ಲೇಖಕ: instakas

  • ‘ಯುವ ಸಂಗಮ’ | ಖರೀದಿ ವ್ಯವಸ್ಥಾಪಕರ ಸೂಚ್ಯಂಕ (PMI) – S&P ಸಂಸ್ಥೆ | ಕಲ್ಲಿದ್ದಲು ಅನಿಲೀಕರಣ ಪ್ರೋತ್ಸಾಹಕ ಯೋಜನೆ | ಆದಿತ್ಯ-ಎಲ್1 ಮಿಷನ್ | “INS ತಾರಗಿರಿ” : ನೀಲಗಿರಿ-ವರ್ಗದ ರಹಸ್ಯಗಾಮಿ ಮಾರ್ಗದರ್ಶಿತ ಕ್ಷಿಪಣಿ ಯುದ್ಧನೌಕೆ | INS ಅರಿಧಮನ್ : ಅರಿಹಂತ್-ವರ್ಗದ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ

    ‘ಯುವ ಸಂಗಮ’

    ಸರ್ಕಾರಿ ಉಪಕ್ರಮಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಯುವ ಸಂಗಮ ಹಂತ-VI (Phase-VI) ರ ಅಡಿಯಲ್ಲಿ ಸಂಸ್ಥೆಗಳ-ನೇತೃತ್ವದ ಅಧ್ಯಯನ ಪ್ರವಾಸಗಳಿಗಾಗಿ ನೋಂದಣಿ ಪ್ರಕ್ರಿಯೆಯು ನಡೆದಿದ್ದು, ಇದು ಒಟ್ಟು 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.

    ‘ಯುವ ಸಂಗಮ’ ಉಪಕ್ರಮದ ಬಗ್ಗೆ:

    • ಇದು ಭಾರತದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಯುವಜನರ ನಡುವಿನ ಸಂಪರ್ಕವನ್ನು ಬಲಪಡಿಸಲು ಭಾರತ ಸರ್ಕಾರವು ಆರಂಭಿಸಿರುವ ಒಂದು ಪ್ರಮುಖ ಉಪಕ್ರಮವಾಗಿದೆ.
    • ಇದನ್ನು ಶಿಕ್ಷಣ ಸಚಿವಾಲಯವು ರೂಪಿಸಿದೆ ಮತ್ತು ‘ಏಕ ಭಾರತ ಶ್ರೇಷ್ಠ ಭಾರತ’ (EBSB) ಎಂಬ ಅಭಿಯಾನದ ಅಡಿಯಲ್ಲಿ ಇದನ್ನು ಪ್ರಾರಂಭಿಸಲಾಗಿದೆ.

    ಏಕ ಭಾರತ ಶ್ರೇಷ್ಠ ಭಾರತ (EBSB) ಅಭಿಯಾನದ ಬಗ್ಗೆ:

      • ಇದು ದೇಶದ ‘ವೈವಿಧ್ಯತೆಯಲ್ಲಿ ಏಕತೆಯನ್ನು’ ಆಚರಿಸುವ ಒಂದು ಐತಿಹಾಸಿಕ ಉಪಕ್ರಮವಾಗಿದೆ.
      • ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 140ನೇ ಜನ್ಮದಿನದ ನೆನಪಿಗಾಗಿ ಅಕ್ಟೋಬರ್ 31, 2015 ರಂದು ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಘೋಷಿಸಿದರು.
    • ಅನುಷ್ಠಾನ ಸಚಿವಾಲಯ:- ಶಿಕ್ಷಣ ಸಚಿವಾಲಯ

    ಏಕ ಭಾರತ ಶ್ರೇಷ್ಠ ಭಾರತದ ಅಡಿಯಲ್ಲಿನ ಪ್ರಮುಖ ಉಪಕ್ರಮಗಳು:

    • ಯುವ ಸಂಗಮ:- ಇದು ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಆವರಣದಿಂದ ಹೊರಗಿರುವ ಯುವಜನರಿಗೆ, ತಮ್ಮ ಸಂಯೋಜಿತ ಅಥವಾ ಪಾಲುದಾರ ರಾಜ್ಯಗಳಿಗೆ ಪ್ರಯಾಣಿಸಲು ಅನುವು ಮಾಡಿಕೊಡುವ ಯುವ ವಿನಿಮಯ ಕಾರ್ಯಕ್ರಮವಾಗಿದೆ. ಇದು ಪ್ರವಾಸೋದ್ಯಮ, ಸಂಪ್ರದಾಯ, ಪ್ರಗತಿ, ಪರಸ್ಪರ ಸಂಪರ್ಕ, ಮತ್ತು ದೈವಶಕ್ತಿ ಎಂಬ ಐದು ಸ್ತಂಭಗಳ ಮೇಲೆ ಕೇಂದ್ರೀಕರಿಸಿದೆ.
    • ಭಾಷಾ ಸಂಗಮ:- ಭಾಷಾ ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶದಿಂದ, ವಿವಿಧ ಭಾರತೀಯ ಭಾಷೆಗಳಲ್ಲಿ ಮೂಲಭೂತ ವಾಕ್ಯಗಳನ್ನು ಕಲಿಯಲು ಜನರನ್ನು ಪ್ರೋತ್ಸಾಹಿಸುವ ಉಪಕ್ರಮವಾಗಿದೆ.
    • ಶೈಕ್ಷಣಿಕ ಏಕೀಕರಣ:- ದೇಶಾದ್ಯಂತ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳು ಇಬಿಎಸ್‌ಬಿ (EBSB) ಕ್ಲಬ್‌ಗಳು, ವಿದ್ಯಾರ್ಥಿ ವಿನಿಮಯ ಪ್ರವಾಸಗಳು ಮತ್ತು ಕಲಾ ಉತ್ಸವದಂತಹ ಸಾಂಸ್ಕೃತಿಕ ಉತ್ಸವಗಳನ್ನು ನಡೆಸುತ್ತವೆ.
    • ವಿಶೇಷ ಕಾರ್ಯಕ್ರಮಗಳು: ರಾಜ್ಯೋತ್ಸವ ದಿನಗಳ ಆಚರಣೆ ಮತ್ತು ಭಾರತ್ ಪರ್ವ್ನಂತಹ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ವಿಷಯಗಳ ಏಕೀಕರಣವನ್ನು ಇದು ಒಳಗೊಂಡಿದೆ.

    ಖರೀದಿ ವ್ಯವಸ್ಥಾಪಕರ ಸೂಚ್ಯಂಕ (PMI) – S&P ಸಂಸ್ಥೆ

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಪರಿಣಾಮವಾಗಿ ಭಾರತದ ಉತ್ಪಾದನಾ PMI (Manufacturing PMI) ಫೆಬ್ರವರಿ 2026 ರಲ್ಲಿ 56.9 ಇದ್ದದ್ದು, ಮಾರ್ಚ್ 2026 ರಲ್ಲಿ 53.9 ಕ್ಕೆ ಕುಸಿದಿದೆ.

    ಖರೀದಿ ವ್ಯವಸ್ಥಾಪಕರ ಸೂಚ್ಯಂಕ (PMI) v/s ಕೈಗಾರಿಕಾ ಉತ್ಪಾದನಾ ಸೂಚ್ಯಂಕ (IIP):

    ವೈಶಿಷ್ಟ್ಯ

    ಖರೀದಿ ವ್ಯವಸ್ಥಾಪಕರ ಸೂಚ್ಯಂಕ (PMI-Purchasing Manager’s Index)

    ಕೈಗಾರಿಕಾ ಉತ್ಪಾದನಾ ಸೂಚ್ಯಂಕ (IIP)

    ಮೂಲ

    S&P ಖಾಸಗಿ ಸಂಸ್ಥೆ

    ರಾಷ್ಟೀಯ ಸ್ಯಾಂಖಿಕ ಕಛೇರಿ (NSO, MoSPI), ಭಾರತ ಸರ್ಕಾರ

    ಆಧಾರ

    ಗ್ರಹಿಕೆ-ಆಧಾರಿತ ಸಮೀಕ್ಷೆ

    ನೈಜ ಭೌತಿಕ ಉತ್ಪಾದನಾ ದತ್ತಾಂಶ

    ವ್ಯಾಪ್ತಿ

    ಉತ್ಪಾದನೆ ಮತ್ತು ಸೇವಾ ವಲಯಗಳು

    ವಿಶಾಲ ಕೈಗಾರಿಕಾ ವಲಯ (ಗಣಿಗಾರಿಕೆ, ಉತ್ಪಾದನೆ, ವಿದ್ಯುತ್)

    ಸಮಯ

    ಮಾಸಿಕ, (ಪ್ರತಿ ತಿಂಗಳ ಆರಂಭದಲ್ಲಿ)

    ಮಾಸಿಕ, (6-ವಾರಗಳ ವಿಳಂಬದೊಂದಿಗೆ)

    ಕಲ್ಲಿದ್ದಲು ಅನಿಲೀಕರಣ ಪ್ರೋತ್ಸಾಹಕ ಯೋಜನೆ

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ದೇಶೀಯ ಕಲ್ಲಿದ್ದಲು ಬಳಕೆಯ ಮೂಲಕ ಅನಿಲ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸಚಿವರು ಭಾರತದ ಮಾರ್ಗಸೂಚಿಯನ್ನು ಅನಾವರಣಗೊಳಿಸಿದ್ದಾರೆ. ಇದರಲ್ಲಿ ಕಲ್ಲಿದ್ದಲು ಅನಿಲೀಕರಣ ಪ್ರೋತ್ಸಾಹಕ ಯೋಜನೆಯನ್ನು ಕೇಂದ್ರ ಸಾಧನವಾಗಿ ಬಳಸಿಕೊಳ್ಳಲಾಗುತ್ತಿದೆ.

    ಕಲ್ಲಿದ್ದಲು ಅನಿಲೀಕರಣ (Coal Gasification)ದ ಬಗ್ಗೆ:

    • ಕಲ್ಲಿದ್ದಲು ಅನಿಲೀಕರಣವು ಕಲ್ಲಿದ್ದಲನ್ನು ಸಂಶ್ಲೇಷಿತ ಅನಿಲ (ಸಿನ್‌ಗ್ಯಾಸ್)ವಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. 
    • ಸಿನ್‌ಗ್ಯಾಸ್ ಎಂದರೆ ಪ್ರಾಥಮಿಕವಾಗಿ ಜಲಜನಕ (H₂) ಮತ್ತು ಇಂಗಾಲದ ಮೊನಾಕ್ಸೈಡ್ (CO) ಅನಿಲಗಳ ಮಿಶ್ರಣವಾಗಿದೆ.
    • ಅತಿ ಹೆಚ್ಚಿನ ತಾಪಮಾನದಲ್ಲಿ ಕಲ್ಲಿದ್ದಲನ್ನು ಹಬೆ ಮತ್ತು ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸುವಂತೆ ಮಾಡುವ ಮೂಲಕ ಸಂಶ್ಲೇಷಿತ ಅನಿಲವನ್ನು ಉತ್ಪಾದಿಸಲಾಗುತ್ತದೆ.
    • ಸಿನ್‌ಗ್ಯಾಸ್ ಅನ್ನು ಈ ಕೆಳಗಿನವುಗಳ ಉತ್ಪಾದನೆಗೆ ಕಚ್ಚಾವಸ್ತುವಾಗಿ ಬಳಸಲಾಗುತ್ತದೆ:
      • ಅಮೋನಿಯಾ ರಸಗೊಬ್ಬರ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.
      • ಮೆಥನಾಲ್ ಇಂಧನ ಮತ್ತು ರಾಸಾಯನಿಕ ಕಚ್ಚಾವಸ್ತುವಾಗಿ ಬಳಸಲಾಗುತ್ತದೆ.
      • ಹೈಡ್ರೋಜನ್ ಶುದ್ಧ ಇಂಧನ ವಾಹಕವಾಗಿ ಬಳಸಲಾಗುತ್ತದೆ.
      • ಸಂಶ್ಲೇಷಿತ ನೈಸರ್ಗಿಕ ಅನಿಲ ಆಮದು ಮಾಡಿಕೊಳ್ಳುವ ಎಲ್‌ಎನ್‌ಜಿ (LNG) ಗೆ ಪರ್ಯಾಯವಾಗಿ ಬಳಸಲಾಗುತ್ತದೆ.

    ಆದಿತ್ಯ-ಎಲ್1 ಮಿಷನ್

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಆದಿತ್ಯ-ಎಲ್1 (Aditya-L1) ಮಿಷನ್‌ ಸಂಗ್ರಹಿಸಿರುವ ದತ್ತಾಂಶವನ್ನು ವಿಶ್ಲೇಷಿಸಲು, ಭಾರತೀಯ ಸೌರ ಭೌತಶಾಸ್ತ್ರ ಸಮುದಾಯದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.

    ‘ಆದಿತ್ಯ-ಎಲ್1 ಮಿಷನ್’ನ ಬಗ್ಗೆ:

    • ಸೂರ್ಯನನ್ನು ಅಧ್ಯಯನ ಮಾಡಲು ಭಾರತದ ಮೊದಲ ಬಾಹ್ಯಾಕಾಶ-ಆಧಾರಿತ ವೀಕ್ಷಣಾಲಯವಾಗಿದೆ:- ಇದನ್ನು PSLV-C57 ಉಡಾವಣಾ ವಾಹನದ ಮೂಲಕ ಉಡಾವಣೆ ಮಾಡಲಾಗುವುದು.
    • ಗಮನಿಸಿ:- ಈ ಸೌರ ಮಿಷನ್‌ನಲ್ಲಿ ನೌಕೆಯು ವಾಸ್ತವವಾಗಿ ಸೂರ್ಯನ ಬಳಿಗೆ ಹೋಗುವುದಿಲ್ಲ; ಬದಲಾಗಿ ಸೂರ್ಯಗ್ರಹಣದ ಸಮಯದಲ್ಲೂ ಸೂರ್ಯನನ್ನು ನಿರಂತರವಾಗಿ ವೀಕ್ಷಿಸಲು ಸಾಧ್ಯವಾಗುವಂತಹ ಬಿಂದುವಿನಲ್ಲಿ ಇದು ಬಾಹ್ಯಾಕಾಶ ವೀಕ್ಷಣಾಲಯವಾಗಿ ಕಾರ್ಯನಿರ್ವಹಿಸುತ್ತದೆ.
    • ಲಾಗ್ರೇಂಜ್ ಪಾಯಿಂಟ್ 1 (L1) ಸುತ್ತಲಿನ ಹ್ಯಾಲೊ ಕಕ್ಷೆಯಲ್ಲಿ:- ಭೂಮಿ ಮತ್ತು ಸೂರ್ಯನ ವ್ಯವಸ್ಥೆಯಲ್ಲಿ, ಭೂಮಿಯಿಂದ ಸುಮಾರು 1.5 ದಶಲಕ್ಷ ಕಿ.ಮೀ ದೂರದಲ್ಲಿರುವ L1 ಬಿಂದುವಿನ ಸುತ್ತಲಿನ ಹ್ಯಾಲೊ ಕಕ್ಷೆಯಲ್ಲಿ ಬಾಹ್ಯಾಕಾಶ ನೌಕೆಯನ್ನು ಇರಿಸಲು ಯೋಜಿಸಲಾಗಿದೆ.

    ಈ ಮಿಷನ್‌ನ ಪ್ರಮುಖ ಉದ್ದೇಶಗಳು:

    • ಈ ಮಿಷನ್ ಸೂರ್ಯನ ಮೇಲ್ಭಾಗದ ವಾತಾವರಣವಾದ ವರ್ಣಗೋಳ ಮತ್ತು ಕೊರೊನದ ಚಲನಶೀಲತೆಯನ್ನು ಅಧ್ಯಯನ ಮಾಡುವುದರ ಮೇಲೆ ಕೇಂದ್ರೀಕರಿಸುತ್ತದೆ.
    • ಬಾಹ್ಯಾಕಾಶ ಹವಾಮಾನವನ್ನು ನಿಯಂತ್ರಿಸುವ ಅಂಶಗಳು, ಸೌರ ಮಾರುತದ ಮೂಲ, ಸಂಯೋಜನೆ ಮತ್ತು ಚಲನಶೀಲತೆಯನ್ನು ಸಹ ಇದು ಗುರುತಿಸುತ್ತದೆ.

    ಸೂರ್ಯನನ್ನು ಅಧ್ಯಯನ ಮಾಡುವ ಇತರ ಮಿಷನ್‌ಗಳು:

    • ನಾಸಾದ (NASA) “ಪಾರ್ಕರ್ ಸೋಲಾರ್ ಪ್ರೋಬ್”:- 2018 ರಲ್ಲಿ ಉಡಾವಣೆಗೊಂಡು ಈಗಾಗಲೇ ಸೂರ್ಯನಿಗೆ ಬಹಳ ಹತ್ತಿರ ಹೋಗಿದೆ ಮತ್ತು ಸೂರ್ಯನ ಕೊರೋನಾ ಭಾಗವನ್ನು “ಸ್ಪರ್ಶಿಸಿದ” ಮೊದಲ ಬಾಹ್ಯಾಕಾಶ ನೌಕೆಯಾಗಿದೆ. ಆದರೆ ಇದು ಸೂರ್ಯನಿಂದ ಬೇರೆಡೆಗೆ ಮುಖಮಾಡಿ ತನ್ನ ಅಧ್ಯಯನವನ್ನು ನಡೆಸುತ್ತದೆ.
    • ಐರೋಪ್ಯಾ ಬಾಹ್ಯಾಕಾಶ ಸಂಸ್ಥೆ (ESA) ಮತ್ತು ನಾಸಾದ (NASA) “ ಸೋಲಾರ್ ಓರ್ಬಿಟರ್” (2020):- ಸೂರ್ಯನ ಧ್ರುವಗಳ (Poles) ಉನ್ನತ ಸ್ಪಷ್ಟತೆಯ ಚಿತ್ರಗಳನ್ನು ಪಡೆಯುವ ಗುರಿಯಾಗಿದೆ.
    • ನಾಸಾದ (NASA) “ಪಂಚ್” (PUNCH):- ಕೊರೋನಾ ಹೇಗೆ ಸೌರ ಗಾಳಿಯಾಗಿ ರೂಪಾಂತರವಾಗುತ್ತದೆ ಎಂಬುದನ್ನು ಅಧ್ಯಯನ ಮಾಡುವ ನಾಲ್ಕು ಸಣ್ಣ ಉಪಗ್ರಹಗಳ ಸಮೂಹವಾಗಿದೆ.
    • ಚೀನಾದ (CNSA) ASO-S (ಕೌಫು-1):- 2022 ರಲ್ಲಿ ಉಡಾವಣೆಗೊಂಡು, ಸೂರ್ಯನ ಗುರುತ್ವಾಕರ್ಶಣ ಕ್ಷೇತ್ರ, ಸೌರ ಜ್ವಾಲೆಗಳು ಮತ್ತು ಕೊರೋನಲ್ ಮಾಸ್ ಇಜೆಕ್ಷನ್‌ಗಳು (CMEs) ನಡುವಿನ ಸಂಬಂಧವನ್ನು ಅಧ್ಯಯನ ಮಾಡುವ ಗುರಿ.
    • ನಾಸಾ (NASA) ಮತ್ತು ಅಂದಿನ ಪಶ್ಚಿಮ ಜರ್ಮನಿಯ “ಹೀಲಿಯೋಸ್ 2” (Helios 2):- ಈ ಬಾಹ್ಯಾಕಾಶ ಸಂಸ್ಥೆಗಳ ಜಂಟಿ ಉದ್ಯಮವಾದ ಇದು ಸೌರ ಶೋಧಕವನ್ನು, ಸೂರ್ಯನ ಮೇಲ್ಮೈಯ ಸೌರ ಪ್ರಕ್ರಿಯೆಗಳನ್ನು ತನಿಖೆ ಮಾಡಲು 1976 ರಲ್ಲಿ ಉಡಾವಣೆ ಮಾಡಲಾಗಿತ್ತು.
    • ಐರೋಪ್ಯಾ ಬಾಹ್ಯಾಕಾಶ ಸಂಸ್ಥೆ (ESA) ಮತ್ತು ನಾಸಾದ (NASA) “ಸೋಹೋ” (SOHO):- 1995 ರಲ್ಲಿ ಉಡಾವಣೆಗೊಂಡು L1 ಬಿಂದುವಿನಲ್ಲಿ ಇರುವ, ಎರಡು ದಶಕಗಳಿಗೂ ಹೆಚ್ಚು ಕಾಲ ಸೂರ್ಯನ ಮಾಹಿತಿ ನೀಡುತ್ತಿರುವ ಹಳೆಯ ವೀಕ್ಷಣಾಲಯ.

    “INS ತಾರಗಿರಿ” : ನೀಲಗಿರಿ-ವರ್ಗದ ರಹಸ್ಯಗಾಮಿ ಮಾರ್ಗದರ್ಶಿತ ಕ್ಷಿಪಣಿ ಯುದ್ಧನೌಕೆ

    ರಕ್ಷಣೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ನೀಲಗಿರಿ-ವರ್ಗದ, ರಹಸ್ಯಗಾಮಿ (ಸ್ಟೆಲ್ತ್) ಮಾರ್ಗದರ್ಶಿತ ಕ್ಷಿಪಣಿ ಯುದ್ಧನೌಕೆಯಾದ INS ತಾರಗಿರಿ ಯನ್ನು ಭಾರತೀಯ ನೌಕಾಪಡೆಗೆ ನಿಯೋಜಿಸಲಾಗಿದೆ.

    ಐಎನ್‌ಎಸ್ ತಾರಗಿರಿ (INS Taragiri)ಯ ಬಗ್ಗೆ:

    • “ಪ್ರಾಜೆಕ್ಟ್ 17A” ಯೋಜನೆಯಡಿ ನಿರ್ಮಾಣವಾಗುತ್ತಿರುವ ರಹಸ್ಯಗಾಮಿ ಮಾರ್ಗದರ್ಶಿತ ಕ್ಷಿಪಣಿ ಯುದ್ಧನೌಕೆ:-ಯೋಜನೆಯಡಿ ನಿರ್ಮಾಣವಾಗುತ್ತಿರುವ 7 ಬಹು-ಕಾರ್ಯಾಚರಣಾ ಸಾಮರ್ಥ್ಯದ ಯುದ್ಧನೌಕೆಗಳ ಶ್ರೇಣಿಯಲ್ಲಿ 4ನೇ ನೌಕೆಯಾಗಿದೆ.
    • ಇದನ್ನು ಮುಂಬೈನ ಮಡಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ (MDL) ಸಂಸ್ಥೆಯು ನಿರ್ಮಿಸಿದೆ.
    • ಇದಕ್ಕೆ ಉತ್ತರಾಖಂಡದ ಪ್ರಸಿದ್ಧ ‘ತಾರಗಿರಿ’ ಬೆಟ್ಟಗಳ ಹೆಸರನ್ನು ಇಡಲಾಗಿದೆ.
    • ಈ ಯುದ್ಧನೌಕೆಯ ಸುಮಾರು 75% ರಷ್ಟು ಭಾಗವನ್ನು ಸ್ವದೇಶೀಯವಾಗಿ ನಿರ್ಮಿಸಲಾಗಿದೆ.

    ಪ್ರಮುಖ ಲಕ್ಷಣಗಳು:

    • ಬಹು-ಪಾತ್ರ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ:- ವಾಯು, ಭೂ ಮೇಲ್ಮೈ ಮತ್ತು ಜಲಗರ್ಭದ ಯುದ್ಧ ಕಾರ್ಯಾಚರಣೆಗಳನ್ನು ಒಳಗೊಂಡಂತೆ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
    • ಇದು ಅತ್ಯಾಧುನಿಕ MF-ಸ್ಟಾರ್ ರಾಡಾರ್, MRSAM, ಬರಾಕ್ ವಾಯು ರಕ್ಷಣಾ ಕ್ಷಿಪಣಿಗಳು ಮತ್ತು ಬ್ರಹ್ಮೋಸ್ ಕ್ಷಿಪಣಿಗಳಂತಹ ಪ್ರಬಲ ಅಸ್ತ್ರಗಳಿಂದ ಸುಸಜ್ಜಿತವಾಗಿದೆ.

    INS ಅರಿಧಮನ್ : ಅರಿಹಂತ್-ವರ್ಗದ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ

    ರಕ್ಷಣೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತದ ಅರಿಹಂತ್-ವರ್ಗದ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ (SSBN) ಪಡೆಯ ಭಾಗವಾದ INS ಅರಿಧಮನ್ (INS Aridhaman) ಅನ್ನು ನೌಕಾಪಡೆಗೆ ನಿಯೋಜಿಸಲಾಗಿದೆ. 
    • ಇದು ತನ್ನ ಹಿಂದಿನ ಆವೃತ್ತಿಗಳಾದ ಐಎನ್‌ಎಸ್ ಅರಿಹಂತ್ (2016 ರಲ್ಲಿ ಸೇರ್ಪಡೆ) ಮತ್ತು ಐಎನ್‌ಎಸ್ ಅರಿಘಾಟ್ (2024 ರಲ್ಲಿ ಸೇರ್ಪಡೆ) ಜಲಾಂತರ್ಗಾಮಿಗಳಿಗಿಂತ ಹೆಚ್ಚು ಸುಧಾರಿತ ವೇದಿಕೆಯಾಗಿದೆ.

    ಪ್ರಮುಖ ಲಕ್ಷಣಗಳು:

    • ಐಎನ್‌ಎಸ್ ಅರಿಹಂತ್ ಮತ್ತು ಐಎನ್‌ಎಸ್ ಅರಿಘಾಟ್ ಗಿಂತ ದೊಡ್ಡದಾಗಿದ್ದು, ಸುಮಾರು 7,000 ಟನ್‌ಗಳಷ್ಟು ಜಲಸ್ಥಳಾಂತರ ಸಾಮರ್ಥ್ಯವನ್ನು ಹೊಂದಿದೆ.
    • ಇದು 24 ಕೆ-15 ಸಾಗರಿಕಾ (K-15 Sagarika) ಕ್ಷಿಪಣಿ ಅಥವಾ 8 ಕೆ-4 / ಕೆ-5 (K-4 / K-5) ಕ್ಷಿಪಣಿಗಳನ್ನು ಹೊತ್ತೊಯ್ಯುಬಲ್ಲ ಸಾಮರ್ಥ್ಯವನ್ನು ಹೊಂದಿದೆ.
    • ಕೆ-4 (K-4) ಕ್ಷಿಪಣಿಯು ಸುಮಾರು 3,500 ಕಿ.ಮೀ. ಕಾರ್ಯಾಚರಣಾ ವ್ಯಾಪ್ತಿಯನ್ನು ಹೊಂದಿದೆ.
    • ಇವು ಪರಮಾಣು ಸಾಮರ್ಥ್ಯ ಹೊಂದಿರುವ, ಜಲಾಂತರ್ಗಾಮಿಯಿಂದ ಉಡಾವಣೆಗೊಳ್ಳುವ ಬ್ಯಾಲಿಸ್ಟಿಕ್ ಕ್ಷಿಪಣಿಗಳಾಗಿವೆ (SLBMs).

    ‘ಭಾರತದ ಪರಮಾಣು ಜಲಾಂತರ್ಗಾಮಿ ಕಾರ್ಯಕ್ರಮ’ದ ಬಗ್ಗೆ:

    • ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಪರಮಾಣು ಶಕ್ತಿ ಇಲಾಖೆ (DAE), ಭಾರತೀಯ ನೌಕಾಪಡೆ ಮತ್ತು ಖಾಸಗಿ ರಕ್ಷಣಾ ಸಂಸ್ಥೆಗಳ ಸಹಯೋಗದೊಂದಿಗೆ ಹಾಗೂ ಆರಂಭಿಕ ಹಂತಗಳಲ್ಲಿ ರಷ್ಯಾ ದೇಶದ ತಾಂತ್ರಿಕ ನೆರವಿನೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
    • ಪರಮಾಣು-ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ (SSBN)ಯು ಈ ಕಾರ್ಯಕ್ರಮದ ಪ್ರಾಥಮಿಕ ಉತ್ಪನ್ನವಾಗಿದೆ. ಇದು ಜಲಾಂತರ್ಗಾಮಿಯಿಂದ ಉಡಾವಣೆಗೊಳ್ಳುವ (SLBMs), ಏಕ ಅಥವಾ ಬಹು ಪರಮಾಣು ಸಿಡಿತಲೆಗಳನ್ನು ಹೊಂದಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
  • CALM – ಬ್ರೈನ್ ಉಪಕ್ರಮ

    CALM – ಬ್ರೈನ್ ಉಪಕ್ರಮ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಬೆಂಗಳೂರಿನಲ್ಲಿ ಪ್ರಾರಂಭಿಸಲಾದ ‘CALM-ಬ್ರೈನ್’ (CALM-Brain), ವ್ಯಸನ, ಬೈಪೋಲಾರ್ ಅಸ್ವಸ್ಥತೆ, ಬುದ್ಧಿಮಾಂದ್ಯತೆ, OCD ಮತ್ತು ಸ್ಕಿಜೋಫ್ರೇನಿಯಾ ಸೇರಿದಂತೆ ಪ್ರಮುಖ ಮನೋವೈದ್ಯಕೀಯ ಕಾಯಿಲೆಗಳಿಗಾಗಿ ರೂಪಿಸಲಾದ ಭಾರತದ ಮೊದಲ ಮುಕ್ತ-ಮೂಲದ ಡಿಜಿಟಲ್ ದತ್ತಾಂಶ ಸಂಗ್ರಹವಾಗಿದೆ.
    • ರೋಗನಿರ್ಣಯದ ನಿಖರತೆಯನ್ನು ಸುಧಾರಿಸಲು ಮತ್ತು ವೈಯಕ್ತಿಕಗೊಳಿಸಿದ ಚಿಕಿತ್ಸೆಗಳನ್ನು ನೀಡಲು, ಇದು 2,000 ಕ್ಕೂ ಹೆಚ್ಚು ಜನ ಭಾಗವಹಿಸುವವರಿಂದ ಬಹು-ಮಾದರಿಯ ದತ್ತಾಂಶವನ್ನು (ಚಿಕಿತ್ಸಕ, ಚಿತ್ರಣ, ನಡವಳಿಕೆ ಮತ್ತು ಆನುವಂಶಿಕ ದತ್ತಾಂಶ) ಸಂಗ್ರಹಿಸುತ್ತದೆ.

    CALM-ಬ್ರೈನ್ ಉಪಕ್ರಮದ ಬಗ್ಗೆ:

    • ಅಭಿವೃದ್ಧಿಪಡಿಸಿದವರು:- ನಿಮ್ಹಾನ್ಸ್ (NIMHANS) ಮತ್ತು ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರದ (NCBS) ನಡುವಿನ ಪಾಲುದಾರಿಕೆಯಾದ ‘ರೋಹಿಣಿ ನಿಲೇಕಣಿ ಸೆಂಟರ್ ಫಾರ್ ಬ್ರೈನ್ ಅಂಡ್ ಮೈಂಡ್’ (CBM) ಈ ಯೋಜನೆಯನ್ನು ಅಭಿವೃದ್ಧಿಪಡಿಸಿದೆ.
    • ಉದ್ದೇಶಗಳು:- ಜೈವಿಕ-ಸೂಚಕಗಳನ್ನು (Biomarkers) ಗುರುತಿಸುವುದು, ರೋಗದ ಉಲ್ಬಣವನ್ನು ಅರ್ಥಮಾಡಿಕೊಳ್ಳುವುದು ಮತ್ತು ವೈಯಕ್ತಿಕಗೊಳಿಸಿದ, ದತ್ತಾಂಶ-ಚಾಲಿತ ಚಿಕಿತ್ಸಾ ತಂತ್ರಗಳಿಗೆ ಸಹಾಯ ಮಾಡುವುದು ಈ ಡಿಜಿಟಲ್ ದತ್ತಾಂಶ ಸಂಗ್ರಾಹಕದ ಗುರಿಯಾಗಿದೆ.
  • ಕರ್ ಸಾಥಿ (Kar Saathi) – ನೇರ ತೆರಿಗೆ ವಿಷಯಗಳ ಕುರಿತು AI ಆಧಾರಿತ ಚಾಟ್‌ಬಾಟ್ ವೇದಿಕೆ | E-20 ಪೆಟ್ರೋಲ್ (E20 Petrol) | ಕೊಳವೆ ನೈಸರ್ಗಿಕ ಅನಿಲದ (PNG) ಬಳಕೆಗೆ ಭಾರತದ ಉತ್ತೇಜನ | ಭಾರತದ ಬಹು-ವಿಪತ್ತು ಮುನ್ನೆಚ್ಚರಿಕೆ ನಿರ್ಧಾರ ಸಹಾಯಕ ವ್ಯವಸ್ಥೆ (MHEW-DSS) | ಇಂಡೋನೇಷ್ಯಾ | ‘NCERT’ಗೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಮಾನ್ಯತೆ

    ಕರ್ ಸಾಥಿ (Kar Saathi) – ನೇರ ತೆರಿಗೆ ವಿಷಯಗಳ ಕುರಿತು AI ಆಧಾರಿತ ಚಾಟ್‌ಬಾಟ್ ವೇದಿಕೆ

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಹೊಸ ಆದಾಯ ತೆರಿಗೆ ಕಾಯ್ದೆ, 2025ರ ಚೌಕಟ್ಟಿನಡಿಯಲ್ಲಿ ನೇರ ತೆರಿಗೆ ವಿಷಯಗಳ ಕುರಿತು 24×7 ಮಾರ್ಗದರ್ಶನ ನೀಡಲು ಆದಾಯ ತೆರಿಗೆ ಇಲಾಖೆಯು ಕೃತಕ ಬುದ್ಧಿಮತ್ತೆ (AI) ಆಧಾರಿತ ಡಿಜಿಟಲ್ ಚಾಟ್‌ಬಾಟ್ ವೇದಿಕೆಯನ್ನು ಪ್ರಾರಂಭಿಸಿದೆ.

    ‘ಕರ್ ಸಾಥಿ’ ಚಾಟ್‌ಬಾಟ್ ವೇದಿಕೆಯ ಬಗ್ಗೆ:

    • ನೇರ ತೆರಿಗೆ ವಿಷಯಗಳ ಕುರಿತು 24×7 ಮಾರ್ಗದರ್ಶನ ಒದಗಿಸುತ್ತದೆ:- ಅವುಗಳೆಂದರೆ ಐಟಿಆರ್ (ITR) ಸಲ್ಲಿಕೆ, ತೆರಿಗೆ ನಿಯಮಗಳು, ನಮೂನೆಗಳು, ನೋಟಿಸ್‌ಗಳು, ಕಡಿತಗಳು, ಮರುಪಾವತಿ ಮತ್ತು ಅನುಸರಣೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಹಾಯವನ್ನು ಒದಗಿಸುತ್ತದೆ.
    • ಎಲ್ಲಾ ನೇರ ತೆರಿಗೆಗೆ ಸಂಬಂಧಿಸಿದ ಸಂಪನ್ಮೂಲಗಳನ್ನು ಒಂದೇ ವೇದಿಕೆಯಡಿ ತರುತ್ತದೆ:- ಅವುಗಳೆಂದರೆ ನಮೂನೆಗಳು, ಸ್ವೀಕೃತಿ, ಇ-ಪಾವತಿ, ಇ-ಪರಿಶೀಲನೆ ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs).

    ತೆರಿಗೆದಾರರ ಕುಂದುಕೊರತೆ ನಿವಾರಣೆ ಮತ್ತು ತೆರಿಗೆ ಅನುಸರಣೆಯ ಪ್ರಶ್ನೆಗಳನ್ನು ಪರಿಹರಿಸಲು ಬೆಂಬಲ ನೀಡುತ್ತದೆ.

    E-20 ಪೆಟ್ರೋಲ್ (E20 Petrol)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತವು ಏಪ್ರಿಲ್ 1, 2025 ರಿಂದ ದೇಶದ ಎಲ್ಲಾ ಇಂಧನ ಕೇಂದ್ರಗಳಲ್ಲಿ ಇ20 (E20) ಪೆಟ್ರೋಲ್ ವಿತರಣೆಯನ್ನು ಅಧಿಕೃತವಾಗಿ ಕಡ್ಡಾಯಗೊಳಿಸಿದೆ.

    E-20 ಪೆಟ್ರೋಲ್ ಉಪಕ್ರಮದ ಬಗ್ಗೆ:

    • ಇದು 20% ಎಥೆನಾಲ್ ಮತ್ತು 80% ಪೆಟ್ರೋಲ್ ಒಳಗೊಂಡಿರುವ ಇಂಧನ ಮಿಶ್ರಣವನ್ನು ಸೂಚಿಸುತ್ತದೆ.
    • ಭಾರತದ “ಎಥೆನಾಲ್ ಮಿಶ್ರಿತ ಪೆಟ್ರೋಲ್” (EBP) ಕಾರ್ಯಕ್ರಮದ ಪ್ರಮುಖ ಭಾಗವಾಗಿದೆ:- ಇದು ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ವಾಹನಗಳ ಹೊರಸೂಸುವಿಕೆಯನ್ನು ತಗ್ಗಿಸುವ ಉದ್ದೇಶವನ್ನು ಹೊಂದಿದೆ.
    • 20% ಎಥೆನಾಲ್ ಮಿಶ್ರಣದ ಗುರಿ, 2025-26:- ಆರಂಭದಲ್ಲಿ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ಗುರಿಯನ್ನು 2030ಕ್ಕೆ ನಿಗದಿಪಡಿಸಲಾಗಿತ್ತು, ಆದರೆ ತಿದ್ದುಪಡಿ ಮಾಡಲಾದ ರಾಷ್ಟ್ರೀಯ ಜೈವಿಕ ಇಂಧನ ನೀತಿ, 2022ರ ಅಡಿಯಲ್ಲಿ ಈ ಗುರಿಯನ್ನು 2025-26ನೇ ವರ್ಷಕ್ಕೆ ಮುಂಚಿತವಾಗಿ ಸಾಧಿಸಲು ನಿರ್ಧರಿಸಲಾಗಿದೆ.

    ಭಾರತಕ್ಕೆ ಇದರ ಪ್ರಾಮುಖ್ಯತೆ:

    • ಇಂಧನ ಭದ್ರತೆ:- ಇದು ಭಾರತದ ಅಗತ್ಯಗಳ ಸುಮಾರು 85% ರಷ್ಟು ಆಮದು ಮಾಡಿಕೊಳ್ಳಲಾಗುತ್ತಿರುವ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
    • ವಿದೇಶಿ ವಿನಿಮಯವನ್ನು ಉಳಿತಾಯ:- ಇದು ವಾರ್ಷಿಕವಾಗಿ ಸರಿಸುಮಾರು ₹30,000 ರಿಂದ ₹50,000 ಕೋಟಿಗಳಷ್ಟು ವಿದೇಶಿ ವಿನಿಮಯವನ್ನು ಉಳಿತಾಯ ಮಾಡುತ್ತದೆ.
    • ಪರಿಸರ ಸಂರಕ್ಷಣೆ:- ಇದು ಇಂಗಾಲದ ಮೊನಾಕ್ಸೈಡ್, ಹೈಡ್ರೋಕಾರ್ಬನ್‌ಗಳು ಮತ್ತು ಸೂಕ್ಷ್ಮ ಕಣಗಳ ಹೊರಸೂಸುವಿಕೆಯನ್ನು 30-50% ರಷ್ಟು ಕಡಿಮೆ ಮಾಡುತ್ತದೆ.
    • ಗ್ರಾಮೀಣ ಆದಾಯ ಹೆಚ್ಚಿಸುವುದು:- ಇದು ಕಬ್ಬು, ಮೆಕ್ಕೆಜೋಳ ಮತ್ತು ಹಾನಿಗೊಳಗಾದ ಆಹಾರ ಧಾನ್ಯಗಳಂತಹ ಬೆಳೆಗಳಿಗೆ ಬೇಡಿಕೆಯನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಆದಾಯವನ್ನು ಹೆಚ್ಚಿಸುತ್ತದೆ.

    ಕೊಳವೆ ನೈಸರ್ಗಿಕ ಅನಿಲದ (PNG) ಬಳಕೆಗೆ ಭಾರತದ ಉತ್ತೇಜನ

    ವಿಜ್ಞಾನ ಮತ್ತು ತಂತ್ರಜ್ಜಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಆಮದು ಅವಲಂಬನೆಯನ್ನು ಕಡಿಮೆ ಮಾಡಲು, ಇಂಧನ ಭದ್ರತೆಯನ್ನು ಹೆಚ್ಚಿಸಲು ಮತ್ತು ಶುದ್ಧ ಇಂಧನಗಳ ಬಳಕೆಯತ್ತ ಸಾಗಲು ಭಾರತವು ಕೊಳವೆ ನೈಸರ್ಗಿಕ ಅನಿಲ (PNG) ಸಂಪರ್ಕಗಳ ವಿಸ್ತರಣೆಯನ್ನು ವೇಗಗೊಳಿಸುತ್ತಿದೆ.

    ಅನಿಲಗಳ ವಿಧಗಳು:

    ದ್ರವೀಕೃತ ಪೆಟ್ರೋಲಿಯಂ ಅನಿಲ (LPG):

    • ಅನಿಲಗಳ ಸಂಯೋಜನೆ:- ಪ್ರೊಪೇನ್ (Propane) ಮತ್ತು ಬ್ಯೂಟೇನ್ (Butane).
    • ಸ್ಥಿತಿ ಮತ್ತು ಸಂಗ್ರಹಣೆ:- ಇದನ್ನು ಸಾಧಾರಣ ಒತ್ತಡದಲ್ಲಿ ಸಿಲಿಂಡರ್‌ಗಳಲ್ಲಿ ದ್ರವರೂಪದಲ್ಲಿ ಸಂಗ್ರಹಿಸಲಾಗುತ್ತದೆ.
    • ಬಳಕೆ:- ಇದನ್ನು ಗೃಹಬಳಕೆಯ ಅಡುಗೆ, ನೀರು ಕಾಯಿಸುವಿಕೆ ಮತ್ತು ಸಣ್ಣ-ಪ್ರಮಾಣದ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ.
    • ಪ್ರಮುಖ ಲಕ್ಷಣ:- ಇದು ಗಾಳಿಗಿಂತ ಭಾರವಾಗಿರುತ್ತದೆ; ಆದ್ದರಿಂದ ಸೋರಿಕೆಯಾದರೆ ನೆಲದ ಮೇಲೆ ಶೇಖರಗೊಳ್ಳುತ್ತದೆ.

