ವರ್ಗ: National and International Current Affairs Kannada

  • ಸರ್ಫೇಸಿ ಕಾಯ್ದೆ, 2002 (SARFAESI Act, 2002) | ಅಂಟಾರ್ಕ್ಟಿಕ್ ಪೆಂಗ್ವಿನ್‌ಗಳು | ಗಾಜಾ ಶಾಂತಿ ಮಂಡಳಿ | ಅಟಲ್ ಪಿಂಚಣಿ ಯೋಜನೆ (APY) | ಸಿ-295 ವಿಮಾನ | ಗ್ರಾಕಾ ಮಾಚೆಲ್ ಅವರಿಗೆ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ, 2025 | ಇಸ್ರೇಲ್ ವೆಸ್ಟ್ ಬ್ಯಾಂಕ್ ಹೊರಠಾಣೆಗೆ ‘ಹೊಸ ವಸಾಹತು’ ಎಂಬ ಅಧಿಕೃತ ಮಾನ್ಯತೆ

    ಸರ್ಫೇಸಿ ಕಾಯ್ದೆ, 2002 (SARFAESI Act, 2002)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಸರ್ಕಾರವು ಕಾನೂನು ಅಸ್ಪಷ್ಟತೆಗಳನ್ನು ತೆಗೆದುಹಾಕಲು ಮತ್ತು ನಿಯಂತ್ರಕ ಮೇಲ್ವಿಚಾರಣೆಯನ್ನು ಬಲಪಡಿಸಲುಸರ್ಫೇಸಿ ಕಾಯ್ದೆ, 2002′ ಕ್ಕೆ ತಿದ್ದುಪಡಿಗಳನ್ನು ತರಲು ಪರಿಗಣಿಸುತ್ತಿದೆ.

    ಸರ್ಫೇಸಿ ಕಾಯ್ದೆ, 2002 (SARFAESI Act, 2002):

    • ಪೂರ್ಣ ರೂಪ:- SARFAESI- ಸೆಕ್ಯುರಿಟೈಸೇಷನ್ ಅಂಡ್ ರಿಕನ್ಸಟ್ರಕ್ಷನ್ ಆಫ್ ಫೈನಾನ್ಸಿಯಲ್ ಅಸ್ಸೇಟ್ಸ್ ಅಂಡ್ ಎನಫೋರ್ಸ್ಮೆಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಕಾಯ್ದೆ.
    • ಇದು ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಮತ್ತು ಭದ್ರತಾ ಆಸಕ್ತಿಯ ಜಾರಿ ಕಾಯ್ದೆಯನ್ನು ಸೂಚಿಸುತ್ತದೆ.
      • ಧೇಯೋದ್ದೇಶ:- ಇದು ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಿಗೆ ಅನುತ್ಪಾದಕ ಆಸ್ತಿಗಳನ್ನು (NPAs) ಮರುಪಡೆಯಲು ಕಾನೂನು ವ್ಯವಸ್ಥೆಯನ್ನು ಒದಗಿಸುತ್ತದೆ.
    • ಸಾಲ ನೀಡುವವರು ಭದ್ರತಾ ಹಿತಾಸಕ್ತಿಗಳನ್ನು ಜಾರಿಗೊಳಿಸಬಹುದು:-ಇದು ಸಾಲ ನೀಡುವವರಿಗೆ ನ್ಯಾಯಾಲಯ ಅಥವಾ ನ್ಯಾಯಮಂಡಳಿಯ ಮಧ್ಯಸ್ಥಿಕೆಯಿಲ್ಲದೆ ಭದ್ರತಾ ಹಿತಾಸಕ್ತಿಗಳನ್ನು ಜಾರಿಗೊಳಿಸಲು ಅನುಮತಿಸುತ್ತದೆ.
    • ಈ ಕಾಯ್ದೆಯು ಅನ್ವಯಿಕೆ:- ಬಾಕಿ ಉಳಿದಿರುವ ಸಾಲದ ಮೊತ್ತವು ₹1 ಲಕ್ಷಕ್ಕಿಂತ ಹೆಚ್ಚಿದ್ದಾಗ ಈ ಕಾಯ್ದೆಯು ಅನ್ವಯಿಸುತ್ತದೆ.
    • ಸಾಲಗಾರರು ಅಥವಾ ಜಾಮೀನುದಾರರು ಅಡಮಾನವಿಟ್ಟ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಮೂಲಕ, ಬ್ಯಾಂಕುಗಳು ತಮ್ಮ ಸಾಲವನ್ನು ಮರುಪಡೆಯಬಹುದು.

    ಅಂಟಾರ್ಕ್ಟಿಕ್ ಪೆಂಗ್ವಿನ್‌ಗಳು

    ಭೂಗೋಳ ಮತ್ತು ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಹವಾಮಾನ ಬದಲಾವಣೆಯ ಪರಿಣಾಮವಾಗಿ, ಪೆಂಗ್ವಿನ್‌ಗಳು ತಮ್ಮ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ವಾಡಿಕೆಗಿಂತ ಮೊದಲೇ ಆರಂಭಿಸುತ್ತಿವೆ ಎಂದು ಅಧ್ಯಯನವೊಂದು ವರದಿ ಮಾಡಿದೆ.

    ಪೆಂಗ್ವಿನ್‌ಗಳ ಬಗ್ಗೆ:

    • ಹಾರಲಾರದ ಪಕ್ಷಿಗಳು:- ಇವು ಸಮುದ್ರ ಪರಿಸರಕ್ಕೆ ಹೆಚ್ಚು ಹೊಂದಿಕೊಂಡಿವೆ.
      • ಅತ್ಯುತ್ತಮ ಈಜುಗಾರ ಪಕ್ಷಿಗಳು:- ಇವು ನೀರಿನಲ್ಲಿ ಬಹಳ ಆಳಕ್ಕೆ ಮುಳುಗಬಲ್ಲವು.
    • ಅಂಟಾರ್ಕ್ಟಿಕ್ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ:- ಇವು ಆಳದ ನೀರಿನಿಂದ ಪೋಷಕಾಂಶಗಳನ್ನು ಮೇಲ್ಮೈಗೆ ತರುವುದು ಸೇರಿದಂತೆ, ಪಾಚಿಗಳು ತಮ್ಮ ದ್ಯುತಿಸಂಶ್ಲೇಷಣೆ ಕ್ರಿಯೆಯನ್ನು ಪೂರ್ಣಗೊಳಿಸಲು ಇದು ಅತ್ಯಗತ್ಯವಾಗಿದೆ.
    • ಇವುಗಳು ಪ್ರಮುಖವಾಗಿ ದಕ್ಷಿಣ ಗೋಳಾರ್ಧದಲ್ಲಿ ವಾಸಿಸುತ್ತವೆ.

    ಪ್ರಮುಖ ಪೆಂಗ್ವಿನ್ ಪ್ರಭೇದಗಳು:

    ಕ್ರ.ಸಂ.

    ಪೆಂಗ್ವಿನ್ ಪ್ರಭೇದಗಳು

    ವೈಜ್ಞಾನಿಕ ಹೆಸರು 

    IUCN ಕೆಂಪು ಪಟ್ಟಿಯ ಸ್ಥಿತಿಗತಿ

    1

    ಚಕ್ರವರ್ತಿ ಪೆಂಗ್ವಿನ್

    ಆಪ್ಟೆನೋಡೈಟ್ಸ್ ಫಾರ್ಸ್ಟರಿ (Aptenodytes forsteri)

    ಅಪಾಯದ ಅಂಚಿನಲ್ಲಿರುವ (NT)

    2

    ರಾಜ ಪೆಂಗ್ವಿನ್

    ಯುಡಿಪ್ಟೆಸ್ ಶ್ಲೆಗೆಲಿ (Eudyptes schlegeli)

    ಕನಿಷ್ಠ ಕಾಳಜಿ (LC)

    3

    ಅಡೆಲಿ ಪೆಂಗ್ವಿನ್

    ಪೈಗೋಸೆಲಿಸ್ ಅಡೆಲಿಯೆ (Pygoscelis adeliae)

    ಕನಿಷ್ಠ ಕಾಳಜಿ (LC)

    4

    ಹಂಬೋಲ್ಟ್ ಪೆಂಗ್ವಿನ್

    ಸ್ಪೆನಿಸ್ಕಸ್ ಹಂಬೋಲ್ಟಿ (Spheniscus humboldti)

    ದುರ್ಬಲ (VU)

    5

    ಮೆಗೆಲ್ಲಾನಿಕ್ ಪೆಂಗ್ವಿನ್

    ಸ್ಪೆನಿಸ್ಕಸ್ ಮೆಗೆಲ್ಲಾನಿಕಸ್ (Spheniscus magellanicus)

    ಕನಿಷ್ಠ ಕಾಳಜಿ (LC)

    6

    ಫಿಯೋರ್ಡ್‌ಲ್ಯಾಂಡ್ ಪೆಂಗ್ವಿನ್

    ಯುಡಿಪ್ಟೆಸ್ ಪ್ಯಾಚಿರಿಂಚಸ್ (Eudyptes pachyrhynchus)

    ಅಪಾಯದ ಅಂಚಿನಲ್ಲಿರುವ (NT)

    7

    ಜೆಂಟೂ ಪೆಂಗ್ವಿನ್

    ಪೈಗೋಸೆಲಿಸ್ ಪಪುವಾ (Pygoscelis papua)

    ಕನಿಷ್ಠ ಕಾಳಜಿ (LC)

    ಗಾಜಾ ಶಾಂತಿ ಮಂಡಳಿ

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿದೆ:

    • ಪ್ರಸ್ತಾಪಿತ ‘ಗಾಜಾ ಶಾಂತಿ ಮಂಡಳಿ’ಗೆ ಸೇರುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಆಹ್ವಾನಕ್ಕೆ, ಭಾರತ ಸರ್ಕಾರವು ತನ್ನ ಪ್ರತಿಕ್ರಿಯೆಯನ್ನು ನೀಡುವ ಬಗ್ಗೆ ಪರಿಶೀಲಿಸುತ್ತಿದೆ.

    ಗಾಜಾ ಶಾಂತಿ ಮಂಡಳಿಯ ಬಗ್ಗೆ:

    • ಅಂತರರಾಷ್ಟ್ರೀಯ ಸಂಸ್ಥೆ:- ಇದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷತೆಯ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ.
    • ಗಾಜಾ ಯುದ್ಧದ ನಂತರದ ಪರಿವರ್ತನೆಯನ್ನು ನಿರ್ವಹಿಸಲು:- ಇಸ್ರೇಲ್-ಹಮಾಸ್ ಯುದ್ಧದ ಅಕ್ಟೋಬರ್ 2025 ರ ಕದನ ವಿರಾಮದ ಮೇಲ್ವಿಚಾರಣೆ ಮತ್ತು ಗಾಜಾ ಯುದ್ಧದ ನಂತರದ ಪರಿವರ್ತನೆಯನ್ನು ನಿರ್ವಹಿಸಲು ಇದನ್ನು ರಚಿಸಲಾಗಿದೆ.
    • ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅನುಮೋದನೆ:- ಈ ಉಪಕ್ರಮವನ್ನು ಅಕ್ಟೋಬರ್ 2025 ರಲ್ಲಿ ಪ್ರಸ್ತಾಪಿಸಲಾಯಿತು ಮತ್ತು ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಇದನ್ನು ಅನುಮೋದಿಸಿತು.

    ಸದಸ್ಯರು:

    • ಆಹ್ವಾನಿತ ಸುಮಾರು 50 ನಾಯಕರಲ್ಲಿ, ಸುಮಾರು 35 ಜಾಗತಿಕ ನಾಯಕರು ಪ್ರಸ್ತಾಪಿತ ಶಾಂತಿ ಮಂಡಳಿಗೆ ಸೇರಲು ಒಪ್ಪಿಕೊಂಡಿದ್ದಾರೆ.
    • ಭಾಗವಹಿಸುವ ರಾಷ್ಟ್ರಗಳು ಪ್ರಮುಖವಾಗಿ,
    • ಮಧ್ಯಪ್ರಾಚ್ಯ ಮಿತ್ರರಾಷ್ಟ್ರಗಳಾದ- ಇಸ್ರೇಲ್, ಸೌದಿ ಅರೇಬಿಯಾ, ಯುಎಇ, ಬಹ್ರೇನ್, ಜೋರ್ಡಾನ್, ಕತಾರ್ ಮತ್ತು ಈಜಿಪ್ಟ್,
    • ನ್ಯಾಟೋ ಸದಸ್ಯರಾದ ಟರ್ಕಿ ಮತ್ತು ಹಂಗೇರಿ ಸೇರಿವೆ.
    • ಏಷ್ಯಾ, ಆಫ್ರಿಕಾ, ಯುರೋಪ್ ಮತ್ತು ಲ್ಯಾಟಿನ್ ಅಮೆರಿಕದಾದ್ಯಂತ ಇರುವ ಇತರ ಹಲವಾರು ದೇಶಗಳು – ಪಾಕಿಸ್ತಾನ, ಇಂಡೋನೇಷ್ಯಾ, ವಿಯೆಟ್ನಾಂ, ಮೊರಾಕ್ಕೊ, ಅರ್ಮೇನಿಯಾ ಮತ್ತು ಅಜರ್ಬೈಜಾನ್ ಸೇರಿದಂತೆ ಹಲವು ದೇಶಗಳು ಇದರಲ್ಲಿ ಸೇರಿಕೊಂಡಿವೆ.
    • 3 ವರ್ಷಗಳವರೆಗೆ ಸದಸ್ಯತ್ವದ ಅವಧಿ:- ಇದನ್ನು ನವೀಕರಿಸುವ ಆಯ್ಕೆಯೂ ಇರುತ್ತದೆ.
    • ಆರಂಭಿಕ ಅವಧಿಯನ್ನು ಮೀರಿ ತಮ್ಮ ಭಾಗವಹಿಸುವಿಕೆಯನ್ನು ವಿಸ್ತರಿಸಲು ಬಯಸುವ ದೇಶಗಳು $ 1 ಬಿಲಿಯನ್ ಡಾಲರ್ ಕೊಡುಗೆ ನೀಡಬೇಕಾಗಬಹುದು, ಆದರೆ ಅಲ್ಪಾವಧಿಯ ಭಾಗವಹಿಸುವಿಕೆಯು ಯಾವುದೇ ಆರ್ಥಿಕ ಬದ್ಧತೆಯನ್ನು ಒಳಗೊಂಡಿರುವುದಿಲ್ಲ.

    ಈ ಮಂಡಳಿಯ ಧೇಯೋದ್ದೇಶಗಳು:

    • ಗಾಜಾ ಆಡಳಿತಕ್ಕಾಗಿ ರಾಷ್ಟ್ರೀಯ ಸಮಿತಿ:- ಈ ಮಂಡಳಿಯು ಗಾಜಾ ಪಟ್ಟಿಯಲ್ಲಿ ಗಾಜಾ ಆಡಳಿತಕ್ಕಾಗಿ ರಾಷ್ಟ್ರೀಯ ಸಮಿತಿಯ ಮೂಲಕ ಪರಿವರ್ತನಾ ಪ್ಯಾಲೇಸ್ಟಿನಿಯ ತಾಂತ್ರಿಕ ಆಡಳಿತವನ್ನು ಮೇಲ್ವಿಚಾರಣೆ ಮಾಡುತ್ತದೆ.
    • ಹಮಾಸ್ ಅನ್ನು ನಿಶ್ಯಸ್ತ್ರಗೊಳಿಸುವ ಪ್ರಯತ್ನ:- ‘ಅಂತರರಾಷ್ಟ್ರೀಯ ಸ್ಥಿರೀಕರಣ ಪಡೆ’ಯ ನಿಯೋಜನೆಯ ಮೇಲ್ವಿಚಾರಣೆಯನ್ನು ಸಹ ಮಂಡಳಿಯ ಆದೇಶವು ಒಳಗೊಂಡಿದೆ.
    • ಅಂತರರಾಷ್ಟ್ರೀಯ ಸ್ಥಿರೀಕರಣ ಪಡೆ (ISF)ಯು ಒಂದು ಬಹುರಾಷ್ಟ್ರೀಯ ಶಾಂತಿಪಾಲನಾ ಕಾರ್ಯ ಯೋಜನೆ ಆಗಿದ್ದು, ಭದ್ರತೆಯನ್ನು ಕಾಪಾಡುವುದು ಮತ್ತು ಹೊಸ ಪ್ಯಾಲೇಸ್ಟಿನಿಯನ್ ಪೊಲೀಸ್ ಪಡೆಗೆ ತರಬೇತಿ ನೀಡುವ ಜವಾಬ್ದಾರಿಯನ್ನು ಹೊಂದಿದೆ.

    ಅಟಲ್ ಪಿಂಚಣಿ ಯೋಜನೆ (APY)

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ: 

    • ಪ್ರಧಾನ ಮಂತ್ರಿಯವರ ನೇತೃತ್ವದ ಕೇಂದ್ರ ಸಚಿವ ಸಂಪುಟವು, ಅಟಲ್ ಪಿಂಚಣಿ ಯೋಜನೆಯನ್ನು 2030-31 ರವರೆಗೆ ಮುಂದುವರಿಸಲು ಅನುಮೋದನೆ ನೀಡಿದೆ. ಇದರ ಜೊತೆಗೆ, ಯೋಜನೆಯ ಪ್ರಚಾರ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಆರ್ಥಿಕ ನೆರವನ್ನು ಮುಂದುವರಿಸಲು ಸಹ ಅನುಮೋದನೆ ನೀಡಲಾಗಿದೆ

    ‘ಅಟಲ್ ಪಿಂಚಣಿ ಯೋಜನೆ’ಯ ಬಗ್ಗೆ:

    • ಪ್ರಾರಂಭ:- 2015
    • ಉದ್ದೇಶ:- ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದ ಆದಾಯ ಭದ್ರತೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ.
    • ಉದ್ದೇಶಿತ ಗುಂಪು:- ಇದು ಆರಂಭದಲ್ಲಿ ಇದು 18 ರಿಂದ 40 ವರ್ಷ ವಯಸ್ಸಿನ ಭಾರತದ ಎಲ್ಲಾ ನಾಗರಿಕರಿಗೆ ಲಭ್ಯವಿದೆ.
    • ಚಂದಾದಾರರ ಕೊಡುಗೆಯ ಆಧಾರದ ಮೇಲೆ ಖಾತರಿ ಕನಿಷ್ಠ ಪಿಂಚಣಿ:- 60 ನೇ ವಯಸ್ಸಿನಿಂದ ತಿಂಗಳಿಗೆ ರೂ. 1,000 ದಿಂದ ರೂ. 5,000 ರವರೆಗೆ ಖಾತರಿಯ ಕನಿಷ್ಠ ಪಿಂಚಣಿಯನ್ನು ನೀಡುತ್ತದೆ.
    • ನಿರ್ವಹಣಾ ಸಂಸ್ಥೆ:- ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA).
    • ಇದನ್ನು ‘ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ’ಯ ಚೌಕಟ್ಟಿನ ಅಡಿಯಲ್ಲಿ ನಿರ್ವಹಿಸಲಾಗುತ್ತದೆ.
    • ಪ್ರಗತಿ:- ಜನವರಿ 2026 ರ ಹೊತ್ತಿಗೆ, 8.66 ಕೋಟಿಗೂ ಹೆಚ್ಚು ಚಂದಾದಾರರು ನೋಂದಾಯಿಸಿಕೊಂಡಿದ್ದಾರೆ. ಇದು ಭಾರತದ ಅಂತರ್ಗತ ಸಾಮಾಜಿಕ ಭದ್ರತಾ ಚೌಕಟ್ಟಿನ ಪ್ರಮುಖ ಆಧಾರಸ್ತಂಭವಾಗಿದೆ.

    ಸಿ-295 ವಿಮಾನ

    ಭದ್ರತೆ

    ಇದೀಗ ಸುದ್ದಿಯಲ್ಲಿದೆ:

    • ವಡೋದರಾದಲ್ಲಿರುವ ಏರ್‌ಬಸ್ ಮತ್ತು ಟಾಟಾ ಸಂಸ್ಥೆಯ ಜೋಡಣಾ ಘಟಕದಲ್ಲಿ ತಯಾರಾಗುತ್ತಿರುವ, ಮೊದಲಬಾರಿಗೆ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಸಿ-295 ವಿಮಾನವು ಸೆಪ್ಟೆಂಬರ್‌, 2026 ಕ್ಕಿಂತ ಮೊದಲೇ ಸಿದ್ಧಗೊಂಡು ಹೊರಬರಲಿದೆ. 
    • ಈ ಯೋಜನೆಯು ಭಾರತ ಮತ್ತು ಸ್ಪೇನ್ ದೇಶಗಳ ನಡುವಿನ ರಕ್ಷಣಾ ಸಹಕಾರವು ಮತ್ತಷ್ಟು ಬಲಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ.

    ಸಿ-295 ವಿಮಾನದ ಬಗ್ಗೆ:

    • ಬಹುಮುಖಿ ಬಳಕೆ:- ಇದೊಂದು ಬಹುಮುಖಿ ಮತ್ತು ವಿಶ್ವಾಸಾರ್ಹವಾದ ಯುದ್ಧತಂತ್ರದ ಕುಶಲ ಸಾರಿಗೆ ವಿಮಾನವಾಗಿದೆ. ಇದನ್ನು ಸೈನಿಕರ ಅಥವಾ ಸರಕು ಸಾಗಣೆ, ಕಡಲ ಗಸ್ತು, ಕಣ್ಗಾವಲು, ವೈದ್ಯಕೀಯ ತುರ್ತು ಸ್ಥಳಾಂತರ ಮತ್ತು ಅಗ್ನಿಶಾಮಕ ಕಾರ್ಯಾಚರಣೆಗಳಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು.
    • ಸಾಮರ್ಥ್ಯ:- ಈ ವಿಮಾನವು ಸುಮಾರು 8 ಟನ್‌ಗಳಷ್ಟು ಭಾರವನ್ನು ಅಥವಾ 70 ಸೈನಿಕರನ್ನು ಏಕಕಾಲದಲ್ಲಿ ಸಾಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. 
    • ಕಾರ್ಯಾಚರಣೆ:- ಇದು ಗಂಟೆಗೆ 260 ನಾಟ್ಸ್ ವೇಗದಲ್ಲಿ ಹಾರಾಟ ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದರ ವಿಶೇಷತೆಯೆಂದರೆ, ಇದು ಅತ್ಯಂತ ಚಿಕ್ಕದಾದ ಹಾಗೂ ಸುಸಜ್ಜಿತವಲ್ಲದ ಡಾಂಬರು ಹಾಕದ ಕಚ್ಚಾ ರನ್-ವೇಗಳಿಂದಲೂ ಸರಾಗವಾಗಿ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
    • ಸತತ 13 ಗಂಟೆಗಳ ಕಾಲ ಹಾರಾಟ ನಡೆಸುವ ಸಾಮರ್ಥ್ಯ:- ಅತ್ಯುತ್ತಮ ನಿರ್ವಹಣಾ ಕೌಶಲ ಮತ್ತು ಇಂಧನ ದಕ್ಷತೆಯನ್ನು ಹೊಂದಿದೆ.
    • ಹಿನ್ನೆಲೆ:- ಏರ್‌ಬಸ್ ಸಿ-295 (ಈ ಹಿಂದಿನ CASA C-295) ಮಧ್ಯಮ ಶ್ರೇಣಿಯ, ಎರಡು ಎಂಜಿನ್‌ಗಳನ್ನು ಹೊಂದಿರುವ ‘ಟರ್ಬೊಪ್ರಾಪ್’  ಸಾರಿಗೆ ವಿಮಾನವಾಗಿದೆ.
    • ಇದನ್ನು ಮೂಲತಃ ಸ್ಪೇನ್‌ನ ಏರೋಸ್ಪೇಸ್ ಕಂಪನಿ ‘CASA’ ವಿನ್ಯಾಸಗೊಳಿಸಿ, ನಿರ್ಮಿಸಿತ್ತು. ಪ್ರಸ್ತುತ ಈ ಸಂಸ್ಥೆಯು ಯುರೋಪಿನ ಬಹುರಾಷ್ಟ್ರೀಯ ಕಂಪನಿ ‘ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್’ ವಿಭಾಗದ ಭಾಗವಾಗಿದೆ.

    ಗ್ರಾಕಾ ಮಾಚೆಲ್ ಅವರಿಗೆ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ, 2025

    ಇತರೆ

    ಇದೀಗ ಸುದ್ದಿಯಲ್ಲಿದೆ: 

    • ಮೊಜಾಂಬಿಕ್‌ನ ಹಕ್ಕುಗಳ ಹೋರಾಟಗಾರ್ತಿ ಮತ್ತು ಮಾನವತಾವಾದಿ ಗ್ರಾಕಾ ಮಾಚೆಲ್ ಅವರನ್ನು 2025 ರ ‘ಶಾಂತಿ, ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿಗಾಗಿ ಇಂದಿರಾ ಗಾಂಧಿ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಘೋಷಿಸಿದೆ.
    • ಶಿಕ್ಷಣ, ಆರೋಗ್ಯ ಮತ್ತು ಪೋಷಣೆ, ಆರ್ಥಿಕ ಸಬಲೀಕರಣ ಮತ್ತು ಮಾನವೀಯ ಕಾರ್ಯಗಳ ಕ್ಷೇತ್ರಗಳಲ್ಲಿನ ಅವರ “ಮಾರ್ಗ-ನಿರ್ಮಾಪಕ ಕೆಲಸ”ಕ್ಕಾಗಿ ಗ್ರಾಕಾ ಮಾಚೆಲ್ ಅವರನ್ನು ಆಯ್ಕೆ ಮಾಡಲಾಗಿದೆ.

    ‘ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ’ಯ ಬಗ್ಗೆ:

    • ಸ್ಥಾಪಿನೆ:- 1986
    • ವಾರ್ಷಿಕ ಪ್ರಶಸ್ತಿಯಾಗಿದೆ:- ಈ ಪ್ರಶಸ್ತಿಯನ್ನು ಭಾರತದಲ್ಲಿ ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಸ್ಥಾಪಿಸಿದೆ.
    • ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಗೌರವಾರ್ಥವಾಗಿ ಈ ಪ್ರಶಸ್ತಿಗೆ ಈ ಹೆಸರನ್ನು ಇಡಲಾಗಿದೆ.
    • ಪ್ರಶಸ್ತಿ ಮೊತ್ತ:- 1 ಕೋಟಿ ರೂಪಾಯಿ (ಇತ್ತೀಚಿಗೆ, ಈ ಪ್ರಶಸ್ತಿಯ ಮೊತ್ತವನ್ನು 25 ಲಕ್ಷ ರೂಪಾಯಿಗಳಿಂದ 1 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ).
    • ಉದ್ದೇಶ:- ಶಾಂತಿ, ಹೊಸ ಅಂತರರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಲು ಮಹತ್ವದ ಕೊಡುಗೆ ನೀಡಿದ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
    • ಸಾಮಾನ್ಯವಾಗಿ, ನವೆಂಬರ್ 19 ರಂದು ಇಂದಿರಾ ಗಾಂಧಿಯವರ ಜನ್ಮದಿನದ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
    • ವಿಭಾಗಗಳು:- ಈ ಪ್ರಶಸ್ತಿಯನ್ನು 3 ವಿಭಾಗಗಳಲ್ಲಿ ನೀಡಲಾಗುತ್ತದೆ:
      • ಶಾಂತಿ:- ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವ ಮತ್ತು ಕಾಪಾಡುವ ಪ್ರಯತ್ನಗಳನ್ನು ಇದು ಗುರುತಿಸುತ್ತದೆ.
      • ನಿಶ್ಯಸ್ತ್ರೀಕರಣ:- ಸಾಮೂಹಿಕ ವಿನಾಶದ ಅಸ್ತ್ರಗಳ ಕಡಿತ ಮತ್ತು ನಿರ್ಮೂಲನೆಗೆ ನೀಡಿದ ಕೊಡುಗೆಗಳನ್ನು ಇದು ಗುರುತಿಸುತ್ತದೆ.
      • ಅಭಿವೃದ್ಧಿ:- ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿನ ಕಾರ್ಯವನ್ನು ಇದು ಗೌರವಿಸುತ್ತದೆ.

    ಇಸ್ರೇಲ್ ವೆಸ್ಟ್ ಬ್ಯಾಂಕ್ ಹೊರಠಾಣೆಗೆ ‘ಹೊಸ ವಸಾಹತು’ ಎಂಬ ಅಧಿಕೃತ ಮಾನ್ಯತೆ ನೀಡಿದೆ

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿದೆ: 

    • ಇಸ್ರೇಲ್ ಸರ್ಕಾರವು ವೆಸ್ಟ್ ಬ್ಯಾಂಕ್‌ನಲ್ಲಿರುವ ಹೊರಠಾಣೆಯನ್ನು, ‘ಯಾಟ್ಜಿವ್’ (Yatziv) ಎಂಬ ಹೆಸರಿನ ಹೊಸ ವಸಾಹತು ಎಂದು ಸಂಪೂರ್ಣವಾಗಿ ಕಾನೂನುಬದ್ಧಗೊಳಿಸಿದೆ. 
    • ‘ಯಾಟ್ಜಿವ್’ ಎಂದು ಕರೆಯಲ್ಪಡುವ ಈ ಹೊಸದಾಗಿ ಸಕ್ರಮಗೊಂಡ ಯಹೂದಿ ವಸಾಹತು, ವೆಸ್ಟ್ ಬ್ಯಾಂಕ್‌ನಲ್ಲಿರುವ ‘ಬೀಟ್ ಸಾಹೂರ್’ ಎಂಬ ಪ್ಯಾಲೇಸ್ಟಿನಿಯನ್ ಪಟ್ಟಣದ ಪಕ್ಕದಲ್ಲಿದೆ.

    ‘ವೆಸ್ಟ್ ಬ್ಯಾಂಕ್’ನ ಬಗ್ಗೆ:

    • ವೆಸ್ಟ್ ಬ್ಯಾಂಕ್ ಪ್ರದೇಶವು ಜೋರ್ಡಾನ್ ನದಿಯ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿದೆ. 
    • ಈ ಪ್ರದೇಶವು ಪಶ್ಚಿಮಕ್ಕೆ ಇಸ್ರೇಲ್, ಪೂರ್ವಕ್ಕೆ ಜೋರ್ಡಾನ್ ಮತ್ತು ನೈಋತ್ಯಕ್ಕೆ ಜೆರುಸಲೆಮ್‌ನಿಂದ ಸುತ್ತುವರಿದಿದೆ.
    • ಇಲ್ಲಿನ ಪ್ರಮುಖ ನಗರಗಳಲ್ಲಿ ರಾಮಲ್ಲಾ (ಪ್ಯಾಲೇಸ್ಟಿನಿಯನ್ ಪ್ರಾಧಿಕಾರದ ಆಡಳಿತ ರಾಜಧಾನಿ), ಹೆಬ್ರಾನ್, ನಬ್ಲಸ್, ಜೆನಿನ್ ಮತ್ತು ಬೆತ್ಲೆಹೆಮ್ ನಗರಗಳು ಸೇರಿವೆ.

    ‘ವೆಸ್ಟ್ ಬ್ಯಾಂಕ್’ನ ಇತಿಹಾಸ:

    • 1948:- ಅರಬ್-ಇಸ್ರೇಲ್ ಯುದ್ಧದ ನಂತರ, ವೆಸ್ಟ್ ಬ್ಯಾಂಕ್ ಪ್ರದೇಶವನ್ನು ಆಕ್ರಮಿಸಿಕೊಳ್ಳಲಾಯಿತು. ತದನಂತರ 1949 ರಿಂದ 1967 ರವರೆಗೆ ಜೋರ್ಡಾನ್ ಇದನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು.
    • ಆರು ದಿನಗಳ ಯುದ್ಧ, 1967:- ಈ ಸಮಯದಲ್ಲಿ, ಇಸ್ರೇಲ್ ಜೋರ್ಡಾನ್‌ನಿಂದ ವೆಸ್ಟ್ ಬ್ಯಾಂಕ್ ಅನ್ನು ವಶಪಡಿಸಿಕೊಂಡಿತು. ಅಂದಿನಿಂದ ಈ ಪ್ರದೇಶವು ವಿವಿಧ ಹಂತಗಳಲ್ಲಿ ಇಸ್ರೇಲಿ ನಿಯಂತ್ರಣದಲ್ಲಿ ಉಳಿದಿದೆ.
    • ಓಸ್ಲೋ ಒಪ್ಪಂದಗಳು, 1993–1995:- ಈ ಒಪ್ಪಂದಗಳು ‘ಪ್ಯಾಲೇಸ್ಟಿನಿಯನ್ ಪ್ರಾಧಿಕಾರ’ವನ್ನು ರಚಿಸಿದವು ಮತ್ತು ಆಡಳಿತದ ದೃಷ್ಟಿಯಿಂದ ವೆಸ್ಟ್ ಬ್ಯಾಂಕ್ ಅನ್ನು ಈ ಕೆಳಗಿನ 3 ವಿಭಾಗಗಳಾಗಿ ವಿಂಗಡಿಸಿದವು:
      • ಪ್ರದೇಶ- ಎ:- ಇಲ್ಲಿ ಸಂಪೂರ್ಣ ಪ್ಯಾಲೇಸ್ಟಿನಿಯ ನಾಗರಿಕ ಮತ್ತು ಭದ್ರತಾ ನಿಯಂತ್ರಣವಿರುತ್ತದೆ.
      • ಪ್ರದೇಶ- ಬಿ:- ಇಲ್ಲಿ ಪ್ಯಾಲೇಸ್ಟಿನಿಯನ್ ನಾಗರಿಕ ನಿಯಂತ್ರಣವಿದ್ದು, ಜಂಟಿ ಇಸ್ರೇಲಿ-ಪ್ಯಾಲೇಸ್ಟಿನಿಯನ್ ಭದ್ರತಾ ನಿಯಂತ್ರಣವಿರುತ್ತದೆ.
      • ಪ್ರದೇಶ- ಸಿ:- ಇದು ಸಂಪೂರ್ಣ ಇಸ್ರೇಲಿ ನಿಯಂತ್ರಣದಲ್ಲಿರುವ ಪ್ರದೇಶವಾಗಿದೆ (ಇದು ವೆಸ್ಟ್ ಬ್ಯಾಂಕ್‌ನ ಸುಮಾರು 60% ರಷ್ಟು ಭಾಗವನ್ನು ಒಳಗೊಂಡಿದೆ).
      • 1967 ರಲ್ಲಿ ಇಸ್ರೇಲ್ ವಶಪಡಿಸಿಕೊಂಡ ವೆಸ್ಟ್ ಬ್ಯಾಂಕ್ ಪ್ರದೇಶವನ್ನು, ಪ್ಯಾಲೇಸ್ಟಿನಿಯನ್ನರು ತಮ್ಮ ಭವಿಷ್ಯದ ಸ್ವತಂತ್ರ ರಾಷ್ಟ್ರದ ಅವಿಭಾಜ್ಯ ಅಂಗವನ್ನಾಗಿ ಮಾಡಲು ಬಯಸುತ್ತಾರೆ.
  • ಬಾಗುರುಂಬಾ ನೃತ್ಯ | ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ (RNI) | ಪರಿಸರ ಸಂರಕ್ಷಣೆ ನಿಧಿ | ಚಾಗೋಸ್ ದ್ವೀಪಗಳು | ಮಣಿಪುರ, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳ ಸ್ಥಾಪನಾ ದಿನ | ಒಂದು ನಿಲ್ದಾಣ ಒಂದು ಉತ್ಪನ್ನ (OSOP) | ಐರೋಪ್ಯ ಒಕ್ಕೂಟದ ‘ಬಲವಂತ-ವಿರೋಧಿ ಸಾಧನ’ (Anti-coercion Instrument)

    ಬಾಗುರುಂಬಾ ನೃತ್ಯ

    ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಪ್ರಧಾನ ಮಂತ್ರಿಯವರು ಅಸ್ಸಾಂಗೆ ಭೇಟಿ ನೀಡಿ, ಬಾಗುರುಂಬಾ ಧೌ 2026 ಕಾರ್ಯಕ್ರಮದಲ್ಲಿ ಭಾಗವಹಿಸಿದರು.

    ಬಾಗುರುಂಬಾ ನೃತ್ಯದ ಬಗ್ಗೆ:

    • ಇದನ್ನು ಸಾಮಾನ್ಯವಾಗಿ “ಚಿಟ್ಟೆ ನೃತ್ಯ” ಎಂದು ಉಲ್ಲೇಖಿಸಲಾಗುತ್ತದೆ.
    • ಅಸ್ಸಾಂನ ಬೋಡೋ ಸಮುದಾಯದ ಒಂದು ಸಮೂಹ ಜಾನಪದ ನೃತ್ಯ:- ಅತ್ಯಂತ ಪ್ರಮುಖ ಮತ್ತು ಆಕರ್ಷಕ ಜಾನಪದ ನೃತ್ಯಗಳಲ್ಲಿ ಒಂದಾಗಿದೆ.
    • ಸಾಂಪ್ರದಾಯಿಕವಾಗಿ ಯುವತಿಯರು ಪ್ರದರ್ಶಿಸುವ ನೃತ್ಯ:- ಪ್ರಕೃತಿಯೊಂದಿಗಿನ ಸಾಮರಸ್ಯವನ್ನು ಸಂಕೇತಿಸುತ್ತದೆ ಹಾಗೂ ಫಲವತ್ತತೆ, ಶಾಂತಿ ಮತ್ತು ಸಂತೋಷದ ವಿಷಯಗಳನ್ನು ಆಚರಿಸುತ್ತದೆ.
    • ‘ಬ್ವಿಸಾಗು’ ಹಬ್ಬ ಬೋಡೋ ಸಮುದಾಯದ ಹೊಸ ವರ್ಷ:- ಈ ನೃತ್ಯವು ‘ಬ್ವಿಸಾಗು’ ಹಬ್ಬದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಈ ಹಬ್ಬವು ಬೋಡೋ ಹೊಸ ವರ್ಷ ಮತ್ತು ವಸಂತಕಾಲದ ಆಗಮನವನ್ನು ಸೂಚಿಸುತ್ತದೆ.

    ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ (RNI)

    ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಭಾರತವು ‘ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ'(RNI)ವನ್ನು ಪರಿಚಯಿಸಿದೆ.

    ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ (RNI):

    • ರಾಷ್ಟ್ರೀಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ಜಾಗತಿಕ ಮಾನದಂಡಗಳ ಚೌಕಟ್ಟು:- ಇದು ಕೇವಲ ಆರ್ಥಿಕ ಶಕ್ತಿಯ ಮೇಲಿದ್ದ ಗಮನವನ್ನು ನೈತಿಕ ಆಡಳಿತ, ಸುಸ್ಥಿರತೆ ಮತ್ತು ಜಾಗತಿಕ ಹೊಣೆಗಾರಿಕೆಯತ್ತ ಬದಲಾಯಿಸುತ್ತದೆ.
    • ಈ ಸೂಚ್ಯಂಕವು ದೇಶಗಳನ್ನು 4 ಪ್ರಮುಖ ಆಯಾಮಗಳ ಅಡಿಯಲ್ಲಿ ಮೌಲ್ಯಮಾಪನ ಮಾಡುತ್ತದೆ. ಅವುಗಳೆಂದರೆ:- 
    • ನೈತಿಕ ಆಡಳಿತ, 
    • ಸಾಮಾಜಿಕ ಯೋಗಕ್ಷೇಮ, 
    • ಪರಿಸರ ಉಸ್ತುವಾರಿ, 
    • ಜಾಗತಿಕ ಹೊಣೆಗಾರಿಕೆ.
    • ಅಭಿವೃದ್ಧಿಪಡಿಸಿದವರು:- 
    • ವರ್ಲ್ಡ್ ಇಂಟಲೆಕ್ಚುವಲ್ ಫೌಂಡೇಶನ್’ (WIF)
    • ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU) 
    • ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಮುಂಬೈ (IIM-M)
    • ಸಿಂಗಾಪುರ, ಸ್ವಿಟ್ಜರ್ಲೆಂಡ್ ಮತ್ತು ಡೆನ್ಮಾರ್ಕ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತವು ಜಾಗತಿಕವಾಗಿ 16ನೇ ಸ್ಥಾನದಲ್ಲಿದೆ.

    ಪರಿಸರ ಸಂರಕ್ಷಣೆ ನಿಧಿ

    ಭೂಗೋಳ ಮತ್ತು ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಸರ್ಕಾರವು ‘ಪರಿಸರ (ಸಂರಕ್ಷಣೆ) ನಿಧಿ’ಯ ಆಡಳಿತ ಮತ್ತು ಬಳಕೆಯನ್ನು ನಿಯಂತ್ರಿಸುವ ಸಮಗ್ರ ನಿಯಮಗಳನ್ನು ಅಧಿಕೃತವಾಗಿ ಅಧಿಸೂಚಿಸಿದೆ.

