Blog

  • ಮನಾಸ್‌ಬಲ್ ಸರೋವರ | ವಿಶ್ವ ಕೃತಕ ಬುದ್ಧಿಮತ್ತೆ ಸಹಕಾರ ಸಂಸ್ಥೆ (WAICO) | ಹೂಡಿಕೆ ಸ್ನೇಹಿ ಸೂಚ್ಯಂಕ (IFI) | ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ (NCM) | ICMR i-DRONE ಉಪಕ್ರಮ  | ASW ಶಾಲೋ ವಾಟರ್ ಕ್ರಾಫ್ಟ್ ‘ಮಾಲ್ವಾನ್’ (ASW Shallow Water Craft Malvan)

    ಮನಾಸ್‌ಬಲ್ ಸರೋವರ

    ಪರಿಸರ

    ಇದೀಗ ಸುದ್ದಿಯಲ್ಲಿ:

    • ವಲಸೆ ಹಕ್ಕಿಗಳ ಆಗಮನದಿಂದ ಮನಾಸ್‌ಬಲ್ ಸರೋವರವು ಪರಿಸರ ಚೇತರಿಕೆಯ ಹಾದಿಯಲ್ಲಿದೆ ಎಂದು ಗುರುತಿಸಲಾಗಿದೆ.

    ಮನಾಸ್‌ಬಲ್ ಸರೋವರದ ಬಗ್ಗೆ:

    • ಸ್ಥಳ: ಇದು ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿದೆ.
    • ಇದು ಭಾರತದ ಅತ್ಯಂತ ಆಳವಾದ ನೈಸರ್ಗಿಕ ಸಿಹಿನೀರಿನ ಸರೋವರವಾಗಿದ್ದು, 13 ಮೀಟರ್ (43 ಅಡಿ) ಆಳವನ್ನು ಹೊಂದಿದೆ.
    • ವಿಶೇಷತೆ: ಇದನ್ನು “ಎಲ್ಲಾ ಕಾಶ್ಮೀರ ಸರೋವರಗಳ ಅತ್ಯುನ್ನತ ರತ್ನ (Supreme Gem of all Kashmir Lakes)” ಎಂದು ಕರೆಯಲಾಗುತ್ತದೆ.
    • ಅನನ್ಯತೆ: ಇದು ತನ್ನ ಶುದ್ಧ ನೀರು, ಬೇಸಿಗೆಯ ವ್ಯಾಪಕವಾಗಿ ಅರಳುವ ಕಮಲದ ಹೂವುಗಳು ಮತ್ತು ಪಕ್ಷಿ ವೀಕ್ಷಣೆಯ ಅವಕಾಶಗಳಿಗೆ ಪ್ರಸಿದ್ಧವಾಗಿದೆ.

    ಲಕ್ಷಣಗಳು:

    • ಸ್ಥಳ ಮತ್ತು ಎತ್ತರ: ಇದು 1,585 ರಿಂದ 1,600 ಮೀಟರ್ ಎತ್ತರದಲ್ಲಿರುವ ಝೇಲಂ ಕಣಿವೆಯಲ್ಲಿ ನೆಲೆಗೊಂಡಿದೆ.
    • ಇದೊಂದು ಬೆಚ್ಚಗಿನ ಮೋನೊಮಿಕ್ಟಿಕ್ ಸರೋವರ (ವರ್ಷಕ್ಕೊಮ್ಮೆ ಮಾತ್ರ ಸಂಪೂರ್ಣವಾಗಿ ಪರಿಚಲನೆಯಾಗುತ್ತದೆ) ಆಗಿದೆ.
    • ಸ್ಥಳ ಸ್ವರೂಪ: ಈ ಸರೋವರವು ಪೂರ್ವದಲ್ಲಿ ಬಾಲದರ್ ಪರ್ವತಗಳು, ಉತ್ತರದಲ್ಲಿ ಕರೇವಾ ಪ್ರಸ್ಥಭೂಮಿ ಮತ್ತು ದಕ್ಷಿಣದಲ್ಲಿ ಅಹತುಂಗ್ ಬೆಟ್ಟಗಳಿಂದ ಆವೃತವಾಗಿದೆ.
    • ಜೀವವೈವಿಧ್ಯತೆ: ಇದು ಕಾಶ್ಮೀರದಲ್ಲಿ ವಲಸೆ ಬರುವ ಜಲಚರ ಪಕ್ಷಿಗಳಿಗೆ ಒಂದು ಪ್ರಮುಖ ನೈಸರ್ಗಿಕ ಆಶ್ರಯತಾಣವಾಗಿದ್ದು, ಮಲ್ಲಾರ್ಡ್‌ಗಳು, ಬಿಳಿ ತಲೆಯ ಬಾತುಕೋಳಿಗಳು ಮತ್ತು ಗೋಲ್ಡನ್ ಈಗಲ್‌ಗಳನ್ನು (Golden Eagles) ಒಳಗೊಂಡಂತೆ ಹಲವಾರುವ ಪ್ರಭೇದಗಳನ್ನು ಬೆಂಬಲಿಸುತ್ತದೆ.
    • ಆರ್ಥಿಕ ಮೌಲ್ಯ: ಇದು ಮೀನುಗಾರಿಕೆ ಮತ್ತು ಸ್ಥಳೀಯವಾಗಿ ‘ನಾದ್ರು’ ಎಂದು ಕರೆಯಲ್ಪಡುವ ಕಮಲದ ಬೇರುಗಳ ಕೊಯ್ಲಿನ ಮೂಲಕ ಸ್ಥಳೀಯರ ಜೀವನೋಪಾಯವನ್ನು ಬೆಂಬಲಿಸುತ್ತದೆ.

    ವಿಶ್ವ ಕೃತಕ ಬುದ್ಧಿಮತ್ತೆ ಸಹಕಾರ ಸಂಸ್ಥೆ (WAICO)

    ಅಂತರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ಚೀನಾ 2026 ರ ವಿಶ್ವ ಕೃತಕ ಬುದ್ಧಿಮತ್ತೆ ಸಮ್ಮೇಳನದಲ್ಲಿ, ಶಾಂಘೈನಲ್ಲಿ ವಿಶ್ವ ಕೃತಕ ಬುದ್ಧಿಮತ್ತೆ ಸಹಕಾರ ಸಂಸ್ಥೆಯನ್ನು (WAICO) ಅಧಿಕೃತವಾಗಿ ಪ್ರಾರಂಭಿಸಿದೆ.

    ವೈಕೊ (WAICO) ಸಂಸ್ಥೆಯ ಬಗ್ಗೆ:

    • ಇದು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ಕೃತಕ ಬುದ್ಧಿಮತ್ತೆ (AI) ಸಹಕಾರ, ಸಾಮರ್ಥ್ಯ ವೃದ್ಧಿ ಮತ್ತು ಹಂಚಿಕೆಯ ಆಡಳಿತ ಮಾನದಂಡಗಳಿಗಾಗಿ ಸ್ಥಾಪಿಸಲಾದ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ.
    • ಪ್ರಧಾನ ಕಚೇರಿ: ಇದರ ಪ್ರಧಾನ ಕಚೇರಿ ಶಾಂಘೈನಲ್ಲಿದೆ.
    • ಅನನ್ಯತೆ: ಜಾಗತಿಕ ದಕ್ಷಿಣದ (Global South) ರಾಷ್ಟ್ರಗಳಿಗಾಗಿಯೇ ನೇರವಾಗಿ ಗುರಿಯಿಟ್ಟುಕೊಂಡು ಸ್ಥಾಪಿಸಲಾದ ಈ ರೀತಿಯ ಮೊದಲ ಸ್ಥಾಯಿ ಸಂಸ್ಥೆ ಇದಾಗಿದೆ.
    • ಸದಸ್ಯರು: ಇದು 29 ರಾಷ್ಟ್ರಗಳನ್ನು ಸದಸ್ಯರನ್ನಾಗಿ ಹೊಂದಿದೆ.

    ಪ್ರಾಮುಖ್ಯತೆ:

    • ಚೀನಾ 5,000 ಕೃತಕ ಬುದ್ಧಿಮತ್ತೆ (AI) ತರಬೇತಿ ಅವಕಾಶಗಳನ್ನು ಒದಗಿಸಲಿದೆ ಮತ್ತು ASEAN, ಆಫ್ರಿಕನ್ ಒಕ್ಕೂಟ, BRICS, ಶಾಂಘೈ ಸಹಕಾರ ಸಂಸ್ಥೆ (SCO) ಹಾಗೂ ಅರಬ್ ರಾಷ್ಟ್ರಗಳ ಒಕ್ಕೂಟದೊಂದಿಗೆ ಜಂಟಿ AI ಸಹಕಾರ ಕೇಂದ್ರಗಳನ್ನು ಸ್ಥಾಪಿಸಲಿದೆ.
    • ಇದು ಮುಕ್ತ ಮೂಲದ(Open-source) ಕೃತಕ ಬುದ್ಧಿಮತ್ತೆ ಮಾದರಿಗಳು, ತಂತ್ರಜ್ಞಾನ ಹಂಚಿಕೆ ಮತ್ತು ಸಹಯೋಗದ AI ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.
    • ಈ ವೇದಿಕೆಯು ಜಾಗತಿಕ ದಕ್ಷಿಣದೊಂದಿಗೆ ಜಾಗತಿಕ AI ಆಡಳಿತದಲ್ಲಿ ಚೀನಾದ ಪ್ರಭಾವವನ್ನು ಬಲಪಡಿಸುತ್ತದೆ.

    ಹೂಡಿಕೆ ಸ್ನೇಹಿ ಸೂಚ್ಯಂಕ (IFI)

    ವರದಿ ಮತ್ತು ಸೂಚ್ಯಂಕ

    ಇದೀಗ ಸುದ್ದಿಯಲ್ಲಿ:

    • ನೀತಿ (NITI) ಆಯೋಗವು “ಹೂಡಿಕೆ ಸ್ನೇಹಿ ಸೂಚ್ಯಂಕ (IFI- Investment Friendliness Index)” ಎಂಬ ವರದಿಯನ್ನು ಬಿಡುಗಡೆ ಮಾಡಿದೆ.