    ಕೊಳವೆ ನೈಸರ್ಗಿಕ ಅನಿಲ (PNG):

    • ಅನಿಲಗಳ ಸಂಯೋಜನೆ:- ಪ್ರಾಥಮಿಕವಾಗಿ ‘ಮಿಥೇನ್’.
    • ಸ್ಥಿತಿ ಮತ್ತು ಸಂಗ್ರಹಣೆ:- ಇದನ್ನು ನೆಲದಡಿಯ ಕೊಳವೆಗಳ ಮೂಲಕ ಅನಿಲ ರೂಪದಲ್ಲಿ ವಿತರಿಸಲಾಗುತ್ತದೆ.
    • ಬಳಕೆ:- ಇದನ್ನು ವಸತಿ ಸಮುಚ್ಚಯಗಳ ಅಡುಗೆಕೋಣೆಗಳು, ವಾಣಿಜ್ಯ ಅಡುಗೆ ಮತ್ತು ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ.
    • ಪ್ರಮುಖ ಲಕ್ಷಣ:- ಇದು ನಿರಂತರ ಪೂರೈಕೆಯನ್ನು ಒದಗಿಸುತ್ತದೆ; ಆದ್ದರಿಂದ ಯಾವುದೇ ಸಿಲಿಂಡರ್ ಸಂಗ್ರಹಣೆಯ ಅಗತ್ಯವಿರುವುದಿಲ್ಲ.

    ಸಂಕುಚಿತ ನೈಸರ್ಗಿಕ ಅನಿಲ (CNG):

    • ಅನಿಲಗಳ ಸಂಯೋಜನೆ:- ಪ್ರಾಥಮಿಕವಾಗಿ ‘ಮಿಥೇನ್’.
    • ಸ್ಥಿತಿ ಮತ್ತು ಸಂಗ್ರಹಣೆ:- ಇದನ್ನು ಟ್ಯಾಂಕ್‌ಗಳಲ್ಲಿ ಅತಿ ಹೆಚ್ಚಿನ ಒತ್ತಡದಲ್ಲಿ (200-250 bar) ಸಂಕುಚಿತಗೊಳಿಸಿ ಸಂಗ್ರಹಿಸಲಾಗುತ್ತದೆ.
    • ಬಳಕೆ:- ಇದನ್ನು ವಾಹನಗಳಲ್ಲಿ (ಕಾರು, ಬಸ್, ರಿಕ್ಷಾ) ಮತ್ತು ಕಡಿಮೆ-ಒತ್ತಡದ ಕೈಗಾರಿಕಾ ದಹನ ಸಾಧನಗಳಲ್ಲಿ ಬಳಸಲಾಗುತ್ತದೆ.
    • ಪ್ರಮುಖ ಲಕ್ಷಣ:- ಇದು ಪೆಟ್ರೋಲ್ ಅಥವಾ ಡೀಸೆಲ್‌ಗಿಂತ ಹೆಚ್ಚು ಮಾಲಿನ್ಯಮುಕ್ತವಾಗಿ ಮತ್ತು ಶುದ್ಧವಾಗಿ ದಹನಗೊಳ್ಳುತ್ತದೆ.

    ದ್ರವೀಕೃತ ನೈಸರ್ಗಿಕ ಅನಿಲ (LNG):

    • ಅನಿಲಗಳ ಸಂಯೋಜನೆ:- ಪ್ರಾಥಮಿಕವಾಗಿ ‘ಮಿಥೇನ್’.
    • ಸ್ಥಿತಿ ಮತ್ತು ಸಂಗ್ರಹಣೆ:- ಸಾಗಾಣಿಕೆಗಾಗಿ ಇದನ್ನು ದ್ರವರೂಪಕ್ಕೆ ಪರಿವರ್ತಿಸಲು ಸುಮಾರು –160°C ತಾಪಮಾನಕ್ಕೆ ತಂಪುಗೊಳಿಸಲಾಗುತ್ತದೆ.
    • ಬಳಕೆ:- ಸಮುದ್ರ ಮಾರ್ಗದ ಮೂಲಕ ನೈಸರ್ಗಿಕ ಅನಿಲವನ್ನು ದೂರದ ಸ್ಥಳಗಳಿಗೆ ಸಾಗಿಸಲು ಮತ್ತು ವಿದ್ಯುತ್ ಉತ್ಪಾದನೆಗೆ ಇದನ್ನು ಬಳಸಲಾಗುತ್ತದೆ.
    • ಪ್ರಮುಖ ಲಕ್ಷಣ:- ಇದನ್ನು ಬೃಹತ್ ಪ್ರಮಾಣದಲ್ಲಿ ಸುಲಭವಾಗಿ ಸಂಗ್ರಹಿಸಲು, ಇದರ ಗಾತ್ರವನ್ನು 600 ಪಟ್ಟು ಕಡಿಮೆಗೊಳಿಸಲಾಗುತ್ತದೆ.

    ಕೊಳವೆ ನೈಸರ್ಗಿಕ ಅನಿಲದ (PNG) ಕಡೆಗೆ ಭಾರತದ ಒಲವು:

    • ಆಮದು ಅವಲಂಬನೆ ಕಡಿತಗೊಳಿಸಲು:- ಭಾರತವು ತನ್ನ ಎಲ್‌ಪಿಜಿ (LPG) ಅಗತ್ಯತೆಯ ಸುಮಾರು 60% ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಇದರ ಹೆಚ್ಚಿನ ಪಾಲು ಪಶ್ಚಿಮ ಏಷ್ಯಾದಿಂದ ಬರುತ್ತದೆ ಮತ್ತು ಹಾರ್ಮುಜ್ ಜಲಸಂಧಿಯಂತಹ ಪೂರೈಕೆಯ ಮಾರ್ಗಗಳು ಭೂ-ರಾಜಕೀಯವಾಗಿ ಸೂಕ್ಷ್ಮವಾಗಿವೆ.
    • ಸರಕು ಸಾಗಣೆ ವೆಚ್ಚವನ್ನು ಸಂಪೂರ್ಣವಾಗಿ ನಿವಾರಿಸುತ್ತದೆ:- ಸಿಲಿಂಡರ್ ಸಾಗಾಟ ಮತ್ತು ಸಂಗ್ರಹಣೆಗೆ ಸಂಬಂಧಿಸಿದ ವ್ಯವಸ್ಥಾಪನಾ ವೆಚ್ಚವನ್ನು ನಿವಾರಿಸುತ್ತದೆ.
    • ಬೆಲೆಯು ಹೆಚ್ಚು ಸ್ಥಿರವಾಗಿರುತ್ತದೆ:- ಜಾಗತಿಕ ತೈಲ ಬೆಲೆಗಳಿಗೆ ಸೂಕ್ಷ್ಮವಾಗಿರುವ ಎಲ್‌ಪಿಜಿ (LPG) ಬೆಲೆಗೆ ಹೋಲಿಸಿದರೆ, ಪಿಎನ್‌ಜಿ (PNG) ಬೆಲೆಯು ಹೆಚ್ಚು ಸ್ಥಿರವಾಗಿರುತ್ತದೆ.
    • ನೈಸರ್ಗಿಕ ಅನಿಲವು ಎಲ್‌ಪಿಜಿಗಿಂತ (LPG) ಹೆಚ್ಚು ಶುದ್ಧವಾಗಿ ಉರಿಯುತ್ತದೆ:- ಇದು ಕಡಿಮೆ ಮಾಲಿನ್ಯಕಾರಕಗಳು ಮತ್ತು ಹಸಿರುಮನೆ ಅನಿಲಗಳನ್ನು ಉತ್ಪಾದಿಸುತ್ತದೆ.

    ಭಾರತದ ಬಹು-ವಿಪತ್ತು ಮುನ್ನೆಚ್ಚರಿಕೆ ನಿರ್ಧಾರ ಸಹಾಯಕ ವ್ಯವಸ್ಥೆ (MHEW-DSS)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತೀಯ ಹವಾಮಾನ ಇಲಾಖೆಯು (IMD) ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಬಹು-ವಿಪತ್ತು ಮುನ್ನೆಚ್ಚರಿಕೆ ನಿರ್ಧಾರ ಸಹಾಯಕ ವ್ಯವಸ್ಥೆಗಾಗಿ (MHEW-DSS) ಇ-ಆಡಳಿತ 2025ರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.

    ಬಹು-ವಿಪತ್ತು ಮುನ್ನೆಚ್ಚರಿಕೆ ನಿರ್ಧಾರ ಸಹಾಯಕ ವ್ಯವಸ್ಥೆ (MHEW-DSS)ಯ ಬಗ್ಗೆ:

    • 2024 ರಲ್ಲಿ ಪ್ರಾರಂಭಿಸಲಾದ ಸ್ವಯಂಚಾಲಿತ ಡಿಜಿಟಲ್ ವೇದಿಕೆಯಾಗಿದೆ:- ನಿರ್ಣಾಯಕ ಹವಾಮಾನ ಮುನ್ಸೂಚನೆ ಪ್ರಕ್ರಿಯೆಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸ್ವಯಂಚಾಲಿತಗೊಳಿಸುತ್ತದೆ. ಇದು ಸಾರ್ವಜನಿಕರು, ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಹಾಗೂ ನಿರ್ದಿಷ್ಟ ಪಾಲುದಾರರಿಗೆ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆ ಸೇವೆಗಳನ್ನು ಒದಗಿಸುತ್ತದೆ.
    • ಮಿಷನ್ ಮೌಸಮ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ:- ಈ ವ್ಯವಸ್ಥೆಯು ಹವಾಮಾನ ದತ್ತಾಂಶ ಸಂಸ್ಕರಣೆಯನ್ನು 90% ರಷ್ಟು ಸ್ವಯಂಚಾಲಿತಗೊಳಿಸಿದೆ. ಇದು ಮುನ್ಸೂಚನೆಯ ನಿಖರತೆಯನ್ನು 30% ರಷ್ಟು ಸುಧಾರಿಸಿದೆ ಮತ್ತು ಸಿದ್ಧತೆಯ ಸಮಯವನ್ನು 6 ಗಂಟೆಗಳಿಂದ 3 ಗಂಟೆಗಳಿಗೆ ಇಳಿಸಿದೆ.
    • ನೈಜ-ಸಮಯದ ದತ್ತಾಂಶಗಳನ್ನು ಕೇಂದ್ರೀಕೃತ GIS-ಆಧಾರಿತ ವೇದಿಕೆಗೆ ಸಂಯೋಜಿಸುತ್ತದೆ:- ಇದು ಉಪಗ್ರಹಗಳು, ರಾಡಾರ್‌ಗಳು ಮತ್ತು ಭೂಮಿ ಹಾಗೂ ಮೇಲಿನ ವಾತಾವರಣದ ಸಂವೇದಕಗಳಿಂದ (ಸೆನ್ಸಾರ್ ಗಳು) ಬರುವ ನೈಜ-ಸಮಯದ ದತ್ತಾಂಶಗಳನ್ನು ಸಂಯೋಜಿಸುವ ಮೂಲಕ ಹಳೆಯ ಮಾನವ-ಚಾಲಿತ ಕಾರ್ಯವಿಧಾನಗಳನ್ನು ಇದು ಬದಲಾಯಿಸಿದೆ.

    ಭಾರತೀಯ ಹವಾಮಾನ ಇಲಾಖೆ (IMD)ಯ ಬಗ್ಗೆ:

    • ಇದನ್ನು 1875 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು 2025 ರಲ್ಲಿ ತನ್ನ 150 ವರ್ಷಗಳ ಸೇವೆಯನ್ನು ಪೂರೈಸಿದೆ.
    • ಕಾರ್ಯನಿರ್ವಹಣೆ:- ಇದು ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಉದ್ದೇಶ:- ಇದು ಭಾರತದಲ್ಲಿ ಹವಾಮಾನ ವೀಕ್ಷಣೆಗಳು, ಹವಾಮಾನ ಮುನ್ಸೂಚನೆ ಮತ್ತು ಭೂಕಂಪನಶಾಸ್ತ್ರಗಳ ಬಗ್ಗೆ ಮಾಹಿತಿ ಒದಗಿಸಿವ ಒಂದು ಜವಾಬ್ದಾರಿಯುತ ಸರ್ಕಾರಿ ಸಂಸ್ಥೆಯಾಗಿದೆ.

    ‘ಮಿಷನ್ ಮೌಸಮ್’ ಉಪಕ್ರಮದ ಬಗ್ಗೆ:

    • ಇದು ಭೂ ವಿಜ್ಞಾನ ಸಚಿವಾಲಯವು (MoES) ಪ್ರಾರಂಭಿಸಿದ ಮಹತ್ವಾಕಾಂಕ್ಷೆಯ ಬಹುಮುಖಿ ಉಪಕ್ರಮವಾಗಿದೆ.
    • ಗುರಿ:- ಇದು ದೇಶವನ್ನು “ಹವಾಮಾನ-ಸಿದ್ಧ ಮತ್ತು ಹವಾಮಾನ-ಸ್ಮಾರ್ಟ್” ರಾಷ್ಟ್ರವನ್ನಾಗಿ ಪರಿವರ್ತಿಸುವುದು.
    • ಉದ್ದೇಶ:- ಹವಾಮಾನ ಮುನ್ಸೂಚನೆಗಳ ನಿಖರತೆ ಮತ್ತು ಮುನ್ನೆಚ್ಚರಿಕೆ ನೀಡುವ ಸಮಯವನ್ನು ಗಣನೀಯವಾಗಿ ಸುಧಾರಿಸುವುದು.

    ಇಂಡೋನೇಷ್ಯಾ

    ಭೂಗೋಳ

    ಇತ್ತೀಚೆಗೆ ಸುದ್ದಿಯಲ್ಲಿದೆ

    • ಇಂಡೋನೇಷ್ಯಾದ ಟರ್ನೇಟ್ ದ್ವೀಪದ ಸಮೀಪವಿರುವ ಉತ್ತರ ಮೊಲುಕ್ಕಾ ಸಮುದ್ರದಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದೆ.

    ಇಂಡೋನೇಷ್ಯಾ ದೇಶದ ಬಗ್ಗೆ:

    • ಜಗತ್ತಿನ ಅತ್ಯಂತ ದೊಡ್ಡ ದ್ವೀಪಸಮೂಹ ರಾಷ್ಟ್ರವಾಗಿದೆ:- ಇದು ಆಗ್ನೇಯ ಏಷ್ಯಾದ ಪ್ರಮುಖ ಭೂಭಾಗದ ಸಮೀಪ, ಹಿಂದೂ ಮತ್ತು ಪೆಸಿಫಿಕ್ ಮಹಾಸಾಗರಗಳ ನಡುವೆ ನೆಲೆಗೊಂಡಿದೆ.
    • ಪ್ರಮುಖ ದ್ವೀಪಗಳು:- ಸುಮಾತ್ರಾ, ಜಾವಾ, ಕಾಲಿಮಂತನ್ (ಬೋರ್ನಿಯೊ), ಸುಲವೇಸಿ ಮತ್ತು ಪಪುವಾ.
    • ಗಡಿ ಹಂಚಿಕೆ:- ಪೂರ್ವ ಟಿಮೋರ್ (ಟಿಮೋರ್-ಲೆಸ್ಟೆ), ಪಪುವಾ ನ್ಯೂಗಿನಿಯಾ ಮತ್ತು ಮಲೇಷ್ಯಾದೊಂದಿಗೆ ಭೂ ಗಡಿಗಳನ್ನು ಹಂಚಿಕೊಂಡಿದೆ.
    • ರಾಜಧಾನಿ:- ಜಕಾರ್ತಾ (ಜಾವಾ ದ್ವೀಪದಲ್ಲಿದೆ); ಹೊಸ ರಾಜಧಾನಿಯಾಗಿ ಕಾಲಿಮಂತನನಲ್ಲಿರುವ ನುಸಂತಾರಾವನ್ನು (Nusantara) ಅಭಿವೃದ್ಧಿಪಡಿಸಲಾಗುತ್ತಿದೆ.
    • ಪೆಸಿಫಿಕ್ ರಿಂಗ್ ಆಫ್ ಫೈರ್ ಪ್ರದೇಶದಲ್ಲಿ ನೆಲೆಗೊಂಡಿದೆ:- ಇದು ಭೂಕಂಪನಗಳ ಸಕ್ರಿಯ ವಲಯವಾಗಿದ್ದು, ಪ್ರಪಂಚದ ಸುಮಾರು 90% ರಷ್ಟು ಭೂಕಂಪಗಳು ಇಲ್ಲಿಯೇ ಸಂಭವಿಸುತ್ತವೆ.
    • ಇತ್ತೀಚೆಗೆ ಭೂಕಂಪ ಸಂಭವಿಸಿದ ಮೊಲುಕ್ಕಾ ಸಮುದ್ರವು ಇಂಡೋನೇಷ್ಯಾದ ಉತ್ತರ ಭಾಗದಲ್ಲಿರುವ ಅತ್ಯಂತ ಸಕ್ರಿಯವಾದ ಭೂಪಟಲ ಚಲನೆಯ ಪ್ರದೇಶವಾಗಿದೆ.

    ಪೆಸಿಫಿಕ್ ‘ರಿಂಗ್ ಆಫ್ ಫೈರ್’ (ಅಗ್ನಿವಲಯ)ನ ಬಗ್ಗೆ:

    • ಪೆಸಿಫಿಕ್ ಮಹಾಸಾಗರ ಸುತ್ತುವರಿದ ವಲಯ (ಸರ್ಕ್ಯೂಮ್ -ಪೆಸಿಫಿಕ್ ಬೆಲ್ಟ್) ಎಂತಲೂ ಕರೆಯುತ್ತಾರೆ:- ಇದು ಪೆಸಿಫಿಕ್ ಮಹಾಸಾಗರದ ಅಂಚುಗಳ ಸುತ್ತಲಿನ ಕುದುರೆ-ಲಾಳದ ಆಕಾರದ ಪ್ರದೇಶವಾಗಿದೆ.
    • ಇದನ್ನು ಅದರ ಆಕಾರದಿಂದಾಗಿ ‘ಕುದುರೆ-ಲಾಳದ ಆಕಾರದ ಪಟ್ಟಿ’ ಎಂತಲೂ ಕರೆಯುತ್ತಾರೆ
    • ಲಕ್ಷಣಗಳು:- ಇಲ್ಲಿ ಪ್ರಪಂಚದ ಅತ್ಯಂತ ಹೆಚ್ಚು ಅಂದರೆ 90% ಭೂಕಂಪಗಳು ಮತ್ತು 75% ಕ್ಕಿಂತ ಹೆಚ್ಚು ಜ್ವಾಲಾಮುಖಿ ಸ್ಫೋಟಗಳು ಸಂಭವಿಸುತ್ತವೆ. ಅಂದರೆ 450 ಕ್ಕೂ ಹೆಚ್ಚು ಜ್ವಾಲಾಮುಖಿಗಳು ರಿಂಗ್ ಆಫ್ ಫೈರ್‌ನ ಅಂಚಿನುದ್ದಕ್ಕೂ ನೆಲೆಗೊಂಡಿವೆ.
    • ಅತ್ಯಂತ ಸಕ್ರಿಯವಾದ ಭೂಪಟಲ ಚಲನೆಯು ಈ ಪ್ರಕ್ರಿಯೆಗಳಿಗೆ ಕಾರಣವಾಗಿದೆ:- ಈ ಪ್ರದೇಶದಲ್ಲಿನ ಟೆಕ್ಟಾನಿಕ್ ಭೂ ಫಲಕಗಳ ನಿರಂತರ ಚಲನೆಯೇ, ರಿಂಗ್ ಆಫ್ ಫೈರ್‌ನ ಅಂಚಿನುದ್ದಕ್ಕೂ ಜ್ವಾಲಾಮುಖಿಗಳು ಮತ್ತು ಭೂಕಂಪಗಳು ಹೇರಳವಾಗಿ ಕಂಡುಬರಲು ಪ್ರಮುಖ ಕಾರಣವಾಗಿದೆ.

    ಭಾರತದಲ್ಲಿನ ಜ್ವಾಲಾಮುಖಿಗಳು:

    • ಬ್ಯಾರೆನ್ ದ್ವೀಪ, ಅಂಡಮಾನ್ ದ್ವೀಪಗಳು (ಇದು ಭಾರತದ ಏಕೈಕ ಸಕ್ರಿಯ ಜ್ವಾಲಾಮುಖಿಯಾಗಿದೆ)
    • ನಾರ್ಕೊಂಡಮ್, ಅಂಡಮಾನ್ ದ್ವೀಪಗಳು
    • ಬಾರಾಟಾಂಗ್, ಅಂಡಮಾನ್ ದ್ವೀಪಗಳು
    • ದಖ್ಖನ್ ಲಾವಾ ಸ್ತರಗಳು (ಡೆಕ್ಕನ್ ಟ್ರ್ಯಾಪ್ಸ್), ಮಹಾರಾಷ್ಟ್ರ

    ‘NCERT’ಗೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಮಾನ್ಯತೆ

    ಸರ್ಕಾರಿ ಉಪಕ್ರಮಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT)ಯನ್ನು ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ಎಂದು ಘೋಷಿಸಿದೆ.

    ಈ ನಿರ್ಧಾರದ ಪ್ರಭಾವ:

    • ಪದವಿಗಳನ್ನು ಪ್ರದಾನ ಮಾಡಬಹುದು:- ಹಾಗೆಯೇ ಈ ಮಾನ್ಯತೆಯಿಂದಾಗಿ NCERT ಯು ಈಗ ಹೊಸ ಪಠ್ಯಕ್ರಮಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಬಹುದು.
    • ಸಂಶೋಧನಾ ಕಾರ್ಯಕ್ರಮಗಳು, ಡಾಕ್ಟರೇಟ್ ಕಾರ್ಯಕ್ರಮಗಳು ಮತ್ತು ನವೀನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸುವಂತೆಯೂ ಸಂಸ್ಥೆಯನ್ನು ಕೇಳಿಕೊಳ್ಳಲಾಗಿದೆ.
    • ಯುಜಿಸಿ (UGC) ನಿಯಮಗಳು ಮತ್ತು ನಿಬಂಧನೆಗಳು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಕ್ಕೆ ಅನುಗುಣವಾಗಿ, NCERT ಇತರ ಶೈಕ್ಷಣಿಕ ಕ್ಷೇತ್ರಗಳಿಗೂ ಕ್ರಮೇಣ ತನ್ನ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ಸೂಚಿಸಲಾಗಿದೆ.

    ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT)ಯ ಬಗ್ಗೆ:

    • ಇದು 1961 ರಲ್ಲಿ ಸ್ಥಾಪನೆಯಾದ ಒಂದು ಸ್ವಾಯತ್ತ ಸಂಸ್ಥೆಯಾಗಿದೆ.
    • ಧ್ಯೇಯೋದ್ದೇಶ:- ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿರುವ ನೀತಿಗಳು ಮತ್ತು ಕಾರ್ಯಕ್ರಮಗಳ ಕುರಿತು ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಗತ್ಯ ಸಹಾಯ ಹಾಗೂ ಸಲಹೆಗಳನ್ನು ನೀಡುತ್ತದೆ.

    NCERT ಯ ಪ್ರಮುಖ ಪಾತ್ರಗಳು ಮತ್ತು ಕಾರ್ಯಗಳು:

    • ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು (NCF) ಅಭಿವೃದ್ಧಿಪಡಿಸುವ ನೋಡಲ್ ಸಂಸ್ಥೆಯಾಗಿದೆ:- ಇದು ಭಾರತದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟವನ್ನು ನಿಗದಿಪಡಿಸುತ್ತದೆ.
    • ಪಠ್ಯಪುಸ್ತಕಗಳ ಪ್ರಕಟಣೆ:- ಇದು ಇಂಗ್ಲಿಷ್, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ I ರಿಂದ XII ನೇ ತರಗತಿಗಳಿಗೆ ಮಾದರಿ ಪಠ್ಯಪುಸ್ತಕಗಳನ್ನು ಪ್ರಕಟಿಸುತ್ತದೆ. ಈ ಪುಸ್ತಕಗಳನ್ನು ಸಿಬಿಎಸ್‌ಇ (CBSE) ಸಂಯೋಜಿತ ಶಾಲೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ಮತ್ತು ಯುಪಿಎಸ್‌ಸಿ (UPSC), ಜೆಇಇ (JEE) ಹಾಗೂ ನೀಟ್ (NEET) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇವು ಅತ್ಯಗತ್ಯವಾಗಿವೆ.
    • ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ:- ಇದು ಶಾಲಾ ಶಿಕ್ಷಣದಲ್ಲಿ ಸಂಶೋಧನೆಯನ್ನು ಉತ್ತೇಜಿಸುತ್ತದೆ ಮತ್ತು ಶಿಕ್ಷಕರಿಗೆ ಸೇವಾ-ಪೂರ್ವ ಹಾಗೂ ಸೇವಾನಿರತ ತರಬೇತಿಯನ್ನು ಒದಗಿಸುತ್ತದೆ.
    • ಡಿಜಿಟಲ್ ಉಪಕ್ರಮಗಳು:- ಇ-ಪಾಠಶಾಲಾ ಮತ್ತು ದೀಕ್ಷಾ (DIKSHA) ದಂತಹ ವೇದಿಕೆಗಳ ಮೂಲಕ, ಇದು ಪಠ್ಯಪುಸ್ತಕಗಳು, ಆಡಿಯೋ ಮತ್ತು ವಿಡಿಯೋ ಸಂಪನ್ಮೂಲಗಳಿಗೆ ಉಚಿತ ಡಿಜಿಟಲ್ ಪ್ರವೇಶವನ್ನು ನೀಡುತ್ತದೆ.
  • ಕರ್ನಾಟಕದ ಮೊದಲ ನೀರಿನ ಚಿಲುಮೆ (ಬುಗ್ಗೆ) ಗಣತಿ

    ಕರ್ನಾಟಕದ ಮೊದಲ ನೀರಿನ ಚಿಲುಮೆ (ಬುಗ್ಗೆ) ಗಣತಿ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಜಲಸಂರಕ್ಷಣೆಯನ್ನು ಹೆಚ್ಚಿಸುವ ಉದ್ದೇಶದಿಂದ, ‘ಕರ್ನಾಟಕ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ’ಯು, ‘ಅಂತರ್ಜಲ ನಿರ್ದೇಶನಾಲಯ’ದ ಬೆಂಬಲದೊಂದಿಗೆ, 31 ಜಿಲ್ಲೆಗಳಾದ್ಯಂತ 274 ನೈಸರ್ಗಿಕ ನೀರಿನ ಚಿಲುಮೆಗಳನ್ನು ಗುರುತಿಸುವ ಮೂಲಕ ರಾಜ್ಯದ ಮೊಟ್ಟಮೊದಲ ಡಿಜಿಟಲ್ ಗಣತಿಯನ್ನು ಪೂರ್ಣಗೊಳಿಸಿದೆ.

    ನೀರಿನ ಚಿಲುಮೆ (ಬುಗ್ಗೆ) ಗಣತಿಯ ಪ್ರಮುಖ ಅಂಶಗಳು:

    • ಒಟ್ಟು ಎಣಿಕೆ:- 274 ನೀರಿನ ಚಿಲುಮೆಗಳನ್ನು ದಾಖಲಿಸಲಾಗಿದ್ದು, ಇವುಗಳಲ್ಲಿ ಬಹುಪಾಲು ಬೆಳಗಾವಿ, ಉತ್ತರ ಕನ್ನಡ, ಚಾಮರಾಜನಗರ ಮತ್ತು ಕೊಡಗಿನಂತಹ ಗುಡ್ಡಗಾಡು ಜಿಲ್ಲೆಗಳಲ್ಲಿವೆ.
    • ವಿಶಿಷ್ಟ ಲಕ್ಷಣ:- ದಕ್ಷಿಣ ಕನ್ನಡ ಜಿಲ್ಲೆಯ “ಬೆಂದ್ರು ತೀರ್ಥ” ಎಂಬಲ್ಲಿ ಒಂದು ಬಿಸಿನೀರಿನ ಚಿಲುಮೆಯನ್ನು (Hot spring) ಈ ಗಣತಿಯು ಗುರುತಿಸಿದೆ.
    • ದತ್ತಾಂಶ ಬಳಕೆ:- ಗ್ರಾಮೀಣ ಪ್ರದೇಶಗಳಲ್ಲಿ ಜಲ ಭದ್ರತೆಗೆ ನಿರ್ಣಾಯಕವಾಗಿರುವ ಚಿಲುಮೆ ಆಧಾರಿತ ಜಲಮೂಲಗಳನ್ನು ರಕ್ಷಿಸಲು ಮತ್ತು ನಿರ್ವಹಿಸಲು ಈ ದತ್ತಾಂಶವನ್ನು ಬಳಸಲಾಗುತ್ತದೆ.
    • ಅಗ್ರ ಜಿಲ್ಲೆಗಳು:- ಬೆಳಗಾವಿಯಲ್ಲಿ ಅತಿ ಹೆಚ್ಚು ಅಂದರೆ 59 ನೀರಿನ ಚಿಲುಮೆಗಳನ್ನು ವರದಿಯಾಗಿದ್ದಾರೆ, ನಂತರದ ಸ್ಥಾನಗಳಲ್ಲಿ ಉತ್ತರ ಕನ್ನಡ (31), ಚಾಮರಾಜನಗರ (23) ಮತ್ತು ಕೊಡಗು (23) ಇವೆ.
    • ಪರಿಸರ ಆರೋಗ್ಯ:- 274 ಚಿಲುಮೆಗಳಲ್ಲಿ, 144 ಸಾರ್ವಕಾಲಿಕ (ವರ್ಷಪೂರ್ತಿ ಹರಿಯುವ), 114 ಋತುಮಾನ ಆಧಾರಿತವಾಗಿದ್ದು, ಮತ್ತು 16 ಚಿಲುಮೆಗಳು ಬತ್ತಿಹೋಗಿವೆ.
    • ಪ್ರಮುಖ ನದಿಗಳ ಉಗಮಸ್ಥಾನ:-
    1. ತಲಕಾವೇರಿಯಲ್ಲಿ ಕಾವೇರಿ,
    2. ಜಾವಳಿಯಲ್ಲಿ ಹೇಮಾವತಿ, ಮತ್ತು
    3. ಅಂಬುತೀರ್ಥದಲ್ಲಿ ಶರಾವತಿ ಸೇರಿದಂತೆ ನದಿಗಳ ಉಗಮಸ್ಥಾನಗಳಾಗಿ ಕಾರ್ಯನಿರ್ವಹಿಸುವ ಚಿಲುಮೆಗಳನ್ನು ವರದಿಯು ನಿರ್ದಿಷ್ಟವಾಗಿ ಭೌಗೋಳಿಕವಾಗಿ ಗುರುತಿಸಿದೆ.

    ನೀರಿನ ಚಿಲುಮೆಗಳ (Springs) ಬಗ್ಗೆ:

    • ಇವು ಭೂಮಿಯ ಮೇಲ್ಮೈಗೆ ಅಂತರ್ಜಲದ ನೈಸರ್ಗಿಕ ಹೊರಹರಿವುಗಳಾಗಿದ್ದು, ಬಿರುಕುಬಿಟ್ಟ, ನೀರಿನಿಂದ ಕರಗುವ ಕಲ್ಲುಗಳಿಂದ ರೂಪಗೊಂಡ ಭೂದೃಶ್ಯ (Karst) ಅಥವಾ ದೋಷಯುಕ್ತ ಭೂಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.
    • ಹಿಮಾಲಯದಲ್ಲಿನ ಜಲ ಭದ್ರತೆಗೆ ಇವು ನಿರ್ಣಾಯಕವಾಗಿವೆ, ಆದಾಗ್ಯೂ ಹವಾಮಾನ ಬದಲಾವಣೆಯಿಂದಾಗಿ ಇವು ಬತ್ತಿಹೋಗುತ್ತಿವೆ.
    • ಪ್ರಕಾರಗಳು ಮತ್ತು ರಚನೆ:- ಅಂತರ್ಜಲ ಮಟ್ಟವು ಭೂಮಿಯ ಮೇಲ್ಮೈಯನ್ನು ತಲುಪಿದಾಗ ಅಥವಾ ಬಿರುಕುಗಳ ಮೂಲಕ ಇವು ರೂಪುಗೊಳ್ಳುತ್ತವೆ. ನೀರು ಇಂಗದ ಬಂಡೆಗಳಿಂದ ನಿರ್ಬಂಧಿಸಲ್ಪಟ್ಟ, ನೀರು ಇಂಗುವ ಪದರಗಳಲ್ಲಿ ಇವು ಕಂಡುಬರುತ್ತವೆ (ಇದನ್ನು ‘ಸಂಪರ್ಕ ಚಿಲುಮೆಗಳು’ಎನ್ನಲಾಗುತ್ತದೆ).
    • ಭಾರತದಲ್ಲಿ ಬಿಸಿನೀರಿನ ಚಿಲುಮೆಗಳು:- ಹಿಮಾಲಯ ಪ್ರದೇಶದಂತಹ (ಮಣಿಕರಣ್, ಪುಗಾ ಕಣಿವೆ, ಯುಮ್ಥಾಂಗ್) ಆಳವಾದ ಭೂ-ಬಿರುಕುಗಳ ಉದ್ದಕ್ಕೂ ಇವು ಕಂಡುಬರುತ್ತವೆ.
    • ಪ್ರಾಮುಖ್ಯತೆ:- ನೀರಾವರಿ ಮತ್ತು ಕುಡಿಯಲು ನೀರನ್ನು ಒದಗಿಸುತ್ತವೆ ಹಾಗೂ ಜೀವವೈವಿಧ್ಯತೆಗೆ ಇವು ಅತ್ಯಗತ್ಯವಾಗಿವೆ.
    • 1000 ಚಿಲುಮೆಗಳ ಉಪಕ್ರಮ (1000 Springs Initiative):- ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ನೀರು ಮತ್ತು ಜೀವನೋಪಾಯವನ್ನು ಒದಗಿಸಲು GIS ಆಧಾರಿತ ಚಿಲುಮೆಗಳ ಸ್ಥಳ-ದತ್ತಾಂಶ ನಕ್ಷೀಕರಣವನ್ನು ಬಳಸುವ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಯೋಜನೆಯಾಗಿದೆ.
    • ಅಪಾಯಗಳು:- ಹವಾಮಾನ ಬದಲಾವಣೆ ಮತ್ತು ಅತಿಯಾಗಿ ಅಂತರ್ಜಲ ಹೊರತೆಗೆಯುವಿಕೆಯು, ವಿಶೇಷವಾಗಿ ಹಿಮಾಲಯದ ವಲಯದಲ್ಲಿ ಸಾರ್ವಕಾಲಿಕ ಚಿಲುಮೆಗಳ ಕಡಿತಕ್ಕೆ ಕಾರಣವಾಗುತ್ತಿದೆ.
  • ಕರ್ನಾಟಕ ದರ್ಶನ ಅಭ್ಯಾಸ ಪ್ರಶ್ನೆಗಳು  (MCQ’s)

    ಕರ್ನಾಟಕ ದರ್ಶನ ಅಭ್ಯಾಸ ಪ್ರಶ್ನೆಗಳು  (MCQ’s)

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕೋರಮಂಗಲ-ಚಲ್ಲಘಟ್ಟ (KC) ಕಣಿವೆ ಯೋಜನೆಯು ಸಂಸ್ಕರಿಸಿದ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ಮೂಲಕ ಅಂತರ್ಜಲ ಮರುಪೂರಣ ಮತ್ತು ಬರ ತಗ್ಗಿಸುವ ಗುರಿಯನ್ನು ಹೊಂದಿದೆ.
    2. ಕರ್ನಾಟಕ ಸರ್ಕಾರದಿಂದ ಸಂಪೂರ್ಣವಾಗಿ ಹಣಕಾಸು ಒದಗಿಸಲಾದ ಈ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ ಮತ್ತು ಬೆಂಗಳೂರಿನ ಒಳಚರಂಡಿ ಸಂಸ್ಕರಣಾ ಘಟಕಗಳಿಂದ ದ್ವಿತೀಯಕ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬಳಸಿಕೊಳ್ಳಲಾಗುತ್ತದೆ.
    3. ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸಿದ ನಂತರ ಕುಡಿಯುವ ನೀರಿನ ಉದ್ದೇಶಗಳಿಗಾಗಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ನೇರವಾಗಿ ಬಳಸಲು ಈ ಯೋಜನೆಯು ಅನುಮತಿಸುತ್ತದೆ.
    4. ಈ ಯೋಜನೆಯು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳಲ್ಲಿ 100 ಕ್ಕೂ ಹೆಚ್ಚು ಅಂತರ್ ಸಂಪರ್ಕಿತ ಸಣ್ಣ ನೀರಾವರಿ ಕೆರೆಗಳನ್ನು ತುಂಬುವುದನ್ನು ಒಳಗೊಂಡಿರುತ್ತದೆ ಮತ್ತು ಕೋಲಾರದ ಕೆಲವು ಭಾಗಗಳಲ್ಲಿ ಅಂತರ್ಜಲದ ಮಟ್ಟವನ್ನು ಗಮನಾರ್ಹವಾಗಿ ಸುಧಾರಿಸಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಸೈಬರ್ ಭದ್ರತೆಗಾಗಿ ಶ್ರೇಷ್ಠತೆಯ ಕೇಂದ್ರ (CySecK) ವರದಿಯ ಪ್ರಕಾರ, 2025–26ರಲ್ಲಿ ಭಾರತದ ಒಟ್ಟು ರಾನ್ಸಮ್‌ವೇರ್ ಪ್ರಕರಣಗಳಲ್ಲಿ ಕರ್ನಾಟಕವು ಸುಮಾರು 9% ರಷ್ಟಿದೆ.
    2. ಸರ್ಕಾರಿ ಇಲಾಖೆಗಳು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಒಟ್ಟಾಗಿ ರಾಜ್ಯದಲ್ಲಿ 6.8 ದಶಲಕ್ಷಕ್ಕಿಂತಲೂ ಹೆಚ್ಚು ಮಾಲ್‌ವೇರ್ ದಾಳಿಗಳನ್ನು ಎದುರಿಸಿವೆ.
    3. ಫೆಬ್ರವರಿ 2025 ರಲ್ಲಿ ಕಾವೇರಿ 2.0 ಮೇಲಿನ DDoS ದಾಳಿಯು ಅಂದಾಜು ದೈನಂದಿನ ಆದಾಯ ನಷ್ಟ ₹100 ಕೋಟಿ ಮೀರಿದೆ.
    4. 2019 ರಲ್ಲಿ ಸ್ಥಾಪನೆಯಾದ CySecK, ಸೈಬರ್ ಭದ್ರತಾ ಸಿದ್ಧತೆಯನ್ನು ಹೆಚ್ಚಿಸಲು ಸರ್ಕಾರ, ಉದ್ಯಮ, ನವೋದ್ಯಮಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಯೋಗ ಹೊಂದಿರುವ ರಾಜ್ಯದ ಉಪಕ್ರಮವಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 3 ಮಾತ್ರ
    2. 2, 3 ಮತ್ತು 4 ಮಾತ್ರ
    3. 1, 2 ಮತ್ತು 4 ಮಾತ್ರ
    4. 1, 2, 3 ಮತ್ತು 4

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ವಿದ್ಯಾರ್ಥಿಗಳಲ್ಲಿ ಸಮತೋಲಿತ ಡಿಜಿಟಲ್ ಅಭ್ಯಾಸಗಳನ್ನು ಉತ್ತೇಜಿಸಲು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ‘ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ಡಿಜಿಟಲ್ ಬಳಕೆ’ ಕುರಿತ ಕರಡು ನೀತಿಯನ್ನು ಬಿಡುಗಡೆ ಮಾಡಿದೆ.
    2. ಈ ನೀತಿಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ವ್ಯಕ್ತಿಗಳಿಗೆ ಸಾಮಾಜಿಕ ಮಾಧ್ಯಮ ಬಳಕೆಯ ಮೇಲೆ ಸಂಪೂರ್ಣ ಕಾನೂನು ನಿಷೇಧವನ್ನು ಪ್ರಸ್ತಾಪಿಸುತ್ತದೆ.
    3. ಇದನ್ನು ನಿಮ್ಹಾನ್ಸ್ ಮತ್ತು ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದಂತಹ ಸಂಸ್ಥೆಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
    4. ಶಾಲೆಗಳು ಡಿಜಿಟಲ್ ಡಿಟಾಕ್ಸ್ ಕಾರ್ಯಕ್ರಮಗಳು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಸೇರಿದಂತೆ ತಡೆಗಟ್ಟುವ ತಂತ್ರಗಳನ್ನು ಕಾರ್ಯಗತಗೊಳಿಸುವ ನಿರೀಕ್ಷೆಯಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿದೆ/ವೆ?

    1. ಎರಡು ಮಾತ್ರ
    2. ಮೂರು ಮಾತ್ರ
    3. ಒಂದು ಮಾತ್ರ
    4. ಎಲ್ಲಾ ನಾಲ್ಕು

     

    1. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೊಸ ವೀಕ್ಷಣಾ ಗೋಪುರವನ್ನು ಸ್ಥಾಪಿಸುವ ಬಗ್ಗೆ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿರುವುದು ಈ ಕೆಳಗಿನ ಯಾವುದರ ನಡುವೆ:
    1. ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ
    2. ರೋಹಿಣಿ ನಿಲೇಕಣಿ ದತ್ತಿ ಸಂಸ್ಥೆ ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನ
    3. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ
    4. ಕೇಂದ್ರ ಪರಿಸರ ಸಚಿವಾಲಯ ಮತ್ತು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ 

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕರ್ನಾಟಕದ ಮೊದಲ ನೈಸರ್ಗಿಕ ಬುಗ್ಗೆಗಳ ಗಣತಿಯನ್ನು ಕರ್ನಾಟಕ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ನಡೆಸಿತು.
    2. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು 274 ಬುಗ್ಗೆಗಳನ್ನು ಗುರುತಿಸಲಾಗಿದೆ, ಬೆಳಗಾವಿ ಅತಿ ಹೆಚ್ಚು ಸಂಖ್ಯೆಯನ್ನು ವರದಿ ಮಾಡಿದೆ.
    3. ಪಶ್ಚಿಮ ಘಟ್ಟಗಳು ಮತ್ತು ಮಲೆನಾಡು ಪ್ರದೇಶವು ಭಾರೀ ಮಳೆ ಮತ್ತು ಭೌಗೋಳಿಕ ಸ್ಥಿತಿಗಳಿಂದಾಗಿ ಹೆಚ್ಚಿನ ಬುಗ್ಗೆಗಳ ಸಾಂದ್ರತೆಯನ್ನು ಹೊಂದಿದೆ.
    4. ಕರ್ನಾಟಕವು ದಕ್ಷಿಣ ಕನ್ನಡ ಜಿಲ್ಲೆಯ ಬೆಂದ್ರು ತೀರ್ಥದಲ್ಲಿ ಒಂದು ಬಿಸಿನೀರಿನ ಬುಗ್ಗೆಯನ್ನು ಹೊಂದಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿಲ್ಲ?