    ಪರಿಸರ (ಸಂರಕ್ಷಣೆ) ನಿಧಿಯ ಬಗ್ಗೆ:

    • ಪರಿಸರ (ಸಂರಕ್ಷಣೆ) ಕಾಯ್ದೆ, 1986:- ಪರಿಸರ (ಸಂರಕ್ಷಣೆ) ನಿಧಿಯು ಈ ಕಾಯ್ದೆಯ ಅಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಮತ್ತು ಮೀಸಲಾದ ನಿಧಿಯಾಗಿದೆ.
    • ಉದ್ದೇಶ:- ಪರಿಸರ ಉಲ್ಲಂಘನೆಗಳಿಂದ ಸಂಗ್ರಹವಾದ ಹಣಕಾಸಿನ ದಂಡವನ್ನು ಮಾಲಿನ್ಯ ನಿಯಂತ್ರಣ, ಮರುಸ್ಥಾಪನೆ, ಮೇಲ್ವಿಚಾರಣೆ, ಸಂಶೋಧನೆ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಬಳಸುವುದು.
    • ಕಾರ್ಯ ನಿರ್ವಹಣೆ:- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಅಥವಾ ಕೇಂದ್ರ ಸರ್ಕಾರವು ಅಧಿಸೂಚಿಸಿದ ಯಾವುದೇ ಸಂಸ್ಥೆ.
    • ಹಣ ಹಂಚಿಕೆ:- ದಂಡದ ಮೂಲಕ ಸಂಗ್ರಹವಾದ ಹಣದಲ್ಲಿ 
    • ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ‘ಸಂಚಿತ ನಿಧಿ’ಗೆ 75% ರಷ್ಟು ಹಣವನ್ನು ವರ್ಗಾಯಿಸಲಾಗುತ್ತದೆ ಮತ್ತು 
    • 25% ರಷ್ಟು ಹಣವನ್ನು ಕೇಂದ್ರ ಸರ್ಕಾರ ಉಳಿಸಿಕೊಳ್ಳುತ್ತದೆ.
    • ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾಪರಿಶೋಧಕ(CAG)ರು, ಈ ನಿಧಿಯ ಲೆಕ್ಕಪರಿಶೋಧನೆಯನ್ನು ನಡೆಸುತ್ತಾರೆ.

    ಚಾಗೋಸ್ ದ್ವೀಪಗಳು

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿದೆ: 

      • ಯುನೈಟೆಡ್ ಕಿಂಗ್‌ಡಮ್ (ಯುಕೆ) ಸರ್ಕಾರವು ಚಾಗೋಸ್ ದ್ವೀಪಗಳನ್ನು ಮಾರಿಷಸ್‌ಗೆ ಹಸ್ತಾಂತರಿಸುವ ಮತ್ತು ಅದೇ ಸಮಯದಲ್ಲಿ ಕಾರ್ಯತಂತ್ರದ ಸೇನಾ ನೆಲೆಗಾಗಿ ಗುತ್ತಿಗೆಯನ್ನು ಉಳಿಸಿಕೊಳ್ಳುವ ತನ್ನ ಒಪ್ಪಂದವನ್ನು ಸಮರ್ಥಿಸಿಕೊಂಡಿದೆ. ಈ ಒಪ್ಪಂದದ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಟೀಕೆಗಳು ವ್ಯಕ್ತವಾಗಿದ್ದವು.
    • 2025 ರಲ್ಲಿ, ಯುನೈಟೆಡ್ ಕಿಂಗ್‌ಡಮ್ ವಿವಾದಾತ್ಮಕ ಮತ್ತು ಕಾರ್ಯತಂತ್ರದ ಚಾಗೋಸ್ ದ್ವೀಪಗಳ ಸಾರ್ವಭೌಮತ್ವವನ್ನು ಮಾರಿಷಸ್‌ಗೆ ಹಸ್ತಾಂತರಿಸುವ ಒಪ್ಪಂದಕ್ಕೆ ಸಹಿ ಹಾಕಿತು.

    ಚಾಗೋಸ್ ದ್ವೀಪಸಮೂಹಗಳ ಬಗ್ಗೆ:

    • ಹಿಂದೂ ಮಹಾಸಾಗರದಲ್ಲಿವೆ:- ಮಾರಿಷಸ್‌ನ ಮುಖ್ಯ ದ್ವೀಪದ ಈಶಾನ್ಯಕ್ಕೆ ಸುಮಾರು 1,600 ಕಿ.ಮೀ ದೂರದಲ್ಲಿರುವ 60 ಕ್ಕೂ ಹೆಚ್ಚು ಕಡಿಮೆ ಎತ್ತರದ ದ್ವೀಪಗಳನ್ನು ಒಳಗೊಂಡಿದೆ.
    • 1965 ರಲ್ಲಿ ಮಾರಿಷಸ್‌ನಿಂದ ಪ್ರತ್ಯೇಕವಾಯಿತು:- ಮಾರಿಷಸ್ ಇನ್ನೂ ಬ್ರಿಟಿಷ್ ವಸಾಹತುವಾಗಿದ್ದಾಗ, ಇದನ್ನು ಮಾರಿಷಸ್‌ನಿಂದ ಬೇರ್ಪಡಿಸಲಾಯಿತು.
    • ಬ್ರಿಟನ್ ಈ ದ್ವೀಪಗಳನ್ನು 3 ದಶಲಕ್ಷ ಪೌಂಡ್‌ಗಳಿಗೆ ಖರೀದಿಸಿತು:- ಆದರೆ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆಯುವ ಒಪ್ಪಂದದ ಭಾಗವಾಗಿ, ಕಾನೂನುಬಾಹಿರವಾಗಿ ಇವುಗಳನ್ನು ಬಿಟ್ಟುಕೊಡುವಂತೆ ತಮ್ಮನ್ನು ಒತ್ತಾಯಿಸಲಾಯಿತು ಎಂದು ಮಾರಿಷಸ್ ವಾದಿಸುತ್ತಿದೆ.
    • 1960 ರ ದಶಕದಲ್ಲಿ ಬ್ರಿಟನ್ ‘ಡಿಯಾಗೋ ಗಾರ್ಸಿಯಾ’ ದ್ವೀಪದಲ್ಲಿ ಸೇನಾ ನೆಲೆಯನ್ನು ನಿರ್ಮಿಸಲು ಅಮೆರಿಕಾಕ್ಕೆ ಆಹ್ವಾನ:- ‘ಡಿಯಾಗೋ ಗಾರ್ಸಿಯಾ’, ಚಾಗೋಸ್ ದ್ವೀಪಸಮೂಹಗಳಲ್ಲಿ ಅತಿದೊಡ್ಡದಾದ ದ್ವೀಪವಾಗಿದೆ ಮತ್ತು ಅಲ್ಲಿನ ಸಾವಿರಾರು ಜನರನ್ನು ಅವರ ಮನೆಗಳಿಂದ ತೆರವುಗೊಳಿಸಿತು.
    • 1980 ರ ದಶಕದಿಂದಲೂ, ಮಾರಿಷಸ್ ಚಾಗೋಸ್ ದ್ವೀಪಗಳ ಮೇಲೆ ಸಾರ್ವಭೌಮತ್ವವನ್ನು ಪ್ರತಿಪಾದಿಸುತ್ತಿದೆ.
    • ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪು:- 2019 ರಲ್ಲಿ, ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ನ್ಯಾಯಾಲಯವು (ICJ) 1968 ರಲ್ಲಿ ಸ್ವಾತಂತ್ರ್ಯದ ಸಮಯದಲ್ಲಿ ಮಾರಿಷಸ್‌ನ ‘ವಸಾಹತುಶಾಹಿ ವಿಮೋಚನೆ’ ಅಪೂರ್ಣವಾಗಿದೆ ಎಂದು ತೀರ್ಪು ನೀಡಿತು ಮತ್ತು ಯುನೈಟೆಡ್ ಕಿಂಗ್‌ಡಮ್ ಆದಷ್ಟು ಬೇಗ ದ್ವೀಪಗಳ ಆಡಳಿತವನ್ನು ಕೊನೆಗೊಳಿಸಬೇಕು ಎಂದು ಸಲಹೆ ನೀಡಿತು.

    ಮಣಿಪುರ, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳ ಸ್ಥಾಪನಾ ದಿನ

    ರಾಜ್ಯಶಾಸ್ತ್ರ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಭಾರತದ ರಾಷ್ಟ್ರಪತಿಗಳು ಮೇಘಾಲಯ, ತ್ರಿಪುರಾ ಮತ್ತು ಮಣಿಪುರ ಜನತೆಗೆ ಅವರ ರಾಜ್ಯಗಳ ಸ್ಥಾಪನಾ ದಿನದಂದು ಶುಭಾಶಯ ಕೋರಿದ್ದಾರೆ.
    • ‘ಈಶಾನ್ಯ ಪ್ರದೇಶಗಳ (ಪುನರ್ರಚನೆ) ಕಾಯ್ದೆ, 1971’ ಜಾರಿಗೆ ಬಂದ ನಂತರ, ಜನವರಿ 21, 1972 ರಂದು ಮಣಿಪುರ, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳಿಗೆ ಸಂಪೂರ್ಣವಾಗಿ ರಾಜ್ಯಗಳ ಸ್ಥಾನಮಾನವನ್ನು ನೀಡಲಾಯಿತು.

    ಐತಿಹಾಸಿಕ ಹಿನ್ನೆಲೆ:

    • ಮಣಿಪುರ:- ಒಂದು ರಾಜ ಸಂಸ್ಥಾನವಾಗಿದ್ದ ಮಣಿಪುರವು, 1949 ರಲ್ಲಿ ಭಾರತದೊಂದಿಗೆ ವಿಲೀನಗೊಂಡಿತು. ರಾಜ್ಯ ಸ್ಥಾನಮಾನ ಪಡೆಯುವ ಮೊದಲು, ಇದು 1956 ರಿಂದ ಕೇಂದ್ರಾಡಳಿತ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತಿತ್ತು.
    • ತ್ರಿಪುರಾ:- ಇದೂ ಕೂಡ ಒಂದು ರಾಜ ಸಂಸ್ಥಾನವಾಗಿತ್ತು ಮತ್ತು 1949 ರಲ್ಲಿ ಭಾರತೀಯ ಒಕ್ಕೂಟಕ್ಕೆ ಸೇರಿತು. ಮಣಿಪುರದಂತೆಯೇ, 1972 ರಲ್ಲಿ ಪೂರ್ಣ ರಾಜ್ಯವಾಗುವ ಮೊದಲು ಇದು 1956 ರಿಂದ ಕೇಂದ್ರಾಡಳಿತ ಪ್ರದೇಶವಾಗಿತ್ತು.
    • ಮೇಘಾಲಯ:- ಮೂಲತಃ ಅಸ್ಸಾಂನ ಭಾಗವಾಗಿದ್ದ ಇದನ್ನು, 1970 ರಲ್ಲಿ ಅಸ್ಸಾಂ ರಾಜ್ಯದೊಳಗೆ ಮೊದಲು ಸ್ವಾಯತ್ತ ರಾಜ್ಯವನ್ನಾಗಿ ಮಾಡಲಾಯಿತು. ನಂತರ ಅದರ ವಿಶಿಷ್ಟ ಬುಡಕಟ್ಟು ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಗುರುತಿಸಲು, 1972 ರಲ್ಲಿ ಇದನ್ನು ಪ್ರತ್ಯೇಕ ರಾಜ್ಯವನ್ನಾಗಿ ರೂಪಿಸಲಾಯಿತು.

    ಒಂದು ನಿಲ್ದಾಣ ಒಂದು ಉತ್ಪನ್ನ (OSOP)

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ: 

    • ಭಾರತೀಯ ರೈಲ್ವೆಯ ‘ಒಂದು ನಿಲ್ದಾಣ ಒಂದು ಉತ್ಪನ್ನ’ (OSOP) ಯೋಜನೆಯನ್ನು 2,000 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಿಗೆ ವಿಸ್ತರಿಸಿದೆ. ಇದರಿಂದ 1.32 ಲಕ್ಷ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸಿದೆ.

    ಒಂದು ನಿಲ್ದಾಣ ಒಂದು ಉತ್ಪನ್ನ’ (OSOP) ಯೋಜನೆಯ ಬಗ್ಗೆ:

    • ಪ್ರಾರಂಭ:- 2022
    • ಉದ್ದೇಶ:- ಭಾರತದ ವಿಶಾಲವಾದ ರೈಲ್ವೆ ಜಾಲವನ್ನು ಬಳಸಿಕೊಂಡು ಸ್ಥಳೀಯ, ಸ್ವದೇಶಿ ಮತ್ತು ವಿಶೇಷ ಉತ್ಪನ್ನಗಳನ್ನು ಉತ್ತೇಜಿಸುವುದು.
    • ವಿಶಿಷ್ಟತೆ:- ರೈಲ್ವೆ ಸಚಿವಾಲಯವು OSOP ಮಳಿಗೆಗಳನ್ನು ನೋಡಲು ಕಲಾತ್ಮಕವಾಗಿ ಏಕರೂಪವಾಗಿ ಕಾಣುವಂತೆ, ಆದರೆ ಸ್ಥಳೀಯವಾಗಿ ವಿಶಿಷ್ಟವಾಗಿರುವಂತೆ ವಿನ್ಯಾಸಗೊಳಿಸಿದೆ.
    • ರಾಷ್ಟ್ರೀಯ ವಿನ್ಯಾಸ ಸಂಸ್ಥೆ (NID) ವಿನ್ಯಾಸಗೊಳಿಸಿದೆ:- ಪ್ರಯಾಣಿಕರಿಗೆ ಉಪಯುಕ್ತ ಮತ್ತು ಆಕರ್ಷಕವಾಗಿರಲು, ಈ ಮಳಿಗೆಗಳನ್ನು ಸಾಮಾನ್ಯವಾಗಿ NID ವಿನ್ಯಾಸಗೊಳಿಸಿದೆ.
    • ಪಿಎಂ ಗತಿ ಶಕ್ತಿ ರಾಷ್ಟ್ರೀಯ ಸಮಗ್ರ ಅಭಿವೃದ್ಧಿ ಯೋಜನೆಯ ಪ್ರಮುಖ ಭಾಗವಾಗಿದೆ. ಇದು ತಡೆರಹಿತ ಬಹು-ಮಾದರಿ ಸಂಪರ್ಕವನ್ನು ಒದಗಿಸುವ ಮತ್ತು ಸ್ಥಳೀಯ ಸರಕುಗಳ ಸಾಗಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

    ಐರೋಪ್ಯ ಒಕ್ಕೂಟದ ‘ಬಲವಂತ-ವಿರೋಧಿ ಸಾಧನ’ (Anti-coercion Instrument)

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿದೆ:

    • ಗ್ರೀನ್‌ಲ್ಯಾಂಡ್‌ಗೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷರು ಸುಂಕದ ಬೆದರಿಕೆಗಳನ್ನು ಹಾಕಿದ ನಂತರ, ಫ್ರಾನ್ಸ್ ಅಧ್ಯಕ್ಷರು ಐರೋಪ್ಯ ಒಕ್ಕೂಟದ (EU) ‘ಬಲವಂತ-ವಿರೋಧಿ ಸಾಧನ’ವನ್ನು ಸಕ್ರಿಯಗೊಳಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

    ಐರೋಪ್ಯ ಒಕ್ಕೂಟದ ‘ಬಲವಂತ-ವಿರೋಧಿ ಸಾಧನ’ದ ಬಗ್ಗೆ:

    • ವ್ಯಾಪಾರ ಸಾಧನವಾಗಿದೆ:- ಐರೋಪ್ಯ ಒಕ್ಕೂಟವು ಇದನ್ನು 2023 ರಲ್ಲಿ ಅಂಗೀಕರಿಸಿತ್ತು, ಆದರೆ ಇದುವರೆಗೂ ಇದನ್ನು ಬಳಸಿಲ್ಲ.
    • ಉದ್ದೇಶ:- ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರವೊಂದರ ಮೇಲೆ ಒತ್ತಡ ಹೇರಲು ಯಾವುದೇ ದೇಶವು ‘ವ್ಯಾಪಾರ ಅಸ್ತ್ರಗಳನ್ನು’ ಬಳಸಿದರೆ, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದು ಇದರ ಉದ್ದೇಶವಾಗಿದೆ.

    ಕ್ರಮಗಳು:

    • ಆಮದು ಮತ್ತು ರಫ್ತು ನಿರ್ಬಂಧ:- ಈ ವ್ಯವಸ್ಥೆಯು, ತನ್ನ ‘ಏಕ ಮಾರುಕಟ್ಟೆಯಲ್ಲಿ’ ಸರಕು ಮತ್ತು ಸೇವೆಗಳ ಮೇಲೆ ಆಮದು ಮತ್ತು ರಫ್ತು ನಿರ್ಬಂಧಗಳಂತಹ ಕ್ರಮಗಳನ್ನು ತೆಗೆದುಕೊಳ್ಳಲು ಐರೋಪ್ಯ ಒಕ್ಕೂಟಕ್ಕೆ ಅವಕಾಶ ನೀಡುತ್ತದೆ.
    • ಅಮೆರಿಕದ ಕಂಪನಿಗಳ ಪ್ರವೇಶದ ಮಿತಿ:- ಇದು ಯುರೋಪಿನಲ್ಲಿ ಸಾರ್ವಜನಿಕ ಖರೀದಿ ಗುತ್ತಿಗೆಗಳನ್ನು ಪಡೆಯದಂತೆ ಅಮೆರಿಕದ ಕಂಪನಿಗಳ ಪ್ರವೇಶವನ್ನು ಮಿತಿಗೊಳಿಸುತ್ತದೆ.
  • ಗ್ರೀನ್‌ಲ್ಯಾಂಡ್ ಮೇಲಿನ ಸುಂಕದ ಬೆದರಿಕೆ: ಐರೋಪ್ಯ ಒಕ್ಕೂಟದ (EU) ವ್ಯಾಪಾರ ಒಪ್ಪಂದಕ್ಕೆ ಅಪಾಯ | ಹಸಿರು ಅಲ್ಯೂಮಿನಿಯಂ | ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಸಂಪರ್ಕ ಪಥ (IMEC) | ಭಾರತದಲ್ಲಿ ಮಕ್ಕಳ ಕಳ್ಳಸಾಗಣೆ

    ಗ್ರೀನ್‌ಲ್ಯಾಂಡ್ ಮೇಲಿನ ಸುಂಕದ ಬೆದರಿಕೆ: ಐರೋಪ್ಯ ಒಕ್ಕೂಟದ (EU) ವ್ಯಾಪಾರ ಒಪ್ಪಂದಕ್ಕೆ ಅಪಾಯ

    ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಗ್ರೀನ್‌ಲ್ಯಾಂಡ್‌ನ ಸಾರ್ವಭೌಮತ್ವವನ್ನು ಬೆಂಬಲಿಸುವ ದೇಶಗಳ ಮೇಲೆ ಆಮದು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಬೆನ್ನಲ್ಲೇ, ಐರೋಪ್ಯ ಒಕ್ಕೂಟದ ಸಂಸದರು EU-US ವ್ಯಾಪಾರ ಒಪ್ಪಂದದ ಅನುಮೋದನೆಯನ್ನು ವಿಳಂಬಗೊಳಿಸಲು ಅಥವಾ ತಡೆಯಲು ಮುಂದಾಗಿದ್ದಾರೆ.

    ‘ಗ್ರೀನ್‌ಲ್ಯಾಂಡ್’ನ ಬಗ್ಗೆ:

    • ಉತ್ತರಾರ್ಧ ಗೋಳದಲ್ಲಿದೆ:- ಇದರ ಸುತ್ತಲೂ,
    1. ಉತ್ತರದಲ್ಲಿ ಆರ್ಕ್ಟಿಕ್ ಮಹಾಸಾಗರ, 
    2. ದಕ್ಷಿಣದಲ್ಲಿ ಉತ್ತರ ಅಟ್ಲಾಂಟಿಕ್ ಮಹಾಸಾಗರ
    3. ಪಶ್ಚಿಮದಲ್ಲಿ ಬ್ಯಾಫಿನ್ ಕೊಲ್ಲಿ ಮತ್ತು 
    4. ಪೂರ್ವದಲ್ಲಿ ಗ್ರೀನ್‌ಲ್ಯಾಂಡ್ ಸಮುದ್ರಗಳಿವೆ.
    • ಇದು ಭೌಗೋಳಿಕವಾಗಿ ಉತ್ತರ ಅಮೆರಿಕಕ್ಕೆ ಹತ್ತಿರವಾಗಿದ್ದರೂ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಡೆನ್ಮಾರ್ಕ್‌ ದೇಶದೊಂದಿಗೆ ನಿಕಟ ಸಂಬಂಧ ಹೊಂದಿದೆ.
    • ಸಂಪನ್ಮೂಲಗಳು:- ಇದು ಹೇರಳವಾಗಿ ಖನಿಜ ಸಂಪತ್ತನ್ನು ಹೊಂದಿರುವ ಪ್ರದೇಶವಾಗಿದ್ದು, ಇಲ್ಲಿ ಚಿನ್ನ, ನಿಕಲ್ ಮತ್ತು ಕೋಬಾಲ್ಟ್‌ಗಳ ದೊಡ್ಡ ನಿಕ್ಷೇಪಗಳಿವೆ.
    • ವಿರಳ ಭೂ ಧಾತುಗಳು:- ಡಿಸ್ಪ್ರೋಸಿಯಮ್, ಪ್ರಸಿಯೋಡೈಮಿಯಮ್, ನಿಯೋಡೈಮಿಯಮ್ ಮತ್ತು ಟೆರ್ಬಿಯಮ್‌ಗಳಂತಹ ಅತಿದೊಡ್ಡ ನಿಕ್ಷೇಪಗಳನ್ನು ಸಹ ಇದು ಹೊಂದಿದೆ.
    • 1979 ರಲ್ಲಿ ಸ್ವಾಯತ್ತ ಆಡಳಿತ:- ಗ್ರೀನ್‌ಲ್ಯಾಂಡ್ 1979 ರಲ್ಲಿ ಸ್ವಾಯತ್ತ ಆಡಳಿತವನ್ನು ಪಡೆಯಿತು ಮತ್ತು 2009 ರಲ್ಲಿ ಸ್ವ-ಆಡಳಿತದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು. ಇದು ಆರೋಗ್ಯ ಮತ್ತು ಶಿಕ್ಷಣದಂತಹ ದೇಶೀಯ ವ್ಯವಹಾರಗಳ ಮೇಲೆ ಗ್ರೀನ್‌ಲ್ಯಾಂಡ್‌ಗೆ ಅಧಿಕಾರವನ್ನು ನೀಡಿತು.
    • ಆದರೆ, ಡೆನ್ಮಾರ್ಕ್ – ರಕ್ಷಣೆ, ವಿದೇಶಾಂಗ ನೀತಿ ಮತ್ತು ಹಣಕಾಸು ನೀತಿಯ ಮೇಲೆ ತನ್ನ ನಿಯಂತ್ರಣವನ್ನು ಉಳಿಸಿಕೊಂಡಿದೆ.

    ಗ್ರೀನ್‌ಲ್ಯಾಂಡ್ ಮೇಲೆ ಪ್ರಮುಖ ದೇಶಗಳ ದೃಷ್ಟಿ:

    • ಡೆನ್ಮಾರ್ಕ್‌ನ ಸದಸ್ಯತ್ವದ ಮೂಲಕ NATO ದ ಭಾಗವಾಗಿದೆ:- ಗ್ರೀನ್‌ಲ್ಯಾಂಡ್, ‘ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ’ಯ (NATO) ಭಾಗವಾಗಿದೆ. 
    1. ಅಮೆರಿಕಾಕ್ಕೆ ಕಾರ್ಯತಂತ್ರದ ಮಹತ್ವ:- ಯುರೋಪ್‌ನಿಂದ ಉತ್ತರ ಅಮೆರಿಕಕ್ಕೆ ಸಾಗುವ ಅತ್ಯಂತ ಚಿಕ್ಕ ಮಾರ್ಗವು ಈ ಆರ್ಕ್ಟಿಕ್ ದ್ವೀಪದ ಮೂಲಕ ಹಾದುಹೋಗುವುದರಿಂದ, ಅಮೆರಿಕದ ಸೇನೆ ಮತ್ತು ಅದರ ‘ಬ್ಯಾಲಿಸ್ಟಿಕ್ ಕ್ಷಿಪಣಿ ಮುನ್ಸೂಚನೆ ವ್ಯವಸ್ಥೆ’ಗೆ ಇದು ಕಾರ್ಯತಂತ್ರದ ಮಹತ್ವವನ್ನು ಹೊಂದಿದೆ.
    2. ಅಪರೂಪದ ಖನಿಜ ಸಂಪನ್ಮೂಲಗಳ ಮೇಲೆ ಚೀನಾದ ಆಸಕ್ತಿ:- ಗ್ರೀನ್‌ಲ್ಯಾಂಡ್‌ನ ಅಪರೂಪದ ಖನಿಜ ಸಂಪನ್ಮೂಲಗಳು ಮತ್ತು ಅಲ್ಲಿನ ಮೂಲಸೌಕರ್ಯ ಯೋಜನೆಗಳಲ್ಲಿ ಚೀನಾ ತೀವ್ರ ಆಸಕ್ತಿಯನ್ನು ತೋರಿದೆ.

    ಹಸಿರು ಅಲ್ಯೂಮಿನಿಯಂ

    ಸಾಮಾನ್ಯ ಅಧ್ಯಯ-ನ3/ಆರ್ಥಿಕತೆ/ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಹೆಚ್ಚಿನ ವಿದ್ಯುತ್ ವೆಚ್ಚಗಳು ಮತ್ತು ಉಷ್ಣ ವಿದ್ಯುತ್ ಮೇಲಿನ ಅವಲಂಬನೆಯಿಂದಾಗಿ, ಐರೋಪ್ಯ ಒಕ್ಕೂಟದ ‘ಸಿಬಿಎಎಂ’ (CBAM) ಮಾನದಂಡದ ಅಡಿಯಲ್ಲಿ ಹಸಿರು ಅಲ್ಯೂಮಿನಿಯಂ ಉತ್ಪಾದನೆಗೆ, ಭಾರತದ ಅಲ್ಯೂಮಿನಿಯಂ ವಲಯವು ಇನ್ನೂ ಸಿದ್ಧವಾಗಿಲ್ಲ ಎಂದು ‘ನಾಲ್ಕೋ’ (NALCO) ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

    ಹಸಿರು ಅಲ್ಯೂಮಿನಿಯಂ ನ ಬಗ್ಗೆ:

    • ವ್ಯಾಖ್ಯಾನ:- ಇದು ಹಸಿರುಮನೆ ಅನಿಲ ಹೊರಸೂಸುವಿಕೆ ಮತ್ತು ಪರಿಸರದ ಮೇಲಿನ ದುಷ್ಪರಿಣಾಮವನ್ನು ಕಡಿಮೆ ಮಾಡುವ ವಿಧಾನಗಳನ್ನು ಬಳಸಿಕೊಂಡು ಉತ್ಪಾದಿಸಲಾದ ಅಲ್ಯೂಮಿನಿಯಂ ಅನ್ನು ಸೂಚಿಸುತ್ತದೆ.
    • ಸಾಂಪ್ರದಾಯಿಕ ಅಲ್ಯೂಮಿನಿಯಂ ಉತ್ಪಾದನೆಯು ಅಧಿಕ ಶಕ್ತಿಯನ್ನು ಬಳಸುವ ಪ್ರಕ್ರಿಯೆಯಾಗಿದ್ದು, ಪಳೆಯುಳಿಕೆ ಇಂಧನಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.
    • ಹಸಿರು ಅಲ್ಯೂಮಿನಿಯಂ ಅನ್ನು ನವೀಕರಿಸಬಹುದಾದ ಇಂಧನ ಮೂಲಗಳು, ಮರುಬಳಕೆಯ ವಸ್ತುಗಳು ಮತ್ತು ನವೀನ ತಂತ್ರಜ್ಞಾನಗಳನ್ನು ಬಳಸಿಕೊಂಡು ಉತ್ಪಾದಿಸಲಾಗುತ್ತದೆ. 
    • ಪರಿಸರದ ಹೆಜ್ಜೆಗುರುತು:- ಇದು ಪರಿಸರದ ಮೇಲಿನ ಹಾನಿಕಾರಕ ದುಷ್ಪರಿಣಾಮವನ್ನು ತಗ್ಗಿಸುತ್ತದೆ.

    ಹಸಿರು ಅಲ್ಯೂಮಿನಿಯಂನ ಮಹತ್ವ:

    • ಇಂಗಾಲದ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ:- ಮರುಬಳಕೆಯ ಮೂಲಕ ಶಕ್ತಿಯನ್ನು ಉಳಿಸುತ್ತದೆ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ಮೂಲಕ ‘ವೃತ್ತಾಕಾರದ ಆರ್ಥಿಕತೆಯನ್ನು’ ಬೆಂಬಲಿಸುತ್ತದೆ.
    • ಕಾರ್ಪೊರೇಟ್ ಸುಸ್ಥಿರತೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ:- ಅಲ್ಯೂಮಿನಿಯಂನ ಕಾರ್ಯಕ್ಷಮತೆಗೆ ಧಕ್ಕೆಯಾಗದಂತೆ, ಅದರ ಪ್ರಮುಖ ಗುಣಗಳಾದ ಹಗುರವಾದ ತೂಕ, ಬಾಳಿಕೆ, ತುಕ್ಕು-ನಿರೋಧಕತೆ ಮತ್ತು ಬಹುಮುಖತೆಯನ್ನು ಉಳಿಸಿಕೊಳ್ಳುವ ಮೂಲಕ, ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ.

    ನಿಮಗಿದು ತಿಳಿದಿದೆಯೇ?

    • 2ನೇ ಅತಿದೊಡ್ಡ ಅಲ್ಯೂಮಿನಿಯಂ ಉತ್ಪಾದಕ ರಾಷ್ಟ್ರ:- ಚೀನಾದ ನಂತರ ಭಾರತವು ವಿಶ್ವದ 2ನೇ ಅತಿದೊಡ್ಡ ಅಲ್ಯೂಮಿನಿಯಂ ಉತ್ಪಾದಕ ರಾಷ್ಟ್ರವಾಗಿದೆ ಮತ್ತು ಸಂಸ್ಕರಿಸಿದ ತಾಮ್ರದ ಉತ್ಪಾದನೆಯಲ್ಲಿ ಅಗ್ರ-10 ದೇಶಗಳಲ್ಲಿ ಒಂದಾಗಿದೆ.
    • ಅಲ್ಯೂಮಿನಿಯಂನ ಉಪಯೋಗಗಳು:- ವಿದ್ಯುತ್, ಸಾರಿಗೆ, ನಿರ್ಮಾಣ, ಪ್ಯಾಕೇಜಿಂಗ್, ಯಂತ್ರೋಪಕರಣಗಳು, ಅಂತರಿಕ್ಷಯಾನ (ಏರೋಸ್ಪೇಸ್) ಮತ್ತು ಗ್ರಾಹಕ ಸರಕುಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ವಿಶೇಷವಾಗಿ ಆಟೋಮೊಬೈಲ್, ವಸತಿ, ಸೌರ ಶಕ್ತಿ ಮತ್ತು ವಿದ್ಯುತ್ ಪ್ರಸರಣ ವಲಯಗಳಲ್ಲಿ ಇದರ ಬೇಡಿಕೆ ಹೆಚ್ಚುತ್ತಿದೆ.

    ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಸಂಪರ್ಕ ಪಥ (IMEC)

    ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಅಮೆರಿಕದ ಪ್ರಸ್ತುತ ‘ಪಾರಸ್ಪರಿಕ ಸುಂಕ ನೀತಿಗಳು’ ಮತ್ತು ರಕ್ಷಣಾತ್ಮಕ ಕ್ರಮಗಳು, ‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಸಂಪರ್ಕ ಪಥ’ (IMEC) ನಂತಹ ಬಹು-ರಾಷ್ಟ್ರ, ಬಹು-ಮಾದರಿ ಸಾರಿಗೆ ಮತ್ತು ವ್ಯಾಪಾರ ಸಂಪರ್ಕ ಪಥದ ಅಭಿವೃದ್ಧಿಗೆ ಒಂದು ಕಳವಳಕಾರಿ ಸೂಚನೆಯಾಗಿದ್ದು, ಪ್ರತಿಕೂಲ ಪರಿಣಾಮ ಬೀರಬಹುದು.

    ಭಾರತ-ಮಧ್ಯಪ್ರಾಚ್ಯ-ಇಯು ಆರ್ಥಿಕ ಸಂಪರ್ಕ ಪಥ (IMEC)ದ ಬಗ್ಗೆ:

    • ಜಿ-20 ಶೃಂಗಸಭೆ, 2023ರ ಸಂದರ್ಭದಲ್ಲಿ ಘೋಷಿಸಲಾಯಿತು:- IMEC 4,800 ಕಿ.ಮೀ ಉದ್ದದ ಯೋಜಿತ ಮಾರ್ಗವಾಗಿದೆ. 
    • ಸದಸ್ಯರು:- ಭಾರತ, ಐರೋಪ್ಯ ಒಕ್ಕೂಟ, ಫ್ರಾನ್ಸ್, ಜರ್ಮನಿ, ಇಟಲಿ, ಸೌದಿ ಅರೇಬಿಯಾ, ಯುಎಇ ಮತ್ತು ಅಮೆರಿಕ.
    • ಗುರಿ:- ಏಷ್ಯಾ, ಯುರೋಪ್ ಮತ್ತು ಮಧ್ಯಪ್ರಾಚ್ಯ ಪ್ರದೇಶಗಳ ಏಕೀಕರಣ.
    • IMEC 2 ಪ್ರತ್ಯೇಕ ಸಂಪರ್ಕ ಪಥಗಳನ್ನು ಒಳಗೊಂಡಿದೆ:-
      1. ಪೂರ್ವ ಸಂಪರ್ಕ ಪಥ:- ಭಾರತವನ್ನು ಪಶ್ಚಿಮ ಏಷ್ಯಾ/ಮಧ್ಯಪ್ರಾಚ್ಯದೊಂದಿಗೆ ಸಂಪರ್ಕಿಸುತ್ತದೆ.
      2. ಉತ್ತರ ಸಂಪರ್ಕ ಪಥ:- ಪಶ್ಚಿಮ ಏಷ್ಯಾ/ಮಧ್ಯಪ್ರಾಚ್ಯವನ್ನು ಯುರೋಪ್‌ನೊಂದಿಗೆ ಸಂಪರ್ಕಿಸುತ್ತದೆ.

    ಭಾರತಕ್ಕೆ IMEC ಯ ಪ್ರಸ್ತುತತೆ ಮತ್ತು ಸಂಚಾರ ಅಡೆತಡೆಗಳು:

    • ಸೂಯೆಜ್ ಕಾಲುವೆ ತಡೆ (2021):- ಬೃಹತ್ ಸರಕು ಸಾಗಣೆ ಹಡಗೊಂದು ಅಡ್ಡಲಾಗಿ ನಿಂತು ಈ ಮಾರ್ಗವನ್ನು ನಿರ್ಬಂಧಿಸಿದ್ದರಿಂದ, ಹಲವಾರು ಹಡಗುಗಳು ಸಿಕ್ಕಿಹಾಕಿಕೊಂಡಿದ್ದವು. ಒಂದು ದೊಡ್ಡ ರಕ್ಷಣಾ ಕಾರ್ಯಾಚರಣೆಯ ಮೂಲಕ ಅದನ್ನು ತೆರವುಗೊಳಿಸುವವರೆಗೂ, ಈ ಅಡಚಣೆಯು ಜಾಗತಿಕ ವ್ಯಾಪಾರದ ಸುಮಾರು 12% ಮೇಲೆ ಪರಿಣಾಮ ಬೀರಿತು.
    • ಕೆಂಪು ಸಮುದ್ರದ ಬಿಕ್ಕಟ್ಟು (2023-24):- ಹೌತಿ ಬಂಡುಕೋರರು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದ್ದರಿಂದ ಈ ಬಿಕ್ಕಟ್ಟು ಉಂಟಾಯಿತು. ಇದು ಒಂದೇ ವ್ಯಾಪಾರ ಮಾರ್ಗದ ಮೇಲೆ ಅತಿಯಾಗಿ ಅವಲಂಬಿತವಾಗಿರುವುದರ ದುರ್ಬಲತೆಯನ್ನು ಬಹಿರಂಗಪಡಿಸಿತು. ಕೆಂಪು ಸಮುದ್ರದ ಮೂಲಕ ಸಾಗುತ್ತಿದ್ದ ಭಾರತದ ಸರಕುಗಳಲ್ಲಿ, ಸುಮಾರು 25% ರಷ್ಟು ಸರಕು ಸಾಗಣೆಯು ವಿಳಂಬವನ್ನು ಎದುರಿಸಿತು.

    ಭಾರತಕ್ಕೆ IMEC ಯ ಮಹತ್ವ:

    • ಆರ್ಥಿಕ ಅಭಿವೃದ್ಧಿ:- ಸುಧಾರಿತ ಸಂಪರ್ಕ ಮತ್ತು ಆರ್ಥಿಕ ಏಕೀಕರಣದ ಮೂಲಕ ಏಷ್ಯಾ, ಪಶ್ಚಿಮ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್ ಅನ್ನು ಜೋಡಿಸಿ, ಈ ಪ್ರದೇಶಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವುದು ಈ ಸಂಪರ್ಕ ಪಥದ ಗುರಿಯಾಗಿದೆ.
    • ಭಾರತದ ಸಂಪರ್ಕ ಮತ್ತು ವ್ಯಾಪಾರ ಪ್ರವೇಶದ ಹೆಚ್ಚಳ:- ಅರೇಬಿಯನ್ ಪರ್ಯಾಯ ದ್ವೀಪ ಮತ್ತು ಮೆಡಿಟರೇನಿಯನ್ ಸಮುದ್ರದ ಮೂಲಕ ಭಾರತೀಯ ಬಂದರುಗಳನ್ನು ಯುರೋಪ್‌ಗೆ ಸಂಪರ್ಕಿಸುವ ನೇರ, ವೇಗವಾದ ಮತ್ತು ಸುರಕ್ಷಿತ ವ್ಯಾಪಾರ ಮಾರ್ಗವನ್ನು IMEC ಭಾರತಕ್ಕೆ ಒದಗಿಸುತ್ತದೆ.
    • ಸೂಯೆಜ್ ಕಾಲುವೆ ಮಾರ್ಗದ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತದೆ:- ಅಲ್ಲದೆ, ಸಾಗಣೆ ಸಮಯವನ್ನು 40% ರಷ್ಟು ಮತ್ತು ವೆಚ್ಚವನ್ನು 20–30% ರಷ್ಟು ಕಡಿಮೆ ಮಾಡುತ್ತದೆ.

    ಭಾರತದಲ್ಲಿ ಮಕ್ಕಳ ಕಳ್ಳಸಾಗಣೆ

    ಸಾಮಾನ್ಯ ಅಧ್ಯಯನ-2/ರಾಜ್ಯಶಾಸ್ತ್ರ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಭಾರತದಲ್ಲಿ ಬಲವಾದ ಸಾಂವಿಧಾನಿಕ ಚೌಕಟ್ಟು ಮತ್ತು ಅನೇಕ ಶಾಸನಬದ್ಧ ರಕ್ಷಣೆಗಳಿದ್ದರೂ, ಮಕ್ಕಳ ಕಳ್ಳಸಾಗಣೆಯು ಗಂಭೀರ ಮಾನವ ಹಕ್ಕುಗಳ ಸವಾಲಾಗಿ ಮುಂದುವರೆದಿದ್ದು ಕಳವಳಕಾರಿ ಸಂಗತಿಯಾಗಿದೆ.

    ಭಾರತೀಯ ನ್ಯಾಯ ಸಂಹಿತೆ (BNS), 2023 ರ ಪ್ರಕಾರ ಮಕ್ಕಳ ಕಳ್ಳಸಾಗಣೆ:

    • BNS, 2023 ರ ಸೆಕ್ಷನ್ 143 ‘ಕಳ್ಳಸಾಗಣೆ’ಯನ್ನು ವ್ಯಾಖ್ಯಾನಿಸುತ್ತದೆ:- ಶೋಷಣೆಗಾಗಿ ವ್ಯಕ್ತಿಗಳ ನೇಮಕಾತಿ, ಸಾಗಾಣಿಕೆ, ಆಶ್ರಯ ನೀಡುವಿಕೆ, ವರ್ಗಾವಣೆ ಅಥವಾ ಸ್ವೀಕೃತಿಯನ್ನು ‘ಕಳ್ಳಸಾಗಣೆ’ ಎಂದು ವ್ಯಾಖ್ಯಾನಿಸಲಾಗಿದೆ.
    • ಈ ವಿಧಾನಗಳನ್ನು ಕಳ್ಳಸಾಗಣೆ ಒಳಗೊಂಡಿದೆ:- ಬೆದರಿಕೆಗಳು, ಬಲವಂತ, ಒತ್ತಾಯ, ಅಪಹರಣ, ವಂಚನೆ, ಮೋಸ, ಅಧಿಕಾರ ದುರ್ಬಳಕೆ ಅಥವಾ ಆಮಿಷ ಒಡ್ಡುವಂತಹುದು.
    • ಶೋಷಣೆಯ ವ್ಯಾಪ್ತಿ:- ದೈಹಿಕ ಮತ್ತು ಲೈಂಗಿಕ ಶೋಷಣೆ, ಗುಲಾಮಗಿರಿ, ದಾಸ್ಯ, ಬಲವಂತದ ದುಡಿಮೆ ಹಾಗೂ ಬಲವಂತವಾಗಿ ಅಂಗಾಂಗಗಳನ್ನು ತೆಗೆಯುವುದನ್ನು ಇದು ಒಳಗೊಂಡಿದೆ.

