Blog

  • ಗಿರ್ಮಿತ್ಯಾ (Girmityas) : ಒಪ್ಪಂದಿತ ಕೂಲಿ ಕಾರ್ಮಿಕರು | ಹಿಂದೂ ಮಹಾಸಾಗರ ತೀರದ ರಾಷ್ಟ್ರಗಳ ಸಂಘಟನೆ (IORA)

    ಗಿರ್ಮಿತ್ಯಾ (Girmityas) : ಒಪ್ಪಂದಿತ ಕೂಲಿ ಕಾರ್ಮಿಕರು

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಕೆರಿಬಿಯನ್ ರಾಷ್ಟ್ರದೊಂದಿಗಿನ ಭಾರತದ ಬಾಂಧವ್ಯವನ್ನು ಬಲಪಡಿಸಲು ಮತ್ತು ಗಿರ್ಮಿತ್ಯಾ ಸಮುದಾಯದ ಪರಂಪರೆಯನ್ನು ಸಂರಕ್ಷಿಸುವ ಸಲುವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಟ್ರಿನಿಡಾಡ್ ಮತ್ತು ಟೊಬಾಗೊ ದೇಶಗಳಿಗೆ ಭೇಟಿ ನೀಡಿದರು.

    ಗಿರ್ಮಿತ್ಯಾ ಸಮುದಾಯದ ಬಗ್ಗೆ:

    • ಗಿರ್ಮಿತ್ಯಾ ಸಮುದಾಯವು 19ನೇ ಮತ್ತು 20ನೇ ಶತಮಾನದ ಆರಂಭದಲ್ಲಿ ತೋಟಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡಲು ಬ್ರಿಟಿಷ್ ಭಾರತದಿನಿಂದ ಒಪ್ಪಂದದ ಆಧಾರದ ಮೇಲೆ ಸಾಗಿಸಲ್ಪಟ್ಟ ವಲಸೆ ಕಾರ್ಮಿಕರಾಗಿದ್ದಾರೆ.
    • “ಗಿರ್ಮಿತ್ಯಾ” ಎಂಬ ಪದವು ಇಂಗ್ಲಿಷ್‌ನ “ಅಗ್ರಿಮೆಂಟ್” (ಒಪ್ಪಂದ) ಎಂಬ ಪದದಿಂದ ಬಂದಿದೆ, ವಸಾಹತುಶಾಹಿ ಅಧಿಕಾರವಧಿಯಲ್ಲಿ ಭಾರತೀಯ ಕಾರ್ಮಿಕರು ಸಹಿ ಮಾಡಿದ ಕರಾರು ಒಪ್ಪಂದಗಳನ್ನು ಇದು ಉಲ್ಲೇಖಿಸುತ್ತದೆ.
    • ಫಿಜಿ, ಮಾರಿಷಸ್, ಸೀಶೆಲ್ಸ್, ರಿಯೂನಿಯನ್, ದಕ್ಷಿಣ ಆಫ್ರಿಕಾ, ಟ್ರಿನಿಡಾಡ್ ಮತ್ತು ಟೊಬಾಗೊ, ಬ್ರಿಟಿಷ್ ಗಯಾನಾ (ಈಗಿನ ಗಯಾನಾ), ಸುರಿನಾಮೆ, ಮಲೇಷ್ಯಾ ಮತ್ತು ಕೀನ್ಯಾದಂತಹ ದೇಶಗಳಿಗೆ ಗಿರ್ಮಿತ್ಯಾರನ್ನು ಕಳುಹಿಸಲಾಗಿತ್ತು.

    ಟ್ರಿನಿಡಾಡ್ ಮತ್ತು ಟೊಬಾಗೊ ದೇಶಗಳಿಗೆ ಜನರ ವಲಸೆ:

    • 1845 ರಿಂದ 1917 ರ ನಡುವೆ ಭಾರತದಿಂದ ಟ್ರಿನಿಡಾಡ್‌ಗೆ ಅಂದಾಜು 143,000 ಒಪ್ಪಂದದ ಕಾರ್ಮಿಕರು ವಲಸೆ ಹೋದರು, ಈ ವಲಸಿಗರಲ್ಲಿ ಹೆಚ್ಚಿನವರು ಉತ್ತರ ಭಾರತ ಮತ್ತು ಬಿಹಾರದಿಂದ ಬಂದವರಾಗಿದ್ದರು.
    • ಅವರ ವಂಶಸ್ಥರು ಇಂದು ಟ್ರಿನಿಡಾಡ್ ಮತ್ತು ಟೊಬಾಗೊದ ಜನಸಂಖ್ಯೆಯ ಸುಮಾರು 40-45% ರಷ್ಟಿದ್ದಾರೆ, ಜೊತೆಗೆ ಆ ದೇಶದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ.

    ಕೆರಿಬ್ಬಿಯನ್ ಸಮುದಾಯ (CARICOM – The Caribbean Community):

    • ಇದು 1973 ರಲ್ಲಿ ರಚನೆಯಾಗಿದೆ.
    • ಇದು ಆರ್ಥಿಕ ಏಕೀಕರಣ ಮತ್ತು ವಿದೇಶಾಂಗ ನೀತಿಯ ಸಮನ್ವಯದ ಗುರಿಯನ್ನು ಹೊಂದಿರುವ 15-ಸದಸ್ಯ ರಾಷ್ಟ್ರಗಳ ನಿರ್ಣಾಯಕ ಪ್ರಾದೇಶಿಕ ಒಕ್ಕೂಟವಾಗಿದೆ.
    • 15 ಸದಸ್ಯ ರಾಷ್ಟ್ರಗಳು: ಆಂಟಿಗುವಾ ಮತ್ತು ಬಾರ್ಬುಡಾ, ದ ಬಹಾಮಾಸ್, ಬಾರ್ಬಡೋಸ್, ಬೆಲೀಜ್, ಡೊಮಿನಿಕಾ, ಗ್ರೆನಡಾ, ಗಯಾನಾ, ಹೈತಿ, ಜಮೈಕಾ, ಮಾಂಟ್ಸೆರಾಟ್, ಸೇಂಟ್ ಕಿಟ್ಸ್ ಮತ್ತು ನೆವಿಸ್, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಸುರಿನಾಮೆ, ಹಾಗೂ ಟ್ರಿನಿಡಾಡ್ ಮತ್ತು ಟೊಬಾಗೊ.
    • ಸ್ಥಳ: ಆಗ್ನೇಯ ಮೆಕ್ಸಿಕೋ ಕೊಲ್ಲಿ, ಮಧ್ಯ ಅಮೆರಿಕದ ಪೂರ್ವ ಹಾಗೂ ದಕ್ಷಿಣ ಅಮೆರಿಕದ ಉತ್ತರ.

    ಭಾರತ-CARICOM ಸಂಬಂಧಗಳು:

    • 2ನೇ ಶೃಂಗಸಭೆ, 2024: ಬಹುಪಕ್ಷೀಯ ಬಾಂಧವ್ಯವನ್ನು ವೃದ್ಧಿಸುವ ಸಲುವಾಗಿ ಗಯಾನಾದ ಜಾರ್ಜ್‌ಟೌನ್‌ನಲ್ಲಿ ಇದು ನಡೆಯಿತು.
    • ಸಹಕಾರದ ಕ್ಷೇತ್ರಗಳು: ಹವಾಮಾನ ಬದಲಾವಣೆ, ವಿಪತ್ತು ನಿರ್ವಹಣೆ, ನವೀಕರಿಸಬಹುದಾದ ಇಂಧನ ಮತ್ತು ಹಣಕಾಸು ತಂತ್ರಜ್ಞಾನ (UPI).
    • ಪ್ರಮುಖ ಉಪಕ್ರಮ: ಭಾರತದ UPI ಅನ್ನು ಅಳವಡಿಸಿಕೊಂಡ ಮೊದಲ ಕೆರಿಬಿಯನ್ ರಾಷ್ಟ್ರವಾಗಿ ಟ್ರಿನಿಡಾಡ್ ಮತ್ತು ಟೊಬಾಗೊ ಹೊರಹೊಮ್ಮಿದೆ.

    ಹಿಂದೂ ಮಹಾಸಾಗರ ತೀರದ ರಾಷ್ಟ್ರಗಳ ಸಂಘಟನೆ (IORA)

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • “ರೂಪಾಂತರಗೊಳ್ಳುತ್ತಿರುವ ಜಗತ್ತಿನಲ್ಲಿ ಹಿಂದೂ ಮಹಾಸಾಗರ ಪ್ರದೇಶ” ಎಂಬ ಧ್ಯೇಯವಾಕ್ಯದ ಅಡಿಯಲ್ಲಿ 10ನೇ ಹಿಂದೂ ಮಹಾಸಾಗರ ಸಂವಾದ (IOD)ವು ಇತ್ತೀಚಿಗೆ ನವದೆಹಲಿಯಲ್ಲಿ ನಡೆಯಿತು.

    ಹಿಂದೂ ಮಹಾಸಾಗರ ತೀರದ ರಾಷ್ಟ್ರಗಳ ಸಂಘಟನೆ (IORA)ಯ ಬಗ್ಗೆ:

    • ಇದು ಹಿಂದೂ ಮಹಾಸಾಗರದ ಗಡಿಯಲ್ಲಿರುವ 23 ಸದಸ್ಯ ರಾಷ್ಟ್ರಗಳ ನಡುವಿನ ಪ್ರಾದೇಶಿಕ ಸಹಕಾರಕ್ಕಾಗಿ ಇರುವ ಒಂದು ಅಂತರ-ಸರ್ಕಾರಿ ಸಂಸ್ಥೆಯಾಗಿದೆ.
    • ಸ್ಥಾಪನೆ: ಮಾರ್ಚ್ 7, 1997 (ಹಿಂದೆ IOR-ARC ಎಂದು ಕರೆಯಲಾಗುತ್ತಿತ್ತು).
    • ಸಚಿವಾಲಯ: ಎಬೆನ್ (Ebène), ಮಾರಿಷಸ್.
    • ಸದಸ್ಯತ್ವ: 23 ಸದಸ್ಯ ರಾಷ್ಟ್ರಗಳು ಮತ್ತು 12 ಸಂವಾದ ಪಾಲುದಾರರು (ಉದಾ: ಚೀನಾ, USA, ಜಪಾನ್).
    • ಅಧ್ಯಕ್ಷತೆ: ಶ್ರೀಲಂಕಾದಿಂದ ಅಧಿಕಾರ ವಹಿಸಿಕೊಂಡಿರುವ ಭಾರತವು, ಪ್ರಸ್ತುತ 2025-2027ರ ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿದೆ.
    • ಮೂಲ: ಸಾಮಾಜಿಕ-ಆರ್ಥಿಕ ಸಹಕಾರವನ್ನು ಪ್ರತಿಪಾದಿಸಿದ ನೆಲ್ಸನ್ ಮಂಡೇಲಾ ಅವರ 1995ರ ಭಾರತ ಭೇಟಿಯಿಂದ ಇದು ಪ್ರೇರಿತವಾಗಿದೆ.
  • ಪ್ಯಾನ್-ಐಐಟಿ (Pan-IIT) ಬೆಂಗಳೂರು ಶೃಂಗಸಭೆ, 2026

    ಪ್ಯಾನ್-ಐಐಟಿ (Pan-IIT) ಬೆಂಗಳೂರು ಶೃಂಗಸಭೆ, 2026

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ‘ಪ್ಯಾನ್-ಐಐಟಿ ಬೆಂಗಳೂರು ಶೃಂಗಸಭೆ 2026’, ಮೇ 16, 2026 ರಂದು ಬೆಂಗಳೂರಿನ ತಾಜ್ ಯಶವಂತಪುರದಲ್ಲಿ ಯಶಸ್ವಿಯಾಗಿ ಜರುಗಿತು.