    1. ಎರಡು ಮಾತ್ರ
    2. ಮೂರು ಮಾತ್ರ
    3. ಎಲ್ಲಾ ನಾಲ್ಕು
    4. ಯಾವುದೂ ಇಲ್ಲ

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. CALM-Brain ಎಂಬುದು ಪ್ರಮುಖ ಮನೋವೈದ್ಯಕೀಯ ರೋಗಗಳ ಮೇಲೆ ಕೇಂದ್ರೀಕರಿಸಿದ ಮೆದುಳಿನ ದತ್ತಾಂಶಕ್ಕಾಗಿ ಭಾರತದ ಮೊದಲ ಡಿಜಿಟಲ್ ದತ್ತಾoಶ ಆಧಾರಿತ ವ್ಯವಸ್ಥೆ ಆಗಿದೆ.
    2. ಇದನ್ನು ರೋಹಿಣಿ ನಿಲೇಕಣಿ ಸೆಂಟರ್ ಫಾರ್ ಬ್ರೈನ್ ಅಂಡ್ ಮೈಂಡ್, NIMHANS ಮತ್ತು ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
    3. ಈ ದತ್ತಾoಶ ಆಧಾರಿತ ವ್ಯವಸ್ಥೆ ಪಾರ್ಕಿನ್ಸನ್ ಕಾಯಿಲೆ ಮತ್ತು ಆಲ್ಝೈಮರ್ ಕಾಯಿಲೆಯಂತಹ ನರವೈಜ್ಞಾನಿಕ ಕಾಯಿಲೆಗಳನ್ನು ಅದರ ಪ್ರಾಥಮಿಕ ದೃಷ್ಟಿಯಾಗಿ ಒಳಗೊಂಡಿದೆ.
    4. ಡೇಟಾಸೆಟ್ ಕಾಂಡಕೋಶ ಜೈವಿಕ ಭಂಡಾರಕ್ಕೆ ಸಂಪರ್ಕ ಹೊಂದಿದ್ದು, ತೀವ್ರ ಮಾನಸಿಕ ಕಾಯಿಲೆಗಳ ಜೈವಿಕ ಆಧಾರದ ಬಗ್ಗೆ ಸಂಶೋಧನೆಗೆ ಅನುವು ಮಾಡಿಕೊಡುತ್ತದೆ.
    5. ಇದನ್ನು 2016 ರಲ್ಲಿ ADBS ಯೋಜನೆಯ ಭಾಗವಾಗಿ ಪ್ರಾರಂಭಿಸಲಾಯಿತು, ಇದನ್ನು ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಪ್ರತೀಕ್ಷಾ ಟ್ರಸ್ಟ್‌ನಿಂದ ಹಣಕಾಸು ಒದಗಿಸಲಾಯಿತು.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2, 4 ಮತ್ತು 5 ಮಾತ್ರ
    2. 1, 3, 4 ಮತ್ತು 5 ಮಾತ್ರ
    3. 2, 3  ಮತ್ತು 4 ಮಾತ್ರ
    4. 1, 2, 3 ಮತ್ತು 4 ಮಾತ್ರ

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕರ್ನಾಟಕ ಸರ್ಕಾರವು 2026–27 ಶೈಕ್ಷಣಿಕ ವರ್ಷಕ್ಕೆ 1 ನೇ ತರಗತಿ, LKG ಮತ್ತು UKG ಪ್ರವೇಶಕ್ಕೆ ಕನಿಷ್ಠ ವಯಸ್ಸಿನ ಅವಶ್ಯಕತೆಯಲ್ಲಿ 60 ದಿನಗಳ ಸಡಿಲಿಕೆಯನ್ನು ಒದಗಿಸಿದೆ.
    2. ಸಡಿಲಿಕೆಯ ನಿಯಮದಡಿಯಲ್ಲಿ, ಜೂನ್ 1 ರೊಳಗೆ ಕನಿಷ್ಠ 5 ವರ್ಷ ಮತ್ತು 10 ತಿಂಗಳ ವಯಸ್ಸಿನ ಮಕ್ಕಳು 1 ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.
    3. ಶಾಲಾ ಪ್ರವೇಶದ ವಯಸ್ಸನ್ನು ಪ್ರಮಾಣೀಕರಿಸಲು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಅನುಷ್ಠಾನದ ಭಾಗವಾಗಿ ಸಡಿಲಿಕೆಯನ್ನು ಪರಿಚಯಿಸಲಾಯಿತು.
    4. ಜೂನ್ 1 ರೊಳಗೆ ಕನಿಷ್ಠ 6 ವರ್ಷ ವಯಸ್ಸನ್ನು ಹೊಂದಿರಬೇಕು ಎಂಬ ಹಿಂದಿನ ನಿಯಮವನ್ನು 2022 ರಲ್ಲಿ NEP 2020 ಮತ್ತು ಶಿಕ್ಷಣ ಹಕ್ಕು (RTE) ಕಾಯ್ದೆಗೆ ಅನುಗುಣವಾಗಿ ಪರಿಚಯಿಸಲಾಯಿತು.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2, 3 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 1, 2 ಮತ್ತು 4 ಮಾತ್ರ
    4. 1, 2, 3 ಮತ್ತು 4

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ “ಪಾರದರ್ಶಕ ನೇಮಕಾತಿ ಮತ್ತು ತರಬೇತಿ ಕಾರ್ಯಕ್ರಮ” ಕ್ಕಾಗಿ ನವದೆಹಲಿಯಲ್ಲಿ 2025 ರಲ್ಲಿ SKOCH ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಿತು.
    2. ನಿಗಮವು ಸ್ವಯಂಚಾಲಿತ ಚಾಲನಾ ಪರೀಕ್ಷೆಗಳು ಮತ್ತು ಆನ್‌ಲೈನ್ ಪರೀಕ್ಷೆಗಳನ್ನು ಒಳಗೊಂಡಂತೆ ತಂತ್ರಜ್ಞಾನ-ಚಾಲಿತ ನೇಮಕಾತಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.
    3. ಈ ಉಪಕ್ರಮದ ಅಡಿಯಲ್ಲಿ ನೇಮಕಾತಿ ಪ್ರಕ್ರಿಯೆಯು ದೃಢೀಕರಣವನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಹಸ್ತಚಾಲಿತ ದಾಖಲೆ ಪರಿಶೀಲನೆಯನ್ನು ಅವಲಂಬಿಸಿದೆ.
    4. ನೇಮಕಾತಿ ಪ್ರಕ್ರಿಯೆಯಲ್ಲಿ ದಕ್ಷತೆ ಮತ್ತು ಸುರಕ್ಷತೆಯನ್ನು ಸುಧಾರಿಸಲು ಡಿಜಿಟಲ್ ದಾಖಲೆ ಪರಿಶೀಲನೆಯನ್ನು ಪರಿಚಯಿಸಲಾಗಿದೆ.

     ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಉಡಾನ್ ಯೋಜನೆಯಡಿಯಲ್ಲಿ, ಅಕ್ಟೋಬರ್ 31, 2025 ರ ಹೊತ್ತಿಗೆ ಕರ್ನಾಟಕದಲ್ಲಿ ಪ್ರಾದೇಶಿಕ ವಿಮಾನ ನಿಲ್ದಾಣಗಳನ್ನು ಕಾರ್ಯಗತಗೊಳಿಸಲು ₹146.89 ಕೋಟಿ ಖರ್ಚು ಮಾಡಲಾಗಿದೆ.
    2. ಬೀದರ್, ಮೈಸೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗ ಸೇರಿದಂತೆ ಒಟ್ಟು ಏಳು ವಿಮಾನ ನಿಲ್ದಾಣಗಳನ್ನು ರಾಜ್ಯದಲ್ಲಿ ಈ ಯೋಜನೆಯಡಿಯಲ್ಲಿ ಕಾರ್ಯಗತಗೊಳಿಸಲಾಗಿದೆ.
    3. ವಿದ್ಯಾನಗರ ಮತ್ತು ಬೀದರ್ ನಂತಹ ವಿಮಾನ ನಿಲ್ದಾಣಗಳು ಕರ್ನಾಟಕದಲ್ಲಿ ಈ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
    4. ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸಲು ಉಡಾನ್ ಯೋಜನೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಜಾರಿಗೆ ತಂದಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1, 2 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಉಪಶಮನಕಾರಿ ಆರೈಕೆ ಸೇವೆಗಳನ್ನು ಬಲಪಡಿಸಲು ತಾಂತ್ರಿಕ ಸಲಹಾ ಸಮಿತಿ (TAC) ಅನ್ನು ರಚಿಸಿದೆ.
    2. ಈ ಸಮಿತಿಯು ಕೇಂದ್ರ ಆರೋಗ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿದ್ದು, ಸರ್ಕಾರಿ ವೈದ್ಯಕೀಯ ಸಂಸ್ಥೆಗಳನ್ನು ಮಾತ್ರ ಸದಸ್ಯರನ್ನಾಗಿ ಒಳಗೊಂಡಿದೆ.
    3. ಈ ಉಪಕ್ರಮವು ರಾಷ್ಟ್ರೀಯ ಉಪಶಮನಕಾರಿ ಆರೈಕೆ ಕಾರ್ಯಕ್ರಮದೊಂದಿಗೆ ಹೊಂದಿಕೆಯಾಗುತ್ತದೆ ಮತ್ತು ಕೇರಳದಲ್ಲಿ ಅನುಸರಿಸಲಾಗುವ ಸಮುದಾಯ ಆಧಾರಿತ ಮಾದರಿಯಿಂದ ಸ್ಫೂರ್ತಿ ಪಡೆದಿದೆ.
    4. ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆ ನೋಡಲ್ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಈ ಸಮಿತಿಯು ಪ್ಯಾಲಿಯಮ್ ಇಂಡಿಯಾ ಮತ್ತು ಕರುಣಾಶ್ರಯ ಟ್ರಸ್ಟ್‌ನಂತಹ NGOಗಳ ಪ್ರತಿನಿಧಿಗಳನ್ನು ಒಳಗೊಂಡಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1, 2 ಮತ್ತು 3 ಮಾತ್ರ
    3. 1, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಹೊರರಾಜ್ಯಗಳ ದಂಡಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಕರ್ನಾಟಕ ಸಾರಿಗೆ ಇಲಾಖೆಯು ಮಾಲಿನ್ಯ ನಿಯಂತ್ರಣದಲ್ಲಿರುವ (PUC) ದಾಖಲೆಗಳನ್ನು ರಾಷ್ಟ್ರೀಯ ವಾಹನ್ ಪೋರ್ಟಲ್‌ನೊಂದಿಗೆ ಸಂಯೋಜಿಸುತ್ತಿದೆ.
    2. ಏಪ್ರಿಲ್ 1, 2026 ರಿಂದ ನೀಡಲಾದ ಎಲ್ಲಾ PUC ಪ್ರಮಾಣಪತ್ರಗಳಿಗೆ ಏಕೀಕರಣವು ಅನ್ವಯಿಸುತ್ತದೆ, ಆದರೆ ತಾಂತ್ರಿಕ ಮಿತಿಗಳಿಂದಾಗಿ ಹಳೆಯ ಪ್ರಮಾಣಪತ್ರಗಳನ್ನು ಜೋಡಣೆ ಮಾಡಲಾಗುವುದಿಲ್ಲ.
    3. ಮೋಟಾರು ವಾಹನ ಕಾಯ್ದೆ, 1988 ರ ಅಡಿಯಲ್ಲಿ, ಮಾನ್ಯ PUC ಪ್ರಮಾಣಪತ್ರವಿಲ್ಲದೆ ಚಾಲನೆ ಮಾಡುವುದು ₹1,000 ದಂಡವನ್ನು ವಿಧಿಸುತ್ತದೆ.
    4. ಈ ಉಪಕ್ರಮವು ಜಾರಿಗೊಳಿಸುವಿಕೆಯನ್ನು ಸುಗಮಗೊಳಿಸಲು ಮತ್ತು ರಾಜ್ಯಗಳಾದ್ಯಂತ ದಂಡಗಳ ನಕಲು ತಡೆಯಲು ನಿರೀಕ್ಷಿಸಲಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು “ತರಬೇತಿ ಮತ್ತು ಸಂಸ್ಥೆ ಅಭಿವೃದ್ಧಿಯಲ್ಲಿ ಅತ್ಯುತ್ತಮ” ವಿಭಾಗದ ಅಡಿಯಲ್ಲಿ 2026 ರ ವಿಶ್ವ ಮಾನವ ಸಂಪನ್ಮೂಲ ಅಭಿವೃದ್ಧಿ ಕಾಂಗ್ರೆಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
    2. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೇರಳದ ಕೊಚ್ಚಿಯಲ್ಲಿ ನಡೆಸಲಾಯಿತು.
    3. KSRTC ಯ ತರಬೇತಿ ಕಾರ್ಯಕ್ರಮಗಳು ಸಿಮ್ಯುಲೇಟರ್/ಅನುಕರಣೆ ಆಧಾರಿತ ಚಾಲನಾ ತಂತ್ರಗಳಿಗೆ ಮಾತ್ರ ಸೀಮಿತವಾಗಿವೆ.
    4. ತರಬೇತಿ ಉಪಕ್ರಮಗಳಲ್ಲಿ ಇಂಧನ ದಕ್ಷತೆ, ಪುನಶ್ಚೇತನ ತರಗತಿಗಳು, ಅಪಘಾತ-ಮುಕ್ತ ಚಾಲನೆ ಮತ್ತು ರಸ್ತೆ ಸುರಕ್ಷತೆಯ ಅರಿವು ಸೇರಿವೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 3 ಮತ್ತು 4 ಮಾತ್ರ
    2. 1, 2 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಮಹಾರಾಷ್ಟ್ರದ ನಂತರ, ಕರ್ನಾಟಕವು GST ಸಂಗ್ರಹದಲ್ಲಿ ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ.
    2. ರಾಜ್ಯವು ₹1.58 ಲಕ್ಷ ಕೋಟಿ GST ಸಂಗ್ರಹವನ್ನು ದಾಖಲಿಸಿದೆ, ಇದು ಹಿಂದಿನ ಹಣಕಾಸು ವರ್ಷಕ್ಕಿಂತ ಶೇ. 11.6 ರಷ್ಟು ಬೆಳವಣಿಗೆಯಾಗಿದೆ.
    3. GST ದರ ತರ್ಕಬದ್ಧಗೊಳಿಸುವಿಕೆಯು 2025–26 ರಲ್ಲಿ ಕರ್ನಾಟಕಕ್ಕೆ ₹10,000 ಕೋಟಿ ಆದಾಯ ನಷ್ಟಕ್ಕೆ ಕಾರಣವಾಯಿತು.
    4. 2026–27 ರಲ್ಲಿ GST ಬದಲಾವಣೆಗಳಿಂದಾಗಿ ರಾಜ್ಯವು ಮತ್ತಷ್ಟು ಆದಾಯ ನಷ್ಟವನ್ನು ನಿರೀಕ್ಷಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?

    1. ಎರಡು ಮಾತ್ರ
    2. ಮೂರು ಮಾತ್ರ
    3. ಎಲ್ಲಾ ನಾಲ್ಕು
    4. ಒಂದು ಮಾತ್ರ

    ಉತ್ತರ: C

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯು ಪಶ್ಚಿಮ ಘಟ್ಟಗಳಿಂದ ಪಶ್ಚಿಮಕ್ಕೆ ಹರಿಯುವ ಹೊಳೆಗಳಿಂದ ನೇತ್ರಾವತಿ ನದಿ ಜಲಾನಯನ ಪ್ರದೇಶದ ನೀರಿನ ಕೊರತೆಯಿರುವ ಪ್ರದೇಶಗಳಿಗೆ ನೀರನ್ನು ತಿರುಗಿಸುವ ಗುರಿಯನ್ನು ಹೊಂದಿದೆ.
    2. ಈ ಯೋಜನೆಯು ಪ್ರಾಥಮಿಕವಾಗಿ ಕರ್ನಾಟಕದ ಶುಷ್ಕ ಪ್ರದೇಶಗಳಲ್ಲಿ ಸುಮಾರು 75 ಲಕ್ಷ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಪ್ರಯತ್ನಿಸುತ್ತದೆ.
    3. ಈ ಯೋಜನೆಯು ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು ಮತ್ತು ಹಾಸನದಂತಹ ಏಳು ಬರ ಪೀಡಿತ ಜಿಲ್ಲೆಗಳಿಗೆ ಪ್ರಯೋಜನೆಯನ್ನು ಒದಗಿಸಲಿದೆ.
    4. ಈ ಯೋಜನೆಯನ್ನು ಮುಖ್ಯವಾಗಿ ಕರಾವಳಿ ಕರ್ನಾಟಕದಲ್ಲಿ ಜಲವಿದ್ಯುತ್ ಉತ್ಪಾದನೆಗಾಗಿ ವಿನ್ಯಾಸಗೊಳಿಸಲಾಗಿದೆ.

    ಮೇಲೆ ನೀಡಲಾದ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?

    1. ಎರಡು ಮಾತ್ರ
    2. ಮೂರು ಮಾತ್ರ
    3. ಎಲ್ಲಾ ನಾಲ್ಕು
    4. ಎಲ್ಲವೂ ಸರಿಯಾಗಿವೆ

    ಉತ್ತರ: D

     

    1. ನಮೋ ಡ್ರೋನ್ ದೀದಿ ಯೋಜನೆ (NDDY) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕರ್ನಾಟಕವು ಭಾರತದಲ್ಲಿ ಅತಿ ಹೆಚ್ಚು ಮಹಿಳಾ ಸ್ವಸಹಾಯ ಗುಂಪು ಸದಸ್ಯರಿಗೆ ಡ್ರೋನ್ ಪೈಲಟ್‌ಗಳಾಗಿ ತರಬೇತಿ ನಡಿದೆ.
    2. ಈ ಯೋಜನೆಯಡಿಯಲ್ಲಿ ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿವೆ.
    3. ಕೊಪ್ಪಳ, ಕಲಬುರಗಿ ಮತ್ತು ಮಂಡ್ಯ ಜಿಲ್ಲೆಗಳು ರಾಜ್ಯದಲ್ಲಿ ಮೊದಲ ಮೂರು ಪ್ರದರ್ಶನ ನೀಡುವ ಜಿಲ್ಲೆಗಳಾಗಿವೆ.
    4. ಈ ಯೋಜನೆಯು ಮಹಿಳಾ ಸ್ವಸಹಾಯ ಗುಂಪುಗಳನ್ನು ಸಬಲೀಕರಣಗೊಳಿಸುವುದು, ಡ್ರೋನ್‌ಗಳನ್ನು ಬಳಸಿಕೊಂಡು ಕೃಷಿ ದಕ್ಷತೆಯನ್ನು ಸುಧಾರಿಸುವುದು, ಬೆಳೆ ಇಳುವರಿಯನ್ನು ಹೆಚ್ಚಿಸುವುದು ಮತ್ತು ಸಾಂಪ್ರದಾಯಿಕ ರೂಢಿಗಳನ್ನು ಮುರಿಯುವ ಗುರಿಯನ್ನು ಹೊಂದಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1 ಮತ್ತು 2 ಮಾತ್ರ
    2. 1, 2 ಮತ್ತು 3 ಮಾತ್ರ
    3. 1, 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: D

     

    1. ಕರ್ನಾಟಕದಲ್ಲಿ ಜೋಡಿಯಾಗಿರುವ ಮೂತ್ರಪಿಂಡ ವಿನಿಮಯ ಕಸಿ ಮಾರ್ಗಸೂಚಿಗಳ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. 1994 ರ ಮಾನವ ಅಂಗಗಳು ಮತ್ತು ಅಂಗಾಂಶಗಳ ಕಸಿ ಕಾಯ್ದೆಯು ಎರಡಕ್ಕಿಂತ ಹೆಚ್ಚು ದಾನಿ-ಸ್ವೀಕರಿಸುವವರ ಜೋಡಿಗಳನ್ನು ಒಳಗೊಂಡ ಬಹು-ಜೋಡಿ ಮೂತ್ರಪಿಂಡ ವಿನಿಮಯ ಕಸಿಗಳನ್ನು ಸ್ಪಷ್ಟವಾಗಿ ಅನುಮತಿಸುತ್ತದೆ.
    2. ಭಾರತೀಯ ಅಂಗಾಂಗ ಕಸಿ ಸಂಘ vs. ಭಾರತ ಒಕ್ಕೂಟದಲ್ಲಿ 2025 ರ ಸುಪ್ರೀಂ ಕೋರ್ಟ್ ತೀರ್ಪಿನಿಂದ ಬೆಂಬಲಿತವಾದ ಕಾನೂನಿನಲ್ಲಿ ನಿಷೇಧದ ಅನುಪಸ್ಥಿತಿಯ ಆಧಾರದ ಮೇಲೆ ಕರ್ನಾಟಕ ಬಹು-ಜೋಡಿ ಮೂತ್ರಪಿಂಡ ವಿನಿಮಯವನ್ನು ಅನುಮತಿಸಿದೆ.
    3. ವಿನಿಮಯದಲ್ಲಿ ಪ್ರತಿಯೊಬ್ಬ ದಾನಿಯು ಅವರ ಮೂಲ ಉದ್ದೇಶಿತ ಸ್ವೀಕರಿಸುವವರ ಹತ್ತಿರದ ಸಂಬಂಧಿಯಾಗಿರಬೇಕು ಮತ್ತು ಹೊಂದಾಣಿಕೆಯಾಗದಿರುವಿಕೆಯನ್ನು ವೈದ್ಯಕೀಯವಾಗಿ ದಾಖಲಿಸಬೇಕು.
    4. ಬಹು-ಜೋಡಿ ವಿನಿಮಯಗಳಿಗೆ ಅನುಮೋದನೆಯನ್ನು ಯಾವುದೇ ರಾಜ್ಯ ಪ್ರಾಧಿಕಾರದ ಒಳಗೊಳ್ಳುವಿಕೆ ಇಲ್ಲದೆ ಆಸ್ಪತ್ರೆ ಮಟ್ಟದ ಸಮಿತಿಗಳು ನೀಡುತ್ತವೆ.

    ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. 2 ಮತ್ತು 3 ಮಾತ್ರ
    2. 1, 2 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 3 ಮತ್ತು 4 ಮಾತ್ರ

    ಉತ್ತರ: A

     

    1. ಭಾರತದಲ್ಲಿ ಎಲೆಕ್ಟ್ರಿಕ್ ವಾಹನ (EV) ಚಾರ್ಜಿಂಗ್ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ತೈಲ ಮಾರುಕಟ್ಟೆ ಕಂಪನಿಗಳು (OMCಗಳು) ಸ್ಥಾಪಿಸಿದ EV ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳಿಗೆ ಕರ್ನಾಟಕವು ಭಾರತದ ಅತಿದೊಡ್ಡ ಕೇಂದ್ರವಾಗಿದೆ.
    2. ಭಾರತದಲ್ಲಿ OMCಗಳು ಸ್ಥಾಪಿಸಿದ ಒಟ್ಟು EV ಚಾರ್ಜಿಂಗ್ ಕೇಂದ್ರಗಳಲ್ಲಿ, ಬಹುಪಾಲು ಕಾರ್ಯನಿರ್ವಹಿಸುತ್ತಿವೆ.
    3. FAME-II ಯೋಜನೆಯಡಿಯಲ್ಲಿ, EV ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ಬಿಡುಗಡೆಯಾದ ಮೊತ್ತವು ಮಂಜೂರಾದ ಮೊತ್ತಕ್ಕಿಂತ ಕಡಿಮೆಯಾಗಿದೆ.
    4. ಪಿಎಂ ಇ-ಡ್ರೈವ್ ಯೋಜನೆಯು EV ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ಹಣವನ್ನು ಹಂಚಿಕೆ ಮಾಡಿದೆ, ಆದರೆ ಇಲ್ಲಿಯವರೆಗೆ ಯಾವುದೇ ಹಣವನ್ನು ಬಿಡುಗಡೆ ಮಾಡಿಲ್ಲ.

    ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. 1, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 2, 3 ಮತ್ತು 4 ಮಾತ್ರ
    4. 2 ಮತ್ತು 4 ಮಾತ್ರ

    ಉತ್ತರ: C

     

    1. ಅಂತರ್ಜಲ ಮೌಲ್ಯಮಾಪನ ವರದಿ, 2025 ರ ಪ್ರಕಾರ ಕರ್ನಾಟಕದ ಅಂತರ್ಜಲ ಸ್ಥಿತಿಯ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕರ್ನಾಟಕದಲ್ಲಿ ಒಟ್ಟಾರೆ ಅಂತರ್ಜಲ ಹೊರತೆಗೆಯುವಿಕೆಯು 2024 ರಲ್ಲಿ 68.44% ರಿಂದ 2025 ರಲ್ಲಿ 66.49% ಕ್ಕೆ ಇಳಿದಿದೆ, ಇದು ಸುಧಾರಿತ ಸುಸ್ಥಿರತೆಯನ್ನು ಸೂಚಿಸುತ್ತದೆ.
    2. ಅದೇ ಅವಧಿಯಲ್ಲಿ ವಾರ್ಷಿಕ ಅಂತರ್ಜಲ ಪುನರ್ಭರ್ತಿ ಸಾಮರ್ಥ್ಯವು 18.74 BCM ನಿಂದ 19.28 BCM ಗೆ ಹೆಚ್ಚಾಗಿದೆ.
    3. ದೇಶೀಯ ಅಂತರ್ಜಲ ಹೊರತೆಗೆಯುವಿಕೆಯಲ್ಲಿನ ಇಳಿಕೆಗೆ ಮುಖ್ಯವಾಗಿ ಜಲ ಜೀವನ್ ಮಿಷನ್ ಅಡಿಯಲ್ಲಿ ಮೇಲ್ಮೈ ನೀರಿನ ಸುಧಾರಿತ ಪ್ರವೇಶ ಕಾರಣವಾಗಿದೆ.
    4. ಅಂತರ್ಜಲ ಸ್ಥಿತಿಗಳಲ್ಲಿನ ಸುಧಾರಣೆಯು ಉತ್ತಮ ಮಳೆಯಿಂದಾಗಿ, ನೀತಿ ಮಧ್ಯಸ್ಥಿಕೆಗಳು ಅಥವಾ ಸಂರಕ್ಷಣಾ ಕ್ರಮಗಳ ಯಾವುದೇ ಪಾತ್ರವಿಲ್ಲ.

    ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. 2 ಮತ್ತು 3 ಮಾತ್ರ
    2. 1, 2 ಮತ್ತು 3 ಮಾತ್ರ
    3. 1 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

     

    1. ಕರ್ನಾಟಕದಲ್ಲಿ ಜಲವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL), 2025–26ರಲ್ಲಿ ತನ್ನ ಅತ್ಯಧಿಕ ಜಲವಿದ್ಯುತ್ ಉತ್ಪಾದನೆಯನ್ನು ದಾಖಲಿಸಿದ್ದು, ಹಿಂದಿನ ವರ್ಷದ ಉತ್ಪಾದನೆಯನ್ನು ಮೀರಿಸಿದೆ.
    2. ಜಲವಿದ್ಯುತ್ ಉತ್ಪಾದನೆಯಲ್ಲಿನ ಹೆಚ್ಚಳವು ಅನುಕೂಲಕರ ಮಳೆಯ ಪರಿಸ್ಥಿತಿಗಳಿಗೆ ಮಾತ್ರ ಕಾರಣವಾಗಿದೆ.
    3. ಶರಾವತಿ ಮತ್ತು ವಾರಾಹಿ ಕಣಿವೆಗಳು ಒಟ್ಟಾಗಿ ಒಟ್ಟು ಉತ್ಪಾದನೆಯ ಪ್ರಮುಖ ಪಾಲನ್ನು ನೀಡಿವೆ, ಶರಾವತಿ ತನ್ನ ಗುರಿ ಉತ್ಪಾದನೆಯನ್ನು ಮೀರಿದೆ.
    4. ವಾರಾಹಿ ಜಲವಿದ್ಯುತ್ ಯೋಜನೆಯು ತನ್ನ ಗುರಿಯನ್ನು ಮೀರಿದ್ದು ಮಾತ್ರವಲ್ಲದೆ ಅದರ ಹಿಂದಿನ ದಾಖಲೆ ಉತ್ಪಾದನೆಯನ್ನು ಮೀರಿದೆ.

    ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. 1, 3 ಮತ್ತು 4 ಮಾತ್ರ
    2. 2 ಮತ್ತು 3 ಮಾತ್ರ
    3. 1 ಮತ್ತು 2 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    ಉತ್ತರಗಳು

    01). A

    02). C 

    03). B

    04). B

    05). D

    06). A 

    07). C

    08). A

    09). B

    10). C

    11). A

    12). B

    13). C

    14). D

    15). D

    16). A

    17). C

    18). B

    19). A

               

  • ವಿದೇಶಿ ದೇಣಿಗೆ ನಿಯಂತ್ರಣ (ತಿದ್ದುಪಡಿ) ಮಸೂದೆ, 2026 | ದಿವಾಳಿತನ ಮತ್ತು ದಿವಾಳಿಕೊರತನ ಸಂಹಿತೆ ಮಸೂದೆ, 2026 | ಕ್ಯೂಡೆಂಗಾ (Qdenga – TAK-003) – ಡೆಂಗ್ಯೂ ಲಸಿಕೆ | “GLP-1 ಔಷಧಿ” – ಮಧುಮೇಹ ಮತ್ತು ಬೊಜ್ಜು ಚಿಕಿತ್ಸೆ | ಪ್ರಧಾನ ಮಂತ್ರಿ ಆವಾಸ ಯೋಜನೆ – ಗ್ರಾಮೀಣ (PMAY-G) | ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2026 | E-3 ಸೆಂಟ್ರಿ – ವಾಯುಗಾಮಿ ಮುನ್ಸೂಚನೆ ಮತ್ತು ನಿಯಂತ್ರಣ ವ್ಯವಸ್ಥೆ (AWACS)

    ವಿದೇಶಿ ದೇಣಿಗೆ ನಿಯಂತ್ರಣ (ತಿದ್ದುಪಡಿ) ಮಸೂದೆ, 2026

    ರಾಜಕೀಯ ಮತ್ತು ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಕೇಂದ್ರ ಸರ್ಕಾರವು ವಿದೇಶಿ ದೇಣಿಗೆ ನಿಯಂತ್ರಣ (FCRA) ತಿದ್ದುಪಡಿ ಮಸೂದೆ, 2026 ಕುರಿತು ಚರ್ಚೆಯನ್ನು ಮುಂದೂಡಿದ್ದು, ವಿಶೇಷವಾಗಿ ಕೇರಳ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

    ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (FCRA)ಯ ಬಗ್ಗೆ:

    • ಧ್ಯೇಯೋದ್ದೇಶ :- ಇದು ಭಾರತದಲ್ಲಿನ ವ್ಯಕ್ತಿಗಳು, ಸರ್ಕಾರೇತರ ಸಂಸ್ಥೆಗಳು (NGOs) ಮತ್ತು ಸಂಘ-ಸಂಸ್ಥೆಗಳು ವಿದೇಶಿ ನಿಧಿಗಳನ್ನು ಸ್ವೀಕರಿಸುವುದನ್ನು ಮತ್ತು ಬಳಸಿಕೊಳ್ಳುವುದನ್ನು ನಿಯಂತ್ರಿಸುವ ಪ್ರಮುಖ ಕಾನೂನಾಗಿದೆ.
    • ಇದನ್ನು ಕೇಂದ್ರ ಗೃಹ ಸಚಿವಾಲಯವು (MoHA) ನಿರ್ವಹಿಸುತ್ತದೆ.
    • ಪ್ರಾಮುಖ್ಯತೆ:- ವಿದೇಶಿ ದೇಣಿಗೆಗಳು ರಾಷ್ಟ್ರೀಯ ಹಿತಾಸಕ್ತಿ, ಸಾರ್ವಭೌಮತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರದಂತೆ ನೋಡಿಕೊಳ್ಳುವುದು.

    FCRA (ತಿದ್ದುಪಡಿ) ಮಸೂದೆ, 2026 ರ ಪ್ರಮುಖ ನಿಬಂಧನೆಗಳು:

    • ವಿದೇಶಿ ನಿಧಿಗಳು ಮತ್ತು ಆಸ್ತಿಗಳನ್ನು ವಶಪಡಿಸಿಕೊಳ್ಳಲು ಹೊಸ “ನಿಯೋಜಿತ ಪ್ರಾಧಿಕಾರ”:- NGO ಒಂದರ ನೋಂದಣಿಯನ್ನು ರದ್ದುಗೊಳಿಸಿದರೆ, ಒಪ್ಪಿಸಿದರೆ ಅಥವಾ ನೋಂದಣಿ ಅವಧಿ ಮುಗಿದು ನವೀಕರಣಗೊಳ್ಳದಿದ್ದರೆ, ಈ ಪ್ರಾಧಿಕಾರವು ಮಧ್ಯಪ್ರವೇಶಿಸಿ ಅದರ ಎಲ್ಲಾ ವಿದೇಶಿ ನಿಧಿಗಳು ಮತ್ತು ಆಸ್ತಿಗಳನ್ನು (ವಿದೇಶಿ ಹಣದಿಂದ ಖರೀದಿಸಿದ ಕಟ್ಟಡಗಳು ಅಥವಾ ಉಪಕರಣಗಳು) ತನ್ನ ವಶಕ್ಕೆ ತೆಗೆದುಕೊಳ್ಳಬಹುದು.
      • ಶಾಶ್ವತ ಸ್ವಾಧೀನ:- ನಿರ್ದಿಷ್ಟ ಕಾಲಮಿತಿಯೊಳಗೆ ನೋಂದಣಿಯನ್ನು ಮರುಸ್ಥಾಪಿಸದಿದ್ದರೆ, ಸರ್ಕಾರವು ಈ ಆಸ್ತಿಗಳನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕಿಕೊಳ್ಳಬಹುದು, ಮಾರಾಟ ಮಾಡಬಹುದು ಅಥವಾ ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾಯಿಸಬಹುದು.
    • “ಪ್ರಮುಖ ಪದಾಧಿಕಾರಿಗಳ” ವೈಯಕ್ತಿಕ ಹೊಣೆಗಾರಿಕೆ:-
      • ಈ ಮಸೂದೆಯು “ಪ್ರಮುಖ ಪದಾಧಿಕಾರಿ” ಎಂಬ ವ್ಯಾಖ್ಯಾನವನ್ನು ವಿಸ್ತರಿಸಿದ್ದು, ಇದು ನಿರ್ದೇಶಕರು, ಪಾಲುದಾರರು, ಟ್ರಸ್ಟಿಗಳು ಮತ್ತು ನಿರ್ವಹಣಾ ಹಂತದಲ್ಲಿರುವ ಪ್ರತಿಯೊಬ್ಬರನ್ನು ಒಳಗೊಳ್ಳುತ್ತದೆ.
    • ನೋಂದಣಿಯ ಸ್ವಯಂಚಾಲಿತ ಮುಕ್ತಾಯ:-
      • ಕಾರ್ಯವಿಧಾನ:- ಹೊಸ ನಿಯಮಗಳ ಅಡಿಯಲ್ಲಿ, FCRA ನೋಂದಣಿಯ ಅವಧಿ ಮುಗಿದು ನವೀಕರಣಗೊಳ್ಳದಿದ್ದರೆ ಅಥವಾ ನವೀಕರಣ ಕೋರಿಕೆಯನ್ನು ತಿರಸ್ಕರಿಸಿದರೆ, ನೋಂದಣಿಯು ಸ್ವಯಂಚಾಲಿತವಾಗಿ ರದ್ದಾಗುತ್ತದೆ.
      • ಕಟ್ಟುನಿಟ್ಟಾದ ಕಾಲಮಿತಿ:- ಸಂಸ್ಥೆಗಳು ತಾವು ಸ್ವೀಕರಿಸುವ ವಿದೇಶಿ ಹಣವನ್ನು ಎಷ್ಟು ಬೇಗನೆ ಬಳಸಿಕೊಳ್ಳಬೇಕು ಎಂಬುದಕ್ಕೆ ಈ ಮಸೂದೆಯು ನಿಗದಿತ ಕಾಲಮಿತಿಗಳನ್ನು ನಿಗದಿಪಡಿಸುತ್ತದೆ.
    • ತನಿಖೆ ಮತ್ತು ದಂಡನೆಗಳ ಕುರಿತಾದ ಬದಲಾವಣೆಗಳು:-
      • ಕೇಂದ್ರ ಸರ್ಕಾರದ ಪೂರ್ವಾನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ:- FCRA-ಸಂಬಂಧಿತ ದೂರಿನ ಮೇಲೆ ತನಿಖೆಯನ್ನು ಪ್ರಾರಂಭಿಸುವ ಮೊದಲು ಸ್ಥಳೀಯ ಪೊಲೀಸ್ ಅಥವಾ ರಾಜ್ಯ ತನಿಖಾ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು.
      • ಜೈಲು ಶಿಕ್ಷೆಯನ್ನು 5 ವರ್ಷಗಳಿಂದ 1 ವರ್ಷಕ್ಕೆ ಇಳಿಸಲಾಗಿದೆ:- FCRA ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ, ದಂಡದ ನಿಯಮಗಳು ಹಾಗೆಯೇ ಮುಂದುವರಿಯಲಿದ್ದು, ನೀಡಲಾಗುವ ಗರಿಷ್ಠ ಜೈಲು ಶಿಕ್ಷೆಯನ್ನು ಇಳಿಸಲಾಗಿದೆ.

    ದಿವಾಳಿತನ ಮತ್ತು ದಿವಾಳಿಕೊರತನ ಸಂಹಿತೆ ಮಸೂದೆ, 2026

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಭಾರತದ ಸಂಸತ್ತು ‘ದಿವಾಳಿತನ ಮತ್ತು ದಿವಾಳಿಕೊರತನ ಸಂಹಿತೆ (ತಿದ್ದುಪಡಿ) ಮಸೂದೆ, 2026’ (IBC Bill, 2026) ಅನ್ನು ಅಂಗೀಕರಿಸಿದೆ.

    ದಿವಾಳಿತನ ಮತ್ತು ದಿವಾಳಿಕೊರತನ ಸಂಹಿತೆ (IBC), 2016 ರ ಬಗ್ಗೆ:

    • ಕಂಪನಿಗಳು ಮತ್ತು ವ್ಯಕ್ತಿಗಳು ಎದುರಿಸುವ ದಿವಾಳಿ ಸಮಸ್ಯೆಗಳನ್ನು ಬಗೆಹರಿಸಲು ಈ ಸಂಹಿತೆಯು ಕಟ್ಟುನಿಟ್ಟಾದ ಹಾಗೂ ನಿಗದಿತ ಕಾಲಮಿತಿಯ ಕಾನೂನು ಪ್ರಕ್ರಿಯೆಯನ್ನು ಒದಗಿಸುತ್ತದೆ.
    • ದಿವಾಳಿತನ (Insolvency) ಎಂದರೇನು?
    • ವ್ಯಕ್ತಿಗಳು ಅಥವಾ ಕಂಪನಿಗಳು ತಾವು ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ‘ಆರ್ಥಿಕ ಪರಿಸ್ಥಿತಿ’ಯನ್ನು ದಿವಾಳಿತನ ಎಂದು ಕರೆಯಲಾಗುತ್ತದೆ.
    • ದಿವಾಳಿಕೊರತನ (Bankruptcy) ಎಂದರೇನು?
    • ಸಕ್ಷಮ ನ್ಯಾಯಾಲಯವು ವ್ಯಕ್ತಿ ಅಥವಾ ಸಂಸ್ಥೆಯನ್ನು ‘ದಿವಾಳಿ’ ಎಂದು ಅಧಿಕೃತವಾಗಿ ಘೋಷಿಸುವ ಹಾಗೂ ಸಾಲದಾತರ ಹಕ್ಕುಗಳನ್ನು ರಕ್ಷಿಸಲು ಸೂಕ್ತ ಆದೇಶಗಳನ್ನು ನೀಡುವ ‘ಕಾನೂನಾತ್ಮಕ ಪ್ರಕ್ರಿಯೆ‘ಯೇ ದಿವಾಳಿಕೊರತನವಾಗಿದೆ. ಅಂದರೆ, ಸಾಲ ತೀರಿಸಲಾಗದ ಅಸಹಾಯಕ ಸ್ಥಿತಿಯ ಕಾನೂನುಬದ್ಧ ಘೋಷಣೆ ಇದಾಗಿದೆ.
    • ಪ್ರಮುಖ ಗುರಿಗಳು:- 
      1. ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಲಯಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುವುದು.
    • ಕಾರ್ಪೊರೇಟ್ ದಿವಾಳಿತನ ಇತ್ಯರ್ಥ ಪ್ರಕ್ರಿಯೆಯನ್ನು ಸುಗಮಗೊಳಿಸುವುದು.
    • ಅಂತಿಮ ಹಂತದ ಹಣಕಾಸು ನೆರವನ್ನು ರಕ್ಷಿಸುವುದು.
    • ನ್ಯಾಯನಿರ್ಣಯ ಪ್ರಾಧಿಕಾರಗಳು:-
    • ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು (NCLT) ಕಂಪನಿಗಳು ಮತ್ತು ಸೀಮಿತ ಹೊಣೆಗಾರಿಕೆ ಪಾಲುದಾರಿಕೆಗಳಿಗೆ (LLPs) ನ್ಯಾಯನಿರ್ಣಯ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.
    • ಸಾಲ ವಸೂಲಾತಿ ನ್ಯಾಯಮಂಡಳಿಯು (DRT), ವ್ಯಕ್ತಿಗಳು ಮತ್ತು ಪಾಲುದಾರಿಕಾ ಸಂಸ್ಥೆಗಳ ಪ್ರಕರಣಗಳನ್ನು ನಿರ್ವಹಿಸುತ್ತದೆ.