    ಭಾರತದಲ್ಲಿ ಸಾಂವಿಧಾನಿಕ ರಕ್ಷಣೆಗಳು:

    • ವಿಧಿ 21:- ಇದು “ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕ”ನ್ನು ಖಚಿತಪಡಿಸುತ್ತದೆ. ಇದು ಘನತೆಯಿಂದ ಜೀವಿಸುವ ಹಕ್ಕನ್ನು ಒಳಗೊಂಡಿದೆ ಎಂದು ಅರ್ಥೈಸಲಾಗಿದೆ.
    • ವಿಧಿ 23:- ಇದು ಮಾನವರ ಕಳ್ಳಸಾಗಣೆ ಮತ್ತು ಬಲವಂತದ ದುಡಿಮೆಯನ್ನು ನಿಷೇಧಿಸುತ್ತದೆ.
    • ವಿಧಿ 24:- ಇದು 14 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕೈಗಾರಿಕೆಗಳಲ್ಲಿ ನೇಮಿಸಿಕೊಳ್ಳುವುದನ್ನು ನಿಷೇಧಿಸುತ್ತದೆ.
    • ವಿಧಿ 39(e):- ಕಾರ್ಮಿಕರ ಮತ್ತು ಮಕ್ಕಳ ಆರೋಗ್ಯ ಹಾಗೂ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳದಂತೆ ಮತ್ತು ನಾಗರಿಕರು ತಮ್ಮ ವಯಸ್ಸು ಅಥವಾ ಶಕ್ತಿಗೆ ಸೂಕ್ತವಲ್ಲದ ಉದ್ಯೋಗಗಳನ್ನು ಮಾಡಲು ಒತ್ತಾಯಿಸಲ್ಪಡದಂತೆ ರಾಜ್ಯವು ಖಚಿತಪಡಿಸಿಕೊಳ್ಳಬೇಕು.
    • ವಿಧಿ 39(f):- ಮಕ್ಕಳು ಸ್ವಾತಂತ್ರ್ಯ ಮತ್ತು ಘನತೆಯ ಪರಿಸ್ಥಿತಿಗಳಲ್ಲಿ ಬೆಳೆಯಲು ಅವಕಾಶಗಳನ್ನು ಕಲ್ಪಿಸಬೇಕು ಮತ್ತು ನೈತಿಕ ಹಾಗೂ ಭೌತಿಕ ಪರಿತ್ಯಾಗದಿಂದ ರಕ್ಷಣೆ ನೀಡಬೇಕು ಎಂದು ಇದು ಆದೇಶಿಸುತ್ತದೆ.

    ಮಕ್ಕಳ ಕಳ್ಳಸಾಗಣೆ ವಿರುದ್ಧ ನ್ಯಾಯಾಂಗದ ಮಧ್ಯಸ್ಥಿಕೆ:

    • ವಿಶಾಲ್ ಜೀತ್ v/s ಭಾರತ ಒಕ್ಕೂಟ (1990):- ಈ ಪ್ರಕರಣದಲ್ಲಿ, ಕಳ್ಳಸಾಗಣೆ ಮತ್ತು ಮಕ್ಕಳ ವೇಶ್ಯಾವಾಟಿಕೆ ಗಂಭೀರ ಸಾಮಾಜಿಕ-ಆರ್ಥಿಕ ಸಮಸ್ಯೆಗಳಾಗಿವೆ. ಆದ್ದರಿಂದ ಅವುಗಳನ್ನು ಎದುರಿಸಲು ತಡೆಗಟ್ಟುವ ಮತ್ತು ಮಾನವೀಯ ವಿಧಾನ ಅತ್ಯಗತ್ಯ ಎಂದು ಘನ ನ್ಯಾಯಾಲಯ ಹೇಳಿದೆ.
    • ಎಂ. ಸಿ. ಮೆಹ್ತಾ v/s ತಮಿಳುನಾಡು ರಾಜ್ಯ (1996):- ಅಪಾಯಕಾರಿ ಕೈಗಾರಿಕೆಗಳಲ್ಲಿ ಮಕ್ಕಳನ್ನು ನೇಮಿಸಿಕೊಳ್ಳುವುದನ್ನು ನಿಷೇಧಿಸುವ ಉದ್ದೇಶದಿಂದ ಘನ ನ್ಯಾಯಾಲಯವು ಮಾರ್ಗಸೂಚಿಗಳನ್ನು ಹೊರಡಿಸಿತು.
    • ಬಚ್‌ಪನ್ ಬಚಾವೋ ಆಂದೋಲನ್ v/s ಭಾರತ ಒಕ್ಕೂಟ (2011):- ಮಕ್ಕಳ ವ್ಯಾಪಕ ಶೋಷಣೆ ಮತ್ತು ಕಳ್ಳಸಾಗಣೆಯನ್ನು ಪರಿಹರಿಸಲು ಸರ್ವೋಚ್ಚ ನ್ಯಾಯಾಲಯ ನಿರ್ದೇಶನಗಳನ್ನು ನೀಡಿತು.
    • ಕೆ. ಪಿ. ಕಿರಣ್ ಕುಮಾರ v/s ಕರ್ನಾಟಕ ರಾಜ್ಯ:- ಸರ್ವೋಚ್ಚ ನ್ಯಾಯಾಲಯವು ಅಂತಹ ಅಪರಾಧಗಳನ್ನು ತಡೆಗಟ್ಟಲು ಕಠಿಣ ಮಾರ್ಗಸೂಚಿಗಳನ್ನು ನೀಡಿದೆ. ಕಳ್ಳಸಾಗಣೆಯು ಸಂವಿಧಾನವು ಖಾತರಿಪಡಿಸಿದ ಮಕ್ಕಳ ಜೀವಿಸುವ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.

    ಮಾನವ ಕಳ್ಳಸಾಗಣೆ ವಿರೋಧಿ ಅಪರಾಧಗಳನ್ನು ನಿಯಂತ್ರಿಸುವ ಕಾನೂನುಗಳು:

    • ಅನೈತಿಕ ಕಳ್ಳಸಾಗಣೆ (ತಡೆಗಟ್ಟುವಿಕೆ) ಕಾಯ್ದೆ, 1956:- ಇದು ಅನೈತಿಕ ಕಳ್ಳಸಾಗಣೆ ಮತ್ತು ಲೈಂಗಿಕ ಕೆಲಸವನ್ನು ತಡೆಯುವ ಗುರಿಯನ್ನು ಹೊಂದಿದೆ. ಇದು 1978 ಮತ್ತು 1986 ರಲ್ಲಿ ಎರಡು ತಿದ್ದುಪಡಿಗಳಿಗೆ ಒಳಪಟ್ಟಿದೆ.
    • ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986:- ಇದು ಮಕ್ಕಳನ್ನು ಕೆಲವು ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳದಂತೆ ತಡೆಯುತ್ತದೆ ಮತ್ತು ಇತರ ಕ್ಷೇತ್ರಗಳಲ್ಲಿ ಮಕ್ಕಳ ಕೆಲಸದ ಪರಿಸ್ಥಿತಿಗಳನ್ನು ನಿಯಂತ್ರಿಸುತ್ತದೆ.
    • ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನೆ) ಕಾಯ್ದೆ, 1976:- ಸಾಲ ತೀರಿಸಲು ಮಕ್ಕಳು ಸೇರಿದಂತೆ ಜನರು ದಾಸ್ಯದ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಪದ್ಧತಿಯನ್ನು ಇದು ನಿಷೇಧಿಸುತ್ತದೆ. ಜೀತಪದ್ಧತಿಯಿಂದ ಬಿಡುಗಡೆಗೊಂಡ ಕಾರ್ಮಿಕರ ಪುನರ್ವಸತಿಗಾಗಿ ಚೌಕಟ್ಟನ್ನು ಸಹ ಒದಗಿಸುತ್ತದೆ.
    • ಬಾಲಾಪರಾಧಿ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ, 2015:- ಇದು ಕಾನೂನಿನ ಸಂಘರ್ಷದಲ್ಲಿರುವ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳನ್ನು ನಿರ್ವಹಿಸುತ್ತದೆ.
    • ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ, 2012:- ಇದು ಮಕ್ಕಳ ವಾಣಿಜ್ಯಕ ಲೈಂಗಿಕ ಶೋಷಣೆಯನ್ನು ತಡೆಯಲು ಪ್ರಯತ್ನಿಸುತ್ತದೆ.
  • ಭಾರತದ ವಿದ್ಯುತ್ ವಲಯ | ಬ್ರಿಕ್ಸ್ ಪ್ಲಸ್ ನೌಕಾಭ್ಯಾಸ | ಭಾರತದ ಮೊಟ್ಟಮೊದಲ ಮುಕ್ತ – ಸಮುದ್ರ ಕಡಲ ಮೀನು ಸಾಕಾಣಿಕೆ ಯೋಜನೆ | ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗೆ (ECOSOC) 80 ವರ್ಷಗಳು

    ಭಾರತದ ವಿದ್ಯುತ್ ವಲಯ

    ಸಾಮಾನ್ಯ ಅಧ್ಯಯನ-3/ಶಕ್ತಿ

    ಇದೀಗ ಸುದ್ದಿಯಲ್ಲಿದೆ: 

    • ಭಾರತದ ವಿದ್ಯುತ್ ವಿತರಣಾ ಸಂಸ್ಥೆಗಳು, 2024-25 ರ ಆರ್ಥಿಕ ವರ್ಷದಲ್ಲಿ ಒಟ್ಟಾರೆಯಾಗಿ ₹2,701 ಕೋಟಿಗಳಷ್ಟು ‘ತೆರಿಗೆ ನಂತರದ ಲಾಭ’ವನ್ನು (PAT) ದಾಖಲಿಸಿವೆ.

    ಭಾರತದ ವಿದ್ಯುತ್ ವಲಯದ ಬಗ್ಗೆ:

    • ವಿಶ್ವದಲ್ಲೇ ವಿದ್ಯುತ್ ಉತ್ಪಾದನೆ ಮತ್ತು ಬಳಕೆಯಲ್ಲಿ 3ನೇ ಅತಿದೊಡ್ಡ ದೇಶ:- ಜೂನ್ 2025 ರ ಮಾಹಿತಿಯಂತೆ ಭಾರತವು 476 ಗಿಗಾವ್ಯಾಟ್ (GW) ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ. 
    • ನವೀಕರಿಸಬಹುದಾದ ಇಂಧನದಲ್ಲಿ-4ನೇ ಸ್ಥಾನ:- 2025 ರ ಮಾಹಿತಿಯಂತೆ, ಭಾರತವು ‘ನವೀಕರಿಸಬಹುದಾದ ಇಂಧನ’ ಸ್ಥಾಪಿತ ಸಾಮರ್ಥ್ಯದಲ್ಲಿ ಜಾಗತಿಕವಾಗಿ 4ನೇ ಸ್ಥಾನದಲ್ಲಿದೆ. ಪವನ ಶಕ್ತಿಯಲ್ಲಿ 4ನೇ ಸ್ಥಾನ ಮತ್ತು ಸೌರ ಶಕ್ತಿಯಲ್ಲಿ 3ನೇ ಸ್ಥಾನವನ್ನು ಹೊಂದಿದೆ.
    • ವಿದ್ಯುತ್ ಬಳಕೆಯಲ್ಲಿ ಮುಂಚೂಣೆಯಲ್ಲಿರುವ ವಲಯಗಳು:- 
    • ಕೈಗಾರಿಕಾ ವಲಯವು – 41.8% 
    1. ಗೃಹಬಳಕೆ – 24.3%
    2. ಕೃಷಿ – 17%
    3. ವಾಣಿಜ್ಯ ಬಳಕೆ – 8.3%
    • 2018 ರ ವೇಳೆಗೆ 100% ಗ್ರಾಮ ವಿದ್ಯುದ್ದೀಕರಣ:- ಭಾರತವು 2018 ರ ವೇಳೆಗೆ 100% ಗ್ರಾಮ ವಿದ್ಯುದ್ದೀಕರಣವನ್ನು ಸಾಧಿಸಿದೆ ಮತ್ತು ಅಂದಿನಿಂದ 2.8 ಕೋಟಿಗೂ ಹೆಚ್ಚು ಮನೆಗಳಿಗೆ ವಿದ್ಯುತ್ ಜಾಲ ಸಂಪರ್ಕವನ್ನು ಕಲ್ಪಿಸಿದೆ.

    ಸರ್ಕಾರದ ಉಪಕ್ರಮಗಳು:

    • ರಾಷ್ಟ್ರೀಯ ಸೌರ ಕಾರ್ಯಯೋಜನೆ (NSM):- 
    • ಪ್ರಾರಂಭ:- 2010
    • ಉದ್ದೇಶ:- ಇದು ವಿದ್ಯುತ್ ಜಾಲ-ಸಂಪರ್ಕಿತ ಮತ್ತು ಜಾಲ-ರಹಿತ ಸೌರ ವಿದ್ಯುತ್ ಯೋಜನೆಗಳನ್ನು ಒಳಗೊಂಡಂತೆ, ಸೌರ ಸಾಮರ್ಥ್ಯ ಸ್ಥಾಪನೆಗೆ ಮಹತ್ವಾಕಾಂಕ್ಷೆಯ ಉದ್ದೇಶವನ್ನು ನಿಗದಿಪಡಿಸಿದೆ.
    • ರಾಷ್ಟ್ರೀಯ ಶುದ್ಧ ಇಂಧನ ನಿಧಿ (NCEF):- 
    • ಉದ್ದೇಶ:- ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ, ಶುದ್ಧ ಇಂಧನ ತಂತ್ರಜ್ಞಾನಗಳು ಮತ್ತು ಯೋಜನೆಗಳಲ್ಲಿನ ಸಂಶೋಧನೆ ಹಾಗೂ ನಾವೀನ್ಯತೆಯನ್ನು ಬೆಂಬಲಿಸಲು ಇದನ್ನು ಸ್ಥಾಪಿಸಲಾಗಿದೆ.
    • ರಾಷ್ಟ್ರೀಯ ಪವನ ಶಕ್ತಿ ಕಾರ್ಯಯೋಜನೆ:- 
    • ಉದ್ದೇಶ:- ಇದು ಭಾರತದಲ್ಲಿ ಪವನ ಶಕ್ತಿಯ ಅಭಿವೃದ್ಧಿ ಮತ್ತು ವಿಸ್ತರಣೆಯ ಮೇಲೆ ಗಮನಹರಿಸುತ್ತದೆ. 
    • ಗುರಿ:- 2030 ರ ವೇಳೆಗೆ 140 GW ಪವನ ಶಕ್ತಿ ಸಾಮರ್ಥ್ಯವನ್ನು ತಲುಪುವ ಗುರಿಯನ್ನು ನಿಗದಿಪಡಿಸಲಾಗಿದೆ.
    • ಪಿಎಂ-ಕುಸುಮ್ ಯೋಜನೆ:- 
    • ಉದ್ದೇಶ:- ಕೃಷಿ ಪಂಪ್‌ಸೆಟ್‌ಗಳನ್ನು ಸೌರಶಕ್ತಿ ಚಾಲಿತವಾಗಿಸಲು ಈ ಯೋಜನೆಯನ್ನು ರೂಪಿಸಲಾಗಿದೆ.
    • ಪರಿಷ್ಕೃತ ವಿತರಣಾ ವಲಯ ಯೋಜನೆ (RDSS):
    • ಉದ್ದೇಶ:- ವಿದ್ಯುತ್ ವಿತರಣಾ ಕಂಪನಿಗಳನ್ನು (DISCOMs) ಬಲಪಡಿಸಲು ಇದನ್ನು ಜಾರಿಗೆ ತರಲಾಗಿದೆ.

    ಬ್ರಿಕ್ಸ್ ಪ್ಲಸ್ ನೌಕಾಭ್ಯಾಸ

    ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಪ್ರಸಕ್ತ ವರ್ಷ ಭಾರತವು ಬ್ರಿಕ್ಸ್ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿದ್ದರೂ ಸಹ, ದಕ್ಷಿಣ ಆಫ್ರಿಕಾ ಆಯೋಜಿಸಿದ “ವಿಲ್ ಫಾರ್ ಪೀಸ್, 2026” ಎಂಬ ಬ್ರಿಕ್ಸ್ ಪ್ಲಸ್ ನೌಕಾಭ್ಯಾಸದಿಂದ ಹೊರಗುಳಿಯಲು ನಿರ್ಧರಿಸಿದೆ. 
    • ಇಂತಹ ನೌಕಾಭ್ಯಾಸಗಳು ಬ್ರಿಕ್ಸ್‌ನ ಸಾಂಸ್ಥಿಕ ಚಟುವಟಿಕೆಗಳಲ್ಲ; ಬದಲಿಗೆ ಇವು ಕೇವಲ ಸಾಂದರ್ಭಿಕ ಅಥವಾ ತಾತ್ಕಾಲಿಕ ಉಪಕ್ರಮಗಳಾಗಿವೆ. ಆದ್ದರಿಂದ, ಇದರಲ್ಲಿ ಭಾಗವಹಿಸುವುದು ಕಡ್ಡಾಯವೇನಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

    ಬ್ರಿಕ್ಸ್ ಪ್ಲಸ್ ನೌಕಾಭ್ಯಾಸಗಳು:

    • ತಾತ್ಕಾಲಿಕ ನೌಕಾಭ್ಯಾಸದಲ್ಲಿ ಒಳಗೊಂಡಿರುವ ರಾಷ್ಟ್ರಗಳು:- ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಮತ್ತು ಆಯ್ಕೆಮಾಡಿದ ಬ್ರಿಕ್ಸ್-ಯೇತರ ಪಾಲುದಾರ ರಾಷ್ಟ್ರಗಳನ್ನು ಒಳಗೊಂಡಿರುವ ಒಂದು ತಾತ್ಕಾಲಿಕ ಕಡಲ ಸಮರಾಭ್ಯಾಸವಾಗಿದೆ.
    • ಬ್ರಿಕ್ಸ್ ಚೌಕಟ್ಟಿನ ಅಡಿಯಲ್ಲಿ ಕಡ್ಡಾಯವಾಗಿ ಇಲ್ಲ:- ಮತ್ತು ಇವು ಅಧಿಕೃತ ಬ್ರಿಕ್ಸ್ ಕಾರ್ಯವಿಧಾನಗಳ ಭಾಗವಾಗಿಲ್ಲ.
    • ಚೀನಾ ನೇತೃತ್ವ:- ಈ ನೌಕಾಭ್ಯಾಸವು ರಷ್ಯಾ, ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಸಕ್ರಿಯವಾಗಿ ಭಾಗವಹಿಸುವಿಕೆಯನ್ನು ಒಳಗೊಂಡಿದೆ.

    ಬ್ರಿಕ್ಸ್ (BRICS) ಸಂಘಟನೆಯ ಬಗ್ಗೆ:

    • ಸ್ಥಾಪನೆ:- 2009.
    • ಪ್ರಧಾನ ಕಚೇರಿ:- ಶಾಂಘೈ.
    • BRICS – ವಿಶ್ವದ ಪ್ರಮುಖ ಉದಯೋನ್ಮುಖ ಆರ್ಥಿಕತೆಗಳ ಸಂಕ್ಷಿಪ್ತ ರೂಪ:- ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (2010 ರಲ್ಲಿ ಸೇರ್ಪಡೆಯಾಯಿತು) ರಾಷ್ಟ್ರಗಳನ್ನು ಸೂಚಿಸುವ ಸಂಕ್ಷಿಪ್ತ ರೂಪವಾಗಿದೆ.
    • ಬ್ರಿಟಿಷ್ ಅರ್ಥಶಾಸ್ತ್ರಜ್ಞ ಜಿಮ್ ಓ’ನೀಲ್, 2001 ರಲ್ಲಿ “BRIC” ಎಂಬ ಪದವನ್ನು ಪರಿಚಯಿಸಿದರು:- ಇದು ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ಎಂಬ ನಾಲ್ಕು ಉದಯೋನ್ಮುಖ ಆರ್ಥಿಕತೆಗಳನ್ನು ಒಳಗೊಂಡಿದೆ.
    • ಸದಸ್ಯ ರಾಷ್ಟ್ರಗಳು:- 
    • 5 ಮೂಲ ಸದಸ್ಯ ರಾಷ್ಟ್ರಗಳು:- ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ

    2024-25 ರ 6 ಹೊಸ ಸದಸ್ಯ ರಾಷ್ಟ್ರಗಳು:- ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್.

    • ಬ್ರಿಕ್ಸ್ ಪಾಲು:- ಬ್ರಿಕ್ಸ್ 5 ಅತ್ಯಂತ ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಳಗೊಂಡಿದೆ. ಇದು, 
    1. ಜಾಗತಿಕ ಜನಸಂಖ್ಯೆಯ 41%, 
    2. ಜಾಗತಿಕ ಜಿಡಿಪಿಯ 24% 
    3. ಜಾಗತಿಕ ವ್ಯಾಪಾರದ 16% ರಷ್ಟನ್ನು ಪ್ರತಿನಿಧಿಸುತ್ತದೆ.

    ಸೂಚನೆ:- 2028 ರ ವೇಳೆಗೆ, ಬ್ರಿಕ್ಸ್ ಜಾಗತಿಕ ಆರ್ಥಿಕತೆಯ 35% ಪಾಲನ್ನು ಹೊಂದುವ ನಿರೀಕ್ಷೆಯಿದೆ.


    ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ (ನೂತನ ಅಭಿವೃದ್ಧಿ ಬ್ಯಾಂಕ್):ಮೂಲಸೌಕರ್ಯ ಮತ್ತು ಸುಸ್ಥಿರ ಯೋಜನೆಗಳನ್ನು ಬೆಂಬಲಿಸಲು, ಈ ಗುಂಪಿನ ಪ್ರಾಥಮಿಕ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

    ಭಾರತದ ಮೊಟ್ಟಮೊದಲ ಮುಕ್ತ – ಸಮುದ್ರ ಕಡಲ ಮೀನು ಸಾಕಾಣಿಕೆ ಯೋಜನೆ

    ಸಾಮಾನ್ಯ ಅಧ್ಯಯನ-3/ಜಲಚರ ಸಾಕಣೆ

    ಇದೀಗ ಸುದ್ದಿಯಲ್ಲಿದೆ: 

    • ಭಾರತ ಸರ್ಕಾರವು ಅಂಡಮಾನ್ ಸಮುದ್ರದಿಂದ, ಭಾರತದ ಮೊಟ್ಟಮೊದಲ ‘ಮುಕ್ತ ಸಮುದ್ರ ಕಡಲ ಮೀನು ಸಾಕಾಣಿಕೆ ಯೋಜನೆ’ಗೆ ಚಾಲನೆ ನೀಡಿದೆ.

    ಮುಕ್ತ – ಸಮುದ್ರ ಕಡಲ ಮೀನು ಸಾಕಾಣಿಕೆ ಯೋಜನೆಯ ಬಗ್ಗೆ:

    • ಅನುಷ್ಠಾನ:- ಭೂ ವಿಜ್ಞಾನ ಸಚಿವಾಲಯ, ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (NIOT) ಮತ್ತು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳ ಸಹಯೋಗದೊಂದಿಗೆ ಜಾರಿಯಾಗುತ್ತಿದೆ.
    • ಗುರಿ:- ಸಮುದ್ರಾಹಾರ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಕರಾವಳಿ ಮೀನುಗಾರಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು.
    • ಉದ್ದೇಶ:- ಈ ಪ್ರಾಯೋಗಿಕ ಉಪಕ್ರಮವು ನೈಸರ್ಗಿಕ ಸಾಗರ ಪರಿಸ್ಥಿತಿಗಳಲ್ಲಿ ಕಡಲ ತುಡುಪ್ಪದ ಮೀನು (ಫಿನ್‌ಫಿಶ್) ಮತ್ತು ಸಮುದ್ರ ಶೈವಲ/ ಕಳೆಯ  ಮುಕ್ತ ಸಮುದ್ರ ಕೃಷಿಯ ಮೇಲೆ ಕೇಂದ್ರೀಕರಿಸುತ್ತದೆ. ಇದು ವೈಜ್ಞಾನಿಕ ಆವಿಷ್ಕಾರವನ್ನು ಜೀವನೋಪಾಯದ ಸೃಷ್ಟಿಯೊಂದಿಗೆ ಸಂಯೋಜಿಸುತ್ತದೆ.

    ಮುಕ್ತ ಸಮುದ್ರ ಮೀನು ಸಾಕಾಣಿಕೆಯ ಬಗ್ಗೆ:

    • ವ್ಯಾಖ್ಯಾನ:- ಇದು ಕರಾವಳಿಯಿಂದ ದೂರದಲ್ಲಿರುವ (ಕಡಲಾಚೆಯ) ತೆರೆದ ಸಮುದ್ರದ ನೀರಿನಲ್ಲಿ ಕಡಲ ಮೀನಿನ ಪ್ರಭೇದಗಳ ಸಾಕಣೆಯನ್ನು ಸೂಚಿಸುತ್ತದೆ.
    • ಎತ್ತರದ ಅಲೆಗಳು, ಪ್ರವಾಹಗಳು ಮತ್ತು ಗಾಳಿಯ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾದ ಪಂಜರಗಳು ಅಥವಾ ನೀರಿನಲ್ಲಿ ಮುಳುಗಿಸಬಹುದಾದ ವ್ಯವಸ್ಥೆಗಳನ್ನು ಬಳಸಿಕೊಂಡು ಸಾಕಣೆಯನ್ನು ಮಾಡಲಾಗುತ್ತದೆ.

    ಮಹತ್ವ:- ಸುಸ್ಥಿರ ಮೀನುಗಾರಿಕೆ, ಜೀವನೋಪಾಯದ ಭದ್ರತೆ ಮತ್ತು ನೀಲಿ ಆರ್ಥಿಕತೆಯ ವಿಸ್ತರಣೆಗೆ ಗಮನಾರ್ಹ ಸಾಮರ್ಥ್ಯವನ್ನು ಹೊಂದಿದೆ.

    ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗೆ (ECOSOC) 80 ವರ್ಷಗಳು

    ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಗುಂಪುಗಳು

    ಇದೀಗ ಸುದ್ದಿಯಲ್ಲಿದೆ: 

    • ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯು (ECOSOC) ತನ್ನ ಕಾರ್ಯಚಟುವಟಿಕೆಯ 80 ವರ್ಷಗಳನ್ನು ಪೂರೈಸಿದೆ.

    ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ECOSOC)ಯ ಬಗ್ಗೆ:

    • ವಿಶ್ವಸಂಸ್ಥೆಯ 6 ಪ್ರಮುಖ ಅಂಗಗಳಲ್ಲಿ ಒಂದು:- ಮತ್ತು ಅಂತರರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಹಾಗೂ ಪರಿಸರ ನೀತಿ ಸಂಯೋಜನೆಗೆ ಕೇಂದ್ರ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
    • ಸ್ಥಾಪನೆ:- ವಿಶ್ವಸಂಸ್ಥೆಯ ಘೋಷಣಾಪತ್ರದ ಅಡಿಯಲ್ಲಿ 1945 ರಲ್ಲಿ ಸ್ಥಾಪಿಸಲಾಯಿತು.
  • ಚಾಬಹಾರ್ ಬಂದರು | ಕೇಂದ್ರ ಜಾಗೃತ ಆಯೋಗ | ಬೇರು ಒಣಗುವ (ಬಾಡುವ) ರೋಗ | ಕಾಜೀರಂಗದಲ್ಲಿ ಎತ್ತರದ ವನ್ಯಜೀವಿ ಸಂಚಾರ ಮಾರ್ಗ

    ಚಾಬಹಾರ್ ಬಂದರು

    ಸಾಮಾನ್ಯ ಅಧ್ಯಯನ-2/ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಅಮೆರಿಕದ ನವೀಕರಿಸಿದ ನಿರ್ಬಂಧಗಳ ಕಾರಣದಿಂದಾಗಿ ಭಾರತವು ಚಾಬಹಾರ್ ಬಂದರಿನಿಂದ ಹೊರಬರಲು ಯೋಜಿಸುತ್ತಿದೆ ಎಂಬ ವರದಿಗಳನ್ನು ಭಾರತವು ಅಲ್ಲಗಳೆದಿದೆ. 
    • ಕಾರ್ಯತಂತ್ರದ ಚಾಬಹಾರ್ ಬಂದರಿನಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಲು, ಭಾರತವು ಅಮೆರಿಕ ಮತ್ತು ಇರಾನ್ ಎರಡೂ ದೇಶಗಳೊಂದಿಗೂ ಸಂಪರ್ಕದಲ್ಲಿದೆ ಎಂದು ಪುನರುಚ್ಚರಿಸಿದೆ.

    ಚಾಬಹಾರ್ ಸಮುದ್ರ ಬಂದರಿನ ಬಗ್ಗೆ:

    • ಸ್ಥಳ:- ಇದು ಆಗ್ನೇಯ ಇರಾನ್‌ನ ಓಮನ್ ಕೊಲ್ಲಿಯ ತೀರದಲ್ಲಿದೆ.
    • ಈ ಬಂದರು 2 ಪ್ರತ್ಯೇಕ ಬಂದರುಗಳನ್ನು ಒಳಗೊಂಡಿದೆ. ಅವುಗಳೆಂದರೆ, 
    • ಶಾಹಿದ್ ಕಲಂತರಿ
    • ಶಾಹಿದ್ ಬೆಹೆಸ್ಟಿ
    • ಈ ಬಂದರು ಪಾಕಿಸ್ತಾನದ ಗ್ವಾದರ್ ಬಂದರಿನಿಂದ ಪಶ್ಚಿಮಕ್ಕೆ ಕೇವಲ 170 ಕಿಲೋಮೀಟರ್ ದೂರದಲ್ಲಿದೆ.
    • ಕಾರ್ಯತಂತ್ರದ ಸ್ಥಳ:- ಅಫ್ಘಾನಿಸ್ತಾನದ ಹಾಜಿಗಾಕ್ ಗಣಿಯಿಂದ ಕಬ್ಬಿಣ ಮತ್ತು ಕಜಕಿಸ್ತಾನ್, ತುರ್ಕಮೆನಿಸ್ತಾನ್ ಹಾಗೂ ಉಜ್ಬೇಕಿಸ್ತಾನ್‌ನಂತಹ ಮಧ್ಯ ಏಷ್ಯಾದ ದೇಶಗಳಿಂದ ಇತರ ನೈಸರ್ಗಿಕ ಸಂಪನ್ಮೂಲಗಳನ್ನು ಪಡೆಯಲು ಭಾರತಕ್ಕೆ ಪ್ರವೇಶದ ಅಗತ್ಯವಿದೆ. ಚಾಬಹಾರ್ ಬಂದರು ಈ ಸಂಪನ್ಮೂಲಗಳ ಪ್ರವೇಶವನ್ನು ಸಾಧ್ಯವಾಗಿಸುತ್ತದೆ.
    • ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಸಂಪರ್ಕ ಮಾರ್ಗ (INSTC):- ಈ ಬಂದರು INSTC ನ ಭಾಗವಾಗಿದೆ. ಇದು ಹಿಂದೂ ಮಹಾಸಾಗರವನ್ನು ಉತ್ತರ ಯುರೋಪ್‌ಗೆ ಸಂಪರ್ಕಿಸುವ ಬಹು-ಮಾದರಿ ಸಾರಿಗೆ ಯೋಜನೆಯಾಗಿದೆ.

    ಕೇಂದ್ರ ಜಾಗೃತ ಆಯೋಗ

    ಸಾಮಾನ್ಯ ಅಧ್ಯಯನ-2/ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಭಾರತದ ರಾಷ್ಟ್ರಪತಿಗಳು, ‘ಪ್ರವೀಣ್ ವಶಿಷ್ಟ’ ಅವರನ್ನು ಕೇಂದ್ರ ಜಾಗೃತ ಆಯೋಗದಲ್ಲಿ ‘ಜಾಗೃತ ಆಯುಕ್ತರನ್ನಾಗಿ’ ನೇಮಕ ಮಾಡಿದ್ದಾರೆ.

    ಕೇಂದ್ರ ಜಾಗೃತ ಆಯೋಗ (CVC)ದ ಬಗ್ಗೆ:

    • ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆ, 1946 ರ ಅಡಿಯಲ್ಲಿ 1964 ರಲ್ಲಿ ಸ್ಥಾಪಿಸಲಾಯಿತು.
    • ಸಂತಾನಂ ಸಮಿತಿಯ ಶಿಫಾರಸು:- ಭ್ರಷ್ಟಾಚಾರ ತಡೆಗಟ್ಟುವಿಕೆ ಕುರಿತ ಈ ಸಮಿತಿಯ ಶಿಫಾರಸುಗಳ ಮೇರೆಗೆ ಸ್ಥಾಪಿಸಲಾಯಿತು.
    • ಕೇಂದ್ರ ಜಾಗೃತ ಆಯೋಗ ಕಾಯ್ದೆ (CVC), 2003 ರ ಅಡಿಯಲ್ಲಿ ಶಾಸನಬದ್ಧ ಸಂಸ್ಥೆಯಾಯಿತು:- ಇದು ಸಾರ್ವಜನಿಕ ಆಡಳಿತದಲ್ಲಿ ಸಮಗ್ರತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ಹೊತ್ತಿರುವ ಭಾರತದ ಅತ್ಯುನ್ನತ ಶಾಸನಬದ್ಧ ಸಂಸ್ಥೆಯಾಗಿದೆ.

    ಕೇಂದ್ರ ಜಾಗೃತ ಆಯೋಗ ಕಾಯ್ದೆ, 2003 ರ ಅನ್ವಯ,

    ಕೇಂದ್ರ ಜಾಗೃತ ಆಯೋಗದ ಸಂರಚನೆ:-

    • ಒಬ್ಬರು ಕೇಂದ್ರ ಜಾಗೃತ ಆಯುಕ್ತರು ಮತ್ತು 
    • ಇಬ್ಬರು ಜಾಗೃತ ಆಯುಕ್ತರ ನೇಮಕಕ್ಕೆ ಅವಕಾಶವಿದೆ. 

    ನೇಮಕಾತಿ:- ಭಾರತದ ರಾಷ್ಟ್ರಪತಿಗಳು ಕೇಂದ್ರ ಜಾಗೃತ ಆಯುಕ್ತರು ಮತ್ತು ಜಾಗೃತ ಆಯುಕ್ತರನ್ನು ನೇಮಕ ಮಾಡುತ್ತಾರೆ.

    ಉನ್ನತಾಧಿಕಾರ ಸಮಿತಿಯ ಶಿಫಾರಸುಗಳ ಮೇರೆಗೆ ನೇಮಕಾತಿ:-

    • ಪ್ರಧಾನಮಂತ್ರಿ 
    • ಕೇಂದ್ರ ಗೃಹ ಸಚಿವರು
    • ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿದೆ

    ಅಧಿಕಾರಾವಧಿ:- ಜಾಗೃತ ಆಯುಕ್ತರ 4 ವರ್ಷಗಳು ಅಥವಾ ಅಧಿಕಾರದಲ್ಲಿರುವವರು 65 ವರ್ಷ ವಯಸ್ಸನ್ನು ತಲುಪುವವರೆಗೆ (ಯಾವುದು ಮೊದಲೋ ಅದು) ಅಧಿಕಾರದಲ್ಲಿ ಇರುತ್ತಾರೆ.

    ಕೇಂದ್ರ ಜಾಗೃತ ಆಯೋಗದ ಅಧಿಕಾರ ಮತ್ತು ಕಾರ್ಯಗಳು:

      • ಭ್ರಷ್ಟಾಚಾರವನ್ನು ನಿಯಂತ್ರಿಸುತ್ತದೆ:- CVC ಕಾಯ್ದೆ, 2003 ರ ಅನ್ವಯ, ಭ್ರಷ್ಟಾಚಾರವನ್ನು ಎದುರಿಸಲು ಮತ್ತು ಸಾರ್ವಜನಿಕ ಆಡಳಿತದಲ್ಲಿ ಸಮಗ್ರತೆ, ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಅಧಿಕಾರ ಮತ್ತು ಜವಾಬ್ದಾರಿಯನ್ನು ಕೇಂದ್ರ ಜಾಗೃತ ಆಯೋಗವು (CVC) ಹೊಂದಿದೆ.
      • ಜಾಗೃತ ಆಡಳಿತ ವ್ಯವಸ್ಥೆಯ ಮೇಲೆ ಮೇಲ್ವಿಚಾರಣೆ:- ಈ ಆಯೋಗವು ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳ ಜಾಗೃತ ಆಡಳಿತ ವ್ಯವಸ್ಥೆಯ ಮೇಲೆ ಮೇಲ್ವಿಚಾರಣೆಯನ್ನು ನಡೆಸುತ್ತದೆ.
      • ಅತ್ಯುನ್ನತ ಜಾಗೃತ ಸಂಸ್ಥೆ:- ಇದು ಲೋಕಪಾಲ್ ಶಿಫಾರಸು ಮಾಡಿದ ಪ್ರಕರಣಗಳು ಮತ್ತು PIDPI ಚೌಕಟ್ಟಿನ ಅಡಿಯಲ್ಲಿ ಬರುವ ಮಾಹಿತಿದಾರರ ದೂರುಗಳನ್ನು ಒಳಗೊಂಡಂತೆ, ಭ್ರಷ್ಟಾಚಾರ-ವಿರೋಧಿ ವಿಚಾರಣೆಗಳ ಮೇಲೆ ಮೇಲ್ವಿಚಾರಣೆ ಮಾಡುವುದು ಹಾಗೂ ಮಾರ್ಗದರ್ಶನ ನೀಡುತ್ತದೆ.
    • ಕೇಂದ್ರೀಯ ತನಿಖಾ ದಳದ (CBI) ಕಾರ್ಯನಿರ್ವಹಣೆಯ ಮೇಲ್ವಿಚಾರಣೆ:- ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ, ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ಇದು ಮೇಲ್ವಿಚಾರಣೆ ಮಾಡುತ್ತದೆ.
    • ಉನ್ನತ ಅಧಿಕಾರಿಗಳ ನೇಮಕಾತಿಯನ್ನು ಶಿಫಾರಸು ಮಾಡುವ ಸಮಿತಿಗಳ ಅಧ್ಯಕ್ಷತೆ:- ಜಾರಿ ನಿರ್ದೇಶನಾಲಯ (ED) ಮತ್ತು ಸಿಬಿಐನಲ್ಲಿ (ಸಿಬಿಐ ನಿರ್ದೇಶಕರನ್ನು ಹೊರತುಪಡಿಸಿ, ಎಸ್‌ಪಿ ಮಟ್ಟ ಮತ್ತು ಅದಕ್ಕಿಂತ ಮೇಲಿನ ಹಂತದ) ಉನ್ನತ ಅಧಿಕಾರಿಗಳ ನೇಮಕಾತಿಯಲ್ಲಿ ಇದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.

    ಬೇರು ಒಣಗುವ (ಬಾಡುವ) ರೋಗ

    ಸಾಮಾನ್ಯ ಅಧ್ಯಯನ-3/ ಕೃಷಿ

    ಇದೀಗ ಸುದ್ದಿಯಲ್ಲಿದೆ: 

    • ಭಾರತದ ಪರ್ಯಾಯ ದ್ವೀಪದಲ್ಲಿ ತೆಂಗಿನ ಕೃಷಿಯು, ಫೈಟೊಪ್ಲಾಸ್ಮಾ ಪ್ರೇರಿತ ಬೇರು ಒಣಗುವ (ರೂಟ್ ವಿಲ್ಟ್) ರೋಗದ ಕಾರಣದಿಂದಾಗಿ ಗಂಭೀರ ಅಪಾಯಗಳನ್ನು ಎದುರಿಸುತ್ತಿದೆ.

    ಬೇರು ಒಣಗುವ (ರೂಟ್ ವಿಲ್ಟ್) ರೋಗದ ಬಗ್ಗೆ:

      • ಫೈಟೊಪ್ಲಾಸ್ಮಾ ಪ್ರೇರಿತ:- ತೆಂಗಿನ ಬೇರು ಒಣಗುವ ರೋಗವು ‘ಫೈಟೊಪ್ಲಾಸ್ಮಾ’ ಎಂಬ ಕೋಶ ಭಿತ್ತಿ ರಹಿತ ಬ್ಯಾಕ್ಟೀರಿಯಾದ ರೋಗಕಾರಕದಿಂದ ಉಂಟಾಗುತ್ತದೆ. 
    • ಮಾರಣಾಂತಿಕವಲ್ಲದ, ಗಿಡವನ್ನು ತೀವ್ರವಾಗಿ ದುರ್ಬಲಗೊಳಿಸುವ ರೋಗ:- ಎಂದು ವರ್ಗೀಕರಿಸಲಾಗಿದೆ.
    • ಕೇರಳದ ಎರಟ್ಟುಪೆಟ್ಟಾದಲ್ಲಿ ಮೊದಲ ವರದಿ:- ಈ ರೋಗವು 150 ವರ್ಷಗಳ ಹಿಂದೆ ಕೇರಳದಲ್ಲಿ ವರದಿಯಾಯಿತು. 
    • ನಿರ್ದಿಷ್ಟವಾಗಿ ಗುಣಪಡಿಸುವ ಚಿಕಿತ್ಸೆ ಇಲ್ಲ:- ದೀರ್ಘಕಾಲದ ಸಂಶೋಧನಾ ಪ್ರಯತ್ನಗಳ ಹೊರತಾಗಿಯೂ, ಇಲ್ಲಿಯವರೆಗೆ ಇದಕ್ಕೆ ಯಾವುದೇ ನಿರ್ದಿಷ್ಟ ಗುಣಪಡಿಸುವ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲಾಗಿಲ್ಲ.
    • ಈ ರೋಗದ ಪ್ರಮುಖ ಲಕ್ಷಣಗಳು:-
    1. ಎಲೆಗಳು ಕ್ರಮೇಣ ಹಳದಿ ಬಣ್ಣಕ್ಕೆ ತಿರುಗುವುದು ಮತ್ತು ಬಾಡುವುದು, 
    2. ನಂತರ ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗುವುದು,
    3. ಅಂತಿಮವಾಗಿ ಎಲ್ಲಾ ಕಾಯಿಗಳು ಉದುರುವುದು.
    • ರಸ ಹೀರುವ ಕೀಟಗಳ ಮೂಲಕ ಹರಡುತ್ತದೆ:- ಬೇರು ಒಣಗುವ ರೋಗವು ಕೀಟ ವಾಹಕಗಳ ಮೂಲಕ ಹರಡುತ್ತದೆ. ಗಾಳಿಯ ಚಲನೆ ಮತ್ತು ದೊಡ್ಡ, ತಡೆರಹಿತ ತೆಂಗಿನ ತೋಟಗಳು ಈ ರೋಗದ ಹರಡುವಿಕೆಗೆ ಮತ್ತಷ್ಟು ಸಹಕಾರಿಯಾಗಿವೆ.