    ಹೂಡಿಕೆ ಸ್ನೇಹಿ ಸೂಚ್ಯಂಕ (IFI)ದ ಬಗ್ಗೆ:

    • ಉದ್ದೇಶ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೂಡಿಕೆಗಳಿಗೆ ಅನುಕೂಲಕರವಾದ ವಾತಾವರಣವನ್ನು ಎಷ್ಟು ಪರಿಣಾಮಕಾರಿಯಾಗಿ ಸೃಷ್ಟಿಸುತ್ತವೆ, ಸಕ್ರಿಯಗೊಳಿಸುತ್ತವೆ ಮತ್ತು ಉಳಿಸಿಕೊಳ್ಳುತ್ತವೆ ಎಂಬುದನ್ನು ಇದು ಮೌಲ್ಯಮಾಪನ ಮಾಡುತ್ತದೆ.
    • ಮಾನದಂಡಗಳು: ಇದು ಪ್ರಮುಖವಾಗಿ ಮೂಲಸೌಕರ್ಯ, ಉದ್ಯಮಸ್ನೇಹಿ ವಾತಾವರಣ, ಸಂಪನ್ಮೂಲಗಳು, ಸರ್ಕಾರಿ ನೀತಿ, ಸರಳ ನಿಯಂತ್ರಣ ವ್ಯವಸ್ಥೆ, ಸಾಂಸ್ಥಿಕ ಪರಿಸರ, ಆರ್ಥಿಕ ಆರೋಗ್ಯ ಮತ್ತು ಪರಿಸರದ ಚೇತರಿಕೆಯನ್ನು ಒಳಗೊಂಡಿದೆ.
    • ರಾಜ್ಯಗಳ ವರ್ಗೀಕರಣ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ನಾಲ್ಕು ಕಾರ್ಯಕ್ಷಮತೆಯ ವರ್ಗಗಳಾಗಿ ವಿಂಗಡಿಸಲಾಗಿದೆ:
      1. ಉನ್ನತ ಸಾಧಕ ರಾಜ್ಯಗಳು (Top Performers – 50 ಕ್ಕಿಂತ ಹೆಚ್ಚಿನ ಅಂಕಗಳು).
      2. ಮುಂಚೂಣಿಯಲ್ಲಿರುವ ರಾಜ್ಯಗಳು  (Frontrunners – 45 ರಿಂದ 50 ಅಂಕಗಳು).
      3. ಉದಯೋನ್ಮುಖ ಸಾಧಕ ರಾಜ್ಯಗಳು (Emerging Performers – 40 ರಿಂದ 45 ಕ್ಕಿಂತ ಕಡಿಮೆ ಅಂಕಗಳು).
      4. ಆಕಾಂಕ್ಷಿ ರಾಜ್ಯಗಳು (Aspiring States – 40 ಕ್ಕಿಂತ ಕಡಿಮೆ ಅಂಕಗಳು).
    • ದೊಡ್ಡ ರಾಜ್ಯಗಳ ಪೈಕಿ, ಗುಜರಾತ್ ಮೊದಲ ಸ್ಥಾನವನ್ನು ಪಡೆದಿದ್ದರೆ, ಮಹಾರಾಷ್ಟ್ರ ಮತ್ತು ತಮಿಳುನಾಡು ನಂತರದ ಸ್ಥಾನಗಳಲ್ಲಿವೆ. ಇವು ಸಮಗ್ರ ಸೂಚ್ಯಂಕದಲ್ಲೂ ಮೊದಲ ಮೂರು ಸ್ಥಾನ ಪಡೆದ ರಾಜ್ಯಗಳಾಗಿವೆ.
    • ಗುಡ್ಡಗಾಡು ಮತ್ತು ಈಶಾನ್ಯ ರಾಜ್ಯಗಳ ವಿಭಾಗದಲ್ಲಿ, ಉತ್ತರಾಖಂಡ ಅತ್ಯುನ್ನತ ಶ್ರೇಣಿಯ ರಾಜ್ಯವಾಗಿ ಹೊರಹೊಮ್ಮಿದೆ, ಅಸ್ಸಾಂ ಮತ್ತು ಹಿಮಾಚಲ ಪ್ರದೇಶ ನಂತರದ ಸ್ಥಾನಗಳನ್ನು ಪಡೆದಿವೆ.
    • ನಗರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ, ಗೋವಾ ಅಗ್ರಸ್ಥಾನದಲ್ಲಿದೆ, ದೆಹಲಿ ಮತ್ತು ಚಂಡೀಗಢ ನಂತರದ ಸ್ಥಾನಗಳಲ್ಲಿವೆ.

    ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ (NCM)

    ರಾಜಕೀಯ

    ಇದೀಗ ಸುದ್ದಿಯಲ್ಲಿ:

    • ಕೇಂದ್ರ ಸರ್ಕಾರವು ಹರ್ಜಿತ್ ಸಿಂಗ್ ಗ್ರೆವಾಲ್ ಅವರನ್ನು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ (NCM) ಅಧ್ಯಕ್ಷರನ್ನಾಗಿ ನೇಮಿಸಿದೆ.

    ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ (NCM)ದ ಬಗ್ಗೆ:

    • ಕೇಂದ್ರ ಸರ್ಕಾರವು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ 1992 ರ ಅಡಿಯಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವನ್ನು (NCM) ಸ್ಥಾಪಿಸಿದೆ.
    • ಮೊದಲ ಶಾಸನಬದ್ಧ ರಾಷ್ಟ್ರೀಯ ಆಯೋಗವನ್ನು 1993 ರಲ್ಲಿ ರಚಿಸಲಾಯಿತು.
    • ಆರಂಭದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು ಮತ್ತು ಝೋರಾಸ್ಟ್ರಿಯನ್ನರು (ಪಾರ್ಸಿಗಳು) ಸೇರಿದಂತೆ ಐದು ಧಾರ್ಮಿಕ ಸಮುದಾಯಗಳನ್ನು ಕೇಂದ್ರ ಸರ್ಕಾರವು ಅಲ್ಪಸಂಖ್ಯಾತ ಸಮುದಾಯಗಳೆಂದು ಅಧಿಸೂಚಿಸಿತ್ತು.
    • 2014 ರಲ್ಲಿ, ಜೈನರನ್ನು ಕೂಡ ಮತ್ತೊಂದು ಅಲ್ಪಸಂಖ್ಯಾತ ಸಮುದಾಯವೆಂದು ಅಧಿಸೂಚಿಸಲಾಯಿತು.
    • ಸಂಯೋಜನೆ: ಈ ಆಯೋಗವು ಒಬ್ಬ ಅಧ್ಯಕ್ಷರು, ಒಬ್ಬ ಉಪಾಧ್ಯಕ್ಷರು ಮತ್ತು ಐದು ಜನ ಸದಸ್ಯರನ್ನು ಒಳಗೊಂಡಿದೆ.
    • ಉದ್ದೇಶ: ಭಾರತದ ಸಂವಿಧಾನ ಹಾಗೂ ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳು ರೂಪಿಸಿದ ಕಾನೂನುಗಳಲ್ಲಿ ಒದಗಿಸಲಾದ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ರಕ್ಷಿಸಲು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

    ICMR i-DRONE ಉಪಕ್ರಮ 

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಇತ್ತೀಚೆಗೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ICMR) ತನ್ನ ಐ-ಡ್ರೋನ್ ಉಪಕ್ರಮದ ಅಡಿಯಲ್ಲಿ, ದೂರದ ಪ್ರದೇಶಗಳಲ್ಲಿ ಕ್ಷಯರೋಗ (TB) ರೋಗನಿರ್ಣಯದ ಪ್ರವೇಶವನ್ನು ಸುಧಾರಿಸಲು ಡ್ರೋನ್ ಆಧಾರಿತ ಸಾರಿಗೆಯ ಮೂಲಕ ಕಫದ ಮಾದರಿಗಳನ್ನು ಯಶಸ್ವಿಯಾಗಿ ಸಾಗಿಸಿ ಪ್ರದರ್ಶಿಸಿದೆ.

    ಐ-ಡ್ರೋನ್ (i-DRONE) ಉಪಕ್ರಮದ ಬಗ್ಗೆ:

    • ಪೂರ್ಣ ರೂಪ: ICMR’s Drone Response and Outreach for North East (i-DRONE).
    • ಇದನ್ನು 2021 ರಲ್ಲಿ ಪ್ರಾರಂಭಿಸಲಾಯಿತು.
    • ಉದ್ದೇಶ: ಇದು ಮಣಿಪುರ ಮತ್ತು ನಾಗಾಲ್ಯಾಂಡ್‌ನ ದೂರದ ಪ್ರದೇಶಗಳಿಗೆ ಲಸಿಕೆಗಳು ಮತ್ತು ವೈದ್ಯಕೀಯ ಸರಬರಾಜುಗಳನ್ನು ತಲುಪಿಸಲು ಡ್ರೋನ್‌ಗಳ ಬಳಕೆಯನ್ನು ಮೌಲ್ಯಮಾಪನ ಮಾಡುವ ಉದ್ದೇಶವನ್ನು ಹೊಂದಿದೆ.
    • ಐ-ಡ್ರೋನ್ ಯೋಜನೆಯು ಕ್ಷಯರೋಗದ ರೋಗನಿರ್ಣಯಕ್ಕಾಗಿ ಕಫದ ಮಾದರಿಗಳನ್ನು ಸಾಗಿಸಲು, ತೆಲಂಗಾಣದಲ್ಲಿ 60 ಉಪ-ಕೇಂದ್ರಗಳು, 11 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಾಲ್ಕು TB ಘಟಕಗಳನ್ನು ಸಂಪರ್ಕಿಸುವ ಹಬ್ ಮತ್ತು ಸ್ಪೋಕ್ (hub and spoke) ಡ್ರೋನ್ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸಿದೆ.
    • ಫಲಿತಾಂಶಗಳು: ರೋಗನಿರ್ಣಯಕ್ಕೆ ಬೇಕಾಗುವ ಸರಾಸರಿ ಸಮಯವನ್ನು 15 ದಿನಗಳಿಂದ 5 ದಿನಗಳಿಗೆ ಇಳಿಸಲಾಗಿದೆ.
    • ರೋಗಿಗಳ ಜೇಬಿನಿಂದ ಭರಿಸಬೇಕಾದ ಸರಾಸರಿ ವೆಚ್ಚವು (OOPE) ₹9,451 ರಿಂದ ಸುಮಾರು ₹91 ಕ್ಕೆ ಇಳಿದಿದೆ ಹಾಗೂ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಪ್ರಯಾಣದ ವೆಚ್ಚ ಶೂನ್ಯವಾಗಿದೆ.

    ASW ಶಾಲೋ ವಾಟರ್ ಕ್ರಾಫ್ಟ್ ‘ಮಾಲ್ವಾನ್’ (ASW Shallow Water Craft Malvan)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಭಾರತೀಯ ನೌಕಾದಳವು ತನ್ನ ಎರಡನೇ ‘ಮಾಹೆ-ವರ್ಗದ’ ಜಲಾಂತರ್ಗಾಮಿ ವಿರೋಧಿ ಕದನ ನೌಕೆಯಾದ (ASW-SWC) ‘ಮಾಲ್ವಾನ್’ (Malvan) ಅನ್ನು ಸೇವೆಗೆ ನಿಯೋಜಿಸಲು ಸಜ್ಜಾಗಿದೆ.

