ವರ್ಗ: National and International Current Affairs Kannada

  • ಇಂಧನ ದಕ್ಷತೆ ಬ್ಯೂರೋ/ಕಛೇರಿ (BEE)ಯ 25ನೇ ಸಂಸ್ಥಾಪನಾ ದಿನ | ಅಕ್ಕಿ ಪೋಷಕಾಂಶ ಬಲವರ್ಧನೆ ಯೋಜನೆ ಸ್ಥಗಿತ | ವಿಶ್ವ ಸ್ಥೂಲತೆ ಅಟ್ಲಾಸ್, 2026

    ಇಂಧನ ದಕ್ಷತೆ ಬ್ಯೂರೋ/ಕಛೇರಿ (BEE)ಯ 25ನೇ ಸಂಸ್ಥಾಪನಾ ದಿನ

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ನವದೆಹಲಿಯ ‘ಭಾರತೀಯ ಆವಾಸ ಕೇಂದ್ರ’ದಲ್ಲಿ ‘ಇಂಧನ ದಕ್ಷತೆ ಬ್ಯೂರೋ’ದ (BEE) 25ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.

    ಇಂಧನ ದಕ್ಷತೆ ಬ್ಯೂರೋ/ಕಛೇರಿ (BEE)ಯ ಬಗ್ಗೆ:

      • ಇಂಧನ ಸಂರಕ್ಷಣಾ ಕಾಯ್ದೆ, 2001:- ಈ ಕಾಯ್ದೆಯ ಅನ್ವಯ 2002ರಲ್ಲಿ ಸ್ಥಾಪಿಸಲಾದ ಭಾರತದ ಒಂದು ಶಾಸನಬದ್ಧ ಸಂಸ್ಥೆಯಾಗಿದೆ.
    • ಆಡಳಿತಾತ್ಮಕ ಸಚಿವಾಲಯ:- ಕೇಂದ್ರ ವಿದ್ಯುತ್ ಸಚಿವಾಲಯ.
    • ಪ್ರಮುಖ ಉದ್ದೇಶ:- ಮಾರುಕಟ್ಟೆ ಆಧಾರಿತ ಉಪಕ್ರಮಗಳು ಮತ್ತು ಸ್ವಯಂ-ನಿಯಂತ್ರಣದ ಮೂಲಕ ಭಾರತೀಯ ಆರ್ಥಿಕತೆಯ ‘ಇಂಧನ ತೀವ್ರತೆ’ಯನ್ನು ತಗ್ಗಿಸುವುದು.

    BEE ಯ ಪ್ರಮುಖ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು:

    • ಮಾನದಂಡಗಳು ಮತ್ತು ಗುರುತು ಅಂಟಿಸುವ ಪ್ರಕ್ರಿಯೆ (ಲೇಬಲಿಂಗ್) ಯೋಜನೆ:- ಗ್ರಾಹಕರಿಗೆ ಗೃಹೋಪಯೋಗಿ ಉಪಕರಣಗಳ (ಉದಾಹರಣೆಗೆ: ರೆಫ್ರಿಜರೇಟರ್, ಎಸಿ) ಇಂಧನ ದಕ್ಷತೆ ಮತ್ತು ವಿದ್ಯುತ್ ಉಳಿತಾಯದ ಸಾಮರ್ಥ್ಯದ ಬಗ್ಗೆ ಮಾಹಿತಿ ನೀಡಲು, ಈ ಯೋಜನೆಯು ಉತ್ಪನ್ನಗಳ ಮೇಲೆ ‘ಸ್ಟಾರ್-ರೇಟಿಂಗ್’ ಲೇಬಲ್‌ಗಳನ್ನು ಒದಗಿಸುತ್ತದೆ.
    • ಕಾರ್ಯನಿರ್ವಹಣೆ, ಸಾಧನೆ ಮತ್ತು ವಹಿವಾಟು (PAT):- ಇದು ‘ವರ್ಧಿತ ಇಂಧನ ದಕ್ಷತೆಗಾಗಿನ ರಾಷ್ಟ್ರೀಯ ಅಭಿಯಾನ’ (NMEEE) ಅಡಿಯಲ್ಲಿ ಜಾರಿಗೆ ತರಲಾದ ಮಾರುಕಟ್ಟೆ-ಆಧಾರಿತ ಕಾರ್ಯವಿಧಾನವಾಗಿದೆ. ಇಂಧನವನ್ನು ಅತಿ ಹೆಚ್ಚು ಬಳಸುವ ಬೃಹತ್ ಕೈಗಾರಿಕೆಗಳು ತಮ್ಮ ಇಂಧನ ದಕ್ಷತೆಯ ಗುರಿಗಳನ್ನು ತಲುಪಲು ಇದು ಪ್ರೋತ್ಸಾಹ ನೀಡುತ್ತದೆ.
    • ಇಂಧನ ಸಂರಕ್ಷಣಾ ಕಟ್ಟಡ ಸಂಹಿತೆಗಳು (ECBC):- ಇಂಧನ ದಕ್ಷತೆಯನ್ನು ಹೊಂದಿರುವ ಪರಿಸರಸ್ನೇಹಿ ಕಟ್ಟಡಗಳ ವಿನ್ಯಾಸಕ್ಕಾಗಿ ಇದು ಮಾರ್ಗಸೂಚಿಗಳನ್ನು ಒದಗಿಸುತ್ತದೆ.
    • ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ಇಂಧನ ದಕ್ಷ ತಂತ್ರಜ್ಞಾನಗಳ ಅಳವಡಿಕೆಗೆ ನೆರವು (ADEETIE) ಯೋಜನೆ:- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ (MSME) ಇಂಧನ-ದಕ್ಷ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಅಗತ್ಯವಿರುವ ತಾಂತ್ರಿಕ ಹಾಗೂ ಹಣಕಾಸಿನ ನೆರವನ್ನು ಈ ಯೋಜನೆಯು ನೀಡುತ್ತದೆ.
    • ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಗಳು (NECA):- ಇಂಧನ ದಕ್ಷತೆ ಮತ್ತು ಸಂರಕ್ಷಣಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಸಂಸ್ಥೆಗಳನ್ನು ಗುರುತಿಸಿ ನೀಡುವ ವಾರ್ಷಿಕ ಪುರಸ್ಕಾರವಾಗಿದೆ.

    ಅಕ್ಕಿ ಪೋಷಕಾಂಶ ಬಲವರ್ಧನೆ ಯೋಜನೆ ಸ್ಥಗಿತ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಅನುಷ್ಠಾನದ ಪರಾಮರ್ಶೆಯ ನಂತರ, ಭಾರತ ಸರ್ಕಾರವು ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ (PMGKAY) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಅಕ್ಕಿ ಪೋಷಕಾಂಶ ಬಲವರ್ಧನೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.

    ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY)ಯ ಬಗ್ಗೆ:

    • ಪ್ರಾರಂಭ:- ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಪರಿಹಾರ ಪ್ಯಾಕೇಜ್‌ನ ಭಾಗವಾಗಿ ಘೋಷಿಸಲಾಯಿತು.
    • ಮುಖ್ಯ ಗುರಿ:- ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಬಡವರು ಮತ್ತು ಅಗತ್ಯವಿರುವವರಿಗೆ ಪೂರಕ ಆಹಾರ ಧಾನ್ಯಗಳನ್ನು ಒದಗಿಸುವುದು.
    • ಅನುಷ್ಠಾನ ಸಚಿವಾಲಯ:- ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿರುವ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ.
    • ಫಲಾನುಭವಿಗಳು:- ಈ ಯೋಜನೆಯಡಿ ಸುಮಾರು 80 ಕೋಟಿ ಫಲಾನುಭವಿಗಳು ಉಚಿತ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹರಾಗಿದ್ದಾರೆ.

    ‘ಆಹಾರ ಪೋಷಕಾಂಶ ಬಲವರ್ಧನೆ’ಯ ಬಗ್ಗೆ:

    • ವ್ಯಾಖ್ಯಾನ:- ಆಹಾರ ಪೋಷಕಾಂಶ ಬಲವರ್ಧನೆಯು ಆಹಾರದಲ್ಲಿ ಒಂದು ಅಥವಾ ಹೆಚ್ಚಿನ ಸೂಕ್ಷ್ಮ ಪೋಷಕಾಂಶಗಳ (ಜೀವಸತ್ವಗಳು ಮತ್ತು ಖನಿಜಗಳು) ಪ್ರಮಾಣವನ್ನು ಹೆಚ್ಚಿಸುವ ವೈಜ್ಞಾನಿಕ ವಿಧಾನವಾಗಿದೆ.
    • ಮಹತ್ವ:- ಇದು ಆಹಾರದ ಪೌಷ್ಟಿಕಾಂಶದ ಗುಣಮಟ್ಟವನ್ನು ಸುಧಾರಿಸಲು ಮತ್ತು ಕನಿಷ್ಠ ಆರೋಗ್ಯದ ಅಪಾಯದೊಂದಿಗೆ ಸಾರ್ವಜನಿಕ ಆರೋಗ್ಯದ ಪ್ರಯೋಜನಗಳನ್ನು ಒದಗಿಸಲು ಸಹಕಾರಿಯಾಗಿದೆ.
    • ಅಕ್ಕಿ ಪೋಷಕಾಂಶ ಬಲವರ್ಧನೆ:- ಇದು ಅಕ್ಕಿಗೆ ಕಬ್ಬಿಣಾಂಶ, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ 12 ನಂತಹ ಸೂಕ್ಷ್ಮ ಪೋಷಕಾಂಶಗಳ ಸೇರ್ಪಡೆಯನ್ನು ಒಳಗೊಂಡಿದೆ.
    • ಹಾಲಿನ ಪೋಷಕಾಂಶ ಬಲವರ್ಧನೆ:- ಇದು ಹಾಲಿಗೆ ವಿಟಮಿನ್ ಎ ಮತ್ತು ಡಿ ಸೇರಿಸುವ ಪ್ರಕ್ರಿಯೆಯಾಗಿದ್ದು, ಈ ಜೀವಸತ್ವಗಳ ಕೊರತೆಯಿಂದ ಉಂಟಾಗುವ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
    • ಉಪ್ಪಿನ ಪೋಷಕಾಂಶ ಬಲವರ್ಧನೆ:- ಅಯೋಡಿನ್ ಕೊರತೆಯಿಂದ ಬರುವ ಕಾಯಿಲೆಗಳನ್ನು ತಡೆಗಟ್ಟಲು ಉಪ್ಪಿಗೆ ಅಯೋಡಿನ್ ಸೇರಿಸುವ (ಅಯೋಡೀಕರಿಸಿದ ಉಪ್ಪು) ಪ್ರಕ್ರಿಯೆಯನ್ನು ಇದು ಒಳಗೊಂಡಿದೆ.

    ವಿಶ್ವ ಸ್ಥೂಲತೆ ಅಟ್ಲಾಸ್, 2026

    ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಮಾರ್ಚ್ 4 ವಿಶ್ವ ಸ್ಥೂಲತೆಯ ದಿನದಂದು ‘ವಿಶ್ವ ಸ್ಥೂಲತೆಯ ಒಕ್ಕೂಟ’ ಪ್ರಕಟಿಸಿ ಬಿಡುಗಡೆಗೊಳಿಸಿದ ‘ವಿಶ್ವ ಸ್ಥೂಲತೆ ಅಟ್ಲಾಸ್, 2026’ ವರದಿಯ ಪ್ರಕಾರ, ಅತಿಯಾದ ತೂಕ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಭಾರತವು ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ.

    ‘ವಿಶ್ವ ಸ್ಥೂಲತೆ ಅಟ್ಲಾಸ್’ನ ಬಗ್ಗೆ:

    • ಪ್ರಕಟಿಸಿ ಬಿಡುಗಡೆಗೊಳಿಸುವವರು:- ವಿಶ್ವ ಸ್ಥೂಲತೆಯ ಒಕ್ಕೂಟ
    • ಇದು ಸ್ಥೂಲತೆಯ ಪ್ರವೃತ್ತಿಗಳು ಮತ್ತು ಅದಕ್ಕೆ ಸಂಬಂಧಿಸಿದ ಆರೋಗ್ಯದ ಅಪಾಯಗಳ ಕುರಿತು ಜಾಗತಿಕ ದತ್ತಾಂಶ, ಮುನ್ಸೂಚನೆಗಳು ಹಾಗೂ ನೀತಿ ಸಂಬಂಧಿತ ಒಳನೋಟಗಳನ್ನು ಒದಗಿಸುತ್ತದೆ.
    • 2025ರ ವೇಳೆಗೆ ಬಾಲ್ಯದ ಸ್ಥೂಲತೆಯ ಏರಿಕೆಯನ್ನು ತಡೆಯುವ ಜಾಗತಿಕ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಈ ಗುರಿ ಸಾಧನೆಯ ಕಾಲಮಿತಿಯನ್ನು ಈಗ 2030ರವರೆಗೆ ವಿಸ್ತರಿಸಲಾಗಿದೆ.

    ಸರ್ಕಾರದ ಉಪಕ್ರಮಗಳು:

    • ಪೋಷಣ್ ಅಭಿಯಾನ (ರಾಷ್ಟ್ರೀಯ ಪೌಷ್ಟಿಕಾಂಶ ಅಭಿಯಾನ):- ವಿವಿಧ ಪೌಷ್ಟಿಕಾಂಶ ಸಂಬಂಧಿತ ಯೋಜನೆಗಳ ಸಮನ್ವಯದ ಮೂಲಕ ಮಕ್ಕಳು, ಕಿಶೋರಿಯರು ಮತ್ತು ಮಹಿಳೆಯರ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸುವತ್ತ ಇದು ಗಮನ ಹರಿಸುತ್ತದೆ.
    • ಫಿಟ್ ಇಂಡಿಯಾ ಅಭಿಯಾನ:- ನಾಗರಿಕರಲ್ಲಿ ದೈಹಿಕ ಚಟುವಟಿಕೆ, ಸದೃಢತೆಯ ಸಂಸ್ಕೃತಿ ಮತ್ತು ಜೀವನಶೈಲಿಯಲ್ಲಿ ನಡವಳಿಕೆಯ ಬದಲಾವಣೆಯನ್ನು ಉತ್ತೇಜಿಸಲು ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
    • ಈಟ್ ರೈಟ್ ಇಂಡಿಯಾ ಅಭಿಯಾನ:- ಇದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಉಪಕ್ರಮವಾಗಿದ್ದು, ಆರೋಗ್ಯಕರ ಆಹಾರ ಕ್ರಮ, ಆಹಾರ ಸುರಕ್ಷತೆ ಮತ್ತು ಅನಾರೋಗ್ಯಕರ ಆಹಾರ ಸೇವನೆಯನ್ನು ತಗ್ಗಿಸಲು ಜನರನ್ನು ಪ್ರೇರೇಪಿಸುತ್ತದೆ.
    • ಶಾಲಾ ಆರೋಗ್ಯ ಮತ್ತು ಸ್ವಾಸ್ಥ್ಯ ಕಾರ್ಯಕ್ರಮ:- ಶಾಲಾ ವಿದ್ಯಾರ್ಥಿಗಳಲ್ಲಿ ಆರೋಗ್ಯ ಶಿಕ್ಷಣ, ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಜೀವನಶೈಲಿಯ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
  • ಶ್ರೀ ಗುರು ತೇಘ (ತೇಜ್) ಬಹದ್ದೂರ್ | ಭದ್ರತೆಯ ಮೇಲಿನ ಸಚಿವ ಸಂಪುಟ ಸಮಿತಿ (CCS) | ತೆಂಗು ಉತ್ತೇಜನಾ ಯೋಜನೆ

    ಶ್ರೀ ಗುರು ತೇಘ (ತೇಜ್) ಬಹದ್ದೂರ್

    ಇತಿಹಾಸ

    ಇದೀಗ ಸುದ್ದಿಯಲ್ಲಿದೆ:

    • ಪ್ರಧಾನಮಂತ್ರಿಯವರು ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮ ವರ್ಷದ (ಶಹೀದಿ ಸಮಾಗಮ) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 
    • ಈ ವೇಳೆ ಅವರು ಗುರುವಿನ ಬಲಿದಾನಕ್ಕೆ ನಮನ ಸಲ್ಲಿಸಿದರು ಹಾಗೂ ಶೌರ್ಯ, ಸೌಹಾರ್ದತೆ ಮತ್ತು ಸಾಮಾಜಿಕ ಐಕ್ಯತೆಯ ಕುರಿತಾದ ಭಾರತದ ಪರಂಪರೆಯನ್ನು ಸ್ಮರಿಸಿದರು.

    ಗುರು ತೇಘ (ತೇಜ್) ಬಹದ್ದೂರ್ ಅವರ ಬಗ್ಗೆ:

    • ಇವರು 1621ರಲ್ಲಿ ಅಮೃತಸರದಲ್ಲಿ ಸಿಖ್ಖರ 6ನೇ ಗುರುವಾದ ಗುರು ಹರಗೋಬಿಂದ್ ಅವರ ಪುತ್ರನಾಗಿ ಜನಿಸಿದರು.
    • ಇವರು ತಮ್ಮ 13ನೇ ವಯಸ್ಸಿನಲ್ಲಿಯೇ ಯುದ್ಧಭೂಮಿಯಲ್ಲಿ ತೋರಿದ ಅಪ್ರತಿಮ ಶೌರ್ಯದಿಂದಾಗಿ ‘ತೇಜ್ ಬಹದ್ದೂರ್’ (ಕತ್ತಿಯ ವೀರ) ಎಂಬ ಬಿರುದಿಗೆ ಪಾತ್ರರಾದರು.
    • ಮಖನ್ ಶಾ ಎಂಬ ವ್ಯಾಪಾರಿಯಿಂದ ಗುರುತಿಸಲ್ಪಡುವ ಮುನ್ನ ಇವರು ಬಕಾಲ ಎಂಬಲ್ಲಿ ಹಲವು ವರ್ಷಗಳ ಕಾಲ ಧ್ಯಾನದಲ್ಲಿ ತೊಡಗಿದ್ದರು. ತದನಂತರ 1664ರಲ್ಲಿ ಇವರನ್ನು ಸಿಖ್ಖರ 9ನೇ ಗುರು ಎಂದು ಅಂಗೀಕರಿಸಲಾಯಿತು.
    • ಇವರ ಪುತ್ರ ಗುರು ಗೋಬಿಂದ್ ಸಿಂಗ್ ಅವರು, “ತಮ್ಮ ಶಿರವನ್ನೇ ಅರ್ಪಿಸಿದರೂ ನಂಬಿಕೆಯನ್ನು ಬಿಟ್ಟುಕೊಡದ ಮಹಾನ್ ಚೇತನ” ಎಂದು ಇವರನ್ನು ಗೌರವಿಸಿದರು. ಈ ಮೂಲಕ ಇವರು ಭಾರತದ ಆತ್ಮಸಾಕ್ಷಿ ಮತ್ತು ಧರ್ಮದ ರಕ್ಷಕನಾದ ‘ಹಿಂದ್ ದಿ ಚಾದರ್’ ಎಂಬ ಶಾಶ್ವತ ಕೀರ್ತಿಗೆ ಭಾಜನರಾದರು.

    ಗುರು ತೇಜ್ ಬಹದ್ದೂರ್ ಅವರ ಕೊಡುಗೆಗಳು:

    • ಚಕ್ ನಾನಕಿ (ಇಂದಿನ ಆನಂದಪುರ ಸಾಹಿಬ್) ನಗರವನ್ನು ಸ್ಥಾಪಿಸಿದರು:- ಉತ್ತರ ಮತ್ತು ಪೂರ್ವ ಭಾರತದಾದ್ಯಂತ ವ್ಯಾಪಕವಾಗಿ ಸಂಚರಿಸಿದ ಇವರು, ನಿರ್ಭಯತೆ, ಸಮಾನತೆ ಮತ್ತು ಏಕದೇವೋಪಾಸನೆಯನ್ನು ಪ್ರತಿಪಾದಿಸುವ ಆಧ್ಯಾತ್ಮಿಕ ಬೋಧನೆಗಳನ್ನು ಪಸರಿಸಿದರು.
    • ಮೊಘಲ್ ದೊರೆ ಔರಂಗಜೇಬನ ಆಳ್ವಿಕೆಯ ಕಾಲದಲ್ಲಿ ಧಾರ್ಮಿಕ ಉದ್ವಿಗ್ನತೆ ಮತ್ತು ಬಲವಂತದ ಮತಾಂತರಗಳು ಮಿತಿಮೀರಿದ್ದವು. ಆ ಸಂದರ್ಭದಲ್ಲಿ ಇವರ ಸಂದೇಶಗಳು ಜನಮಾನಸದಲ್ಲಿ ವ್ಯಾಪಕವಾಗಿ ಪ್ರತಿಧ್ವನಿಸಿದವು.
    • ಕಾಶ್ಮೀರಿ ಬ್ರಾಹ್ಮಣರು ದೌರ್ಜನ್ಯದಿಂದ ಪಾರಾಗಲು ಇವರ ರಕ್ಷಣೆ ಕೋರಿದಾಗ, ಗುರು ತೇಜ್ ಬಹದ್ದೂರ್ ಅವರು ಮೊಘಲರ ಅಧಿಕಾರವನ್ನು ದಿಟ್ಟವಾಗಿ ಪ್ರಶ್ನಿಸುವ ಮೂಲಕ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿ ನಿಂತರು.
    • ಮರಣ:- ಇವರನ್ನು ದೆಹಲಿಯಲ್ಲಿ ಬಂಧಿಸಲಾಯಿತು. ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಕಾರಣಕ್ಕಾಗಿ, 1675ರಲ್ಲಿ ಇವರನ್ನು ಮತ್ತು ಇವರ ಒಡನಾಡಿಗಳನ್ನು ದೆಹಲಿಯ ಚಾಂದಿನಿ ಚೌಕ್‌ನಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಇವರುಗೈದ ಈ ಬಲಿದಾನವನ್ನು ಅತ್ಯುನ್ನತ ತ್ಯಾಗವೆಂದು ಇಂದಿಗೂ ಸ್ಮರಿಸಲಾಗುತ್ತದೆ.

    ಭದ್ರತೆಯ ಮೇಲಿನ ಸಚಿವ ಸಂಪುಟ ಸಮಿತಿ (CCS)

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಪ್ರಸ್ತುತ ಪರಿಸ್ಥಿತಿಯನ್ನು ಪರಾಮರ್ಶಿಸಲು, ಪ್ರಧಾನಿ ನರೇಂದ್ರ ಮೋದಿಯವರು ಭದ್ರತೆಯ ಮೇಲಿನ ಸಚಿವ ಸಂಪುಟ (ಕ್ಯಾಬಿನೆಟ್) ಸಮಿತಿ (CCS)ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

    ಭದ್ರತೆಯ ಮೇಲಿನ ಸಚಿವ ಸಂಪುಟ ಸಮಿತಿ (CCS)ಯ ಬಗ್ಗೆ:

    • ಅತ್ಯುನ್ನತ ಮಟ್ಟದ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಮುಖ ಸಮಿತಿ:- ಇದು ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಗೆ ಸಂಬಂಧಿಸಿದ ವಿಷಯಗಳ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.
    • ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ಈ ಸಮಿತಿಯು ಕಾರ್ಯನಿರ್ವಹಿಸುತ್ತದೆ. ಇದು ಪ್ರಮುಖವಾಗಿ ಗೃಹ ಸಚಿವರು, ರಕ್ಷಣಾ ಸಚಿವರು, ಹಣಕಾಸು ಸಚಿವರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರನ್ನು ಒಳಗೊಂಡಿರುತ್ತದೆ.
    • ರಾಷ್ಟ್ರೀಯ ಭದ್ರತಾ ಸಲಹೆಗಾರರು (NSA) ಈ ಸಮಿತಿಯ ವ್ಯಾಪ್ತಿಗೆ ಬರುವ ವಿಷಯಗಳ ಕುರಿತು ಕಾರ್ಯದರ್ಶಿ-ಮಟ್ಟದ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಾರೆ.

    ತೆಂಗು ಉತ್ತೇಜನಾ ಯೋಜನೆ

    ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಮುಂಗಡ ಪತ್ರ, 2026-27ನೇ ಸಾಲಿನಲ್ಲಿ ಕೃಷಿ ವಲಯದ ಅಭಿವೃದ್ಧಿಗಾಗಿ ‘ತೆಂಗು ಉತ್ತೇಜನಾ ಯೋಜನೆ’ಯನ್ನು ಘೋಷಿಸಲಾಗಿದೆ.

    ‘ತೆಂಗು ಉತ್ತೇಜನಾ ಯೋಜನೆ’ಯ ಬಗ್ಗೆ:

    • ಪ್ರಮುಖ ಉದ್ದೇಶ:- ಕರಾವಳಿ ತೀರದುದ್ದಕ್ಕೂ ಹೊಸ ತೋಟಗಳನ್ನು ನಿರ್ಮಿಸುವುದು ಹಾಗೂ ಇಳುವರಿ ಕುಂಠಿತಗೊಂಡಿರುವ ಹಳೆಯ ಮತ್ತು ರೋಗಗ್ರಸ್ತ ತೋಟಗಳನ್ನು ಅಧಿಕ ಇಳುವರಿ ನೀಡುವ ಉತ್ಕೃಷ್ಟ ತೆಂಗಿನ ತಳಿಗಳೊಂದಿಗೆ ಪುನರುಜ್ಜೀವನಗೊಳಿಸುವ ಮೂಲಕ ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸುವುದು.
    • ಅನುಷ್ಠಾನಗೊಳಿಸುವ ಪ್ರಾಧಿಕಾರ:- ‘ತೆಂಗು ಅಭಿವೃದ್ಧಿ ಮಂಡಳಿ’ (CDB).

    ತೆಂಗಿನಕಾಯಿಯ ಬಗ್ಗೆ:

    • ವೈಜ್ಞಾನಿಕ ಹೆಸರು:- ಕೊಕೊಸ್ ನುಸಿಫರ (Cocos nucifera)
    • ಇದು ಭಾರತದ ಪ್ರಮುಖ ಬಹುವಾರ್ಷಿಕ ತೋಟಗಾರಿಕಾ ಬೆಳೆಯಾಗಿದೆ.
    • ಇದನ್ನು ಅತಿಹೆಚ್ಚಾಗಿ ತೇವಾಂಶಭರಿತ ಉಷ್ಣವಲಯ ಮತ್ತು ಕರಾವಳಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
    • ಈ ಬೆಳೆಯು ಉತ್ತಮವಾಗಿ ನೀರು ಬಸಿದುಹೋಗುವ ಮರಳು ಮಿಶ್ರಿತ ಗೋಡು ಮಣ್ಣು (loam soils), ಅಧಿಕ ತೇವಾಂಶ ಮತ್ತು 27-32 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಪ್ರದೇಶಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ ಹಾಗೂ ಈ ಬೆಳೆಗೆ ಯಥೇಚ್ಛವಾದ ಸೂರ್ಯನ ಬೆಳಕಿನ ಅವಶ್ಯಕತೆಯಿರುತ್ತದೆ.
    • ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ತೆಂಗು ಉತ್ಪಾದಿಸುವ ರಾಷ್ಟ್ರಗಳ ಪೈಕಿಯಲ್ಲಿ ಭಾರತವೂ ಮುಂಚೂಣಿಯಲ್ಲಿದೆ.
    • ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ಜಂಟಿಯಾಗಿ ಭಾರತದ ಒಟ್ಟು ತೆಂಗು ಉತ್ಪಾದನೆಯಲ್ಲಿ ಶೇ. 82-83ರಷ್ಟು ಅಗ್ರಗಣ್ಯ ಪಾಲನ್ನು ಹೊಂದಿವೆ.
  • ಅಮೆರಿಕ -ಇಸ್ರೇಲ್-ಇರಾನ್ ಯುದ್ಧ | ಮಾರುಕಟ್ಟೆ ದುರ್ಬಳಕೆ ಮತ್ತು ಸೈಬರ್ ವಂಚನೆಯ ಮೇಲೆ – ‘ಸೆಬಿ’ (SEBI) ಕಡಿವಾಣ | ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು | ದೇಶದ ಮೊದಲ ಸೆಮಿಕಂಡಕ್ಟರ್ (ಅರೆವಾಹಕ) ಘಟಕ

    ಅಮೆರಿಕ -ಇಸ್ರೇಲ್-ಇರಾನ್ ಯುದ್ಧ

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಅಮೆರಿಕದ ‘ಆಪರೇಷನ್ ಎಪಿಕ್ ಫ್ಯೂರಿ’ ಮತ್ತು ಇಸ್ರೇಲ್‌ನ ‘ಆಪರೇಷನ್ ರೋರಿಂಗ್ ಲಯನ್’ ಕಾರ್ಯಾಚರಣೆಗಳ ಬೆನ್ನಲ್ಲೇ, ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಮರಣವು ದೃಢಪಟ್ಟಿದೆ. ಈ ಘಟನೆಯು ಆ ಭಾಗದ ಭೂ-ರಾಜಕೀಯ ಚಿತ್ರಣವನ್ನು ಮೂಲಭೂತವಾಗಿ ಬದಲಿಸಿದೆ.
    • ಇರಾನ್ ತನ್ನ ‘ಆಪರೇಷನ್ ಟ್ರೂ ಪ್ರಾಮಿಸ್ 4’ ಮೂಲಕ ಇಸ್ರೇಲ್ ಮತ್ತು ನೆರೆಯ ಗಲ್ಫ್ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸುವ ಮೂಲಕ ಪ್ರತಿಕಾರವನ್ನು ತೀರಿಸಿಕೊಂಡಿದೆ.
    • ಬಹ್ರೇನ್, ಕತಾರ್, ಯುಎಇ (UAE), ಕುವೈತ್ ಮತ್ತು ಜೋರ್ಡಾನ್‌ನಲ್ಲಿರುವ ಅಮೇರಿಕಾ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ಮಾಡಿದೆ.
    • ತೈಲ ಸಾಗಣೆಯ ನೌಕೆಗಳ ಮೇಲೆ ದಾಳಿ ಹಾಗೂ ಬೆದರಿಕೆ ಹಾಕುವ ಮೂಲಕ ಇರಾನ್ ಹೋರ್ಮುಜ್ ಜಲಸಂಧಿಯನ್ನು ಪರಿಣಾಮಕಾರಿಯಾಗಿ ಸ್ಥಗಿತಗೊಳಿಸಿದೆ. ಇದರಿಂದಾಗಿ ಹಡಗು ಸಂಚಾರ ಶೇ. 70ರಷ್ಟು ಕುಸಿದಿದ್ದು, ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ.

    ಪ್ರಸ್ತುತ ಉದ್ವಿಗ್ನತೆಯ ಐತಿಹಾಸಿಕ ಹಿನ್ನೆಲೆ:

    • ದೀರ್ಘಕಾಲದ ಹಗೆತನ ಮತ್ತು ಸೈದ್ಧಾಂತಿಕ ಸಂಘರ್ಷ:- 1979ರ ಇಸ್ಲಾಮಿಕ್ ಕ್ರಾಂತಿಯ ನಂತರ, ಅಮೆರಿಕ ಮತ್ತು ಇರಾನ್ ನಡುವೆ ‘ಶೀತಲ ಸಮರ’ದಂತಹ ವಾತಾವರಣ ನಿರ್ಮಾಣವಾಗಿದೆ. ಕಠಿಣ ಆರ್ಥಿಕ ನಿರ್ಬಂಧಗಳು ಮತ್ತು ಇರಾನ್ ಅನ್ನು ‘ಭಯೋತ್ಪಾದನೆಯ ಪ್ರಾಯೋಜಕ ರಾಷ್ಟ್ರ’ ಎಂದು ಹಣೆಪಟ್ಟಿ ಹಚ್ಚಿರುವುದು ಉಭಯ ದೇಶಗಳ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.
    • 2015ರ ಪರಮಾಣು ಒಪ್ಪಂದದ (JCPOA) ವೈಫಲ್ಯ:- 2015ರ ಪರಮಾಣು ಒಪ್ಪಂದದಿಂದ 2018ರಲ್ಲಿ ಅಮೆರಿಕ ಹಿಂದೆ ಸರಿದಿದ್ದು, ಇರಾನ್ ಮೇಲೆ ‘ಹೆಚ್ಚಿನ ಒತ್ತಡ’ ಹೇರುವ ಅಭಿಯಾನಕ್ಕೆ ನಾಂದಿ ಹಾಡಿತು. 
    • ಇದಕ್ಕೆ ಪ್ರತಿಯಾಗಿ ಇರಾನ್ ಹಂತಹಂತವಾಗಿ ಯುರೇನಿಯಂ ಪುಷ್ಟೀಕರಣದ ಮಿತಿಗಳನ್ನು ಉಲ್ಲಂಘಿಸಿತು. 
    • ಇದರಿಂದಾಗಿ ಇರಾನ್‌ನ ಪರಮಾಣು ಸನ್ನದ್ಧತೆಯು ಅಮೆರಿಕ ಮತ್ತು ಇಸ್ರೇಲ್‌ಗೆ ಅಸ್ತಿತ್ವದ ಭೀತಿಯಾಗಿ ಪರಿಣಮಿಸಿತು. 
    • ಇದನ್ನು ಕೇವಲ ರಾಜತಾಂತ್ರಿಕತೆಯಿಂದ ನಿಯಂತ್ರಿಸಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಎರಡೂ ರಾಷ್ಟ್ರಗಳು ಬಂದವು.
    • ‘ಗ್ರೇ ಝೋನ್’ ಮತ್ತು ಛಾಯಾ ಯುದ್ಧ (ಪ್ರಾಕ್ಸಿ ವಾರ್):- ಹಲವು ವರ್ಷಗಳಿಂದ ಈ ಸಂಘರ್ಷವು ತೆರೆಯ ಮರೆಯಲ್ಲಿ ಛಾಯಾ ಯುದ್ಧದಂತೆ ನಡೆಯುತ್ತಿದೆ. ಇರಾನ್ ತನ್ನ ‘ಆಕ್ಸಿಸ್ ಆಫ್ ರೆಸಿಸ್ಟೆನ್ಸ್’ (ಹಮಾಸ್, ಹೆಜ್ಬೊಲ್ಲಾ ಮತ್ತು ಹೌತಿ ಬಂಡುಕೋರರು) ಸಂಘಟನೆಗಳ ಮೂಲಕ ಲೆಬನಾನ್, ಸಿರಿಯಾ, ಇರಾಕ್ ಮತ್ತು ಯೆಮೆನ್‌ಗಳಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಿದೆ.

    ಜಾಗತಿಕ ಪರಿಣಾಮಗಳು:

    • ಇಂಧನ ಆಘಾತ ಮತ್ತು ಹಣದುಬ್ಬರ:- ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ನಿಯಂತ್ರಣ ಮೀರಿ ಏರಿಕೆಯಾಗುವ ಸಾಧ್ಯತೆಯಿದೆ. ಇದರಿಂದಾಗಿ ಸಾರಿಗೆ ವೆಚ್ಚ ಮತ್ತು ವಿಮಾ ಕಂತುಗಳ ದರಗಳಲ್ಲಿ ಭಾರಿ ಏರಿಕೆಯಾಗಲಿದೆ.
    • ಜಾಗತಿಕ ಆರ್ಥಿಕ ಕುಸಿತದ ಭೀತಿ:- ವಿಶ್ವದ ಆರ್ಥಿಕತೆಯು ಕಡಿಮೆ ಬೆಳವಣಿಗೆ ಮತ್ತು ಅಧಿಕ ಹಣದುಬ್ಬರವಿರುವ ‘ಆರ್ಥಿಕ ಸ್ಥಗಿತದೊಂದಿಗಿನ ಹಣದುಬ್ಬರ’ (ಸ್ಟಾಗ್ಫ್ಲೇಷನ್) ಸ್ಥಿತಿಗೆ ತಲುಪುವ ಅಪಾಯವಿದೆ.
    • ಜಾಗತಿಕ ಪೂರೈಕೆ ಸರಪಳಿಯ ವ್ಯತ್ಯಯ:- ಯುದ್ಧದ ಸನ್ನಿವೇಶವು ತೈಲ, ಎಲ್‌ಎನ್‌ಜಿ (LNG), ರಸಗೊಬ್ಬರ ಮತ್ತು ತೈಲ-ರಾಸಾಯನಿಕಗಳ ಪೂರೈಕೆಯ ಮೇಲೆ ತೀವ್ರವಾದ ಕೆಟ್ಟ ಪರಿಣಾಮ ಬೀರಲಿದೆ. ಹಡಗುಗಳು ಸುರಕ್ಷಿತ ಸಂಚಾರಕ್ಕಾಗಿ ದೀರ್ಘ ಮಾರ್ಗಗಳನ್ನು ಅವಲಂಬಿಸಬೇಕಾಗಿರುವುದರಿಂದ ಸರಕು ಸಾಗಣೆ ವೆಚ್ಚ ಗಣನೀಯವಾಗಿ ಹೆಚ್ಚಾಗಲಿದೆ.
    • ಚೀನಾ ಮತ್ತು ರಷ್ಯಾದ ಪಾತ್ರ:- ಚೀನಾ, ಇರಾನ್‌ನಿಂದ ಅತ್ಯಂತ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುವ ದೇಶವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುವುದರಿಂದ ರಷ್ಯಾ  ಹೆಚ್ಚಿನ ಆರ್ಥಿಕ ಲಾಭವನ್ನು ಗಳಿಸುವ ಸಾಧ್ಯತೆಯಿದೆ.

    ಭಾರತದ ಮೇಲಾಗುವ ಪರಿಣಾಮಗಳು:

      • ಇಂಧನ ಹಣದುಬ್ಬರ:- ಭಾರತವು ತನ್ನ ಒಟ್ಟು ಕಚ್ಚಾ ತೈಲದ ಅವಶ್ಯಕತೆಯಲ್ಲಿ ಶೇ. 85ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಯುದ್ಧದ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ತೈಲ ಬೆಲೆಗಳು ಮತ್ತು ಹಡಗುಗಳ ಮೇಲಿನ ಸಮರ ಶುಲ್ಕವು ರೂಪಾಯಿ ಮೌಲ್ಯದ ಮೇಲೆ ತೀವ್ರ ಒತ್ತಡ ಹೇರುತ್ತಿವೆ.
      • ಪ್ರಜೆಗಳ ಸುರಕ್ಷತೆ:- ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 8-9 ದಶಲಕ್ಷ ಭಾರತೀಯರು ವಾಸಿಸುತ್ತಿದ್ದಾರೆ. ಆ ಭಾಗದಲ್ಲಿ ವಾಣಿಜ್ಯ ವಿಮಾನ ಸಂಚಾರ ಸ್ಥಗಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರುವ ಕುರಿತು ಕೇಂದ್ರ ಸಚಿವ ಸಂಪುಟದ ಭದ್ರತಾ ಸಮಿತಿಯು (CCS) ಚರ್ಚೆ ನಡೆಸಿದೆ.
    • ವ್ಯಾಪಾರ ವ್ಯತ್ಯಯ:- ಕಡಲ ಮಾರ್ಗದ ಅಸುರಕ್ಷತೆಯಿಂದಾಗಿ ಕೃಷಿ ಉತ್ಪನ್ನಗಳ ರಫ್ತು ಮತ್ತು ಅಗತ್ಯ ರಸಗೊಬ್ಬರಗಳ ಆಮದಿಗೆ ತೀವ್ರ ಅಡೆತಡೆಗಳು ಉಂಟಾಗಿವೆ. 
    • ತಂತ್ರೋಪಾಯದ ಸಂಪರ್ಕಗಳು:- ಮಧ್ಯ ಏಷ್ಯಾವನ್ನು ಸಂಪರ್ಕಿಸುವ ಚಾಬಹಾರ್ ಬಂದರು, I2U2 (ಭಾರತ-ಇಸ್ರೇಲ್-ಯು ಎ ಇ-ಅಮೇರಿಕ) ಒಕ್ಕೂಟ, IMEC (ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಸಂಚಾರ ಮಾರ್ಗ) ಮತ್ತು “ಗಲ್ಫ್ ಪಾರ್ಟ್ನರ್ಷಿಪ್” (ಸೌದಿ ಅರೇಬಿಯಾ, ಯು ಎ ಇ)ಗಳ ಮೇಲೆ ಈ ಯುದ್ಧವು ಪ್ರತಿಕೂಲ ಪರಿಣಾಮ ಬೀರಿದ್ದು, ಈ ಯೋಜನೆಗಳ ಭವಿಷ್ಯದ ಮೇಲೆ ತೀವ್ರ ಅನಿಶ್ಚಿತತೆ ಮೂಡಿಸಿದೆ.

    ಗ್ರೇ ಝೋನ್ (Gray Zone) ಎಂದರೇನು?

    • “ಗ್ರೇ ಝೋನ್” ಎಂದರೆ ಯುದ್ಧ ಮತ್ತು ಶಾಂತಿ ನಡುವಿನ ಮಧ್ಯಮ ಸ್ಥಿತಿ. 
    • ಇದು ಪೂರ್ಣ ಪ್ರಮಾಣದ ಯುದ್ಧವಾಗಿರದು, ಆದರೆ ಒಂದು ದೇಶ ಮತ್ತೊಂದು ದೇಶದ ವಿರುದ್ಧ ನೇರ ಯುದ್ಧವಿಲ್ಲದೆ ಪ್ರಭಾವ ಬೀರುವ ಅಥವಾ ದುರ್ಬಲಗೊಳಿಸುವ ಕ್ರಮಗಳಾದ ಸೈನಿಕ, ರಾಜಕೀಯ, ಆರ್ಥಿಕ ಅಥವಾ ಸೈಬರ್ ಮಾರ್ಗಗಳ ಮೂಲಕ ಒತ್ತಡ ತರುವ ಪರಿಸ್ಥಿತಿ/ಕಾರ್ಯಗಳು.
    • ಉದಾಹರಣೆಗೆ:- ಸೈಬರ್ ದಾಳಿ, ತಪ್ಪು ಮಾಹಿತಿ (Disinformation) ಹರಡುವುದು, ಆರ್ಥಿಕ ಒತ್ತಡ ಮತ್ತು ಕಡಲ ಪ್ರದೇಶದಲ್ಲಿ ಸಣ್ಣ ಮಟ್ಟದ ಸೈನಿಕ ಚಟುವಟಿಕೆ.

    ಛಾಯಾ ಯುದ್ಧ (Proxy Warfare) ಎಂದರೇನು?

    • “ಛಾಯಾ ಯುದ್ಧ” ಎಂದರೆ ಒಂದು ದೇಶ ಮತ್ತೊಂದು ದೇಶ/ತನ್ನ ಶತ್ರು ದೇಶದ ವಿರುದ್ಧ ನೇರವಾಗಿ ಯುದ್ಧ ಮಾಡದೇ, ಉಗ್ರಗಾಮಿ ಸಂಘಟನೆಗಳು, ಬಂಡಾಯ ಗುಂಪುಗಳು, ಸ್ಥಳೀಯ ರಕ್ಷಣಾ ಪಡೆಗಳು ಅಥವಾ ಸಶಸ್ತ್ರ ಸಂಘಟನೆಗಳ ಅಥವಾ ಮತ್ತೊಂದು ದೇಶವನ್ನು/ಗಳನ್ನು ಬಳಸಿಕೊಂಡು ಪರೋಕ್ಷವಾಗಿ ಯುದ್ಧ ನಡೆಸುವುದು.
    • ಉದಾಹರಣೆಗೆ:- ಒಂದು ದೇಶ ಬಂಡಾಯ ಗುಂಪುಗಳಿಗೆ ಹಣ, ಆಯುಧ ಅಥವಾ ತರಬೇತಿ ನೀಡುವುದು ಇತರ ಗುಂಪುಗಳನ್ನು ಬಳಸಿ ಶತ್ರು ದೇಶದ ವಿರುದ್ಧ ಹೋರಾಟ ನಡೆಸುವುದು

    ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ)ದ ಬಗ್ಗೆ:

      • ಏಷ್ಯಾ ಖಂಡದ ಒಂದು ಪ್ರಮುಖ ಭಾಗವಾಗಿದೆ:- ಇದು ಪಶ್ಚಿಮಕ್ಕೆ ಯುರೋಪ್, ಉತ್ತರಕ್ಕೆ ಮಧ್ಯ ಏಷ್ಯಾ, ಪೂರ್ವಕ್ಕೆ ದಕ್ಷಿಣ ಏಷ್ಯಾ ಮತ್ತು ದಕ್ಷಿಣಕ್ಕೆ ಆಫ್ರಿಕಾ ಹಾಗೂ ಅರಬ್ಬೀ ಸಮುದ್ರದಿಂದ ಆವೃತವಾಗಿದೆ.
    • ಪಶ್ಚಿಮ ಏಷ್ಯಾ ಪ್ರದೇಶವು ಪ್ರಮುಖವಾಗಿ ಈ ರಾಷ್ಟ್ರಗಳನ್ನು ಒಳಗೊಂಡಿದೆ:
    • ಅರ್ಮೇನಿಯಾ, ಅಜರ್ಬೈಜಾನ್, ಬಹ್ರೇನ್, ಸೈಪ್ರಸ್, ಜಾರ್ಜಿಯಾ, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಇರಾನ್, ಓಮನ್, ಪ್ಯಾಲೆಸ್ಟೈನ್, ಕತಾರ್, ಸೌದಿ ಅರೇಬಿಯಾ, ಸಿರಿಯಾ, ಟರ್ಕಿ, ಯುಎಇ (UAE) ಮತ್ತು ಯೆಮೆನ್. 
    • ಈ ಪ್ರದೇಶವು ಈ ಕೆಳಗಿನ ಕಾರಣಗಳಿಗಾಗಿ ಕಾರ್ಯತಂತ್ರದ ಮಹತ್ವವನ್ನು ಹೊಂದಿದೆ:
      • ಇಂಧನ ಸಂಪನ್ಮೂಲ:- ತೈಲ ಮತ್ತು ಅನಿಲದಂತಹ ಅಪಾರ ಇಂಧನ ಸಂಪನ್ಮೂಲಗಳನ್ನು ಇದು ಹೊಂದಿದೆ.
      • ಪ್ರಮುಖ ಕಿರಿದಾದ ಜಲಮಾರ್ಗಗಳು (Chokepoints):- ಹೋರ್ಮುಜ್ ಜಲಸಂಧಿ, ಬಾಬ್-ಎಲ್-ಮಂಡೇಬ್ ಮತ್ತು ಸೂಯೆಜ್ ಕಾಲುವೆಗಳು ಇಲ್ಲಿವೆ.
      • ಧಾರ್ಮಿಕ ಕೇಂದ್ರಗಳನ್ನು ಒಳಗೊಂಡಿದೆ:- ಜೆರುಸಲೇಮ್, ಮೆಕ್ಕಾ ಮತ್ತು ಮದೀನಾ.
      • ಭೂ- ಕಾರ್ಯತಂತ್ರದ ಸ್ಥಾನ:- ಏಷ್ಯಾ, ಆಫ್ರಿಕಾ ಮತ್ತು ಯುರೋಪ್ ಖಂಡಗಳನ್ನು ಬೆಸೆಯುವ ಭೌಗೋಳಿಕ ಮತ್ತು ಕಾರ್ಯತಂತ್ರದ ಸ್ಥಾನದಲ್ಲಿದೆ.
      • ಪ್ರಮುಖ ಬಾಹ್ಯ ಶಕ್ತಿಗಳ ಹಸ್ತಕ್ಷೇಪ:- ಅಮೆರಿಕ , ರಷ್ಯಾ ಮತ್ತು ಚೀನಾದಂತಹ ಪ್ರಮುಖ ಬಾಹ್ಯ ಶಕ್ತಿಗಳ ಹಸ್ತಕ್ಷೇಪವನ್ನು ಹೊಂದಿದೆ.
    • ತೀವ್ರ ಸ್ವರೂಪದ ರಚನಾತ್ಮಕ ಸ್ಥಿತ್ಯಂತರಕ್ಕೆ ಸಾಕ್ಷಿ:- ಪ್ರಸ್ತುತ ಈ ಪ್ರದೇಶವು ಅಧಿಕಾರದ ಮರುಹೊಂದಾಣಿಕೆ, ಪರೋಕ್ಷ ಯುದ್ಧಗಳು ಮತ್ತು ತಂತ್ರೋಪಾಯದ ಪೈಪೋಟಿಗಳಿಂದಾಗಿ ತೀವ್ರ ಸ್ವರೂಪದ ರಚನಾತ್ಮಕ ಸ್ಥಿತ್ಯಂತರಕ್ಕೆ ಸಾಕ್ಷಿಯಾಗುತ್ತಿದೆ.

    ಹೋರ್ಮುಜ್ ಜಲಸಂಧಿಯ ಬಗ್ಗೆ:

    • ಭೌಗೋಳಿಕ ಸ್ಥಾನ:- ಹೋರ್ಮುಜ್ ಜಲಸಂಧಿಯು ಉತ್ತರಕ್ಕೆ ಇರಾನ್ ಮತ್ತು ದಕ್ಷಿಣಕ್ಕೆ ಓಮನ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ರಾಷ್ಟ್ರಗಳ ನಡುವೆ ವ್ಯಾಪಿಸಿದೆ.
    • ಈ ಜಲಸಂಧಿಯು ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿ ಮತ್ತು ಅರಬ್ಬೀ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ.
    • ತನ್ನ ಅತ್ಯಂತ ಕಿರಿದಾದ ಭಾಗದಲ್ಲಿ ಇದು ಸುಮಾರು 33 ಕಿಲೋಮೀಟರ್ ಅಗಲವನ್ನು ಹೊಂದಿದೆ. ಇದರಲ್ಲಿನ ಎರಡೂ ದಿಕ್ಕಿನ ನೌಕಾಯಾನ ಮಾರ್ಗಗಳು ಕೇವಲ ಕೆಲವೇ ಕಿಲೋಮೀಟರ್‌ಗಳಷ್ಟು ಮಾತ್ರವೇ ವಿಸ್ತಾರವಾಗಿವೆ.
    • ಕಾರ್ಯತಂತ್ರದ ಮಹತ್ವ:- ಭಾರತವು ಆಮದು ಮಾಡಿಕೊಳ್ಳುವ ಒಟ್ಟು ಕಚ್ಚಾ ತೈಲದ ಸುಮಾರು ಅರ್ಧದಷ್ಟು ಭಾಗ ಹಾಗೂ ಶೇ. 60ರಷ್ಟು ನೈಸರ್ಗಿಕ ಅನಿಲವು ಇದೇ ಜಲಸಂಧಿಯ ಮಾರ್ಗದ ಮೂಲಕ ಪೂರೈಕೆಯಾಗುತ್ತದೆ.

    ಮಾರುಕಟ್ಟೆ ದುರ್ಬಳಕೆ ಮತ್ತು ಸೈಬರ್ ವಂಚನೆಯ ಮೇಲೆ – ‘ಸೆಬಿ’ (SEBI) ಕಡಿವಾಣ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿಯು (SEBI) ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ (AI) ಬಳಕೆಯ ಮೂಲಕ ಮಾರುಕಟ್ಟೆ ದುರ್ಬಳಕೆದಾರರು ಮತ್ತು ಸೈಬರ್ ವಂಚಕರ ಮೇಲಿನ ಕಣ್ಗಾವಲು ಮತ್ತು ಕಾನೂನು ಜಾರಿ ಕ್ರಮಗಳನ್ನು ಇನ್ನಷ್ಟು ತೀವ್ರಗೊಳಿಸಲಿದೆ.

    ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ (SEBI)ಯ ಬಗ್ಗೆ:

    • ಇದು ಭಾರತದಲ್ಲಿನ ಭದ್ರತಾ ಪತ್ರ (ಸೆಕ್ಯುರಿಟೀಸ್) ಮತ್ತು ಬಂಡವಾಳ ಮಾರುಕಟ್ಟೆಗಳನ್ನು ನಿಯಂತ್ರಿಸುವ ಅತ್ಯುನ್ನತ ಸಂಸ್ಥೆಯಾಗಿದೆ.
    • ಈ ಮಂಡಳಿಯನ್ನು 1988ರಲ್ಲಿ ಸ್ಥಾಪಿಸಲಾಯಿತು ಮತ್ತು ತದನಂತರ ಸೆಬಿ ಕಾಯ್ದೆ, 1992ರ ಅಡಿಯಲ್ಲಿ ಇದಕ್ಕೆ ಶಾಸನಬದ್ಧ ಅಧಿಕಾರಗಳನ್ನು ನೀಡಲಾಯಿತು.
    • ಆಡಳಿತಾತ್ಮಕ ನಿಯಂತ್ರಣ/ಕಾರ್ಯನಿರ್ವಹಣೆ:- ಕೇಂದ್ರ ಹಣಕಾಸು ಸಚಿವಾಲಯ.
    • ಉದ್ದೇಶಗಳು:-
    • ಪ್ರಮುಖ ಉದ್ದೇಶ:- ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವುದು.
    • ಭದ್ರತಾ ಮಾರುಕಟ್ಟೆಯ ಆರೋಗ್ಯಕರ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು.
    • ಭಾರತದಲ್ಲಿ ಭದ್ರತಾ ಮಾರುಕಟ್ಟೆಯನ್ನು ನಿಯಂತ್ರಿಸುವುದು ಮತ್ತು ವ್ಯವಸ್ಥಿತವಾಗಿ ಮುನ್ನಡೆಸುವುದು ಇದರ ಕಾರ್ಯವಾಗಿದೆ.
    • ಸೆಬಿ (SEBI) ಸದಸ್ಯರ ಸಂಯೋಜನೆ:- 
      • ಅಧ್ಯಕ್ಷರು:- ಕೇಂದ್ರ ಸರ್ಕಾರದಿಂದ ನೇಮಕಗೊಂಡ ಒಬ್ಬರು ಈ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.
      • ಇಬ್ಬರು ಸದಸ್ಯರು:- ಕೇಂದ್ರ ಹಣಕಾಸು ಸಚಿವಾಲಯವನ್ನು ಪ್ರತಿನಿಧಿಸುವ ಇಬ್ಬರು ಸದಸ್ಯರು ಇದರಲ್ಲಿರುತ್ತಾರೆ.
    • ಒಬ್ಬ ಸದಸ್ಯರು:- ಭಾರತೀಯ ರಿಸರ್ವ್ ಬ್ಯಾಂಕ್‌ (RBI)ನಿಂದ ನಾಮನಿರ್ದೇಶನಗೊಂಡ ಒಬ್ಬ ಸದಸ್ಯರು ಇರುತ್ತಾರೆ.
    • ಇತರ 5 ಸದಸ್ಯರು:- ಈ ಐವರಲ್ಲಿ ಕನಿಷ್ಠ 3 ಸದಸ್ಯರು ಪೂರ್ಣಾವಧಿ ಸದಸ್ಯರಾಗಿರುವುದು ಕಡ್ಡಾಯವಾಗಿದೆ.

    ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ಅಮೆರಿಕ ನೇತೃತ್ವದ ಮಿತ್ರಪಡೆಗಳು (ಇಸ್ರೇಲ್ ಮತ್ತು ಯುಎಇ ಒಳಗೊಂಡಂತೆ) ಮತ್ತು ಇರಾನ್ ನಡುವೆ ಮರುಕಳಿಸಿರುವ ಸಂಘರ್ಷವು, ಪಶ್ಚಿಮ ಏಷ್ಯಾದಲ್ಲಿ ಹೊಸದಾಗಿ ಸಂಯೋಜಿತಗೊಂಡಿರುವ ಪ್ರಾದೇಶಿಕ ವಾಯು ಮತ್ತು ಕ್ಷಿಪಣಿ ರಕ್ಷಣಾ ಜಾಲದ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಿದೆ. 

    ಕ್ಷಿಪಣಿ ರಕ್ಷಣಾ ವ್ಯವಸ್ಥೆ ಎಂದರೇನು?

    • ಬಹು-ಹಂತದ ರಕ್ಷಣಾ ವ್ಯವಸ್ಥೆಯಾಗಿದೆ:- ಇದು ಶತ್ರುಪಾಳಯದಿಂದ ಉಡಾವಣೆಯಾಗಿ ಮುನ್ನುಗ್ಗಿ ಬರುವ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಪತ್ತೆಹಚ್ಚಿ, ಬೆನ್ನಟ್ಟಿ ಮತ್ತು ಆಗಸದಲ್ಲೇ ನಾಶಪಡಿಸಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಹಾಗೂ ಬಹು-ಹಂತದ ರಕ್ಷಣಾ ವ್ಯವಸ್ಥೆಯಾಗಿದೆ.

    ‘ಭಾರತದ ಕ್ಷಿಪಣಿ ರಕ್ಷಣಾ ವಿನ್ಯಾಸ’ದ ಬಗ್ಗೆ:

    • ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಅಡಿಯಲ್ಲಿ ಬಹು-ಹಂತದ ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ (BMD) ವ್ಯವಸ್ಥೆ:

    ಪೃಥ್ವಿ ವಾಯು ರಕ್ಷಣಾ ಪ್ರತಿಬಂಧಕ ವ್ಯವಸ್ಥೆ  (PAD):- ಇದನ್ನು ವಾತಾವರಣದ ಹೊರವಲಯದ ರಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿದ್ದು, ಇದು 50 ಕಿ.ಮೀ. ನಿಂದ 180 ಕಿ.ಮೀ. ಎತ್ತರದಲ್ಲಿಯೇ ಶತ್ರು ಕ್ಷಿಪಣಿಗಳನ್ನು ತಡೆದು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.

      • ಅತ್ಯಾಧುನಿಕ  ವಾಯು ರಕ್ಷಣಾ ಪ್ರತಿಬಂಧಕ ವ್ಯವಸ್ಥೆ (AAD):- ಇದು ಭೂಮಿಯ ವಾತಾವರಣದ ಒಳಗೆ ಅಂತಿಮ ಹಂತದಲ್ಲಿ ನುಗ್ಗಿಬರುವ ಕ್ಷಿಪಣಿಗಳನ್ನು ತಟಸ್ಥಗೊಳಿಸುವ  ಉದ್ದೇಶವನ್ನು ಹೊಂದಿದ್ದು, 30 ಕಿ.ಮೀ. ಎತ್ತರದವರೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
    • ಬಹು-ಹಂತದ ವಾಯು ರಕ್ಷಣಾ ಕವಚ:-

    ಬಹು-ಹಂತದ ವಾಯು ರಕ್ಷಣಾ ಕವಚ:

    • ರಷ್ಯಾ ಅಭಿವೃದ್ಧಿಪಡಿಸಿದ ‘ಎಸ್-400 ಟ್ರಯಂಫ್’ (S-400 Triumf):- ಇದು ಅತ್ಯಾಧುನಿಕ, ಸುಲಭವಾಗಿ ಸ್ಥಳಾಂತರಿಸಬಹುದಾದ ಮತ್ತು ದೀರ್ಘ-ಶ್ರೇಣಿಯ ‘ನೆಲದಿಂದ ಆಗಸಕ್ಕೆ ಚಿಮ್ಮುವ’ (SAM) ಕ್ಷಿಪಣಿ ವ್ಯವಸ್ಥೆಯಾಗಿದೆ. ಭಾರತವು ತನ್ನ ದೀರ್ಘ-ಶ್ರೇಣಿಯ ವಾಯು ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಲು ಇದನ್ನು ಸೇರ್ಪಡೆಗೊಳಿಸಿದೆ.
    • ಇಸ್ರೇಲ್ ಜೊತೆ ಜಂಟಿಯಾಗಿ ಅಭಿವೃದ್ಧಿಪಡಿಸಲಾದ ‘ಬರಾಕ್-8’ (MRSAM/LRSAM) ಕ್ಷಿಪಣಿ:- ಮಧ್ಯಮ-ಶ್ರೇಣಿಯ (70-100 ಕಿ.ಮೀ.) ಅಥವಾ ದೀರ್ಘ-ಶ್ರೇಣಿಯ ‘ನೆಲದಿಂದ ಆಗಸಕ್ಕೆ ಚಿಮ್ಮುವ’ ಕ್ಷಿಪಣಿ ವ್ಯವಸ್ಥೆಯಾಗಿದೆ. ಭಾರತದ ಭೂ-ಸೇನಾ ಹಾಗೂ ನೌಕಾ ಸಂಪನ್ಮೂಲಗಳಿಗೆ 360-ಡಿಗ್ರಿ ರಕ್ಷಣೆಯನ್ನು ಒದಗಿಸುತ್ತದೆ.
    • ಸ್ವದೇಶಿ ನಿರ್ಮಿತ ‘ಆಕಾಶ್’ ವ್ಯವಸ್ಥೆ ಹಾಗೂ ಇಸ್ರೇಲ್‌ನ ‘ಸ್ಪೈಡರ್’ ಕ್ಷಿಪಣಿಗಳು:-ಅಲ್ಪ-ಶ್ರೇಣಿಯ (25-50 ಕಿ.ಮೀ.) ಕ್ಷಿಪಣಿಯು, ದೇಶದ ಆಯಕಟ್ಟಿನ ಪ್ರದೇಶಗಳು ಮತ್ತು ಸಂಚಾರಿ ಸೇನಾ ತುಕಡಿಗಳಿಗೆ ರಕ್ಷಣೆ ಒದಗಿಸುತ್ತವೆ.

    ಮಿಷನ್ ಸುದರ್ಶನ್ ಚಕ್ರ:

    • 2035ರ ಸಮಗ್ರ ದೃಷ್ಟಿಕೋನದೊಂದಿಗೆ ಘೋಷಿಸಲಾದ ‘ಮಿಷನ್ ಸುದರ್ಶನ್ ಚಕ್ರ’ವು, ಕೃತಕ ಬುದ್ಧಿಮತ್ತೆ (AI) ಆಧಾರಿತ ಸರ್ವವ್ಯಾಪಿ ರಾಷ್ಟ್ರೀಯ ರಕ್ಷಣಾ ಕವಚವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

    ಇತರ ದೇಶಗಳ ಪ್ರಮುಖ ವಾಯು-ರಕ್ಷಣಾ ವ್ಯವಸ್ಥೆಗಳು:

    ದೇಶ / ಪ್ರದೇಶ

    ಪ್ರಮುಖ ಕ್ಷಿಪಣಿ ವ್ಯವಸ್ಥೆಗಳು

    ರಷ್ಯಾ

    ಎಸ್-400 ಟ್ರಯಂಫ್, ಎಸ್-300ವಿಎಂ, ಎಸ್-350 ವಿತ್ಯಾಜ್, ಎಸ್-500 ಪ್ರೊಮಿಥಿಯಸ್ 

    ಅಮೆರಿಕ (USA)

    ಥಾಡ್ (THAAD), ಪ್ಯಾಟ್ರಿಯಾಟ್ ( PAC-3 MSE), ಗೋಲ್ಡನ್ ಡೋಮ್ (ಅಭಿವೃದ್ಧಿ ಹಂತದಲ್ಲಿದೆ)

    ಇಸ್ರೇಲ್

    ಐರನ್ ಡೋಮ್, ಡೇವಿಡ್ಸ್ ಸ್ಲಿಂಗ್, ಐರನ್ ಬೀಮ್ 

    ಚೀನಾ

    ಹೆಚ್‌ಕ್ಯೂ-9 (HQ-9), ಹೆಚ್‌ಕ್ಯೂ-22 (HQ-22), ಹೆಚ್‌ಕ್ಯೂ-16 (HQ-16)

    ಯುರೋಪಿಯನ್ ಸ್ಕೈ ಶೀಲ್ಡ್ ಇನಿಶಿಯೇಟಿವ್ (ESSI)

    ಸ್ಕೈರೇಂಜರ್ (Skyranger), ಐಆರ್‌ಐಎಸ್-ಟಿ ಎಸ್‌ಎಲ್‌ಎಂ (IRIS-T SLM)

    ದೇಶದ ಮೊದಲ ಸೆಮಿಕಂಡಕ್ಟರ್ (ಅರೆವಾಹಕ) ಘಟಕ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಸಾನಂದ್‌ನಲ್ಲಿ ಭಾರತದ ಮೊಟ್ಟಮೊದಲ ಸೆಮಿಕಂಡಕ್ಟರ್ (ಅರೆವಾಹಕ) ಘಟಕವನ್ನು ಉದ್ಘಾಟಿಸಿದರು.
    • ಅಮೆರಿಕದ ಪ್ರಖ್ಯಾತ ಚಿಪ್ ತಯಾರಕ ಕಂಪನಿಯಾದ ‘ಮೈಕ್ರಾನ್ ಟೆಕ್ನಾಲಜಿ’ ಗುಜರಾತಿನ ಸಾನಂದ್‌ನಲ್ಲಿ ₹22,516 ಕೋಟಿ ಹೂಡಿಕೆಯೊಂದಿಗೆ ಈ ಘಟಕವನ್ನು ಸ್ಥಾಪಿಸಿದೆ.
    • ಈ ಘಟಕವು ಪ್ರಮುಖವಾಗಿ ‘ಜೋಡಣೆ, ಪರೀಕ್ಷೆ, ಗುರ್ತಿಸುವಿಕೆ ಮತ್ತು ಪ್ಯಾಕೇಜಿಂಗ್’ (ATMP) ಸೌಲಭ್ಯವನ್ನು ಒಳಗೊಂಡಿದೆ.

    ಸೆಮಿಕಂಡಕ್ಟರ್ (ಅರೆವಾಹಕ) ಚಿಪ್‌ಗಳ ಬಗ್ಗೆ:

      • ಅರೆವಾಹಕಗಳು:- ಇವು ವಾಹಕಗಳು ಮತ್ತು ಅವಾಹಕಗಳ ನಡುವಿನ ವಾಹಕತೆಯನ್ನು ಹೊಂದಿರುವ ವಸ್ತುಗಳಾಗಿವೆ.
      • ಉದಾಹರಣೆಗೆ:- ಇವು ಸಿಲಿಕಾನ್ ಅಥವಾ ಜರ್ಮೇನಿಯಂನಂತಹ ಶುದ್ಧ ಧಾತುಗಳಾಗಿರಬಹುದು; ಅಥವಾ ಗ್ಯಾಲಿಯಂ, ಆರ್ಸೆನೈಡ್ ಮತ್ತು ಕ್ಯಾಡ್ಮಿಯಂ ಸೆಲೆನೈಡ್‌ನಂತಹ ಸಂಯುಕ್ತಗಳಾಗಿರಬಹುದು.
      • ಮಹತ್ವ:- ಇವು ಎಲ್ಲಾ ಆಧುನಿಕ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಉತ್ಪನ್ನಗಳಿಗೆ ‘ಹೃದಯ ಮತ್ತು ಮಿದುಳು’ ಆಗಿ ಕಾರ್ಯನಿರ್ವಹಿಸುವ ಮೂಲಭೂತ ಘಟಕಗಳಾಗಿವೆ.
    • ಉಪಯೋಗಗಳು:- ಆಧುನಿಕ ವಾಹನಗಳು, ಗೃಹಬಳಕೆಯ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಇಸಿಜಿ (ECG) ಯಂತ್ರಗಳಂತಹ ಅತ್ಯಗತ್ಯ ವೈದ್ಯಕೀಯ ಸಾಧನಗಳ ಅವಿಭಾಜ್ಯ ಅಂಗವಾಗಿವೆ.

    ಭಾರತ ಸೆಮಿಕಂಡಕ್ಟರ್ ಅಭಿಯಾನ (ISM):

    • ಪ್ರಾರಂಭಿಸಿದವರು:- ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ.
    • ಪ್ರಮುಖ ಉದ್ದೇಶ:- ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ವಿನ್ಯಾಸ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಮಟ್ಟದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ, ಅತ್ಯಂತ ಕ್ರಿಯಾಶೀಲವಾದ ಹಾಗೂ ಸುಭದ್ರವಾದ ‘ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು’ ನಿರ್ಮಿಸುವುದು.
  • ಡ್ಯುರಾಂಡ್ ರೇಖೆ | ರಾಷ್ಟ್ರೀಯ ವಿಜ್ಞಾನ ದಿನ, 2026 | ಎಪ್ಸ್ಟೀನ್-ಬಾರ್ ವೈರಸ್ (EBV) ಲಸಿಕೆಯತ್ತ ಪ್ರಗತಿ | ಮೆನಿಂಗೊಕೊಕಲ್ ಕಾಯಿಲೆ | ಐಎನ್‌ಎಸ್ ಅಂಜದೀಪ್ | ರಾಜ್ಯ ನಾವೀನ್ಯತಾ ಮಿಷನ್ (SIM)

    ಡ್ಯುರಾಂಡ್ ರೇಖೆ

    ಅಂತರರಾಷ್ಟ್ರೀಯ ವಿದ್ಯಮಾನಗಳು

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಪಾಕಿಸ್ತಾನವು ವಿವಾದಿತ ಡ್ಯುರಾಂಡ್ ರೇಖೆಯುದ್ದಕ್ಕೂ ಅಫ್ಘಾನ್ ತಾಲಿಬಾನ್ ನೆಲೆಗಳ ಮೇಲೆ ಗಡಿಯಾಚೆಗಿನ ದಾಳಿಗಳ ಸರಣಿಯಾದ ‘ಆಪರೇಷನ್ ಗಜಬ್ ಲಿಲ್-ಹಕ್’ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

    ಡ್ಯುರಾಂಡ್ ರೇಖೆಯ ಬಗ್ಗೆ:

    • 2,640 ಕಿ.ಮೀ. ಉದ್ದದ ಡ್ಯುರಾಂಡ್ ರೇಖೆಯನ್ನು 1893 ರಲ್ಲಿ ಬ್ರಿಟಿಷ್ ರಾಜತಾಂತ್ರಿಕ ಅಧಿಕಾರಿ ಸರ್ ಮಾರ್ಟಿಮರ್ ಡ್ಯುರಾಂಡ್ ಮತ್ತು ಅಫ್ಘಾನ್ ಅಮೀರ್ ಅಬ್ದುರ್ ರಹಮಾನ್ ಖಾನ್ ಜಂಟಿಯಾಗಿ ರೂಪಿಸಿದರು.
    • ಇದು ಪಾಕಿಸ್ತಾನವನ್ನು ಅಫ್ಘಾನಿಸ್ತಾನದಿಂದ ಪ್ರತ್ಯೇಕಿಸುತ್ತದೆ, ಆದರೆ ಅಲ್ಲಿನ ಪಶ್ತೂನ್ ಬುಡಕಟ್ಟು ಜನಾಂಗವನ್ನು ವಿಭಜಿಸುತ್ತದೆ.
    • ಅಫ್ಘಾನಿಸ್ತಾನವು ಈ ಗಡಿಯನ್ನು ಎಂದಿಗೂ ಅಧಿಕೃತವೆಂದು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ; ಬದಲಾಗಿ ಇದನ್ನು ವಸಾಹತುಶಾಹಿ ಹೇರಿಕೆ ಎಂದು ಪರಿಗಣಿಸುತ್ತದೆ.
    • ಈ ಗಡಿ ರೇಖೆಯ ಕುರಿತಾದ ವಿವಾದಗಳು, ಗಡಿ ಬೇಲಿ ನಿರ್ಮಾಣದ ಪ್ರಯತ್ನಗಳು ಮತ್ತು ಉಗ್ರರ ಒಳನುಗ್ಗುವಿಕೆ ಸೇರಿದಂತೆ ದಶಕಗಳ ಕಾಲದ ಉದ್ವಿಗ್ನತೆಗೆ ಕಾರಣವಾಗಿವೆ.

    ರಾಷ್ಟ್ರೀಯ ವಿಜ್ಞಾನ ದಿನ, 2026

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಭೌತಶಾಸ್ತ್ರಜ್ಞ ಸರ್ ಸಿ.ವಿ. ರಾಮನ್ ಅವರು ‘ರಾಮನ್ ಪರಿಣಾಮ’ವನ್ನು ಕಂಡುಹಿಡಿದ ದಿನದ ಸ್ಮರಣಾರ್ಥವಾಗಿ ಪ್ರತಿ ವರ್ಷ ಫೆಬ್ರವರಿ 28 ರಂದು ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನು ಆಚರಿಸಲಾಗುತ್ತದೆ.

    ‘ರಾಷ್ಟ್ರೀಯ ವಿಜ್ಞಾನ ದಿನ’ದ ಬಗ್ಗೆ:

    • ಉದ್ದೇಶ:- ಜನರಲ್ಲಿ ವಿಜ್ಞಾನದ ಮಹತ್ವ ಮತ್ತು ಅದರ ದೈನಂದಿನ ಅನ್ವಯಗಳ ಕುರಿತು ಅರಿವು ಮೂಡಿಸುವುದು.
    • 2026ರ ಘೋಷವಾಕ್ಯ:- “ವಿಜ್ಞಾನದಲ್ಲಿ ಮಹಿಳೆಯರು: ವಿಕಸಿತ ಭಾರತದ ವೇಗವರ್ಧನೆ” 

    ಸರ್ ಸಿ.ವಿ. ರಾಮನ್ ಅವರ ಬಗ್ಗೆ:

    • ರಾಮನ್ ಪರಿಣಾಮದ ಆವಿಷ್ಕಾರಕ್ಕಾಗಿ ಅವರಿಗೆ 1930 ರಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    • ಇವರು 1926 ರಲ್ಲಿ ‘ಇಂಡಿಯನ್ ಜರ್ನಲ್ ಆಫ್ ಫಿಸಿಕ್ಸ್’ ಪತ್ರಿಕೆಯನ್ನು ಸ್ಥಾಪಿಸಿದರು.
    • ಇವರು 1933 ರಲ್ಲಿ ‘ಭಾರತೀಯ ವಿಜ್ಞಾನ ಸಂಸ್ಥೆ’ಯ (IISc) ಮೊದಲ ಭಾರತೀಯ ನಿರ್ದೇಶಕರಾಗಿ ನೇಮಕಗೊಂಡರು.
    • ಇವರು 1948 ರಲ್ಲಿ ಬೆಂಗಳೂರಿನಲ್ಲಿ ‘ರಾಮನ್ ಸಂಶೋಧನಾ ಸಂಸ್ಥೆ’ಯನ್ನು ಸ್ಥಾಪಿಸಿದರು.
    • 1954 ರಲ್ಲಿ ಭಾರತ ಸರ್ಕಾರವು ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಿ ಗೌರವಿಸಿತು.

    ರಾಮನ್ ಪರಿಣಾಮ:

    • ಪಾರದರ್ಶಕ ಮಾಧ್ಯಮದ (ದ್ರವ ಅಥವಾ ಅನಿಲದಂತಹ) ಮೂಲಕ ಬೆಳಕಿನ ಕಿರಣವು ಹಾದುಹೋದಾಗ, ಚದುರಿದ ಬೆಳಕಿನ ಒಂದು ಸಣ್ಣ ಭಾಗವು ತನ್ನ ತರಂಗಾಂತರದಲ್ಲಿ ಬದಲಾವಣೆಯನ್ನು ಹೊಂದುತ್ತದೆ.
    • ಮಾಧ್ಯಮದಲ್ಲಿರುವ ಅಣುಗಳ ಕಂಪನ ಮತ್ತು ಭ್ರಮಣ ಶಕ್ತಿಯ ಮಟ್ಟಗಳೊಂದಿಗೆ ಬೆಳಕಿನ ಪರಸ್ಪರ ಕ್ರಿಯೆಯಿಂದಾಗಿ ಈ ಬದಲಾವಣೆಯು ಸಂಭವಿಸುತ್ತದೆ.

    ಎಪ್ಸ್ಟೀನ್-ಬಾರ್ ವೈರಸ್ (EBV) ಲಸಿಕೆಯತ್ತ ಪ್ರಗತಿ

    ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • EBV ಸೋಂಕನ್ನು ತಡೆಗಟ್ಟಬಲ್ಲ ಮೊನೋಕ್ಲೋನಲ್ ಪ್ರತಿಕಾಯಗಳನ್ನು ಸಂಶೋಧಕರು ಅಭಿವೃದ್ಧಿಪಡಿಸುತ್ತಿದ್ದಾರೆ.

    ಎಪ್ಸ್ಟೀನ್-ಬಾರ್ ವೈರಸ್ ಬಗ್ಗೆ:

    • ಇದನ್ನು ‘ಹ್ಯೂಮನ್ ಹರ್ಪಿಸ್‌ವೈರಸ್ 4’ (HHV-4) ಎಂತಲೂ ಕರೆಯಲಾಗುತ್ತದೆ.
    • ಇದು ಜಾಗತಿಕ ಜನಸಂಖ್ಯೆಯ ಸುಮಾರು 95% ರಷ್ಟು ಜನರಿಗೆ ಸೋಂಕು ತಗುಲಿಸುವ, ಮಾನವರಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ವೈರಸ್‌ಗಳಲ್ಲಿ ಒಂದಾಗಿದೆ.
    • ಇದು ಹರ್ಪಿಸ್‌ವೈರಸ್ ಕುಟುಂಬಕ್ಕೆ ಸೇರಿದ ದ್ವಿ-ತಂತು ವರ್ಣ ಡಿಎನ್‌ಎ ವೈರಸ್ ಆಗಿದೆ.
    • ಹೆಚ್ಚು ಸಾಂಕ್ರಾಮಿಕ:- ಇದು ಪ್ರಧಾನವಾಗಿ ಲಾಲಾರಸದಂತಹ ದೈಹಿಕ ದ್ರವಗಳ ಮೂಲಕ ಹರಡುತ್ತದೆ; ಆದ್ದರಿಂದಲೇ ಇದನ್ನು “ಕಿಸ್ಸಿಂಗ್ ಡಿಸೀಸ್” ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. ಅಲ್ಲದೆ, ರಕ್ತ ವರ್ಗಾವಣೆ ಮತ್ತು ಅಂಗಾಂಗ ಕಸಿಯ ಮೂಲಕವೂ ಇದು ಹರಡಬಹುದು.
    • ತೊಡಕುಗಳು:- ಇದು ಸಾಮಾನ್ಯವಾಗಿ ಹಾನಿಕರವಲ್ಲದಿದ್ದರೂ, ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು:
      • ಸಾಂಕ್ರಾಮಿಕ ಮೊನೊನ್ಯೂಕ್ಲಿಯೊಸಿಸ್:- ಜ್ವರ, ಗಂಟಲು ನೋವು, ತೀವ್ರ ಆಯಾಸ ಮತ್ತು ದುಗ್ಧರಸ ಗ್ರಂಥಿಗಳ ಊತ ಇದರ ಪ್ರಮುಖ ಲಕ್ಷಣಗಳಾಗಿವೆ.
      • ಕ್ಯಾನ್ಸರ್ ಕಾರಕ:- ಇದು ಬರ್ಕಿಟ್ಸ್ ಲಿಂಫೋಮಾ, ಹಾಡ್ಗ್‌ಕಿನ್ಸ್ ಲಿಂಫೋಮಾ ಮತ್ತು ನಾಸೊಫಾರ್ಂಜಿಯಲ್ ಕಾರ್ಸಿನೋಮಾದಂತಹ ಮಾರಣಾಂತಿಕ ಗೆಡ್ಡೆಗಳೊಂದಿಗೆ ತಳುಕುಹಾಕಿಕೊಂಡಿದೆ.
      • ಸ್ವಯಂ ನಿರೋಧಕ ಕಾಯಿಲೆಗಳು:- ಇತ್ತೀಚಿನ ಸಂಶೋಧನೆಗಳು ಮಲ್ಟಿಪಲ್ ಸ್ಕ್ಲೆರೋಸಿಸ್ (MS), ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್ (SLE), ಮತ್ತು ರುಮಟಾಯ್ಡ್ ಸಂಧಿವಾತದಂತಹ ಕಾಯಿಲೆಗಳಿಗೆ EBV ಯೊಂದಿಗೆ ಬಲವಾದ ಸಂಬಂಧವಿರುವುದನ್ನು ದೃಢಪಡಿಸಿವೆ.
      • ಯಾವುದೇ ಅಧಿಕೃತ ಅನುಮೋದಿತ ಲಸಿಕೆ ಲಭ್ಯವಿಲ್ಲ:- ಆದರೆ ಸಂಶೋಧಕರು ವೈರಲ್ ಪ್ರೋಟೀನ್‌ಗಳನ್ನು (gp42 ಮತ್ತು gp350) ಗುರಿಯಾಗಿಸುವ ಮೊನೋಕ್ಲೋನಲ್ ಪ್ರತಿಕಾಯಗಳನ್ನು ಬಳಸಿಕೊಂಡು ಪ್ರಮುಖ ಪ್ರಗತಿ ಸಾಧಿಸುತ್ತಿದ್ದಾರೆ.

    ಮೆನಿಂಗೊಕೊಕಲ್ ಕಾಯಿಲೆ

    ಆರೋಗ್ಯ

    ಇದೀಗ ಸುದ್ದಿಯಲ್ಲಿದೆ: 

    • ಶಿಲ್ಲಾಂಗ್‌ನ ಅಸ್ಸಾಂ ರೆಜಿಮೆಂಟಲ್ ಕೇಂದ್ರದಲ್ಲಿ ಶಂಕಿತ ಮೆನಿಂಗೊಕೊಕಲ್ ಸೋಂಕಿನಿಂದ ಇಬ್ಬರು ಅಗ್ನಿವೀರ ತರಬೇತಿದಾರರು ಮೃತಪಟ್ಟ ನಂತರ ಮೇಘಾಲಯ ಸರ್ಕಾರವು ಉನ್ನತ ಮಟ್ಟದ ಆರೋಗ್ಯ ಎಚ್ಚರಿಕೆಯನ್ನು ಘೋಷಿಸಿದೆ.

    ಮೆನಿಂಗೊಕೊಕೀಮಿಯಾ ಸೋಂಕು:

      • ಇದು ‘ನೈಸ್ಸೇರಿಯಾ ಮೆನಿಂಜೈಟಿಡಿಸ್’ ಬ್ಯಾಕ್ಟೀರಿಯಾದಿಂದ ಉಂಟಾಗುವ ತೀವ್ರವಾದ ಮತ್ತು ವೇಗವಾಗಿ ಹರಡುವ ಕಾಯಿಲೆಯಾಗಿದೆ.
      • ಇದು ಜೀವಕ್ಕೆ ಅಪಾಯಕಾರಿಯಾದ ಮೆನಿಂಜೈಟಿಸ್ (ಮೆದುಳಿನ ಪದರದ ಸೋಂಕು) ಅಥವಾ ಮೆನಿಂಗೊಕೊಕೀಮಿಯಾ (ರಕ್ತದ ವಿಷಶಕ್ತಿ) ಕಾಯಿಲೆಗೆ ಕಾರಣವಾಗುತ್ತದೆ.
      • ಈ ಬ್ಯಾಕ್ಟೀರಿಯಾವು ಮೆದುಳು ಮತ್ತು ಬೆನ್ನುಹುರಿಯನ್ನು ಆವರಿಸಿರುವ ಪೊರೆಗಳಾದ ‘ಮೆನಿಂಜಸ್’ ಗೆ ಸೋಂಕು ತಗುಲಿಸಿ, ಉರಿಯೂತವನ್ನು ಉಂಟುಮಾಡುತ್ತದೆ.
      • ಹರಡುವಿಕೆ:-
        • ಮನುಷ್ಯರಿಂದ – ಮನುಷ್ಯರಿಗೆ:- ಉಸಿರಾಟ ಮತ್ತು ಗಂಟಲಿನ ಸ್ರವಿಸುವಿಕೆಯನ್ನು (ಉದಾಹರಣೆಗೆ: ಲಾಲಾರಸ ಅಥವಾ ಉಗುಳು) ಹಂಚಿಕೊಳ್ಳುವ ಮೂಲಕ ಜನರು ಮೆನಿಂಗೊಕೊಕಲ್ ಬ್ಯಾಕ್ಟೀರಿಯಾವನ್ನು ಇತರರಿಗೆ ಹರಡುತ್ತಾರೆ.
    • ಸಾಮಾನ್ಯ ಶೀತ ಅಥವಾ ಜ್ವರವನ್ನು ಉಂಟುಮಾಡುವ ಸೂಕ್ಷ್ಮಾಣುಜೀವಿಗಳಷ್ಟು ಇದು ಸಾಂಕ್ರಾಮಿಕವಲ್ಲ.
    • ಪ್ರಮುಖ ಲಕ್ಷಣಗಳು:- ವಿಪರೀತ ಜ್ವರ, ತೀವ್ರವಾದ ತಲೆನೋವು, ಕುತ್ತಿಗೆ ಬಿಗಿತ, ಮತ್ತು ಮಂಕಾಗದ ದದ್ದುಗಳು.
    • ಪ್ರತಿಜೀವಕಗಳ (Antibiotics) ಮೂಲಕ ಚಿಕಿತ್ಸೆ ನೀಡಲಾಗುತ್ತದೆ.

    ಐಎನ್‌ಎಸ್ ಅಂಜದೀಪ್

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಐಎನ್‌ಎಸ್ ಅಂಜದೀಪ್ ನೌಕೆಯನ್ನು ಭಾರತೀಯ ನೌಕಾಪಡೆಯ ಸೇವೆಗೆ ಅಧಿಕೃತವಾಗಿ ನಿಯೋಜಿಸಲಾಗಿದೆ.

    ಐಎನ್‌ಎಸ್ ಅಂಜದೀಪ್ ಬಗ್ಗೆ:

    • ‘ಅಂಜದೀಪ್’ ನೌಕೆಯು 8 ‘ಜಲಾಂತರ್ಗಾಮಿ-ನಿಗ್ರಹ ಆಳವಿಲ್ಲದ ಜಲಪ್ರದೇಶದ ನೌಕೆ’ಗಳ (ASW SWC) ಸರಣಿಯಲ್ಲಿ 3ನೇ ನೌಕೆಯಾಗಿದೆ.
    • ಇದನ್ನು ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ (GRSE) ಸಂಸ್ಥೆಯು ಸ್ವದೇಶಿಯಾಗಿ ವಿನ್ಯಾಸಗೊಳಿಸಿ ನಿರ್ಮಿಸಿದೆ.
    • ನೌಕಾಪಡೆಯ ಹಳೆಯದಾದ ‘ಅಭಯ್-ಕ್ಲಾಸ್’ ನೌಕೆಗಳನ್ನು ಬದಲಾಯಿಸುವ ಉದ್ದೇಶದಿಂದ ಈ ASW-SWC ಯುದ್ಧನೌಕೆಗಳನ್ನು ಸ್ವದೇಶಿಯಾಗಿ ನಿರ್ಮಿಸಲಾಗುತ್ತಿದೆ.
    • ಈ ನೌಕೆಯನ್ನು ಶತ್ರು ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಲು, ಮೇಲ್ವಿಚಾರಣೆ ಮಾಡಲು ಮತ್ತು ತಟಸ್ಥಗೊಳಿಸಲು ಗಮನಹರಿಸುವ ‘ಡಾಲ್ಫಿನ್ ಹಂಟರ್’ ನಂತೆ ಕಾರ್ಯನಿರ್ವಹಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

    ರಾಜ್ಯ ನಾವೀನ್ಯತಾ ಮಿಷನ್ (SIM)

    ಸರ್ಕಾರದ ಉಪಕ್ರಮಗಳು

    ಇದೀಗ ಸುದ್ದಿಯಲ್ಲಿದೆ:

    • ನೀತಿ ಆಯೋಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಟಲ್ ನಾವೀನ್ಯತಾ ಮಿಷನ್ (AIM), ತ್ರಿಪುರಾದಲ್ಲಿ ತನ್ನ ಚೊಚ್ಚಲ ‘ರಾಜ್ಯ ನಾವೀನ್ಯತಾ ಮಿಷನ್’ (SIM) ಅನ್ನು ಪ್ರಾರಂಭಿಸಿದೆ.

    ರಾಜ್ಯ ನಾವೀನ್ಯತಾ ಮಿಷನ್ ಬಗ್ಗೆ:

    • ಈ ಉಪಕ್ರಮವನ್ನು ನೀತಿ ಆಯೋಗವು ಅಟಲ್ ನಾವೀನ್ಯತಾ ಮಿಷನ್ (AIM) 2.0 ರ ಅಡಿಯಲ್ಲಿ ಜಾರಿಗೆ ತಂದಿದೆ.
    • ಮೊದಲ ಅನುಷ್ಠಾನ:- ಫೆಬ್ರವರಿ 26, 2026 ರಂದು ತನ್ನದೇ ಆದ ‘ರಾಜ್ಯ ನಾವೀನ್ಯತಾ ಮಿಷನ್’ ಅನ್ನು ಪ್ರಾರಂಭಿಸಿದ ಭಾರತದ ಮೊದಲ ರಾಜ್ಯವಾಗಿ ತ್ರಿಪುರಾ ಹೊರಹೊಮ್ಮಿದೆ.
    • ಉದ್ದೇಶ:- ರಾಜ್ಯಗಳಿಗೆ ತಮ್ಮದೇ ಆದ ನಾವೀನ್ಯತಾ ಕಾರ್ಯತಂತ್ರಗಳನ್ನು ವಿನ್ಯಾಸಗೊಳಿಸಲು, ಸ್ಥಳೀಯ ನವೋದ್ಯಮಗಳನ್ನು ಬೆಂಬಲಿಸಲು ಮತ್ತು ‘ಅಟಲ್ ಟಿಂಕರಿಂಗ್ ಲ್ಯಾಬ್‌’ಗಳ ಮೂಲಕ ಶಾಲಾ-ಮಟ್ಟದ ನಾವೀನ್ಯತೆಯನ್ನು ಬಲಪಡಿಸಲು ಅಗತ್ಯ ಸಾಧನಗಳನ್ನು ಒದಗಿಸಿ, ನಾವೀನ್ಯತೆಯನ್ನು ವಿಕೇಂದ್ರೀಕರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
    • ಮಹತ್ವ:- ರಾಜ್ಯಗಳು ತಮ್ಮದೇ ಆದ ವಿಶಿಷ್ಟ ಸಾಮಾಜಿಕ-ಆರ್ಥಿಕ ಸನ್ನಿವೇಶಗಳಿಗೆ ತಕ್ಕಂತೆ ನಾವೀನ್ಯತೆಯ ನೇತೃತ್ವ ವಹಿಸಲು ಅನುವು ಮಾಡಿಕೊಡುವ ಮೂಲಕ, ಇದು ದೇಶದಲ್ಲಿ ಸಹಕಾರಿ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.
  • ಪ್ರಧಾನಮಂತ್ರಿಯವರ ಇಸ್ರೇಲ್ ಭೇಟಿ | ಚಂದ್ರಶೇಖರ ಆಜಾದ್ | ಹೆಕ್ಸಾಗನ್ ಒಕ್ಕೂಟ | ರೈಲ್‌ಟೆಕ್ ಪೋರ್ಟಲ್ ಮತ್ತು ಇ-ಆರ್‌ಸಿಟಿ ವ್ಯವಸ್ಥೆ | ಜಾಗತಿಕ ಮಾನಸಿಕ ಆರೋಗ್ಯ ವರದಿ, 2025 | ಭಾರತ-ಭೂತಾನ್ ಜಲವಿದ್ಯುತ್ ಯೋಜನೆಗಳ ಸಹಕಾರ

    ಪ್ರಧಾನಮಂತ್ರಿಯವರ ಇಸ್ರೇಲ್ ಭೇಟಿ

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ ಪ್ರಧಾನಮಂತ್ರಿಯವರು ಇಸ್ರೇಲ್‌ಗೆ ಅಧಿಕೃತ ಭೇಟಿ ನೀಡಿದರು. ಐತಿಹಾಸಿಕ ಬೆಳವಣಿಗೆಯೊಂದರಲ್ಲಿ, ಪ್ರಧಾನಿ ಮೋದಿಯವರು ಇಸ್ರೇಲ್ ಸಂಸತ್ತಾದ ‘ನೆಸ್ಸೆಟ್’ ಅನ್ನು ಉದ್ದೇಶಿಸಿ ಮಾತನಾಡಿದರು, ಈ ಮೂಲಕ ಆ ಸಾಧನೆ ಮಾಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    ಪ್ರಮುಖ ಫಲಿತಾಂಶಗಳು:

    • ಎರಡೂ ರಾಷ್ಟ್ರಗಳು ತಮ್ಮ ದ್ವಿಪಕ್ಷೀಯ ಸಂಬಂಧವನ್ನು ‘ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗೆ’ ಮೇಲ್ದರ್ಜೆಗೇರಿಸಿವೆ.
    • ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಅನುಷ್ಠಾನ ಮತ್ತು I2U2 (ಭಾರತ-ಇಸ್ರೇಲ್-ಯುಎಇ-ಯುಎಸ್ಎ) ಚೌಕಟ್ಟಿನ ಅಡಿಯಲ್ಲಿನ ಸಹಕಾರದ ಬಗ್ಗೆಯೂ ಭಾರತ ಮತ್ತು ಇಸ್ರೇಲ್ ಚರ್ಚಿಸಿವೆ.

    ಭಾರತ ಮತ್ತು ಇಸ್ರೇಲ್ ದ್ವಿಪಕ್ಷೀಯ ಸಂಬಂಧಗಳು ಮತ್ತು ವಿಕಸನಗೊಳ್ಳುತ್ತಿರುವ ಬಾಂಧವ್ಯ:

    • ದ್ವಿಪಕ್ಷೀಯ ಸಂಬಂಧಗಳು:- 1950 ರಲ್ಲಿ ಭಾರತವು ಇಸ್ರೇಲ್ ಅನ್ನು ಅಧಿಕೃತವಾಗಿ ಗುರುತಿಸುವುದಾಗಿ ಘೋಷಿಸಿತು. 
    • ಉಭಯ ದೇಶಗಳ ನಡುವೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾದ ನಂತರ 1992 ರಲ್ಲಿ ನಿಯಮಿತ ರಾಯಭಾರ ಕಚೇರಿಗಳನ್ನು ತೆರೆಯಲಾಯಿತು.
    • ಈ ದ್ವಿಪಕ್ಷೀಯ ಸಂಬಂಧಗಳನ್ನು 2017 ರಲ್ಲಿ “ಕಾರ್ಯತಂತ್ರದ ಪಾಲುದಾರಿಕೆ”ಗೆ ಏರಿಸಲಾಯಿತು ಮತ್ತು ಪ್ರಧಾನಿಯವರ ಇತ್ತೀಚಿನ ಭೇಟಿಯ ನಂತರ ‘ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗೆ’ ಮೇಲ್ದರ್ಜೆಗೇರಿಸಲಾಗಿದೆ.
    • ರಕ್ಷಣೆ ಮತ್ತು ಭದ್ರತೆ:- ಎವಾಕ್ಸ್ (AWACS) ರಾಡಾರ್‌ಗಳು ಮತ್ತು ಡ್ರೋನ್‌ಗಳಿಂದ ಹಿಡಿದು ಕ್ಷಿಪಣಿ ಮತ್ತು ಕಣ್ಗಾವಲು ವ್ಯವಸ್ಥೆಗಳವರೆಗೆ ಸುಧಾರಿತ ತಂತ್ರಜ್ಞಾನವನ್ನು ಪೂರೈಸುವಲ್ಲಿ ಇಸ್ರೇಲ್ ಪ್ರಮುಖ ಪಾತ್ರ ವಹಿಸಿದ್ದು, ಇದು ಭಾರತದ ಅತಿದೊಡ್ಡ ರಕ್ಷಣಾ ಪೂರೈಕೆದಾರರಲ್ಲಿ ಒಂದಾಗಿದೆ.
    • ದ್ವಿಪಕ್ಷೀಯ ವ್ಯಾಪಾರ:- ಏಷ್ಯಾ ಖಂಡದಲ್ಲಿ ಭಾರತವು ಇಸ್ರೇಲ್‌ನ 2 ನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದೆ ಮತ್ತು ಜಾಗತಿಕ ಮಟ್ಟದಲ್ಲಿ 7 ನೇ ಅತಿದೊಡ್ಡ ಪಾಲುದಾರನಾಗಿದೆ.
    • ಬಹುಪಕ್ಷೀಯ ಸಹಕಾರ:- I2U2 (ಭಾರತ, ಇಸ್ರೇಲ್, ಯುಎಸ್ಎ ಮತ್ತು ಯುಎಇ) ಒಕ್ಕೂಟದ ಸಕ್ರಿಯ ಸದಸ್ಯರಾಗಿರುವ ಈ ಎರಡೂ ರಾಷ್ಟ್ರಗಳು, ಬಹುಪಕ್ಷೀಯ ಸಹಕಾರದ ಮೂಲಕ ಆರ್ಥಿಕ ಮತ್ತು ಬಾಹ್ಯಾಕಾಶ ಕ್ಷೇತ್ರಗಳ ಮೇಲೆ ಗಮನಹರಿಸಿವೆ. ವಿಶೇಷವಾಗಿ ಫುಡ್ ಪಾರ್ಕ್‌ಗಳ ಸ್ಥಾಪನೆ ಮತ್ತು ಬಾಹ್ಯಾಕಾಶ ಆಧಾರಿತ ಪರಿಸರ ಸಾಧನಗಳ ಅಭಿವೃದ್ಧಿಯಂತಹ ಯೋಜನೆಗಳಲ್ಲಿ ಇವು ಪರಸ್ಪರ ಕೈಜೋಡಿಸಿವೆ.

    ಚಂದ್ರಶೇಖರ ಆಜಾದ್

    ಇತಿಹಾಸ

    ಇದೀಗ ಸುದ್ದಿಯಲ್ಲಿ:

    • ಕ್ರಾಂತಿಕಾರಿ ನಾಯಕ ಚಂದ್ರಶೇಖರ ಆಜಾದ್ ಅವರ ಹುತಾತ್ಮ ದಿನದಂದು ಪ್ರಧಾನಮಂತ್ರಿಯವರು ಅವರಿಗೆ ಗೌರವ ನಮನ ಸಲ್ಲಿಸಿದರು.

    ಚಂದ್ರಶೇಖರ ಆಜಾದ್ ಅವರ ಕುರಿತ ಮಾಹಿತಿ:

    • ಜನನ:- ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಬದರ್ಕಾ ಗ್ರಾಮದಲ್ಲಿ 23 ಜುಲೈ 1906 ರಂದು ಜನಿಸಿದರು.
    • ಇವರು ಭಾರತದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಮಹಾತ್ಮ ಗಾಂಧಿಯವರು ಪ್ರಾರಂಭಿಸಿದ ಅಸಹಕಾರ ಚಳುವಳಿಯಲ್ಲಿ (1920-22) ಇವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
    • ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ, ಅವರು ತಮ್ಮ ಹೆಸರನ್ನು “ಆಜಾದ್”, ತಂದೆಯ ಹೆಸರನ್ನು “ಸ್ವತಂತ್ರ” ಮತ್ತು ವಾಸಸ್ಥಳವನ್ನು “ಜೈಲು” ಎಂದು ಘೋಷಿಸಿದರು. ಸಾರ್ವಜನಿಕವಾಗಿ ಚಾವಟಿಯೇಟು ತಿಂದ ನಂತರ, ಅವರು “ಮುಕ್ತ” ಎಂಬರ್ಥವನ್ನು ನೀಡುವ ‘ಆಜಾದ್’ ಎಂಬ ಬಿರುದನ್ನು ತಮ್ಮ ಶಾಶ್ವತ ಗುರುತಾಗಿ ಅಳವಡಿಸಿಕೊಂಡರು.
    • ಚೌರಿ ಚೌರಾ ಘಟನೆಯ (1922) ನಂತರ ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡಾಗ, ಅವರು ಕ್ರಾಂತಿಕಾರಿ ಚಟುವಟಿಕೆಗಳತ್ತ ಮುಖ ಮಾಡಿದರು.
    • 27 ಫೆಬ್ರವರಿ 1931 ರಂದು, ಅಲಹಾಬಾದ್‌ನ ಆಲ್ಫ್ರೆಡ್ ಪಾರ್ಕ್‌ನಲ್ಲಿ (ಈಗಿನ ಚಂದ್ರಶೇಖರ್ ಆಜಾದ್ ಪಾರ್ಕ್) ಆಜಾದ್ ಅವರನ್ನು ಪೊಲೀಸರು ಸುತ್ತುವರೆದರು. ಗುಂಡಿನ ಚಕಮಕಿಯ ವೇಳೆ ತಮ್ಮ ಸಹವರ್ತಿ ಸುಖದೇವ್ ರಾಜ್ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ನಂತರ, ಬ್ರಿಟಿಷರ ಕೈಗೆ ಸಿಕ್ಕಿಬೀಳದಿರಲು ತಮ್ಮ ಬಳಿಯಿದ್ದ ಕೊನೆಯ ಗುಂಡಿನಿಂದ ತಾವೇ ಗುಂಡು ಹಾರಿಸಿಕೊಂಡು ಹುತಾತ್ಮರಾದರು.

    ಇವರ ಪ್ರಮುಖ ಕೊಡುಗೆಗಳು:

    • 1925 ರ ಕಾಕೋರಿ ರೈಲು ದರೋಡೆ:- ರಾಮ್ ಪ್ರಸಾದ್ ಬಿಸ್ಮಿಲ್ ಅವರೊಂದಿಗೆ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್‌ನ (HRA) ನಾಯಕರಾಗಿ, ಸ್ವಾತಂತ್ರ್ಯ ಹೋರಾಟದ ಶಸ್ತ್ರಾಸ್ತ್ರಗಳಿಗೆ ಹಣವನ್ನು ಕ್ರೋಢೀಕರಿಸಲು ಆಜಾದ್ ಅವರು ರೈಲನ್ನು ದೋಚಲು ಸಹಾಯ ಮಾಡಿದರು. ಈ ಪ್ರಕರಣದಲ್ಲಿ ಇತರರು ಜೈಲು ಪಾಲಾದರೂ ಇವರು ಬಂಧನದಿಂದ ತಪ್ಪಿಸಿಕೊಂಡರು.
    • 1928 ರ ಲಾಹೋರ್ ಹತ್ಯೆ:- ಪ್ರತಿಭಟನೆಯ ವೇಳೆ ಲಾಲಾ ಲಜಪತ್ ರಾಯ್ ಅವರ ಸಾವಿಗೆ ಸೇಡು ತೀರಿಸಿಕೊಳ್ಳಲು ಬ್ರಿಟಿಷ್ ಅಧಿಕಾರಿ ಜಾನ್ ಸ್ಯಾಂಡರ್ಸ್‌ನನ್ನು ಕೊಲ್ಲುವಲ್ಲಿ ಭಗತ್ ಸಿಂಗ್ ಮತ್ತು ರಾಜಗುರು ಅವರಿಗೆ ಇವರು ಸಹಾಯ ಮಾಡಿದರು.
    • ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್‌ನ (HRA) ಪುನರ್ರಚನೆ:- ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ನ ಸಂಸ್ಥಾಪಕ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಅವರ ಮರಣದ ನಂತರ ಸಂಸ್ಥೆಯನ್ನು ‘ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್’ (HSRA) ಎಂಬ ಹೊಸ ಹೆಸರಿನಲ್ಲಿ ಮರುಸಂಘಟಿಸಿದರು. ಇವರು HSRA ನ ಮುಖ್ಯ ಕಾರ್ಯತಂತ್ರಗಾರರಾಗಿದ್ದರು.

    ಹೆಕ್ಸಾಗನ್ ಒಕ್ಕೂಟ

    ಅಂತರರಾಷ್ಟ್ರೀಯ ವಿದ್ಯಮಾನಗಳು

    ಇದೀಗ ಸುದ್ದಿಯಲ್ಲಿದೆ:

    • ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತವನ್ನು ಕೇಂದ್ರಬಿಂದುವಾಗಿರಿಸಿಕೊಂಡು ‘ಹೆಕ್ಸಾಗನ್ ಒಕ್ಕೂಟ’ ಎಂಬ ಹೊಸ ಭೌಗೋಳಿಕ-ರಾಜಕೀಯ ಗುಂಪನ್ನು ಪ್ರಸ್ತಾಪಿಸಿದ್ದಾರೆ.

    ಹೆಕ್ಸಾಗನ್ ಒಕ್ಕೂಟದ ಬಗ್ಗೆ:

    • ಈ ಒಕ್ಕೂಟವು ಇಸ್ರೇಲ್, ಭಾರತ, ಮೆಡಿಟರೇನಿಯನ್ ಪಾಲುದಾರ ರಾಷ್ಟ್ರಗಳಾದ ಗ್ರೀಸ್ ಮತ್ತು ಸೈಪ್ರಸ್‌ ಹಾಗೂ ಇತರ ಅರಬ್, ಆಫ್ರಿಕ ಮತ್ತು ಏಷ್ಯಾದ ರಾಷ್ಟ್ರಗಳನ್ನು ಒಳಗೊಂಡಿರುತ್ತದೆ.
    • ಈ ಒಕ್ಕೂಟದ ಚೌಕಟ್ಟು ಪ್ರಮುಖವಾಗಿ 3 ಆಯಾಮಗಳಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ: 
    1. ಆರ್ಥಿಕ ಸಹಕಾರ 
    2. ರಾಜತಾಂತ್ರಿಕ ಸಮನ್ವಯ
    3. ಭದ್ರತಾ ಸಹಯೋಗ.
    • ಭಾರತದ ಪಾಲಿಗೆ ಈ ಒಕ್ಕೂಟದಲ್ಲಿನ ಭಾಗವಹಿಸುವಿಕೆಯು, ಮೆಡಿಟರೇನಿಯನ್ ಮತ್ತು ಪಶ್ಚಿಮ ಏಷ್ಯಾದಲ್ಲಿ ತನ್ನ ವಿಸ್ತರಿಸುತ್ತಿರುವ ಕಾರ್ಯತಂತ್ರದ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ.
    • ಜೊತೆಗೆ, ಇದು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ನಂತಹ ಮಹತ್ವದ ಉಪಕ್ರಮಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.
    • ಆದಾಗ್ಯೂ, ಇಂತಹ ಒಕ್ಕೂಟದೊಂದಿಗೆ ಗಾಢವಾದ ಮೈತ್ರಿ ಸಾಧಿಸುವುದರಿಂದ, ಭಾರತದ ಪ್ರಮುಖ ‘ಇಂಧನ ಮತ್ತು ಸಂಪರ್ಕ ಪಾಲುದಾರ’ ರಾಷ್ಟ್ರವಾದ ಇರಾನ್ ಜೊತೆಗಿನ ದ್ವಿಪಕ್ಷೀಯ ಸಂಬಂಧಗಳು ಕ್ಷೀಣಿಸುವ ಸಾಧ್ಯತೆಯಿದೆ.

    ರೈಲ್‌ಟೆಕ್ ಪೋರ್ಟಲ್ ಮತ್ತು ಇ-ಆರ್‌ಸಿಟಿ ವ್ಯವಸ್ಥೆ

    ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಭಾರತೀಯ ರೈಲ್ವೆಯ ಪ್ರಮುಖ ಉಪಕ್ರಮವಾದ “52 ವಾರಗಳಲ್ಲಿ 52 ಸುಧಾರಣೆಗಳು” ಅಡಿಯಲ್ಲಿ ಕೇಂದ್ರ ರೈಲ್ವೆ ಸಚಿವರು ರೈಲು ತಂತ್ರಜ್ಞಾನ ನೀತಿಯನ್ನು ಮತ್ತು ‘ರೈಲ್ವೆ ಕ್ಲೈಮ್ಸ್ ಟ್ರಿಬ್ಯೂನಲ್’ (RCT) ನ ಸಂಪೂರ್ಣ ಡಿಜಿಟಲೀಕರಣವನ್ನು ಘೋಷಿಸಿದ್ದಾರೆ.

    ರೈಲು ತಂತ್ರಜ್ಞಾನ ನೀತಿಯ ಸುಧಾರಣೆ:

      • ಭಾರತೀಯ ರೈಲ್ವೆಯಲ್ಲಿ ನಾವೀನ್ಯತೆಯನ್ನು ಉತ್ತೇಜಿಸಲು ನಾವೀನ್ಯಕಾರರು, ನವೋದ್ಯಮಗಳು, ಉದ್ಯಮ ಮತ್ತು ಸಂಸ್ಥೆಗಳನ್ನು ಒಗ್ಗೂಡಿಸುವುದು ಈ ನೀತಿಯ ಪ್ರಮುಖ ಗುರಿಯಾಗಿದೆ.
      • ಈ ಹೊಸ ನೀತಿಯು ನಾವೀನ್ಯಕಾರರ ಆಯ್ಕೆ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ನಾವೀನ್ಯತೆಗಾಗಿ ಮೀಸಲಾದ “ರೈಲ್ ಟೆಕ್ ಪೋರ್ಟಲ್” ಅನ್ನು ಪರಿಚಯಿಸುತ್ತದೆ.
      • ಪ್ರಮುಖ ನಾವೀನ್ಯತಾ ಕ್ಷೇತ್ರಗಳು ಇವುಗಳನ್ನು ಒಳಗೊಂಡಿವೆ:-
        • ಕೃತಕ ಬುದ್ಧಿಮತ್ತೆ (AI) ಆಧಾರಿತ ಆನೆಗಳ ನುಗ್ಗುವಿಕೆ ಪತ್ತೆ ವ್ಯವಸ್ಥೆ (EIDS).
    • ರೈಲ್ವೆ ಕೋಚ್‌ಗಳಲ್ಲಿ AI-ಆಧಾರಿತ ಬೆಂಕಿ ಪತ್ತೆ ವ್ಯವಸ್ಥೆ.
    • ಡ್ರೋನ್ ಆಧಾರಿತ ಮುರಿದ ರೈಲು ಹಳಿಗಳ ಪತ್ತೆ ವ್ಯವಸ್ಥೆ.
    • ರೈಲು ಹಳಿಗಳ ಒತ್ತಡ ನಿರ್ವಹಣಾ ವ್ಯವಸ್ಥೆ.
      • ಪಾರ್ಸೆಲ್ ವ್ಯಾನ್‌ಗಳಲ್ಲಿ (VPUs) ಸಂವೇದಕ (ಸೆನ್ಸರ್) ಆಧಾರಿತ ಹೊರೆ ಲೆಕ್ಕಾಚಾರದ ಸಾಧನ.

    ರೈಲ್ವೆ ಕ್ಲೈಮ್ಸ್ ಟ್ರಿಬ್ಯೂನಲ್ (RCT):

    • ಇದು ರೈಲ್ವೆ ಕ್ಲೈಮ್ಸ್ ಟ್ರಿಬ್ಯೂನಲ್ ಕಾಯ್ದೆ, 1987ರ ಅಡಿಯಲ್ಲಿ ಸ್ಥಾಪಿಸಲಾದ ಭಾರತದ ಒಂದು ಅರೆ-ನ್ಯಾಯಿಕ ಸಂಸ್ಥೆಯಾಗಿದೆ.
    • ಉದ್ದೇಶ:- ರೈಲ್ವೆ ಆಡಳಿತದ ವಿರುದ್ಧದ ಪರಿಹಾರ/ಹಕ್ಕುಸಾಧನೆಗಳನ್ನು ಇತ್ಯರ್ಥಪಡಿಸಲು ವೇಗವಾದ ಮತ್ತು ಹೆಚ್ಚು ಪರಿಣಿತವಾದ ವ್ಯವಸ್ಥೆಯನ್ನು ಒದಗಿಸುವುದು.
    • ಹೊಸ ಇ-ಆರ್‌ಸಿಟಿ (E-RCT) ವ್ಯವಸ್ಥೆಯು ರೈಲ್ವೆ ಕ್ಲೈಮ್ಸ್ ಟ್ರಿಬ್ಯೂನಲ್‌ನ ಸಮಗ್ರ ಗಣಕೀಕರಣ ಮತ್ತು ಡಿಜಿಟಲೀಕರಣವನ್ನು ಸಕ್ರಿಯಗೊಳಿಸುತ್ತದೆ.
    • ಈ ಮೊದಲು, ಅರ್ಜಿದಾರರು ಪ್ರಕರಣ ದಾಖಲಿಸಲು ಮತ್ತು ಮೇಲ್ವಿಚಾರಣೆ ಮಾಡಲು ನ್ಯಾಯಮಂಡಳಿಯ ಪೀಠಗಳಿಗೆ ಭೌತಿಕವಾಗಿ ಭೇಟಿ ನೀಡಬೇಕಾಗಿತ್ತು; ಇದು ವಿಳಂಬ, ಪ್ರಯಾಣದ ಹೊರೆ ಮತ್ತು ಅಧಿಕಾರ ವ್ಯಾಪ್ತಿಯ ಗೊಂದಲಗಳಿಗೆ ಕಾರಣವಾಗುತ್ತಿತ್ತು.

    ಜಾಗತಿಕ ಮಾನಸಿಕ ಆರೋಗ್ಯ ವರದಿ, 2025

    ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಸೇಪಿಯನ್ ಲ್ಯಾಬ್ಸ್ ಬಿಡುಗಡೆ ಮಾಡಿರುವ ‘ಜಾಗತಿಕ ಮಾನಸಿಕ ಆರೋಗ್ಯ ವರದಿ, 2025’ ಭಾರತದ ಯುವ ಜನರಲ್ಲಿನ ಗಂಭೀರ ಮಾನಸಿಕ ಆರೋಗ್ಯ ಬಿಕ್ಕಟ್ಟನ್ನು ಎತ್ತಿತೋರಿಸುತ್ತದೆ ಮತ್ತು ಮಾನಸಿಕ ಆರೋಗ್ಯದ ಫಲಿತಾಂಶಗಳಲ್ಲಿನ ತೀಕ್ಷ್ಣವಾದ ತಲೆಮಾರುಗಳ ಕಂದಕವನ್ನು ಬಹಿರಂಗಪಡಿಸಿದೆ.

    ಈ ವರದಿಯ ಬಗ್ಗೆ:

    • ಈ ಹಿಂದೆ “ವಿಶ್ವದ ಮಾನಸಿಕ ಸ್ಥಿತಿಯ ವರದಿ” (ಮೆಂಟಲ್ ಸ್ಟೇಟ್ ಆಫ್ ದಿ ವರ್ಲ್ಡ್ ರಿಪೋರ್ಟ್) ಎಂದು ಕರೆಯಲಾಗುತ್ತಿದ್ದ ಈ ವರದಿಯನ್ನು, ಗ್ಲೋಬಲ್ ಮೈಂಡ್ ಪ್ರಾಜೆಕ್ಟ್ ಅಡಿಯಲ್ಲಿ ಪ್ರಕಟಿಸಲಾಗುತ್ತದೆ.
    • ಈ ಅಧ್ಯಯನವು, ಮನೋಆರೋಗ್ಯ ಸೂಚ್ಯಂಕ (MHQ-ಮೈಂಡ್ ಹೆಲ್ತ್ ಕೋಷಿಯಂಟ್) ಅನ್ನು ಸಂಯೋಜಿತ ಸೂಚಕವಾಗಿ ಬಳಸಿಕೊಂಡು, ಜೀವನ, ಕೆಲಸ ಮತ್ತು ಸಂಬಂಧಗಳನ್ನು ನಿರ್ವಹಿಸಲು ಅಗತ್ಯವಾದ ಭಾವನಾತ್ಮಕ, ಸಾಮಾಜಿಕ, ಅರಿವಿನ ಮತ್ತು ಕ್ರಿಯಾತ್ಮಕ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡುತ್ತದೆ.
    • ಯುವಜನರ ಮಾನಸಿಕ ಆರೋಗ್ಯ ಕುಸಿಯಲು ಈ ಅಧ್ಯಯನವು 4 ಪ್ರಮುಖ ಕಾರಣಗಳನ್ನು ಗುರುತಿಸಿದೆ:
    • ಕೌಟುಂಬಿಕ ಬಂಧಗಳು ದುರ್ಬಲಗೊಳ್ಳುತ್ತಿರುವುದು.
    • ಆಧ್ಯಾತ್ಮಿಕತೆಯ ಕುಸಿತ.
    • ಚಿಕ್ಕ ವಯಸ್ಸಿನಲ್ಲೇ ಸ್ಮಾರ್ಟ್‌ಫೋನ್‌ಗಳ ಬಳಕೆ.
    • ಅತಿ-ಸಂಸ್ಕರಿತ ಆಹಾರಗಳ ಅತಿಯಾದ ಸೇವನೆ.

    ಈ ವರದಿಯ ಪ್ರಮುಖ ಶೋಧನೆಗಳು:

    • ಜಾಗತಿಕ ಪ್ರವೃತ್ತಿಗಳು:-
      • ಕಡಿಮೆ ಅಭಿವೃದ್ಧಿ ಹೊಂದಿದ ಪ್ರದೇಶಗಳಿಗೆ ಹೋಲಿಸಿದರೆ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಯುವ ಜನತೆಯು ದುರ್ಬಲ ಮಾನಸಿಕ ಆರೋಗ್ಯವನ್ನು ಹೊಂದಿದ್ದಾರೆ.
      • ಗಮನಾರ್ಹವಾಗಿ, ಫಿನ್‌ಲ್ಯಾಂಡ್ ಸಂತೋಷದ ಸೂಚ್ಯಂಕದಲ್ಲಿ ಉನ್ನತ ಸ್ಥಾನದಲ್ಲಿದ್ದರೂ, ಮಾನಸಿಕ ಆರೋಗ್ಯದಲ್ಲಿ ಆ ಪ್ರಮಾಣದ ಸ್ಥಾನ ಹೊಂದಿಲ್ಲ; ಜೀವನದ ತೃಪ್ತಿ ಮತ್ತು ಮಾನಸಿಕ ಸ್ಥೈರ್ಯ ಇವೆರಡೂ ವಿಭಿನ್ನ ಅಳತೆಗೋಲುಗಳು ಎಂಬುದನ್ನು ಇದು ಸೂಚಿಸುತ್ತದೆ.
    • ಭಾರತದ ಸ್ಥಾನ:-
      • 18–34 ವಯೋಮಾನ:- 33 ರ MHQ ಸ್ಕೋರ್‌ನೊಂದಿಗೆ ಜಾಗತಿಕವಾಗಿ 60ನೇ ಸ್ಥಾನದಲ್ಲಿದೆ.
      • 55+ ವಯೋಮಾನ: 96 ರ MHQ ಸ್ಕೋರ್‌ನೊಂದಿಗೆ ಜಾಗತಿಕವಾಗಿ 49ನೇ ಸ್ಥಾನದಲ್ಲಿದೆ.

    ಭಾರತ-ಭೂತಾನ್ ಜಲವಿದ್ಯುತ್ ಯೋಜನೆಗಳ ಸಹಕಾರ

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಭಾರತದ ಉನ್ನತ ಮಟ್ಟದ ನಿಯೋಗವು ಭೂತಾನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಜಲಸಂಪನ್ಮೂಲ ನಿರ್ವಹಣೆ ಮತ್ತು ಜಲವಿದ್ಯುತ್ ಅಭಿವೃದ್ಧಿಯಲ್ಲಿ ಭಾರತ ಮತ್ತು ಭೂತಾನ್ ತಮ್ಮ ದೀರ್ಘಕಾಲೀನ ಪಾಲುದಾರಿಕೆಯನ್ನು ಪುನರುಚ್ಚರಿಸಿವೆ.

    ಭಾರತ-ಭೂತಾನ್ ಸಂಬಂಧಗಳು:

      • ಭೌಗೋಳಿಕ ಸಂಪರ್ಕ:- ಭೂತಾನ್ ಭಾರತದ 4 ರಾಜ್ಯಗಳೊಂದಿಗೆ (ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ) ಒಟ್ಟು 699 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿದೆ. ಅಲ್ಲದೆ, ಇದು ಭಾರತ ಮತ್ತು ಚೀನಾ ನಡುವೆ ಮಧ್ಯದ ರಾಷ್ಟ್ರವಾಗಿ ಕಾರ್ಯನಿರ್ವಹಿಸುತ್ತದೆ.
      • ರಾಜತಾಂತ್ರಿಕ ಸಂಬಂಧಗಳು:- 1968 ರಲ್ಲಿ ಸ್ಥಾಪನೆಯಾದವು.
      • ಸ್ನೇಹಮೈತ್ರಿ ಒಪ್ಪಂದ:- 1949 ರಲ್ಲಿ ಸಹಿ ಮಾಡಲಾದ ‘ಸ್ನೇಹ ಮತ್ತು ಸಹಕಾರ ಒಪ್ಪಂದ’ವು ಭಾರತ-ಭೂತಾನ್ ಸಂಬಂಧಗಳ ಮೂಲ ಚೌಕಟ್ಟಾಗಿದೆ; ಇದನ್ನು ಫೆಬ್ರವರಿ 2007 ರಲ್ಲಿ ನವೀಕರಿಸಲಾಯಿತು.
      • ಭಾರತದಿಂದ ಭೂತಾನ್‌ನಲ್ಲಿ 4 ಪ್ರಮುಖ ದ್ವಿಪಕ್ಷೀಯ ಯೋಜನೆಗಳನ್ನು ಪ್ರಾರಂಭಿಸಲಾಗಿದೆ:-
        • ಜಲವಿದ್ಯುತ್ ಯೋಜನೆಗಳು:- ಪುನತ್ಸಾಂಗ್ಚು ಮತ್ತು ಮಾಂಗ್ಡೆಚು ಜಲವಿದ್ಯುತ್ ಯೋಜನೆ.
    • ಇಸ್ರೋದ (ISRO) ಗ್ರೌಂಡ್ ಅರ್ಥ್ ಸ್ಟೇಷನ್ (ಭೂ-ನೆಲೆ).
    • ರುಪೇ ಕಾರ್ಡ್.
    • ಭಾರತದ ರಾಷ್ಟ್ರೀಯ ಜ್ಞಾನ ಜಾಲ (NKNI).
    • ಆರ್ಥಿಕತೆ:- ಆಮದು ಮೂಲ ಮತ್ತು ರಫ್ತು ತಾಣವಾಗಿ, ಭಾರತವು ಭೂತಾನ್‌ನ ಅಗ್ರ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.
    • BHIM ಆ್ಯಪ್ ಅನ್ನು ಪ್ರಾರಂಭಿಸಿದ ವಿಶ್ವದ ಎರಡನೇ ದೇಶ ಭೂತಾನ್ ಆಗಿದೆ.
    • ಸಾಂಸ್ಕೃತಿಕ ಮತ್ತು ಬೌದ್ಧ ಸಂಪರ್ಕಗಳು:- ಹೆಚ್ಚಿನ ಸಂಖ್ಯೆಯ ಭೂತಾನ್ ಯಾತ್ರಾರ್ಥಿಗಳು ಭಾರತದಲ್ಲಿರುವ ಬೋಧಗಯಾ, ರಾಜಗೀರ್, ನಳಂದಾ, ಸಿಕ್ಕಿಂ, ಉದಯಗಿರಿ ಮತ್ತು ಇತರ ಬೌದ್ಧ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತಾರೆ.
  • ರ್‍ಯಾಂಪ್ (RAMP) ಕಾರ್ಯಕ್ರಮ | ಹಿಮ್-ಕನೆಕ್ಟ್ (Him-CONNECT) | ಮಿಷನ್ ಸುದರ್ಶನ ಚಕ್ರ | ಸುಜ್ವಿಕಾ ಪೋರ್ಟಲ್ | ಅಂತರರಾಷ್ಟ್ರೀಯ ಹವಾಮಾನ ಉಪಕ್ರಮ (IKI)

    ರ್‍ಯಾಂಪ್ (RAMP) ಕಾರ್ಯಕ್ರಮ

    ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • 5ನೇ ರಾಷ್ಟ್ರೀಯ ಎಂಎಸ್‌ಎಂಇ (MSME) ಮಂಡಳಿಯು ವಿಶ್ವಬ್ಯಾಂಕ್ ಬೆಂಬಲಿತ ರ್‍ಯಾಂಪ್ (RAMP) ಕಾರ್ಯಕ್ರಮದ ಪ್ರಗತಿಯನ್ನು ಪರಿಶೀಲಿಸಿದೆ.

    ಎಂಎಸ್‌ಎಂಇ ಕಾರ್ಯಕ್ಷಮತೆ ಹೆಚ್ಚಳ ಮತ್ತು ವೇಗವರ್ಧನೆ (RAMP):

    • RAMP ಸಂಪೂರ್ಣ ರೂಪ:- ರೈಸಿಂಗ್ ಅಂಡ್ ಆಕ್ಸೆಲರೇಟಿಂಗ್ ಎಂಎಸ್‌ಎಂಇ ಪರ್ಫಾರ್ಮೆನ್ಸ್.
    • ಇದು ವಿಶ್ವಬ್ಯಾಂಕ್ ನೆರವಿನೊಂದಿಗೆ 2022ರ ಜೂನ್ ತಿಂಗಳಲ್ಲಿ ಪ್ರಾರಂಭಿಸಲಾದ ಕೇಂದ್ರ ವಲಯದ ಯೋಜನೆಯಾಗಿದೆ.
    • ಅನುಷ್ಠಾನ ಸಚಿವಾಲಯ:- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (MSME).
    • ಉದ್ದೇಶ:- ಎಂಎಸ್‌ಎಂಇಗಳ ಸ್ಪರ್ಧಾತ್ಮಕತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು.

    RAMP ನ ಪ್ರಾಥಮಿಕ ಉದ್ದೇಶಗಳು:

    • ಮಾರುಕಟ್ಟೆ ಮತ್ತು ಸಾಲದ ಲಭ್ಯತೆ:- ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಗಳನ್ನು ತಲುಪಲು ಮತ್ತು ಔಪಚಾರಿಕ ಹಣಕಾಸು ಸೌಲಭ್ಯಗಳನ್ನು ಪಡೆಯಲು ಎಂಎಸ್‌ಎಂಇಗಳ ಸಾಮರ್ಥ್ಯವನ್ನು ಇದು ಸುಧಾರಿಸುತ್ತದೆ.
    • ಸಾಂಸ್ಥಿಕ ಬಲವರ್ಧನೆ:- ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಮರ್ಥ್ಯವನ್ನು ವೃದ್ಧಿಸಲು ಹಾಗೂ ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ಈ ಯೋಜನೆಯು ನೆರವಾಗುತ್ತದೆ.
    • ಎಂಎಸ್‌ಎಂಇಗಳ ಹಸಿರೀಕರಣ:- ಪರಿಸರ ಸ್ನೇಹಿ ಸುಸ್ಥಿರ ಅಭ್ಯಾಸಗಳನ್ನು ಹಾಗೂ ಹಸಿರು ಹೂಡಿಕೆಗಳನ್ನು ಉತ್ತೇಜಿಸುವುದು.
    • ವಿಳಂಬಿತ ಪಾವತಿಗಳ ಸಮಸ್ಯೆ ಪರಿಹಾರ:- ಪಾವತಿಗಳ ವಿಳಂಬದಿಂದ ಉಂಟಾಗುವ ನಗದು ಕೊರತೆಯ ಸಮಸ್ಯೆಗಳನ್ನು ನಿಭಾಯಿಸಲು ಆನ್‌ಲೈನ್ ವಿವಾದ ಪರಿಹಾರ (ODR) ಕಾರ್ಯವಿಧಾನಗಳನ್ನು ಇದು ವಿಸ್ತರಿಸುತ್ತದೆ.

    ಹಿಮ್-ಕನೆಕ್ಟ್ (Him-CONNECT)

    ಸರ್ಕಾರದ ಉಪಕ್ರಮಗಳು

    ಇದೀಗ ಸುದ್ದಿಯಲ್ಲಿದೆ: 

    • ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC) ನವದೆಹಲಿಯಲ್ಲಿ ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್‌ನ (TERI) ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯ (WSDS) ಭಾಗವಾಗಿ ‘ಹಿಮ್-ಕನೆಕ್ಟ್’ (Him-CONNECT) ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

    ‘ಹಿಮ್-ಕನೆಕ್ಟ್’ (Him-CONNECT) ಉಪಕ್ರಮದ ಬಗ್ಗೆ:

    • ಇದು ಭಾರತದ ಹಿಮಾಲಯ ಪ್ರದೇಶದ (IHR) ಸಂಶೋಧಕರನ್ನು ನವೋದ್ಯಮಗಳು (ಸ್ಟಾರ್ಟ್-ಅಪ್‌ಗಳು), ಹೂಡಿಕೆದಾರರು ಮತ್ತು ನೀತಿ ನಿರೂಪಕರೊಂದಿಗೆ ಬೆಸೆಯುವ ಪ್ರಮುಖ ಕಾರ್ಯಕ್ರಮವಾಗಿದೆ.
    • ಹಿಮಾಲಯ ಅಧ್ಯಯನಗಳ ಮೇಲಿನ ರಾಷ್ಟ್ರೀಯ ಅಭಿಯಾನ (NMHS) ಅಡಿಯಲ್ಲಿ ಅಭಿವೃದ್ಧಿಪಡಿಸಲಾದ 24ಕ್ಕೂ ಹೆಚ್ಚು ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳನ್ನು ಈ ವೇದಿಕೆಯಲ್ಲಿ ಪ್ರದರ್ಶಿಸಲಾಗುತ್ತದೆ.
    • ಹಿಮಾಲಯ-ಕೇಂದ್ರಿತ ಪರಿಹಾರಗಳ ವಾಣಿಜ್ಯೀಕರಣ, ತಳಮಟ್ಟದ ಅನುಷ್ಠಾನ ಮತ್ತು ಅವುಗಳ ವ್ಯಾಪಕ ಅಳವಡಿಕೆಯನ್ನು ಸುಗಮಗೊಳಿಸುವ ಉದ್ದೇಶವನ್ನು ಈ ವೇದಿಕೆಯು ಹೊಂದಿದೆ.

    ಮಿಷನ್ ಸುದರ್ಶನ ಚಕ್ರ

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಭಾರತದ ಪ್ರಧಾನ ಮಂತ್ರಿಯವರ ಇಸ್ರೇಲ್ ಭೇಟಿಯು ‘ಮಿಷನ್ ಸುದರ್ಶನ ಚಕ್ರ’ದ ಅಡಿಯಲ್ಲಿ ಸುಧಾರಿತ ಶಸ್ತ್ರಾಸ್ತ್ರ ತಂತ್ರಜ್ಞಾನ ಮತ್ತು ಕ್ಷಿಪಣಿ ರಕ್ಷಣೆಯ ಒಪ್ಪಂದಕ್ಕೆ ಭಾರಿ ಉತ್ತೇಜನ ನೀಡಿದೆ.

    ‘ಮಿಷನ್ ಸುದರ್ಶನ ಚಕ್ರ’ದ ಕುರಿತ ಮಾಹಿತಿ:

    • ಹಿನ್ನೆಲೆ:- ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಸಮಯದಲ್ಲಿ ಭಾರತವು ಪಾಕಿಸ್ತಾನದಿಂದ ಡ್ರೋನ್ ಮತ್ತು ಕ್ಷಿಪಣಿ ಅಪಾಯಗಳನ್ನು ಎದುರಿಸಿತ್ತು.
    • 2035 ರ ವೇಳೆಗೆ ‘ಸುದರ್ಶನ ಚಕ್ರ’ ಕ್ಷಿಪಣಿ ರಕ್ಷಣಾ ಕವಚ:- ರಾಷ್ಟ್ರೀಯ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಈ ರಕ್ಷಣಾ ಕವಚವನ್ನು ನಿರ್ಮಿಸಲು ಯೋಜಿಸಲಾಗಿದೆ.
    • ಧ್ಯೇಯೋದ್ದೇಶ:- ಇದು ಐರನ್ ಡೋಮ್, ಐರನ್ ಬೀಮ್, ಆರೋ ಮತ್ತು ಡೇವಿಡ್ಸ್ ಸ್ಲಿಂಗ್‌ನಂತಹ ಸುಧಾರಿತ ರಕ್ಷಣಾ ವ್ಯವಸ್ಥೆಗಳನ್ನು ಅಸ್ತಿತ್ವದಲ್ಲಿರುವ S-400, ಬರಾಕ್ ಮತ್ತು ಆಕಾಶ್ ವ್ಯವಸ್ಥೆಗಳೊಂದಿಗೆ ಸಂಯೋಜಿಸಿ, ಭಾರತದ ಗಡಿಗಳು ಮತ್ತು ಕರಾವಳಿಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.

    ಸುದರ್ಶನ ಚಕ್ರ ವ್ಯವಸ್ಥೆಯ ವೈಶಿಷ್ಟ್ಯಗಳು:

    • ವಾಯು ರಕ್ಷಣಾ ಉಪಕ್ರಮವಾಗಿದೆ:- ಬಹು-ಹಂತದ ಮತ್ತು ಸಂಪೂರ್ಣ ದೇಶೀಯ ವಾಯು ರಕ್ಷಣಾ ಉಪಕ್ರಮವಾಗಿದೆ.
    • ಶ್ರೀಕೃಷ್ಣನ ದೈವಿಕ ಅಸ್ತ್ರದ ಹೆಸರನ್ನು ಇಡಲಾಗಿದೆ:- ಕ್ಷಿಪಣಿಗಳು, ರಾಕೆಟ್‌ಗಳು, ಡ್ರೋನ್‌ಗಳು ಮತ್ತು ಸಮೂಹ ದಾಳಿಗಳಿಂದ ದೇಶದ ಪ್ರಮುಖ ಸ್ಥಳಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ.
    • ಇದು ದೀರ್ಘ-ಶ್ರೇಣಿಯ S-400 ಮತ್ತು ಪ್ರಾಜೆಕ್ಟ್ ಕುಶ, ಮಧ್ಯಮ-ಶ್ರೇಣಿಯ MRSAM/ಬರಾಕ್-8 ಹಾಗೂ ಅಲ್ಪ-ಶ್ರೇಣಿಯ ಐರನ್ ಡೋಮ್ ವ್ಯವಸ್ಥೆಗಳನ್ನು ಸಂಯೋಜಿಸುತ್ತದೆ. ಭವಿಷ್ಯದಲ್ಲಿ ಕಡಿಮೆ ಎತ್ತರದ ಅಪಾಯಗಳು ಮತ್ತು ಡ್ರೋನ್‌ಗಳನ್ನು ಕಡಿಮೆ ವೆಚ್ಚದಲ್ಲಿ ತಡೆಯಲು ಐರನ್ ಬೀಮ್ ಮತ್ತು ದುರ್ಗಾ-II ನಂತಹ ಲೇಸರ್ ಆಧಾರಿತ ಶಸ್ತ್ರಾಸ್ತ್ರಗಳನ್ನು ಸಹ ಇದು ಒಳಗೊಳ್ಳಲಿದೆ.

    ಸುಜ್ವಿಕಾ ಪೋರ್ಟಲ್

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಜೈವಿಕ ತಂತ್ರಜ್ಞಾನ ಇಲಾಖೆಯ (DBT) 40 ನೇ ಸಂಸ್ಥಾಪನಾ ದಿನದಂದು, ಕೃತಕ ಬುದ್ಧಿಮತ್ತೆ (AI) ಚಾಲಿತ ಜೈವಿಕ ತಂತ್ರಜ್ಞಾನ ಉತ್ಪನ್ನ ದತ್ತಾಂಶ ಪೋರ್ಟಲ್ ಆದ “ಸುಜ್ವಿಕಾ” (SUJVIKA) ಅನ್ನು ಪ್ರಾರಂಭಿಸಲಾಯಿತು. 
    • ಜೈವಿಕ ತಂತ್ರಜ್ಞಾನವನ್ನು ಭಾರತದ ಭವಿಷ್ಯದ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕಶಕ್ತಿಯಾಗಿ ಈ ಉಪಕ್ರಮವು ಎತ್ತಿ ತೋರಿಸುತ್ತದೆ.

    ಸುಜ್ವಿಕಾ ಪೋರ್ಟಲ್ ಕುರಿತ ಮಾಹಿತಿ:

    • ಇದು ಜೈವಿಕ ತಂತ್ರಜ್ಞಾನ ಇಲಾಖೆಯು 24 ಫೆಬ್ರವರಿ 2026 ರಂದು ಪ್ರಾರಂಭಿಸಿದ ಕೃತಕ ಬುದ್ಧಿಮತ್ತೆ ಚಾಲಿತ ವ್ಯಾಪಾರ ಗುಪ್ತಚರ ವೇದಿಕೆಯಾಗಿದೆ.
    • ಪ್ರಮುಖ ಲಕ್ಷಣಗಳು:
    • AI ಚಾಲಿತ ವಿಶ್ಲೇಷಣೆ:- ಜೈವಿಕ ತಂತ್ರಜ್ಞಾನ ಉತ್ಪನ್ನಗಳ ಆಮದು ಕುರಿತು ಅಧಿಕೃತ ಮತ್ತು ರಚನಾತ್ಮಕ ದತ್ತಾಂಶವನ್ನು ಒದಗಿಸಲು AI ಬಳಸುತ್ತದೆ.
    • ವಲಯವಾರು ಒಳನೋಟಗಳು:- ಇದು ಜೀವರಾಸಾಯನಿಕ ಉತ್ಪನ್ನಗಳು ಮತ್ತು ಕೈಗಾರಿಕಾ ಕಿಣ್ವಗಳಂತಹ ನಿರ್ದಿಷ್ಟ ವರ್ಗಗಳ ಬಗ್ಗೆ ಅತ್ಯಂತ ವಿವರವಾದ ಮಾಹಿತಿಯನ್ನು ನೀಡುತ್ತದೆ.
    • ಸ್ವದೇಶೀಕರಣದ ಉದ್ದೇಶ:- ಹೆಚ್ಚಿನ ಮೌಲ್ಯ ಮತ್ತು ಹೆಚ್ಚಿನ ಪ್ರಮಾಣದ ಆಮದುಗಳನ್ನು ಗುರುತಿಸುವ ಮೂಲಕ, ಸಂಶೋಧಕರು ಮತ್ತು ನವೋದ್ಯಮಗಳಿಗೆ ದೇಶೀಯ ಉತ್ಪಾದನೆಗೆ (ಆತ್ಮನಿರ್ಭರ್ ಭಾರತ್) ಆದ್ಯತೆ ನೀಡಲು ಮತ್ತು ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
    • ಪ್ರಾಮುಖ್ಯತೆ:- 2047 ರ ವೇಳೆಗೆ $1 ಟ್ರಿಲಿಯನ್ ಡಾಲರ್ ಜೈವಿಕ ಆರ್ಥಿಕತೆಯನ್ನು ತಲುಪುವ ಭಾರತದ ಗುರಿಗೆ ಸುಜ್ವಿಕಾ ಪೋರ್ಟಲ್ ಪ್ರಾರಂಭವು ಪೂರಕವಾಗಿದೆ.
    • ಇದು ಆರ್ಥಿಕತೆ, ಪರಿಸರ ಮತ್ತು ಉದ್ಯೋಗಕ್ಕಾಗಿ ಉನ್ನತ-ಕಾರ್ಯಕ್ಷಮತೆಯ ಜೈವಿಕ ಉತ್ಪಾದನೆಯ ಮೇಲೆ ಕೇಂದ್ರೀಕರಿಸುವ ‘BioE3’ ನೀತಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ.

    ಅಂತರರಾಷ್ಟ್ರೀಯ ಹವಾಮಾನ ಉಪಕ್ರಮ (IKI)

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಅಂತರರಾಷ್ಟ್ರೀಯ ಹವಾಮಾನ ಉಪಕ್ರಮದ (IKI) ಅಡಿಯಲ್ಲಿ ಜರ್ಮನಿ ಮತ್ತು ಭಾರತ ದೇಶಗಳು € 20 ಮಿಲಿಯನ್ ಯುರೋಗಳ (ಸುಮಾರು ₹180 ಕೋಟಿ) ಬೃಹತ್ ಅನುದಾನ ಯೋಜನೆಯನ್ನು ಪ್ರಾರಂಭಿಸಿವೆ.

    ಅಂತರರಾಷ್ಟ್ರೀಯ ಹವಾಮಾನ ಉಪಕ್ರಮ (IKI)ದ ಬಗ್ಗೆ:

    • ಇದು 2008 ರಲ್ಲಿ ಜರ್ಮನ್ ಸರ್ಕಾರವು ಪ್ರಾರಂಭಿಸಿದ ಪ್ರಮುಖ ಧನಸಹಾಯ ಕಾರ್ಯಕ್ರಮವಾಗಿದೆ.
    • ಉದ್ದೇಶ:- ಅಭಿವೃದ್ಧಿಶೀಲ ಮತ್ತು ಉದಯೋನ್ಮುಖ ಆರ್ಥಿಕತೆಗಳಲ್ಲಿ ಅಂತರರಾಷ್ಟ್ರೀಯ ಹವಾಮಾನ ಮತ್ತು ಜೀವವೈವಿಧ್ಯ ಯೋಜನೆಗಳನ್ನು ಬೆಂಬಲಿಸುವುದು.
    • ಪ್ರಮುಖ ಧನಸಹಾಯ ಕ್ಷೇತ್ರಗಳು:- ಪಾಲುದಾರ ರಾಷ್ಟ್ರಗಳು ತಮ್ಮ ಪ್ಯಾರಿಸ್ ಒಪ್ಪಂದ ಮತ್ತು ಜೈವಿಕ ವೈವಿಧ್ಯತೆಯ ಸಮಾವೇಶದ (CBD) ಗುರಿಗಳನ್ನು ತಲುಪಲು ಸಹಾಯ ಮಾಡುವ ನಿಟ್ಟಿನಲ್ಲಿ ಇದು 4 ಪ್ರಮುಖ ಸ್ತಂಭಗಳ ಮೇಲೆ ಕೇಂದ್ರೀಕರಿಸುತ್ತದೆ:
    1. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವುದು:- ನವೀಕರಿಸಬಹುದಾದ ಇಂಧನ, ಸುಸ್ಥಿರ ಚಲನಶೀಲತೆ ಮತ್ತು ಕಡಿಮೆ-ಇಂಗಾಲದ ಕೈಗಾರಿಕಾ ಪ್ರಕ್ರಿಯೆಗಳಿಗೆ ಪರಿವರ್ತನೆಗೊಳ್ಳುವುದು.
    2. ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೊಂದಿಕೊಳ್ಳುವುದು:- ಪರಿಸರ ವ್ಯವಸ್ಥೆ ಆಧಾರಿತ ರೂಪಾಂತರ ಮತ್ತು ಅಪಾಯ ನಿರ್ವಹಣೆ ಕಾರ್ಯತಂತ್ರಗಳ ಮೂಲಕ ಹವಾಮಾನ ಬದಲಾವಣೆಯ ವಿರುದ್ಧ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವುದು.
    3. ನೈಸರ್ಗಿಕ ಇಂಗಾಲದ ಹೀರುನೆಲೆ (ಸಿಂಕ್‌)ಗಳನ್ನು ಸಂರಕ್ಷಿಸುವುದು ಮತ್ತು ಮರುಸ್ಥಾಪಿಸುವುದು:- ಅರಣ್ಯ ಸಂರಕ್ಷಣೆ, ಸಸ್ಯಾವಶೇಷಗಳ ಜೌಗುಭೂಮಿಯ (ಪೀಟ್‌ಲ್ಯಾಂಡ್) ರಕ್ಷಣೆ ಮತ್ತು ಭೂ-ಬಳಕೆಯ ಬದಲಾವಣೆಗಳನ್ನು (REDD+) ತಡೆಗಟ್ಟುವ ಪ್ರಕ್ರಿಯೆಯ ಮೇಲೆ ಇದು ಹೆಚ್ಚಿನ ಗಮನ ಹರಿಸುತ್ತದೆ.
    4. ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸುವುದು:- ರಾಷ್ಟ್ರೀಯ ಜೀವವೈವಿಧ್ಯ ಕಾರ್ಯತಂತ್ರಗಳು ಮತ್ತು ಕ್ರಿಯಾ ಯೋಜನೆಗಳನ್ನು (NBSAPs) ಅನುಷ್ಠಾನಗೊಳಿಸುವುದು ಹಾಗೂ ಸಂರಕ್ಷಿತ ಪ್ರದೇಶಗಳನ್ನು ನಿರ್ವಹಿಸುವ ಕಾರ್ಯವನ್ನು ಇದು ಕೈಗೊಳ್ಳುತ್ತದೆ.
  • ಪಿಎಂ ಸೂರ್ಯ ಘರ್ ಯೋಜನೆ | ಭಾರತೀಯ ವಾಯುಪಡೆಯ ‘ತೇಜಸ್’ ಯುದ್ಧವಿಮಾನ | ಚಿಪ್ಪುಹಂದಿಗಳು (ಪ್ಯಾಂಗೋಲಿನ್ ಗಳು) | ಕಿಶೋರಿಯರಿಗೆ ಉಚಿತ ಎಚ್‌ಪಿವಿ (HPV) ಲಸಿಕಾ ಅಭಿಯಾನ | ಸಾಗರೋತ್ತರ ಭಾರತೀಯ ನಾಗರಿಕರು (OCI)

    ಪಿಎಂ ಸೂರ್ಯ ಘರ್ ಯೋಜನೆ

    ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ , ‘ಪಿಎಂ ಸೂರ್ಯ ಘರ್’ ಯೋಜನೆಯ ಅಡಿಯಲ್ಲಿ  30 ಲಕ್ಷಕ್ಕೂ ಹೆಚ್ಚು ಮನೆಗಳು ಸೌರ ಛಾವಣಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದನ್ನು ಪ್ರಧಾನ ಮಂತ್ರಿಯವರು ಶ್ಲಾಘಿಸಿದ್ದಾರೆ. ಇದು ಶುದ್ಧ ಇಂಧನ ಬಳಕೆಯ ಕ್ಷೇತ್ರದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ.
    • ಸೌರ ಛಾವಣಿ ಅಳವಡಿಕೆಯಲ್ಲಿ ಗುಜರಾತ ರಾಜ್ಯವು ಮುಂಚೂಣಿಯಲ್ಲಿದೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ. ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಈ ಯೋಜನೆಗೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ.

    ‘ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ’ಯ ಬಗ್ಗೆ:

    • ಪ್ರಾರಂಭವಾದ ವರ್ಷ:- 2024 ರಲ್ಲಿ ಜಾರಿಗೆ ತರಲಾಯಿತು.
    • ಅನುಷ್ಠಾನ ಸಚಿವಾಲಯ:- ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE).
    • ಉದ್ದೇಶ:- ದೇಶದ 1 ಕೋಟಿ ಮನೆಗಳಿಗೆ ಸೌರ ಛಾವಣಿ (RTS) ವ್ಯವಸ್ಥೆಯನ್ನು ಅಳವಡಿಸುವುದು ಹಾಗೂ ಆ ಮೂಲಕ ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವುದು.
    • ವಿಶಿಷ್ಟತೆ:- ಇದು ವಿಶ್ವದ ಅತಿದೊಡ್ಡ ಗೃಹಬಳಕೆಯ ಸೌರ ಛಾವಣಿ ಉಪಕ್ರಮವಾಗಿದೆ. ಇದು ಭಾರತದ ಇಂಧನ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುತ್ತಿದೆ.
    • ಸಹಾಯಧನ:- ಈ ಯೋಜನೆಯಡಿ ಸೌರ ಛಾವಣಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಕುಟುಂಬಗಳಿಗೆ ಸರ್ಕಾರವು ಶೇಕಡ 40 ರಷ್ಟು ಸಹಾಯಧನವನ್ನು ಒದಗಿಸುತ್ತದೆ.

    ಭಾರತೀಯ ವಾಯುಪಡೆಯ ‘ತೇಜಸ್’ ಯುದ್ಧವಿಮಾನ

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ವಾಯುನೆಲೆಯಿಂದ ಮೇಲಕ್ಕೆ ಹಾರುವಾಗ ಸಂಭವಿಸಿದ ತಾಂತ್ರಿಕ ದೋಷದ ನಿಖರ ಕಾರಣವನ್ನು ಪತ್ತೆಹಚ್ಚಲು, ಭಾರತೀಯ ವಾಯುಪಡೆಯು (IAF) ತನ್ನ ‘ತೇಜಸ್’ ಯುದ್ಧವಿಮಾನಗಳ ಸಮೂಹವನ್ನು ಸಮಗ್ರ ನಿರ್ವಹಣಾ ತಪಾಸಣೆಗೆ ಒಳಪಡಿಸಿದೆ.

    ತೇಜಸ್ ಯುದ್ಧವಿಮಾನದ ಬಗ್ಗೆ:

    • ಸಂಪೂರ್ಣ ಸ್ವದೇಶಿ ನಿರ್ಮಿತ ಯುದ್ಧವಿಮಾನವಾಗಿದೆ:- ಇದು 4ನೇ ತಲೆಮಾರಿನ, ಬಹು-ಪಾತ್ರ ನಿರ್ವಹಿಸಬಲ್ಲ ಶಬ್ದಾತೀತ ವೇಗದ ಯುದ್ಧವಿಮಾನವಾಗಿದೆ. 
    • ಇದನ್ನು ಭಾರತೀಯ ವಾಯುಪಡೆ (IAF)ಗೆ ಮತ್ತು ಭಾರತೀಯ ನೌಕಾಪಡೆಗಾಗಿ ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಲಾಗಿದೆ.
    • ‘ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ’ (ADA) ಇದರ ವಿನ್ಯಾಸವನ್ನು ರೂಪಿಸಿದೆ:- ಇದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಇದನ್ನು ‘ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್’ (HAL) ಸಂಸ್ಥೆಯು ಉತ್ಪಾದಿಸುತ್ತಿದೆ.

    ಪ್ರಮುಖ ಆವೃತ್ತಿಗಳು:

    ಆವೃತ್ತಿ

    ವಿಶಿಷ್ಟತೆಗಳು

    ಪ್ರಸ್ತುತ ಸ್ಥಿತಿ

    Tejas Mk-1 (ತೇಜಸ್ ಎಂಕೆ-1)

    ಇದು ತೇಜಸ್‌ನ ಆರಂಭಿಕ ಆವೃತ್ತಿಯಾಗಿದ್ದು, 4ನೇ ತಲೆಮಾರಿನ ಸಾಮರ್ಥ್ಯಗಳನ್ನು ಹೊಂದಿದೆ.

    ಇದು ಪ್ರಸ್ತುತ ಭಾರತೀಯ ವಾಯುಪಡೆಯಲ್ಲಿ (IAF) ಕಾರ್ಯಾಚರಣೆಯಲ್ಲಿದೆ.

    Tejas Mk-1A (ತೇಜಸ್ ಎಂಕೆ-1ಎ)

    ಇದು 4.5ನೇ ತಲೆಮಾರಿನ ಸುಧಾರಿತ ಯುದ್ಧವಿಮಾನವಾಗಿದೆ. ಇದು ಎಇಎಸ್ಎ (AESA) ರಾಡಾರ್ (ಉತ್ತಮ್), ಸುಧಾರಿತ ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್ ಮತ್ತು ಆಗಸದಲ್ಲೇ ಇಂಧನ ತುಂಬಿಕೊಳ್ಳುವ ವ್ಯವಸ್ಥೆಯನ್ನು ಒಳಗೊಂಡಿದೆ.

    ಇದರ ಮೊದಲ ಯುದ್ಧವಿಮಾನದ ನಿರ್ಮಾಣ ಪೂರ್ಣಗೊಂಡಿದ್ದು, 2026 ರಲ್ಲಿ ಬೃಹತ್ ಪ್ರಮಾಣದ ಉತ್ಪಾದನೆ ಪ್ರಾರಂಭವಾಗಲಿದೆ.

    Tejas Mk-2 (ತೇಜಸ್ ಎಂಕೆ-2)

    ಇದು ಮಧ್ಯಮ ತೂಕದ ಯುದ್ಧವಿಮಾನವಾಗಿದೆ. ಇದು ದೊಡ್ಡ ಗಾತ್ರದ ಏರ್‌ಫ್ರೇಮ್, ಕ್ಯಾನಾರ್ಡ್‌ಗಳು ಮತ್ತು ಹೆಚ್ಚು ಶಕ್ತಿಶಾಲಿಯಾದ ‘GE F414’ ಎಂಜಿನ್ ಅನ್ನು ಒಳಗೊಂಡಿದೆ.

    2026 ರ ಮಧ್ಯಭಾಗದಲ್ಲಿ ಇದರ ಮೂಲಮಾದರಿಯು ಪರೀಕ್ಷಾರ್ಥ ಹಾರಾಟ ನಡೆಸುವ ನಿರೀಕ್ಷೆಯಿದೆ.

    ನೌಕಾಪಡೆಯ ಆವೃತ್ತಿ

    ಇದು ವಿಮಾನವಾಹಕ ನೌಕೆಗಳಲ್ಲಿ ಕಾರ್ಯಾಚರಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ಬಲಪಡಿಸಲಾದ ಲ್ಯಾಂಡಿಂಗ್ ಗೇರ್ ಮತ್ತು ಅರೆಸ್ಟರ್ ಹುಕ್ ವ್ಯವಸ್ಥೆಯನ್ನು ವಿಮಾನದಲ್ಲಿ ಅಳವಡಿಸಲಾಗಿದೆ.

    ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಇದರ ಮೂಲಮಾದರಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

    ಚಿಪ್ಪುಹಂದಿಗಳು (ಪ್ಯಾಂಗೋಲಿನ್ ಗಳು)

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • 2016 ರಿಂದ 2024 ರ ವರೆಗಿನ ಅವಧಿಯಲ್ಲಿ ವಿಶ್ವದಾದ್ಯಂತ 500,000 ಕ್ಕೂ ಹೆಚ್ಚು ಚಿಪ್ಪುಹಂದಿಗಳನ್ನು ಅಕ್ರಮ ಸಾಗಾಣಿಕೆಯ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ‘ಸೈಟ್ಸ್’ (CITES) ವರದಿಯು ಬಹಿರಂಗಪಡಿಸಿದೆ.

    ಚಿಪ್ಪುಹಂದಿ (Pangolin)ಗಳ ಬಗ್ಗೆ:

    • ಭೂಮಿಯ ಮೇಲೆ ವಿಶಿಷ್ಟ ಹುರುಪೆಗಳನ್ನು ಹೊಂದಿರುವ ಏಕೈಕ ಸಸ್ತನಿಗಳಾಗಿವೆ:- ಇವುಗಳು ತಮ್ಮ ದೇಹದ ಮೇಲೆ ಕೆರಾಟಿನ್ ಅಂಶದಿಂದ ಕೂಡಿದ ಗಟ್ಟಿಮುಟ್ಟಾದ ಹುರುಪೆಗಳನ್ನು ಹೊಂದಿರುವ ಸಸ್ತನಿಗಳಾಗಿವೆ. 
    • ಇವು ತಮ್ಮ ಉದ್ದವಾದ ಮತ್ತು ಅಂಟಂಟಾದ ನಾಲಿಗೆಯನ್ನು ಬಳಸಿಕೊಂಡು ಇರುವೆಗಳು, ಗೆದ್ದಲುಗಳು ಮತ್ತು ಕೀಟಗಳ ಲಾರ್ವಾಗಳನ್ನು ಬೇಟೆಯಾಡಿ ತಿನ್ನುತ್ತವೆ.
    • ಚೆಂಡಿನಂತೆ ಉರುಳಿಕೊಳ್ಳುತ್ತವೆ:- ಶತ್ರುಗಳಿಂದ ಅಪಾಯ ಎದುರಾದಾಗ, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇವು ತಮ್ಮ ರಕ್ಷಾಕವಚದಂತಹ ಹುರುಪೆಗಳೊಂದಿಗೆ ಚೆಂಡಿನಂತೆ ಉರುಳಿಕೊಳ್ಳುತ್ತವೆ.
    • “ಪರಿಸರ ವ್ಯವಸ್ಥೆಯ ಎಂಜಿನಿಯರ್‌ಗಳು”:- ಮಣ್ಣಿನ ಗಾಳಿಯಾಡುವಿಕೆ ಮತ್ತು ನೈಸರ್ಗಿಕವಾಗಿ ಕೀಟಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
    • ಪ್ರಪಂಚದಾದ್ಯಂತ ಒಟ್ಟು 8 ಪ್ರಭೇದದ ಚಿಪ್ಪುಹಂದಿಗಳನ್ನು ಅಧಿಕೃತವಾಗಿ ಗುರುತಿಸಲಾಗಿದೆ. 
    • ಆಫ್ರಿಕಾ ಖಂಡದಲ್ಲಿ 4 ಪ್ರಭೇದಗಳು (ಕಪ್ಪು-ಹೊಟ್ಟೆಯ, ಬಿಳಿ-ಹೊಟ್ಟೆಯ, ದೈತ್ಯ ನೆಲದ ಮತ್ತು ಟೆಮ್ಮಿಂಕ್ಸ್ ನೆಲದ ಚಿಪ್ಪುಹಂದಿಗಳು) ಕಂಡುಬಂದರೆ,
    • ಏಷ್ಯಾ ಖಂಡದಲ್ಲಿ 4 ಪ್ರಭೇದಗಳು (ಭಾರತೀಯ, ಫಿಲಿಪೈನ್, ಸುಂಡಾ ಮತ್ತು ಚೀನೀ ಚಿಪ್ಪುಹಂದಿಗಳು) ಕಂಡುಬರುತ್ತವೆ.

    ಕಿಶೋರಿಯರಿಗೆ ಉಚಿತ ಎಚ್‌ಪಿವಿ (HPV) ಲಸಿಕಾ ಅಭಿಯಾನ

    ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ, ಕೇಂದ್ರ ಸರ್ಕಾರವು 14 ವರ್ಷ ವಯಸ್ಸಿನ ಕಿಶೋರಿಯರಿಗೆ ‘ಹ್ಯೂಮನ್ ಪ್ಯಾಪಿಲೋಮವೈರಸ್’ (HPV) ವಿರುದ್ಧ ರಾಷ್ಟ್ರವ್ಯಾಪಿ ರೋಗನಿರೋಧಕ ಲಸಿಕಾ ಅಭಿಯಾನವನ್ನು ಪ್ರಾರಂಭಿಸಲು ಸಜ್ಜಾಗಿದೆ.

    ಹ್ಯೂಮನ್ ಪ್ಯಾಪಿಲೋಮವೈರಸ್ (HPV) ನ ಬಗ್ಗೆ:

    • ಎಚ್‌ಪಿವಿ (HPV) ಎಂಬುದು ಲೈಂಗಿಕ ಸಂಪರ್ಕದಿಂದ ಹರಡುವ ಒಂದು ಅತ್ಯಂತ ಸಾಮಾನ್ಯ ಸೋಂಕಾಗಿದೆ.
    • ಈ ಸೋಂಕಿನ ಬಹುಪಾಲು ಪ್ರಕರಣಗಳು ಯಾವುದೇ ಲಕ್ಷಣಗಳನ್ನು ಹೊಂದಿರುವುದಿಲ್ಲ ಮತ್ತು ಇವು ತಾನಾಗಿಯೇ ಗುಣಮುಖವಾಗುತ್ತವೆ.
    • ಡಿಎನ್‌ಎ (DNA) ವೈರಸ್ ಆಗಿದೆ:- ಎಚ್‌ಪಿವಿ (HPV) ‘ಪ್ಯಾಪಿಲೋಮವೈರಿಡೆ’ ಕುಟುಂಬಕ್ಕೆ ಸೇರಿದ ಒಂದು ಡಿಎನ್‌ಎ (DNA) ವೈರಸ್ ಆಗಿದೆ.

    ಗರ್ಭಕಂಠದ ಕ್ಯಾನ್ಸರ್ (Cervical Cancer)ನ ಬಗ್ಗೆ:

    • ಗರ್ಭಕಂಠದ ಕ್ಯಾನ್ಸರ್ ಮಹಿಳೆಯರ ಗರ್ಭಕಂಠದಲ್ಲಿ (ಯೋನಿಯಿಂದ ಗರ್ಭಾಶಯಕ್ಕೆ ಸಂಪರ್ಕ ಕಲ್ಪಿಸುವ ಪ್ರವೇಶದ್ವಾರ) ಬೆಳೆಯುತ್ತದೆ.
    • ಹರಡುವಿಕೆ:- ಬಹುಪಾಲು (ಶೇಕಡ 99 ರಷ್ಟು) ಪ್ರಕರಣಗಳು ಲೈಂಗಿಕ ಸಂಪರ್ಕದ ಮೂಲಕ ಹರಡುವ ಅತ್ಯಂತ ಸಾಮಾನ್ಯ ವೈರಸ್ ಆದ ‘ಹೈ-ರಿಸ್ಕ್ ಹ್ಯೂಮನ್ ಪ್ಯಾಪಿಲೋಮವೈರಸ್’ (HPV) ಸೋಂಕಿನಿಂದ ಉಂಟಾಗುತ್ತವೆ.
    • ಪ್ರಮಾಣ:- ಪ್ರಪಂಚದಾದ್ಯಂತ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ 4ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ. ಭಾರತದ ಮಹಿಳೆಯರಲ್ಲಿ ಕಂಡುಬರುವ 2ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ.
    • ಚಿಕಿತ್ಸೆ:- ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಸೂಕ್ತವಾಗಿ ನಿರ್ವಹಣೆ ಮಾಡಿದರೆ, ಗರ್ಭಕಂಠದ ಕ್ಯಾನ್ಸರ್ ಅನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ.
    • ಪ್ರಸ್ತುತವಾಗಿ, ಭಾರತದಲ್ಲಿ 2 ಲಸಿಕೆಗಳು ಲಭ್ಯವಿವೆ:- ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ ಎಚ್‌ಪಿವಿ (HPV) ವಿರುದ್ಧ ಈ ಲಸಿಕೆಗಳು ಲಭ್ಯವಿವೆ. ಅವುಗಳೆಂದರೆ,
      1. ಮೆರ್ಕ್ ಕಂಪನಿಯ ‘ಗಾರ್ಡಾಸಿಲ್’ 
    • ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ‘ಸರ್ವಾವ್ಯಾಕ್’.

    ಸಾಗರೋತ್ತರ ಭಾರತೀಯ ನಾಗರಿಕರು (OCI)

    ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ವಕೀಲ ವೃತ್ತಿಯನ್ನು ಅಭ್ಯಾಸ ಮಾಡಲು ಮತ್ತು ರಾಜ್ಯ ವಕೀಲರ ಪರಿಷತ್ತಿನ ಸದಸ್ಯತ್ವ ಪಡೆಯಲು, ತಮ್ಮನ್ನು ‘ಅನಿವಾಸಿ ಭಾರತೀಯರಿಗೆ’ (NRI) ಸಮಾನವಾಗಿ ಪರಿಗಣಿಸಬೇಕು ಎಂದು ಸಾಗರೋತ್ತರ ಭಾರತೀಯ ನಾಗರಿಕರೊಬ್ಬರು (OCI) ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ.

    ‘ಸಾಗರೋತ್ತರ ಭಾರತೀಯ ನಾಗರಿಕ’ (OCI) ರ ಬಗ್ಗೆ:

    • ಪ್ರಾರಂಭವಾದ ವರ್ಷ:- ಭಾರತ ಸರ್ಕಾರವು 2005 ರಲ್ಲಿ OCI ಯೋಜನೆಯನ್ನು ಜಾರಿಗೆ ತಂದಿತು.
    • ನೋಂದಾಯಿತ OCI ಕಾರ್ಡುದಾರರು:- ಇವರಿಗೆ ಭಾರತಕ್ಕೆ ಭೇಟಿ ನೀಡಲು ಬಹು-ಪ್ರವೇಶ ಮತ್ತು ಬಹು-ಉದ್ದೇಶದ ಜೀವಿತಾವಧಿ ವೀಸಾವನ್ನು ನೀಡಲಾಗುತ್ತದೆ.
    • ಭಾರತದಲ್ಲಿ ಎಷ್ಟೇ ಅವಧಿಯವರೆಗೆ ವಾಸವಾಗಿದ್ದರೂ, ಇವರು ವಿದೇಶಿ ಪ್ರಾದೇಶಿಕ ನೋಂದಣಿ ಅಧಿಕಾರಿ (FRRO) ಅಥವಾ ವಿದೇಶಿ ನೋಂದಣಿ ಅಧಿಕಾರಿಯ (FRO) ಬಳಿ ನೋಂದಣಿ ಮಾಡಿಕೊಳ್ಳುವುದರಿಂದ ವಿನಾಯಿತಿಯನ್ನು ಪಡೆದಿದ್ದಾರೆ.
    • OCI ಕಾರ್ಡುದಾರರು ಭಾರತದಲ್ಲಿ ವಿಶೇಷ ಬ್ಯಾಂಕ್ ಖಾತೆಗಳನ್ನು ತೆರೆಯಬಹುದಾಗಿದೆ. ಇವರು ಕೃಷಿಯೇತರ ಆಸ್ತಿಯನ್ನು ಖರೀದಿಸಬಹುದು ಮತ್ತು ಅದರ ಮಾಲೀಕತ್ವದ ಹಕ್ಕುಗಳನ್ನು ಚಲಾಯಿಸಬಹುದು. ಅಲ್ಲದೆ, ಇವರು ಚಾಲನಾ ಪರವಾನಗಿ ಮತ್ತು ಪ್ಯಾನ್ (PAN) ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.
    • ಆದಾಗ್ಯೂ, ಭಾರತದಲ್ಲಿರುವ ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡಲು ಇವರು ಕಡ್ಡಾಯವಾಗಿ ಪೂರ್ವಾನುಮತಿ ಅಥವಾ ಪರವಾನಗಿಯನ್ನು ಪಡೆಯಬೇಕಾಗುತ್ತದೆ.
  • ‘ಪ್ರಹಾರ’ (PRAHAAR): ಭಾರತದ ಮೊದಲ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ | ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ 2.0 (NMP 2.0) | ಹಸಿರು ಅಮೋನಿಯಾ (Green Ammonia) | ಚಕ್ರವರ್ತಿ ರಾಜಗೋಪಾಲಾಚಾರಿ | ‘ರಾಹ್-ವೀರ್’ ಯೋಜನೆ

    ‘ಪ್ರಹಾರ’ (PRAHAAR): ಭಾರತದ ಮೊದಲ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ

    ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಗೃಹ ಸಚಿವಾಲಯವು (MHA) ಭಾರತದ ಚೊಚ್ಚಲ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಮತ್ತು ಕಾರ್ಯತಂತ್ರವಾದ ‘ಪ್ರಹಾರ’ (PRAHAAR) ಎಂಬ ಹೆಸರಿನಲ್ಲಿ ಅನಾವರಣಗೊಳಿಸಿದೆ.

    ‘ಪ್ರಹಾರ’ (PRAHAAR) ನೀತಿಯ ಬಗ್ಗೆ:

    • PRAHAAR ಸಂಪೂರ್ಣ ರೂಪ:- P- ಪ್ರೀವೆಂಶನ್, R- ರೆಸ್ಪಾನ್ಸ್, A- ಅಗ್ರಿಗೇಟಿಂಗ್ ಇಂಟರ್ನಲ್ ಕೆಪ್ಯಾಸಿಟಿಸ್, H- ಹ್ಯೂಮನ್ ರೈಟ್ಸ್ ಅಂಡ್ ರೂಲ್ ಆಫ್ ಲಾ, A- ಅಟ್ಟೇನುಏಟಿಂಗ್ ದಿ ಕಂಡೀಷನ್ಸ್, A- ಅಲೈನಿಂಗ್ ಅಂಡ್ ಶೇಪಿಂಗ್, R- ರಿಕವರಿ ಅಂಡ್ ರೆಸಿಲಿಯೆನ್ಸ್.
    • ಈ ನೀತಿಯು ಭಯೋತ್ಪಾದನೆಯ ವಿರುದ್ಧದ ಭಾರತದ ‘ಶೂನ್ಯ ಸಹಿಷ್ಣುತೆ’ಯ ತಾತ್ವಿಕ ನಿಲುವನ್ನು ಸ್ಪಷ್ಟಪಡಿಸುತ್ತದೆ.

    ಈ ನೀತಿಯು ಈ ಕೆಳಗಿನ ಪ್ರಮುಖ ಆದರ್ಶಗಳ ಆಧಾರದ ಮೇಲೆ ರೂಪುಗೊಂಡಿದೆ:

      • ಮುಂಚಿತವಾಗಿಯೇ ತಡೆಗಟ್ಟುವುದು (ಪ್ರೀವೆಂಶನ್):- ಭಾರತೀಯ ನಾಗರಿಕರನ್ನು ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಉಗ್ರರ ದಾಳಿಗಳನ್ನು ಮುಂಚಿತವಾಗಿಯೇ ತಡೆಗಟ್ಟುವುದು.
      • ಸಮರ್ಪಕವಾದ ಪ್ರತಿಕ್ರಿಯೆ (ರೆಸ್ಪಾನ್ಸ್):- ಎದುರಾಗುವ ಬೆದರಿಕೆಗಳಿಗೆ ತಕ್ಕಂತೆ ತ್ವರಿತವಾದ ಮತ್ತು ಸಮರ್ಪಕವಾದ ಪ್ರತಿಕ್ರಿಯೆಗಳನ್ನು ನೀಡುವುದು.
      • ಆಂತರಿಕ ಸಾಮರ್ಥ್ಯಗಳನ್ನು ಒಗ್ಗೂಡಿಸುವುದು (ಅಗ್ರಿಗೇಟಿಂಗ್ ಇಂಟರ್ನಲ್ ಕೆಪ್ಯಾಸಿಟಿಸ್):- ‘ಸಮಗ್ರ-ಸರ್ಕಾರ’ ವಿಧಾನದ ಮೂಲಕ ಸಮನ್ವಯತೆಯನ್ನು ಸಾಧಿಸಿ, ದೇಶದ ಆಂತರಿಕ ಸಾಮರ್ಥ್ಯಗಳನ್ನು ಒಗ್ಗೂಡಿಸುವುದು.
    • ಮಾನವ ಹಕ್ಕುಗಳ ರಕ್ಷಣೆ ಮತ್ತು ‘ಕಾನೂನಿನ ಆಡಳಿತ’ (ಹ್ಯೂಮನ್ ರೈಟ್ಸ್ ಅಂಡ್ ರೂಲ್ ಆಫ್ ಲಾ):- ಅಪಾಯಗಳನ್ನು ಶಮನಗೊಳಿಸುವ ಪ್ರಕ್ರಿಯೆಯಲ್ಲಿ ಮಾನವ ಹಕ್ಕುಗಳ ರಕ್ಷಣೆ ಮತ್ತು ‘ಕಾನೂನಿನ ಆಡಳಿತ’ ಆಧಾರಿತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಇದು ಕಡ್ಡಾಯಗೊಳಿಸುತ್ತದೆ.
      • ಯುವಜನರನ್ನು ಉಗ್ರವಾದದತ್ತ ಸೆಳೆಯುವ ಪ್ರಕ್ರಿಯೆ ಸೇರಿದಂತೆ, ಭಯೋತ್ಪಾದನೆಗೆ ಪೂರಕವಾದ ಪರಿಸ್ಥಿತಿಗಳನ್ನು ದುರ್ಬಲಗೊಳಿಸಲು ಇದು ಸೂಕ್ತ ಕ್ರಮ ಕೈಗೊಳ್ಳುತ್ತದೆ.
    • ಪ್ರಯತ್ನಗಳನ್ನು ರೂಪಿಸುವುದು (ಅಟ್ಟೇನುಏಟಿಂಗ್ ದಿ ಕಂಡೀಷನ್ಸ್):- ಭಯೋತ್ಪಾದನೆಯನ್ನು ಹತ್ತಿಕ್ಕುವ ಅಂತರರಾಷ್ಟ್ರೀಯ ಪ್ರಯತ್ನಗಳನ್ನು ರೂಪಿಸುವುದು ಹಾಗೂ ಆ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಸಮನ್ವಯ ಸಾಧಿಸುವುದು.
    • ಚೇತರಿಕೆ ಮತ್ತು ಸ್ಥಿತಿಸ್ಥಾಪಕತ್ವ (ರಿಕವರಿ ಅಂಡ್ ರೆಸಿಲಿಯೆನ್ಸ್):- ‘ಸಮಗ್ರ-ಸಮಾಜ’ ವಿಧಾನದ ಮೂಲಕ ವಿಪತ್ತಿನಿಂದ ಚೇತರಿಸಿಕೊಳ್ಳುವ ಮತ್ತು ಸಾಮಾಜಿಕ ಸ್ಥಿತಿಸ್ಥಾಪಕತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ.

    ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ 2.0 (NMP 2.0)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಕೇಂದ್ರ ಹಣಕಾಸು ಸಚಿವರು ‘ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ 2.0’ (NMP 2.0) ಯೋಜನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

    ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ 2.0 (NMP 2.0) ಬಗ್ಗೆ:

    • ಇದು ಭಾರತದ ಸಾರ್ವಜನಿಕ ಆಸ್ತಿ ನಗದೀಕರಣ ಕಾರ್ಯಕ್ರಮದ ಎರಡನೇ ಹಂತವಾಗಿದ್ದು, 2025-26ನೇ ಆರ್ಥಿಕ ವರ್ಷದಿಂದ 2029-30ನೇ ಆರ್ಥಿಕ ವರ್ಷದವರೆಗಿನ 5 ವರ್ಷಗಳ ಅವಧಿಯನ್ನು ಒಳಗೊಂಡಿದೆ.
    • ಉದ್ದೇಶ:- ಸರ್ಕಾರವು ಆಸ್ತಿಯ ಮಾಲೀಕತ್ವವನ್ನು ತನ್ನಲ್ಲೇ ಉಳಿಸಿಕೊಂಡು, ಅಸ್ತಿತ್ವದಲ್ಲಿರುವ ಸಾರ್ವಜನಿಕ ಮೂಲಸೌಕರ್ಯಗಳನ್ನು (ಬ್ರೌನ್‌ಫೀಲ್ಡ್ ಯೋಜನೆಗಳು) ನಿಗದಿತ ಅವಧಿಗೆ ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಮೂಲಕ ಆರ್ಥಿಕ ಮೌಲ್ಯವನ್ನು ಸೃಷ್ಟಿಸುವುದು.

    ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ (NMP) ಬಗ್ಗೆ:

    • ಹೆದ್ದಾರಿಗಳು, ರೈಲ್ವೆ ಜಾಲಗಳು ಮತ್ತು ವಿದ್ಯುತ್ ಮಾರ್ಗಗಳಂತಹ ಅಸ್ತಿತ್ವದಲ್ಲಿರುವ ಸಾರ್ವಜನಿಕ ಮೂಲಸೌಕರ್ಯಗಳನ್ನು ಖಾಸಗಿ ಕಂಪನಿಗಳಿಗೆ ನಿರ್ದಿಷ್ಟ ಅವಧಿಗೆ ಗುತ್ತಿಗೆ ನೀಡುವ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯೇ ಈ ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಆಗಿದೆ.
    • ಈ ಯೋಜನೆಯಡಿ ಸರ್ಕಾರವು ಮೂಲ ಆಸ್ತಿಯ ಮಾಲೀಕತ್ವವನ್ನು ತನ್ನಲ್ಲೇ ಉಳಿಸಿಕೊಳ್ಳುತ್ತದೆ; ಆದರೆ ಖಾಸಗಿ ಸಂಸ್ಥೆಗಳು ಆಸ್ತಿಗಳನ್ನು ನಿರ್ವಹಿಸುತ್ತವೆ ಮತ್ತು ಅವುಗಳಿಂದ ಆದಾಯವನ್ನು ಗಳಿಸುವ ಹಕ್ಕಿಗಾಗಿ ಸರ್ಕಾರಕ್ಕೆ ಹಣವನ್ನು ಪಾವತಿಸುತ್ತವೆ.

    NMP ಯ ಪ್ರಮುಖ ಅಂಶಗಳು:

    • ಗುರಿ:- ಹೊಸ ಮೂಲಸೌಕರ್ಯಗಳ ಅಭಿವೃದ್ಧಿಗೆ ಅಗತ್ಯವಿರುವ ಬಂಡವಾಳವನ್ನು ಹೂಡಿಕೆ ಮಾಡಲು, ಪ್ರಸ್ತುತ ಕಡಿಮೆ ಬಳಕೆಯಾಗುತ್ತಿರುವ ಮತ್ತು ಈಗಾಗಲೇ ನಿರ್ಮಿಸಲಾದ ಸಾರ್ವಜನಿಕ ಆಸ್ತಿಗಳಿಂದ (“ಬ್ರೌನ್‌ಫೀಲ್ಡ್” ಯೋಜನೆಗಳು) ಆರ್ಥಿಕ ಸಂಪನ್ಮೂಲವನ್ನು ಕ್ರೂಢೀಕರಿಸುವುದು.
    • ಕಾರ್ಯವಿಧಾನ:- ಸಾರ್ವಜನಿಕ ಆಸ್ತಿಗಳನ್ನು ಸಂಪೂರ್ಣವಾಗಿ ಮಾರಾಟ ಮಾಡುವ ಬದಲು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPPs) ಮಾದರಿಯನ್ನು ಬಳಸಿಕೊಂಡು ಅವುಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ಹಕ್ಕುಗಳನ್ನು ಮಾತ್ರ ಖಾಸಗಿ ವಲಯಕ್ಕೆ ವರ್ಗಾಯಿಸಲಾಗುತ್ತದೆ.
    • ವಲಯಗಳು:- ರಸ್ತೆಗಳು, ರೈಲ್ವೆ, ವಿದ್ಯುತ್ ಪ್ರಸರಣ ಮಾರ್ಗಗಳು, ದೂರಸಂಪರ್ಕ ಮತ್ತು ವಿಮಾನ ನಿಲ್ದಾಣಗಳಂತಹ ಪ್ರಮುಖ ಮೂಲಸೌಕರ್ಯ ವಲಯಗಳನ್ನು ಈ ಯೋಜನೆಯು ಒಳಗೊಂಡಿದೆ.

    ಹಸಿರು ಅಮೋನಿಯಾ (Green Ammonia)

    ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಭಾರತದ ಇಂಧನ ಪರಿವರ್ತನಾ ಪ್ರಕ್ರಿಯೆಯು ಹಸಿರು ಜಲಜನಕ ಮತ್ತು ಅದರ ಉಪಉತ್ಪನ್ನಗಳ ಮೇಲೆ ಹೆಚ್ಚು ಕೇಂದ್ರೀಕರಿಸುತ್ತಿದ್ದು, ಇದರಲ್ಲಿ ‘ಹಸಿರು ಅಮೋನಿಯಾ’ವು ನಿರ್ಣಾಯಕ ಮಾರ್ಗವಾಗಿ ಹೊರಹೊಮ್ಮುತ್ತಿದೆ.

    ಹಸಿರು ಅಮೋನಿಯಾದ ಬಗ್ಗೆ:

    • ಹಸಿರು ಜಲಜನಕವನ್ನು ಬಳಸಿಕೊಂಡು ಈ ಹಸಿರು ಅಮೋನಿಯಾವನ್ನು ಉತ್ಪಾದಿಸಲಾಗುತ್ತದೆ. 
    • ಇದನ್ನು ರಸಗೊಬ್ಬರ ಉತ್ಪಾದನೆ, ಇಂಧನ ಪೂರೈಕೆ ಮತ್ತು ಕಡಲ ವಲಯದ ಅನ್ವಯಿಕೆಗಳಿಗೆ ಪ್ರಮುಖ ಶುದ್ಧ ಇಂಧನವಾಗಿ ಬಳಕೆಯಾಗುತ್ತಿದೆ.
    • ಪ್ರಯೋಜನಗಳು:-
    • ರಸಗೊಬ್ಬರ ವಲಯದ ಇಂಗಾಲದ ಹೊರಸೂಸುವಿಕೆ ತಗ್ಗಿಸುವುದು (ಡಿಕಾರ್ಬೊನೈಸೇಶನ್):- ಆಮದು ಮಾಡಿಕೊಳ್ಳುವ ಅಮೋನಿಯಾವನ್ನು ಅತಿಯಾಗಿ ಅವಲಂಬಿಸಿರುವ ಭಾರತದ ರಸಗೊಬ್ಬರ ವಲಯವು, ಹಸಿರು ಅಮೋನಿಯಾವನ್ನು ಅಳವಡಿಸಿಕೊಳ್ಳುವ ಮೂಲಕ ಇಂಗಾಲದ ಹೊರಸೂಸುವಿಕೆಯನ್ನು ಗಣನೀಯವಾಗಿ ತಗ್ಗಿಸಬಹುದಾಗಿದೆ.

    ‘ಹಸಿರು ಜಲಜನಕ’ದ ಬಗ್ಗೆ:

    • ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸಲಾದ ವಿದ್ಯುತ್‌ನಿಂದ ನೀರಿನ ವಿದ್ಯುದ್ವಿಭಜನೆ ಮಾಡುವ ಮೂಲಕ ಹಸಿರು ಜಲಜನಕವನ್ನು ಉತ್ಪಾದಿಸಲಾಗುತ್ತದೆ.
    • ಇಂಗಾಲ-ಮುಕ್ತಗೊಳಿಸಲು ಸಹಾಯ:- ಇದು ಸಂಪೂರ್ಣ ಶುದ್ಧವಾಗಿ ಉರಿಯುವ ಇಂಧನವಾಗಿದ್ದು, ಕಬ್ಬಿಣ ಮತ್ತು ಉಕ್ಕು, ರಾಸಾಯನಿಕ ಹಾಗೂ ಸಾರಿಗೆ ಸೇರಿದಂತೆ ವಿವಿಧ ವಲಯಗಳನ್ನು ಇಂಗಾಲ-ಮುಕ್ತಗೊಳಿಸಲು ಸಹಾಯ ಮಾಡುತ್ತದೆ.
    • ಜಲಜನಕವನ್ನು ದೀರ್ಘಕಾಲದವರೆಗೆ ಸುರಕ್ಷಿತವಾಗಿ ಸಂಗ್ರಹಿಸಿಡಬಹುದು ಮತ್ತು ಇಂಧನ ಕೋಶಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಲು ಸಹ ಇದನ್ನು ಬಳಸಬಹುದಾಗಿದೆ.

    ರಾಷ್ಟ್ರೀಯ ಹಸಿರು ಜಲಜನಕ ಮಿಷನ್:

    • ಉದ್ದೇಶ:- ಹಸಿರು ಜಲಜನಕ ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ರೂಪಿಸುವುದು.
    • ಅನುಷ್ಠಾನ ಸಚಿವಾಲಯ:- ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE).

    ಜಲಜನಕ (Hydrogen)ದ ಬಗ್ಗೆ:

    • ಸಂಕೇತ ಮತ್ತು ಪರಮಾಣು ಸಂಖ್ಯೆ:- ಜಲಜನಕವು ‘H’ ಸಂಕೇತವನ್ನು ಹೊಂದಿರುವ ರಾಸಾಯನಿಕ ಮೂಲವಸ್ತುವಾಗಿದ್ದು, ಇದರ ಪರಮಾಣು ಸಂಖ್ಯೆ 1 ಆಗಿದೆ.
    • ಇದು ವಿಶ್ವದಲ್ಲಿಯೇ ಅತ್ಯಂತ ಹಗುರವಾದ ಹಾಗೂ ಅತ್ಯಂತ ಹೇರಳವಾಗಿರುವ ರಾಸಾಯನಿಕ ವಸ್ತುವಾಗಿದ್ದು, ಬ್ರಹ್ಮಾಂಡದಲ್ಲಿರುವ ಸಾಮಾನ್ಯ ವಸ್ತುವಿನ ಶೇಕಡ 75 ರಷ್ಟನ್ನು ಇದು ಒಳಗೊಂಡಿದೆ.
    • ಇದು ಬಣ್ಣರಹಿತ, ವಾಸನೆರಹಿತ, ರುಚಿರಹಿತ, ವಿಷಕಾರಿಯಲ್ಲದ ಮತ್ತು ಅತಿ ಹೆಚ್ಚು ದಹನಕಾರಿ ಗುಣವನ್ನು ಹೊಂದಿರುವ ಅನಿಲವಾಗಿದೆ.

    ಚಕ್ರವರ್ತಿ ರಾಜಗೋಪಾಲಾಚಾರಿ

    ಇತಿಹಾಸ

    ಇದೀಗ ಸುದ್ದಿಯಲ್ಲಿ:

    • ಸ್ವತಂತ್ರ ಭಾರತದ ಪ್ರಥಮ ಹಾಗೂ ಏಕೈಕ ಭಾರತೀಯ ಗವರ್ನರ್ ಜನರಲ್ ಆಗಿದ್ದ ಶ್ರೀ ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಪುತ್ಥಳಿಯನ್ನು ಭಾರತದ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದಲ್ಲಿ ಅನಾವರಣಗೊಳಿಸಿದರು.

    ‘ಸಿ. ರಾಜಗೋಪಾಲಾಚಾರಿ’ ಅವರ ಬಗ್ಗೆ:

      • ಆರಂಭಿಕ ಜೀವನ:- ಜನಪ್ರಿಯವಾಗಿ ‘ರಾಜಾಜೀ ಎಂದೇ ಕರೆಸಿಕೊಳ್ಳುವ ಚಕ್ರವರ್ತಿ ರಾಜಗೋಪಾಲಾಚಾರಿ ಅವರು 1878 ರಲ್ಲಿ ತಮಿಳುನಾಡಿನ ಥೋರಪಲ್ಲಿಯಲ್ಲಿ ಜನಿಸಿದರು.
    • ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು:-
    • ರೌಲತ್ ಕಾಯ್ದೆ ವಿರುದ್ಧದ ಹೋರಾಟ 
    • ಅಸಹಕಾರ ಚಳುವಳಿ 
    • ವೈಕಂ ಸತ್ಯಾಗ್ರಹ
    1. ಕಾನೂನು ಭಂಗ ಚಳುವಳಿ 
    2. ಈ ಸ್ವಾತಂತ್ರ್ಯ ಹೋರಾಟಗಳಿಗಾಗಿ ಅವರು 1912 ರಿಂದ 1941 ರ ನಡುವೆ ಐದು ಬಾರಿ ಜೈಲುವಾಸ ಅನುಭವಿಸಿದ್ದರು.
    • ಸ್ವಾತಂತ್ರ್ಯದ ನಂತರ, ರಾಜಾಜಿ ಅವರು 1950 ರವರೆಗೆ ಭಾರತದ ಕೊನೆಯ ಗವರ್ನರ್ ಜನರಲ್ ಆಗಿ ಸೇವೆ ಸಲ್ಲಿಸಿದರು.
    • ಅವರು 1952 ರಿಂದ 1954 ರ ನಡುವೆ ಅಲ್ಪಕಾಲ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
    • ಸಾಂಪ್ರದಾಯಿಕ ಉದಾರವಾದಿ ಆರ್ಥಿಕ ವಿಚಾರಗಳನ್ನು ಬೆಂಬಲಿಸುವ ಉದ್ದೇಶದಿಂದ ಅವರು 1959 ರಲ್ಲಿ ‘ಸ್ವತಂತ್ರ ಪಕ್ಷ’ವನ್ನು ಸ್ಥಾಪಿಸಿದರು.
    • ಸಾಹಿತ್ಯಿಕ ಕೊಡುಗೆ:- 
    • ಇಂಗ್ಲಿಷ್‌ನಲ್ಲಿ ರಚಿತವಾದ ಮಹಾಭಾರತ ಮತ್ತು ರಾಮಾಯಣ.
    • ತಮಿಳಿನಲ್ಲಿ ರಚಿತವಾದ ‘ರಾಮಾಯಣ – ಚಕ್ರವರ್ತಿ ತಿರುಮಗನ್’.
    • 1954 ರಲ್ಲಿ ‘ಭಾರತ ರತ್ನ’:- ಭಾರತದ ರಾಜಕೀಯ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಅಪಾರ ಕೊಡುಗೆಗಾಗಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ಪ್ರದಾನ ಮಾಡಿ ಗೌರವಿಸಲಾಯಿತು.

    ‘ರಾಹ್-ವೀರ್’ ಯೋಜನೆ

    ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ರಸ್ತೆ ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ತ್ವರಿತವಾಗಿ ಸಹಾಯ ಮಾಡಲು ನಾಗರಿಕರನ್ನು ಪ್ರೇರೇಪಿಸುವ ಉದ್ದೇಶದಿಂದ ದೆಹಲಿ ಸರ್ಕಾರವು ಕೇಂದ್ರ ಸರ್ಕಾರದ ‘ರಾಹ್-ವೀರ್’ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.

    ‘ರಾಹ್-ವೀರ್’ ಯೋಜನೆಯ ಬಗ್ಗೆ:

    • ಈ ಯೋಜನೆಯು ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆ, 2019 ರ ಅಡಿಯಲ್ಲಿರುವ ‘ಗುಡ್ ಸಮರಿಟನ್’ (ಜೀವರಕ್ಷಕ) ನಿಯಮಗಳಿಗೆ ಅನುಗುಣವಾಗಿ ರೂಪುಗೊಂಡಿದೆ.
    • ಅಪಘಾತದ ಸಮಯದಲ್ಲಿ ತ್ವರಿತವಾಗಿ ಮಾನವೀಯ ನೆರವು ನೀಡುವುದನ್ನು ಪ್ರೋತ್ಸಾಹಿಸಲು ಇದು ನಾಗರಿಕರಿಗೆ ಕಾನೂನು ರಕ್ಷಣೆ ಹಾಗೂ ಆರ್ಥಿಕ ಪ್ರೋತ್ಸಾಹವನ್ನು ಒದಗಿಸುತ್ತದೆ.
    • ಪ್ರಮುಖ ಲಕ್ಷಣಗಳು:
    • ₹25,000 ನಗದು ಬಹುಮಾನ:- ಅಪಘಾತ ಸಂಭವಿಸಿದ ಅತ್ಯಮೂಲ್ಯವಾದ “ಸುವರ್ಣ ಘಳಿಗೆ”ಯಲ್ಲಿ (golden hour) ಗಂಭೀರವಾಗಿ ಗಾಯಗೊಂಡ ಸಂತ್ರಸ್ತರಿಗೆ ಸಹಾಯ ಮಾಡುವ ನಾಗರಿಕರಿಗೆ 25,000 ರೂಪಾಯಿಗಳ ನಗದು ಬಹುಮಾನವನ್ನು ನೀಡಲಾಗುತ್ತದೆ.
    • ಜಿಲ್ಲಾ ಮಟ್ಟದ ಸಮಿತಿಯು ಇಂತಹ ಪ್ರಕರಣಗಳನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಬಹುಮಾನದ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
    • ಇದರ ಜೊತೆಗೆ, ಪ್ರತಿ ವರ್ಷ 10 ಅತ್ಯುತ್ತಮ ‘ರಾಹ್-ವೀರ್’ಗಳನ್ನು ಗುರುತಿಸಿ, ಅವರಿಗೆ ತಲಾ 1 ಲಕ್ಷ ರೂಪಾಯಿ ನಗದು ಮತ್ತು ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಗುತ್ತದೆ.
    • ಪ್ರಾಮುಖ್ಯತೆ:- ರಸ್ತೆ ಅಪಘಾತದ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾದಾಗ ಎದುರಾಗಬಹುದಾದ ಪೊಲೀಸ್ ವಿಚಾರಣೆ ಅಥವಾ ಕಾನೂನು ಕಾರ್ಯವಿಧಾನದ ಭಯದಿಂದ ನಾಗರಿಕರು ಹಿಂಜರಿಯುವುದನ್ನು ತಪ್ಪಿಸುವುದು.
  • ಪ್ರಸಾದ (PRASHAD) ಯೋಜನೆ | ದೆಹಲಿ–ಮೀರತ್: ದೇಶದ ಮೊದಲ ‘ನಮೋ ಭಾರತ್- ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ’ (RRTS) ಸಂಚಾರ ಮಾರ್ಗ | ಬಯೋಫಾರ್ಮಾ ಶಕ್ತಿ

    ಪ್ರಸಾದ (PRASHAD) ಯೋಜನೆ

    ಸರ್ಕಾರದ ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಕೇಂದ್ರ ನಾಗರಿಕ ವಿಮಾನಯಾನ ಸಚಿವರು ‘ಪ್ರಸಾದ’ ಯೋಜನೆಯಡಿ ಆಂಧ್ರಪ್ರದೇಶದಲ್ಲಿ ತೀರ್ಥಯಾತ್ರಾ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಕಾರ್ಯಯೋಜನೆಗಳನ್ನು ಪ್ರಕಟಿಸಿದ್ದಾರೆ.

    ಪ್ರಸಾದ (PRASHAD) ಯೋಜನೆಯ ಬಗ್ಗೆ:

    • PRASHAD ಸಂಪೂರ್ಣ ರೂಪ:- ಪಿಲ್ಗ್ರಿಮೇಜ್ ರೇಜುವೆನೇಷನ್ ಅಂಡ್ ಸ್ಪಿರಿಚುಯಲ್ ಆಗಮೆಂಟೇಷನ್ ಡ್ರೈವ್ (ತೀರ್ಥಕ್ಷೇತ್ರಗಳ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ಸಂವರ್ಧನಾ ಅಭಿಯಾನ).
    • ಪ್ರಾರಂಭ:- 2014-2015
    • ಧನಸಹಾಯ ವ್ಯವಸ್ಥೆ:- ಕೇಂದ್ರ ವಲಯದ ಯೋಜನೆ
    • ಅನುಷ್ಠಾನ ಸಚಿವಾಲಯ:- ಕೇಂದ್ರ ಪ್ರವಾಸೋದ್ಯಮ ಸಚಿವಾಲಯ. 
    • ಪ್ರಮುಖ ಉದ್ದೇಶ:- ಧಾರ್ಮಿಕ ಪ್ರವಾಸೋದ್ಯಮದ ಅನುಭವವನ್ನು ಮತ್ತಷ್ಟು ಶ್ರೀಮಂತಗೊಳಿಸಲು, ಭಾರತದಾದ್ಯಂತ ಇರುವ ಪ್ರಮುಖ ತೀರ್ಥಯಾತ್ರಾ ಸ್ಥಳಗಳನ್ನು ಗುರುತಿಸಿ, ಅವುಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ.
    • ಯೋಜನೆಯ ಮಹತ್ವ:- ಈ ಯೋಜನೆಯು ಪ್ರವಾಸಿ ತಾಣಗಳಲ್ಲಿನ ರಸ್ತೆಗಳು, ಸಾರಿಗೆ ವ್ಯವಸ್ಥೆ, ನೈರ್ಮಲ್ಯ ಮತ್ತು ಸಾರ್ವಜನಿಕ ಸೇವೆಗಳಂತಹ ಮೂಲಸೌಕರ್ಯಗಳನ್ನು ಗಣನೀಯವಾಗಿ ಸುಧಾರಿಸಿದೆ. ಅಷ್ಟೇ ಅಲ್ಲದೆ, ಇದು ಸ್ಥಳೀಯ ನಿವಾಸಿಗಳ ಜೀವನಮಟ್ಟವನ್ನು ಉನ್ನತೀಕರಿಸುವುದರ ಜೊತೆಗೆ ಪ್ರವಾಸಿಗರಿಗೆ ಅತ್ಯುತ್ತಮ ಅನುಭವವನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.

    ದೆಹಲಿ–ಮೀರತ್: ದೇಶದ ಮೊದಲ ‘ನಮೋ ಭಾರತ್- ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ’ (RRTS) ಸಂಚಾರ ಮಾರ್ಗ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಪ್ರಧಾನಮಂತ್ರಿಯವರು ಭಾರತದ ಮೊಟ್ಟಮೊದಲ ‘ನಮೋ ಭಾರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ’ಯನ್ನು (RRTS) ಉದ್ಘಾಟಿಸಿದರು ಹಾಗೂ 82 ಕಿಲೋಮೀಟರ್ ಉದ್ದದ ದೆಹಲಿ-ಮೀರತ್ ನಮೋ ಭಾರತ್ ಸಂಚಾರ ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

    ನಮೋ ಭಾರತ್’- ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ’ (RRTS):

    • ಇದು ರಾಷ್ಟ್ರೀಯ ರಾಜಧಾನಿ ವಲಯದ (NCR) ಪ್ರಮುಖ ನಗರ ಕೇಂದ್ರಗಳನ್ನು ಅತಿ-ವೇಗದ ರೈಲು ಸಂಚಾರ ಮಾರ್ಗ (82 ಕಿ.ಮೀ. ಉದ್ದದ ಮಾರ್ಗ) ಮೂಲಕ ಸಂಪರ್ಕಿಸುವ ಭಾರತದ ಮೊಟ್ಟಮೊದಲ ಪ್ರಾದೇಶಿಕ ರೈಲು ವ್ಯವಸ್ಥೆಯಾಗಿದೆ.
    • ಇದು ರೈಲು-ಆಧಾರಿತ, ಅತಿ-ವೇಗದ, ಹೆಚ್ಚಿನ ಆವರ್ತನದ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯಾಗಿದೆ. ಇದು ಗಂಟೆಗೆ 180 ಕಿ.ಮೀ. ವಿನ್ಯಾಸದ ವೇಗ ಮತ್ತು ಗಂಟೆಗೆ 100 ಕಿ.ಮೀ. ಸರಾಸರಿ ವೇಗವನ್ನು ಹೊಂದಿದ್ದು, ರಾಷ್ಟ್ರೀಯ ರಾಜಧಾನಿ ವಲಯದಲ್ಲಿನ ಜನರನ್ನು ಮತ್ತು ಸ್ಥಳಗಳನ್ನು ಮತ್ತಷ್ಟು ಸಮೀಪಕ್ಕೆ ತರುವ ಪ್ರಮುಖ ಗುರಿಯನ್ನು ಹೊಂದಿದೆ.
    • ಅನುಷ್ಠಾನ ಸಂಸ್ಥೆ:- ರಾಷ್ಟ್ರೀಯ ರಾಜಧಾನಿ ವಲಯ ಸಾರಿಗೆ ನಿಗಮವು (NCRTC) ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ.
    • ಮಹತ್ವ:- ‘ನಮೋ ಭಾರತ್’ ರೈಲುಗಳು ವೇಗವಾದ, ಸುರಕ್ಷಿತವಾದ ಮತ್ತು ಆರಾಮದಾಯಕವಾದ ಪ್ರಾದೇಶಿಕ ಪ್ರಯಾಣವನ್ನು ಒದಗಿಸಲಿವೆ. ಅಲ್ಲದೆ, ಈ ವಲಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ನಡುವೆ ತಡೆರಹಿತ ಸಮನ್ವಯತೆಯನ್ನು ಸಾಧಿಸುವ ಮೂಲಕ, ಹೆಚ್ಚಿನ ಜನರು ಸಾರ್ವಜನಿಕ ಸಾರಿಗೆಗೆ ಬದಲಾಗುವಂತೆ ಇದು ಉತ್ತೇಜಿಸುತ್ತದೆ.

    ಬಯೋಫಾರ್ಮಾ ಶಕ್ತಿ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • 2026-27ನೇ ಸಾಲಿನ ಕೇಂದ್ರ ಮುಂಗಡ ಪತ್ರದಲ್ಲಿ ಜೈವಿಕ ತಂತ್ರಜ್ಞಾನ ವಲಯದ ಅಭಿವೃದ್ಧಿಗಾಗಿ ಭಾರತ ಸರ್ಕಾರವು ₹10,000 ಕೋಟಿ ರೂಪಾಯಿಗಳ ಬೃಹತ್ ಹೂಡಿಕೆಯನ್ನು ಪ್ರಕಟಿಸಿದೆ.

    ‘ಬಯೋಫಾರ್ಮಾ ಶಕ್ತಿ’ ಉಪಕ್ರಮದ ಬಗ್ಗೆ:

    • ಗುರಿ:- ‘ಬಯೋಫಾರ್ಮಾ ಶಕ್ತಿ’ ಎಂಬ ಈ ಹೊಸ ಉಪಕ್ರಮದ ಮೂಲಕ ‘ಬಯೋಲಾಜಿಕ್ಸ್ (ಜೈವಿಕ ಮೂಲದ ಔಷಧಗಳು) ಮತ್ತು ‘ಬಯೋಸಿಮಿಲರ್ಸ್’ (ಜೈವಿಕ-ಸಮಾನ ಔಷಧಗಳು) ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುವುದು.
    • ಮಾರುಕಟ್ಟೆ ಗುರಿ:- ಭಾರತವನ್ನು ಜಾಗತಿಕ ಮಟ್ಟದ ಪ್ರಮುಖ ಜೈವಿಕ ಔಷಧೀಯ (ಬಯೋಫಾರ್ಮಾ) ಉದ್ಯಮವನ್ನಾಗಿ ಪರಿವರ್ತಿಸುವ ಮತ್ತು ಜಾಗತಿಕ ಜೈವಿಕ ಔಷಧೀಯ (ಬಯೋ ಫಾರ್ಮಾಸ್ಯುಟಿಕಲ್‌) ಮಾರುಕಟ್ಟೆಯಲ್ಲಿ ಶೇಕಡಾ 5 ರಷ್ಟು ಪಾಲನ್ನು ವಶಪಡಿಸಿಕೊಳ್ಳುವ ಸರ್ಕಾರದ ಬೃಹತ್ ಗುರಿಯೊಂದಿಗೆ ಈ ಉಪಕ್ರಮವು ಸಮನ್ವಯತೆ ಹೊಂದಿದೆ.
    • ವಿನ್ಯಾಸ ಮತ್ತು ಮಹತ್ವ:- ಉನ್ನತ ಮೌಲ್ಯದ ಬಯೋಫಾರ್ಮಾಸ್ಯುಟಿಕಲ್‌ ಉತ್ಪನ್ನಗಳು ಹಾಗೂ ಜೀವರಕ್ಷಕ ಔಷಧಗಳ ದೇಶೀಯ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಬೆಂಬಲಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಇದು ವಿದೇಶಿ ಆಮದು ಅವಲಂಬನೆಯನ್ನು ತಗ್ಗಿಸುವುದರ ಜೊತೆಗೆ, ಜಾಗತಿಕ ಜೈವಿಕ ಮೂಲದ ಔಷಧಗಳ (ಬಯೋಲಾಜಿಕ್ಸ್) ಪೂರೈಕೆ ಸರಪಳಿಯಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ.

    ಜೈವಿಕ ಔಷಧಿ (ಬಯೋಫಾರ್ಮಾ) ವಲಯ ಎಂದರೇನು?

    • ಮಾನವ ಜೀವಕೋಶಗಳು, ಶಿಲೀಂಧ್ರಗಳು ಅಥವಾ ಸೂಕ್ಷ್ಮಾಣುಜೀವಿಗಳಂತಹ ಜೈವಿಕ ಜೀವಿಗಳ ಮೂಲಕ ರೋಗನಿವಾರಕ ವಸ್ತುಗಳನ್ನು / ಔಷಧೀಯ ಅಂಶಗಳನ್ನು ಉತ್ಪಾದಿಸುವ, ತಯಾರಿಸುವ ಅಥವಾ ಹೊರತೆಗೆಯುವ ಅತ್ಯಾಧುನಿಕ ವೈದ್ಯಕೀಯ ಪ್ರಕ್ರಿಯೆಯನ್ನು ಇದು ಒಳಗೊಂಡಿರುತ್ತದೆ.

    ಜೈವಿಕ ಔಷಧಗಳ (ಬಯೋಫಾರ್ಮಾಸ್ಯುಟಿಕಲ್ಸ್) ಉದಾಹರಣೆಗಳು:

    • ಲಸಿಕೆಗಳು, ಪ್ರತಿಕಾಯ ಚಿಕಿತ್ಸೆಗಳು, ವಂಶವಾಹಿ ಚಿಕಿತ್ಸೆಗಳು, ಜೀವಕೋಶಗಳ ಕಸಿ, ಆಧುನಿಕ ಇನ್ಸುಲಿನ್ ಮತ್ತು ಪುನರ್‌ಸಂಯೋಜಿತ ಪ್ರೊಟೀನ್ ಔಷಧಗಳು ಈ ಜೈವಿಕ ಔಷಧಗಳಿಗೆ ಕೆಲವು ಅತ್ಯುತ್ತಮ ಉದಾಹರಣೆಗಳಾಗಿವೆ.
  • ಬೇಲಾ: ದೇಶದ ಮೊದಲ ‘ನಿವ್ವಳ-ಶೂನ್ಯ’ (ನೆಟ್ ಝೀರೋ) ಗ್ರಾಮ ಪಂಚಾಯತಿ | ರಕ್ತಚಂದನ (Red Sanders) | ಇಂಡಿಯಾ ಎಐ (AI) ಇಂಪ್ಯಾಕ್ಟ್ ಶೃಂಗಸಭೆ, 2026 | ದೇಶೀಯವಾಗಿ ತಯಾರಿಸಲಾದ ‘ಟಿಡಿ’ (Td) ಲಸಿಕೆ

    ಬೇಲಾ: ದೇಶದ ಮೊದಲ ‘ನಿವ್ವಳ-ಶೂನ್ಯ’ (ನೆಟ್ ಝೀರೋ) ಗ್ರಾಮ ಪಂಚಾಯತಿ

    ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ ಮಹಾರಾಷ್ಟ್ರದ ಬೇಲಾ ಗ್ರಾಮವು ಭಾರತದ ಮೊಟ್ಟಮೊದಲ ನಿವ್ವಳ-ಶೂನ್ಯ (‘ನೆಟ್ ಝೀರೋ’) ಪಂಚಾಯತಿ ಆಗಿ ಹೊರಹೊಮ್ಮಿದೆ.

    ನಿವ್ವಳ-ಶೂನ್ಯ (‘ನೆಟ್ ಝೀರೋ’) ಪರಿಕಲ್ಪನೆ:

    • ವಾತಾವರಣಕ್ಕೆ ಬಿಡುಗಡೆಯಾಗುವ ಹಸಿರುಮನೆ ಅನಿಲಗಳ ಪ್ರಮಾಣ ಮತ್ತು ವಾತಾವರಣದಿಂದ ತೆಗೆದುಹಾಕಲಾಗುವ ಹಸಿರುಮನೆ ಅನಿಲಗಳ ಪ್ರಮಾಣದ ನಡುವೆ ಸಮತೋಲನ ಸಾಧಿಸುವುದನ್ನು ‘ನೆಟ್ ಝೀರೋ’ ಎಂದು ಕರೆಯಲಾಗುತ್ತದೆ.
    • ಮಾನವ-ಪ್ರೇರಿತ ಇಂಗಾಲದ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯ ಮೌಲ್ಯಕ್ಕೆ ಇಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

    ಬೇಲಾ ಗ್ರಾಮದ ಸಾಧನೆಗಳು:

      • ಈ ಗ್ರಾಮವು ಮಹಾರಾಷ್ಟ್ರದ ವಿದರ್ಭ ಪ್ರದೇಶದ ಭಂಡಾರ ಜಿಲ್ಲೆಯಲ್ಲಿದೆ.
      • ತನ್ನ ಸುಸ್ಥಿರ ಮತ್ತು ಇಂಗಾಲ-ತಟಸ್ಥ (ಕಾರ್ಬನ್ ನ್ಯೂಟ್ರಲ್) ಉಪಕ್ರಮಗಳಿಗಾಗಿ, 2026ರ ಮುಂಬೈ ಹವಾಮಾನ ಸಪ್ತಾಹದಲ್ಲಿ ಇದು ಭಾರತದ ಮೊದಲ ‘ನೆಟ್ ಝೀರೋ’ ಪಂಚಾಯತಿ ಎಂಬ ಅಧಿಕೃತ ಮನ್ನಣೆಯನ್ನು ಪಡೆದುಕೊಂಡಿದೆ.
      • ಸ್ಥಳೀಯ ಹವಾಮಾನ ಕ್ರಮಗಳನ್ನು ರೂಪಿಸುವಲ್ಲಿ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿ ಗ್ರಾಮ ಪಂಚಾಯತಿ ನಾಯಕತ್ವವು ಎಷ್ಟು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದನ್ನು ಇದು ಸಾಬೀತುಪಡಿಸಿದೆ.
    • ಗ್ರಾಮಸ್ಥರು 90,000 ಕ್ಕೂ ಹೆಚ್ಚು ಮರಗಳನ್ನು ನೆಟ್ಟಿದ್ದು, ಹೊಗೆಯುಕ್ತ ಒಲೆಗಳ ಬಳಕೆಯನ್ನು ಕೈಬಿಟ್ಟು ಸಂಪೂರ್ಣವಾಗಿ ಎಲ್‌ಪಿಜಿ (LPG) ಬಳಕೆಗೆ ಪರಿವರ್ತನೆಗೊಂಡಿದ್ದಾರೆ.
    • ಗ್ರಾಮದಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದೆ, ತ್ಯಾಜ್ಯ ವಿಂಗಡಣೆಯನ್ನು ಉತ್ತೇಜಿಸಲಾಗಿದೆ ಮತ್ತು ಏಕಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ.
    • ಈ ಅಸಾಧಾರಣ ಸಾಧನೆಗಾಗಿ ಬೇಲಾ ಗ್ರಾಮವು 2024ರ ರಾಷ್ಟ್ರೀಯ ಪಂಚಾಯತ್ ಪುರಸ್ಕಾರವನ್ನು ಪಡೆದುಕೊಂಡಿದೆ.

    ಭಾರತದಾದ್ಯಂತ ಪಂಚಾಯತಿ ನೇತೃತ್ವದ ಇತರ ಹವಾಮಾನ ಉಪಕ್ರಮಗಳು:

    • ಪೆರಿಂಜನಂ (ಕೇರಳ):- ಇಲ್ಲಿನ “ಸೌರ ಗ್ರಾಮಂ” ಯೋಜನೆಯಡಿ 850 ಕುಟುಂಬಗಳು ಛಾವಣಿಯ ಸೌರಶಕ್ತಿ ಉತ್ಪಾದಕ-ಗ್ರಾಹಕರಾಗಿ ಬದಲಾಗಿದ್ದು, ಇದು ವಿದ್ಯುತ್ ವೆಚ್ಚವನ್ನು ಶೇಕಡಾ 80 ರಷ್ಟು ಕಡಿಮೆ ಮಾಡಿದೆ ಹಾಗೂ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಗಣನೀಯವಾಗಿ ತಗ್ಗಿಸಿದೆ.
    • ಸಿಯಾರಿ (ಜಾರ್ಖಂಡ್):- ಜಿಲ್ಲಾ ಖನಿಜ ನಿಧಿಯ ಬೆಂಬಲವನ್ನು ಬಳಸಿಕೊಂಡು ಈ ಗ್ರಾಮದಲ್ಲಿ ಜಲ ಸಂರಕ್ಷಣೆ, ಕೆರೆಗಳ ಪುನರುಜ್ಜೀವನ, ಸೌರ ನೀರಾವರಿ, ಸೌರ ಬೀದಿದೀಪಗಳ ಅಳವಡಿಕೆ ಹಾಗೂ ಸಾವಿರಾರು ಹಣ್ಣು ಮತ್ತು ನೆರಳು ನೀಡುವ ಮರಗಳನ್ನು ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.
    • ಬಡಾಕಿಚಾಬ್ (ಒಡಿಶಾ):- ಇಲ್ಲಿನ ಸ್ಥಳೀಯ ಬುಡಕಟ್ಟು ಮಹಿಳೆಯರು ಸಾರ್ವಜನಿಕ ಬಳಕೆಯ ಭೂಮಿಯನ್ನು ಗುರುತಿಸಿ, 10 ಹೆಕ್ಟೇರ್ ಪಾಳುಭೂಮಿಯಲ್ಲಿ 16,000 ಕ್ಕೂ ಹೆಚ್ಚು ಮರಗಳನ್ನು ನೆಡುವ ಮೂಲಕ ಅರಣ್ಯಗಳನ್ನು ಮರುಸೃಷ್ಟಿಸಿದ್ದಾರೆ.
    • ಗರ್ಹಿ (ಬಿಹಾರ):- ನೀರಿನ ಅಭಾವ, ಹಠಾತ್ ಪ್ರವಾಹ ಮತ್ತು ಮಣ್ಣಿನ ಸವೆತವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಈ ಗ್ರಾಮದಲ್ಲಿ 45 ಮಣ್ಣಿನ ತಡೆ ಅಣೆಕಟ್ಟುಗಳನ್ನು (ಚೆಕ್ ಡ್ಯಾಮ್‌ಗಳು), 90 ಕಲ್ಲಿನ ತಡೆ ಅಣೆಕಟ್ಟುಗಳು ಮತ್ತು ಹೊಂಡಗಳನ್ನು ನಿರ್ಮಿಸಲಾಗಿದೆ.
    • ಕೋಲಾರ (ಕರ್ನಾಟಕ):- ಈ ಭಾಗದಲ್ಲಿ ಕೆರೆಗಳು ಮತ್ತು ಅಂತರ್ಜಲವನ್ನು ಪುನರುಜ್ಜೀವನಗೊಳಿಸಲಾಗಿದೆ, ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಲಾಗಿದೆ ಹಾಗೂ ಹವಾಮಾನ-ಸ್ಥಿತಿಸ್ಥಾಪಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗಿದೆ.

    ರಕ್ತಚಂದನ (Red Sanders)

    ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ದಕ್ಷಿಣ ಆಂಧ್ರಪ್ರದೇಶದ ಜನನಿಬಿಡ ತಿರುಪತಿ ಯಾತ್ರಾ ಮಾರ್ಗವು ರಕ್ತಚಂದನ ಕಳ್ಳಸಾಗಣೆಯನ್ನು ಮತ್ತಷ್ಟು ಸುಲಭಗೊಳಿಸಿದೆ ಎಂದು ವರದಿಗಳು ತಿಳಿಸಿವೆ.

    ರಕ್ತಚಂದನದ ಬಗ್ಗೆ:

    • ವೈಜ್ಞಾನಿಕ ಹೆಸರು:- ಟೆರೋಕಾರ್ಪಸ್ ಸ್ಯಾಂಟಲಿನಸ್
    • ಸ್ಥಳೀಯ ಪ್ರಭೇದ:- ಈ ಮರಗಳು ದಕ್ಷಿಣ ಆಂಧ್ರಪ್ರದೇಶದ ಕೇವಲ 3 ಜಿಲ್ಲೆಗಳಲ್ಲಿ (ಚಿತ್ತೂರು, ನೆಲ್ಲೂರು ಮತ್ತು ವೈಎಸ್‌ಆರ್ ಕಡಪ) ಮಾತ್ರ ಕಂಡುಬರುವ ವಿಶಿಷ್ಟ ಸ್ಥಳೀಯ ಪ್ರಭೇದವಾಗಿವೆ.
    • ಅತಿದೊಡ್ಡ ಮೀಸಲು ಪ್ರದೇಶ:- ರಕ್ತಚಂದನದ ಅತಿದೊಡ್ಡ ಮೀಸಲು ಪ್ರದೇಶವು ಪೂರ್ವ ಘಟ್ಟಗಳ ಭಾಗವಾಗಿರುವ ಹಾಗೂ ಸುಮಾರು 4,755 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ಶೇಷಾಚಲಂ ಜೀವಗೋಳ ಮೀಸಲು ಪ್ರದೇಶದಲ್ಲಿದೆ.
    • ಬೆಳವಣಿಗೆ:- ಇದು ಅತ್ಯಂತ ನಿಧಾನವಾಗಿ ಬೆಳೆಯುವ ಸಸ್ಯ ಪ್ರಭೇದವಾಗಿದ್ದು, ಪೂರ್ಣ ಪ್ರಮಾಣದಲ್ಲಿ ಪ್ರಬುದ್ಧ ಹಂತವನ್ನು ತಲುಪಲು 25 ರಿಂದ 40 ವರ್ಷಗಳ ದೀರ್ಘ ಕಾಲಾವಧಿಯನ್ನು ತೆಗೆದುಕೊಳ್ಳುತ್ತದೆ.
    • ಸಂರಕ್ಷಣಾ ಸ್ಥಾನಮಾನ:
    • IUCN ಕೆಂಪು ಪಟ್ಟಿಯಲ್ಲಿ:- ‘ಅಳಿವಿನಂಚಿನಲ್ಲಿರುವ ಪ್ರಭೇದ’ (EN).
    • CITES ಒಪ್ಪಂದದ ಅಡಿಯಲ್ಲಿ ಇದನ್ನು ಸೇರಿಸಲಾಗಿದೆ.
    • 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಈ ಪ್ರಭೇದಕ್ಕೆ ಕಾನೂನುಬದ್ಧ ರಕ್ಷಣೆಯನ್ನು ಒದಗಿಸಲಾಗಿದೆ.

    ಇಂಡಿಯಾ ಎಐ (AI) ಇಂಪ್ಯಾಕ್ಟ್ ಶೃಂಗಸಭೆ, 2026

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ನವದೆಹಲಿಯಲ್ಲಿ  ‘ಇಂಡಿಯಾ ಎಐ (AI) ಇಂಪ್ಯಾಕ್ಟ್ ಶೃಂಗಸಭೆ 2026’ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು.

    ಎಐ ಶೃಂಗಸಭೆಗಳ ಹಿನ್ನೆಲೆ:

    • 2023 ಬ್ಲೆಚ್ಲೆ ಪಾರ್ಕ್ ಶೃಂಗಸಭೆ (ಬ್ರಿಟನ್):- ವಿಶ್ವದ ಮೊಟ್ಟಮೊದಲ ಎಐ ಶೃಂಗಸಭೆಯು ಬ್ರಿಟನ್‌ನ ಬ್ಲೆಚ್ಲೆ ಪಾರ್ಕ್‌ನಲ್ಲಿ ಜರುಗಿತು. ಇದು ಕೃತಕ ಬುದ್ಧಿಮತ್ತೆಯ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿತ್ತು. ಎಐ ತಂತ್ರಜ್ಞಾನದ ಭವಿಷ್ಯದ ಅಪಾಯಗಳ ಕುರಿತು ಚರ್ಚಿಸಲು ಜಾಗತಿಕ ತಜ್ಞರನ್ನು ಒಟ್ಟುಗೂಡಿಸಿದ ಈ ಸಭೆಯು, ಪ್ರಸಿದ್ಧ ‘ಬ್ಲೆಚ್ಲೆ ಘೋಷಣೆ’ಯನ್ನು ಹೊರಡಿಸಲು ಕಾರಣವಾಯಿತು.
    • 2024 ಸಿಯೋಲ್ ಶೃಂಗಸಭೆ (ದಕ್ಷಿಣ ಕೊರಿಯಾ):- ಮೇ 2024 ರಲ್ಲಿ ಸಿಯೋಲ್‌ನಲ್ಲಿ ಎರಡನೇ ಶೃಂಗಸಭೆಯನ್ನು ಆಯೋಜಿಸಲಾಗಿತ್ತು. ಇದು ಬ್ಲೆಚ್ಲೆ ಪಾರ್ಕ್ ಸಭೆಯ ಚರ್ಚೆಗಳನ್ನು ಮುಂದುವರಿಸಿದ್ದಲ್ಲದೆ, ಎಐ ಸುರಕ್ಷತೆಯ ಜೊತೆಗೆ ನಾವೀನ್ಯತೆ ಮತ್ತು ಸರ್ವರ ಒಳಗೊಳ್ಳುವಿಕೆಗೂ ಆದ್ಯತೆ ನೀಡಿತು.
    • 2025 ಎಐ ಆಕ್ಷನ್ ಶೃಂಗಸಭೆ (ಪ್ಯಾರಿಸ್, ಫ್ರಾನ್ಸ್): ಫೆಬ್ರವರಿ 2025 ರಲ್ಲಿ, ಪ್ಯಾರಿಸ್‌ನ ಗ್ರ್ಯಾಂಡ್ ಪಲೈಸ್‌ನಲ್ಲಿ ಈ ಶೃಂಗಸಭೆ ನಡೆಯಿತು. ಫ್ರಾನ್ಸ್ ಮತ್ತು ಭಾರತವು ಜಂಟಿಯಾಗಿ ಇದರ ಸಹ-ಅಧ್ಯಕ್ಷತೆಯನ್ನು ವಹಿಸಿದ್ದವು.
    • ‘ಇಂಡಿಯಾ ಎಐ (AI) ಇಂಪ್ಯಾಕ್ಟ್ ಶೃಂಗಸಭೆ, 2026’ (ನವದೆಹಲಿ):- ಈ ಸರಣಿಯ ಅತ್ಯಂತ ಪ್ರಮುಖ ಹಾಗೂ ಮಹತ್ವದ ಶೃಂಗಸಭೆಯು ಫೆಬ್ರವರಿ 2026 ರಲ್ಲಿ ಭಾರತದಲ್ಲಿ ನಡೆಯಿತು.

    ‘ಇಂಡಿಯಾ ಎಐ (AI) ಇಂಪ್ಯಾಕ್ಟ್ ಶೃಂಗಸಭೆ, 2026’ ರ ಬಗ್ಗೆ:

    • ಆಯೋಜಕರು:- ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಈ ಶೃಂಗಸಭೆಯ ಆತಿಥ್ಯ ವಹಿಸಿತ್ತು.
    • ಇದು ‘ಜಾಗತಿಕ ದಕ್ಷಿಣ’ ರಾಷ್ಟ್ರಗಳ ವಲಯದಲ್ಲಿ ಆಯೋಜಿಸಲಾದ ಮೊಟ್ಟಮೊದಲ ಜಾಗತಿಕ ಎಐ ಶೃಂಗಸಭೆಯಾಗಿದೆ.
    • ಮೂರು ಸೂತ್ರಗಳು:- ‘ಜನರು, ಗ್ರಹ ಮತ್ತು ಪ್ರಗತಿ’ ಎಂಬ 3 ಮೂಲಭೂತ ಆಧಾರಸ್ತಂಭಗಳನ್ನು ಈ ಶೃಂಗಸಭೆಯಲ್ಲಿ ‘ಸೂತ್ರಗಳು’ ಎಂದು ವ್ಯಾಖ್ಯಾನಿಸಲಾಗಿದೆ. ಸಾಮೂಹಿಕ ಕಲ್ಯಾಣಕ್ಕಾಗಿ ಬಹುಪಕ್ಷೀಯ ಸಹಕಾರದೊಂದಿಗೆ ಕೃತಕ ಬುದ್ಧಿಮತ್ತೆಯನ್ನು ಹೇಗೆ ಸಕಾರಾತ್ಮಕವಾಗಿ ಬಳಸಿಕೊಳ್ಳಬಹುದು ಎಂಬುದನ್ನು ಇವು ಸಾರುತ್ತವೆ.

    ಶೃಂಗಸಭೆಯ ಪ್ರಮುಖ ಫಲಿತಾಂಶಗಳು:

    • ನವದೆಹಲಿ ಘೋಷಣೆ:- ಕೃತಕ ಬುದ್ಧಿಮತ್ತೆಯ ಪ್ರಜಾಸತ್ತಾತ್ಮಕೀಕರಣದ ಮೇಲೆ ಕೇಂದ್ರೀಕರಿಸಿದ ಈ ಘೋಷಣೆಗೆ ಅಮೆರಿಕ, ಚೀನಾ ಮತ್ತು ಫ್ರಾನ್ಸ್ ಸೇರಿದಂತೆ ಒಟ್ಟು 89 ದೇಶಗಳು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳು ಸಹಿ ಹಾಕಿವೆ. ಇದೊಂದು ಕಾನೂನುಬದ್ಧವಾಗಿ ಬದ್ಧವಾಗಿಲ್ಲದ ಒಪ್ಪಂದವಾಗಿದ್ದು “ಸರ್ವಜನ ಹಿತಾಯ, ಸರ್ವಜನ ಸುಖಾಯ” (ಎಲ್ಲರ ಕಲ್ಯಾಣ, ಎಲ್ಲರ ಸಂತೋಷ) ಎಂಬ ತತ್ವದಡಿ ಕಾರ್ಯನಿರ್ವಹಿಸುತ್ತದೆ.
    • ಮಾನವ್ (MANAV) ಆಡಳಿತ ಚೌಕಟ್ಟು:- ಭಾರತವು ‘ಮಾನವ್’ ಎಂಬ ವಿನೂತನ ಎಐ ಆಡಳಿತ ಚೌಕಟ್ಟನ್ನು ಅನಾವರಣಗೊಳಿಸಿತು. ಇದು ನೈತಿಕ ವ್ಯವಸ್ಥೆ, ಹೊಣೆಗಾರಿಕೆಯ ಆಡಳಿತ, ರಾಷ್ಟ್ರೀಯ ಸಾರ್ವಭೌಮತ್ವ, ಸರ್ವರಿಗೂ ಲಭ್ಯತೆ ಮತ್ತು ಒಳಗೊಳ್ಳುವಿಕೆ ಹಾಗೂ ಮಾನ್ಯವಾದ ಮತ್ತು ಕಾನೂನುಬದ್ಧ ಆಡಳಿತವನ್ನು ಪ್ರತಿನಿಧಿಸುತ್ತದೆ.
    • ಪ್ಯಾಕ್ಸ್ ಸಿಲಿಕಾ ಉಪಕ್ರಮ:- ಅರೆವಾಹಕಗಳು (ಸೆಮಿಕಂಡಕ್ಟರ್‌ಗಳು), ಸುಧಾರಿತ ಹಾರ್ಡ್‌ವೇರ್ ಮತ್ತು ನಿರ್ಣಾಯಕ ಖನಿಜಗಳ ನಿರಂತರ ಪೂರೈಕೆ ಸರಪಳಿಯನ್ನು ಭದ್ರಪಡಿಸುವ ಗುರಿ ಹೊಂದಿರುವ ಅಮೆರಿಕ ನೇತೃತ್ವದ ಈ ಮೈತ್ರಿಕೂಟಕ್ಕೆ ಭಾರತವು ಅಧಿಕೃತವಾಗಿ ಸೇರ್ಪಡೆಗೊಂಡಿತು.
    • ನವದೆಹಲಿ ಫ್ರಾಂಟಿಯರ್ ಎಐ ಬದ್ಧತೆಗಳು:- ವಿವಿಧ ಭಾಷೆಗಳು ಮತ್ತು ಸಂಸ್ಕೃತಿಗಳಾದ್ಯಂತ, ವಿಶೇಷವಾಗಿ ಜಾಗತಿಕ ದಕ್ಷಿಣದ ರಾಷ್ಟ್ರಗಳಿಗಾಗಿ ಎಐ ವ್ಯವಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಜಾಗತಿಕ ತಂತ್ರಜ್ಞಾನ ದೈತ್ಯ ಸಂಸ್ಥೆಗಳು (ಗೂಗಲ್, ಓಪನ್‌ ಎಐ, ಮೈಕ್ರೋಸಾಫ್ಟ್, ಆಂಥ್ರೋಪಿಕ್) ಮಾಡಿಕೊಂಡಿರುವ ಸ್ವಯಂಪ್ರೇರಿತ ಒಪ್ಪಂದ ಇದಾಗಿದೆ.

    ತಾಂತ್ರಿಕ ಮತ್ತು ಸಾಮಾಜಿಕ ಕೊಡುಗೆಗಳು:

    • ದೇಶೀಯ ಸಾರ್ವಭೌಮ ಎಐ:- ಶೃಂಗಸಭೆಯಲ್ಲಿ “ಮೇಕ್ ಇನ್ ಇಂಡಿಯಾ” ಅಭಿಯಾನದಡಿ ಅಭಿವೃದ್ಧಿಪಡಿಸಲಾದ ಹಲವು ಬೃಹತ್ ಭಾಷಾ ಮಾದರಿಗಳನ್ನು (LLMs) ಬಿಡುಗಡೆ ಮಾಡಲಾಯಿತು.
      • ಸರ್ವಮ್ ಎಐ (Sarvam AI):- ಭಾರತೀಯ ದತ್ತಾಂಶಗಳ ಆಧಾರದ ಮೇಲೆ ತರಬೇತಿ ಪಡೆದ ಬಹು-ಶತಕೋಟಿ ನಿಯತಾಂಕಗಳ ‘ಓಪನ್ ಸೋರ್ಸ್’ (ಮುಕ್ತ ಮೂಲ) ಮಾದರಿಗಳನ್ನು ಈ ಸಂಸ್ಥೆಯು ಅನಾವರಣಗೊಳಿಸಿದೆ.
      • ಭಾರತ್‌ಜೆನ್ (BharatGen):- ಇದು 17 ಶತಕೋಟಿ ನಿಯತಾಂಕಗಳನ್ನು ಒಳಗೊಂಡಿರುವ ಅತ್ಯಾಧುನಿಕ ಬಹುಭಾಷಾ ತಳಹದಿಯ ಮಾದರಿಯಾಗಿದೆ.
      • ಜ್ಞಾನಿ.ಎಐ (Gnani.ai):- ಈ ಸಂಸ್ಥೆಯು 12 ಭಾರತೀಯ ಭಾಷೆಗಳಿಗೆ ಬೆಂಬಲ ಒದಗಿಸುವ ಬಹುಭಾಷಾ ಧ್ವನಿ ಮಾದರಿಯನ್ನು ಬಿಡುಗಡೆ ಮಾಡಿದೆ.
    • ವಲಯವಾರು ಪ್ರಭಾವ:- ಕೃಷಿ ವಲಯದಲ್ಲಿ ‘ಕಿಸಾನ್ ಇ-ಮಿತ್ರ’, ಆರೋಗ್ಯ ರೋಗನಿರ್ಣಯದಲ್ಲಿ ‘ಕ್ಯೂರ್.ಎಐ’ ಮತ್ತು ನೈಜ-ಸಮಯದ ಭಾಷಾಂತರಕ್ಕಾಗಿ ‘ಭಾಷಿಣಿ’ ವೇದಿಕೆಗಳಂತಹ ಜನಪರ ಎಐ ಅನ್ವಯಿಕೆಗಳನ್ನು ಪ್ರದರ್ಶಿಸಲಾಯಿತು.

    ಕಾರ್ಯತಂತ್ರದ ಚೌಕಟ್ಟು: ಸೂತ್ರಗಳು ಮತ್ತು ಚಕ್ರಗಳು:

    ಈ ಶೃಂಗಸಭೆಯ ರೂಪುರೇಷೆಯನ್ನು ಈ ಕೆಳಗಿನ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ:

    • 3 ಸೂತ್ರಗಳು (ಆಧಾರಸ್ತಂಭಗಳು):- ಜನರು, ಗ್ರಹ ಮತ್ತು ಪ್ರಗತಿ.

    7 ಚಕ್ರಗಳು (ಕಾರ್ಯಪಡೆಗಳು):- ಮಾನವ ಬಂಡವಾಳ, ಸರ್ವರ ಒಳಗೊಳ್ಳುವಿಕೆ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಎಐ, ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆ, ವಿಜ್ಞಾನ, ಸಂಪನ್ಮೂಲಗಳ ಪ್ರಜಾಸತ್ತಾತ್ಮಕೀಕರಣ ಹಾಗೂ ಆರ್ಥಿಕ ಅಭಿವೃದ್ಧಿ.

    ದೇಶೀಯವಾಗಿ ತಯಾರಿಸಲಾದ ‘ಟಿಡಿ’ (Td) ಲಸಿಕೆ

    ಆರೋಗ್ಯ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಿಮಾಚಲ ಪ್ರದೇಶದ ಕಸೌಲಿಯಲ್ಲಿರುವ ಕೇಂದ್ರೀಯ ಸಂಶೋಧನಾ ಸಂಸ್ಥೆಯಲ್ಲಿ (CRI) ದೇಶೀಯವಾಗಿ ತಯಾರಿಸಲಾದ ‘ಟೆಟನಸ್ ಮತ್ತು ವಯಸ್ಕರ ಡಿಫ್ತೀರಿಯಾ’ (Td) ಲಸಿಕೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.

    ಟೆಟನಸ್ ಮತ್ತು ವಯಸ್ಕರ ಡಿಫ್ತೀರಿಯಾ (Td) ಲಸಿಕೆ:

    • ಟಿಡಿ ಲಸಿಕೆಯು ಸಂಭಾವ್ಯ ಮಾರಣಾಂತಿಕ ಬ್ಯಾಕ್ಟೀರಿಯಾದ ಕಾಯಿಲೆಗಳಾದ ಟೆಟನಸ್ (ಧನುರ್ವಾಯು) ಮತ್ತು ಡಿಫ್ತೀರಿಯಾ (ಗಂಟಲುಮಾರಿ)ದಿಂದ ವ್ಯಕ್ತಿಗೆ ರಕ್ಷಣೆ ನೀಡುತ್ತದೆ.
    • ಇದನ್ನು ಹಿಂದಿನ ಟೆಟನಸ್ ಟಾಕ್ಸಾಯ್ಡ್ (TT) ಲಸಿಕೆಯ ಬದಲಾಗಿ ಬಳಸಲಾಗುತ್ತದೆ ಮತ್ತು ಡಿಫ್ತೀರಿಯಾ ಕಾಯಿಲೆಯನ್ನೂ ಒಳಗೊಳ್ಳುವಂತೆ ತನ್ನ ರಕ್ಷಣಾ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.
    • 2006 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು (WHO) ಟೆಟನಸ್ ಟಾಕ್ಸಾಯ್ಡ್ (TT) ಲಸಿಕೆಯಿಂದ ಟಿಡಿ (Td) ಲಸಿಕೆಗೆ ಪರಿವರ್ತನೆಗೊಳ್ಳುವಂತೆ ವಿಶ್ವದ ಎಲ್ಲಾ ದೇಶಗಳಿಗೆ ಶಿಫಾರಸು ಮಾಡಿತ್ತು.

    ಟೆಟನಸ್ (ಧನುರ್ವಾಯು):

    • ಧನುರ್ವಾಯು ಒಂದು ಅಸಾಂಕ್ರಾಮಿಕ ಸೋಂಕಾಗಿದ್ದು, ಇದು ನರಮಂಡಲದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅಲ್ಲದೆ, ಇದು ಸ್ನಾಯುಗಳ ಬಿಗಿತ ಮತ್ತು ಸೆಳೆತದಿಂದ ಉಂಟಾಗುವ ತೀವ್ರ ನೋವಿಗೆ ಕಾರಣವಾಗುತ್ತದೆ.
    • ಕಾರಣ:- ಮಣ್ಣು, ಧೂಳು ಮತ್ತು ಪ್ರಾಣಿಗಳ ಗೊಬ್ಬರದಲ್ಲಿ ಸಾಮಾನ್ಯವಾಗಿ ಕಂಡುಬರುವ ‘ಕ್ಲಾಸ್ಟ್ರಿಡಿಯಮ್ ಟೆಟಾನಿ’ ಎಂಬ ಬ್ಯಾಕ್ಟೀರಿಯಾದಿಂದ ಈ ಕಾಯಿಲೆ ಉಂಟಾಗುತ್ತದೆ.
    • ಹರಡುವಿಕೆ:- ಆಳವಾದ ಗಾಯ, ಚುಚ್ಚಿದ ಗಾಯ (ಉದಾಹರಣೆಗೆ: ತುಕ್ಕು ಹಿಡಿದ ಮೊಳೆಯ ಮೇಲೆ ಕಾಲಿಡುವುದು) ಅಥವಾ ಸುಟ್ಟ ಗಾಯಗಳಂತಹ ಚರ್ಮದ ಹಾನಿಯ ಮೂಲಕ ಈ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ದೇಹವನ್ನು ಪ್ರವೇಶಿಸುತ್ತವೆ.

    ಡಿಫ್ತೀರಿಯಾ (ಗಂಟಲುಮಾರಿ):

    • ಗಂಟಲುಮಾರಿ ಅತ್ಯಂತ ವೇಗವಾಗಿ ಹರಡುವ ಸಾಂಕ್ರಾಮಿಕ ಸೋಂಕಾಗಿದ್ದು, ಇದು ಪ್ರಾಥಮಿಕವಾಗಿ ಮೂಗು ಮತ್ತು ಗಂಟಲಿನ ಲೋಳೆಪೊರೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
    • ಬ್ಯಾಕ್ಟೀರಿಯಾ ಬಿಡುಗಡೆ ಮಾಡುವ ವಿಷಕಾರಿ ಅಂಶವು ರಕ್ತಪ್ರವಾಹದ ಮೂಲಕ ಚಲಿಸಿ ಹೃದಯ (ಮಯೋಕಾರ್ಡಿಟಿಸ್), ಮೂತ್ರಪಿಂಡಗಳು ಮತ್ತು ನರಗಳಿಗೆ ತೀವ್ರ ಹಾನಿಯನ್ನುಂಟುಮಾಡುತ್ತದೆ.
    • ಕಾರಣ:- ಈ ಕಾಯಿಲೆಯು ‘ಕೊರಿನೊಬ್ಯಾಕ್ಟೀರಿಯಮ್ ಡಿಫ್ತೀರಿಯಾ’ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ.
    • ಹರಡುವಿಕೆ:- ಕೆಮ್ಮುವಿಕೆ ಅಥವಾ ಸೀನುವಿಕೆಯ ಮೂಲಕ ಹೊರಸೂಸುವ ಉಸಿರಾಟದ ಹನಿಗಳಿಂದ ಅಥವಾ ಕಲುಷಿತ ವಸ್ತುಗಳನ್ನು ಸ್ಪರ್ಶಿಸುವ ಮೂಲಕ ಈ ರೋಗವು ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುತ್ತದೆ.