    IBC(ತಿದ್ದುಪಡಿ) ಮಸೂದೆ, 2026 ರ ಪ್ರಮುಖ ಲಕ್ಷಣಗಳು:

    • 30 ದಿನಗಳೊಳಗೆ NCLT ಕಂಪನಿಯ ಆಸ್ತಿಗಳ ನಗದೀಕರಣ ಆದೇಶವನ್ನು ಹೊರಡಿಸಬೇಕು:- ಅರ್ಜಿಯನ್ನು ಸಲ್ಲಿಸಿದ ಅಥವಾ ಮಾಹಿತಿ ನೀಡಿದ ದಿನಾಂಕದಿಂದ ಕಡ್ಡಾಯವಾಗಿ ಆದೇಶವನ್ನು ಹೊರಡಿಸಬೇಕು.
    • ಈ ಸಮಾಪನಾ/ಆಸ್ತಿಗಳ ನಗದೀಕರಣ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ 180 ದಿನಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ಅತ್ಯಗತ್ಯವಿದ್ದಲ್ಲಿ ಇದನ್ನು ಗರಿಷ್ಠ 90 ದಿನಗಳವರೆಗೆ ಮಾತ್ರ ವಿಸ್ತರಿಸಬಹುದು ಎಂದು ಮಸೂದೆ ಸ್ಪಷ್ಟಪಡಿಸುತ್ತದೆ.
    • ಕಡ್ಡಾಯ ಅಂಗೀಕಾರ:- ಸಾಲ ಮರುಪಾವತಿಯಲ್ಲಿನ ‘ಸುಸ್ತಿದಾರಿಕೆ’ ಸಾಬೀತಾದರೆ ಮತ್ತು ಅರ್ಜಿಯು ಸಂಪೂರ್ಣವಾಗಿದ್ದರೆ, NCLT 14 ದಿನಗಳೊಳಗೆ ದಿವಾಳಿತನದ ಅರ್ಜಿಯನ್ನು ಕಡ್ಡಾಯವಾಗಿ ಅಂಗೀಕರಿಸಬೇಕು. ಇದು ಈ ಕಾಲಮಿತಿಯ ವಿಚಾರದಲ್ಲಿ ನ್ಯಾಯಾಂಗದ ವಿವೇಚನಾಧಿಕಾರವನ್ನು ತೆಗೆದುಹಾಕುತ್ತದೆ.
    • ಗಡಿಯಾಚೆಗಿನ ದಿವಾಳಿತನ:- ವಿದೇಶಿ ಆಸ್ತಿಗಳು ಅಥವಾ ವಿದೇಶಿ ಸಾಲದಾತರನ್ನು ಒಳಗೊಂಡಿರುವ ದಿವಾಳಿತನ ಪ್ರಕರಣಗಳನ್ನು ತ್ವರಿತವಾಗಿ ನಿಭಾಯಿಸಲು ಈ ಮಸೂದೆಯು ಹೊಸ ಕಾನೂನು ಚೌಕಟ್ಟೊಂದನ್ನು ಪರಿಚಯಿಸುತ್ತದೆ.

    ಕ್ಯೂಡೆಂಗಾ (Qdenga – TAK-003) – ಡೆಂಗ್ಯೂ ಲಸಿಕೆ

    ಆರೋಗ್ಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಜಪಾನಿನ ‘ಟಕೆಡಾ ಫಾರ್ಮಾಸ್ಯುಟಿಕಲ್ ಕಂಪನಿ’ ಅಭಿವೃದ್ಧಿಪಡಿಸಿದ ‘ಕ್ಯೂಡೆಂಗಾ’ (Qdenga) ಲಸಿಕೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯವು (DCGI) ಅನುಮೋದನೆ ನೀಡಿದೆ.
    • ಇದು 4 ರಿಂದ 60 ವರ್ಷ ವಯಸ್ಸಿನ ವ್ಯಕ್ತಿಗಳ ಬಳಕೆಗೆ ಮಂಜೂರಾತಿಯನ್ನು ಪಡೆದುಕೊಂಡಿದೆ.

    ಕ್ಯೂಡೆಂಗಾ (TAK-003) ಡೆಂಗ್ಯೂ ಲಸಿಕೆಯ ಬಗ್ಗೆ:

    • ಜೀವಂತ-ದೌರ್ಬಲ್ಯಗೊಳಿಸಿದ (ಲೈವ್-ಅಟೆನ್ಯುವೇಟೆಡ್) ಮತ್ತು ಡೆಂಗ್ಯೂವಿನ ಎಲ್ಲಾ 4 ರೂಪಾoತರಗಳ ವಿರುದ್ಧ ಪರಿಣಾಮಕಾರಿ (ಟೆಟ್ರಾವೇಲೆಂಟ್) ಲಸಿಕೆಯಾಗಿದೆ:- ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸಲು ಡೆಂಗ್ಯೂ ವೈರಾಣುವಿನ ಎಲ್ಲಾ 4 ರೂಪಾoತರಗಳ (Serotypes – DENV-1, DENV-2, DENV-3, ಮತ್ತು DENV-4) ದುರ್ಬಲಗೊಂಡ ರೂಪಗಳನ್ನು ಒಳಗೊಂಡಿದೆ.

    ‘ಡೆಂಗಿಆಲ್’ (DengiAll):- ಭಾರತದ ಮೊಟ್ಟಮೊದಲ ದೇಶೀಯ ಡೆಂಗ್ಯೂ ಲಸಿಕೆ

    • ಸಂಪೂರ್ಣ ದೇಶೀಯವಾಗಿ ತಯಾರಾಗುತ್ತಿರುವ, ಡೆಂಗ್ಯೂವಿನ ಎಲ್ಲಾ 4 ರೂಪಾoತರಗಳ ವಿರುದ್ಧ ಪರಿಣಾಮಕಾರಿ (ಟೆಟ್ರಾವೇಲೆಂಟ್) ಮತ್ತು ಒಂದೇ ಬಾರಿ ನೀಡುವ ಡೆಂಗ್ಯೂ ಲಸಿಕೆಯಾಗಿದೆ.
    • ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಸಹಯೋಗದೊಂದಿಗೆ ‘ಪನಾಸಿಯಾ ಬಯೋಟೆಕ್’ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿದೆ.
    • ಇದು ಡೆಂಗ್ಯೂವಿನ ಎಲ್ಲಾ 4 ರೂಪಾoತರಗಳ ವಿರುದ್ಧ ಹೋರಾಡಲು ವಿನ್ಯಾಸಗೊಳಿಸಲಾಗಿದ್ದು, ಪ್ರಸ್ತುತ ಇದು ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳಲ್ಲಿದೆ.

    ‘ಡೆಂಗ್ಯೂ’ ಸೋಂಕಿನ ಬಗ್ಗೆ:

    • ರೋಗಕಾರಕ:- ಡೆಂಗ್ಯೂ ಎಂಬುದು ಡೆಂಗ್ಯೂ ವೈರಾಣುವಿನಿಂದ (DENV) ಉಂಟಾಗುವ ವೈರಾಣು ಸೋಂಕಾಗಿದೆ. 
    • ಈ ಡೆಂಗ್ಯೂ ವೈರಾಣು ‘ಫ್ಲಾವಿವಿರಿಡೆ’ ಕುಟುಂಬಕ್ಕೆ ಸೇರಿದ RNA ವೈರಾಣು ಆಗಿದ್ದು, ಎಲ್ಲಾ 4 ರೂಪಾoತರಗಳನ್ನು (DENV-1 ರಿಂದ 4 ರವರೆಗೆ) ಹೊಂದಿದೆ.
    • ರೋಗಲಕ್ಷಣಗಳು:- ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಸ್ನಾಯು ಮತ್ತು ಕೀಲು ನೋವು, ವಾಕರಿಕೆ, ವಾಂತಿ, ಊದಿಕೊಂಡ ಗ್ರಂಥಿಗಳು ಮತ್ತು ಚರ್ಮದ ಮೇಲಿನ ದದ್ದುಗಳು ಇದರ ಪ್ರಮುಖ ಲಕ್ಷಣಗಳಾಗಿವೆ.
    • ಮನುಷ್ಯರಿಗೆ ಹರಡುವಿಕೆ:- ಸೋಂಕಿತ ಹೆಣ್ಣು ಸೊಳ್ಳೆಗಳ, ಅದರಲ್ಲೂ ಪ್ರಾಥಮಿಕವಾಗಿ ‘ಈಡಿಸ್ ಈಜಿಪ್ಟೈ’ ಸೊಳ್ಳೆಯ ಕಚ್ಚುವಿಕೆಯ ಮೂಲಕ ಈ ವೈರಸ್ ಮನುಷ್ಯರಿಗೆ ಹರಡುತ್ತದೆ.
    • ಗರ್ಭಿಣಿ ತಾಯಿಯಿಂದ ಅವಳ ಮಗುವಿಗೆ ಡೆಂಗ್ಯೂ ಹರಡುವ (ಮ್ಯಾಟರ್ನಲ್ ಟ್ರಾನ್ಸ್‌ಮಿಷನ್) ಸಾಧ್ಯತೆಯಿದೆ. ಜೊತೆಗೆ, ರಕ್ತದ ಉತ್ಪನ್ನಗಳು, ಅಂಗಾಂಗ ದಾನ ಮತ್ತು ರಕ್ತ ವರ್ಗಾವಣೆಯ ಮೂಲಕವೂ ಈ ಸೋಂಕು ಹರಡಬಹುದಾಗಿದೆ.
    • ಯಾವುದೇ ನಿರ್ದಿಷ್ಟವಾದ ವೈರಣು ವಿರೋಧಿ ಚಿಕಿತ್ಸೆ ಇಲ್ಲ:- ಆದ್ದರಿಂದ ಸೊಳ್ಳೆಗಳ ಸಂತತಿಯನ್ನು ನಿಯಂತ್ರಿಸುವುದು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದೇ ಪ್ರಮುಖ ತಡೆಗಟ್ಟುವಿಕೆಯ ವಿಧಾನವಾಗಿದೆ.
    • ಡೆಂಗ್ಯೂ ಹರಡುವ ಸೊಳ್ಳೆಗಳು ಹಗಲಿನ ವೇಳೆಯಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಸೊಳ್ಳೆ ಕಡಿತದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೇ ಈ ರೋಗದಿಂದ ಪಾರಾಗಲು ಇರುವ ಅತ್ಯುತ್ತಮ ಮಾರ್ಗವಾಗಿದೆ.

    “GLP-1 ಔಷಧಿ” – ಮಧುಮೇಹ ಮತ್ತು ಬೊಜ್ಜು ಚಿಕಿತ್ಸೆ

    ಆರೋಗ್ಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಭಾರತೀಯ ಮಾರುಕಟ್ಟೆಯಲ್ಲಿ GLP-1 ಔಷಧಿಗಳ ಬಹು ರೂಪಾoತರಗಳನ್ನು ಪರಿಚಯಿಸಲಾಗಿದ್ದು, ಅವುಗಳ ಮಿತಿಮೀರಿದ ಬೇಡಿಕೆ ಹಾಗೂ ಲಭ್ಯತೆಯ ಕುರಿತು ತೀವ್ರ ಕಳವಳಗಳು ವ್ಯಕ್ತವಾಗಿವೆ.
    • GLP-1 ಔಷಧಿಯನ್ನು 2005 ರಲ್ಲಿ ಅಮೆರಿಕದ ‘ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ’ (US FDA) ಅನುಮೋದಿಸಿದೆ.

    GLP-1 ಔಷಧಿಗಳು:

    • ಗ್ಲುಕಗನ್-ಸಮಾನ ಪೆಪ್ಟೈಡ್-1 ಗ್ರಾಹಕ ಉತ್ತೇಜಕಗಳು (Glucagon-like peptide-1 receptor agonists) ಎಂಬುದು ಹಾರ್ಮೋನ್‌ಗಳ ಅಸಮತೋಲನವನ್ನು ಸರಿಪಡಿಸುವ ಮೂಲಕ ಟೈಪ್-2 ಮಧುಮೇಹ ಮತ್ತು ಬೊಜ್ಜು ಎರಡಕ್ಕೂ ಚಿಕಿತ್ಸೆ ನೀಡಲು ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ ಔಷಧಿಗಳಾಗಿವೆ.
    • ರೋಗಿಗಳ ಹಸಿವನ್ನು ತಗ್ಗಿಸುತ್ತದೆ:- ಈ ಔಷಧಿಗಳು ಹೊಟ್ಟೆ ಖಾಲಿಯಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ ಮತ್ತು ಈ ಮೂಲಕ ರೋಗಿಗಳಲ್ಲಿ ಹೊಟ್ಟೆ ತುಂಬಿರುವ ಭಾವನೆಯನ್ನು ಹೆಚ್ಚಿಸುತ್ತವೆ. ಆ ಮೂಲಕ ತ್ವರಿತ ತೂಕ ಇಳಿಕೆಗೆ ಕಾರಣವಾಗುತ್ತದೆ.
    • GLP-1 ಪೂರೈಕೆ ಸರಪಳಿಯಲ್ಲಿ ನೈತಿಕ ಔಷಧೀಯ ಪದ್ಧತಿಗಳನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯವು (DCGI) ಈ ಔಷಧಿಯ ಅನಧಿಕೃತ ಮಾರಾಟ ಮತ್ತು ಪ್ರಚಾರದ ವಿರುದ್ಧ ತನ್ನ ನಿಯಂತ್ರಣಾತ್ಮಕ ಕಣ್ಗಾವಲನ್ನು ತೀವ್ರಗೊಳಿಸಿದೆ.
    • ಭಾರತದಲ್ಲಿ, ಈ ಔಷಧಿಯನ್ನು ಕೇವಲ ಅಂತಃಸ್ರಾವಕಶಾಸ್ತ್ರಜ್ಞರು, ಆಂತರಿಕ ಔಷಧ ತಜ್ಞರು ಮತ್ತು ಹೃದ್ರೋಗ ತಜ್ಞರು ಮಾತ್ರ ಅಧಿಕೃತವಾಗಿ ಶಿಫಾರಸು ಮಾಡಬಹುದಾಗಿದೆ.

    ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO)ಯ ಬಗ್ಗೆ:

      • ಇದು ಭಾರತದ ಪ್ರಮುಖ ಕೇಂದ್ರೀಯ ಔಷಧ ಪ್ರಾಧಿಕಾರವಾಗಿದ್ದು, ‘ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940’ರ ಅಡಿಯಲ್ಲಿ ವಹಿಸಲಾದ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ.
      • ಪ್ರಮುಖ ಜವಾಬ್ದಾರಿಗಳು:
    • ಹೊಸ ಔಷಧಿಗಳ ಅಳವಡಿಕೆ ಮತ್ತು ಮಂಜೂರಾತಿ.
    • ಹೊಸ ಔಷಧಿಗಳ ವೈದ್ಯಕೀಯ ಪ್ರಯೋಗಗಳ ಕಟ್ಟುನಿಟ್ಟಿನ ನಿಯಂತ್ರಣ.
    • ಔಷಧಿಗಳ ಗುಣಮಟ್ಟದ ಮಾನದಂಡಗಳನ್ನು ರೂಪಿಸುವುದು.
    • ದೇಶಕ್ಕೆ ಆಮದು ಮಾಡಿಕೊಳ್ಳುವ ಔಷಧಿಗಳ ಗುಣಮಟ್ಟದ ಮೇಲೆ ನಿಗಾ ಹಾಗೂ ನಿಯಂತ್ರಣ ಸಾಧಿಸುವುದು.
    • ರಾಜ್ಯ ಔಷಧ ನಿಯಂತ್ರಣ ಸಂಸ್ಥೆಗಳ ಕಾರ್ಯಗಳ ನಡುವೆ ಸೂಕ್ತ ಸಮನ್ವಯ ಸಾಧಿಸುವುದು.

    ಭಾರತದ ಇತರ ಔಷಧ ನಿಯಂತ್ರಣ ಸಂಸ್ಥೆಗಳು:

    • ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (DCGI):- ನಿರ್ದಿಷ್ಟ ರೀತಿಯ ಔಷಧಿಗಳಿಗೆ ಪರವಾನಗಿಗಳನ್ನು ಅನುಮೋದಿಸುವ ಜವಾಬ್ದಾರಿಯನ್ನು ಇದು ಹೊಂದಿದೆ. ಇದರ ಮಹಾನಿರ್ದೇಶಕರು ಭಾರತ ಸರ್ಕಾರದ CDSCO ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಾರೆ.
    • ಔಷಧ ಬೆಲೆ ನಿಯಂತ್ರಣ ಆದೇಶ (DPCO):- ಭಾರತದಲ್ಲಿ ಜನಸಾಮಾನ್ಯರಿಗೆ ಅಗತ್ಯವಾದ ಕೆಲವು ಜೀವನ್ಯಾವಶ್ಯಕ ಔಷಧಿಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲು, DPCO ಆ ಔಷಧಿಗಳ ಬೆಲೆಗಳನ್ನು ನಿಯಂತ್ರಿಸುತ್ತದೆ.
    • ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940:- ಈ ಕಾನೂನು ದೇಶೀಯ ಔಷಧಗಳ ಉತ್ಪಾದನೆ, ಬಳಕೆ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ.

    ಪ್ರಧಾನ ಮಂತ್ರಿ ಆವಾಸ ಯೋಜನೆ – ಗ್ರಾಮೀಣ (PMAY-G)

    ಯೋಜನೆಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತದ ಪ್ರಮುಖ ಗ್ರಾಮೀಣ ವಸತಿ ಯೋಜನೆಯಾದ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ’ (PMAY-G) 2026 ರಲ್ಲಿ ತನ್ನ ಅನುಷ್ಠಾನದ 10 ವರ್ಷಗಳನ್ನು ಪೂರೈಸಿದೆ.

    ಪ್ರಧಾನ ಮಂತ್ರಿ ಆವಾಸ ಯೋಜನೆ – ಗ್ರಾಮೀಣ (PMAY-G) ಯೋಜನೆಯ ಬಗ್ಗೆ:

    • ಗುರಿ:- ಗ್ರಾಮೀಣ ಪ್ರದೇಶಗಳಲ್ಲಿ “ಎಲ್ಲರಿಗೂ ವಸತಿ” ಒದಗಿಸುವುದು ಇದರ ಪ್ರಮುಖ ಗುರಿಯಾಗಿದೆ. 
    • ಉದ್ದೇಶ:- ವಸತಿ ರಹಿತ ಕುಟುಂಬಗಳು ಹಾಗೂ ಶೂನ್ಯ, ಒಂದು ಅಥವಾ ಎರಡು ಕೋಣೆಗಳ ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವ ಅರ್ಹ ಗ್ರಾಮೀಣ ಕುಟುಂಬಗಳಿಗೆ ಮೂಲಸೌಕರ್ಯಗಳೊಂದಿಗೆ ‘ಪಕ್ಕಾ ಮನೆ’ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡುವುದನ್ನು ಇದು ಒಳಗೊಂಡಿದೆ.
    • ಫಲಾನುಭವಿಗಳ ಆಯ್ಕೆ:- 2011 ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯ (SECC) ವಸತಿ ಅಭಾವದ ಮಾನದಂಡಗಳನ್ನು ಬಳಸಿ, ಗ್ರಾಮಸಭೆಗಳ ಪರಿಶೀಲನೆಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
    • ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ:-
    1. ಬಯಲು ಸೀಮೆಯ ಪ್ರದೇಶಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು 60:40
    2. ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳಲ್ಲಿ ಇದು 90:10 ಅನುಪಾತದಲ್ಲಿರುತ್ತದೆ.
    • ಅನುಷ್ಠಾನ ಸಚಿವಾಲಯ:- ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ (MoRD).
    • ಆರ್ಥಿಕ ನೆರವು ಪಡೆದುಕೊಳ್ಳುವ ಫಲಾನುಭವಿಗಳ,  
    1. ಮನೆಯ ಕನಿಷ್ಠ ವಿಸ್ತೀರ್ಣವು 25 ಚದರ ಮೀಟರ್ ಇರಬೇಕು.
    2. ಬಯಲು ಪ್ರದೇಶಗಳಲ್ಲಿ ₹1.20 ಲಕ್ಷ ಹಾಗೂ ಗುಡ್ಡಗಾಡು/ಈಶಾನ್ಯ ರಾಜ್ಯಗಳಲ್ಲಿ ₹1.30 ಲಕ್ಷ ಆರ್ಥಿಕ ನೆರವು ನೀಡಲಾಗುತ್ತದೆ.
    • ಸ್ವಚ್ಛ ಭಾರತ ಅಭಿಯಾನದೊಂದಿಗೆ ಸಂಯೋಜನೆಗೊಳ್ಳುವ ಮೂಲಕ ಶೌಚಾಲಯ ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ ₹12,000 ಗಳನ್ನು ಒದಗಿಸಲಾಗುತ್ತದೆ.

    ಈ ಯೋಜನೆಯಲ್ಲಿನ ಸುಧಾರಣೆಗಳು:

    • ನೇರ ನಗದು ವರ್ಗಾವಣೆ (DBT):- ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಆರ್ಥಿಕ ನೆರವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ.
    • ಜಿಯೋ-ಟ್ಯಾಗಿಂಗ್:- ನೈಜ-ಸಮಯದ ಮೇಲ್ವಿಚಾರಣೆಗಾಗಿ, ಮನೆ ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ದಿನಾಂಕ ಮತ್ತು ಸಮಯದ ಮುದ್ರೆಯಿರುವ ಛಾಯಾಚಿತ್ರಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ.
    • ಕೃತಕ ಬುದ್ಧಿಮತ್ತೆ ಚಾಲಿತ ಮೇಲ್ವಿಚಾರಣೆ:- ಅಕ್ರಮಗಳನ್ನು ಪತ್ತೆಹಚ್ಚಲು ‘ಕೃತಕ ಬುದ್ಧಿಮತ್ತೆ’ (AI) ಮತ್ತು ‘ಯಂತ್ರ ಕಲಿಕೆ’ (ML) ಸಾಧನಗಳನ್ನು ಬಳಸಲಾಗುತ್ತದೆ. ವಂಚನೆಯನ್ನು ತಡೆಗಟ್ಟಲು ಮತ್ತು ಫಲಾನುಭವಿಗಳನ್ನು ದೃಢೀಕರಿಸಲು, ಕಣ್ಣು ಮಿಟುಕಿಸುವಿಕೆಯನ್ನು ಒಳಗೊಂಡ ‘ಆಧಾರ್ ಮುಖ ದೃಢೀಕರಣ’ವನ್ನು ಅಳವಡಿಸಿಕೊಳ್ಳಲಾಗಿದೆ.
    • ಗ್ರಾಮ ಮಟ್ಟದ ಕಾರ್ಯಕರ್ತರು:- ಮಂಜೂರಾದ ಪ್ರತಿಯೊಂದು ಮನೆಯನ್ನು ಸ್ಥಳೀಯ ಕಾರ್ಯಕರ್ತರಿಗೆ ಟ್ಯಾಗ್ ಮಾಡಲಾಗಿರುತ್ತದೆ. ಇವರು ಫಲಾನುಭವಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸುತ್ತಾರೆ.
    • ಸಾಮಾಜಿಕ ಲೆಕ್ಕಪರಿಶೋಧನೆ:- ಪ್ರತಿಯೊಂದು ಗ್ರಾಮ ಪಂಚಾಯಿತಿಯು ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಕಡ್ಡಾಯವಾಗಿ ಅಧಿಕೃತ ಸಾಮಾಜಿಕ ಲೆಕ್ಕಪರಿಶೋಧನೆಯನ್ನು ನಡೆಸುತ್ತದೆ.

    ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2026

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಭಾರತದ ಸಂಸತ್ತು ಏಪ್ರಿಲ್ 2, 2026 ರಂದು ‘ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2026’ ಅನ್ನು ಅಂಗೀಕರಿಸಿದೆ.
    • ಈ ಶಾಸನವು ಮೂಲ ಜನ್ ವಿಶ್ವಾಸ್ ಕಾಯ್ದೆ, 2023 ರ ಮುಂದುವರಿದ ಭಾಗವಾಗಿದ್ದು, ಸರ್ಕಾರದ ಅಪರಾಧೀಕರಣ ರದ್ದತಿ ಉಪಕ್ರಮದ ಮಹತ್ವದ ವಿಸ್ತರಣೆಯಾಗಿದೆ.

    ಜನ್ ವಿಶ್ವಾಸ್ ಕಾಯ್ದೆ, 2023:

    • ಉದ್ದೇಶ:- ದಂಡನಾತ್ಮಕ ಆಡಳಿತ ಮಾದರಿಯಿಂದ ವಿಶ್ವಾಸ-ಆಧಾರಿತ ಆಡಳಿತ ಮಾದರಿಗೆ ಬದಲಾಗುವ ಮೂಲಕ ‘ಸುಗಮ ವ್ಯವಹಾರ’ (Ease of Doing Business) ಮತ್ತು ‘ಸುಗಮ ಜೀವನ’ವನ್ನು (Ease of Living) ಹೆಚ್ಚಿಸುವ ಉದ್ದೇಶ.
    • ಅಪರಾಧೀಕರಣ ರದ್ದತಿ:- ಇದು 79 ಕೇಂದ್ರ ಕಾಯ್ದೆಗಳ ಅಡಿಯಲ್ಲಿನ 717 ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸುತ್ತದೆ.
    • ವ್ಯಾಪ್ತಿ:- ಒಟ್ಟಾರೆಯಾಗಿ, ಈ ಮಸೂದೆಯು 23 ವಿವಿಧ ಸಚಿವಾಲಯಗಳು ನಿರ್ವಹಿಸುವ 784 ನಿಬಂಧನೆಗಳನ್ನು ತಿದ್ದುಪಡಿ ಮಾಡುತ್ತದೆ.
    • 1,000 ಕ್ಕೂ ಹೆಚ್ಚು ಸಣ್ಣಪುಟ್ಟ ಅಪರಾಧಗಳ ತರ್ಕಬದ್ಧಗೊಳಿಸಲಾಗಿದೆ:- ಇವುಗಳನ್ನು ಅಪರಾಧಿ ಜೈಲು ಶಿಕ್ಷೆಯಿಂದ ನಾಗರೀಕ ದಂಡಗಳು, ಆಡಳಿತಾತ್ಮಕ ದಂಡಗಳು ಅಥವಾ ಎಚ್ಚರಿಕೆಗಳಿಗೆ ಬದಲಾಯಿಸಲಾಗಿದೆ.

    ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2026:

    • ನ್ಯಾಯನಿರ್ಣಯ ಅಧಿಕಾರಿಗಳ ನೇಮಕ:- ವಿಚಾರಣೆಗಳನ್ನು ನಡೆಸಲು ಮತ್ತು ದಂಡವನ್ನು ನಿರ್ಧರಿಸಲು ನೇಮಿಸಲಾಗುತ್ತದೆ.
    • ಮೇಲ್ಮನವಿ ಪ್ರಾಧಿಕಾರಗಳ ನೇಮಕ:- ಮೇಲ್ಮನವಿಗಳನ್ನು ಆಲಿಸಲು ನೇಮಿಸಲಾಗುತ್ತದೆ. ಈ ಮೂಲಕ ನ್ಯಾಯಾಲಯದ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ.
    • ಹಂತ-ಹಂತದ ಪ್ರತಿಕ್ರಿಯೆ:- ಮೊದಲ ಬಾರಿಯ ಅಥವಾ ಸಣ್ಣಪುಟ್ಟ ತಪ್ಪುಗಳಿಗಾಗಿ, ಈ ಮಸೂದೆಯು “ಮೊದಲು-ಎಚ್ಚರಿಕೆ” ತತ್ವಗಳನ್ನು ಪರಿಚಯಿಸುತ್ತದೆ.
    • ಕ್ರಿಯಾತ್ಮಕ ದಂಡಗಳು:- ದಂಡದ ಭಯವನ್ನು ಕಾಯ್ದುಕೊಳ್ಳಲು, ಹೆಚ್ಚಿನ ದಂಡಗಳು ಮತ್ತು ಶಿಕ್ಷೆಗಳಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ 10% ರಷ್ಟು ಹೆಚ್ಚಳ ಮಾಡಲಾಗುತ್ತದೆ.
    • ಈ ಮಸೂದೆಯ ಮೂಲಕ ತಿದ್ದುಪಡಿಗೊಂಡ ಪ್ರಮುಖ ಕಾಯ್ದೆಗಳು:- 
    1. ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ-1934
    2. ಮೋಟಾರು ವಾಹನಗಳ ಕಾಯ್ದೆ-1988
    3. ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆ-2006

    ಅಮೋನಿಯಂ ನೈಟ್ರೇಟ್

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ‘ಭಾರತ ಕೋಲ್ ಗ್ಯಾಸಿಫಿಕೇಶನ್ ಅಂಡ್ ಕೆಮಿಕಲ್ಸ್ ಲಿಮಿಟೆಡ್’ ಮತ್ತು ‘ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್’ ಕಲ್ಲಿದ್ದಲಿನಿಂದ ಅಮೋನಿಯಂ ನೈಟ್ರೇಟ್ ಉತ್ಪಾದಿಸುವ ಯೋಜನೆಗಾಗಿ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.

    ಅಮೋನಿಯಂ ನೈಟ್ರೇಟ್ ಕುರಿತು:

    • ಬಿಳಿ ಬಣ್ಣದ, ಹರಳುರೂಪದ ಮತ್ತು ನೀರಿನಲ್ಲಿ ಕರಗುವ ಘನ ವಸ್ತುವಾಗಿದೆ:- ಇದು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಕಂಡುಬರುವುದಿಲ್ಲ. 
    • ಕೃತಕವಾಗಿ ಉತ್ಪಾದಿಸಲಾಗುತ್ತದೆ:- ಅಮೋನಿಯಾವನ್ನು ನೈಟ್ರಿಕ್ ಆಮ್ಲದೊಂದಿಗೆ ಪ್ರತಿಕ್ರಿಯಿಸುವ ಮೂಲಕ ಇದನ್ನು ಕೃತಕವಾಗಿ ಉತ್ಪಾದಿಸಲಾಗುತ್ತದೆ.
    • ತೇವಾಂಶವನ್ನು ಹೀರಿಕೊಳ್ಳುವ ಗುಣಲಕ್ಷಣವನ್ನು ಹೊಂದಿದೆ:- ಹೆಚ್ಚಿನ ಶಾಖಕ್ಕೆ ಒಳಪಟ್ಟಾಗ, ಇದು ಸ್ಫೋಟಕವಾಗಿ ವಿಭಜನೆಗೊಂಡು ‘ಸಾರಜನಕ ಡೈಆಕ್ಸೈಡ್’ (NO₂) ಅನ್ನು ಬಿಡುಗಡೆ ಮಾಡುತ್ತದೆ.
    • ಉದಾಹರಣೆ:- 2015 ರ ಟಿಯಾಂಜಿನ್ (ಚೀನಾ) ಸ್ಫೋಟ ಮತ್ತು 2020 ರ ಬೈರುತ್ ಬಂದರು ಸ್ಫೋಟ.
    • ರಸಗೊಬ್ಬರವಾಗಿ ಮತ್ತು ಕೈಗಾರಿಕಾ ಸ್ಫೋಟಕವಾಗಿ ಬಳಕೆ:- ಇದು ಪ್ರಪಂಚದಾದ್ಯಂತ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ರಾಸಾಯನಿಕಗಳಲ್ಲಿ ಒಂದಾಗಿದೆ.
    • ಇದನ್ನು ‘ಅಪಾಯಕಾರಿ ರಾಸಾಯನಿಕಗಳ ನಿಯಮಗಳು, 1989’ರ ಅಡಿಯಲ್ಲಿ ಅಪಾಯಕಾರಿ ರಾಸಾಯನಿಕವೆಂದು ಪಟ್ಟಿ ಮಾಡಲಾಗಿದೆ.

    E-3 ಸೆಂಟ್ರಿ – ವಾಯುಗಾಮಿ ಮುನ್ಸೂಚನೆ ಮತ್ತು ನಿಯಂತ್ರಣ ವ್ಯವಸ್ಥೆ (AWACS)

    ರಕ್ಷಣೆ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಇರಾನ್ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಅಮೆರಿಕದ ‘E-3 ಸೆಂಟ್ರಿ ಅವಾಕ್ಸ್’ ವಿಮಾನವು ನಾಶವಾಗಿದೆ ಎಂದು ವರದಿಯಾಗಿದೆ.

    ‘E-3 ಸೆಂಟ್ರಿ ಅವಾಕ್ಸ್’ನ ಬಗ್ಗೆ:

    • ಸುಧಾರಿತ ಕಣ್ಗಾವಲು ಮತ್ತು ಯುದ್ಧ ನಿರ್ವಹಣೆ ವಿಮಾನವಾಗಿದೆ:- ಬೋಯಿಂಗ್ ಸಂಸ್ಥೆಯು ಅಭಿವೃದ್ಧಿಪಡಿಸಿದ ವಾಯುಗಾಮಿ ಮುನ್ಸೂಚನೆ ಮತ್ತು ನಿಯಂತ್ರಣ ವ್ಯವಸ್ಥೆಯ (AWACS) ವಿಮಾನವಾಗಿದೆ.
    • ಈ ವಿಮಾನವನ್ನು ಸಾಮಾನ್ಯವಾಗಿ ‘ಅವಾಕ್ಸ್’ (AWACS) ಎಂದು ಕರೆಯಲಾಗುತ್ತದೆ. ಇದರ ವಿಸ್ತೃತ ರೂಪ ‘ಏರ್‌ಬೋರ್ನ್ ವಾರ್ನಿಂಗ್ ಅಂಡ್ ಕಂಟ್ರೋಲ್ ಸಿಸ್ಟಮ್’ (Airborne Warning and Control System).
    • ಇದು ತನ್ನ ಮೇಲ್ಭಾಗದಲ್ಲಿ ಅಳವಡಿಸಲಾದ ವಿಶಿಷ್ಟವಾದ ತಿರುಗುವ ರೇಡಾರ್ ಗುಮ್ಮಟವನ್ನು ಹೊಂದಿದ್ದು, ಇದು ವೈರಿಗಳ ವಾಯು ಗುರಿಗಳನ್ನು ಬಹುದೂರದಿಂದಲೇ ಪತ್ತೆಹಚ್ಚುವ ಮತ್ತು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

    ಭಾರತದಲ್ಲಿನ ವಾಯುಗಾಮಿ ಮುನ್ಸೂಚನೆ ಮತ್ತು ನಿಯಂತ್ರಣ ವ್ಯವಸ್ಥೆ (AWACS in India):

    • ಭಾರತೀಯ ವಾಯುಪಡೆಯು (IAF) ರಷ್ಯಾದ ಇಲ್ಯುಶಿನ್ Il-76 ಸಾರಿಗೆ ವಿಮಾನದ ಮೇಲೆ ಅಳವಡಿಸಲಾಗಿರುವ ಇಸ್ರೇಲ್ ಮೂಲದ 3 ಫಾಲ್ಕನ್ (Phalcon) ಅವಾಕ್ಸ್ (AWACS) ವ್ಯವಸ್ಥೆಗಳನ್ನು ನಿರ್ವಹಿಸುತ್ತಿದೆ.
    • “ಆಕಾಶದ ಕಣ್ಣುಗಳು” (Eyes in the sky) ಎಂದು ಕರೆಯಲ್ಪಡುವ ಈ ವ್ಯವಸ್ಥೆಗಳು 360-ಡಿಗ್ರಿ ರೇಡಾರ್ ವ್ಯಾಪ್ತಿಯನ್ನು ಒದಗಿಸುತ್ತವೆ ಮತ್ತು 370-500 ಕಿ.ಮೀ. ವ್ಯಾಪ್ತಿಯಲ್ಲಿರುವ ವಿಮಾನಗಳು, ಕ್ರೂಸ್ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿವೆ.
    • ನೇತ್ರಾ (NETRA) ವಾಯುಗಾಮಿ ಮುನ್ಸೂಚನೆ ಮತ್ತು ನಿಯಂತ್ರಣ (AEW&C) ವ್ಯವಸ್ಥೆಯು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿದ ಸಂಪೂರ್ಣ ದೇಶೀಯ, ಬಹು-ಸಂವೇದಕ ವೇದಿಕೆಯಾಗಿದೆ. ಇದನ್ನು ಪ್ರಾಥಮಿಕವಾಗಿ ವಾಯು ಕಣ್ಗಾವಲು, ಗುರಿ ಗುರುತಿಸುವಿಕೆ ಮತ್ತು ಕಮಾಂಡ್-ಮತ್ತು-ನಿಯಂತ್ರಣ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
    • ಈ ‘ನೇತ್ರಾ’ ವ್ಯವಸ್ಥೆಯು ಬ್ರೆಜಿಲ್‌ನ ಎಂಬ್ರೇಯರ್ ERJ 145 ವಿಮಾನವನ್ನು ಆಧರಿಸಿದೆ.

    ರೈಸ್‌ನ ತಿಮಿಂಗಿಲ (Rice’s Whale)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಅಮೆರಿಕವು ತೈಲ ಮತ್ತು ಅನಿಲ ಕೊರೆಯುವ ಕಾರ್ಯಾಚರಣೆಗಳನ್ನು ವಿಸ್ತರಿಸುತ್ತಿರುವುದು ‘ರೈಸ್ಸ್ ವೇಲ್’ (Rice Whale) ಎಂಬ ತಿಮಿಂಗಿಲ ಪ್ರಭೇದವನ್ನು ಸಂಪೂರ್ಣ ಅಳಿವಿನಂಚಿಗೆ ತಳ್ಳುವ ಆತಂಕವನ್ನು ಸೃಷ್ಟಿಸಿದೆ.

    ರೈಸ್ಸ್ ವೇಲ್ ತಿಮಿಂಗಿಲದ ಕುರಿತು:

    • ಈ ತಿಮಿಂಗಿಲವು ‘ಬಲನೋಪ್ಟೆರಿಡೆ’ (Balaenopteridae) ಎಂಬ ‘ಬಲೀನ್ ತಿಮಿಂಗಿಲ’ ಕುಟುಂಬಕ್ಕೆ ಸೇರಿದೆ.
    • ಜಗತ್ತಿನ ಅತ್ಯಂತ ಅಪರೂಪದ ತಿಮಿಂಗಿಲ ಪ್ರಭೇದಗಳಲ್ಲಿ ಒಂದಾಗಿದೆ:- ಪ್ರಪಂಚದಲ್ಲಿ ಕೇವಲ 100 ಕ್ಕಿಂತ ಕಡಿಮೆ ಸಂಖ್ಯೆಯ ಈ ತಿಮಿಂಗಿಲಗಳು ಉಳಿದುಕೊಂಡಿವೆ.
    • ಮೆಕ್ಸಿಕೋ ಕೊಲ್ಲಿಯ ಉತ್ತರದ ಭಾಗಕ್ಕೆ ಮಾತ್ರ ಸೀಮಿತವಾದ ಸ್ಥಳೀಯ ಪ್ರಭೇದವಾಗಿದೆ:- ಇದು ಯಾವುದೇ ದೀರ್ಘಕಾಲಿಕ ವಲಸೆ ಕೈಗೊಳ್ಳದೆ ವರ್ಷಪೂರ್ತಿ ಇದೇ ಪ್ರದೇಶದಲ್ಲಿ ವಾಸಿಸುತ್ತದೆ.
    • ಇದು ಪ್ರಾಥಮಿಕವಾಗಿ ಸಣ್ಣ ಮೀನುಗಳು ಮತ್ತು ಸ್ಕ್ವಿಡ್‌ಗಳನ್ನು ತಿಂದು ಜೀವಿಸುತ್ತದೆ.
    • ಅಪಾಯಗಳು:- ಸಮುದ್ರದಲ್ಲಿನ ತೈಲ ಕೊರೆಯುವಿಕೆ, ಹಡಗುಗಳ ಡಿಕ್ಕಿ ಮತ್ತು ಹವಾಮಾನ ಬದಲಾವಣೆಯು ಇವುಗಳ ಅಸ್ತಿತ್ವಕ್ಕೆ ಪ್ರಮುಖ ಬೆದರಿಕೆಯಾಗಿವೆ.
    • IUCN ಕೆಂಪು ಪಟ್ಟಿಯಲ್ಲಿ:- ‘ತೀವ್ರ ಅಳಿವಿನಂಚಿನಲ್ಲಿರುವ’ ಪ್ರಭೇದವೆಂದು ವರ್ಗೀಕರಿಸಲಾಗಿದೆ.

    ನಿಮಗಿದು ತಿಳಿದಿರಲಿ:

    • ಅಂತರರಾಷ್ಟ್ರೀಯ ತಿಮಿಂಗಿಲ ಆಯೋಗ (IWC):- ತಿಮಿಂಗಿಲ ಬೇಟೆಯನ್ನು ನಿರ್ವಹಿಸಲು ಮತ್ತು  ಅವುಗಳ ಸಂರಕ್ಷಣೆಗಾಗಿ 1946 ರಲ್ಲಿ ಜಾಗತಿಕ ಸಂಸ್ಥೆಯಾಗಿ ಸ್ಥಾಪಿಸಲಾಯಿತು.
    • ಪ್ರಸ್ತುತ, ಈ ಆಯೋಗವು ಭಾರತ ಸೇರಿದಂತೆ 80 ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.
  • ಬನ್ನೇರುಘಟ್ಟ ಜೈವಿಕ ಉದ್ಯಾನವನ (BBP)

    ಬನ್ನೇರುಘಟ್ಟ ಜೈವಿಕ ಉದ್ಯಾನವನ (BBP)

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ರೋಹಿಣಿ ನಿಲೇಕಣಿ ದತ್ತಿ ಸಂಸ್ಥೆಯ ಸಹಯೋಗದೊಂದಿಗೆ, ಬನ್ನೇರುಘಟ್ಟ ಜೈವಿಕ ಉದ್ಯಾನವನವು ಮಿರ್ಜಾ ಬೆಟ್ಟದ ಮೇಲೆ 25 ಮೀಟರ್ ಎತ್ತರದ, ಪರಿಸರ ಸ್ನೇಹಿ ಸಾರ್ವಜನಿಕ ವೀಕ್ಷಣಾ ಗೋಪುರವನ್ನು ನಿರ್ಮಿಸುತ್ತಿದೆ.

