಾಲಯಗಳು, ಶುದ್ಧ ಕುಡಿಯುವ ನೀರು ಮತ್ತು ಮಾಹಿತಿ ಫಲಕಗಳ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.
      • ಪರಿಣಾಮ: ಇದು ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ಜೊತೆಗೆ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

    ನಮ್ಮ ಸ್ಮಾರಕ ಯೋಜನೆಯಡಿ ದತ್ತು ಪಡೆದ ಸ್ಮಾರಕಗಳು (Adopted Monuments):

    • ನಾಲ್ಕುನಾಡು ಅರಮನೆ, ಕಕ್ಕಬೆ
    • ಗಗನ್ ಮಹಲ್, ವಿಜಯಪುರ
    • ವೆಂಕಟಪ್ಪ ಆರ್ಟ್ ಗ್ಯಾಲರಿ, ಬೆಂಗಳೂರು
    • ಅರವತ್ತು ಕಂಬದ ಗುಡಿ, ನಾಗಾವಿ
    • ಶ್ರೀ ಯೋಗಾನಂದೀಶ್ವರ ಸ್ವಾಮಿ ದೇವಾಲಯ, ನಂದಿ ಬೆಟ್ಟ
    • ನಂದಿ ಬಾವಿ ದೇವಾಲಯ ಸಂಕೀರ್ಣ, ಚಿತ್ತಾಪುರ ತಾಲೂಕು
    • ಕಲ್ಯಾಣಿ, ನಂದಿ ಗಿರಿಧಾಮ
    • ಮಲ್ಲಿಕಾರ್ಜುನ ದೇವಾಲಯ ಸಂಕೀರ್ಣ, ಚಿತ್ತಾಪುರ ತಾಲೂಕು
    • ರಂಗಸ್ಥಳ, ಚಿಕ್ಕಬಳ್ಳಾಪುರ
    • ಮುಳ್ಳಯ್ಯನಗಿರಿ, ಚಿತ್ತಾಪುರ ತಾಲೂಕು
    • ಶ್ರೀ ವೆಂಕಟರಮಣ ದೇವಾಲಯ, ಆಲಂಬಗಿರಿ
    • ಬಸವಕಲ್ಯಾಣ ಕೋಟೆ, ಬೀದರ್
    • ಶ್ರೀ ಭೀಮೇಶ್ವರ / ನಕುಲೇಶ್ವರ ದೇವಾಲಯ, ಕೈವಾರ
    • ಯಾದಗಿರಿ ಕೋಟೆ, ಯಾದಗಿರಿ
    • ಕೋಟೆಯ ಗೋಡೆ ಮತ್ತು ಪ್ರವೇಶ ದ್ವಾರ, ನಂದಿ ಬೆಟ್ಟ
    • ಮಾನ್ಯಖೇಟ / ಮಳಖೇಡ ಕೋಟೆ, ಸೇಡಂ ತಾಲೂಕು
    • ತಾಜ್ ಬಾವಡಿ, ವಿಜಯಪುರ
    • ಶ್ರೀ ರಾಮದೇವರು ಸೀತಾ ದೇವಿ ದೇವಾಲಯ, ಕೂಡ್ಲೂರು, ಚನ್ನಪಟ್ಟಣ
  • ಮಿಯಾವಾಕಿ ಅರಣ್ಯೀಕರಣ (Miyawaki Forest Plantation) | ಸುಧಾರಿತ ಮಧ್ಯಮ ಯುದ್ಧ ವಿಮಾನ (Advanced Medium Combat Aircraft – AMCA) ಯೋಜನೆ | ‘ಅಭಯ್’ (Abhay): AI ಚಾಲಿತ ಪರಿಶೀಲನಾ ವ್ಯವಸ್ಥೆ | ಭಾರತದ ಮೊದಲ ಉಪಗ್ರಹ-ಆಧಾರಿತ ಟ್ಯಾಗ್ ಅಳವಡಿಸಲಾದ ಗಂಗಾ ಮೃದು-ಚಿಪ್ಪಿನ ಆಮೆ

    ಮಿಯಾವಾಕಿ ಅರಣ್ಯೀಕರಣ (Miyawaki Forest Plantation)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ದೆಹಲಿ ಸರ್ಕಾರದ ಅರಣ್ಯ ಇಲಾಖೆಯು ‘ಅಸೋಲಾ-ಭಟ್ಟಿ ವನ್ಯಜೀವಿ ಅಭಯಾರಣ್ಯ’ದಲ್ಲಿ ‘ಮಿಯಾವಾಕಿ’ ವಿಧಾನದಡಿ ಸಸಿ ನೆಡುವ ಅಭಿಯಾನವನ್ನು ಹಮ್ಮಿಕೊಂಡಿದೆ.

    ಮಿಯಾವಾಕಿ ತಂತ್ರದ ಬಗ್ಗೆ:

    • ಮೂಲ: ಇದನ್ನು ಸಾಮಾನ್ಯವಾಗಿ ‘ಕುಂಡದಲ್ಲಿ ಸಸಿ ನೆಡುವ ವಿಧಾನ’ ಎಂದೂ ಕರೆಯಲಾಗುತ್ತದೆ. 1970 ರ ದಶಕದಲ್ಲಿ ಜಪಾನ್‌ನ ಖ್ಯಾತ ಸಸ್ಯಶಾಸ್ತ್ರಜ್ಞ ‘ಅಕಿರಾ ಮಿಯಾವಾಕಿ’ ಅವರು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು.
    • ಸಣ್ಣ ನಗರ ಪ್ರದೇಶಗಳಲ್ಲಿಯೂ ದಟ್ಟವಾದ ಅರಣ್ಯಗಳನ್ನು ಸೃಷ್ಟಿಸುವ ಕ್ರಾಂತಿಕಾರಿ ವಿಧಾನ ಇದಾಗಿದೆ.
    • ವೈಜ್ಞಾನಿಕ ಕಾರ್ಯವಿಧಾನ: ಮರಗಳು ಮತ್ತು ಪೊದೆಗಳು ವೇಗವಾಗಿ ಬೆಳೆಯುವಂತೆ ಮಾಡಲು, ಅವುಗಳನ್ನು ಪರಸ್ಪರ ಬಹಳ ಹತ್ತಿರದಲ್ಲಿ ನೆಡುವುದನ್ನು ಇದು ಒಳಗೊಂಡಿದೆ. ಈ ತಂತ್ರದ ಬಳಕೆಯಿಂದ ಸಸ್ಯಗಳು 10 ಪಟ್ಟು ವೇಗವಾಗಿ ಬೆಳೆಯುವುದರಿಂದ, ಇದು ನಗರ ಪ್ರದೇಶಗಳಿಗೆ ಅತ್ಯಂತ ಪ್ರಾಯೋಗಿಕ ಪರಿಹಾರವಾಗಿದೆ.
    • ಮಹತ್ವ: ನಗರ ಪ್ರದೇಶಗಳಲ್ಲಿರುವ ಬಂಜರು ಹಾಗೂ ಕಲುಷಿತ ಭೂಮಿಯನ್ನು ಅಭಿವೃದ್ಧಿ ಹೊಂದುತ್ತಿರುವ ಹಸಿರು ಪರಿಸರ ವ್ಯವಸ್ಥೆಗಳಾಗಿ ಯಶಸ್ವಿಯಾಗಿ ಪರಿವರ್ತಿಸಲು ಈ ವಿಧಾನವು ಸಹಕಾರಿಯಾಗಿದೆ. ಜೊತೆಗೆ, ಕೈಗಾರಿಕಾ ತ್ಯಾಜ್ಯವನ್ನು ನಿರ್ವಹಿಸಲು ಮತ್ತು ಮಾಲಿನ್ಯವನ್ನು ತಡೆಗಟ್ಟಲು ಇದು ಅತ್ಯಂತ ಸೂಕ್ತವಾಗಿದೆ.

    ‘ಅಸೋಲಾ-ಭಟ್ಟಿ ವನ್ಯಜೀವಿ ಅಭಯಾರಣ್ಯ’ದ ಬಗ್ಗೆ :

    • ಈ ಅಭಯಾರಣ್ಯವು ದಕ್ಷಿಣ ದೆಹಲಿಯಲ್ಲಿದೆ ಮತ್ತು ನೆರೆಯ ಹರಿಯಾಣದ ಫರಿದಾಬಾದ್‌ನ ಕೆಲವು ಭಾಗಗಳಿಗೂ ವಿಸ್ತರಿಸಿದೆ.
    • ವಿಶ್ವದ ಅತ್ಯಂತ ಹಳೆಯ ಪರ್ವತ ವ್ಯವಸ್ಥೆಗಳಲ್ಲಿ ಒಂದಾದ ಅರಾವಳಿ ಶ್ರೇಣಿಯ ದಕ್ಷಿಣದ ಪರ್ವತಗಳ ಸಾಲಿನಲ್ಲಿ ಈ ಅಭಯಾರಣ್ಯವು ನೆಲೆಗೊಂಡಿದೆ.
    • ‘ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1972’ ರ ಅಡಿಯಲ್ಲಿ ಈ ಅಭಯಾರಣ್ಯವನ್ನು 1991 ರಲ್ಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು.
    • ಈ ಅಭಯಾರಣ್ಯವನ್ನು ದೆಹಲಿಯ “ಹಸಿರು ಶ್ವಾಸಕೋಶ” ಎಂದೇ ಕರೆಯಲಾಗುತ್ತದೆ. ಇದು ಥಾರ್ ಮರುಭೂಮಿಯ ಪೂರ್ವ ದಿಕ್ಕಿನ ವಿಸ್ತರಣೆಯ ವಿರುದ್ಧ ನೈಸರ್ಗಿಕ ಪರಿಸರ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ.

    ಸುಧಾರಿತ ಮಧ್ಯಮ ಯುದ್ಧ ವಿಮಾನ (Advanced Medium Combat Aircraft – AMCA) ಯೋಜನೆ

    ರಕ್ಷಣೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಕೇಂದ್ರ ರಕ್ಷಣಾ ಸಚಿವರು ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ‘ಸುಧಾರಿತ ಮಧ್ಯಮ ಯುದ್ಧ ವಿಮಾನ’ (Advanced Medium Combat Aircraft – AMCA) ಯೋಜನೆಯ ಸೌಲಭ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

    ಸುಧಾರಿತ ಮಧ್ಯಮ ಯುದ್ಧ ವಿಮಾನ (AMCA) ಯೋಜನಾ ಸೌಲಭ್ಯದ ಬಗ್ಗೆ:

    • ಇದನ್ನು ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ’ (DRDO) ಅಡಿಯಲ್ಲಿ ಕಾರ್ಯನಿರ್ವಹಿಸುವ ‘ವೈಮಾನಿಕ ಅಭಿವೃದ್ಧಿ ಸಂಸ್ಥೆ’ (Aeronautical Development Agency – ADA) ಅಭಿವೃದ್ಧಿಪಡಿಸುತ್ತಿದೆ.
    • ಇದು ಭಾರತದ ಸಂಪೂರ್ಣ ಸ್ಥಳೀಯ 5ನೇ ತಲೆಮಾರಿನ ‘ರೇಡಾರ್ ವಂಚಕ’ (Stealth) ಯುದ್ಧ ವಿಮಾನ ಕಾರ್ಯಕ್ರಮದ ಸಂಯೋಜನೆ, ಅಭಿವೃದ್ಧಿ ಮತ್ತು ಹಾರಾಟ ಪರೀಕ್ಷಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
    • AMCA ಯುದ್ಧ ವಿಮಾನವು ಶತ್ರುಗಳ ರೇಡಾರ್‌ಗೆ ಸುಲಭವಾಗಿ ಸಿಗದ ರೇಡಾರ್ ವಂಚಕ ತಂತ್ರಜ್ಞಾನ (Stealth technology), ಅವಳಿ-ಎಂಜಿನ್‌ಗಳ ನೆರವಿನಿಂದ ಧ್ವನಾತೀತ ವೇಗದ ನಿರಂತರ ಹಾರಾಟದ ಸಾಮರ್ಥ್ಯ (ಸೂಪರ್ ಕ್ರೂಸ್ ಸಾಮರ್ಥ್ಯ) ಮತ್ತು ಅತ್ಯಾಧುನಿಕ ವೈಮಾನಿಕ ವಿದ್ಯುನ್ಮಾನ ವ್ಯವಸ್ಥೆಗಳನ್ನು ಒಳಗೊಂಡಿರಲಿದೆ.

    ‘ಅಭಯ್’ (Abhay): AI ಚಾಲಿತ ಪರಿಶೀಲನಾ ವ್ಯವಸ್ಥೆ

    ರಕ್ಷಣೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ‘ಕೇಂದ್ರೀಯ ತನಿಖಾ ದಳ’ವು (CBI) ತಾನು ಹೊರಡಿಸುವ ಅಧಿಸೂಚನೆಗಳ ದೃಢೀಕರಣಕ್ಕಾಗಿ, “ಅಭಯ್” ಎಂಬ ಕೃತಕ ಬುದ್ಧಿಮತ್ತೆ (AI) ಚಾಲಿತ ಸಹಾಯವಾಣಿ ರೋಬೋಟ್ ಅನ್ನು ಪ್ರಾರಂಭಿಸಿದೆ.

    ‘ಅಭಯ್’ (Abhay) ವ್ಯವಸ್ಥೆಯ ಬಗ್ಗೆ:

    • ಇದು CBI ಹೊರಡಿಸುವ ಅಧಿಸೂಚನೆಗಳ ನೈಜತೆಯನ್ನು ಸಾರ್ವಜನಿಕರು ಪರಿಶೀಲಿಸಲು ಇರುವ, ಕೃತಕ ಬುದ್ಧಿಮತ್ತೆ (AI) ಚಾಲಿತ ಚಾಟ್‌ಬಾಟ್ ಮಾದರಿಯ ಪರಿಶೀಲನಾ ವ್ಯವಸ್ಥೆಯಾಗಿದೆ.
    • ಸೈಬರ್ ವಂಚನೆ ಮತ್ತು ಡಿಜಿಟಲ್ ಬಂಧನ ಹಗರಣಗಳ ಹೆಚ್ಚುತ್ತಿರುವ ಹಾವಳಿಯಿಂದ ಮುಗ್ಧ ನಾಗರಿಕರನ್ನು ರಕ್ಷಿಸುವ ಉದ್ದೇಶದಿಂದ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
    • ದತ್ತಾಂಶ ಗೌಪ್ಯತೆ ಹಾಗೂ ಸಾರ್ವಜನಿಕ-ಸ್ನೇಹಿ ದೃಢೀಕರಣ ವ್ಯವಸ್ಥೆಯ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ.

    ಭಾರತದ ಮೊದಲ ಉಪಗ್ರಹ-ಆಧಾರಿತ ಟ್ಯಾಗ್ ಅಳವಡಿಸಲಾದ ಗಂಗಾ ಮೃದು-ಚಿಪ್ಪಿನ ಆಮೆ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತದ ಮೊಟ್ಟಮೊದಲ ‘ಉಪಗ್ರಹ-ಆಧಾರಿತ ಟ್ಯಾಗ್’ ಅಳವಡಿಸಲಾದ ‘ಗಂಗಾ ಮೃದು-ಚಿಪ್ಪಿನ ಆಮೆ’ಯನ್ನು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇತ್ತೀಚೆಗೆ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡುಗಡೆಗೊಳಿಸಲಾಗಿದೆ.
    • ಸಿಹಿನೀರಿನ ಆಮೆಗಳ ಸಂರಕ್ಷಣೆಯಲ್ಲಿ ಅಸ್ಸಾಂ ರಾಜ್ಯವು ವಿಶ್ವದ ಪ್ರಮುಖ ಆದ್ಯತೆಯ ಪ್ರದೇಶಗಳಲ್ಲಿ ಒಂದಾಗಿದೆ. ಭಾರತದಲ್ಲಿ ವರದಿಯಾಗಿರುವ ಒಟ್ಟು 8 ಮೃದು-ಚಿಪ್ಪಿನ ಆಮೆ ಪ್ರಭೇದಗಳಲ್ಲಿ 5 ಪ್ರಭೇದಗಳು ಕಾಜಿರಂಗ ಭೂಪ್ರದೇಶದಲ್ಲಿಯೇ ಕಂಡುಬರುತ್ತವೆ.

    ಗಂಗಾ ಮೃದು-ಚಿಪ್ಪಿನ ಆಮೆ (ನಿಲ್ಸೋನಿಯಾ ಗ್ಯಾಂಜೆಟಿಕಾ) ಬಗ್ಗೆ:

    • ಗುಣಲಕ್ಷಣಗಳು : ಇದರ ತಲೆಯ ಮೇಲ್ಭಾಗದಲ್ಲಿರುವ ವಿಶಿಷ್ಟವಾದ ‘ಬಾಣದ ಮೊನಚಾದ ಆಕಾರದ’ ಗುರುತುಗಳಿಂದ ಇದನ್ನು ಇತರ ನದಿ ಆಮೆಗಳಿಂದ ಸುಲಭವಾಗಿ ಪ್ರತ್ಯೇಕಿಸಿ ಗುರುತಿಸಬಹುದು.
    • ಇದು ಮೀನುಗಳು, ಪಕ್ಷಿಗಳು, ಸರೀಸೃಪಗಳು, ಅಕಶೇರುಕಗಳು, ಕೊಳೆತ ಮಾಂಸ ಮತ್ತು ಜಲಸಸ್ಯಗಳನ್ನು ಸೇವಿಸಿ ಜೀವಿಸುತ್ತದೆ.
    • ಆವಾಸಸ್ಥಾನ: ಇದು ಮುಖ್ಯವಾಗಿ ಕೆಸರು ತಳವಿರುವ ಹಾಗೂ ನಿರಂತರವಾಗಿ ಹರಿಯುವ, ಪ್ರಕ್ಷುಬ್ಧ ನೀರಿರುವ ನದಿಗಳು ಮತ್ತು ದೊಡ್ಡ ಕಾಲುವೆಗಳಲ್ಲಿ ವಾಸಿಸುತ್ತದೆ. ಆದರೂ, ಇದು ಕೊಳಗಳು ಮತ್ತು ಸರೋವರಗಳನ್ನೂ ತನ್ನ ಆವಾಸಸ್ಥಾನವಾಗಿ ಬಳಸಿಕೊಳ್ಳಬಲ್ಲದು.
    • ಹಂಚಿಕೆ: ಇದು ಭಾರತ, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಹರಿಯುವ ಸಿಂಧು, ಗಂಗಾ, ನರ್ಮದಾ, ಮಹಾನದಿ ಮತ್ತು ಬ್ರಹ್ಮಪುತ್ರ ನದಿ ಜಲಾನಯನ ಪ್ರದೇಶಗಳು ಸೇರಿದಂತೆ ಭಾರತೀಯ ಉಪಖಂಡದ ಉತ್ತರದ ಮೈದಾನ ಪ್ರದೇಶಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ.
    • ಭಾರತದಲ್ಲಿ, ಈ ಪ್ರಭೇದವು ಪ್ರಧಾನವಾಗಿ ದೊಡ್ಡ ನದಿಗಳು, ಸರೋವರಗಳು ಮತ್ತು ಜಲಾಶಯಗಳಲ್ಲಿ ವಾಸಿಸುತ್ತದೆ.
    • ಪರಿಸರ ವ್ಯವಸ್ಥೆಯಲ್ಲಿನ ಪಾತ್ರ: ಇದು ನದಿಯ ಪ್ರಮುಖ ಪರಭಕ್ಷಕ ಜೀವಿಯಾಗಿದೆ. ಇದು ಸತ್ತ ಮತ್ತು ಕೊಳೆಯುತ್ತಿರುವ ಪ್ರಾಣಿಗಳ ದೇಹವನ್ನು ತಿನ್ನುವ ಮೂಲಕ ಜಲಮೂಲಗಳ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
    • ಅಪಾಯಗಳು: ಅಕ್ರಮ ಬೇಟೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಆವಾಸಸ್ಥಾನದ ನಾಶದಿಂದಾಗಿ ಈ ಪ್ರಭೇದವು ತೀವ್ರವಾದ ಅಪಾಯಗಳನ್ನು ಎದುರಿಸುತ್ತಿದೆ.
    • ಸಂರಕ್ಷಣಾ ಸ್ಥಾನಮಾನ:
    1. ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿ ಇದು ‘ಅನುಸೂಚಿ 1’ ರ ಪಟ್ಟಿಯಲ್ಲಿದೆ.
    2. ‘ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ’ದ (IUCN) ಕೆಂಪು ಪಟ್ಟಿಯಲ್ಲಿ ಇದನ್ನು ‘ಅಳಿವಿನಂಚಿನಲ್ಲಿರುವ’ (En) ಪ್ರಭೇದ ಎಂದು ವರ್ಗಿಕರಿಸಲಾಗಿದೆ.
    3. ಇದನ್ನು CITES ನ ‘ಅನುಬಂಧ 1’ ರಲ್ಲಿ ಸೇರಿಸಲಾಗಿದ್ದು, ಇದು ಎಲ್ಲಾ ರೀತಿಯ ಅಂತರರಾಷ್ಟ್ರೀಯ ವಾಣಿಜ್ಯ ವ್ಯಾಪಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ.
  • ಎಲಿವೇಟ್ ನೆಕ್ಸ್ಟ್ (ELEVATE NxT) : ಡೀಪ್-ಟೆಕ್

    ಎಲಿವೇಟ್ ನೆಕ್ಸ್ಟ್ (ELEVATE NxT) : ಡೀಪ್-ಟೆಕ್

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಕರ್ನಾಟಕ ಸರ್ಕಾರದ ₹150 ಕೋಟಿ ವೆಚ್ಚದ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಡೀಪ್ ಟೆಕ್ (Deep-tech) ಉಪಕ್ರಮವಾದ ‘ಎಲಿವೇಟ್ ನೆಕ್ಸ್ಟ್’ ರಾಷ್ಟ್ರಮಟ್ಟದಲ್ಲಿ ಭಾರೀ ಗಮನ ಸೆಳೆಯುತ್ತಿದೆ. 
    • ಈ ಯೋಜನೆಗೆ ಸ್ವೀಕೃತವಾದ ಒಟ್ಟು 983 ಅರ್ಜಿಗಳಲ್ಲಿ, 213 ಅರ್ಜಿಗಳು ಕರ್ನಾಟಕದ ಹೊರಗಿನಿಂದ ಬಂದಿವೆ. ಇದು ಶೇಕಡಾ 23% ರಷ್ಟು ಹೊರರಾಜ್ಯಗಳ ನವೋದ್ಯಮಿಗಳ ಪಾಲ್ಗೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತದೆ.

    ಎಲಿವೇಟ್ (ELEVATE) ಯೋಜನೆಯ ಬಗ್ಗೆ:

    • ಇದು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (E, IT, BT and S&T) ಒಂದು ಮಹತ್ವಾಕಾಂಕ್ಷಿ ಉಪಕ್ರಮವಾಗಿದೆ.
    • ಆರಂಭಿಕ ಹಂತದಲ್ಲಿರುವ ನವೀನ ನವೋದ್ಯಮಗಳನ್ನು (Startups) ಗುರುತಿಸಿ, ಅವುಗಳನ್ನು ಪ್ರೋತ್ಸಾಹಿಸಿ ಬೆಳೆಸಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.
    • ಈ ಯೋಜನೆಯು ಅನುದಾನದ ನೆರವು (Grant-in-aid), ನುರಿತ ತಜ್ಞರಿಂದ ಮಾರ್ಗದರ್ಶನ ಮತ್ತು ಸಾಹಸೋದ್ಯಮ ಬಂಡವಾಳ (Venture capital) ಪಡೆಯಲು ಅಗತ್ಯವಿರುವ ಸಮಗ್ರ ಬೆಂಬಲವನ್ನು ಒದಗಿಸುತ್ತದೆ.

    ಪ್ರಮುಖ ಹಣಕಾಸು ನೆರವು ಮತ್ತು ಬೆಂಬಲಿತ ವಿಭಾಗಗಳು:

    • ಎಲಿವೇಟ್ (ಸಾಮಾನ್ಯ ವರ್ಗ): ನವೋದ್ಯಮಗಳಿಗೆ ತಮ್ಮ ಉತ್ಪನ್ನದ ಮೂಲಮಾದರಿಗಳನ್ನು (Prototypes) ಅಭಿವೃದ್ಧಿಪಡಿಸಲು, ಮಾರುಕಟ್ಟೆ ಪ್ರಯೋಗಗಳನ್ನು ನಡೆಸಲು ಮತ್ತು ತಮ್ಮ ವ್ಯವಹಾರವನ್ನು ವಿಸ್ತರಿಸಲು ಗರಿಷ್ಠ ₹50 ಲಕ್ಷಗಳವರೆಗೆ ಒಂದು ಬಾರಿಯ ಅನುದಾನವನ್ನು ನೀಡುತ್ತದೆ.
    • ಎಲಿವೇಟ್ ಉನ್ನತಿ (ELEVATE Unnati): ಇದು ನಿರ್ದಿಷ್ಟವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಉದ್ಯಮಿಗಳ ನೇತೃತ್ವದ ನವೋದ್ಯಮಗಳನ್ನು ಗುರಿಯಾಗಿಸಿಕೊಂಡಿದೆ. ಉದ್ಯಮದಲ್ಲಿ ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಇದು ₹50 ಲಕ್ಷಗಳವರೆಗೆ ಆರಂಭಿಕ ಬಂಡವಾಳವನ್ನು (Seed funding) ಒದಗಿಸುತ್ತದೆ.
    • ಎಲಿವೇಟ್ ನೆಕ್ಸ್ಟ್ (ELEVATE NxT – ಡೀಪ್-ಟೆಕ್): ಇದು ‘ಲೀಪ್’ (LEAP) ಚೌಕಟ್ಟಿನ ಅಡಿಯಲ್ಲಿ ಬರುವ ಪ್ರಮುಖ ಕಾರ್ಯಕ್ರಮವಾಗಿದೆ. ಉನ್ನತ ಸಾಮರ್ಥ್ಯವುಳ್ಳ ಡೀಪ್-ಟೆಕ್ ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ನವೋದ್ಯಮಗಳನ್ನು ದೊಡ್ಡ ಮಟ್ಟಕ್ಕೆ ಬೆಳೆಸುವತ್ತ ಇದು ಗಮನಹರಿಸುತ್ತದೆ.
    • ಎಲಿವೇಟ್ ವುಮೆನ್ (ELEVATE WomEN): ಇದು ಮಹಿಳಾ ಉದ್ಯಮಿಗಳು ಮುನ್ನಡೆಸುತ್ತಿರುವ ನವೋದ್ಯಮಗಳನ್ನು ವೇಗವಾಗಿ ಬೆಳೆಸಲು ಮೀಸಲಾಗಿರುವ ವಿಭಾಗವಾಗಿದೆ.
    • ಎಲಿವೇಟ್ ಅಲ್ಪಸಂಖ್ಯಾತರು (ELEVATE Minorities): ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಉದ್ಯಮಿಗಳಿಗೆ ಬೆಂಬಲ ಮತ್ತು ಹಣಕಾಸು ನೆರವು ಒದಗಿಸುವ ವಿಶೇಷ ವಿಭಾಗ ಇದಾಗಿದೆ.
  • ಸರ್ಕಾರದಿಂದ ಸಕ್ಕರೆ ರಫ್ತು ನಿಷೇಧ | ಅಸ್ಸಾಂನಿಂದ ಮೊದಲ ಅಧಿಕೃತ ‘ಅಗರ್‌ವುಡ್’ ಪಶ್ಚಿಮ ಏಷ್ಯಕ್ಕೆ ರಫ್ತು | ಆದಾಯದ ಮೂಲದಲ್ಲಿಯೇ ತೆರಿಗೆ ಕಡಿತ/ಸಂಗ್ರಹಣೆ (ವಿತ್‌ಹೋಲ್ಡಿಂಗ್ ಟ್ಯಾಕ್ಸ್) | ಪ್ರಧಾನ ಮಂತ್ರಿಯವರ ಯುಎಇ (UAE) ಭೇಟಿ | ಚಾಬಹಾರ್ ಬಂದರು

    ಸರ್ಕಾರದಿಂದ ಸಕ್ಕರೆ ರಫ್ತು ನಿಷೇಧ

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತ ಸರ್ಕಾರವು ‘ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ’ದ (Directorate General of Foreign Trade – DGFT) ಮೂಲಕ ಕಚ್ಚಾ, ಬಿಳಿ ಮತ್ತು ಸಂಸ್ಕರಿಸಿದ ಸಕ್ಕರೆಯ ರಫ್ತನ್ನು 2026 ರ ಸೆಪ್ಟೆಂಬರ್ 30 ರವರೆಗೆ ನಿಷೇಧಿತ ವರ್ಗದಲ್ಲಿ ಇರಿಸಿದೆ.

    ಸಕ್ಕರೆ ರಫ್ತು ನಿಷೇಧದ ಹಿಂದಿನ ಪ್ರಮುಖ ಕಾರಣಗಳು:

    • ಎಲ್-ನಿನೋ ಮತ್ತು ಮುಂಗಾರು ಆತಂಕಗಳು: ಮುಂಬರುವ ಸಂಭಾವ್ಯ ‘ಎಲ್-ನಿನೋ’ ಪ್ರಭಾವವು ಮುಂಗಾರು ಮಳೆಯನ್ನು ದುರ್ಬಲಗೊಳಿಸಬಹುದು. ಇದರಿಂದಾಗಿ ಕಬ್ಬಿನ ಇಳುವರಿ ಕಡಿಮೆಯಾಗಿ ಭವಿಷ್ಯದ ಸಕ್ಕರೆ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕ ಸರ್ಕಾರಕ್ಕಿದೆ.
    • ರಸಗೊಬ್ಬರ ಪೂರೈಕೆಯ ಅಪಾಯಗಳು: ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡಬಹುದು. ಕಬ್ಬಿನ ಬೆಳೆಗೆ ಹೆಚ್ಚಿನ ರಸಗೊಬ್ಬರದ ಅಗತ್ಯತೆ ಇರುವುದರಿಂದ ಇದು ಅತ್ಯಂತ ಮಹತ್ವದ ಅಂಶವಾಗಿದೆ.
    • ಸಾಕಷ್ಟು ದೇಶೀಯ ದಾಸ್ತಾನು ಕಾಯ್ದುಕೊಳ್ಳುವಿಕೆ: ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆಯನ್ನು ನಿಯಂತ್ರಿಸಲು, ಅಭಾವವನ್ನು ತಡೆಗಟ್ಟಲು ಮತ್ತು ದೇಶೀಯ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಪ್ರಮಾಣದ ಸಕ್ಕರೆ ದಾಸ್ತಾನನ್ನು ಕಾಪಾಡಿಕೊಳ್ಳುವುದು ಈ ನಿಷೇಧದ ಪ್ರಮುಖ ಗುರಿಯಾಗಿದೆ.

    ಅಸ್ಸಾಂನಿಂದ ಮೊದಲ ಅಧಿಕೃತ ‘ಅಗರ್‌ವುಡ್’ ಪಶ್ಚಿಮ ಏಷ್ಯಕ್ಕೆ ರಫ್ತು

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (UAE) ಅಗರ್‌ವುಡ್ ಮರದ ತುಣುಕುಗಳನ್ನು ಕಾನೂನುಬದ್ಧವಾಗಿ ರಫ್ತು ಮಾಡಲು ಅಸ್ಸಾಂ ಸರ್ಕಾರವು ಇತ್ತೀಚೆಗೆ ಅನುಮೋದನೆ ನೀಡಿದೆ.

    ಅಗರ್‌ವುಡ್ (Agarwood) ಬಗ್ಗೆ:

    • ಇದನ್ನು ಸಾಮಾನ್ಯವಾಗಿ “ಊದ್” (Oud) ಎಂದೂ ಕರೆಯಲಾಗುತ್ತದೆ.
    • ಸೋಂಕಿಗೆ ತುತ್ತಾದ ‘ಅಕ್ವಿಲೇರಿಯಾ’ (Aquilaria) ಮತ್ತು ‘ಗೈರಿನೋಪ್ಸ್’ (Gyrinops) ಮರಗಳಲ್ಲಿ ನೈಸರ್ಗಿಕವಾಗಿ ಸ್ರವಿಸುವ ಸುಗಂಧಭರಿತ ರಾಳದಿಂದ ಇದನ್ನು ಉತ್ಪಾದಿಸಲಾಗುತ್ತದೆ.
    • ಅಗರ್‌ವುಡ್, ಜಾಗತಿಕವಾಗಿ ಐಷಾರಾಮಿ ಸುಗಂಧ ದ್ರವ್ಯಗಳು, ಧೂಪದ್ರವ್ಯ, ಸೌಂದರ್ಯವರ್ಧಕಗಳು ಮತ್ತು ಸಾಂಪ್ರದಾಯಿಕ ಉತ್ಪನ್ನಗಳಲ್ಲಿ ಬಳಸಲಾಗುವ ಅತ್ಯಂತ ಬೆಲೆಬಾಳುವ ವಸ್ತುವಾಗಿದೆ.
    • ಭಾರತ, ಕಾಂಬೋಡಿಯಾ, ವಿಯೆಟ್ನಾಂ, ಮಲೇಷ್ಯಾ, ಇಂಡೋನೇಷ್ಯಾ, ಲಾವೋಸ್ ಮತ್ತು ಭೂತಾನ್‌ನಂತಹ ದೇಶಗಳಲ್ಲಿ ಅಗರ್‌ವುಡ್ ಅನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ.
    • ಭಾರತದಲ್ಲಿ, ಅಕ್ವಿಲೇರಿಯಾ ಮಲಾಸೆನ್ಸಿಸ್ (Aquilaria malaccensis) ಮತ್ತು ಅಕ್ವಿಲೇರಿಯಾ ಖಾಸಿಯಾನಾ (Aquilaria khasiana) ದಂತಹ ಪ್ರಮುಖ ಪ್ರಭೇದಗಳು ಪ್ರಧಾನವಾಗಿ ಅಸ್ಸಾಂ ಮತ್ತು ಅದರ ಸುತ್ತಮುತ್ತಲಿನ ರಾಜ್ಯಗಳು ಸೇರಿದಂತೆ ಈಶಾನ್ಯ ಭಾರತದಲ್ಲಿ ಕಂಡುಬರುತ್ತವೆ.
    • ‘ಅಳಿವಿನಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶ’ದ (CITES) ಅನುಬಂಧ II ರ ಅಡಿಯಲ್ಲಿ ಅಗರ್‌ವುಡ್ ಅನ್ನು ಸಂರಕ್ಷಿಸಲಾಗಿದೆ.

    ಆದಾಯದ ಮೂಲದಲ್ಲಿಯೇ ತೆರಿಗೆ ಕಡಿತ/ಸಂಗ್ರಹಣೆ (ವಿತ್‌ಹೋಲ್ಡಿಂಗ್ ಟ್ಯಾಕ್ಸ್)

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ-ರಾಜಕೀಯ ಬಿಕ್ಕಟ್ಟಿನ ನಡುವೆ, ಸಾಗರೋತ್ತರ ಬಂಡವಾಳದ ಒಳಹರಿವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ, ಕೇಂದ್ರ ಸರ್ಕಾರವು ವಿತ್‌ಹೋಲ್ಡಿಂಗ್ ಟ್ಯಾಕ್ಸ್ (‘ಮೂಲದಲ್ಲಿ ತೆರಿಗೆ ತಡೆಹಿಡಿಯುವಿಕೆ) ದರವನ್ನು 20% ದಿಂದ ಹಿಂದಿನ 5% ಕ್ಕೆ ಕಡಿತಗೊಳಿಸಲು ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.

    ಆದಾಯದ ಮೂಲದಲ್ಲಿಯೇ ತೆರಿಗೆ ಕಡಿತ/ಸಂಗ್ರಹಣೆ (ವಿತ್‌ಹೋಲ್ಡಿಂಗ್ ಟ್ಯಾಕ್ಸ್)ಯ ಬಗ್ಗೆ:

    • ‘ವಿತ್‌ಹೋಲ್ಡಿಂಗ್ ಟ್ಯಾಕ್’ ಅಥವಾ WHT ಎಂಬುದು ಆದಾಯದ ಮೂಲದಲ್ಲಿಯೇ ಸಂಗ್ರಹಿಸಲಾಗುವ ತೆರಿಗೆಯಾಗಿದೆ.
    • ಹೂಡಿಕೆದಾರ ಅಥವಾ ವಿದೇಶಿ ಕಂಪನಿಯು ಆರ್ಥಿಕ ವರ್ಷದ ಕೊನೆಯಲ್ಲಿ ತೆರಿಗೆ ಪಾವತಿಸಲು ಕಾಯುವ ಬದಲು, ಆದಾಯವನ್ನು ಸ್ವೀಕರಿಸುವವರ ಕೈಸೇರುವ ಮುನ್ನವೇ ಅದರ ಒಂದು ನಿರ್ದಿಷ್ಟ ಭಾಗವನ್ನು ಕಡಿತಗೊಳಿಸುವಂತೆ ಸರ್ಕಾರವು ಪಾವತಿದಾರರಿಗೆ ಕಡ್ಡಾಯಗೊಳಿಸುತ್ತದೆ.
    • ಹೀಗೆ ಕಡಿತಗೊಳಿಸಲಾದ ಮೊತ್ತವನ್ನು ನೇರವಾಗಿ ಸರ್ಕಾರದ ಬೊಕ್ಕಸಕ್ಕೆ ಜಮೆ ಮಾಡಲಾಗುತ್ತದೆ.
    • ಸರಳವಾಗಿ ಹೇಳುವುದಾದರೆ, ಉದ್ಯೋಗ, ಹೂಡಿಕೆಗಳು, ಸ್ವಾಮ್ಯಧನ (Royalties) ಅಥವಾ ಇತರ ಯಾವುದೇ ಮೂಲಗಳ ಮೂಲಕ ಆದಾಯವನ್ನು ಗಳಿಸಿದಾಗ, ಸರ್ಕಾರವು ಈ ತೆರಿಗೆಯ ಮೂಲಕ ಮುಂಗಡವಾಗಿ ತೆರಿಗೆ ಸಂಗ್ರಹವಾಗುವುದನ್ನು ಖಚಿತಪಡಿಸಿಕೊಳ್ಳುತ್ತದೆ.
    • ಹಾಂಗ್ ಕಾಂಗ್ ಮತ್ತು ಸಿಂಗಾಪುರ್ ದೇಶಗಳಲ್ಲಿ ಈ ವ್ಯವಸ್ಥೆ ಇರುವುದಿಲ್ಲ.

    ಈ ತೆರಿಗೆಯನ್ನು ಕಡಿತಗೊಳಿಸುವುದರ ಮಹತ್ವ:

    • ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತದೆ: ಈ ತೆರಿಗೆ ದರ ಕಡಿಮೆಯಾದರೆ ವಿದೇಶಿ ಹೂಡಿಕೆದಾರರಿಗೆ ಹೆಚ್ಚಿನ ಲಾಭಾಂಶವನ್ನು ಒದಗಿಸುತ್ತದೆ. ಇದು ಹೆಚ್ಚಿನ ವಿದೇಶಿ ನೇರ ಹೂಡಿಕೆ (FDI) ಮತ್ತು ಹಣಕಾಸು ಮಾರುಕಟ್ಟೆ ಹೂಡಿಕೆಗಳನ್ನು ಉತ್ತೇಜಿಸುತ್ತದೆ.
    • ಸುಗಮ ವ್ಯಾಪಾರ ವ್ಯವಸ್ಥೆಯನ್ನು (EoDB) ಸುಧಾರಿಸುತ್ತದೆ: ಗಡಿಯಾಚೆಗಿನ ವಹಿವಾಟುಗಳಲ್ಲಿ ತೊಡಗಿರುವ ಕಂಪನಿಗಳ ಮೇಲಿನ ತೆರಿಗೆ ಮತ್ತು ನಿಯಮಾನುಸರಣೆಯ ಹೊರೆಯನ್ನು ಇದು ಗಣನೀಯವಾಗಿ ಕಡಿಮೆ ಮಾಡುತ್ತದೆ.
    • ಬಂಡವಾಳ ಮತ್ತು ವ್ಯಾಪಾರದ ಹರಿವನ್ನು ಹೆಚ್ಚಿಸುತ್ತದೆ: ಅಂತರರಾಷ್ಟ್ರೀಯ ವ್ಯಾಪಾರ, ತಂತ್ರಜ್ಞಾನ ವರ್ಗಾವಣೆ ಮತ್ತು ಜಾಗತಿಕ ಬಂಡವಾಳದ ಮುಕ್ತ ಚಲನೆಯನ್ನು ಇದು ಪ್ರೋತ್ಸಾಹಿಸುತ್ತದೆ.
    • ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ: ಹೆಚ್ಚಿದ ಹೂಡಿಕೆ ಮತ್ತು ವ್ಯಾಪಾರ ಚಟುವಟಿಕೆಗಳು ನವ ಉದ್ಯೋಗಗಳ ಸೃಷ್ಟಿ, ನಾವೀನ್ಯತೆ ಮತ್ತು ಉನ್ನತ ಮಟ್ಟದ ಆರ್ಥಿಕ ಉತ್ಪಾದಕತೆಗೆ ಕಾರಣವಾಗಬಹುದು.

    ಪ್ರಧಾನ ಮಂತ್ರಿಯವರ ಯುಎಇ (UAE) ಭೇಟಿ

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳನ್ನು ಒಳಗೊಂಡ ಐದು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಭಾರತದ ಪ್ರಧಾನ ಮಂತ್ರಿಯವರು ಯುಎಇ (UAE) ನಲ್ಲಿ ಐತಿಹಾಸಿಕ ರಾಜತಾಂತ್ರಿಕ ಭೇಟಿಯನ್ನು ಕೈಗೊಂಡರು.

    ಪ್ರಮುಖ ಫಲಿತಾಂಶಗಳು:

    • ‘ಭಾರತೀಯ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ಸಂಸ್ಥೆ’ (ISPRL) ಮತ್ತು ‘ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿ’ (ADNOC) ನಡುವೆ ಕಾರ್ಯತಂತ್ರದ ಸಹಯೋಗಕ್ಕಾಗಿ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಲಾಯಿತು.
    • ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಪೂರೈಕೆ ಕುರಿತಂತೆ ಭಾರತೀಯ ತೈಲ ನಿಗಮ ನಿಯಮಿತ (IOCL) ಮತ್ತು ‘ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿ’ (ADNOC) ನಡುವೆ ಕಾರ್ಯತಂತ್ರದ ಸಹಯೋಗ ಒಪ್ಪಂದವನ್ನು ಏರ್ಪಡಿಸಲಾಯಿತು.
    • ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಗೆ ಚೌಕಟ್ಟು: ಗುಜರಾತ್‌ನ ವಾಡಿನಾರ್‌ನಲ್ಲಿ ‘ಹಡಗು ದುರಸ್ತಿ ಸಮುಚ್ಚಯ’ ಸ್ಥಾಪಿಸಲು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ಮತ್ತು ಡ್ರೈಡಾಕ್ಸ್ ವರ್ಲ್ಡ್ (DDW) ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು.
    • ಭಾರತ ಸರ್ಕಾರವು ಪ್ರಾರಂಭಿಸಿರುವ ‘ಕಡಲ ಅಭಿವೃದ್ಧಿ ನಿಧಿ ಯೋಜನೆ’ಯ ಅಡಿಯಲ್ಲಿ, ಕಡಲಾಚೆಯ ನಿರ್ಮಾಣ ಕಾರ್ಯಗಳು ಸೇರಿದಂತೆ ವಿವಿಧ ಮಹತ್ವದ ಕ್ಷೇತ್ರಗಳಲ್ಲಿ ಪರಸ್ಪರ ಸಹಕರಿಸಲು ಉಭಯ ರಾಷ್ಟ್ರಗಳು ಸಹಮತ ವ್ಯಕ್ತಪಡಿಸಿವೆ.

    ಭಾರತ ಮತ್ತು ಯುಎಇ ಸಂಬಂಧಗಳು:

    • ರಾಜಕೀಯ ಸಂಬಂಧಗಳು: ಭಾರತ ಮತ್ತು ಯುಎಇ ದೇಶಗಳು 1972 ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದವು. 2017 ರಲ್ಲಿ ಈ ಬಾಂಧವ್ಯವನ್ನು ‘ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ’ಯಾಗಿ (CSP) ಉನ್ನತೀಕರಿಸಲಾಯಿತು.
    • ವ್ಯಾಪಾರ ಮತ್ತು ಹೂಡಿಕೆ: ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸರಕು ವ್ಯಾಪಾರವು ಐತಿಹಾಸಿಕವಾಗಿ ಮೊದಲ ಬಾರಿಗೆ 100 ಬಿಲಿಯನ್ ಅಮೆರಿಕನ್ ಡಾಲರ್ (US$100 billion) ಗಡಿಯನ್ನು ದಾಟಿದೆ.
    • ಬಾಹ್ಯಾಕಾಶ ಸಹಕಾರ: ಶಾಂತಿಯುತ ಉದ್ದೇಶಗಳಿಗಾಗಿ ಬಾಹ್ಯಾಕಾಶದ ಪರಿಶೋಧನೆ ಮತ್ತು ಬಳಕೆಯಲ್ಲಿ ಸಹಕರಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಯುಎಇ ಬಾಹ್ಯಾಕಾಶ ಸಂಸ್ಥೆ 2016 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿವೆ.
    • ಭಾರತೀಯ ಸಮುದಾಯ: ಸುಮಾರು 35 ಲಕ್ಷ ಭಾರತೀಯ ವಲಸಿಗ ಸಮುದಾಯವು ಯುಎಇ ದೇಶದಲ್ಲಿರುವ ಅತಿ ದೊಡ್ಡ ಜನಾಂಗೀಯ ಸಮುದಾಯವಾಗಿದೆ. ಇದು ಆ ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 35% ರಷ್ಟಿದೆ.
    • ಬಹುಪಕ್ಷೀಯ ಸಹಕಾರ: ಭಾರತ ಮತ್ತು ಯುಎಇ ಪ್ರಸ್ತುತ ‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ (IMEC), I2U2 (ಭಾರತ, ಇಸ್ರೇಲ್, ಯುಎಇ, ಅಮೆರಿಕಾ) ಮತ್ತು UFI (ಯುಎಇ, ಫ್ರಾನ್ಸ್, ಭಾರತ) ತ್ರಿಪಕ್ಷೀಯ ವೇದಿಕೆಗಳಂತಹ ಹಲವು ಬಹುಪಕ್ಷೀಯ ವೇದಿಕೆಗಳ ಸಕ್ರಿಯ ಭಾಗವಾಗಿವೆ.

    ಚಾಬಹಾರ್ ಬಂದರು

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇರಾನ್ ದೇಶದ ವಿದೇಶಾಂಗ ಸಚಿವರು ಚಾಬಹಾರ್ ಬಂದರನ್ನು “ಸುವರ್ಣ ಹೆಬ್ಬಾಗಿಲು” ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಈ ಆಯಕಟ್ಟಿನ ಬಂದರನ್ನು ಭಾರತವು ಇನ್ನಷ್ಟು ಅಭಿವೃದ್ಧಿಪಡಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

    ಚಾಬಹಾರ್ ಬಂದರಿನ ಬಗ್ಗೆ:

    • ಸ್ಥಳ: ಇದು ಇರಾನ್‌ನ ಆಗ್ನೇಯ ಭಾಗದಲ್ಲಿ, ಓಮನ್ ಕೊಲ್ಲಿಯ (ಗಲ್ಫ್ ಆಫ್ ಓಮನ್) ಕರಾವಳಿಯಲ್ಲಿರುವ ಪ್ರಮುಖ ಸಮುದ್ರ ಬಂದರಾಗಿದೆ.
    • ಇದು ‘ಶಾಹಿದ್ ಕಲಾಂತರಿ’ ಮತ್ತು ‘ಶಾಹಿದ್ ಬೆಹೇಶ್ತಿ ‘ ಎಂಬ ಎರಡು ಪ್ರತ್ಯೇಕ ಬಂದರುಗಳನ್ನು ಒಳಗೊಂಡಿದೆ.
    • ಇದು ಪಾಕಿಸ್ತಾನದ ಗ್ವಾದರ್ ಬಂದರಿನಿಂದ ಪಶ್ಚಿಮಕ್ಕೆ ಕೇವಲ 170 ಕಿಲೋಮೀಟರ್ ದೂರದಲ್ಲಿದೆ.
    • ಆಯಕಟ್ಟಿನ ಸ್ಥಳ: ಅಫ್ಘಾನಿಸ್ತಾನದ ‘ಹಾಜಿಗಕ್’ ಕಬ್ಬಿಣದ ಗಣಿಗೆ ಹಾಗೂ ಕಝಾಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನಂತಹ ಮಧ್ಯ ಏಷ್ಯಾದ ದೇಶಗಳ ನೈಸರ್ಗಿಕ ಸಂಪನ್ಮೂಲಗಳನ್ನು ತಲುಪಲು ಭಾರತಕ್ಕೆ ಚಾಬಹಾರ್ ಬಂದರು ಅತ್ಯಂತ ಪ್ರಮುಖ ಸಂಪರ್ಕ ಮಾರ್ಗವನ್ನು ಕಲ್ಪಿಸುತ್ತದೆ.
    • ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಂಚಾರ ಪಥ (International North-South Transport Corridor): ಹಿಂದೂ ಮಹಾಸಾಗರವನ್ನು ಉತ್ತರ ಯುರೋಪ್‌ಗೆ ಸಂಪರ್ಕಿಸುವ ಬಹು-ಮಾದರಿ ಸಾರಿಗೆ ಯೋಜನೆಯಾದ INSTC ಯ ಪ್ರಮುಖ ಭಾಗವಾಗಿ ಈ ಬಂದರು ಕಾರ್ಯನಿರ್ವಹಿಸುತ್ತಿದೆ.
  • ಭಾರತದ ಮೊದಲ ರಾಜ್ಯ-ನೇತೃತ್ವದ ಬಾಹ್ಯಾಕಾಶ ತಂತ್ರಜ್ಞಾನ ಇನ್ಕ್ಯುಬೇಟರ್ : ಬೆಂಗಳೂರು

    ಭಾರತದ ಮೊದಲ ರಾಜ್ಯ-ನೇತೃತ್ವದ ಬಾಹ್ಯಾಕಾಶ ತಂತ್ರಜ್ಞಾನ ಇನ್ಕ್ಯುಬೇಟರ್ : ಬೆಂಗಳೂರು

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಬಾಹ್ಯಾಕಾಶ ತಂತ್ರಜ್ಞಾನಕ್ಕಾಗಿ ಭಾರತದ ಮೊದಲ ರಾಜ್ಯ-ನೇತೃತ್ವದ ‘ಉತ್ಕೃಷ್ಟತಾ ಕೇಂದ್ರ’ವಾಗಿ (Centre of Excellence) ಕಾರ್ಯನಿರ್ವಹಿಸಲು ಕರ್ನಾಟಕವು ಬೆಂಗಳೂರಿನಲ್ಲಿ ‘CoE ಸ್ಪೇಸ್ ಟೆಕ್ ಫೌಂಡೇಶನ್’ ಅನ್ನು ಪ್ರಾರಂಭಿಸಿದೆ.

    ಈ ಉತ್ಕೃಷ್ಟತಾ ಕೇಂದ್ರದ (CoE) ಬಗ್ಗೆ:

    • ಸ್ಥಳ: ಏರೋಸ್ಪೇಸ್ ಪಾರ್ಕ್, ಬೆಂಗಳೂರು.
    • ಪ್ರಾರಂಭಿಸಿದವರು: ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸಂಸ್ಥೆ(KITS) ಹಾಗೂ ಸ್ಯಾಟ್‌ಕಾಮ್ ಕೈಗಾರಿಕಾ ಸಂಘಟನೆ (SIA-India).
    • ಗುರಿ: ಡೀಪ್-ಟೆಕ್ ಬಾಹ್ಯಾಕಾಶ ಆವಿಷ್ಕಾರಗಳನ್ನು ವಾಣಿಜ್ಯಕರಣಗೊಳಿಸುವುದು ಮತ್ತು ಅವುಗಳನ್ನು ಬೃಹತ್ ಮಟ್ಟದ ವ್ಯವಹಾರಗಳಾಗಿ ಬೆಳೆಸುವುದು.
    • ಗಮನಹರಿಸುವ ಕ್ಷೇತ್ರಗಳು: ಇದು ನವೋದ್ಯಮಗಳಿಗೆ (ಸ್ಟಾರ್ಟ್ ಅಪ್) ಇನ್ಕ್ಯುಬೇಶನ್ ಸೌಲಭ್ಯ ಒದಗಿಸುತ್ತದೆ, ಪ್ರತಿಭೆಗಳಿಗೆ ತರಬೇತಿ ನೀಡುತ್ತದೆ ಮತ್ತು ಕೃಷಿ, ಹವಾಮಾನ ಹಾಗೂ ರಕ್ಷಣಾ ಕ್ಷೇತ್ರಗಳ ಸಮಸ್ಯೆಗಳಿಗೆ ವಿವಿಧ ವಲಯಗಳನ್ನು ಒಳಗೊಂಡ ಪರಿಹಾರಗಳನ್ನು ರೂಪಿಸುತ್ತದೆ.
  • ಪರಿಸರ ಹತ್ಯೆ/ ಎಕೋಸೈಡ್ (Ecocide) | ವಿಶ್ವ ವಲಸೆ ವರದಿ (World Migration Report), 2026 : IOM | ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA)ದ ಮೊದಲ ಶೃಂಗಸಭೆ: ಭಾರತ ಆತಿಥ್ಯ | ಸಮಗ್ರ ಶಿಕ್ಷಣ ಯೋಜನೆ | ಮಿಜೋರಾಂ ಶುಂಠಿ ಮಿಷನ್ (Mizoram Ginger Mission)

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA)ದ ಮೊದಲ ಶೃಂಗಸಭೆ: ಭಾರತ ಆತಿಥ್ಯ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ನವದೆಹಲಿಯಲ್ಲಿ ನಡೆಯಲಿರುವ ‘ಮೊದಲ  ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟದ (IBCA) ಶೃಂಗಸಭೆ 2026′ ರ ಅಧಿಕೃತ ಜಾಲತಾಣ ಮತ್ತು ಲಾಂಛನವನ್ನು ಇತ್ತೀಚಿಗೆ  ಬಿಡುಗಡೆ ಮಾಡಿದರು.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA) ದ ಬಗ್ಗೆ: 

    • ಪ್ರಧಾನ ಕಚೇರಿ: ಭಾರತ.
    • ಉದ್ದೇಶ: ಇದು ದೊಡ್ಡ ಬೆಕ್ಕು (ವನ್ಯ ಮಾರ್ಜಾಲ) ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ಪ್ರಭೇದಗಳು ಕಂಡುಬರುವ ವ್ಯಾಪ್ತಿಯ 95 ದೇಶಗಳ ಬಹು-ರಾಷ್ಟ್ರೀಯ ಹಾಗೂ ಬಹು- ಸಂಸ್ಥೆಗಳ ಒಕ್ಕೂಟವಾಗಿದೆ.
    • ಆರಂಭ:  2023 ರಲ್ಲಿ ‘ಪ್ರಾಜೆಕ್ಟ್ ಟೈಗರ್‌ನ 50 ವರ್ಷಗಳ ಸ್ಮರಣಾರ್ಥ’ ಆಯೋಜಿಸಲಾದ ಕಾರ್ಯಕ್ರಮದ ವೇಳೆ, ಭಾರತದ ಪ್ರಧಾನ ಮಂತ್ರಿಯವರು IBCA ಗೆ ಚಾಲನೆ ನೀಡಿದರು.
    • ಗುರಿ:  ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪೂಮಾ ಎಂಬ ಏಳು ಪ್ರಮುಖ ದೊಡ್ಡ ಬೆಕ್ಕು ಪ್ರಭೇದಗಳನ್ನು ಸಂರಕ್ಷಿಸುವುದು.
    • ಸದಸ್ಯ ರಾಷ್ಟ್ರಗಳು: ನಿಕರಾಗುವಾ, ಈಸ್ವಾತಿನಿ, ಭಾರತ, ಸೊಮಾಲಿಯಾ ಮತ್ತು ಲೈಬೀರಿಯಾ ದೇಶಗಳು ಔಪಚಾರಿಕವಾಗಿ IBCA ನ ಸದಸ್ಯರಾಗಲು ‘ಚೌಕಟ್ಟು ಒಪ್ಪಂದ’ಕ್ಕೆ (Framework Agreement) ಸಹಿ ಹಾಕಿವೆ.