    ASW ಶಾಲೋ ವಾಟರ್ ಕ್ರಾಫ್ಟ್ ‘ಮಾಲ್ವಾನ್ ಬಗ್ಗೆ:

    • ಈ ಸಮರನೌಕೆಯನ್ನು ಕೊಚ್ಚಿಯ ‘ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್’ (CSL) ನಿರ್ಮಿಸಿದೆ.
    • ಮಾಲ್ವಾನ್ ಯುದ್ಧನೌಕೆಯು ಶೇಕಡಾ 80 ಕ್ಕಿಂತ ಹೆಚ್ಚು ದೇಶಿಯ ಸಾಮಗ್ರಿಗಳನ್ನು ಬಳಸಿ ನಿರ್ಮಿಸಲಾಗಿದೆ.
    • ಇದು ‘ಆತ್ಮನಿರ್ಭರ್ ಭಾರತ್’ ಉಪಕ್ರಮದ ಅಡಿಯಲ್ಲಿ ಯುದ್ಧನೌಕೆಯ ವಿನ್ಯಾಸ, ನಿರ್ಮಾಣ ಮತ್ತು ತಂತ್ರಜ್ಞಾನ ಏಕೀಕರಣದಲ್ಲಿ ಭಾರತದ ಬೆಳೆಯುತ್ತಿರುವ ಸ್ವಾವಲಂಬನೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
    • ಕಾರ್ಯ: ಕರಾವಳಿ ಮತ್ತು ಆಳವಿಲ್ಲದ ನೀರಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸುವುದು ಹಾಗೂ ನೌಕಾದಳದ ಜಲಾಂತರ್ಗಾಮಿ ವಿರೋಧಿ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವುದು ಇದರ ಪ್ರಮುಖ ಕಾರ್ಯವಾಗಿದೆ.
    • ಪ್ರಸ್ತುತ ಹಳೆಯದಾಗುತ್ತಿರುವ ‘ಅಭಯ್-ವರ್ಗದ’ ಯುದ್ಧನೌಕೆ ಬದಲಿಗೆ ಈ ಹೊಸ ‘ಮಾಹೆ- ವರ್ಗದ’ ASW-SWC ನೌಕೆಗಳನ್ನು ನೌಕಾಪಡೆಗೆ ಸೇರ್ಪಡೆಗೊಳಿಸಲಾಗುತ್ತಿದೆ.
  • ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 18 ಜುಲೈ, 2026

    ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 18 ಜುಲೈ, 2026

  • ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

    ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

    1. ಈ ಕೆಳಗಿನವುಗಳಲ್ಲಿ ಭಾರತದ ಅತಿ ಆಳವಾದ ನೈಸರ್ಗಿಕ ಸಿಹಿನೀರಿನ ಸರೋವರ ಯಾವುದು?

    A) ದಾಲ್ ಸರೋವರ

    B) ವುಲರ್ ಸರೋವರ

    C) ಮಾನಸ್‌ಬಾಲ್ ಸರೋವರ

    D) ಲೋಕ್ಟಾಕ್ ಸರೋವರ

    ಉತ್ತರ: C) ಮಾನಸ್‌ಬಾಲ್ ಸರೋವರ

     

    2. ಇತ್ತೀಚೆಗೆ ಚೀನಾ ಪ್ರಾರಂಭಿಸಿದ ‘ವಿಶ್ವ ಕೃತಕ ಬುದ್ಧಿಮತ್ತೆ ಸಹಕಾರ ಸಂಸ್ಥೆಯ’ (WAICO) ಪ್ರಧಾನ ಕಛೇರಿಯು ಎಲ್ಲಿದೆ?

    A) ಬೀಜಿಂಗ್

    B) ಶೆನ್‌ಜೆನ್

    C) ಶಾಂಘೈ

    D) ಹ್ಯಾಂಗ್‌ಝೌ

    ಉತ್ತರ: C) ಶಾಂಘೈ

     

    3. 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (2026) ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದ ಚಿತ್ರ ಯಾವುದು?

    A) ಕಲ್ಕಿ 2898 AD 

    B) ಅಮರನ್

    C) ಆರ್ಟಿಕಲ್ 370

    D) ಕ್ಯಾಪ್ಟನ್ ಮಿಲ್ಲರ್

    ಉತ್ತರ: C) ಆರ್ಟಿಕಲ್ 370

     

    4. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಕಾರ್ತಿಕ್ ಆರ್ಯನ್ ಮತ್ತು ಮಮ್ಮುಟ್ಟಿ ಅವರು ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
    2. ಆರ್ಟಿಕಲ್ 370 ಚಿತ್ರಕ್ಕಾಗಿ ಯಾಮಿ ಗೌತಮ್ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

    ಸರಿಯಾದ ಉತ್ತರವನ್ನು ಆರಿಸಿ:

    A) 1 ಮಾತ್ರ

    B) 2 ಮಾತ್ರ

    C) 1 ಮತ್ತು 2 ಎರಡೂ

    D) 1 ಮತ್ತು 2 ಎರಡೂ ಅಲ್ಲ

    ಉತ್ತರ: C) 1 ಮತ್ತು 2 ಎರಡೂ

  • ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 17 ಜುಲೈ, 2026

    ರಾಷ್ಟ್ರ, ಅಂತರರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳು ಮತ್ತು ಇತರೆ ವಿಷಯಗಳ ಕುರಿತ ರಸಪ್ರಶ್ನೆ – 17 ಜುಲೈ, 2026

  • ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

    ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

    1. ಇತ್ತೀಚೆಗೆ 2029 ರವರೆಗೆ ವಿಸ್ತರಿಸಲಾದ ಮಿಸ್ಟಿ (MISHTI) ಯೋಜನೆಯು ಪ್ರಾಥಮಿಕವಾಗಿ ಯಾವುದಕ್ಕೆ ಸಂಬಂಧಿಸಿದೆ?

    A) ಹಿಮಾಲಯದ ಪರಿಸರ ವ್ಯವಸ್ಥೆಯ ಮರುಸ್ಥಾಪನೆ

    B) ಮ್ಯಾಂಗ್ರೋವ್ (ಕಾಂಡ್ಲಾ ವನ) ಸಂರಕ್ಷಣೆ ಮತ್ತು ಜೀವನೋಪಾಯ ಸೃಷ್ಟಿ

    C) ಮಧ್ಯ ಭಾರತದಲ್ಲಿ ಹುಲ್ಲುಗಾವಲು ಮರುಸ್ಥಾಪನೆ

    D) ಹವಳ ದಿಣ್ಣೆಗಳ ಸಂರಕ್ಷಣೆ

    ಉತ್ತರ: B) ಮ್ಯಾಂಗ್ರೋವ್ (ಕಾಂಡ್ಲಾ ವನ) ಸಂರಕ್ಷಣೆ ಮತ್ತು ಜೀವನೋಪಾಯ ಸೃಷ್ಟಿ

     

    2. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ICAR ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ.
    2. ಕೇಂದ್ರ ಕೃಷಿ ಸಚಿವರು ICAR ಸೊಸೈಟಿಯ ಪದನಿಮಿತ್ತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ.

    ಸರಿಯಾದ ಉತ್ತರವನ್ನು ಆರಿಸಿ:

    A) 1 ಮಾತ್ರ

    B) 2 ಮಾತ್ರ

    C) 1 ಮತ್ತು 2 ಎರಡೂ

    D) 1 ಮತ್ತು 2 ಯಾವುದೂ ಅಲ್ಲ

    ಉತ್ತರ: C) 1 ಮತ್ತು 2 ಎರಡೂ

     

    3. ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲು ಯಾವ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತದೆ?

    A) ದೆಹಲಿ – ಆಗ್ರಾ

    B) ಜಿಂದ್ – ಸೋನಿಪತ್

    C) ಚೆನ್ನೈ – ಬೆಂಗಳೂರು

    D) ಜೈಪುರ – ಜೋಧ್‌ಪುರ

    ಉತ್ತರ: B) ಜಿಂದ್ – ಸೋನಿಪತ್

     

    4. ‘ಕೆನ್-ಬೆಟ್ವಾ ನದಿ ಜೋಡಣೆ ಯೋಜನೆ’ಯಿಂದಾಗಿ ಭಾಗಶಃ ಮುಳುಗಡೆಯಾಗುವ ಸಾಧ್ಯತೆ ಇರುವ ಸಂರಕ್ಷಿತ ಪ್ರದೇಶ ಯಾವುದು?

    A) ಬಾಂಧವ್‌ಗಢ ರಾಷ್ಟ್ರೀಯ ಉದ್ಯಾನವನ

    B) ಕುನ್ಹೊ ರಾಷ್ಟ್ರೀಯ ಉದ್ಯಾನವನ

    C) ಪನ್ನಾ ರಾಷ್ಟ್ರೀಯ ಉದ್ಯಾನವನ 

    D) ಸಾತ್ಪುರ ರಾಷ್ಟ್ರೀಯ ಉದ್ಯಾನವನ

    ಉತ್ತರ: C) ಪನ್ನಾ ರಾಷ್ಟ್ರೀಯ ಉದ್ಯಾನವನ 

  • ರಾಷ್ಟ್ರೀಯ ‘CAMPA’ ದ 7ನೇ ಆಡಳಿತ ಮಂಡಳಿ ಸಭೆ | ಸೈಕ್ಲೋಸ್ಪೊರಿಯಾಸಿಸ್ (Cyclosporiasis) | ICAR ನ 98ನೇ ಸಂಸ್ಥಾಪನಾ ದಿನ

    ರಾಷ್ಟ್ರೀಯ ‘CAMPA’ ದ 7ನೇ ಆಡಳಿತ ಮಂಡಳಿ ಸಭೆ

    ಪರಿಸರ

    ಇದೀಗ ಸುದ್ದಿಯಲ್ಲಿ:

    • ಇತ್ತೀಚಿಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರೀಯ ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (CAMPA)ದ 7ನೇ ಆಡಳಿತ ಮಂಡಳಿ ಸಭೆಯು ಸಾಂಪ್ರದಾಯಿಕ ಪರಿಹಾರ ಅರಣ್ಯೀಕರಣದಿಂದ ಭೂದೃಶ್ಯ-ಆಧಾರಿತ ಪರಿಸರ ಮರುಸ್ಥಾಪನೆಯತ್ತ ಬದಲಾವಣೆಯನ್ನು ಗುರುತಿಸಿದೆ.

    ಸಭೆಯ ಫಲಿತಾಂಶಗಳು:

    • ಸುಮಾರು 15,000 ಪವಿತ್ರ ತೋಪುಗಳನ್ನು (ಆಸ್ತಾ ವನಗಳು – Aastha Vans) ಸಂರಕ್ಷಿಸಲು ₹3,000 ಕೋಟಿ ಆರಂಭಿಕ ನಿಧಿಯೊಂದಿಗೆ (2026-31) ಆಸ್ತಾ ವನ್ ಸಂರಕ್ಷಣ್ ಯೋಜನೆಯನ್ನು (AVSY) ವನ್ನು ಅನುಮೋದಿಸಲಾಗಿದೆ.
    • ಮಿಸ್ಟಿ (MISHTI – Mangrove Initiative for Shoreline Habitats and Tangible Incomes) ಯೋಜನೆಯನ್ನು 2029 ರವರೆಗೆ ಮೂರು ವರ್ಷಗಳ ಕಾಲ ವಿಸ್ತರಿಸಲಾಗಿದ್ದು, ಹೆಚ್ಚುವರಿಯಾಗಿ ₹500 ಕೋಟಿ ಸೇರಿಸುವುದರೊಂದಿಗೆ ಒಟ್ಟು ಅನುದಾನವನ್ನು ₹600 ಕೋಟಿಗೆ ಹೆಚ್ಚಿಸಲಾಗಿದೆ.
    • ನಾಲ್ಕು ವನ್ಯಜೀವಿ ಚೇತರಿಕೆ ಕಾರ್ಯಕ್ರಮಗಳನ್ನು ಅನುಮೋದಿಸಲಾಗಿದೆ.
    • ಉದ್ದೇಶ – ವೈಜ್ಞಾನಿಕ ಮೇಲ್ವಿಚಾರಣೆ, ಬೇಟೆ ತಡೆಗಟ್ಟುವ ಕ್ರಮಗಳು ಮತ್ತು ಆವಾಸಸ್ಥಾನ ಮರುಸ್ಥಾಪನೆಯನ್ನು ಬಲಪಡಿಸುವುದು:
    • ಗಂಗಾ ನದಿ ಡಾಲ್ಫಿನ್‌ಗಳು: ಪ್ರಮುಖ ಸಿಹಿನೀರಿನ ನದಿ ವ್ಯವಸ್ಥೆಗಳ ಮೇಲೆ ಕೇಂದ್ರೀಕರಿಸಿದ ಚೇತರಿಕೆ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ.
    • ಪ್ರಾಜೆಕ್ಟ್ ಸ್ನೋ ಲೆಪರ್ಡ್ (ಹಿಮಚಿರತೆ) ಹಂತ-II:  ಹಿಮಾಲಯದಲ್ಲಿ 2ನೇ ರಾಷ್ಟ್ರವ್ಯಾಪಿ ಜನಸಂಖ್ಯಾ ಅಂದಾಜು ಕಾರ್ಯಾಚರಣೆಯನ್ನು ಇದು ಒಳಗೊಂಡಿದೆ.
    • ಭಾರತೀಯ ಘೇಂಡಾಮೃಗ: ಆವಾಸಸ್ಥಾನ ರಕ್ಷಣೆ ಮತ್ತು ಬೇಟೆ ತಡೆಗಟ್ಟುವಿಕೆ ಜಾರಿಗಾಗಿ ಸಂರಕ್ಷಣಾ ಯೋಜನೆಯನ್ನು ರೂಪಿಸಲಾಗಿದೆ.
    • ಕಾಡು ಕೋಣ: ಉಳಿದಿರುವ ಸಂಖ್ಯೆಯನ್ನು (ಸಂತತಿಯನ್ನು) ಭದ್ರಪಡಿಸಲು ವೈಜ್ಞಾನಿಕ ಆವಾಸಸ್ಥಾನ ನಿರ್ವಹಣೆಯನ್ನು ಕೈಗೊಳ್ಳಲಾಗುವುದು.
    • ಸಂಗೈ (Sangai – ಹುಬ್ಬು-ಕೊಂಬಿನ ಜಿಂಕೆ): ಸಂರಕ್ಷಣೆಗಾಗಿ ನಿರಂತರ ಆರ್ಥಿಕ ಮತ್ತು ಕಾರ್ಯಾಚರಣೆಯ ಬೆಂಬಲವನ್ನು ಒದಗಿಸಲಾಗುವುದು.

    ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (CAMPA)

    • ಇದನ್ನು 2016 ರ ಪರಿಹಾರ ಅರಣ್ಯೀಕರಣ ನಿಧಿ ಕಾಯ್ದೆಯಡಿ (2018 ರಲ್ಲಿ ಜಾರಿಗೆ ಬಂದಿತು) ಸ್ಥಾಪಿಸಲಾಗಿದೆ.
    • ಉದ್ದೇಶ – ಅರಣ್ಯೇತರ ಉದ್ದೇಶಗಳಿಗೆ ಪರಿವರ್ತಿಸಲಾದ ಅರಣ್ಯ ಭೂಮಿಯ ಪರಿಸರ ಪರಿಹಾರಕ್ಕಾಗಿ ನಿಧಿಗಳನ್ನು ಸಂಗ್ರಹಿಸುವುದು ಮತ್ತು ನಿರ್ವಹಿಸುವುದು.
    • ಮೂಲ: ಖರ್ಚಾಗದ ಅರಣ್ಯೀಕರಣ ನಿಧಿಗಳನ್ನು ನಿರ್ವಹಿಸಲು 2006 ರ ಆದೇಶದ ಮೂಲಕ ಟಿ.ಎನ್. ಗೋದಾವರ್ಮನ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ತಾತ್ಕಾಲಿಕ ‘ಕ್ಯಾಂಪಾ(CAMPA)’ವನ್ನು ರಚಿಸಿತು.
    • ಎರಡು ಹಂತಗಳು: 

    (1) ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರ ನೇತೃತ್ವದ ‘ರಾಷ್ಟ್ರೀಯ ಕ್ಯಾಂಪಾ ಪ್ರಾಧಿಕಾರ’ವು ನೀತಿಯನ್ನು ರೂಪಿಸುತ್ತದೆ, ಹಾಗೂ 

    (2) ‘ರಾಜ್ಯ ಕ್ಯಾಂಪಾ ಪ್ರಾಧಿಕಾರಗಳು’ ಕ್ಷೇತ್ರ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತವೆ.

    • ಹೊಣೆಗಾರಿಕೆ: ಅರಣ್ಯ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಬಳಸುವ ಸಂಸ್ಥೆಗಳು ಪರ್ಯಾಯ ಭೂಮಿಯನ್ನು ಒದಗಿಸಬೇಕು, ಪರಿಹಾರ ಅರಣ್ಯೀಕರಣಕ್ಕೆ ಧನಸಹಾಯ ಮಾಡಬೇಕು ಮತ್ತು ಕಳೆದುಕೊಂಡ ಅರಣ್ಯ ಪರಿಸರ ವ್ಯವಸ್ಥೆಯ ನಿವ್ವಳ ಪ್ರಸ್ತುತ ಮೌಲ್ಯವನ್ನು (NPV) ಪಾವತಿಸಬೇಕು.
    • ನಿಧಿಯ ಬಳಕೆ: ಕೃತಕ ಮತ್ತು ನೈಸರ್ಗಿಕ ಪುನರುತ್ಪಾದನೆ, ವನ್ಯಜೀವಿ ನಿರ್ವಹಣೆ, ಜಲಾನಯನ ಪ್ರದೇಶದ ನಿರ್ವಹಣೆ, ಸಂರಕ್ಷಿತ ಪ್ರದೇಶಗಳಿಂದ ಗ್ರಾಮಗಳ ಸ್ಥಳಾಂತರ ಮತ್ತು ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆಗಾಗಿ ಈ ನಿಧಿಯನ್ನು ಬಳಸಲಾಗುತ್ತದೆ.

    ಸೈಕ್ಲೋಸ್ಪೊರಿಯಾಸಿಸ್ (Cyclosporiasis)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿ:

    • ಇತ್ತೀಚಿಗೆ ಅಮೆರಿಕ (USA)ದಲ್ಲಿ ಸೈಕ್ಲೋಸ್ಪೊರಿಯಾಸಿಸ್ ಕಾಯಿಲೆಯ ವ್ಯಾಪಕ ಹರಡುವಿಕೆಯ ಬಗ್ಗೆ ವರದಿಯಾಗುತ್ತಿದೆ.

    ಸೈಕ್ಲೋಸ್ಪೊರಿಯಾಸಿಸ್ ಬಗ್ಗೆ: 

    • ಕಾರಣವಾಗುವ ರೋಗಕಾರಕ: ಸೈಕ್ಲೋಸ್ಪೊರಿಯಾಸಿಸ್ ಎಂಬುದು ಸೂಕ್ಷ್ಮದರ್ಶಕೀಯ, ಏಕಕೋಶೀಯ ಪ್ರೋಟೋಜೋವಾ ಪರಾವಲಂಬಿಯಾದ ಸೈಕ್ಲೋಸ್ಪೊರಾ ಕಯೆಟಾನೆನ್ಸಿಸ್ (Cyclospora cayetanensis) ನಿಂದ ಉಂಟಾಗುವ ಆಹಾರಜನ್ಯ ಕರುಳಿನ ಕಾಯಿಲೆಯಾಗಿದೆ.
    • ಹರಡುವಿಕೆ: ಇದು ಕಲುಷಿತ ಆಹಾರ ಅಥವಾ ನೀರಿನ ಮೂಲಕ ಕಟ್ಟುನಿಟ್ಟಾಗಿ ಮಲ-ಬಾಯಿ ಸಂಪರ್ಕ ಮಾರ್ಗದಲ್ಲಿ ಹರಡುತ್ತದೆ.
    • ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಹರಡುವುದಿಲ್ಲ: ವಿಸರ್ಜಿಸಲ್ಪಟ್ಟ ಪರಾವಲಂಬಿ ಮೊಟ್ಟೆಗಳು ಪ್ರಬುದ್ಧವಾಗಲು ಮತ್ತು ಸಾಂಕ್ರಾಮಿಕವಾಗಲು ಪರಿಸರದಲ್ಲಿ ದಿನಗಳಿಂದ ವಾರಗಳವರೆಗೆ ಸಮಯ ತೆಗೆದುಕೊಳ್ಳುತ್ತವೆ.
    • ಆತಿಥೇಯ ವ್ಯಾಪ್ತಿ : ಮಾನವರು ಮಾತ್ರ ಈ ರೋಗಾಣುವಿನ ತಿಳಿದಿರುವ ಆತಿಥೇಯರಾಗಿದ್ದಾರೆ.
    • ರೋಗಲಕ್ಷಣಗಳು: ತೀವ್ರವಾದ ಮತ್ತು ವಿಪರೀತವಾದ ನೀರಿನಂಶದ ಅತಿಸಾರ, ಆಯಾಸ, ಸ್ನಾಯು ಸೆಳೆತ ಮತ್ತು ತೂಕ ನಷ್ಟಗಳು ಇದರ ಪ್ರಮುಖ ಲಕ್ಷಣಗಳಾಗಿವೆ.
    • ಹೆಚ್ಚಿನ ಅಪಾಯವಿರುವ ಗುಂಪುಗಳು: ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು, ವಯಸ್ಸಾದವರು ಮತ್ತು ಚಿಕ್ಕ ಮಕ್ಕಳು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
    • ರೋಗನಿರ್ಣಯ: ದಿನನಿತ್ಯದ ಮಲ ಪರೀಕ್ಷೆಗಳಲ್ಲಿ ಇದನ್ನು ಪತ್ತೆಹಚ್ಚಲು ಸಾಧ್ಯವಿಲ್ಲ; ಇದಕ್ಕೆ ವಿಶೇಷ ಸ್ಟೈನಿಂಗ್ (special staining), UV ಫ್ಲೋರೊಸೆನ್ಸ್ ಮೈಕ್ರೋಸ್ಕೋಪಿ ಅಥವಾ PCR ಪರೀಕ್ಷೆಯ ಅಗತ್ಯವಿರುತ್ತದೆ.
    • ಚಿಕಿತ್ಸೆ: ಇದನ್ನು ಆಂಟಿಬಯೋಟಿಕ್ (ಸೂಕ್ಷ್ಮಜೀವಿ ನಿರೋಧಕ) ಟ್ರೈಮೆಥೋಪ್ರಿಮ್-ಸಲ್ಫಮೆಥೋಕ್ಸಜೋಲ್ (trimethoprim-sulfamethoxazole – TMP-SMX) ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲ.

    ICAR ನ 98ನೇ ಸಂಸ್ಥಾಪನಾ ದಿನ

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿ:

    • ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) 98ನೇ ಸಂಸ್ಥಾಪನಾ ದಿನದ ಅಂಗವಾಗಿ, ಕೇಂದ್ರ ಕೃಷಿ ಸಚಿವಾಲಯವು ವಿಕಸಿತ್ ಭಾರತ್ 2047ರ ಪ್ರಮುಖ ಆಧಾರಸ್ತಂಭವಾಗಿರುವ “ಅಭಿವೃದ್ಧಿ ಹೊಂದಿದ ಕೃಷಿ ಮತ್ತು ಸಮೃದ್ಧ ರೈತರು” ಮಾರ್ಗಸೂಚಿಯನ್ನು ಅನಾವರಣಗೊಳಿಸಿದೆ.

    ನಿರೀಕ್ಷಿತ ಫಲಶ್ರುತಿಗಳು: 

    • 100 ಹವಾಮಾನ-ಸ್ಮಾರ್ಟ್ ಗ್ರಾಮಗಳು: ಹವಾಮಾನ- ಚೇತರಿಕೆ ಕೃಷಿ, ಜಲ ಸಂರಕ್ಷಣೆ ಮತ್ತು ವಿಪತ್ತು-ಕಡಿತದ ಮಾದರಿಗಳ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ನೀಡಲು, ICAR ನ ಶತಮಾನೋತ್ಸವದ ಮೊದಲು ಕನಿಷ್ಠ 100 ಗ್ರಾಮಗಳನ್ನು ಮಾದರಿ ಹಳ್ಳಿಗಳಾಗಿ ಅಭಿವೃದ್ಧಿಪಡಿಸಲಾಗುವುದು.
    • ಒಂದು ಸಂಸ್ಥೆ-ಒಂದು ಮಹಾನ್ ಆವಿಷ್ಕಾರ (One Institute-One Grand Innovation): ಪ್ರತಿಯೊಂದು ICAR ಸಂಸ್ಥೆಯು ಮುಂದಿನ ಎರಡು ವರ್ಷಗಳೊಳಗೆ ಕನಿಷ್ಠ ಒಂದು ಪ್ರಮುಖ ತಾಂತ್ರಿಕ ಆವಿಷ್ಕಾರ, ಹೊಸ ಲಸಿಕೆ ಅಥವಾ ಹೊಸ ಬೆಳೆ ತಳಿಯನ್ನು ಅಭಿವೃದ್ಧಿಪಡಿಸಿ ರೈತರಿಗೆ ತಲುಪಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
    • ಮಿಷನ್ ICAR-100: ಬೃಹತ್ ಪ್ರಮಾಣದ ಕೃಷಿ ಪ್ರಾತ್ಯಕ್ಷಿಕೆಗಳಿಗಾಗಿ ಕೃಷಿ ವಿಜ್ಞಾನ ಕೇಂದ್ರಗಳನ್ನು (KVKs) ನಾವೀನ್ಯತಾ ಕೇಂದ್ರಗಳಾಗಿ ಪರಿವರ್ತಿಸಲಾಗುವುದು ಹಾಗೂ ಪ್ರತಿಯೊಂದು KVK ಯು ಕನಿಷ್ಠ 100 ಗ್ರಾಮಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡುವ ಗುರಿಯನ್ನು ಹೊಂದಿದೆ.
    • ICAR ಮುಕ್ತ ಡಿಜಿಟಲ್ ಜ್ಞಾನ ವೇದಿಕೆ: ಸ್ಮಾರ್ಟ್‌ಫೋನ್‌ಗಳ ಮೂಲಕ ರೈತರಿಗೆ ಉಚಿತ ಬೆಳೆ ಸಲಹೆಗಳು, ಮಣ್ಣು-ಪರೀಕ್ಷಾ ವರದಿಗಳು ಮತ್ತು ಕೃಷಿ ಮಾರ್ಗದರ್ಶಿ ವೀಡಿಯೊಗಳನ್ನು ಒದಗಿಸುವ ಮೊಬೈಲ್-ಆಧಾರಿತ ಮುಕ್ತ ಜ್ಞಾನ ವೇದಿಕೆಯನ್ನು ರೂಪಿಸಲಾಗುವುದು.

    ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR)

    • 1929 ರಲ್ಲಿ ಸ್ಥಾಪನೆಯಾದ (ಮೂಲತಃ ಇಂಪೀರಿಯಲ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್) ಇದು ಭಾರತದಲ್ಲಿ ಕೃಷಿ ಸಂಶೋಧನೆ ಮತ್ತು ಶಿಕ್ಷಣವನ್ನು ಸಮನ್ವಯಗೊಳಿಸುವ ಅತ್ಯುನ್ನತ ಸಂಸ್ಥೆಯಾಗಿದೆ.
    • ಇದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ.
    • ಕೇಂದ್ರ ಕೃಷಿ ಸಚಿವರು ICAR ಸಂಸ್ಥೆಯ ಪದನಿಮಿತ್ತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ ಮತ್ತು ಕೃಷಿ ಖಾತೆ ರಾಜ್ಯ ಸಚಿವರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ.

  • ಕರ್ನಾಟಕ ಮತ್ತು ಗ್ರೂಪ್ ಸಿ ಪ್ರಚಲಿತ ವಿದ್ಯಮಾನಗಳು – 17, ಜುಲೈ 2026

    ಮಿಲಿಟರಿ ಸಮರಾಭ್ಯಾಸಗಳು

    ಭಾರತೀಯ ನೌಕಾಸೇನೆಯಿಂದ ‘ಆಪರೇಷನ್ ಸದರ್ನ್ ರೆಡಿನೆಸ್ 26-2’ ಆತಿಥ್ಯ

    ಇದೀಗ ಸುದ್ದಿಯಲ್ಲಿ: 

    • ಬಹುರಾಷ್ಟ್ರೀಯ ಕರಾವಳಿ ಭದ್ರತಾ ತರಬೇತಿಯಾದ ಆಪರೇಷನ್ ಸದರ್ನ್ ರೆಡಿನೆಸ್ 26-2 ಅನ್ನು ಭಾರತೀಯ ನೌಕಾಸೇನೆಯು ಕೇರಳದ ಕೊಚ್ಚಿಯಲ್ಲಿರುವ ದಕ್ಷಿಣ ನೌಕಾ ಕಮಾಂಡ್‌ನಲ್ಲಿ 2026 ಜುಲೈ 20-23 ರವರೆಗೆ ಆಯೋಜಿಸಲಿದೆ.

    ಪ್ರಮುಖ ಅಂಶಗಳು:

    • ಸಂಘಟನಾ ಚೌಕಟ್ಟು: ಈ ತರಬೇತಿಯನ್ನು ಕಂಬೈನ್ಡ್ ಮ್ಯಾರಿಟೈಮ್ ಫೋರ್ಸಸ್ (CMF) ಸಹಭಾಗಿತ್ವದಲ್ಲಿ, ಭಾರತೀಯ ನೌಕಾಸೇನೆಯ ನೇತೃತ್ವದ CMF ನ ವಿಶೇಷ ತರಬೇತಿ ಪಡೆಯಾದ ಕಂಬೈನ್ಡ್ ಟಾಸ್ಕ್ ಫೋರ್ಸ್ 154 (CTF 154) ಅಡಿಯಲ್ಲಿ ನಡೆಸಲಾಗುತ್ತದೆ.
    • ಜಾಗತಿಕ ಭಾಗವಹಿಸುವಿಕೆ: ಅಮೆರಿಕ (USA), ಬ್ರಿಟನ್ (UK), ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿ 25 ಕ್ಕೂ ಹೆಚ್ಚು CMF ರಾಷ್ಟ್ರಗಳು ಭಾಗವಹಿಸಲಿದ್ದು, ಕರಾವಳಿ ಜಾಗೃತಿ (MDA), ಮಾದಕವಸ್ತು ನಿರೋಧ ಮತ್ತು ಕರಾವಳಿ ಕಾನೂನು ವಿಷಯಗಳಲ್ಲಿ ಸುಧಾರಿತ ತರಬೇತಿ ನೀಡಲಾಗುತ್ತದೆ.
    • ಭಾರತದ ನೇತೃತ್ವ: ಭಾರತವು 2026 ಫೆಬ್ರವರಿಯಲ್ಲಿ ಮೊದಲ ಬಾರಿಗೆ CTF 154 ರ ಕಮಾಂಡ್ ವಹಿಸಿಕೊಂಡಿದ್ದು, ಪ್ರಸ್ತುತ ಕಮೋಡೋರ್ ಮಿಲಿಂದ್ ಎಮ್. ಮೊಕಾಶಿ ಇದರ ನೇತೃತ್ವ ವಹಿಸಿದ್ದಾರೆ.
    • CMF ಹಿನ್ನೆಲೆ: ಬಹ್ರೇನ್‌ನಲ್ಲಿ ಪ್ರಧಾನ ಕಛೇರಿ ಹೊಂದಿರುವ ಇದು 47 ರಾಷ್ಟ್ರಗಳ ನೌಕಾ ಒಕ್ಕೂಟವಾಗಿದ್ದು, 3.2 ಮಿಲಿಯನ್ ಚದರ ಮೈಲಿ ಅಂತರರಾಷ್ಟ್ರೀಯ ಜಲಪ್ರದೇಶದ ಭದ್ರತೆಯನ್ನು ನಿರ್ವಹಿಸುತ್ತದೆ (ಭಾರತವು 2023 ರಲ್ಲಿ ಇದರ ಪೂರ್ಣ ಸದಸ್ಯತ್ವ ಪಡೆದಿದೆ).

    ವಿಜ್ಞಾನ ಮತ್ತು ತಂತ್ರಜ್ಞಾನ

    1. ಸ್ಕೈರೂಟ್ ಸಂಸ್ಥೆಯಿಂದ ‘ವಿಕ್ರಮ್-1’ ರಾಕೆಟ್ ಉಡಾವಣೆಗೆ ಸಿದ್ಧತೆ

    • ಹೈದರಾಬಾದ್ ಮೂಲದ ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್-ಅಪ್ ಸಂಸ್ಥೆಯಾದ ‘ಸ್ಕೈರೂಟ್ ಏರೋಸ್ಪೇಸ್’ (Skyroot Aerospace), ಭಾರತದ ಮೊಟ್ಟಮೊದಲ ಖಾಸಗಿ ನಿರ್ಮಿತ ಕಕ್ಷೀಯ ಶ್ರೇಣಿಯ (Orbital-class) ರಾಕೆಟ್ ಆದ ವಿಕ್ರಮ್-1  ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 2026 ಜುಲೈ 18 ರಂದು ಉಡಾವಣೆ ಮಾಡಲಿದೆ.
    • ಈ ಐತಿಹಾಸಿಕ ಯೋಜನೆಗೆ ಮಿಷನ್ ಆಗಮನ್ ಎಂದು ಹೆಸರಿಸಲಾಗಿದ್ದು, ಇಸ್ರೋ (ISRO) ಸಂಸ್ಥೆಯ ರಾಕೆಟ್ ಕಾರ್ಯಕ್ರಮದ ಸಹಾಯವಿಲ್ಲದೆ, ಭಾರತದ ಖಾಸಗಿ ಕಂಪನಿಯೊಂದು ತನ್ನದೇ ಆದ ಸ್ವದೇಶಿ ಉಡಾವಣಾ ವಾಹನದ ಮೂಲಕ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಪ್ರಯತ್ನಿಸುತ್ತಿರುವ ಮೊದಲ ಸಾಹಸ ಇದಾಗಿದೆ.
    • ಈ ಉಡಾವಣಾ ದಿನಾಂಕವು 1980 ಜುಲೈ 18 ರಂದು ಭಾರತವು ಕೈಗೊಂಡ ಅತ್ಯಂತ ಮೊದಲ ಯಶಸ್ವಿ ಪ್ರಾಯೋಗಿಕ SLV-3 ರಾಕೆಟ್ ಉಡಾವಣೆಯ 46ನೇ ವಾರ್ಷಿಕೋತ್ಸವದ ದಿನದಂದೇ ನಿಗದಿಯಾಗಿದೆ.

     

    2. ‘ಪ್ರಾಜೆಕ್ಟ್ ಜೈಂಟ್’ : ಅಟ್ಲಾಂಟಿಕ್ ಸಾಗರ ಪ್ರವಾಹಗಳ ಅಧ್ಯಯನ

    • ಬ್ರಿಟಿಷ್ ಅಂಟಾರ್ಕ್ಟಿಕ್ ಸರ್ವೆ (BAS) ಸಂಸ್ಥೆಯು ಜಾಗತಿಕ ಹವಾಮಾನ ಸಂಶೋಧನೆಯ ಮಹತ್ವದ ಜಂಟಿ ಉಪಕ್ರಮವಾದ ಪ್ರಾಜೆಕ್ಟ್ ಜೈಂಟ್ (Project GIANT – Greenland Ice Sheet to Atlantic Tipping Points) ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ.
    • ಇದು ಬ್ರಿಟಿಷ್ ಅಂಟಾರ್ಕ್ಟಿಕ್ ಸರ್ವೆ (BAS) ಸಂಸ್ಥೆಯ ನೇತೃತ್ವದಲ್ಲಿ ಮುಂದಿನ ಐದು ವರ್ಷಗಳ ಕಾಲ (2025-2030) ನಡೆಯಲಿರುವ ಅತ್ಯಂತ ಪ್ರಮುಖ ಅಂತರರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಸಹಭಾಗಿತ್ವದ ಯೋಜನೆಯಾಗಿದೆ.
    • ಮುಖ್ಯ ಉದ್ದೇಶ: ಗ್ರೀನ್‌ಲ್ಯಾಂಡ್‌ನ ಹಿಮನದಿಗಳು ವೇಗವಾಗಿ ಕರಗುತ್ತಿರುವುದು ಮತ್ತು ಅದರ ಪರಿಣಾಮವಾಗಿ ಸಾಗರಕ್ಕೆ ಸೇರುತ್ತಿರುವ ಸಿಹಿನೀರಿನ ಒಳಹರಿವು ಅತ್ಯಂತ ಪ್ರಮುಖವಾದ ಅಟ್ಲಾಂಟಿಕ್ ಸಾಗರದ ಪ್ರವಾಹಗಳ (ಉದಾಹರಣೆಗೆ AMOC ಪ್ರವಾಹ) ಸಂಪೂರ್ಣ ಪತನಕ್ಕೆ ಹೇಗೆ ಕಾರಣವಾಗಬಹುದು ಎಂಬುದನ್ನು ಈ ಯೋಜನೆ ತನಿಖೆ ಮಾಡಲಿದೆ.
  • ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

    ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ಬಹು ಆಯ್ಕೆಯ ಪ್ರಶ್ನೆಗಳ ಸಂಗ್ರಹ

    1. ಅಬತ್ಸಹಾಯೇಶ್ವರರ್ ದೇವಾಲಯವು ಪ್ರಾಥಮಿಕವಾಗಿ ಯಾವ ರಾಜವಂಶದೊಂದಿಗೆ ಸಂಬಂಧ ಹೊಂದಿದೆ?

    A) ಪಲ್ಲವ

    B) ಪಾಂಡ್ಯ

    C) ವಿಜಯನಗರ

    D) ಚೋಳ

    ಉತ್ತರ: D) ಚೋಳ

     

    2. ಪುರಿಯಲ್ಲಿರುವ ಜಗನ್ನಾಥ ದೇವಾಲಯವನ್ನು ನಿರ್ಮಿಸಿದವರು ಯಾರು?

    A) ಒಂದನೇ ನರಸಿಂಹದೇವ

    B) ಕಪಿಲೇಂದ್ರ ದೇವ

    C) ಅನಂತವರ್ಮನ್ ಚೋಡಗಂಗ ದೇವ

    D) ಅಶೋಕ

    ಉತ್ತರ: C) ಅನಂತವರ್ಮನ್ ಚೋಡಗಂಗ ದೇವ

     

    3. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM) ಅನ್ನು ಯಾವ ಸಚಿವಾಲಯವು ಪ್ರಾರಂಭಿಸಿದೆ?

    A) ಬೃಹತ್ ಕೈಗಾರಿಕೆಗಳ ಸಚಿವಾಲಯ

    B) ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

    C) ನೀತಿ ಆಯೋಗ (NITI Aayog)

    D) ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY)

    ಉತ್ತರ: D) ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY)

     

    4. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ದಕ್ಷಿಣ ಆಫ್ರಿಕಾವು 2010 ರಲ್ಲಿ ಬ್ರಿಕ್ಸ್ (BRICS) ಒಕ್ಕೂಟಕ್ಕೆ ಸೇರ್ಪಡೆಗೊಂಡಿತು.
    2. ಬ್ರಿಕ್ಸ್ (BRICS) ನ ಪ್ರಧಾನ ಕಛೇರಿಯು ಶಾಂಘೈನಲ್ಲಿ ಕೇಂದ್ರೀಕೃತವಾಗಿದೆ.

    A) 1 ಮಾತ್ರ

    B) 2 ಮಾತ್ರ

    C) 1 ಮತ್ತು 2 ಎರಡೂ

    D) 1 ಮತ್ತು 2 ಯಾವುದೂ ಅಲ್ಲ

    ಉತ್ತರ: C) 1 ಮತ್ತು 2 ಎರಡೂ

  • ಅಬತ್ಸಹಾಯೇಶ್ವರರ್ ದೇವಾಲಯ | ಜಗನ್ನಾಥ ರಥಯಾತ್ರೆ | ಮೊಬೈಲ್ ಫೋನ್ ಉತ್ಪಾದನಾ ಯೋಜನೆ (MPMS) | ಸೆಮಿಕಾನ್ 2.0 | 12ನೇ ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆ

    ಅಬತ್ಸಹಾಯೇಶ್ವರರ್ ದೇವಾಲಯ

    ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ:

    • ತಮಿಳುನಾಡಿನ ತುಕ್ಕಾಚಿಯಲ್ಲಿರುವ 12ನೇ ಶತಮಾನದ ಅಬತ್ಸಹಾಯೇಶ್ವರರ್ ದೇವಾಲಯವನ್ನು ಇತ್ತೀಚೆಗೆ ಜೀರ್ಣೋದ್ಧಾರ ಮಾಡಲಾಗಿದೆ. ಈ ದೇವಾಲಯವು ದಶಕಗಳ ಕಾಲ ನಿರ್ಲಕ್ಷ್ಯಕ್ಕೊಳಗಾಗಿತ್ತು. 

    ಅಬತ್ಸಹಾಯೇಶ್ವರರ್ ದೇವಾಲಯದ ಬಗ್ಗೆ:

    • ಈ ದೇವಾಲಯವು ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಸಮೀಪದ ತುಕ್ಕಾಚಿ ಎಂಬಲ್ಲಿದೆ.
    • ಇದು ನಂತರದ ಚೋಳರ ಕಾಲದ ಅತ್ಯಂತ ಮಹತ್ವದ ಸ್ಮಾರಕಗಳಲ್ಲಿ ಒಂದಾಗಿದ್ದು, ಇದು ಒಂದನೇ ಕುಲೋತ್ತುಂಗ ಚೋಳ ಮತ್ತು ವಿಕ್ರಮ ಚೋಳನ ಆಳ್ವಿಕೆಗೆ ನಿಕಟವಾಗಿ ಸಂಬಂಧಿಸಿದೆ.
    • ಈ ದೇವಾಲಯವನ್ನು ರಥದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಈ ಶೈಲಿಯನ್ನು ಕಾರ ಕೋವಿಲ್ ಎಂದು ಕರೆಯಲಾಗುತ್ತದೆ.
    • ಇಲ್ಲಿ ಭಗವಾನ್ ಶರಭೇಶ್ವರರ ವಿಗ್ರಹವಿದ್ದು, ಇದು ಆ ದೇವರ ಅತ್ಯಂತ ಹಳೆಯ ಚಿತ್ರಣಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.

    ದೇವಾಲಯದ ಜೀರ್ಣೋದ್ಧಾರ:

    • ದೇವಾಲಯದ ಪಾರಂಪರಿಕ ಮೌಲ್ಯವನ್ನು ಉಳಿಸಿಕೊಂಡು, ಅದರ ರಚನಾತ್ಮಕ ಭದ್ರತೆಯನ್ನು ಬಲಪಡಿಸಿದ ಪ್ರಯತ್ನಕ್ಕಾಗಿ, ಈ ಜೀರ್ಣೋದ್ಧಾರ ಯೋಜನೆಯು 2024ರ ‘ಯುನೆಸ್ಕೋ ಏಷ್ಯಾ ಪೆಸಿಫಿಕ್ ಅವಾರ್ಡ್ ಆಫ್ ಡಿಸ್ಟಿಂಕ್ಷನ್’ ಪ್ರಶಸ್ತಿಯನ್ನು ಪಡೆದುಕೊಂಡಿದೆ.
    • ಈ ಯೋಜನೆಯು ಸಾಂಪ್ರದಾಯಿಕ ದೇವಾಲಯ ನಿರ್ಮಾಣ ಪದ್ಧತಿಗಳಾದ ಸ್ಥಾಪತ್ಯ ವೇದ, ಆಗಮ ಶಾಸ್ತ್ರ ಮತ್ತು ಸುಣ್ಣದ ಗಾರೆಯ ಬಳಕೆಯನ್ನು, ಡ್ರೋನ್ ಸಮೀಕ್ಷೆ, ಡಿಜಿಟಲ್ ಮ್ಯಾಪಿಂಗ್, ಫೋಟೋಗ್ರಾಮೆಟ್ರಿ ಹಾಗೂ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಂತಹ ಆಧುನಿಕ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಿ ಜಾರಿಗೊಳಿಸಲಾಗಿದೆ.
    • ದೇವಾಲಯದ ಐತಿಹಾಸಿಕ ನೈಜತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ, ಪ್ರತಿ ಗ್ರಾನೈಟ್ ಕಲ್ಲಿನ ಬ್ಲಾಕ್‌ಗೆ ಸಂಖ್ಯೆಯನ್ನು ನೀಡಿ, ಬಿಚ್ಚಿ, ನಂತರ ಅದರ ಮೂಲ ಸ್ಥಾನದಲ್ಲೇ ಮರುಜೋಡಿಸಲಾಗಿದೆ.

    ಜಗನ್ನಾಥ ರಥಯಾತ್ರೆ

    ಕಲೆ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ:

    • ಒಡಿಶಾದ ಪುರಿಯಲ್ಲಿ ಜಗತ್ಪ್ರಸಿದ್ಧವಾದ ಭಗವಾನ್ ಜಗನ್ನಾಥನ ರಥಯಾತ್ರೆಯು ಪ್ರಾರಂಭವಾಗಿದೆ.

    ರಥಯಾತ್ರೆಯ ಬಗ್ಗೆ:

    • ಈ ರಥಯಾತ್ರೆಯನ್ನು ಗುಂಡಿಚಾ ಜಾತ್ರೆ, ಘೋಸ ಜಾತ್ರೆ ಮತ್ತು ನವದಿನ ಜಾತ್ರೆ ಎಂದೂ ಕರೆಯಲಾಗುತ್ತದೆ.
    • ಇದು ಭಗವಾನ್ ವಿಷ್ಣುವಿನ ಅವತಾರವಾದ ಭಗವಾನ್ ಜಗನ್ನಾಥನಿಗೆ ಸಮರ್ಪಿತವಾದ ಅತ್ಯಂತ ಮಹತ್ವದ ಹಿಂದೂ ಹಬ್ಬವಾಗಿದೆ.

    ಜಗನ್ನಾಥ ಪುರಿ ದೇವಾಲಯಯದ ಬಗ್ಗೆ: 

    • ಶ್ರೀ ಜಗನ್ನಾಥ ಪುರಿ ದೇವಾಲಯವು ಒಡಿಶಾ ರಾಜ್ಯದ ಅತ್ಯಂತ ಆಕರ್ಷಕ ಸ್ಮಾರಕಗಳಲ್ಲಿ ಒಂದಾಗಿದೆ.
    • ಈ ದೇವಾಲಯವನ್ನು ಸಾ.ಶ 12ನೇ ಶತಮಾನದಲ್ಲಿ ಪೂರ್ವ ಗಂಗಾ ರಾಜವಂಶದ ರಾಜನಾದ ಅನಂತವರ್ಮನ್ ಚೋಡಗಂಗ ದೇವ ನಿರ್ಮಿಸಿದನು.
    • ಜಗನ್ನಾಥ ಪುರಿ ದೇವಾಲಯವನ್ನು ‘ಯಮನಿಕಾ ತೀರ್ಥ’ ಎಂದು ಕರೆಯಲಾಗುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಭಗವಾನ್ ಕೃಷ್ಣನೆಂದು ಕರೆಯಲ್ಪಡುವ ಭಗವಾನ್ ಜಗನ್ನಾಥನ ಉಪಸ್ಥಿತಿಯಿಂದಾಗಿ ಪುರಿಯಲ್ಲಿ ಮರಣದೇವನಾದ ‘ಯಮ’ನ ಶಕ್ತಿಯು ಶೂನ್ಯಗೊಂಡಿದೆ ಎಂಬ ಪ್ರತೀತಿಯಿದೆ.
    • ಇದು ಭಾರತದ ನಾಲ್ಕು ಪ್ರಮುಖ ಧಾಮ (ಚಾರ್ ಧಾಮ್)ಗಳಲ್ಲಿ ಒಂದಾಗಿದ್ದು, ಭಾರತದ ನಾಲ್ಕು ದಿಕ್ಕುಗಳಲ್ಲಿರುವ ಪುರಿ, ದ್ವಾರಕಾ, ಬದರಿನಾಥ್ ಮತ್ತು ರಾಮೇಶ್ವರಂ ಈ ಪಟ್ಟಿಯಲ್ಲಿ ಸೇರಿವೆ.
    • ಈ ದೇವಾಲಯವನ್ನು ಈ ಹಿಂದೆ “ಶ್ವೇತ ಪಗೋಡ” ಎಂದು ಕರೆಯಲಾಗುತ್ತಿತ್ತು ಮತ್ತು ಇದು ಚಾರ್ ಧಾಮ್ ಯಾತ್ರೆಗಳ (ಬದರಿನಾಥ್, ದ್ವಾರಕಾ, ಪುರಿ, ರಾಮೇಶ್ವರಂ) ಒಂದು ಪ್ರಮುಖ ಭಾಗವಾಗಿದೆ.

    ಮೊಬೈಲ್ ಫೋನ್ ಉತ್ಪಾದನಾ ಯೋಜನೆ (MPMS)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ:

    • ಕೇಂದ್ರ ಸಚಿವ ಸಂಪುಟವು 62,500 ಕೋಟಿ ರೂ. ಗಳ ಬಜೆಟ್ ವೆಚ್ಚದೊಂದಿಗೆ ಹೊಸ ಮೊಬೈಲ್ ಫೋನ್ ಉತ್ಪಾದನಾ ಯೋಜನೆಗೆ (MPMS) ಅನುಮೋದನೆ ನೀಡಿದೆ.

    ಉದ್ದೇಶ:

    • ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು, ಬಿಡಿಭಾಗಗಳ ಸ್ಥಳೀಕರಣವನ್ನು ವಿಸ್ತರಿಸುವುದು ಹಾಗೂ ಸ್ಥಳೀಯ ಸ್ಮಾರ್ಟ್‌ಫೋನ್ ವಿನ್ಯಾಸ ಮತ್ತು ಸಂಶೋಧನೆ-ಅಭಿವೃದ್ಧಿಯನ್ನು (R&D) ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.

    ಯೋಜನೆಯ ಪ್ರಮುಖ ವಿವರಗಳು:

    • ಜಾರಿಗೊಳಿಸಿದ ಸಚಿವಾಲಯ: ಇದನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಜಾರಿಗೊಳಿಸಿದೆ.
    • ಯೋಜನೆಯ ಅವಧಿ: ಇದೊಂದು ಐದು ವರ್ಷಗಳ ಯೋಜನೆಯಾಗಿದ್ದು, 2026-27ನೇ ಆರ್ಥಿಕ ವರ್ಷದಿಂದ 2030-31ನೇ ಆರ್ಥಿಕ ವರ್ಷದವರೆಗೆ ಜಾರಿಯಲ್ಲಿರುತ್ತದೆ.
    • ಬಜೆಟ್ ವೆಚ್ಚ: ಈ ಯೋಜನೆಗೆ ಒಟ್ಟು 62,500 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ.

    ಯೋಜನೆಯ ಪ್ರಮುಖ ಲಕ್ಷಣಗಳು:

    • ಉತ್ಪಾದನೆ-ಸಂಯೋಜಿತ ಪ್ರೋತ್ಸಾಹಕಗಳು : ಈ ಯೋಜನೆಯು ಭಾರತದಲ್ಲಿ ತಯಾರಾದ ಮೊಬೈಲ್ ಫೋನ್‌ಗಳ ಅರ್ಹ ಮಾರಾಟದ ಮೇಲೆ ಪ್ರೋತ್ಸಾಹಕ ಬೆಂಬಲವನ್ನು ನೀಡುತ್ತದೆ; ಅನ್ವಯವಾಗುವ ಅರ್ಹತಾ ಮಾನದಂಡಗಳ ಆಧಾರದ ಮೇಲೆ ಪ್ರೋತ್ಸಾಹಕ ದರಗಳು 2.25% ರಿಂದ 5% ರವರೆಗೆ ಇರುತ್ತವೆ.
    • ದೇಶೀಯ ಮೌಲ್ಯವರ್ಧನೆಗೆ ಪ್ರೋತ್ಸಾಹ: ಪ್ರಮುಖ ಬಿಡಿಭಾಗಗಳು ಮತ್ತು ಉಪ-ಜೋಡಣೆಗಳನ್ನು ದೇಶೀಯವಾಗಿಯೇ ಸೋರ್ಸಿಂಗ್ (ಖರೀದಿಸುವ) ಮಾಡುವುದನ್ನು ಹೆಚ್ಚಿಸುವ ಮೂಲಕ ಸ್ಥಳೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ತಯಾರಕರು ಗರಿಷ್ಠ 1.5% ರಷ್ಟು ಹೆಚ್ಚುವರಿ ಪ್ರೋತ್ಸಾಹಕವನ್ನು ಪಡೆಯಲು ಅರ್ಹರಾಗಿರುತ್ತಾರೆ.
    • ವಿನ್ಯಾಸ ಮತ್ತು ನಾವೀನ್ಯತೆಗೆ ಬೆಂಬಲ : ದೇಶೀಯ ನಾವೀನ್ಯತೆ ಮತ್ತು ಬ್ರ್ಯಾಂಡ್ ರಚನೆಯನ್ನು ಉತ್ತೇಜಿಸುವ ಸಲುವಾಗಿ, ಭಾರತದಲ್ಲಿ ಉತ್ಪನ್ನ ವಿನ್ಯಾಸ ಮತ್ತು R&D ಚಟುವಟಿಕೆಗಳನ್ನು ಕೈಗೊಳ್ಳುವ ಕಂಪನಿಗಳಿಗೆ ಅರ್ಹ ಮಾರಾಟದ ಮೇಲೆ ಹೆಚ್ಚುವರಿ 3% ಪ್ರೋತ್ಸಾಹಕವನ್ನು ಈ ಯೋಜನೆಯು ಒದಗಿಸುತ್ತದೆ.

    ಸೆಮಿಕಾನ್ 2.0

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ:

    • ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟವು 1,27,500 ಕೋಟಿ ರೂ. ವೆಚ್ಚದ ಸೆಮಿಕಾನ್ 2.0 (ಇಂಡಿಯಾ  ಸೆಮಿಕಂಡಕ್ಟರ್ ಮಿಷನ್ 2.0) ಯೋಜನೆಗೆ ಅನುಮೋದನೆ ನೀಡಿದೆ.

    ಆರು ಕಾರ್ಯತಂತ್ರದ ಆಧಾರಸ್ತಂಭಗಳು:

    1. ವಿನ್ಯಾಸ.
    2. ಯಂತ್ರಗಳು ಮತ್ತು ವಸ್ತುಗಳು.
    3. ತಯಾರಿಕೆ.
    4. ಜೋಡಣೆ, ಪರೀಕ್ಷೆ, ಮಾರುಕಟ್ಟೆ ಮತ್ತು ಪ್ಯಾಕೇಜಿಂಗ್ (ATMP) ಹಾಗೂ ಔಟ್‌ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಅಂಡ್ ಟೆಸ್ಟ್ (OSAT) ಘಟಕಗಳನ್ನು ವಿಸ್ತರಿಸುವ ಮೂಲಕ ಭಾರತವನ್ನು ಜಾಗತಿಕ ಪರ್ಯಾಯ ಕೇಂದ್ರವನ್ನಾಗಿ ಸ್ಥಾಪಿಸುವುದು.
    5. ಸಂಶೋಧನೆ ಮತ್ತು ಅಭಿವೃದ್ಧಿ (R&D).
    6. ಪ್ರತಿಭೆಗಳ ಅಭಿವೃದ್ಧಿ.

    ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM) ಬಗ್ಗೆ:

    • ಜಾರಿಗೊಳಿಸಿದ ಸಚಿವಾಲಯ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ.
    • ಗುರಿ: ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ವಿನ್ಯಾಸಕ್ಕಾಗಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಹೊರಹೊಮ್ಮಲು ಅನುವು ಮಾಡಿಕೊಡುವಂತಹ ಕ್ರಿಯಾಶೀಲ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು.

    ಸೆಮಿಕಂಡಕ್ಟರ್ ಚಿಪ್‌ಗಳ ಬಗ್ಗೆ:

    • ಇವು ವಾಹಕಗಳು (Conductors) ಮತ್ತು ಅವಾಹಕಗಳ (Insulators) ನಡುವಿನ ವಾಹಕತೆಯನ್ನು ಹೊಂದಿರುವ ವಸ್ತುಗಳಾಗಿವೆ.
    • ಉದಾಹರಣೆ: ಇವು ಶುದ್ಧ ಮೂಲವಸ್ತುಗಳಾದ ಸಿಲಿಕಾನ್ ಅಥವಾ ಜರ್ಮೇನಿಯಂ ಆಗಿರಬಹುದು; ಅಥವಾ ಗ್ಯಾಲಿಯಂ ಆರ್ಸೆನೈಡ್ ಅಥವಾ ಕ್ಯಾಡ್ಮಿಯಂ ಸೆಲೆನೈಡ್ ನಂತಹ ಸಂಯುಕ್ತ ವಸ್ತುಗಳಾಗಿರಬಹುದು.
    • ಸೆಮಿಕಂಡಕ್ಟರ್ ಚಿಪ್‌ಗಳ ಮಹತ್ವ: ಇವು ಎಲ್ಲಾ ಆಧುನಿಕ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಉತ್ಪನ್ನಗಳಿಗೆ ಹೃದಯ ಮತ್ತು ಮೆದುಳಿನಂತೆ ಕಾರ್ಯನಿರ್ವಹಿಸುವ ಮೂಲಭೂತ ಘಟಕಗಳಾಗಿವೆ.
    • ಅನ್ವಯಗಳು: ಈ ಚಿಪ್‌ಗಳು ಆಧುನಿಕ ವಾಹನಗಳು, ಗೃಹಬಳಕೆಯ ಉಪಕರಣಗಳು ಮತ್ತು ECG ಯಂತ್ರಗಳಂತಹ ಅತ್ಯಗತ್ಯ ವೈದ್ಯಕೀಯ ಸಾಧನಗಳ ಅವಿಭಾಜ್ಯ ಅಂಗವಾಗಿವೆ.

    12ನೇ ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆ

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ಭಾರತವು ಹೈದರಾಬಾದ್‌ನಲ್ಲಿ 12ನೇ ಬ್ರಿಕ್ಸ್ (BRICS) ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆಯನ್ನು ಆಯೋಜಿಸಿತು.
    • 2026ರ ಧ್ಯೇಯವಾಕ್ಯ: “ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ” (Building for Resilience, Innovation, Cooperation and Sustainability).

    ಸಭೆಯ ಪ್ರಮುಖ ಫಲಿತಾಂಶಗಳು:

    • ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಘೋಷಣೆ: ಯೋಗ್ಯವಾದ ಕೆಲಸವನ್ನು ಉತ್ತೇಜಿಸಲು, ಸಾಮಾಜಿಕ ರಕ್ಷಣಾ ವ್ಯವಸ್ಥೆಗಳನ್ನು ವಿಸ್ತರಿಸಲು ಮತ್ತು ಅಂತರ್ಗತ ಹಾಗೂ ಸ್ಥಿತಿಸ್ಥಾಪಕ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ನಿರ್ಣಯಗಳನ್ನು ಕೈಗೊಳ್ಳಲಾಯಿತು.
    • ಸದಸ್ಯ ರಾಷ್ಟ್ರಗಳಾದ್ಯಂತ ಕಾರ್ಮಿಕ ಚೌಕಟ್ಟುಗಳನ್ನು (ದಕ್ಷಿಣ-ದಕ್ಷಿಣ ಸಹಕಾರ) ಆಧುನೀಕರಿಸಲು, ಸಮನ್ವಯಗೊಳಿಸಲು ಮತ್ತು ಬಲಪಡಿಸಲು ಭಾರತವು ಬ್ರಿಕ್ಸ್ ಜೊಡಣೆ (BRICS CONNECT) ಎಂಬ ತಂತ್ರಜ್ಞಾನ-ಚಾಲಿತ ಸಹಯೋಗದ ವೇದಿಕೆಯನ್ನು ಪ್ರಾರಂಭಿಸಿತು.

    ಬ್ರಿಕ್ಸ್ (BRICS) ಬಗ್ಗೆ:

    • ಸ್ಥಾಪನೆ: 2009.
    • ಪ್ರಧಾನ ಕಚೇರಿ: ಶಾಂಘೈ.
    • BRICS, ಇದು ವಿಶ್ವದ ಪ್ರಮುಖ ಉದಯೋನ್ಮುಖ ಆರ್ಥಿಕತೆ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (2010 ರಲ್ಲಿ ಸೇರ್ಪಡೆಗೊಂಡಿತು) ರಾಷ್ಟ್ರಗಳ ಗುಂಪಿನ ಸಂಕ್ಷಿಪ್ತ ರೂಪವಾಗಿದೆ.
    • ಮೂಲ: ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾದ ನಾಲ್ಕು ಉದಯೋನ್ಮುಖ ಆರ್ಥಿಕತೆ ರಾಷ್ಟ್ರಗಳನ್ನು ವಿವರಿಸಲು 2001 ರಲ್ಲಿ ಬ್ರಿಟಿಷ್ ಅರ್ಥಶಾಸ್ತ್ರಜ್ಞ ಜಿಮ್ ಒ ನೀಲ್ ಅವರು “ಬ್ರಿಕ್” (BRIC) ಎಂಬ ಪದವನ್ನು ಹುಟ್ಟುಹಾಕಿದರು.
    • ಇತ್ತೀಚಿನ ವಿಸ್ತರಣೆ (BRICS+): 2024-2025ರಲ್ಲಿ, ಈ ಒಕ್ಕೂಟವು ಈಜಿಪ್ಟ್, ಇಥಿಯೋಪಿಯಾ, ಇರಾನ್, UAE ಮತ್ತು ಇಂಡೋನೇಷ್ಯಾ ದೇಶಗಳನ್ನು ಒಳಗೊಳ್ಳುವಂತೆ ವಿಸ್ತರಣೆಯಾಯಿತು. ಸೌದಿ ಅರೇಬಿಯಾಕ್ಕೆ ಆಹ್ವಾನ ನೀಡಲಾಗಿದ್ದರೂ, ಅದು ಇನ್ನೂ ತನ್ನ ಸದಸ್ಯತ್ವವನ್ನು ಔಪಚಾರಿಕಗೊಳಿಸಿಲ್ಲ.
    • ಬ್ರಿಕ್ಸ್ ಪಾಲು: ಬ್ರಿಕ್ಸ್ ಐದು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತದೆ. ಇದು ಜಾಗತಿಕ ಜನಸಂಖ್ಯೆಯ 41%, ಜಾಗತಿಕ GDPಯ 24% ಮತ್ತು ಜಾಗತಿಕ ವ್ಯಾಪಾರದ 16% ರಷ್ಟನ್ನು ಪ್ರತಿನಿಧಿಸುತ್ತದೆ (2028 ರ ವೇಳೆಗೆ, ಬ್ರಿಕ್ಸ್ ಜಾಗತಿಕ ಆರ್ಥಿಕತೆಯ 35% ರಷ್ಟನ್ನು ಹೊಂದುವ ನಿರೀಕ್ಷೆಯಿದೆ).
    • ಅಧ್ಯಕ್ಷತೆ: ವೇದಿಕೆಯ ಅಧ್ಯಕ್ಷತೆಯನ್ನು ಸದಸ್ಯ ರಾಷ್ಟ್ರಗಳ ನಡುವೆ ವಾರ್ಷಿಕವಾಗಿ ಸರದಿಯ ಮೇಲೆ ಹಂಚಲಾಗುತ್ತದೆ.

    ಬ್ರಿಕ್ಸ್‌ನ ಪ್ರಮುಖ ಉಪಕ್ರಮಗಳು:

    • ಹೊಸ ಅಭಿವೃದ್ಧಿ ಬ್ಯಾಂಕ್ (New Development Bank – NDB)
    • ಅನಿಶ್ಚಿತ ಮೀಸಲು ವ್ಯವಸ್ಥೆ (Contingent Reserve Arrangement – CRA)
    • ಬ್ರಿಕ್ಸ್ ಪಾವತಿ ವ್ಯವಸ್ಥೆ (BRICS Payment System)
    • ಕಸ್ಟಮ್ಸ್ ಒಪ್ಪಂದಗಳು (Customs Agreements)
    • ದೂರಸಂವೇದಿ ಉಪಗ್ರಹಗಳ ಸಮೂಹ (Constellation of Remote Sensing Satellites)

  • ಕರ್ನಾಟಕ ಮತ್ತು ಗ್ರೂಪ್ ಸಿ ಪ್ರಚಲಿತ ವಿದ್ಯಮಾನಗಳು – 16, ಜುಲೈ 2026

    ಸುದ್ದಿಯಲ್ಲಿರುವ ವ್ಯಕ್ತಿ

    ಭೂ ವಿಜ್ಞಾನ ಸಚಿವಾಲಯದ (MoES) ನೂತನ ಕಾರ್ಯದರ್ಶಿಯಾಗಿ ಡಾ. ಶ್ರೀನಿವಾಸ ಕುಮಾರ್ ತುಮ್ಮಲ ಅವರು ನೇಮಕವಾಗಿದ್ದಾರೆ.

    ಪ್ರಮುಖ ದಿನಗಳು

    ಜಾಗತಿಕ ಅಂತರರಾಷ್ಟ್ರೀಯ ನ್ಯಾಯ ದಿನ 2026

    • ಆಚರಿಸುವ ದಿನಾಂಕ: ಜುಲೈ 17
    • ಆಚರಿಸುವ ಸಂಸ್ಥೆ: ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC)

    ಮುಖ್ಯ ಉದ್ದೇಶ:

    • ನೆದರ್ಲೆಂಡ್ಸ್‌ನ ಹೇಗ್ ನಗರದಲ್ಲಿ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC) ಸ್ಥಾಪನೆಗೆ ಅಡಿಪಾಯ ಹಾಕಿದ ಜುಲೈ 17, 1998 ರ ಐತಿಹಾಸಿಕ ರೋಮ್ ಶಾಸನವನ್ನು (Rome Statute) ಸ್ಮರಿಸುವ ಉದ್ದೇಶವನ್ನು ಈ ದಿನ ಹೊಂದಿದೆ.
    • ಜಾಗತಿಕ ಹೊಣೆಗಾರಿಕೆಯನ್ನು ಉತ್ತೇಜಿಸುವುದು, ಸಂತ್ರಸ್ತರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಜನಾಂಗೀಯ ಹತ್ಯೆ, ಯುದ್ಧ ಅಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಆಕ್ರಮಣಶೀಲತೆಯ ಅಪರಾಧಗಳು ಸೇರಿದಂತೆ ಜಗತ್ತಿನ ಘೋರ ಅಂತರರಾಷ್ಟ್ರೀಯ ಅಪರಾಧ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಿ, ಅವರು ಕಾನೂನಿನಿಂದ ತಪ್ಪಿಸಿಕೊಳ್ಳದಂತೆ ತಡೆಯುವುದು ಈ ದಿನದ ಮುಖ್ಯ ಆಶಯವಾಗಿದೆ.