    ಹೊಸ ವೀಕ್ಷಣಾ ಗೋಪುರದ ಪ್ರಮುಖ ಲಕ್ಷಣಗಳು:

    • ಸ್ಥಳ:- ಇದು ಬನ್ನೇರುಘಟ್ಟ ಜೈವಿಕ ಉದ್ಯಾನವನವನದ ಆವರಣದೊಳಗಿನ ಮಿರ್ಜಾ ಬೆಟ್ಟದಲ್ಲಿ ನೆಲೆಗೊಂಡಿದೆ.
    • ರಚನೆ:- ಇದು 50-70 ಸಂದರ್ಶಕರಿಗೆ ಅವಕಾಶ ಕಲ್ಪಿಸುವಂತೆ ವಿನ್ಯಾಸಗೊಳಿಸಲಾದ 25 ಮೀಟರ್ ಎತ್ತರದ ಗೋಪುರವಾಗಿದೆ.
    • ಸುಸ್ಥಿರತೆ:- ಈ ಯೋಜನೆಯು ಸೌರಶಕ್ತಿ ವ್ಯವಸ್ಥೆಗಳು ಮತ್ತು ಮಳೆನೀರು ಕೊಯ್ಲು ಸೇರಿದಂತೆ ಪರಿಸರ ಸ್ನೇಹಿ ವಿನ್ಯಾಸದ ಅಂಶಗಳನ್ನು ಒಳಗೊಂಡಿರುತ್ತದೆ.
    • ವೀಕ್ಷಣೆ:- ಇದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಸುತ್ತಮುತ್ತಲಿನ ಕಾಡುಗಳು ಮತ್ತು ಬೆಂಗಳೂರು ನಗರದ ಗಗನಚುಂಬಿ ಕಟ್ಟಡಗಳ ಸಾಲಿನ ವಿಹಂಗಮ ನೋಟವನ್ನು ಒದಗಿಸುತ್ತದೆ.
    • ಉದ್ದೇಶ:- ವನ್ಯಜೀವಿ ವೀಕ್ಷಣೆಯಲ್ಲಿ ಸುರಕ್ಷತೆಯನ್ನು ಸುಧಾರಿಸುವುದು ಮತ್ತು ಸಂರಕ್ಷಣಾ ಜಾಗೃತಿಯನ್ನು ಹೆಚ್ಚಿಸುವುದು.

    ಬನ್ನೇರುಘಟ್ಟ ಜೈವಿಕ ಉದ್ಯಾನವನ (BBP)ದ ಬಗ್ಗೆ:

    • ಇದು ಕರ್ನಾಟಕದ ಬೆಂಗಳೂರಿನ ದಕ್ಷಿಣಕ್ಕೆ ಸುಮಾರು 22 ಕಿ.ಮೀ ದೂರದಲ್ಲಿರುವ ಆನೇಕಲ್ ಶ್ರೇಣಿಯ ಬೆಟ್ಟಗಳಲ್ಲಿ ನೆಲೆಗೊಂಡಪ್ರಮುಖ ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರ-ಪ್ರವಾಸೋದ್ಯಮ ಕೇಂದ್ರವಾಗಿದೆ.
    • ಇದನ್ನು ಬೃಹತ್ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ (BNP) ಪ್ರತ್ಯೇಕಿಸಿ ರಚಿಸಲಾಗಿದೆ, ಮತ್ತು ಈ ರಾಷ್ಟ್ರೀಯ ಉದ್ಯಾನವನವನ್ನು 1974 ರಲ್ಲಿ ಘೋಷಿಸಲಾಗಿತ್ತು.
    • ಆಡಳಿತ:- ‘ಕರ್ನಾಟಕ ಮೃಗಾಲಯ ಪ್ರಾಧಿಕಾರ‘ದ (ZAK) ಆಡಳಿತಕ್ಕೆ ಒಳಪಟ್ಟಿದ್ದು, ಭಾರತದ ‘ಕೇಂದ್ರ ಮೃಗಾಲಯ ಪ್ರಾಧಿಕಾರ’ದ (CZA) ಮಾರ್ಗಸೂಚಿಗಳನ್ನು ಅನುಸರಿಸುತ್ತದೆ.
    • ಭಾರತದ ಮೊದಲ ಚಿಟ್ಟೆ ಉದ್ಯಾನವನ:- 2006 ರಲ್ಲಿ ಉದ್ಘಾಟನೆಗೊಂಡ ಇದು ಪಾರದರ್ಶಕ ಪಾಲಿಕಾರ್ಬೊನೇಟ್ ಛಾವಣಿಯ ಸಂರಕ್ಷಣಾ ಗೃಹ, ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಪ್ರಯೋಗಾಲಯವನ್ನು ಹೊಂದಿದೆ.
    • ಸುರಕ್ಷಿತ ಬೇಲಿಯುಳ್ಳ ಆನೆಗಳ ಅಭಯಾರಣ್ಯ:- ಸೌರ-ಬೇಲಿಯಿಂದ ಆವೃತವಾದ, ಅರಣ್ಯ ಸ್ವರೂಪದ ವಿಶೇಷ ಆನೆ ಅಭಯಾರಣ್ಯವನ್ನು ಹೊಂದಿರುವ ಭಾರತದ ಮೊದಲ ಜೈವಿಕ ಉದ್ಯಾನವನ ಇದಾಗಿದೆ.
    • ಸಸ್ಯವರ್ಗ:- ಶುಷ್ಕ ಎಲೆ ಉದುರುವ ಕುರುಚಲು ಕಾಡುಗಳು, ದಕ್ಷಿಣದ ಉಷ್ಣವಲಯದ ಶುಷ್ಕ ಎಲೆ ಉದುರುವ ಕಾಡುಗಳು ಮತ್ತು ದಕ್ಷಿಣದ ಉಷ್ಣವಲಯದ ತೇವಾಂಶ-ಮಿಶ್ರಿತ ಕಾಡುಗಳನ್ನು ಒಳಗೊಂಡಿದೆ.
    • ಜಲಮೂಲಗಳು:- ಸುವರ್ಣಮುಖಿ ಹೊಳೆಯು ಉದ್ಯಾನವನದ ಮಧ್ಯಭಾಗದಲ್ಲಿ ಹರಿಯಲಿದ್ದು, ವನ್ಯಜೀವಿಗಳಿಗೆ ಪ್ರಾಥಮಿಕ ನೀರಿನ ಮೂಲವಾಗಿ ಕಾರ್ಯನಿರ್ವಹಿಸುತ್ತದೆ.
    • ವನ್ಯಜೀವಿ ಸಂಚಾರ ಮಾರ್ಗ:- ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು (BNP) ಬಿಳಿಗಿರಿರಂಗನ (BR) ಬೆಟ್ಟಗಳು ಮತ್ತು ಸತ್ಯಮಂಗಲಂ ಕಾಡುಗಳನ್ನು ಬೆಸೆಯುವ ಆನೆಗಳ ಪ್ರಮುಖ ಸಂಚಾರ ಮಾರ್ಗವಾಗಿ ರೂಪುಗೊಂಡಿದೆ.
    • ಪ್ರಮುಖ ಪ್ರಾಣಿಸಂಕುಲ:- ಅಳಿವಿನಂಚಿನಲ್ಲಿರುವ ಏಷ್ಯಾದ ಆನೆ, ಬಂಗಾಳದ ಹುಲಿ, ಕಾಡುಕೋಣ, ಚಿರತೆ, ಸೋಮಾರಿ ಕರಡಿ ಮತ್ತು ರಾಜ್ಯ ಚಿಟ್ಟೆಯಾದ “ಸದರ್ನ್ ಬರ್ಡ್‌ವಿಂಗ್” ಚಿಟ್ಟೆಗಳಿಗೆ ಇದು ನೆಲೆಯಾಗಿದೆ.
  • ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಭ್ಯಾಸ ಪ್ರಶ್ನೆಗಳು (MCQs)

    ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಭ್ಯಾಸ ಪ್ರಶ್ನೆಗಳು (MCQs)

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಗುಜರಾತ್‌ನಲ್ಲಿರುವ ಸಾನಂದ್ ಅರೆವಾಹಕಗಳ (ಸೆಮಿಕಂಡಕ್ಟರ್) ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಮತ್ತು ಈ ಸೌಲಭ್ಯವನ್ನು ಕೇನ್ಸ್ ಸೆಮಿಕಾನ್ ಸ್ಥಾಪಿಸಿದೆ.
    2. ಇದು ಡಿಸೆಂಬರ್ 2021 ರಲ್ಲಿ ಪ್ರಾರಂಭಿಸಲಾದ ಭಾರತ ಸೆಮಿಕಂಡಕ್ಟರ್ ಮಿಷನ್ (ISM) ನ ಒಂದು ಭಾಗವಾಗಿದೆ.
    3. ಇದನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಕಾರ್ಯಗತಗೊಳಿಸುತ್ತದೆ.
    4. ಇದು ಪ್ರದರ್ಶನ ಉತ್ಪಾದನಾ ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಸಹ ಒಳಗೊಂಡಿದೆ.

    ಮೇಲೆ ನೀಡಲಾದ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?

    1. ಎರಡು ಮಾತ್ರ
    2. ಮೂರು ಮಾತ್ರ
    3. ಎಲ್ಲಾ ನಾಲ್ಕು
    4. ಎಲ್ಲವೂ ಸರಿಯಾಗಿವೆ

    ಉತ್ತರ: D

     

    1. 97 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ, 2011 ರ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ವಿಧಿ 19 ರ ಅಡಿಯಲ್ಲಿ ಸಹಕಾರಿ ಸಂಘಗಳನ್ನು ರಚಿಸುವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಿದೆ.
    2. ಇದು ವಿಧಿ 43B ಅನ್ನು ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಅಡಿ ಸೇರಿಸಿದೆ.
    3. ಇದು ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಅನ್ವಯವಾಗುವ ಸಹಕಾರಿ ಸಂಘಗಳೊಂದಿಗೆ ವ್ಯವಹರಿಸುವ ಭಾಗ IX-B ಅನ್ನು ಸೇರಿಸಿದೆ.
    4. ಎಲ್ಲಾ ಸಹಕಾರಿ ಸಂಘಗಳಲ್ಲಿ SC/ST ಮತ್ತು ಮಹಿಳೆಯರಿಗೆ ಸ್ಥಾನಗಳನ್ನು ಕಾಯ್ದಿರಿಸುವುದನ್ನು ಇದು ಕಡ್ಡಾಯಗೊಳಿಸಿದೆ.

    ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಒಂದು ಮಾತ್ರ
    2. ಎರಡು ಮಾತ್ರ
    3. ಮೂರು ಮಾತ್ರ
    4. ಎಲ್ಲಾ ನಾಲ್ಕು

    ಉತ್ತರ: C

     

    1. ಬಾಬ್ ಎಲ್-ಮಂದೆಬ್ ಜಲಸಂಧಿಗೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಕೆಂಪು ಸಮುದ್ರವನ್ನು ಅರೇಬ್ಬೀ ಸಮುದ್ರದೊಂದಿಗೆ ನೇರವಾಗಿ ಸಂಪರ್ಕಿಸುತ್ತದೆ.
    2. ಇದು ಅರೇಬಿಯಾದ ಪರ್ಯಾಯ ದ್ವೀಪವನ್ನು ಆಫ್ರಿಕಾದ ಶೃಂಗಿ (Horn of Africa)ಯಿಂದ ಬೇರ್ಪಡಿಸುತ್ತದೆ.
    3. ಇದು ಯೆಮೆನ್ ಮತ್ತು ಜಿಬೌಟಿ/ಎರಿಟ್ರಿಯಾ ನಡುವೆ ಇದೆ.
    4. ಇದು ಮೆಡಿಟರೇನಿಯನ್ ಸಮುದ್ರವನ್ನು ಹಿಂದೂ ಮಹಾಸಾಗರದೊಂದಿಗೆ ಸಂಪರ್ಕಿಸುವ ಮಾರ್ಗದಲ್ಲಿ ನಿರ್ಣಾಯಕ ಕೊಂಡಿಯಾಗಿ ರೂಪುಗೊಳ್ಳುತ್ತದೆ.

    ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. 2, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 1, 3 ಮತ್ತು 4 ಮಾತ್ರ
    4. 2 ಮತ್ತು 3 ಮಾತ್ರ

    ಉತ್ತರ: A

     

    1. ಸಾಮ್ರಾಟ್ ಸಂಪ್ರತಿಯ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಅವರು ಮೌರ್ಯ ಸಾಮ್ರಾಜ್ಯದ ಅಶೋಕ ಚಕ್ರವರ್ತಿಯ ನಂತರ ಉತ್ತರಾಧಿಕಾರಿಯಾಗಿದ್ದರು.
    2. ಅವರನ್ನು ಜೈನ ಧರ್ಮದ ಪೋಷಕ ಎಂದು ಪರಿಗಣಿಸಲಾಗುತ್ತದೆ ಮತ್ತು ಅವರನ್ನು ಹೆಚ್ಚಾಗಿ ಜೈನ ಅಶೋಕ ಎಂದು ಕರೆಯಲಾಗುತ್ತದೆ.
    3. ಅವರ ಜೀವನವನ್ನು ಪರಿಶಿಷ್ಟಪರ್ವದಂತಹ ಜೈನ ಗ್ರಂಥಗಳಲ್ಲಿ ವಿವರಿಸಲಾಗಿದೆ.
    4. ಅವರು ಅಹಿಂಸಾ ತತ್ವವನ್ನು ಸಕ್ರಿಯವಾಗಿ ಪ್ರಚಾರ ಮಾಡಿದ್ದಾರೆಂದು ನಂಬಲಾಗಿದೆ.

    ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. 1 ಮತ್ತು 2 ಮಾತ್ರ
    2. 2, 3 ಮತ್ತು 4 ಮಾತ್ರ
    3. 1, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

     

    1. IN-SPACE ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿದ್ದು, ಬಾಹ್ಯಾಕಾಶ ಸಂಬಂಧಿತ ಚಟುವಟಿಕೆಗಳಿಗೆ ಏಕ- ಗವಾಕ್ಷಿ ಅನುಮೊದನಾ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ.
    2. ಬಾಹ್ಯಾಕಾಶ ವಲಯದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ನಿಯಂತ್ರಿಸಲು ಮತ್ತು ಉತ್ತೇಜಿಸಲು ಇದನ್ನು ಸ್ಥಾಪಿಸಲಾಯಿತು.
    3. ಇದು ಪವನ್ ಕುಮಾರ್ ಗೋಯೆಂಕಾ ಅವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಇದು ಮಧ್ಯಪ್ರದೇಶದ ಭೋಪಾಲ್‌ನಲ್ಲಿದೆ.
    4. ಇದು ತಂತ್ರಜ್ಞಾನ ಅಳವಡಿಕೆ ನಿಧಿ (TAF) ಮತ್ತು “ಸಟೇಲೈಟ್ ಬಸ್ ಆಸ್ ಎ ಸರ್ವೀಸ್”ನಂತಹ (SBaaS) ಉಪಕ್ರಮಗಳನ್ನು ಹೊಂದಿದೆ.

    ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    1. ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026 ರ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಈ ನಿಯಮಗಳು SWM ನಿಯಮಗಳು, 2016 ಅನ್ನು ಬದಲಾಯಿಸುತ್ತವೆ ಮತ್ತು ವೃತ್ತಾಕಾರದ ಆರ್ಥಿಕತೆ ಮತ್ತು ಶೂನ್ಯ-ತ್ಯಾಜ್ಯ ಮಾದರಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ.
    2. ಅವು ತ್ಯಾಜ್ಯವನ್ನು ಆರ್ದ್ರ, ಒಣ, ನೈರ್ಮಲ್ಯ ಮತ್ತು ಅಪಾಯಕಾರಿ ಎಂಬ ನಾಲ್ಕು ವಿಭಿನ್ನ ವರ್ಗಗಳಾಗಿ ವಿಂಗಡಿಸುವುದನ್ನು ಕಡ್ಡಾಯಗೊಳಿಸುತ್ತವೆ.
    3. ದಿನಕ್ಕೆ 100 ಕೆಜಿ ಉತ್ಪಾದಿಸುವ ಬೃಹತ್ ತ್ಯಾಜ್ಯ ಉತ್ಪಾದಕರು ಆರ್ದ್ರ ತ್ಯಾಜ್ಯವನ್ನು ಸ್ಥಳೀಯವಾಗಿ ಸಂಸ್ಕರಿಸಬೇಕು ಮತ್ತು ವಿಸ್ತೃತ ಉತ್ಪಾದಕರ ಜವಾಬ್ದಾರಿ (EPR) ಅಳವಡಿಸಿಕೊಳ್ಳಬೇಕು.
    4. ಕೈಗಾರಿಕೆಗಳು ಮತ್ತು ಸಿಮೆಂಟ್ ಸ್ಥಾವರಗಳು ಕಾಲಾನಂತರದಲ್ಲಿ ತ್ಯಾಜ್ಯದಿಂದ ಪಡೆದ ಇಂಧನ (RDF)ದ ಬಳಕೆಯನ್ನು ಹೆಚ್ಚಿಸುವ ಅಗತ್ಯವಿದೆ.

    ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?

    1. ಎರಡು ಮಾತ್ರ
    2. ಮೂರು ಮಾತ್ರ
    3. ಎಲ್ಲಾ ನಾಲ್ಕು
    4. ಯಾವುದೂ ಇಲ್ಲ

    ಉತ್ತರ: D

     

    1. ದಿವಾಳಿತನ ಮತ್ತು ದಿವಾಳಿಕೋರತನ ಸಂಹಿತೆ (IBC), 2016 ರ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕಂಪನಿಗಳು ಮತ್ತು ವ್ಯಕ್ತಿಗಳ ದಿವಾಳಿತನವನ್ನು ಪರಿಹರಿಸಲು ಇದು ಸಮಯ-ಬದ್ಧ ಪ್ರಕ್ರಿಯೆಯನ್ನು ಒದಗಿಸುತ್ತದೆ.
    2. ದಿವಾಳಿತನ ಮತ್ತು ದಿವಾಳಿಕೋರತನ ಸಂಹಿತೆಯ ಅಡಿಯಲ್ಲಿ ಪರಸ್ಪರ ಬದಲಾಯಿಸಬಹುದಾದ ಪದಗಳಾಗಿವೆ ಮತ್ತು ದಿವಾಳಿತನವು ಸಮರ್ಥ ಪ್ರಾಧಿಕಾರದಿಂದ ಕಾನೂನು ಘೋಷಣೆಯನ್ನು ಒಳಗೊಂಡಿರುತ್ತದೆ.
    3. ಈ ಸಂಹಿತೆ ಒತ್ತಡಕ್ಕೊಳಗಾದ ಸ್ವತ್ತುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವ ಮೂಲಕ ವ್ಯವಹಾರ ಮಾಡುವ ಸುಲಭತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
    4. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು ಕಂಪನಿಗಳು ಮತ್ತು LLPಗಳ ದಿವಾಳಿತನ ಪ್ರಕರಣಗಳನ್ನು ನಿರ್ವಹಿಸುತ್ತದೆ, ಆದರೆ ಸಾಲ ವಸೂಲಾತಿ ನ್ಯಾಯಮಂಡಳಿಯು ವ್ಯಕ್ತಿಗಳು ಮತ್ತು ಪಾಲುದಾರಿಕೆ ಸಂಸ್ಥೆಗಳ ದಿವಾಳಿತನವನ್ನು ನಿರ್ವಹಿಸುತ್ತದೆ.

    ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. 1, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    1. Qdenga (TAK-003) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಟಕೆಡಾ ಫಾರ್ಮಾಸ್ಯುಟಿಕಲ್ ಕಂಪನಿ ಅಭಿವೃದ್ಧಿಪಡಿಸಿದ ಡೆಂಗ್ಯೂ ಲಸಿಕೆಯಾಗಿದೆ.
    2. ಇದು ಎಲ್ಲಾ ನಾಲ್ಕು ಡೆಂಗ್ಯೂ ವೈರಸ್ ಸಿರೊಟೈಪ್‌ಗಳನ್ನು ಗುರಿಯಾಗಿಸಿಕೊಂಡು ಲೈವ್-ಅಟೆನ್ಯುವೇಟೆಡ್ ಟೆಟ್ರಾವೇಲೆಂಟ್ ಲಸಿಕೆಯಾಗಿದೆ.
    3. ಡೆಂಗ್ಯೂ ವೈರಸ್‌ನ ದುರ್ಬಲಗೊಂಡ ರೂಪಗಳನ್ನು ಬಳಸಿಕೊಂಡು ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸಲು ಎಲ್ಲಾ ವಯಸ್ಸಿನ ವ್ಯಕ್ತಿಗಳಿಗೆ ಇದನ್ನು ನೀಡಲು ಭಾರತದಲ್ಲಿ DCGI ಅನುಮೋದಿಸಿದೆ.
    4. ಡೆಂಗ್ಆಲ್, ICMR ಸಹಯೋಗದೊಂದಿಗೆ ಪ್ಯಾನೇಸಿಯಾ ಬಯೋಟೆಕ್ ಅಭಿವೃದ್ಧಿಪಡಿಸಿದ ಭಾರತದ ಮೊದಲ ಸ್ಥಳೀಯ ಡೆಂಗ್ಯೂ ಲಸಿಕೆಯಾಗಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2, 3 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 1, 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

     

    1. PMAY-G ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಗ್ರಾಮೀಣ ಮನೆಗಳಿಗೆ ಹಣಕಾಸಿನ ನೆರವು ನೀಡುವ ಮೂಲಕ ಮೂಲಭೂತ ಸೌಕರ್ಯಗಳೊಂದಿಗೆ ಪಕ್ಕಾ ಮನೆಗಳನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ.
    2. ಸಾಮಾಜಿಕ-ಆರ್ಥಿಕ ಮತ್ತು ಜಾತಿ ಜನಗಣತಿ (SECC), 2011 ರ ದತ್ತಾಂಶದ ಆಧಾರದ ಮೇಲೆ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ ಮತ್ತು ಗ್ರಾಮ ಸಭೆಯಿಂದ ಪರಿಶೀಲಿಸಲಾಗುತ್ತದೆ.
    3. ಕೇಂದ್ರ ಮತ್ತು ರಾಜ್ಯದ ನಡುವಿನ ಹಣಕಾಸಿನ ಅನುಪಾತವು ಬಯಲು ಪ್ರದೇಶಗಳಲ್ಲಿ 60:40 ಮತ್ತು ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳಿಗೆ, ಅನುಪಾತವು 90:10 ಆಗಿದೆ.
    4. ಬಯಲು ಪ್ರದೇಶಗಳಿಗೆ ಹೋಲಿಸಿದರೆ ಗುಡ್ಡಗಾಡು ಮತ್ತು ಈಶಾನ್ಯ ರಾಜ್ಯಗಳಲ್ಲಿ ಹಣಕಾಸಿನ ನೆರವು ಹೆಚ್ಚಾಗಿದೆ ಮತ್ತು ಇದನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಜಾರಿಗೊಳಿಸುತ್ತದೆ.

    ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. 1 ಮತ್ತು 3 ಮಾತ್ರ
    2. 1, 2 ಮತ್ತು 4 ಮಾತ್ರ
    3. 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: B

     

    1. ಅಮೋನಿಯಂ ನೈಟ್ರೇಟ್ ನ ಬಳಸುವಿಕೆಯ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ಕೃಷಿಯಲ್ಲಿ ಸಾರಜನಕ ಗೊಬ್ಬರವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.
    2. ಗಣಿಗಾರಿಕೆಯಲ್ಲಿ ಬಳಸುವ ಸ್ಫೋಟಕಗಳಲ್ಲಿ ಇದು ಪ್ರಮುಖ ಅಂಶವಾಗಿದೆ.
    3. ಇದನ್ನು ಪೈರೋಟೆಕ್ನಿಕ್‌ಗಳಲ್ಲಿ ಕಡಿಮೆ ಮಾಡುವ ಏಜೆಂಟ್ ಆಗಿ ಬಳಸಲಾಗುತ್ತದೆ.
    4. ಇದನ್ನು ನೈಟ್ರಸ್ ಆಕ್ಸೈಡ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.

    ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    1. NETRA AEW&C ವ್ಯವಸ್ಥೆಯ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು DRDO ಅಭಿವೃದ್ಧಿಪಡಿಸಿದೆ.
    2. ಇದನ್ನು ಪ್ರಾಥಮಿಕವಾಗಿ ವೈಮಾನಿಕ ಕಣ್ಗಾವಲು ಮತ್ತು ಮುನ್ನೇಚ್ಚರಿಕೆಗಾಗಿ ಬಳಸಲಾಗುತ್ತದೆ.
    3. ಇದನ್ನು ಬಾಹ್ಯಾಕಾಶ ಆಧಾರಿತ ಮೇಲ್ವಿಚಾರಣೆಗಾಗಿ ಉಪಗ್ರಹ ವೇದಿಕೆಯಲ್ಲಿ ಅಳವಡಿಸಲಾಗಿದೆ.
    4. ಇದು ಕಾರ್ಯಾಚರಣೆಗಳ ಸಮಯದಲ್ಲಿ ಆಜ್ಞೆ ಮತ್ತು ನಿಯಂತ್ರಣ ಸಾಮರ್ಥ್ಯಗಳನ್ನು ಒದಗಿಸುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2 ಮತ್ತು 3 ಮಾತ್ರ
    2. 1 ಮತ್ತು 3 ಮಾತ್ರ
    3. 1, 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

     

    1. ಈ ಕೆಳಗಿನ ಪಠ್ಯವನ್ನು ಪರಿಗಣಿಸಿ:

    ಬಲೀನ್ ತಿಮಿಂಗಿಲ (baleen whale) ಗುಂಪಿಗೆ ಸೇರಿದ ಈ ಸಮುದ್ರ ಸಸ್ತನಿಯು ವಿಶ್ವದ ಅತ್ಯಂತ ಅಪರೂಪದ ತಿಮಿಂಗಿಲ ಪ್ರಭೇದಗಳಲ್ಲಿ ಒಂದಾಗಿದ್ದು, ಪ್ರಸ್ತುತ 100 ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಉಳಿದಿವೆ. ಇದು ಉತ್ತರ ಮೆಕ್ಸಿಕೋ ಕೊಲ್ಲಿಯ ಒಂದು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ (endemic) ಮತ್ತು ಇದು ದೂರದ ಅಂತರದ ವಲಸೆಗಳನ್ನು ಕೈಗೊಳ್ಳುವುದಿಲ್ಲ. ಇದು ಪ್ರಾಥಮಿಕವಾಗಿ ಸಣ್ಣ ಮೀನುಗಳು ಮತ್ತು ಸ್ಕ್ವಿಡ್‌ಗಳನ್ನು ಆಹಾರವಾಗಿ ಸೇವಿಸುತ್ತದೆ ಹಾಗೂ ತೈಲ ಕೊರೆಯುವಿಕೆ, ಹಡಗುಗಳ ಘರ್ಷಣೆ ಮತ್ತು ಹವಾಮಾನ ಬದಲಾವಣೆಯಿಂದಾಗಿ ಅಪಾಯಗಳನ್ನು ಎದುರಿಸುತ್ತಿದೆ. ಇದನ್ನು IUCN ಕೆಂಪು ಪಟ್ಟಿಯಲ್ಲಿ ‘ತೀವ್ರ ಅಳಿವಿನಂಚಿನಲ್ಲಿರುವ (Critically Endangered) ಪ್ರಭೇದ ಎಂದು ಪಟ್ಟಿ ಮಾಡಲಾಗಿದೆ.

    ಮೇಲಿನ ಪಠ್ಯದಲ್ಲಿ ಈ ಕೆಳಗಿನ ಯಾವ ಪ್ರಭೇದವನ್ನು ಉತ್ತಮವಾಗಿ ವಿವರಿಸಲಾಗಿದೆ?

    1. ನೀಲಿ ತಿಮಿಂಗಿಲ
    2. ರೈಸ್ ತಿಮಿಂಗಿಲ (ಬಾಲೆನೊಪ್ಟೆರಾ ರೈಸಿ)
    3. ಕುಬ್ಬು ಬೆನ್ನಿನ ತಿಮಿಂಗಿಲ
    4. ವೀರ್ಯ ತಿಮಿಂಗಿಲ

    ಉತ್ತರ: B



    1. ಕರ್ ಸಾಥಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಭಾರತದ ಆದಾಯ ತೆರಿಗೆ ಇಲಾಖೆಯಿಂದ ಪ್ರಾರಂಭಿಸಲಾದ ಕೃತಕ ಬುದ್ಧಿಮತ್ತೇ-ಸಕ್ರಿಯಗೊಳಿಸಿದ ಚಾಟ್‌ಬಾಟ್ ವೇದಿಕೆಯಾಗಿದೆ.
    2. ಇದು ಅಧಿಕೃತ ಕೆಲಸದ ಸಮಯದಲ್ಲಿ ಮಾತ್ರ ಸಹಾಯವನ್ನು ಒದಗಿಸುತ್ತದೆ.
    3. ಇದು ಇ-ಪಾವತಿ, ಇ-ಪರಿಶೀಲನೆ ಮತ್ತು ತೆರಿಗೆ-ಸಂಬಂಧಿತ FAQ ಗಳಂತಹ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸುತ್ತದೆ.
    4. ಇದು ಜಿಎಸ್ ಟಿ  ಅಡಿಯಲ್ಲಿ ಪರೋಕ್ಷ ತೆರಿಗೆಗಳೊಂದಿಗೆ ಪ್ರತ್ಯೇಕವಾಗಿ ವ್ಯವಹರಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?

    1. ಒಂದು ಮಾತ್ರ
    2. ಎರಡು ಮಾತ್ರ
    3. ಮೂರು ಮಾತ್ರ
    4. ಎಲ್ಲಾ ನಾಲ್ಕು

    ಉತ್ತರ: B

     

    1. ಈ ಕೆಳಗಿನ ಯಾವ ಇಂಧನ ಅನಿಲಗಳು ಪ್ರಾಥಮಿಕವಾಗಿ ಮೀಥೇನ್ ಆಧಾರಿತ ಇಂಧನಗಳಾಗಿವೆ?
    1. ಕೊಳವೆ ನೈಸರ್ಗಿಕ ಅನಿಲ (PNG)
    2. ಸಂಕುಚಿತ ನೈಸರ್ಗಿಕ ಅನಿಲ (CNG)
    3. ದ್ರವೀಕೃತ ನೈಸರ್ಗಿಕ ಅನಿಲ (LNG)
    4. ದ್ರವೀಕೃತ ಪೆಟ್ರೋಲಿಯಂ ಅನಿಲ (LPG)

    ಕೆಳಗಿನ ಸಂಕೇತವನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. 1, 2 ಮತ್ತು 3 ಮಾತ್ರ
    2. 1, 2 ಮತ್ತು 4 ಮಾತ್ರ
    3. 1, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    1. ಬಹು-ಅಪಾಯದ ಆರಂಭಿಕ ಎಚ್ಚರಿಕೆ ನಿರ್ಧಾರ ಬೆಂಬಲ ವ್ಯವಸ್ಥೆ (MHEW-DSS) ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ನಿರ್ಣಾಯಕ ಹವಾಮಾನ ಮುನ್ಸೂಚನೆ ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸುವ ಭಾರತ ಹವಾಮಾನ ಇಲಾಖೆಯಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಕೃತಕ ಬುದ್ಧಿಮತ್ತೇ-ಸಕ್ರಿಯಗೊಳಿಸಿದ ಡಿಜಿಟಲ್ ವೇದಿಕೆಯಾಗಿದೆ.
    2. ಇದು ಉಪಗ್ರಹಗಳು, ರೆಡಾರ್‌ಗಳು ಮತ್ತು ಭೂಮಲ್ಮೈ ಮತ್ತು ಮೇಲ್ಭಾಗದ ಗಾಳಿಯ ಸಂವೇದಕಗಳಿಂದ ನೈಜ-ಸಮಯದ ದತ್ತಾಂಶವನ್ನು ಕೇಂದ್ರೀಕೃತ GIS-ಸಕ್ರಿಯಗೊಳಿಸಿದ ವೇದಿಕೆಗೆ ಸಂಯೋಜಿಸುತ್ತದೆ.
    3. ಇದನ್ನು ಮಿಷನ್ ಮೌಸಮ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಹವಾಮಾನ ದತ್ತಾಂಶ ಸಂಸ್ಕರಣೆಯ ಸಂಪೂರ್ಣ ಯಾಂತ್ರೀಕರಣವನ್ನು ಸಾಧಿಸಿದೆ ಮತ್ತು ಹಸ್ತಚಾಲಿತ ಕೆಲಸದ ಹರಿವುಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದೆ. 
    4. ಇದು ಮುನ್ಸೂಚನೆಯ ನಿಖರತೆಯನ್ನು ಸುಮಾರು 30% ರಷ್ಟು ಸುಧಾರಿಸಿದೆ ಮತ್ತು ಮುನ್ಸೂಚನೆ ತಯಾರಿ ಸಮಯವನ್ನು 6 ಗಂಟೆಗಳಿಂದ 3 ಗಂಟೆಗಳಿಗೆ ಗಮನಾರ್ಹವಾಗಿ ಕಡಿಮೆ ಮಾಡಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1 ಮತ್ತು 3 ಮಾತ್ರ
    2. 2 ಮತ್ತು 3 ಮಾತ್ರ
    3. 1, 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

     

    1. ಮೊಲುಕ್ಕಾ ಸಮುದ್ರಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಸುಲಾವೆಸಿ ಮತ್ತು ಹಲ್ಮಹೆರಾ ದ್ವೀಪಗಳ ನಡುವೆ ಪಶ್ಚಿಮ ಪೆಸಿಫಿಕ್ ಮಹಾಸಾಗರದಲ್ಲಿದೆ.
    2. ಇದು ಸಬ್ಡಕ್ಷನ್ ವಲಯಗಳು ಮತ್ತು ಆಗಾಗ್ಗೆ ಭೂಕಂಪಗಳೊಂದಿಗೆ ಸಂಬಂಧಿಸಿದ ಭೂ-ಫಲಕಗಳ ಸಕ್ರಿಯ ಪ್ರದೇಶದ ಉದ್ದಕ್ಕೂ ಇದೆ.
    3. ಇದು ಹಿಂದೂ ಮಹಾಸಾಗರವನ್ನು ದಕ್ಷಿಣ ಚೀನಾ ಸಮುದ್ರದೊಂದಿಗೆ ನೇರವಾಗಿ ಸಂಪರ್ಕಿಸುತ್ತದೆ, ಇದು ಪ್ರಮುಖ ಅಂತರರಾಷ್ಟ್ರೀಯ ಹಡಗು ಮಾರ್ಗವನ್ನು ರೂಪಿಸುತ್ತದೆ.
    4. ಇದು ಹವಳ ತ್ರಿಕೋನದ ಭಾಗವಾಗಿದೆ, ಅಸಾಧಾರಣವಾಗಿ ಹೆಚ್ಚಿನ ಸಮುದ್ರ ಜೀವವೈವಿಧ್ಯತೆಗೆ ಹೆಸರುವಾಸಿಯಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    1. ಯುವ ಸಂಗಮಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಯುವಕರಲ್ಲಿ ಜನರಿಂದ ಜನರಿಗೆ ಸಂಪರ್ಕವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಭಾರತ ಸರ್ಕಾರದ ಒಂದು ಉಪಕ್ರಮವಾಗಿದೆ.
    2. ಇದನ್ನು ಶಿಕ್ಷಣ ಸಚಿವಾಲಯವು ಪರಿಕಲ್ಪನೆ ಮಾಡಿ, ‘ಏಕ್ ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರಮದಡಿಯಲ್ಲಿ ಜಾರಿಗೆ ತಂದಿತು.
    3. ‘ಏಕ್ ಭಾರತ್ ಶ್ರೇಷ್ಠ ಭಾರತ್’ ಉಪಕ್ರಮವನ್ನು ನರೇಂದ್ರ ಮೋದಿ ಅವರು ಅಕ್ಟೋಬರ್ 31, 2015 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ವಾರ್ಷಿಕೋತ್ಸವದಂದು ಘೋಷಿಸಿದರು.
    4. ಯುವ ಸಂಗಮ್ ಪ್ರಾಥಮಿಕವಾಗಿ ರಾಜ್ಯಗಳಾದ್ಯಂತ ಯುವ ಉದ್ಯಮಿಗಳಿಗೆ ಆರ್ಥಿಕ ಸಹಾಯದ ಮೇಲೆ ಕೇಂದ್ರೀಕರಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2, 3 ಮತ್ತು 4 ಮಾತ್ರ
    2. 1 ಮತ್ತು 4 ಮಾತ್ರ
    3. 1, 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: C

     

    1. ಸಿನ್ ಗ್ಯಾಸ್ (ಸಂಶ್ಲೇಷಣಾ ಅನಿಲ) ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಸಿನ್ ಗ್ಯಾಸ್ ಅನ್ನು ಅಮೋನಿಯಾ ಉತ್ಪಾದನೆಗೆ ಕಚ್ಚಾವಸ್ತುವಾಗಿ ಬಳಸಲಾಗುತ್ತದೆ, ಇದನ್ನು ರಸಗೊಬ್ಬರ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
    2. ಸಿನ್ ಗ್ಯಾಸ್‌ನಿಂದ ಉತ್ಪತ್ತಿಯಾಗುವ ಮೆಥನಾಲ್ ಅನ್ನು ಇಂಧನವಾಗಿ ಮತ್ತು ರಾಸಾಯನಿಕ ಕಚ್ಚಾವಸ್ತುವಾಗಿ ಬಳಸಬಹುದು.
    3. ಸಿನ್ ಗ್ಯಾಸ್‌ನಿಂದ ಪಡೆದ ಹೈಡ್ರೋಜನ್ ಅನ್ನು ಶುದ್ಧ ಇಂಧನ ವಾಹಕವೆಂದು ಪರಿಗಣಿಸಲಾಗುತ್ತದೆ.
    4. ಸಿನ್ ಗ್ಯಾಸ್‌ನಿಂದ ಉತ್ಪತ್ತಿಯಾಗುವ ಸಂಶ್ಲೇಷಿತ ನೈಸರ್ಗಿಕ ಅನಿಲ (SNG) ಆಮದು ಮಾಡಿಕೊಂಡ ದ್ರವೀಕೃತ ನೈಸರ್ಗಿಕ ಅನಿಲ (LNG)ಕ್ಕೇ ಬದಲಿಯಾಗಿ ಕಾರ್ಯನಿರ್ವಹಿಸಬಹುದು.

    ಮೇಲೆ ನೀಡಲಾದ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?

    1. ಎರಡು ಮಾತ್ರ
    2. ಮೂರು ಮಾತ್ರ
    3. ಎಲ್ಲಾ ನಾಲ್ಕು
    4. ಎಲ್ಲವೂ ಸರಿಯಾಗಿವೆ

    ಉತ್ತರ: D

     

    1. ಆದಿತ್ಯ-L1 ಕಾರ್ಯಾಚರಣೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಸೂರ್ಯನನ್ನು ಅಧ್ಯಯನ ಮಾಡಲು ಮೀಸಲಾಗಿರುವ ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯವಾಗಿದೆ.
    2. ಈ ಕಾರ್ಯಾಚರಣೆಯನ್ನು PSLV-C57 ಉಡಾವಣ ವಾಹನ ಬಳಸಿ ಉಡಾವಣೆ ಮಾಡಲು ಯೋಜಿಸಲಾಗಿದೆ.
    3. ಬಾಹ್ಯಾಕಾಶ ನೌಕೆಯನ್ನು ಸೂರ್ಯ-ಭೂಮಿ ವ್ಯವಸ್ಥೆಯ ಲ್ಯಾಗ್ರೇಂಜ್ ಪಾಯಿಂಟ್ L2 ಸುತ್ತಲೂ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ.
    4. ಇದು ವರ್ಣಗೋಳ ಮತ್ತು ಕರೋನಾ ಸೇರಿದಂತೆ ಸೂರ್ಯನ ಮೇಲಿನ ವಾತಾವರಣದ ಚಲನಶೀಲತೆಯನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    ಹೇಳಿಕೆ 1: INS ತಾರಗಿರಿ ಅರಿಹಂತ್-ವರ್ಗದ ಪರಮಾಣು-ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ (SSBN).

    ಹೇಳಿಕೆ 2: INS ತಾರಗಿರಿಯನ್ನು ಮಡಗಾವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದೆ.

    ಹೇಳಿಕೆ 3: INS ಅರಿಧಮನ್ ನೀಲಗಿರಿ-ವರ್ಗದ ರಹಸ್ಯ ಮಾರ್ಗದರ್ಶಿ ಕ್ಷಿಪಣಿ ಯುದ್ಧನೌಕೆಯಾಗಿದೆ.

    ಹೇಳಿಕೆ 4: INS ಅರಿಧಮನ್ ಅನ್ನು ವಿಶಾಖಪಟ್ಟಣಂನಲ್ಲಿರುವ ಹಡಗು ನಿರ್ಮಾಣ ಕೇಂದ್ರದಲ್ಲಿ (SBC) ನಿರ್ಮಿಸಲಾಗಿದೆ.

    ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?

    1. ಹೇಳಿಕೆ 1 ಸರಿಯಾಗಿದೆ, ಹೇಳಿಕೆ 2 ತಪ್ಪಾಗಿದೆ, ಹೇಳಿಕೆ 3 ಸರಿಯಾಗಿದೆ, ಹೇಳಿಕೆ 4 ತಪ್ಪಾಗಿದೆ.
    2. ಹೇಳಿಕೆ 1 ತಪ್ಪಾಗಿದೆ, ಹೇಳಿಕೆ 2 ಸರಿಯಾಗಿದೆ, ಹೇಳಿಕೆ 3 ತಪ್ಪಾಗಿದೆ, ಹೇಳಿಕೆ 4 ಸರಿಯಾಗಿದೆ.
    3. ಹೇಳಿಕೆ 1 ಮತ್ತು ಹೇಳಿಕೆ 2 ಎರಡೂ ಸರಿಯಾಗಿವೆ, ಆದರೆ ಹೇಳಿಕೆ 3 ಮತ್ತು ಹೇಳಿಕೆ 4 ಎರಡೂ ತಪ್ಪಾಗಿವೆ.
    4. ಹೇಳಿಕೆ 1 ಮತ್ತು ಹೇಳಿಕೆ 2 ಎರಡೂ ತಪ್ಪಾಗಿವೆ, ಆದರೆ ಹೇಳಿಕೆ 3 ಮತ್ತು ಹೇಳಿಕೆ 4 ಎರಡೂ ಸರಿಯಾಗಿವೆ.

    ಉತ್ತರ: B

     

    1. ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:
    1. ದೀನದಯಾಳ್ ಬಂದರು – ಗುಜರಾತ್
    2. ಪಾರದೀಪ್ ಬಂದರು – ಒಡಿಶಾ
    3. ಶ್ಯಾಮ ಪ್ರಸಾದ್ ಮುಖರ್ಜಿ ಬಂದರು – ಆಂಧ್ರಪ್ರದೇಶ
    4. ಕಾಮರಾಜರ್ ಬಂದರು – ಕೇರಳ
    5. ಜವಾಹರಲಾಲ್ ನೆಹರು ಬಂದರು – ಮಹಾರಾಷ್ಟ್ರ

    ಮೇಲೆ ನೀಡಲಾದ ಎಷ್ಟು ಜೋಡಿಗಳು ಸರಿಯಾಗಿ ಹೊಂದಿಕೆಯಾಗುತ್ತವೆ?