    ತೆಂಗು (ಕೊಕೊಸ್ ನುಸಿಫೆರಾ) ಬೆಳೆಯ ಬಗ್ಗೆ:

    • ಭಾರತದ ಪ್ರಮುಖ ಬಹುವಾರ್ಷಿಕ ತೋಟಗಾರಿಕಾ ಬೆಳೆ:- ಇದನ್ನು ಅತೀ ಹೆಚ್ಚಾಗಿ ತೇವಾಂಶವುಳ್ಳ ಉಷ್ಣವಲಯ ಮತ್ತು ಕರಾವಳಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
    • ಮಣ್ಣು:- ನೀರು ಚೆನ್ನಾಗಿ ಬಸಿದು ಹೋಗುವ ಮರಳು ಮಿಶ್ರಿತ ಕಡುಮಣ್ಣು (ಲೋಮ್ ಮಣ್ಣು).
    • ಹೆಚ್ಚಿನ ಆರ್ದ್ರತೆಯ ಅವಶ್ಯಕತೆ ಇದೆ.
    • ತಾಪಮಾನ:- 27 ರಿಂದ 32 ಡಿಗ್ರಿ ಸೆಲ್ಸಿಯಸ್ . ಇದಕ್ಕೆ ಸಾಕಷ್ಟು ಸೂರ್ಯನ ಬೆಳಕು ಅತ್ಯಗತ್ಯವಿರುತ್ತದೆ
    • ಭಾರತವು ಪ್ರಪಂಚದಲ್ಲೇ ತೆಂಗು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ದೇಶಗಳಲ್ಲಿ ಒಂದಾಗಿದೆ. ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ಸೇರಿ ಭಾರತದ ಒಟ್ಟು ತೆಂಗು ಉತ್ಪಾದನೆಗೆ ಸುಮಾರು 82–83% ರಷ್ಟು ಕೊಡುಗೆ ನೀಡುತ್ತವೆ.

    ಕಾಜೀರಂಗದಲ್ಲಿ ಎತ್ತರದ ವನ್ಯಜೀವಿ ಸಂಚಾರ ಮಾರ್ಗ

    ಸಾಮಾನ್ಯ ಅಧ್ಯಯನ-3/ಪರಿಸರ

    ಇದೀಗ ಸುದ್ದಿಯಲ್ಲಿದೆ: 

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಸ್ಸಾಂನ ಕಾಜೀರಂಗದಲ್ಲಿ 34.5 ಕಿಲೋಮೀಟರ್ ಉದ್ದದ ಎತ್ತರದ ವನ್ಯಜೀವಿ ಸಂಚಾರ ಮಾರ್ಗವನ್ನು ಉದ್ಘಾಟಿಸಲು ಸಜ್ಜಾಗಿದ್ದಾರೆ.

    ಕಾಜೀರಂಗದ ಎತ್ತರದ ವನ್ಯಜೀವಿ ಸಂಚಾರ ಮಾರ್ಗದ ಬಗ್ಗೆ:

    • ಉದ್ದೇಶ:- ವಿಶೇಷವಾಗಿ ವಾರ್ಷಿಕ ಪ್ರವಾಹದ ಸಮಯದಲ್ಲಿ, ಪ್ರಾಣಿಗಳ ಸುರಕ್ಷಿತ ಚಲನವಲನಕ್ಕೆ ಅನುವು ಮಾಡಿಕೊಡುವುದು. 
    • ಸಂಪರ್ಕ ಸುಧಾರಣೆ:- ಇದು ಗುವಾಹಟಿ, ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ನುಮಾಲಿಘರ್‌ಗಳ ನಡುವಿನ ಸಂಪರ್ಕವನ್ನು ಸಹ ಸುಧಾರಿಸುತ್ತದೆ.

    ‘ಕಾಜಿರಂಗ ರಾಷ್ಟ್ರೀಯ ಉದ್ಯಾನವನ’ದ ಬಗ್ಗೆ:

    • ಇದು ಬ್ರಹ್ಮಪುತ್ರ ಕಣಿವೆಯ ಪ್ರವಾಹದ ಬಯಲು ಸೀಮೆಯ ಹುಲ್ಲುಗಾವಲುಗಳನ್ನು ಪ್ರತಿನಿಧಿಸುವ, ಅತ್ಯಂತ ದೊಡ್ಡ ಹಾಗೂ ಅಖಂಡವಾದ ಪ್ರದೇಶವಾಗಿದೆ.
    • ‘ಜೈವಿಕ ಅನುಕ್ರಮಣಿಕೆ’ಯ ವಿವಿಧ ಹಂತ:- ಇಲ್ಲಿನ ಹುಲ್ಲುಗಾವಲುಗಳ ಪರಿಸರ ವ್ಯವಸ್ಥೆಯಲ್ಲಿ, ಸ್ಪಷ್ಟವಾಗಿ ಕಾಣಬಹುದು.
    • ಒಂದು ಕೊಂಬಿನ ಖಡ್ಗಮೃಗಗಳಿಗೆ ಹೆಸರುವಾಸಿ:- ವಿಶ್ವದ 70% ಕ್ಕಿಂತ ಹೆಚ್ಚು ‘ಒಂದು ಕೊಂಬಿನ ಖಡ್ಗಮೃಗ’ಗಳಿಗೆ ಈ ಉದ್ಯಾನವನವು ಆವಾಸಸ್ಥಾನವಾಗಿದೆ.
    • ಇದನ್ನು 1950 ರಲ್ಲಿ ‘ವನ್ಯಜೀವಿ ಅಭಯಾರಣ್ಯ’ವನ್ನಾಗಿ ಘೋಷಿಸಲಾಯಿತು. 
    • 1974 ರಲ್ಲಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನ:- ‘ವನ್ಯಜೀವಿ (ರಕ್ಷಣೆ) ಕಾಯ್ದೆ, 1972’ ರ ಅಡಿಯಲ್ಲಿ ಅಧಿಸೂಚಿಸಲಾಯಿತು.
    • ವಿಶ್ವ ಪರಂಪರೆಯ ತಾಣ:- ಇದನ್ನು 1985 ರಲ್ಲಿ ಘೋಷಿಸಲಾಯಿತು.
    • ಪ್ರಮುಖ ಪಕ್ಷಿ ಪ್ರದೇಶ:- ಬರ್ಡ್‌ಲೈಫ್ ಇಂಟರ್‌ನ್ಯಾಶನಲ್ ಸಂಸ್ಥೆಯು ಇದನ್ನು ‘ಪ್ರಮುಖ ಪಕ್ಷಿ ಪ್ರದೇಶ’ ಎಂದು ಗುರುತಿಸಿದೆ.
  • ಸಂಶ್ಲೇಷಿತ ಜಾನುವಾರು ತಳಿಗಳು | 18 ನೇ ಜಪಾನ್-ಭಾರತ ವಿದೇಶಾಂಗ ಸಚಿವರ ಕಾರ್ಯತಂತ್ರದ ಸಂವಾದ | ವಿಶ್ವಸಂಸ್ಥೆಯ ಮುಕ್ತ ಸಾಗರಗಳ (ಹೈ ಸೀಸ್) ಒಪ್ಪಂದ | ಬೀಜ ಕಾಯ್ದೆ, 2026 ಮತ್ತು ರೈತರ ಮೇಲೆ ಇದರ ಪ್ರಭಾವ | ತಿರುವಳ್ಳುವರ್ ದಿನ | ಜಲ್ಲಿಕಟ್ಟು

    ಸಂಶ್ಲೇಷಿತ ಜಾನುವಾರು ತಳಿಗಳು

    ಸಾಮಾನ್ಯ ಅಧ್ಯಯನ – 3/ಹೈನುಗಾರಿಕೆ ವಲಯ

    ಇದೀಗ ಸುದ್ದಿಯಲ್ಲಿದೆ:

    • ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ (NDRI)ಯು ಅಭಿವೃದ್ಧಿಪಡಿಸಿರುವ, ‘ಕರಣ್ ಫ್ರೈಸ್’ ಮತ್ತು ‘ವೃಂದಾವನಿ’ ಎಂಬ ಎರಡು ಹೊಸ ಸಂಶ್ಲೇಷಿತ ಜಾನುವಾರು ತಳಿಗಳನ್ನು ಭಾರತವು ನೋಂದಾಯಿಸಿದೆ.

    ‘ಸಂಶ್ಲೇಷಿತ ಜಾನುವಾರು ತಳಿ’ ಎಂದರೇನು?

      • ಸಾಮಾನ್ಯವಾಗಿ ದೇಶೀಯ (ಬಾಸ್ ಇಂಡಿಕಸ್) ಮತ್ತು ವಿದೇಶಿಯ (ಬಾಸ್ ಟಾರಸ್) ತಳಿಗಳಂತಹ, ಎರಡು ಅಥವಾ ಹೆಚ್ಚಿನ ತಳಿಗಳ ನಡುವಿನ ‘ಯೋಜಿತ ಮಿಶ್ರತಳಿ ಸಂತಾನೋತ್ಪತ್ತಿ’ಯ ಮೂಲಕ ಅಭಿವೃದ್ಧಿಪಡಿಸಿ, ನಂತರದ ಪೀಳಿಗೆಗಳಲ್ಲಿ ಅಪೇಕ್ಷಿತ ಗುಣಲಕ್ಷಣಗಳನ್ನು ಸ್ಥಿರೀಕರಿಸಲಾದ ತಳಿ. 
    • ವಿಶಿಷ್ಟ ತಳಿಗಳು:- ಒಮ್ಮೆ ಈ ಗುಣಲಕ್ಷಣಗಳು ಸ್ಥಿರಗೊಂಡ ನಂತರ, ಇವು ಶುದ್ಧ ತಳಿಗಳಂತೆ ಸಂತಾನೋತ್ಪತ್ತಿಯನ್ನು ನಡೆಸುತ್ತವೆ ಮತ್ತು ಇವುಗಳನ್ನು ವಿಶಿಷ್ಟ ತಳಿಗಳೆಂದು ಗುರುತಿಸಲಾಗುತ್ತದೆ.

    ‘ಕರಣ್ ಫ್ರೈಸ್’ ಜಾನುವಾರು ತಳಿಯ ಬಗ್ಗೆ:

    • “ಹೋಲ್ಸ್ಟೀನ್ ಫ್ರೈಸಿಯನ್” ಮತ್ತು “ಥಾರ್‌ಪಾರ್ಕರ್ ಝೆಬು” ಜಾನುವಾರುಗಳ ನಡುವಿನ ಮಿಶ್ರತಳಿ:- ಜಾಗತಿಕವಾಗಿ ಗುರುತಿಸಲ್ಪಟ್ಟ ಅಧಿಕ ಇಳುವರಿ ನೀಡುವ ತಳಿಯಾದ ‘ಹೋಲ್ಸ್ಟೀನ್ ಫ್ರೈಸಿಯನ್’ (Holstein Friesian) ಮತ್ತು ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಹಾಗೂ ರೋಗ ನಿರೋಧಕ ಶಕ್ತಿಗೆ ಹೆಸರುವಾಸಿಯಾದ ಭಾರತದ ದೇಶೀಯ ‘ಥಾರ್‌ಪಾರ್ಕರ್ ಝೆಬು’ ಜಾನುವಾರುಗಳ ನಡುವಿನ ಮಿಶ್ರತಳಿ ಸಂತಾನೋತ್ಪತ್ತಿ ಮೂಲಕ ಈ ಸಂಶ್ಲೇಷಿತ ಹಸುವಿನ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ.
    • ವಿಶೇಷತೆ:- ಅಧಿಕ ಉತ್ಪಾದಕತೆ ಮತ್ತು ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳುವ ಸಾಮರ್ಥ್ಯದ ಸಂಯೋಜನೆಯನ್ನು ಹೊಂದಿದ್ದು, ಇದು ದಿನಕ್ಕೆ ಗರಿಷ್ಠ 46.5 ಕೆ.ಜಿ.ಯಷ್ಟು ಹಾಲಿನ ಇಳುವರಿಯನ್ನು ನೀಡುತ್ತದೆ.

    ಮಹತ್ವ:

    • ದೇಶೀಯ ಜಾನುವಾರುಗಳಿಗಿಂತ ಇವು ಹೆಚ್ಚಿನ ಉತ್ಪಾದಕತೆಯನ್ನು ಹೊಂದಿವೆ.
    • ಶುದ್ಧ ವಿದೇಶಿ ತಳಿಗಳಿಗಿಂತ ಉತ್ತಮ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಇವು ಪ್ರದರ್ಶಿಸುತ್ತವೆ.
    • ಹೈನುಗಾರರಿಗೆ ಉತ್ತಮ ಆರ್ಥಿಕ ಆದಾಯವನ್ನು ಇವು ಒದಗಿಸುತ್ತವೆ.
    • ಇವುಗಳಲ್ಲಿ ಕಡಿಮೆ ಮರಣ ಪ್ರಮಾಣ ಮತ್ತು ಉತ್ತಮ ಸಂತಾನೋತ್ಪತ್ತಿ ದಕ್ಷತೆಯು ಕಂಡುಬರುತ್ತದೆ.

    18 ನೇ ಜಪಾನ್-ಭಾರತ ವಿದೇಶಾಂಗ ಸಚಿವರ ಕಾರ್ಯತಂತ್ರದ ಸಂವಾದ

    ಸಾಮಾನ್ಯ ಅಧ್ಯಯನ – 2/ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • 18 ನೇ ಭಾರತ-ಜಪಾನ್ ಕಾರ್ಯತಂತ್ರದ ಸಂವಾದದಲ್ಲಿ, ಈ ಎರಡು ದೇಶಗಳು ತಮ್ಮ ‘ವಿಶೇಷ ಕಾರ್ಯತಂತ್ರದ ಮತ್ತು ಜಾಗತಿಕ ಪಾಲುದಾರಿಕೆ’ಯ ಬೆಳವಣಿಗೆಯನ್ನು  ಪುನರುಚ್ಚರಿಸಿದವು.

    ಪ್ರಮುಖ ಮುಖ್ಯಾಂಶಗಳು:

    • ಆರ್ಥಿಕ ಭದ್ರತೆಯ ಕುರಿತಾದ ಖಾಸಗಿ ವಲಯದ ಸಂವಾದ (B2B):- 2026 ರ ಆರಂಭದಲ್ಲಿ ಈ ಎರಡು ದೇಶಗಳು ಇದಕ್ಕೇ ಚಾಲನೆಯನ್ನು ಘೋಷಿಸಿದವು.
    • ಈ ಸಂವಾದವು 5 ಆದ್ಯತಾ ಕ್ಷೇತ್ರಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅವುಗಳೆಂದರೆ,
    • ಅರೆವಾಹಕಗಳು (ಸೆಮಿಕಂಡಕ್ಟರ್‌ಗಳು), 
    • ನಿರ್ಣಾಯಕ ಖನಿಜಗಳು, 
    • ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT), 
    • ಶುದ್ಧ ಇಂಧನ 
    • ಔಷಧ ಉದ್ಯಮ (ಫಾರ್ಮಾಸ್ಯುಟಿಕಲ್ಸ್)
    • ಜಪಾನ್-ಭಾರತ ಎಐ ಕಾರ್ಯತಂತ್ರದ ಸಂವಾದ:- ‘ಜಪಾನ್-ಭಾರತ ಎಐ ಸಹಕಾರ ಉಪಕ್ರಮ’ದ (JAI) ಅಡಿಯಲ್ಲಿ ಈ ಸಂವಾದ’ವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
    • ಜಂಟಿ ಸಂಶೋಧನೆ:- ಇದಕ್ಕಾಗಿ ಜಪಾನ್ 2030 ರ ವೇಳೆಗೆ 500 ಅತ್ಯಂತ ಕೌಶಲ್ಯಯುತ ಭಾರತೀಯ ಎಐ ವೃತ್ತಿಪರರನ್ನು ಆಹ್ವಾನಿಸಲಿದೆ.

    ಭಾರತ ಮತ್ತು ಜಪಾನ್ ಸಂಬಂಧಗಳು:

    • ರಕ್ಷಣೆ ಮತ್ತು ಭದ್ರತೆ:-
      • ಸೇನಾ ಸಮರಾಭ್ಯಾಸಗಳು:- ‘ಮಲಬಾರ್’, ‘ಧರ್ಮ ಗಾರ್ಡಿಯನ್’ ಮತ್ತು ‘ಜಿಮೆಕ್ಸ್’ ನಂತಹ ಸಮರಾಭ್ಯಾಸಗಳು ಉಭಯ ದೇಶಗಳ ನಡುವಿನ ಪರಸ್ಪರ ಕಾರ್ಯಸಾಧ್ಯತೆ ಮತ್ತು ಇಂಡೋ-ಪೆಸಿಫಿಕ್ ವಲಯದ ಭದ್ರತೆಯನ್ನು ಹೆಚ್ಚಿಸುತ್ತವೆ.
    • ವ್ಯಾಪಾರ:- 2023-24 ರ ಅವಧಿಯಲ್ಲಿ ದ್ವಿಪಕ್ಷೀಯ ವ್ಯಾಪಾರವು ಸುಮಾರು $23 ಬಿಲಿಯನ್‌ ಮೌಲ್ಯವನ್ನು ತಲುಪಿದೆ.
    • ಭಾರತದ 5ನೇ ಅತಿದೊಡ್ಡ ವಿದೇಶಿ ನೇರ ಹೂಡಿಕೆ (FDI) ಮೂಲ:- ಜಪಾನ್, ಭಾರತದ 5ನೇ ಅತಿದೊಡ್ಡ ವಿದೇಶಿ ನೇರ ಹೂಡಿಕೆ (FDI) ಮೂಲವಾಗಿದೆ.
    • ಬುಲೆಟ್ ರೈಲು: ಮುಂಬೈ-ಅಹಮದಾಬಾದ ನಡುವಿನ ಅತಿ ವೇಗದ ಬುಲೆಟ್ ರೈಲು ಯೋಜನೆಯು ಭಾರತ ಮತ್ತು ಜಪಾನ್ ನಡುವಿನ ಸಾರಿಗೆ ಸಹಕಾರಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ.
    • ಶುದ್ಧ ಇಂಧನ ಪಾಲುದಾರಿಕೆ, 2022):- ಜಲಜನಕ, ನವೀಕರಿಸಬಹುದಾದ ಇಂಧನಗಳು ಮತ್ತು ಹವಾಮಾನ ಸಹಕಾರ ಕ್ಷೇತ್ರಗಳನ್ನು ವಿಸ್ತರಿಸುತ್ತದೆ.
    • ಕ್ವಾಡ್:- ‘ಕ್ವಾಡ್’ ಸಮನ್ವಯವು ಸಾಮೂಹಿಕ ಕಡಲ(ಸಾಗರ) ಬದ್ಧತೆಗಳ ಮೂಲಕ ಇಂಡೋ-ಪೆಸಿಫಿಕ್ ವಲಯದಲ್ಲಿ ಸ್ಥಿರತೆಯನ್ನು ಖಾತ್ರಿಗೊಳಿಸುತ್ತದೆ.
    • ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಉಪಕ್ರಮ (SCRI):- ಇದು ನಿರ್ಣಾಯಕ ಸರಕುಗಳ ಪೂರೈಕೆಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
    • ವೇದಿಕೆಗಳು:- ಭಾರತ ಮತ್ತು ಜಪಾನ್ ರಾಷ್ಟ್ರಗಳು ಜಿ-20, ಅಂತಾರಾಷ್ಟ್ರೀಯ ಸೌರ ಒಕ್ಕೂಟ, CDRI ಮತ್ತು IPEF ಗಳಲ್ಲಿ ಸಹಕರಿಸುತ್ತಿದ್ದು, ಇದು ಬಹುಪಕ್ಷೀಯ ಆಡಳಿತವನ್ನು ಬಲಪಡಿಸುತ್ತದೆ.
    • ಬಾಹ್ಯಾಕಾಶ:- ಇಸ್ರೋ ಮತ್ತು ಜಾಕ್ಸಾ (JAXA) ದ ‘ಲುಪೆಕ್ಸ್’ ಮಿಷನ್, ಬಾಹ್ಯಾಕಾಶ ಪರಿಶೋಧನಾ ಕ್ಷೇತ್ರದಲ್ಲಿನ ಅತ್ಯಾಧುನಿಕ ಸಹಯೋಗಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.

    ವಿಶ್ವಸಂಸ್ಥೆಯ ಮುಕ್ತ ಸಾಗರಗಳ (ಹೈ ಸೀಸ್) ಒಪ್ಪಂದ

    Geography & Environment

    ಇದೀಗ ಸುದ್ದಿಯಲ್ಲಿದೆ: 

    • ವಿಶ್ವಸಂಸ್ಥೆ ಬೆಂಬಲಿತ ಅಂತರರಾಷ್ಟ್ರೀಯ ಜಲಪ್ರದೇಶಗಳ ಜೀವವೈವಿಧ್ಯ ಕುರಿತು ಒಪ್ಪಂದ ಜಾರಿಗೆ ಬಂದಿದೆ. ಇದನ್ನು ಅಧಿಕೃತವಾಗಿ ‘ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯ ಆಚೆಗಿನ ಜೀವವೈವಿಧ್ಯ (BBNJ) ಒಪ್ಪಂದ’ ಎಂದು ಕರೆಯಲಾಗುತ್ತದೆ. 
    • ಈ ಒಪ್ಪಂದವು ಮುಕ್ತ ಸಾಗರಗಳನ್ನು ಸಂರಕ್ಷಿಸಲು ಮತ್ತು ಸುಸ್ಥಿರವಾಗಿ ಬಳಸಲು, ವಿಶ್ವದ ಮೊದಲ ಕಾನೂನುಬದ್ಧ ಜಾಗತಿಕ ಚೌಕಟ್ಟನ್ನು ಸೃಷ್ಟಿಸಿದೆ.

    ಮುಕ್ತ ಸಾಗರಗಳು (High Seas) ಎಂದರೇನು?

    • ‘ಮುಕ್ತ ಸಾಗರಗಳು’ ಎಂದರೆ ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯ ಆಚೆಗಿನ, ಅಂದರೆ 200 ನಾಟಿಕಲ್ ಮೈಲಿಗಳಾಚೆಗಿನ (ವಿಶೇಷ ಆರ್ಥಿಕ ವಲಯಗಳು – EEZs) ಸಾಗರ ಪ್ರದೇಶಗಳಾಗಿವೆ.
    • ಇವು ಜಾಗತಿಕ ಸಾಗರದ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಮತ್ತು ಭೂ ಮೇಲ್ಮೈಯ ಅರ್ಧದಷ್ಟು ಭಾಗವನ್ನು ಆವರಿಸಿಕೊಂಡಿವೆ.
    • ಈ ಹಿಂದೆ, ಇವುಗಳ ನಿರ್ವಹಣೆಯು ಮುಖ್ಯವಾಗಿ UNCLOS ಅಡಿಯಲ್ಲಿನ ಸಾಮಾನ್ಯ ತತ್ವಗಳನ್ನು ಆಧರಿಸಿತ್ತು. ಹೀಗಾಗಿ, ಇಲ್ಲಿ ‘ಜೀವವೈವಿಧ್ಯ-ನಿರ್ದಿಷ್ಟ ನಿಯಂತ್ರಣ’ವು ಸೀಮಿತವಾಗಿತ್ತು.

    ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯ ಆಚೆಗಿನ ಜೀವವೈವಿಧ್ಯ (BBNJ) ಒಪ್ಪಂದದ ಬಗ್ಗೆ:

    • ಅಂಗೀಕಾರ ಮತ್ತು ಹಿನ್ನೆಲೆ:- ವಿಶ್ವಸಂಸ್ಥೆಯ ಆಶ್ರಯದಲ್ಲಿ ನಡೆದ, ‘ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯ ಆಚೆಗಿನ ಪ್ರದೇಶಗಳ ಸಾಗರ ಜೀವವೈವಿಧ್ಯದ ಕುರಿತಾದ ಅಂತರ-ಸರ್ಕಾರಿ ಸಮ್ಮೇಳನ’ದ ಮುಖಾಂತರ 2023 ರಲ್ಲಿ ಈ ಒಪ್ಪಂದವನ್ನು ಅಂಗೀಕರಿಸಲಾಯಿತು.
    • UNCLOS ಅಡಿಯಲ್ಲಿನ ಒಂದು ಒಪ್ಪಂದ:- ಇದು ಸಮುದ್ರಗಳ (ಕಡಲ) ಕಾನೂನಿನ ಮೇಲಿನ ವಿಶ್ವಸಂಸ್ಥೆಯ ಸಮಾವೇಶ’ದ (UNCLOS) ಅಡಿಯಲ್ಲಿನ ಒಂದು ಒಪ್ಪಂದವಾಗಿದೆ.
    • ಸಾಗರ ಜೀವವೈವಿಧ್ಯದ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆ:- ಇದನ್ನು ಸಾಮಾನ್ಯವಾಗಿ ‘ಮುಕ್ತ ಸಾಗರಗಳು’ ಎಂದು ಕರೆಯಲ್ಪಡುವ, ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯ ಆಚೆಗಿನ ಪ್ರದೇಶಗಳಲ್ಲಿ (ABNJ) ಖಚಿತಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
    • 83 ಸದಸ್ಯ ರಾಷ್ಟ್ರಗಳು:- ಭಾರತವು ಇದಕ್ಕೆ ಸಹಿ ಹಾಕಿದೆಯಾದರೂ, ಇನ್ನೂ BBNJ ಒಪ್ಪಂದವನ್ನು ದೃಢೀಕರಿಸಿಲ್ಲ.

    ಬೀಜ ಕಾಯ್ದೆ, 2026 ಮತ್ತು ರೈತರ ಮೇಲೆ ಇದರ ಪ್ರಭಾವ

    ಸಾಮಾನ್ಯ ಅಧ್ಯಯನ- 3/ಕೃಷಿ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು “ಬೀಜ ಕಾಯ್ದೆ, 2026” ರ ವೈಶಿಷ್ಟ್ಯಗಳು ಮತ್ತು ರೈತರ ಮೇಲೆ ಇದರ ಪ್ರಭಾವದ ಬಗ್ಗೆ ವಿವರಣೆ ನೀಡಿದರು. 
    • ಬೀಜ ಕಾಯ್ದೆ, 2026 ಅನ್ನು ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆಯಿದೆ.

    ಬೀಜ ಕಾಯ್ದೆ 2026 ರ ಪ್ರಮುಖ ಅಂಶಗಳು:

    • ದೇಶಾದ್ಯಂತ ಬೀಜದ ಮೂಲ ಪತ್ತೆಹಚ್ಚುವಿಕೆ:- ವಾಣಿಜ್ಯ ಉದ್ದೇಶದಿಂದ ಮಾರಾಟವಾಗುವ ಬಿತ್ತನೆ ಬೀಜದ ಪ್ರತಿ ಪ್ಯಾಕೆಟ್, ರೈತರು ಸ್ಕ್ಯಾನ್ ಮಾಡಬಹುದಾದ ಕ್ಯೂಆರ್ (QR) ಕೋಡ್ ಅನ್ನು ಹೊಂದಿರುತ್ತದೆ.
    • ಸ್ಕ್ಯಾನಿಂಗ್ ಈ ಕೆಳಗಿನ ಪ್ರಮುಖ ಮಾಹಿತಿಯನ್ನು ಹೊಂದಿರುತ್ತದೆ ಮತ್ತು ಒದಗಿಸುತ್ತದೆ:- 
    1. ಬೀಜವನ್ನು ಯಾರು ಉತ್ಪಾದಿಸಿದರು, 
    2. ಎಲ್ಲಿಂದ ಪಡೆಯಲಾಗಿದೆ
    3. ಯಾವ ಮಾರಾಟಗಾರರು ಅದನ್ನು ಮಾರಾಟ ಮಾಡಿದ್ದಾರೆ. 
    • ನೊಂದ ರೈತರಿಗೆ ತ್ವರಿತ ಪರಿಹಾರ:- ಅನಾಮಧೇಯ ಬೀಜ ಮಾರಾಟದ ನಿರ್ಮೂಲನೆ, ನಕಲಿ ಅಥವಾ ಕಳಪೆ ಗುಣಮಟ್ಟದ ಬೀಜಗಳನ್ನು ತ್ವರಿತವಾಗಿ ಪತ್ತೆಹಚ್ಚುವ ಗುರಿಯನ್ನು ಇದು ಹೊಂದಿದ್ದು, ನೊಂದ ರೈತರಿಗೆ ತ್ವರಿತ ಪರಿಹಾರಗಳನ್ನು ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ.
    • ಬೀಜ ಕಂಪನಿಗಳು ಮತ್ತು ಮಾರಾಟಗಾರರ ಕಡ್ಡಾಯ ನೋಂದಣಿ: ವಾಣಿಜ್ಯ ಉದ್ದೇಶದ ಬೀಜ ಉತ್ಪಾದಕರ, ವರ್ತಕರ ಮತ್ತು ವಿತರಕರ ಕಡ್ಡಾಯ ನೋಂದಣಿಯನ್ನು ಈ ಕಾಯ್ದೆಯು ಪ್ರಸ್ತಾಪಿಸುತ್ತದೆ.
    • ಕಳಪೆ ಮತ್ತು ನಕಲಿ ಬೀಜಗಳಿಗೆ ಕಠಿಣ ದಂಡಗಳು: ಉದ್ದೇಶಪೂರ್ವಕ ಉಲ್ಲಂಘನೆಗಳಿಗಾಗಿ, ಹೊಸ ಕಾಯ್ದೆಯು ₹30 ಲಕ್ಷದವರೆಗೆ ದಂಡ ಮತ್ತು ಸಂಭವನೀಯ ಜೈಲು ಶಿಕ್ಷೆಯನ್ನು ಪ್ರಸ್ತಾಪಿಸುತ್ತದೆ.
    • ಸಾಂಪ್ರದಾಯಿಕ ಬೀಜ ಪದ್ಧತಿಗಳ ಸಂರಕ್ಷಣೆ: ಸಮುದಾಯದೊಳಗೆ ಬೀಜಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ಹಂಚಿಕೊಳ್ಳುವುದು ಮತ್ತು ವಿನಿಮಯ ಮಾಡಿಕೊಳ್ಳುವಂತಹ ರೈತರ ಸಾಂಪ್ರದಾಯಿಕ ಪದ್ಧತಿಗಳನ್ನು ನಿರ್ಬಂಧಿಸುವುದಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಒತ್ತಿ ಹೇಳಿದ್ದಾರೆ.
    • ಹೊಸ ಕಾಯ್ದೆಯು ವಾಣಿಜ್ಯ ಉದ್ದೇಶದ ಬೀಜದ ಗುಣಮಟ್ಟದ ಮೇಲೆ ಮಾತ್ರ ಗಮನಹರಿಸುತ್ತದೆ, ಆದರೆ  ಸಾಂಪ್ರದಾಯಿಕ ಹಾಗೂ ಬ್ರ್ಯಾಂಡ್-ರಹಿತ ಬೀಜ ವ್ಯವಸ್ಥೆಗಳ ಮೇಲೆ ಗಮನ ಹರಿಸುವುದಿಲ್ಲ.
    • ಆಮದು ಮಾಡಿಕೊಂಡ ಬೀಜಗಳ ವೈಜ್ಞಾನಿಕ ಮೌಲ್ಯಮಾಪನ:- ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಮೊದಲು ಅವು ಪರಿಸರೀಯ, ಕೃಷಿ ಪದ್ಧತಿಯ ಮತ್ತು ಗುಣಮಟ್ಟದ ಮಾನದಂಡಗಳನ್ನು ಪೂರೈಸುವುದನ್ನು ಇದು ಖಚಿತಪಡಿಸುತ್ತದೆ.
    • ಸ್ಥಳೀಯ ರೈತರ ಸಂರಕ್ಷಣೆ:- ಭಾರತದ ಬೆಳೆಯುವ ಪರಿಸ್ಥಿತಿಗಳಿಗೆ ಸೂಕ್ತವಲ್ಲದ ಕಳಪೆ ವಿದೇಶಿ ಬೀಜಗಳಿಂದ ಇದು ಸ್ಥಳೀಯ ರೈತರನ್ನು ರಕ್ಷಿಸುತ್ತದೆ.
    • ಸಾಂಸ್ಥಿಕ ಕಾರ್ಯವಿಧಾನಗಳು ಮತ್ತು ಒಕ್ಕೂಟದ ಸಹಕಾರ:- ವಿವಿಧ ಪ್ರದೇಶಗಳಲ್ಲಿ ಬೀಜ ಪರೀಕ್ಷೆ, ನೋಂದಣಿ ಮತ್ತು ಕಾನೂನು ಜಾರಿ ಪ್ರಕ್ರಿಯೆಗಳಲ್ಲಿ ಸಮನ್ವಯವನ್ನು ಸುಧಾರಿಸಲು, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಲು ಈ ಕಾಯ್ದೆಯು ಅವಕಾಶ ಕಲ್ಪಿಸುತ್ತದೆ.
    • ಕೃಷಿಯು ರಾಜ್ಯ ಪಟ್ಟಿಯ ವಿಷಯವಾಗಿದೆ:- ಭಾರತೀಯ ಸಂವಿಧಾನದ 7ನೇ ಅನುಸೂಚಿಯ ಅಡಿಯಲ್ಲಿ ರಾಜ್ಯ ಪಟ್ಟಿ ಇದೆ. ಆದ್ದರಿಂದ, ಈ ಕಾಯ್ದೆಯನ್ನು ಅನುಷ್ಠಾನಗೊಳಿಸುವಲ್ಲಿ ಮತ್ತು ಜಾರಿಗೊಳಿಸುವಲ್ಲಿ ಕೇಂದ್ರದ ಜೊತೆಗೆ ರಾಜ್ಯಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

    ತಿರುವಳ್ಳುವರ್ ದಿನ

    ಸಾಮಾನ್ಯ ಅಧ್ಯಯನ- 1/ಇತಿಹಾಸ

    ಇದೀಗ ಸುದ್ದಿಯಲ್ಲಿದೆ: 

    • ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿರುವಳ್ಳುವರ್ ಅವರ ಸರ್ವಕಾಲಿಕ ಕೃತಿಗಳು ಮತ್ತು ಆದರ್ಶಗಳ ಶಾಶ್ವತ ಪ್ರಭಾವವನ್ನು ಗುರುತಿಸಿ, ಅವರಿಗೆ ಗೌರವ ನಮನ ಸಲ್ಲಿಸಿದರು.

    ತಿರುವಳ್ಳುವರ್ ದಿನದ ಕುರಿತು:

    • ಮೊದಲ ಬಾರಿಗೆ ಆಚರಣೆ:- ಮೇ 17 ಮತ್ತು 18, 1935 ರಂದು.
    • ಪ್ರಸ್ತುತ ಸಮಯದಲ್ಲಿ, ಇದನ್ನು ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಜನವರಿ 15 ಅಥವಾ 16 ರಂದು ‘ಪೊಂಗಲ್’ ಆಚರಣೆಯ ಭಾಗವಾಗಿ ಆಚರಿಸಲಾಗುತ್ತದೆ.

    ‘ತಿರುವಳ್ಳುವರ್’ ಅವರ ಬಗ್ಗೆ:

    • ಶ್ರೇಷ್ಠ ತಮಿಳು ಕವಿ:- ಸಾಮಾನ್ಯವಾಗಿ ‘ವಳ್ಳುವರ್’ ಎಂದು ಕರೆಯಲ್ಪಡುವ ತಿರುವಳ್ಳುವರ್ ಅವರು, ಒಬ್ಬ ಪ್ರಸಿದ್ಧ ತಮಿಳು ಕವಿ ಮತ್ತು ತತ್ವಜ್ಞಾನಿಯಾಗಿದ್ದರು.
    • ತಿರುಕ್ಕುರಳ್ (ದ್ವಿಪದಿಗಳ ಸಂಗ್ರಹ):- ಇವರು ನೀತಿ, ರಾಜಕೀಯ, ಆರ್ಥಿಕತೆ ಮತ್ತು ಪ್ರೀತಿಯ ಕುರಿತಾದ ದ್ವಿಪದಿಗಳ ಸಂಗ್ರಹವಾದ ‘ತಿರುಕ್ಕುರಳ್’ ಕೃತಿಯ ಕರ್ತೃ ಎಂದು ಪ್ರಸಿದ್ಧರಾಗಿದ್ದಾರೆ.

    ಜಲ್ಲಿಕಟ್ಟು

    ಸಾಮಾನ್ಯ ಅಧ್ಯಯನ- 1/ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇತ್ತೀಚಿಗೆ ಅಲಂಗನಲ್ಲೂರ್‌ನಲ್ಲಿ ನಡೆದ ಜಲ್ಲಿಕಟ್ಟು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

    ಜಲ್ಲಿಕಟ್ಟು ಕ್ರೀಡೆಯ ಬಗ್ಗೆ:

    • ಇದನ್ನು ‘ಏರುತಝುವ್ವುತಲ್’ ಎಂತಲೂ ಕರೆಯಲಾಗುತ್ತದೆ.
    • ಗೂಳಿ ಪಳಗಿಸುವ ಕ್ರೀಡೆಯಾಗಿದೆ:- ತಮಿಳುನಾಡಿನಲ್ಲಿ ಸುಗ್ಗಿ ಹಬ್ಬವಾದ ‘ಪೊಂಗಲ್’ ಆಚರಣೆಯ ಭಾಗವಾಗಿ ಇದನ್ನು ಸಾಂಪ್ರದಾಯಿಕವಾಗಿ ಆಡಲಾಗುತ್ತದೆ.
    • ಅಯರ್‌ರು ಆಡುತ್ತಿದ್ದ ಕ್ರೀಡೆ:- ಈ ಗೂಳಿ ಕಾಳಗದ ಇತಿಹಾಸವು ಕ್ರಿ. ಪೂ. 400-100 ರಷ್ಟು ಹಳೆಯದಾಗಿದ್ದು, ಆ ಸಮಯದಲ್ಲಿ ಭಾರತದ ಜನಾಂಗೀಯ ಗುಂಪಾದ ‘ಅಯರ್‌ರು’ ಇದನ್ನು ಆಡುತ್ತಿದ್ದರು.
    • ಜಲ್ಲಿ + ಕಟ್ಟು:- ಎಂಬ ಎರಡು ಪದಗಳಿಂದ ಬಂದಿದೆ. ‘ಜಲ್ಲಿ’ ಎಂದರೆ ಬೆಳ್ಳಿ ಮತ್ತು ಚಿನ್ನದ ನಾಣ್ಯಗಳು ಮತ್ತು ‘ಕಟ್ಟು’ ಎಂದರೆ ಕಟ್ಟಿರುವುದು.
    • ಈ ಹಬ್ಬದಲ್ಲಿ, ಜನರ ಗುಂಪಿನ ನಡುವೆ ಗೂಳಿಯನ್ನು ಮುಕ್ತವಾಗಿ ಬಿಡಲಾಗುತ್ತದೆ ಮತ್ತು ಅದನ್ನು ಯಾರು ಪಳಗಿಸುತ್ತಾರೋ ಅವರು ಅದರ ಕೊಂಬಿಗೆ ಕಟ್ಟಿದ ನಾಣ್ಯಗಳನ್ನು ಬಹುಮಾನವಾಗಿ ಪಡೆಯುತ್ತಾರೆ.
    • ಈ ಕ್ರೀಡೆಯಲ್ಲಿ ಭಾಗವಹಿಸುವ ಜನರು ಪ್ರಾಣಿಯನ್ನು ತಡೆಯಲು ಅದರ ಡುಬ್ಬವನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ ಅಥವಾ ಕೆಲವೊಮ್ಮೆ ಅವರು ಗೂಳಿಯೊಂದಿಗೆ ಓಡುತ್ತಾರೆ.
    • ‘ಪುಲಿಕುಲಂ’ ಅಥವಾ ‘ಕಾಂಗಯಂ’ ತಳಿಯ ಹೋರಿಗಳ ಬಳಕೆ:- ಈ ಹಬ್ಬವು ರಾಜ್ಯದ ಸಾಂಸ್ಕೃತಿಕ ಪ್ರವಾಸೋದ್ಯಮದ ಭಾಗವಾಗಿದೆ.
    • ಈ ಕ್ರೀಡೆಯ ವಿವಿಧ ಪ್ರಕಾರಗಳು:- ‘ವಾಡಿ ಮಂಜುವಿರಟ್ಟು’, ‘ವೇಲಿ ವಿರಟ್ಟು’ ಮತ್ತು ‘ವಟಂ ಮಂಜುವಿರಟ್ಟು’.

    ಪ್ರಮುಖ ಕಳವಳಗಳು:

    • ಪ್ರಾಣಿ ಹಿಂಸೆ ಮತ್ತು ನರಳುವಿಕೆ:- ಗೂಳಿಗಳನ್ನು ಪ್ರಚೋದಿಸಲು ಮದ್ಯ, ಕೋಲುಗಳು, ಚಾಕುಗಳು ಮತ್ತು ಮೆಣಸಿನ ಪುಡಿಯನ್ನು ಕಣ್ಣುಗಳಿಗೆ ಹಾಕಲಾಗುತ್ತದೆ. ತರಬೇತಿ ಮತ್ತು ಪಂದ್ಯದ ಸಮಯದಲ್ಲಿ ಬಾಲವನ್ನು ತಿರುಚುವುದು ಮತ್ತು ದೈಹಿಕ ದೌರ್ಜನ್ಯವು ಗೂಳಿಗಳಿಗೆ ವಿಪರೀತ ಒತ್ತಡ, ನೋವು ಮತ್ತು ಗಂಭೀರ ಗಾಯಗಳನ್ನು ಉಂಟುಮಾಡುತ್ತದೆ.
    • ಮಾನವ ಗಾಯಗಳು ಮತ್ತು ಸಾವುಗಳು:- ಈ ಪಂದ್ಯಾವಳಿಯು ಗಮನಾರ್ಹ ಅಪಾಯಗಳನ್ನು ತಂದೊಡ್ಡುತ್ತದೆ. ಹಿಂದಿನ ವರ್ಷಗಳಲ್ಲಿ ಸ್ಪರ್ಧಿಗಳು ಮತ್ತು ಗೂಳಿಗಳು ಇಬ್ಬರಿಗೂ ಹಲವಾರು ಗಾಯಗಳು ಮತ್ತು ಸಾವುಗಳು ಸಂಭವಿಸಿರುವುದು ವರದಿಯಾಗಿದೆ.
    • ನೈತಿಕ ಪರಿಗಣನೆಗಳು: ಸಾಂಸ್ಕೃತಿಕ ಮಹತ್ವ ಏನೇ ಇದ್ದರೂ, ಮನರಂಜನೆಗಾಗಿ ಗೂಳಿಗಳನ್ನು ಬಳಸುವುದು ಅನೈತಿಕವಾಗಿದೆ ಎಂದು ಪ್ರಾಣಿ ಹಕ್ಕುಗಳ ಸಂಘಗಳು ವಾದಿಸುತ್ತವೆ. ಈ ಆಚರಣೆಯು ಪ್ರಾಣಿಗಳನ್ನು ಶೋಷಿಸುತ್ತದೆ ಮತ್ತು ಅವುಗಳಿಗೆ ಆಘಾತವನ್ನು ಉಂಟುಮಾಡುತ್ತದೆ.
    • 2023 ರಲ್ಲಿ ಸರ್ವೋಚ್ಚ ನ್ಯಾಯಾಲಯವು, ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (PCA) ಕಾಯ್ದೆ, 1960’ ಕ್ಕೆ ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದ ಶಾಸಕಾಂಗಗಳು ಮಾಡಿದ ತಿದ್ದುಪಡಿಗಳನ್ನು ಎತ್ತಿಹಿಡಿದಿದೆ. ಇದು ಜಲ್ಲಿಕಟ್ಟು, ಕಂಬಳ ಮತ್ತು ಎತ್ತಿನ ಗಾಡಿ ಓಟದಂತಹ ಗೂಳಿ ಪಳಗಿಸುವ ಕ್ರೀಡೆಗಳಿಗೆ ಅನುಮತಿ ನೀಡಿದೆ.
  • ‘ಸ್ಟಾರ್ಟ್-ಅಪ್ ಇಂಡಿಯಾ’ ಉಪಕ್ರಮಕ್ಕೆ ಒಂದು ದಶಕ | 2025: ದಾಖಲೆಯ ಅತ್ಯಂತ ಉಷ್ಣತೆಯ ‘ಲಾ ನಿನಾ’ ವರ್ಷ | ‘ವುಮನಿಯಾ’ (Womaniya) ಉಪಕ್ರಮ | ಬುಡಕಟ್ಟು ವೈದ್ಯರಿಗಾಗಿ ಭಾರತದ ಮೊದಲ ರಾಷ್ಟ್ರೀಯ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ | ಕಾಮನ್‌ವೆಲ್ತ್ ರಾಷ್ಟ್ರಗಳ ಸಭಾಧ್ಯಕ್ಷರ ಮತ್ತು ಪೀಠಾಸೀನ ಅಧಿಕಾರಿಗಳ (CSPOC) 28ನೇ ಸಮ್ಮೇಳನ | ಗುಜರಾತ್‌ನಲ್ಲಿ- ಅತ್ಯಂತ ಮಾರಕ ರೋಗಕಾರಕಗಳಿಗಾಗಿ ಭಾರತದ ಮೊದಲ ಸರ್ಕಾರಿ ಅನುದಾನಿತ BSL-4 ಪ್ರಯೋಗಾಲಯ

    ‘ಸ್ಟಾರ್ಟ್-ಅಪ್ ಇಂಡಿಯಾ’ ಉಪಕ್ರಮಕ್ಕೆ ಒಂದು ದಶಕ

    ಸಾಮಾನ್ಯ ಅಧ್ಯಯನ-3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ರಾಷ್ಟ್ರೀಯ ಸ್ಟಾರ್ಟ್-ಅಪ್ (ನವೋದ್ಯಮ) ದಿನವಾದ ಜನವರಿ 16 ರಂದು, ‘ಸ್ಟಾರ್ಟ್-ಅಪ್ ಇಂಡಿಯಾ’ ಉಪಕ್ರಮವು ಒಂದು ದಶಕವನ್ನು ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಿದರು.

    ಸ್ಟಾರ್ಟ್-ಅಪ್ ಇಂಡಿಯಾ ಉಪಕ್ರಮದ ಬಗ್ಗೆ:

    • ಪ್ರಾರಂಭ:- ಜನವರಿ 16, 2016.
    • ಉದ್ದೇಶ:- ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಹೂಡಿಕೆ ಆಧಾರಿತ ಬೆಳವಣಿಗೆಯನ್ನು ಸಾಧ್ಯವಾಗಿಸುವುದು.

    ಭಾರತದ ನವೋದ್ಯಮ (ಸ್ಟಾರ್ಟ್-ಅಪ್) ಪರಿಸರ ವ್ಯವಸ್ಥೆಯ ಬಗ್ಗೆ:

    • 2025ರ ವೇಳೆಗೆ 2 ಲಕ್ಷಕ್ಕೂ ಹೆಚ್ಚು ನವೋದ್ಯಮಗಳನ್ನು ಹೊಂದುವ ಮೂಲಕ, ಭಾರತವು ವಿಶ್ವದ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ತ್ವರಿತವಾಗಿ ರೂಪುಗೊಂಡಿದೆ.
    • ಭಾರತವು ವಿಶ್ವದಲ್ಲೇ 3ನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ.
    • ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ದೆಹಲಿ-ಎನ್‌ಸಿಆರ್ (ರಾಷ್ಟ್ರ ರಾಜಧಾನಿ ಪ್ರದೇಶ)ನಂತಹ ಪ್ರಮುಖ ಕೇಂದ್ರಗಳು ಈ ಪರಿವರ್ತನೆಯ ಮುಂಚೂಣಿಯಲ್ಲಿವೆ.
    • ಭಾರತವು $350 ಬಿಲಿಯನ್‌ಗೂ ಅಧಿಕ ಮೌಲ್ಯವನ್ನು ಹೊಂದಿರುವ 120 ಕ್ಕೂ ಹೆಚ್ಚು ಯುನಿಕಾರ್ನ್‌ಗಳನ್ನು ಹೊಂದಿದೆ.

    ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO)ಯ – ಜಾಗತಿಕ ನಾವೀನ್ಯತೆ ಸೂಚ್ಯಂಕ (GII), 2025 ರ ಶ್ರೇಯಾಂಕ:

    • ಇದು ಕಾರ್ಯಕ್ಷಮತೆಯ ಮಾನದಂಡಗಳನ್ನು ಒದಗಿಸುತ್ತದೆ ಮತ್ತು ಸುಮಾರು 140 ಆರ್ಥಿಕತೆಗಳನ್ನು ಅವುಗಳ ನಾವೀನ್ಯತೆ ಪರಿಸರ ವ್ಯವಸ್ಥೆಗಳ ಆಧಾರದ ಮೇಲೆ ಶ್ರೇಣೀಕರಿಸುತ್ತದೆ.
    • ಭಾರತವು 2020 ರಲ್ಲಿನ 48 ನೇ ಸ್ಥಾನದಿಂದ 2025 ರಲ್ಲಿ 38 ನೇ ಸ್ಥಾನಕ್ಕೆ ಸ್ಥಿರವಾದ ಏರಿಕೆಯನ್ನು ಕಂಡಿದೆ.

    2025: ದಾಖಲೆಯ ಅತ್ಯಂತ ಉಷ್ಣತೆಯ ‘ಲಾ ನಿನಾ’ ವರ್ಷ

    ಸಾಮಾನ್ಯ ಅಧ್ಯಯನ-1/ಭೂಗೋಳಶಾಸ್ತ್ರ/ಸಾಮಾನ್ಯ ಅಧ್ಯಯನ-3/ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಹೊಸ ವರದಿಯೊಂದರ ಪ್ರಕಾರ, 2025 ದಾಖಲಾದ 3 ನೇ ಅತ್ಯಂತ ಉಷ್ಣತೆಯ ವರ್ಷ ಮತ್ತು ಇತಿಹಾಸದಲ್ಲೇ ಅತ್ಯಂತ ಉಷ್ಣತೆಯ ‘ಲಾ ನಿನಾ’ ವರ್ಷವಾಗಿದೆ.

    “ಲಾ ನಿನಾ” ಬಗ್ಗೆ:

    • ಇದೊಂದು ಪೆಸಿಫಿಕ್ ಮಹಾಸಾಗರದ ಹವಾಮಾನ ಮಾದರಿಯಾಗಿದ್ದು, ಇದರಲ್ಲಿ ಬೆಚ್ಚಗಿನ ಸಾಗರದ ನೀರು ಮತ್ತು ಮೋಡಗಳು ಪಶ್ಚಿಮದ ಕಡೆಗೆ ಸ್ಥಳಾಂತರಗೊಳ್ಳುತ್ತವೆ.
    • ಸಾಮಾನ್ಯಕ್ಕಿಂತ ಭಾರೀ ಮಳೆ:- ಈ ಪ್ರಕ್ರಿಯೆಯು ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದಂತಹ ಪ್ರದೇಶಗಳಲ್ಲಿ ಭಾರೀ ಮಳೆಗೆ ಕಾರಣವಾಗುತ್ತದೆ.
    • ಸಾಮಾನ್ಯಕ್ಕಿಂತ ಹೆಚ್ಚು ಶುಷ್ಕ ಪರಿಸ್ಥಿತಿ:- ಇದಕ್ಕೆ ವ್ಯತಿರಿಕ್ತವಾಗಿ, ಅಮೆರಿಕದ ನೈಋತ್ಯ ಭಾಗದ ಪ್ರದೇಶಗಳು ಈ ಪರಿಸ್ಥಿತಿಗಳನ್ನು ಅನುಭವಿಸುತ್ತವೆ.

    ಭಾರತದ ಮೇಲೆ El-Nino ಮತ್ತು La-Nina ಪ್ರಭಾವಗಳು:

    • ‘ಎಲ್ ನಿನೊ’ ಸಾಮಾನ್ಯವಾಗಿ ಕಡಿಮೆ ಮಳೆ ಮತ್ತು ಹೆಚ್ಚಿನ ತಾಪಮಾನಕ್ಕೆ ಕಾರಣವಾಗುತ್ತದೆ.
    • ‘ಲಾ ನಿನಾ’ ಹೆಚ್ಚಿನ ಮಳೆ ಮತ್ತು ತಂಪಾದ ತಾಪಮಾನವನ್ನು ತರುತ್ತದೆ.

    ‘ವುಮನಿಯಾ’ (Womaniya) ಉಪಕ್ರಮ

    ಸಾಮಾನ್ಯ ಅಧ್ಯಯನ-1/ಮಹಿಳಾ ಸಬಲೀಕರಣ

    ಇದೀಗ ಸುದ್ದಿಯಲ್ಲಿದೆ:

    • ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM) ಅಡಿಯಲ್ಲಿ ಜಾರಿಗೊಳಿಸಲಾದ ‘ವುಮೆನಿಯಾ’ ಉಪಕ್ರಮವು, ತನ್ನ ಅನುಷ್ಠಾನದ 7 ವರ್ಷಗಳನ್ನು ಪೂರೈಸಿದೆ.

    ‘ವುಮೆನಿಯಾ’ (Womaniya) ಉಪಕ್ರಮದ ಬಗ್ಗೆ:

    • ಪ್ರಾರಂಭ:- 2019
    • ಉದ್ದೇಶ:- ಖರೀದಿದಾರರೊಂದಿಗೆ ನೇರ, ಪಾರದರ್ಶಕ ಮತ್ತು ಸಂಪೂರ್ಣ ಡಿಜಿಟಲ್ ಸಂಪರ್ಕವನ್ನು ಕಲ್ಪಿಸುವ ಮೂಲಕ, ಮಧ್ಯವರ್ತಿಗಳನ್ನು ಹಾಗೂ ಪ್ರವೇಶಕ್ಕಿರುವ ಅಡೆತಡೆಗಳನ್ನು ನಿವಾರಿಸಿ, ಮಹಿಳಾ ಉದ್ಯಮಿ ಮತ್ತು ಸ್ವಸಹಾಯ ಸಂಘಗಳಿಗೆ ಸರ್ಕಾರಿ ಮಾರುಕಟ್ಟೆಗಳಲ್ಲಿ ಪ್ರವೇಶವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
    • ಮಹತ್ವ:- ಸಾರ್ವಜನಿಕ ಸಂಗ್ರಹಣೆಯಲ್ಲಿ ಮಹಿಳೆಯರ ನೇತೃತ್ವದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಭಾಗವಹಿಸುವಿಕೆಯನ್ನು ಬಲಪಡಿಸುವ ಗುರಿಯನ್ನು ಇದು ಹೊಂದಿದೆ.

    ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM)ನ ಬಗ್ಗೆ:

    • ಸ್ಥಾಪನೆ:- 2016.
    • ಆನ್‌ಲೈನ್ ಮಾರುಕಟ್ಟೆ ವೇದಿಕೆ:- ಇದರಲ್ಲಿ ಸರ್ಕಾರಿ ಸಚಿವಾಲಯಗಳು, ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳು (PSU) ಸರಕು ಮತ್ತು ಸೇವೆಗಳನ್ನು ಖರೀದಿಸಲು ಅನುಕೂಲವಾಗುತ್ತದೆ. 
    • ಇದನ್ನು ‘ಭಾರತದ ರಾಷ್ಟ್ರೀಯ ಸಂಗ್ರಹಣಾ ಪೋರ್ಟಲ್’ ಎಂತಲೂ ಕರೆಯಲಾಗುತ್ತದೆ
    • ಅಭಿವೃದ್ಧಿಪಡಿಸಿದವರು:- ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಷ್ಟ್ರೀಯ ಇ-ಆಡಳಿತ  ವಿಭಾಗದ ತಾಂತ್ರಿಕ ಬೆಂಬಲದೊಂದಿಗೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸರಬರಾಜು ಮತ್ತು ವಿಲೇವಾರಿ ಮಹಾನಿರ್ದೇಶನಾಲಯ.
    • ಕಾರ್ಯನಿರ್ವಹಣೆ:- ಇದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸರಬರಾಜು ಮತ್ತು ವಿಲೇವಾರಿ ಮಹಾನಿರ್ದೇಶನಾಲಯ (DGS&D).
    • ಮಹತ್ವ:- GeM ಸಂಪೂರ್ಣವಾಗಿ ಕಾಗದರಹಿತ, ನಗದುರಹಿತ ಮತ್ತು ವ್ಯವಸ್ಥೆ ಚಾಲಿತ ಇ-ಮಾರುಕಟ್ಟೆಯಾಗಿದ್ದು, ಇದು ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ ಸಾಮಾನ್ಯ ಬಳಕೆಯ ಸರಕು ಮತ್ತು ಸೇವೆಗಳ ಖರೀದಿಯನ್ನು ಸಾಧ್ಯವಾಗಿಸುತ್ತದೆ.

    ಬುಡಕಟ್ಟು ವೈದ್ಯರಿಗಾಗಿ ಭಾರತದ ಮೊದಲ ರಾಷ್ಟ್ರೀಯ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ

    ಸಾಮಾನ್ಯ ಅಧ್ಯಯನ – 2/ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ವ್ಯಾಪ್ತಿಯನ್ನು ಬಲಪಡಿಸುವ ಉದ್ದೇಶದಿಂದ, ಬುಡಕಟ್ಟು ವ್ಯವಹಾರಗಳ ಸಚಿವಾಲಯವು (MoTA) ‘ಬುಡಕಟ್ಟು ವೈದ್ಯರಿಗಾಗಿ ಭಾರತದ ಮೊದಲ ರಾಷ್ಟ್ರೀಯ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ’ವನ್ನು ಆಯೋಜಿಸುತ್ತಿದೆ.

    ‘ಬುಡಕಟ್ಟು ವೈದ್ಯರಿಗಾಗಿ ಭಾರತದ ಮೊದಲ ರಾಷ್ಟ್ರೀಯ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ’ದ ಬಗ್ಗೆ:

    • ಸಮುದಾಯ ಮಟ್ಟದ ವಿಶ್ವಾಸಾರ್ಹ ಪಾಲುದಾರ:- ಬುಡಕಟ್ಟು ಮತ್ತು ಸ್ಥಳೀಯ ವೈದ್ಯರನ್ನು ಭಾರತದ ಸಾರ್ವಜನಿಕ ಆರೋಗ್ಯ ಪರಿಸರ ವ್ಯವಸ್ಥೆಯೊಳಗೆ, ಸಮುದಾಯ ಮಟ್ಟದ ವಿಶ್ವಾಸಾರ್ಹ ಪಾಲುದಾರರನ್ನಾಗಿ ಗುರುತಿಸುವುದು ಮತ್ತು ಅವರನ್ನು ಮುಖ್ಯವಾಹಿನಿಯೊಂದಿಗೆ ಸಂಯೋಜಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
    • ಈ ವೈದ್ಯರು ಆಳವಾದ ಜನಾಂಗೀಯ-ಔಷಧೀಯ ಜ್ಞಾನವನ್ನು ಹೊಂದಿರುತ್ತಾರೆ. ಇವರು ಸಮುದಾಯದ ಜನರಿಗೆ ಸುಲಭವಾಗಿ ಲಭ್ಯವಿರುತ್ತಾರೆ ಮತ್ತು ಆರೋಗ್ಯ ಸೇವೆಗಳಿಗಾಗಿ ಜನರು ಆಶ್ರಯಿಸುವ ‘ಮೊದಲ ಸಂಪರ್ಕ ಬಿಂದುಗಳಾಗಿ’ ಕಾರ್ಯನಿರ್ವಹಿಸುತ್ತಾರೆ..
    • ಅನುಷ್ಠಾನ:- “ಪ್ರಾಜೆಕ್ಟ್ ದೃಷ್ಟಿ” (DRISTI)ಯ ಅಡಿಯಲ್ಲಿ ಭಾರತದ ಮೊದಲ ರಾಷ್ಟ್ರೀಯ ಬುಡಕಟ್ಟು ಆರೋಗ್ಯ ವೀಕ್ಷಣಾಲಯವಾದ, ‘ಭಾರತ್ ಬುಡಕಟ್ಟು ಆರೋಗ್ಯ ವೀಕ್ಷಣಾಲಯ’ (B-THO)ವನ್ನು ಸ್ಥಾಪಿಸುವ ಸಲುವಾಗಿ, ICMR – ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ (MoTA) ನಡುವೆ ತಿಳುವಳಿಕಾ ಒಡಂಬಡಿಕೆಗೆ (MoU) ಸಹಿ ಹಾಕಲಾಗುವುದು.

    ಕಾಮನ್‌ವೆಲ್ತ್ ರಾಷ್ಟ್ರಗಳ ಸಭಾಧ್ಯಕ್ಷರ ಮತ್ತು ಪೀಠಾಸೀನ ಅಧಿಕಾರಿಗಳ (CSPOC) 28ನೇ ಸಮ್ಮೇಳನ

    ಸಾಮಾನ್ಯ ಅಧ್ಯಯನ – 2/ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಸಂವಿಧಾನ ಸದನ’ದಲ್ಲಿ ಆಯೋಜಿಸಲಾಗಿದ್ದ “CSPOC- ಕಾಮನ್‌ವೆಲ್ತ್ ರಾಷ್ಟ್ರಗಳ ಸಭಾಧ್ಯಕ್ಷರ (Speakers) ಮತ್ತು ಪೀಠಾಸೀನ ಅಧಿಕಾರಿಗಳ (Presiding Officers) 28ನೇ ಸಮ್ಮೇಳನ”ವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವು ತನ್ನ ವೈವಿಧ್ಯತೆಯನ್ನು ಹೇಗೆ ಪ್ರಜಾಸತ್ತಾತ್ಮಕ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡಿದೆ ಎಂಬುದನ್ನು ಎತ್ತಿ ತೋರಿಸಿದರು.

    ಈ 28ನೇ ಸಮ್ಮೇಳನದ ಬಗ್ಗೆ:

    • ಈ ಸಮ್ಮೇಳನದಲ್ಲಿ 42 ಕಾಮನ್‌ವೆಲ್ತ್ ರಾಷ್ಟ್ರಗಳನ್ನು ಪ್ರತಿನಿಧಿಸುವ 61 ಸಭಾಧ್ಯಕ್ಷರು ಮತ್ತು ಪೀಠಾಸೀನ ಅಧಿಕಾರಿಗಳು ಭಾಗವಹಿಸಿದ್ದರು.
    • ಉದ್ದೇಶ:- ಸಂಸದೀಯ ಪ್ರಜಾಪ್ರಭುತ್ವದ ವಿವಿಧ ಸ್ವರೂಪಗಳ ಕುರಿತು ಜ್ಞಾನ ಮತ್ತು ತಿಳುವಳಿಕೆಯನ್ನು ಉತ್ತೇಜಿಸುವುದು ಹಾಗೂ ಸಂಸದೀಯ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವುದು.
    • ಅಧ್ಯಕ್ಷತೆ:- ಲೋಕಸಭೆಯ ಸಭಾಧ್ಯಕ್ಷರಾದ ‘ಓಂ ಬಿರ್ಲಾ’ ಅವರು ಈ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.

    ಕಾಮನ್‌ವೆಲ್ತ್ ರಾಷ್ಟ್ರಗಳ ಬಗ್ಗೆ:

    • ಸದಸ್ಯ ರಾಷ್ಟ್ರಗಳು:- 56 ಸ್ವತಂತ್ರ ಸದಸ್ಯ ರಾಷ್ಟ್ರಗಳ ಸ್ವಯಂಪ್ರೇರಿತ ಒಕ್ಕೂಟವಾಗಿದೆ. 
    • ಈ ಸದಸ್ಯ ರಾಷ್ಟ್ರಗಳನ್ನು 5 ಪ್ರದೇಶವಾರು ಸದಸ್ಯ ರಾಷ್ಟ್ರಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ, 
    1. ಆಫ್ರಿಕಾ (21), ಏಷ್ಯಾ (8), ಕೆರಿಬಿಯನ್ ಮತ್ತು ಅಮೆರಿಕ (13), ಯುರೋಪ್ (3), ಮತ್ತು ಪೆಸಿಫಿಕ್ (11).
    2. ಈ ದೇಶಗಳು ಒಟ್ಟಾಗಿ ಸುಮಾರು 2.7 ಬಿಲಿಯನ್ ಜನಸಂಖ್ಯೆಯನ್ನು ಪ್ರತಿನಿಧಿಸುತ್ತವೆ ಮತ್ತು ಇದು ವಿಶ್ವದ ಒಟ್ಟು ಜನಸಂಖ್ಯೆಯ ಸುಮಾರು ಮೂರನೇ ಒಂದರಷ್ಟು ಭಾಗವಾಗಿದೆ.
    • ಯಾವುದೇ ರಾಷ್ಟ್ರ ಸೇರ್ಪಡೆಯಾಗಲಬಹುದು:- ಇಲ್ಲಿನ ಬಹುಪಾಲು ಸದಸ್ಯ ರಾಷ್ಟ್ರಗಳು ಬ್ರಿಟಿಷ್ ಸಾಮ್ರಾಜ್ಯದ ಹಿಂದಿನ ಪ್ರಾಂತ್ಯಗಳಾಗಿದ್ದರೂ, ಒಕ್ಕೂಟದ ಮೌಲ್ಯಗಳಿಗೆ ಬದ್ಧವಾಗಿರುವ ಯಾವುದೇ ರಾಷ್ಟ್ರವು ಇದಕ್ಕೆ ಸೇರ್ಪಡೆಯಾಗಲು ಅರ್ಜಿ ಸಲ್ಲಿಸಬಹುದಾಗಿದೆ.

    ಕಾಮನ್‌ವೆಲ್ತ್ ರಾಷ್ಟ್ರಗಳ ಪ್ರಮುಖ ಸಂಗತಿಗಳು ಮತ್ತು ಆಡಳಿತ:

    • ಕಾಮನ್‌ವೆಲ್ತ್ ಮುಖ್ಯಸ್ಥರು:- ಕಿಂಗ್ ಚಾರ್ಲ್ಸ್ III ಅವರು ಈ ಒಕ್ಕೂಟದ ಸಾಂಕೇತಿಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಾರೆ.
    • ಮಹಾಕಾರ್ಯದರ್ಶಿ:- ಷಿರ್ಲಿ ಅಯೋರ್ಕರ್ ಬೋಚ್ವೆ
    • ಬ್ರಿಟಿಷ್ ಇತಿಹಾಸ ಹೊಂದಿರದ ರಾಷ್ಟ್ರಗಳು:- ಮೊಜಾಂಬಿಕ್, ರುವಾಂಡಾ, ಗ್ಯಾಬನ್ ಮತ್ತು ಟೋಗೊ ರಾಷ್ಟ್ರಗಳು, ಯುನೈಟೆಡ್ ಕಿಂಗ್‌ಡಮ್‌ನೊಂದಿಗೆ ಯಾವುದೇ ಐತಿಹಾಸಿಕ ಸಂಪರ್ಕವನ್ನು ಹೊಂದಿರದಿದ್ದರೂ ಒಕ್ಕೂಟಕ್ಕೆ ಸೇರ್ಪಡೆಗೊಂಡಿವೆ.
    • ಅತಿದೊಡ್ಡ ಮತ್ತು ಚಿಕ್ಕ ರಾಷ್ಟ್ರಗಳು:- ಭಾರತವು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸದಸ್ಯ ರಾಷ್ಟ್ರವಾಗಿದ್ದರೆ, ನೌರು ಮತ್ತು ತುವಾಲು ಅತ್ಯಂತ ಚಿಕ್ಕ ರಾಷ್ಟ್ರಗಳಾಗಿವೆ.
    • ಕಾಮನ್‌ವೆಲ್ತ್ ಸರ್ಕಾರದ ಮುಖ್ಯಸ್ಥರ ಸಭೆ (CHOGM):- ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಮುಂದಿನ ಸಭೆಯು 2026 ರ ಅಂತ್ಯದಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ನಡೆಯಲಿದೆ.

    ಗುಜರಾತ್‌ನಲ್ಲಿ- ಅತ್ಯಂತ ಮಾರಕ ರೋಗಕಾರಕಗಳಿಗಾಗಿ ಭಾರತದ ಮೊದಲ ಸರ್ಕಾರಿ ಅನುದಾನಿತ BSL-4 ಪ್ರಯೋಗಾಲಯ

    ಸಾಮಾನ್ಯ ಅಧ್ಯಯನ – 2/ಆರೋಗ್ಯ;ಸಾಮಾನ್ಯ ಅಧ್ಯಯನ – 3/ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಗೃಹ ಸಚಿವರು ಗಾಂಧಿನಗರದಲ್ಲಿ ‘ಜೈವಿಕ ಸುರಕ್ಷತಾ ಹಂತ-4’ (BSL-4) ನಿಯಂತ್ರಣ ಸೌಲಭ್ಯ ಮತ್ತು ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು, ಇದನ್ನು ಭಾರತದ “ಆರೋಗ್ಯ ಕವಚ” ಎಂದು ಬಣ್ಣಿಸಿದರು.

    ಜೈವಿಕ ಸುರಕ್ಷತಾ ಹಂತ-4 (BSL-4) ಪ್ರಯೋಗಾಲಯ ಸೌಲಭ್ಯದ ಬಗ್ಗೆ:

    • ಇವುಗಳು ಜೈವಿಕ ನಿಯಂತ್ರಣದ ಅತ್ಯುನ್ನತ ಗುಣಮಟ್ಟವನ್ನು ಪ್ರತಿನಿಧಿಸುತ್ತವೆ.
    • ಲಸಿಕೆಗಳು ಅಥವಾ ಚಿಕಿತ್ಸೆಗಳು ಲಭ್ಯವಿಲ್ಲದ, ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ಹೆಚ್ಚು ಸಾಂಕ್ರಾಮಿಕ ರೋಗಕಾರಕಗಳನ್ನು ಸುರಕ್ಷಿತವಾಗಿ ಅಧ್ಯಯನ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.
    • ವಿಜ್ಞಾನಿಗಳು ಇಲ್ಲಿ ಸುಧಾರಿತ ಸಂಶೋಧನೆಯನ್ನು ನಡೆಸುತ್ತಾರೆ; ರೋಗನಿರ್ಣಯ ವಿಧಾನಗಳು, ಲಸಿಕೆಗಳು ಮತ್ತು ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತಾರೆ. ಅಲ್ಲದೆ, ಕಟ್ಟುನಿಟ್ಟಾದ ನಿಯಂತ್ರಿತ ಮತ್ತು ಅಂತಾರಾಷ್ಟ್ರೀಯ ನಿಗಾ ವ್ಯವಸ್ಥೆಯ ಅಡಿಯಲ್ಲಿ, ರೋಗ ಉಲ್ಬಣದ ತನಿಖೆ ಮತ್ತು ತ್ವರಿತ ಪ್ರತಿಕ್ರಿಯೆ ಕಾರ್ಯಗಳನ್ನು ಇಲ್ಲಿ ಕೈಗೊಳ್ಳಲಾಗುತ್ತದೆ.
    • ಮಹತ್ವ:- ಗಾಂಧಿನಗರದಲ್ಲಿ ನಿರ್ಮಾಣವಾಗಲಿರುವ BSL-4 ಪ್ರಯೋಗಾಲಯವು, ‘ಪ್ರಾಣಿಗಳ ಜೈವಿಕ ಸುರಕ್ಷತಾ ಹಂತ’ದ ಸೌಲಭ್ಯದೊಂದಿಗೆ, ಕಾರ್ಯತಂತ್ರದ ರಾಷ್ಟ್ರೀಯ ಆಸ್ತಿಯಾಗಲಿದೆ. ಇಲ್ಲಿ ಎಬೋಲಾ ವೈರಸ್, ಮಾರ್ಬರ್ಗ್ ವೈರಸ್, ಕ್ರಿಮಿಯನ್-ಕಾಂಗೋ ಹೆಮರಾಜಿಕ್ ಜ್ವರ (CCHF) ವೈರಸ್, ಕ್ಯಾಸನೂರು ಅರಣ್ಯ ಕಾಯಿಲೆ ವೈರಸ್ (KFD) ಮತ್ತು ನಿಫಾ ವೈರಸ್ ಸೇರಿದಂತೆ ಮಾನವಕುಲಕ್ಕೆ ತಿಳಿದಿರುವ ಅತ್ಯಂತ ಮಾರಕ ರೋಗಕಾರಕಗಳ ಮೇಲೆ ಸಂಶೋಧನೆ ನಡೆಸಲಾಗುತ್ತದೆ.
  • ಜಾಗತಿಕ ಅಪಾಯಗಳ ವರದಿ (GRR), 2026 – WEF | ಉದ್ಯೋಗ ಮತ್ತು ಸಾಮಾಜಿಕ ಪ್ರವೃತ್ತಿಗಳ ವರದಿ, 2026 – ILO | ‘ಕಾರ್ಬನ್ (ಇಂಗಾಲದ) ಕ್ರೆಡಿಟ್’ಗಳಿಂದ ಆದಾಯ ಗಳಿಸಲಿರುವ ದೆಹಲಿ | ಕಾಶಿ-ತಮಿಳು ಸಂಗಮ | ರಫ್ತು ಸಿದ್ಧತೆ ಸೂಚ್ಯಂಕ (EPI), 2024 – ನೀತಿ ಆಯೋಗ | ಜಥಿಯಾ ದೇವಿ | ಕುಕಿ-ಜೋ ಮಂಡಳಿ ಮತ್ತು ಕೇಂದ್ರಾಡಳಿತ ಪ್ರದೇಶಕ್ಕಾಗಿ ಬೇಡಿಕೆ | ಕುರಿಂಜಿ ರಾಜ್‌ಕುಮಾರ್

    ಜಾಗತಿಕ ಅಪಾಯಗಳ ವರದಿ (GRR), 2026 – WEF

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ವಿಶ್ವ ಆರ್ಥಿಕ ವೇದಿಕೆಯು (WEF) ತನ್ನ 21ನೇ ಆವೃತ್ತಿಯ “ಜಾಗತಿಕ ಅಪಾಯಗಳ ವರದಿ, 2026” ಅನ್ನು ಬಿಡುಗಡೆ ಮಾಡಿದ್ದು, ಭೌಗೋಳಿಕ-ಆರ್ಥಿಕ ಮುಖಾಮುಖಿಗಳು ಪ್ರಮುಖ ರಾಷ್ಟ್ರಗಳಿಗೆ ಅತಿದೊಡ್ಡ ಅಪಾಯವನ್ನು ತಂದೊಡ್ಡಲಿವೆ ಎಂದು ಎಚ್ಚರಿಸಿದೆ.

    ಜಾಗತಿಕ ಅಪಾಯಗಳ ವರದಿ, 2026 ರ ಮುಖ್ಯಾಂಶಗಳು: 

    • ಭೌಗೋಳಿಕ-ಆರ್ಥಿಕ ಮುಖಾಮುಖಿ:- ಇದನ್ನು 2026 ರ ಪ್ರಮುಖ ಅಪಾಯವೆಂದು ಗುರುತಿಸಲಾಗಿದೆ. ಇದು ನಿರ್ಬಂಧ ಮತ್ತು ಸುಂಕಗಳ ಮೂಲಕ ವ್ಯಾಪಾರ, ಹಣಕಾಸು ಮತ್ತು ತಂತ್ರಜ್ಞಾನವನ್ನು “ಅಸ್ತ್ರವನ್ನಾಗಿ” ಬಳಸಿಕೊಳ್ಳುವುದನ್ನು ಒಳಗೊಂಡಿದೆ. ಉದಾಹರಣೆಗೆ ಅಮೆರಿಕ ವಿಧಿಸಿದ ಸುಂಕಗಳು, ಚೀನಾದಿಂದ ನಿರ್ಣಾಯಕ ಖನಿಜಗಳ ನಿಷೇಧ ಇತ್ಯಾದಿ).
    • ರಾಷ್ಟ್ರ-ಆಧಾರಿತ ಸಶಸ್ತ್ರ ಸಂಘರ್ಷ:- ಇದು ಎರಡನೇ ಅತ್ಯುನ್ನತ ಅಪಾಯವಾಗಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದಂತಹ ಯುದ್ಧಗಳು ಮತ್ತು ವೆನೆಜುವೆಲಾ ಹಾಗೂ ಮಧ್ಯಪ್ರಾಚ್ಯದಂತಹ ಪ್ರದೇಶಗಳಲ್ಲಿನ ಇತ್ತೀಚಿನ ಅಸ್ಥಿರತೆಯು ಇದಕ್ಕೆ ಕಾರಣವಾಗಿದೆ.
    • ವೈಪರೀತ್ಯದ ಹವಾಮಾನ:- ಮುಂದಿನ ದಶಕದಲ್ಲಿ ಪರಿಸರ ಸಂಬಂಧಿ ಅಪಾಯಗಳು ಅಗ್ರ ಆದ್ಯತೆಯಾಗಿ ಉಳಿದಿದ್ದರೂ, ಆರ್ಥಿಕ ಮತ್ತು ಸೇನಾ ಸಂಘರ್ಷಗಳ ತುರ್ತು ಪರಿಸ್ಥಿತಿಯಿಂದಾಗಿ, ತಕ್ಷಣದ 2 ವರ್ಷಗಳ ಮುನ್ನೋಟದಲ್ಲಿ ಇವು ಮೂರನೇ ಸ್ಥಾನಕ್ಕೆ (8%) ಕುಸಿದಿವೆ.
    • ಸಾಮಾಜಿಕ ಅಪಾಯಗಳು:- ಧ್ರುವೀಕರಣ, ತಪ್ಪು ಮಾಹಿತಿ ಮತ್ತು ಎಐ ರಚಿತ ‘ಡೀಪ್‌ಫೇಕ್’ಗಳನ್ನು ಸಾಮಾಜಿಕ ಅಸ್ಥಿರತೆಗೆ, ವಿಶೇಷವಾಗಿ ಚುನಾವಣಾ ಸಮಯಗಳಲ್ಲಿ ಎದುರಾಗುವ ಪ್ರಮುಖ ಅಪಾಯಗಳೆಂದು ಉಲ್ಲೇಖಿಸಲಾಗಿದೆ.

    ಭಾರತಕ್ಕೆ ಎದುರಾಗಿರುವ ದೊಡ್ಡ ಅಪಾಯಗಳು:

    • ಸೈಬರ್ ಭದ್ರತೆ:- ಇದನ್ನು ಭಾರತಕ್ಕೆ ಎದುರಾಗಿರುವ ಅಗ್ರ ಅಪಾಯವೆಂದು ಪರಿಗಣಿಸಲಾಗಿದೆ ಮತ್ತು ಭಾರತವು ಡಿಜಿಟಲ್ ಪಾವತಿಗಳ ಕಡೆಗೆ ಹೆಚ್ಚು ವಾಲುತ್ತಿದೆ.
    • ಸಂಪತ್ತಿನ ಅಸಮಾನತೆ ಮತ್ತು ಸಾಮಾಜಿಕ ಸುರಕ್ಷತಾ ಜಾಲಗಳು:- ಹೆಚ್ಚುತ್ತಿರುವ ಆದಾಯದ ಅಸಮಾನತೆಯೊಂದಿಗೆ ದೃಢವಾದ ಸಾಮಾಜಿಕ ಕಲ್ಯಾಣ ಯೋಜನೆಗಳ ಕೊರತೆಯು ಆಂತರಿಕ ಸ್ಥಿರತೆಗೆ ಗಮನಾರ್ಹ ಅಪಾಯವನ್ನು ಒಡ್ಡುತ್ತದೆ.
    • ಆರ್ಥಿಕ ಬಾಹ್ಯ ಆಘಾತಗಳು:- ಜಾಗತಿಕ ಪೂರೈಕೆ ಸರಪಳಿ ಅಡಚಣೆಗಳು ಮತ್ತು ಅಂತರರಾಷ್ಟ್ರೀಯ ಸುಂಕಗಳಿಂದ ಉಂಟಾಗುವ ದೇಶೀಯ ಆರ್ಥಿಕ ಕುಸಿತಗಳಿಗೆ ಭಾರತವು ತುತ್ತಾಗುವ ಸಾಧ್ಯತೆಯಿದೆ.
    • ನಿರ್ಣಾಯಕ ಮೂಲಸೌಕರ್ಯ ಮತ್ತು ಸಂಪನ್ಮೂಲ ಭದ್ರತೆ:- ಈ ವರದಿಯು “ಜಲ ಭದ್ರತೆ” ಯನ್ನು ಸಂಭಾವ್ಯ ಸಂಘರ್ಷದ ಬಿಂದು ಎಂದು ಎತ್ತಿ ತೋರಿಸಿದೆ. ನಿರ್ದಿಷ್ಟವಾಗಿ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿದ ನಂತರ, ಸಿಂಧೂ ನದಿ ಜಲಾನಯನ ಪ್ರದೇಶವು ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದದ ಕೇಂದ್ರಬಿಂದುವಾಗಿ ಉಳಿದಿದೆ ಎಂದು ಅದು ಗಮನಸೆಳೆದಿದೆ.

    ಉದ್ಯೋಗ ಮತ್ತು ಸಾಮಾಜಿಕ ಪ್ರವೃತ್ತಿಗಳ ವರದಿ, 2026 – ILO

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ; ಉದ್ಯೋಗ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO)ಯು ತನ್ನ “ವಿಶ್ವ ಉದ್ಯೋಗ ಮತ್ತು ಸಾಮಾಜಿಕ ಮುನ್ನೋಟ” (WESO) ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯು ಜಾಗತಿಕ ಕಾರ್ಮಿಕ ಮಾರುಕಟ್ಟೆಯಲ್ಲಿನ ನಿರಂತರ ಅಸಮಾನತೆಗಳನ್ನು ಎತ್ತಿ ತೋರಿಸಿದೆ.

    ಈ ವರದಿಯ ಪ್ರಮುಖ ಅಂಶಗಳು:

    • ಜಾಗತಿಕ ನಿರುದ್ಯೋಗ:- 2026 ರಲ್ಲಿ ಜಾಗತಿಕ ನಿರುದ್ಯೋಗ ದರವು 4.9% ರಷ್ಟು ಉಳಿಯುವ ನಿರೀಕ್ಷೆಯಿದೆ ಮತ್ತು ಇದು ಸುಮಾರು 186 ದಶ ಲಕ್ಷ (18.6 ಕೋಟಿ) ಜನರಿಗೆ ಸಮಾನವಾಗಿದೆ.
    • ಗುಣಮಟ್ಟದ ಹಾಗೂ ಸುರಕ್ಷಿತ ಉದ್ಯೋಗದ ಕೊರತೆ:- ಹಾಗೆಯೇ, ಯೋಗ್ಯವಾದ ಕೆಲಸದ ಕಡೆಗಿನ ಪ್ರಗತಿಯು ಸ್ಥಗಿತಗೊಂಡಿದೆ ಮತ್ತು ಲಕ್ಷಾಂತರ ಜನರು ಇನ್ನೂ ಈ ಕೊರತೆಯನ್ನು ಎದುರಿಸುತ್ತಿದ್ದಾರೆ.
    • ಆರ್ಥಿಕ ಬೆಳವಣಿಗೆಯ ಹೊರತಾಗಿಯೂ ನಿರಂತರ ಬಡತನ:- ಸುಮಾರು 300 ದಶ ಲಕ್ಷ (30 ಕೋಟಿ) ಕಾರ್ಮಿಕರು ದಿನಕ್ಕೆ US $3 ಗಿಂತ ಕಡಿಮೆ ಗಳಿಸುವ ಮೂಲಕ ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ.
    • ತೀವ್ರವಾಗುತ್ತಿರುವ ಯುವ ನಿರುದ್ಯೋಗದ ಬಿಕ್ಕಟ್ಟು: ಯುವ ಜನರ ನಿರುದ್ಯೋಗವು 2025 ರಲ್ಲಿ 12.4% ಕ್ಕೆ ಏರಿಕೆಯಾಗಿದೆ.
    • ನಿರಂತರ ಲಿಂಗ ಅಂತರಗಳು:- ಮಹಿಳೆಯರು ಜಾಗತಿಕ ಉದ್ಯೋಗದಲ್ಲಿ ಕೇವಲ ಐದನೇ ಎರಡರಷ್ಟು (40%) ಪಾಲನ್ನು ಹೊಂದಿದ್ದಾರೆ.

    ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO)ಯ ಬಗ್ಗೆ:

      • ಇದು ವಿಶ್ವಸಂಸ್ಥೆಯ ಒಂದು ವಿಶೇಷ ಸಂಸ್ಥೆಯಾಗಿದೆ.
      • ಇದನ್ನು 1919 ರಲ್ಲಿ ವರ್ಸೈಲ್ಸ್ ಒಪ್ಪಂದದ ಮೂಲಕ 
      • “ರಾಷ್ಟ್ರಗಳ ಸಂಘ” (ಲೀಗ್ ಆಫ್ ನೇಷನ್ಸ್) ದ ಅಂಗಸಂಸ್ಥೆಯಾಗಿ ಸ್ಥಾಪಿಸಲಾಯಿತು.
      • ವಿಶೇಷತೆ:- 1946 ರಲ್ಲಿ ಇದು ವಿಶ್ವಸಂಸ್ಥೆಯ ಮೊದಲ ವಿಶೇಷ ಸಂಸ್ಥೆಯಾಯಿತು.
      • ಪ್ರಧಾನ ಕಚೇರಿ:- ‘ಜಿನೀವಾ’ (ಸ್ವಿಟ್ಜರ್ಲೆಂಡ್‌)
    • ಭಾರತವು ILO ನ ಸಂಸ್ಥಾಪಕ ಸದಸ್ಯ ರಾಷ್ಟ್ರವಾಗಿದೆ.
    • ಗುರಿ:- ಕೆಲಸದ ಸ್ಥಳದಲ್ಲಿ ಹಕ್ಕುಗಳು ಮತ್ತು ಯೋಗ್ಯ ಉದ್ಯೋಗಾವಕಾಶಗಳನ್ನು ಉತ್ತೇಜಿಸುವುದು, ಸಾಮಾಜಿಕ ರಕ್ಷಣೆಯನ್ನು ಹೆಚ್ಚಿಸುವುದು ಹಾಗೂ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಂವಾದವನ್ನು ಬಲಪಡಿಸುವುದು.

    ILO ನ ಪ್ರಮುಖ ವರದಿಗಳು:

    • ಜಾಗತಿಕ ವೇತನ ವರದಿ (GWR)
    • ವಿಶ್ವ ಉದ್ಯೋಗ ಮತ್ತು ಸಾಮಾಜಿಕ ಮುನ್ನೋಟ (WESO).
    • ವಿಶ್ವ ಸಾಮಾಜಿಕ ರಕ್ಷಣೆ ವರದಿ (WSPR)
    • ಕೆಲಸದ ಜಾಗತಿಕ ವರದಿ (ವರ್ಲ್ಡ್ ಆಫ್ ವರ್ಕ್ ರಿಪೋರ್ಟ್)

    ‘ಕಾರ್ಬನ್ (ಇಂಗಾಲದ) ಕ್ರೆಡಿಟ್’ಗಳಿಂದ ಆದಾಯ ಗಳಿಸಲಿರುವ ದೆಹಲಿ

    ಸಾಮಾನ್ಯ ಅಧ್ಯಯನ- 3/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ದೆಹಲಿ ಸರ್ಕಾರವು ‘ಕಾರ್ಬನ್ ಕ್ರೆಡಿಟ್ ನಗದೀಕರಣ’ಕ್ಕಾಗಿ ಒಂದು ನೂತನ ನೀತಿ ಚೌಕಟ್ಟನ್ನು ಅನುಮೋದಿಸಿರುವುದಾಗಿ ಘೋಷಿಸಿದೆ.

    ನೂತನ ನೀತಿಯ ಮುಖ್ಯಾಂಶಗಳು:

    • ಪರಿಸರ ಸ್ನೇಹಿ ಯೋಜನೆಗಳು:- ದೆಹಲಿ ಸರ್ಕಾರವು ಜಾರಿಗೊಳಿಸುವ ವಿವಿಧ ಪರಿಸರ ಸ್ನೇಹಿ ಯೋಜನೆಗಳ ಮೂಲಕ ‘ಕಾರ್ಬನ್ ಕ್ರೆಡಿಟ್‌’ಗಳನ್ನು ಉತ್ಪಾದಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ.
    • ಪ್ರಮುಖ ಚಟುವಟಿಕೆಗಳು:- ಈ ನೀತಿಯ ಅಡಿಯಲ್ಲಿ ವಿದ್ಯುತ್ ಚಾಲಿತ ಬಸ್‌ಗಳ ಕಾರ್ಯಾಚರಣೆ, ಸಸಿ ನೆಡುವ ಅಭಿಯಾನಗಳು, ಸೌರಶಕ್ತಿಯ ಉತ್ತೇಜನ ಮತ್ತು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯಂತಹ ಚಟುವಟಿಕೆಗಳನ್ನು ಕಾರ್ಬನ್ ಕ್ರೆಡಿಟ್ ಉತ್ಪಾದನೆಗೆ ಬಳಸಲಾಗುತ್ತದೆ.

    ನೂತನ ನೀತಿಯ ಕಾರ್ಯವಿಧಾನ:

    • ವೈಜ್ಞಾನಿಕ ಮಾಪನ:- ಈ ಮೇಲಿನ ಉಪಕ್ರಮಗಳ ಮೂಲಕ ಇಂಗಾಲದ ಹೊರಸೂಸುವಿಕೆಯಲ್ಲಿ ಆಗುವ ಇಳಿಕೆಯನ್ನು ವೈಜ್ಞಾನಿಕವಾಗಿ ಅಳೆಯಲಾಗುತ್ತದೆ.
    • ಅಧಿಕೃತ ‘ಕಾರ್ಬನ್ ಕ್ರೆಡಿಟ್’ಗಳಾಗಿ ನೋಂದಣಿ: ನಂತರ, ಇದನ್ನು ಅಧಿಕೃತವಾಗಿ ‘ಕಾರ್ಬನ್ ಕ್ರೆಡಿಟ್’ಗಳಾಗಿ ನೋಂದಾಯಿಸಲಾಗುತ್ತದೆ.
    • ಮಾರಾಟ ಮತ್ತು ಆದಾಯ:- ಅಂತಿಮವಾಗಿ, ಈ ಕ್ರೆಡಿಟ್‌ಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಬನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಮೂಲಕ ಸರ್ಕಾರವು ಆದಾಯವನ್ನು ಗಳಿಸಲಿದೆ.

    ಕಾರ್ಬನ್ ಮಾರುಕಟ್ಟೆಗಳ ಬಗ್ಗೆ:

    • ವ್ಯಾಖ್ಯಾನ:- ಕಾರ್ಬನ್ ಮಾರುಕಟ್ಟೆಗಳು ಕಾರ್ಬನ್ ಕ್ರೆಡಿಟ್‌ಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯಾಪಾರ ವ್ಯವಸ್ಥೆಗಳಾಗಿವೆ.
    • ಕಾರ್ಯವಿಧಾನ:- ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತೆಗೆದುಹಾಕುವ ಅಥವಾ ಕಡಿಮೆ ಮಾಡುವ ಸಂಸ್ಥೆಗಳಿಂದ ‘ಕಾರ್ಬನ್ ಕ್ರೆಡಿಟ್’ಗಳನ್ನು ಖರೀದಿಸುವ ಮೂಲಕ, ಇತರ ಕಂಪನಿಗಳು ಅಥವಾ ವ್ಯಕ್ತಿಗಳು ತಮ್ಮ ಇಂಗಾಲದ ಹೊರಸೂಸುವಿಕೆಯನ್ನು ಸರಿದೂಗಿಸಿಕೊಳ್ಳಬಹುದು.

    ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ (CCTS)ನ ಬಗ್ಗೆ:

    • ಗುರಿ:- ಭಾರತೀಯ ಆರ್ಥಿಕತೆಯನ್ನು ಇಂಗಾಲ ಮುಕ್ತವಾಗಿಸುವ (ಡಿಕಾರ್ಬನೈಸ್) ನಿಟ್ಟಿನಲ್ಲಿ ಶ್ರಮಿಸುತ್ತಿರುವ ವಿವಿಧ ಘಟಕಗಳನ್ನು ಪ್ರೋತ್ಸಾಹಿಸುವುದು ಮತ್ತು ಬೆಂಬಲಿಸುವುದು.
    • ಇದು ಸೂಕ್ತವಾದ ಸಾಂಸ್ಥಿಕ ಚೌಕಟ್ಟನ್ನು ಸ್ಥಾಪಿಸುವ ಮೂಲಕ, CCTS ‘ಭಾರತದ ಕಾರ್ಬನ್ ಮಾರುಕಟ್ಟೆ’ಗೆ ಭದ್ರ ಬುನಾದಿಯನ್ನು ಹಾಕಿದೆ.

    ಕಾರ್ಬನ್ ಮಾರುಕಟ್ಟೆಯ ಸನ್ನದ್ಧತೆಯನ್ನು ಬಲಪಡಿಸಲು ಸರ್ಕಾರದ ಕ್ರಮಗಳು:

    • ಅಭಿವೃದ್ಧಿ ಮತ್ತು ಪರಿಸರ ಸಮತೋಲನ:- COP 27 ರಲ್ಲಿ ಪ್ರಸ್ತಾಪಿಸಿದಂತೆ, “ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳ” (CBDR-RC) ತತ್ವಗಳ ಮೂಲಕ, ಭಾರತವು ಕಡಿಮೆ ಇಂಗಾಲದ ಹೊರಸೂಸುವಿಕೆ ಮತ್ತು ತನ್ನ ಅಭಿವೃದ್ಧಿಯ ಅಗತ್ಯಗಳನ್ನು ಸಮತೋಲನಗೊಳಿಸುತ್ತಿದೆ.
    • ಸುಸ್ಥಿರ ಜೀವನಶೈಲಿಗೆ ಹಸಿರು ಉಪಕ್ರಮಗಳು:- ಸರ್ಕಾರವು “ಮಿಷನ್ ಲೈಫ್” ಮತ್ತು “ಹಸಿರು ಕ್ರೆಡಿಟ್ ಉಪಕ್ರಮ”ಗಳನ್ನು ಜಾರಿಗೆ ತಂದಿದೆ.
    • ಸಾಂಸ್ಥಿಕ ನಿರ್ವಹಣೆ:- ಇಂಧನ ಸಚಿವಾಲಯದ ಅಡಿಯಲ್ಲಿ,
    1. “ಭಾರತೀಯ ಕಾರ್ಬನ್ ಮಾರುಕಟ್ಟೆಗಾಗಿ ರಾಷ್ಟ್ರೀಯ ಮಾರ್ಗದರ್ಶನ ಸಮಿತಿ” (NSCICM).
    2. “ಇಂಧನ ದಕ್ಷತಾ ಕಛೇರಿ” (BEE) ಅನ್ನು ಸ್ಥಾಪಿಸಲಾಗಿದೆ.

    ಕಾಶಿ-ತಮಿಳು ಸಂಗಮ

    ಸಾಮಾನ್ಯ ಅಧ್ಯಯನ-1/ ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ಸಾಂಸ್ಕೃತಿಕ ತಿಳುವಳಿಕೆಯನ್ನು ಬಲಪಡಿಸುವಲ್ಲಿ, ಶೈಕ್ಷಣಿಕ ಮತ್ತು ಜನರ ನಡುವಿನ ವಿನಿಮಯವನ್ನು ಉತ್ತೇಜಿಸುವಲ್ಲಿ ಹಾಗೂ ಶಾಶ್ವತ ಬಾಂಧವ್ಯವನ್ನು ಸೃಷ್ಟಿಸುವಲ್ಲಿ ‘ಕಾಶಿ-ತಮಿಳು ಸಂಗಮ’ ವಹಿಸಿರುವ ಪಾತ್ರವನ್ನು ಪ್ರಧಾನಿ ಮೋದಿಯವರು ಶ್ಲಾಘಿಸಿದ್ದಾರೆ.

    ಕಾಶಿ-ತಮಿಳು ಸಂಗಮ 4.0 ರ ಬಗ್ಗೆ:

    • ಆಯೋಜಕರು:- ಕೇಂದ್ರ ಶಿಕ್ಷಣ ಸಚಿವಾಲಯವು
    • ಪ್ರಾರಂಭ:- 2022
    • ಪಾಲುದಾರ ವಿಶ್ವವಿದ್ಯಾಲಯಗಳು:- ಐಐಟಿ ಮದ್ರಾಸ್ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯ. 
    • ಉದ್ದೇಶ:- ತಮಿಳುನಾಡು ಮತ್ತು ಕಾಶಿಯ ನಡುವಿನ ಪುರಾತನ ಸಂಬಂಧಗಳನ್ನು ಮರುಶೋಧಿಸುವುದು, ದೃಢೀಕರಿಸುವುದು ಮತ್ತು ಆಚರಿಸುವುದು.
    • ರಾಷ್ಟ್ರೀಯ ಶಿಕ್ಷಣ ನೀತಿ (NEP), 2020:- ಇದು ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ಆಧುನಿಕ ಜ್ಞಾನ ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಕುರಿತು ರಾಷ್ಟ್ರೀಯ ಶಿಕ್ಷಣ ನೀತಿ (NEP), 2020 ನೀಡಿದ ಬೆಂಬಲಕ್ಕೆ ಅನುಗುಣವಾಗಿದೆ.

    ಮಹತ್ವ:

    • ಜ್ಞಾನವನ್ನು ಹಂಚಿಕೊಳ್ಳವ ವೇದಿಕೆ:- ಇದು ಎರಡು ಪ್ರದೇಶಗಳ ವಿದ್ವಾಂಸರು, ವಿದ್ಯಾರ್ಥಿಗಳು, ತತ್ವಜ್ಞಾನಿಗಳು ಮತ್ತು ಕಲಾವಿದರಿಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ.
    • ಅರಿವು ಮತ್ತು ಸಾಂಸ್ಕೃತಿಕ ಏಕತೆ:- ಇದು ಯುವಜನರಲ್ಲಿ ಅರಿವು ಮೂಡಿಸಲು ಮತ್ತು ಸಾಂಸ್ಕೃತಿಕ ಏಕತೆಯನ್ನು ಅನುಭವಿಸಲು ಸಹಕಾರಿಯಾಗಿದೆ.

    ಗಮನಿಸಿ: 

    ಕಾಶಿ/ವಾರಾಣಸಿ/ಬನಾರಸ್ ಮತ್ತು ಚೆನ್ನೈ ಎರಡನ್ನೂ ಯುನೆಸ್ಕೋ ‘ಸಂಗೀತದ ಸೃಜನಾತ್ಮಕ ನಗರಗಳು’ ಎಂದು ಗುರುತಿಸಿದೆ.

    ರಫ್ತು ಸಿದ್ಧತೆ ಸೂಚ್ಯಂಕ (EPI), 2024 – ನೀತಿ ಆಯೋಗ

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ನೀತಿ ಆಯೋಗವು ರಫ್ತು ಸಿದ್ಧತೆ ಸೂಚ್ಯಂಕ (EPI) 2024 ಅನ್ನು ಬಿಡುಗಡೆ ಮಾಡಿದೆ.

    ರಫ್ತು ಸಿದ್ಧತೆ ಸೂಚ್ಯಂಕ (EPI), 2024 ರ ಬಗ್ಗೆ:

    • ರಫ್ತು ಸಿದ್ಧತೆಯ ಸಮಗ್ರ ಮೌಲ್ಯಮಾಪನ:- ಇದು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ರಫ್ತು ಸಿದ್ಧತೆಯ ಸಮಗ್ರ ಮೌಲ್ಯಮಾಪನ ಮಾಡುವ ಉದ್ದೇಶ ಹೊಂದಿದೆ.
    • ಮಹತ್ವ:- ಇದು ರಾಜ್ಯ ಮಟ್ಟದ ರಫ್ತು ಪರಿಸರ ವ್ಯವಸ್ಥೆಗಳ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಒಳಗೊಳ್ಳುವಿಕೆಯನ್ನು ಮೌಲ್ಯಮಾಪನ ಮಾಡಲು ಸಾಕ್ಷ್ಯಾಧಾರಿತ ಚೌಕಟ್ಟನ್ನು ಒದಗಿಸುತ್ತದೆ.

    ರಫ್ತು ಸಿದ್ಧತೆ ಸೂಚ್ಯಂಕ (EPI), 2024 ರ ಮುಖ್ಯಾಂಶಗಳು:

    ಅತ್ಯುತ್ತಮ ಪ್ರದರ್ಶನ ನೀಡಿದ ರಾಜ್ಯಗಳು: 

    • ಅತ್ಯುತ್ತಮ ಪ್ರದರ್ಶನ ನೀಡಿದ ದೊಡ್ಡ ರಾಜ್ಯಗಳು:- ಮಹಾರಾಷ್ಟ್ರ ಮತ್ತು ಅದರ ಜೊತೆಗೆ ತಮಿಳುನಾಡು, ಗುಜರಾತ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶಗಳು 
    • ಅತ್ಯುತ್ತಮ ಪ್ರದರ್ಶನ ನೀಡಿದ ಸಣ್ಣ ರಾಜ್ಯಗಳು:- ಉತ್ತರಾಖಂಡ, ಗೋವಾ
    • ಈಶಾನ್ಯ ರಾಜ್ಯಗಳು:- ನಾಗಾಲ್ಯಾಂಡ್
    • ಕೇಂದ್ರಾಡಳಿತ ಪ್ರದೇಶಗಳು:- ಜಮ್ಮು ಮತ್ತು ಕಾಶ್ಮೀರ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು.

    ಜಥಿಯಾ ದೇವಿ

    ಸಾಮಾನ್ಯ ಅಧ್ಯಯನ-1/ ಸ್ಥಳಗಳು /ಸಾಮಾನ್ಯ ಅಧ್ಯಯನ-3/ ಮೂಲಸೌಕರ್ಯ

    ಇದೀಗ ಸುದ್ದಿಯಲ್ಲಿದೆ:

    • ಹಿಮಾಚಲ ಪ್ರದೇಶ ವಸತಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರವು ಅನುಷ್ಠಾನಗೊಳಿಸಲಿರುವ ಮಹತ್ವಾಕಾಂಕ್ಷೆಯ ನಗರಾಭಿವೃದ್ಧಿ ಯೋಜನೆಗಾಗಿ ಇತ್ತೀಚೆಗೆ ‘ಜಥಿಯಾ ದೇವಿ’ ಸ್ಥಳವನ್ನು ಗುರುತಿಸಲಾಗಿದೆ.

    ‘ಜಥಿಯಾ ದೇವಿ’ ಸ್ಥಳದ ಬಗ್ಗೆ:

    • ಸ್ಥಳ:- ಈ ಸ್ಥಳವು ಶಿಮ್ಲಾ ನಗರದಿಂದ ಸುಮಾರು 14 ಕಿ.ಮೀ ದೂರದಲ್ಲಿದೆ.
    • ಹೆಸರಿನ ಹಿನ್ನೆಲೆ:- ಈ ಪ್ರದೇಶದಲ್ಲಿರುವ ಪುರಾತನ ಜಥಿಯಾ ದೇವಿ ದೇವಾಲಯದಿಂದಾಗಿ ಈ ಸ್ಥಳಕ್ಕೆ ಈ ಹೆಸರು ಬಂದಿದೆ.
    • ಯೋಜನೆಯ ಸ್ವರೂಪ:- ಶಿಮ್ಲಾ ನಗರದ ಮೇಲಿನ ಒತ್ತಡವನ್ನು ತಗ್ಗಿಸಲು, ಈ ಯೋಜನೆಯನ್ನು ಒಂದು ಯೋಜಿತ ‘ಉಪಗ್ರಹ ಪರ್ವತ ಪಟ್ಟಣ’ವನ್ನಾಗಿ ರೂಪಿಸಲು ಉದ್ದೇಶಿಸಲಾಗಿದೆ.
    • ಪ್ರಯೋಜನಗಳು:- ಇದು ಹೊಸ ಆರ್ಥಿಕ ಕೇಂದ್ರಗಳನ್ನು ಸೃಷ್ಟಿಸುತ್ತದೆ ಮತ್ತು ಸುಸ್ಥಿರ ಹಾಗೂ ವಿಪತ್ತು-ನಿರೋಧಕ ನಗರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
    • ಕಾಳಜಿಗಳು:- ಸಾಮಾಜಿಕ ಪ್ರಭಾವದ ಮೌಲ್ಯಮಾಪನವು, ಯೋಜನೆಯಿಂದ ಸಂಭವಿಸಬಹುದಾದ ಜನರ ಸ್ಥಳಾಂತರ ಮತ್ತು ದೇವಾಲಯಗಳು, ಶಾಲೆಗಳು, ಅಂಗಡಿಗಳು, ಕಾಲುವೆಗಳು ಹಾಗೂ ಮನೆಗಳಂತಹ ಆಸ್ತಿಗಳ ನಷ್ಟವನ್ನು ಗುರುತಿಸಿದೆ.

    ಕುಕಿ-ಜೋ ಮಂಡಳಿ ಮತ್ತು ಕೇಂದ್ರಾಡಳಿತ ಪ್ರದೇಶಕ್ಕಾಗಿ ಬೇಡಿಕೆ

    ಸಾಮಾನ್ಯ ಅಧ್ಯಯನ-2/ ಆಡಳಿತ; ಸಾಮಾನ್ಯ ಅಧ್ಯಯನ-3/ ಆಂತರಿಕ ಭದ್ರತೆ

    ಇದೀಗ ಸುದ್ದಿಯಲ್ಲಿದೆ:

    • ಕುಕಿ-ಜೋ ಬುಡಕಟ್ಟು ಜನಾಂಗದವರನ್ನು ಪ್ರತಿನಿಧಿಸುವ ಸರ್ವೋಚ್ಚ ನಾಗರಿಕ ಸಂಸ್ಥೆಯಾದ “ಕುಕಿ-ಜೋ ಮಂಡಳಿ” (KZC), ಮಣಿಪುರದಲ್ಲಿ ಕುಕಿ-ಜೋ ಬುಡಕಟ್ಟು ಜನಾಂಗದವರಿಗಾಗಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನು ರಚಿಸುವ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ.

    ಹಿನ್ನೆಲೆ:

    • ಮೇ 2023 ರಲ್ಲಿ, ಜನಾಂಗೀಯ ಸಂಘರ್ಷ: ಇಂಫಾಲ್ ಕಣಿವೆಯಲ್ಲಿ ಪ್ರಧಾನವಾಗಿ ವಾಸಿಸುವ “ಮೈತೈ” ಸಮುದಾಯ ಮತ್ತು ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುವ “ಕುಕಿ-ಜೋ” ಸಮುದಾಯದ ನಡುವೆ ಜನಾಂಗೀಯ ಸಂಘರ್ಷ ಭುಗಿಲೆದ್ದಿತು.
    • ಸಂಘರ್ಷಕ್ಕೆ ಕಾರಣ:- ಪರಿಶಿಷ್ಟ ಪಂಗಡದ (ST) ಸ್ಥಾನಮಾನಕ್ಕಾಗಿ ಮೈತೈ ಸಮುದಾಯ ಮಂಡಿಸಿದ ಬೇಡಿಕೆಯು ಈ ಸಂಘರ್ಷಕ್ಕೆ ಪ್ರಚೋದನೆ ನೀಡಿತು. ಭೂಮಿಯ ಹಕ್ಕುಗಳು ಮತ್ತು ರಾಜಕೀಯ ಪ್ರಾತಿನಿಧ್ಯದ ಬಗೆಗಿನ ಕಳವಳಗಳಿಂದಾಗಿ ಕುಕಿ-ಜೋ ಗುಂಪುಗಳು ಈ ಬೇಡಿಕೆಯನ್ನು ವಿರೋಧಿಸಿದ್ದವು.
    • ಅಕ್ಟೋಬರ್ 2024 ರಲ್ಲಿ “ಕುಕಿ-ಜೋ ಮಂಡಳಿ” (KZC) ರಚನೆ:- ಸುಮಾರು 18 ತಿಂಗಳುಗಳ ಹಿಂಸಾಚಾರದ (2023–2025) ನಂತರ ಇದನ್ನು ರಚಿಸಲಾಯಿತು. ಈ ಹಿಂಸಾಚಾರದ ಅವಧಿಯಲ್ಲಿ ಕುಕಿ-ಜೋ ಸಮುದಾಯವು ತಮ್ಮ ವಿರುದ್ಧ ಪಕ್ಷಪಾತ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿತ್ತು.

    ಕುಕಿ-ಜೋ ಗುಂಪುಗಳ ಬಗ್ಗೆ:

      • ಇದೊಂದು ಜನಾಂಗೀಯ ಸಮುದಾಯ:- ಇವರು ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಅಸ್ಸಾಂ ಮತ್ತು ಮ್ಯಾನ್ಮಾರ್‌ ಪ್ರದೇಶಗಳಾದ್ಯಂತ ಹರಡಿಕೊಂಡಿದ್ದಾರೆ.
      • ಅವರು ಮ್ಯಾನ್ಮಾರ್ ಮತ್ತು ಮಿಜೋರಾಂನ ಇತರ “ಚಿನ್-ಮಿಜೋ” ಗುಂಪುಗಳೊಂದಿಗೆ ನಿಕಟ ಜನಾಂಗೀಯ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೊಂಡಿದ್ದಾರೆ.
      • 1980-90 ರ ದಶಕದಿಂದೀಚೆಗೆ, ಹಲವಾರು ಕುಕಿ-ಜೋ ಬಂಡಾಯ ಗುಂಪುಗಳು ಹೊರಹೊಮ್ಮಿವೆ. ಇವುಗಳು ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಒತ್ತಾಯಿಸುತ್ತಿವೆ:
    • ಹೆಚ್ಚಿನ ಸ್ವಾಯತ್ತತೆ ಮತ್ತು ಸ್ವ-ನಿರ್ಣಯದ ಹಕ್ಕು.
    • ಬುಡಕಟ್ಟು ಭೂಮಿ ಮತ್ತು ಹಕ್ಕುಗಳ ರಕ್ಷಣೆ.
    • ಕೆಲವು ಸಂದರ್ಭಗಳಲ್ಲಿ, ಪ್ರತ್ಯೇಕ ರಾಜ್ಯದ ಸ್ಥಾನಮಾನ.

    ಕುರಿಂಜಿ ರಾಜ್‌ಕುಮಾರ್

    ಸಾಮಾನ್ಯ ಅಧ್ಯಯನ-3/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಮಾಜಿ ಬ್ಯಾಂಕ್ ಉದ್ಯೋಗಿ ಮತ್ತು “ಕುರಿಂಜಿ ರಾಜ್‌ಕುಮಾರ್” ಎಂದೇ ಖ್ಯಾತರಾಗಿದ್ದ ಪರಿಸರವಾದಿ ಜಿ. ರಾಜ್‌ಕುಮಾರ್ ಅವರು ಇತ್ತೀಚಿಗೆ ತಿರುವನಂತಪುರದಲ್ಲಿ ನಿಧನರಾದರು.

    ನೀಲಕುರಿಂಜಿ ಬಗ್ಗೆ:

    • ಸ್ಥಳೀಯ ಪ್ರಭೇದ:- ಇದು ನೇರಳೆ ಬಣ್ಣದ ಹೂಬಿಡುವ ಕುರುಚಲು ಗಿಡದ ಪ್ರಭೇದವಾಗಿದೆ.
    • 12 ವರ್ಷಗಳಿಗೊಮ್ಮೆ ಹೂಗಳು ಅರಳುತ್ತವೆ:- ಪಶ್ಚಿಮ ಘಟ್ಟಗಳು ಮತ್ತು ಹಿಮಾಲಯದ ಬೆಟ್ಟಗಳಲ್ಲಿ ಈ ಹೂಗಳು ಅರಳುತ್ತವೆ.
    • “ನೀಲಗಿರಿ”ಗೆ ಈ ಹೆಸರು ಬರಲು ಕಾರಣ:- ಈ ಬೆರಗುಗೊಳಿಸುವ ಹೂವುಗಳು ನೀಡುವ ಮಾಂತ್ರಿಕ ನೀಲಿ ಬಣ್ಣದಿಂದಾಗಿ ‘ನೀಲಗಿರಿ’ಗೆ ಆ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
    • ನೈಸರ್ಗಿಕ ಪರ್ವತ ಹುಲ್ಲುಗಾವಲುಗಳಲ್ಲಿ ಮಾತ್ರ ಕಂಡುಬರುತ್ತವೆ:- ಇದು ನೈಋತ್ಯ ಭಾರತದ 1,340 ರಿಂದ 2,600 ಮೀಟರ್ ಎತ್ತರದಲ್ಲಿರುವ ನೈಸರ್ಗಿಕ ಪರ್ವತ ಹುಲ್ಲುಗಾವಲುಗಳಲ್ಲಿ ಮಾತ್ರ ಕಂಡುಬರುತ್ತವೆ.
    • ಇದು ಪ್ರಧಾನವಾಗಿ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಕಣಿವೆ ಮತ್ತು ನೀಲಗಿರಿ ಬೆಟ್ಟಗಳಲ್ಲಿ (ಕರ್ನಾಟಕ, ಕೇರಳ ಮತ್ತು ತಮಿಳುನಾಡು) ಕಂಡುಬರುತ್ತದೆ.
    • IUCN ಕೆಂಪು ಪಟ್ಟಿಯಲ್ಲಿ:- ‘ದುರ್ಬಲ’ (VU).

    “ಕುರಿಂಜಿ ರಾಜ್‌ಕುಮಾರ್” ಅವರ ಪ್ರಮುಖ ಕೊಡುಗೆಗಳು:

    • ‘ಕುರಿಂಜಿ ಉಳಿಸಿ ಅಭಿಯಾನ’:- ಕುರಿಂಜಿ ರಾಜ್‌ಕುಮಾರ್ ಈ ಅಭಿಯಾನದ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು. ಈ ಅಭಿಯಾನವು ನೀಲಕುರಿಂಜಿ (ಸ್ಟ್ರೋಬಿಲಾಂಥೆಸ್ ಕುಂತಿಯಾನ) ಮತ್ತು ಅದರ ಸೂಕ್ಷ್ಮ ಹುಲ್ಲುಗಾವಲು ಪರಿಸರ ವ್ಯವಸ್ಥೆಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
    • 1982 ರಲ್ಲಿ ಹೂವುಗಳ ಸಾಮೂಹಿಕ ಅರಳುವಿಕೆಯನ್ನು ವೀಕ್ಷಿಸಿದ ನಂತರ ಅವರ ಈ ಬದ್ಧತೆ ಪ್ರಾರಂಭವಾಯಿತು. ಇದು ಪರ್ವತಯಾತ್ರೆ ಮತ್ತು ಜಾಗೃತಿ ಪ್ರಯತ್ನಗಳಿಗೆ ಕಾರಣವಾಯಿತು ಮತ್ತು ಅಂತಿಮವಾಗಿ ಪ್ರಮುಖ ಪರಿಸರ ಚಳುವಳಿಯಾಗಿ ಬೆಳೆಯಿತು.
    • 2006 ರಲ್ಲಿ ನೀಲಕುರಿಂಜಿ ಅಭಯಾರಣ್ಯ:- ಅವರು ನಂತರ ಮುನ್ನಾರ್ ಪ್ರದೇಶದಲ್ಲಿನ ಅಭಿಯಾನಗಳತ್ತ ಗಮನಹರಿಸಿದರು. ಈ ಹೋರಾಟವು ಅಂತಿಮವಾಗಿ 2006 ರಲ್ಲಿ 32 ಚದರ ಕಿ.ಮೀ ವಿಸ್ತೀರ್ಣದ ‘ನೀಲಕುರಿಂಜಿ ಅಭಯಾರಣ್ಯ’ದ ಸ್ಥಾಪನೆಗೆ ಕಾರಣವಾಯಿತು ಮತ್ತು ಅವರ ಜೀವಮಾನದ ಕನಸನ್ನು ಈಡೇರಿಸಿತು.
  • ರಾಷ್ಟ್ರೀಯ ಕ್ರೀಡಾ ಆಡಳಿತ ನಿಯಮಗಳು, 2026 | ಮರ್ಕೋಸೂರ್ ಒಪ್ಪಂದಕ್ಕೆ ಐರೋಪ್ಯಾ ಒಕ್ಕೂಟ (EU) ರಾಷ್ಟ್ರಗಳ ಅನುಮೋದನೆ | DRDO ದಿಂದ 3ನೇ ತಲೆಮಾರಿನ MPATGM ನ ಯಶಸ್ವಿ ಹಾರಾಟ ಪರೀಕ್ಷೆ | 38ನೇ ಭಾರತ-ಫ್ರಾನ್ಸ್ ಕಾರ್ಯತಂತ್ರದ ಸಂವಾದ | ಪುಷ್ಪಗಳ ಕಣಿವೆ (Valley of Flowers) | NPS ವಾತ್ಸಲ್ಯ ಯೋಜನೆ, 2025 | ನಿಶ್ಯಸ್ತ್ರೀಕರಣ ವಿಷಯಗಳ ಕುರಿತಾದ ಸಲಹಾ ಮಂಡಳಿ | NIRANTAR (ನಿರಂತರ್) ವೇದಿಕೆ | ತ್ವರಿತ ವಾಣಿಜ್ಯ (ಕ್ವಿಕ್ ಕಾಮರ್ಸ್) ವೇದಿಕೆಗಳು 10 ನಿಮಿಷಗಳ ವಿತರಣೆ ಸೇವೆಯನ್ನು ನಿಲ್ಲಿಸಲಿವೆ | ಉಬ್ಬು (ಪಫರ್) ಮೀನು ವಿಷಬಾಧೆ | ರಾಷ್ಟ್ರೀಯ ಉದ್ಯಮಶೀಲತಾ ಅಭಿಯಾನ

    ರಾಷ್ಟ್ರೀಯ ಕ್ರೀಡಾ ಆಡಳಿತ ನಿಯಮಗಳು, 2026

    ಸಾಮಾನ್ಯ ಅಧ್ಯಯನ- 2/ ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ, 2025’ರ ಅಡಿಯಲ್ಲಿ, ‘ರಾಷ್ಟ್ರೀಯ ಕ್ರೀಡಾ ಆಡಳಿತ (ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು) ನಿಯಮಗಳು, 2026’ ಅನ್ನು ಅಧಿಸೂಚಿಸಿದೆ.

    ನಿಯಮಗಳ ಉದ್ದೇಶಗಳು:

    • ವೃತ್ತಿಪರತೆ ಮತ್ತು ಪ್ರಮಾಣೀಕರಣ:- ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ವೃತ್ತಿಪರಗೊಳಿಸುವುದು ಮತ್ತು ಅವುಗಳಿಗೆ ಒಂದು ನಿಗದಿತ ಮಾನದಂಡವನ್ನು ರೂಪಿಸುವುದು.
    • ಕ್ರೀಡಾಪಟುಗಳ ಪಾಲ್ಗೊಳ್ಳುವಿಕೆ: ಕ್ರೀಡಾ ಆಡಳಿತ ವ್ಯವಸ್ಥೆಯಲ್ಲಿ ಕ್ರೀಡಾಪಟುಗಳ ಅರ್ಥಪೂರ್ಣ ಭಾಗವಹಿಸುವಿಕೆಯನ್ನು ಖಚಿತಪಡಿಸುವುದ.

    ನಿಯಮಗಳ ಪ್ರಮುಖ ಅಂಶಗಳು:

    • ಅತ್ಯುತ್ತಮ ಅರ್ಹತೆಯ ಕ್ರೀಡಾಪಟುಗಳ ಕಡ್ಡಾಯ ಸೇರ್ಪಡೆ:- ಪ್ರತಿ ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ‘ಸಾಮಾನ್ಯ ಸಭೆ’ಯಲ್ಲಿ ಕನಿಷ್ಠ 4 ಜನ ‘ಅತ್ಯುತ್ತಮ ಅರ್ಹತೆಯ ಕ್ರೀಡಾಪಟುಗಳನ್ನು’ (SOMs) ಕಡ್ಡಾಯವಾಗಿ ಸೇರಿಸಬೇಕು.
    • 50% ರಷ್ಟು ಮಹಿಳಾ ಕ್ರೀಡಾಪಟುಗಳಿರಬೇಕು:- ನೇಮಕಗೊಂಡ ಒಟ್ಟು ಅತ್ಯುತ್ತಮ ಅರ್ಹತೆಯ ಕ್ರೀಡಾಪಟುಗಳಲ್ಲಿ ಕಡ್ಡಾಯವಾಗಿ 50% ರಷ್ಟು ಮಹಿಳಾ ಕ್ರೀಡಾಪಟುಗಳಿರಬೇಕು.
    • SOM ಅರ್ಹತೆಯ 10 ಹಂತಗಳು:- ಈ ಶ್ರೇಣೀಕೃತ ಮಾನದಂಡದಲ್ಲಿ ನಿಗದಿಪಡಿಸಲಾಗಿದೆ. ಅವು ಈ ಕೆಳಗಿನoತಿವೆ,
      • ಇದು ಬೇಸಿಗೆ ಒಲಿಂಪಿಕ್ ಕ್ರೀಡಾಕೂಟ , ಪ್ಯಾರಾಲಿಂಪಿಕ್ ಕ್ರೀಡಾಕೂಟ ಅಥವಾ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದಲ್ಲಿ  ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಗೆದ್ದ ಕ್ರೀಡಾಪಟುಗಳಿಂದ ಹಿಡಿದು, 
      • ರಾಷ್ಟ್ರೀಯ ಕ್ರೀಡಾಕೂಟ ಅಥವಾ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಗೆದ್ದ ಕ್ರೀಡಾಪಟುಗಳವರೆಗೆ ವ್ಯಾಪಿಸಿದೆ.
    • ಅನರ್ಹತಾ ಮಾನದಂಡಗಳು:- ಜೈಲು ಶಿಕ್ಷೆಯನ್ನು ಎದುರಿಸುತ್ತಿರುವ ದೋಷಿಗಳಿಗೆ ಸಾಮಾನ್ಯ ಸಭೆಯ ಸದಸ್ಯತ್ವ, ಕಾರ್ಯಕಾರಿ ಸಮಿತಿ ಚುನಾವಣೆಗಳು ಅಥವಾ ಅಥ್ಲೀಟ್ ಸಮಿತಿಗಳಲ್ಲಿ ಭಾಗವಹಿಸಲು ನಿರ್ಬಂಧ ವಿಧಿಸಲಾಗಿದೆ.
    • ರಾಷ್ಟ್ರೀಯ ಕ್ರೀಡಾ ಮಂಡಳಿಯು:- ಮಾನ್ಯತೆ, ಅಂಗಸಂಸ್ಥೆಗಳ ನೋಂದಣಿ ಮತ್ತು ಆಡಳಿತ ಅಥವಾ ನಿಧಿ ದುರುಪಯೋಗಕ್ಕೆ ಸಂಬಂಧಿಸಿದ ತನಿಖೆಗಳ ಮೇಲ್ವಿಚಾರಣೆಯನ್ನು ನಡೆಸುತ್ತದೆ.
    • ರಾಷ್ಟ್ರೀಯ ಕ್ರೀಡಾ ಚುನಾವಣಾ ಸಮಿತಿ:- ಇದು ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸುವ ಜವಾಬ್ದಾರಿ ಹೊತ್ತಿದ್ದು, ಎಲ್ಲಾ ಸಮಯದಲ್ಲೂ ಕನಿಷ್ಠ 20 ಸದಸ್ಯರ ಬಲವನ್ನು ಹೊಂದಿರಬೇಕು.

    ಮರ್ಕೋಸೂರ್ ಒಪ್ಪಂದಕ್ಕೆ ಐರೋಪ್ಯಾ ಒಕ್ಕೂಟ (EU) ರಾಷ್ಟ್ರಗಳ ಅನುಮೋದನೆ

    ಸಾಮಾನ್ಯ ಅಧ್ಯಯನ- 2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಫ್ರಾನ್ಸ್ ನೇತೃತ್ವದ ತೀವ್ರ ವಿರೋಧ ಮತ್ತು ಯುರೋಪಿನಾದ್ಯಂತ ರೈತರ ಕಳವಳಗಳ ಹೊರತಾಗಿಯೂ, ಐರೋಪ್ಯಾ ಒಕ್ಕೂಟ (EU) ದಕ್ಷಿಣ ಅಮೆರಿಕದ ಮರ್ಕೋಸೂರ್ ಬಣದೊಂದಿಗೆ ದೀರ್ಘಕಾಲದ ವಿಳಂಬವಾಗಿದ್ದ ವ್ಯಾಪಾರ ಒಪ್ಪಂದವನ್ನು ಅನುಮೋದಿಸಿದೆ.

    ‘ಮರ್ಕೋಸೂರ್’ ಬಗ್ಗೆ:

    • ಮರ್ಕೋಸೂರ್ 1991 ರಲ್ಲಿ ರಚನೆಯಾದ ದಕ್ಷಿಣ ಅಮೆರಿಕದ ಒಂದು ವ್ಯಾಪಾರ ಬಣವಾಗಿದೆ .
    • 5 ಸದಸ್ಯ ರಾಷ್ಟ್ರಗಳು:- ಅರ್ಜೆಂಟೀನಾ, ಬ್ರೆಜಿಲ್, ಪರಾಗ್ವೆ, ಉರುಗ್ವೆ ಮತ್ತು ಬೊಲಿವಿಯಾ (ಇದರ ಹೊಸ ಪೂರ್ಣಾವಧಿಯ ಸದಸ್ಯ ರಾಷ್ಟ್ರವಾಗಿದೆ).
    • ಉದ್ದೇಶ:- ಮುಕ್ತ ವ್ಯಾಪಾರ ಮತ್ತು ಆರ್ಥಿಕ ಏಕೀಕರಣವನ್ನು ಸಾಧಿಸುವುದು ಇದರ ಉದ್ದೇಶವಾಗಿದೆ.
    • ಗಮನಿಸಿ:- ಈ ಮೊದಲು ಸದಸ್ಯ ರಾಷ್ಟ್ರವಾಗಿದ್ದ ವೆನೆಜುವೆಲಾವನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ.

    ಐರೋಪ್ಯಾ ಒಕ್ಕೂಟ -ಮರ್ಕೋಸೂರ್ ಮುಕ್ತ ವ್ಯಾಪಾರ ಒಪ್ಪಂದ:

    • ಸುಂಕ ಕಡಿತ:- ಸುಂಕ ಕಡಿತದ ವಿಷಯದಲ್ಲಿ ಇದು ಐರೋಪ್ಯಾ ಒಕ್ಕೂಟ (EU)ದ ಸಾರ್ವಕಾಲಿಕ ಅತಿದೊಡ್ಡ ಒಪ್ಪಂದವಾಗಿದ್ದು, EU ರಫ್ತುಗಳ ಮೇಲಿನ €4 ಬಿಲಿಯನ್‌ಗೂ ಹೆಚ್ಚು ಸುಂಕಗಳನ್ನು ರದ್ದುಗೊಳಿಸುತ್ತದೆ.
    • €111 ಬಿಲಿಯನ್ ವ್ಯಾಪಾರ ಮೌಲ್ಯ:- ಈ ಎರಡು ಬಣಗಳ ನಡುವಿನ ವ್ಯಾಪಾರ ಮೌಲ್ಯವು €111 ಬಿಲಿಯನ್ ಆಗಿದೆ. EU ಪ್ರಮುಖವಾಗಿ ಯಂತ್ರೋಪಕರಣಗಳು, ರಾಸಾಯನಿಕಗಳು ಮತ್ತು ಸಾರಿಗೆ ಉಪಕರಣಗಳನ್ನು ರಫ್ತು ಮಾಡುತ್ತಿದ್ದರೆ, ಕೃಷಿ ಉತ್ಪನ್ನಗಳು ಮತ್ತು ಖನಿಜಗಳನ್ನು ಆಮದು ಮಾಡಿಕೊಳ್ಳುತ್ತದೆ.
    • ಒಪ್ಪಂದದ ವಿವರಗಳು:- ಈ ಒಪ್ಪಂದದ ಅಡಿಯಲ್ಲಿ, 
    1. ಮರ್ಕೋಸೂರ್ 15 ವರ್ಷಗಳಲ್ಲಿ EU ರಫ್ತುಗಳ ಮೇಲಿನ 91% ರಷ್ಟು ಸುಂಕವನ್ನು ತೆಗೆದುಹಾಕುತ್ತದೆ. 
    2. ಅದೇ ರೀತಿ, EU 10 ವರ್ಷಗಳಲ್ಲಿ ಮರ್ಕೋಸೂರ್ ರಫ್ತುಗಳ ಮೇಲಿನ 92% ರಷ್ಟು ಸುಂಕವನ್ನು ರದ್ದುಗೊಳಿಸುತ್ತದೆ.
    3. ಕೋಟಾಗಳ ಕಾಯ್ದಿರಿಸುವಿಕೆ:- ‘ಸೂಕ್ಷ್ಮ ಕೃಷಿ ಸರಕುಗಳ’ ಮೇಲೆ ಎರಡೂ ಕಡೆಯವರು ಕೋಟಾಗಳನ್ನು ಕಾಯ್ದುಕೊಂಡಿದ್ದಾರೆ. ಆದಾಗ್ಯೂ, EU ಗೋಮಾಂಸ ಆಮದು ಕೋಟಾಗಳನ್ನು ಹೆಚ್ಚಿಸಲಿದೆ ಮತ್ತು ಮರ್ಕೋಸೂರ್, ಸುಂಕ ರಹಿತ ಚೀಸ್ ಆಮದಿಗೆ ಅನುಮತಿ ನೀಡಲಿದೆ.

    DRDO ದಿಂದ 3ನೇ ತಲೆಮಾರಿನ MPATGM ನ ಯಶಸ್ವಿ ಹಾರಾಟ ಪರೀಕ್ಷೆ

    ಸಾಮಾನ್ಯ ಅಧ್ಯಯನ- 3/ ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಚಲಿಸುವ ಗುರಿಯ ಮೇಲೂ ‘ಟಾಪ್ ಅಟ್ಯಾಕ್’ (ಮೇಲ್ಭಾಗದಿಂದ ಆಕ್ರಮಣ ಮಾಡುವ) ಸಾಮರ್ಥ್ಯವನ್ನು ಹೊಂದಿರುವ, 3ನೇ ತಲೆಮಾರಿನ ‘ಫೈರ್ ಅಂಡ್ ಫರ್ಗೆಟ್’ ಮ್ಯಾನ್ ಪೋರ್ಟಬಲ್ ಟ್ಯಾಂಕ್ ನಿರೋಧಕ ಮಾರ್ಗದರ್ಶಿ ಕ್ಷಿಪಣಿ (MPATGM)ಯ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ.

    ಮ್ಯಾನ್ ಪೋರ್ಟಬಲ್ ಟ್ಯಾಂಕ್ ನಿರೋಧಕ ಮಾರ್ಗದರ್ಶಿ ಕ್ಷಿಪಣಿ (MPATGM)ಯ ಬಗ್ಗೆ:

    • ಈ ‘ಫೈರ್ ಅಂಡ್ ಫರ್ಗೆಟ್’ ಕ್ಷಿಪಣಿಯನ್ನು DRDO ಸ್ವದೇಶೀಯವಾಗಿ ಅಭಿವೃದ್ಧಿಪಡಿಸಿದೆ.
    • ‘ಫೈರ್ ಅಂಡ್ ಫರ್ಗೆಟ್’ (ಹಾರಿಸಿ ಮರೆತುಬಿಡು) ಮಾದರಿಯ ಕ್ಷಿಪಣಿ:- ಇದು ಉಡಾವಣೆಗೆ ಮುನ್ನವೇ ಗುರಿಯನ್ನು ಬಂಧಿಸುವ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದೆ. ಉಡಾವಣೆಯ ನಂತರ ಇದಕ್ಕೆ ಬಳಕೆದಾರನಿಂದ ಹೆಚ್ಚಿನ ಮಾರ್ಗದರ್ಶನ ಅಥವಾ ನಿಯಂತ್ರಣದ ಅಗತ್ಯವಿರುವುದಿಲ್ಲ.
    • ಇದು ಇಮೇಜಿಂಗ್ ಇನ್ಫ್ರಾರೆಡ್ ಹೋಮಿಂಗ್ ಸೀಕರ್, ಟ್ಯಾಂಡೆಮ್ ಸಿಡಿತಲೆ, ಆಲ್-ಎಲೆಕ್ಟ್ರಿಕ್ ಕಂಟ್ರೋಲ್ ಆಕ್ಚುಯೇಶನ್ ಸಿಸ್ಟಮ್, ಫೈರ್ ಕಂಟ್ರೋಲ್ ಸಿಸ್ಟಮ್, ಪ್ರೊಪಲ್ಷನ್ ಸಿಸ್ಟಮ್ ಮತ್ತು ಉನ್ನತ-ಕಾರ್ಯಕ್ಷಮತೆಯ ಸೈಟಿಂಗ್ ಸಿಸ್ಟಮ್ ಸೇರಿದಂತೆ ಅತ್ಯಾಧುನಿಕ ಸ್ವದೇಶಿ ತಂತ್ರಜ್ಞಾನಗಳನ್ನು ಹೊಂದಿದೆ.
    • ಈ ಕ್ಷಿಪಣಿಯು ಹಗಲು ಮತ್ತು ರಾತ್ರಿ ಯುದ್ಧ ಕಾರ್ಯಾಚರಣೆಗಳನ್ನು ನಡೆಸಲು ಸಮರ್ಥವಾಗಿದೆ ಮತ್ತು ಆಧುನಿಕ ಪ್ರಮುಖ ಯುದ್ಧ ಟ್ಯಾಂಕ್‌ಗಳನ್ನು ಪರಿಣಾಮಕಾರಿಯಾಗಿ ಸೋಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
    • ಇದನ್ನು ಟ್ರೈಪಾಡ್ ಮತ್ತು ಸೇನಾ ವಾಹನ ಉಡಾವಣೆ ಎರಡರಿಂದಲೂ ಉಡಾವಣೆ ಮಾಡಬಹುದು.

    38ನೇ ಭಾರತ-ಫ್ರಾನ್ಸ್ ಕಾರ್ಯತಂತ್ರದ ಸಂವಾದ

    ಸಾಮಾನ್ಯ ಅಧ್ಯಯನ- 2 / ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಫ್ರೆಂಚ್ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರರ ಸಹ-ಅಧ್ಯಕ್ಷತೆಯಲ್ಲಿ ನಡೆದ 38ನೇ ‘ಭಾರತ-ಫ್ರಾನ್ಸ್ ಕಾರ್ಯತಂತ್ರದ ಸಂವಾದ’ದ ಸಂದರ್ಭದಲ್ಲಿ, ಭಾರತ ಮತ್ತು ಫ್ರಾನ್ಸ್ ತಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಪುನರುಚ್ಚರಿಸಿದವು.

    ಭಾರತ-ಫ್ರಾನ್ಸ್ ಸಂಬಂಧಗಳು:

    • ಜನವರಿ 26, 1998 ರಂದು ಕಾರ್ಯತಂತ್ರದ ಪಾಲುದಾರಿಕೆ ಪ್ರಾರಂಭ:- ಇದು ಭಾರತದ ಮೊಟ್ಟಮೊದಲ ಕಾರ್ಯತಂತ್ರದ ಪಾಲುದಾರಿಕೆಯಾಗಿದೆ.
    • ಡಸಾಲ್ಟ್ ಏವಿಯೇಷನ್‌ನಿಂದ ರಫೇಲ್ ಯುದ್ಧ ವಿಮಾನಗಳ ಖರೀದಿ:- ಭಾರತ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ.
    • ಪ್ರಾಜೆಕ್ಟ್ P-75ನ ಅಡಿಯಲ್ಲಿ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳು ನಿರ್ಮಾಣ:- ಫ್ರಾನ್ಸ್‌ನ ನೇವಲ್ ಗ್ರೂಪ್‌ನ ಸಹಯೋಗದೊಂದಿಗೆ, ಭಾರತದಲ್ಲಿ 6 ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಾಗಿದೆ; ಇದರಲ್ಲಿ ‘ಐಎನ್‌ಎಸ್ ವಾಗ್ಶೀರ್’ ಇತ್ತೀಚಿನದ್ದಾಗಿದೆ. 
    • ‘ರಫೇಲ್-ಎಂ’ ಯುದ್ಧ ವಿಮಾನಗಳ ಖರೀದಿ:- ಉಭಯ ರಾಷ್ಟ್ರಗಳು ಭಾರತೀಯ ನೌಕಾಪಡೆಗಾಗಿ 26 ‘ರಫೇಲ್-ಎಂ’ ಯುದ್ಧ ವಿಮಾನಗಳನ್ನು ಖರೀದಿಸಲು ಅಂತರ-ಸರ್ಕಾರಿ ಒಪ್ಪಂದವನ್ನು (IGA) ಅಧಿಕೃತವಾಗಿ ಅಂತಿಮಗೊಳಿಸಿವೆ.
    • ಜಂಟಿ ಸಮರಾಭ್ಯಾಸಗಳು:- ಶಕ್ತಿ, ವರುಣ, ಫ್ರಿನ್ಜೆಕ್ಸ್-23 (Shakti, Varuna, FRINJEX-23).
    • ಐರೋಪ್ಯ ಒಕ್ಕೂಟದೊಳಗೆ ಭಾರತದ 5ನೇ ಅತಿದೊಡ್ಡ ವ್ಯಾಪಾರ ಪಾಲುದಾರ:- ಮೊದಲ 4 ಸ್ಥಾನಗಳು- ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಇಟಲಿ ಮತ್ತು ಜರ್ಮನಿ.
    • ಭಾರತದ ಏಕೀಕೃತ ಪಾವತಿ ವ್ಯವಸ್ಥೆ (UPI):- ಫ್ರಾನನಲ್ಲಿ ಸಕ್ರಿಯಗೊಳಿಸುವ ಪ್ರಕ್ರಿಯೆಯು ಯಶಸ್ವಿಯಾಗಿದೆ.
    • ಜಂಟಿ ಮಿಷನ್‌ಗಳು:- 
    • TRISHNA (ತ್ರಿಷ್ಠಾ)- ಉಪಗ್ರಹ ಮಿಷನ್,
    • ಸಮುದ್ರ ವಲಯದ ಜಾಗೃತಿ (MDA) ವ್ಯವಸ್ಥೆಗಳು, 
    • ನೆಲದ ಮೇಲೆ ನಿಲ್ದಾಣ ಬೆಂಬಲ (ಗ್ರೌಂಡ್ ಸ್ಟೇಷನ್ ಸಪೋರ್ಟ್).
    • ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA): ವಿಶ್ವದಾದ್ಯಂತ ಸೌರಶಕ್ತಿಯನ್ನು ಉತ್ತೇಜಿಸಲು 2015 ರಲ್ಲಿ ಭಾರತ ಮತ್ತು ಫ್ರಾನ್ಸ್ ಇದನ್ನು ಜಂಟಿಯಾಗಿ ಸ್ಥಾಪಿಸಿದವು.

    ಪುಷ್ಪಗಳ ಕಣಿವೆ (Valley of Flowers)

    ಸಾಮಾನ್ಯ ಅಧ್ಯಯನ-1/ಭೂಗೋಳಶಾಸ್ತ್ರ

    ಇದೀಗ ಸುದ್ದಿಯಲ್ಲಿದೆ: 

    • ಪುಷ್ಪಗಳ ಕಣಿವೆಯ ಸಮೀಪದಲ್ಲಿ ಕಾಡ್ಗಿಚ್ಚು ಹಬ್ಬುತ್ತಿದ್ದು, ಅರಣ್ಯ ಇಲಾಖೆಯು ವಾಯುಪಡೆಯ ಸಹಾಯವನ್ನು ಕೋರುವ ಅನಿವಾರ್ಯತೆ ಉಂಟಾಗಿದೆ.

    ಪುಷ್ಪಗಳ ಕಣಿವೆಯ ಬಗ್ಗೆ:

    • ಸ್ಥಳ:- ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ‘ಪುಷ್ಪಗಳ ಕಣಿವೆ ರಾಷ್ಟ್ರೀಯ ಉದ್ಯಾನವನ’ದ ಒಳಭಾಗದಲ್ಲಿದೆ. ಇದು “ನಂದಾ ದೇವಿ ಜೀವಗೋಳ ಮೀಸಲು ಪ್ರದೇಶ”ದ ಭಾಗವಾಗಿದೆ.
    • ಪುಷ್ಪಗಳ ಕಣಿವೆ ಎಂದು ಕರೆಯಲು ಕಾರಣ:- ಮುಂಗಾರು ಮಳೆಯ ಸಮಯದಲ್ಲಿ ಇಡೀ ಕಣಿವೆಯು ಸಾವಿರಾರು ಅರಳುವ ಹೂವುಗಳಿಂದ ಜೀವಂತಿಕೆ ಪಡೆಯುವುದರಿಂದ ಈ ಹೆಸರು ಕರೆಯುತ್ತಾರೆ. 
    • 1982 ರಲ್ಲಿ ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಲಾಯಿತು. 
    • 2005 ರಲ್ಲಿ ‘ಯುನೆಸ್ಕೋ ವಿಶ್ವ ಪರಂಪರೆಯ ತಾಣ’ವನ್ನಾಗಿ ಘೋಷಿಸಲಾಯಿತು. ಏಕೆಂದರೆ ಇದರ ಸಾಟಿಯಿಲ್ಲದ ಸೌಂದರ್ಯ ಮತ್ತು ವಿಶಿಷ್ಟ ಉನ್ನತದ (ಆಲ್ಪೈನ್) ಪರಿಸರ ವ್ಯವಸ್ಥೆಯಿಂದಾಗಿ.
    • ಬ್ರಿಟಿಷ್ ಪರ್ವತಾರೋಹಿ ಫ್ರಾಂಕ್ ಸ್ಮಿತ್ ಅವರು 1931 ರಲ್ಲಿ ಆಕಸ್ಮಿಕವಾಗಿ ಈ ಸ್ಥಳವನ್ನು ತಲುಪಿದಾಗ, ಈ ಕಣಿವೆಯನ್ನು ಅಧಿಕೃತವಾಗಿ ಕಂಡುಹಿಡಿಯಲಾಯಿತು.

    NPS ವಾತ್ಸಲ್ಯ ಯೋಜನೆ, 2025

    ಸಾಮಾನ್ಯ ಅಧ್ಯಯನ- 2/ ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ:

    • ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA)ವು, ಅಪ್ರಾಪ್ತ ವಯಸ್ಕರಿಗೆ ಜೀವನದ ಆರಂಭಿಕ ಹಂತದಲ್ಲೇ ಪಿಂಚಣಿ ಸೌಲಭ್ಯವನ್ನು ಒದಗಿಸಲು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಚೌಕಟ್ಟನ್ನು ವಿಸ್ತರಿಸುವ ಮೂಲಕ ‘ಎನ್‌ಪಿಎಸ್ ವಾತ್ಸಲ್ಯ ಯೋಜನೆ, 2025’ ಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ.

    NPS ವಾತ್ಸಲ್ಯ ಯೋಜನೆ, 2025 ರ ಬಗ್ಗೆ:

    • ಅಪ್ರಾಪ್ತ ವಯಸ್ಕರಿಗಾಗಿ ಪಿಂಚಣಿ ಉಳಿತಾಯ ಯೋಜನೆ:- ಇದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)ಯ ಅಡಿಯಲ್ಲಿ ಬರುತ್ತದೆ.
    • ಪೋಷಕರಿಗೆ ಅಥವಾ ಕಾನೂನುಬದ್ಧ ಪಾಲಕರಿಗೆ ಅವಕಾಶ:- ಇದು ಮಗುವಿನ ಪರವಾಗಿ ಪೋಷಕರು ಅಥವಾ ಕಾನೂನುಬದ್ಧ ಪಾಲಕರಿಗೆ ಎನ್‌ಪಿಎಸ್ ಖಾತೆಯನ್ನು ತೆರೆಯಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

    ಪ್ರಮುಖ ವೈಶಿಷ್ಟ್ಯಗಳು:

    • ಅರ್ಹತೆ:- 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾರತೀಯ ನಾಗರಿಕರು.
    • ಖಾತೆಯ ಪ್ರಕಾರ:- ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ವೈಯಕ್ತಿಕ ಪಿಂಚಣಿ ಖಾತೆ ತೆರೆಯಲಾಗುವುದು.
    • ನಿರ್ವಹಣೆ:- ಮಗುವು ಪ್ರಾಪ್ತ ವಯಸ್ಕನಾಗುವವರೆಗೆ ಪೋಷಕರು ಅಥವಾ ಪಾಲಕರು ಈ ಖಾತೆಯನ್ನು ನಿರ್ವಹಿಸುತ್ತಾರೆ.
    • ಪರಿವರ್ತನೆ:- 18 ವರ್ಷ ತುಂಬಿದ ನಂತರ, ಖಾತೆಯು ಸಾಮಾನ್ಯ ಎನ್‌ಪಿಎಸ್ ಖಾತೆಯಾಗಿ ಪರಿವರ್ತನೆಗೊಳ್ಳುತ್ತದೆ.
    • ಅತ್ಯಲ್ಪ ಅಗತ್ಯ ಪ್ರಮಾಣದ ಕೊಡುಗೆ:- ಕನಿಷ್ಠ ಆರಂಭಿಕ ಮತ್ತು ವಾರ್ಷಿಕ ಪಾಲು ₹250 ಆಗಿದ್ದು, ಪಾಲುದಾರಿಕೆಯ ಮೇಲೆ ಯಾವುದೇ ಗರಿಷ್ಠ ಮಿತಿಯಿಲ್ಲ.
    • ಪಿಂಚಣಿ ನಿಧಿ ವ್ಯವಸ್ಥಾಪಕರ (PFMs) ಮೂಲಕ ಹೂಡಿಕೆ:- ಎನ್‌ಪಿಎಸ್ ಮಾರ್ಗಸೂಚಿಗಳ ಪ್ರಕಾರ ಹಣವನ್ನು ಹೂಡಿಕೆ ಮಾಡಲಾಗುತ್ತದೆ.

    ನಿಶ್ಯಸ್ತ್ರೀಕರಣ ವಿಷಯಗಳ ಕುರಿತಾದ ಸಲಹಾ ಮಂಡಳಿ

    ಸಾಮಾನ್ಯ ಅಧ್ಯಯನ-2 / ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿ  ಡಿ.ಬಿ. ವೆಂಕಟೇಶ್ ವರ್ಮಾ ಅವರನ್ನು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರು 2026–27ರ ಅವಧಿಗೆ ‘ನಿಶ್ಯಸ್ತ್ರೀಕರಣ ವಿಷಯಗಳ ಕುರಿತಾದ ಸಲಹಾ ಮಂಡಳಿ’ಯ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. 
    • ಭಾರತೀಯರೊಬ್ಬರು ಈ ಹುದ್ದೆಯನ್ನು ಹೊಂದಿರುವುದು ಇದೇ ಮೊದಲ ಬಾರಿಯಾಗಿದೆ.

    ನಿಶ್ಯಸ್ತ್ರೀಕರಣ ವಿಷಯಗಳ ಕುರಿತಾದ ಸಲಹಾ ಮಂಡಳಿಯ ಬಗ್ಗೆ:

    • ಸ್ಥಾಪನೆ:- 1978
    • ರಚನೆ:- ಈ ಮಂಡಳಿಯು 15 ಸದಸ್ಯರನ್ನು ಒಳಗೊಂಡಿದೆ ಮತ್ತು ವಿಶ್ವಸಂಸ್ಥೆಯ ನಿಶ್ಯಸ್ತ್ರೀಕರಣ ಸಂಶೋಧನಾ ಸಂಸ್ಥೆಯ ನಿರ್ದೇಶಕರು ಇದರಲ್ಲಿ ಪದನಿಮಿತ್ತ ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ.
    • ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸಲಹೆ:- ಇದು ಶಸ್ತ್ರಾಸ್ತ್ರ ಮಿತಿ ಮತ್ತು ನಿಶ್ಯಸ್ತ್ರೀಕರಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸಲಹೆ ನೀಡುತ್ತದೆ.

    NIRANTAR (ನಿರಂತರ್) ವೇದಿಕೆ

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು, NIRANTAR/ನಿರಂತರ್ (ಪರಿವರ್ತನೆ, ಹೊಂದಿಕೆ ಮತ್ತು ಸ್ಥಿತಿಸ್ಥಾಪಕತ್ವದ ನಿರ್ಮಾಣಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳ ಸಂಶೋಧನೆ ಮತ್ತು ಅನ್ವಯಕ್ಕಾಗಿ ರಾಷ್ಟ್ರೀಯ ಸಂಸ್ಥೆ) ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

    NIRANTAR (ನಿರಂತರ್) ಸಂಸ್ಥೆಯ ಬಗ್ಗೆ:

    • ಸ್ಥಾಪನೆ:- ಇದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC)ದ ಅಡಿಯಲ್ಲಿರುವ ಸಂಸ್ಥೆಗಳ ಒಂದು ವೇದಿಕೆಯಾಗಿದ್ದು, ಸಮನ್ವಯ ಮತ್ತು ಸಹಯೋಗವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
    • ಉದ್ದೇಶ:- ಇದರ ನಾಲ್ಕು ವಿಭಾಗಗಳು, ಅಭಿವೃದ್ಧಿಗಾಗಿ ಸಂಪನ್ಮೂಲಗಳ, ವಿಶೇಷವಾಗಿ ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆಯನ್ನು ಖಚಿತಪಡಿಸಿಕೊಳ್ಳಲು, ಅವುಗಳ ಸಂಶೋಧನೆ, ಮೌಲ್ಯಮಾಪನ ಮತ್ತು ಬಳಕೆಯ ಮೇಲೆ ಗಮನಹರಿಸುತ್ತವೆ.
    • ಮಹತ್ವ:- ಅಭಿವೃದ್ಧಿಗಾಗಿ ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ‘ನಿರಂತರ್’ ವೇದಿಕೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ.

    ತ್ವರಿತ ವಾಣಿಜ್ಯ (ಕ್ವಿಕ್ ಕಾಮರ್ಸ್) ವೇದಿಕೆಗಳು 10 ನಿಮಿಷಗಳ ವಿತರಣೆ ಸೇವೆಯನ್ನು ನಿಲ್ಲಿಸಲಿವೆ

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಸರ್ಕಾರದ ಆದೇಶದ ಬಳಿಕ, ಭಾರತದ ತ್ವರಿತ ವಾಣಿಜ್ಯ (ಕ್ವಿಕ್ ಕಾಮರ್ಸ್) ಕಂಪನಿಗಳಾದ ಸ್ವಿಗ್ಗಿ ಮತ್ತು ಜೆಪ್ಟೋ, ತಮ್ಮ ತ್ವರಿತ ವಾಣಿಜ್ಯ ಸೇವೆಯನ್ನು ಇನ್ನು ಮುಂದೆ ‘10 ನಿಮಿಷಗಳ ಸೇವೆ’ ಎಂದು ಪ್ರಚಾರ ಮಾಡುವುದನ್ನು ನಿಲ್ಲಿಸಲು ತಮ್ಮ ಬ್ರಾಂಡಿಂಗ್ ಅನ್ನು ಬದಲಿಸಿಕೊಂಡಿವೆ.
    • ಈ ಕ್ರಮವು ಗಿಗ್ ಕಾರ್ಮಿಕರ ಹೆಚ್ಚಿನ ಸುರಕ್ಷತೆ, ರಕ್ಷಣೆ ಮತ್ತು ಸುಧಾರಿತ ಕೆಲಸದ ಪರಿಸ್ಥಿತಿಗಳನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.

    ಗಿಗ್ ಕಾರ್ಮಿಕರ ಬಗ್ಗೆ:

    • ಸಾಮಾಜಿಕ ಭದ್ರತಾ ಸಂಹಿತೆ, 2020:- ಇದರ ಪ್ರಕಾರ, ಗಿಗ್ ಕಾರ್ಮಿಕರು ಎಂದರೆ ಸಾಂಪ್ರದಾಯಿಕ ಉದ್ಯೋಗದಾತ–ಉದ್ಯೋಗಿ ಸಂಬಂಧದ ಹೊರತಾಗಿ, ಕೆಲಸಗಳನ್ನು ನಿರ್ವಹಿಸಿ ಅಥವಾ ಕೆಲಸದ ವ್ಯವಸ್ಥೆಗಳಲ್ಲಿ ಭಾಗವಹಿಸಿ, ಅಂತಹ ಚಟುವಟಿಕೆಗಳಿಂದ ಆದಾಯವನ್ನು ಗಳಿಸುವ ವ್ಯಕ್ತಿಗಳು.
    • ನೀತಿ ಆಯೋಗದ 2020–21 ದತ್ತಾoಶದ ಪ್ರಕಾರ:- 77 ಲಕ್ಷ ಕಾರ್ಮಿಕರು ಗಿಗ್ ಆರ್ಥಿಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಇದು 2029–30 ರ ವೇಳೆಗೆ 2.35 ಕೋಟಿಗೆ ವಿಸ್ತರಿಸುವ ನಿರೀಕ್ಷೆಯಿದೆ.

    ಭಾರತದಲ್ಲಿ ಗಿಗ್ ಕಾರ್ಮಿಕರಿಗಾಗಿ ಇರುವ ಉಪಕ್ರಮಗಳು:

    • ಸಾಮಾಜಿಕ ಭದ್ರತಾ ಸಂಹಿತೆ 2020:- ಇದು ಗಿಗ್ ಕಾರ್ಮಿಕರಿಗೆ ಜೀವ ಮತ್ತು ಅಂಗವೈಕಲ್ಯ ರಕ್ಷಣೆ, ಅಪಘಾತ ವಿಮೆ ಮುಂತಾದ ವಿವಿಧ ಪ್ರಯೋಜನಗಳನ್ನು ಕಲ್ಪಿಸುತ್ತದೆ.
    • ಇ-ಶ್ರಮ್ ಪೋರ್ಟಲ್:- ಇದು ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶ ಸಂಗ್ರಹವನ್ನು ಸ್ಥಾಪಿಸುತ್ತದೆ ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸಲು ಹಾಗೂ ಅವರಿಗೆ ಸಾಮಾಜಿಕ ಭದ್ರತಾ ಯೋಜನೆಯ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
    • ಕರ್ನಾಟಕ ವೇದಿಕೆ (ಪ್ಲಾಟ್‌ಫಾರ್ಮ್) ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2024: ಇದು ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲು ಮತ್ತು ಕಲ್ಯಾಣ ಶುಲ್ಕವನ್ನು ವಿಧಿಸಲು ಅವಕಾಶ ನೀಡುತ್ತದೆ.

    ಉಬ್ಬು (ಪಫರ್) ಮೀನು ವಿಷಬಾಧೆ

    ಸಾಮಾನ್ಯ ಅಧ್ಯಯನ-3/ ಪ್ರಭೇದಗಳು

    ಇದೀಗ ಸುದ್ದಿಯಲ್ಲಿದೆ:

    • ವಿಜ್ಞಾನಿಗಳು ಭಾರತದಲ್ಲಿ ಪಫರ್‌ಫಿಶ್ ಸೇವನೆಯಿಂದ ವಿಷಪೂರಿತವಾದ ಮೊದಲ ಪ್ರಕರಣವನ್ನು ದೃಢಪಡಿಸಿದ್ದಾರೆ. ಈ ಘಟನೆಯು, ನದಿ ಮೂಲಗಳಲ್ಲಿರುವ ಆದರೆ ಈವರೆಗೂ ಹೆಚ್ಚಾಗಿ ಗುರುತಿಸಲ್ಪಡದ ಆರೋಗ್ಯದ ಅಪಾಯಗಳತ್ತ ಗಮನ ಸೆಳೆದಿದೆ.

    ಉಬ್ಬು ಮೀನಿನ (Pufferfish) ಬಗ್ಗೆ:

    • ಇದು ಟೆಟ್ರಾಓಡಾಂಟಿಫಾರ್ಮೀಸ್ (Tetraodontiformes) ಎಂಬ ವರ್ಗೀಕರಣ ಕ್ರಮಕ್ಕೆ ಸೇರಿದೆ.
    • ಇದನ್ನು ಸ್ಥಳೀಯವಾಗಿ ಟೋಡ್‌ ಮೀನು, ಪಟ್ಕಾ ಮೀನು, ಬಲೂನ್‌ ಮೀನು ಮತ್ತು ಫುಗು ಎಂತಲೂ ಕರೆಯಲಾಗುತ್ತದೆ.
    • ಜಾಗತಿಕ ಪಟ್ಟಿಗಳಲ್ಲಿ ಸರಿಸುಮಾರು 190–193 ಮಾನ್ಯವಾದ ಪ್ರಭೇದಗಳಿವೆ.
    • ಸರ್ವಭಕ್ಷಕ ಜೀವಿಗಳಾಗಿವೆ:- ಇವು “ಬೆಂಥಿಕ್” (ಜಲಮೂಲಗಳ ತಳಭಾಗದಲ್ಲಿ ವಾಸಿಸುವ) ಆವಾಸಸ್ಥಾನವನ್ನು ಹೊಂದಿವೆ. 
    • ಭಾರತದಲ್ಲಿ ವರದಿಯಾದ ಸಿಹಿನೀರಿನ ಉಬ್ಬು ಮೀನು ಪ್ರಭೇದಗಳು ಸಾಮಾನ್ಯವಾಗಿ ನಿರ್ದಿಷ್ಟ ಭೌಗೋಳಿಕ ಪ್ರದೇಶಗಳಿಗೆ ಸ್ಥಳೀಯವಾಗಿವೆ ಮತ್ತು ಆರೋಗ್ಯಕರ ನದಿ ಪರಿಸರ ವ್ಯವಸ್ಥೆಗಳ ಸೂಚಕಗಳಾಗಿ ಕಾರ್ಯನಿರ್ವಹಿಸುತ್ತವೆ.

    ಭಾರತದಲ್ಲಿನ ಸ್ಥಿತಿಗತಿ:

    • ಭಾರತೀಯ ಜಲಾನಯನ ಪ್ರದೇಶಗಳಲ್ಲಿ ಪ್ರಸ್ತುತವಾಗಿ 8 ಕುಲಗಳು (genera) ಮತ್ತು 32 ಪ್ರಭೇದದ ಉಬ್ಬು ಮೀನುಗಳು ಕಂಡು ಬರುತ್ತವೆ.
    • ಅವುಗಳ ಹಂಚಿಕೆಯು ನಿರ್ದಿಷ್ಟ ಪ್ರದೇಶಗಳು ಮತ್ತು ನದಿ ವ್ಯವಸ್ಥೆಗಳಿಗೆ, ಪ್ರಮುಖವಾಗಿ ಪಶ್ಚಿಮ ಘಟ್ಟಗಳು ಮತ್ತು ಗಂಗಾ, ಬ್ರಹ್ಮಪುತ್ರ ಹಾಗೂ ಮಹಾನದಿಯಂತಹ ಪ್ರಮುಖ ಜಲಾನಯನ ಪ್ರದೇಶಗಳಿಗೆ ಸೀಮಿತವಾಗಿದೆ.

    IUCN ಕೆಂಪು ಪಟ್ಟಿಯಲ್ಲಿ ಸ್ಥಿತಿಗತಿ:

    • ‘ಕುಬ್ಜ ಉಬ್ಬು ಮೀನನ್ನು ‘ದುರ್ಬಲ’ (VU) ಎಂದು ವರ್ಗೀಕರಿಸಲಾಗಿದೆ.

    ರಾಷ್ಟ್ರೀಯ ಉದ್ಯಮಶೀಲತಾ ಅಭಿಯಾನ

    ಸಾಮಾನ್ಯ ಅಧ್ಯಯನ-2 / ಆಡಳಿತ, ಗ್ರಾಮೀಣಾಭಿವೃದ್ಧಿ

    ಇದೀಗ ಸುದ್ದಿಯಲ್ಲಿದೆ:

    • ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM)ಯ ಅಡಿಯಲ್ಲಿ, ಗ್ರಾಮೀಣ ಮಹಿಳೆಯರಿಗೆ ಕೃಷಿಯೇತರ ಜೀವನೋಪಾಯವನ್ನು ಬಲಪಡಿಸಲು “ರಾಷ್ಟ್ರೀಯ ಉದ್ಯಮಶೀಲತಾ ಅಭಿಯಾನ”ಕ್ಕೆ ಚಾಲನೆ ನೀಡಲಾಗಿದೆ.
    • ಈ ಅಭಿಯಾನವು ಉದ್ಯಮ ಉತ್ತೇಜನಕ್ಕಾಗಿ 50,000 ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡುವ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

    ಗ್ರಾಮೀಣ ಉದ್ಯಮಶೀಲತೆಯನ್ನು ಉತ್ತೇಜಿಸಲು ಸರ್ಕಾರದ ಕ್ರಮಗಳು:

    • ಪ್ರಧಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ (PMEGP):- 
    1. ಅನುಷ್ಠಾನ:- ಕೆವಿಐಸಿ (KVIC)
    2. ಉದ್ದೇಶ:- ಉತ್ಪಾದನೆ ಮತ್ತು ಸೇವಾ ವಲಯಗಳಲ್ಲಿ ಹೊಸ ಸೂಕ್ಷ್ಮ ಉದ್ಯಮಗಳನ್ನು ಸ್ಥಾಪಿಸಲು. 
    3. ಸಹಾಯಧನ:- ಯೋಜನಾ ವೆಚ್ಚದ ಮೇಲೆ 35% ರಷ್ಟು ಸಹಾಯಧನವನ್ನು (ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು) ನೀಡುತ್ತದೆ. 
    4. ಸಾಲ:- ಇದು ನಿರುದ್ಯೋಗಿ ಯುವಕರು ಮತ್ತು ಕುಶಲಕರ್ಮಿಗಳನ್ನು ಗುರಿಯಾಗಿಸಿಕೊಂಡು ₹25 ಲಕ್ಷದವರೆಗೆ ಸಾಲವನ್ನು ಒದಗಿಸುತ್ತದೆ.
    • ಆಸ್ಪೈರ್ (ASPIRE) ಯೋಜನೆ:- 
    1. ಸಚಿವಾಲಯ:- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ
    2. ಉದ್ದೇಶ:- ಕೃಷಿ-ಗ್ರಾಮೀಣ ನವೋದ್ಯಮಗಳನ್ನು ಉತ್ತೇಜಿಸಲು ಗ್ರಾಮೀಣ ಪ್ರದೇಶಗಳಲ್ಲಿ ‘ಜೀವನೋಪಾಯ ವ್ಯಾಪಾರ ಇನ್ಕ್ಯುಬೇಟರ್‌’ಗಳಿಗೆ (LBIs) ಮೂಲಸೌಕರ್ಯ, ಕೌಶಲ್ಯ ಕಾರ್ಯಕ್ರಮಗಳು ಮತ್ತು ನಾವೀನ್ಯತೆಗೆ ಬೆಂಬಲ. 
    3. ಧನಸಹಾಯ:- ₹1 ಕೋಟಿವರೆಗೆ.
    • ಲಖ್ ಪತಿ ದೀದಿ ಉಪಕ್ರಮ:- 
    1. ವ್ಯಾಖ್ಯಾನ:- ಕೃಷಿ ಅಥವಾ ಕೃಷಿಯೇತರ ಚಟುವಟಿಕೆಗಳ ಮೂಲಕ 4 ಋತುಗಳು/ ಚಕ್ರಗಳಲ್ಲಿ ವಾರ್ಷಿಕ ₹1 ಲಕ್ಷಕ್ಕೂ ಹೆಚ್ಚು (ತಿಂಗಳಿಗೆ ₹10,000+) ಕುಟುಂಬದ ಆದಾಯವನ್ನು ಗಳಿಸುವ ಸ್ವಸಹಾಯ ಸಂಘದ ಮಹಿಳೆಯರನ್ನು “ಲಖ್ ಪತಿ ದೀದಿ” ಎಂದು ಗುರುತಿಸಲಾಗುತ್ತದೆ.

    DAY – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM)ಯ ಬಗ್ಗೆ:

      • 2011 ರಲ್ಲಿ ಪ್ರಾರಂಭ:- ಇದನ್ನು ಸ್ವರ್ಣಜಯಂತಿ ಗ್ರಾಮ ಸ್ವರೋಜಗಾರ್ ಯೋಜನೆಯಿಂದ (SGSY) ಮರು ರೂಪಿಸಿ ಪ್ರಾರಂಭಿಸಲಾಯಿತು.
      • 2016 ರಲ್ಲಿ ಮರುನಾಮಕರಣ:- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (NRLM) ಅನ್ನು ‘DAY-NRLM’ ಎಂದು ಮರುನಾಮಕರಣ ಮಾಡಲಾಯಿತು.
      • ನೋಡಲ್ ಸಚಿವಾಲಯ:- ಗ್ರಾಮೀಣಾಭಿವೃದ್ಧಿ ಸಚಿವಾಲಯವು.
      • ಅನುದಾನದ ಮಾದರಿ:- ಇದು ಕೇಂದ್ರ ಪ್ರಯೋಜಿತ ಯೋಜನೆಯಾಗಿದ್ದು (ಸಾಮಾನ್ಯವಾಗಿ 60:40 ಅನುಪಾತ; ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ 90:10 ಅನುಪಾತ).
      • ಉದ್ದೇಶ:- ಬಡ ಗ್ರಾಮೀಣ ಕುಟುಂಬಗಳಿಗೆ ಸುಸ್ಥಿರ ಜೀವನೋಪಾಯ ಮತ್ತು ವರ್ಧಿತ ಆದಾಯವನ್ನು ಪಡೆಯಲು ಅನುವು ಮಾಡಿಕೊಡುವ ಮೂಲಕ ಬಡತನವನ್ನು ಕಡಿಮೆ ಮಾಡುವುದು.
    • ಪ್ರಮುಖ ಕಾರ್ಯತಂತ್ರ:-
      • ಗ್ರಾಮೀಣ ಬಡ ಮಹಿಳೆಯರನ್ನು ಸ್ವಸಹಾಯ ಗುಂಪುಗಳಾಗಿ ಸಾರ್ವತ್ರಿಕವಾಗಿ ಒಗ್ಗೂಡಿಸುವುದು.
      • ಸಾಮರ್ಥ್ಯ ವರ್ಧನೆ, ಸಾಲ ಸೌಲಭ್ಯ ಮತ್ತು ಜೀವನೋಪಾಯದ ವೈವಿಧ್ಯೀಕರಣವನ್ನು ಒದಗಿಸುವುದು.
    • ಪ್ರಮುಖ ಗಮನಾರ್ಹ ಕ್ಷೇತ್ರಗಳು:-
      • ಕೃಷಿ ಜೀವನೋಪಾಯಗಳು.
      • ಕೃಷಿಯೇತರ ಜೀವನೋಪಾಯಗಳು ಮತ್ತು ಉದ್ಯಮಗಳು.
      • ಆರ್ಥಿಕ ಸೇರ್ಪಡೆ ಮತ್ತು ಸಾಮಾಜಿಕ ಸಬಲೀಕರಣ.
  • ರಕ್ಷಣಾ ಕೈಗಾರಿಕಾ ಸಹಕಾರವನ್ನು ಬಲಪಡಿಸಲು ಭಾರತ-ಜರ್ಮನಿ ಒಪ್ಪಂದ | ಪ್ಯಾರಿಸ್ ಒಪ್ಪಂದದ 6ನೇ ವಿಧಿ ಮತ್ತು ಭಾರತ | ಬಮನ್ವಾಸ್ ಕಂಕರ್ – ರಾಜಸ್ಥಾನದ ಮೊದಲ ಸಂಪೂರ್ಣ ಸಾವಯವ ಗ್ರಾಮ ಪಂಚಾಯತಿ | ಇಸ್ರೋದ PSLV-C62/EOS-N1 ಮಿಷನ್‌ನ ಮೂರನೇ ಹಂತದಲ್ಲಿ ವೈಫಲ್ಯ | ಭದ್ರಕಾಳಿ ಶಾಸನ | ಪ್ಯಾಕ್ಸ್ ಸಿಲಿಕಾ

    ರಕ್ಷಣಾ ಕೈಗಾರಿಕಾ ಸಹಕಾರವನ್ನು ಬಲಪಡಿಸಲು ಭಾರತ-ಜರ್ಮನಿ ಒಪ್ಪಂದ

    ಸಾಮಾನ್ಯ ಅಧ್ಯಯನ- 2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಭಾರತ ಮತ್ತು ಜರ್ಮನಿ ದೇಶಗಳು ರಕ್ಷಣೆ, ತಂತ್ರಜ್ಞಾನ, ಆರೋಗ್ಯ, ಇಂಧನ ಮತ್ತು ಮಾನವ ಸಂಪನ್ಮೂಲಗಳಂತಹ ವಲಯಗಳಲ್ಲಿ ವಿವಿಧ ಒಪ್ಪಂದಗಳಿಗೆ ಸಹಿ ಹಾಕಿವೆ.

    ಭಾರತ ಮತ್ತು ಜರ್ಮನಿ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ:

      • 1951ರಲ್ಲಿ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆ:- 2026ಕ್ಕೆ ಈ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿ 75 ವರ್ಷಗಳು ಪೂರ್ಣಗೊಳ್ಳಲಿವೆ.
      • 2000ನೇ ಇಸವಿಯಿಂದ ಕಾರ್ಯತಂತ್ರದ ಪಾಲುದಾರಿಕೆ:- 2025ಕ್ಕೆ ಈ ಪಾಲುದಾರಿಕೆಯು 25 ವರ್ಷಗಳನ್ನು ಪೂರೈಸಲಿದೆ.
      • ರಕ್ಷಣಾ ಸಹಕಾರ:- ಜರ್ಮನಿಯು ಭಾರತದೊಂದಿಗೆ MILAN, PASSEX ಮತ್ತು EX TARANG SHAKTI-1 ನಂತಹ ಅನೇಕ ಬಹುಪಕ್ಷೀಯ ಸಮರಾಭ್ಯಾಸಗಳಲ್ಲಿ ಭಾಗವಹಿಸಿದೆ.
      • ವ್ಯಾಪಾರ ಸಹಕಾರ:- 2024ರಲ್ಲಿ ಜರ್ಮನಿಯು ಭಾರತದ 8ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ಐರೋಪ್ಯ ಒಕ್ಕೂಟ (EU)ದಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಇದೇ ವೇಳೆ, ಭಾರತವು ಜರ್ಮನಿಯ 23ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.
      • ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆ, 2022:- ಜರ್ಮನಿಯು 2030ರ ವೇಳೆಗೆ €10 ಬಿಲಿಯನ್ ನೆರವು ನೀಡುವುದಾಗಿ ಹೇಳಿದೆ.
        • ನವೀಕರಿಸಬಹುದಾದ ಇಂಧನ, ಮೆಟ್ರೋ ಯೋಜನೆಗಳು, ಹಸಿರು ಕಾರಿಡಾರ್‌ಗಳು ಮತ್ತು ಸ್ಮಾರ್ಟ್ ಸಿಟಿಗಳಲ್ಲಿನ ಸಹಯೋಗವು ಭಾರತದ ಹವಾಮಾನ ಗುರಿಗಳು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಬದ್ಧತೆಗಳನ್ನು ಈಡೇರಿಸಲು ನೇರವಾಗಿ ಸಹಕರಿಸುತ್ತದೆ.
      • ಬಹುಪಕ್ಷೀಯ ಸಹಕಾರ:-
    • ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಭಾರತದ ಕಾಯಂ ಸದಸ್ಯತ್ವಕ್ಕೆ ಬೆಂಬಲ ನೀಡುವುದು.
      • ಜಿ-20, ವಿಶ್ವಸಂಸ್ಥೆ, ವಿಶ್ವ ವ್ಯಾಪಾರ ಸಂಸ್ಥೆ ಮತ್ತು COP ಹವಾಮಾನ ಮಾತುಕತೆಗಳ ವೇದಿಕೆಗಳಲ್ಲಿ ಪರಸ್ಪರ ಸಮನ್ವಯ ಸಾಧಿಸುವುದು.
      • ಭಾರತೀಯ ವಲಸಿಗರು:- ಜರ್ಮನಿಯಲ್ಲಿ ಸುಮಾರು 2.46 ಲಕ್ಷ (2023ರ ಅಂಕಿಅಂಶಗಳ ಪ್ರಕಾರ) ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಮತ್ತು ಭಾರತೀಯ ಮೂಲದ ಜನರಿದ್ದಾರೆ.

    ಪ್ಯಾರಿಸ್ ಒಪ್ಪಂದದ 6ನೇ ವಿಧಿ ಮತ್ತು ಭಾರತ

    ಸಾಮಾನ್ಯ ಅಧ್ಯಯನ- 3/ ಪರಿಸರ ಮತ್ತು ಪರಿಸರ ವಿಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚೆಗೆ, COP29 ಶೃಂಗಸಭೆಯಲ್ಲಿ, ಹವಾಮಾನ ಹಣಕಾಸಿನ ವಿತರಣೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಉದ್ದೇಶದಿಂದ ಪ್ಯಾರಿಸ್ ಒಪ್ಪಂದದ 6ನೇ ವಿಧಿಯ ಅಡಿಯಲ್ಲಿ ಇಂಗಾಲದ ಮಾರುಕಟ್ಟೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ನಿರ್ಧರಿಸಲಾಯಿತು.
    • ಇದಕ್ಕೂ ಮುನ್ನ, ಜಂಟಿ ಸಾಲದ ಕಾರ್ಯವಿಧಾನ (JCM)ಕ್ಕೇ ಸಹಿ ಹಾಕುವ ಮೂಲಕ ಭಾರತವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇದು ಪರಿಣಾಮಕಾರಿಯಾಗಿ 6.2ನೇ ವಿಧಿಯ ಅನುಷ್ಠಾನವಾಗಿದ್ದು, ಅಂತರರಾಷ್ಟ್ರೀಯ ಇಂಗಾಲದ ಮಾರುಕಟ್ಟೆ ಸಹಕಾರಕ್ಕೆ ಭಾರತದ ಅಧಿಕೃತ ಪ್ರವೇಶವನ್ನು ಸೂಚಿಸುತ್ತದೆ.

    ಪ್ಯಾರಿಸ್ ಒಪ್ಪಂದದ 6ನೇ ವಿಧಿಯ ಕುರಿತು:

    • ರಾಷ್ಟ್ರಗಳು ತಮ್ಮ ‘ರಾಷ್ಟ್ರೀಯ ನಿರ್ಧರಿತ ಕೊಡುಗೆ’ (NDCs)ಗಳನ್ನು ಸಾಧಿಸಲು ಸ್ವಯಂಪ್ರೇರಿತವಾಗಿ ಪರಸ್ಪರ ಸಹಕರಿಸಲು ಅನುವು ಮಾಡಿಕೊಡುವ ಚೌಕಟ್ಟನ್ನು ಈ ವಿಧಿಯು ಸೃಷ್ಟಿಸುತ್ತದೆ. ಇದು ಪ್ರಮುಖವಾಗಿ 2 ಮಾರ್ಗಗಳನ್ನು ಒಳಗೊಂಡಿದೆ:
    1. ವಿಧಿ 6.2- ಅಂತರರಾಷ್ಟ್ರೀಯವಾಗಿ ವರ್ಗಾಯಿಸಲಾದ ಹೊರಸೂಸುವಿಕೆಯ ಕಡಿತದ ಫಲಿತಾಂಶಗಳು (ITMOs):- ಇದು ಹೊರಸೂಸುವಿಕೆ ಕಡಿತಗಳ ವ್ಯಾಪಾರದ ಮೂಲಕ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಸಹಕಾರಕ್ಕೆ ಅವಕಾಶ ನೀಡುತ್ತದೆ. 
    2. ವಿಧಿ 6.4- ಪ್ಯಾರಿಸ್ ಒಪ್ಪಂದದ ಸಾಲದ ಕಾರ್ಯವಿಧಾನ (PACM):- ಇದು ಕೇಂದ್ರೀಕೃತ ಸಾಲದ ಕಾರ್ಯವಿಧಾನ(PACM) ವನ್ನು ಸ್ಥಾಪಿಸುತ್ತದೆ. ಇದು ಹಿಂದಿನ “ಶುದ್ಧ ಅಭಿವೃದ್ಧಿ ಕಾರ್ಯವಿಧಾನ” (CDM) ದಿಂದ ವಿಕಸನಗೊಂಡಿದ್ದು, ಇಂಗಾಲದ ಶ್ರೇಯಗಳನ್ನು ಉತ್ಪಾದಿಸುವ ಯೋಜನೆಗಳನ್ನು ಮೌಲ್ಯೀಕರಿಸಲು ಮತ್ತು ಪರಿಶೀಲಿಸಲು ಇದನ್ನು ಬಳಸಲಾಗುತ್ತದೆ.
    • ಈ 2 ವ್ಯವಸ್ಥೆಗಳು ಪಾರದರ್ಶಕತೆ ಮತ್ತು ಪರಿಸರ ಸಮಗ್ರತೆಯನ್ನು ಖಚಿತಪಡಿಸಲು ಹಾಗೂ ದ್ವಿಗುಣ ಎಣಿಕೆಯನ್ನು ತಪ್ಪಿಸಲು ಕಠಿಣವಾದ ಲೆಕ್ಕಪತ್ರ ನಿಯಮಗಳಿಂದ ಬೆಂಬಲಿತವಾಗಿವೆ.

    ಭಾರತ ಮತ್ತು ಜಂಟಿ ಸಾಲದ ಕಾರ್ಯವಿಧಾನ (JCM)ದ ಬಗ್ಗೆ:

    ಭಾರತವು ಜಪಾನ್‌ನೊಂದಿಗಿನ JCM ಪಾಲುದಾರಿಕೆಯ ಮೂಲಕ 6ನೇ ವಿಧಿಗೆ ಪ್ರವೇಶಿಸಿರುವುದು, ವಿಧಿ 6.2ರ ಪ್ರಾಯೋಗಿಕ ಅನುಷ್ಠಾನವನ್ನು ಪ್ರತಿನಿಧಿಸುತ್ತದೆ.

    • JCM ನ ಕಾರ್ಯವಿಧಾನ:- ಈ ಚೌಕಟ್ಟು ಕಡಿಮೆ ಇಂಗಾಲದ ಮತ್ತು ಸುಧಾರಿತ ಕೈಗಾರಿಕಾ ತಂತ್ರಜ್ಞಾನಗಳ ಅಳವಡಿಕೆಗೆ ಉತ್ತೇಜನ ನೀಡುತ್ತದೆ.
    • ಪರಸ್ಪರ ಲಾಭ:- ಇದು ಜಪಾನ್‌ಗೆ ಹೊರಸೂಸುವಿಕೆ ಕಡಿತದ ಲಾಭವನ್ನು ನೀಡಿದರೆ, ಭಾರತಕ್ಕೆ ತಂತ್ರಜ್ಞಾನ ವರ್ಗಾವಣೆ ಮತ್ತು ಆರ್ಥಿಕ ನೆರವಿನ ರೂಪದಲ್ಲಿ ಲಾಭದಾಯಕವಾಗಿದೆ.

    ಭಾರತ ಸರ್ಕಾರವು 6ನೇ ವಿಧಿಯ ಅಡಿಯಲ್ಲಿ ಗುರುತಿಸಲಾದ 13 ಅರ್ಹ ಚಟುವಟಿಕೆಗಳು:

    • ಇವು ಹೆಚ್ಚಿನ ಪ್ರಭಾವ ಬೀರುವ ಈ ಕೆಳಗಿನ ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿವೆ. ಅವುಗಳೆಂದರೆ,
    1. ನವೀಕರಿಸಬಹುದಾದ ಇಂಧನ:- ಶೇಖರಣಾ ವ್ಯವಸ್ಥೆಯುಳ್ಳ ನವೀಕರಿಸಬಹುದಾದ ಇಂಧನ ಮತ್ತು ಕಡಲಾಚೆಯ ಪವನ ಶಕ್ತಿ.
    2. ಹಸಿರು ಇಂಧನಗಳು:- ಹಸಿರು ಜಲಜನಕ ಮತ್ತು ಸಂಕುಚಿತ ಜೈವಿಕ ಅನಿಲ.
    3. ಸಾರಿಗೆ ವಲಯ: ಸುಸ್ಥಿರ ವಿಮಾನಯಾನ ಇಂಧನ ಮತ್ತು ಇಂಧನ ಕೋಶ ಆಧಾರಿತ ಚಲನಶೀಲತೆ.
    4. ಇಂಧನ ದಕ್ಷತೆ:- ಅತ್ಯುನ್ನತ ಇಂಧನ ದಕ್ಷತೆಯ ತಂತ್ರಜ್ಞಾನಗಳ ಅಳವಡಿಕೆ.
    5. ಇಂಗಾಲದ ನಿರ್ವಹಣೆ:- ಇಂಗಾಲ ಸೆರೆಹಿಡಿಯುವಿಕೆ, ಬಳಕೆ ಮತ್ತು ಶೇಖರಣೆ (CCUS).

    ಮಹತ್ವ:

    • ಈ ಕ್ರಮಗಳು ಭಾರತದ ಅಭಿವೃದ್ಧಿ ಆದ್ಯತೆಗಳು ಮತ್ತು ದೀರ್ಘಕಾಲೀನ ಇಂಗಾಲದ ಅಂಶವನ್ನು ಕಡಿತಗೊಳಿಸುವ (ಡಿ-ಕಾರ್ಬೊನೈಸೇಶನ್) ಗುರಿಗಳ ನಡುವಿನ ಕಾರ್ಯತಂತ್ರದ ಹೊಂದಾಣಿಕೆಯನ್ನು ಪ್ರತಿಬಿಂಬಿಸುತ್ತವೆ. ವಿಶೇಷವಾಗಿ ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆಯಂತಹ ‘ಕಠಿಣ-ನಿಯಂತ್ರಣದ’ ಕೈಗಾರಿಕೆಗಳಿಗೆ ಇವು ನಿರ್ಣಾಯಕವಾಗಿವೆ.

    ಬಮನ್ವಾಸ್ ಕಂಕರ್ – ರಾಜಸ್ಥಾನದ ಮೊದಲ ಸಂಪೂರ್ಣ ಸಾವಯವ ಗ್ರಾಮ ಪಂಚಾಯತಿ

    ಸಾಮಾನ್ಯ ಅಧ್ಯಯನ- 3/ ಆರ್ಥಿಕತೆ/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ರಾಜಸ್ಥಾನದ ಬಮನ್ವಾಸ್ ಕಂಕರ್ ಪಂಚಾಯತಿ, ರಾಜ್ಯದ ಮೊದಲ ಸಂಪೂರ್ಣ ಸಾವಯವ ಗ್ರಾಮ ಪಂಚಾಯತಿಯಾಗಿ ಹೊರಹೊಮ್ಮಿದೆ. ಈ ಪಂಚಾಯತಿ 7 ಚಿಕ್ಕ ಗ್ರಾಮಗಳನ್ನು ಒಳಗೊಂಡಿದೆ.

    ನೈಸರ್ಗಿಕ ಕೃಷಿ ಪದ್ದತಿಯ ಬಗ್ಗೆ:

    • ರಾಸಾಯನಿಕ ಮುಕ್ತ ಕೃಷಿ ಪದ್ದತಿ:- ಇದು ಜಾನುವಾರುಗಳನ್ನು (ಆದ್ಯತೆ ಮೇರೆಗೆ ಸ್ಥಳೀಯ ತಳಿಯ ಹಸು) ಒಳಗೊಂಡ ಸಮಗ್ರ ನೈಸರ್ಗಿಕ ಕೃಷಿ ವಿಧಾನಗಳು ಮತ್ತು ಭಾರತೀಯ ಸಾಂಪ್ರದಾಯಿಕ ಜ್ಞಾನದಲ್ಲಿ ಬೇರೂರಿರುವ ವೈವಿಧ್ಯಮಯ ಬೆಳೆ ಪದ್ಧತಿ ವ್ಯವಸ್ಥೆಯನ್ನು ಒಳಗೊಂಡಿದೆ.
    • ಕೃಷಿ ತ್ಯಾಜ್ಯ ಮರುಬಳಕೆಯನ್ನು ಆಧರಿಸಿದೆ:- ಇದರಲ್ಲಿ ಜೈವಿಕ ಹೊದಿಕೆ ಹಾಕುವುದು (ಬಯೋಮಾಸ್ ಮಲ್ಚಿಂಗ್), ಹಸುಮೂತ್ರ ಮತ್ತು ಸಗಣಿಯ ಮಿಶ್ರಣಗಳ ಬಳಕೆ, ಮಣ್ಣಿನ ಗಾಳಿಯಾಡುವಿಕೆಯನ್ನು ಕಾಪಾಡಿಕೊಳ್ಳುವುದು ಮತ್ತು ಎಲ್ಲಾ ರೀತಿಯ ಕೃತಕ ರಾಸಾಯನಿಕ ಒಳಹರಿವುಗಳನ್ನು ನಿಷೇಧಿಸುವುದರ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

    ರಾಷ್ಟ್ರೀಯ ನೈಸರ್ಗಿಕ ಕೃಷಿ ಗುರಿ (NMNF)ಯ ಬಗ್ಗೆ:

    • ಪ್ರಾರಂಭ:- ನವೆಂಬರ್ 2024.
    • ಇದೊಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    • ಉದ್ದೇಶ:- ಸಾಂಪ್ರದಾಯಿಕ ಜ್ಞಾನದಲ್ಲಿ ಬೇರೂರಿರುವ ರಾಸಾಯನಿಕ ಮುಕ್ತ ಮತ್ತು ಪರಿಸರ ವ್ಯವಸ್ಥೆ ಆಧಾರಿತ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದು.

    ಇಸ್ರೋದ PSLV-C62/EOS-N1 ಮಿಷನ್‌ನ ಮೂರನೇ ಹಂತದಲ್ಲಿ ವೈಫಲ್ಯ

    ಸಾಮಾನ್ಯ ಅಧ್ಯಯನ-3/ ಬಾಹ್ಯಾಕಾಶ

    ಇದೀಗ ಸುದ್ದಿಯಲ್ಲಿದೆ:

    • 2026ನೇ ವರ್ಷದ ಮೊದಲ ಉಡಾವಣೆಯಾಗಿದ್ದ ಇಸ್ರೋದ PSLV-C62 ಮಿಷನ್, ತನ್ನ 16 ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಗೆ ಸೇರಿಸುವಲ್ಲಿ ವಿಫಲವಾಯಿತು. ಇದರಿಂದ, ದೀರ್ಘಕಾಲದಿಂದ ವಿಶ್ವಾಸಾರ್ಹವಾಗಿದ್ದ PSLV ರಾಕೆಟ್‌ಗೆ ಇದು ಸತತವಾಗಿ ಎರಡನೇ ವೈಫಲ್ಯತೆ ಎಂಬುದಾಗಿ ದಾಖಲಾಗಿದೆ.

    PSLV-C62 / EOS-N1 ಮಿಷನ್ ನ ಬಗ್ಗೆ:

    • ಇದು ಭಾರತದ PSLVಯ 64ನೇ ಹಾರಾಟ ಮತ್ತು ‘ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌’ (NSIL)ನ 9ನೇ ವಾಣಿಜ್ಯ ಗುರಿ ಆಗಿತ್ತು.
    • ಇದು EOS-N1 ಭೂ ವೀಕ್ಷಣಾ ಉಪಗ್ರಹದೊಂದಿಗೆ 15 ಸಹ-ಪ್ರಯಾಣಿಕ ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿಯನ್ನು ಹೊಂದಿತ್ತು.
    • EOS-N1 ಉಪಗ್ರಹವು ಪರಿಸರ ಮೇಲ್ವಿಚಾರಣೆ, ಸಂಪನ್ಮೂಲಗಳ ನಕ್ಷೆ ತಯಾರಿಕೆ ಮತ್ತು ವಿಪತ್ತು ನಿರ್ವಹಣೆಗಾಗಿ ರೂಪಿಸಲಾದ ಭೂ ವೀಕ್ಷಣಾ ಉಪಗ್ರಹವಾಗಿದೆ.

    ಧ್ರುವೀಯ ಉಪಗ್ರಹ ಉಡಾವಣಾ ವಾಹನ (PSLV)ಗಳ ಬಗ್ಗೆ:

    • ಇದು ಭಾರತದ 3ನೇ ತಲೆಮಾರಿನ ಉಡಾವಣಾ ವಾಹನವಾಗಿದೆ.
    • “ಇಸ್ರೋದ ವರ್ಕ್‌ಹಾರ್ಸ್”:- ಕಾರಣ, ವಿವಿಧ ಉಪಗ್ರಹಗಳನ್ನು ‘ಕೆಳ ಭೂ ಕಕ್ಷೆಗಳಿಗೆ’ (LEO) ಹೆಚ್ಚಿನ ಯಶಸ್ಸಿನ ದರದೊಂದಿಗೆ ಸೇರಿಸುತ್ತದೆ.
    • ದ್ರವ ಹಂತಗಳನ್ನು ಅಳವಡಿಸಿಕೊಂಡಿರುವ ಭಾರತದ ಮೊದಲ ಉಡಾವಣಾ ವಾಹನ ಇದಾಗಿದೆ.
    • ಇದು 4 ಹಂತದ ಉಡಾವಣಾ ವಾಹನವಾಗಿದ್ದು, ಪ್ರತಿ ಹಂತವು ತನ್ನದೇ ಆದ ಎಂಜಿನ್ ಮತ್ತು ಇಂಧನವನ್ನು ಹೊಂದಿರುತ್ತದೆ.

    ಪ್ರಮುಖ ಉಡಾವಣೆಗಳು:

    • ಅಕ್ಟೋಬರ್‌, 1994ರಲ್ಲಿ ಇದರ ಮೊದಲ ಯಶಸ್ವಿ ಉಡಾವಣೆ ನಡೆಯಿತು.
    • PSLV ಪ್ರಮುಖ 2 ನೌಕೆಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಅವುಗಳೆಂದರೆ,
    1. 2008ರಲ್ಲಿ ಚಂದ್ರಯಾನ-1 
    2. 2013ರಲ್ಲಿ ಮಂಗಳಯಾನ (ಮಾರ್ಸ್ ಆರ್ಬಿಟರ್ ಬಾಹ್ಯಾಕಾಶ ನೌಕೆ) 
    • ಇವು ನಂತರ ಕ್ರಮವಾಗಿ ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಪ್ರಯಾಣ ಬೆಳೆಸಿದವು.
    • ಇದು ಭಾರತದ ಮೊದಲ ಬಾಹ್ಯಾಕಾಶ ವೀಕ್ಷಣಾಲಯವಾದ ‘ಆಸ್ಟ್ರೋಸ್ಯಾಟ್’ ಅನ್ನು ಸಹ ಉಡಾವಣೆ ಮಾಡಿದೆ.

    ಭೂಸ್ಥಾಯೀ ಉಪಗ್ರಹ ಉಡಾವಣಾ ವಾಹನ (GSLV):

    • ಇದು ಭಾರತದ ಅತಿದೊಡ್ಡ 4ನೇ ತಲೆಮಾರಿನ ಉಡಾವಣಾ ವಾಹನವಾಗಿದೆ. PSLV ಉಡಾವಣಾ ವಾಹನದ ಮಿತಿಗಳನ್ನು ಮೀರುವ ಉದ್ದೇಶದಿಂದ, ಹೆಚ್ಚಿನ ಭಾರವಾದ ಉಪಗ್ರಹಗಳನ್ನು ಹೆಚ್ಚಿನ ಎತ್ತರದ ಕಕ್ಷೆಗಳಿಗೆ ಕೊಂಡೊಯ್ಯಲು ಇದನ್ನು ವಿನ್ಯಾಸಗೊಳಿಸಲಾಗಿದೆ.
    • 3 ಹಂತದ ಉಡಾವಣ ವಾಹನವಾಗಿದೆ:- ಇದು 1,750 ಕೆಜಿಯಷ್ಟು ತೂಕವನ್ನು ಕೆಳ ಭೂ ಕಕ್ಷೆಗೆ (600 ಕಿ.ಮೀ ವರೆಗೆ) ಮತ್ತು ಕಡಿಮೆ ಭಾರದ ಉಪಗ್ರಹಗಳನ್ನು ಭೂಸ್ಥಿರ ವರ್ಗಾವಣೆ ಕಕ್ಷೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ.
    • ಕ್ರಯೋಜೆನಿಕ್ ಎಂಜಿನ್‌ಗಳನ್ನು ಬಳಸುತ್ತದೆ:- ಅಂದರೆ ದ್ರವ ಜಲಜನಕ ಮತ್ತು ದ್ರವ ಆಮ್ಲಜನಕವನ್ನು ಒಟ್ಟಿಗೆ ಉಪಯೋಗಿಸುತ್ತವೆ. ಇವು ಹಿಂದಿನ ಉಡಾವಣಾ ವಾಹನಗಳಿಗಿಂತ ಅತೀ ಹೆಚ್ಚಿನ ನೂಕುಬಲವನ್ನು ನೀಡುತ್ತವೆ.
    • LVM-3 (ಹಿಂದೆ GSLV Mk III):- ಇದು GSLVಯ ಸುಧಾರಿತ ಆವೃತ್ತಿಯಾಗಿದೆ. ಇದು ಘನ, ದ್ರವ ಮತ್ತು ಕ್ರಯೋಜೆನಿಕ್ ಎಂಜಿನ್‌ಗಳನ್ನು ಬಳಸುತ್ತದೆ. 
    1. ಇದು ಕೆಳ ಭೂಮಿಯ ಕಕ್ಷೆಗೆ (2,000 ಕಿಮೀ ವರೆಗೆ) ಗರಿಷ್ಠ 8,000 ಕೆ.ಜಿ ಭಾರವನ್ನು,
    2. ಭೂಸ್ಥಾಯೀ ಕಕ್ಷೆಗೆ (36,000 ಕಿಮೀ) ಗರಿಷ್ಠ 4,000 ಕೆ.ಜಿ ಭಾರವನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಈ ಸಾಮರ್ಥ್ಯದಿಂದಾಗಿ ಇದಕ್ಕೆ ‘ಬಾಹುಬಲಿ’ ಎಂಬ ಹೆಸರು ಬಂದಿದೆ.

    LVM-3 ಯ ಪ್ರಮುಖ ಉಡಾವಣೆಗಳು:

    • LVM-3 ನ ಮೊದಲ ಯಶಸ್ವಿ ಮಿಷನ್ 2017ರಲ್ಲಿ GSAT-19 ನೊಂದಿಗೆ ಉಡಾವಣೆಯಾಯಿತು.
    • ನಂತರ 2019ರಲ್ಲಿ ಚಂದ್ರಯಾನ-2 ಮತ್ತು 2023ರಲ್ಲಿ ಚಂದ್ರಯಾನ-3 ಉಡಾವಣೆಯಾದವು.

    ಗಮನಿಸಿ: 

    ಇಸ್ರೋ ತನ್ನ ಅತ್ಯಂತ ಭಾರವಿರುವ ಉಡಾವಣಾ ವಾಹನವಾದ ‘ಲೂನಾರ್ ಮಾಡ್ಯೂಲ್ ಉಡಾವಣಾ ವಾಹನ’ (LMLV) ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು 2035ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದ್ದು, 2040ಕ್ಕೆ ಯೋಜಿಸಲಾದ ಭಾರತದ ಮೊದಲ ಮಾನವ ಸಹಿತ ಚಂದ್ರಯಾನ ಸೇರಿದಂತೆ ಭವಿಷ್ಯದ ಚಂದ್ರನ ಕಾರ್ಯಾಚರಣೆಗಳನ್ನು ಬೆಂಬಲಿಸಲಿದೆ. 

    ಭದ್ರಕಾಳಿ ಶಾಸನ

    ಸಾಮಾನ್ಯ ಅಧ್ಯಯನ- 1/ ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚೆಗೆ, ‘ಪ್ರಭಾಸ್ ಪಟಾನ್’ ಶ್ರೀಮಂತ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿದೆ ಎಂಬ ವಿಷಯವು ಮುನ್ನೆಲೆಗೆ ಬಂದಿದೆ. ಇಲ್ಲಿನ ಭದ್ರಕಾಳಿ ಶಾಸನ, ತಾಮ್ರದ ಫಲಕಗಳು ಮತ್ತು ಸ್ಮಾರಕ ಕಲ್ಲುಗಳು ಈ ಸ್ಥಳದ ಸಮೃದ್ಧಿ, ಶೌರ್ಯ ಮತ್ತು ಭಕ್ತಿಯನ್ನು ಎತ್ತಿ ತೋರಿಸುತ್ತವೆ.
    • ಗಮನಿಸಿ:- ಪ್ರಭಾಸ್ ಪಟಾನ್ (ಇದನ್ನು ‘ದೇವ್ ಪಟಾನ್’ ಎಂತಲೂ ಕರೆಯುತ್ತಾರೆ) ಗುಜರಾತ್‌ನ ವೆರಾವಲ್‌ನಲ್ಲಿರುವ ಐತಿಹಾಸಿಕ ಮತ್ತು ಪವಿತ್ರ ತಾಣವಾಗಿದೆ. ಇದು ಪ್ರಸಿದ್ಧ ಸೋಮನಾಥ ದೇವಾಲಯದ ನೆಲೆಬೀಡಾಗಿದೆ. ಶಿವನ ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದನ್ನು ಹೊಂದಿರುವ ಈ ತಾಣವು, ಭಾರತದ ಅತ್ಯಂತ ಮಹತ್ವದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.

    ‘ಭದ್ರಕಾಳಿ ಶಾಸನ’ದ ಬಗ್ಗೆ:

    • ಇದನ್ನು ಕ್ರಿ.ಶ. 1169 ರಲ್ಲಿ (ವಲಭಿ ಸಂವತ್ 850 ಮತ್ತು ವಿಕ್ರಮ ಸಂವತ್ 1255) ಕೆತ್ತಲಾಗಿದೆ. ಪ್ರಸ್ತುತ ಇದು ರಾಜ್ಯ ಪುರಾತತ್ವ ಇಲಾಖೆಯ ಸಂರಕ್ಷಣೆಯಲ್ಲಿದೆ.
    • ಇದು ಪ್ರಭಾಸ್ ಪಟಾನ್‌ನಲ್ಲಿರುವ ವಸ್ತುಸಂಗ್ರಹಾಲಯದ ಬಳಿ, ಭದ್ರಕಾಳಿ ರಸ್ತೆಯಲ್ಲಿರುವ ಹಳೆಯ ರಾಮ ಮಂದಿರದ ಪಕ್ಕದಲ್ಲಿದೆ.
    • ಇದು ಅನ್ಹಿಲ್ವಾಡ್ ಪಟಾನ್‌ನ ಮಹಾರಾಜಾಧಿರಾಜ ಕುಮಾರಪಾಲನ ಆಧ್ಯಾತ್ಮಿಕ ಗುರುಗಳಾದ ‘ಪರಮ ಪಾಶುಪತ ಆಚಾರ್ಯ ಶ್ರೀಮಾನ್ ಭಾವಬೃಹಸ್ಪತಿ’ ಅವರ ಕುರಿತಾದ ಪ್ರಶಂಸಾತ್ಮಕ ಶಾಸನವಾಗಿದೆ.

    ಈ ಶಾಸನದ ವೈಶಿಷ್ಟ್ಯಗಳು:

    • ಈ ಶಾಸನವು ಸೋಮನಾಥ ದೇವಾಲಯದ ಪ್ರಾಚೀನ ಮತ್ತು ಮಧ್ಯಕಾಲೀನ ಇತಿಹಾಸವನ್ನು ದಾಖಲಿಸುತ್ತದೆ.
    • ನಾಲ್ಕು ಯುಗಗಳಲ್ಲಿ ಸೋಮನಾಥ ಮಹಾದೇವ ದೇವಾಲಯದ ನಿರ್ಮಾಣವನ್ನು ಇದು ಉಲ್ಲೇಖಿಸುತ್ತದೆ. ಅದರ ವಿವರಗಳು ಈ ಕೆಳಗಿನಂತಿವೆ:
      • ಸತ್ಯ ಯುಗದಲ್ಲಿ:- ಚಂದ್ರನು (ಸೋಮ) ಇದನ್ನು ಚಿನ್ನದಿಂದ ನಿರ್ಮಿಸಿದನು.
      • ತ್ರೇತಾ ಯುಗದಲ್ಲಿ:- ರಾವಣನು ಇದನ್ನು ಬೆಳ್ಳಿಯಿಂದ ನಿರ್ಮಿಸಿದನು.
      • ದ್ವಾಪರ ಯುಗದಲ್ಲಿ: ಶ್ರೀ ಕೃಷ್ಣನು ಇದನ್ನು ಮರದಿಂದ ನಿರ್ಮಿಸಿದನು.
      • ಕಲಿ ಯುಗದಲ್ಲಿ: ರಾಜ ಭೀಮದೇವ ಸೋಲಂಕಿ ಸುಂದರವಾದ ಕಲಾತ್ಮಕ ಕಲ್ಲಿನ ದೇವಾಲಯವನ್ನು ನಿರ್ಮಿಸಿದನು.
    • ರಾಜ ಭೀಮದೇವ ಸೋಲಂಕಿಯು ಹಿಂದಿನ ಅವಶೇಷಗಳ ಮೇಲೆ ನಾಲ್ಕನೇ ದೇವಾಲಯವನ್ನು ನಿರ್ಮಿಸಿದನು ಎಂಬುದನ್ನು ಇತಿಹಾಸವು ದೃಢೀಕರಿಸುತ್ತದೆ. ತದನಂತರ ಮಹಾರಾಜಾಧಿರಾಜ ಕುಮಾರಪಾಲನು ಕ್ರಿ.ಶ. 1169 ರಲ್ಲಿ ಅದೇ ಸ್ಥಳದಲ್ಲಿ ಐದನೇ ದೇವಾಲಯವನ್ನು ನಿರ್ಮಿಸಿದನು.

    ಈ ಶಾಸನದ ಮಹತ್ವ:

    • ಪ್ರಭಾಸ್ ಪಟಾನ್ ಸನಾತನ ಧರ್ಮದ ಆಧ್ಯಾತ್ಮಿಕ ಹೆಮ್ಮೆಯನ್ನು ಸಂಕೇತಿಸುತ್ತದೆ.
    • ಭದ್ರಕಾಳಿ ಶಾಸನವು ಸೋಲಂಕಿ ಆಡಳಿತಗಾರರು ಮತ್ತು ಭಾವಬೃಹಸ್ಪತಿಯಂತಹ ವಿದ್ವಾಂಸರ ಭಕ್ತಿಯನ್ನು ಎತ್ತಿ ತೋರಿಸುತ್ತದೆ. ಅಲ್ಲದೆ, ಇಲ್ಲಿನ ಶ್ರೀಮಂತ ಕಲಾತ್ಮಕ, ವಾಸ್ತುಶಿಲ್ಪ ಮತ್ತು ಸಾಹಿತ್ಯಕ ಪರಂಪರೆಯು ಸ್ಫೂರ್ತಿ ನೀಡುವುದನ್ನು ಮುಂದುವರೆಸಿದೆ. ಭಕ್ತಿ ಮತ್ತು ಸ್ವಾಭಿಮಾನ ಶಾಶ್ವತವಾಗಿ ಉಳಿಯುತ್ತದೆ ಎಂಬುದನ್ನು ಇದು ದೃಢೀಕರಿಸುತ್ತದೆ.

    ಪ್ಯಾಕ್ಸ್ ಸಿಲಿಕಾ

    ಸಾಮಾನ್ಯ ಅಧ್ಯಯನ- 2/ ಅಂತರರಾಷ್ಟ್ರೀಯ ಸಂಬಂಧಗಳು, ಸಾಮಾನ್ಯ ಅಧ್ಯಯನ- 3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಪ್ಯಾಕ್ಸ್ ಸಿಲಿಕಾ ಉಪಕ್ರಮಕ್ಕೆ ಸೇರ್ಪಡೆಗೊಳ್ಳಲು ಮುಂದಿನ ತಿಂಗಳು ಭಾರತವನ್ನು ಆಹ್ವಾನಿಸಲಾಗುವುದು ಎಂದು ಅಮೆರಿಕದ ರಾಯಭಾರಿ ಘೋಷಿಸಿದ್ದಾರೆ.

    ‘ಪ್ಯಾಕ್ಸ್ ಸಿಲಿಕಾ’ ಉಪಕ್ರಮದ ಬಗ್ಗೆ:

    • ಉದ್ದೇಶ:- ಇದು ಅಮೆರಿಕ ನೇತೃತ್ವದ ಕಾರ್ಯತಂತ್ರದ ಉಪಕ್ರಮವಾಗಿದೆ. ನಿರ್ಣಾಯಕ ಖನಿಜಗಳಿಂದ ಸುರಕ್ಷಿತ, ಸಮೃದ್ಧ ಮತ್ತು ನಾವೀನ್ಯತೆ ಆಧಾರಿತ ‘ಸಿಲಿಕಾನ್ ಪೂರೈಕೆ ಸರಪಳಿ’ಯನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ.
    • ಶೃಂಗಸಭೆ:- ಮೊದಲ ಪ್ಯಾಕ್ಸ್ ಸಿಲಿಕಾ ಶೃಂಗಸಭೆಯು ಡಿಸೆಂಬರ್ 2025 ರಲ್ಲಿ ನಡೆಯಿತು. 
    • ಸದಸ್ಯ ರಾಷ್ಟ್ರಗಳು:- ಆಸ್ಟ್ರೇಲಿಯಾ, ಇಸ್ರೇಲ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ, ಯುಕೆ, ನೆದರ್ಲ್ಯಾಂಡ್ಸ್ ಮತ್ತು ಯುಎಇ ದೇಶಗಳು ಈ ಉಪಕ್ರಮಕ್ಕೆ ಸಹಿ ಹಾಕಿವೆ.
    • ಸದಸ್ಯ ರಾಷ್ಟ್ರಗಳ ವ್ಯಾಪ್ತಿ:- ಜಾಗತಿಕ ಕೃತಕ ಬುದ್ಧಿಮತ್ತೆ (AI) ಪೂರೈಕೆ ಸರಪಳಿಯನ್ನು ಸಶಕ್ತಗೊಳಿಸುವ ಅತ್ಯಂತ ಪ್ರಮುಖ ಕಂಪನಿಗಳು ಮತ್ತು ಹೂಡಿಕೆದಾರರನ್ನು ಒಟ್ಟಾರೆಯಾಗಿ ಈ ದೇಶಗಳು ಹೊಂದಿವೆ.
    • ಕತಾರ್:- ಪ್ಯಾಕ್ಸ್ ಸಿಲಿಕಾ ಉಪಕ್ರಮಕ್ಕೆ  ಸಹಿ ಹಾಕಿದ ಇತ್ತೀಚಿನ ರಾಷ್ಟ್ರವಾಗಿದೆ.

    ಮಹತ್ವ:

    • ಬಲವಂತದ ಅವಲಂಬನೆಯನ್ನು ಕಡಿಮೆ ಮಾಡುವುದು.
    • ಕೃತಕ ಬುದ್ಧಿಮತ್ತೆಗೆ ಅಡಿಪಾಯವಾಗಿರುವ ಸಾಮಗ್ರಿಗಳನ್ನು ಮತ್ತು ಸಾಮರ್ಥ್ಯಗಳನ್ನು ರಕ್ಷಿಸುವುದು.
    • ಸಮಾನ ಮನಸ್ಕ ರಾಷ್ಟ್ರಗಳು ಪರಿವರ್ತಕ ತಂತ್ರಜ್ಞಾನಗಳನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಮತ್ತು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವುದು.

    ಭಾರತಕ್ಕೆ ಇದರ ಮಹತ್ವ:

    • ಪ್ಯಾಕ್ಸ್ ಸಿಲಿಕಾ ಉಪಕ್ರಮಕ್ಕೆ ಭಾರತವು ಸೇರ್ಪಡೆಯಾಗುವುದರಿಂದ, ನಿರ್ಣಾಯಕ ಖನಿಜಗಳಿಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಭಾರತಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಆಸ್ಟ್ರೇಲಿಯಾದಂತಹ ಹೆಚ್ಚು ಸುರಕ್ಷಿತ ಪೂರೈಕೆದಾರರತ್ತ ತನ್ನ ಆಮದು ಮೂಲಗಳನ್ನು ವೈವಿಧ್ಯಮಯಗೊಳಿಸಲು ಇದು ನೆರವಾಗಲಿದೆ.