    ಈ ಶೃಂಗಸಭೆಯ ಕುರಿತು ವಿವರಗಳು:

    • ಆಯೋಜಕರು: ಕರ್ನಾಟಕ ಸರ್ಕಾರ ಮತ್ತು ಪ್ಯಾನ್-ಐಐಟಿ ಅಲುಮ್ನಿ ಇಂಡಿಯಾ ಅಸೋಸಿಯೇಷನ್ ಜಂಟಿಯಾಗಿ ಇದನ್ನು ಆಯೋಜಿಸಿದ್ದವು.
    • ಧ್ಯೇಯವಾಕ್ಯ: ಈ ಶೃಂಗಸಭೆಯು ಸಂಪೂರ್ಣವಾಗಿ “ತಂತ್ರಜ್ಞಾನ ಸಾರ್ವಭೌಮತ್ವ” (Technology Sovereignty) ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿತ್ತು.
    • ಕಾರ್ಯಾದೇಶ: ರಾಷ್ಟ್ರೀಯ ಸ್ವಾವಲಂಬನೆ ಮತ್ತು ಡೀಪ್-ಟೆಕ್ ನಾವೀನ್ಯತೆಯನ್ನು ಬೆಳೆಸುವುದು.
    • ಪ್ರಮುಖ ಆದ್ಯತಾ ಕ್ಷೇತ್ರಗಳು: ಕೃತಕ ಬುದ್ಧಿಮತ್ತೆ (AI), ಡೀಪ್-ಟೆಕ್, ಸೆಮಿಕಂಡಕ್ಟರ್‌ಗಳು, ರಕ್ಷಣಾ ವಲಯ, ಇಂಧನ, ಸಾರಿಗೆ ಮತ್ತು ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳ ಕುರಿತಾದ ವಿಶೇಷ ಸ್ವತಂತ್ರ ಅಧಿವೇಶನಗಳನ್ನು ಇದು ಒಳಗೊಂಡಿತ್ತು.
    • ಬೃಹತ್ ಹ್ಯಾಕಥಾನ್: ರಾಜ್ಯ ಸರ್ಕಾರವು ಒದಗಿಸಿದ ನೈಜ-ಪ್ರಪಂಚದ ‘ಡಿಜಿಟಲ್ ಆಡಳಿತ’ದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ, 12,000 ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಒಳಗೊಂಡ ಬೃಹತ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
    • ಪಿಚ್-ಎ-ಥಾನ್ (Pitch-a-Thon): ಅತ್ಯುತ್ತಮ ಸಾಮರ್ಥ್ಯ ಹೊಂದಿರುವ ಆಯ್ದ ನವೋದ್ಯಮಗಳಿಗೆ ತಮ್ಮ ಮುಂದಿನ ಬೆಳವಣಿಗೆಗೆ ಅಗತ್ಯವಿರುವ ಬಂಡವಾಳವನ್ನು ಪಡೆಯಲು, 200 ಕ್ಕೂ ಹೆಚ್ಚು ಸಾಹಸೋದ್ಯಮ ಬಂಡವಾಳಗಾರರೊಂದಿಗೆ ನೇರ ಸಂಪರ್ಕ ಕಲ್ಪಿಸುವ ವೇದಿಕೆಯನ್ನು ಇದು ನಿರ್ಮಿಸಿಕೊಟ್ಟಿತು.
  • ಕಬ್ಬು ಬೆಳೆಗೆ : ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP), 2026-27 | ಜಮೈಕಾ (Jamaica) | ಪುಲಿಟ್ಜರ್ ಪ್ರಶಸ್ತಿ, 2026 (Pulitzer Prize 2026)

    ಕಬ್ಬು ಬೆಳೆಗೆ : ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP), 2026-27

    ಅರ್ಥವ್ಯವಸ್ಥೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪ್ರಧಾನಮಂತ್ರಿಯವರ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು (CCEA), 2026-27ನೇ ಹಂಗಾಮಿಗೆ ಕಬ್ಬಿನ ಬೆಳೆಗೆ ‘ನ್ಯಾಯಯುತ ಮತ್ತು ಲಾಭದಾಯಕ ಬೆಲೆ’ಯನ್ನು (Fair and Remunerative Price – FRP) ಶೇ. 10.25ರಷ್ಟು ಇಳುವರಿ ದರಕ್ಕೆ ಪ್ರತಿ ಕ್ವಿಂಟಾಲ್‌ಗೆ ₹365 ರಂತೆ ನಿಗದಿಪಡಿಸಲು ಒಪ್ಪಿಗೆ ನೀಡಿದೆ.

    ಕಬ್ಬಿನ ಬೆಳವಣಿಗೆಗೆ ಬೇಕಾದ ಸೂಕ್ತ ಪರಿಸ್ಥಿತಿಗಳು:

    • ಬೆಳೆಯ ಅವಧಿ: ಭೌಗೋಳಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಬ್ಬು ಪಕ್ವವಾಗಿ ಕಟಾವಿಗೆ ಬರಲು 10 ರಿಂದ 15 ತಿಂಗಳುಗಳು ಹಾಗೂ ಕೆಲವು ಕಡೆ 18 ತಿಂಗಳುಗಳವರೆಗೂ ಸಮಯ ತೆಗೆದುಕೊಳ್ಳುತ್ತದೆ.
    • ಮಣ್ಣು: ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವ ಯಾವುದೇ ಮಣ್ಣಿನಲ್ಲಿ ಕಬ್ಬು ಬೆಳೆಯಬಲ್ಲದು. ಉದಾಹರಣೆಗೆ: ಗೋಡು ಮಣ್ಣು (ಲೋಮಿ ಮಣ್ಣು), ಜೇಡಿಮಣ್ಣು (Clayey), ಕಪ್ಪು ಹತ್ತಿ ಮಣ್ಣು, ಕಂದು ಅಥವಾ ಕೆಂಪು ಮಣ್ಣು ಮತ್ತು ಜಂಬಿಟ್ಟಿಗೆ (ಲ್ಯಾಟರೈಟ್) ಮಣ್ಣು.
    • ಮಣ್ಣಿನಲ್ಲಿ ಸಾರಜನಕ, ಕ್ಯಾಲ್ಸಿಯಂ ಮತ್ತು ರಂಜಕದ ಅಂಶಗಳು ಹೇರಳವಾಗಿರಬೇಕು.
    • ಹವಾಮಾನ: ಕಬ್ಬಿಗೆ ಉಷ್ಣ ಮತ್ತು ಆರ್ದ್ರತೆಯಿಂದ ಕೂಡಿದ ವಾತಾವರಣದ ಅಗತ್ಯವಿರುತ್ತದೆ.  21-27°C ನಷ್ಟು ತಾಪಮಾನ ಮತ್ತು 75-150 ಸೆಂ.ಮೀ. ನಷ್ಟು ಮಳೆ ಕಬ್ಬಿನ ಬೆಳೆಗೆ ಹೆಚ್ಚು ಸೂಕ್ತವಾಗಿದೆ.

    ಕಬ್ಬಿನ ಉಪಯೋಗಗಳು:

    • ಇದು ಬಿದಿರು (Bamboo) ಸಸ್ಯ ಕುಟುಂಬಕ್ಕೆ ಸೇರಿದ್ದು, ಭಾರತದ ಮೂಲ ಬೆಳೆಯಾಗಿದೆ.
    • ಭಾರತದಲ್ಲಿ ಬೆಳೆಯುವ ಒಟ್ಟು ಕಬ್ಬಿನಲ್ಲಿ ಮೂರನೇ ಎರಡರಷ್ಟು (2/3) ಭಾಗವನ್ನು ಬೆಲ್ಲ ಮತ್ತು ಖಂಡಸಾರಿ ತಯಾರಿಸಲು ಬಳಸಲಾಗುತ್ತದೆ. ಉಳಿದ ಮೂರನೇ ಒಂದರಷ್ಟು (1/3) ಭಾಗ ಮಾತ್ರ ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆಯಾಗುತ್ತದೆ.
    • ಇದು ಮದ್ಯ (ಆಲ್ಕೋಹಾಲ್) ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುವನ್ನೂ ಒದಗಿಸುತ್ತದೆ.
    • ಕಬ್ಬಿನ ಸಿಪ್ಪೆ ಅಥವಾ ಜಲ್ಲೆಯನ್ನು (ಬಗಾಸ್) ಕಾಗದದ ತಯಾರಿಕೆಯಲ್ಲಿ ಅತ್ಯಂತ ಉಪಯುಕ್ತವಾಗಿ ಬಳಸಲಾಗುತ್ತದೆ.
    • ಎಥೆನಾಲ್ ಉತ್ಪಾದನೆ: ಎಥೆನಾಲ್ ಪೆಟ್ರೋಲಿಯಂ ಉತ್ಪನ್ನಗಳಿಗೆ ಮತ್ತು ಇತರ ಅನೇಕ ರಾಸಾಯನಿಕ ವಸ್ತುಗಳಿಗೆ ಸಮರ್ಥ ಪರ್ಯಾಯವಾಗಿದೆ. ಅಮೆರಿಕಾ (USA) ಮತ್ತು ಬ್ರೆಜಿಲ್ ನಂತರ ಭಾರತವು ಪ್ರಪಂಚದಲ್ಲಿಯೇ ಎಥೆನಾಲ್ ಉತ್ಪಾದಿಸುವ 3ನೇ ಅತಿದೊಡ್ಡ ರಾಷ್ಟ್ರವಾಗಿದೆ.

    ಸರ್ಕಾರದ ಉಪಕ್ರಮಗಳು:

    • ಕಬ್ಬಿನ ಬೆಳೆಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP – Fair and Remunerative Price)
      • ಶಿಫಾರಸು ಮಾಡುವವರು: ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (Commission for Agricultural Costs and Prices – CACP).
      • ಉದ್ದೇಶ: ಸಕ್ಕರೆ ಕಾರ್ಖಾನೆಗಳು ಲಾಭ ಗಳಿಸುತ್ತಿರಲಿ ಅಥವಾ ಇಲ್ಲದಿರಲಿ, ರೈತರಿಗೆ ಅವರ ಶ್ರಮ ಮತ್ತು ನಷ್ಟದ ಅಪಾಯದ ಆಧಾರದ ಮೇಲೆ ಖಚಿತವಾದ ಆದಾಯವನ್ನು ಖಾತರಿಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

    ಭಾರತದಲ್ಲಿ ಸಕ್ಕರೆ ಉತ್ಪಾದನೆ:

    • 2021-2022ರಲ್ಲಿ ಬ್ರೆಜಿಲ್ ದೇಶವನ್ನು ಹಿಂದಿಕ್ಕಿದ ಭಾರತವು, ಪ್ರಪಂಚದ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ.
    • ಭಾರತದಲ್ಲಿ ಸಕ್ಕರೆ ಕೈಗಾರಿಕೆಗಳ ಹಂಚಿಕೆ: ಭಾರತದಲ್ಲಿ ಸಕ್ಕರೆ ಉದ್ಯಮವು ಪ್ರಮುಖವಾಗಿ ಎರಡು ದೊಡ್ಡ ಉತ್ಪಾದನಾ ವಲಯಗಳಲ್ಲಿ ಹಂಚಿಕೆಯಾಗಿದೆ:
      • ಉತ್ತರ ಭಾರತದಲ್ಲಿ: ಉತ್ತರ ಪ್ರದೇಶ, ಬಿಹಾರ, ಹರಿಯಾಣ ಮತ್ತು ಪಂಜಾಬ್.
    • ದಕ್ಷಿಣ ಭಾರತದಲ್ಲಿ: ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ.

    ಜಮೈಕಾ (Jamaica)

    ಭೂಗೋಳ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರ ಅಧಿಕೃತ ಭೇಟಿಯ ಸಂದರ್ಭದಲ್ಲಿ, ಭಾರತ ಮತ್ತು ಜಮೈಕಾ ದೇಶಗಳು ಆರೋಗ್ಯ ಸಹಕಾರ, ಸೌರಶಕ್ತಿ ಅಭಿವೃದ್ಧಿ ಮತ್ತು ಪ್ರಸಾರ ವಲಯಗಳಿಗೆ ಸಂಬಂಧಿಸಿದಂತೆ ಮೂರು ‘ತಿಳುವಳಿಕಾ ಒಪ್ಪಂದ’ಗಳಿಗೆ (MoUs) ಸಹಿ ಹಾಕಿವೆ.