    1. ಎರಡು ಮಾತ್ರ
    2. ಮೂರು ಮಾತ್ರ
    3. ನಾಲ್ಕು ಮಾತ್ರ
    4. ಎಲ್ಲಾ ಐದು

    ಉತ್ತರ: B

     

    1. ಮಂದಗತಿಯ ಹಣದುಬ್ಬರ (Stagflation)ದ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ನಿಶ್ಚಲ ಅಥವಾ ಋಣಾತ್ಮಕ ಆರ್ಥಿಕ ಬೆಳವಣಿಗೆಯೊಂದಿಗೆ ಹೆಚ್ಚಿನ ಹಣದುಬ್ಬರದ ಪರಿಸ್ಥಿತಿಯನ್ನು ಸೂಚಿಸುತ್ತದೆ.
    2. ಇದು ಸಾಮಾನ್ಯವಾಗಿ ಆರ್ಥಿಕ ಬೆಳವಣಿಗೆಯ ಜೊತೆಗೆ ಆದರೆ ಹೆಚ್ಚುತ್ತಿರುವ ನಿರುದ್ಯೋಗ ಮಟ್ಟಗಳೊಂದಿಗೆ ಸಂಬಂಧಿಸಿದೆ.
    3. ಇದು ಹಣದುಬ್ಬರ ಮತ್ತು ನಿರುದ್ಯೋಗದ ನಡುವಿನ ಸಾಂಪ್ರದಾಯಿಕ ಫಿಲಿಪ್ಸ್ ಕರ್ವ್ ಸಂಬಂಧವನ್ನು ಬೆಂಬಲಿಸುತ್ತದೆ.
    4. ಇದನ್ನು ಮೊದಲು 1960 ರ ದಶಕದಲ್ಲಿ ಬ್ರಿಟಿಷ್ ರಾಜಕಾರಣಿ ಇಯಾನ್ ಮ್ಯಾಕ್ಲಿಯೋಡ್ ಜನಪ್ರಿಯಗೊಳಿಸಿದರು.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2, 3 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 1, 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

     

    1. ಪ್ರಾಜೆಕ್ಟ್ ಚೇತಕ್ ಯೋಜನೆಯ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಭೌಗೋಳಿಕ ವ್ಯಾಪ್ತಿಯ ವಿಷಯದಲ್ಲಿ ಇದು ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆಯ (BRO) ಅತಿದೊಡ್ಡ ಯೋಜನೆಗಳಲ್ಲಿ ಒಂದಾಗಿದೆ.
    2. ಇದನ್ನು 1980 ರಲ್ಲಿ ಸ್ಥಾಪಿಸಲಾಯಿತು ಮತ್ತು ಪ್ರಾಥಮಿಕವಾಗಿ ಭಾರತದ ಈಶಾನ್ಯ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತದೆ.
    3. ಇದು ಭಾರತದ ಅಂತರರಾಷ್ಟ್ರೀಯ ಗಡಿಗಳ ಕಡೆಗೆ ಸಂಪರ್ಕ ರಸ್ತೆಗಳನ್ನು ನಿರ್ವಹಿಸುವಲ್ಲಿ ಕಾರ್ಯತಂತ್ರದ ಪಾತ್ರವನ್ನು ವಹಿಸುತ್ತದೆ.
    4. ಇದು ರಾಜಸ್ಥಾನ, ಪಂಜಾಬ್ ಮತ್ತು ಉತ್ತರ ಗುಜರಾತ್‌ನ ಕೆಲವು ಭಾಗಗಳಲ್ಲಿ ರಕ್ಷಣಾ ಸರಕು ಸಾಗಣೆ ಮತ್ತು ಪ್ರಾದೇಶಿಕ ಸಂಪರ್ಕ ಎರಡಕ್ಕೂ ಕೊಡುಗೆ ನೀಡುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    1. ಈ ಕೆಳಗಿನ ಬುಡಕಟ್ಟು ಸಮುದಾಯಗಳನ್ನು ಪರಿಗಣಿಸಿ:
    1. ನಾಯಕ್ಡ / ನಾಯಕ / ಬೇಡರ
    2. ಗೊಂಡ್
    3. ಜೇನು ಕುರುಬ
    4. ಸೋಲಿಗ
    5. ಹಕ್ಕಿಪಿಕ್ಕಿ
    6. ಕೊರಗ
    7. ಯೆರವ

    ಈ ಮೇಲಿನ ಎಷ್ಟು ಬುಡಕಟ್ಟು ಸಮುದಾಯಗಳು ಕರ್ನಾಟಕಕ್ಕೆ ಸೇರಿಲ್ಲ?

    1. ಕೇವಲ ಮೂರು
    2. ಕೇವಲ ನಾಲ್ಕು
    3. ಯಾವುದೂ ಇಲ್ಲ
    4. ಎಲ್ಲಾ ಏಳು

    ಉತ್ತರ: C

     

    1. ನಮೋ ಡ್ರೋನ್ ದಿದಿ ಯೋಜನೆಯ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಭಾರತೀಯ ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನವನ್ನು ಉತ್ತೇಜಿಸುವ ಉದ್ದೇಶದಿಂದ ಇದನ್ನು 2023 ರಲ್ಲಿ ಪ್ರಾರಂಭಿಸಲಾಯಿತು.
    2. ಇದು 2024 ಮತ್ತು 2026 ರ ನಡುವೆ ಮಹಿಳಾ ಸ್ವಸಹಾಯ ಗುಂಪುಗಳಿಗೆ (SHGs) 15,000 ಡ್ರೋನ್‌ಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
    3. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಜಾರಿಗೊಳಿಸಿದ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    4. ಗ್ರಾಮೀಣ ಮಹಿಳೆಯರನ್ನು ಕೃಷಿ-ತಂತ್ರಜ್ಞಾನ ಉದ್ಯಮಿಗಳಾಗಿ ಸಬಲೀಕರಣಗೊಳಿಸಲು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಇದನ್ನು ಜಾರಿಗೊಳಿಸಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1 ಮತ್ತು 3 ಮಾತ್ರ
    2. 1, 2 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇವರು ನಾಗರಿಕ ಅಸಹಕಾರ ಚಳುವಳಿ ಮತ್ತು ಕ್ವಿಟ್ ಇಂಡಿಯಾ ಚಳುವಳಿ ಎರಡರಲ್ಲೂ ಭಾಗವಹಿಸಿದರು.
    2. ಇವರು ಅಖಿಲ ಭಾರತೀಯ ರವಿದಾಸ್ ಮಹಾಸಭಾ ಮತ್ತು ಅಖಿಲ ಭಾರತದ ಶೋಷಿತ ವರ್ಗಗಳ ಲೀಗ್‌ನಂತಹ ಸಂಘಟನೆಗಳನ್ನು ಸ್ಥಾಪಿಸಿದರು.
    3. ಅಸ್ಪೃಶ್ಯತೆಯನ್ನು ತೊಡೆದುಹಾಕುವ ಗುರಿಯನ್ನು ಹೊಂದಿರುವ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ, 1955 ನ್ನು ಜಾರಿಗೆ ತರುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದರು.
    4. ಆಹಾರ ಮತ್ತು ಕೃಷಿ ಸಚಿವರಾಗಿ, ಇವರು ಹಸಿರು ಕ್ರಾಂತಿಗೆ ಕಾರಣರಾದರು ಮತ್ತು ರಕ್ಷಣಾ ಸಚಿವರಾಗಿ, ಬಾಂಗ್ಲಾದೇಶದ ರಚನೆಗೆ ಕಾರಣವಾದ 1971 ರ ಭಾರತ-ಪಾಕ್ ಯುದ್ಧದ ಸಮಯದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದರು.

    ಈ ಮೇಲಿನ ಹೇಳಿಕೆಗಳಿಂದ ಕೆಳಗಿನ ಯಾವ ವ್ಯಕ್ತಿತ್ವವನ್ನು ಉತ್ತಮವಾಗಿ ವಿವರಿಸಲಾಗಿದೆ?

    1. ಬಿ. ಆರ್. ಅಂಬೇಡ್ಕರ್
    2. ಜಗಜೀವನ್ ರಾಮ್
    3. ರಾಮ್ ಮನೋಹರ್ ಲೋಹಿಯಾ
    4. ಲಾಲ್ ಬಹದ್ದೂರ್ ಶಾಸ್ತ್ರಿ

    ಉತ್ತರ: B

     

    1. ಭಾರತದಲ್ಲಿ ಬಂಧನದಲ್ಲಿನ ಸಾವುಗಳ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಪೊಲೀಸ್ ಅಥವಾ ನ್ಯಾಯಾಂಗ ಬಂಧನದಲ್ಲಿ ಸಂಭವಿಸುವ ವ್ಯಕ್ತಿಯ ಸಾವನ್ನು ಒಳಗೊಂಡಿದೆ.
    2. ಬಂಧನದಲ್ಲಿನ ಸಾವುಗಳು ವಿಚಾರಣೆಗೆ ಮುನ್ನ, ಪೊಲೀಸ್ ವಿಚಾರಣೆಯ ಸಮಯದಲ್ಲಿ ಅಥವಾ ಶಿಕ್ಷೆಗೊಳಗಾದ ನಂತರ ಸಂಭವಿಸಬಹುದು.
    3. ಇದು ಚಿತ್ರಹಿಂಸೆ, ನಿರ್ಲಕ್ಷ್ಯ, ವೈದ್ಯಕೀಯ ಆರೈಕೆ ನಿರಾಕರಣೆ ಅಥವಾ ಅನುಮಾನಾಸ್ಪದ ಸಂದರ್ಭಗಳಿಂದ ಉಂಟಾಗಬಹುದು.
    4. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಬಂಧನದಲ್ಲಿನ ಸಾವುಗಳು ದಾಖಲಾಗಿವೆ ಮತ್ತು ತಮಿಳುನಾಡು ದಕ್ಷಿಣ ರಾಜ್ಯಗಳಲ್ಲಿ ಅತಿ ಹೆಚ್ಚು ಬಂಧನದಲ್ಲಿನ ಸಾವುಗಳನ್ನು ದಾಖಲಿಸಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2 ಮತ್ತು 3 ಮಾತ್ರ
    2. 1, 2 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: D

     

    1. ಕಡಲ ಟಾರ್ ಬಾಲ್ ಗಳ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕಡಲ ಪರಿಸರದಲ್ಲಿ ತೈಲ ಅಥವಾ ನೈಸರ್ಗಿಕ ಅನಿಲದ ಸೋರಿಕೆಯ ನಂತರ ಕಚ್ಚಾ ತೈಲದ ಹವಾಮಾನದಿಂದಾಗಿ ಅವು ರೂಪುಗೊಳ್ಳುತ್ತವೆ.
    2. ಅವು ಸಾಮಾನ್ಯವಾಗಿ ತಿಳಿ ಬಣ್ಣದಲ್ಲಿರುತ್ತವೆ ಮತ್ತು ಸಮುದ್ರದ ನೀರಿನಲ್ಲಿ ಸುಲಭವಾಗಿ ಕರಗುತ್ತವೆ.
    3. ಅವು ಭಾರ ಲೋಹಗಳು ಮತ್ತು ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ (PAH ಗಳು)ಗಳಂತಹ ವಿಷಕಾರಿ ವಸ್ತುಗಳನ್ನು ಒಳಗೊಂಡಿರಬಹುದು.
    4. ಅವು ಒಮ್ಮೆ ರೂಪುಗೊಂಡ ನಂತರ ಸಮುದ್ರ ಪರಿಸರ ವ್ಯವಸ್ಥೆಗಳಿಗೆ ಸಂಪೂರ್ಣವಾಗಿ ಹಾನಿಕಾರಕವಲ್ಲ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1 ಮತ್ತು 3 ಮಾತ್ರ
    2. 1, 2 ಮತ್ತು 3 ಮಾತ್ರ
    3. 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    1. ಶಬರಿಮಲೆ ದೇವಾಲಯವು ಯಾವ ಸಂರಕ್ಷಿತ ಪ್ರದೇಶದಲ್ಲಿದೆ?
    1. ಬಂಡೀಪುರ ರಾಷ್ಟ್ರೀಯ ಉದ್ಯಾನವನ
    2. ಪೆರಿಯಾರ್ ಹುಲಿ ಮೀಸಲು ಪ್ರದೇಶ
    3. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
    4. ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ

    ಉತ್ತರ: B

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಪ್ರಸ್ತಾವಿತ ಸಾಲ ಖಾತರಿ ಯೋಜನೆಯು ತುರ್ತು ಸಾಲ ರೇಖೆಯ ಖಾತರಿ ಯೋಜನೆ (ECGLS) ಚೌಕಟ್ಟಿನ ವಿಸ್ತರಣೆಯಾಗಿದೆ.
    2. COVID-19 ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮವನ್ನು ತಗ್ಗಿಸಲು ECLGS ಅನ್ನು ಪರಿಚಯಿಸಲಾಯಿತು.
    3. ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಮಾತ್ರ ECLGS ಅಡಿಯಲ್ಲಿ ಅರ್ಹವಾಗಿವೆ.
    4. ಈ ಯೋಜನೆಯು ಅರ್ಹ ಸಾಲಗಾರರಿಗೆ ಖಾತರಿಪಡಿಸಿದ ಸಾಲದ ಬೆಂಬಲವನ್ನು ಒದಗಿಸಿತು.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    1. ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಚೀನಾ, ಫ್ರಾನ್ಸ್, ರಷ್ಯಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ UNSC ಯ ಖಾಯಂ ಸದಸ್ಯರಾಗಿದ್ದಾರೆ.
    2. ಶಾಶ್ವತವಲ್ಲದ ಸದಸ್ಯರನ್ನು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ನೇರವಾಗಿ ನೇಮಿಸುತ್ತಾರೆ.
    3. UNSC ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಬದ್ಧವಾಗಿ ನಿರ್ಣಯಗಳನ್ನು ಅಂಗೀಕರಿಸಬಹುದು.
    4. ಒಬ್ಬ ಖಾಯಂ ಸದಸ್ಯ UNSC ನಿರ್ಣಯದ ವಿರುದ್ಧ ಮತ ಚಲಾಯಿಸಿದರೂ ಸಹ ನಿರ್ಣಯವನ್ನು ಅಂಗೀಕರಿಸಬಹುದು.

    ಮೇಲೆ ನೀಡಲಾದ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಮೂರು ಮಾತ್ರ
    2. ಒಂದು ಮಾತ್ರ
    3. ಎರಡು ಮಾತ್ರ
    4. ಎಲ್ಲಾ ನಾಲ್ಕು

    ಉತ್ತರ: C

     

    1. ಮಿಷನ್ ಮಿತ್ರಕ್ಕೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಪರಸ್ಪರ ಕಾರ್ಯಸಾಧ್ಯ ಗುಣಲಕ್ಷಣಗಳ ನಕ್ಷೆ ಮತ್ತು ಪ್ರತಿಕ್ರಿಯೆ ಮೌಲ್ಯಮಾಪನವನ್ನು ಸೂಚಿಸುತ್ತದೆ.
    2. ಇದನ್ನು ಇಸ್ರೋ ಮತ್ತು ಭಾರತೀಯ ವಾಯುಪಡೆಗಳ ಏರೋಸ್ಪೇಸ್ ಮೆಡಿಸಿನ್ ಸಂಸ್ಥೆ ಜಂಟಿಯಾಗಿ ವಿನ್ಯಾಸಗೊಳಿಸಿದೆ.
    3. ಇದು ಕಕ್ಷೆಯಲ್ಲಿ ಮಾನವ ಬಾಹ್ಯಾಕಾಶ ಹಾರಾಟವನ್ನು ಒಳಗೊಂಡ ನಿಜವಾದ ಬಾಹ್ಯಾಕಾಶ ಕಾರ್ಯಾಚರಣೆಯಾಗಿದೆ.
    4. ಇದು ಬಾಹ್ಯಾಕಾಶದಂತಹ ಪರಿಸ್ಥಿತಿಗಳನ್ನು ಅನುಕರಿಸಲು ಭೂಮಿಯ ಆಧಾರಿತ ಪರಿಸರಗಳನ್ನು ಬಳಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    1. ಚಂದ್ರನ ಉಂಗುರ ಯೋಜನೆಯ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ಜಪಾನ್‌ನ ಶಿಮಿಜು ಕಾರ್ಪೊರೇಷನ್ ಪ್ರಸ್ತಾಪಿಸಿದೆ.
    2. ಇದು ಚಂದ್ರನ ಸಮಭಾಜಕದ ಉದ್ದಕ್ಕೂ ಸೌರ ಫಲಕಗಳ ಸ್ಥಾವರದ ಪಟ್ಟಿಯನ್ನು ರೂಪಿಸುತ್ತದೆ.
    3. ಈ ಯೋಜನೆಯು ಚಂದ್ರನಿಂದ ಭೂಮಿಗೆ ಸೌರಶಕ್ತಿಯನ್ನು ರವಾನಿಸುವ ಗುರಿಯನ್ನು ಹೊಂದಿದೆ.
    4. ಇದು ಪ್ರಸ್ತುತ ಭೂಮಿಗೆ ವಿದ್ಯುತ್ ಉತ್ಪಾದಿಸುವ ಒಂದು ಕಾರ್ಯಾಚರಣಾ ಯೋಜನೆಯಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1, 2 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

     

    1. ಹವಾಮಾನ ಬದಲಾವಣೆಯ ಕುರಿತಾದ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶವನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು 1992 ರ ಭೂ ಶೃಂಗಸಭೆಯಲ್ಲಿ ಅಂಗೀಕರಿಸಲಾಯಿತು ಮತ್ತು ಜೈವಿಕ ವೈವಿಧ್ಯತೆಯ ಕುರಿತಾದ ಸಮಾವೇಶ ಮತ್ತು ಮರುಭೂಮಿಕರಣವನ್ನು ಎದುರಿಸಲು ವಿಶ್ವಸಂಸ್ಥೆಯ ಸಮಾವೇಶದ ಜೊತೆಗೆ ಮೂರು ರಿಯೊ ಸಮಾವೇಶಗಳಲ್ಲಿ ಒಂದಾಗಿದೆ.
    2. ಹಸಿರುಮನೆ ಅನಿಲ ಸಾಂದ್ರತೆಯನ್ನು ಸ್ಥಿರಗೊಳಿಸಲು ಇದು ಎಲ್ಲಾ ಸದಸ್ಯ ರಾಷ್ಟ್ರಗಳ ಮೇಲೆ ಕಾನೂನುಬದ್ಧವಾಗಿ ಬಂಧಿಸುವ ಹೊರಸೂಸುವಿಕೆ ಕಡಿತ ಗುರಿಗಳನ್ನು ವಿಧಿಸುತ್ತದೆ.

    III. ಇದು ಕ್ಯೋಟೋ ಶಿಷ್ಟಾಚಾರ ಮತ್ತು ಪ್ಯಾರಿಸ್ ಒಪ್ಪಂದಕ್ಕೆ ಪೋಷಕ ಒಪ್ಪಂದವಾಗಿ ಕಾರ್ಯನಿರ್ವಹಿಸುತ್ತದೆ.

    1. ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಬೆಂಬಲಿಸಲು ಇದು ಹಸಿರು ಹವಾಮಾನ ನಿಧಿ, ಜಾಗತಿಕ ಪರಿಸರ ಸೌಲಭ್ಯ ಮತ್ತು ಹೊಂದಾಣಿಕೆ ನಿಧಿಯಂತಹ ಹಣಕಾಸು ಕಾರ್ಯವಿಧಾನಗಳನ್ನು ನಿರ್ವಹಿಸುತ್ತದೆ ಮತ್ತು ಸಂಯೋಜಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. I, II ಮತ್ತು III ಮಾತ್ರ
    2. I, III ಮತ್ತು IV ಮಾತ್ರ
    3. II, III ಮತ್ತು IV ಮಾತ್ರ
    4. I, II, III ಮತ್ತು IV

    ಉತ್ತರ: B

     

    1. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಗ್ರೇಟ್ ನಿಕೋಬಾರ್ ದ್ವೀಪವು ದಕ್ಷಿಣದ ದ್ವೀಪವಾಗಿದೆ ಮತ್ತು ಇಂದಿರಾ ಪಾಯಿಂಟ್ ಭಾರತದ ದಕ್ಷಿಣದ ತುತ್ತತುದಿಯಾಗಿದೆ.
    2. ಸ್ಯಾಡಲ್ ಶಿಖರವು ಈ ದ್ವೀಪ ಸಮೂಹಗಳ ಅತ್ಯುನ್ನತ ಶಿಖರವಾಗಿದೆ, ಆದರೆ ಮೌಂಟ್ ಥಲ್ಲಿಯರ್ ಗ್ರೇಟ್ ನಿಕೋಬಾರ್‌ನ ಅತ್ಯುನ್ನತ ಶಿಖರವಾಗಿದೆ.
    3. ಪಾಂಡನಸ್ ಈ ದ್ವೀಪಗಳಿಗೆ ಸ್ಥಳೀಯವಾಗಿರುವ ಅಪರೂಪದ ಹಣ್ಣು.
    4. ಬ್ಯಾರೆನ್ ದ್ವೀಪವು ಭಾರತ ಮತ್ತು ಇಡೀ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ದೃಢಪಡಿಸಿದ ಏಕೈಕ ಸಕ್ರಿಯ ಜ್ವಾಲಾಮುಖಿಯನ್ನು ಹೊಂದಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿಲ್ಲ?

    1. ಎರಡು ಮಾತ್ರ
    2. ಮೂರು ಮಾತ್ರ
    3. ಎಲ್ಲಾ ನಾಲ್ಕು
    4. ಎಲ್ಲವೂ ಸರಿಯಾಗಿವೆ

    ಉತ್ತರ:D

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ವಿಠ್ಠಲರಾವ್ ಕೃಷ್ಣಾಜಿ ವಂದೇಕರ್ ​​ಇವರಿಗೆ ಮಹಾತ್ಮ ಎಂಬ ಬಿರುದನ್ನು ನೀಡಿದರು.
    2. ಇವರು 1848 ರಲ್ಲಿ ಭಿಡೆವಾಡಾದಲ್ಲಿ ಭಾರತದ ಮೊದಲ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದರು.
    3. ಜಾತಿ ಆಧಾರಿತ ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ನಿರ್ಮೂಲನೆ ಮಾಡಲು ಅವರು 1873 ರಲ್ಲಿ ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದರು.
    4. ಶಿಶುಹತ್ಯೆಯನ್ನು ತಡೆಗಟ್ಟಲು ಮತ್ತು ಬ್ರಾಹ್ಮಣ ವಿಧವಾ ಮಹಿಳೆಯರನ್ನು ಬೆಂಬಲಿಸಲು ಇವರು 1863 ರಲ್ಲಿ ಬಾಲಹತ್ಯಾ ಪ್ರತಿಬಂಧಕ ಗೃಹವನ್ನು ಸ್ಥಾಪಿಸಿದರು.
    5. ಇವರು ಗುಲಾಮಗಿರಿ ಮತ್ತು ಶೇತ್ಕರಾಯಚ ಅಸುದ್ ನಂತಹ ಕೃತಿಗಳನ್ನು ಬರೆದಿದ್ದಾರೆ.

    ಮೇಲಿನ ಹೇಳಿಕೆಗಳಿಂದ ಈ ಕೆಳಗಿನ ಯಾವ ವ್ಯಕ್ತಿಯನ್ನು ಉತ್ತಮವಾಗಿ ವಿವರಿಸಲಾಗಿದೆ?

    1. ರಾಜಾ ರಾಮ್ ಮೋಹನ್ ರಾಯ್
    2. ಈಶ್ವರ್ ಚಂದ್ರ ವಿದ್ಯಾಸಾಗರ್
    3. ಜ್ಯೋತಿರಾವ್ ಫುಲೆ
    4. ಬಿ. ಆರ್. ಅಂಬೇಡ್ಕರ್

    ಉತ್ತರ: C

     

    1. ಸಿಂಧಿ ಭಾಷೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಸಿಂಧಿ ಪ್ರಧಾನವಾಗಿ ಭಾರತದಲ್ಲಿ ಮಾತ್ರ ಮಾತನಾಡುವ ದ್ರಾವಿಡ ಭಾಷೆಯಾಗಿದೆ.
    2. ಇದನ್ನು 21 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ 1967 ರ ಮೂಲಕ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಸೇರಿಸಲಾಗಿದೆ.
    3. ಸಿಂಧಿ ವೇದಾಂತಿಕ ಮತ್ತು ಸೂಫಿ ತತ್ವಶಾಸ್ತ್ರಗಳಿಂದ ಪ್ರಭಾವಿತವಾದ ಶ್ರೀಮಂತ ಸಾಹಿತ್ಯ ಸಂಪ್ರದಾಯವನ್ನು ಹೊಂದಿದೆ.
    4. ಇತ್ತೀಚೆಗೆ ಭಾರತದ ಸಂವಿಧಾನವನ್ನು ದೇವನಾಗರಿ ಮತ್ತು ಪರ್ಷಿಯನ್ ಲಿಪಿಗಳಲ್ಲಿ ಸಿಂಧಿ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

     

    1. ಈ ಕೆಳಗಿನ ಪ್ರಭೇದಗಳನ್ನು ಪರಿಗಣಿಸಿ:
    1. ಚಕ್ರವರ್ತಿ ಪೆಂಗ್ವಿನ್
    2. ಉಭಯಚರಗಳು
    3. ಕನೇರಿ ಹಕ್ಕಿ
    4. ಜೇನುನೊಣ
    5. ಹಿಮಕರಡಿ

    ಮೇಲಿನ ಪ್ರಭೇದಗಳನ್ನು ಈ ಕೆಳಗಿನವುಗಳಲ್ಲಿ ಯಾವುದರ ಅಡಿಯಲ್ಲಿ ಉತ್ತಮವಾಗಿ ವರ್ಗೀಕರಿಸಲಾಗಿದೆ?

    1. ಸೂಚಕ ಪ್ರಭೇದಗಳು
    2. ಸ್ಥಳೀಯ ಪ್ರಭೇದಗಳು
    3. ಕೀಸ್ಟೋನ್ ಪ್ರಭೇದಗಳು
    4. ಆಕ್ರಮಣಕಾರಿ ಪ್ರಭೇದಗಳು

    ಉತ್ತರ: A

     

    1. ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಈ ಕೆಳಗಿನ ಘಟನೆಗಳು/ಸಂಸ್ಥೆಗಳನ್ನು ಸರಿಯಾದ ಕಾಲಾನುಕ್ರಮದಲ್ಲಿ ಜೋಡಿಸಿ:
    1. ಬಹಿಷ್ಕೃತ ಹಿತಕಾರಿಣಿ ಸಭೆ
    2. ಮಹಾಡ್ ಸತ್ಯಾಗ್ರಹ
    3. ಪೂನಾ ಒಪ್ಪಂದ
    4. ಸ್ವತಂತ್ರ ಕಾರ್ಮಿಕ ಪಕ್ಷ
    5. ಪರಿಶಿಷ್ಟ ಜಾತಿಗಳ ಒಕ್ಕೂಟ (ಷೆಡ್ಯೂಲ್ಡ್ ಕಾಸ್ಟ ಫೆಡರೇಶನ್)

    ಕೆಳಗೆ ನೀಡಲಾದ ಸಂಕೇತವನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. 2 – 3 – 1 – 5 – 4
    2. 2 – 1 – 3 – 4 – 5
    3. 1 – 3 – 2 – 4 – 5
    4. 1 – 2 – 3 – 4 – 5

    ಉತ್ತರ: D

     

    1. ಹಿಂದೂ ಮಹಾಸಾಗರ ಸಮ್ಮೇಳನವನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು 2016 ರಲ್ಲಿ ಇಂಡಿಯಾ ಫೌಂಡೇಶನ್ ವಾರ್ಷಿಕ ಸಮಾಲೋಚನಾ ವೇದಿಕೆಯಾಗಿ ಪ್ರಾರಂಭಿಸಿತು.
    2. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪ್ರಾದೇಶಿಕ ಸಹಕಾರ, ಕಡಲ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
    3. ಇದು SAGAR (ಪ್ರದೇಶದಲ್ಲಿ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ) ದೃಷ್ಟಿಕೋನದ ಮೇಲೆ ಕೇಂದ್ರೀಕರಿಸಿದ ಸಚಿವರು ಮತ್ತು ತಜ್ಞರು ಸೇರಿದಂತೆ 40 ಕ್ಕೂ ಹೆಚ್ಚು ದೇಶಗಳನ್ನು ಸಂಪರ್ಕಿಸುತ್ತದೆ. 
    4. ಸಮ್ಮೇಳನದ 9 ನೇ ಆವೃತ್ತಿಯು ಏಪ್ರಿಲ್ 2026 ರಲ್ಲಿ ಮಾರಿಷಸ್‌ನಲ್ಲಿ ನಡೆಯಿತು, ಆದರೆ 8 ನೇ ಆವೃತ್ತಿಯು ಒಮಾನ್‌ನಲ್ಲಿ ನಡೆಯಿತು.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?

    1. ಎರಡು ಮಾತ್ರ
    2. ಮೂರು ಮಾತ್ರ
    3. ಎಲ್ಲಾ ನಾಲ್ಕು
    4. ಯಾವುದೂ ಇಲ್ಲ

    ಉತ್ತರ: C

     

    1. ಪ್ರಾಜೆಕ್ಟ್ ಹಿಮ್ ಸರೋವರ್ ಅನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಏಪ್ರಿಲ್ 10, 2026 ರಂದು ಪ್ರಾರಂಭಿಸಲಾದ ವೈಜ್ಞಾನಿಕ ಜಲ ಸಂರಕ್ಷಣಾ ಉಪಕ್ರಮವಾಗಿದೆ.
    2. ಇದು ಜಲವಿದ್ಯುತ್ ಉತ್ಪಾದನೆಗಾಗಿ ನದಿ ನೀರನ್ನು ಸಂಗ್ರಹಿಸಲು ದೊಡ್ಡ ಬಹುಪಯೋಗಿ ಅಣೆಕಟ್ಟುಗಳನ್ನು ರಚಿಸುವ ಗುರಿಯನ್ನು ಹೊಂದಿದೆ.
    3. ಹಿಮ ಕರಗುವಿಕೆ ಮತ್ತು ಮಳೆನೀರನ್ನು ಸಂಗ್ರಹಿಸಲು ಸುಮಾರು 50 ಸಣ್ಣ ಜಲಮೂಲಗಳನ್ನು ನಿರ್ಮಿಸಲು ಈ ಯೋಜನೆಯು ಪ್ರಸ್ತಾಪಿಸುತ್ತದೆ.
    4. ಇದು ಎತ್ತರದ ಶೀತ ಮರುಭೂಮಿ ಪ್ರದೇಶಗಳಲ್ಲಿ ವರ್ಷಪೂರ್ತಿ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ.
    5. ಇದು 2030 ರ ವೇಳೆಗೆ 2.6 ಕೋಟಿ ಹೆಕ್ಟೇರ್ ಅವನತಿ ಹೊಂದಿದ ಭೂಮಿಯನ್ನು ಪುನಃಸ್ಥಾಪಿಸುವ ಭಾರತದ ವಿಶಾಲ ಗುರಿಯೊಂದಿಗೆ ಹೊಂದಿಕೆಯಾಗುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 3, 4 ಮತ್ತು 5 ಮಾತ್ರ
    2. 1, 2, 3 ಮತ್ತು 5 ಮಾತ್ರ
    3. 2, 3, 4 ಮತ್ತು 5 ಮಾತ್ರ
    4. 1, 2, 3, 4 ಮತ್ತು 5

    ಉತ್ತರ: A

     

    1. ರಾಷ್ಟ್ರೀಯ ಕೃಷಿ ಮಾರುಕಟ್ಟೆ (e-NAM) ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಏಪ್ರಿಲ್ 14, 2016 ರಂದು ಪ್ರಾರಂಭಿಸಲಾದ ಅಖಿಲ ಭಾರತ ಎಲೆಕ್ಟ್ರಾನಿಕ್ ವಹಿವಾಟು qಪೋರ್ಟಲ್ ಆಗಿದೆ.
    2. ಇದು ಕೇಂದ್ರ ಮತ್ತು ರಾಜ್ಯಗಳ ನಡುವೆ ವೆಚ್ಚ ಹಂಚಿಕೆಯೊಂದಿಗೆ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಕಾರ್ಯನಿರ್ವಹಿಸುತ್ತದೆ.
    3. ಇದನ್ನು ಕೃಷಿ-ತಂತ್ರಜ್ಞಾನ ಮೂಲಸೌಕರ್ಯ ನಿಧಿಯ ಮೂಲಕ ಕೇಂದ್ರ ಸರ್ಕಾರವು ಕೇಂದ್ರ ವಲಯದ ಯೋಜನೆಯಾಗಿ ಸಂಪೂರ್ಣವಾಗಿ ಹಣಕಾಸು ಒದಗಿಸುತ್ತದೆ.
    4. ಅಸ್ತಿತ್ವದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಂಡಿಗಳನ್ನು ಸಂಯೋಜಿಸುವ ಮೂಲಕ ಏಕೀಕೃತ ರಾಷ್ಟ್ರೀಯ ಮಾರುಕಟ್ಟೆಯನ್ನು ರಚಿಸುವ ಗುರಿಯನ್ನು ಇದು ಹೊಂದಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1, 3 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

     

    1. ಅಕ್ರಮ ವಲಸಿಗರಿಗೆ ಭಾರತದ ಹೊಸ ಗಡಿಪಾರು ನೀತಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಶಂಕಿತ ಅಕ್ರಮ ವಲಸಿಗರ ರುಜುವಾತುಗಳನ್ನು ಪರಿಶೀಲಿಸಲು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಇದು 30 ದಿನಗಳ ಗಡುವನ್ನು ಕಡ್ಡಾಯಗೊಳಿಸುತ್ತದೆ, ಇಲ್ಲದಿದ್ದರೆ ಗಡೀಪಾರು ಪ್ರಾರಂಭಿಸಬಹುದು.
    2. ಗಡಿಪಾರು ಪ್ರಕ್ರಿಯೆಗಳನ್ನು ನಿರ್ವಹಿಸಲು ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆಗಳನ್ನು (STF) ವಿದೇಶಾಂಗ ಸಚಿವಾಲಯದ ಅಡಿಯಲ್ಲಿ ಪ್ರತ್ಯೇಕವಾಗಿ ರಚಿಸಲಾಗಿದೆ.
    3. ಗೊತ್ತುಪಡಿಸಿದ ಕೇಂದ್ರಗಳಲ್ಲಿ ದಾಖಲೆರಹಿತ ವಲಸಿಗರನ್ನು ಗುರುತಿಸಲು ಮತ್ತು ಬಂಧಿಸಲು ಈ ನೀತಿಯು ಮೀಸಲಾದ ಜಿಲ್ಲಾ ಮಟ್ಟದ ಘಟಕಗಳನ್ನು ಒದಗಿಸುತ್ತದೆ.
    4. ಇದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಮತ್ತು ಭಾರತದ ಚುನಾವಣಾ ಆಯೋಗವನ್ನು ಒಳಗೊಂಡ ದತ್ತಾಂಶ ಹಂಚಿಕೆಯೊಂದಿಗೆ ವಿದೇಶಿಯರ ಗುರುತಿನ ಪೋರ್ಟಲ್ ಮೂಲಕ ಬಯೋಮೆಟ್ರಿಕ್ ದತ್ತಾಂಶ ಡಿಜಿಟಲೀಕರಣವನ್ನು ಕಡ್ಡಾಯಗೊಳಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2, 3 ಮತ್ತು 4 ಮಾತ್ರ
    2. 1, 2 ಮತ್ತು 4 ಮಾತ್ರ
    3. 1, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

     

    1. ಈ ಕೆಳಗಿನವುಗಳನ್ನು ಪರಿಗಣಿಸಿ:
    1. ನ್ಯೂ ಡೆವಲಪ್ಮೆಂಟ್ ಬ್ಯಾಂಕ್ (NDB)
    2. ಅನಿಶ್ಚಿತ ಮೀಸಲು ವ್ಯವಸ್ಥೆ (CRA)
    3. BRICS ಪಾವತಿ ವ್ಯವಸ್ಥೆ
    4. ಕಸ್ಟಮ್ಸ್ ಒಪ್ಪಂದಗಳು
    5. ದೂರ ಸಂವೇದಿ ಉಪಗ್ರಹಗಳ ಸಮೂಹ

    ಮೇಲಿನವುಗಳಲ್ಲಿ ಎಷ್ಟು BRICS ನ ಉಪಕ್ರಮಗಳಾಗಿವೆ?

    1. ಕೇವಲ ಎರಡು
    2. ಕೇವಲ ಮೂರು
    3. ಕೇವಲ ನಾಲ್ಕು
    4. ಎಲ್ಲಾ ಐದು

    ಉತ್ತರ: D

     

    1. ಕೊನ್ಯಾಕ್ ಬುಡಕಟ್ಟು ಪ್ರಾಥಮಿಕವಾಗಿ ಈ ಕೆಳಗಿನ ಯಾವ ರಾಜ್ಯಗಳಲ್ಲಿ ಕಂಡುಬರುತ್ತದೆ?
    1. ಅಸ್ಸಾಂ
    2. ನಾಗಾಲ್ಯಾಂಡ್
    3. ಮಣಿಪುರ
    4. ಮಿಜೋರಾಂ

    ಉತ್ತರ: B

     

    1. ​​ಗ್ಲುಫೋಸಿನೇಟ್-ಅಮೋನಿಯಂ ಅನ್ನು ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಉತ್ತಮವಾಗಿ ವಿವರಿಸಲಾಗಿದೆ?
    1. ಕೀಟಗಳನ್ನು ಕೊಲ್ಲಲು ಬಳಸುವ ಕೀಟನಾಶಕ.
    2. ಶಿಲೀಂಧ್ರ ರೋಗಗಳನ್ನು ನಿಯಂತ್ರಿಸಲು ಬಳಸುವ ಶಿಲೀಂಧ್ರನಾಶಕ.
    3. ವ್ಯಾಪಕ ಶ್ರೇಣಿಯ ಕಳೆಗಳನ್ನು ನಿಯಂತ್ರಿಸಲು ಬಳಸುವ ಕಳೆನಾಶಕ.
    4. ಮಣ್ಣಿನ ಪೋಷಕಾಂಶಗಳನ್ನು ಹೆಚ್ಚಿಸಲು ಬಳಸುವ ಗೊಬ್ಬರ.

    ಉತ್ತರ: C

     

    1. ಘಗ್ಗರ್ ನದಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಮುಖ್ಯವಾಗಿ ಹಿಮಾಲಯದಲ್ಲಿನ ಹಿಮನದಿ ಮೂಲಗಳಿಂದ ಪೋಷಿಸಲ್ಪಡುವ ದೀರ್ಘಕಾಲಿಕ ನದಿಯಾಗಿದೆ.
    2. ಇದು ಶಿವಾಲಿಕ್ ಬೆಟ್ಟಗಳಲ್ಲಿರುವ ದಗ್ಶೈ ಬಳಿ ಹುಟ್ಟುತ್ತದೆ.
    3. ಇದು ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಮೂಲಕ ಹರಿಯುತ್ತದೆ.
    4. ಮಾರ್ಕಂಡ ನದಿ ಮತ್ತು ಸರ್ಸುತಿ ನದಿಗಳು ಇದರ ಉಪನದಿಗಳಾಗಿವೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1 ಮತ್ತು 2 ಮಾತ್ರ
    2. 2, 3 ಮತ್ತು 4 ಮಾತ್ರ
    3. 1, 3 ಮತ್ತು 4 ಮಾತ್ರ
    4. 2 ಮತ್ತು 4 ಮಾತ್ರ

    ಉತ್ತರ: B

     

    1. ಅಂಡಮಾನ್ ಸಮುದ್ರಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಹಿಂದೂ ಮಹಾಸಾಗರದ ಈಶಾನ್ಯ ಭಾಗದ ಅಂಚಿನ ಸಮುದ್ರವಾಗಿದೆ.
    2. ಇದು ಉತ್ತರ ಮತ್ತು ಪೂರ್ವಕ್ಕೆ ಮ್ಯಾನ್ಮಾರ್ ಮತ್ತು ಪೂರ್ವಕ್ಕೆ ಥೈಲ್ಯಾಂಡ್ ಮತ್ತು ಮಲೇಷ್ಯಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
    3. ಇದು ಮಲಕ್ಕಾ ಜಲಸಂಧಿಯ ಮೂಲಕ ದಕ್ಷಿಣ ಚೀನಾ ಸಮುದ್ರಕ್ಕೆ ನೇರವಾಗಿ ಸಂಪರ್ಕ ಹೊಂದಿದೆ.
    4. ಇದು ಪಶ್ಚಿಮಕ್ಕೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಂದ ಮತ್ತು ದಕ್ಷಿಣಕ್ಕೆ ಇಂಡೋನೇಷ್ಯಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 3 ಮಾತ್ರ
    2. 1, 2 ಮತ್ತು 4 ಮಾತ್ರ
    3. 1, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: D

     

    1. ಏಷ್ಯಾ ಶೂನ್ಯ ಹೊರಸೂಸುವಿಕೆ ಸಮುದಾಯ (Asia Zero Emission Community)ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಏಷ್ಯಾದಲ್ಲಿ ಇಂಗಾಲೀಕರಣ ಮತ್ತು ಶುದ್ಧ ಇಂಧನ ಪರಿವರ್ತನೆಯನ್ನು ಉತ್ತೇಜಿಸಲು 2023 ರಲ್ಲಿ ಪ್ರಾರಂಭಿಸಲಾದ ಜಪಾನ್ ನೇತೃತ್ವದ ಉಪಕ್ರಮವಾಗಿದೆ.
    2. ಇದು ಪ್ರಾಥಮಿಕವಾಗಿ ಏಷ್ಯಾದ ದೇಶಗಳಲ್ಲಿ ಪರಮಾಣು ಇಂಧನ ಸಹಕಾರದ ಮೇಲೆ ಮಾತ್ರ ಕೇಂದ್ರೀಕರಿಸುತ್ತದೆ.
    3. AZEC ಪ್ಲಸ್ ಹೆಚ್ಚುವರಿ ಏಷ್ಯಾದ ದೇಶಗಳು ಮತ್ತು ಏಷ್ಯಾದ ಅಭಿವೃದ್ಧಿ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಇಂಧನ ಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳನ್ನು ಒಳಗೊಂಡಿದೆ.
    4. ಏಷ್ಯಾದ ಪ್ರದೇಶದಲ್ಲಿ ಇಂಧನ ಸುರಕ್ಷತೆಯನ್ನು ಹೆಚ್ಚಿಸುವುದು ಇದರ ಉದ್ದೇಶಗಳಲ್ಲಿ ಒಂದಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    1. ಯುರೋಪಿಯನ್ ಒಕ್ಕೂಟದ ಇಂಗಾಲ ಗಡಿ ಹೊಂದಾಣಿಕೆ ಕಾರ್ಯವಿಧಾನವನ್ನು (CBAM) ಇದಕ್ಕಾಗಿ ವಿನ್ಯಾಸಗೊಳಿಸಲಾಗಿದೆ:
    1. ಇಂಗಾಲ-ತೀವ್ರ ಸರಕುಗಳ ರಫ್ತುದಾರರಿಗೆ ಸಬ್ಸಿಡಿಗಳನ್ನು ಒದಗಿಸುವುದು.
    2. ಉತ್ಪಾದನೆಯ ಸಮಯದಲ್ಲಿ ಹೊರಸೂಸುವಿಕೆಯ ಆಧಾರದ ಮೇಲೆ ಆಮದುಗಳ ಮೇಲೆ ನ್ಯಾಯಯುತ ಇಂಗಾಲದ ಬೆಲೆಯನ್ನು ವಿಧಿಸುವುದು.
    3. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಎಲ್ಲಾ ವ್ಯಾಪಾರ ಅಡೆತಡೆಗಳನ್ನು ನಿವಾರಿಸುವುದು.
    4. ಯುರೋಪ್‌ನಲ್ಲಿ ಪಳೆಯುಳಿಕೆ ಇಂಧನ ಬಳಕೆಯನ್ನು ಉತ್ತೇಜಿಸುವುದು.