    7 ದೊಡ್ಡ ಬೆಕ್ಕು ಪ್ರಭೇದಗಳ ಸಂರಕ್ಷಣಾ ಸ್ಥಿತಿಗತಿ:

    ದೊಡ್ಡ ಬೆಕ್ಕು ಪ್ರಭೇದಗಳು 

    ದೈಹಿಕ ನೋಟ

    IUCN ಕೆಂಪುಪಟ್ಟಿಯಲ್ಲಿ ಸ್ಥಿತಿಗತಿ

    CITES ಸ್ಥಿತಿಗತಿ

    ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 (ಭಾರತ)

    ಹುಲಿ (ಪ್ಯಾಂಥೆರಾ ಟೈಗ್ರಿಸ್)

     

    ಅಳಿವಿನಂಚಿನಲ್ಲಿರುವ (EN)

    ಅನುಬಂಧ I

    ಅನುಸೂಚಿ 1

    ಸಿಂಹ (ಪ್ಯಾಂಥೆರಾ ಲಿಯೋ)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚಿರತೆ (ಪ್ಯಾಂಥೆರಾ ಪಾರ್ಡಸ್)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಹಿಮ ಚಿರತೆ (ಪ್ಯಾಂಥೆರಾ ಉನ್ಸಿಯಾ)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚೀತಾ (ಅಸಿನೋನಿಕ್ಸ್ ಜುಬಾಟಸ್)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಜಾಗ್ವಾರ್ (ಪ್ಯಾಂಥೆರಾ ಓಂಕಾ)

     

    ಬಹುತೇಕ ಅಳಿವಿನಂಚಿನಲ್ಲಿರುವ (NT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ.

    ಪೂಮಾ (ಪೂಮಾ ಕಾನ್ಕಲರ್)

     

    ಕನಿಷ್ಠ ಕಾಳಜಿ (LT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ.

    (ಹೆಚ್ಚು…)

    ಪರಿಸರ ಹತ್ಯೆ/ ಎಕೋಸೈಡ್ (Ecocide)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಗಾಜಾ, ಲೆಬನಾನ್ ಮತ್ತು ಇರಾನ್ ದೇಶಗಳಲ್ಲಿ ಇತ್ತೀಚೆಗೆ ನಡೆದ ಯುದ್ಧಗಳ ಸಮಯದಲ್ಲಿ ಉಂಟಾದ ಬೃಹತ್ ಪ್ರಮಾಣದ ಪರಿಸರ ನಾಶದ ಆರೋಪಗಳ ಹಿನ್ನೆಲೆಯಲ್ಲಿ, “ಪರಿಸರ ಹತ್ಯೆ” (Ecocide) ಎಂಬ ಪದವು ಜಾಗತಿಕವಾಗಿ ಮತ್ತೆ ವ್ಯಾಪಕ ಗಮನ ಸೆಳೆದಿದೆ.

    ಪರಿಸರ ಹತ್ಯೆ (Ecocide) ಬಗ್ಗೆ:

    • ಮಾನವನ ಬೇಜವಾಬ್ದಾರಿಯುತ ಚಟುವಟಿಕೆಗಳಿಂದ ಉಂಟಾಗುವ ತೀವ್ರವಾದ, ವ್ಯಾಪಕವಾದ ಅಥವಾ ದೀರ್ಘಕಾಲೀನ ಪರಿಸರ ವಿನಾಶವನ್ನು ಪರಿಸರ ಹತ್ಯೆ ಎಂದು ಕರೆಯಲಾಗುತ್ತದೆ.
    • ಈ ಪದವನ್ನು 1970 ರಲ್ಲಿ ಆರ್ಥರ್ ಡಬ್ಲ್ಯೂ. ಗಾಲ್‌ಸ್ಟನ್ (Arthur W. Galston) ಅವರು ಮೊದಲ ಬಾರಿಗೆ ಬಳಸಿದರು.
    • ಗಮನಿಸಿ: 1990 ರಲ್ಲಿ ತನ್ನ ದೇಶದ ಕಾನೂನಿನ ಅಡಿಯಲ್ಲಿ ಪರಿಸರ ಹತ್ಯೆಯನ್ನು ‘ಅಪರಾಧ’ ಎಂದು ಘೋಷಿಸಿದ ವಿಶ್ವದ ಮೊಟ್ಟಮೊದಲ ದೇಶ ವಿಯೆಟ್ನಾಂ.

    ಪರಿಸರಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ಕಾನೂನುಗಳು:

    1. ಹವಾಮಾನ ಬದಲಾವಣೆ ಮತ್ತು ಓಝೋನ್:
    • UNFCCC (1992): ಇದು ವಾತಾವರಣದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಿಸಿ ಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ಪ್ರಮುಖ ಮೂಲಭೂತ ಚೌಕಟ್ಟಾಗಿದೆ.
    • ಕ್ಯೋಟೋ ಶಿಷ್ಟಾಚಾರ (Kyoto Protocol), 1997: ಇದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಕಾನೂನುಬದ್ಧವಾಗಿ ಕಡ್ಡಾಯವಾದ ಹೊರಸೂಸುವಿಕೆ ಕಡಿತದ ಗುರಿಗಳನ್ನು ನಿಗದಿಪಡಿಸಿತು ಮತ್ತು “ಕ್ಲೀನ್ ಡೆವಲಪ್‌ಮೆಂಟ್ ಮೆಕ್ಯಾನಿಸಂ” (CDM) ಹಾಗೂ “ಹೊರಸೂಸುವಿಕೆ ವ್ಯಾಪಾರ”ದಂತಹ ಮಾರುಕಟ್ಟೆ ವ್ಯವಸ್ಥೆಗಳನ್ನು ಸ್ಥಾಪಿಸಿತು.
    • ಪ್ಯಾರಿಸ್ ಒಪ್ಪಂದ (Paris Agreement), 2015: ಇದು ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 2°C ಗಿಂತ ಗಮನಾರ್ಹವಾಗಿ ಕಡಿಮೆ (ಸಾಧ್ಯವಾದರೆ 1.5°C ಗೆ ಸೀಮಿತಗೊಳಿಸುವ ಶ್ರಮ) ಇರಿಸುವ ಗುರಿ ಹೊಂದಿರುವ ಕಾನೂನುಬದ್ಧ ಒಪ್ಪಂದವಾಗಿದೆ. ಇದಕ್ಕೆ ದೇಶಗಳು ತಮ್ಮ ‘ರಾಷ್ಟ್ರೀಯವಾಗಿ ನಿರ್ಧರಿಸಲಾದ ಕೊಡುಗೆಗಳನ್ನು’ (NDCs) ಬಳಸಿಕೊಳ್ಳಬೇಕು.
    • ಮಾಂಟ್ರಿಯಲ್ ಶಿಷ್ಟಾಚಾರ (Montreal Protocol), 1987: “ಓಝೋನ್ ಪದರಕ್ಕೆ ಹಾನಿ ಮಾಡುವ ವಸ್ತುಗಳ” (ODS) ಬಳಕೆಯನ್ನು ಹಂತಹಂತವಾಗಿ ಕಡಿತಗೊಳಿಸಿದ ಅತ್ಯಂತ ಯಶಸ್ವಿ, ಕಾನೂನುಬದ್ಧ ಒಪ್ಪಂದವಾಗಿದೆ. 
    1. ಇದರ ಕಿಗಾಲಿ ತಿದ್ದುಪಡಿಯು (Kigali Amendment – 2016) ಪರಿಸರಕ್ಕೆ ಮಾರಕವಾದ ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಬಳಕೆಯನ್ನು ಹಂತಹಂತವಾಗಿ ಕಡಿತಗೊಳಿಸುವುದನ್ನು ಕಡ್ಡಾಯಗೊಳಿಸುತ್ತದೆ.
    1. ಜೀವ ವೈವಿಧ್ಯತೆ ಮತ್ತು ವನ್ಯಜೀವಿ:
    • ಜೈವಿಕ ವೈವಿಧ್ಯತೆಯ ಸಮಾವೇಶ (CBD): ಇದು ಜೈವಿಕ ವೈವಿಧ್ಯತೆಯ ಸಂರಕ್ಷಣೆ, ಅದರ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ಆ ಸಂಪನ್ಮೂಲಗಳಿಂದ ಸಿಗುವ ಪ್ರಯೋಜನಗಳ ನ್ಯಾಯಸಮ್ಮತ ಹಂಚಿಕೆಯನ್ನು ಗುರಿಯಾಗಿಸಿಕೊಂಡಿದೆ. ಇದು “ಕಾರ್ಟಜೆನಾ ಶಿಷ್ಟಾಚಾರ” (ಜೈವಿಕ ಸುರಕ್ಷತೆ) ಮತ್ತು “ನಗೋಯಾ ಶಿಷ್ಟಾಚಾರ”ಗಳನ್ನು (ಸಂಪನ್ಮೂಲಗಳ ಪ್ರವೇಶ ಮತ್ತು ಪ್ರಯೋಜನ ಹಂಚಿಕೆ) ಒಳಗೊಂಡಿದೆ.
    • ಸೈಟ್ಸ್ (CITES – 1973): ಅಳಿವಿನಂಚಿನಲ್ಲಿರುವ ಪ್ರಾಣಿವರ್ಗ ಮತ್ತು ಸಸ್ಯವರ್ಗಗಳ ಉಳಿವಿಗೆ ಧಕ್ಕೆ ಬಾರದಂತೆ, ಅವುಗಳ ಅಂತರರಾಷ್ಟ್ರೀಯ ವ್ಯಾಪಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ.
    • ರಾಮ್ಸರ್ ಸಮಾವೇಶ, 1971: ಅಂತರರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ಜೌಗು ಅಥವಾ ತೇವಭೂಮಿಗಳ ಸಂರಕ್ಷಣೆ ಮತ್ತು ಅವುಗಳ ವಿವೇಕಯುತ ಬಳಕೆಯ ಮೇಲೆ ಕೇಂದ್ರೀಕರಿಸುತ್ತದೆ.
    1. ಅಪಾಯಕಾರಿ ತ್ಯಾಜ್ಯಗಳು ಮತ್ತು ರಾಸಾಯನಿಕಗಳು:
    • ಬಾಸೆಲ್ ಸಮಾವೇಶ (Basel Convention), 1989: ಅಪಾಯಕಾರಿ ತ್ಯಾಜ್ಯಗಳ ಗಡಿಯಾಚೆಗಿನ ಸಾಗಣೆ ಮತ್ತು ಅವುಗಳ ಸುರಕ್ಷಿತ ವಿಲೇವಾರಿಯನ್ನು ನಿಯಂತ್ರಿಸುತ್ತದೆ.
    • ರೋಟರ್‌ಡ್ಯಾಮ್ ಸಮಾವೇಶ, 1998: ಕೆಲವು ನಿರ್ದಿಷ್ಟ ಅಪಾಯಕಾರಿ ರಾಸಾಯನಿಕಗಳ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ತೊಡಗಿರುವ ದೇಶಗಳ ನಡುವೆ ಜವಾಬ್ದಾರಿಯ ಹಂಚಿಕೆ ಮತ್ತು ಜಂಟಿ ಸಹಕಾರವನ್ನು ಉತ್ತೇಜಿಸುತ್ತದೆ.
    • ಸ್ಟಾಕ್ಹೋಮ್ ಸಮಾವೇಶ (Stockholm Convention), 2001: ಪರಿಸರದಲ್ಲಿ ದೀರ್ಘಕಾಲ ಉಳಿಯುವ “ನಿರಂತರ ಸಾವಯವ ಮಾಲಿನ್ಯಕಾರಕಗಳ” (Persistent Organic Pollutants – POPs) ಉತ್ಪಾದನೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಅಥವಾ ನಿರ್ಬಂಧಿಸುವ ಗುರಿಯನ್ನು ಹೊಂದಿದೆ.

    ವಿಶ್ವ ವಲಸೆ ವರದಿ (World Migration Report), 2026 : IOM

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ಅಂತರರಾಷ್ಟ್ರೀಯ ವಲಸೆ ಸಂಸ್ಥೆಯು (International Organization for Migration) ‘ವಿಶ್ವ ವಲಸೆ ವರದಿ 2026’ ಅನ್ನು ಬಿಡುಗಡೆ ಮಾಡಿದೆ.

    ವರದಿಯ ಪ್ರಮುಖ ಅಂಶಗಳು:

    • 1990 ರಲ್ಲಿ ಜಾಗತಿಕ ಜನಸಂಖ್ಯೆಯ 2.9% ರಷ್ಟಿದ್ದ ಅಂತರರಾಷ್ಟ್ರೀಯ ವಲಸಿಗರ ಪ್ರಮಾಣವು 2024 ರ ಹೊತ್ತಿಗೆ 3.7% ಕ್ಕೆ ಏರಿಕೆಯಾಗಿದೆ.
    • ಜಾಗತಿಕವಾಗಿ ಅತಿದೊಡ್ಡ ‘ವಲಸೆ ಮಾರ್ಗ’ (ಕಾರಿಡಾರ್) ಆಗಿ ‘ಮೆಕ್ಸಿಕೋ-ಅಮೆರಿಕಾ ಸಂಯುಕ್ತ ಸಂಸ್ಥಾನ (ಯುಎಸ್) ವಲಸೆ ಮಾರ್ಗ’ ಮುಂದುವರಿದಿದ್ದು, ಇದು ಸುಮಾರು 11 ಮಿಲಿಯನ್ ವಲಸಿಗರನ್ನು ಒಳಗೊಂಡಿದೆ.
    • ಇತರ ಪ್ರಮುಖ ವಲಸೆ ಮಾರ್ಗಗಳು: ಅಫ್ಘಾನಿಸ್ತಾನ-ಇರಾನ್ ವಲಸೆ ಮಾರ್ಗ, ಸಿರಿಯಾ-ಟರ್ಕಿ ವಲಸೆ ಮಾರ್ಗ ಮತ್ತು ರಷ್ಯಾ-ಉಕ್ರೇನ್ ವಲಸೆ ಮಾರ್ಗ.

    ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM)ಯ ಬಗ್ಗೆ

    • ಇದು ಜಾಗತಿಕ ವಲಸೆ ಪ್ರಕ್ರಿಯೆಯನ್ನು ಸುಗಮವಾಗಿ ನಿರ್ವಹಿಸುವ ವಿಶ್ವಸಂಸ್ಥೆಯ (UN) ಪ್ರಮುಖ ಸಂಸ್ಥೆಯಾಗಿದೆ.
    • ಸ್ಥಾಪನೆ: 1951
    • ಕೇಂದ್ರ ಕಚೇರಿ: ಜಿನೀವಾ, ಸ್ವಿಟ್ಜರ್ಲೆಂಡ್.
    • ಉದ್ದೇಶ: ಇದು ಮಾನವೀಯ ಮತ್ತು ಸುವ್ಯವಸ್ಥಿತ ವಲಸೆಯನ್ನು ಉತ್ತೇಜಿಸುತ್ತದೆ; ಹಾಗೂ ವಲಸಿಗರು, ನಿರಾಶ್ರಿತರು ಮತ್ತು ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಅಗತ್ಯ ಮಾನವೀಯ ನೆರವು ನೀಡುತ್ತದೆ.
    • ಭಾರತವು 2008 ರಿಂದ IOM ನ ಅಧಿಕೃತ ಸದಸ್ಯ ರಾಷ್ಟ್ರವಾಗಿ ಗುರುತಿಸಿಕೊಂಡಿದೆ.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA)ದ ಮೊದಲ ಶೃಂಗಸಭೆ: ಭಾರತ ಆತಿಥ್ಯ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ನವದೆಹಲಿಯಲ್ಲಿ ನಡೆಯಲಿರುವ ‘ಮೊದಲ  ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟದ (IBCA) ಶೃಂಗಸಭೆ 2026′ ರ ಅಧಿಕೃತ ಜಾಲತಾಣ ಮತ್ತು ಲಾಂಛನವನ್ನು ಇತ್ತೀಚಿಗೆ  ಬಿಡುಗಡೆ ಮಾಡಿದರು.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA) ದ ಬಗ್ಗೆ: 

    • ಪ್ರಧಾನ ಕಚೇರಿ: ಭಾರತ.
    • ಉದ್ದೇಶ: ಇದು ದೊಡ್ಡ ಬೆಕ್ಕು (ವನ್ಯ ಮಾರ್ಜಾಲ) ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ಪ್ರಭೇದಗಳು ಕಂಡುಬರುವ ವ್ಯಾಪ್ತಿಯ 95 ದೇಶಗಳ ಬಹು-ರಾಷ್ಟ್ರೀಯ ಹಾಗೂ ಬಹು- ಸಂಸ್ಥೆಗಳ ಒಕ್ಕೂಟವಾಗಿದೆ.
    • ಆರಂಭ:  2023 ರಲ್ಲಿ ‘ಪ್ರಾಜೆಕ್ಟ್ ಟೈಗರ್‌ನ 50 ವರ್ಷಗಳ ಸ್ಮರಣಾರ್ಥ’ ಆಯೋಜಿಸಲಾದ ಕಾರ್ಯಕ್ರಮದ ವೇಳೆ, ಭಾರತದ ಪ್ರಧಾನ ಮಂತ್ರಿಯವರು IBCA ಗೆ ಚಾಲನೆ ನೀಡಿದರು.
    • ಗುರಿ:  ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪೂಮಾ ಎಂಬ ಏಳು ಪ್ರಮುಖ ದೊಡ್ಡ ಬೆಕ್ಕು ಪ್ರಭೇದಗಳನ್ನು ಸಂರಕ್ಷಿಸುವುದು.
    • ಸದಸ್ಯ ರಾಷ್ಟ್ರಗಳು: ನಿಕರಾಗುವಾ, ಈಸ್ವಾತಿನಿ, ಭಾರತ, ಸೊಮಾಲಿಯಾ ಮತ್ತು ಲೈಬೀರಿಯಾ ದೇಶಗಳು ಔಪಚಾರಿಕವಾಗಿ IBCA ನ ಸದಸ್ಯರಾಗಲು ‘ಚೌಕಟ್ಟು ಒಪ್ಪಂದ’ಕ್ಕೆ (Framework Agreement) ಸಹಿ ಹಾಕಿವೆ.

    7 ದೊಡ್ಡ ಬೆಕ್ಕು ಪ್ರಭೇದಗಳ ಸಂರಕ್ಷಣಾ ಸ್ಥಿತಿಗತಿ:

    ದೊಡ್ಡ ಬೆಕ್ಕು ಪ್ರಭೇದಗಳು 

    ದೈಹಿಕ ನೋಟ

    IUCN ಕೆಂಪುಪಟ್ಟಿಯಲ್ಲಿ ಸ್ಥಿತಿಗತಿ

    CITES ಸ್ಥಿತಿಗತಿ

    ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 (ಭಾರತ)

    ಹುಲಿ (ಪ್ಯಾಂಥೆರಾ ಟೈಗ್ರಿಸ್)

     

    ಅಳಿವಿನಂಚಿನಲ್ಲಿರುವ (EN)

    ಅನುಬಂಧ I

    ಅನುಸೂಚಿ 1

    ಸಿಂಹ (ಪ್ಯಾಂಥೆರಾ ಲಿಯೋ)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚಿರತೆ (ಪ್ಯಾಂಥೆರಾ ಪಾರ್ಡಸ್)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಹಿಮ ಚಿರತೆ (ಪ್ಯಾಂಥೆರಾ ಉನ್ಸಿಯಾ)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚೀತಾ (ಅಸಿನೋನಿಕ್ಸ್ ಜುಬಾಟಸ್)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಜಾಗ್ವಾರ್ (ಪ್ಯಾಂಥೆರಾ ಓಂಕಾ)

     

    ಬಹುತೇಕ ಅಳಿವಿನಂಚಿನಲ್ಲಿರುವ (NT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ.

    ಪೂಮಾ (ಪೂಮಾ ಕಾನ್ಕಲರ್)

     

    ಕನಿಷ್ಠ ಕಾಳಜಿ (LT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ.

    (ಹೆಚ್ಚು…)

    ಪರಿಸರ ಹತ್ಯೆ/ ಎಕೋಸೈಡ್ (Ecocide)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಗಾಜಾ, ಲೆಬನಾನ್ ಮತ್ತು ಇರಾನ್ ದೇಶಗಳಲ್ಲಿ ಇತ್ತೀಚೆಗೆ ನಡೆದ ಯುದ್ಧಗಳ ಸಮಯದಲ್ಲಿ ಉಂಟಾದ ಬೃಹತ್ ಪ್ರಮಾಣದ ಪರಿಸರ ನಾಶದ ಆರೋಪಗಳ ಹಿನ್ನೆಲೆಯಲ್ಲಿ, “ಪರಿಸರ ಹತ್ಯೆ” (Ecocide) ಎಂಬ ಪದವು ಜಾಗತಿಕವಾಗಿ ಮತ್ತೆ ವ್ಯಾಪಕ ಗಮನ ಸೆಳೆದಿದೆ.

    ಪರಿಸರ ಹತ್ಯೆ (Ecocide) ಬಗ್ಗೆ:

    • ಮಾನವನ ಬೇಜವಾಬ್ದಾರಿಯುತ ಚಟುವಟಿಕೆಗಳಿಂದ ಉಂಟಾಗುವ ತೀವ್ರವಾದ, ವ್ಯಾಪಕವಾದ ಅಥವಾ ದೀರ್ಘಕಾಲೀನ ಪರಿಸರ ವಿನಾಶವನ್ನು ಪರಿಸರ ಹತ್ಯೆ ಎಂದು ಕರೆಯಲಾಗುತ್ತದೆ.
    • ಈ ಪದವನ್ನು 1970 ರಲ್ಲಿ ಆರ್ಥರ್ ಡಬ್ಲ್ಯೂ. ಗಾಲ್‌ಸ್ಟನ್ (Arthur W. Galston) ಅವರು ಮೊದಲ ಬಾರಿಗೆ ಬಳಸಿದರು.
    • ಗಮನಿಸಿ: 1990 ರಲ್ಲಿ ತನ್ನ ದೇಶದ ಕಾನೂನಿನ ಅಡಿಯಲ್ಲಿ ಪರಿಸರ ಹತ್ಯೆಯನ್ನು ‘ಅಪರಾಧ’ ಎಂದು ಘೋಷಿಸಿದ ವಿಶ್ವದ ಮೊಟ್ಟಮೊದಲ ದೇಶ ವಿಯೆಟ್ನಾಂ.

    ಪರಿಸರಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ಕಾನೂನುಗಳು:

    1. ಹವಾಮಾನ ಬದಲಾವಣೆ ಮತ್ತು ಓಝೋನ್:
    • UNFCCC (1992): ಇದು ವಾತಾವರಣದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಿಸಿ ಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ಪ್ರಮುಖ ಮೂಲಭೂತ ಚೌಕಟ್ಟಾಗಿದೆ.
    • ಕ್ಯೋಟೋ ಶಿಷ್ಟಾಚಾರ (Kyoto Protocol), 1997: ಇದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಕಾನೂನುಬದ್ಧವಾಗಿ ಕಡ್ಡಾಯವಾದ ಹೊರಸೂಸುವಿಕೆ ಕಡಿತದ ಗುರಿಗಳನ್ನು ನಿಗದಿಪಡಿಸಿತು ಮತ್ತು “ಕ್ಲೀನ್ ಡೆವಲಪ್‌ಮೆಂಟ್ ಮೆಕ್ಯಾನಿಸಂ” (CDM) ಹಾಗೂ “ಹೊರಸೂಸುವಿಕೆ ವ್ಯಾಪಾರ”ದಂತಹ ಮಾರುಕಟ್ಟೆ ವ್ಯವಸ್ಥೆಗಳನ್ನು ಸ್ಥಾಪಿಸಿತು.
    • ಪ್ಯಾರಿಸ್ ಒಪ್ಪಂದ (Paris Agreement), 2015: ಇದು ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 2°C ಗಿಂತ ಗಮನಾರ್ಹವಾಗಿ ಕಡಿಮೆ (ಸಾಧ್ಯವಾದರೆ 1.5°C ಗೆ ಸೀಮಿತಗೊಳಿಸುವ ಶ್ರಮ) ಇರಿಸುವ ಗುರಿ ಹೊಂದಿರುವ ಕಾನೂನುಬದ್ಧ ಒಪ್ಪಂದವಾಗಿದೆ. ಇದಕ್ಕೆ ದೇಶಗಳು ತಮ್ಮ ‘ರಾಷ್ಟ್ರೀಯವಾಗಿ ನಿರ್ಧರಿಸಲಾದ ಕೊಡುಗೆಗಳನ್ನು’ (NDCs) ಬಳಸಿಕೊಳ್ಳಬೇಕು.
    • ಮಾಂಟ್ರಿಯಲ್ ಶಿಷ್ಟಾಚಾರ (Montreal Protocol), 1987: “ಓಝೋನ್ ಪದರಕ್ಕೆ ಹಾನಿ ಮಾಡುವ ವಸ್ತುಗಳ” (ODS) ಬಳಕೆಯನ್ನು ಹಂತಹಂತವಾಗಿ ಕಡಿತಗೊಳಿಸಿದ ಅತ್ಯಂತ ಯಶಸ್ವಿ, ಕಾನೂನುಬದ್ಧ ಒಪ್ಪಂದವಾಗಿದೆ. 
    1. ಇದರ ಕಿಗಾಲಿ ತಿದ್ದುಪಡಿಯು (Kigali Amendment – 2016) ಪರಿಸರಕ್ಕೆ ಮಾರಕವಾದ ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಬಳಕೆಯನ್ನು ಹಂತಹಂತವಾಗಿ ಕಡಿತಗೊಳಿಸುವುದನ್ನು ಕಡ್ಡಾಯಗೊಳಿಸುತ್ತದೆ.
    1. ಜೀವ ವೈವಿಧ್ಯತೆ ಮತ್ತು ವನ್ಯಜೀವಿ:
    • ಜೈವಿಕ ವೈವಿಧ್ಯತೆಯ ಸಮಾವೇಶ (CBD): ಇದು ಜೈವಿಕ ವೈವಿಧ್ಯತೆಯ ಸಂರಕ್ಷಣೆ, ಅದರ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ಆ ಸಂಪನ್ಮೂಲಗಳಿಂದ ಸಿಗುವ ಪ್ರಯೋಜನಗಳ ನ್ಯಾಯಸಮ್ಮತ ಹಂಚಿಕೆಯನ್ನು ಗುರಿಯಾಗಿಸಿಕೊಂಡಿದೆ. ಇದು “ಕಾರ್ಟಜೆನಾ ಶಿಷ್ಟಾಚಾರ” (ಜೈವಿಕ ಸುರಕ್ಷತೆ) ಮತ್ತು “ನಗೋಯಾ ಶಿಷ್ಟಾಚಾರ”ಗಳನ್ನು (ಸಂಪನ್ಮೂಲಗಳ ಪ್ರವೇಶ ಮತ್ತು ಪ್ರಯೋಜನ ಹಂಚಿಕೆ) ಒಳಗೊಂಡಿದೆ.
    • ಸೈಟ್ಸ್ (CITES – 1973): ಅಳಿವಿನಂಚಿನಲ್ಲಿರುವ ಪ್ರಾಣಿವರ್ಗ ಮತ್ತು ಸಸ್ಯವರ್ಗಗಳ ಉಳಿವಿಗೆ ಧಕ್ಕೆ ಬಾರದಂತೆ, ಅವುಗಳ ಅಂತರರಾಷ್ಟ್ರೀಯ ವ್ಯಾಪಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ.
    • ರಾಮ್ಸರ್ ಸಮಾವೇಶ, 1971: ಅಂತರರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ಜೌಗು ಅಥವಾ ತೇವಭೂಮಿಗಳ ಸಂರಕ್ಷಣೆ ಮತ್ತು ಅವುಗಳ ವಿವೇಕಯುತ ಬಳಕೆಯ ಮೇಲೆ ಕೇಂದ್ರೀಕರಿಸುತ್ತದೆ.
    1. ಅಪಾಯಕಾರಿ ತ್ಯಾಜ್ಯಗಳು ಮತ್ತು ರಾಸಾಯನಿಕಗಳು:
    • ಬಾಸೆಲ್ ಸಮಾವೇಶ (Basel Convention), 1989: ಅಪಾಯಕಾರಿ ತ್ಯಾಜ್ಯಗಳ ಗಡಿಯಾಚೆಗಿನ ಸಾಗಣೆ ಮತ್ತು ಅವುಗಳ ಸುರಕ್ಷಿತ ವಿಲೇವಾರಿಯನ್ನು ನಿಯಂತ್ರಿಸುತ್ತದೆ.
    • ರೋಟರ್‌ಡ್ಯಾಮ್ ಸಮಾವೇಶ, 1998: ಕೆಲವು ನಿರ್ದಿಷ್ಟ ಅಪಾಯಕಾರಿ ರಾಸಾಯನಿಕಗಳ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ತೊಡಗಿರುವ ದೇಶಗಳ ನಡುವೆ ಜವಾಬ್ದಾರಿಯ ಹಂಚಿಕೆ ಮತ್ತು ಜಂಟಿ ಸಹಕಾರವನ್ನು ಉತ್ತೇಜಿಸುತ್ತದೆ.
    • ಸ್ಟಾಕ್ಹೋಮ್ ಸಮಾವೇಶ (Stockholm Convention), 2001: ಪರಿಸರದಲ್ಲಿ ದೀರ್ಘಕಾಲ ಉಳಿಯುವ “ನಿರಂತರ ಸಾವಯವ ಮಾಲಿನ್ಯಕಾರಕಗಳ” (Persistent Organic Pollutants – POPs) ಉತ್ಪಾದನೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಅಥವಾ ನಿರ್ಬಂಧಿಸುವ ಗುರಿಯನ್ನು ಹೊಂದಿದೆ.

    ವಿಶ್ವ ವಲಸೆ ವರದಿ (World Migration Report), 2026 : IOM

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ಅಂತರರಾಷ್ಟ್ರೀಯ ವಲಸೆ ಸಂಸ್ಥೆಯು (International Organization for Migration) ‘ವಿಶ್ವ ವಲಸೆ ವರದಿ 2026’ ಅನ್ನು ಬಿಡುಗಡೆ ಮಾಡಿದೆ.

    ವರದಿಯ ಪ್ರಮುಖ ಅಂಶಗಳು:

    • 1990 ರಲ್ಲಿ ಜಾಗತಿಕ ಜನಸಂಖ್ಯೆಯ 2.9% ರಷ್ಟಿದ್ದ ಅಂತರರಾಷ್ಟ್ರೀಯ ವಲಸಿಗರ ಪ್ರಮಾಣವು 2024 ರ ಹೊತ್ತಿಗೆ 3.7% ಕ್ಕೆ ಏರಿಕೆಯಾಗಿದೆ.
    • ಜಾಗತಿಕವಾಗಿ ಅತಿದೊಡ್ಡ ‘ವಲಸೆ ಮಾರ್ಗ’ (ಕಾರಿಡಾರ್) ಆಗಿ ‘ಮೆಕ್ಸಿಕೋ-ಅಮೆರಿಕಾ ಸಂಯುಕ್ತ ಸಂಸ್ಥಾನ (ಯುಎಸ್) ವಲಸೆ ಮಾರ್ಗ’ ಮುಂದುವರಿದಿದ್ದು, ಇದು ಸುಮಾರು 11 ಮಿಲಿಯನ್ ವಲಸಿಗರನ್ನು ಒಳಗೊಂಡಿದೆ.
    • ಇತರ ಪ್ರಮುಖ ವಲಸೆ ಮಾರ್ಗಗಳು: ಅಫ್ಘಾನಿಸ್ತಾನ-ಇರಾನ್ ವಲಸೆ ಮಾರ್ಗ, ಸಿರಿಯಾ-ಟರ್ಕಿ ವಲಸೆ ಮಾರ್ಗ ಮತ್ತು ರಷ್ಯಾ-ಉಕ್ರೇನ್ ವಲಸೆ ಮಾರ್ಗ.

    ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM)ಯ ಬಗ್ಗೆ

    • ಇದು ಜಾಗತಿಕ ವಲಸೆ ಪ್ರಕ್ರಿಯೆಯನ್ನು ಸುಗಮವಾಗಿ ನಿರ್ವಹಿಸುವ ವಿಶ್ವಸಂಸ್ಥೆಯ (UN) ಪ್ರಮುಖ ಸಂಸ್ಥೆಯಾಗಿದೆ.
    • ಸ್ಥಾಪನೆ: 1951
    • ಕೇಂದ್ರ ಕಚೇರಿ: ಜಿನೀವಾ, ಸ್ವಿಟ್ಜರ್ಲೆಂಡ್.
    • ಉದ್ದೇಶ: ಇದು ಮಾನವೀಯ ಮತ್ತು ಸುವ್ಯವಸ್ಥಿತ ವಲಸೆಯನ್ನು ಉತ್ತೇಜಿಸುತ್ತದೆ; ಹಾಗೂ ವಲಸಿಗರು, ನಿರಾಶ್ರಿತರು ಮತ್ತು ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಅಗತ್ಯ ಮಾನವೀಯ ನೆರವು ನೀಡುತ್ತದೆ.
    • ಭಾರತವು 2008 ರಿಂದ IOM ನ ಅಧಿಕೃತ ಸದಸ್ಯ ರಾಷ್ಟ್ರವಾಗಿ ಗುರುತಿಸಿಕೊಂಡಿದೆ.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA)ದ ಮೊದಲ ಶೃಂಗಸಭೆ: ಭಾರತ ಆತಿಥ್ಯ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ನವದೆಹಲಿಯಲ್ಲಿ ನಡೆಯಲಿರುವ ‘ಮೊದಲ  ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟದ (IBCA) ಶೃಂಗಸಭೆ 2026′ ರ ಅಧಿಕೃತ ಜಾಲತಾಣ ಮತ್ತು ಲಾಂಛನವನ್ನು ಇತ್ತೀಚಿಗೆ  ಬಿಡುಗಡೆ ಮಾಡಿದರು.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA) ದ ಬಗ್ಗೆ: 

    • ಪ್ರಧಾನ ಕಚೇರಿ: ಭಾರತ.
    • ಉದ್ದೇಶ: ಇದು ದೊಡ್ಡ ಬೆಕ್ಕು (ವನ್ಯ ಮಾರ್ಜಾಲ) ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ಪ್ರಭೇದಗಳು ಕಂಡುಬರುವ ವ್ಯಾಪ್ತಿಯ 95 ದೇಶಗಳ ಬಹು-ರಾಷ್ಟ್ರೀಯ ಹಾಗೂ ಬಹು- ಸಂಸ್ಥೆಗಳ ಒಕ್ಕೂಟವಾಗಿದೆ.
    • ಆರಂಭ:  2023 ರಲ್ಲಿ ‘ಪ್ರಾಜೆಕ್ಟ್ ಟೈಗರ್‌ನ 50 ವರ್ಷಗಳ ಸ್ಮರಣಾರ್ಥ’ ಆಯೋಜಿಸಲಾದ ಕಾರ್ಯಕ್ರಮದ ವೇಳೆ, ಭಾರತದ ಪ್ರಧಾನ ಮಂತ್ರಿಯವರು IBCA ಗೆ ಚಾಲನೆ ನೀಡಿದರು.
    • ಗುರಿ:  ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪೂಮಾ ಎಂಬ ಏಳು ಪ್ರಮುಖ ದೊಡ್ಡ ಬೆಕ್ಕು ಪ್ರಭೇದಗಳನ್ನು ಸಂರಕ್ಷಿಸುವುದು.
    • ಸದಸ್ಯ ರಾಷ್ಟ್ರಗಳು: ನಿಕರಾಗುವಾ, ಈಸ್ವಾತಿನಿ, ಭಾರತ, ಸೊಮಾಲಿಯಾ ಮತ್ತು ಲೈಬೀರಿಯಾ ದೇಶಗಳು ಔಪಚಾರಿಕವಾಗಿ IBCA ನ ಸದಸ್ಯರಾಗಲು ‘ಚೌಕಟ್ಟು ಒಪ್ಪಂದ’ಕ್ಕೆ (Framework Agreement) ಸಹಿ ಹಾಕಿವೆ.

    7 ದೊಡ್ಡ ಬೆಕ್ಕು ಪ್ರಭೇದಗಳ ಸಂರಕ್ಷಣಾ ಸ್ಥಿತಿಗತಿ:

    ದೊಡ್ಡ ಬೆಕ್ಕು ಪ್ರಭೇದಗಳು 

    ದೈಹಿಕ ನೋಟ

    IUCN ಕೆಂಪುಪಟ್ಟಿಯಲ್ಲಿ ಸ್ಥಿತಿಗತಿ

    CITES ಸ್ಥಿತಿಗತಿ

    ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 (ಭಾರತ)

    ಹುಲಿ (ಪ್ಯಾಂಥೆರಾ ಟೈಗ್ರಿಸ್)

     

    ಅಳಿವಿನಂಚಿನಲ್ಲಿರುವ (EN)

    ಅನುಬಂಧ I

    ಅನುಸೂಚಿ 1

    ಸಿಂಹ (ಪ್ಯಾಂಥೆರಾ ಲಿಯೋ)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚಿರತೆ (ಪ್ಯಾಂಥೆರಾ ಪಾರ್ಡಸ್)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಹಿಮ ಚಿರತೆ (ಪ್ಯಾಂಥೆರಾ ಉನ್ಸಿಯಾ)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚೀತಾ (ಅಸಿನೋನಿಕ್ಸ್ ಜುಬಾಟಸ್)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಜಾಗ್ವಾರ್ (ಪ್ಯಾಂಥೆರಾ ಓಂಕಾ)

     

    ಬಹುತೇಕ ಅಳಿವಿನಂಚಿನಲ್ಲಿರುವ (NT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ.

    ಪೂಮಾ (ಪೂಮಾ ಕಾನ್ಕಲರ್)

     

    ಕನಿಷ್ಠ ಕಾಳಜಿ (LT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ.

    (ಹೆಚ್ಚು…)

    ಪರಿಸರ ಹತ್ಯೆ/ ಎಕೋಸೈಡ್ (Ecocide)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಗಾಜಾ, ಲೆಬನಾನ್ ಮತ್ತು ಇರಾನ್ ದೇಶಗಳಲ್ಲಿ ಇತ್ತೀಚೆಗೆ ನಡೆದ ಯುದ್ಧಗಳ ಸಮಯದಲ್ಲಿ ಉಂಟಾದ ಬೃಹತ್ ಪ್ರಮಾಣದ ಪರಿಸರ ನಾಶದ ಆರೋಪಗಳ ಹಿನ್ನೆಲೆಯಲ್ಲಿ, “ಪರಿಸರ ಹತ್ಯೆ” (Ecocide) ಎಂಬ ಪದವು ಜಾಗತಿಕವಾಗಿ ಮತ್ತೆ ವ್ಯಾಪಕ ಗಮನ ಸೆಳೆದಿದೆ.

    ಪರಿಸರ ಹತ್ಯೆ (Ecocide) ಬಗ್ಗೆ:

    • ಮಾನವನ ಬೇಜವಾಬ್ದಾರಿಯುತ ಚಟುವಟಿಕೆಗಳಿಂದ ಉಂಟಾಗುವ ತೀವ್ರವಾದ, ವ್ಯಾಪಕವಾದ ಅಥವಾ ದೀರ್ಘಕಾಲೀನ ಪರಿಸರ ವಿನಾಶವನ್ನು ಪರಿಸರ ಹತ್ಯೆ ಎಂದು ಕರೆಯಲಾಗುತ್ತದೆ.
    • ಈ ಪದವನ್ನು 1970 ರಲ್ಲಿ ಆರ್ಥರ್ ಡಬ್ಲ್ಯೂ. ಗಾಲ್‌ಸ್ಟನ್ (Arthur W. Galston) ಅವರು ಮೊದಲ ಬಾರಿಗೆ ಬಳಸಿದರು.
    • ಗಮನಿಸಿ: 1990 ರಲ್ಲಿ ತನ್ನ ದೇಶದ ಕಾನೂನಿನ ಅಡಿಯಲ್ಲಿ ಪರಿಸರ ಹತ್ಯೆಯನ್ನು ‘ಅಪರಾಧ’ ಎಂದು ಘೋಷಿಸಿದ ವಿಶ್ವದ ಮೊಟ್ಟಮೊದಲ ದೇಶ ವಿಯೆಟ್ನಾಂ.

    ಪರಿಸರಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ಕಾನೂನುಗಳು:

    1. ಹವಾಮಾನ ಬದಲಾವಣೆ ಮತ್ತು ಓಝೋನ್:
    • UNFCCC (1992): ಇದು ವಾತಾವರಣದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಿಸಿ ಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ಪ್ರಮುಖ ಮೂಲಭೂತ ಚೌಕಟ್ಟಾಗಿದೆ.
    • ಕ್ಯೋಟೋ ಶಿಷ್ಟಾಚಾರ (Kyoto Protocol), 1997: ಇದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಕಾನೂನುಬದ್ಧವಾಗಿ ಕಡ್ಡಾಯವಾದ ಹೊರಸೂಸುವಿಕೆ ಕಡಿತದ ಗುರಿಗಳನ್ನು ನಿಗದಿಪಡಿಸಿತು ಮತ್ತು “ಕ್ಲೀನ್ ಡೆವಲಪ್‌ಮೆಂಟ್ ಮೆಕ್ಯಾನಿಸಂ” (CDM) ಹಾಗೂ “ಹೊರಸೂಸುವಿಕೆ ವ್ಯಾಪಾರ”ದಂತಹ ಮಾರುಕಟ್ಟೆ ವ್ಯವಸ್ಥೆಗಳನ್ನು ಸ್ಥಾಪಿಸಿತು.
    • ಪ್ಯಾರಿಸ್ ಒಪ್ಪಂದ (Paris Agreement), 2015: ಇದು ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 2°C ಗಿಂತ ಗಮನಾರ್ಹವಾಗಿ ಕಡಿಮೆ (ಸಾಧ್ಯವಾದರೆ 1.5°C ಗೆ ಸೀಮಿತಗೊಳಿಸುವ ಶ್ರಮ) ಇರಿಸುವ ಗುರಿ ಹೊಂದಿರುವ ಕಾನೂನುಬದ್ಧ ಒಪ್ಪಂದವಾಗಿದೆ. ಇದಕ್ಕೆ ದೇಶಗಳು ತಮ್ಮ ‘ರಾಷ್ಟ್ರೀಯವಾಗಿ ನಿರ್ಧರಿಸಲಾದ ಕೊಡುಗೆಗಳನ್ನು’ (NDCs) ಬಳಸಿಕೊಳ್ಳಬೇಕು.
    • ಮಾಂಟ್ರಿಯಲ್ ಶಿಷ್ಟಾಚಾರ (Montreal Protocol), 1987: “ಓಝೋನ್ ಪದರಕ್ಕೆ ಹಾನಿ ಮಾಡುವ ವಸ್ತುಗಳ” (ODS) ಬಳಕೆಯನ್ನು ಹಂತಹಂತವಾಗಿ ಕಡಿತಗೊಳಿಸಿದ ಅತ್ಯಂತ ಯಶಸ್ವಿ, ಕಾನೂನುಬದ್ಧ ಒಪ್ಪಂದವಾಗಿದೆ. 
    1. ಇದರ ಕಿಗಾಲಿ ತಿದ್ದುಪಡಿಯು (Kigali Amendment – 2016) ಪರಿಸರಕ್ಕೆ ಮಾರಕವಾದ ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಬಳಕೆಯನ್ನು ಹಂತಹಂತವಾಗಿ ಕಡಿತಗೊಳಿಸುವುದನ್ನು ಕಡ್ಡಾಯಗೊಳಿಸುತ್ತದೆ.
    1. ಜೀವ ವೈವಿಧ್ಯತೆ ಮತ್ತು ವನ್ಯಜೀವಿ:
    • ಜೈವಿಕ ವೈವಿಧ್ಯತೆಯ ಸಮಾವೇಶ (CBD): ಇದು ಜೈವಿಕ ವೈವಿಧ್ಯತೆಯ ಸಂರಕ್ಷಣೆ, ಅದರ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ಆ ಸಂಪನ್ಮೂಲಗಳಿಂದ ಸಿಗುವ ಪ್ರಯೋಜನಗಳ ನ್ಯಾಯಸಮ್ಮತ ಹಂಚಿಕೆಯನ್ನು ಗುರಿಯಾಗಿಸಿಕೊಂಡಿದೆ. ಇದು “ಕಾರ್ಟಜೆನಾ ಶಿಷ್ಟಾಚಾರ” (ಜೈವಿಕ ಸುರಕ್ಷತೆ) ಮತ್ತು “ನಗೋಯಾ ಶಿಷ್ಟಾಚಾರ”ಗಳನ್ನು (ಸಂಪನ್ಮೂಲಗಳ ಪ್ರವೇಶ ಮತ್ತು ಪ್ರಯೋಜನ ಹಂಚಿಕೆ) ಒಳಗೊಂಡಿದೆ.
    • ಸೈಟ್ಸ್ (CITES – 1973): ಅಳಿವಿನಂಚಿನಲ್ಲಿರುವ ಪ್ರಾಣಿವರ್ಗ ಮತ್ತು ಸಸ್ಯವರ್ಗಗಳ ಉಳಿವಿಗೆ ಧಕ್ಕೆ ಬಾರದಂತೆ, ಅವುಗಳ ಅಂತರರಾಷ್ಟ್ರೀಯ ವ್ಯಾಪಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ.
    • ರಾಮ್ಸರ್ ಸಮಾವೇಶ, 1971: ಅಂತರರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ಜೌಗು ಅಥವಾ ತೇವಭೂಮಿಗಳ ಸಂರಕ್ಷಣೆ ಮತ್ತು ಅವುಗಳ ವಿವೇಕಯುತ ಬಳಕೆಯ ಮೇಲೆ ಕೇಂದ್ರೀಕರಿಸುತ್ತದೆ.
    1. ಅಪಾಯಕಾರಿ ತ್ಯಾಜ್ಯಗಳು ಮತ್ತು ರಾಸಾಯನಿಕಗಳು:
    • ಬಾಸೆಲ್ ಸಮಾವೇಶ (Basel Convention), 1989: ಅಪಾಯಕಾರಿ ತ್ಯಾಜ್ಯಗಳ ಗಡಿಯಾಚೆಗಿನ ಸಾಗಣೆ ಮತ್ತು ಅವುಗಳ ಸುರಕ್ಷಿತ ವಿಲೇವಾರಿಯನ್ನು ನಿಯಂತ್ರಿಸುತ್ತದೆ.
    • ರೋಟರ್‌ಡ್ಯಾಮ್ ಸಮಾವೇಶ, 1998: ಕೆಲವು ನಿರ್ದಿಷ್ಟ ಅಪಾಯಕಾರಿ ರಾಸಾಯನಿಕಗಳ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ತೊಡಗಿರುವ ದೇಶಗಳ ನಡುವೆ ಜವಾಬ್ದಾರಿಯ ಹಂಚಿಕೆ ಮತ್ತು ಜಂಟಿ ಸಹಕಾರವನ್ನು ಉತ್ತೇಜಿಸುತ್ತದೆ.
    • ಸ್ಟಾಕ್ಹೋಮ್ ಸಮಾವೇಶ (Stockholm Convention), 2001: ಪರಿಸರದಲ್ಲಿ ದೀರ್ಘಕಾಲ ಉಳಿಯುವ “ನಿರಂತರ ಸಾವಯವ ಮಾಲಿನ್ಯಕಾರಕಗಳ” (Persistent Organic Pollutants – POPs) ಉತ್ಪಾದನೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಅಥವಾ ನಿರ್ಬಂಧಿಸುವ ಗುರಿಯನ್ನು ಹೊಂದಿದೆ.

    ವಿಶ್ವ ವಲಸೆ ವರದಿ (World Migration Report), 2026 : IOM

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ಅಂತರರಾಷ್ಟ್ರೀಯ ವಲಸೆ ಸಂಸ್ಥೆಯು (International Organization for Migration) ‘ವಿಶ್ವ ವಲಸೆ ವರದಿ 2026’ ಅನ್ನು ಬಿಡುಗಡೆ ಮಾಡಿದೆ.

    ವರದಿಯ ಪ್ರಮುಖ ಅಂಶಗಳು:

    • 1990 ರಲ್ಲಿ ಜಾಗತಿಕ ಜನಸಂಖ್ಯೆಯ 2.9% ರಷ್ಟಿದ್ದ ಅಂತರರಾಷ್ಟ್ರೀಯ ವಲಸಿಗರ ಪ್ರಮಾಣವು 2024 ರ ಹೊತ್ತಿಗೆ 3.7% ಕ್ಕೆ ಏರಿಕೆಯಾಗಿದೆ.
    • ಜಾಗತಿಕವಾಗಿ ಅತಿದೊಡ್ಡ ‘ವಲಸೆ ಮಾರ್ಗ’ (ಕಾರಿಡಾರ್) ಆಗಿ ‘ಮೆಕ್ಸಿಕೋ-ಅಮೆರಿಕಾ ಸಂಯುಕ್ತ ಸಂಸ್ಥಾನ (ಯುಎಸ್) ವಲಸೆ ಮಾರ್ಗ’ ಮುಂದುವರಿದಿದ್ದು, ಇದು ಸುಮಾರು 11 ಮಿಲಿಯನ್ ವಲಸಿಗರನ್ನು ಒಳಗೊಂಡಿದೆ.
    • ಇತರ ಪ್ರಮುಖ ವಲಸೆ ಮಾರ್ಗಗಳು: ಅಫ್ಘಾನಿಸ್ತಾನ-ಇರಾನ್ ವಲಸೆ ಮಾರ್ಗ, ಸಿರಿಯಾ-ಟರ್ಕಿ ವಲಸೆ ಮಾರ್ಗ ಮತ್ತು ರಷ್ಯಾ-ಉಕ್ರೇನ್ ವಲಸೆ ಮಾರ್ಗ.

    ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM)ಯ ಬಗ್ಗೆ

    • ಇದು ಜಾಗತಿಕ ವಲಸೆ ಪ್ರಕ್ರಿಯೆಯನ್ನು ಸುಗಮವಾಗಿ ನಿರ್ವಹಿಸುವ ವಿಶ್ವಸಂಸ್ಥೆಯ (UN) ಪ್ರಮುಖ ಸಂಸ್ಥೆಯಾಗಿದೆ.
    • ಸ್ಥಾಪನೆ: 1951
    • ಕೇಂದ್ರ ಕಚೇರಿ: ಜಿನೀವಾ, ಸ್ವಿಟ್ಜರ್ಲೆಂಡ್.
    • ಉದ್ದೇಶ: ಇದು ಮಾನವೀಯ ಮತ್ತು ಸುವ್ಯವಸ್ಥಿತ ವಲಸೆಯನ್ನು ಉತ್ತೇಜಿಸುತ್ತದೆ; ಹಾಗೂ ವಲಸಿಗರು, ನಿರಾಶ್ರಿತರು ಮತ್ತು ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಅಗತ್ಯ ಮಾನವೀಯ ನೆರವು ನೀಡುತ್ತದೆ.
    • ಭಾರತವು 2008 ರಿಂದ IOM ನ ಅಧಿಕೃತ ಸದಸ್ಯ ರಾಷ್ಟ್ರವಾಗಿ ಗುರುತಿಸಿಕೊಂಡಿದೆ.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA)ದ ಮೊದಲ ಶೃಂಗಸಭೆ: ಭಾರತ ಆತಿಥ್ಯ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ನವದೆಹಲಿಯಲ್ಲಿ ನಡೆಯಲಿರುವ ‘ಮೊದಲ  ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟದ (IBCA) ಶೃಂಗಸಭೆ 2026′ ರ ಅಧಿಕೃತ ಜಾಲತಾಣ ಮತ್ತು ಲಾಂಛನವನ್ನು ಇತ್ತೀಚಿಗೆ  ಬಿಡುಗಡೆ ಮಾಡಿದರು.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA) ದ ಬಗ್ಗೆ: 

    • ಪ್ರಧಾನ ಕಚೇರಿ: ಭಾರತ.
    • ಉದ್ದೇಶ: ಇದು ದೊಡ್ಡ ಬೆಕ್ಕು (ವನ್ಯ ಮಾರ್ಜಾಲ) ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ಪ್ರಭೇದಗಳು ಕಂಡುಬರುವ ವ್ಯಾಪ್ತಿಯ 95 ದೇಶಗಳ ಬಹು-ರಾಷ್ಟ್ರೀಯ ಹಾಗೂ ಬಹು- ಸಂಸ್ಥೆಗಳ ಒಕ್ಕೂಟವಾಗಿದೆ.
    • ಆರಂಭ:  2023 ರಲ್ಲಿ ‘ಪ್ರಾಜೆಕ್ಟ್ ಟೈಗರ್‌ನ 50 ವರ್ಷಗಳ ಸ್ಮರಣಾರ್ಥ’ ಆಯೋಜಿಸಲಾದ ಕಾರ್ಯಕ್ರಮದ ವೇಳೆ, ಭಾರತದ ಪ್ರಧಾನ ಮಂತ್ರಿಯವರು IBCA ಗೆ ಚಾಲನೆ ನೀಡಿದರು.
    • ಗುರಿ:  ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪೂಮಾ ಎಂಬ ಏಳು ಪ್ರಮುಖ ದೊಡ್ಡ ಬೆಕ್ಕು ಪ್ರಭೇದಗಳನ್ನು ಸಂರಕ್ಷಿಸುವುದು.
    • ಸದಸ್ಯ ರಾಷ್ಟ್ರಗಳು: ನಿಕರಾಗುವಾ, ಈಸ್ವಾತಿನಿ, ಭಾರತ, ಸೊಮಾಲಿಯಾ ಮತ್ತು ಲೈಬೀರಿಯಾ ದೇಶಗಳು ಔಪಚಾರಿಕವಾಗಿ IBCA ನ ಸದಸ್ಯರಾಗಲು ‘ಚೌಕಟ್ಟು ಒಪ್ಪಂದ’ಕ್ಕೆ (Framework Agreement) ಸಹಿ ಹಾಕಿವೆ.

    7 ದೊಡ್ಡ ಬೆಕ್ಕು ಪ್ರಭೇದಗಳ ಸಂರಕ್ಷಣಾ ಸ್ಥಿತಿಗತಿ:

    ದೊಡ್ಡ ಬೆಕ್ಕು ಪ್ರಭೇದಗಳು 

    ದೈಹಿಕ ನೋಟ

    IUCN ಕೆಂಪುಪಟ್ಟಿಯಲ್ಲಿ ಸ್ಥಿತಿಗತಿ

    CITES ಸ್ಥಿತಿಗತಿ

    ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 (ಭಾರತ)

    ಹುಲಿ (ಪ್ಯಾಂಥೆರಾ ಟೈಗ್ರಿಸ್)

     

    ಅಳಿವಿನಂಚಿನಲ್ಲಿರುವ (EN)

    ಅನುಬಂಧ I

    ಅನುಸೂಚಿ 1

    ಸಿಂಹ (ಪ್ಯಾಂಥೆರಾ ಲಿಯೋ)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚಿರತೆ (ಪ್ಯಾಂಥೆರಾ ಪಾರ್ಡಸ್)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಹಿಮ ಚಿರತೆ (ಪ್ಯಾಂಥೆರಾ ಉನ್ಸಿಯಾ)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚೀತಾ (ಅಸಿನೋನಿಕ್ಸ್ ಜುಬಾಟಸ್)

     

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಜಾಗ್ವಾರ್ (ಪ್ಯಾಂಥೆರಾ ಓಂಕಾ)

     

    ಬಹುತೇಕ ಅಳಿವಿನಂಚಿನಲ್ಲಿರುವ (NT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ.

    ಪೂಮಾ (ಪೂಮಾ ಕಾನ್ಕಲರ್)

     

    ಕನಿಷ್ಠ ಕಾಳಜಿ (LT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ.

    (ಹೆಚ್ಚು…)

  • ಸಂಚಾರ ಪೊಲೀಸರಿಗಾಗಿ ರಾಜ್ಯವ್ಯಾಪಿ ಉಸಿರಾಟದ ಆರೋಗ್ಯ ನಿಗಾ ಕಾರ್ಯಕ್ರಮ : ಗೃಹ ಇಲಾಖೆ

    ಸಂಚಾರ ಪೊಲೀಸರಿಗಾಗಿ ರಾಜ್ಯವ್ಯಾಪಿ ಉಸಿರಾಟದ ಆರೋಗ್ಯ ನಿಗಾ ಕಾರ್ಯಕ್ರಮ : ಗೃಹ ಇಲಾಖೆ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಕರ್ನಾಟಕದ ಗೃಹ ಇಲಾಖೆಯು ಸಂಚಾರ ಪೊಲೀಸ್ ಮತ್ತು ಮುಂಚೂಣಿ ಸಿಬ್ಬಂದಿಗಾಗಿ ರಾಜ್ಯವ್ಯಾಪಿ ಉಸಿರಾಟದ ಆರೋಗ್ಯ ನಿಗಾ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಇದು ದೇಶದಲ್ಲೇ ಮೊದಲನೆಯದಾಗಿದೆ.

    ಕಾರ್ಯಕ್ರಮದ ಹಿನ್ನೆಲೆ ಮತ್ತು ವಿವರಗಳು:

    • ಬೆಂಗಳೂರಿನಲ್ಲಿ 3,287 ಟ್ರಾಫಿಕ್ ಪೊಲೀಸರನ್ನು ಒಳಗೊಂಡ ಎರಡು ವರ್ಷಗಳ ಕಠಿಣ ತಪಾಸಣಾ ಯೋಜನೆಯ ನಂತರ ಈ ಕಾರ್ಯಕ್ರಮವನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುತ್ತಿದೆ. ಈ ತಪಾಸಣಾ ಯೋಜನೆಯು ನಿರಂತರ ನಗರ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಗಣನೀಯ ಅಪಾಯಕಾರಿ ಅಂಶಗಳನ್ನು ಗುರುತಿಸಿದೆ.
    • ಅನುಷ್ಠಾನ ಸಂಸ್ಥೆ: ಈ ಕಾರ್ಯಕ್ರಮವನ್ನು ಮುನ್ನಡೆಸಲು ಸರ್ಕಾರವು ‘ವಾಯು ರೆಸ್ಪಿರೇಟರಿ ಫೌಂಡೇಶನ್’ ಜೊತೆಗೆ ಪ್ರಾಥಮಿಕ ತಾಂತ್ರಿಕ ಸಂಸ್ಥೆಯಾಗಿ ಅಧಿಕೃತವಾಗಿ ಪಾಲುದಾರಿಕೆ ಮಾಡಿಕೊಂಡಿದೆ.
  • ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದ | ಕೇಂದ್ರೀಯ ತನಿಖಾ ದಳ (Central Bureau of Investigation – CBI) | ರೋಗನಿರೋಧಕ ಜೀವಕೋಶಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿದರೆ HIV ವಿರುದ್ಧ ಹೋರಾಡಲು ನೆರವಾಗಬಹುದು : ಅಧ್ಯಯನ | ಅಲ್ಝೈಮರ್ ಕಾಯಿಲೆ (Alzheimer’s Disease) | ತಾತ್ಯಾ ಟೋಪೆ | ಸಿಕ್ಕಿಂ: ಭಾರತದ ಪ್ರಥಮ ಕಾಗದರಹಿತ ನ್ಯಾಯಾಂಗ ರಾಜ್ಯ | ಹೊಸ ಇ-ಬಸ್ ಯೋಜನೆಗೆ ಕೇಂದ್ರ ಸರ್ಕಾರದ ಒಲವು | ಭಾರತದಲ್ಲಿ ಪವಿತ್ರ ವನಗಳು / ದೇವರ ಕಾಡುಗಳು (Sacred Groves in India) | ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026 | ರು-ಸೋಮ್ ಸೇತುವೆಗಳು (Ru-Soam Bridges) | ತಾಂಜಾನಿಯಾ (Tanzania) | ಹಂಟಾವೈರಸ್ ಸೋಂಕು ಹರಡುವಿಕೆ

    ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದ

    ಆಡಳಿತ

    ಇತ್ತೀಚಿಗೆ ಸುದ್ದಿಯಲ್ಲಿದೆ: 

    • ‘ರಾಷ್ಟ್ರೀಯ ಪರೀಕ್ಷಾ ಸಂಸ್ಥೆ’ (National Testing Agency – NTA)ಯು 2026 ರ ನೀಟ್ (NEET) ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಇತ್ತೀಚೆಗೆ ತಿಳಿಸಿದೆ. ಹೀಗಾಗಿ, ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (NEET)ಯ ಮರುಪರೀಕ್ಷೆಯನ್ನು ನಡೆಸಲಾಗುವುದು ಎಂದು ಘೋಷಿಸಿದೆ. 
    • ನೀಟ್ (NEET) ಪರೀಕ್ಷೆಯು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯುವ ಪ್ರಮುಖ ಮಾರ್ಗವಾಗಿದೆ.

    ರಾಧಾಕೃಷ್ಣನ್ ಸಮಿತಿ: 

    • ನೀಟ್-ಯುಜಿ (NEET-UG) 2024 ರ ವಿವಾದದ ಹಿನ್ನೆಲೆಯಲ್ಲಿ, ಕೇಂದ್ರ ಶಿಕ್ಷಣ ಸಚಿವಾಲಯವು ಇಸ್ರೋದ (ISRO) ಮಾಜಿ ಅಧ್ಯಕ್ಷರಾದ ಕೆ. ರಾಧಾಕೃಷ್ಣನ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

    ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency – NTA):

    • ಸ್ಥಾಪನೆ: 2017 ರಲ್ಲಿ ಸ್ಥಾಪಿಸಲಾಯಿತು.
    • ಇದು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ‘ಉನ್ನತ ಶಿಕ್ಷಣ ಇಲಾಖೆ’ಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿದೆ.
    • NTA ಯು ಪ್ರಮುಖವಾಗಿ ಈ ಕೆಳಗಿನ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತದೆ:
      • ಎಂಜಿನಿಯರಿಂಗ್‌ಗಾಗಿ – ಜಂಟಿ ಪ್ರವೇಶ ಪರೀಕ್ಷೆ (Joint Entrance Examination – JEE Main).
      • ವೈದ್ಯಕೀಯ ಶಿಕ್ಷಣಕ್ಕಾಗಿ – ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿಪೂರ್ವ (NEET-UG).
      • ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಸಾಮಾನ್ಯ ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳಿಗಾಗಿ – ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (Common University Entrance Test – CUET).
      • ಇದು ‘ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ’ (NHAI), ದೆಹಲಿ ಉಚ್ಚ ನ್ಯಾಯಾಲಯ, ‘ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ’ (EPFO) ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನೂ ನಡೆಸುತ್ತದೆ.

    ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ, 2024:

    • 2024 ರಲ್ಲಿ ಅಂಗೀಕರಿಸಲಾದ ಈ ಕಾಯ್ದೆಯು, UPSC, SSC ಯಂತಹ ನೇಮಕಾತಿ ಪರೀಕ್ಷೆಗಳು ಹಾಗೂ NEET, JEE, ಮತ್ತು CUET ನಂತಹ ಪ್ರವೇಶ ಪರೀಕ್ಷೆಗಳಲ್ಲಿ ನಡೆಯುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ತಡೆಯುವ ಕಟ್ಟುನಿಟ್ಟಾದ ಗುರಿಯನ್ನು ಹೊಂದಿದೆ.
    • ಈ ಕಾಯ್ದೆಯು “ಅಕ್ರಮ ವಿಧಾನಗಳನ್ನು” ವಿಶಾಲವಾಗಿ ವ್ಯಾಖ್ಯಾನಿಸಿದ್ದು, ಇದು ಈ ಕೆಳಗಿನ ದುಷ್ಕೃತ್ಯಗಳನ್ನು ಒಳಗೊಂಡಿದೆ:
    1. ಪ್ರಶ್ನೆಪತ್ರಿಕೆಗಳು ಅಥವಾ ಸರಿ-ಉತ್ತರಗಳನ್ನು ಸೋರಿಕೆ ಮಾಡುವುದು.
    2. ಪರೀಕ್ಷೆಯ ಸಮಯದಲ್ಲಿ ಅಭ್ಯರ್ಥಿಗಳಿಗೆ ನೆರವಾಗುವುದು (ಅನಧಿಕೃತ ಸಂವಹನ, ಉತ್ತರಗಳನ್ನು ಒದಗಿಸುವುದು).
    3. ಕಂಪ್ಯೂಟರ್ ನೆಟ್‌ವರ್ಕ್‌ಗಳು ಅಥವಾ ಸಂಪನ್ಮೂಲಗಳನ್ನು ತಿರುಚುವುದು.
    4. ನಕಲಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯುವುದು.
    5. ನಕಲಿ ಪರೀಕ್ಷೆಗಳನ್ನು ನಡೆಸುವುದು ಅಥವಾ ನಕಲಿ ದಾಖಲೆಗಳನ್ನು ನೀಡುವುದು.
    6. ಅರ್ಹತಾ ಪಟ್ಟಿ ಅಥವಾ ರ್‍ಯಾಂಕ್ ಪಡೆಯಲು ದಾಖಲೆಗಳನ್ನು ತಿರುಚುವುದು.
    • ದಂಡ ಮತ್ತು ಶಿಕ್ಷೆಗಳು:
    • ವ್ಯಕ್ತಿಗಳಿಗೆ: ಅಪರಾಧದ ತೀವ್ರತೆಗೆ ಅನುಗುಣವಾಗಿ 3 ರಿಂದ 10 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ.
    • ಸಂಘಟಿತ ಅಪರಾಧಗಳಿಗೆ ರೂ. 1 ಕೋಟಿ ವರೆಗೆ ದಂಡ.
    • ಸೇವಾ ಪೂರೈಕೆದಾರರಿಗೆ: ಅಕ್ರಮಗಳಲ್ಲಿ ಭಾಗಿಯಾಗಿದ್ದಲ್ಲಿ ರೂ. 1 ಕೋಟಿ ವರೆಗೆ ದಂಡ.
    • 4 ವರ್ಷಗಳ ಕಾಲ ಯಾವುದೇ ಸಾರ್ವಜನಿಕ ಪರೀಕ್ಷೆಗಳನ್ನು ನಡೆಸದಂತೆ ನಿರ್ಬಂಧ.
    • ಇದರಲ್ಲಿ ಭಾಗಿಯಾದ ನಿರ್ದೇಶಕರು ಅಥವಾ ಆಡಳಿತ ಮಂಡಳಿಯ ಮೇಲೆ ವೈಯಕ್ತಿಕ ಹೊಣೆಗಾರಿಕೆ ನಿಗದಿಪಡಿಸುವುದು.
    • ಸಂಘಟಿತ ಅಪರಾಧಗಳು: 5 ರಿಂದ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಕನಿಷ್ಠ ರೂ. 1 ಕೋಟಿ ದಂಡ.
    • ಅಕ್ರಮದಲ್ಲಿ ಭಾಗಿಯಾದ ಸಂಸ್ಥೆಯ ಆಸ್ತಿಯನ್ನು ಜಪ್ತಿ ಮಾಡುವ ಮತ್ತು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ.
    • ತನಿಖೆ:
    1. ಈ ಕಾಯ್ದೆಯ ಅಡಿಯಲ್ಲಿ ಬರುವ ಎಲ್ಲಾ ಅಪರಾಧಗಳು ಸಂಜ್ಞೇಯ (Cognisable – ವಾರಂಟ್ ಇಲ್ಲದೆ ಬಂಧಿಸುವಂಥದ್ದು), ಜಾಮೀನು-ರಹಿತ ಹಾಗೂ ರಾಜಿ-ರಹಿತ (Non-compoundable) ಸ್ವರೂಪವನ್ನು ಹೊಂದಿವೆ.
    2. ಈ ಕಾಯ್ದೆಯ ಅಡಿಯಲ್ಲಿನ ಅಪರಾಧಗಳ ತನಿಖೆಯನ್ನು ‘ಪೊಲೀಸ್ ಅಧೀಕ್ಷಕರು’ ಅಥವಾ ‘ಸಹಾಯಕ ಪೊಲೀಸ್ ಆಯುಕ್ತರು’ ಶ್ರೇಣಿಗಿಂತ ಕೆಳಗಿನವರಲ್ಲದ ಅಧಿಕಾರಿಯು ಮಾತ್ರ ನಡೆಸುತ್ತಾರೆ.
    3. ಕೇಂದ್ರ ಸರ್ಕಾರವು ಈ ಪ್ರಕರಣಗಳ ತನಿಖೆಯನ್ನು ಯಾವುದೇ ‘ಕೇಂದ್ರೀಯ ತನಿಖಾ ಸಂಸ್ಥೆಗೆ’ ವರ್ಗಾಯಿಸುವ ಅಧಿಕಾರವನ್ನು ಹೊಂದಿದೆ.

    ರಾಜಕೀಯ ಮತ್ತು ಆಡಳಿತ

    Syllabus: GS2/Polity and Governance

    ಇತ್ತೀಚಿಗೆ ಸುದ್ದಿಯಲ್ಲಿದೆ: 

    • ಕೇಂದ್ರ ಕ್ಯಾಬಿನೆಟ್ (ಸಚಿವ ಸಂಪುಟದ) ನೇಮಕಾತಿ ಸಮಿತಿಯು (ACC) ‘ಕೇಂದ್ರೀಯ ತನಿಖಾ ದಳ’ದ (CBI) ಹಾಲಿ ನಿರ್ದೇಶಕರಾದ ಪ್ರವೀಣ್ ಸೂದ್ ಅವರ ಅಧಿಕಾರಾವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ.

    ಕೇಂದ್ರೀಯ ತನಿಖಾ ದಳ (Central Bureau of Investigation)ದ ಬಗ್ಗೆ:

    • ಸ್ಥಾಪನೆ: ಕೇಂದ್ರ ಗೃಹ ಸಚಿವಾಲಯದ ನಿರ್ಣಯದ ಮೂಲಕ 1963 ರಲ್ಲಿ ಇದನ್ನು ಸ್ಥಾಪಿಸಲಾಯಿತು.
    • ಆಡಳಿತಾತ್ಮಕ ನಿಯಂತ್ರಣ: ಇದು ಭಾರತ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ‘ಸಿಬ್ಬಂದಿ ಮತ್ತು ತರಬೇತಿ ಇಲಾಖೆ’ಯ (DoPT) ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಡುತ್ತದೆ.
    • ಶಿಫಾರಸು ಮಾಡಿದ ಸಮಿತಿ: ‘ಸಂತಾನಂ ಸಮಿತಿ’ಯ ಶಿಫಾರಸಿನ ಮೇರೆಗೆ ಇದನ್ನು ಸ್ಥಾಪಿಸಲಾಯಿತು.
    • ಕಾನೂನಾತ್ಮಕ ಸ್ಥಾನಮಾನ: ಸಿಬಿಐ (CBI) ಒಂದು ಶಾಸನಬದ್ಧ ಸಂಸ್ಥೆಯಲ್ಲ. ಬದಲಾಗಿ, ಇದು ‘ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆ’ (DSPE Act), 1946ರ ಮೂಲಕ ತನ್ನ ಅಧಿಕಾರಗಳನ್ನು ಪಡೆಯುತ್ತದೆ.
    • ಪ್ರಮುಖ ಕಾರ್ಯಗಳು:
    1. ಸಿಬಿಐ ಕೇಂದ್ರ ಸರ್ಕಾರದ ಅತ್ಯುನ್ನತ ಹಾಗೂ ಪ್ರಮುಖ ತನಿಖಾ ಸಂಸ್ಥೆಯಾಗಿದೆ.
    2. ಇದು ‘ಕೇಂದ್ರೀಯ ಜಾಗೃತ ಆಯೋಗ’ (CVC) ಮತ್ತು ‘ಲೋಕಪಾಲ್’ಗೆ ಅಗತ್ಯ ತನಿಖಾ ನೆರವು ನೀಡುತ್ತದೆ.
    3. ಇದು ಇಂಟರ್‌ಪೋಲ್ ಸದಸ್ಯ ರಾಷ್ಟ್ರಗಳ ಪರವಾಗಿ ಭಾರತದಲ್ಲಿ ತನಿಖೆಗಳನ್ನು ಸಂಯೋಜಿಸುವ ‘ನೋಡಲ್ ಪೊಲೀಸ್ ಸಂಸ್ಥೆ’ಯಾಗಿ ಕಾರ್ಯನಿರ್ವಹಿಸುತ್ತದೆ.

    ರೋಗನಿರೋಧಕ ಜೀವಕೋಶಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿದರೆ HIV ವಿರುದ್ಧ ಹೋರಾಡಲು ನೆರವಾಗಬಹುದು : ಅಧ್ಯಯನ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚಿಗೆ ಸುದ್ದಿಯಲ್ಲಿದೆ:

    • ವಿಜ್ಞಾನಿಗಳು ರೋಗಿಯ ಸ್ವಂತ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ (CAR-T ಥೆರಪಿ) ಮೂಲಕ ಹೆಚ್‌ಐವಿ (HIV) ವೈರಸ್ ಅನ್ನು ನಿಯಂತ್ರಿಸಲು ಹೊಸದೊಂದು ಪ್ರಬಲವಾದ ಕ್ಯಾನ್ಸರ್ ಚಿಕಿತ್ಸಾ ವಿಧಾನವೊಂದನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

    ಅಕ್ವೈರ್ಡ್ ಇಮ್ಯುನೊ ಡಿಫಿಷಿಯೆನ್ಸಿ ಸಿಂಡ್ರೋಮ್ (ಏಡ್ಸ್ – AIDS):

    • ರೋಗಕಾರಕ: ಇದು HIV – ಹ್ಯೂಮನ್ ಇಮ್ಯುನೊ ಡಿಫಿಷಿಯೆನ್ಸಿ ವೈರಸ್’  (ಮಾನವ ರೋಗನಿರೋಧಕತೆ ಕೊರತೆ ವೈರಾಣು) ನಿಂದ ಉಂಟಾಗುವ ದೀರ್ಘಕಾಲೀನ ಹಾಗೂ ಮಾರಾಣಾಂತಿಕ ಕಾಯಿಲೆಯಾಗಿದೆ. ಈ ವೈರಸ್ ಮನುಷ್ಯನ ರೋಗನಿರೋಧಕ ವ್ಯವಸ್ಥೆಯನ್ನು ತೀವ್ರವಾಗಿ ಹಾನಿಗೊಳಿಸುತ್ತದೆ.
    • ಪ್ರಸರಣ: ಎಚ್‌ಐವಿ ಸೋಂಕಿತ ವ್ಯಕ್ತಿಯ ದೇಹದ ನಿರ್ದಿಷ್ಟ ದ್ರವಗಳಾದ ರಕ್ತ, ವೀರ್ಯ, ಗುದನಾಳದ ದ್ರವ, ಯೋನಿ ದ್ರವ ಅಥವಾ ಎದೆಹಾಲಿನೊಂದಿಗೆ ನೇರ ಸಂಪರ್ಕ ಹೊಂದುವುದರ ಮೂಲಕ ಇದು ಹರಡುತ್ತದೆ.
    • ಈ ರೋಗದ ಲಕ್ಷಣಗಳು:
    1. ಹಂತ 1: ಜ್ವರದಂತಹ ಲಕ್ಷಣಗಳು (ಚಳಿಜ್ವರ, ಚರ್ಮದ ಮೇಲೆ ಗುಳ್ಳೆಗಳು, ರಾತ್ರಿ ವೇಳೆ ವಿಪರೀತ ಬೆವರುವುದು).
    2. ಹಂತ 2: ವೈದ್ಯಕೀಯ ಸುಪ್ತಾವಸ್ಥೆ / ಲಕ್ಷಣರಹಿತ ಹಂತ (ಈ ಹಂತದಲ್ಲಿ ರೋಗದ ಯಾವುದೇ ನಿರ್ದಿಷ್ಟ ಲಕ್ಷಣಗಳು ಕಂಡುಬರುವುದಿಲ್ಲ).
    3. ಹಂತ 3: ಏಡ್ಸ್ ಹಂತ (ರೋಗನಿರೋಧಕ ವ್ಯವಸ್ಥೆಯು ತೀವ್ರವಾಗಿ ದುರ್ಬಲಗೊಳ್ಳುವುದು).
    • ತಡೆಗಟ್ಟುವಿಕೆ: ಚಿಕಿತ್ಸೆಗಿಂತ ತಡೆಗಟ್ಟುವಿಕೆಯೇ ಮೇಲು ಎಂಬ ಮಾತಿನಂತೆ, ಸುರಕ್ಷಿತ ವಿಧಾನಗಳ ಬಳಕೆ, ಸೋಂಕಿಲ್ಲದ ಶುದ್ಧ ಸೂಜಿಗಳ ಬಳಕೆ ಮತ್ತು ತಾಯಿಯಿಂದ ಮಗುವಿಗೆ ಸೋಂಕು ಹರಡುವುದನ್ನು ತಡೆಯುವ ಮೂಲಕ ಈ ರೋಗವನ್ನು ನಿಯಂತ್ರಿಸಬಹುದು.
    • ಚಿಕಿತ್ಸೆ : ಎಚ್‌ಐವಿ ಸೋಂಕನ್ನು ಸಂಪೂರ್ಣವಾಗಿ ಗುಣಪಡಿಸಲು ಯಾವುದೇ ಔಷಧಿಯಿಲ್ಲ. ಆದರೆ ‘ಆಂಟಿ-ರೆಟ್ರೋವೈರಲ್ ಔಷಧಗಳ’ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಈ ಔಷಧಗಳು ದೇಹದಲ್ಲಿ ವೈರಸ್ ದ್ವಿಗುಣಗೊಳ್ಳುವುದನ್ನು ತಡೆಯುತ್ತವೆ. ಚಿಕಿತ್ಸೆ ಪಡೆಯದಿದ್ದರೆ, ಎಚ್‌ಐವಿ ಸೋಂಕು ಹಲವು ವರ್ಷಗಳ ನಂತರ ‘ಏಡ್ಸ್’ (AIDS) ಹಂತಕ್ಕೆ ತಲುಪುತ್ತದೆ.

    ಭಾರತ ಸರ್ಕಾರ ಕೈಗೊಂಡಿರುವ ಪ್ರಮುಖ ಕ್ರಮಗಳು:

    • ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ (NACP): ಇದು ಕೇಂದ್ರ ಸರ್ಕಾರದ ‘ಕೇಂದ್ರ ವಲಯದ ಯೋಜನೆ’ ಯಾಗಿದೆ.
    • ಎಚ್‌ಐವಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಮತ್ತು ಹಿಮ್ಮೆಟ್ಟಿಸುವ ಮೂಲಕ ಭಾರತವು ‘6ನೇ ಸಹಸ್ರಮಾನದ ಅಭಿವೃದ್ಧಿ ಗುರಿ’ಯನ್ನು (MDG) ಯಶಸ್ವಿಯಾಗಿ ಸಾಧಿಸಿದೆ.
    • PPTCT ಕಾರ್ಯಕ್ರಮ: ಇದು ಪೋಷಕರಿಂದ ಮಗುವಿಗೆ HIV ಸೋಂಕು ಹರಡುವುದನ್ನು ತಡೆಯುವ ಕಾರ್ಯಕ್ರಮವಾಗಿದೆ.
    • ಎಚ್‌ಐವಿ/ಏಡ್ಸ್ ಕಾಯ್ದೆ 2017: ಎಚ್‌ಐವಿ ಸೋಂಕಿತ ವ್ಯಕ್ತಿಗಳ ವಿರುದ್ಧ ಯಾವುದೇ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಇದು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ.
    • UNAIDS – 90:90:90 ಕಾರ್ಯತಂತ್ರ: 2020ರ ವೇಳೆಗೆ 90% ಸೋಂಕಿತರನ್ನು ಪತ್ತೆ ಹಚ್ಚುವುದು, 90% ಜನರಿಗೆ ART (ಆಂಟಿ-ರೆಟ್ರೋವೈರಲ್) ಚಿಕಿತ್ಸೆ ಒದಗಿಸುವುದು ಮತ್ತು 90% ರಷ್ಟು ವೈರಸ್ ಅನ್ನು ನಿಗ್ರಹಿಸುವ UNAIDS ನ ಕಾರ್ಯತಂತ್ರ ಇದಾಗಿದೆ. ಪ್ರಸ್ತುತ ಈ ಗುರಿಯನ್ನು ’95-95-95′ ಕ್ಕೆ ಪರಿಷ್ಕರಿಸಿ, ಕಾಲಮಿತಿಯನ್ನು ಇನ್ನೂ 10 ವರ್ಷಗಳವರೆಗೆ ವಿಸ್ತರಿಸಲಾಗಿದೆ.
    • ಪ್ರಾಜೆಕ್ಟ್ ಆಕ್ಸಿಲರೇಟ್ (Project ACCELERATE): ಇದು ಜಾನ್ ಹಾಪ್ಕಿನ್ಸ್ ಮತ್ತು NACO ನ ಜಂಟಿ ಉಪಕ್ರಮವಾಗಿದೆ. ‘ಸೇಫ್ ಜಿಂದಗಿ’ (Safe Zindagi) ಆನ್‌ಲೈನ್ ಪೋರ್ಟಲ್ ಮೂಲಕ ಎಚ್‌ಐವಿ ಸೇವೆಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ.
    • ಮಿಷನ್ ಸಂಪರ್ಕ (Mission Sampark): ಆಂಟಿ-ರೆಟ್ರೋವೈರಲ್ ಚಿಕಿತ್ಸೆಯನ್ನು (ART) ಅರ್ಧದಲ್ಲೇ ಕೈಬಿಟ್ಟಿರುವ ಎಚ್‌ಐವಿ ಸೋಂಕಿತರನ್ನು (PLHIV) ಮರಳಿ ಚಿಕಿತ್ಸಾ ವ್ಯಾಪ್ತಿಗೆ ತರುವುದು ಇದರ ಪ್ರಮುಖ ಉದ್ದೇಶವಾಗಿದೆ.

    ಅಲ್ಝೈಮರ್ ಕಾಯಿಲೆ (Alzheimer’s Disease)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚಿಗೆ ಸುದ್ದಿಯಲ್ಲಿದೆ:

    • ಭಾರತದಲ್ಲಿ ಅಲ್ಝೈಮರ್ ಕಾಯಿಲೆಗೆ ಚಿಕಿತ್ಸೆ ನೀಡುವ ‘ಲೊರ್ಮಲ್ಜಿ’ ಎಂಬ ಹೊಸ ಔಷಧವನ್ನು ‘ಎಲಿ ಲಿಲ್ಲಿ ಅಂಡ್ ಕಂಪನಿ’ಯು ಬಿಡುಗಡೆ ಮಾಡಿದೆ. ಇದು ದೇಶದಲ್ಲಿ ಈ ಕಾಯಿಲೆಯ ಮೂಲ ಸ್ವರೂಪವನ್ನು ಮಾರ್ಪಡಿಸಬಲ್ಲ ಮೊಟ್ಟಮೊದಲ ಚಿಕಿತ್ಸಾ ವಿಧಾನಗಳಲ್ಲಿ ಒಂದಾಗಿದೆ.
    • ಲೊರ್ಮಲ್ಜಿ ಔಷಧ: ಇದೊಂದು ‘ಏಕತದ್ರೂಪಿ ಪ್ರತಿಕಾಯ’ವಾಗಿದೆ (Monoclonal antibody). ಇದನ್ನು ತಿಂಗಳಿಗೊಮ್ಮೆ ರಕ್ತನಾಳದ ಮೂಲಕ ನೀಡಲಾಗುತ್ತದೆ. ಅಲ್ಝೈಮರ್ ಕಾಯಿಲೆಯ ಉಲ್ಬಣಕ್ಕೆ ಕಾರಣವಾಗುವ ಹಾಗೂ ಮೆದುಳಿನಲ್ಲಿ ಶೇಖರವಾಗುವ ‘ಅಮೈಲಾಯ್ಡ್-ಬೀಟಾ’ ಎಂಬ ಹಾನಿಕಾರಕ ಪ್ರೋಟೀನ್ ಶೇಖರಣೆಗಳನ್ನು ತೆಗೆದುಹಾಕುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ.

    ಅಲ್ಝೈಮರ್ ಕಾಯಿಲೆ’ಯ ಬಗ್ಗೆ:

    • ಇದು ‘ಬುದ್ಧಿಕ್ಷೀಣತೆ’ ಅಥವಾ ಮರೆಗುಳಿತನದ ಅತ್ಯಂತ ಸಾಮಾನ್ಯ ರೂಪವಾಗಿದೆ. ಇದೊಂದು ಮೆದುಳಿನ ಅಸ್ವಸ್ಥತೆಯಾಗಿದ್ದು, ಇದು ವ್ಯಕ್ತಿಯ ಸ್ಮರಣಶಕ್ತಿ ಮತ್ತು ಆಲೋಚನಾ ಸಾಮರ್ಥ್ಯವನ್ನು ನಿಧಾನವಾಗಿ ನಾಶಪಡಿಸುತ್ತದೆ.
    • ಆಲೋಚನೆ, ನೆನಪು ಮತ್ತು ತಾರ್ಕಿಕತೆಯಂತಹ ‘ಅರಿವಿನ ಸಾಮರ್ಥ್ಯಗಳು’ ಹಾಗೂ ನಡವಳಿಕೆಯ ಕೌಶಲ್ಯಗಳು ತೀವ್ರವಾಗಿ ಕುಗ್ಗುವುದು ಇದರ ಪ್ರಮುಖ ಲಕ್ಷಣವಾಗಿದೆ. ಇದು ಎಷ್ಟರಮಟ್ಟಿಗೆ ಇರುತ್ತದೆ ಎಂದರೆ, ವ್ಯಕ್ತಿಯ ದೈನಂದಿನ ಜೀವನ ಮತ್ತು ಚಟುವಟಿಕೆಗಳಿಗೆ ತೀವ್ರ ಅಡ್ಡಿಯುಂಟಾಗುತ್ತದೆ.
    • ಕಾಲಕ್ರಮೇಣ, ಅಲ್ಝೈಮರ್ ಪೀಡಿತರು ಊಟ ಮಾಡುವುದು ಅಥವಾ ನಡೆಯುವುದರಂತಹ ಅತ್ಯಂತ ಸರಳವಾದ ದೈನಂದಿನ ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನೂ ಸಹ ಕಳೆದುಕೊಳ್ಳುತ್ತಾರೆ.
    • ಜಾಗತಿಕವಾಗಿ ‘ಲೆಕಾನೆಮಾಬ್’ (Lecanemab) ಮತ್ತು ‘ಅಡುಕನುಮಾಬ್’ (Aducanumab) ನಂತಹ ಔಷಧಗಳು ಲಭ್ಯವಿದ್ದರೂ, ಅವುಗಳ ಪ್ರಯೋಜನಗಳು ಸೀಮಿತವಾಗಿವೆ. ಅಲ್ಲದೆ, ಅವು ಸಂಕೀರ್ಣತೆ, ಅತಿ ಹೆಚ್ಚಿನ ವೆಚ್ಚ ಮತ್ತು ಸುರಕ್ಷತೆಯ ಆತಂಕಗಳನ್ನು ಹೊಂದಿವೆ.

    ತಾತ್ಯಾ ಟೋಪೆ

    ಇತಿಹಾಸ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಮಧ್ಯಪ್ರದೇಶದ ಸರ್ಕಾರಿ ಪತ್ರಾಗಾರದಲ್ಲಿ (Archives – ಐತಿಹಾಸಿಕ ದಾಖಲೆಗಳ ಸಂಗ್ರಹಾಲಯ) 1857ರ ಕಾಲದ ತಾತ್ಯಾ ಟೋಪೆ ಅವರ ಅಪರೂಪದ ಕೈಬರಹದ ಮತ್ತು ಸಹಿ ಇರುವ ಪತ್ರವೊಂದು ಇತ್ತೀಚೆಗೆ ಪತ್ತೆಯಾಗಿದೆ.

    ತಾತ್ಯಾ ಟೋಪೆ ಅವರ ಬಗ್ಗೆ

    • ಆರಂಭಿಕ ಜೀವನ: ತಾತ್ಯಾ ಟೋಪೆ ಅವರ ಮೂಲ ಹೆಸರು ‘ರಾಮಚಂದ್ರ ಪಾಂಡುರಂಗ ಟೋಪೆ’. ಇವರು 1814 ರಲ್ಲಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಜನಿಸಿದರು.
    • ಇವರ ತಂದೆಯು ಮರಾಠ ಸಾಮ್ರಾಜ್ಯದ ಕೊನೆಯ ಪೇಶ್ವೆಯಾದ ‘ಎರಡನೇ ಬಾಜಿರಾವ್’ ಅವರ ಆಸ್ಥಾನದಲ್ಲಿ ಗಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
    • ಎರಡನೇ ಬಾಜಿರಾವ್ ಅವರ ದತ್ತುಪುತ್ರನಾದ ‘ನಾನಾ ಸಾಹೇಬ್’ ಅವರೊಂದಿಗೆ ತಾತ್ಯಾ ಟೋಪೆ ಅವರು ನಿಕಟ ಒಡನಾಟ ಹೊಂದಿದ್ದರು. ಇದೇ ನಂಟು ಮುಂದಿನ ದಿನಗಳಲ್ಲಿ 1857ರ ಮಹಾದಂಗೆಯಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಲು ಕಾರಣವಾಯಿತು.
    • 1857ರ ದಂಗೆಯಲ್ಲಿನ ಪಾತ್ರ: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ (1857) ಇವರು ಅತ್ಯಂತ ಸಮರ್ಥ ಸೇನಾ ದಂಡನಾಯಕರಾಗಿ ಹೊರಹೊಮ್ಮಿದರು.
    1. ಬ್ರಿಟಿಷರ ವಿರುದ್ಧದ ಹೋರಾಟದ ಪ್ರಮುಖ ಕೇಂದ್ರಗಳಾಗಿದ್ದ ಕಾನ್ಪುರ ಮತ್ತು ಗ್ವಾಲಿಯರ್‌ನಲ್ಲಿ ಇವರು ಪ್ರಮುಖ ಪಾತ್ರ ವಹಿಸಿದರು.
    2. ಇವರು ಝಾನ್ಸಿ ರಾಣಿ ಲಕ್ಷ್ಮೀಬಾಯಿಯಂತಹ ನಾಯಕಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿ, ಬ್ರಿಟಿಷ್ ಪಡೆಗಳ ವಿರುದ್ಧದ ದಂಗೆಯನ್ನು ಪ್ರಬಲವಾಗಿ ಮುನ್ನಡೆಸಲು ನೆರವಾದರು.
    • ಸೇನಾ ತಂತ್ರಗಳು: ತಾತ್ಯಾ ಟೋಪೆ ಅವರು ಗೆರಿಲ್ಲಾ ಯುದ್ಧತಂತ್ರ, ಕ್ಷಿಪ್ರ ಚಲನವಲನ ಮತ್ತು ಹಠಾತ್ ದಾಳಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುವುದರಲ್ಲಿ ಅಪ್ರತಿಮರಾಗಿದ್ದರು.
    • ಅಂತಿಮವಾಗಿ ಇವರನ್ನು ಬ್ರಿಟಿಷರು ಸೆರೆಹಿಡಿದರು. ಔಪಚಾರಿಕ ವಿಚಾರಣೆಯ ನಂತರ 1859 ರಲ್ಲಿ ಶಿವಪುರಿಯಲ್ಲಿ ಇವರನ್ನು ಗಲ್ಲಿಗೇರಿಸಲಾಯಿತು.

    ಸಿಕ್ಕಿಂ: ಭಾರತದ ಪ್ರಥಮ ಕಾಗದರಹಿತ ನ್ಯಾಯಾಂಗ ರಾಜ್ಯ

    ರಾಜಕೀಯ ಮತ್ತು ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ಸಿಕ್ಕಿಂ ರಾಜ್ಯವನ್ನು ಭಾರತದ ಮೊಟ್ಟಮೊದಲ ‘ಕಾಗದರಹಿತ ನ್ಯಾಯಾಂಗ ವ್ಯವಸ್ಥೆ’ ಹೊಂದಿದ ರಾಜ್ಯವೆಂದು ಘೋಷಿಸಿದ್ದಾರೆ.

    ಪ್ರಮುಖ ಅಂಶಗಳು:

    • ಮಹತ್ವ: ಈ ಉಪಕ್ರಮವು ಕಾಗದದ ಕಡತಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸುತ್ತದೆ. ಜೊತೆಗೆ, ಇದು ಕಾರ್ಯಾಚರಣೆಯ ವಿಳಂಬವನ್ನು ಕಡಿಮೆ ಮಾಡುತ್ತದೆ, ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಮತ್ತು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ನೆರವಾಗುತ್ತದೆ.
    • ತಂತ್ರಜ್ಞಾನದ ಅಳವಡಿಕೆ: ಈ ವ್ಯವಸ್ಥೆಯು ಇ-ಫೈಲಿಂಗ್, ಡಿಜಿಟಲ್ ಪ್ರಕರಣ ನಿರ್ವಹಣೆ ಮತ್ತು ವರ್ಚುವಲ್ (ಆನ್‌ಲೈನ್) ವಿಚಾರಣೆಗಳನ್ನು ಒಳಗೊಂಡಿದೆ. ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಇ-ಕೋರ್ಟ್ಸ್ ಕಾರ್ಯಾಚರಣಾ ಮಾದರಿಯ ಯೋಜನೆ’ (e-Courts Mission Mode Project) ಮತ್ತು ‘ಡಿಜಿಟಲ್ ಇಂಡಿಯಾ’ ದೃಷ್ಟಿಕೋನಕ್ಕೆ ಪೂರಕವಾಗಿದೆ.
    • ಗುಡ್ಡಗಾಡು ಪ್ರದೇಶಗಳಿಗೆ ಇದರ ಪ್ರಸ್ತುತತೆ: ಸಿಕ್ಕಿಂನಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಭೌಗೋಳಿಕ ಅಡೆತಡೆಗಳನ್ನು ನಿವಾರಿಸುವಲ್ಲಿ ಈ ಡಿಜಿಟಲೀಕರಣವು ಪ್ರಮುಖ ಪಾತ್ರ ವಹಿಸುತ್ತದೆ. ಇದು ಕಕ್ಷಿದಾರರು ಮತ್ತು ವಕೀಲರಿಗೆ ನ್ಯಾಯವನ್ನು ಸುಲಭವಾಗಿ ಹಾಗೂ ತ್ವರಿತವಾಗಿ ಪಡೆದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ.

    ಹೊಸ ಇ-ಬಸ್ ಯೋಜನೆಗೆ ಕೇಂದ್ರ ಸರ್ಕಾರದ ಒಲವು

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ‘ಪಿಎಂ ಇ-ಡ್ರೈವ್’ (PM E-DRIVE) ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ 14,000 ಇ-ಬಸ್‌ಗಳ ಗುತ್ತಿಗೆ ಪ್ರಕ್ರಿಯೆ ಮತ್ತು ಹಂಚಿಕೆಯನ್ನು ಪೂರ್ಣಗೊಳಿಸಿದ ನಂತರ, ಕೇಂದ್ರ ಸರ್ಕಾರವು ರಾಜ್ಯಗಳಿಗಾಗಿ ಹೊಸ ‘ಎಲೆಕ್ಟ್ರಿಕ್  ಬಸ್’ ಯೋಜನೆಯೊಂದನ್ನು ಜಾರಿಗೊಳಿಸುವ ಸಾಧ್ಯತೆಯಿದೆ.

    ಪಿಎಂ ಇ-ಡ್ರೈವ್ (PM E-DRIVE) ಯೋಜನೆಯ ಬಗ್ಗೆ:

    • ಉದ್ದೇಶ: ಭಾರತದಲ್ಲಿ ವಿದ್ಯುತ್ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸುವುದು ಮತ್ತು ವಿದ್ಯುತ್ ಚಾಲಿತ ವಾಹನಗಳ (EV) ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು.
    • ಅವಧಿ : ಈ ಯೋಜನೆಯನ್ನು ಅಕ್ಟೋಬರ್ 1, 2024 ರಿಂದ ಮಾರ್ಚ್ 31, 2026 ರವರೆಗೆ ಜಾರಿಗೊಳಿಸಲಾಗುವುದು.
    • ಇ-ವೋಚರ್‌ಗಳು: ಈ ಯೋಜನೆಯ ಅಡಿಯಲ್ಲಿ ಅಗತ್ಯ ಉತ್ತೇಜನಾ ಸೌಲಭ್ಯಗಳನ್ನು ಪಡೆಯಲು, ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗಾಗಿ ‘ಭಾರೀ ಕೈಗಾರಿಕಾ ಸಚಿವಾಲಯ’ವು ಇ-ವೋಚರ್‌ಗಳನ್ನು ಪರಿಚಯಿಸುತ್ತಿದೆ.
    • ಚಾರ್ಜಿಂಗ್ ಕೇಂದ್ರಗಳು: ಎಲೆಕ್ಟ್ರಿಕ್ ವಾಹನಗಳ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು (EVPCS) ಬೃಹತ್ ಪ್ರಮಾಣದಲ್ಲಿ ಸ್ಥಾಪಿಸುವ ಮೂಲಕ, EV ಖರೀದಿದಾರರ ಪ್ರಯಾಣದ ವ್ಯಾಪ್ತಿಯ ಕುರಿತಾದ ಆತಂಕವನ್ನು ಈ ಯೋಜನೆಯು ನಿವಾರಿಸುತ್ತದೆ.

    ಸರ್ಕಾರದ ಉಪಕ್ರಮಗಳು: 

    • ಭಾರತದ ಎಲೆಕ್ಟ್ರಿಕ್ ವಾಹನಗಳ ನೀತಿ: 2030 ರ ವೇಳೆಗೆ ಖಾಸಗಿ ಕಾರುಗಳಲ್ಲಿ ಶೇ. 30%, ವಾಣಿಜ್ಯ ಕಾರುಗಳಲ್ಲಿ ಶೇ. 70%, ಬಸ್‌ಗಳಲ್ಲಿ ಶೇ. 40% ಮತ್ತು ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಲ್ಲಿ ಶೇ. 80% ರಷ್ಟು ಇ- ವಾಹನಗಳ ಮಾರಾಟದ ಗುರಿಯನ್ನು ಹೊಂದುವ ಮಹತ್ವಾಕಾಂಕ್ಷೆಯನ್ನು ಇದು ಹೊಂದಿದೆ.
    • ರಾಷ್ಟ್ರೀಯ ಎಲೆಕ್ಟ್ರಿಕ್ ಸಾರಿಗೆ ವಾಹನ ಗುರಿ ಯೋಜನೆ (NEMMP): ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಮೂಲಕ ‘ರಾಷ್ಟ್ರೀಯ ಇಂಧನ ಭದ್ರತೆ’ಯನ್ನು ಸಾಧಿಸುವ ಗುರಿಯೊಂದಿಗೆ 2013 ರಲ್ಲಿ NEMMP ಯನ್ನು ಪ್ರಾರಂಭಿಸಲಾಯಿತು.
    • ಫೇಮ್-ಇಂಡಿಯಾ ಯೋಜನೆ (FAME India Scheme): ವಿದ್ಯುತ್ ಚಾಲಿತ ವಾಹನಗಳ ತ್ವರಿತ ಅಳವಡಿಕೆ ಮತ್ತು ಉತ್ಪಾದನೆಯನ್ನು (Faster Adoption and Manufacture of EVs – FAME) ಉತ್ತೇಜಿಸಲು 2015 ರಲ್ಲಿ ‘ಫೇಮ್ ಇಂಡಿಯಾ’ ಯೋಜನೆಯನ್ನು ಪ್ರಾರಂಭಿಸಲಾಯಿತು.

    ಭಾರತದಲ್ಲಿ ಪವಿತ್ರ ವನಗಳು / ದೇವರ ಕಾಡುಗಳು (Sacred Groves in India)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಕೇರಳ ರಾಜ್ಯ ಜೀವವೈವಿಧ್ಯ ಮಂಡಳಿಯು ಪವಿತ್ರ ವನಗಳನ್ನು ಮರುಸ್ಥಾಪಿಸಲು ಪ್ರಾಯೋಗಿಕ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿದೆ.

    ಪವಿತ್ರ ವನಗಳು/ ದೇವರ ಕಾಡುಗಳು (Sacred Groves):

    • ಪವಿತ್ರ ವನಗಳೆಂದರೆ, ಧಾರ್ಮಿಕ ನಂಬಿಕೆಗಳು ಮತ್ತು ಸಾಂಪ್ರದಾಯಿಕ ಆಚರಣೆಗಳ ಕಾರಣದಿಂದಾಗಿ ಸ್ಥಳೀಯ ಸಮುದಾಯಗಳಿಂದ ಸಂರಕ್ಷಿಸಲ್ಪಟ್ಟ ಅರಣ್ಯ ಅಥವಾ ನೈಸರ್ಗಿಕ ಸಸ್ಯವರ್ಗದ ಪ್ರದೇಶಗಳಾಗಿವೆ.
    • ಇವು ದೇವಾಲಯಗಳು, ಆಚರಣೆಗಳು ಮತ್ತು ಸ್ಥಳೀಯ ಸಂಪ್ರದಾಯಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಸಮುದಾಯ ಸಂರಕ್ಷಿತ ಪರಿಸರ ವ್ಯವಸ್ಥೆಗಳಾಗಿ ಕಾರ್ಯನಿರ್ವಹಿಸುತ್ತವೆ.
    • ಭಾರತದಲ್ಲಿ ಅಂದಾಜು 1 ಲಕ್ಷದಿಂದ 1.5 ಲಕ್ಷದವರೆಗೆ ಪವಿತ್ರ ವನಗಳಿವೆ. ಇದು ಅವುಗಳ ಅಪಾರ ಸಾಂಸ್ಕೃತಿಕ ಮತ್ತು ಪರಿಸರ ಸಂಬಂಧಿ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
    • ‘ಜೈವಿಕ ವೈವಿಧ್ಯತಾ ಕಾಯ್ದೆ’, 2002 ರ ಅಡಿಯಲ್ಲಿ, ಸೂಕ್ತವಾದ ಪವಿತ್ರ ವನಗಳನ್ನು ‘ಜೀವವೈವಿಧ್ಯ ಪರಂಪರೆಯ ತಾಣಗಳು’ ಎಂದು ಘೋಷಿಸಬಹುದಾಗಿದೆ.

    ಪ್ರಾಮುಖ್ಯತೆ:

    • ಪವಿತ್ರ ವನಗಳು ಅಪರೂಪದ, ಸ್ಥಳೀಯ ಮತ್ತು ಔಷಧೀಯ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವುದರ ಜೊತೆಗೆ ಜೀವವೈವಿಧ್ಯದ ಬಿಸಿ ತಾಣಗಳಾಗಿ ಕಾರ್ಯನಿರ್ವಹಿಸುತ್ತವೆ.
    • ಇವು ಮಣ್ಣಿನ ಸಂರಕ್ಷಣೆಗೆ ಕೊಡುಗೆ ನೀಡುತ್ತವೆ ಮತ್ತು ಮಣ್ಣಿನ ಸವೆತವನ್ನು ತಡೆಯುತ್ತವೆ. ವಿಶೇಷವಾಗಿ ಪಶ್ಚಿಮ ಘಟ್ಟಗಳು ಮತ್ತು ಹಿಮಾಲಯದಂತಹ ಸೂಕ್ಷ್ಮ ಪರಿಸರ ವ್ಯವಸ್ಥೆಗಳಲ್ಲಿ ಇವುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
    • ಸಾಂಸ್ಕೃತಿಕವಾಗಿ, ಇವು ಧಾರ್ಮಿಕ ಆಚರಣೆಗಳು, ಹಬ್ಬಗಳು ಮತ್ತು ಸಮುದಾಯದ ಅಸ್ಮಿತೆಯ ಕೇಂದ್ರಗಳಾಗಿದ್ದು, ನಂಬಿಕೆಯ ವ್ಯವಸ್ಥೆಗಳ ಮೂಲಕವೇ ಪರಿಸರ ಸಂರಕ್ಷಣೆಯನ್ನು ಬಲಪಡಿಸುತ್ತವೆ.

    ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026

    ರಾಜಕೀಯ ಮತ್ತು ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ಭಾರತದ ಸರ್ವೋಚ್ಚ ನ್ಯಾಯಾಲಯವು ‘ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026’ರಲ್ಲಿರುವ ಕೆಲವು ಗಂಭೀರ ಕಾನೂನಾತ್ಮಕ ಸಮಸ್ಯೆಗಳ ಕುರಿತು ಗಮನ ಸೆಳೆದಿದೆ. 
    • ಪ್ರಮುಖವಾಗಿ, ‘ಸ್ವಯಂ-ಗುರುತಿಸುವಿಕೆ’ (Self-identification) v/s ರಾಜ್ಯದ ‘ಪರಿಶೀಲನಾ ಪ್ರಕ್ರಿಯೆ’ ಮತ್ತು ಕಲ್ಯಾಣ ಯೋಜನೆಗಳ ಗುರಿ v/s ‘ವ್ಯಕ್ತಿಗತ ಘನತೆ’ಯ ವಿವಾದಾತ್ಮಕ ಅಂಶಗಳನ್ನು ನ್ಯಾಯಾಲಯವು ಪ್ರಸ್ತಾಪಿಸಿದೆ.

    ಹಿನ್ನೆಲೆ: ಭಾರತದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಕಾನೂನಾತ್ಮಕ ವಿಕಸನ

    • ನಾಲ್ಸಾ (NALSA) ತೀರ್ಪು, 2014: ಇದು ಲಿಂಗತ್ವ ಅಲ್ಪಸಂಖ್ಯಾತರನ್ನು ಅಧಿಕೃತವಾಗಿ ‘ತೃತೀಯ ಲಿಂಗ’ ಎಂದು ಗುರುತಿಸಿತು. ಜೊತೆಗೆ, ಯಾವುದೇ ವೈದ್ಯಕೀಯ ಹಸ್ತಕ್ಷೇಪವಿಲ್ಲದೆ ತಮ್ಮ ಲಿಂಗವನ್ನು ‘ಸ್ವಯಂ-ಗುರುತಿಸಿಕೊಳ್ಳುವ ಹಕ್ಕನ್ನು’ ಎತ್ತಿಹಿಡಿಯಿತು.
    • ಇದು ‘ಸ್ವಯಂ-ನಿರ್ಧಾರ’ವನ್ನು ಒಂದು ಪ್ರಮುಖ ಸಾಂವಿಧಾನಿಕ ಮೌಲ್ಯವಾಗಿ ಸ್ಥಾಪಿಸಿತು.
    • ಇದು ವ್ಯಕ್ತಿಯ ಲಿಂಗದ ಅಸ್ಮಿತೆಯನ್ನು ಸಂವಿಧಾನದ 21ನೇ ವಿಧಿಗೆ (ಜೀವಿಸುವ ಮತ್ತು ಘನತೆಯ ಹಕ್ಕು) ಸೇರಿಸಿತು.
    • ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಕಾಯ್ದೆ, 2019: ಇದು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳನ್ನು ವ್ಯಾಖ್ಯಾನಿಸುತ್ತದೆ ಹಾಗೂ ‘ಸ್ವಯಂ-ಗ್ರಹಿಕೆಯ ಅಸ್ಮಿತೆಯ ಹಕ್ಕನ್ನು’ ಖಾತರಿಪಡಿಸುತ್ತದೆ. ಉದ್ಯೋಗ ಮತ್ತು ಶಿಕ್ಷಣದಲ್ಲಿನ ತಾರತಮ್ಯವನ್ನು ನಿಷೇಧಿಸುವುದರ ಜೊತೆಗೆ, ಸ್ವಂತ ಮನೆಯಲ್ಲಿ ವಾಸಿಸುವ ಹಕ್ಕನ್ನು ಇದು ಒದಗಿಸುತ್ತದೆ.
    • ಈ ಕಾಯ್ದೆಯು ‘ಜಿಲ್ಲಾ ದಂಡಾಧಿಕಾರಿ’ಯಿಂದ ಪ್ರಮಾಣೀಕರಣ ಪಡೆಯುವ ವ್ಯವಸ್ಥೆಯನ್ನು ಪರಿಚಯಿಸಿತು.
    • ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ತಿದ್ದುಪಡಿ) ಕಾಯ್ದೆ, 2026: ಇದು ಕಾನೂನಾತ್ಮಕ ಮಾನ್ಯತೆ ಪಡೆಯುವ ಮೊದಲು ‘ವೈದ್ಯಕೀಯ ಮಂಡಳಿಯ ಪ್ರಮಾಣೀಕರಣ’ವನ್ನು ಕಡ್ಡಾಯಗೊಳಿಸುತ್ತದೆ; ಸ್ವಯಂ-ಗ್ರಹಿಕೆಯ ಅಸ್ಮಿತೆಯ ಮೇಲಿದ್ದ ಸ್ಪಷ್ಟ ಮಾನ್ಯತೆಯನ್ನು ತೆಗೆದುಹಾಕುತ್ತದೆ; ಮತ್ತು ಕಠಿಣ ವ್ಯಾಖ್ಯಾನಗಳು ಹಾಗೂ ದಂಡನಾತ್ಮಕ ನಿಬಂಧನೆಗಳನ್ನು ಪರಿಚಯಿಸುತ್ತದೆ.

    ಸರ್ವೋಚ್ಚ ನ್ಯಾಯಾಲಯವು ಗುರುತಿಸಿದ ಪ್ರಮುಖ ಸಮಸ್ಯೆಗಳು:

    • ಸ್ವಯಂ-ಗುರುತಿಸುವಿಕೆ v/s ವೈದ್ಯಕೀಯ ನಿರ್ಬಂಧ: ಇದು ವ್ಯಕ್ತಿಯ ದೈಹಿಕ ಸ್ವಾಯತ್ತತೆ ಮತ್ತು ಘನತೆಯನ್ನು (ವಿಧಿ 21) ಉಲ್ಲಂಘಿಸುತ್ತದೆ, ಹಾಗೂ ರಾಜ್ಯದಿಂದ ‘ವೈದ್ಯಕೀಯ ನಿರ್ಬಂಧ’ವನ್ನು ಸೃಷ್ಟಿಸುತ್ತದೆ. ‘ವೈದ್ಯಕೀಯ ಮೌಲ್ಯಮಾಪನ’ವು ವ್ಯಕ್ತಿಯ ಅಸ್ಮಿತೆಯ ಸ್ವಾಯತ್ತತೆಯನ್ನು ಕುಗ್ಗಿಸುತ್ತದೆ.
    • ದುರ್ಬಳಕೆಯ ಭೀತಿ v/s ಹಕ್ಕುಗಳ ರಕ್ಷಣೆ: ಮೀಸಲಾತಿ ಅಥವಾ ಕಲ್ಯಾಣ ಯೋಜನೆಗಳನ್ನು ಪಡೆಯಲು ‘ಸೋಗು ಹಾಕುವ’ ಅಪಾಯಗಳ ಕುರಿತು ನ್ಯಾಯಾಲಯವು ಎಚ್ಚರಿಸಿದೆ.
    1. ಆದಾಗ್ಯೂ, ಈ ಸೌಲಭ್ಯಗಳ ದುರ್ಬಳಕೆಯ ಸಾಧ್ಯತೆಯು ಅತ್ಯಲ್ಪವಾಗಿರುತ್ತದೆ. ಇವರನ್ನು ವ್ಯವಸ್ಥಿತವಾಗಿ ಸಮಾಜದಿಂದ ಹೊರಗಿಡುವುದಕ್ಕೆ ಹೋಲಿಸಿದರೆ, ದುರ್ಬಳಕೆಯ ಕುರಿತಾದ ಆತಂಕಗಳನ್ನು ಅತಿಯಾಗಿ ಉತ್ಪ್ರೇಕ್ಷೆ ಮಾಡಲಾಗುತ್ತಿದೆ.
    • ನಾಲ್ಸಾ (NALSA) ತತ್ವಗಳ ಮೇಲಿನ ಪರಿಣಾಮ: 2026 ರ ತಿದ್ದುಪಡಿಯು ‘ಸ್ವಯಂ-ಗುರುತಿಸುವಿಕೆಯ ಸಿದ್ಧಾಂತ’ವನ್ನು ದುರ್ಬಲಗೊಳಿಸುತ್ತದೆ ಮತ್ತು ಜೈವಿಕ ಅಗತ್ಯತಾವಾದವನ್ನು (Biological essentialism – ಕೇವಲ ಜೈವಿಕ ಆಧಾರದ ಮೇಲೆ ಲಿಂಗ ನಿರ್ಧರಿಸುವುದು) ಮರಳಿ ಪರಿಚಯಿಸುತ್ತದೆ.
    • ಇದು ಹಕ್ಕು-ಆಧಾರಿತ ಚೌಕಟ್ಟಿನಿಂದ ನಿಯಂತ್ರಕ ಚೌಕಟ್ಟಿನೆಡೆಗಿನ ‘ಹಿಮ್ಮುಖ ಚಲನೆ ಅಥವಾ ಹಿನ್ನಡೆ’ಯಾಗಿ ಕಾರ್ಯನಿರ್ವಹಿಸುತ್ತದೆ.
    • ಆರೋಗ್ಯ ರಕ್ಷಣೆ ಮತ್ತು ಪರಿವರ್ತನೆಯ ಹಕ್ಕುಗಳು: ಪ್ರಸ್ತುತ ನಡೆಯುತ್ತಿರುವ ‘ಲಿಂಗ-ದೃಢೀಕರಣ ಚಿಕಿತ್ಸೆ’ಗಳಿಗೆ ಇದರಿಂದ ತೀವ್ರ ಅಡ್ಡಿಯುಂಟಾಗುತ್ತದೆ ಎಂದು ಆರೋಪಿಸಲಾಗಿದೆ.
    • ಭಾರತದಲ್ಲಿ ಈ ವರ್ಗಕ್ಕೆ ಆರೋಗ್ಯ ಸೇವೆಯ ಲಭ್ಯತೆಯು ಈಗಾಗಲೇ ಸೀಮಿತವಾಗಿದೆ ಮತ್ತು ಕಳಂಕದಿಂದ ಕೂಡಿದೆ.
    • ವರ್ಗೀಕರಣ ಮತ್ತು ಕಳಂಕ: ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಜೊತೆಗೆ ದಬ್ಬಾಳಿಕೆಗೆ ಒಳಗಾದ ಸಂತ್ರಸ್ತರನ್ನು ಒಟ್ಟಿಗೆ ಸೇರಿಸುವುದು ತರ್ಕಬದ್ಧವಲ್ಲದ ಮತ್ತು ಕಳಂಕಿತ ವರ್ಗೀಕರಣಕ್ಕೆ ಕಾರಣವಾಗುತ್ತದೆ (ಇದು ಸಂವಿಧಾನದ 14 ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ).