    ಜಮೈಕಾ ದ್ವೀಪದ ಬಗ್ಗೆ:

    • ಜಮೈಕಾ ಕೆರಿಬಿಯನ್ ಸಮುದ್ರದಲ್ಲಿರುವ ಪರ್ವತಗಳಿಂದ ಕೂಡಿದ ಒಂದು ದ್ವೀಪ ರಾಷ್ಟ್ರವಾಗಿದ್ದು, ಇದು ಕ್ಯೂಬಾ (Cuba) ದೇಶದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿದೆ.
    • ಇದು ಕ್ಯೂಬಾ, ಹಿಸ್ಪಾನಿಯೋಲಾ, ಹೈತಿ, ಡೊಮಿನಿಕನ್ ಗಣರಾಜ್ಯ ಮತ್ತು ಪೋರ್ಟೊ ರಿಕೊ ದ್ವೀಪಗಳೊಂದಿಗೆ, ‘ಗ್ರೇಟರ್ ಆಂಟಿಲೀಸ್ ದ್ವೀಪಗಳು’ ಎಂದು ಕರೆಯಲ್ಪಡುವ ಕೆರಿಬಿಯನ್ ದ್ವೀಪ ಸಮೂಹದ ಒಂದು ಪ್ರಮುಖ ಭಾಗವಾಗಿದೆ.
    • ಗಾತ್ರ: ವಿಸ್ತೀರ್ಣದಲ್ಲಿ ಕ್ಯೂಬಾ ಮತ್ತು ಹಿಸ್ಪಾನಿಯೋಲಾ ದ್ವೀಪಗಳ ನಂತರ, ಇದು ಕೆರಿಬಿಯನ್ ಸಮುದ್ರದ ಮೂರನೇ ಅತಿದೊಡ್ಡ ದ್ವೀಪ ಅಥವಾ ದ್ವೀಪ ರಾಷ್ಟವಾಗಿದೆ.
    • ಜಮೈಕಾ ರಾಷ್ಟ್ರವು 1962 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಿಂದ (UK – ಬ್ರಿಟನ್) ಸ್ವಾತಂತ್ರ್ಯ ಪಡೆಯಿತು. ಆದರೂ, ಇದು ಈಗಲೂ ‘ಕಾಮನ್‌ವೆಲ್ತ್’ ಒಕ್ಕೂಟದ ಸದಸ್ಯ ರಾಷ್ಟ್ರವಾಗಿ ಮುಂದುವರಿದಿದೆ.
    • ಭೌಗೋಳಿಕ ರಚನೆ: ಸುಮಾರು 25 ದಶಲಕ್ಷ (ಮಿಲಿಯನ್) ವರ್ಷಗಳ ಹಿಂದೆ ‘ಉತ್ತರ ಅಮೆರಿಕ’ ಮತ್ತು ‘ಕೆರಿಬಿಯನ್’ ಭೂಫಲಕಗಳು (Tectonic plates) ಪರಸ್ಪರ ಡಿಕ್ಕಿ ಹೊಡೆದಾಗ (ಮುಖಾಮುಖಿಯಾದಾಗ) ಈ ಜಮೈಕಾ ದ್ವೀಪವು ರೂಪುಗೊಂಡಿತು.
    • ಪ್ರಮುಖ ಪರ್ವತ ಶ್ರೇಣಿಗಳು: ನೀಲಿ ಪರ್ವತಗಳು (ಬ್ಲೂ ಮೌಂಟೇನ್ಸ್), ಜಾನ್ ಕ್ರೋ ಮೌಂಟೇನ್ಸ್, ಡಾನ್ ಫಿಗ್ಯುರೊ ಮೌಂಟೇನ್ಸ್ ಮತ್ತು ಕಾಕ್‌ಪಿಟ್ ಕಂಟ್ರಿ.
    • ಪ್ರಮುಖ ನದಿಗಳು: ಬ್ಲ್ಯಾಕ್ ರಿವರ್, ರಿಯೊ ಕೋಬ್ರೆ ಮತ್ತು ರಿಯೊ ಗ್ರಾಂಡೆ.

    ಪುಲಿಟ್ಜರ್ ಪ್ರಶಸ್ತಿ, 2026 (Pulitzer Prize 2026)

    ಪ್ರಶಸ್ತಿಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತೀಯ ಪತ್ರಕರ್ತರಾದ ಆನಂದ್ ಆರ್.ಕೆ. ಮತ್ತು ಸುಪರ್ಣಾ ಶರ್ಮಾ ಅವರು ನತಾಲಿಯ ಒಬಿಕೊ ಪಿಯರ್ಸನ್ ಅವರೊಂದಿಗೆ ಜಂಟಿಯಾಗಿ ಪ್ರತಿಷ್ಠಿತ ‘ಪುಲಿಟ್ಜೆರ್ ಪ್ರಶಸ್ತಿ 2026’ ಅನ್ನು ಪಡೆದು ಕೊಂಡಿದ್ದಾರೆ.

    ಪುಲಿಟ್ಜರ್ ಪ್ರಶಸ್ತಿಯ ಬಗ್ಗೆ:

    • ಹಿನ್ನೆಲೆ: ಖ್ಯಾತ ಪತ್ರಿಕಾ ಪ್ರಕಾಶಕರಾಗಿದ್ದ ಜೋಸೆಫ್ ಪುಲಿಟ್ಜರ್ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು 1917 ರಲ್ಲಿ ಸ್ಥಾಪಿಸಲಾಯಿತು. 
    • ನಿರ್ವಹಣೆ ಮತ್ತು ಪ್ರದಾನ: ಅಮೆರಿಕಾದ ಪ್ರತಿಷ್ಠಿತ ‘ಕೊಲಂಬಿಯಾ ವಿಶ್ವವಿದ್ಯಾಲಯ’.
    • ಪ್ರಶಸ್ತಿಯ ಸ್ವರೂಪ: ಒಟ್ಟು 23 ವಿಭಾಗಗಳಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪೈಕಿ 22 ವಿಭಾಗಗಳ ವಿಜೇತರಿಗೆ ಪ್ರಮಾಣಪತ್ರ ಹಾಗೂ $ 15,000 ಅಮೆರಿಕನ್ ಡಾಲರ್ ನಗದು ಬಹುಮಾನವನ್ನು ನೀಡಲಾಗುತ್ತದೆ. ಆದರೆ, ‘ಸಾರ್ವಜನಿಕ ಸೇವೆ’ ವಿಭಾಗದ ವಿಜೇತರಿಗೆ ಮಾತ್ರ ವಿಶೇಷವಾಗಿ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗುತ್ತದೆ.
    • ಕ್ಷೇತ್ರಗಳು: ಇದು ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಕ್ಷೇತ್ರಗಳಲ್ಲಿನ ಅಸಾಧಾರಣ ಸಾಧನೆಯನ್ನು ಗುರುತಿಸಿ ನೀಡುವ ಅತ್ಯುನ್ನತ ಪುರಸ್ಕಾರವಾಗಿದೆ.

    ಈ ಹಿಂದಿನ ಪ್ರಮುಖ ಭಾರತೀಯ ವಿಜೇತರು:

    • ಗೋಬಿಂದ್ ಬಿಹಾರಿ ಲಾಲ್: ಇವರು 1937 ರಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಪಡೆದ ಮೊಟ್ಟಮೊದಲ ಭಾರತೀಯರಾಗಿದ್ದಾರೆ. ಇವರು ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ  ‘ಗದರ್ ಪಕ್ಷ’ದ ಸಕ್ರಿಯ ಸದಸ್ಯರಾಗಿದ್ದರು.
    • ಸಿದ್ಧಾರ್ಥ ಮುಖರ್ಜಿ: ಕ್ಯಾನ್ಸರ್ ರೋಗದ ಕುರಿತು ಇವರು ರಚಿಸಿದ “ದಿ ಎಂಪರರ್ ಆಫ್ ಆಲ್ ಮಲಾಡೀಸ್: ಎ ಬಯೋಗ್ರಫಿ ಆಫ್ ಕ್ಯಾನ್ಸರ್” (The Emperor of All Maladies: A Biography of Cancer) ಎಂಬ ಕೃತಿಗಾಗಿ, ಇವರಿಗೆ ‘ಸಾಮಾನ್ಯ ಕಾಲ್ಪನಿಕವಲ್ಲದ ಸಾಹಿತ್ಯ’ (General Non-Fiction) ವಿಭಾಗದಲ್ಲಿ ಈ ಪ್ರಶಸ್ತಿ ಲಭಿಸಿದೆ.
    • ದಾನಿಶ್ ಸಿದ್ದಿಕಿ: ಪ್ರಖ್ಯಾತ ಛಾಯಾಚಿತ್ರ ಪತ್ರಕರ್ತರಾಗಿದ್ದ ಇವರು ಎರಡು ಬಾರಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2018 ರಲ್ಲಿ ರೋಹಿಂಗ್ಯಾ ಬಿಕ್ಕಟ್ಟಿನ ವರದಿಗಾಗಿ ಮತ್ತು 2020 ರಲ್ಲಿ ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕವು ಸೃಷ್ಟಿಸಿದ ಭೀಕರ ಮಾನವ ದುರಂತವನ್ನು ಸೆರೆಹಿಡಿದ ಅವರ ಅತ್ಯುತ್ತಮ ಛಾಯಾಚಿತ್ರಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು.
  • ನಗರ ಸವಾಲು ನಿಧಿ (Urban Challenge Fund)

    ನಗರ ಸವಾಲು ನಿಧಿ (Urban Challenge Fund)

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತದಾದ್ಯಂತ ಮಾರುಕಟ್ಟೆ-ಆಧಾರಿತ ಮತ್ತು ಸುಧಾರಣಾ-ಚಾಲಿತ ನಗರ ಪರಿವರ್ತನೆಯನ್ನು ಉತ್ತೇಜಿಸಲು, ಕೇಂದ್ರ ಸರ್ಕಾರದ ‘ನಗರ ಸವಾಲು ನಿಧಿ’ (UCF) ಯೋಜನೆಯಡಿ ₹1 ಲಕ್ಷ ಕೋಟಿ ಹಣಕಾಸಿನ  ನೆರವನ್ನು ಮೀಸಲಿಡಲಾಗಿದೆ.
    • ಈ ರಾಷ್ಟ್ರವ್ಯಾಪಿ ನಿಧಿಯಿಂದ ಕರ್ನಾಟಕವು ಅಂದಾಜು ₹5,000 ಕೋಟಿಯಿಂದ ₹5,500 ಕೋಟಿಗಳವರೆಗಿನ ಮೂಲ ಹಂಚಿಕೆಯನ್ನು ನಿರೀಕ್ಷಿಸುತ್ತಿದೆ.

    ನಗರ ಸವಾಲು ನಿಧಿ (UCF)ಯ ಬಗ್ಗೆ:

    • ಉದ್ದೇಶ: ಇದು ಸಾಂಪ್ರದಾಯಿಕ ಅನುದಾನಗಳ ವ್ಯವಸ್ಥೆಯಿಂದ ಹೊರಬಂದು, ಮಾರುಕಟ್ಟೆ-ಸಂಯೋಜಿತ ಹಾಗೂ ಸುಧಾರಣಾ-ಚಾಲಿತ ಮೂಲಸೌಕರ್ಯಗಳಿಗೆ ಹಣಕಾಸು ಒದಗಿಸುವ ಮೂಲಕ ಭಾರತದ ನಗರಗಳ ಸ್ವರೂಪವನ್ನು ಸಮಗ್ರವಾಗಿ ಪರಿವರ್ತಿಸುವ ಗುರಿ ಹೊಂದಿರುವ ಪ್ರಮುಖ ಯೋಜನೆಯಾಗಿದೆ.
    • ಹಣಕಾಸು ಸ್ವರೂಪ: ಇದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    • ಅನುಷ್ಠಾನ ಸಚಿವಾಲಯ: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA).
    • ಕಾಲಮಿತಿ: 2025-26 ರಿಂದ 2030-31ರ ಹಣಕಾಸು ವರ್ಷದವರೆಗೆ.