    ಉತ್ತರ: B

     

    1. ಎಲಿಫೆಂಟಾ ಗುಹೆಗಳಿಗೆ ಸಂಬಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇವುಗಳನ್ನು ಐತಿಹಾಸಿಕವಾಗಿ ಘರಪುರಿ ಎಂದು ಕರೆಯಲಾಗುತ್ತದೆ, ಅಂದರೆ ಗುಹೆಗಳ ನಗರ.
    2. ಕ್ರಿ.ಶ. 6 ನೇ ಶತಮಾನದಲ್ಲಿ ಇವುಗಳನ್ನು ಮುಖ್ಯವಾಗಿ ಮಾಹಿಷ್ಮತಿಯ ಕಲಚೂರಿಗಳು ಪೋಷಿಸಿದರು.
    3. ಮಹಾ ಗುಹೆ ಎಂದೂ ಕರೆಯಲ್ಪಡುವ ಒಂದನೇ ಗುಹೆಯು ಶಿವನನ್ನು ಸೃಷ್ಟಿಕರ್ತ, ಸಂರಕ್ಷಕ ಮತ್ತು ವಿಧ್ವಂಸಕ ಎಂದು ಚಿತ್ರಿಸುವ ಪ್ರಸಿದ್ಧ ತ್ರಿಮೂರ್ತಿ ಶಿಲ್ಪವನ್ನು ಒಳಗೊಂಡಿದೆ.
    4. ಎಲಿಫೆಂಟಾ ಗುಹೆಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲಾಗಿದೆ.

    ಮೇಲೆ ನೀಡಲಾದ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಎರಡು ಮಾತ್ರ
    2. ಮೂರು ಮಾತ್ರ
    3. ಎಲ್ಲಾ ನಾಲ್ಕು
    4. ಯಾವುದೂ ಇಲ್ಲ

    ಉತ್ತರ: C

     

    1. ಮಣ್ಣಿನ ಸಖೀಯರು ಉಪಕ್ರಮವನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು 2023 ರಲ್ಲಿ ಮನ್ ದೇಶಿ ಫೌಂಡೇಶನ್ಸ್ ಕೃಷಿ ಮತ್ತು ಹವಾಮಾನ ಕ್ರಿಯಾ ಕಾರ್ಯಕ್ರಮದ ಅಡಿಯಲ್ಲಿ ಪ್ರಾರಂಭಿಸಲಾಯಿತು.
    2. ಇದು ಗ್ರಾಮೀಣ ಮಹಿಳೆಯರಿಗೆ ಮಣ್ಣಿನ ಪರೀಕ್ಷೆ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ತರಬೇತಿ ನೀಡುವ ಗುರಿಯನ್ನು ಹೊಂದಿದೆ.
    3. ಇದನ್ನು ಭಾರತದ ಎಲ್ಲಾ ರಾಜ್ಯಗಳಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಜಾರಿಗೆ ತರಲಾಗಿದೆ.
    4. ಮಣ್ಣು ಸಖಿಯರು ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ರೈತರಿಗೆ ಪ್ರಯೋಗಾಲಯದ ಪರೀಕ್ಷೆಯನ್ನು ಸುಗಮಗೊಳಿಸುತ್ತಾರೆ.
    5. ರೈತರು ಮಣ್ಣಿನ ವಿಶ್ಲೇಷಣೆಯ ಆಧಾರದ ಮೇಲೆ ಬೆಳೆ ಮತ್ತು ಪೋಷಕಾಂಶ ನಿರ್ವಹಣೆಯನ್ನು ಸುಧಾರಿಸಲು ವರದಿಗಳನ್ನು ಪಡೆಯುತ್ತಾರೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2, 4 ಮತ್ತು 5 ಮಾತ್ರ
    2. 1, 3, 4 ಮತ್ತು 5 ಮಾತ್ರ
    3. 2, 3, ಮತ್ತು 4 ಮಾತ್ರ
    4. 1, 2, 3, 4 ಮತ್ತು 5

    ಉತ್ತರ: A

     

    1. ಪೋಷಕಾಂಶ ಆಧಾರಿತ ಸಬ್ಸಿಡಿ ಯೋಜನೆ (NBS) ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು 2010 ರಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಪರಿಚಯಿಸಿತು ಮತ್ತು ಇದು ಫಾಸ್ಫೇಟಿಕ್ ಮತ್ತು ಪೊಟ್ಯಾಸಿಯಮ್ (P & K) ರಸಗೊಬ್ಬರಗಳ ಅಧಿಸೂಚಿತ ಶ್ರೇಣಿಗಳನ್ನು ಒಳಗೊಂಡಿದೆ.
    2. ಈ ಯೋಜನೆಯಡಿಯಲ್ಲಿ ಸಬ್ಸಿಡಿಯನ್ನು ಸಾರಜನಕ, ರಂಜಕ, ಪೊಟ್ಯಾಸಿಯಮ್ ಮತ್ತು ಗಂಧಕದ ಪೋಷಕಾಂಶದ ಅಂಶವನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ. 
    3. ಯೂರಿಯಾವನ್ನು ಡೈ ಅಮ್ಮೋನಿಯಂ ಫೋಸ್ಪೇಟ್ ಮತ್ತು SSP ನಂತಹ ಇತರ ರಸಗೊಬ್ಬರಗಳ ಜೊತೆಗೆ NBS ಯೋಜನೆಯಡಿಯಲ್ಲಿ ಸೇರಿಸಲಾಗಿದೆ.
    4. 2026 ರ ಖಾರಿಫ್ ಋತುವಿನಲ್ಲಿ P&K ರಸಗೊಬ್ಬರಗಳಿಗೆ NBS ದರಗಳಲ್ಲಿ 12% ಹೆಚ್ಚಳವನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.

    ಮೇಲೆ ನೀಡಲಾದ ಯಾವ ಹೇಳಿಕೆಗಳು ಸರಿಯಾಗಿವೆ?

    1. 1, 2 ಮತ್ತು 3 ಮಾತ್ರ
    2. 1, 2 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

     

    1. ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಉಲ್ಲೇಖಿಸಿ, ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:

    ವರ್ಗ

    ಸಾಲದ ಮಿತಿ

    1. ಶಿಶು

    ₹50,000 ವರೆಗೆ

    2. ಕಿಶೋರ್

    ₹50,000 ರಿಂದ ₹5 ಲಕ್ಷದ ವರೆಗೆ 

    3. ತರುಣ್

    ₹10 ಲಕ್ಷದಿಂದ ₹20 ಲಕ್ಷದ ವರೆಗೆ 

    4. ತರುಣ್ ಪ್ಲಸ್

    ₹10 ಲಕ್ಷದಿಂದ ₹20 ಲಕ್ಷದ ವರೆಗೆ 

    ಮೇಲೆ ನೀಡಲಾದ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    1. ಕೌಶಲ್ಯ ಫಲಿತಾಂಶ ನಿಧಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಯುವಕರಿಗೆ ಉತ್ತಮ ವೃತ್ತಿ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಇದು ಹೊಂದಿದೆ.
    2. ಇದನ್ನು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು ಕಾರ್ಯಗತಗೊಳಿಸುತ್ತದೆ.
    3. ಇದು ಸರ್ಕಾರ, CSR ನಿಧಿಗಳು, ಲೋಕೋಪಕಾರಿ ಸಂಸ್ಥೆಗಳು ಮತ್ತು ಅಭಿವೃದ್ಧಿ ಸಂಸ್ಥೆಗಳನ್ನು ಒಳಗೊಂಡ ಮಿಶ್ರ ಹಣಕಾಸು ಮಾದರಿಯನ್ನು ಅನುಸರಿಸುತ್ತದೆ.
    4. ಇದು ಕೃಷಿ ಮತ್ತು ಕರಕುಶಲ ವಸ್ತುಗಳಂತಹ ಸಾಂಪ್ರದಾಯಿಕ ವಲಯಗಳ ಮೇಲೆ ಮಾತ್ರ ಕೇಂದ್ರೀಕರಿಸುತ್ತದೆ.
    5. ಇದು 2 ಲಕ್ಷಕ್ಕೂ ಹೆಚ್ಚು ಯುವಕರನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ, ಕಡಿಮೆ ಆದಾಯದ ಮಹಿಳೆಯರ ಮೇಲೆ ಗಮನಾರ್ಹವಾಗಿ ಗಮನ ಹರಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2, 4 ಮತ್ತು 5 ಮಾತ್ರ
    2. 1, 3 ಮತ್ತು 4 ಮಾತ್ರ
    3. 1, 2, 3 ಮತ್ತು 5 ಮಾತ್ರ
    4. 1, 2, 3, 4 ಮತ್ತು 5

    ಉತ್ತರ: C

     

    1. ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಪರಿಕರಗಳಿಗೆ ಸಂಬಂಧಿಸಿದಂತೆ ಪಟ್ಟಿ I ಅನ್ನು ಪಟ್ಟಿ II ರೊಂದಿಗೆ ಹೊಂದಿಸಿ:

    ಪಟ್ಟಿ I (ಹಣಕಾಸು ಪರಿಕರಗಳು)

    ಪಟ್ಟಿ II (ವಿವರಣೆ)

    a. ಶಾಸನಬದ್ಧ ದ್ರವ್ಯತೆ ಅನುಪಾತ (SLR)

    1. ಸರ್ಕಾರಿ ಭದ್ರತೆಗಳ ಖರೀದಿ ಮತ್ತು ಮಾರಾಟ.

    b. ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳು (OMO)

    2. ದಂಡ ದರದಲ್ಲಿ ತುರ್ತು ಸಾಲ

    c. ಅಂಚಿನ ಸ್ಥಿರ ಸೌಲಭ್ಯ (MSF)

    3. ದ್ರವ ಸ್ವತ್ತುಗಳಲ್ಲಿ ಇರಿಸಲಾದ ಠೇವಣಿಗಳ ಭಾಗ

    d. ದ್ರವ್ಯತೆ ಹೊಂದಾಣಿಕೆ ಸೌಲಭ್ಯ (LAF)

    4. ರೆಪೋ ಮತ್ತು ರಿವರ್ಸ್ ರೆಪೋ ಚೌಕಟ್ಟು

    e. ಮಾರುಕಟ್ಟೆ ಸ್ಥಿರೀಕರಣ ಯೋಜನೆ (MSS)

    5. ಹೆಚ್ಚುವರಿ ದ್ರವ್ಯತೆಯನ್ನು ಹೀರಿಕೊಳ್ಳಲು ನೀಡಲಾದ ಬಾಂಡ್‌ಗಳು

    ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. a-3, b-1, c-2, d-4, e-5
    2. a-1, b-3, c-2, d-5, e-4
    3. a-3, b-2, c-1, d-4, e-5
    4. a-1, b-2, c-3, d-4, e-5

    ಉತ್ತರ: A

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಓಝೋನ್ ಪದರದ ಸವಕಳಿಗೆ ಕಾರಣವಾಗುವ ವಸ್ತುಗಳನ್ನು ಕಡಿಮೆ ಮಾಡುವುದು ಮಾಂಟ್ರಿಯಲ್ ಶಿಷ್ಟಾಚಾರದ ಪ್ರಾಥಮಿಕ ಗುರಿಯಾಗಿದೆ.
    2. ಇದು 2040 ರ ದಶಕದ ಅಂತ್ಯದ ವೇಳೆಗೆ ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಸಂಪೂರ್ಣ ನಿರ್ಮೂಲನೆಯನ್ನು ಕಡ್ಡಾಯಗೊಳಿಸುತ್ತದೆ.
    3. ಕಿಗಾಲಿ ತಿದ್ದುಪಡಿಯು HFCs ಉತ್ಪಾದನೆ ಮತ್ತು ಬಳಕೆ ಎರಡನ್ನೂ ನಿಗ್ರಹಿಸುವತ್ತ ಗಮನಹರಿಸುತ್ತದೆ.
    4. ಕಿಗಾಲಿ ತಿದ್ದುಪಡಿಯು 2047 ರ ವೇಳೆಗೆ HFC ಬಳಕೆಯಲ್ಲಿ 80% ಕ್ಕಿಂತ ಹೆಚ್ಚು ಕಡಿತವನ್ನು ಸಾಧಿಸಲು ಪ್ರಯತ್ನಿಸುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1, 3 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಗಡಿ ಮತ್ತು ಆಂತರಿಕ ಭದ್ರತಾ ಕರ್ತವ್ಯಗಳನ್ನು ನಿರ್ವಹಿಸುತ್ತವೆ.
    2. ಅವುಗಳ ಆದೇಶವು ದಂಗೆ ನಿಗ್ರಹ ಕಾರ್ಯಾಚರಣೆಗಳು ಮತ್ತು ಮೂಲಸೌಕರ್ಯ ರಕ್ಷಣೆಯನ್ನು ಸ್ಪಷ್ಟವಾಗಿ ಒಳಗೊಂಡಿದೆ. 
    3. ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅವು ರಾಜ್ಯ ಪೊಲೀಸ್ ಪಡೆಗಳಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಲಾಗಿದೆ.
    4. ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಗಡಿ ಕಾವಲು ಮತ್ತು ಆಂತರಿಕ ಭದ್ರತೆ ಎರಡಕ್ಕೂ ಏಕರೂಪವಾಗಿ ಜವಾಬ್ದಾರರಾಗಿರುತ್ತಾರೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1 ಮತ್ತು 2 ಮಾತ್ರ
    2. 1, 2 ಮತ್ತು 4 ಮಾತ್ರ
    3. 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    1. ಇಂಗಾಲದ ಗಡಿ ಸಮನ್ವಯ ಕಾರ್ಯವಿಧಾನದ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಸಿಮೆಂಟ್ ಮತ್ತು ವಿದ್ಯುತ್‌ನಂತಹ ಇಂಗಾಲ-ತೀವ್ರ ಉತ್ಪನ್ನಗಳ ಆಮದಿನ ಮೇಲೆ ಐರೋಪ್ಯಾ ಒಕ್ಕೂಟವು ವಿಧಿಸಿದ ಇಂಗಾಲದ ಸುಂಕವಾಗಿದೆ.
    2. ಇದು ಐರೋಪ್ಯಾ ಒಕ್ಕೂಟದೊಳಗೆ ಉತ್ಪಾದಿಸುವ ಸರಕುಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಆಮದುಗಳಿಗೆ ಅನ್ವಯಿಸುವುದಿಲ್ಲ.
    3. ಇದು ಇಂಗಾಲದ ಮೇಲಿನ ಬೆಲೆಯಾಗಿ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ನಿರುತ್ಸಾಹಗೊಳಿಸುತ್ತದೆ.
    4. ಉತ್ಪಾದನಾ ಮಾದರಿಗಳು ಮತ್ತು ರಫ್ತುಗಳ ಮೇಲೆ ಪರಿಣಾಮ ಬೀರುವ ಮೂಲಕ ಇದು ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಪರಿಣಾಮ ಬೀರುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 2, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 1, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

     

    1. ಸಾಗರದ ಉಷ್ಣ ಅಲೆಗಳ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಹವಾಮಾನ ಬದಲಾವಣೆಯಿಂದಾಗಿ ಹೆಚ್ಚಿನ ವಾತಾವರಣದ ಶಾಖದ ಹೆಚ್ಚಿನ ಪಾಲನ್ನು ಹೀರಿಕೊಳ್ಳುವ ಸಾಗರಗಳಿಂದ ಸಾಗರದ ಉಷ್ಣ ಅಲೆಗಳು ಪ್ರಾಥಮಿಕವಾಗಿ ನಡೆಸಲ್ಪಡುತ್ತವೆ.
    2. ಬೆಚ್ಚಗಿನ ನೀರನ್ನು ತುಲನಾತ್ಮಕವಾಗಿ ತಂಪಾದ ಪ್ರದೇಶಗಳಿಗೆ ಸಾಗಿಸುವ ಮೂಲಕ ಸಾಗರ ಪ್ರವಾಹಗಳು ಸಾಗರದ ಉಷ್ಣ ಅಲೆಗಳಿಗೆ ಕೊಡುಗೆ ನೀಡಬಹುದು.
    3. ಉತ್ತರ ಪೆಸಿಫಿಕ್ ಮಹಾಸಾಗರದ ಅಧಿಕ ಒತ್ತಡದ ವಾತಾವರಣದ ವ್ಯವಸ್ಥೆಗಳು ಮೇಲ್ಮೈ ಶಾಖವನ್ನು ಹೊರಹಾಕಲು ಮತ್ತು ಸಾಗರದ ಉಷ್ಣ ಅಲೆಗಳ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
    4. ಎಲ್ ನಿನೊ ವಿದ್ಯಮಾನಗಳು ಸಮುದ್ರದ ಮೇಲ್ಮೈ ತಾಪಮಾನವನ್ನು ಹೆಚ್ಚಿಸಬಹುದು ಮತ್ತು ದೊಡ್ಡ ಪ್ರಮಾಣದ ಸಾಗರದ ಉಷ್ಣ ಅಲೆಗಳನ್ನು ಪ್ರಚೋದಿಸಬಹುದು.

    ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. 1, 3 ಮತ್ತು 4 ಮಾತ್ರ
    2. 1, 2 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2 ಮತ್ತು 4 ಮಾತ್ರ

    ಉತ್ತರ: D

     

    1. ಈ ಕೆಳಗಿನವುಗಳಲ್ಲಿ ಯಾವುದು ಮೆಮ್‌ಫ್ಲೇಷನ್ ಅನ್ನು ಉತ್ತಮವಾಗಿ ವಿವರಿಸುತ್ತದೆ?
    1. ಋತುಮಾನದ ಬೇಡಿಕೆಯಿಂದಾಗಿ ಆಹಾರ ಬೆಲೆಗಳಲ್ಲಿ ತಾತ್ಕಾಲಿಕ ಏರಿಕೆ.
    2. ಅರೆವಾಹಕಗಳ (ಸೆಮಿಕಂಡಕ್ಟರ್) ಮೆಮೊರಿ ಬೆಲೆಗಳಲ್ಲಿ ರಚನಾತ್ಮಕ ಮತ್ತು ನಿರಂತರ ಏರಿಕೆ.
    3. ಹೆಚ್ಚಿದ ಸರ್ಕಾರಿ ಖರ್ಚಿನಿಂದ ಉಂಟಾಗುವ ಹಣದುಬ್ಬರ.
    4. ಕಾಲಾನಂತರದಲ್ಲಿ ಎಲೆಕ್ಟ್ರಾನಿಕ್ ಸರಕುಗಳ ಬೆಲೆಗಳಲ್ಲಿ ಇಳಿಕೆ.

    ಉತ್ತರ: B

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಅಮೆಜಾನ್ ಮಳೆಕಾಡು ದಕ್ಷಿಣ ಅಮೆರಿಕದ ಒಂಬತ್ತು ದೇಶಗಳಲ್ಲಿ ವ್ಯಾಪಿಸಿದೆ, ಅದರಲ್ಲಿ ಹೆಚ್ಚಿನ ಪಾಲು ಬ್ರೆಜಿಲ್‌ನಲ್ಲಿದೆ.
    2. ಅರಣ್ಯವು ಪೂರ್ವಕ್ಕೆ ಆಂಡಿಸ್ ಪರ್ವತಗಳು ಮತ್ತು ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರದಿಂದ ಸುತ್ತುವರೆದಿದೆ.
    3. ಅಮೆಜಾನ್‌ನ ಹವಾಮಾನವು ವರ್ಷವಿಡೀ ವಿಭಿನ್ನ ಋತುಗಳಿಲ್ಲದೆ ಏಕರೂಪವಾಗಿ ಹೆಚ್ಚಿನ ತಾಪಮಾನ ಮತ್ತು ಭಾರೀ ಮಳೆಯಿಂದ ನಿರೂಪಿಸಲ್ಪಟ್ಟಿದೆ.
    4. ಯಾನೊಮಾಮೊ ಮತ್ತು ಕಯಾಪೊದಂತಹ ಸ್ಥಳೀಯ ಬುಡಕಟ್ಟುಗಳು ಅಮೆಜಾನ್ ಪ್ರದೇಶದಲ್ಲಿ ವಾಸಿಸುತ್ತವೆ.

    ಅಮೆಜಾನ್ ಮಳೆಕಾಡಿನ ಬಗ್ಗೆ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. 1, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    1. ಈ ಕೆಳಗಿನ ಪ್ರಭೇದಗಳನ್ನು ಪರಿಗಣಿಸಿ:
    1. ಲಂಟಾನಾ ಕ್ಯಾಮರಾ
    2. ವಾಟರ್ ಹಯಸಿಂತ್
    3. ಆಫ್ರಿಕನ್ ಕ್ಯಾಟ್‌ಫಿಶ್
    4. ನೈಲ್ ಟಿಲಾಪಿಯಾ

    ಮೇಲಿನ ಪ್ರಭೇದಗಳನ್ನು ಈ ಕೆಳಗಿನವುಗಳಲ್ಲಿ ಯಾವುದರ ಅಡಿಯಲ್ಲಿ ಉತ್ತಮವಾಗಿ ವರ್ಗೀಕರಿಸಲಾಗಿದೆ?

    1. ಸೂಚಕ ಪ್ರಭೇದಗಳು
    2. ಸ್ಥಳೀಯ ಪ್ರಭೇದಗಳು
    3. ಕೀಸ್ಟೋನ್ ಪ್ರಭೇದಗಳು
    4. ಆಕ್ರಮಣಕಾರಿ ಪ್ರಭೇದಗಳು

    ಉತ್ತರ: D

     

    1. ಈ ಕೆಳಗಿನ ವಾಕ್ಯವೃಂದವನ್ನು ಪರಿಗಣಿಸಿ:

    ಟಿಬೆಟ್ ಪ್ರಸ್ಥಭೂಮಿಯ ಎತ್ತರದ ಪ್ರದೇಶದ ಶೀತ ಶುಷ್ಕ ಹುಲ್ಲುಗಾವಲುಗಳಲ್ಲಿ ಕಂಡುಬರುವ ಈ ಸಸ್ತನಿಯು ಅತ್ಯಂತ ಮೃದುವಾದ ಉಣ್ಣೆಯನ್ನು ಉತ್ಪಾದಿಸುತ್ತದೆ, ಇದನ್ನು ಪ್ರಾಣಿಯನ್ನು ಕೊಂದ ನಂತರವಷ್ಟೇ ಪಡೆಯಲಾಗುತ್ತದೆ. ಈ ಉಣ್ಣೆಗಾಗಿ ನಡೆಯುವ ಅತಿಯಾದ ಬೇಟೆಯ ಕಾರಣದಿಂದಾಗಿ, ಇದರ ವ್ಯಾಪಾರವನ್ನು ಭಾರತದಲ್ಲಿ ಮತ್ತು ಅಂತರಾಷ್ಟಯ ಮಟ್ಟದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಪ್ರಭೇದವನ್ನು ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 ರ ಅನುಸೂಚಿ I ರ ಅಡಿಯಲ್ಲಿ ಮತ್ತು ಸೈಟ್ಸ್ (CITES) ನ ಅನುಬಂಧ I ರ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ, ಹಾಗೂ IUCN ಕೆಂಪುಪಟ್ಟಿಯಲ್ಲಿ ಸ್ಥಿತಿಗತಿಯ ಪ್ರಕಾರ ಇದು ‘ಅಪಾಯಕ್ಕೆ ಹತ್ತಿರದ’ (Near Threatened) ಪ್ರಭೇದವಾಗಿದೆ.

    ಈ ಕೆಳಗಿನ ಯಾವ ಪ್ರಭೇದವನ್ನು ಈ ಮೇಲಿನ ವಾಕ್ಯವೃಂದದಲ್ಲಿ ಉಲ್ಲೇಖಿಸಲಾಗುತ್ತಿದೆ?

    1. ಹಿಮ ಚಿರತೆ
    2. ಟಿಬೆಟಿಯನ್ ಹುಲ್ಲೆ
    3. ಹಿಮಾಲಯನ್ ತಹರ್
    4. ಕಿಯಾಂಗ್

    ಉತ್ತರ: B

     

    1. 2025 ರಲ್ಲಿ ಭಾರತದ ಬಾಹ್ಯಾಕಾಶ ಚಟುವಟಿಕೆಗಳ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಬೆಂಗಳೂರಿನಲ್ಲಿ ನಡೆದ SMOPS-2026 ಸಮ್ಮೇಳನದ ಸಂದರ್ಭದಲ್ಲಿ ಭಾರತೀಯ ಬಾಹ್ಯಾಕಾಶ ಸ್ಥಿತಿ ಜಾಗೃತಿ ವರದಿ 2025 ಅನ್ನು ಇಸ್ರೋ ಬಿಡುಗಡೆ ಮಾಡಿತು.
    2. 2025 ರಲ್ಲಿ 300 ಕ್ಕೂ ಹೆಚ್ಚು ಯಶಸ್ವಿ ಜಾಗತಿಕ ಉಡಾವಣೆಗಳನ್ನು ದಾಖಲಿಸಲಾಗಿದೆ, 4,000 ಕ್ಕೂ ಹೆಚ್ಚು ಉಪಗ್ರಹಗಳನ್ನು ನಿಯೋಜಿಸಲಾಗಿದೆ.
    3. ಭಾರತವು 2025 ರಲ್ಲಿ 10 ಕ್ಕೂ ಹೆಚ್ಚು ಉಡಾವಣೆಗಳನ್ನು ನಡೆಸಿತು, ಇದರಲ್ಲಿ 100 ನೇ ಉಡಾವಣಾ ಕಾರ್ಯಾಚರಣೆಯ ಮೈಲಿಗಲ್ಲು ಕೂಡ ಸೇರಿದೆ.
    4. ಭಾರತದ ಬಾಹ್ಯಾಕಾಶ ಸಾಧನೆಗಳಲ್ಲಿ NISAR, SpaDeX ನಿಲ್ದಾಣ ಪ್ರಯೋಗ ಮತ್ತು ಆದಿತ್ಯ-L1 ನ ನಿರಂತರ ಕಾರ್ಯಾಚರಣೆ, ಜೊತೆಗೆ 2030 ರ ವೇಳೆಗೆ ಶಿಲಾಖಂಡರಾಶಿ-ಮುಕ್ತ ಬಾಹ್ಯಾಕಾಶ ಕಾರ್ಯಾಚರಣೆಯತ್ತ ಪ್ರಯತ್ನಗಳು ಇದರಲ್ಲಿ ಸೇರಿವೆ.

    ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಭಾರತದ ಬಾವಲಿಗಳ ಸ್ಥಿತಿ 2024–25 ಎಂಬ ವರದಿಯನ್ನು ಪರಿಸರ ಸಂರಕ್ಷಣಾ ಫೌಂಡೇಶನ್ ಬಹು ಸಂರಕ್ಷಣಾ ಸಂಸ್ಥೆಗಳ ಸಹಯೋಗದೊಂದಿಗೆ ಬಿಡುಗಡೆ ಮಾಡಿದೆ.
    2. ಭಾರತವು 200 ಕ್ಕೂ ಹೆಚ್ಚು ಪ್ರಭೇದಗಳ ಬಾವಲಿಗಳಿಗೆ ಆವಾಸಸ್ಥಾನವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ವೈವಿಧ್ಯತೆಯನ್ನು ಹೊಂದಿದೆ.
    3. ಬಾವಲಿಗಳು ಕೈರೋಪ್ಟೆರಾ ವರ್ಗಕ್ಕೆ ಸೇರಿವೆ ಮತ್ತು ನಿರಂತರವಾಗಿ ಹಾರುವ ಸಾಮರ್ಥ್ಯ ಹೊಂದಿರುವ ಏಕೈಕ ಸಸ್ತನಿಗಳಾಗಿವೆ.
    4. ಬಾವಲಿಗಳು ಪರಾಗಸ್ಪರ್ಶಕಗಳಾಗಿ, ಬೀಜ ಪ್ರಸರಣಕಾರರಾಗಿ ಮತ್ತು ಕೀಟಗಳ ಸಂಖ್ಯೆಯ ನಿಯಂತ್ರಕಗಳಾಗಿ ಪ್ರಮುಖ ಪರಿಸರ ನಿಯಂತ್ರಣದ ಪಾತ್ರವನ್ನು ವಹಿಸುತ್ತವೆ.

    ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. 1, 2 ಮತ್ತು 4 ಮಾತ್ರ
    2. 2, 3 ಮತ್ತು 4 ಮಾತ್ರ
    3. 1, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

     

    1. ನದಿ ಜಲಾನಯನ ಪ್ರದೇಶ ನಿರ್ವಹಣಾ ಯೋಜನೆಯ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಕೇಂದ್ರ ಮತ್ತು ರಾಜ್ಯಗಳು ಜಂಟಿಯಾಗಿ ಜಾರಿಗೆ ತಂದ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    2. ಈ ಯೋಜನೆಯು ಭೂ ಮೇಲ್ಮೈ ನೀರು, ಉಪನದಿಗಳು ಮತ್ತು ಅಂತರ್ಜಲವನ್ನು ಒಂದೇ ಜಲವಿಜ್ಞಾನ ಘಟಕವಾಗಿ ಸಂಯೋಜಿಸುವ ಮೂಲಕ ಜಲಾನಯನ ಪ್ರದೇಶ ಮಟ್ಟದ ವಿಧಾನವನ್ನು ಅಳವಡಿಸಿಕೊಂಡಿದೆ.

    III. ಹಿಂದಿನ ಅನುದಾನ ಹಂಚಿಕೆಗೆ ಹೋಲಿಸಿದರೆ 16 ನೇ ಹಣಕಾಸು ಆಯೋಗದ ಅವಧಿಯಲ್ಲಿ ಈ ಯೋಜನೆಗೆ ಅನುದಾನ ಹಂಚಿಕೆಯನ್ನು ಕಡಿಮೆ ಮಾಡಲಾಗಿದೆ.

    1. ಈ ಯೋಜನೆಯು ಈಶಾನ್ಯ ಪ್ರದೇಶ ಮತ್ತು ಸಿಂಧೂ ಜಲಾನಯನ ಪ್ರದೇಶವನ್ನು ಕಾರ್ಯತಂತ್ರದ ಮತ್ತು ಗಡಿಯಾಚೆಗಿನ ಪರಿಗಣನೆಗಳಿಗೆ ಆದ್ಯತೆ ನೀಡುತ್ತದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. II ಮತ್ತು IV ಮಾತ್ರ
    2. I, II ಮತ್ತು III ಮಾತ್ರ
    3. II, III ಮತ್ತು IV ಮಾತ್ರ
    4. I ಮತ್ತು IV ಮಾತ್ರ

    ಉತ್ತರ: A

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಸಮಾನತೆಯನ್ನು ಒತ್ತಿಹೇಳಿದ ಮತ್ತು ಜಾತಿ ಆಧಾರಿತ ತಾರತಮ್ಯವನ್ನು ತಿರಸ್ಕರಿಸಿದ ಇವರನ್ನು ಲಿಂಗಾಯತ ಚಳುವಳಿಯ ಸಂಸ್ಥಾಪಕ ಎಂದು ಪರಿಗಣಿಸಲಾಗಿದೆ.
    2. ಇವರು ಕಲಚೂರಿ ರಾಜವಂಶದ 2ನೇ ಬಿಜ್ಜಳನ ಆಡಳಿತದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದರು.

    III. ಇವರ ಬೋಧನೆಗಳನ್ನು ವಚನಗಳು ಎಂದು ಕರೆಯಲ್ಪಡುವ ಕಾವ್ಯಾತ್ಮಕ ಸಂಯೋಜನೆಗಳಲ್ಲಿ ಸಂರಕ್ಷಿಸಲಾಗಿದೆ.

    1. ಇವರು ಇಷ್ಟಲಿಂಗದ ಪರಿಕಲ್ಪನೆಯನ್ನು ಪರಿಚಯಿಸಿದರು, ದೈವಿಕತೆಯೊಂದಿಗೆ ನೇರ ಮತ್ತು ವೈಯಕ್ತಿಕ ಸಂಪರ್ಕವನ್ನು ಉತ್ತೇಜಿಸಿದರು.
    2. ಇವರು ಅನುಭವ ಮಂಟಪವನ್ನು ಸ್ಥಾಪಿಸಿದರು, ಇದನ್ನು ವಿಶ್ವದ ಮೊದಲ ಸಂಸತ್ತು ಎಂದು ಪರಿಗಣಿಸಲಾಗಿದೆ, ಇದು ಆಧ್ಯಾತ್ಮಿಕ ಮತ್ತು ಸಾಮಾಜಿಕ ವಿಷಯಗಳ ಕುರಿತು ಮುಕ್ತ ಚರ್ಚೆಗಳನ್ನು ಪ್ರೋತ್ಸಾಹಿಸಿತು.

    ಮೇಲಿನ ಹೇಳಿಕೆಗಳಿಂದ ಈ ಕೆಳಗಿನ ಯಾವ ಮಧ್ಯಕಾಲದ ಭಾರತೀಯ ವ್ಯಕ್ತಿಯನ್ನು ಉತ್ತಮವಾಗಿ ವಿವರಿಸಲಾಗಿದೆ?

    1. ಅಲ್ಲಮಪ್ರಭು
    2. ಬಸವೇಶ್ವರ
    3. ದೇವರ ದಾಸಿಮಯ್ಯ
    4. ಶಂಕರಾಚಾರ್ಯ

    ಉತ್ತರ: B

     

    1. ಹಳದಿ ರೇಖೆಯ (Yellow line) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಸಂಘರ್ಷ ವಲಯಗಳಲ್ಲಿ ಕಾರ್ಯಾಚರಣೆಯ ನಿಯಂತ್ರಣದ ಪ್ರದೇಶಗಳನ್ನು ಪ್ರತ್ಯೇಕಿಸಲು ಇದು ಇಸ್ರೇಲ್ ರಚಿಸಿದ ಸೇನಾ ಗಡಿ ರೇಖೆಯಾಗಿದೆ.
    2. ಇದು ಸಂಘರ್ಷದ ಪಕ್ಷಗಳ ನಡುವೆ ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಗುರುತಿಸಲ್ಪಟ್ಟ ಶಾಶ್ವತ ಅಂತರರಾಷ್ಟ್ರೀಯ ಗಡಿಯನ್ನು ಪ್ರತಿನಿಧಿಸುತ್ತದೆ.
    3. ಇದು ಸೈನ್ಯದ ನಿಯೋಜನೆಯ ವ್ಯಾಪ್ತಿಯನ್ನು ಗುರುತಿಸುವ ತಾತ್ಕಾಲಿಕ ಕಾರ್ಯಾಚರಣೆಯ ಮಿತಿಯಾಗಿ ಕಾರ್ಯನಿರ್ವಹಿಸುತ್ತದೆ.
    4. ಈ ರೇಖೆಯನ್ನು ದಾಟುವುದನ್ನು ಸಂಭಾವ್ಯ ಭದ್ರತಾ ಅಪಾಯ ಎಂದು ಪರಿಗಣಿಸಲಾಗುತ್ತದೆ, ಸೇನಾ ಪ್ರತಿಕ್ರಿಯೆ ಶಿಷ್ಟಾಚಾರಗಳನ್ನು ಪ್ರಚೋದಿಸುತ್ತದೆ.
    5. ಇದನ್ನು ಗಾಜಾ ಮತ್ತು ದಕ್ಷಿಣ ಲೆಬನಾನ್ ಸಂದರ್ಭಗಳಲ್ಲಿ ಹಮಾಸ್ ಒಳಗೊಂಡ ನಿಯಂತ್ರಣ ವಲಯಗಳನ್ನು ಗುರುತಿಸಲು ಬಳಸಲಾಗಿದೆ.

    ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 3, 4 ಮತ್ತು 5 ಮಾತ್ರ
    2. 1, 2 ಮತ್ತು 5 ಮಾತ್ರ
    3. 2, 3, 4 ಮತ್ತು 5 ಮಾತ್ರ
    4. 1, 2, 3 ಮತ್ತು 4 ಮಾತ್ರ

    ಉತ್ತರ: A

     

    1. ಇಂಡೋ-ಲಂಕಾ ಒಪ್ಪಂದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಶ್ರೀಲಂಕಾದಲ್ಲಿನ ಜನಾಂಗೀಯ ಸಂಘರ್ಷವನ್ನು ಪರಿಹರಿಸಲು ರಾಜೀವ್ ಗಾಂಧಿ ಮತ್ತು ಜೆ. ಆರ್. ಜಯವರ್ಧನ ನಡುವೆ ಸಹಿ ಹಾಕಲಾಯಿತು.
    2. ಶ್ರೀಲಂಕಾ ತನ್ನ ಸಂವಿಧಾನದ 13 ನೇ ತಿದ್ದುಪಡಿಯ ಮೂಲಕ ಪ್ರಾಂತ್ಯಗಳಿಗೆ ಅಧಿಕಾರ ವಿಕೇಂದ್ರೀಕರಣವನ್ನು ಇದು ಒದಗಿಸಿತು.
    3. ಇದು ತಮಿಳು ಈಳಂನ ಲಿಬರೇಶನ್ ಟೈಗರ್ಸ್ ಅನ್ನು ತಕ್ಷಣವೇ ವಿಸರ್ಜಿಸಲು ಮತ್ತು ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸಲು ಕಾರಣವಾಯಿತು.
    4. ಇದು ಒಪ್ಪಂದವನ್ನು ಜಾರಿಗೊಳಿಸಲು ಶ್ರೀಲಂಕಾದಲ್ಲಿ ಭಾರತೀಯ ಶಾಂತಿಪಾಲನಾ ಪಡೆ (IPKF) ಅನ್ನು ನಿಯೋಜಿಸಲು ಕಾರಣವಾಯಿತು.
    5. ಇದು ಸಿಂಹಳವನ್ನು ಬದಲಾಯಿಸಿ ತಮಿಳನ್ನು ಶ್ರೀಲಂಕಾದ ಏಕೈಕ ಅಧಿಕೃತ ಭಾಷೆಯಾಗಿ ಗುರುತಿಸಿತು.

    ಮೇಲೆ ನೀಡಲಾದ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಎರಡು ಮಾತ್ರ
    2. ನಾಲ್ಕು ಮಾತ್ರ
    3. ಮೂರು ಮಾತ್ರ
    4. ಎಲ್ಲಾ ಐದು 

    ಉತ್ತರ: C

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ, 2019 ರ ಅಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಯಾಗಿದ್ದು, 2020 ರಲ್ಲಿ ಕಾರ್ಯರೂಪಕ್ಕೆ ಬಂದಿತು.
    2. ವೈದ್ಯಕೀಯ ಶಿಕ್ಷಣದಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಇದು ಭಾರತೀಯ ವೈದ್ಯಕೀಯ ಮಂಡಳಿಯನ್ನು ಬದಲಾಯಿಸಿತು.
    3. ಇದು ವೈದ್ಯಕೀಯ ಮೌಲ್ಯಮಾಪನ ಮತ್ತು ಶ್ರೇಯಾಂಕ ಮಂಡಳಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮಂಡಳಿ ಸೇರಿದಂತೆ ನಾಲ್ಕು ಸ್ವಾಯತ್ತ ಮಂಡಳಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ.
    4. ಈ ಆಯೋಗವು ರಾಜ್ಯ ವೈದ್ಯಕೀಯ ಮಂಡಳಿಗಳನ್ನು ಪ್ರತಿನಿಧಿಸುವ ಚುನಾಯಿತ ಸದಸ್ಯರನ್ನು ಮಾತ್ರ ಒಳಗೊಂಡಿದೆ.

    ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಸಂಬಂಧಿಸಿದ ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1, 2 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

     

    1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಒಡಿಶಾ ತನ್ನ ಸಂಪೂರ್ಣ ಕರಾವಳಿಯನ್ನು ಒಳಗೊಂಡ ಕಡಲ-ವಲಯದ ಪ್ರಾದೇಶಿಕ ಯೋಜನೆಯನ್ನು ಪ್ರಾರಂಭಿಸಿದ ಭಾರತದ ಮೊದಲ ರಾಜ್ಯವಾಗಿದೆ.
    2. ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಕರಾವಳಿ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ.

    III. ಪರಿಸರ ಸಂರಕ್ಷಣೆಯನ್ನು ಪರಿಗಣಿಸದೆ, ಕರಾವಳಿ ಸಂಪನ್ಮೂಲಗಳ ಕೈಗಾರಿಕಾ ಮತ್ತು ವಾಣಿಜ್ಯ ಬಳಕೆಯನ್ನು ಪ್ರತ್ಯೇಕವಾಗಿ ಉತ್ತೇಜಿಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ.

    1. ಈ ಯೋಜನೆಯು ಸಾಗರ ಮತ್ತು ಕಡಲ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯ ಮೇಲೆ ಕೇಂದ್ರೀಕರಿಸುವ ಸುಸ್ಥಿರ ಅಭಿವೃದ್ಧಿ ಗುರಿ 14 ರೊಂದಿಗೆ ಹೊಂದಿಕೆಯಾಗುತ್ತದೆ.