    ರು-ಸೋಮ್ ಸೇತುವೆಗಳು (Ru-Soam Bridges)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಸ್ಥಳೀಯ ‘ರು-ಸೋಮ್’ (ಬೆತ್ತದ ಸೇತುವೆ) ವಾಸ್ತುಶಿಲ್ಪ ಮತ್ತು ತಾಂತ್ರಿಕ ಕೌಶಲ್ಯಗಳನ್ನು ದಾಖಲಿಸಲು ‘ಯುನೆಸ್ಕೋ’ (UNESCO) ಸಂಸ್ಥೆಯು ಸಿಕ್ಕಿಂ ಸರ್ಕಾರದೊಂದಿಗೆ ಪಾಲುದಾರಿಕೆ ಹೊಂದಿದೆ.
    • ಪ್ರವಾಸೋದ್ಯಮ ಸಂಸ್ಥೆಯಾದ ‘ಏರ್‌ಬಿಎನ್‌ಬಿ’ (Airbnb) ನೆರವಿನೊಂದಿಗೆ, ಈ ಯೋಜನೆಯನ್ನು ‘ಕಾಂಚನಜುಂಗಾ ಜೀವಿಗೋಳ ಸಂರಕ್ಷಿತ ವಲಯ’ದಲ್ಲಿ ಜಾರಿಗೊಳಿಸಲಾಗುತ್ತಿದೆ.

    ರು-ಸೋಮ್ ಸೇತುವೆಗಳ ಬಗ್ಗೆ:

    • ‘ರು-ಸೋಮ್’ ಎನ್ನುವುದು ಲೆಪ್ಚಾ ಸಮುದಾಯವು ನಿರ್ಮಿಸುವ ಸಾಂಪ್ರದಾಯಿಕ ಬೆತ್ತದ ಸೇತುವೆಗಳಾಗಿವೆ.
    • ಬಿದಿರು, ಬೆತ್ತ ಮತ್ತು ಮರದಂತಹ ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಈ ಸೇತುವೆಗಳನ್ನು ನಿರ್ಮಿಸಲಾಗುತ್ತದೆ.
    • ಗುಡ್ಡಗಾಡು ಮತ್ತು ಪರ್ವತ ಪ್ರದೇಶಗಳಿಗೆ ಹೊಂದುವಂತಹ ಉನ್ನತ ಮಟ್ಟದ ಪರಿಸರ ಜ್ಞಾನ ಮತ್ತು ಅತ್ಯುತ್ತಮ ‘ರಚನಾತ್ಮಕ ಸ್ಥಿತಿಸ್ಥಾಪಕತ್ವ’ವನ್ನು ಈ ಸೇತುವೆಗಳು ಪ್ರತಿಬಿಂಬಿಸುತ್ತವೆ.
    • 2023 ರಲ್ಲಿ ಸಂಭವಿಸಿದ ಭೀಕರ ‘ಸಿಕ್ಕಿಂ ಹಿಮನದಿ ಸರೋವರ ಸ್ಫೋಟ ಪ್ರವಾಹ’ದ (GLOF) ಸಂದರ್ಭದಲ್ಲಿಯೂ ಈ ಸೇತುವೆಗಳು ತಮ್ಮ ಸ್ಥಿತಿಸ್ಥಾಪಕತ್ವ ಮತ್ತು ಸದೃಢತೆಯನ್ನು ಸಾಬೀತುಪಡಿಸಿವೆ.

    ತಾಂಜಾನಿಯಾ (Tanzania)

    ಭೂಗೋಳ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ತಾಂಜಾನಿಯಾದ ದಾರ್ ಎಸ್ ಸಲಾಮ್‌ನಲ್ಲಿ (Dar es Salaam), ‘ಭಾರತ-ತಾಂಜಾನಿಯಾ ಜಂಟಿ ವ್ಯಾಪಾರ ಸಮಿತಿ’ಯ (JTC) 5ನೇ ಅಧಿವೇಶನವು ಜರುಗಿತು.

    ತಾಂಜಾನಿಯಾ ದೇಶದ ಭೌಗೋಳಿಕ ಲಕ್ಷಣಗಳು:

    • ಇದು ಸಮಭಾಜಕ ವೃತ್ತದ ಸ್ವಲ್ಪ ದಕ್ಷಿಣಕ್ಕೆ ನೆಲೆಗೊಂಡಿರುವ ಪೂರ್ವ ಆಫ್ರಿಕಾದ ರಾಷ್ಟ್ರವಾಗಿದೆ.
    • ‘ಡೊಡೊಮಾ’ (Dodoma) ಇದರ ರಾಜಧಾನಿಯಾಗಿದ್ದು, ‘ದಾರ್ ಎಸ್ ಸಲಾಮ್’ ಇಲ್ಲಿನ ಅತಿ ದೊಡ್ಡ ನಗರ ಹಾಗೂ ಪ್ರಮುಖ ಬಂದರು ಪಟ್ಟಣವಾಗಿದೆ.
    • ನೆರೆಹೊರೆಯ ರಾಷ್ಟ್ರಗಳು ಮತ್ತು ಗಡಿಗಳು:
    1. ಉತ್ತರಕ್ಕೆ  ಉಗಾಂಡಾ, ಕೀನ್ಯಾ ಮತ್ತು ವಿಕ್ಟೋರಿಯಾ ಸರೋವರ.
    2. ಪೂರ್ವಕ್ಕೆ: ಹಿಂದೂ ಮಹಾಸಾಗರ.
    3. ದಕ್ಷಿಣಕ್ಕೆ: ಮೋಜಾಂಬಿಕ್, ಮಳಾವಿ, ಜಾಂಬಿಯಾ ಮತ್ತು ನ್ಯಾಸಾ ಸರೋವರ.
    4. ಪಶ್ಚಿಮಕ್ಕೆ: ರುವಾಂಡಾ, ಬುರುಂಡಿ ಮತ್ತು ಟಾಂಗನ್ಯಿಕಾ ಸರೋವರ.
    • ಕಿಲಿಮಂಜಾರೊ ಪರ್ವತ: ತಾಂಜಾನಿಯಾದಲ್ಲಿರುವ ಈ ಪರ್ವತವು ಆಫ್ರಿಕಾ ಖಂಡದ ಅತ್ಯುನ್ನತ ಶಿಖರವಾಗಿದೆ.
    • ಆಫ್ರಿಕಾದ ಅತಿ ದೊಡ್ಡ ಸರೋವರ ಹಾಗೂ ನೈಲ್ ನದಿಯ ಉಗಮಸ್ಥಾನವಾದ ‘ವಿಕ್ಟೋರಿಯಾ ಸರೋವರ’ದ ಒಂದು ಭಾಗವು ತಾಂಜಾನಿಯಾದಲ್ಲಿದೆ.
    • ಪ್ರಮುಖ ನದಿಗಳು: ಗ್ರೇಟ್ ರುವಾಹಾ, ರುಫಿಜಿ ಮತ್ತು ಕಾಗೇರಾ ನದಿಗಳು.
    • ಟಾಂಗನ್ಯಿಕಾ ಸರೋವರ: ಇದು ತಾಂಜಾನಿಯಾ ಮತ್ತು ‘ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ’ (DRC) ರಾಷ್ಟ್ರಗಳ ನಡುವೆ ನೈಸರ್ಗಿಕ ಗಡಿಯನ್ನು ನಿರ್ಮಿಸುತ್ತದೆ.

    ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK) 2.0 ಮಾರ್ಗಸೂಚಿಗಳು

    ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ಮುಕ್ತಾಯಗೊಂಡ ‘ಸಾರ್ವಜನಿಕ ಆರೋಗ್ಯ ಸೇವಾ ವಿತರಣೆಯಲ್ಲಿನ ಉತ್ತಮ ಕಾರ್ಯವಿಧಾನಗಳು ಮತ್ತು ನಾವೀನ್ಯತೆಗಳ ರಾಷ್ಟ್ರೀಯ ಶೃಂಗಸಭೆ’ಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK) 2.0’ದ ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

    ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ(RBSK)ದ ಬಗ್ಗೆ: 

    • ಇದು ‘ರಾಷ್ಟ್ರೀಯ ಆರೋಗ್ಯ ಅಭಿಯಾನ’ದ (National Health Mission – NHM) ಅಡಿಯಲ್ಲಿ ಜಾರಿಗೊಳಿಸಲಾದ ಪ್ರಮುಖ ರಾಷ್ಟ್ರೀಯ ಉಪಕ್ರಮವಾಗಿದೆ.
    • ಅನುಷ್ಠಾನ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ.
    • ಉದ್ದೇಶ: ಜನನದಿಂದ 18 ವರ್ಷದವರೆಗಿನ ಮಕ್ಕಳಲ್ಲಿ ಕಂಡುಬರುವ ಜನ್ಮಜಾತ ನ್ಯೂನತೆಗಳು, ಪೋಷಕಾಂಶಗಳ ಕೊರತೆ, ಬಾಲ್ಯದ ರೋಗಗಳು ಮತ್ತು ಬೆಳವಣಿಗೆಯ ವಿಳಂಬದಂತಹ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳುವುದು ಇದರ ಪ್ರಧಾನ ಉದ್ದೇಶವಾಗಿದೆ.
    • ಉದ್ದೇಶಿತ ಫಲಾನುಭವಿಗಳು: ವ್ಯವಸ್ಥಿತ ಕಣ್ಗಾವಲಿಗಾಗಿ ಈ ಕಾರ್ಯಕ್ರಮವು ಮಕ್ಕಳನ್ನು ಅವರ ವಯಸ್ಸಿಗನುಗುಣವಾಗಿ ವಿವಿಧ ಗುಂಪುಗಳಾಗಿ ವಿಂಗಡಿಸುತ್ತದೆ:
      • 0 ರಿಂದ 6 ವಾರಗಳು: ಹೆರಿಗೆ ಕೇಂದ್ರಗಳಲ್ಲಿ ಹಾಗೂ ಆಶಾ (ASHA) ಕಾರ್ಯಕರ್ತೆಯರ ಮನೆ ಭೇಟಿಯ ಮೂಲಕ ನವಜಾತ ಶಿಶುಗಳ ತಪಾಸಣೆ.
      • 6 ವಾರಗಳಿಂದ 6 ವರ್ಷ: ಅಂಗನವಾಡಿ ಕೇಂದ್ರಗಳಲ್ಲಿ ಶಾಲಾಪೂರ್ವ ಮಕ್ಕಳ ಆರೋಗ್ಯ ಮೇಲ್ವಿಚಾರಣೆ.
      • 6 ವರ್ಷದಿಂದ 18 ವರ್ಷ: ಸರ್ಕಾರಿ ಮತ್ತು ಸರ್ಕಾರಿ-ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ತಪಾಸಣೆ.
    • “4Ds” ಕಾರ್ಯತಂತ್ರ (The “4Ds” Strategy): RBSK ಯೋಜನೆಯು ಆಯ್ದ 30 ರಿಂದ 32 ಆರೋಗ್ಯ ಸಮಸ್ಯೆಗಳನ್ನು ನಾಲ್ಕು ಪ್ರಮುಖ ವರ್ಗಗಳಾಗಿ ವಿಂಗಡಿಸಿ, ವ್ಯವಸ್ಥಿತ ತಪಾಸಣೆ ಹಾಗೂ ಉಚಿತ ಚಿಕಿತ್ಸೆಯನ್ನು ಒದಗಿಸುತ್ತದೆ. ಅವುಗಳೆಂದರೆ,
    1. ಜನ್ಮಜಾತ ನ್ಯೂನತೆಗಳು: ಡೌನ್ ಸಿಂಡ್ರೋಮ್ (ವರ್ಣತಂತು ಅಸಹಜತೆ), ಜನ್ಮಜಾತ ಕಣ್ಣಿನ ಪೊರೆ, ಸೀಳು ತುಟಿ/ಅಂಗುಳು, ವಕ್ರಪಾದ ಮತ್ತು ಜನ್ಮಜಾತ ಹೃದಯ ಕಾಯಿಲೆಗಳು.
    2. ಪೋಷಕಾಂಶಗಳ ಕೊರತೆ: ರಕ್ತಹೀನತೆ, ವಿಟಮಿನ್ ‘ಎ’ ಅಥವಾ ‘ಡಿ’ ಕೊರತೆ, ತೀವ್ರ ಸ್ವರೂಪದ ಅಪೌಷ್ಟಿಕತೆ ಮತ್ತು ಗಾಯಿಟ್ರೆ (ಗಳಗಂಡ ರೋಗ).
    3. ಬಾಲ್ಯದ ರೋಗಗಳು: ಚರ್ಮದ ಕಾಯಿಲೆಗಳು, ಓಟಿಟಿಸ್ ಮೀಡಿಯಾ (ಮಧ್ಯ ಕಿವಿಯ ಸೋಂಕು), ರುಮಾಟಿಕ್ ಹೃದಯ ಕಾಯಿಲೆ ಮತ್ತು ಉಸಿರಾಟ ನಾಳದ ಪ್ರತಿಕ್ರಿಯಾತ್ಮಕ ಕಾಯಿಲೆ.
    4. ಬೆಳವಣಿಗೆಯ ವಿಳಂಬ ಮತ್ತು ವಿಕಲಾಂಗತೆಗಳು: ದೃಷ್ಟಿ ದೋಷ, ಶ್ರವಣ ದೋಷ, ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಮತ್ತು ಸೆರೆಬ್ರಲ್ ಪಾಲ್ಸಿ (ಮಿದುಳಿನ ಲಕ್ವ).

    ಹಂಟಾವೈರಸ್ ಸೋಂಕು ಹರಡುವಿಕೆ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಅಟ್ಲಾಂಟಿಕ್ ಮಹಾಸಾಗರದಲ್ಲಿ ಸಂಚರಿಸುತ್ತಿದ್ದ ಐಷಾರಾಮಿ ಪ್ರವಾಸಿ ನೌಕೆಯೊಂದರಲ್ಲಿ ‘ಹಂಟಾವೈರಸ್’ ಸೋಂಕಿನಿಂದಾಗಿ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ‘ವಿಶ್ವ ಆರೋಗ್ಯ ಸಂಸ್ಥೆ’ (WHO) ವರದಿ ಮಾಡಿದೆ.

    ಹಂಟಾವೈರಸ್ (Hantavirus) ಬಗ್ಗೆ:

    • ಕಾರಣವಾಗುವ ರೋಗಕಾರಕ: ಇದೊಂದು ಅಪರೂಪದ ಆದರೆ ತೀವ್ರ ಸ್ವರೂಪದ ಪ್ರಾಣಿಜನ್ಯ ರೋಗವಾಗಿದೆ. ಅಂದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಇದು ‘ಹಂಟಾವಿರಿಡೆ’ (Hantaviridae) ಕುಟುಂಬಕ್ಕೆ ಸೇರಿದ್ದು, ಆರ್‌ಎನ್‌ಎ (RNA) ಮಾದರಿಯ ವೈರಸ್ ಆಗಿದೆ.
    • ರೋಗವಾಹಕ : ಈ ವೈರಸ್ ಪ್ರಮುಖವಾಗಿ ಇಲಿ ಮತ್ತು ಹೆಗ್ಗಣಗಳಂತಹ ದಂಶಕಗಳ ಮೂಲಕ ಹರಡುತ್ತದೆ.
    • ಸೋಂಕಿತ ದಂಶಕಗಳ ಮೂತ್ರ ಅಥವಾ ಮಲದಿಂದ ಗಾಳಿಯಲ್ಲಿ ಬೆರೆಯುವ ವಾಯುಗಾಮಿ ಕಣಗಳನ್ನು ಉಸಿರಾಡುವುದರಿಂದ ಅಥವಾ ಸೋಂಕಿತ ಮೇಲ್ಮೈಗಳನ್ನು ಸ್ಪರ್ಶಿಸುವ ಮೂಲಕ ಇದು ಮನುಷ್ಯರಿಗೆ ಹರಡುತ್ತದೆ.
    • ಈ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಅತ್ಯಂತ ವಿರಳವಾಗಿರುತ್ತದೆ.
    • ರೋಗಲಕ್ಷಣಗಳು: ಸೋಂಕಿಗೆ ತುತ್ತಾದ ಒಂದು ಅಥವಾ ಎಂಟು ವಾರಗಳ ಒಳಗೆ ಜ್ವರ ಮತ್ತು ತೀವ್ರ ಆಯಾಸದಂತಹ ಜ್ವರ (ಫ್ಲೂ)ದಂತಹ ಲಕ್ಷಣಗಳೊಂದಿಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ.
    • ತೀವ್ರತರವಾದ ಪ್ರಕರಣಗಳಲ್ಲಿ, ಇದು ‘ಹಂಟಾವೈರಸ್ ಪಲ್ಮನರಿ ಸಿಂಡ್ರೋಮ್’ಗೆ ಪರಿವರ್ತನೆ ಆಗಬಹುದು. ಇದು ಉಸಿರಾಟದ ತೀವ್ರ ತೊಂದರೆಯನ್ನು ಉಂಟುಮಾಡಿ, ಮಾರಣಾಂತಿಕವೂ ಆಗಬಹುದು.
    • ಚಿಕಿತ್ಸೆ: ಈ ರೋಗವನ್ನು ಗುಣಪಡಿಸಲು ಯಾವುದೇ ನಿರ್ದಿಷ್ಟ ಔಷಧಗಳಿಲ್ಲ. ಹೀಗಾಗಿ, ರೋಗದ ಲಕ್ಷಣಗಳ ಆಧಾರದ ಮೇಲೆ ಪೂರಕ ಆರೈಕೆ ನೀಡುವುದರ ಕಡೆಗೆ ಹೆಚ್ಚು ಗಮನಹರಿಸಲಾಗುತ್ತದೆ. ತೀವ್ರ ಸ್ವರೂಪದ ಪ್ರಕರಣಗಳಲ್ಲಿ ರೋಗಿಗಳಿಗೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಅಳವಡಿಸುವುದು ಇದರಲ್ಲಿ ಸೇರಿದೆ.
  • ರಕ್ಷಣಾ ಪಡೆಗಳ ಮುಖ್ಯಸ್ಥರು (CDS) : ಎನ್.ಎಸ್. ರಾಜಾ ಸುಬ್ರಮಣಿ | ಸರ್ದಾರ್ ವಲ್ಲಭಭಾಯಿ ಪಟೇಲ್ | ತ್ವರಿತ ವಿಚಾರಣೆಯು ಒಂದು ‘ಮಾನವ ಹಕ್ಕು’ (Speedy Trial a ‘Human Right’) | PCOS ಅನ್ನು PMOS ಎಂದು ಮರುನಾಮಕರಣ | ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (PM SHRI) | ಮಲೇರಿಯಾ ಲಸಿಕೆಯ ಕುರಿತಾದ ಅಧ್ಯಯನ | ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳು, 2026

    ರಕ್ಷಣಾ ಪಡೆಗಳ ಮುಖ್ಯಸ್ಥರು (CDS) : ಎನ್.ಎಸ್. ರಾಜಾ ಸುಬ್ರಮಣಿ

    ರಕ್ಷಣೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತ ಸರ್ಕಾರವು ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರನ್ನು ನೂತನ ‘ರಕ್ಷಣಾ ಪಡೆಗಳ ಮುಖ್ಯಸ್ಥ’ರನ್ನಾಗಿ (Chief of Defence Staff – CDS) ನೇಮಕ ಮಾಡಿದೆ.
    • ಅವರು ‘ಸೇನಾ ವ್ಯವಹಾರಗಳ ಇಲಾಖೆ’ಯ (Department of Military Affairs – DMA) ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

    ರಕ್ಷಣಾ ಪಡೆಗಳ ಮುಖ್ಯಸ್ಥರು (Chief of Defence Staff – CDS):

    • ‘ಕಾರ್ಗಿಲ್ ಪರಾಮರ್ಶನಾ ಸಮಿತಿ’ಯ ಶಿಫಾರಸುಗಳು ಹಾಗೂ ನಂತರದ ರಕ್ಷಣಾ ಸುಧಾರಣೆಗಳ ಭಾಗವಾಗಿ 2019 ರಲ್ಲಿ CDS ಹುದ್ದೆಯನ್ನು ಸೃಷ್ಟಿಸಲಾಯಿತು.
    • ಭಾರತದ ಪ್ರಥಮ CDS ಆಗಿ ಜನರಲ್ ಬಿಪಿನ್ ರಾವತ್ ಅವರು ಸೇವೆ ಸಲ್ಲಿಸಿದ್ದರು.

    ಸಿಡಿಎಸ್ (CDS) ಅವರ ಪಾತ್ರ ಮತ್ತು ಜವಾಬ್ದಾರಿಗಳು:

    • ಪ್ರಧಾನ ಸೇನಾ ಸಲಹೆಗಾರರು: ರಕ್ಷಣಾ ಸಚಿವರಿಗೆ ಮೂರು ಸಶಸ್ತ್ರ ಪಡೆಗಳಿಗೆ (ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ) ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಪ್ರಧಾನ ಸೇನಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ.
    • ಸೇನಾ ವ್ಯವಹಾರಗಳ ಇಲಾಖೆ: ಭಾರತ ಸರ್ಕಾರದ ‘ಸೇನಾ ವ್ಯವಹಾರಗಳ ಇಲಾಖೆ’ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ.
    • ಸೇನಾ ಸುಧಾರಣೆ: ಸಶಸ್ತ್ರ ಪಡೆಗಳ ಕಾರ್ಯಾಚರಣೆಗಳಲ್ಲಿ ಸಮನ್ವಯ, ಜಂಟಿ ಕಾರ್ಯಾಚರಣೆ ಹಾಗೂ ಸೇನಾ ಪಡೆಗಳ ಆಧುನೀಕರಣವನ್ನು ಹೆಚ್ಚಿಸುವ ಕಡೆಗೆ ಗಮನಹರಿಸುತ್ತಾರೆ.
    • ಸಂಯುಕ್ತ ಸೇನಾ ಕಮಾಂಡ್‌ಗಳು (Theater Commands): ಪ್ರಸ್ತುತವಿರುವ ಸೇನಾ ಕಮಾಂಡ್‌ಗಳನ್ನು ‘ಏಕೀಕೃತ ಸಂಯುಕ್ತ ಸೇನಾ ಕಮಾಂಡ್‌’ಗಳಾಗಿ ಮರುರೂಪಿಸುವ ಪ್ರಕ್ರಿಯೆಯನ್ನು ಇವರು ಮುನ್ನಡೆಸುತ್ತಾರೆ.
    • ಕಾರ್ಯತಂತ್ರ ಮತ್ತು ಪರಮಾಣು ಪಾತ್ರ: ‘ಪರಮಾಣು ಕಮಾಂಡ್ ಪ್ರಾಧಿಕಾರ’ಕ್ಕೆ ಪ್ರಮುಖ ಸೇನಾ ಸಲಹೆಗಾರರಾಗಿ ಇವರು ಸೇವೆ ಸಲ್ಲಿಸುತ್ತಾರೆ.

    ಸರ್ದಾರ್ ವಲ್ಲಭಭಾಯಿ ಪಟೇಲ್

    ಇತಿಹಾಸ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಸೋಮನಾಥ ದೇವಾಲಯದ ಪುನರ್ ನಿರ್ಮಾಣದ 75 ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸಿದರು.

    ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬಗ್ಗೆ:

    • ಜನನ: ಅಕ್ಟೋಬರ್ 31, 1875.
    • ಇವರು ಸ್ವತಂತ್ರ ಭಾರತದ ಪ್ರಥಮ ಉಪಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದರು.
    • ಇವರನ್ನು ಭಾರತದ ‘ರಾಷ್ಟ್ರೀಯ ಏಕೀಕರಣದ ಶಿಲ್ಪಿ’ ಹಾಗೂ ‘ಆಧುನಿಕ ನಾಗರಿಕ ಸೇವೆಗಳ’ ಸ್ಥಾಪನೆಯ ಹಿಂದಿನ ಪ್ರಮುಖ ಶಕ್ತಿ ಎಂದು ವ್ಯಾಪಕವಾಗಿ ಗೌರವಿಸಲಾಗುತ್ತದೆ.
    • 1991 ರಲ್ಲಿ ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು.

    ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇವರ ಕೊಡುಗೆಗಳು:

    • ಖೇಡಾ ಸತ್ಯಾಗ್ರಹ, 1917: ಗುಜರಾತಿನ ಖೇಡಾ ಜಿಲ್ಲೆಯ ಪ್ರಮುಖ ಸ್ಥಳೀಯ ನಾಯಕರಾಗಿದ್ದ ಪಟೇಲರು, ಬ್ರಿಟಿಷರು ವಿಧಿಸಿದ್ದ ಅನ್ಯಾಯದ ಭೂಕಂದಾಯದ ವಿರುದ್ಧ ಸತ್ಯಾಗ್ರಹವನ್ನು ಸಂಘಟಿಸಲು ಮಹಾತ್ಮಾ ಗಾಂಧಿಯವರಿಗೆ ಬೆಂಬಲ ನೀಡಿದರು.
    • ಅಸಹಕಾರ ಚಳುವಳಿ, 1920-22: ಅಸಹಕಾರ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು, ಸುಮಾರು 3 ಲಕ್ಷ ಜನರನ್ನು ಚಳುವಳಿಗೆ ಸೇರ್ಪಡೆಗೊಳಿಸಿದರು ಮತ್ತು ₹ 15 ಲಕ್ಷ (1.5 ಮಿಲಿಯನ್) ರೂಪಾಯಿಗಳ ನಿಧಿಯನ್ನು ಸಂಗ್ರಹಿಸಿದರು.
    • ಬಾರ್ಡೋಲಿ ಸತ್ಯಾಗ್ರಹ, 1928: ಬಾರ್ಡೋಲಿ ಸತ್ಯಾಗ್ರಹದ ಸಮಯದಲ್ಲಿ, ತೀವ್ರ ಬರಗಾಲ ಮತ್ತು ಹೆಚ್ಚಾದ ಭೂಕಂದಾಯದಿಂದ ಬಳಲುತ್ತಿದ್ದ ಸ್ಥಳೀಯ ಜನತೆಗೆ ಪಟೇಲರು ಬಲವಾದ ಬೆಂಬಲ ನೀಡಿದರು.
    • ಕಾನೂನು ಭಂಗ ಚಳುವಳಿ, 1930-34: ಬ್ರಿಟಿಷರ ಉಪ್ಪಿನ ಏಕಸ್ವಾಮ್ಯದ ವಿರುದ್ಧದ ಅಹಿಂಸಾತ್ಮಕ ಪ್ರತಿಭಟನೆಯಾದ ‘ಉಪ್ಪಿನ ಸತ್ಯಾಗ್ರಹ’ದಲ್ಲಿ ಇವರು ಸಕ್ರಿಯವಾಗಿ ಭಾಗವಹಿಸಿದರು.
    • ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳುವಳಿ, 1942: ಇವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ತೀವ್ರ ಪ್ರತಿಭಟನೆಗಳು ಮತ್ತು ಮುಷ್ಕರಗಳನ್ನು ಸಂಘಟಿಸಿದರು. ಭಾರತದಾದ್ಯಂತ ಅತ್ಯಂತ ಪ್ರಭಾವಶಾಲಿ ಹಾಗೂ ಸ್ಪೂರ್ತಿದಾಯಕ ಭಾಷಣಗಳನ್ನು ಮಾಡುವ ಮೂಲಕ ಜನರನ್ನು ಬೃಹತ್ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲು, ಕಾನೂನಿನ ಉಲ್ಲಂಘನೆಯಲ್ಲಿ ತೊಡಗಲು, ತೆರಿಗೆ ಪಾವತಿಯನ್ನು ಬಹಿಷ್ಕರಿಸಲು ಮತ್ತು ನಾಗರಿಕ ಸೇವೆಗಳನ್ನು ಸ್ಥಗಿತಗೊಳಿಸಲು ಪ್ರೇರೇಪಿಸಿದರು.

    ನಿಮಗಿದು ತಿಳಿದಿರಲಿ:

    • ಸರ್ದಾರ್ ಪಟೇಲರ ಜನ್ಮದಿನದ ಸ್ಮರಣಾರ್ಥವಾಗಿ 2014 ರಿಂದ, ಪ್ರತಿ ವರ್ಷ ಅಕ್ಟೋಬರ್ 31 ರಂದು ‘ರಾಷ್ಟ್ರೀಯ ಏಕತಾ ದಿನ’ವನ್ನು ಆಚರಿಸಲಾಗುತ್ತಿದೆ.
    • ಗುಜರಾತಿನ ಕೇವಾಡಿಯಾದಲ್ಲಿ , ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 143 ನೇ ಜನ್ಮದಿನದಂದು (ಅಕ್ಟೋಬರ್ 31, 2018) ಪ್ರಪಂಚದ ಅತ್ಯಂತ ಎತ್ತರದ ಪ್ರತಿಮೆಯಾದ ‘ಏಕತಾ ಪ್ರತಿಮೆ’ಯನ್ನು ಅನಾವರಣಗೊಳಿಸಲಾಯಿತು.
    • 1947 ರಲ್ಲಿ ಸ್ವತಂತ್ರ ಭಾರತದ ಪ್ರಥಮ ಬ್ಯಾಚ್ ನ ನಾಗರಿಕ ಸೇವಾ ಅಧಿಕಾರಿಗಳನ್ನು ಉದ್ದೇಶಿಸಿ ಸರ್ದಾರ್ ಪಟೇಲರು ಮಾಡಿದ ಐತಿಹಾಸಿಕ ಭಾಷಣದ ಸವಿನೆನಪಿಗಾಗಿ, ಪ್ರತಿ ವರ್ಷ ಏಪ್ರಿಲ್ 21 ರಂದು ‘ನಾಗರಿಕ ಸೇವಾ ದಿನ’ವನ್ನು ಆಚರಿಸಲಾಗುತ್ತದೆ.

    ತ್ವರಿತ ವಿಚಾರಣೆಯು ಒಂದು ‘ಮಾನವ ಹಕ್ಕು’ (Speedy Trial a ‘Human Right’)

    ರಾಜಕೀಯ ಮತ್ತು ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಉತ್ತರ ಪ್ರದೇಶದಲ್ಲಿ ಸುಮಾರು 35 ವರ್ಷಗಳಿಂದ ಬಾಕಿ ಉಳಿದಿದ್ದ ಅಪರಾಧ ಪ್ರಕರಣವೊಂದರ ವಿಚಾರಣೆ ನಡೆಸುವಾಗ ಸರ್ವೋಚ್ಚ ನ್ಯಾಯಾಲಯವು, ‘ತ್ವರಿತ ವಿಚಾರಣೆಯ ಹಕ್ಕು’ ಕೇವಲ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿದ್ದ ಸಾಂವಿಧಾನಿಕ ಖಾತರಿಯಷ್ಟೇ ಅಲ್ಲ, ಅದೊಂದು ‘ಮಾನವ ಹಕ್ಕು’ ಕೂಡ ಆಗಿದೆ ಎಂದು ಮಹತ್ವದ ತೀರ್ಪು ನೀಡಿದೆ.

    ಸಂವಿಧಾನದ 21ನೇ ವಿಧಿ:

    • ಸಂವಿಧಾನದ 21ನೇ ವಿಧಿಯು ಕಾನೂನಿನಿಂದ ಸ್ಥಾಪಿತವಾದ ಪ್ರಕ್ರಿಯೆಯ (Procedure established by law) ಹೊರತಾಗಿ, ಪ್ರತಿಯೊಬ್ಬ ವ್ಯಕ್ತಿಗೂ ‘ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ’ಯನ್ನು ಖಾತರಿಪಡಿಸುತ್ತದೆ.
    • ನ್ಯಾಯಾಂಗದ ವ್ಯಾಖ್ಯಾನಗಳು 21ನೇ ವಿಧಿಯ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಇದು ನ್ಯಾಯಸಮ್ಮತ ವಿಚಾರಣೆ, ಉಚಿತ ಕಾನೂನು ನೆರವು, ಸೆರೆಮನೆಯಲ್ಲಿ ಮಾನವೀಯ ವಾತಾವರಣ ಮತ್ತು ತ್ವರಿತ ನ್ಯಾಯವನ್ನು ಒಳಗೊಂಡಿದೆ.

    ನ್ಯಾಯಾಂಗದ ವಿಕಸನ:

    • ಹುಸೇನಾರಾ ಖಾತುನ್ v/s ಬಿಹಾರ ರಾಜ್ಯ ಪ್ರಕರಣ: ಸರ್ವೋಚ್ಚ ನ್ಯಾಯಾಲಯವು 21ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯನ್ನು ‘ಮೂಲಭೂತ ಹಕ್ಕು’ ಎಂದು ಮೊದಲ ಬಾರಿಗೆ ಗುರುತಿಸಿತು. ವರ್ಷಗಳ ಕಾಲ ಜೈಲುಗಳಲ್ಲಿರುವ ವಿಚಾರಣಾಧೀನ ಕೈದಿಗಳ ದುಸ್ಥಿತಿಯ ಕುರಿತು ಈ ಪ್ರಕರಣವು ಗಮನ ಹರಿಸಿತು.
    • ಎ.ಆರ್. ಅಂತುಲೆ v/s ಆರ್.ಎಸ್. ನಾಯಕ್ ಪ್ರಕರಣ: ತ್ವರಿತ ವಿಚಾರಣೆಯ ಹಕ್ಕಿನ ಉಲ್ಲಂಘನೆಯನ್ನು ನಿರ್ಧರಿಸಲು ನ್ಯಾಯಾಲಯವು ಕೆಲವು ತತ್ವಗಳನ್ನು ರೂಪಿಸಿತು. ಆಡಳಿತ ವ್ಯವಸ್ಥೆಯ ನ್ಯೂನತೆಗಳಿಂದ ಉಂಟಾಗುವ ವಿಳಂಬಗಳು ಸಹ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ಇದು ಸ್ಪಷ್ಟಪಡಿಸಿದೆ.

    PCOS ಅನ್ನು PMOS ಎಂದು ಮರುನಾಮಕರಣ

    ಆರೋಗ್ಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ವಿಶ್ವದಾದ್ಯಂತ ವೈದ್ಯರು, ಸಂಶೋಧಕರು ಮತ್ತು ರೋಗಿಗಳ ಹಕ್ಕುಗಳ ಪ್ರತಿಪಾದನಾ ಗುಂಪುಗಳನ್ನು ಒಳಗೊಂಡ ಜಾಗತಿಕ ವೈದ್ಯಕೀಯ ಒಮ್ಮತವು ಸುಮಾರು 14 ವರ್ಷಗಳ ವೈಜ್ಞಾನಿಕ ಸಮಾಲೋಚನೆಗಳ ನಂತರ, ‘ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್’ (PCOS) ಅನ್ನು ‘ಪಾಲಿಎಂಡೋಕ್ರೈನ್ ಮೆಟಬೋಲಿಕ್ ಓವೇರಿಯನ್ ಸಿಂಡ್ರೋಮ್’ (PMOS) ಎಂದು ಅಧಿಕೃತವಾಗಿ ಮರುನಾಮಕರಣ ಮಾಡಿದೆ.

    ಪಿಎಂಓಎಸ್ (PMOS) ಬಗ್ಗೆ:

    • ಹಿಂದೆ ‘ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್’ (PCOS) ಎಂದು ಕರೆಯಲ್ಪಡುತ್ತಿದ್ದ ‘ಪಾಲಿಎಂಡೋಕ್ರೈನ್ ಮೆಟಬೋಲಿಕ್ ಓವೇರಿಯನ್ ಸಿಂಡ್ರೋಮ್’ (PMOS), ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರನ್ನು ಬಾಧಿಸುವ ಒಂದು ಸಂಕೀರ್ಣ ಹಾರ್ಮೋನ್ ಮತ್ತು ಚಯಾಪಚಯ ಅಸ್ವಸ್ಥತೆಯಾಗಿದೆ.
    • ಇದು ಅಂತಃಸ್ರಾವಕ ವ್ಯವಸ್ಥೆ, ಚಯಾಪಚಯ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
    • ಈ ಅಸ್ವಸ್ಥತೆಯು ಜಾಗತಿಕವಾಗಿ ಪ್ರತಿ ಎಂಟು ಮಹಿಳೆಯರಲ್ಲಿ ಒಬ್ಬರಿಗೆ ಬಾಧಿಸುತ್ತಿದ್ದು, ಬಂಜೆತನ ಹಾಗೂ ಋತುಸ್ರಾವದ ವ್ಯತ್ಯಯಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
    • ಪ್ರಮುಖ ಲಕ್ಷಣಗಳು:
    1. ಮಧುಮೇಹದ ಅಪಾಯ: ಇನ್ಸುಲಿನ್ ಪ್ರತಿರೋಧವು ಟೈಪ್-2 ಮಧುಮೇಹಕ್ಕೆ (Type-2 diabetes mellitus) ಕಾರಣವಾಗಬಹುದು.
    2. ಹೃದ್ರೋಗದ ಅಪಾಯಗಳು: PMOS ಹೊಂದಿರುವ ಮಹಿಳೆಯರು ಅಧಿಕ ರಕ್ತದೊತ್ತಡ  ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ.
    3. ಸಂತಾನೋತ್ಪತ್ತಿಯ ಸವಾಲುಗಳು: ಈ ಅಸ್ವಸ್ಥತೆಯು ಅಂಡೋತ್ಪತ್ತಿ ಮತ್ತು ಸಂತಾನೋತ್ಪತ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
    4. ಮಾನಸಿಕ ಆರೋಗ್ಯದ ಸಮಸ್ಯೆಗಳು: ದೀರ್ಘಕಾಲೀನ ಒತ್ತಡ, ದೇಹದ ಬಗ್ಗೆ ಕೀಳರಿಮೆ ಮತ್ತು ಹಾರ್ಮೋನ್‌ಗಳ ಅಸಮತೋಲನವು ಮಾನಸಿಕ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.

    PCOS ಹೆಸರನ್ನು ಬದಲಾಯಿಸಿದ್ದೇಕೆ?

    • ‘ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್’ (PCOS) ಎಂಬ ಹಿಂದಿನ ಹೆಸರು ವೈಜ್ಞಾನಿಕವಾಗಿ ನಿಖರವಾಗಿರಲಿಲ್ಲ ಮತ್ತು ತಪ್ಪು ಕಲ್ಪನೆ ಮೂಡಿಸುವಂತಿತ್ತು. ಏಕೆಂದರೆ, ಈ ಅಸ್ವಸ್ಥತೆಯಿಂದ ಬಳಲುವ ಅನೇಕ ಮಹಿಳೆಯರಲ್ಲಿ ವಾಸ್ತವವಾಗಿ ಅಂಡಾಶಯದ ಚೀಲಗಳು (Ovarian cysts) ರೂಪುಗೊಳ್ಳುವುದೇ ಇಲ್ಲ.
    • ಹಿಂದಿನ ಹೆಸರು ಪ್ರಾಥಮಿಕವಾಗಿ ಈ ಅಸ್ವಸ್ಥತೆಯನ್ನು ಕೇವಲ ಸಂತಾನೋತ್ಪತ್ತಿ ಅಂಗಗಳಿಗೆ ಮಾತ್ರ ಸೀಮಿತಗೊಳಿಸುವಂತಿತ್ತು. ಆದರೆ ವಾಸ್ತವದಲ್ಲಿ, ಈ ಸ್ಥಿತಿಯು ದೇಹದ ಚಯಾಪಚಯ ಕ್ರಿಯೆ, ಹಾರ್ಮೋನ್ ವ್ಯವಸ್ಥೆ, ಹೃದಯದ ಆರೋಗ್ಯ ಹಾಗೂ ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.

    ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (PM SHRI)

    ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಕೇಂದ್ರ ಶಿಕ್ಷಣ ಸಚಿವಾಲಯವು, ‘ಪಿಎಂ-ಶ್ರೀ’ (PM SHRI) ಯೋಜನೆಯ ಅನುಷ್ಠಾನವು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ, ಈ ಯೋಜನೆಯನ್ನು ಕಾರ್ಯಗತಗೊಳಿಸುವಂತೆ ಆಗ್ರಹಿಸಿ ಮತ್ತೊಮ್ಮೆ ಜ್ಞಾಪನಾ ಪತ್ರವನ್ನು ರವಾನಿಸಿದೆ.

    ಪಿಎಂ-ಶ್ರೀ ಶಾಲೆಗಳು (PM SHRI Schools):

    • PM SHRI ವಿಸ್ತೃತ ರೂಪ: ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (PM Schools for Rising India).
    • ಅನುಷ್ಠಾನ ಸಚಿವಾಲಯ: ಕೇಂದ್ರ ಶಿಕ್ಷಣ ಸಚಿವಾಲಯ.
    • ಯೋಜನೆಯ ಸ್ವರೂಪ: ಕೇಂದ್ರ ಪ್ರಾಯೋಜಿತ ಯೋಜನೆ.
    • ಉದ್ದೇಶ: ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿರುವ ಶಾಲೆಗಳ ಪೈಕಿ ಕೆಲವು ಶಾಲೆಗಳನ್ನು ಆಯ್ಕೆಮಾಡಿ ಬಲಪಡಿಸುವ ಮೂಲಕ, ದೇಶದಾದ್ಯಂತ 14,500 ಕ್ಕೂ ಹೆಚ್ಚು ಶಾಲೆಗಳನ್ನು ಉನ್ನತೀಕರಿಸುವುದು ಮತ್ತು ಅಭಿವೃದ್ಧಿಪಡಿಸುವುದು.
    • ವೈಶಿಷ್ಟ್ಯಗಳು:
    1. ಪಿಎಂ-ಶ್ರೀ ಶಾಲೆಗಳು ಶಿಕ್ಷಣವನ್ನು ನೀಡುವಲ್ಲಿ ಅತ್ಯಾಧುನಿಕ, ಪರಿವರ್ತನಾಶೀಲ ಹಾಗೂ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲಿವೆ.
    2. ಈ ಶಾಲೆಗಳು ಅತ್ಯಾಧುನಿಕ ತಂತ್ರಜ್ಞಾನ, ಸ್ಮಾರ್ಟ್ ತರಗತಿಗಳು ಹಾಗೂ ಕ್ರೀಡೆಗಳನ್ನು ಒಳಗೊಂಡಂತೆ ‘ಆಧುನಿಕ ಮೂಲಸೌಕರ್ಯಗಳ’ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಿವೆ.
    3. ಜಲ ಸಂರಕ್ಷಣೆ, ತ್ಯಾಜ್ಯ ಮರುಬಳಕೆ, ಇಂಧನ-ದಕ್ಷ ಮೂಲಸೌಕರ್ಯ ಮತ್ತು ಪಠ್ಯಕ್ರಮದಲ್ಲಿ ನೈಸರ್ಗಿಕ ಜೀವನಶೈಲಿಯನ್ನು ಅಳವಡಿಸುವ ಮೂಲಕ ಈ ಶಾಲೆಗಳನ್ನು “ಹಸಿರು ಶಾಲೆಗಳಾಗಿ” ರೂಪುಗೊಳಿಸಲಾಗುವುದು.
    4. ಒಟ್ಟಾರೆಯಾಗಿ, ಈ ಶಾಲೆಗಳು ‘ರಾಷ್ಟ್ರೀಯ ಶಿಕ್ಷಣ ನೀತಿ 2020’ರ (NEP 2020) ಎಲ್ಲಾ ಆಶಯಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸಲಿವೆ. ಅಲ್ಲದೆ, ಇವು ಅತ್ಯುತ್ತಮ ‘ಮಾದರಿ ಶಾಲೆಗಳಾಗಿ’ ಕಾರ್ಯನಿರ್ವಹಿಸುವುದರ ಜೊತೆಗೆ, ತಮ್ಮ ಸುತ್ತಮುತ್ತಲಿನ ಇತರ ಶಾಲೆಗಳಿಗೂ ಉತ್ತಮ ಮಾರ್ಗದರ್ಶನ ನೀಡಲಿವೆ.

    ಮಲೇರಿಯಾ ಲಸಿಕೆಯ ಕುರಿತಾದ ಅಧ್ಯಯನ

    ಆರೋಗ್ಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಖ್ಯಾತ ವೈದ್ಯಕೀಯ ನಿಯತಕಾಲಿಕೆ ‘ಲ್ಯಾನ್ಸೆಟ್’ ಪ್ರಕಟಿಸಿದ ಪ್ರಮುಖ ಅಧ್ಯಯನದ ಪ್ರಕಾರ, ಪ್ರಪಂಚದ ಮೊಟ್ಟಮೊದಲ ಅಂಗೀಕೃತ ಮಲೇರಿಯಾ ಲಸಿಕೆಯಾದ ‘RTS,S/AS01E’, ಆಫ್ರಿಕಾದ ಕೆಲವು ಭಾಗಗಳಲ್ಲಿ ಮಕ್ಕಳ ಒಟ್ಟಾರೆ ಮರಣ ಪ್ರಮಾಣವನ್ನು ಶೇ. 13% ರಷ್ಟು ತಗ್ಗಿಸಿದೆ.

    ಮಲೇರಿಯಾ ಕಾಯಿಲೆಯ ಬಗ್ಗೆ:

    • ರೋಗಕಾರಕ: ಮಲೇರಿಯಾವು ‘ಪ್ಲಾಸ್ಮೋಡಿಯಂ’ ಎಂಬ ಪರಾವಲಂಬಿ ಜೀವಿಗಳಿಂದ ಬರುವ ತೀವ್ರ ಜ್ವರದ ಕಾಯಿಲೆಯಾಗಿದೆ.
    • ರೋಗವಾಹಕ: ಸೋಂಕಿತ ‘ಹೆಣ್ಣು ಅನಾಫಿಲಿಸ್’ ಸೊಳ್ಳೆಗಳು ಕಚ್ಚುವುದರಿಂದ ಇದು ಮನುಷ್ಯರಿಂದ ಮನುಷ್ಯನಿಗೆ ಹರಡುತ್ತದೆ. 
    • ಈ ರೋಗವನ್ನು ತಡೆಗಟ್ಟಬಹುದು ಮತ್ತು ಗುಣಪಡಿಸಬಹುದು.
    • ಪ್ರಸರಣ: ಮಲೇರಿಯಾವು ಸಾಂಕ್ರಾಮಿಕ ರೋಗವಲ್ಲ. ಅಂದರೆ ಇದು ಸ್ಪರ್ಶದಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ; ಬದಲಾಗಿ ಕೇವಲ ಹೆಣ್ಣು ಅನಾಫಿಲಿಸ್ ಸೊಳ್ಳೆಗಳ ಕಚ್ಚುವಿಕೆಯಿಂದ ಮಾತ್ರ ಹರಡುತ್ತದೆ.
    • ಮನುಷ್ಯರಲ್ಲಿ ಒಟ್ಟು ಐದು ಪ್ರಭೇದದ ಪರಾವಲಂಬಿಗಳು ಮಲೇರಿಯಾವನ್ನು ಉಂಟುಮಾಡುತ್ತವೆ. ಇವುಗಳಲ್ಲಿ ‘ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್’ (Plasmodium falciparum) ಮತ್ತು ‘ಪ್ಲಾಸ್ಮೋಡಿಯಂ ವಿವಾಕ್ಸ್’ (Plasmodium vivax) ಎಂಬ ಎರಡು ಪ್ರಭೇದಗಳು ಅತಿ ಹೆಚ್ಚು ಅಪಾಯಕಾರಿಯಾಗಿವೆ.
    • ರೋಗಲಕ್ಷಣಗಳು: ನವಜಾತ ಶಿಶುಗಳು, 5 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಪ್ರಯಾಣಿಕರು ಮತ್ತು ಎಚ್‌ಐವಿ (HIV) ಅಥವಾ ಏಡ್ಸ್ (AIDS) ಸೋಂಕಿತ ವ್ಯಕ್ತಿಗಳು ಈ ರೋಗಕ್ಕೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ. ಇದರ ತೀವ್ರ ಸ್ವರೂಪದ ಲಕ್ಷಣಗಳು ಈ ಕೆಳಗಿನಂತಿವೆ:
    1. ತೀವ್ರ ಆಯಾಸ ಮತ್ತು ಬಳಲಿಕೆ.
    2. ಪ್ರಜ್ಞಾಹೀನತೆ ಅಥವಾ ಮಂಕು ಕವಿಯುವುದು.
    3. ಪದೇ ಪದೇ ಸ್ನಾಯು ಸೆಳೆತ ಬರುವುದು
    4. ಉಸಿರಾಟದ ತೊಂದರೆ.
    5. ಕಡು ಬಣ್ಣದ ಅಥವಾ ರಕ್ತ ಮಿಶ್ರಿತ ಮೂತ್ರ
    6. ಕಾಮಾಲೆ (ಜಾಂಡಿಸ್) (ಕಣ್ಣು ಮತ್ತು ಚರ್ಮ ಹಳದಿಯಾಗುವುದು)
    7. ಅಸಹಜ ರಕ್ತಸ್ರಾವ

    ಮಲೇರಿಯಾ ನಿಯಂತ್ರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ(WHO)ಯ ಉಪಕ್ರಮಗಳು:

    • ಮಲೇರಿಯಾ ನಿಯಂತ್ರಣದ ಜಾಗತಿಕ ತಾಂತ್ರಿಕ ಕಾರ್ಯತಂತ್ರ 2016–2030: 2015 ರ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು, ಮಲೇರಿಯಾ ಪ್ರಕರಣಗಳ ಸಂಖ್ಯೆ ಮತ್ತು ಮರಣ ಪ್ರಮಾಣವನ್ನು 2020 ರ ವೇಳೆಗೆ ಕನಿಷ್ಠ ಶೇ. 40%, 2025 ರ ವೇಳೆಗೆ ಶೇ. 75% ಮತ್ತು 2030 ರ ವೇಳೆಗೆ ಕನಿಷ್ಠ ಶೇ. 90% ರಷ್ಟು ತಗ್ಗಿಸುವ ಗುರಿಯನ್ನು ಇದು ಹೊಂದಿದೆ.
    • ‘E-2025 ಉಪಕ್ರಮ’: ಈ ಯೋಜನೆಯ ಅಡಿಯಲ್ಲಿ 2025 ರ ವೇಳೆಗೆ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಾಮರ್ಥ್ಯ ಹೊಂದಿರುವ 25 ದೇಶಗಳನ್ನು WHO ಗುರುತಿಸಿದೆ.
    • ಅಧಿಕ ರೋಗಭಾರದಿಂದ ಅಧಿಕ ಪರಿಣಾಮದತ್ತ (High Burden to High Impact – HBHI): ಭಾರತವೂ ಸೇರಿದಂತೆ ಮಲೇರಿಯಾ ಪ್ರಕರಣಗಳ ಹೊರೆ ಅತಿ ಹೆಚ್ಚಾಗಿರುವ 11 ದೇಶಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು (WHO) ಈ ಯೋಜನೆಯನ್ನು ಜಾರಿಗೊಳಿಸಿದೆ.

    ಮಲೇರಿಯಾ ನಿಯಂತ್ರಣಕ್ಕೆ ಭಾರತ ಸರ್ಕಾರದ ಉಪಕ್ರಮಗಳು:

    • ರಾಷ್ಟ್ರೀಯ ಗುರಿ, 2027: ಭಾರತದಲ್ಲಿ 2027 ರ ವೇಳೆಗೆ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
    • ಮಲೇರಿಯಾ ನಿರ್ಮೂಲನೆಗೆ ರಾಷ್ಟ್ರೀಯ ಚೌಕಟ್ಟು (NFME): WHO ನ ಜಾಗತಿಕ ತಾಂತ್ರಿಕ ಕಾರ್ಯತಂತ್ರಕ್ಕೆ (2016-2030) ಅನುಗುಣವಾಗಿ 2016 ರಲ್ಲಿ ಈ ಚೌಕಟ್ಟನ್ನು ರೂಪಿಸಿ ಜಾರಿಗೊಳಿಸಲಾಗಿದೆ.
    • ಮಲೇರಿಯಾ ನಿರ್ಮೂಲನಾ ಸಂಶೋಧನಾ ಒಕ್ಕೂಟ – ಭಾರತ (MERA-India): ಮಲೇರಿಯಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಪಾಲುದಾರರನ್ನು ಒಗ್ಗೂಡಿಸುವ ವೇದಿಕೆಯಾಗಿ ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ’ಯು (ICMR) ಇದನ್ನು ಸ್ಥಾಪಿಸಿದೆ.

    ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳು, 2026

    ಪ್ರಶಸ್ತಿಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭವೊಂದರಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಶುಶ್ರೂಷಕಿಯರಿಗೆ (Nurses) ‘ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ 2026’ ಪ್ರದಾನ ಮಾಡಿದರು.

    ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳ ಬಗ್ಗೆ:

    • ಆಧುನಿಕ ನರ್ಸಿಂಗ್‌ನ ಸಂಸ್ಥಾಪಕಿಯಾದ ‘ಫ್ಲಾರೆನ್ಸ್ ನೈಟಿಂಗೇಲ್’ ಅವರ ಸವಿನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
    • ಇದನ್ನು 1973 ರಲ್ಲಿ ಭಾರತ ಸರ್ಕಾರದ ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ’ವು ಆರಂಭಿಸಿತು.
    • ಸಮಾಜಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿರುವ ಶುಶ್ರೂಷಕಿಯರು ಮತ್ತು ನರ್ಸಿಂಗ್ ವೃತ್ತಿಪರರ ಅತ್ಯುತ್ತಮ ಹಾಗೂ ಶ್ಲಾಘನೀಯ ಸೇವೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
    • ಪ್ರತಿಯೊಂದು ಪ್ರಶಸ್ತಿಯು ಒಂದು ಅರ್ಹತಾ ಪ್ರಮಾಣಪತ್ರ, ರೂ. 1,00,000/- ನಗದು ಬಹುಮಾನ ಹಾಗೂ ಒಂದು ಪದಕವನ್ನು ಒಳಗೊಂಡಿರುತ್ತದೆ.