    ಮೂರು ಪ್ರಮುಖ ಕಾರ್ಯತಂತ್ರದ ವಿಭಾಗಗಳು:

    1. ಬೆಳವಣಿಗೆಯ ಕೇಂದ್ರಗಳಾಗಿ ನಗರಗಳು: ಉನ್ನತ ಮಟ್ಟದ ಸಾರಿಗೆ-ಆಧಾರಿತ ಅಭಿವೃದ್ಧಿ (TOD), ಆರ್ಥಿಕ ಕಾರಿಡಾರ್‌ಗಳು ಮತ್ತು ಮೊದಲಿನಿಂದಲೇ ವ್ಯವಸ್ಥಿತವಾಗಿ ಯೋಜಿತ ನೂತನ ನಗರಗಳ (Greenfield Townships) ನಿರ್ಮಾಣ. 
    2. ಸೃಜನಾತ್ಮಕವಾಗಿ ಮರು-ಅಭಿವೃದ್ಧಿ: ದಟ್ಟಣೆಯಿಂದ ಕೂಡಿದ ನಗರದ ಪ್ರಮುಖ ಪ್ರದೇಶಗಳನ್ನು ಮರು-ನವೀಕರಿಸುವುದು, ಪಾರಂಪರಿಕ ತಾಣಗಳ ಅಭಿವೃದ್ಧಿ ಮತ್ತು ಬಳಕೆಯಾಗದ ಕೈಗಾರಿಕಾ ಪ್ರದೇಶಗಳನ್ನು ಪುನರುಜ್ಜೀವನಗೊಳಿಸುವುದು.
    3. ನೀರು ಮತ್ತು ನೈರ್ಮಲ್ಯ: ಘನತ್ಯಾಜ್ಯ ನಿರ್ವಹಣೆಯನ್ನು ಆಧುನೀಕರಿಸುವುದು, ಹಳೆಯ ತ್ಯಾಜ್ಯದ ವಿಲೇವಾರಿ ಮತ್ತು ಶುದ್ಧ ನೀರು ಸರಬರಾಜು ಜಾಲಗಳ ನಿರ್ಮಾಣ.
  • ನ್ಯುಮೋನಿಯಾ : ಕರ್ನಾಟಕದಲ್ಲಿ ಶಿಶು ಮರಣಕ್ಕೆ ಕಾರಣ

    ನ್ಯುಮೋನಿಯಾ : ಕರ್ನಾಟಕದಲ್ಲಿ ಶಿಶು ಮರಣಕ್ಕೆ ಕಾರಣ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಕರ್ನಾಟಕದಲ್ಲಿ ಶಿಶು ಮರಣಕ್ಕೆ (infant mortality) ಅತಿದೊಡ್ಡ ಏಕೈಕ ಕಾರಣವಾಗಿ ನ್ಯುಮೋನಿಯಾ ಮುಂದುವರೆದಿದೆ.

    ‘ನ್ಯುಮೋನಿಯಾ’ ಬಗ್ಗೆ:

    • ಇದು ಶ್ವಾಸಕೋಶದ ವಾಯುಕೋಶಗಳಲ್ಲಿ (ಅಲ್ವಿಯೋಲೈಗಳು) ಉರಿಯೂತವನ್ನು ಉಂಟುಮಾಡುವ ತೀವ್ರವಾದ ಉಸಿರಾಟದ ಸೋಂಕಾಗಿದೆ.
    • ಕಾರ್ಯವಿಧಾನ: ಅಲ್ವಿಯೋಲೈಗಳು ದ್ರವ ಅಥವಾ ಕೀವುಗಳಿಂದ ತುಂಬಿಕೊಳ್ಳುತ್ತವೆ, ಇದು ಆಮ್ಲಜನಕದ ಸೇವನೆಯನ್ನು ನಿರ್ಬಂಧಿಸುತ್ತದೆ.
    • ಹರಡುವಿಕೆ: ವಾಯುಗಾಮಿ ಹನಿಗಳು (Airborne droplets), ಮೇಲ್ಮೈ ಸಂಪರ್ಕ, ಅಥವಾ ಹೆರಿಗೆಯ ಸಮಯದಲ್ಲಿ ರಕ್ತದ ಮೂಲಕ ಇದು ಹರಡುತ್ತದೆ.
    • ದುರ್ಬಲ ಗುಂಪುಗಳು: 5 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟ ವಯಸ್ಕರು ಈ ಸೋಂಕಿಗೆ ಸುಲಭವಾಗಿ ತುತ್ತಾಗುತ್ತಾರೆ.
    • ಕಾರಣವಾಗುವ ವಾಹಕಗಳು 
    1. ಬ್ಯಾಕ್ಟೀರಿಯಾ: ಸ್ಟ್ರೆಪ್ಟೊಕಾಕಸ್ ನ್ಯುಮೋನಿಯೇ (Streptococcus pneumoniae – ಅತ್ಯಂತ ಸಾಮಾನ್ಯ) ಮತ್ತು ಹಿಮೋಫಿಲಸ್ ಇನ್ಫ್ಲುಯೆಂಜಾ ಟೈಪ್ ಬಿ (Hib) ಬ್ಯಾಕ್ಟೀರಿಯಾಗಳು ಇದಕ್ಕೆ ಕಾರಣವಾಗಿವೆ.
    2. ವೈರಸ್‌ಗಳು: ಆರ್‌ಎಸ್‌ವಿ (RSV), ಇನ್ಫ್ಲುಯೆಂಜಾ ಮತ್ತು ಕರೋನವೈರಸ್‌ಗಳು ಈ ರೋಗವನ್ನು ಉಂಟುಮಾಡುತ್ತವೆ.
    3. ಶಿಲೀಂಧ್ರಗಳು: ನ್ಯುಮೋಸಿಸ್ಟಿಸ್ ಜಿರೋವೆಸಿ (Pneumocystis jirovecii) ಶಿಲೀಂಧ್ರವು ಎಚ್‌ಐವಿ (HIV) ಅಥವಾ ರೋಗನಿರೋಧಕ ಶಕ್ತಿ ಕುಂಠಿತಗೊಂಡ ರೋಗಿಗಳನ್ನು ಗುರಿಯಾಗಿಸುತ್ತದೆ.
    4. ವಿಲಕ್ಷಣ : ಮೈಕೋಪ್ಲಾಸ್ಮಾ ನ್ಯುಮೋನಿಯೇ (Mycoplasma pneumoniae) ಸೌಮ್ಯವಾದ “ವಾಕಿಂಗ್ ನ್ಯುಮೋನಿಯಾ” ವನ್ನು ಉಂಟುಮಾಡುತ್ತದೆ.

    ಭಾರತದ ಯೋಜನೆಗಳು ಮತ್ತು ಉಪಕ್ರಮಗಳು:

    • PCV ಲಸಿಕೆ: ಇದನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ (Universal Immunization Programme – UIP) ಅಡಿಯಲ್ಲಿ ಜಾರಿಗೊಳಿಸಲಾಗಿದೆ. ಇದು ನ್ಯುಮೋನಿಯಾ, ಮೆನಿಂಜೈಟಿಸ್ ಮತ್ತು ಸೆಪ್ಸಿಸ್ ವಿರುದ್ಧ ರಕ್ಷಣೆ ಒದಗಿಸುತ್ತದೆ.
    • ಸಾನ್ಸ್ (SAANS) ಅಭಿಯಾನ: ‘ನ್ಯುಮೋನಿಯಾವನ್ನು ಯಶಸ್ವಿಯಾಗಿ ಹತ್ತಿಕ್ಕಲು ಸಾಮಾಜಿಕ ಜಾಗೃತಿ ಮತ್ತು ಕ್ರಮ’ (SAANS – Social Awareness and Action to Neutralise Pneumonia Successfully) ಎನ್ನುವುದು ಇದರ ವಿಸ್ತೃತ ರೂಪವಾಗಿದೆ. ಇದು 5 ವರ್ಷದೊಳಗಿನ ಮಕ್ಕಳಲ್ಲಿ ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸಲು ಪ್ರೇರೇಪಿಸುತ್ತದೆ.
    • IAPPD: ಭಾರತದಲ್ಲಿ 5 ವರ್ಷದೊಳಗಿನ ಮಕ್ಕಳ ಸಾವಿಗೆ ಎರಡು ಪ್ರಮುಖ ಕಾರಣಗಳಾದ ನ್ಯುಮೋನಿಯಾ ಮತ್ತು ಅತಿಸಾರವನ್ನು ಗುರಿಯಾಗಿಸಿಕೊಂಡಿರುವ ಸಮಗ್ರ ಕಾರ್ಯತಂತ್ರ ಇದಾಗಿದೆ.

    ಜಾಗತಿಕ ಚೌಕಟ್ಟುಗಳು

    • GAPPD: ಪ್ರತಿ 1,000 ಜೀವಂತ ಜನನಗಳಿಗೆ 3 ಕ್ಕಿಂತ ಕಡಿಮೆ ಮಕ್ಕಳ ನ್ಯುಮೋನಿಯಾ ಸಾವುಗಳನ್ನು ಹೊಂದುವ ಗುರಿಯನ್ನು ಹೊಂದಿರುವ WHO/UNICEF ಯೋಜನೆಯಾಗಿದೆ.
    • ವಿಶ್ವ ನ್ಯುಮೋನಿಯಾ ದಿನ: ಪ್ರತಿ ವರ್ಷ ನವೆಂಬರ್ 12 ರಂದು ಈ ದಿನವನ್ನು ಆಚರಿಸಲಾಗುತ್ತದೆ.
  • ತುರ್ತು ಸಾಲ ಖಾತರಿ ಯೋಜನೆ 5.0 (ECLGS 5.0) | ಉದ್ಗಮ್ ಪೋರ್ಟಲ್ (UDGAM Portal)

    ತುರ್ತು ಸಾಲ ಖಾತರಿ ಯೋಜನೆ 5.0 (ECLGS 5.0)

    ಅರ್ಥವ್ಯವಸ್ಥೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ‘ತುರ್ತು ಸಾಲ ಖಾತರಿ ಯೋಜನೆ 5.0’ಕ್ಕೆ (Emergency Credit Line Guarantee Scheme – ECLGS 5.0) ಅನುಮೋದನೆ ನೀಡಿದೆ.

    ಯೋಜನೆಯ ಪ್ರಮುಖ ಅಂಶಗಳು:

    • ಉದ್ದೇಶ: ಪ್ರಸ್ತುತ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದಾಗಿ ಹಣಕಾಸಿನ ಕೊರತೆ ಅಥವಾ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಉದ್ದಿಮೆಗಳಿಗೆ ಹೆಚ್ಚುವರಿ ಆರ್ಥಿಕ ಬೆಂಬಲ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
    • ಸಾಲದ ನೆರವು: ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (MSMEs) ಹಾಗೂ ವಿಮಾನಯಾನ ವಲಯಕ್ಕೆ ಆರ್ಥಿಕ ಅಸ್ಥಿರತೆಯಿಂದ ಪಾರಾಗಲು ಸಹಾಯ ಒದಗಿಸಲು, ಒಟ್ಟು ₹2,55,000 ಕೋಟಿಗಳಷ್ಟು ಹೆಚ್ಚುವರಿ ಸಾಲದ ಹರಿವನ್ನು ಸುಗಮಗೊಳಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

    ಉದ್ಗಮ್ ಪೋರ್ಟಲ್ (UDGAM Portal)

    ಅರ್ಥವ್ಯವಸ್ಥೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಉದ್ಗಮ್ (UDGAM) ಪೋರ್ಟಲ್‌ಗೆ ಇದುವರೆಗೆ 30 ಬ್ಯಾಂಕ್‌ಗಳನ್ನು ಸಂಯೋಜಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸುಪ್ರೀಂ ಕೋರ್ಟ್‌ಗೆ ಅಧಿಕೃತ ಮಾಹಿತಿ ನೀಡಿದೆ.

    ಉದ್ಗಮ್ ಪೋರ್ಟಲ್ ಬಗ್ಗೆ ( UDGAM Portal):

    • UDGAM ವಿಸ್ತೃತ ರೂಪ: ಅನ್‌ಕ್ಲೈಮ್ಡ್ ಡೆಪಾಸಿಟ್ಸ್ – ಗೇಟ್‌ವೇ ಟು ಆಕ್ಸೆಸ್ ಇನ್ಫಾರ್ಮೇಷನ್ (Unclaimed Deposits – Gateway to Access Information – ಅಂದರೆ: ವಾರಸುದಾರರಿಲ್ಲದ ಠೇವಣಿಗಳ ಮಾಹಿತಿಯನ್ನು ಪಡೆಯುವ ಪ್ರವೇಶ ದ್ವಾರ).
    • ಅಭಿವೃದ್ಧಿಪಡಿಸಿದ ಸಂಸ್ಥೆ: ಭಾರತೀಯ ರಿಸರ್ವ್ ಬ್ಯಾಂಕ್ (RBI).
    • ಉದ್ದೇಶ: ವಿವಿಧ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದೆ ಹಾಗೆಯೇ ಉಳಿದಿರುವ ಬ್ಯಾಂಕ್ ಠೇವಣಿಗಳನ್ನು ಹುಡುಕಲು ಸಾರ್ವಜನಿಕರಿಗೆ ಒಂದು ‘ಕೇಂದ್ರೀಕೃತ ಶೋಧನಾ ಸೌಲಭ್ಯವನ್ನು ಒದಗಿಸುವುದು.
    • ಕಾರ್ಯನಿರ್ವಹಣೆ: ಸಾರ್ವಜನಿಕರು ಒಂದೇ ಜಾಲತಾಣದ ಮೂಲಕ, ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ತಮ್ಮ ಅಥವಾ ತಮ್ಮ ಕುಟುಂಬದವರ ವಾರಸುದಾರರಿಲ್ಲದ ಹಣವಿದೆಯೇ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಲು ಇದು ಅನುಕೂಲ ಮಾಡಿಕೊಡುತ್ತದೆ.
    • ಈ ಪೋರ್ಟಲ್ ಮೂಲಕ ನೇರವಾಗಿ ಹಣವನ್ನು ಪಡೆಯಲು ಸಾಧ್ಯವಿಲ್ಲ; ಬದಲಾಗಿ, ಹಣವಿರುವ ಸಂಬಂಧಪಟ್ಟ ಬ್ಯಾಂಕ್‌ಗಳನ್ನು ಸಂಪರ್ಕಿಸುವಂತೆ ಬಳಕೆದಾರರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಮುಂದಿನ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.

    ವಾರಸುದಾರರಿಲ್ಲದ ಹಣಕಾಸು ಸ್ವತ್ತುಗಳು (Unclaimed Financial Assets):

    • ಹಿನ್ನೆಲೆ: ಬ್ಯಾಂಕ್‌ಗಳಲ್ಲಿ ಜಮಾ ಮಾಡಿರುವ ಹಣವನ್ನು, ಮೂಲ ಖಾತೆದಾರರು ಅಥವಾ ಅವರ ಕಾನೂನುಬದ್ಧ ವಾರಸುದಾರರು ದೀರ್ಘಕಾಲದವರೆಗೆ ಮರಳಿ ಯಾರೂ ಪಡೆದುಕೊಳ್ಳದಿದ್ದರೆ (ಕ್ಲೈಮ್ ಮಾಡದಿದ್ದರೆ), ಅಂತಹ ಹಣವನ್ನು ‘ವಾರಸುದಾರರಿಲ್ಲದ ಹಣಕಾಸು ಸ್ವತ್ತುಗಳು’ ಎಂದು ಕರೆಯಲಾಗುತ್ತದೆ.
    • ನಿಯಮ: ಯಾವುದೇ ಬ್ಯಾಂಕ್ ಖಾತೆಯಲ್ಲಿರುವ ಠೇವಣಿಯನ್ನು ಸತತ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಮರಳಿ ಯಾರೂ ಪಡೆದುಕೊಳ್ಳದಿದ್ದರೆ ಆ ಹಣವನ್ನು ‘ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ’ಗೆ (Depositor Education and Awareness Fund – DEA Fund) ವರ್ಗಾಯಿಸಲಾಗುತ್ತದೆ.
    • ಮಾಲೀಕತ್ವದ ಹಕ್ಕು: ಹಣವನ್ನು ‘ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ (DEAF) ವರ್ಗಾಯಿಸಿದ ಮೇಲೂ, ಆ ಹಣದ ಮೇಲಿನ ಮಾಲೀಕತ್ವದ ಹಕ್ಕು ಮೂಲ ಠೇವಣಿದಾರರ ಬಳಿಯೇ ಭದ್ರವಾಗಿರುತ್ತದೆ. ಠೇವಣಿದಾರರು ಅಥವಾ ಅವರ ಕಾನೂನುಬದ್ಧ ವಾರಸುದಾರರು ಆ ಹಣವನ್ನು ಮರಳಿ ಪಡೆಯಲು (ಕ್ಲೈಮ್ ಮಾಡಲು) ಯಾವುದೇ ಕಾಲಮಿತಿ ಇರುವುದಿಲ್ಲ.
  • ‘ಆದಿತ್ಯ’ ಹೈ-ಸ್ಪೀಡ್ ರೈಲು ಸಂಕೀರ್ಣ

    ‘ಆದಿತ್ಯ’ ಹೈ-ಸ್ಪೀಡ್ ರೈಲು ಸಂಕೀರ್ಣ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನ ಬಿಇಎಂಎಲ್ (BEML) ತಿಪ್ಪಸಂದ್ರ ಆವರಣದಲ್ಲಿ ‘ಆದಿತ್ಯ’ ಹೈ-ಸ್ಪೀಡ್ ರೈಲು ಸಂಕೀರ್ಣವನ್ನು ಉದ್ಘಾಟಿಸಿದರು.

    ‘ಆದಿತ್ಯ’ ಹೈ-ಸ್ಪೀಡ್ ರೈಲು ಸಂಕೀರ್ಣದ ಬಗ್ಗೆ:

    • ಇದು ಬೆಂಗಳೂರಿನಲ್ಲಿ BEML ಸ್ಥಾಪಿಸಿದ ಅತ್ಯಾಧುನಿಕ ಉತ್ಪಾದನಾ ಘಟಕವಾಗಿದೆ.
    • ಭಾರತದ ಮೊದಲ ಸ್ವದೇಶಿ ಬುಲೆಟ್ ರೈಲನ್ನು ನಿರ್ಮಿಸುವುದು ಇದರ ಪ್ರಮುಖ ಕಾರ್ಯಾದೇಶವಾಗಿದೆ.

    ಪ್ರಮುಖ ಯೋಜನಾ ವಿವರಗಳು

    • ಸ್ಥಳ: ಇದು ಬೆಂಗಳೂರಿನ BEML ತಿಪ್ಪಸಂದ್ರ ಆವರಣದಲ್ಲಿದೆ.
    • ಪ್ರಮುಖ ಯೋಜನೆ: ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಸಹಯೋಗದೊಂದಿಗೆ ವಿನ್ಯಾಸಗೊಳಿಸಲಾದ B-28 ಹೈ-ಸ್ಪೀಡ್ ರೈಲು ಸೆಟ್ ಇದರ ಪ್ರಮುಖ ಯೋಜನೆಯಾಗಿದೆ.
    • ಸಾಮರ್ಥ್ಯಗಳು: ಇದು ಸುಧಾರಿತ ರೋಬೋಟಿಕ್ ಲೇಸರ್ ವೆಲ್ಡಿಂಗ್ ಮತ್ತು ಸಾರ್ವತ್ರಿಕ ಹೈಡ್ರಾಲಿಕ್ ಜಿಗ್‌ಗಳನ್ನು ಒಳಗೊಂಡಿದೆ.
    • ಉತ್ಪಾದನೆಯು ಕಾರ್ಯಾಚರಣೆಯ ವೇಗವನ್ನು 250 ಕಿ.ಮೀ/ಗಂಟೆ (km/hr) ಗುರಿಯಾಗಿರಿಸಿಕೊಂಡಿದೆ.
  • ಹತ್ತಿ ಉತ್ಪಾದಕತೆ ಗುರಿ (Mission for Cotton Productivity), 2026–31 | ಭಾರತದ ಇ-ತ್ಯಾಜ್ಯ ನಿರ್ವಹಣೆ (India’s E-waste Management) | ತೀಸ್ತಾ ನದಿ (Teesta River)

    ಹತ್ತಿ ಉತ್ಪಾದಕತೆ ಗುರಿ (Mission for Cotton Productivity), 2026–31

    ಅರ್ಥವ್ಯವಸ್ಥೆ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಕೇಂದ್ರ ಸಚಿವ ಸಂಪುಟವು 2026-27 ರಿಂದ 2030-31ರವರೆಗಿನ ಅವಧಿಗೆ ‘ಹತ್ತಿ ಉತ್ಪಾದಕತೆ ಗುರಿ’ (Mission for Cotton Productivity) ಯೋಜನೆಗಾಗಿ ಒಟ್ಟು ರೂ. 5,659.22 ಕೋಟಿ ಮೊತ್ತವನ್ನು ಮಂಜೂರು ಮಾಡಿದೆ.

    ಹತ್ತಿ ಉತ್ಪಾದಕತೆ ಗುರಿಯ ಬಗ್ಗೆ (Mission for Cotton Productivity):

    • ಈ ಯೋಜನೆಯನ್ನು ‘ಕಪಾಸ್ ಕ್ರಾಂತಿ’ ಎಂತಲೂ ಕರೆಯಲಾಗುತ್ತದೆ.
    • ಉದ್ದೇಶ: ದೇಶದಲ್ಲಿ ಪ್ರಸ್ತುತ ಕಡಿಮೆಯಾಗುತ್ತಿರುವ ಹತ್ತಿ ಇಳುವರಿಯನ್ನು ಹೆಚ್ಚಿಸುವುದು ಮತ್ತು ಹತ್ತಿ ನಾರಿನ ಗುಣಮಟ್ಟವನ್ನು ಉತ್ತಮಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಮೂಲಕ ಭಾರತವನ್ನು ಜವಳಿ (ಬಟ್ಟೆ) ಉತ್ಪಾದನೆಯಲ್ಲಿ ಸ್ವಾವಲಂಬಿ ಹಾಗೂ ಜಾಗತಿಕ ಮಟ್ಟದಲ್ಲಿ ಪ್ರಬಲ ಕೇಂದ್ರವನ್ನಾಗಿ ಮಾಡುವುದು ಇದರ ಗುರಿಯಾಗಿದೆ.
    • ಗಮನಹರಿಸುವ ಪ್ರಮುಖ ಅಂಶಗಳು:
      • ಅಧಿಕ ಸಾಂದ್ರತೆಯ ನಾಟಿ ಅಂದರೆ ದಟ್ಟವಾಗಿ ಬೀಜ ಬಿತ್ತುವ ಪದ್ಧತಿಯ (High-Density Planting System – HDPS) ಅಳವಡಿಕೆ.
      • ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳಬಲ್ಲ 24 ಹೊಸ ಹತ್ತಿ ತಳಿಗಳ ಅಭಿವೃದ್ಧಿ.
      • ಅಧಿಕ ಉದ್ದನೆಯ ಹತ್ತಿಯ ನಾರನ್ನು (Extra Long Staple – ELS) ಬೆಳೆಯಲು ಪ್ರೋತ್ಸಾಹ.
      • ಭಾರತೀಯ ಹತ್ತಿಗೆ ಜಾಗತಿಕ ಮಾರುಕಟ್ಟೆಯಲ್ಲಿ “ಕಸ್ತೂರಿ ಕಾಟನ್ ಭಾರತ್” ಎಂಬ ಹೆಸರಿನಲ್ಲಿ ಬ್ರ್ಯಾಂಡಿಂಗ್ ಒದಗಿಸುವುದು.
    • ಆಧುನೀಕರಣ: ರೈತರಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು 2,000 ಜಿನ್ನಿಂಗ್ (ಹತ್ತಿ ಮತ್ತು ಬೀಜ ಬೇರ್ಪಡಿಸುವ ಯಂತ್ರಗಳು) ಘಟಕಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ವ್ಯವಹಾರದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸುವುದು.

    ಭಾರತದಲ್ಲಿ ಹತ್ತಿ ಬೇಸಾಯ:

    • ಹತ್ತಿಯನ್ನು ಅದರ ಆರ್ಥಿಕ ಮೌಲ್ಯದಿಂದಾಗಿ ಅನ್ವರ್ಥವಾಗಿ ‘ಬಿಳಿ ಚಿನ್ನ’ ಎಂದು ಕರೆಯಲಾಗುತ್ತದೆ.
    • ಇದು ಲಕ್ಷಾಂತರ ರೈತರ ಜೀವನಾವಶ್ಯಕ ಬೆಳೆಯಾಗಿದ್ದು, ಭಾರತದ ಜವಳಿ ಉದ್ಯಮದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುವ ಪ್ರಮುಖ ವಾಣಿಜ್ಯ ಬೆಳೆಯಾಗಿದೆ.
    • ಹವಾಮಾನ ಪರಿಸ್ಥಿತಿ: ಇದು ಉಪ-ಉಷ್ಣವಲಯದ ‘ಖಾರಿಫ್’ ಬೆಳೆಯಾಗಿದೆ. ಇದು ಬೆಳೆದು ಕಟಾವಿಗೆ ಬರಲು 6 ರಿಂದ 8 ತಿಂಗಳುಗಳು ಬೇಕು. ಹತ್ತಿ ಬೆಳೆಗೆ 21°C ನಿಂದ 30°C ನಷ್ಟು ಬೆಚ್ಚಗಿನ, ಬಿಸಿಲಿನಿಂದ ಕೂಡಿದ ತಾಪಮಾನ ಹಾಗೂ ಕನಿಷ್ಠ 210 ದಿನಗಳ ಕಾಲ ಹಿಮ-ಮುಕ್ತ (ಮಂಜು ಬೀಳದ) ವಾತಾವರಣ ಇರಬೇಕು.
    • ಮಳೆ: ಇದಕ್ಕೆ 50 ರಿಂದ 100 ಸೆಂ.ಮೀ. ನಷ್ಟು ಸಾಧಾರಣ ಮಳೆಯ ಅಗತ್ಯವಿದೆ.
    • ಮಣ್ಣು: ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಕಪ್ಪು ಹತ್ತಿ ಮಣ್ಣು (ರೆಗೂರ್ ಮಣ್ಣು) ಹತ್ತಿ ಬೆಳೆಗೆ ಅತ್ಯಂತ ಸೂಕ್ತವಾಗಿದೆ.
      • ಆದರೆ, ಬೇರಿಗೆ ನೀರು ನಿಲ್ಲದಂತೆ ಉತ್ತಮ ಬಸಿಗಾಲುವೆ ವ್ಯವಸ್ಥೆ ಇದ್ದರೆ, ಮೆಕ್ಕಲು ಮಣ್ಣು ಅಥವಾ ಕೆಂಪು ಮಣ್ಣಿನಲ್ಲೂ ಹತ್ತಿಯನ್ನು ಹುಲುಸಾಗಿ ಬೆಳೆಯಬಹುದು.
    • ಉತ್ಪಾದನೆ: ಭಾರತವು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಹತ್ತಿ ಬೆಳೆಯುವ ಪ್ರದೇಶವನ್ನು ಹೊಂದಿದೆ ಮತ್ತು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಹತ್ತಿಯನ್ನು ಉತ್ಪಾದಿಸುತ್ತದೆ.
    • ಪ್ರಮುಖ ಹತ್ತಿ ಉತ್ಪಾದಕ ರಾಜ್ಯಗಳು: ಗುಜರಾತ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳು ಹತ್ತಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ.
    • ಪ್ರಮುಖ ಸವಾಲುಗಳು: ‘ಗುಲಾಬಿ ಕಾಯಿಕೊರಕ’ (Pink Bollworm – PBW) ಎಂಬ ಕೀಟವು ಕೀಟನಾಶಕಗಳಿಗೆ ಪ್ರತಿರೋಧ ಬೆಳೆಸಿಕೊಳ್ಳುತ್ತಿರುವುದು ಹತ್ತಿ ಬೇಸಾಯಕ್ಕಿರುವ ದೊಡ್ಡ ಸವಾಲಾಗಿದೆ.

    ಭಾರತದ ಇ-ತ್ಯಾಜ್ಯ ನಿರ್ವಹಣೆ (India’s E-waste Management)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • 2024ರ ಆರ್ಥಿಕ ವರ್ಷದಲ್ಲಿ (FY24) ಭಾರತವು ಸುಮಾರು 6.2 ದಶಲಕ್ಷ (ಮಿಲಿಯನ್) ಟನ್‌ಗಳಷ್ಟು ಇ-ತ್ಯಾಜ್ಯವನ್ನು ಉತ್ಪಾದಿಸಿದೆ. 
    • 2030ರ ವೇಳೆಗೆ ಈ ಪ್ರಮಾಣವು ದ್ವಿಗುಣಗೊಂಡು 14 ದಶಲಕ್ಷ ಟನ್‌ಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.

    ಇ-ತ್ಯಾಜ್ಯ ಎಂದರೇನು?:

    • ಕಂಪ್ಯೂಟರ್‌ಗಳು, ವಿದ್ಯುನ್ಮಾನ ಮಂಡಲ ಫಲಕಗಳು (Circuit boards), ಮೊಬೈಲ್ ಫೋನ್‌ಗಳು ಮತ್ತು ಗೃಹೋಪಯೋಗಿ ವಸ್ತುಗಳಂತಹ, ಬಳಸಿ ಬಿಸಾಡಿದ ಅಥವಾ ಹಾಳಾದ ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ‘ಇ-ತ್ಯಾಜ್ಯ’ (ಎಲೆಕ್ಟ್ರಾನಿಕ್ ತ್ಯಾಜ್ಯ) ಎಂದು ಕರೆಯಲಾಗುತ್ತದೆ. 
    • ಈ ತ್ಯಾಜ್ಯಗಳಲ್ಲಿ ಸೀಸ, ಪಾದರಸ, ಕ್ಯಾಡ್ಮಿಯಂ ಮತ್ತು ಬ್ರೋಮಿನೇಟೆಡ್ ಫ್ಲೇಮ್ ರಿಟಾರ್ಡೆಂಟ್‌ಗಳಂತಹ ಅತ್ಯಂತ ಅಪಾಯಕಾರಿ ರಾಸಾಯನಿಕ ವಸ್ತುಗಳಿರುತ್ತವೆ.
    • ಇವುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿದ್ದರೆ, ಅದು ಮಣ್ಣು ಮತ್ತು ಜಲ ಮಾಲಿನ್ಯಕ್ಕೆ ಕಾರಣವಾಗುವುದಲ್ಲದೆ, ಮನುಷ್ಯರಲ್ಲಿ ಹಾಗೂ ಪ್ರಾಣಿಗಳಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

    ಅಸಮರ್ಪಕ ಇ-ತ್ಯಾಜ್ಯ ನಿರ್ವಹಣೆಯ ದುಷ್ಪರಿಣಾಮಗಳು:

    • ಜಲ ಮಾಲಿನ್ಯ: ಇ-ತ್ಯಾಜ್ಯದಲ್ಲಿರುವ ಸೈನೈಡ್ ಮತ್ತು ಸಲ್ಫ್ಯೂರಿಕ್ ಆಮ್ಲದಂತಹ ವಿಷಕಾರಿ ವಸ್ತುಗಳು ಮಳೆಯ ನೀರಿನೊಂದಿಗೆ ಬೆರೆತು ಜಲಮೂಲಗಳನ್ನು (ಕೆರೆ, ನದಿಗಳನ್ನು) ಸೇರುವುದರಿಂದ, ಜಲಚರಗಳು ಮತ್ತು ಪರಿಸರದ ಮೇಲೆ ತೀವ್ರ ಹಾನಿಯಾಗುತ್ತದೆ.
    • ವಾಯು ಮಾಲಿನ್ಯ: ಇ-ತ್ಯಾಜ್ಯದಲ್ಲಿರುವ ಪ್ಲಾಸ್ಟಿಕ್ ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಸುಡುವುದರಿಂದ ಸೀಸದಂತಹ ವಿಷಾನಿಲಗಳು ಗಾಳಿಯನ್ನು ಸೇರಿ ತೀವ್ರವಾದ ವಾಯುಮಾಲಿನ್ಯ ಉಂಟಾಗುತ್ತದೆ.
    • ಮಣ್ಣಿನ ಮಾಲಿನ್ಯ: ತ್ಯಾಜ್ಯದಲ್ಲಿರುವ ಅಪಾಯಕಾರಿ ವಸ್ತುಗಳು ಮಣ್ಣಿನಲ್ಲಿ ಬೆರೆತು, ಮಣ್ಣಿನ ಫಲವತ್ತತೆಯನ್ನು ನಾಶಪಡಿಸುತ್ತವೆ. ಇದರಿಂದ ಕೃಷಿ ಭೂಮಿ ಮತ್ತು ಜೀವವೈವಿಧ್ಯತೆಗೆ ಭಾರಿ ಹಾನಿಯಾಗುತ್ತದೆ.
    • ಆರ್ಥಿಕ ನಷ್ಟ: ಇ-ತ್ಯಾಜ್ಯದಿಂದ ಮರುಬಳಕೆ ಮಾಡಬಹುದಾಗಿದ್ದ, ಸುಮಾರು ₹80,000 ಕೋಟಿಗೂ ಅಧಿಕ ಮೌಲ್ಯದ ಬೆಲೆಬಾಳುವ ಲೋಹಗಳನ್ನು ಭಾರತವು ಪ್ರತಿ ವರ್ಷ ಕಳೆದುಕೊಳ್ಳುತ್ತಿದೆ ಎಂದು ಅಂದಾಜಿಸಲಾಗಿದೆ.

    ಭಾರತದಲ್ಲಿ ಇ-ತ್ಯಾಜ್ಯ ನಿರ್ವಹಣೆಗಾಗಿ ಸರ್ಕಾರದ ಪ್ರಮುಖ ಉಪಕ್ರಮಗಳು:

    • ವಿಸ್ತೃತ ಉತ್ಪಾದಕರ ಜವಾಬ್ದಾರಿ (Extended Producer Responsibility – EPR): ಯಾವುದೇ ಎಲೆಕ್ಟ್ರಾನಿಕ್ ಉತ್ಪನ್ನವನ್ನು ತಯಾರಿಸುವವರು, ಆಮದು ಮಾಡಿಕೊಳ್ಳುವವರು ಮತ್ತು ಬ್ರ್ಯಾಂಡ್ ಮಾಲೀಕರು, ಆ ವಸ್ತುಗಳು ಹಾಳಾದ ನಂತರ ಬರುವ ತ್ಯಾಜ್ಯವನ್ನು ತಾವೇ ಜವಾಬ್ದಾರಿಯುತವಾಗಿ ಸಂಗ್ರಹಿಸಿ, ಸಮರ್ಪಕವಾಗಿ ನಿರ್ವಹಿಸಬೇಕು ಎಂಬ ನಿಯಮ ಇದಾಗಿದೆ.
    • EPR ಇ-ತ್ಯಾಜ್ಯ ಪೋರ್ಟಲ್: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (CPCB) ಇದಕ್ಕಾಗಿ ‘EPR ಇ-ತ್ಯಾಜ್ಯ ಪೋರ್ಟಲ್’ ಎಂಬ ಆನ್‌ಲೈನ್ ವ್ಯವಸ್ಥೆಯನ್ನು ರೂಪಿಸಿದೆ. ಇ-ತ್ಯಾಜ್ಯವನ್ನು ಉತ್ಪಾದಿಸುವವರು, ತಯಾರಕರು ಮತ್ತು ಮರುಬಳಕೆ ಮಾಡುವವರು ಈ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
    • ಹೊಸ ನಿಯಮಗಳು: ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2016ರ ಇ-ತ್ಯಾಜ್ಯ ನಿಯಮಗಳನ್ನು ಪರಿಷ್ಕರಿಸಿ, ಹೊಸ ‘ಇ-ತ್ಯಾಜ್ಯ (ನಿರ್ವಹಣೆ) ನಿಯಮಗಳು, 2022’ ಅನ್ನು ಜಾರಿಗೆ ತಂದಿದೆ.
    • ಇ-ತ್ಯಾಜ್ಯ ಕ್ಲಿನಿಕ್: ಮಧ್ಯಪ್ರದೇಶದ ಭೋಪಾಲ್ ನಗರದಲ್ಲಿ ಭಾರತದ ಮೊಟ್ಟಮೊದಲ ‘ಇ-ತ್ಯಾಜ್ಯ ಕ್ಲಿನಿಕ್’ (E-waste clinic) ಅನ್ನು ಸ್ಥಾಪಿಸಲಾಗಿದೆ. ಮನೆ ಮತ್ತು ಅಂಗಡಿಗಳಿಂದ ಬರುವ ಇ-ತ್ಯಾಜ್ಯವನ್ನು ಪ್ರತ್ಯೇಕಿಸಿ, ಸಂಸ್ಕರಿಸಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವಿಶೇಷ ಕೇಂದ್ರ ಇದಾಗಿದೆ.
    • ಮರುಬಳಕೆ ಅಭಿಯಾನ: ಸರ್ಕಾರಿ ಕಚೇರಿಗಳಲ್ಲಿ ‘ಸ್ವಚ್ಛತೆ’ಯನ್ನು ಕಾಪಾಡಲು ಮತ್ತು ಇ-ತ್ಯಾಜ್ಯದಿಂದ ಉಪಯುಕ್ತ ಸಂಪನ್ಮೂಲಗಳನ್ನು ಮರುಪಡೆಯಲು, ಕೇಂದ್ರ ಗಣಿ ಸಚಿವಾಲಯವು 2025ರ ವಿಶೇಷ ಅಭಿಯಾನ 5.0ರ ಅಡಿಯಲ್ಲಿ ‘ರಾಷ್ಟ್ರ ಮಟ್ಟದ  ಇ-ತ್ಯಾಜ್ಯ ಮರುಬಳಕೆ ಅಭಿಯಾನ’ವನ್ನು ಆರಂಭಿಸಿದೆ.

    ಬಾಸೆಲ್ ಸಮಾವೇಶ (Basel Convention):

    • ಬಾಸೆಲ್ ಸಮಾವೇಶವು ಅತ್ಯಂತ ಅಪಾಯಕಾರಿ ತ್ಯಾಜ್ಯಗಳನ್ನು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಾಗಿಸುವುದನ್ನು ಮತ್ತು ಅವುಗಳ ವಿಲೇವಾರಿಯನ್ನು ನಿಯಂತ್ರಿಸುವ ಒಂದು ಅಂತರರಾಷ್ಟ್ರೀಯ ಜಾಗತಿಕ ಒಪ್ಪಂದವಾಗಿದೆ. ಇಂತಹ ತ್ಯಾಜ್ಯಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಸುರಕ್ಷಿತವಾಗಿ ನಿರ್ವಹಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
    • ಈ ಒಪ್ಪಂದವನ್ನು 1989ರಲ್ಲಿ ಅಂಗೀಕರಿಸಲಾಯಿತು ಮತ್ತು 1992ರಲ್ಲಿ ಅಧಿಕೃತವಾಗಿ ಜಾರಿಗೆ ತರಲಾಯಿತು.
    • ಭಾರತವು ಈ ಬಾಸೆಲ್ ಸಮಾವೇಶಕ್ಕೆ ಸಹಿ ಹಾಕಿದ ಪ್ರಮುಖ ಸದಸ್ಯ ರಾಷ್ಟ್ರವಾಗಿದೆ.

    ತೀಸ್ತಾ ನದಿ (Teesta River)

    ಭೂಗೋಳ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ದೀರ್ಘಕಾಲದಿಂದ ಬಾಕಿ ಉಳಿದಿರುವ ‘ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದ’ವನ್ನು ಮುಂದುವರಿಸಲು ಕ್ರಮ ಕೈಗೊಳ್ಳುವಂತೆ ಬಾಂಗ್ಲಾದೇಶವು ಭಾರತಕ್ಕೆ ಮತ್ತೊಮ್ಮೆ ಮನವಿ ಮಾಡಿದೆ.

    ತೀಸ್ತಾ ನದಿಯ ಬಗ್ಗೆ:

    • ತೀಸ್ತಾ ನದಿಯು ಬ್ರಹ್ಮಪುತ್ರ ನದಿಯ ಉಪನದಿಯಾಗಿದೆ. 
    • ಇದು ಉತ್ತರ ಸಿಕ್ಕಿಂನ ಹಿಮಾಲಯದ ‘ತ್ಸೋ ಲಾಮೋ’ (Tso Lhamo) ಸರೋವರದಲ್ಲಿ ಉಗಮಿಸುತ್ತದೆ.
    • ಇದು ಬಾಂಗ್ಲಾದೇಶವನ್ನು ಪ್ರವೇಶಿಸುವ ಮುನ್ನ ಸಿಕ್ಕಿಂನಲ್ಲಿ ಸುಮಾರು 150 ಕಿ.ಮೀ. ಮತ್ತು ಪಶ್ಚಿಮ ಬಂಗಾಳದಲ್ಲಿ 123 ಕಿ.ಮೀ.ಗಳಷ್ಟು ದೂರ ಹರಿಯುತ್ತದೆ.
    • ನಂತರ ಬಾಂಗ್ಲಾದೇಶದಲ್ಲಿ 140 ಕಿ.ಮೀ. ಹರಿದು ಅಂತಿಮವಾಗಿ ಬಂಗಾಳಕೊಲ್ಲಿಯನ್ನು ಸೇರುತ್ತದೆ.

    ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದ:

    • ಹಿನ್ನೆಲೆ: ತೀಸ್ತಾ ನದಿ ನೀರನ್ನು ಹಂಚಿಕೊಳ್ಳುವ ಕುರಿತು ಭಾರತ ಮತ್ತು ಬಾಂಗ್ಲಾದೇಶಗಳು 2011 ರಲ್ಲಿ ತಾತ್ವಿಕ ಒಪ್ಪಂದಕ್ಕೆ ಬಂದಿದ್ದವು. ಆದರೆ, ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ನಡುವೆ ಒಮ್ಮತ ಮೂಡದ ಕಾರಣ ಇದು ಅಂತಿಮ ರೂಪ ಪಡೆಯಲಿಲ್ಲ.
    • ಪ್ರಸ್ತುತ ಬೆಳವಣಿಗೆ: ಪ್ರಸ್ತುತ ಬದಲಾಗಿರುವ ರಾಜಕೀಯ ಸನ್ನಿವೇಶದಲ್ಲಿ, 2011ರ ಈ ಒಪ್ಪಂದವನ್ನು ಮರುಪರಿಶೀಲಿಸಬಹುದು ಎಂಬ ಭರವಸೆಯನ್ನು ಬಾಂಗ್ಲಾದೇಶವು ಇದೀಗ ವ್ಯಕ್ತಪಡಿಸಿದೆ.
  • ರಾಜ್ಯ ಹಣಕಾಸು ಆಯೋಗ (SFC)

    ರಾಜ್ಯ ಹಣಕಾಸು ಆಯೋಗ (SFC)

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಗ್ರಾಮ ಪಂಚಾಯತ ವ್ಯಾಪ್ತಿಯ ವಿದ್ಯುತ್ ಪಾವತಿ ವ್ಯವಸ್ಥೆ ಮತ್ತು ಪ್ರಕ್ರಿಯೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ಹಣಕಾಸು ಆಯೋಗವು (SFC) ಶಿಫಾರಸು ಮಾಡಿದೆ.

    ರಾಜ್ಯ ಹಣಕಾಸು ಆಯೋಗ (SFC)ದ ಬಗ್ಗೆ:

    • ಇದು ಸ್ಥಳೀಯ ಸರ್ಕಾರಗಳ ಆರ್ಥಿಕ ಸುಸ್ಥಿರತೆ ಮತ್ತು ಸುಧಾರಣೆಯನ್ನು ಖಚಿತಪಡಿಸಿಕೊಳ್ಳಲು 73 ನೇ ಮತ್ತು 74 ನೇ ಸಾಂವಿಧಾನಿಕ ತಿದ್ದುಪಡಿಗಳ ಅಡಿಯಲ್ಲಿ ರಚಿಸಲಾದ ಒಂದು ಪ್ರಮುಖ ಸಾಂವಿಧಾನಿಕ ಸಂಸ್ಥೆಯಾಗಿದೆ.
    • ಸಾಂವಿಧಾನಿಕ ಆಧಾರ:
    1. ವಿಧಿ 243-I: ಪಂಚಾಯತಗಳ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಲು ಪ್ರತಿ 5 ವರ್ಷಗಳಿಗೊಮ್ಮೆ ರಾಜ್ಯಪಾಲರು ರಾಜ್ಯ ಹಣಕಾಸು ಆಯೋಗವನ್ನು ನೇಮಕ ಮಾಡುತ್ತಾರೆ.
    2. ವಿಧಿ 243-Y: ಇದೇ ಸಾಂವಿಧಾನಿಕ ನಿಯಮವನ್ನು ನಗರ ಸ್ಥಳೀಯ ಸಂಸ್ಥೆಗಳಿಗೂ ಅಥವಾ ಪುರಸಭೆಗಳಿಗೂ (ನಗರ ಸಭೆಗಳಿಗೂ) ಅನ್ವಯಿಸಲಾಗುತ್ತದೆ.
    • ಪ್ರಮುಖ ಕಾರ್ಯಗಳು (ರಾಜ್ಯಪಾಲರಿಗೆ ಸಲ್ಲಿಸುವ ಶಿಫಾರಸುಗಳು):

    1. ತೆರಿಗೆ ಹಂಚಿಕೆ: ರಾಜ್ಯ ಸರ್ಕಾರದ ಒಟ್ಟು ತೆರಿಗೆ ಆದಾಯವನ್ನು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ನಡುವೆ ನ್ಯಾಯೋಚಿತವಾಗಿ ವಿಭಜಿಸುವ ಕಾರ್ಯವನ್ನು ಇದು ಮಾಡುತ್ತದೆ.
    2. ತೆರಿಗೆ ವಿತರಣೆ: ಸ್ಥಳೀಯ ಸಂಸ್ಥೆಗಳು ಸ್ವತಂತ್ರವಾಗಿ ಯಾವ ತೆರಿಗೆಗಳು, ಸುಂಕಗಳು ಮತ್ತು ಶುಲ್ಕಗಳನ್ನು ಸಂಗ್ರಹಿಸಬಹುದು ಎಂಬುದನ್ನು ಇದು ನಿರ್ಧರಿಸುತ್ತದೆ.
    3. ಸಹಾಯಾನುದಾನ (Grants-in-Aid): ರಾಜ್ಯದ ಸಂಚಿತ ನಿಧಿಯಿಂದ ಸ್ಥಳೀಯ ಸಂಸ್ಥೆಗಳಿಗೆ ಅಗತ್ಯವಿರುವ ಹಣಕಾಸು ನೆರವು ಅಥವಾ ಸಹಾಯಾನುದಾನವನ್ನು ಹಂಚಿಕೆ ಮಾಡುವಂತೆ ಇದು ಶಿಫಾರಸು ಮಾಡುತ್ತದೆ.
  • ಯುಪಿಐ (UPI)ಗೆ 10 ವರ್ಷ | ‘ಮಿಷನ್ ದೃಷ್ಟಿ’ (ವಿಶ್ವದ ಮೊದಲ OptoSAR ಉಪಗ್ರಹ) : ಗ್ಯಾಲಕ್ಸ್‌ ಐ | ನೌಕಾ ಹಡಗು-ನಿರೋಧಕ ಕ್ಷಿಪಣಿ – ಅಲ್ಪ ಶ್ರೇಣಿ (NASM-SR)

    ಯುಪಿಐ (UPI)ಗೆ 10 ವರ್ಷ

    ಅರ್ಥವ್ಯವಸ್ಥೆ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಏಪ್ರಿಲ್ 2016ರಲ್ಲಿ ಪ್ರಾರಂಭವಾದ ‘ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್’ (UPI), ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಮೈಲಿಗಲ್ಲು ಸ್ಥಾಪಿಸಿದೆ.

    ಏಕೀಕೃತ ಪಾವತಿ ವ್ಯವಸ್ಥೆ (UPI – Unified Payments Interface):

    • ಪ್ರಾರಂಭಿಸಿದವರು: 2016 ರಲ್ಲಿ ‘ಭಾರತೀಯ ರಾಷ್ಟ್ರೀಯ ಪಾವತಿ ನಿಗಮ’ವು (NPCI) ಯುಪಿಐ ಅನ್ನು ವಿನ್ಯಾಸಗೊಳಿಸಿ, ಬಿಡುಗಡೆ ಮಾಡಿತು.
    • ಉದ್ದೇಶ: ಇದು ಯಾವುದೇ ಪಾಲ್ಗೊಳ್ಳುವ ಬ್ಯಾಂಕಿನ ಒಂದೇ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅನೇಕ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವ ವ್ಯವಸ್ಥೆಯಾಗಿದೆ. ಇದು ಹಲವಾರು ಬ್ಯಾಂಕಿಂಗ್ ಸೌಲಭ್ಯಗಳು, ತಡೆರಹಿತ ಹಣ ರವಾನೆ ಮತ್ತು ವ್ಯಾಪಾರಿ ಪಾವತಿಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುತ್ತದೆ.
    • ಅಂತರರಾಷ್ಟ್ರೀಯ ವಿಸ್ತರಣೆ: ಕಾರ್ಯನಿರ್ವಹಣೆಯಲ್ಲಿರುವ ಅಥವಾ ಯೋಜಿತ ಪರಸ್ಪರ ಕಾರ್ಯಸಾಧ್ಯತೆ ಹೊಂದಿರುವ ದೇಶಗಳು ಯಾವವೆಂದರೆ, ಸಿಂಗಾಪುರ (PayNow), ಯು ಎ ಇ, ಫ್ರಾನ್ಸ್, ನೇಪಾಳ, ಭೂತಾನ್, ಮಾರಿಷಸ್, ಶ್ರೀಲಂಕಾ, ಇಂಡೋನೇಷ್ಯಾ ರಾಷ್ಟ್ರಗಳು UPI ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.

    ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI):

    • ಇದು ಭಾರತದಲ್ಲಿ ಚಿಲ್ಲರೆ ಪಾವತಿಗಳ ಕಾರ್ಯಾನಿರ್ವಹಣೆಗಾಗಿ ಇರುವ ಒಂದು ‘ಪ್ರಮುಖ ಸಂಸ್ಥೆ’ (Umbrella body)ಯಾಗಿದೆ.
    • ಸ್ಥಾಪಿಸಿದವರು: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಭಾರತೀಯ ಬ್ಯಾಂಕುಗಳ ಸಂಘ (Indian Bank’s Association – IBA) ಜಂಟಿಯಾಗಿ ಇದನ್ನು ಸ್ಥಾಪಿಸಿವೆ.
    • ಯಾವುದರ ಅಡಿಯಲ್ಲಿ ಸ್ಥಾಪಿಸಲಾಗಿದೆ?: ಇದನ್ನು ‘ಪಾವತಿ ಮತ್ತು ನಿವಾರಣಾ ವ್ಯವಸ್ಥೆಗಳ ಕಾಯ್ದೆ’, 2007 ರ (Payment and Settlement Systems Act) ಅಡಿಯಲ್ಲಿ ಸ್ಥಾಪಿಸಲಾಗಿದೆ.
    • NPCI ನ ಪ್ರಮುಖ ಉತ್ಪನ್ನಗಳು:
      • ರುಪೇ (RuPay)
      • ರಾಷ್ಟ್ರೀಯ ಸಾಮಾನ್ಯ/ಏಕರೂಪ ಸಂಚಾರ ಕಾರ್ಡ್ (National Common Mobility Card)
      • ಭಾರತ್ ಇಂಟರ್ಫೇಸ್ ಫಾರ್ ಮನಿ (BHIM)
      • ಏಕೀಕೃತ ಪಾವತಿ ವ್ಯವಸ್ಥೆ (UPI)
      • ಭಾರತ್ ಬಿಲ್ ಪಾವತಿ ವ್ಯವಸ್ಥೆ (Bharat Bill Payment System

    ‘ಮಿಷನ್ ದೃಷ್ಟಿ’ (ವಿಶ್ವದ ಮೊದಲ OptoSAR ಉಪಗ್ರಹ) : ಗ್ಯಾಲಕ್ಸ್‌ ಐ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತೀಯ ಬಾಹ್ಯಾಕಾಶ ನವೋದ್ಯಮ ‘ಗ್ಯಾಲಕ್ಸ್‌ಐ’ (GalaxEye) ವಿಶ್ವದ ಮೊಟ್ಟಮೊದಲ ಒಪ್ಟೋಸಾರ್ (OptoSAR) ಉಪಗ್ರಹವಾದ ‘ಮಿಷನ್ ದೃಷ್ಟಿ’ಯನ್ನು ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್ 9’ (Falcon 9) ಉಡಾವಣಾ ವಾಹನದ ಮೂಲಕ ಉಡಾವಣೆ ಮಾಡಿದೆ.

    ಮಿಷನ್ ದೃಷ್ಟಿ (Mission Drishti)ಯ ಕುರಿತು:

    • ಇದು ವಿಶ್ವದ ಮೊಟ್ಟಮೊದಲ ಒಪ್ಟೋಸಾರ್ (OptoSAR) ಉಪಗ್ರಹವಾಗಿದೆ.
    • ಇದನ್ನು ಮೇ 3 2026 ರಂದು ಭಾರತೀಯ ಬಾಹ್ಯಾಕಾಶ-ತಂತ್ರಜ್ಞಾನ ನವೋದ್ಯಮವಾದ ಗ್ಯಾಲಕ್ಸ್‌ಐ (ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿಗಳಿಂದ ಸ್ಥಾಪಿತವಾದ ಸಂಸ್ಥೆ) ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ಉಡಾವಣಾ ವಾಹನದ ಮೂಲಕ ಉಡಾವಣೆ ಮಾಡಿದೆ.
    • 190 ಕೆ.ಜಿ. ತೂಕದ ಈ ‘ಭೂ ವೀಕ್ಷಣಾ ಉಪಗ್ರಹ’ವು (Earth Observation), ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಅತ್ಯುನ್ನತ ಸ್ಪಷ್ಟತೆಯ ಚಿತ್ರಗಳನ್ನು (High-resolution imagery) ಸೆರೆಹಿಡಿಯಲು ‘ಸಿಂಥೆಟಿಕ್ ಅಪರ್ಚರ್ ರೇಡಾರ್’ (SAR) ಹಾಗೂ ದೃಗ್ ಸಂವೇದಕಗಳನ್ನು (Optical sensors) ಒಗ್ಗೂಡಿಸಿದೆ.

    ಪ್ರಮುಖ ವೈಶಿಷ್ಟ್ಯಗಳು:

    • ತಂತ್ರಜ್ಞಾನ: ಇದು ‘ಸಿಂಥೆಟಿಕ್ ಅಪರ್ಚರ್ ರೇಡಾರ್’ (SAR) ಮತ್ತು ಮಲ್ಟಿ-ಸ್ಪೆಕ್ಟ್ರಲ್ ಆಪ್ಟಿಕಲ್ ಸಂವೇದಕಗಳನ್ನು (OptoSAR) ಒಂದೇ ವೇದಿಕೆಯಲ್ಲಿ ಸಂಯೋಜಿಸುತ್ತದೆ.
    • ಅನುಕೂಲ: ಸಾಂಪ್ರದಾಯಿಕ ಉಪಗ್ರಹಗಳಿಗಿಂತ ಭಿನ್ನವಾಗಿ, ಇದು ಮೋಡ ಕವಿದ ವಾತಾವರಣದಲ್ಲಿಯೂ ಮತ್ತು ರಾತ್ರಿಯ ವೇಳೆಯಲ್ಲಿಯೂ ಹೈ-ರೆಸಲ್ಯೂಶನ್ ಚಿತ್ರಣವನ್ನು ಒದಗಿಸುತ್ತದೆ.
    • ಅನ್ವಯಗಳು: ಗಡಿ ಕಣ್ಗಾವಲು, ವಿಪತ್ತು ನಿರ್ವಹಣೆ, ಕೃಷಿ, ಮೂಲಸೌಕರ್ಯಗಳ ಮೇಲ್ವಿಚಾರಣೆ ಮತ್ತು ರಕ್ಷಣಾ ವಲಯದಲ್ಲಿ ಇದನ್ನು ಬಳಸಲಾಗುತ್ತದೆ.
    • ಮಹತ್ವ: ಇದು ಭಾರತದ ಅತಿ ದೊಡ್ಡ ಖಾಸಗಿ-ನಿರ್ಮಿತ ಉಪಗ್ರಹವಾಗಿದ್ದು, ದೇಶೀಯ ಖಾಸಗಿ ಬಾಹ್ಯಾಕಾಶ ಸಾಮರ್ಥ್ಯವನ್ನು ಉತ್ತೇಜಿಸಲಿದೆ.
    • ಯೋಜನೆಯ ಗುರಿ: 2029 ರ ವೇಳೆಗೆ 8-12 ಉಪಗ್ರಹಗಳ ಸಮೂಹವನ್ನು ನಿರ್ಮಿಸುವ ಯೋಜನೆಯ ಭಾಗವಾಗಿ ಇದನ್ನು ಉಡಾವಣೆ ಮಾಡಲಾಗಿದೆ.

    ನೌಕಾ ಹಡಗು-ನಿರೋಧಕ ಕ್ಷಿಪಣಿ – ಅಲ್ಪ ಶ್ರೇಣಿ (NASM-SR)

    ರಕ್ಷಣೆ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಭಾರತವು ಒಡಿಶಾ ಕರಾವಳಿಯ ಬಂಗಾಳಕೊಲ್ಲಿಯಲ್ಲಿ, ‘ಸೀ ಕಿಂಗ್’ (Sea King) ಹೆಲಿಕಾಪ್ಟರ್ ಮೂಲಕ ‘ಅಲ್ಪ-ಶ್ರೇಣಿಯ ನೌಕಾ ಹಡಗು-ನಿರೋಧಕ ಕ್ಷಿಪಣಿ’ಯ (NASM-SR) ಚೊಚ್ಚಲ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದೆ.

    ನೌಕಾ ಹಡಗು-ನಿರೋಧಕ ಕ್ಷಿಪಣಿ – ಅಲ್ಪ ಶ್ರೇಣಿ (Naval Anti-Ship Missile – Short Range):

    • ಇದು ಹೆಲಿಕಾಪ್ಟರ್-ಆಧಾರಿತ ಕಡಲ ದಾಳಿ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ, ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ವಾಯು-ಉಡಾವಣಾ ಹಡಗು-ನಿರೋಧಕ ಕ್ಷಿಪಣಿಯಾಗಿದೆ.
    • ಇದು ಭಾರತದ ಮೊಟ್ಟಮೊದಲ ದೇಶೀಯ ಹೆಲಿಕಾಪ್ಟರ್-ಉಡಾವಣಾ ಹಡಗು-ನಿರೋಧಕ ಕ್ಷಿಪಣಿಯಾಗಿದೆ.
    • ಬ್ರಿಟಿಷ್ ಮೂಲದ ‘ಸೀ ಈಗಲ್’ (Sea Eagle) ಕ್ಷಿಪಣಿಗಳ ಬದಲಿಗೆ ಇದನ್ನು ಬಳಸಲು ಅಭಿವೃದ್ಧಿಪಡಿಸಲಾಗಿದೆ.
    • ಉದ್ದೇಶ:- ಕಡಲ ಗುರಿಗಳ ವಿರುದ್ಧ ಭಾರತೀಯ ನೌಕಾಪಡೆಗೆ ಅತ್ಯಂತ ನಿಖರವಾದ ಹಾಗೂ ಸಂಪೂರ್ಣ ದೇಶೀಯ ದಾಳಿ ಸಾಮರ್ಥ್ಯವನ್ನು ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಮೂಲಕ ಇದು ರಕ್ಷಣಾ ವಲಯದಲ್ಲಿ ಭಾರತದ ಸ್ವಾವಲಂಬನೆಯನ್ನು ಮತ್ತಷ್ಟು ಬಲಪಡಿಸಲಿದೆ.
    • ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಅಡಿಯಲ್ಲಿ ಬರುವ ‘ರಿಸರ್ಚ್ ಸೆಂಟರ್ ಇಮಾರತ್’ (RCI), ಇತರೆ ಪ್ರಯೋಗಾಲಯಗಳ ಸಹಯೋಗದೊಂದಿಗೆ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.