    ಭಾರತದಲ್ಲಿ ಕಡಲ-ವಲಯದ ಪ್ರಾದೇಶಿಕ ಯೋಜನೆಗೆ ಸಂಬಂಧಿಸಿದ ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    1. I, II ಮತ್ತು IV ಮಾತ್ರ
    2. I ಮತ್ತು III ಮಾತ್ರ
    3. II, III ಮತ್ತು IV ಮಾತ್ರ
    4. I, II, III ಮತ್ತು IV

    ಉತ್ತರ: A

     

    ಉತ್ತರಗಳು 

    01). D                26). B                51). C

    02). C                27). D                52). A

    03). A                28). A                53). B

    04). B                29). B                54). A

    05). A                30). A                55). C

    06). D                31). C                56). A

    07). A                32). A                57). B

    08). C                33). B                58). A

    09). B                34). B                59). C

    10). A                35). D                60). D

    11). C                36). C                61). B

    12). B                37). C                62). A

    13). B                38). A                63). D

    14). A                39). D                64). B

    15). C                40). C                65). A

    16). A                41). A                66). C

    17). C                42). B                67). A

    18). D                43). C                68). B

    19). A                44). D                69). A

    20). B                45). B                70). C

    21). B                46). C                71). B

    22). C                47). B                72). A

    23). A                48). D

    24). C                49). A

    25). B                50). B

               

  • ಗುಜರಾತಿನ ಸಾನಂದ್: ಭಾರತದ ಸೆಮಿಕಂಡಕ್ಟರ್ ಹಬ್ | ಭಾರತದಲ್ಲಿ ಸಹಕಾರ ಸಂಘಗಳು | ಬಾಬ್-ಅಲ್-ಮಂದೇಬ್ ಜಲಸಂಧಿ | ಸಮ್ರಾಟ್ ಸಂಪ್ರತಿ | ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅನುಮೋದನಾ ಕೇಂದ್ರ (IN-SPACe) | ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026

    ಗುಜರಾತಿನ ಸಾನಂದ್: ಭಾರತದ ಸೆಮಿಕಂಡಕ್ಟರ್ ಹಬ್

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಭಾರತದ ಪ್ರಧಾನಮಂತ್ರಿಯವರು ಗುಜರಾತಿನ ಸಾನಂದ್‌ನಲ್ಲಿ ‘ಕೇನ್ಸ್ ಸೆಮಿಕಾನ್’ ಸಂಸ್ಥೆಯ ಅರೆವಾಹಕ (ಸೆಮಿಕಂಡಕ್ಟರ್)ಗಳನ್ನು ಜೋಡಿಸುವ ಮತ್ತು ಪರೀಕ್ಷಾ ಘಟಕವನ್ನು ಉದ್ಘಾಟಿಸಿದರು.
    • ಈ ಯೋಜನೆಯು “ಇಂಡಿಯಾ ಸೆಮಿಕಂಡಕ್ಟರ್ ಮಿಷನ್‌” (ISM)ನ ಒಂದು ಪ್ರಮುಖ ಭಾಗವಾಗಿದೆ.
    • ಇದು ಭಾರತವನ್ನು ಜಾಗತಿಕ ಅರೆವಾಹಕ (ಸೆಮಿಕಂಡಕ್ಟರ್) ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
    • ಜಾಗತಿಕ ಅರೆವಾಹಕ ಪೂರೈಕೆ ಸರಪಳಿಯಲ್ಲಿ ಸಾನಂದ್ ಅನ್ನು ಒಂದು ನಿರ್ಣಾಯಕ ಕೊಂಡಿಯಾಗಿ ರೂಪಿಸಲಾಗುತ್ತಿದೆ.

    ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM):

    • ಪ್ರಾರಂಭ:- ಡಿಸೆಂಬರ್ 2021
    • ಅನುಷ್ಠಾನ ಸಂಸ್ಥೆ:- ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY).
    • ಉದ್ದೇಶ:- ದೇಶದಲ್ಲಿ ಸುಸ್ಥಿರವಾದ ಅರೆವಾಹಕ ಮತ್ತು ಪರದೆ (display)ಗಳ ಸಮಗ್ರ ಪೂರಕ ವ್ಯವಸ್ಥೆಯನ್ನು ನಿರ್ಮಿಸುವುದು.

    ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 (ISM 2.0):

    • ಇದನ್ನು 2026-27ರ ಕೇಂದ್ರ ಬಜೆಟ್‌ ನಲ್ಲಿ ಘೋಷಿಸಲಾಯಿತು.
    • ಭಾರತದಲ್ಲಿ ಸಂಪೂರ್ಣ ಪ್ರಮಾಣದ ಅರೆವಾಹಕಗಳ ಸಮಗ್ರ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲು ಇದು ಅರೆವಾಹಕ ಉಪಕರಣಗಳು ಮತ್ತು ಕಚ್ಚಾ ವಸ್ತುಗಳ ಮೇಲೆ ಕೇಂದ್ರೀಕರಿಸುತ್ತದೆ.

    ಸರ್ಕಾರದ ಇತರ ಯೋಜನೆಗಳು:

    • ವಿನ್ಯಾಸ ಆಧಾರಿತ ಪ್ರೋತ್ಸಾಹ ಯೋಜನೆ (DLI Scheme):- ಚಿಪ್ ವಿನ್ಯಾಸ ಮಾಡುವ ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸು ಮತ್ತು ಮೂಲಸೌಕರ್ಯ ಬೆಂಬಲ ಒದಗಿಸುತ್ತದೆ. 
    • ದೇಶೀಯವಾಗಿ 100 ಕ್ಕೂ ಹೆಚ್ಚು ಅರೆವಾಹಕ ವಿನ್ಯಾಸ ಸಂಸ್ಥೆಗಳನ್ನು ಸ್ಥಾಪಿಸುವ ಗುರಿಯನ್ನು ಇದು ಹೊಂದಿದೆ. 
    • ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ – ಉತ್ಪಾದನೆ ಆಧಾರಿತ ಪ್ರೋತ್ಸಾಹ (PLI) ಯೋಜನೆ:- ಇದು ಮೊಬೈಲ್ ಉತ್ಪಾದನೆಯ ಬೆಳವಣಿಗೆಯ ಜೊತೆಗೆ ಬೇಡಿಕೆಯ ಆಧಾರಿತ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.
    • ಚಿಪ್ಸ್-ಟು-ಸ್ಟಾರ್ಟ್‌ಅಪ್ ಕಾರ್ಯಕ್ರಮ:- 300 ಕ್ಕೂ ಹೆಚ್ಚು ಸಂಸ್ಥೆಗಳಿಗೆ ಇಡಿಎ (EDA) ಉಪಕರಣಗಳು ಮತ್ತು ಉತ್ಪಾದನಾ ನಿರ್ಮಾಣ ಬೆಂಬಲವನ್ನು ಇದು ಒದಗಿಸುತ್ತದೆ.
    • ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್ ಮತ್ತು ವಿರಳ ಭೂ-ಖನಿಜ ಸಂಚಾರ ಪಥ (Rare Earth Corridor):- ವಿರಳ ಭೂ-ಖನಿಜಗಳಿಗಾಗಿ ಚೀನಾ ಹಾಗೂ ಸೆಮಿಕಂಡಕ್ಟರ್ ‘ಫ್ಯಾಬ್’ (Fabs) ಘಟಕಗಳಿಗಾಗಿ ತೈವಾನ್ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.

    ಜಾಗತಿಕ ಪೂರೈಕೆ ಸರಪಳಿ ಮತ್ತು ಕಾರ್ಯತಂತ್ರದ ಸ್ಥಾನಮಾನ:

    • ಅಮೆರಿಕ ನೇತೃತ್ವದ ‘ಪ್ಯಾಕ್ಸ್ ಸಿಲಿಕಾ’ ಉಪಕ್ರಮ:- ಈ ಉಪಕ್ರಮದಲ್ಲಿ ಭಾರತದ ಸದಸ್ಯತ್ವವು ಅರೆವಾಹಕ ಮತ್ತು ಕೃತಕ ಬುದ್ಧಿಮತ್ತೆಯಂತಹ (AI) ನಿರ್ಣಾಯಕ ತಂತ್ರಜ್ಞಾನಗಳ ಪೂರೈಕೆ ಸರಪಳಿಯನ್ನು ಭದ್ರಪಡಿಸುವ ಗುರಿಯನ್ನು ಹೊಂದಿದೆ.

    ಪ್ಯಾಕ್ಸ್ ಸಿಲಿಕಾ ಉಪಕ್ರಮದ ಬಗ್ಗೆ:

    • ಉದ್ದೇಶ:- ನಿರ್ಣಾಯಕ ಖನಿಜಗಳಿಂದ ಸುಭದ್ರ, ಸಮೃದ್ಧ ಮತ್ತು ನಾವೀನ್ಯತೆ ಆಧಾರಿತ ಸಿಲಿಕಾನ್ ಪೂರೈಕೆ ಸರಪಳಿಯನ್ನು ನಿರ್ಮಿಸುವ ಅಮೆರಿಕ ನೇತೃತ್ವದ ಕಾರ್ಯತಂತ್ರದ ಉಪಕ್ರಮ ಇದಾಗಿದೆ.
    • ಸದಸ್ಯ ರಾಷ್ಟ್ರಗಳು:- ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ, ನೆದರ್ಲ್ಯಾಂಡ್ಸ್, ಯುನೈಟೆಡ್ ಕಿಂಗ್‌ಡಮ್, ಇಸ್ರೇಲ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಆಸ್ಟ್ರೇಲಿಯಾ.

    ಭಾರತದಲ್ಲಿ ಸಹಕಾರ ಸಂಘಗಳು

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ದೇಶದಲ್ಲಿ ಕೇವಲ 3.49 ಲಕ್ಷ ಸಹಕಾರ ಸಂಘಗಳು ಮಾತ್ರ ಲಾಭದಲ್ಲಿವೆ ಎಂದು ಕೇಂದ್ರ ಸರ್ಕಾರವು ಇತ್ತೀಚಿಗೆ ಲೋಕಸಭೆಗೆ ಮಾಹಿತಿ ನೀಡಿದೆ.

    ಸಹಕಾರ ಸಂಘಗಳ ಬಗ್ಗೆ:

    • ಸಾಮಾನ್ಯ ಹಿತಾಸಕ್ತಿ, ಗುರಿ ಅಥವಾ ಅಗತ್ಯವನ್ನು ಹೊಂದಿರುವ ವ್ಯಕ್ತಿಗಳ ಗುಂಪೊಂದು ಒಟ್ಟಾಗಿ ಮಾಲೀಕತ್ವ ಹೊಂದಿ, ನಿರ್ವಹಿಸುವ ಸಂಸ್ಥೆ ಅಥವಾ ವ್ಯವಹಾರವನ್ನು ‘ಸಹಕಾರ ಸಂಘ’ ಎಂದು ಕರೆಯಲಾಗುತ್ತದೆ.
    • ಉದ್ದೇಶ:- ಬಾಹ್ಯ ಷೇರುದಾರರಿಗೆ ಗರಿಷ್ಠ ಲಾಭ ಗಳಿಸಿಕೊಡುವುದಕ್ಕಿಂತ ಹೆಚ್ಚಾಗಿ, ತನ್ನ ಸದಸ್ಯರ ಆರ್ಥಿಕ, ಸಾಮಾಜಿಕ ಅಥವಾ ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸುವುದು.

    ಸಹಕಾರ ಸಂಘಗಳ ಪ್ರಯೋಜನಗಳು:

    • ಪ್ರಜಾಸತ್ತಾತ್ಮಕ ನಿಯಂತ್ರಣ:- ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಸದಸ್ಯರಿಗೂ ಸಮಾನವಾದ ಧ್ವನಿ ಇರುತ್ತದೆ.
    • ಆರ್ಥಿಕ ಭಾಗವಹಿಸುವಿಕೆ:- ಸದಸ್ಯರ ಬಳಕೆ ಅಥವಾ ಅವರ ಕೊಡುಗೆಯ ಆಧಾರದ ಮೇಲೆ ಲಾಭವನ್ನು ವಿತರಿಸಲಾಗುತ್ತದೆ. ಹೂಡಿಕೆ ಮಾಡಿದ ಬಂಡವಾಳದ ಆಧಾರದ ಮೇಲೆ ಅಲ್ಲ.
    • ಸಮುದಾಯದ ಮೇಲಿನ ಗಮನ:- ಸಂಪನ್ಮೂಲಗಳು ಮತ್ತು ಲಾಭವನ್ನು ಗುಂಪಿನೊಳಗೆ ಉಳಿಸಿಕೊಳ್ಳುವ ಮೂಲಕ ಸ್ಥಳೀಯ ಸಮುದಾಯಗಳಿಗೆ ಪ್ರಯೋಜನವನ್ನು ಒದಗಿಸುವುದು.
    • ಉತ್ತಮ ಸೇವೆಗಳು ಮತ್ತು ಬೆಲೆಗಳು:- ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಮೂಲಕ, ಲಾಭದಾಯಕ ಉದ್ದಿಮೆಗಳಿಗಿಂತ ಉತ್ತಮ ಸೇವೆಗಳನ್ನು ಅಥವಾ ಕೈಗೆಟುಕುವ ಬೆಲೆಗಳನ್ನು ಇವು ನೀಡುತ್ತವೆ.

    97ನೇ ಸಂವಿಧಾನ ತಿದ್ದುಪಡಿ ಕಾಯ್ದೆ 2011 ರ ಬಗ್ಗೆ:

    • ಇದು ಸಹಕಾರ ಸಂಘಗಳನ್ನು ರಚಿಸುವ ಹಕ್ಕನ್ನು ಮೂಲಭೂತ ಹಕ್ಕಾಗಿ (ವಿಧಿ 19) ಸ್ಥಾಪಿಸಿದೆ.
    • ಸಹಕಾರ ಸಂಘಗಳ ಉತ್ತೇಜನಕ್ಕಾಗಿ ರಾಜ್ಯ ನಿರ್ದೇಶಕ ತತ್ವಗಳಲ್ಲಿ (DPSP) ಹೊಸ ವಿಧಿ 43-B ಸೇರಿಸಲಾಗಿದೆ.
    • ಸಂವಿಧಾನಕ್ಕೆ “ಸಹಕಾರ ಸಂಘಗಳು” ಎಂಬ ಶೀರ್ಷಿಕೆಯ ಹೊಸ ಭಾಗ IX-B ಯಲ್ಲಿ ವಿಧಿ 243-ZH ನಿಂದ 243-ZT ವರೆಗೆ ಸೇರ್ಪಡೆಗೊಳಿಸಲಾಗಿದೆ.

    ಭಾರತದಲ್ಲಿ ಸಹಕಾರ ಸಂಘಗಳ ಕಾನೂನು ಚೌಕಟ್ಟು ಮತ್ತು ಬೆಂಬಲ:

    • ಸಹಕಾರ ಸಂಘಗಳ ಕಾಯ್ದೆ:- ಸಹಕಾರ ಸಂಘಗಳನ್ನು ನಿಯಂತ್ರಿಸಲಾಗುತ್ತದೆ ಮತ್ತು ಇದನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜಾರಿಗೊಳಿಸಲಾಗುತ್ತದೆ.
    • ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆ, 2002:- ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ಸಹಕಾರ ಸಂಘಗಳನ್ನು ನಿಯಂತ್ರಿಸುತ್ತದೆ.
    • ರಾಷ್ಟ್ರೀಯ ಸಹಕಾರ ನೀತಿ, 2002:- ಸಹಕಾರಿ ಚಳವಳಿಗೆ ಪೂರಕ ವಾತಾವರಣವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದ್ದು, ಇದು ಆಡಳಿತ, ಸದಸ್ಯರ ಭಾಗವಹಿಸುವಿಕೆ ಮತ್ತು ಆರ್ಥಿಕ ಸುಸ್ಥಿರತೆಯನ್ನು ಸುಧಾರಿಸುವತ್ತ ಗಮನಹರಿಸುತ್ತದೆ.
    • ಸಹಕಾರ ಸಚಿವಾಲಯ:- 2021 ರಲ್ಲಿ ಸ್ಥಾಪನೆಯಾದ ಈ ಸಚಿವಾಲಯವು, ಭಾರತದಲ್ಲಿ ಸಹಕಾರ ಸಂಘಗಳ ಆಡಳಿತವನ್ನು ಸುಧಾರಿಸುವ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುವ ಮೂಲಕ ಅವುಗಳ ಬೆಳವಣಿಗೆಯನ್ನು ಬೆಂಬಲಿಸುತ್ತದೆ.
    • ರಾಷ್ಟ್ರೀಯ ಸಹಕಾರ ನೀತಿ, 2025:- ಭಾರತದ ಸಹಕಾರಿ ಸಂಪ್ರದಾಯದ ವಿಶಿಷ್ಟ ಸಾಮರ್ಥ್ಯಗಳನ್ನು ಬೆಳೆಸುವುದು, ಆರ್ಥಿಕ ಪ್ರಜಾಪ್ರಭುತ್ವೀಕರಣವನ್ನು ಉತ್ತೇಜಿಸುವುದು ಮತ್ತು ಸಾಮೂಹಿಕ ಭಾಗವಹಿಸುವಿಕೆಯ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಉನ್ನತೀಕರಿಸುವುದು ಇದರ ಪ್ರಮುಖ ಗುರಿಯಾಗಿದೆ.

    ಬಾಬ್-ಅಲ್-ಮಂದೇಬ್ ಜಲಸಂಧಿ

    ಭೂಗೋಳ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪ್ರಸ್ತುತ ನಡೆಯುತ್ತಿರುವ ಮಧ್ಯಪ್ರಾಚ್ಯ ಸಂಘರ್ಷದಲ್ಲಿ ‘ಇರಾನ್’ ಬೆಂಬಲಿತ ‘ಯೆಮನ್‌’ನ ‘ಹೌತಿ’ ಬಂಡುಕೋರರು ಪ್ರವೇಶಿಸಿದ ನಂತರ, ಬಾಬ್-ಎಲ್-ಮಂದೇಬ್ ಜಲಸಂಧಿಗೆ ಅಡ್ಡಿಯಾಗುವ ಸಾಧ್ಯತೆಯ ಬಗ್ಗೆ ತೀವ್ರ ಕಳವಳಗಳು ವ್ಯಕ್ತವಾಗಿವೆ.

    ಬಾಬ್-ಅಲ್-ಮಂದೇಬ್ ಜಲಸಂಧಿಯ ಬಗ್ಗೆ:

    • ಅರೇಬಿಕ್ ಭಾಷೆಯಲ್ಲಿ ಇದನ್ನು “ಕಣ್ಣೀರಿನ ಹೆಬ್ಬಾಗಿಲು” ಎಂದೂ ಕರೆಯಲಾಗುತ್ತಿದ್ದು, ಇದು ಕೆಂಪು ಸಮುದ್ರದ ದಕ್ಷಿಣ ತುದಿಯಲ್ಲಿದೆ.
    • ಇದು ಒಂದು ಕಡೆಯಲ್ಲಿ ಯೆಮನ್ ಹಾಗೂ ಮತ್ತೊಂದು ಕಡೆಯಲ್ಲಿ ‘ಹಾರ್ನ್ ಆಫ್ ಆಫ್ರಿಕಾ’ (ಆಫ್ರಿಕಾದ ಶೃಂಗ) ಪ್ರದೇಶದ ನಡುವೆ ನೆಲೆಗೊಂಡಿದೆ.
    • ಇದು ಕೆಂಪು ಸಮುದ್ರವನ್ನು ಏಡನ್ ಕೊಲ್ಲಿಯೊಂದಿಗೆ ಮತ್ತು ಮುಂದುವರಿದು ಹಿಂದೂ ಮಹಾಸಾಗರದೊಂದಿಗೆ ಸಂಪರ್ಕಿಸುತ್ತದೆ.
    • ಇದು ಸೂಯೆಜ್ ಕಾಲುವೆಯೊಂದಿಗೆ ಸಂಪರ್ಕ ಹೊಂದುವುದರಿಂದ ಆಯಕಟ್ಟಿನ ಪ್ರಾಮುಖ್ಯತೆಯನ್ನು ಪಡೆದಿದೆ ಮತ್ತು ಇದು ಮುಂದುವರಿದು ಮೆಡಿಟರೇನಿಯನ್ ಸಮುದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ.
    • ಇದು ಪ್ರಪಂಚದ ಅತ್ಯಂತ ಪ್ರಮುಖ ಕಡಲ-ಮಾರ್ಗದ ಕಾರ್ಯತಂತ್ರದ ಪ್ರದೇಶಗಳಲ್ಲಿ ಒಂದಾಗಿದೆ. ಏಕೆಂದರೆ,
    • ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಸರಿಸುಮಾರು 10-12% ರಷ್ಟು ಪಾಲು ಬಾಬ್-ಎಲ್-ಮಂಡೇಬ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ.
    • ಇದು ಸುಮೆಡ್ (SUMED) ಪೈಪ್‌ಲೈನ್‌ಗೂ ಸಂಪರ್ಕ ಹೊಂದಿದ್ದು, ಜಾಗತಿಕ ಇಂಧನ ಮತ್ತು ವ್ಯಾಪಾರ ಹರಿವಿಗೆ ನಿರ್ಣಾಯಕ ಸಂಚಾರ ಮಾರ್ಗವಾಗಿದೆ.

    ಸುಮೆಡ್ (SUMED- ಸೂಯೆಜ್-ಮೆಡಿಟರೇನಿಯನ್) ಪೈಪ್‌ಲೈನ್:

    • ಈಜಿಪ್ಟ್‌ನಲ್ಲಿರುವ 200-ಮೈಲಿ ಉದ್ದದ ಪೈಪ್‌ಲೈನ್ ಆಗಿದೆ:- ಇದು ಕೆಂಪು ಸಮುದ್ರದ ಮೇಲಿರುವ ‘ಐನ್ ಸುಖ್ನಾ’ವನ್ನು ಮೆಡಿಟರೇನಿಯನ್ ಮೇಲಿರುವ ‘ಸಿಡಿ ಕೆರಿರ್’ಗೆ ಸಂಪರ್ಕಿಸುತ್ತದೆ.
    • ಸೂಯೆಜ್ ಕಾಲುವೆಗೆ ಒಂದು ಆಯಕಟ್ಟಿನ ಪರ್ಯಾಯ ಮಾರ್ಗವಾಗಿದೆ:- ಏಕೆಂದರೆ, ಪರ್ಷಿಯನ್ ಕೊಲ್ಲಿಯ ತೈಲವನ್ನು ಯುರೋಪ್ ಮತ್ತು ಉತ್ತರ ಅಮೆರಿಕಾಗೆ ಸಾಗಿಸಲು ಇದು ಅನುಕೂಲಮಾಡಿಕೊಡುತ್ತದೆ.
    • ಉದ್ದೇಶ:- ಇದು ಸೂಯೆಜ್ ಕಾಲುವೆಗೆ ಪರ್ಯಾಯವಾಗಿ ಕಚ್ಚಾ ತೈಲವನ್ನು ಸಾಗಿಸುವ ಪ್ರಮುಖ ಮಾರ್ಗವಾಗಿದ್ದು, ಹಡಗು ಸಂಚಾರ ದಟ್ಟಣೆಯ ಸಂದರ್ಭದಲ್ಲಿ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ಇದು ಅತ್ಯಗತ್ಯವಾಗಿದೆ.
    • ಮಾರ್ಗ:- ಐನ್ ಸುಖ್ನಾವನ್ನು (ಸೂಯೆಜ್ ಕೊಲ್ಲಿ, ಕೆಂಪು ಸಮುದ್ರ) ಸಿಡಿ ಕೆರಿರ್‌ಗೆ (ಅಲೆಕ್ಸಾಂಡ್ರಿಯಾ ಬಳಿ, ಮೆಡಿಟರೇನಿಯನ್ ಸಮುದ್ರ) ಸಂಪರ್ಕಿಸುತ್ತದೆ.
    • ಸಾಮರ್ಥ್ಯ:- ಪ್ರತಿದಿನ ಸರಿಸುಮಾರು 2.5 ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲವನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
    • ಮಾಲೀಕತ್ವ:- ‘ಅರಬ್ ಪೆಟ್ರೋಲಿಯಂ ಪೈಪ್‌ಲೈನ್ ಕಂಪನಿಯು’ ಇದನ್ನು ನಿರ್ವಹಿಸುತ್ತಿದ್ದು, ಇದು ಈಜಿಪ್ಟ್, ಸೌದಿ ಅರೇಬಿಯಾ, ಕುವೈತ್, ಯುಎಇ ಮತ್ತು ಕತಾರ್ ನಡುವಿನ ಜಂಟಿ ಉದ್ಯಮವಾಗಿದೆ.

    ಸಮ್ರಾಟ್ ಸಂಪ್ರತಿ

    ಕಲೆ ಮತ್ತು ಸಂಸ್ಕೃತಿ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪ್ರಧಾನಮಂತ್ರಿಯವರು ಗುಜರಾತಿನ ಗಾಂಧಿನಗರದಲ್ಲಿರುವ ಕೋಬಾ ತೀರ್ಥದಲ್ಲಿ ಜೈನ ಪರಂಪರೆ ವಸ್ತುಸಂಗ್ರಹಾಲಯವಾದ ‘ಸಮ್ರಾಟ್ ಸಂಪ್ರತಿ’ ಸಂಗ್ರಹಾಲಯ’ವನ್ನು ಉದ್ಘಾಟಿಸಿದರು.

    ಸಮ್ರಾಟ್ ಸಂಪ್ರತಿ ಕುರಿತು:

    • ಇವರು ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಹಾಗೂ ಸಾಮ್ರಾಟ್ ಅಶೋಕನ ಮೊಮ್ಮಗನಾಗಿದ್ದಾರೆ.
    • ಇವರನ್ನು ಇಂದ್ರಪಾಲಿತ, ಸಂಗತ ಮತ್ತು ವಿಗತಾಶೋಕ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ.
    • ಇವರ ಜೀವನ ಚರಿತ್ರೆಯನ್ನು ಸಂಪ್ರತಿಕಥಾ, ಪರಿಶಿಷ್ಟಪರ್ವ ಮತ್ತು ಪ್ರಭಾವಕಚರಿತ ಸೇರಿದಂತೆ ಪ್ರಮುಖ ಜೈನ ಧರ್ಮಗ್ರಂಥಗಳಲ್ಲಿ ವಿವರಿಸಲಾಗಿದೆ.
    • ಭಾರತ ಉಪಖಂಡದಾದ್ಯಂತ ಜೈನ ಧರ್ಮ ಮತ್ತು ಅಹಿಂಸಾ ತತ್ತ್ವವನ್ನು ಹರಡುವಲ್ಲಿ ಇವರ ನಿರ್ಣಾಯಕ ಪಾತ್ರಕ್ಕಾಗಿ, ಇವರನ್ನು ‘ಜೈನ ಅಶೋಕ’ ಎಂದು ಕರೆಯಲಾಗುತ್ತದೆ.
    • ಅಧಿಕಾರವನ್ನು ಕೇವಲ ಆಡಳಿತಕ್ಕಾಗಿ ಅಲ್ಲದೆ ಸೇವೆ ಮತ್ತು ಸಾಧನೆ ಎಂದು ಪರಿಗಣಿಸಿದ್ದ ಸಮ್ರಾಟ್ ಸಂಪ್ರತಿಯವರು ಸಿಂಹಾಸನದಿಂದಲೇ ಅಹಿಂಸೆಯನ್ನು ಹರಡಿದರು. ಜೊತೆಗೆ, ಸತ್ಯ, ಅಸ್ತೇಯ (ಕಳ್ಳತನ ಮಾಡದಿರುವುದು) ಮತ್ತು ಅಪರಿಗ್ರಹವನ್ನು (ಸಂಪತ್ತನ್ನು ಕೂಡಿಡದಿರುವುದು) ನಿಸ್ವಾರ್ಥತೆ ಹಾಗೂ ನಿರ್ಲಿಪ್ತತೆಯಿಂದ ಪ್ರಚಾರ ಮಾಡಿದರು ಎಂದು ಭಾರತದ ಪ್ರಧಾನಮಂತ್ರಿಯವರು ಶ್ಲಾಘಿಸಿದರು.
    • ಇವರು ಭಾರತ ಉಪಖಂಡದಾದ್ಯಂತ ಅನೇಕ ಜೈನ ಬಸದಿಗಳನ್ನು ನಿರ್ಮಿಸಿದ್ದಾರೆ ಮತ್ತು ಜೀರ್ಣೋದ್ಧಾರ ಮಾಡಿದ್ದಾರೆ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.

    ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅನುಮೋದನಾ ಕೇಂದ್ರ (IN-SPACe)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅನುಮೋದನಾ ಕೇಂದ್ರವು (IN-SPACe) ತನ್ನ ಪ್ರತಿಷ್ಠಿತ ‘ಮಾದರಿ ರಾಕೆಟ್ರಿ ಸ್ಪರ್ಧೆಯ’ 2ನೇ ಆವೃತ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

    ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅನುಮೋದನಾ ಕೇಂದ್ರ (IN-SPACe)ದ ಬಗ್ಗೆ:

    • IN-SPACe ಸಂಪೂರ್ಣ ರೂಪ:- ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರಮೋಷನ್ ಅಂಡ್ ಆಥೋರೈಝೆಷನ್ ಸೆಂಟರ್.
    • ಇದು ಬಾಹ್ಯಾಕಾಶ ಇಲಾಖೆಯ (DOS) ಅಡಿಯಲ್ಲಿ ಕಾರ್ಯನಿರ್ವಹಿಸುವ ‘ಏಕ-ಗವಾಕ್ಷಿ’ ಮತ್ತು ಸ್ವಾಯತ್ತ ನೋಡಲ್ ಸಂಸ್ಥೆಯಾಗಿದೆ.
    • ಇದನ್ನು ಭಾರತ ಸರ್ಕಾರವು ಜೂನ್ 2020 ರಲ್ಲಿ ಸ್ಥಾಪಿಸಿತು.
    • ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹಾಗೂ ಖಾಸಗಿ ಕಂಪನಿಗಳು ಮತ್ತು ಶೈಕ್ಷಣಿಕ ವಲಯ ಸೇರಿದಂತೆ ಸರ್ಕಾರೇತರ ಸಂಸ್ಥೆಗಳ (NGEs) ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.
    • ಅಧ್ಯಕ್ಷರು:- ಡಾ. ಪವನ್ ಕುಮಾರ್ ಗೋಯೆಂಕಾ.
    • ಪ್ರಧಾನ ಕಚೇರಿ:- ಗುಜರಾತಿನ ಅಹಮದಾಬಾದ ಜಿಲ್ಲೆಯ ಬೋಪಾಲ್‌ನಲ್ಲಿದೆ.

    ಪ್ರಮುಖ ಕಾರ್ಯಗಳು ಮತ್ತು ಜವಾಬ್ದಾರಿಗಳು:

    • ಭಾರತದಲ್ಲಿ ಖಾಸಗಿ ವಲಯದ ಬಾಹ್ಯಾಕಾಶ ಚಟುವಟಿಕೆಗಳನ್ನು ಉತ್ತೇಜಿಸುವ, ಸಕ್ರಿಯಗೊಳಿಸುವ, ಅನುಮೋದಿಸುವ ಮತ್ತು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು IN-SPACe ಹೊಂದಿದೆ.
    • ಸೌಲಭ್ಯ ಒದಗಿಸುವಿಕೆ:- ಬಾಹ್ಯಾಕಾಶ  ಗುರಿಗಳನ್ನು ನಿರ್ಮಿಸಲು ಮತ್ತು ಉಡಾವಣೆ ಮಾಡಲು ಇಸ್ರೋದ (ISRO) ಮೂಲಸೌಕರ್ಯ ಹಾಗೂ ತಾಂತ್ರಿಕ ಪರಿಣತಿಯನ್ನು ಬಳಸಿಕೊಳ್ಳಲು ಸರ್ಕಾರೇತರ ಸಂಸ್ಥೆ (NGEs)ಗಳಿಗೆ ಇದು ಅವಕಾಶ ಕಲ್ಪಿಸುತ್ತದೆ.
    • ಉತ್ತೇಜನ:- ಇದು ಈ ಕೆಳಗಿನ ಉಪಕ್ರಮಗಳ ಮೂಲಕ ಭಾರತೀಯ ಬಾಹ್ಯಾಕಾಶ ಆರ್ಥಿಕತೆಯನ್ನು ವಿಸ್ತರಿಸುವತ್ತ ಇದು ಗಮನಹರಿಸುತ್ತದೆ.
    • ‘ತಂತ್ರಜ್ಞಾನ ಅಳವಡಿಕೆ ನಿಧಿ’ (Technology Adoption Fund) – ₹500 ಕೋಟಿ ಮೌಲ್ಯದ್ದಾಗಿದೆ..
    • ‘ಸ್ಯಾಟಲೈಟ್ ಬಸ್ ಆಸ್ ಎ ಸರ್ವೀಸ್’ (SBaaS).

    ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ‘ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026’ ಅನ್ನು ಅಧಿಸೂಚನೆ ಹೊರಡಿಸಿದೆ.

    ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026 ರ ಬಗ್ಗೆ:

    • ಅನುಷ್ಠಾನ ಸಚಿವಾಲಯ:- ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC).
    • ಈ ಹೊಸ ನಿಯಮಗಳು ಏಪ್ರಿಲ್ 1, 2026 ರಿಂದ ಸಂಪೂರ್ಣವಾಗಿ ಜಾರಿಗೆ ಬರಲಿವೆ.
    • ಇವು ಪ್ರಸ್ತುತ ಇರುವ ‘SWM ನಿಯಮಗಳು 2016’ ಅನ್ನು ಬದಲಾಯಿಸಲಿವೆ ಮತ್ತು ಭಾರತವನ್ನು ‘ವೃತ್ತಾಕಾರದ ಆರ್ಥಿಕತೆ’ ಹಾಗೂ “ಶೂನ್ಯ ತ್ಯಾಜ್ಯ” ಮಾದರಿಯತ್ತ ಕೊಂಡೊಯ್ಯುವ ಗುರಿಯನ್ನು ಹೊಂದಿವೆ.

    SWM ನಿಯಮಗಳು 2026 ರ ಪ್ರಮುಖ ನಿಬಂಧನೆಗಳು:

    • ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸುವುದು ಕಡ್ಡಾಯ:- ತ್ಯಾಜ್ಯವನ್ನು ಹಸಿ, ಒಣ, ನೈರ್ಮಲ್ಯ ಮತ್ತು ವಿಶೇಷ ಕಾಳಜಿಯ (ಅಪಾಯಕಾರಿ) ತ್ಯಾಜ್ಯಗಳೆಂದು 4 ವಿಭಾಗಗಳಾಗಿ ವಿಂಗಡಿಸುವುದನ್ನು ಇದು ಕಡ್ಡಾಯಗೊಳಿಸಿದೆ.
    • ಬೃಹತ್ ತ್ಯಾಜ್ಯ ಉತ್ಪಾದಕರು:- ಪ್ರತಿದಿನ 100 ಕೆಜಿ ಅಥವಾ ಅದಕ್ಕಿಂತ ಹೆಚ್ಚು ತ್ಯಾಜ್ಯವನ್ನು ಉತ್ಪಾದಿಸುವ ಸಂಸ್ಥೆಗಳು ಹಸಿ ತ್ಯಾಜ್ಯವನ್ನು ಸ್ಥಳೀಯವಾಗಿಯೇ ನಿರ್ವಹಿಸಬೇಕು ಅಥವಾ ‘ವಿಸ್ತರಿತ ಉತ್ಪಾದಕರ ಜವಾಬ್ದಾರಿ’ (EPR) ನೀತಿಯನ್ನು ಅಳವಡಿಸಿಕೊಳ್ಳಬೇಕು.
    • ತ್ಯಾಜ್ಯ ಸಂಸ್ಕರಿತ ಇಂಧನದ ಬಳಕೆ:- ಕೈಗಾರಿಕೆಗಳು ಮತ್ತು ಸಿಮೆಂಟ್ ಕಾರ್ಖಾನೆಗಳು ಮುಂದಿನ 6 ವರ್ಷಗಳೊಳಗೆ ‘ತ್ಯಾಜ್ಯ ಸಂಸ್ಕರಿತ ಇಂಧನ’ದ (RDF) ಬಳಕೆಯನ್ನು 5% ರಿಂದ 15% ಕ್ಕೆ ಕಡ್ಡಾಯವಾಗಿ ಹೆಚ್ಚಿಸಬೇಕು.
    • CPCB ಪೋರ್ಟಲ್:- ತ್ಯಾಜ್ಯದ ಸಂಪೂರ್ಣ ಜೀವನಚಕ್ರವನ್ನು ಮೇಲ್ವಿಚಾರಣೆ ಮಾಡಲು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಕೇಂದ್ರೀಕೃತ ಪೋರ್ಟಲ್ ಅನ್ನು ಬಳಸಲಾಗುತ್ತದೆ.
    • “ಮಾಲಿನ್ಯ ಮಾಡುವವರೇ ದಂಡ ತೆರಬೇಕು” (Polluter Pays Principle) ನಿಯಮಗಳ ಕಟ್ಟುನಿಟ್ಟಿನ ಜಾರಿ:- ಮತ್ತು ಹಳೆಯ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿಗದಿತ ಕಾಲಮಿತಿಯೊಳಗೆ ಕಡ್ಡಾಯವಾಗಿ ಮರುಸ್ಥಾಪಿಸಲಾಗುತ್ತದೆ.
  • ಕರ್ನಾಟಕ ಸೈಬರ್ ಭದ್ರತಾ ನೀತಿ, 2024

    ಕರ್ನಾಟಕ ಸೈಬರ್ ಭದ್ರತಾ ನೀತಿ, 2024

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಕರ್ನಾಟಕದ ಸೈಬರ್ ಭದ್ರತಾ ಉತ್ಕೃಷ್ಟತಾ ಕೇಂದ್ರ (CySecK) ವಾರ್ಷಿಕ ಕ್ರೋಢೀಕೃತ ವರದಿಯು, 2025-26ರ ಅವಧಿಯಲ್ಲಿ ಭಾರತದ ಒಟ್ಟು ರ್‍ಯಾನ್ಸಮ್‌ವೇರ್ (Ransomware) ಪ್ರಕರಣಗಳಲ್ಲಿ ಕರ್ನಾಟಕವು ಶೇ. 9 ರಷ್ಟು ಪಾಲನ್ನು ಹೊಂದಿದೆ ಎಂದು ದೃಢಪಡಿಸಿದೆ.

    ಕರ್ನಾಟಕ ಸೈಬರ್ ಭದ್ರತಾ ನೀತಿ, 2024 ರ ಬಗ್ಗೆ:

    • ಉದ್ದೇಶ:- ಸರ್ಕಾರಿ ಸೇವೆಗಳಿಗೆ (G2G, G2B, G2C) ಸುರಕ್ಷಿತ ಮತ್ತು ಸದೃಢ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವುದು.
    • ಗುರಿ:- ದತ್ತಾಂಶ ರಕ್ಷಣೆಯನ್ನು ಬಲಪಡಿಸುವ, ನವೋದ್ಯಮಗಳ ಆವಿಷ್ಕಾರವನ್ನು ಉತ್ತೇಜಿಸುವ ಮತ್ತು 35,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಈ ನೀತಿಯು, 5 ವರ್ಷಗಳ ಅವಧಿಯಲ್ಲಿ ಇದರ ಅನುಷ್ಠಾನಕ್ಕಾಗಿ ₹100 ಕೋಟಿಗೂ ಹೆಚ್ಚು ಹಣವನ್ನು ಮೀಸಲಿಟ್ಟಿದೆ.

    ಈ ನೀತಿಯ ಪ್ರಮುಖ ಆಧಾರಸ್ತಂಭಗಳು:

    • ಕೌಶಲ್ಯ ಅಭಿವೃದ್ಧಿ ಮತ್ತು ಜಾಗೃತಿ:- ಸೈಬರ್ ಭದ್ರತೆಯಲ್ಲಿ 40,000 ವ್ಯಕ್ತಿಗಳಿಗೆ ತರಬೇತಿ ನೀಡಲು ಸಿಸ್ಕೋ (CISCO) ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದ್ದು, ಇದರಲ್ಲಿ ಶೇ. 50 ರಷ್ಟು ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ.
    • ನವೋದ್ಯಮ ಪ್ರೋತ್ಸಾಹಕಗಳು:- ಸಂಶೋಧನೆ ಮತ್ತು ಅಭಿವೃದ್ಧಿ (R&D) ಯೋಜನೆಗಳಿಗೆ ₹50 ಲಕ್ಷದವರೆಗೆ ಅನುದಾನವನ್ನು ಮತ್ತು ಸೈಬರ್ ಭದ್ರತಾ ಲೆಕ್ಕಪರಿಶೋಧನೆಗಾಗಿ ₹1 ಲಕ್ಷದವರೆಗೆ ಮರುಪಾವತಿಯನ್ನು ನೀಡುತ್ತದೆ.
    • ಮೂಲಸೌಕರ್ಯ ರಕ್ಷಣೆ:- ರಾಜ್ಯದ ಐಟಿ (IT) ಸ್ವತ್ತುಗಳ ಸೈಬರ್ ಸಾಮರ್ಥ್ಯವನ್ನು ಬಲಪಡಿಸುವ ಮತ್ತು ನಿರ್ಣಾಯಕ ಮೂಲಸೌಕರ್ಯಗಳನ್ನು ರಕ್ಷಿಸುವ ಬಗ್ಗೆ ಗಮನಹರಿಸುತ್ತದೆ.
    • ಸಹಯೋಗ:- ಸಾರ್ವಜನಿಕ ಜಾಗೃತಿಗಾಗಿ ಕೈಗಾರಿಕಾ ವಲಯ, ಶಿಕ್ಷಣ ವಲಯ ಮತ್ತು ‘ಮೆಟಾ’ದಂತಹ ಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳುತ್ತದೆ.

    ಕರ್ನಾಟಕದ ಸೈಬರ್ ಭದ್ರತಾ ಉತ್ಕೃಷ್ಟತಾ ಕೇಂದ್ರ (CySecK)ದ ಬಗ್ಗೆ:

    • ಇದು ರಾಜ್ಯದ ಡಿಜಿಟಲ್ ಮೂಲಸೌಕರ್ಯ ವ್ಯವಸ್ಥೆಯನ್ನು ಬಲಪಡಿಸಲು 2017 ರಲ್ಲಿ ಸ್ಥಾಪಿಸಲಾದ ಕರ್ನಾಟಕ ಸರ್ಕಾರದ ಒಂದು ಪ್ರಮುಖ ಉಪಕ್ರಮವಾಗಿದೆ.
    • ಸಚಿವಾಲಯ:- ಕರ್ನಾಟಕ ಸರ್ಕಾರದ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ.