ವರ್ಗ: State Current Affairs Kannada

  • ಅಪಘಾತ ತುರ್ತು ಪ್ರತಿಕ್ರಿಯೆ (ಸ್ಪಂದನಾ) ವಾಹನಗಳು

    ಅಪಘಾತ ತುರ್ತು ಪ್ರತಿಕ್ರಿಯೆ (ಸ್ಪಂದನಾ) ವಾಹನಗಳು

    ಇದೀಗ ಸುದ್ದಿಯಲ್ಲಿದೆ: 

    • ರಾಜ್ಯ ಸಾರಿಗೆ ವಾಹನಗಳು (ಬಸ್ ಗಳು) ರಸ್ತೆ ಅಪಘಾತಕ್ಕೀಡಾದಾಗ ಅಥವಾ ತಾಂತ್ರಿಕ ಸ್ಥಗಿತಕ್ಕೆ ಒಳಗಾದ ಸಂದರ್ಭದಲ್ಲಿ ತ್ವರಿತ ನೆರವು ನೀಡುವ ಉದ್ದೇಶದೊಂದಿಗೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ‘ಅಪಘಾತ ತುರ್ತು ಸ್ಪಂದನಾ ವಾಹನಗಳನ್ನು’ ನಿಯೋಜಿಸಿದೆ.

    ತುರ್ತು ಪ್ರತಿಕ್ರಿಯೆ (ಸ್ಪಂದನಾ) ವಾಹನಗಳ ಕುರಿತು:

    • ಆರಂಭಿಕ ಹಂತದಲ್ಲಿ, ಇಂತಹ 2 ವಾಹನಗಳನ್ನು ಬೆಂಗಳೂರು ಮತ್ತು ಮೈಸೂರಿನ ಕಾರ್ಯತಂತ್ರದ ಕೇಂದ್ರಗಳಲ್ಲಿ ನಿಯೋಜಿಸಲಾಗುವುದು.
    • ಈ ವಿಶೇಷ ಸುಸಜ್ಜಿತ ವಾಹನಗಳು ‘ಸಂಚಾರಿ ಕಾರ್ಯಾಗಾರ’ಗಳಾಗಿ ಕಾರ್ಯನಿರ್ವಹಿಸಲಿವೆ.
    • ಇದು ತಾಂತ್ರಿಕ ತಂಡಗಳು ಅಗತ್ಯ ಉಪಕರಣ ಹಾಗೂ ಬಿಡಿಭಾಗಗಳೊಂದಿಗೆ ಮಾರ್ಗಮಧ್ಯೆ ಸ್ಥಗಿತಗೊಂಡ ಬಸ್‌ಗಳನ್ನು ಶೀಘ್ರವಾಗಿ ತಲುಪಲು ಮತ್ತು ಸಾರಿಗೆ ಕಾರ್ಯಾಚರಣೆಯನ್ನು ಸುಗಮವಾಗಿ ಪುನರಾರಂಭಿಸಲು ನೆರವಾಗಲಿವೆ.
  • ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA)

    ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA)

    ಇದೀಗ ಸುದ್ದಿಯಲ್ಲಿದೆ:

    • ರಾಜ್ಯದಲ್ಲಿ ಸಾವು-ನೋವು, ಆರ್ಥಿಕ ನಷ್ಟ ಮತ್ತು ಸಾವುಗಳ ಸಂಖ್ಯೆಯನ್ನು ತಗ್ಗಿಸುವ ಉದ್ದೇಶದೊಂದಿಗೆ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು “ವಿಪತ್ತು-ಪ್ರತಿರೋಧಕ (ಸ್ಥಿತಿಸ್ಥಾಪಕ) ಕರ್ನಾಟಕ” ನಿರ್ಮಾಣಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.

    ಕರ್ನಾಟಕ ರಾಜ್ಯ ವಿಪತ್ತು ಅಪಾಯ ಕುಗ್ಗಿಸುವ (KSDRR) ಯೋಜನಾ ರೂಪರೇಖೆ, 2025-30:

    • ಈ ವರದಿಯ ಪ್ರಕಾರ, ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣದ 80% ರಷ್ಟು ಭೂ ಪ್ರದೇಶವು ಬರಪೀಡಿತದ ಅಪಾಯಕ್ಕೆ ಒಳಪಡುವ ಸಾಧ್ಯತೆಗಳಿವೆ. 
    • ರಾಜ್ಯದ 22% ರಷ್ಟು ಭೂ ಪ್ರದೇಶವು ಮಧ್ಯಮ ತೀವ್ರತೆಯ ಭೂಕಂಪಗಳಿಗೆ ಮತ್ತು 24% ರಷ್ಟು ಭೂ ಪ್ರದೇಶವು ಚಂಡಮಾರುತ ಹಾಗೂ ತೀವ್ರ ಗಾಳಿಯಂತಹ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುವ ಸಾಧ್ಯತೆಗಳಿವೆ.
    • ಅಪಾಯದ ಮೌಲ್ಯಮಾಪನ ಮತ್ತು ವಿಪತ್ತು ಪರಿಹಾರ ಕ್ರಮಗಳ ಭಾಗವಾಗಿ ರಸ್ತೆ ಹಾಗೂ ಕೈಗಾರಿಕಾ ಅಪಘಾತಗಳಂತಹ ಮಾನವ ಪ್ರೇರಿತ ವಿಪತ್ತುಗಳನ್ನು ಸಹ ಪರಿಗಣಿಸಲಾಗಿದೆ.

    ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA)ದ ಬಗ್ಗೆ:

    • ರಾಜ್ಯದ ಅತ್ಯುನ್ನತ ಸಂಸ್ಥೆ:- ಇದು ಕರ್ನಾಟಕದಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ಅತ್ಯುನ್ನತ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.
    • ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಾಯಕತ್ವ: ಈ ಪ್ರಾಧಿಕಾರವು ಕರ್ನಾಟಕದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಸುಗಮಗೊಳಿಸುವಿಕೆ ಮತ್ತು ಮೇಲ್ವಿಚಾರಣೆ:- ಇದು ರಾಜ್ಯದ ಸಾಮರ್ಥ್ಯ ವರ್ಧನೆ ಸೇರಿದಂತೆ ವಿಪತ್ತು ಸಂಬಂಧಿತ ಎಲ್ಲಾ ಚಟುವಟಿಕೆಗಳನ್ನು ಸುಗಮಗೊಳಿಸುತ್ತದೆ, ಸಮನ್ವಯಗೊಳಿಸುತ್ತದೆ, ಪರಿಶೀಲಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ.
    • ರಾಜ್ಯ ವಿಪತ್ತು ನಿರ್ವಹಣಾ ನೀತಿ ಮತ್ತು ಮಾರ್ಗಸೂಚಿಗಳ ನಿರೂಪಣೆ:- ವಿವಿಧ ಸರ್ಕಾರಿ ಇಲಾಖೆಗಳು ಅನುಸರಿಸಬೇಕಾದ ರಾಜ್ಯ ವಿಪತ್ತು ನಿರ್ವಹಣಾ ನೀತಿ ಮತ್ತು ಮಾರ್ಗಸೂಚಿಗಳನ್ನು ಇದು ರೂಪಿಸುತ್ತದೆ.
    • ರಾಜ್ಯ ವಿಪತ್ತು ನಿರ್ವಹಣಾ ಯೋಜನೆಗಳ ಅನುಮೋದನೆ: ಇದು ರಾಜ್ಯ ವಿಪತ್ತು ನಿರ್ವಹಣಾ ಯೋಜನೆ ಮತ್ತು ಇಲಾಖಾವಾರು ಯೋಜನೆಗಳನ್ನು ಅನುಮೋದಿಸುವುದಲ್ಲದೆ, ಅವುಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಮಾರ್ಗಸೂಚಿಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸುತ್ತದೆ.
  • ‘ಶುಚಿ’ ಯೋಜನೆ

    ‘ಶುಚಿ’ ಯೋಜನೆ

    ಇದೀಗ ಸುದ್ದಿಯಲ್ಲಿದೆ: 

    • ‘ಶುಚಿ’ ಯೋಜನೆಯ ಅಡಿಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳ ಸಂಗ್ರಹಣಾ ಪ್ರಕ್ರಿಯೆಯು ಸರ್ಕಾರದಿಂದ ಇನ್ನೂ ಬಾಕಿ ಉಳಿದಿದೆ.

    ‘ಶುಚಿ’ ಯೋಜನೆಯ ಬಗ್ಗೆ:

    • ಉದ್ದೇಶ:- 10 ರಿಂದ 18 ವರ್ಷ ವಯೋಮಿತಿಯ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವುದು.
    • ಆರಂಭ:- 2013-14
    • ಗುರಿ:- ರಾಜ್ಯಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಲ್ಲಿ ಮಾಸಿಕ ಋತುಚಕ್ರದ ನೈರ್ಮಲ್ಯದ ಕುರಿತು ಅರಿವು ಮೂಡಿಸುವುದು.

    ‘ಶುಚಿ – ನನ್ನ ಮೈತ್ರಿ’ ಯೋಜನೆಯ ಬಗ್ಗೆ:

    • ಇದು 2023 ರಲ್ಲಿ ಚಾಲನೆ ನೀಡಲಾದ ಒಂದು ಪ್ರಾಯೋಗಿಕ ಯೋಜನೆಯಾಗಿದೆ.
    • ಪರಿಸರ ಸ್ನೇಹಿ ನೈರ್ಮಲ್ಯವನ್ನು ಉತ್ತೇಜಿಸುವ ಉದ್ದೇಶದಿಂದ, ದಕ್ಷಿಣ ಕನ್ನಡ ಮತ್ತು ಚಾಮರಾಜನಗರದಂತಹ ಆಯ್ದ ಜಿಲ್ಲೆಗಳಲ್ಲಿ ಪದವಿಪೂರ್ವ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳ ಬದಲಾಗಿ ‘ಮಾಸಿಕ ಋತುಚಕ್ರದ ಕಪ್‌’ಗಳನ್ನು ವಿತರಿಸಲಾಗುತ್ತದೆ.
  • ಕಂಟೋನ್ಮೆಂಟ್ ರೈಲ್ವೆ ಕಾಲೋನಿ

    ಕಂಟೋನ್ಮೆಂಟ್ ರೈಲ್ವೆ ಕಾಲೋನಿ

    ಇದೀಗ ಸುದ್ದಿಯಲ್ಲಿದೆ:

    • ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಸಮೀಪವಿರುವ 8.61 ಎಕರೆ ವಿಸ್ತೀರ್ಣದ ಅರಣ್ಯ ಪ್ರದೇಶಕ್ಕೆ ನೀಡಲಾಗಿದ್ದ ‘ಜೈವಿಕ ವೈವಿಧ್ಯತೆ ಪರಂಪರೆ ತಾಣ’ (BHS) ಎಂಬ ಮಾನ್ಯತೆಯನ್ನು ರಾಜ್ಯ ಸರ್ಕಾರವು ಹಿಂತೆಗೆದುಕೊಂಡಿದೆ.

    ಜೈವಿಕ ವೈವಿಧ್ಯತೆ ಪರಂಪರೆ ತಾಣಗಳ (BHS) ಬಗ್ಗೆ:

    • ವ್ಯಾಖ್ಯಾನ:- ಇವು ಭೂಮಂಡಲ, ಕರಾವಳಿ, ಒಳನಾಡು ಅಥವಾ ಸಮುದ್ರ ಪ್ರದೇಶಗಳನ್ನು ಒಳಗೊಂಡಿರುವ ಸಮೃದ್ಧ, ವಿಶಿಷ್ಟ ಮತ್ತು ಪರಿಸರ ಸೂಕ್ಷ್ಮ ಪರಿಸರ ವ್ಯವಸ್ಥೆಗಳನ್ನು ಹೊಂದಿರುವ ನಿರ್ದಿಷ್ಟ ಸ್ಥಳಗಳಾಗಿವೆ.
    • ಅಧಿಸೂಚನೆ:- ಈ ಪ್ರದೇಶಗಳನ್ನು “ಜೈವಿಕ ವೈವಿಧ್ಯತೆ ಕಾಯ್ದೆ, 2002” ರ ಅಡಿಯಲ್ಲಿ ರಾಜ್ಯ ಸರ್ಕಾರಗಳು ಅಧಿಸೂಚಿಸುತ್ತವೆ.
    • ಕರ್ನಾಟಕದ ‘ನಲ್ಲೂರು ಹುಣಸೆ ತೋಪು:- 2007ರಲ್ಲಿ ಭಾರತದ ಮೊಟ್ಟಮೊದಲ ಜೈವಿಕ ವೈವಿಧ್ಯತೆ ಪರಂಪರೆ ತಾಣವಾಗಿ ಘೋಷಿಸಲ್ಪಟ್ಟಿತು.
    • ಉದ್ದೇಶ:- “ಜೈವಿಕ ವೈವಿಧ್ಯತೆ ನಿರ್ವಹಣಾ ಸಮಿತಿ”ಗಳ (BMCs) ಮೂಲಕ ಸಮುದಾಯದ ಸಹಭಾಗಿತ್ವದೊಂದಿಗೆ ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸುವುದು ಮತ್ತು ಸ್ಥಳೀಯ ಜೀವನೋಪಾಯವನ್ನು ಸುಧಾರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

    ಕರ್ನಾಟಕದ ಜೈವಿಕ ವೈವಿಧ್ಯತೆ ಪರಂಪರೆ ತಾಣಗಳು (BHS):

    ಜೈವಿಕ ವೈವಿಧ್ಯತೆ ಪರಂಪರೆ ತಾಣ

    ಸ್ಥಳ

    ಮಾನ್ಯತೆ ನೀಡಿದ ವರ್ಷ

    ವಿಸ್ತೀರ್ಣ/ವಿವರಗಳು

    ಮಹತ್ವ

    ನಲ್ಲೂರು ಹುಣಸೆ ತೋಪು

    ಬೆಂಗಳೂರು

    2007

    54 ಎಕರೆ

    ಭಾರತದ ಪ್ರಥಮ ಜೈವಿಕ ವೈವಿಧ್ಯತೆ ಪರಂಪರೆ ತಾಣ; ಇದು ಪ್ರಾಚೀನ ಹುಣಸೆ ಮರಗಳು ಹಾಗೂ ಸಮೃದ್ಧ ಸಸ್ಯ ಮತ್ತು ಪ್ರಾಣಿ ಸಂಕುಲವನ್ನು ಹೊಂದಿದೆ.

    ಹೊಗ್ರೆಕಾನ್ ಶೋಲಾ ಅರಣ್ಯ

    ಚಿಕ್ಕಮಗಳೂರು

    2020ಕ್ಕಿಂತ ಮೊದಲು

    ಶೋಲಾ ಅರಣ್ಯಗಳ ಭಾಗ, ವನ್ಯಜೀವಿ ಕಾರಿಡಾರ್

    ಇದು ಕುದುರೆಮುಖ ಮತ್ತು ಭದ್ರಾ ಅಭಯಾರಣ್ಯಗಳನ್ನು ಸಂಪರ್ಕಿಸುತ್ತದೆ ಹಾಗೂ ವೈವಿಧ್ಯಮಯ ಸಸ್ಯವರ್ಗವನ್ನು ಹೊಂದಿದೆ.

    ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (GKVK)

    ಬೆಂಗಳೂರು

    2020ಕ್ಕಿಂತ ಮೊದಲು

    ವಿಶಾಲ ಹಸಿರು ಆವರಣ

    ಪರಿಸರ ದೃಷ್ಟಿಯಿಂದ ಮಹತ್ವದ ನಗರ ಜೈವಿಕ ವೈವಿಧ್ಯತೆಯ ತಾಣವಾಗಿದೆ.

    ಅಂಬರಗುಡ್ಡ

    ಶಿವಮೊಗ್ಗ

    2020ಕ್ಕಿಂತ ಮೊದಲು

    ಶೋಲಾ ಅರಣ್ಯ ಮತ್ತು ಹುಲ್ಲುಗಾವಲು

    ಇದು ಸ್ಥಳೀಯ ಪ್ರಭೇದಗಳ ಸಂರಕ್ಷಣೆಗೆ ಅತ್ಯಂತ ಪ್ರಮುಖವಾಗಿದೆ.

    ಮಮದಾಪುರ ಮೀಸಲು ಅರಣ್ಯ

    ವಿಜಯಪುರ

    2024

    ಸುಮಾರು 1494 ಎಕರೆ

    ಇದನ್ನು ‘ಶ್ರೀ ಸಿದ್ಧೇಶ್ವರ ಸ್ವಾಮೀಜಿ ಜೈವಿಕ ವೈವಿಧ್ಯತೆ ಪರಂಪರೆ ತಾಣ’ ಎಂದೂ ಕರೆಯಲಾಗುತ್ತದೆ; ಇದು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಕುಲವನ್ನು ಹೊಂದಿರುವ ಪತನಶೀಲ ಅರಣ್ಯ ಪ್ರದೇಶವಾಗಿದೆ.

  • ಕರ್ನಾಟಕವು ಭಾರತದ ಸೇವಾ ರಫ್ತು ಕ್ಷೇತ್ರದ ಶಕ್ತಿಕೇಂದ್ರ-  ಬೆಂಗಳೂರು ಇದರ ಪ್ರಧಾನ ಚಾಲಕ ಶಕ್ತಿ

    ಕರ್ನಾಟಕವು ಭಾರತದ ಸೇವಾ ರಫ್ತು ಕ್ಷೇತ್ರದ ಶಕ್ತಿಕೇಂದ್ರ-  ಬೆಂಗಳೂರು ಇದರ ಪ್ರಧಾನ ಚಾಲಕ ಶಕ್ತಿ

    ಇದೀಗ ಸುದ್ದಿಯಲ್ಲಿದೆ: 

    • 2024-25ನೇ ಸಾಲಿನ ಭಾರತದ ಸೇವಾ ರಫ್ತು ವಲಯದಲ್ಲಿ ಬೆಂಗಳೂರು ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದು, $78.64 ಶತಕೋಟಿ ಕೊಡುಗೆ ನೀಡುವ ಮೂಲಕ ದೇಶದ ಒಟ್ಟು ಸೇವಾ ರಫ್ತಿನಲ್ಲಿ ಸುಮಾರು 35% ರಷ್ಟು ಪಾಲನ್ನು ಹೊಂದಿದೆ.
    • ಕರ್ನಾಟಕದ ರಫ್ತು ಸುಗಮಗೊಳಿಸುವ ಘಟಕವಾದ “ವಿಶ್ವೇಶ್ವರಯ್ಯ ವ್ಯಾಪಾರ ಪ್ರೋತ್ಸಾಹಕ ಕೇಂದ್ರ” (VTPC)ದ ಪ್ರಕಾರ, 2021–22 ರ ಆರ್ಥಿಕ ವರ್ಷದಲ್ಲಿ ಕರ್ನಾಟಕವು ಭಾರತದ ಸೇವಾ ರಫ್ತುಗಳಲ್ಲಿ 41% ರಷ್ಟು ಕೊಡುಗೆ ನೀಡಿದ್ದು, ಇದರ ಮೌಲ್ಯ $254.4 ಶತಕೋಟಿಗಳಷ್ಟಿತ್ತು.
    • ಕರ್ನಾಟಕ ರಾಜ್ಯದ ಆರ್ಥಿಕತೆಯು ಪ್ರಧಾನವಾಗಿ ಸೇವಾ ವಲಯದ ಮೇಲೆ ಅವಲಂಬಿತವಾಗಿದೆ. ‘ಕರ್ನಾಟಕ ಆರ್ಥಿಕ ಸಮೀಕ್ಷೆ, 2024-25’ರ ವರದಿಯ ಅನ್ವಯ, ರಾಜ್ಯದ ಒಟ್ಟು ಮೌಲ್ಯವರ್ಧನೆಯಲ್ಲಿ (GSVA) ಸೇವಾ ವಲಯದ ಪಾಲು 68.1% ರಷ್ಟಿದೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ (GSDP) ಏಕೈಕ ಅತಿದೊಡ್ಡ ಕೊಡುಗೆ ನೀಡುವ ಜಿಲ್ಲೆಯಾಗಿ ಹೊರಹೊಮ್ಮಿದೆ.
  • ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ, 2025

    ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ, 2025

    ಇದೀಗ ಸುದ್ದಿಯಲ್ಲಿದೆ:

    • ರಾಜ್ಯ ಸಚಿವ ಸಂಪುಟವು ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ, 2025’ ಕ್ಕೆ ಅನುಮೋದನೆ ನೀಡಿದೆ.

    ಈ ಮಸೂದೆಯ ಪ್ರಮುಖ ಲಕ್ಷಣಗಳು:

    • ಉದ್ದೇಶ:- ಸಮಾಜದಲ್ಲಿ ಅಸಾಮರಸ್ಯ ಮತ್ತು ದ್ವೇಷಕ್ಕೆ ಕಾರಣವಾಗುವ ದ್ವೇಷ ಭಾಷಣ ಹಾಗೂ ದ್ವೇಷದ ಅಪರಾಧಗಳ ಪ್ರಸಾರ, ಪ್ರಕಟಣೆ ಅಥವಾ ಪ್ರೋತ್ಸಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವುದು ಮತ್ತು ನಿಯಂತ್ರಿಸುವುದು ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ.
    • ಗುರಿ:- ವ್ಯಕ್ತಿಗಳು, ಗುಂಪುಗಳು ಅಥವಾ ಸಂಸ್ಥೆಗಳ ವಿರುದ್ಧ ಹಾನಿ, ಅಸಾಮರಸ್ಯ, ಹಗೆತನ ಅಥವಾ ದ್ವೇಷವನ್ನು ಉಂಟುಮಾಡುವ ಕೃತ್ಯಗಳನ್ನು ನಿಯಂತ್ರಿಸುವ ಗುರಿಯನ್ನು ಇದು ಹೊಂದಿದೆ.
    • ಅನ್ವಯ:- ಇದು ವ್ಯಕ್ತಿಗಳು ಮತ್ತು ಸಂಸ್ಥೆಗಳೆರಡಕ್ಕೂ ಅನ್ವಯಿಸುತ್ತದೆ.
    • ದ್ವೇಷ ಭಾಷಣದ ವ್ಯಾಖ್ಯಾನ: ಪೂರ್ವಾಗ್ರಹ ಪೀಡಿತ ಹಿತಾಸಕ್ತಿಯನ್ನು ಪೂರೈಸಲು, ಜೀವಂತವಾಗಿರುವ ಅಥವಾ ಮೃತರಾದ ವ್ಯಕ್ತಿ, ವ್ಯಕ್ತಿಗಳ ವರ್ಗ ಅಥವಾ ಗುಂಪು ಅಥವಾ ಸಮುದಾಯದ ವಿರುದ್ಧ ಹಾನಿ, ಅಸಾಮರಸ್ಯ ಅಥವಾ ಹಗೆತನದ ಭಾವನೆಗಳು ಅಥವಾ ದ್ವೇಷ ಅಥವಾ ಅಸೂಯೆಯನ್ನು ಉಂಟುಮಾಡುವ ಉದ್ದೇಶದಿಂದ, ಸಾರ್ವಜನಿಕವಾಗಿ ಆಡಿದ ಅಥವಾ ಬರೆದ ಪದಗಳು, ಚಿಹ್ನೆಗಳು ಅಥವಾ ದೃಶ್ಯ ಪ್ರಾತಿನಿಧ್ಯಗಳ ಮೂಲಕ ಅಥವಾ ಎಲೆಕ್ಟ್ರಾನಿಕ್ ಸಂವಹನದ ಮೂಲಕ ವ್ಯಕ್ತಪಡಿಸುವ, ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಯಾವುದೇ ಅಭಿವ್ಯಕ್ತಿಯನ್ನು ಇದು ಒಳಗೊಂಡಿದೆ.
    • ಪೂರ್ವಾಗ್ರಹ ಪೀಡಿತ ಹಿತಾಸಕ್ತಿ:- ಇದು ಧರ್ಮ, ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಲಿಂಗತ್ವ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ನಿವಾಸ, ಭಾಷೆ, ಅಂಗವೈಕಲ್ಯ ಅಥವಾ ಬುಡಕಟ್ಟನ್ನು ಒಳಗೊಂಡಿರುತ್ತದೆ.
    • ಶಿಕ್ಷೆ ಮತ್ತು ದಂಡ:- 1 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹50,000 ದಂಡವನ್ನು ಒಳಗೊಂಡಿರುತ್ತದೆ.
    • ಸಂಜ್ಞೇಯ ಮತ್ತು ಜಾಮೀನುರಹಿತ:- ಈ ಅಪರಾಧಗಳು ಸಂಜ್ಞೇಯ (Cognisable) ಮತ್ತು ಜಾಮೀನುರಹಿತವಾಗಿದ್ದು, ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರಿಂದ ವಿಚಾರಣೆಗೆ ಒಳಪಡುತ್ತವೆ.
    • ಕೇಂದ್ರ ಕಾನೂನುಗಳೊಂದಿಗೆ ಸಮನ್ವಯ:- ಕಾರ್ಯವಿಧಾನದ ಏಕರೂಪತೆಗಾಗಿ ಈ ಮಸೂದೆಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023 ರ ನಿಬಂಧನೆಗಳನ್ನು ಒಳಗೊಂಡಿದೆ.

    ಸಾಂವಿಧಾನಿಕ ನಿಬಂಧನೆಗಳು:

    • ವಿಧಿ 19(2):- ಇದು ವಿಧಿ 19(1)(a) ಅಡಿಯಲ್ಲಿ ಲಭ್ಯವಿರುವ ಮೂಲಭೂತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ವಿಧಿಸಬಹುದಾದ ಸಮಂಜಸವಾದ ನಿರ್ಬಂಧಗಳ ಬಗ್ಗೆ ವ್ಯವಹರಿಸುತ್ತದೆ.
    • ರಾಜ್ಯವು ಭಾಷಣವನ್ನು ನಿರ್ಬಂಧಿಸಬಹುದಾದ ಸಂದರ್ಭಗಳು:- ರಾಜ್ಯದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಅಥವಾ ನೈತಿಕತೆ, ನ್ಯಾಯಾಲಯದ ನಿಂದನೆ, ಮಾನಹಾನಿ ಮತ್ತು ಅಪರಾಧಕ್ಕೆ ಪ್ರಚೋದನೆ.

    ದ್ವೇಷ ಭಾಷಣವನ್ನು ಎದುರಿಸಲು ಕೈಗೊಂಡ ಕ್ರಮಗಳು:

    • ಭಾರತೀಯ ದಂಡ ಸಂಹಿತೆ (IPC) / ಭಾರತೀಯ ನ್ಯಾಯ ಸಂಹಿತೆ (BNS), 2023:- ದಂಡ ಸಂಹಿತೆಗಳ ಸೆಕ್ಷನ್ 153A, ಸೆಕ್ಷನ್ 295A ನಂತಹ ನಿರ್ದಿಷ್ಟ ಸೆಕ್ಷನ್‌ಗಳು ಗುಂಪುಗಳ ನಡುವೆ (ಧರ್ಮ, ಜನಾಂಗ, ಭಾಷೆ) ಹಗೆತನವನ್ನು ಉತ್ತೇಜಿಸುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಅಥವಾ ಸಾರ್ವಜನಿಕರಲ್ಲಿ ಭೀತಿ/ಅಶಾಂತಿಯನ್ನು ಪ್ರಚೋದಿಸುವುದನ್ನು ಅಪರಾಧೀಕರಿಸುತ್ತವೆ.
    • ಜನಪ್ರತಿನಿಧಿ ಕಾಯ್ದೆ, 1951:- ಸೆಕ್ಷನ್ 123(3), 123(3A): ಚುನಾವಣೆಯ ಸಮಯದಲ್ಲಿ ದ್ವೇಷವನ್ನು ಪ್ರಚೋದಿಸುವ ಅಥವಾ ಧರ್ಮ, ಜಾತಿ, ಸಮುದಾಯದ ಹೆಸರಿನಲ್ಲಿ ಮನವಿ ಮಾಡುವ ರಾಜಕೀಯ ಭಾಷಣಗಳನ್ನು ನಿಷೇಧಿಸುತ್ತವೆ.
    • ಪ್ರವಾಸಿ ಭಲೈ ಸಂಘಟನ್ ವಿರುದ್ಧ ಭಾರತ ಒಕ್ಕೂಟ, 2014:- ಸರ್ವೋಚ್ಚ ನ್ಯಾಯಾಲಯವು ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾನೂನಿನ ಕೊರತೆಯನ್ನು ಒಪ್ಪಿಕೊಂಡಿತು ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಸಮಗ್ರ ಕಾನೂನನ್ನು ರೂಪಿಸುವಂತೆ ಸಂಸತ್ತಿಗೆ ಶಿಫಾರಸು ಮಾಡಿತು.
    • ಅಮಿಶ್ ದೇವಗನ್ ವಿರುದ್ಧ ಭಾರತ ಒಕ್ಕೂಟ, 2020:- ಸರ್ವೋಚ್ಚ ನ್ಯಾಯಾಲಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ (ವಿಧಿ 19) ಮತ್ತು ಸಾರ್ವಜನಿಕ ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡಲು ದ್ವೇಷ ಭಾಷಣವನ್ನು ನಿರ್ಬಂಧಿಸುವ ಅಗತ್ಯತೆಯ ನಡುವಿನ ಸಮತೋಲನದ ಬಗ್ಗೆ ವಿವರಿಸಿದೆ.
  • ರಾಜ್ಯದಲ್ಲಿ ‘ಭಾರತ-ತೈವಾನ್ ಕೈಗಾರಿಕಾ ಪಾರ್ಕ್’

    ರಾಜ್ಯದಲ್ಲಿ ‘ಭಾರತ-ತೈವಾನ್ ಕೈಗಾರಿಕಾ ಪಾರ್ಕ್’

    ಇದೀಗ ಸುದ್ದಿಯಲ್ಲಿದೆ:

    • ತೈವಾನ್‌ನ ‘ಅಲೇಜಿಯನ್ಸ್ ಇಂಟರ್‌ನ್ಯಾಷನಲ್‌ ಕಂಪನಿ ಲಿಮಿಟೆಡ್‌’, ಕರ್ನಾಟಕದಲ್ಲಿ ₹1,000 ಕೋಟಿ ಹೂಡಿಕೆಯೊಂದಿಗೆ ‘ಭಾರತ-ತೈವಾನ್ ಕೈಗಾರಿಕಾ ಪಾರ್ಕ್’ (ITIP) ಅನ್ನು ಸ್ಥಾಪಿಸಲಿದೆ.
    • ಮಹತ್ವ:- ಈ ಸಹಯೋಗವು ‘ಎಲೆಕ್ಟ್ರಾನಿಕ್ಸ್ ವ್ಯವಸ್ಥೆಗಳ ವಿನ್ಯಾಸ ಮತ್ತು ಉತ್ಪಾದನೆ’ (ESDM) ಕ್ಷೇತ್ರದಲ್ಲಿ ಭಾರತದ ಮುಂಚೂಣಿ ತಾಣವಾಗಿ ಕರ್ನಾಟಕ ಹೊಂದಿರುವ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಲಿದೆ.

    ಕರ್ನಾಟಕ ಡಿಜಿಟಲ್ ಆರ್ಥಿಕ ಮಿಷನ್ (KDEM) ನ ಬಗ್ಗೆ:

    • ಸ್ಥಾಪನೆ:- ಇದು ಕರ್ನಾಟಕ ಸರ್ಕಾರವು 2021 ರಲ್ಲಿ ಸ್ಥಾಪಿಸಿದ ಲಾಭರಹಿತ ಸಂಸ್ಥೆಯಾಗಿದೆ.
    • ಉದ್ದೇಶ:- ಇದು ಡಿಜಿಟಲ್ ಬೆಳವಣಿಗೆ ಮತ್ತು ಹೂಡಿಕೆಗಳನ್ನು ವೇಗಗೊಳಿಸಲು ರಾಜ್ಯ ಸರ್ಕಾರ ಮತ್ತು ತಂತ್ರಜ್ಞಾನ ಉದ್ಯಮದ ನಡುವೆ ‘ಜ್ಞಾನ ಸೇತುವೆ’ಯಾಗಿ ಕಾರ್ಯನಿರ್ವಹಿಸುತ್ತದೆ.

    KDEM ನ ಪ್ರಮುಖ ಉದ್ದೇಶಗಳು:

    • ಆರ್ಥಿಕ ಪರಿಣಾಮ:- 2030 ರ ವೇಳೆಗೆ ಭಾರತವು ಹೊಂದಿರುವ $1 ಟ್ರಿಲಿಯನ್ ಡಿಜಿಟಲ್ ಆರ್ಥಿಕತೆಯ ಗುರಿಯಲ್ಲಿ ಕರ್ನಾಟಕವು $300 ಬಿಲಿಯನ್ ಕೊಡುಗೆ ನೀಡುವಂತೆ ಮಾಡುವುದು ಇದರ ಉದ್ದೇಶವಾಗಿದೆ.
    • ನವೋದ್ಯಮಗಳ ಬೆಳವಣಿಗೆ:- 2030 ರ ವೇಳೆಗೆ ಪ್ರಾದೇಶಿಕ ಸಮೂಹಗಳಲ್ಲಿ (ಬೆಂಗಳೂರಿನ ಹೊರತಾಗಿ) 10,000 ನವೋದ್ಯಮಗಳನ್ನು ಆರಂಭಿಸುವ ಗುರಿಯನ್ನು ಹೊಂದಿದೆ.
    • ಉದ್ಯೋಗಾವಕಾಶ:- ಡಿಜಿಟಲ್ ವಲಯದಲ್ಲಿ 50 ಲಕ್ಷ ನುರಿತ ಮತ್ತು ಅರೆ-ನುರಿತ ಉದ್ಯೋಗಗಳನ್ನು ಸೃಷ್ಟಿಸುವತ್ತ ಗಮನಹರಿಸಿದೆ.

    KDEM ನ ಪ್ರಮುಖ ಕಾರ್ಯಕ್ಷೇತ್ರಗಳು:

    • ನಾವೀನ್ಯತೆ ಮತ್ತು ನವೋದ್ಯಮಗಳು:– ಆರಂಭಿಕ ಹಂತದ ಕಂಪನಿಗಳಿಗೆ ಬಂಡವಾಳ ಲಭ್ಯತೆ, ಮಾರ್ಗದರ್ಶನ ಮತ್ತು ಜನಸಂಪರ್ಕ ಸೌಲಭ್ಯಗಳನ್ನು ಒದಗಿಸುವುದು.
    • ಬಿಯಾಂಡ್ ಬೆಂಗಳೂರು:- ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ-ಬೆಳಗಾವಿ, ಕಲಬುರಗಿ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೈಗಾರಿಕಾ ಸಮೂಹಗಳನ್ನು ಅಭಿವೃದ್ಧಿಪಡಿಸುವ ಮೂಲಕ ತಂತ್ರಜ್ಞಾನ ಉದ್ಯಮವನ್ನು ವಿಕೇಂದ್ರೀಕರಿಸುವುದು.
    • ಎಲೆಕ್ಟ್ರಾನಿಕ್ಸ್ ವ್ಯವಸ್ಥೆಗಳ ವಿನ್ಯಾಸ ಮತ್ತು ಉತ್ಪಾದನೆ (ESDM):- ಅರೆವಾಹಕ (ಸೆಮಿಕಂಡಕ್ಟರ್) ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಜಾಗತಿಕ ಕೇಂದ್ರವಾಗಿ ಕರ್ನಾಟಕವನ್ನು ಉತ್ತೇಜಿಸುವುದು.
    • ಪ್ರತಿಭೆಗಳ ಉತ್ತೇಜನ:- ‘ಭವಿಷ್ಯದ  ಡಿಜಿಟಲ್ ಉದ್ಯೋಗಗಳು’ ಮತ್ತು ‘ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್’ ನಂತಹ ಉಪಕ್ರಮಗಳ ಮೂಲಕ ಕೌಶಲದ ಕೊರತೆಯನ್ನು ನೀಗಿಸುವುದು.
    • ಮಾಹಿತಿ ತಂತ್ರಜ್ಞಾನ/ಮಾಹಿತಿ ತಂತ್ರಜ್ಞಾನ ಸಕ್ರಿಯಗೊಳಿಸಿದ ಸೇವೆಗಳು, ವ್ಯವಹಾರ ಪ್ರಕ್ರಿಯೆ ನಿರ್ವಹಣೆ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳು:- ರಾಜ್ಯದಾದ್ಯಂತ ತಮ್ಮ ಕಾರ್ಯಾಚರಣೆಗಳನ್ನು ಸ್ಥಾಪಿಸಲು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಮತ್ತು ಮಧ್ಯಮ ಗಾತ್ರದ ಐಟಿ ಸಂಸ್ಥೆಗಳನ್ನು ಆಕರ್ಷಿಸುವುದು.
  • ‘ಕರ್ನಾಟಕ ಡಿಜಿಟಲ್ ಪರಂಪರೆ ಪೋರ್ಟಲ್’

    ‘ಕರ್ನಾಟಕ ಡಿಜಿಟಲ್ ಪರಂಪರೆ ಪೋರ್ಟಲ್’

    ಇದೀಗ ಸುದ್ದಿಯಲ್ಲಿದೆ: 

    • ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಸಲುವಾಗಿ ಸರ್ಕಾರವು ‘ಡಿಜಿಟಲ್ ಪರಂಪರೆ ಪೋರ್ಟಲ್’ ಅನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ.

    ‘ಡಿಜಿಟಲ್ ಪರಂಪರೆ ಪೋರ್ಟಲ್’ ನ ಬಗ್ಗೆ:

    • ಉದ್ದೇಶ:- ಏಕೀಕೃತ ‘ಕರ್ನಾಟಕ ಡಿಜಿಟಲ್ ಪರಂಪರೆ ಪೋರ್ಟಲ್’ ಸ್ಥಾಪಿಸುವ ಪ್ರಸ್ತಾವನೆಯ ಮೂಲಕ, ಡಿಜಿಟಲ್ ಪರಂಪರೆ ಸಂರಕ್ಷಣೆಯಲ್ಲಿ ಕರ್ನಾಟಕವನ್ನು ರಾಷ್ಟ್ರಮಟ್ಟದ ಮುಂಚೂಣಿ ರಾಜ್ಯವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ.
    • ಪಾತ್ರ:- ಇದು ಹಸ್ತಪ್ರತಿಗಳು, ಅಪರೂಪದ ಮುದ್ರಿತ ಕೃತಿಗಳು, ಪತ್ರಾಗಾರ ದಾಖಲೆಗಳು ಮತ್ತು ಇತರ ಸಾಂಸ್ಕೃತಿಕ ಸಂಪನ್ಮೂಲಗಳನ್ನು ಒಂದೇ ವೇದಿಕೆಯಡಿ ಸಂಯೋಜಿಸುವ ಕಾರ್ಯವಾಗಿ ನಿರ್ವಹಿಸಲಿದೆ.
    • ಆರಂಭಿಸಿದವರು:ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನ ಸಂಸ್ಥೆ (ORI) ಮತ್ತು ಕರ್ನಾಟಕ ರಾಜ್ಯ ದಾಖಲೆಗಳ/ಪತ್ರಾಗಾರ ಸಂಗ್ರಹಾಲಯ ಜಂಟಿಯಾಗಿ ಕೈಗೊಂಡಿವೆ.
    • ಈ ಯೋಜನೆಯು ಕೇಂದ್ರ ಸರ್ಕಾರದ ‘ಡಿಜಿಟಲ್ ಇಂಡಿಯಾ ಮಿಷನ್’ ಮತ್ತು ‘ರಾಷ್ಟ್ರೀಯ ಹಸ್ತಪ್ರತಿ ಮಿಷನ್’ನ ಗುರಿಗಳಿಗೆ ಪೂರಕವಾಗಿದೆ.

    ನಿಮಗಿದು ತಿಳಿದಿದೆಯೇ?

    • ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನ ಸಂಸ್ಥೆಯು (ORI) ಅರ್ಥಶಾಸ್ತ್ರ, ಆರ್ಯಭಟೀಯ, ನಾಟ್ಯಶಾಸ್ತ್ರ ಮತ್ತು ಶ್ರೀತತ್ತ್ವನಿಧಿ ಸೇರಿದಂತೆ 70,000 ಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಹಾಗೂ 45,000 ಕ್ಕೂ ಅಧಿಕ ಅಪರೂಪದ ಮುದ್ರಿತ ಕೃತಿಗಳನ್ನು ಒಳಗೊಂಡಿದೆ.
    • “ಬೆಂಗಳೂರು ಮೈಥಿಕ್ ಸೊಸೈಟಿ” ಮತ್ತು “ಸೇವ್ ಅವರ್ ಕಂಟ್ರಿ ಫೌಂಡೇಶನ್” ಸಹಯೋಗದೊಂದಿಗೆ ₹2.15 ಕೋಟಿಗೂ ಅಧಿಕ ವೆಚ್ಚದ ಡಿಜಿಟಲೀಕರಣದ ಯೋಜನೆಗಳನ್ನು ಕೈಗೊಳ್ಳಲಾಗಿದೆ.
    • ಗಮನಿಸಿ: ಬೆಂಗಳೂರು ಮೈಥಿಕ್ ಸೊಸೈಟಿಯನ್ನು 1909 ರಲ್ಲಿ ಸ್ಥಾಪಿಸಲಾಯಿತು (PSI 402 ಪರೀಕ್ಷೆಯಲ್ಲಿ ಈ ಅಂಶದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು).

     

  • ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (CFTRI)ಯಿಂದ ವಿಶೇಷ ಆಹಾರ ಅಭಿವೃದ್ಧಿ

    ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (CFTRI)ಯಿಂದ ವಿಶೇಷ ಆಹಾರ ಅಭಿವೃದ್ಧಿ

    ಇದೀಗ ಸುದ್ದಿಯಲ್ಲಿದೆ:

    • ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು (CFTRI) ಪ್ರಸ್ತುತ ಸುಧಾರಿತ ಆಹಾರ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿದೆ.
    • ಇವುಗಳಲ್ಲಿ ಗಗನಯಾತ್ರಿಗಳಿಗಾಗಿ ಬಾಹ್ಯಾಕಾಶ ಆಹಾರ, ಕ್ರೀಡಾಪಟುಗಳ ದೈಹಿಕ ಸಹಿಷ್ಣುತೆ ವರ್ಧಿಸುವ ಕ್ರೀಡಾ ಆಹಾರ ಮತ್ತು ಹಿರಿಯ ನಾಗರಿಕರಿಗಾಗಿ ಪೌಷ್ಟಿಕಾಂಶಯುಕ್ತ ವೃದ್ಧಾಪ್ಯದ ಆಹಾರಗಳನ್ನು ಅಭಿವೃದ್ಧಿಪಡಿಸುವುದು ಸೇರಿದೆ.

    ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (CFTRI)ಯ ಬಗ್ಗೆ:

    • ಅಂಗಸಂಸ್ಥೆ:- ಇದು ನವದೆಹಲಿಯಲ್ಲಿರುವ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (CSIR) ಒಂದು ಅಂಗಸಂಸ್ಥೆ ಸಂಶೋಧನಾಲಯವಾಗಿದೆ.
    • ಸ್ಥಳ:- ಇದು ಕರ್ನಾಟಕದ ಮೈಸೂರಿನಲ್ಲಿದೆ.
    • ಸ್ಥಾಪನೆ:- ಈ ಸಂಸ್ಥೆಯು 21 ಅಕ್ಟೋಬರ್ 1950 ರಂದು ಸ್ಥಾಪನೆಯಾಯಿತು.
    • ಧ್ಯೇಯೋದ್ದೇಶ:- ಇದು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಯ ಮುಂಚೂಣಿ ಕೇಂದ್ರವಾಗಿದೆ.
  • “ಹೈಜೀನ್ ಆನ್ ಗೋ”- ಸಂಚಾರಿ ನೈರ್ಮಲ್ಯ ವಾಹನ

    “ಹೈಜೀನ್ ಆನ್ ಗೋ”- ಸಂಚಾರಿ ನೈರ್ಮಲ್ಯ ವಾಹನ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಬೆಂಗಳೂರು ನಗರ ಪೊಲೀಸರಿಗಾಗಿಯೇ ಮೀಸಲಾದ ಪ್ರಪ್ರಥಮ ಸಂಚಾರಿ ನೈರ್ಮಲ್ಯ ವಾಹನ ‘ಹೈಜೀನ್ ಆನ್ ಗೋ’ (Hygiene on Go) ಗೆ ಚಾಲನೆ ದೊರೆತಿದೆ.

    ‘ಹೈಜೀನ್ ಆನ್ ಗೋ’  ಸಂಚಾರಿ ನೈರ್ಮಲ್ಯ ವಾಹನದ ಬಗ್ಗೆ:

    • ಗುರಿ:- ಬೆಂಗಳೂರು ನಗರ ಸಂಚಾರ ಪೊಲೀಸ್ ಸಿಬ್ಬಂದಿಯ ಕಾರ್ಯನಿರ್ವಹಣಾ ಪರಿಸ್ಥಿತಿಗಳನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿದೆ. 
    • ಪ್ರಾರಂಭಿಸಿದವರು:- ಗೃಹ ಇಲಾಖೆಯು, ಬೆಂಗಳೂರು ನಗರ ಪೊಲೀಸರಿಗಾಗಿಯೇ ಮೀಸಲಾದ, ಈ ರೀತಿಯ ಪ್ರಪ್ರಥಮ ಸಂಚಾರಿ ನೈರ್ಮಲ್ಯ ವಾಹನವಾಗಿದೆ.
    • ವೆಚ್ಚ ಮತ್ತು ಕಾರ್ಯನಿರ್ವಹಣೆ:- ಗೃಹ ಇಲಾಖೆಯು ₹2.06 ಕೋಟಿ ವೆಚ್ಚದಲ್ಲಿ ಮೂರು ವಾಹನಗಳನ್ನು ಖರೀದಿಸಿ, ಮಾರ್ಪಡಿಸಿದ್ದು, ಇವು ಮಾರ್ಚ್ 2028 ರವರೆಗೆ 27 ತಿಂಗಳ ಕಾಲ ಕಾರ್ಯನಿರ್ವಹಿಸಲಿವೆ. 
    • ಒಳಗೊಂಡ ವ್ಯಾಪ್ತಿ:– ಈ ವಾಹನಗಳು ಬೆಳಿಗ್ಗೆ 8.30 ರಿಂದ ಸಂಜೆ 7 ಗಂಟೆಯವರೆಗೆ, ಅತೀ ಹೆಚ್ಚು ಸಂಚಾರ ದಟ್ಟಣೆ ಇರುವ ಮೂರು ಪ್ರಮುಖ ಮಾರ್ಗಗಳಾದ ತಣಿಸಂದ್ರ, ಆಡುಗೋಡಿ ಮತ್ತು ಮೈಸೂರು ರಸ್ತೆಗಳಲ್ಲಿ ಸಂಚರಿಸಲಿದ್ದು, ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಸಕಾಲಿಕ ಮತ್ತು ವಿಶ್ವಾಸಾರ್ಹ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು 91 ನಿಗದಿಪಡಿಸಿದ ನಿಲುಗಡೆ ಸ್ಥಳಗಳನ್ನು ಒಳಗೊಳ್ಳಲಿವೆ.
    • ಒಳಗೊಂಡಿರುವ ಘಟಕಗಳು:- ಇವು ಹೊರಭಾಗದ ಸಿಸಿಟಿವಿ ವ್ಯಾಪ್ತಿ, ಜಿಪಿಎಸ್ ಅನುಸರಣೆ ಮತ್ತು ರಸ್ತೆ ಸುರಕ್ಷತಾ ಸಂದೇಶಗಳನ್ನು ಬಿತ್ತರಿಸುವ ಎಲ್‌ಇಡಿ ಫಲಕಗಳನ್ನು ಸಹ ಒಳಗೊಂಡಿರಲಿವೆ.
    • ಪ್ರಾಮುಖ್ಯತೆ:- ಈ ವಾಹನಗಳು ಪುರುಷ ಮತ್ತು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿರಲಿವೆ. ಈ ಸಂಚಾರಿ ನೈರ್ಮಲ್ಯ ವ್ಯವಸ್ಥೆಯು ವಿಶೇಷವಾಗಿ ಮಹಿಳಾ ಸಿಬ್ಬಂದಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.